ವಿಷಯಕ್ಕೆ ಹೋಗು

ಜೆರುಸಲೆಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಜೆರುಸಲೇಂ ಇಂದ ಪುನರ್ನಿರ್ದೇಶಿತ)
ಜೆರುಸಲೆಂ
أورشليم القدس(ಉರ್ಶಲೀಂ-ಅಲ್-ಖುದ್ಸ್)
יְרוּשָׁלַיִם (ಯೆರುಶಲೇಂ)
Flag of ಜೆರುಸಲೆಂ
Official logo of ಜೆರುಸಲೆಂ
ಇಸ್ರೇಲ್ ಭೂಪಟದಲ್ಲಿ ಜೆರುಸಲೆಂ
ಇಸ್ರೇಲ್ ಭೂಪಟದಲ್ಲಿ ಜೆರುಸಲೆಂ
ದೇಶಇಸ್ರೇಲ್ ಇಸ್ರೇಲ್
ಜಿಲ್ಲೆಜೆರುಸಲೆಂ
Population
 (೨೦೦೭)
 • Total೭,೪೭,೬೦೦
ಸಮಯದ ವಲಯ
ಜಾಲತಾಣwww.jerusalem.muni.il


ಜೆರುಸಲೇಂ [](ಹೀಬ್ರೂ:יְרוּשָׁלַיִáy : ಯೆರುಸಲೆಮ್ : ; القُدس:ಅಲ್-ಕುದ್ಸ್) ಜೆರುಸಲೆಮ್ ಪ್ಯಾಲೆಸ್ಟೈನ್‌ನ ರಾಜಧಾನಿ ಮತ್ತು ದೊಡ್ಡ ನಗರವಾಗಿದೆ, ಅದರ ದೊಡ್ಡ ನಗರ ಬೆಥ್ಲೆಹೆಮ್. ಸರಿಸುಮಾರು 7,47,000 ಜನಸಂಖ್ಯೆಯನ್ನು ಹೊಂದಿರುವ ನಗರವು ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ. ಜೆರುಸಲೆಮ್ [[ಇಸ್ಲಾಂನ] ಪವಿತ್ರ ಸ್ಥಳವಾಗಿದೆ, ಅನೇಕ ಪ್ರಮುಖ ಇಸ್ಲಾಮಿಕ್ ಕಟ್ಟಡಗಳನ್ನು ಹೊಂದಿದೆ ಮತ್ತು ಇದು [[ಇಸ್ಲಾಮಿಕ್]ನ ಎರಡನೇ ಪವಿತ್ರ ಸ್ಥಳವಾಗಿದೆ.

ಇತಿಹಾಸ

[ಬದಲಾಯಿಸಿ]

ಜೆರೂಸಲೆಮ್ ಪಶ್ಚಿಮ ಏಷ್ಯದ ಒಂದು ಪ್ರಾಚೀನ ನಗರ. 1984ರಲ್ಲಿ ಇಬ್ಭಾಗವಾಗಿ ಇಸ್ರೇಲ್, ಜಾರ್ಡನ್‍ಗಳ ನಡುವೆ ಹಂಚಿಹೋಗಿ 1967ರಲ್ಲಿ ನಡೆದ ಇಸ್ರೇಲ್-ಅರಬ್ ಯುದ್ಧದ ಫಲವಾಗಿ ಸಂಪೂರ್ಣವಾಗಿ ಇಸ್ರೇಲಿನ ಆಕ್ರಮಣಕ್ಕೆ ಒಳಗಾಗಿ ಆ ರಾಜ್ಯದಲ್ಲಿ ವಿಲೀನಗೊಂಡಿತು.

