ಸದಸ್ಯ:Jaipatil1

ವಿಕಿಪೀಡಿಯ ಇಂದ
Jump to navigation Jump to search

ನನ್ನ ಹೆಸರು :ಬಸವರಾಜ್ ಸಿಮಾನಿ

ವಿಷಯ :ಕದಂಬ ವಂಶದ ಪರಿಚಯ


ಕರ್ನಾಟಕದ ಇತಿಹಾಸ ಒಂದು ಭಾಗ
 - 
GBerunda.JPG
ಕರ್ನಾಟಕದ ಹೆಸರಿನ ಮೂಲ
ಕದಂಬ ಸಾಮ್ರಾಜ್ಯ ಮತ್ತು ಗಂಗ ಸಾಮ್ರಾಜ್ಯ
ಚಾಲುಕ್ಯ ಸಾಮ್ರಾಜ್ಯ
ರಾಷ್ಟ್ರಕೂಟ ಸಾಮ್ರಾಜ್ಯ
ಕಲ್ಯಾಣಿಯ ಚಾಲುಕ್ಯ ಸಾಮ್ರಾಜ್ಯ
ವೆಂಗಿಯ (ಪೂರ್ವ) ಚಾಲುಕ್ಯರು ಸಾಮ್ರಾಜ್ಯ
ಹೊಯ್ಸಳ ಸಾಮ್ರಾಜ್ಯ
ವಿಜಯನಗರ ಸಾಮ್ರಾಜ್ಯ
ಬಹಮನಿ ಸುಲ್ತಾನರ ಆಳ್ವಿಕೆ
ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆ
ಮೈಸೂರು ಸಂಸ್ಥಾನ
ಕರ್ನಾಟಕದ ಏಕೀಕರಣ

ವಾಸ್ತು ಶಿಲ್ಪ    ಕೋಟೆಗಳು    ರಾಜ ಮಹಾರಾಜರು

'ಕದಂಬ' ವಂಶವು ಕನ್ನಡದ ಮೊಟ್ಟ ಮೊದಲ ರಾಜ ವಂಶ. ಕನ್ನಡದಲ್ಲಿ ದೊರೆತಿರುವ ಮೊಟ್ಟಮೊದಲ ಶಾಸನವಾದ ಹಲ್ಮಿಡಿ ಶಾಸನವು ಕದಂಬರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ.[೧]

