ಅಂಕಾರಾ
ಅಂಕಾರಾ | |
---|---|
ಅತಾಕುಲೆ ಟವರ್ ಮತ್ತು ಅಂಕಾರಾ ನಗರದ ನೋಟ ಅತಾಕುಲೆ ಟವರ್ ಮತ್ತು ಅಂಕಾರಾ ನಗರದ ನೋಟ | |
ದೇಶ | ![]() |
ಪ್ರದೇಶ | ಮಧ್ಯ ಅನಟೋಲಿಯ |
ಪ್ರಾಂತ್ಯ | ಅಂಕಾರಾ |
ಸರ್ಕಾರ | |
• ಮೇಯರ್ | ಐ. ಮೆಲಿಹ್ ಗೊಕ್ಸೆಕ್ (AKP) |
• ರಾಜ್ಯಪಾಲ | ಕೆಮಲ್ ಓನಲ್ |
Area | |
• Total | ೨,೫೧೬.೦೦ km೨ (೯೭೧.೪೩ sq mi) |
ಎತ್ತರ | ೮೫೦ m (೨,೭೯೦ ft) |
ಜನಸಂಖ್ಯೆ (೨೦೦೭)[೧] | |
• ಒಟ್ಟು | ೩೯,೦೧,೨೦೧ |
• Density | ೧,೫೫೧.೦೦/km೨ (೪,೦೧೭.೧/sq mi) |
ಸಮಯ ವಲಯ | UTC+2 (EET) |
• Summer (DST) | UTC+3 (EEST) |
ಅಂಚೆ ಕೋಡ್ | 06x xx |
ಪ್ರದೇಶ ಸಂಕೇತ(ಗಳು) | 0312 |
Website | http://www.ankara.bel.tr/ |
ಅಂಕಾರಾ ಟರ್ಕಿ ದೇಶದ ರಾಜಧಾನಿ ಮತ್ತು ಇಸ್ತಾಂಬುಲ್ ನಂತರ ಅದರ ೨ನೆಯ ಅತ್ಯಂತ ದೊಡ್ಡ ನಗರವಾಗಿದೆ. ಈ ನಗರದ ಜನಸಂಖ್ಯೆ ಸುಮಾರು ೩,೯೦೧,೨೦೧ ಆಗಿದೆ.[೧] ಅಂಕಾರಾ ನಗರವು ಅಂಕಾರಾ ಪ್ರಾಂತ್ಯದ ರಾಜಧಾನಿ ಕೂಡ ಆಗಿದೆ. ಇದು ಟರ್ಕಿ ದೇಶದ ಪ್ರಮುಖ ವಾಣಿಜ್ಯ ಮತ್ತು ಕೈಗಾರಿಕ ಕೇಂದ್ರವಾಗಿ ಬೆಳೆದಿದೆ.
ಭೌಗೋಲಿಕ ಮಾಹಿತಿ[ಬದಲಾಯಿಸಿ]
ಸಮುದ್ರಮಟ್ಟಕ್ಕೆ 1020ಮೀ ಎತ್ತರದಲ್ಲಿ 150ಮೀ ಎತ್ತರವಿರುವ ಕಲ್ಲುಬಂಡೆಗಳ ಬೆಟ್ಟದ ಮೇಲಿದೆ. ಇಲ್ಲಿ ಖಂಡಾಂತರ ವಾಯುಗುಣವಿದೆ.
ನಗರದ ಇತಿಹಾಸ[ಬದಲಾಯಿಸಿ]
ಸಮುದ್ರದಿಂದ ದೂರವಿರುವುದರಿಂದಲೇ ಈ ಪಟ್ಟಣವನ್ನು ಅಂದಿನ ರಾಷ್ಟ್ರಾಧ್ಯಕ್ಷ ಕೆಮಾಲ್ ಅಟಾಟರ್ಕ್ ಎಂಬುವನು ರಾಜಧಾನಿಯನ್ನಾಗಿ ಮಾಡಿಕೊಂಡು, ಹಿಂದೆ ಇದ್ದ ಅಂಗೊರಾ ಎಂಬ ಹೆಸರನ್ನು 1923 ರಲ್ಲಿ ಅಂಕಾರ ಎಂದು ಬದಲಾಯಿಸಿದನು.