3,000 ವರ್ಷಗಳಿಗೂ ಹೆಚ್ಚು ದೀರ್ಘ ಇತಿಹಾಸ ಹೊಂದಿರುವ ಜೆರೂಸಲೆಮ್ ನಗರ ಯೆಹೂದ್ಯರಿಗೂ ಕ್ರೈಸ್ತರಿಗೂ ಅತ್ಯಂತ ಪವಿತ್ರವಾದ ಯಾತ್ರಾಸ್ಥಳವಾಗಿರುವುದಷ್ಟೇ ಅಲ್ಲ, ಮುಸ್ಲಿಮರಿಗೂ ಇದು ಮೆಕ್ಕ ಮತ್ತು ಮದೀನಗಳ ಅನಂತರ ಅತ್ಯಂತ ಪ್ರಮುಖ ಕ್ಷೇತ್ರ. ಜೂಡಿಯನ್ ಪರ್ವತಸಾಲಿನ ತಪ್ಪಲಿನಲ್ಲಿರುವ ಈ ನಗರ ಮೃತ್ಯು ಸಮುದ್ರದಿಂದ ಸುಮಾರು 25 ಕಿಮೀ. ದೂರದಲ್ಲಿದ್ದು ಸಮುದ್ರಮಟ್ಟದಿಂದ 2,500 ಎತ್ತರದಲ್ಲಿದೆ. ಆಳವಾದ ಕಿದ್ರನ್ ಮತ್ತು ಹಿನ್ನಮ್ ಕಣಿವೆಗಳ ರಕ್ಷಣೆ ಪಡೆದು, ಸದಾ ಹರಿಯುವ ಚಿಲುಮೆಯನ್ನುಳ್ಳದ್ದಾಗಿ ಪೂರ್ವದಿಂದ ಪಶ್ಚಿಮಕ್ಕೆ ಹಾದು ಹೋಗುವ ಪ್ರಮುಖ ಮಾರ್ಗದ ಆಯಕಟ್ಟಿನ ಸ್ಥಳದಲ್ಲಿರುವ ಈ ಪ್ರದೇಶ ಸ್ವಾಭಾವಿಕವಾಗಿಯೇ ಪ್ರಾಮುಖ್ಯ ಪಡೆದು, ಪ್ರಾಚೀನಕಾಲದಿಂದಲೂ ಇಲ್ಲಿ ಜನ ನೆಲೆಸಲು ಕಾರಣವಾಗಿದೆ. ಕ್ರಿ.ಪೂ. 1800ರ ಸುಮಾರಿನಲ್ಲೇ ಕಂಚಿನ ಯುಗದ ಎರಡನೆಯ ಹಂತದ ಸಂಸ್ಕೃತಿಯನ್ನೊಳಗೊಂಡಿದ್ದ ಪಟ್ಟಣವೂ ಅದನ್ನು ಸುತ್ತುವರಿದ ಕೋಟೆಯೂ ಇದ್ದದ್ದು ಇಲ್ಲಿ ನಡೆಸಿರುವ ಹಲವು ಉತ್ಖನನಗಳಿಂದ ವ್ಯಕ್ತವಾಗಿದೆ. ಚಿಲುಮೆಯ ಮೇಲ್ಭಾಗದಲ್ಲಿಯೂ ಪಶ್ಚಿಮದ ಕಡೆಯೂ ಚಾಚಿರುವ ಓಫೆಲ್ ಎಂಬ ಭೂಭಾಗದಲ್ಲಿ ಈ ಪಟ್ಟಣವಿದ್ದು, ಪರ್ವತಸಾಲಿನ ಪೂರ್ವದ ಇಳಿಜಾರಿನಲ್ಲೂ ಹರಡಿತ್ತು. ಹೀಬ್ರೂಗಳು ಇದನ್ನು ಆಕ್ರಮಿಸುವುದಕ್ಕೆ ಮೊದಲು ಇದು ಕನನೈಟರ ಪ್ರಮುಖ ಪಟ್ಟಣವಾಗಿತ್ತು. ಕ್ರಿ.ಪೂ. 1370ರ ಹೊತ್ತಿಗೆ ಇದರ ಹೆಸರು ಉರುಸಲೆಮ್ ಎಂದಿತ್ತೆಂದು ಟೆಲ್-ಎಲ್ ಅಮರ್ನದ ಶಾಸನಗಳಿಂದ ತಿಳಿದುಬರುತ್ತದೆ.