ಕದಂಬರು (ಕ್ರಿ.ಶ.೩೪೫-೫೨೫) ಇಂದಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಿಂದ ಆಳುತ್ತಿದ್ದ ಕರ್ನಾಟಕದ ಒಂದು ಪುರಾತನ ರಾಜವಂಶ. ಮುಂದೆ ಚಾಲುಕ್ಯ ಮತ್ತು ರಾಷ್ಟ್ರಕೂಟ ಸಾಮ್ರಾಜ್ಯಗಳ ಸಾಮಂತರಾಗಿ ಆಳ್ವಿಕೆ ಮುಂದುವರಿಸಿದ ಕದಂಬರರ ರಾಜ್ಯ ಗೋವಾ ಮತ್ತುಹಾನಗಲ್ ಗಳಲ್ಲಿ ಶಾಖೆಗಳನ್ನು ಹೊಂದಿತು. ರಾಜಾ ಕಾಕುಸ್ಥವರ್ಮನ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕದಂಬರ ರಾಜ್ಯ ಕರ್ನಾಟಕದ ಅನೇಕ ಭಾಗಗಳನ್ನೊಳಗೊಂಡಿತ್ತು. ಕದಂಬರ ಪೂರ್ವದ ರಾಜ ವಂಶಗಳಾದ ಮೌರ್ಯರು, ಶಾತವಾಹನರು ಮೂಲತಃ ಕರ್ನಾಟಕದ ಹೊರಗಿನವರಾಗಿದ್ದು, ಅವರ ರಾಜ್ಯದ ಕೇಂದ್ರಬಿಂದು ಕರ್ನಾಟಕದ ಹೊರಗಿತ್ತು. ಕನ್ನಡವನ್ನು ರಾಜ್ಯಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು. ಈ ಪ್ರದೇಶದ ಬೆಳವಣಿಗೆಯ ಅಧ್ಯಯನದಲ್ಲಿ , ಬಹಳ ಕಾಲ ಬಾಳಿದ ಸ್ಥಳೀಯ ರಾಜಕೀಯ ಶಕ್ತಿಯಾಗಿ ಮತ್ತು ಕನ್ನಡ ಒಂದು ಪ್ರಮುಖ ಪ್ರಾದೇಶಿಕ ಭಾಷೆಯಾಗಿ ಬೆಳೆದ ಈ ಕಾಲಮಾನ, ಕರ್ನಾಟಕದ ಇತಿಹಾಸದಲ್ಲಿ,ಸರಿಸುಮಾರು ಐತಿಹಾಸಿಕ ಪ್ರಾರಂಭ ಕಾಲವಾಗಿದೆ. ಕ್ರಿ.ಶ. ೩೪೫ರಲ್ಲಿ ಮಯೂರವರ್ಮನಿಂದ ಸ್ಥಾಪಿಸಲಾದ ಈ ರಾಜ್ಯವು, ಬೃಹತ್ ಸಾಮ್ರಾಜ್ಯವಾಗಿ ಬೆಳೆಯುವ ಲಕ್ಷಣವನ್ನು ಆಗಾಗ ತೋರಿಸುತ್ತಿತ್ತು. ಆಗಿನ ರಾಜರುಗಳ ಬಿರುದು ಬಾವಲಿಗಳೂ ಈ ವಿಷಯಕ್ಕೆ ಪುಷ್ಟಿ ಕೊಡುತ್ತವೆ.ಇದೇ ವಂಶದ ಕಾಕುಸ್ಥವರ್ಮನು ಬಲಾಢ್ಯ ಅರಸನಾಗಿದ್ದು, ಉತ್ತರದ ಗುಪ್ತ ಮಹಾಸಾಮ್ರಾಜ್ಯದ ದೊರೆಗಳು ಇವನೊಂದಿಗೆ ಲಗ್ನ ಸಂಬಂಧ ಇಟ್ಟುಕೊಂಡದ್ದು ಈ ರಾಜ್ಯದ ಘನತೆಯನ್ನು ಸೂಚಿಸುತ್ತದೆ. ಇದೇ ಪೀಳಿಗೆಯ ರಾಜ ಶಿವಕೋಟಿ ಪದೇಪದೇ ನಡೆಯುತ್ತಿದ್ದ ಯುದ್ಧ , ರಕ್ತಪಾತಗಳಿಂದ ಬೇಸತ್ತು ಜೈನ ಧರ್ಮಕ್ಕೆ ಮತಾಂತರಗೊಂಡ.ಕದಂಬರು, ಹಾಗೂ ಅವರ ಸಮಕಾಲೀನರಾಗಿದ್ದ ತಲಕಾಡು ಪಶ್ಚಿಮ ಗಂಗರು ಸಂಪೂರ್ಣ ಸ್ವತಂತ್ರ ರಾಜ್ಯಸ್ಥಾಪನೆ ಮಾಡಿದ ಸ್ಥಳೀಯರಲ್ಲಿ ಮೊದಲಿಗರು.[೧]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಕದಂಬ ಚಕ್ರವರ್ತಿ – ಮಯೂರ

ಇತಿಹಾಸ[ಬದಲಾಯಿಸಿ]

ಕದಂಬ ರಾಜರುಗಳು (೩೪೫ -೫೨೫)
(ಬನವಾಸಿ ರಾಜರುಗಳು)
ಮಯೂರಶರ್ಮ (೩೪೫ - ೩೬೫)
ಕಂಗವರ್ಮ (೩೬೫ - ೩೯೦)
ಬಗೀತಾರ್ಹ (೩೯೦ -೪೧೫)
ರಘು (೪೧೫ - ೪೩೫)
ಕಾಕುಸ್ಥವರ್ಮ (೪೩೫ - ೪೫೫)
ಶಾಂತಿವರ್ಮ (೪೫೫ - ೪೬೦)
ಮೃಗೇಶವರ್ಮ (೪೬೦ - ೪೮೦)
ಶಿವಮಾಂಧಾತಿವರ್ಮ (೪೮೦ – ೪೮೫)
ರವಿವರ್ಮ (೪೮೫ – ೫೧೯)
ಹರಿವರ್ಮ (೫೧೯ – ೫೨೫)
(ತ್ರಿಪರ್ವತ ಶಾಖೆ)
ಒಂದನೆಯ ಕೃಷ್ಣ ವರ್ಮ (೪೫೫)
ವಿಷ್ಣುವರ್ಮ
ಸಿಂಹವರ್ಮ
ಎರಡನೆಯ ಕೃಷ್ಣವರ್ಮ
ಒಂದನೆಯ ಪುಲಿಕೇಶಿ
(ಚಾಲುಕ್ಯ)
(೫೪೩ - ೫೬೬)

