ವಿಷಯಕ್ಕೆ ಹೋಗು

ವಿಜಯರಂಜಿನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಜಯರಂಜಿನಿ ಕನ್ನಡದ ಚಲನಚಿತ್ರ ನಟಿ. ೧೯೮೦ರ ದಶಕದಲ್ಲಿ ಸಕ್ರಿಯರಾಗಿದ್ದ ವಿಜಯರಂಜಿನಿ ಬ್ಯಾಂಕರ್ ಮಾರ್ಗಯ್ಯ(೧೯೮೩), ಅದೇ ಕಣ್ಣು(೧೯೮೫), ಲಂಚ ಲಂಚ ಲಂಚ(೧೯೮೬), ಯಾರು ಹೊಣೆ(೧೯೮೯) ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ[].

ವೃತ್ತಿ ಜೀವನ

[ಬದಲಾಯಿಸಿ]

ಸಿದ್ಧಲಿಂಗಯ್ಯ ನಿರ್ದೇಶನದ ಪಾರಿಜಾತ(೧೯೮೨) ಚಿತ್ರದ ಚಿಕ್ಕ ಪಾತ್ರದ ಮೂಲಕ ಕನ್ನಡದ ಬೆಳ್ಳಿತೆರೆ ಪ್ರವೇಶಿಸಿದ ವಿಜಯರಂಜಿನಿ ಅವರಿಗೆ ಬ್ಯಾಂಕರ್ ಮಾರ್ಗಯ್ಯ(೧೯೮೩) ಚಿತ್ರದ ಪಾತ್ರ ಸಾಕಷ್ಟು ಹೆಸರು ತಂದು ಕೊಟ್ಟಿತು. ರಾಜ್ ಕುಮಾರ್ ಮತ್ತು ಊರ್ವಶಿ ಅಭಿನಯದ ಶ್ರಾವಣ ಬಂತು(೧೯೮೪) ಚಿತ್ರದ ಚಿಕ್ಕ ಪಾತ್ರದಲ್ಲಿ ಚೊಕ್ಕ ಅಭಿನಯ ನೀಡಿದ ವಿಜಯರಂಜಿನಿ ರಾಜ್ ಕುಮಾರ್ ಅಭಿನಯದ ಅದೇ ಕಣ್ಣು(೧೯೮೫) ಚಿತ್ರದಲ್ಲಿ ನಾಯಕಿಯಾಗಿ ಗಮನ ಸೆಳೆಯುವ ಅಭಿನಯ ನೀಡಿದ್ದಾರೆ. ರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಅಭಿನಯಿಸಿದರೂ ವಿಜಯರಂಜಿನಿ ವೃತ್ತಿ ಬದುಕಿನಲ್ಲಿ ಸವಾಲಿನ ಪಾತ್ರಗಳು ದೊರಕಲಿಲ್ಲ. ಲಂಚ ಲಂಚ ಲಂಚ(೧೯೮೬), ಮುತ್ತಿನಂಥಾ ಮನುಷ್ಯ(೧೯೮೯), ಯಾರು ಹೊಣೆ(೧೯೮೯), ಪ್ರಜೆಗಳು ಪ್ರಭುಗಳು(೧೯೯೨) ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಉತ್ತಮ ಅಭಿನಯ ನೀಡಿದ್ದಾರೆ. ೧೯೯೩ರಲ್ಲಿ ಬಿಡುಗಡೆಯಾದ ಪ್ರತಿಫಲ ವಿಜಯರಂಜಿನಿಯವರ ಬಿಡುಗಡೆಯಾದ ಕೊನೆಯ ಚಿತ್ರ. ಈ ಚಿತ್ರದ ನಂತರ ವಿಜಯರಂಜಿನಿ ನಟನೆಗೆ ವಿದಾಯ ಹೇಳಿ ವೈಯಕ್ತಿಕ ಬದುಕಿನೆಡೆಗೆ ಗಮನ ಹರಿಸಿದರು.