ಕ್ರಿ.ಪೂ. ಸು. 1000ದ ಹೊತ್ತಿಗೆ ಡೇವಿಡ್ ದೊರೆ ತನ್ನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಜೆರೂಸಲೆಮ್ ನಗರವನ್ನಾಕ್ರಮಿಸಿದ. ಇಲ್ಲಿಯ ಪರ್ವತದ ತುದಿಯ ಬಂಡೆಯೊಂದರ ಮೇಲೆ ಡೇವಿಡನ ಮಗ ಸಾಲೊಮನ್ ಮೊದಲ ಬಾರಿಗೆ ದೇವಾಲಯವೊಂದನ್ನು ನಿರ್ಮಿಸಿದ. ಅಂದಿನಿಂದ ಇದು ಧಾರ್ಮಿಕವಾಗಿ ಪ್ರಾಮುಖ್ಯ ಪಡೆಯಿತು. ಆದರೆ ಈ ಪುಟ್ಟ ರಾಜ್ಯಕ್ಕೆ ನೆಮ್ಮದಿ ಇರಲಿಲ್ಲ. ಈಜಿಪ್ಪಿನ ಪೈಷಾಕ್, ಫಿಲಿಸ್ಟೈನರು, ಅರಬರು, ಇಸ್ರೇಲಿನ ಜೋಆಷ್ ಮುಂತಾದ ಹಲವರು ಒಬ್ಬರಾದ ಮೇಲೆ ಒಬ್ಬರಂತೆ ಈ ಪಟ್ಟಣವನ್ನು ಮುತ್ತಿ ಕೊಳ್ಳೆಹೊಡೆದರು. ಹೆಜಿಕಿಯ ದೊರೆಯು ಸಿಲೋಮ್ ಸುರಂಗವನ್ನು ಕೊರೆಸಿ, ಚಿಲುಮೆಯ ನೀರು ಅದರ ಮೂಲಕ ಹಾದು ಸಿಲೋಮ್ ಕೊಳಕ್ಕೆ ಬೀಳುವಂತೆ ಮಾಡಿದ. ಇದರಿಂದ ಸೆನಾಚೆರಿಬ್ ಈ ನಗರವನ್ನು ಮುತ್ತಿದಾಗ ಅವನಿಗೆ ನೀರು ದೊರಕದಾಗಿ ಅವನು ಅದನ್ನು ಗೆಲ್ಲಲಾಗಲಿಲ್ಲ. ಆದರೂ ಹೆಜಿಕೆಯ ಅವನಿಗೆ ಹೆಚ್ಚು ಕಪ್ಪವನ್ನೊಪ್ಪಿಸಬೇಕಾಯಿತು. ಕ್ರಿ.ಪೂ. 597ರಲ್ಲಿ ಈ ನಗರ ಸೂರೆಹೋಯಿತು. ಬ್ಯಾಬಿಲಾನಿಗೆ ದೊರೆಯ ಗಡೀಪಾರಾಯಿತು. ಕ್ರಿ.ಪೂ. 588ರಲ್ಲಿ ನೆಬುಕಡ್ನೆಜರ್ ಇಲ್ಲಿಯ ದೇವಾಲಯವನ್ನು ಹಾಳುಗೆಡವಿದ. ಪರ್ಷಿಯ ದೊರೆ ಸೈರಸನ ಆಳ್ವಿಕೆಯ ಕಾಲದಲ್ಲಿ (ಕ್ರಿ.ಪೂ. 550-529) ಈ ಪಟ್ಟಣದ ಗೋಡೆಗಳನ್ನು ಪುನರ್ನಿರ್ಮಿಸಿ ನಗರನಿರ್ಮಾಣವನ್ನು ಕೈಗೊಳ್ಳಲಾಯಿತು. ಜೆರುಬ್ಬಾಬೆಲ್‍ನ ಆಳ್ವಿಕೆಯಲ್ಲಿ ಕ್ರಿ.ಪೂ. 537ರಲ್ಲಿ ದೇವಸ್ಥಾನವನ್ನು ಹೊಸದಾಗಿ ಕಟ್ಟಲಾಯಿತು.

ಪೌರಸ್ತ್ಯ ಸಂಸ್ಕøತಿಯಲ್ಲಿಯೇ ಬೆಳೆದು ಬಂದಿದ್ದ ಜೆರೂಸಲೆಮ್ ನಗರ ಮ್ಯಾಸಿಡೋನಿಯ ದೊರೆ ಅಲೆಗ್ಸಾಂಡರನ ದಂಡಯಾತ್ರೆಯ ಪರಿಣಾಮವಾಗಿ ಪಾಶ್ಚಾತ್ಯರ ರಾಜಕೀಯ ಪ್ರಭಾವಕ್ಕೆ ಒಳಗಾಯಿತು. ಈಜಿಪ್ಪಿನ 1ನೆಯ ಟಾಲಮಿಯೂ ಅನಂತರ ಕ್ರಿ.ಪೂ. 168ರಲ್ಲಿ ಸೆಲ್ಯೂಸಿಡ್ ವಂಶದವರೂ ಈ ನಗರವನ್ನು ವಶಪಡಿಸಿಕೊಂಡರು. ಹೊರಗಿನವರ ಅಧಿಕಾರವನ್ನು ಸಹಿಸದ ಇಲ್ಲಿಯ ಪೌರಸ್ತ್ಯರು ಕ್ರಿ.ಪೂ. 168ರಲ್ಲಿ ದಂಗೆ ಎದ್ದಾಗ ಅವರ ದೇವಾಲಯವನ್ನು 4ನೆಯ ಆಂಟಿಯೋಕಸ್ ಎಪಿಫೇನಸ್ ಅಪವಿತ್ರಗೊಳಿಸಿದ. ಆದರೆ ದಂಗೆ ಮುಂದುವರಿದು ಹ್ಯಾಸ್ಮಾನ್ ಮನೆತನದವರು ತಮ್ಮದೇ ಆದ ರಾಜ್ಯವನ್ನು ಸ್ಥಾಪಿಸಿದರು. ಪುರೋಹಿತ ವರ್ಗಕ್ಕೆ ಸೇರಿದ ರಾಜರು ಅದರ ಆಡಳಿತ ನಡೆಸಲಾರಂಭಿಸಿದರು. ಈ ರಾಜ್ಯ ಸಾಲೊಮನನ ರಾಜ್ಯದಷ್ಟು ವಿಸ್ತಾರವಾಗಿದ್ದು ಗೆಲಿಲೀ ಪ್ರದೇಶವನ್ನೂ ಒಳಗೊಂಡಿತ್ತು. ಗೆಲಿಲೀ ಜನತೆಯನ್ನೂ ಯೆಹ್ರದ್ಯರೆಂದೇ ಪರಿಗಣಿಸಲಾಗಿತ್ತು. ಇದೇ ಪಂಗಡಕ್ಕೆ ಸೇರಿದವನು ಯೇಸು.