ಕದಂಬರ ಮೂಲದ ಬಗ್ಗೆ ಹಲವಾರು ಐತಿಹ್ಯಗಳಿವೆ. ಒಂದು ಕಥೆಯ ಪ್ರಕಾರ ಈ ವಂಶದ ಮೂಲಪುರುಷ ತ್ರಿಲೋಚನ ಕದಂಬ (ಹಲಸಿ ಮತ್ತು ದೇಗಾಂವಿಯ ದಾಖಲೆಗಳ ಪ್ರಕಾರ ಇವನ ಹೆಸರು ಜಯಂತ). ಇವನಿಗೆ ಮೂರು ಕಣ್ಣುಗಳೂ ನಾಲ್ಕು ಕೈಗಳೂ ಇದ್ದವು. ಶಿವನ ಬೆವರು ಕದಂಬ ವೃಕ್ಷದ ಕೆಳಗೆ ಬಿದ್ದಾಗ ಹುಟ್ಟಿದವನು ಇವನು (ಎಂದೇ ಕದಂಬ ಎಂಬ ಹೆಸರು). ಇನ್ನೊಂದು ಕಥೆಯ ಪ್ರಕಾರ ಮಯೂರಶರ್ಮನೇ ಶಿವ ಮತ್ತುಭೂದೇವಿಯ ಮಗನಾಗಿ ಹುಟ್ಟಿ ಕದಂಬ ವಂಶವನ್ನು ಸ್ಥಾಪಿಸಿದ. ಇವನಿಗೂ ಮೂರು ಕಣ್ಣುಗಳಿದ್ದವು. ಕನ್ನಡ ಬ್ರಾಹ್ಮಣರ ಇತಿಹಾಸ ವಿವರಿಸುವ ಗ್ರಾಮ ಪದ್ಧತಿ ಎಂಬ ಕನ್ನಡ ಪುಸ್ತಕದ ಪ್ರಕಾರ, ಮಯೂರಶರ್ಮನು ಶಿವಪಾರ್ವತಿಗೆ ಸಹ್ಯಾದ್ರಿ ಪರ್ವತಶ್ರೇಣಿಯ ಕದಂಬ ವೃಕ್ಷದ ಕೆಳಗೆ ಹುಟ್ಟಿದವನಾಗಿದ್ದ. ಇದೇ ವಂಶದ ಕುಡಿಯಾದ ನಾಗರಖಾಂಡ ಕದಂಬರೆಂಬ ವಂಶದ ಒಂದು ಶಾಸನದ ಪ್ರಕಾರ, ಈ ವಂಶದ ಮೂಲ ನಂದ ಸಾಮ್ರಾಜ್ಯದವರೆಗೂ ಹೋಗುತ್ತದೆ. ಮಕ್ಕಳಿಲ್ಲದ ರಾಜಾ ನಂದನು , ಮಕ್ಕಳಿಗಾಗಿ ಕೈಲಾಸದಲ್ಲಿ ಶಿವನನ್ನು ಪ್ರಾರ್ಥಿಸಲು, ಅವನಿಗೆ ಎರಡು ಮಕ್ಕಳಾಗುವುದಾಗಿಯೂ, ಅವರಿ ಕದಂಬ ಕುಲ ಎಂಬ ಹೆಸರು ಬರುವುದಾಗಿಯೂ, ಹಾಗೂ ಅವರಿಗೆ ಶಸ್ತ್ರ ವಿದ್ಯೆಯನ್ನು ಕಲಿಸಬೇಕೆಂದೂ ನಭೋವಾಣಿಯಾಯಿತು.[೧]

