ಪಾರಿಜಾತ
ಪಾರಿಜಾತ | |
---|---|
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | N. arbor-tristis
|
Binomial name | |
Nyctanthes arbor-tristis |
ಪಾರಿಜಾತ ಎನ್ನುವುದು ಒಂದು ಬಗೆಯ ಹೂವು. ಈ ಹೂವನ್ನು ಭಾರತದಲ್ಲಿ ಹೆಚ್ಚಾಗಿ ಕಾಣಬಹುದು. ಪಾರಿಜಾತವನ್ನು ನಿಕ್ಟಾಂತಸ್ ಆರ್ಬೋ-ಟ್ರಿಸ್ಟಿಸ್ ('Nyctanthes arbor-tristis L.') ಎಂದು ವೈಜ್ಞಾನಿಕವಾಗಿ ಕರೆಯುತ್ತಾರೆ.
ಸಾಮಾನ್ಯ ಹೆಸರುಗಳು
[ಬದಲಾಯಿಸಿ]ಕನ್ನಡ - ಪಾರಿಜಾತ
ಆಂಗ್ಲ - ನೈಟ್ ಜಾಸ್ಮಿನ್, ಕೋರಲ್ ಜಾಸ್ಮಿನ್
ಹಿಂದಿ - ಹರಸಿಂಗಾರ್, ಷೆಫಾಲಿಕಾ
ತಮಿಳು - ಮಂಜಪೂ, ಪವಳ ಮಲ್ಲಿಗೈ
ತೆಲುಗು - ಪಗಡಮಲ್ಲೆ, ಪಾರಿಜಾತಮು
ಮಲೆಯಾಳಂ -ಪವಿಳಮ್ಮಲ್ಲಿ,ಪಾರಿಜಾತಿಕಂ
ಬಂಗಾಲಿ - ಷಿಯಲಿ
ಒರಿಯಾ - ಗಂಗಾ ಷಿಯಲಿ
ಮರಾಠಿ - ಖುರಸಳಿ,ಪಾರಿಜಾತಕ
ಸಂಸ್ಕ್ರತ - ಪಾರಿಜಾತ
ಪುರಾಣಗಳಲ್ಲಿ ಪಾರಿಜಾತ
[ಬದಲಾಯಿಸಿ]ಸಮುದ್ರ ಮಥನ ಕಾಲದಲ್ಲಿ ಸುರಭಿ ಮತ್ತು ವಾರಿಣಿಯ ನಂತರ ಜನಿಸಿದ್ದು ಪಾರಿಜಾತ. ಕ್ಷೀರಸಮುದ್ರದಿಂದ ಹುಟ್ಟಿದ ೫ ಕಲ್ಪವೃಕ್ಷಗಳಲ್ಲಿ ಇದೂ ಒಂದು. ಕೃಷ್ಣಾವತಾರ ಕಾಲದಲ್ಲಿ, ಕೃಷ್ಣನು ಪಾರಿಜಾತವನ್ನು ಸ್ವರ್ಗಲೋಕದಿಂದ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನೆಂಬ ಕಥೆ ಇದೆ. ಕೃಷ್ಣಪರಮಾತ್ಮನಿಗೆ ಪಾರಿಜಾತ ಪುಷ್ಪವನ್ನು ಕಂಡರೆ ಪ್ರಾಣ. ಬೌದ್ಧಮಂದಿರಗಳಲ್ಲೂ ಈ ಹೂಗಳನ್ನು ಉಪಯೋಗಿಸುತ್ತಾರೆ.
ಔಷಧೀಯ ಗುಣಗಳು
[ಬದಲಾಯಿಸಿ]ಜೀರ್ಣಾಂಗಗಳ ತೊಂದರೆಗೆ ಬೀಜದ ಪುಡಿಯನ್ನೂ ಜಾಂಡಿಸ್ ಹಾಗೂ ಮಲಬದ್ಧತೆಯ ತೊಂದರೆಗಳಿಗೆ ಎಲೆಗಳ ರಸವನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ವಾತವ್ಯಾಧಿಯಲ್ಲಿ ಇದರ ಕಷಾಯವನ್ನು ಬಳಸುತ್ತಾರೆ. ಕೀಲು ನೋವು, ತಲೆ ಹೊಟ್ಟು, ಮೂಲವ್ಯಾಧಿ, ಚರ್ಮರೋಗ, ನಾನಾರೀತಿಯ ಜ್ವರ, ಯಕೃತ್ತಿನ ರೋಗ, ಕರುಳಿನ ಹುಳು ನಿವಾರಣೆಗೆ ಪಾರಿಜಾತವನ್ನು ಔಷಧಿಯಾಗಿ ಬಳಸುತ್ತಾರೆ.[೧]
ಸಸ್ಯದ ಗುಣಲಕ್ಷಣ
[ಬದಲಾಯಿಸಿ]ಅಂದರೆ ರಾತ್ರಿಯಲ್ಲಿ ಅರಳುವ ಹೂ ಎಂದರ್ಥ.