ನಗರದ ವರ್ಣನೆ ಮತ್ತು ವಿಶೇಷ ಸ್ಥಳಗಳು[ಬದಲಾಯಿಸಿ]
ಆಧುನಿಕ ಟರ್ಕಿಯ ಪ್ರಭಾವ ಪಟ್ಟಣದ ಕೆಲವು ಕಡೆ ಕಂಡುಬರುತ್ತದೆ. ಪಟ್ಟಣದ ಹಳೆಯ ಭಾಗದಲ್ಲಿ ಒಂದು ಕೋಟೆಯಿದ್ದು ಅದರೊಳಗಡೆ ಒಂದು ಒಳಕೋಟೆ ಮತ್ತು ಒಂದು ಬಿಳಿಯ ಗೋಪುರವಿದೆ. ಕೋಟೆಯ ಹೊರಭಾಗ ಪಾಳು ಬಿದ್ದಿದೆ. ಈ ಭಾಗದಲ್ಲಿ ವಾಸಮಾಡುವ ಜನರ ಸಂಖ್ಯೆ ಅಲ್ಪ. ಇಲ್ಲಿನ ಚಿಕ್ಕಚಿಕ್ಕ ಹಾಗೂ ವಕ್ರವಕ್ರವಾಗಿರುವ ಬೀದಿಗಳ ಎಡಬಲಗಳಲ್ಲಿ ಮಣ್ಣಿನ ಇಟ್ಟಿಗೆ, ಮರ ಹಾಗೂ ಹೆಂಚುಗಳನ್ನು ಉಪಯೋಗಿಸಿ ರಚಿಸಲಾದ ಹಳೆಯ ಮನೆಗಳಿವೆ.
ಇಲ್ಲಿ ಒಂದು ಪೇಟೆಯೂ ಮತ್ತು ರಾಷ್ಟ್ರೀಯ ಸಮಾರಂಭಗಳು ಜರುಗುವ ಉಲಸ್ ಎಂಬ ಹೆಸರಿನ ಚೌಕವೂ ಇವೆ. ಪಟ್ಟಣದ ಉತ್ತರ ಭಾಗದ ಪ್ರದೇಶಕ್ಕೆ ಆಧುನಿಕತೆಯ ಪ್ರಭಾವ ಹೆಚ್ಚಾಗಿ ಬೀಳದಿದ್ದು, ಅಲ್ಲಿ ಅನೇಕ ಪ್ರಾಚೀನ ಅವಶೇಷಗಳು ಕಂಡುಬರುತ್ತವೆ. ಬೆಟ್ಟದ ಮೇಲಿನಿಂದ ನೋಡಿದರೆ 1953ರಲ್ಲಿ ಪುರ್ಣಗೊಂಡ ಅಟಾಟರ್ಕ್ನ ಸಮಾಧಿ ಪ್ರಧಾನವಾಗಿ ಕಾಣಿಸುತ್ತದೆ. ದೂರದಲ್ಲಿ ಕಾಣಿಸುವ ಇತರ ಸ್ಮಾರಕಗಳೆಂದರೆ-ವಿಕ್ಟರಿ ಸ್ಮಾರಕ, ಕಾನ್ಫಿಡೆನ್ಸ್ ಸ್ಮಾರಕ - ಇತ್ಯಾದಿ. ಈಗಿನ ಅಧ್ಯಕ್ಷರ ನಿವಾಸದ ಮುಂಭಾಗದಲ್ಲಿರುವ ಅಟಾಟರ್ಕ್ನ ನಿವಾಸ ಈಗ ಒಂದು ವಸ್ತು ಸಂಗ್ರಹಾಲಯವಾಗಿದೆ. ಅಂಕಾರದಲ್ಲಿ ಒಂದು ವಿಶ್ವವಿದ್ಯಾಲಯ, ಒಂದು ರಾಷ್ಟ್ರೀಯ ಪುಸ್ತಕ ಭಂಡಾರ, ರಾಜ್ಯದ ಆರ್ಥಿಕ ನೆರವಿನಿಂದ ನಡೆಯುತ್ತಿರುವ ಒಂದು ರಂಗಮಂಟಪ ಮತ್ತು ಆಧುನಿಕ ರೇಡಿಯೋ ಕೇಂದ್ರ ಇವೆ. ಇಲ್ಲಿರುವ ಕಾಲೇಜು ಬಹಳ ದೊಡ್ಡದಾಗಿದೆ. ಜೆನ್ಕ್ಲಿಕ್ ಪಾರ್ಕ್ ಎಂಬ ಉದ್ಯಾನವನ ಬಹಳ ಸುಂದರವಾಗಿದೆ. ಕುದುರೆ ಜೂಜಿನ ಮೈದಾನ ಹಾಗೂ ಎರಡು ಕ್ರೀಡಾಂಗಣಗಳಿವೆ. ಪಟ್ಟಣದ ಉತ್ತರಕ್ಕೆ 13 ಕಿಮೀ. ದೂರದಲ್ಲಿರುವ ಕ್ಯುಬೆಕ್ ಡ್ಯಾಂ ಎಂಬುದು ಒಂದು ಪ್ರವಾಸೀ ಕೇಂದ್ರವಾಗಿದೆ.