ವಿಜಯರಂಜಿನಿ ಅಭಿನಯದ ಚಿತ್ರಗಳು

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೮೨ ಪಾರಿಜಾತ ಸಿದ್ದಲಿಂಗಯ್ಯ ಶ್ರೀನಿವಾಸಮೂರ್ತಿ, ಆರತಿ
೧೯೮೩ ಚಲಿಸದ ಸಾಗರ ವಿಜಯ್ ಅನಂತ್ ನಾಗ್, ಆರತಿ, ಶ್ರೀನಾಥ್
೧೯೮೩ ಬ್ಯಾಂಕರ್ ಮಾರ್ಗಯ್ಯ ಟಿ.ಎಸ್.ನಾಗಾಭರಣ ಲೋಕೇಶ್, ಜಯಂತಿ, ಸುಂದರ್ ರಾಜ್
೧೯೮೩ ಮನೇಲಿ ರಾಮಣ್ಣ ಬೀದಿಲಿ ಕಾಮಣ್ಣ ಅಮ್ರತಂ ಅಂಬರೀಶ್, ಶ್ರೀಪ್ರಿಯಾ
೧೯೮೩ ಸಿಂಹಾಸನ ಸಿ.ಆರ್.ಸಿಂಹ ಅನಂತ್ ನಾಗ್, ಟೈಗರ್ ಪ್ರಭಾಕರ್, ಪ್ರಮೀಳಾ ಜೋಷಾಯ್
೧೯೮೩ ಹಸಿದ ಹೆಬ್ಬುಲಿ ಎಸ್.ಎ.ಚಂದ್ರಶೇಖರ್ ಅಂಬರೀಶ್, ಅಂಬಿಕಾ
೧೯೮೪ ಇಂದಿನ ಭಾರತ ಟಿ.ಕೃಷ್ಣ ಶಂಕರ್ ನಾಗ್, ಅಂಬಿಕಾ
೧೯೮೪ ಶ್ರಾವಣ ಬಂತು ಸಿಂಗೀತಂ ಶ್ರೀನಿವಾಸ್ ರಾವ್ ರಾಜ್ ಕುಮಾರ್, ಊರ್ವಶಿ
೧೯೮೫ ಅದೇ ಕಣ್ಣು ಚಿ.ದತ್ತರಾಜ್ ರಾಜ್ ಕುಮಾರ್, ಗಾಯತ್ರಿ
೧೯೮೫ ಬಿಡುಗಡೆಯ ಬೇಡಿ ದೊರೈ-ಭಗವಾನ್ ಅನಂತ್ ನಾಗ್, ಲಕ್ಷ್ಮಿ
೧೯೮೬ ಲಂಚ ಲಂಚ ಲಂಚ ರವೀಂದ್ರನಾಥ್ ಲೋಕೇಶ್, ಜಯಂತಿ, ಸುಂದರ್ ರಾಜ್, ಜೈಜಗದೀಶ್, ಮಹಾಲಕ್ಷ್ಮಿ
೧೯೮೭ ಆಪದ್ಭಾಂಧವ ಎ.ಟಿ.ರಘು ಅಂಬರೀಶ್, ಪಾರಿಜಾತ
೧೯೮೭ ಒಂದೇ ಗೂಡಿನ ಹಕ್ಕಿಗಳು ರಾಜಚಂದ್ರ ಟೈಗರ್ ಪ್ರಭಾಕರ್, ಲಕ್ಷ್ಮಿ, ಶುಭಾ
೧೯೮೭ ಜೀವನ ಜ್ಯೋತಿ ಪಿ.ವಾಸು ವಿಷ್ಣುವರ್ಧನ್, ಅಂಬಿಕಾ, ನಳಿನಿ
೧೯೮೮ ಕೃಷ್ಣ ಮೆಚ್ಚಿದ ರಾಧೆ ಎ.ಟಿ.ರಘು ಶ್ರೀನಾಥ್, ವಿನೋದ್ ಆಳ್ವ, ಸಂಗೀತಾ, ಚಿತ್ರಾ
೧೯೮೯ ತರ್ಕ ಸುನಿಲ್ ಕುಮಾರ್ ದೇಸಾಯಿ ಶಂಕರ್ ನಾಗ್, ವನಿತಾ ವಾಸು, ದೇವರಾಜ್‌
೧೯೮೯ ಮುತ್ತಿನಂಥಾ ಮನುಷ್ಯ ಸಾಯಿಪ್ರಕಾಶ್ ಟೈಗರ್ ಪ್ರಭಾಕರ್, ಭಾರತಿ
೧೯೮೯ ಯಾರು ಹೊಣೆ ಎನ್.ಟಿ.ಜಯರಾಮ ರೆಡ್ಡಿ ಕೆ.ಎಸ್.ಅಶ್ವಥ್, ಪಂಢರೀಬಾಯಿ
೧೯೮೯ ಶ್ರೀ ಮೈಲಾರ ಲಿಂಗ ಗುರುರಾಜ ಕಟ್ಟೆ ಮಾನು, ಶ್ರೀಲಲಿತಾ
೧೯೯೨ ಪ್ರಜೆಗಳು ಪ್ರಭುಗಳು ಬಿ.ಮ.ನಾಗರಾಜ್, ವಿಜಯಲಕ್ಷ್ಮಿ ವಿಷುಕುಮಾರ್ ದೇವರಾಜ್‌, ಸುಂದರ್ ರಾಜ್
೧೯೯೨ ಮನ ಗೆದ್ದ ಮಗ ಎಲ್.ಎಂ.ರಾಜಾ ಕುಪ್ಪೆಳೂರ್ ಕಲ್ಯಾಣ್ ಕುಮಾರ್, ಮಂಜುಳಾ
೧೯೯೩ ಪ್ರತಿಫಲ ಎನ್.ಎಸ್.ಧನಂಜಯ, ಶಂಕರ್ ನಾಯರ್ ಶ್ರೀನಾಥ್, ಸುದರ್ಶನ್, ಪ್ರಮೀಳಾ ಜೋಷಾಯ್

[]

ಉಲ್ಲೇಖಗಳು

[ಬದಲಾಯಿಸಿ]
  1. "ವಿಜಯರಂಜಿನಿ, ಚಿಲೋಕ.ಕಾಮ್". Archived from the original on 2016-08-10. Retrieved 2016-06-23.
  2. "ವಿಜಯರಂಜಿನಿ ಅಭಿನಯದ ಚಿತ್ರಗಳ ಪಟ್ಟಿ". ಚಿಲೋಕ.