ಇದರ ಇನ್ನೊಂದು ಹೆಸರು, Nyctanthes arbor-tristis , (ಸೊರಗಿದ ಮರ) ವೆಂದು
[ಬದಲಾಯಿಸಿ]ರಾತ್ರಿಯ ಹೊತ್ತೇ ಪಾರಿಜಾತದ ಹೂಗಳು ಅರಳಿ ಸುಗಂಧವನ್ನು ಹೊರಸೂಸುವುದರಿಂದ, ಟ್ರೀ ಆಫ್ ಸ್ಯಾಡ್ನೆಸ್, ಎನ್ನುವವರೂ ಇದ್ದಾರೆ.
ಪಾರಿಜಾತ ಹೂವಿನ ವೃತ್ತಾಂತ
[ಬದಲಾಯಿಸಿ]ಪಾರಿಜಾತವೆಂಬ ಹೆಸರು ಬರಲು ಕಾರಣವಿದೆ. ಇದರ ಬಗ್ಗೆ ಇರುವ ಒಂದು ಸುಂದರ ಕಥೆಯ ಪ್ರಕಾರ, ಪಾರಿಜಾತವೆಂಬ ಹೆಸರಿನ ರಾಜಕುವರಿಯೊಬ್ಬಳು, ಸೂರ್ಯನನ್ನು ಪ್ರೀತಿಸಿದಳಂತೆ. ಸೂರ್ಯ ಸ್ವಲ್ಪಸಮಯದಲ್ಲೇ ಅವಳನ್ನು ತೊರೆದುಬಿಟ್ಟ. ಪ್ರಿಯಕರನ ವಿರಹವನ್ನು ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಳಂತೆ. ಅವಳ ದೇಹವನ್ನು ಸುಟ್ಟಬೂದಿಯಿಂದ ಪಾರಿಜಾತದ ಗಿಡವು ಹುಟ್ಟಿತಂತೆ. ಆದ್ದರಿಂದಲೇ ಸೂರ್ಯ ಭಗವಾನನ ಪ್ರಖರ ಕಿರಣಗಳನ್ನು ಇದು ತಡೆದುಕೊಳ್ಳಲಾರದು. ಪಾರಿಜಾತ ಅದಕ್ಕಾಗಿಯೇ ಸೂರ್ಯಕಿರಣಗಳು ಮೂಡುವ ಮೊದಲೇ ಹೂ ಉದುರಿಸಿತ್ತವೆ. ಇಂತಹ ನೋವಿನ ಕಥೆಯಿಂದಾಗಿ ಸೊರಗಿದ ಮರವೆಂಬ ಹೆಸರು ಬಂದಿದೆ. ರಾತ್ರಿ ಅರಳುವ ಹೂವಾದ್ದರಿಂದ ನೈಟ್ ಜ್ಯಾಸ್ಮಿನ್ ಎನ್ನುವ ಹೆಸರೂ ಇದಕ್ಕೆ ಅನ್ವಯಿಸುತ್ತದೆ.[೨]
ಪಾರಿಜಾತದ ಮರದ ವರ್ಣನೆ
[ಬದಲಾಯಿಸಿ]ಇದು ಮಧ್ಯಮ ಗಾತ್ರದ ಹೊದರು ಅಥವಾ ಚಿಕ್ಕಮರವೆಂದು ಹೇಳಬಹುದು. ಪಾರಿಜಾತದ ಹೂಗಳನ್ನು ಮಲ್ಲಿಗೆ ಹೂವಿಗೆ ಹೋಲಿಸಬಹುದು. ಆದರೆ ಸುವಾಸನೆಯಲ್ಲಿ ಇವು ಬಹಳ ನಾಜೂಕು. ಗೊಂಚಲಿನ ರೂಪದಲ್ಲಿ ಅರಳುತ್ತವೆ. ೫ ರಿಂದ ೮ ದಳಗಳ ಬಿಳಿಹೂವಿಗೆ, ಹವಳಗೆಂಪಿನನಾಳ ಆಕರ್ಷಕವಾಗಿ ಜೋಡಿಸಲಾಗಿದೆ. ಮನಕ್ಕೆ ಮುದಕೊಡುವ ಹಿತ-ಮಿತವಾದ ಸುಗಂಧ ಪಾರಿಜಾತದ ಕೆಲವು ವಿಶೇಷಶತೆಗಳಲ್ಲೊಂದು. ಕೋಮಲವಾದ ಹೂಗಳನ್ನು ಮುಟ್ಟಿದರೆ ಗಿಡದಿಂದ ಕಳಚಿಕೊಳ್ಳುವ ಸಾಧ್ಯತೆಗಳಿವೆ. ಜುಲೈ ತಿಂಗಳಿನಿಂದ ನವೆಂಬರ್ ಮಾಸದವರೆಗೆ ದಂಡಿಯಾಗಿ ಹೂ ಸುರಿಸುತ್ತವೆ. ಸೂರ್ಯ ಮುಳುಗಿದ ಮೇಲೆ ಅರಳಿದ ಹೂವುಗಳು, ರಾತ್ರಿಯೇ ಉದುರಿ, ಬೆಳಿಗ್ಗೆ ಗಿಡದ ಕೆಳಭಾಗದಲ್ಲಿ, ಹೂವಿನ ಹಾಸಿಗೆಯಂತೆ ಕಾಣಿಸುತ್ತವೆ. ಈ ಹೂವುಗಳನ್ನು