ಸಂತೆಯಲ್ಲಿ ನಿಂತ ಕಬೀರ

ವಿಕಿಪೀಡಿಯ ಇಂದ
Jump to navigation Jump to search

ಸಂತೆಯಲ್ಲಿ ನಿಂತ ಕಬೀರ  ಸದ್ಯದಲ್ಲಿ ಬಿಡುಗಡೆ ಆಗಲಿರುವ  ಕನ್ನಡ ಭಾಷೆಯ ಚಲನಚಿತ್ರವಾಗಿದೆ. ಇದು ಭೀಷ್ಮ ಸಾಹ್ನಿ ಅವರ ಹಿಂದಿ ನಾಟಕ  "ಕಬೀರ್ ಖಡಾ ಬಾಜಾರ್ ಮೆ" ಆಧರಿಸಿದ್ದು  ಇದನ್ನು  ಕಬಡ್ಡಿ ಖ್ಯಾತಿಯ ಇಂದ್ರ ಬಾಬು ಅವರು ಬರೆದು ನಿರ್ದೇಶಿಸಿದ್ದಾರೆ. [೧]   ಇದರಲ್ಲಿ  ಶಿವರಾಜಕುಮಾರ್ ಅವರು ನಾಯಕನಟನಾಗಿದ್ದು ೧೫ ನೇ ಶತಮಾನದ ಅಧ್ಯಾತ್ಮಿಕ ಕವಿ ಕಬೀರ್ [೨]  ಅವರ  ಪಾತ್ರವನ್ನು ನಿರ್ವಹಿಸಿದ್ದಾರೆ.   ಈ ಚಿತ್ರವನ್ನು ೨೦೧೫ ರ ಯುಗಾದಿ ಹಬ್ಬದಂದು ಆರಂಭಿಸಲಾಯಿತು.[೩]

ಪಾತ್ರವರ್ಗ[ಬದಲಾಯಿಸಿ]

 • ಶಿವರಾಜ್ಕುಮಾರ್  -  ಕಬೀರ್ ದಾಸ್  ಆಗಿ
 • Sanusha
 • ಸರತ್ ಕುಮಾರ್ - ಸಿಕಂದರ್  ಲೋದಿ ಆಗಿ
 • ಓಂ ಪುರಿ - ಕಬೀರ್ ತಂದೆ ಆಗಿ
 • ಅಕ್ಷತಾರಾವ್ - ಕಬೀರ್ ತಾಯಿ ಆಗಿ
 • ಅವಿನಾಶ್
 • ಎಚ್. ಜಿ.  ದತ್ತಾತ್ರೇಯ
 • ಶರತ್ ಲೋಹಿತಾಶ್ವ
 • ಅನಂತನಾಗ್ -ಅತಿಥಿ ಪಾತ್ರದಲ್ಲಿ
 • ಭಾಗೀರಥಿಬಾಯಿ ಕದಮ್
 • ಸುನೀತಾ ರಾಮಾಚಾರಿ

ಉತ್ಪಾದನೆ[ಬದಲಾಯಿಸಿ]

 ಶಿವರಾಜಕುಮಾರ್ ಅವರನ್ನು    ನಾಯಕ ಪಾತ್ರಕ್ಕೆಂದು  ತೀರ್ಮಾನಿಸಿದ ನಂತರ,   ನಿರ್ದೇಶಕ ನರೇಂದ್ರ ಬಾಬು ಅವರು  ನಟ  ಕಬೀರನ ಗುರು ರಮಾನಂದನ ಪಾತ್ರವನ್ನು  ಅಮಿತಾಭ್ ಬಚ್ಚನ್ ನಿರ್ವಹಿಸುವರು ಎಂದು  ಘೋಷಿಸಿದರು.   ಮಿಥುನ್ ಚಕ್ರವರ್ತಿ ಕೂಡ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂದು  ವದಂತಿ ಇತ್ತು . ಆದರೆ, ನಂತರ  ಈ ವಿಚಾರವನ್ನು ಕೈಬಿಡಲಾಯಿತು. ಬಚ್ಚನ್ ವಹಿಸ ಬೇಕಿದ್ದ  ಪಾತ್ರವು    ಅನಂತ್ ನಾಗ್ ರ ಪಾಲಾಯಿತು.   ತಂದೆಯ ಪಾತ್ರಕ್ಕೆ  ಹಿರಿಯ ನಟ ಓಂಪುರಿ ಆಯ್ಕೆಯಾದರು,   ಜೊತೆಗೆ  ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್  ರನ್ನು ಕರೆಸಲಾಯಿತು. ಇದು ಅವರ  ಚೊಚ್ಚಲ ಕನ್ನಡ ಚಿತ್ರವಾಗಲಿದೆ. [೪]  ಚಿತ್ರದ ಮುಹೂರ್ತವು ಬೆಂಗಳೂರು ಅರಮನೆ ಮೈದಾನದಲ್ಲಿ ೨೦೧೫ ರ ಯುಗಾದಿಯ ಮಂಗಳಕರ ದಿನದಂದು ನೆರವೇರಿತು. ನಟರಾದ  ಪುನೀತ್ ರಾಜ್‍ಕುಮಾರ್ (ನಟ) ಮತ್ತು ರಾಘವೇಂದ್ರ ರಾಜ್ಕುಮಾರ್  ಚಿತ್ರೀಕರಣಕ್ಕೆ  ಮೊದಲ  ಕ್ಲಾಪ್ ಮಾಡಿದರು .[೫] ಬೆಂಗಳೂರು, ವಾರಣಾಸಿ ಮತ್ತು ಹಿಮಾಲಯ ಪ್ರದೇಶಗಳಲ್ಲಿ  ಚಿತ್ರೀಕರಣವನ್ನು  ಯೋಜಿಸಲಾಗಿತ್ತು.[೬]

ಸೌಂಡ್ಟ್ರ್ಯಾಕ್[ಬದಲಾಯಿಸಿ]

ಖ್ಯಾತ ಬಾಲಿವುಡ್ ಸಂಯೋಜಕ , ಇಸ್ಮಾಯಿಲ್ ದರ್ಬಾರ್  ಐದು ಹಾಡುಗಳು ಮತ್ತು ಆರು ದೋಹಾಗಳಿಗೆ ಸಂಗೀತ ಸಂಯೋಜನೆ  ಮಾಡಿದ್ದಾರೆ.  ಗೋಪಾಲ ವಾಜಪೇಯಿ ಎಲ್ಲಾ ಹಾಡುಗಳಿಗೆ  ಸಾಹಿತ್ಯವನ್ನು ಬರೆದಿದ್ದಾರೆ  .

References[ಬದಲಾಯಿಸಿ]

 1. "Indrababu to Reprise the Magic of Kabira". The New Indian Express. 16 March 2015.
 2. "Shivanna is now Kabira". Sify.com. 23 March 2015.
 3. "Santheyalli Nintha Kabira Lauched". Chitraloka. 3 February 2016.
 4. "After Big B, Ismail Darbar comes to Sandalwood". The Times of India. 12 March 2014.
 5. "Santheyalli Nintha Kabira Lauched". Chitraloka. 22 March 2015.
 6. "'Kabira' To Himalaya". Indiaglitz. 8 October 2015.

ಬಾಹ್ಯ ಕೊಂಡಿಗಳು[ಬದಲಾಯಿಸಿ]