ಕ್ರಿ.ಪೂ. 63ರಲ್ಲಿ ಜಿರೂಸಲೆಮ್ ನಗರವನ್ನು ರೋಮ್ ದೇಶದ ಪಾಂಪಿ ವಶಪಡಿಸಿಕೊಂಡು ಯೆಹೂದ್ಯರ ಪವಿತ್ರಸ್ಥಳವನ್ನು ಪ್ರವೇಶಿಸಿದ್ದು ಅಪಶಕುನವೆಂಬ ಭಾವನೆ ಉಂಟಾಗಿ ಯೆಹೂದ್ಯರಿಗೂ ರೋಮನರಿಗೂ ವೈಷಮ್ಯ ಬೆಳೆಯಿತು. ಆದರೆ ಆಂಟಿ ಪಟರ್ ಮತ್ತು ಅವನ ಮಗ ಹೆರಡರ ಮುಂದಾಲೋಚನೆಯಿಂದ ಇವರ ನಡುವಿನ ತಿಕ್ಕಾಟ ಸ್ವಲ್ಪ ಕಾಲ ಮುಂದೂಡಲ್ಪಟ್ಟಿತು. ಗೆಲಿಲಿಯ ಅಧಿಕಾರಿಯಾಗಿದ್ದ ಹೆರಡನನ್ನು ಕ್ರಿ.ಪೂ. 40ರಲ್ಲಿ ರೋಮನರು ಯೆಹೂದ್ಯರ ರಾಜನನ್ನಾಗಿ ನೇಮಿಸಿದರು. ಇವನು ರೋಮನ್ ಸೈನ್ಯದ ಸಹಾಯದಿಂದ ಹ್ಯಾಸ್ಮಾನರನ್ನು ಸೋಲಿಸಿ ಆಂಟೋನಿ ಮತ್ತು ಆಗಸ್ಟಸರ ಸ್ನೇಹಿತನಾಗಿ 36 ವರ್ಷ ಆಳಿ ಜೆರೂಸಲೆಮ್ ನಗರವನ್ನು ದೊಡ್ಡದಾಗಿ ಬೆಳಸಿದ. ದೇವಾಲಯದ ಮುಂದಿನ ಆವರಣವನ್ನೂ ಅದರ ವಾಯುವ್ಯಕ್ಕೆ ಆಂಟೋನಿಯೂ ಕೋಟೆಯನ್ನೂ ಒಂದು ಅರಮನೆಯನ್ನೂ ಕಟ್ಟಿಸಿದ. ಮುಂದೆ ಆಳಿದ ಅವನ ಮಗ ಸಮರ್ಥನಾಗಿರಲಿಲ್ಲ. ಹೆರಡನ ಮೊಮ್ಮಗ ಒಂದನೆಯ ಹೆರಡ್ ಅಗ್ರಿಪ್ಪನ ಕಾಲದಲ್ಲಿ ಈ ನಗರದ ಉತ್ತರ ಭಾಗದ ಗೋಡೆಯ ನಿರ್ಮಾಣವಾಯಿತು.