ಪ್ರಯಾಣ ಸೌಲಭ್ಯಗಳು[ಬದಲಾಯಿಸಿ]
ಅಂಕಾರದಿಂದ ಇಸ್ತಾನ್ಬುಲ್, ಇಜ಼್‌ಮೀರ್ ಮತ್ತು ಅದಾನ ಪಟ್ಟಣಗಳಿಗೆ ರೈಲಿನ ಸೌಲಭ್ಯವಿದೆ. ಇಲ್ಲಿಂದ 26 ಕಿ.ಮೀ ದೂರವಿರುವ ಈಸೆನ್ಬೋಗ ಎಂಬುದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
ಕೈಗಾರಿಕೆಗಳು[ಬದಲಾಯಿಸಿ]
ಪಟ್ಟಣದ ಹೊರವಲಯದಲ್ಲಿ ಜಮಖಾನೆ, ಜೇನುತುಪ್ಪ ಮತ್ತು ಪೇರು ಜಾತಿಯ ಹಣ್ಣಿನ ಉತ್ಪನ್ನಗಳು ಮುಂತಾದ ಕೈಗಾರಿಕೆಗಳು ಕಂಡುಬರುತ್ತವೆ.
ಅಂಕಾರಾ ನಗರನೋಟ[ಬದಲಾಯಿಸಿ]
ಉಲ್ಲೇಖಗಳು[ಬದಲಾಯಿಸಿ]
- ↑ ೧.೦ ೧.೧ Türkiye istatistik kurumu Address-based population survey 2007. Retrieved on 2008-10-09.
ಹೊರಗಿನ ಸಂಪರ್ಕಗಳು[ಬದಲಾಯಿಸಿ]
- ಅಂಕಾರಾ ನಗರ ಮಾರ್ಗದರ್ಶಿ Archived 2021-08-08 at the Wayback Machine.
- ವಿಕಿಟ್ರಾವೆಲ್ನಲ್ಲಿ ಅಂಕಾರಾ
- Pages with non-numeric formatnum arguments
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Pages using infobox settlement with unknown parameters
- Pages using infobox settlement with no map
- Pages using infobox settlement with no coordinates
- ಭೌಗೋಳಿಕ Infobox
- Webarchive template wayback links
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
- ಏಷ್ಯಾ ಖಂಡದ ರಾಜಧಾನಿ ನಗರಗಳು
- ಯುರೋಪ್ ಖಂಡದ ರಾಜಧಾನಿ ನಗರಗಳು
- ಏಷ್ಯಾ ಖಂಡದ ನಗರಗಳು