ಕದಂಬರ ಮೂಲದ ಬಗ್ಗೆ ಎರಡು ಸಿದ್ಧಾಂತಗಳಿವೆ. ಒಂದು ಕನ್ನಡ ಮೂಲ ಇನ್ನೊಂದು ಉತ್ತರ ಭಾರತ ಮೂಲ. ಆದರೆ ಉತ್ತರ ಭಾರತದ ಮೂಲದ ಬಗ್ಗೆ ಆ ವಂಶಪರಂಪರೆಯ ನಂತರದ ದಾಖಲೆಗಳಲ್ಲಿ ಮಾತ್ರ ಉಲ್ಲೇಖವಿದ್ದು, ಅದನ್ನು ಬರಿಯ ದಂತಕಥೆ ಎಂದು ಪರಿಗಣಿಸಲಾಗುತ್ತದೆ. ಇದರ ಮೊದಲ ಉಲ್ಲೇಖ ೧೦೫೩ ಮತ್ತು ೧೦೫೫ರ ಹರಿಕೇಸರಿ ದೇವನ ಶಾಸನಗಳಲ್ಲಿ ದೊರಕಿದ್ದು , ಮುಂದಿನ ಶಾಸನಗಳು ಇದನ್ನೇ ಮತ್ತೆ ಉಲ್ಲೇಖಿಸಿ, ಮಯೂರಶರ್ಮನು ಹಿಮಾಲಯದ ಮೇಲೆ ಅಧಿಪತ್ಯ ಸ್ಥಾಪಿಸಿದನು ಎಂದು ಬಣ್ಣಿಸುತ್ತವೆ. ಇದನ್ನು ಸಮರ್ಥಿಸುವ ಮತ್ತಾವುದೇ ದಾಖಲೆಗಳು ಕಂಡುಬರದೇ ಇದ್ದಕಾರಣ , ಈ ವಾದ ಹೆಚ್ಚು ವಿಶ್ವಾಸಾರ್ಹವಾಗಿಲ್ಲ. ಕೇವಲ ದಕ್ಷಿಣ ಭಾರತದಲ್ಲಿಯೇ ಕಂಡುಬರುವ ಕದಂಬ ವೃಕ್ಷದ ಹೆಸರು ಈ ವಂಶದ ದಕ್ಷಿಣ ಭಾರತ ಮೂಲವನ್ನು ಸೂಚಿಸುತ್ತದೆ.

ಕದಂಬರ ಜಾತಿಯ ಬಗ್ಗೆಯೂ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ. ತಾಳಗುಂದ ಶಾಸನದ ಪ್ರಕಾರ ಕದಂಬರು ಮೂಲತಃ ಬ್ರಾಹ್ಮಣರಾದರೆ, ಅವರು ಆದಿವಾಸಿ ಜನಾಂಗಕ್ಕೆ ಸೇರಿದವರಾಗಿದ್ದರು ಎಂಬ ಅಭಿಪ್ರಾಯವೂ ಇದೆ. ಕದಂಬರು , ಇಂದಿನ ಕೇರಳ, ತಮಿಳುನಾಡುಪ್ರದೇಶದಲ್ಲಿ ರಾಜ್ಯವಾಳುತ್ತಿದ್ದ ಚೇರ ರಾಜರೊಂದಿಗೆ ಸಂಘರ್ಷದಲ್ಲಿದ್ದ, ಕಡಂಬು ಎಂಬ ಬುಡಕಟ್ಟಿಗೆ ಸೇರಿದವರು ಎಂಬ ಅಭಿಪ್ರಾಯವನ್ನೂ ಮಂಡಿಸಲಾಗಿದೆ. ಸುಬ್ರಹ್ಮಣ್ಯ ಮತ್ತು ಕದಂಬ ವೃಕ್ಷವನ್ನು ಮನೆದೇವರಾಗಿ ಪೂಜಿಸುವವರಾಗಿ ಕಡಂಬುಗಳ ಉಲ್ಲೇಖ ತಮಿಳಿನ ಸಂಗಮ ಸಾಹಿತ್ಯದಲ್ಲಿ ದೊರಕುತ್ತದ[೧]

ಕೆಲ ಇತಿಹಾಸಕಾರರು ಕದಂಬರ ಬ್ರಾಹ್ಮಣ ಮೂಲ, ಅವರನ್ನು ಉತ್ತರಭಾರತದ ಬೇರನ್ನು ಸೂಚಿಸುತ್ತದೆ ಎಂದು ವಾದಿಸಿದರೂ, ಅದಕ್ಕೆ ಪ್ರತಿಯಾಗಿ ಮಧ್ಯಯುಗದ ಮೊದಮೊದಲ್ಲಿ ದ್ರಾವಿಡರನ್ನು ಬ್ರಾಹ್ಮಣ ಪಂಗಡಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆ ಇತ್ತು ಎಂಬ ವಾದವೂ ಇದೆ.