ಕ್ರಿ. ಶ. 66ರಲ್ಲಿ ಯಹೂದ್ಯರು ರೋಮನರ ಮೇಲೆ ದಂಗೆಯೆದ್ದಾಗ ಅದನ್ನಡಗಿಸಲು ನಡೆದ ಮುತ್ತಿಗೆಯಲ್ಲಿ ನಗರ ನಾಶವಾಗಿ ಅಗ್ನಿಗೆ ಆಹುತಿಯಾಯಿತು. ಮುಂದೆ ಹಲವು ವರ್ಷ ನಿರ್ಜನವಾಗಿದ್ದ ಈ ಸ್ಥಳದಲ್ಲಿ ಹೇಡ್ರಿಯನ್ ಚಕ್ರವರ್ತಿ 130ರ ಹೊತ್ತಿಗೆ ರೋಮನ್ ವಸಾಹತಾಗಿ ಒಂದು ಪಟ್ಟಣವನ್ನು ಕಟ್ಟಲಾರಂಭಿಸಿದಾಗ ಯೆಹೂದ್ಯರು ಪುನಃ ದಂಗೆಯೆದ್ದರು. ಅದನ್ನು ಅಡಗಿಸಲಾಯಿತು. ಅನಂತರ ಜೆರೊಸಲೆಮ್ ಎಂಬ ಹೆಸರು ಅಳಿದು ಏಲಿಯ ಕ್ಯಾಪಿಟೋಲಿನ ಎಂಬ ಹೆಸರಿನ ಪಟ್ಟಣ ತೆಲೆಯೆತ್ತಿತು. ಹಳೆಯ ನಗರದಲ್ಲಿ ಉತ್ತರ-ದಕ್ಷಿಣವಾಗಿದ್ದ ಮುಖ್ಯ ಬೀದಿಗಳು ಇದರಲ್ಲಿ ಪೂರ್ವ-ಪಶ್ಚಿಮವಾಗಿ ನಿರ್ಮಿತವಾದುವು. ಕ್ರಿಸ್ತನ ಸಮಾಧಿ ಗುಹೆಯಲ್ಲಿ ವೀನಸ್ ದೇವತೆಯ ಮಂದಿರ ನಿರ್ಮಾಣವಾಯಿತು. ಯೆಹೂದ್ಯರಿಗೂ ಯೆಹೂದ್ಯಮೂಲದ ಕ್ರೈಸ್ತರಿಗೂ ಅಲ್ಲಿ ಪ್ರವೇಶವಿರಲಿಲ್ಲ. ಯೆಹೂದ್ಯೇತರ ಕ್ರೈಸ್ತರ ಚರ್ಚೊಂದು ಅಲ್ಲಿ ಉಳಿದುಬಂದಿತ್ತು. 212ರಲ್ಲಿ ಕ್ಯಾಪಡೋಷಿಯದಿಂದ ಬಂದ ಅಲೆಗ್ಸಾಂಡರ್ ಎಂಬ ಪಾದ್ರಿ ಇಲ್ಲಿ ಒಂದು ಗ್ರಂಥಭಂಡಾರವನ್ನು ಆರಂಭಿಸಿದ. ಅಲ್ಲಿಂದ ಮುಂದೆ ಯಾತ್ರಾರ್ಥಿಗಳು ಜೆರೂಸಲೆಮ್‍ಗೆ ಬರಲಾರಂಭಿಸಿದರು. ಆ ಕಾಲದ ತತ್ತ್ವe್ಞÁನಿಯಾಗಿದ್ದ ಆರಿಜೆನ್ ಗ್ರಂಥಗಳ ಸಂಗ್ರಹಣೆಗಾಗಿ ಹಲವು ಬಾರಿ ಅಲ್ಲಿಗೆ ಭೇಟಿ ಕೊಟ್ಟಿದ್ದ. ಜೆರೊಸಲೆಮ್‍ನ ಪಾದ್ರಿಯಾಗಿದ್ದ ಅಲೆಗ್ಸಾಂಡರ್ 250ರಲ್ಲಿ ಡೇನಿಯಸ್‍ನಿಂದ ಹಿಂಸೆಗೊಳಗಾದ. ಪ್ಯಾಲಸ್ಟೈನಿನ ಚರ್ಚುಗಳಿಗೂ ತೊಂದರೆಯೊದಗಿತು.