ಆಯ್ದು ಮನೆಯಲ್ಲಿಟ್ಟರೆ, ಜೇನಿನಂತಹ ಪರಿಮಳದ ಅನುಭವವಾಗುತ್ತದೆ. ಇದು ಎಲೆ ಉದುರಿಸುವ ಮರ. ಪಾರಿಜಾತದ ಹೂವಿನ ಕಾಲಮುಗಿದ ಮೇಲೆ ಕೊಂಬೆಯನ್ನು ಕತ್ತರಿಸಬೇಕು. ಗಿಡದ ರೆಂಬೆಗಳು ನಾಲ್ಕುಮೂಲೆ, ಎಲೆಗಳ ಆಕಾರ ಹೃದಯವನ್ನು ಹೋಲುತ್ತವೆ. ತುದಿ ಮೊನಚು. ಒರಟಾದ ಎಲೆಗಳು, ಬೂದಿಮಿಶ್ರಿತ ಹಸಿರುಬಣ್ಣ. ಎಲೆತೊಟ್ಟು ಮೋಟಾಗಿರುತ್ತದೆ. ಕೊಂಬೆಗಳು ಸಾಮಾನ್ಯವಾಗಿ ಬಾಗಿರುತ್ತವೆ. ೪ ಮೀಟರ್ ಎತ್ತರ ಬೆಳೆಯುತ್ತವೆ. ಗಿಡ ವಿಶಾಲವಾಗಿ ಹಬ್ಬಿಕೊಂಡು ಎಲ್ಲಾ ಭಾಗದಲ್ಲೂ ಹರಡಿಕೊಂಡಿರುತ್ತದೆ. ಕಾಯಿಗಳು ಗುಂಡಾಗಿರುತ್ತವೆ. ದಕ್ಷಿಣಭಾರತದ ಉದ್ಯಾನವನಗಳಿಗೆ ಬಹಳ ಹಿಂದೆಯೇ ಬಂದಿದೆ. ಮಹಾರಾಷ್ಟದ ಮಣ್ಣು ಹಾಗೂ ಪರಿಸರ ಇದಕ್ಕೆ ಅನುಕೂಲಕರವಾಗಿದೆ. ರಸ್ತೆಯ ಅಕ್ಕ ಪಕ್ಕಗಳಲ್ಲೂ ಇದು ಮಹಾರಾಷ್ಟ್ರದಲ್ಲಿ ಬೆಳೆಯುತ್ತದೆ.
ಪಾರಿಜಾತ ಮರ ಹಾಗೂ ಹೂವಿನ ಉಪಯೋಗಗಳು
[ಬದಲಾಯಿಸಿ]- ಸುಗಂಧವನ್ನು ತಯಾರಿಸುತ್ತಾರೆ. ಹೂವಿನ ಕಿತ್ತಳೆಗೆಂಪಿನ ನಾಳವನ್ನು ಬಣ್ಣಕ್ಕಾಗಿ ಉಪಯೋಗಿಸುತ್ತಾರೆ. ಎಲೆಗಳನ್ನು ನಾಟವನ್ನು ಪಾಲಿಷ್ ಮಾಡಲು ಉಪಯೋಗಿಸುತ್ತಾರೆ.
- ಪಾರಿಜಾತ ಸಹಜವಾಗಿ ಅಸ್ಸಾಮ್ ಈಶಾನ್ಯ ಭಾರತದ ಕಾಡುಗಳಲ್ಲಿ ಬೆಳೆಯುತ್ತದೆ.
- ಮನೆಯ ಹತ್ತಿರದಲ್ಲಿ ಅಂಗಳದ ಮೂಲೆಯಲ್ಲಿ ಒಂದು ಪಾರಿಜಾತದ ಮರವಿದ್ದರೆ ಸಾಕು ; ಪ್ರದೇಶದ ಗಾಳಿಯಲ್ಲಿ ನವಿರಾದ ಸುಗಂಧದ ಎಳೆಗಳು ತೇಲಿಬರುವ ಅನುಭವನ್ನು ಸವಿಯುತ್ತೀರಿ.
ಉಲ್ಲೇಖ
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2017-11-17. Retrieved 2017-11-25.
- ↑ ದೇವಲೋಕದ ಪುಷ್ಪ ಪಾರಿಜಾತ[ಶಾಶ್ವತವಾಗಿ ಮಡಿದ ಕೊಂಡಿ]
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಫೆಬ್ರವರಿ 2024
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Articles with 'species' microformats
- Taxobox articles missing a taxonbar
- Commons link is locally defined
- ಹೂವುಗಳು
- ಪರಿಸರ
- ಸಸ್ಯಗಳು