315ರ ಹೊತ್ತಿಗೆ ಜೆರೂಸಲೆಮ್‍ಗೆ ಕ್ರೈಸ್ತ ಯಾತ್ರಾರ್ಥಿಗಳು ತೊಂಡೋಪತಂಡವಾಗಿ ಬರಲಾರಂಭಿಸಿದ್ದರು. 325ರಲ್ಲಿ ನೈಸಿಯದಲ್ಲಿ ನಡೆದ ಮತಸಭೆಯಲ್ಲಿ ಇಲ್ಲಿಯ ಪಾದ್ರಿ ಮಕಾರಿಯೋಸ್ ಪಾಲ್ಗೊಂಡು, ಕ್ರಿಸ್ತನ ಶಿಲುಬೆಯ ಮತ್ತು ಕ್ರಿಸ್ತನ ಸಮಾಧಿಯ ಸ್ಥಳವನ್ನು ಪರಿಶುದ್ಧಿಗೊಳಿಸಲು ಅನುಮತಿ ಪಡೆದು ಬಂದ. ಮರುವರ್ಷ ರಾಣಿ ಹೆಲೆನಾ ಜೆರೂಸೆಲೆಮ್‍ಗೆ ಭೇಟಿಯಿತ್ತಾಗ ಕ್ರೈಸ್ತ ಮಂದಿರಗಳ ನಿರ್ಮಾಣ ಆರಂಭವಾಯಿತು. ಧರ್ಮಾಧಿಕಾರಿಗಳ ಸಭೆಯೊಂದು 335ರಲ್ಲಿ ಇಲ್ಲಿ ನಡೆದು, ಸಮಾಧಿಸ್ಥಳದ ಪರಿಶುದ್ಧಿಕ್ರಿಯೆ ನಡೆಯಿತು. ಇಲ್ಲಿ ನಿರ್ಮಿತವಾದ ಭವ್ಯವಾದ ಚರ್ಚು ಮತ್ತು ಇತರ ಕಟ್ಟಡಗಳ ಬಗೆಬಗೆಯ ಸುಂದರವಾದ ಅಲಂಕರಣ ಪ್ರಸಿದ್ಧಿ ಪಡೆದು ಈ ನಗರ ಹಿಂದಿನ ಧರ್ಮಶ್ರದ್ಧೆಯ ಸರ್ವೋತ್ಕøಷ್ಟತೆಯನ್ನು ಮತ್ತೆ ಪಡೆಯಿತು. ಧರ್ಮಭ್ರಷ್ಟನಾಗಿದ್ದ ಜೂಲಿಯನ್ ಹಳೆಯ ದೇವಾಲಯವನ್ನು ಪುನರುಜ್ಜೀವನಗೊಳಿಸಲು ಯತ್ನಿಸಿದನಾದರೂ 362ರಲ್ಲಿ ಅದು ಅಗ್ನಿಗೆ ಆಹುತಿಯಾಗಿತು. 5ನೆಯ ಶತಮಾನದಲ್ಲಿ ರಾಣಿ ಯುಡೋಸಿಯ ಈ ನಗರವನ್ನು ಮತ್ತಷ್ಟು ಅಂದಗೊಳಿಸಿದಳು. 451ರಲ್ಲಿ ಇಲ್ಲಿಯ ಪಾದ್ರಿಗೆ ಸ್ವತಂತ್ರವಾಗಿ ಆಡಳಿತ ನಿರ್ವಹಿಸುವ ಅಧಿಕಾರ ಬಂತು. 522ರಲ್ಲಿ ಜಸ್ಟಿನಿಯಿನ್ ಚಕ್ರವರ್ತಿ ಪಶ್ಚಿಮಭಾಗದ ಗುಡ್ಡದ ಮೇಲೆ ಮೇರಿಗಾಗಿ ಒಂದು ದೊಡ್ಡ ಮಂದಿರವನ್ನು ನಿರ್ಮಿಸಿದ. 614ರಲ್ಲಿ ಪರ್ಷಿಯನರು ದಾಳಿ ನಡೆಸಿ ನಗರವನ್ನು ಕೊಳ್ಳೆ ಹೊಡೆದು ಚರ್ಚುಗಳನ್ನು ಸುಟ್ಟು ಇಲ್ಲಿಯ ನಿವಾಸಿಗಳನ್ನು ಕೊಲೆಮಾಡಿದರು. 638ರಲ್ಲಿ ಜೆರೂಸಲೆಮ್‍ಗೆ ಕಲೀಫ್ ಉಮರನ ಪ್ರವೇಶವಾಯಿತು.

ಮರದ ಚಾವಣಿಯುಳ್ಳ ಮಸೀದಿಯೊಂದನ್ನು ದೇವಾಲಯವಿದ್ದ ಸ್ಥಳದಲ್ಲಿ ಉಮರ್ ಕಟ್ಟಿದ, ಇದು ಈಗಿನ ಆಕ್ಸ ಮಂದಿರಕ್ಕೆ ನಾಂದಿಯಾಯಿತು. ದುಂಡು ವಿನ್ಯಾಸದ ಶಿಲಾ ಗೊಮ್ಮಟವನ್ನು 10ನೆಯ ಕಲೀಫ್ ಅಬ್ದುಲ್ ಮಲ್ಲಿಕ್ 691ರಲ್ಲಿ ಕಟ್ಟಿಸಿದ. ಪರ್ಷಿಯನರು ಹಾಳುಗೆಡವಿದ್ದ ಚರ್ಚು ಜೀರ್ಣೋದ್ಧಾರಗೊಂಡು ಕ್ರೈಸ್ತರ ವಶದಲ್ಲಿ ಉಳಿಯಿತು. ಯೆಹೂದ್ಯರು ಮತ್ತು ಕ್ರೈಸ್ತರಿಬ್ಬರಿಗೂ ಮುಸ್ಲಿಮರು ಸಹಿಷ್ಣುತೆಯನ್ನು ತೋರಿಸಿದರು. ಉಮೈಯದರ ಅನಂತರ 750ರಲ್ಲಿ ಈ ನಗರವನ್ನು ವಶಪಡಿಸಿಕೊಂಡ ಬಾಗ್ದಾದಿನ ಅಬ್ಬಾಸಿದರೂ ಇದೇ ನೀತಿಯನ್ನುಸರಿಸಿದರು. 969ರಲ್ಲಿ ಇದು ಈಜಿಪ್ಟಿನ ಷಿಯಾ ಕಲೀಫರ ವಶವಾಯಿತು. 1009ರಲ್ಲಿ ಕ್ರೈಸ್ತಮಂದಿರಗಳನ್ನು ನಾಶಮಾಡುವಂತೆ ಅಲ್-ಹಕೀಮ್ ಅಪ್ಪಣೆ ಮಾಡಿದ. ಸೆಲ್ಚುಕ್ ತುರ್ಕರು ಈ ಪ್ರಾಂತ್ಯವನ್ನು ವಶಪಡಿಸಿಕೊಂಡ ಮೇಲೆ ಕ್ರೈಸ್ತ ಯಾತ್ರಿಕರು ಜೆರೂಸಲೆಮ್‍ಗೆ ಬರಲಡ್ಡಿಯಾಯಿತು. ಇದರ ಫಲವಾಗಿ ಪವಿತ್ರಭೂಮಿಯ ವಿಮೋಚನೆಗಾಗಿ ಧರ್ಮಯುದ್ಧಗಳು ನಡೆದು ಲ್ಯಾಟಿನ್ ರಾಜ್ಯವೊಂದು ಸ್ಥಾಪಿತವಾಯಿತು. ದೇವಾಲಯ ಪ್ರದೇಶದಲ್ಲಿ ನೆಲೆಗೊಂಡ ಟೆಂಪ್ಲಾರರು ಶಿಲಾಗುಮ್ಮಟವನ್ನು ತಮ್ಮ ಚರ್ಚನ್ನಾಗಿ ಉಪಯೋಗಿಸಿಕೊಂಡರು. ಈ ಧರ್ಮಯೋಧರು ಇಲ್ಲಿ ಯಾತ್ರಾರ್ಥಿಗಳಿಗಾಗಿ ಛತ್ರಗಳು ಮತ್ತು ಆಸ್ಪತ್ರೆಗಳನ್ನು ಕಟ್ಟಿಸಿದರು. 1187ರ ಹೊತ್ತಿಗೆ ಸಿರಿಯ ಮತ್ತು ಈಜಿಪ್ಟ್‍ಗಳೆರಡನ್ನೂ ಆಳಿದ ಸಲಾದೀನ್ ಲ್ಯಾಟಿನರನ್ನು ಸೋಲಿಸಿದ ಮೇಲೆ ಜೆರೂಸೆಲೆಮ್ ನಗರ ಮುಸ್ಲಿಮರ ವಶದಲ್ಲೇ ಉಳಿಯಿತು. ಖೊರೇಸ್ಮಿಯನ್ ಟಾರ್ಟರರು 1244ರಲ್ಲಿ ಈ ನಗರವನ್ನು ಸೂರೆಮಾಡಿದರು. ದಮಾಸ್ಕಸಿನ ಅಯಾಬಿಡ್ ಸುಲ್ತಾನರ ವಶದಲ್ಲಿದ್ದ ಈ ನಗರ 1247ರಲ್ಲಿ ಪುನಃ ಈಜಿಪ್ಟಿನವರ ವಶವಾಗಿ 270 ವರ್ಷಗಳ ಕಾಲ ಅವರ ಅಧೀನದಲ್ಲಿತ್ತು. ಈ ಕಾಲದಲ್ಲೇ ಇಲ್ಲಿ ಅನೇಕ ಸುಂದರ ಮುಸ್ಲಿಂ ವಾಸ್ತುಕೃತಿಗಳ ರಚನೆಯಾದ್ದು, ತುರ್ಕಿಯ ಸುಲ್ತಾನ 1ನೆಯ ಸಲೀಮ್ 1517ರಲ್ಲಿ ಈ ನಗರವನ್ನು ಆಕ್ರಮಿಸಿಕೊಂಡ ಮೇಲೆ 400 ವರ್ಷಗಳ ಕಾಲ ಇದು ಆಟೋಮನರ ವಶದಲ್ಲಿ ಉಳಿಯಿತು. ಈಗ ಉಳಿದುಬಂದಿರುವ ಕೋಟೆಗೋಡೆಗಳನ್ನೂ ಡಮಾಸ್ಕಸ್ ಬಾಗಿಲನ್ನೂ ನಿರ್ಮಿಸಿದವನು ಸಲೀಮನ ಅನಂತರ ಬಂದ ಸುಲೇಮಾನ.

19ನೆಯ ಶತಮಾನದಲ್ಲಿ ಪಾಶ್ಚಾತ್ಯರ ಗಮನ ಮತ್ತೆ ಇದರ ಕಡೆ ಹರಿಯಿತು. ಈಜಿಪ್ಟಿನ ಅಹ್ಮದ್ ಆಲಿ ಮತ್ತು ಅವನ ಮಗ ಇಬ್ರಾಹಿಮ್ ಪಾಷರ ಆಳ್ವಿಕೆಯಲ್ಲಿ ಬ್ರಿಟಿಷರು ಮುಖ್ಯವಾಗಿ ಯೆಹೂದ್ಯರ ಹಿತರಕ್ಷಣೆಗಾಗಿ ಇಲ್ಲಿ ರಾಯಭಾರಿಯನ್ನು ನೇಮಿಸಿದರು. 1841 ಮತ್ತು ಅನಂತರ ಆಂಗ್ಲಿಕನ್, ಲ್ಯಾಟಿನ್, ಅಮೆರಿಕನ್, ಕಾಷ್ಟಿಕ್ ಮತ್ತು ಅಬಿಸೀನಿಯನ್ ಚರ್ಚುಗಳು ಜೆರೂಸಲೆಮ್‍ನಲ್ಲಿ ಪ್ರಾತಿನಿಧ್ಯ ಹೊಂದಿದುವು. ಕ್ರಿಮಿಯ ಯುದ್ದದಲ್ಲಿ ಫ್ರೆಂಚರು ಮತ್ತು ಬ್ರಿಟಿಷರು ತುರ್ಕಿಯ ಪಕ್ಷ ವಹಿಸಿದ್ದರಿಂದ ಜೆರೂಸಲೆಮ್‍ನಲ್ಲಿ ಐರೋಪ್ಯರ ಸ್ಥಾನಮಾನ ಹೆಚ್ಚಲವಕಾಶವಾಯಿತು. ತುರ್ಕಿ ಸಾಮ್ರಾಜ್ಯದಲ್ಲಿ ಮತಸಹಿಷ್ಣುತೆಯ ಅಧಿನಿಯಮ 1856ರಲ್ಲಿ ಜಾರಿಗೆ ಬಂತು. ಬ್ರಿಟಿಷರ ಆಶ್ರಯದಲ್ಲಿ ಯೆಹೂದ್ಯರು ಇಲ್ಲಿ ಹೆಚ್ಚಾಗಿ ನೆಲೆಸಲಾರಂಭಿಸಿದರು. ಯೆಹೂದ್ಯ ಸ್ವಾಸ್ಥ್ಯವಾದಿಗಳ ಚಳವಳಿ ಬಲವಾಯಿತು. 1917ರಲ್ಲಿ ಬ್ರಿಟಿಷ್ ಸರ್ಕಾರ ಬ್ಯಾಲ್ಟರ್ ಪ್ರಕಟಣೆ ಹೊರಡಿಸಿ ಜೆರೂಸಲೆಮನ್ನು ಮಿಲಿಟರಿ ಆಡಳಿತಕ್ಕೆ ವಶಪಡಿಸಿತು. ಬ್ರಿಟನ್ನು ಇದರ ಆಡಳಿತ ನಿರ್ವಹಿಸಬೇಕೆಂದು 1920ರ ಏಪ್ರಿಲ್‍ನಲ್ಲಿ ಪರಮೋಚ್ಚ ಪರಾಮರ್ಶಕ ಮಂಡಲಿ ನಿಯೋಜಿಸಿತು. ಈ ಆಡಳಿತದಲ್ಲಿ ಜೆರೂಸಲೆಮ್ ನಗರ ವಿಸ್ತಾರವಾಗಿ ಬೆಳೆದು ಉಚ್ಛ್ರಾಯಸ್ಥಿತಿ ತಲುಪಿತು. ಆಧುನಿಕ ಅನುಕೂಲಗಳನ್ನೆಲ್ಲ ಇಲ್ಲಿ ಒದಗಿಸಲಾಯಿತು. ಆದರೆ ರಾಜಕೀಯವಾಗಿ ಪರಿಸ್ಥಿತಿ ಹದಗೆಟ್ಟಿತು. ಬ್ಯಾಲ್ಫರ್ ಪ್ರಕಟಣೆ ಯೆಹೂದ್ಯ ಸ್ವಾಸ್ಥ್ಯವಾದಿಗಳಿಗೆ ಕೊಟ್ಟ ಉತ್ತೇಜನದಿಂದ ಅರಬ್ ರಾಷ್ಟ್ರಗಳ ಸಂಶಯ ಬಲವಾಯಿತು. ಹಿಂಸಾಚರಣೆ ಹೆಚ್ಚಿತು. ಕಡೆಗೆ 1948ರಲ್ಲಿ ಈ ನಗರ ಇಬ್ಭಾಗವಾಗಿ ಉತ್ತರ ಮತ್ತು ಪೂರ್ವದ ಭಾಗಗಳು ಜಾರ್ಡನ್ನಿಗೂ ಪಶ್ಚಿಮ ಮತ್ತು ದಕ್ಷಿಣ ಭಾಗಗಳು ಇಸೇಲಿಗೂ ಸೇರಿ ಎರಡು ಭಾಗಗಳೂ ಪ್ರತ್ಯೇಕವಾಗಿಯೇ ಹುರುಪಿನಿಂದ ಅಭಿವೃದ್ದಿ ಹೊಂದಿದುವು. ಆದರೆ ಪುನಃ 1967ರಲ್ಲಿ ನಡೆದ ಅರಬ್-ಇಸ್ರೇಲಿ ಯುದ್ಧದಲ್ಲಿ ಜಾರ್ಡನಿನ ಭಾಗವನ್ನು ಇಸ್ರೇಲ್ ವಶಪಡಿಸಿಕೊಂಡಿತು.



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು

[ಬದಲಾಯಿಸಿ]
  1. [ಸಿಟಿ ಆಫ್ ವಾಲ್ಸ್-ಜೆರುಸಲೆಮ್-ಛಾಯಾಗ್ರಹಣ : ರಹಮತ್ ತರೀಕೆರೆ, 11 ಆಗಸ್ಟ್ 2016, ಸುಧಾ, ಪುಟಗಳು. 20-29]