ಅದೇನೇ ಇದ್ದರೂ, ಸ್ಥಳೀಯ ಕನ್ನಡಿಗರಾಗಿದ್ದ ಕದಂಬರು ತಮ್ಮ ರಾಜ್ಯದ ಆಡಳಿತ ಮತ್ತು ರಾಜಕೀಯದಲ್ಲಿ ಕನ್ನಡಕ್ಕೆ ಪ್ರಧಾನ ಸ್ಥಾನ ಕೊಟ್ಟರು. ಇದನ್ನು ಗಮನಿಸಿದರೆ ಕದಂಬರು ಬ್ರಾಹ್ಮಣ ಕುಲಕ್ಕೆ ಬರಮಾಡಿಕೊಂಡ ಕನ್ನಡ ಭಾಷಿಕರಾಗಿದ್ದರು ಎಂದು ಸಿದ್ಧವಾಗುತ್ತದೆ ಎಂದು ಕೆಲ ವಿದ್ವಾಂಸರ ಅಭಿಮತ. ರಾಜಾ ಕೃಷ್ಣವರ್ಮನ ಮೊದಮೊದಲ ಶಾಸನಗಳಲ್ಲಿ ಕಂಡುಬರುವ ಕದಂಬರು ನಾಗರ ಪೀಳಿಗೆಯವರು ಎಂಬ ಉಲ್ಲೇಖ ಕೂಡಾ ಕದಂಬರು ಕರ್ನಾಟಕದವರಾಗಿದ್ದರು ಎಂದು ಖಚಿತಪಡಿಸುತ್ತದೆ.

ಕದಂಬರ ಇತಿಹಾಸದ ಮೂಲ ಆಕರಗಳೆಂದರೆ ಕನ್ನಡ ಮತ್ತು ಸಂಸ್ಕೃತದ ಶಾಸನಗಳು. ಮುಖ್ಯವಾಗಿ ತಾಳಗುಂದ, ಗುಂಡನೂರು, ಚಂದ್ರವಳ್ಳಿ, ಹಲಸಿ ಮತ್ತು ಹಲ್ಮಿಡಿ ಶಾಸನಗಳು ಈ ಕನ್ನಡ ವಂಶದ ಬಗ್ಗೆ ಬೆಳಕು ಚೆಲ್ಲುತ್ತವೆ. ಅವರು ಮಾನವ್ಯಗೋತ್ರದವರೂ, ಹರಿತಿಪುತ್ರ ಪೀಳಿಗೆಯವರೂ ಆಗಿದ್ದು, ಬನವಾಸಿಯ ಚುಟು ಎಂಬ ಶಾತವಾಹನರ ಜಹಗೀರುದಾರರ ಸಂಬಂಧಿಕರಾಗಿದ್ದರು.

ಕದಂಬರ ನಾಣ್ಯಗಳಲ್ಲಿ ಕನ್ನಡ, ನಾಗರಿ ಮತ್ತು ಗ್ರಂಥ ಲಾಂಛನ ಮತ್ತು ಭಾಷೆಗಳಿವೆ.

ಕನ್ನಡದಲ್ಲಿ ದೊರಕಿರುವ ಮೊಟ್ಟಮೊದಲ ಶಾಸನವೆಂದು ಹೆಸರಾಗಿರುವ ಹಲ್ಮಿಡಿ ಶಾಸನ (ಕ್ರಿ.ಶ ೪೫೦) ಕದಂಬರು ಆಡಳಿತಾತ್ಮಕ ಭಾಷೆಯಾಗಿ ಕನ್ನಡವನ್ನು ಉಪಯೋಗಕ್ಕೆ ತಂದುದಕ್ಕೆ ಸಾಕ್ಷಿಯಾಗಿದೆ. ಅವರ ಆಳ್ವಿಕೆಯ ಮೊದಲ ಭಾಗದ ಮೂರು ಶಾಸನಗಳು ಪತ್ತೆಯಾಗಿವೆ. ಸತಾರಾ ಕಲೆಕ್ಟೋರೇಟಿನಲ್ಲಿ ಕದಂಬರ ಆಳ್ವಿಕೆಯ ಮೊದಮೊದಲಲ್ಲಿ ಟಂಕಿಸಿದ ವಿರ ಮತ್ತು ಸ್ಕಂದ ಎಂಬ ಕನ್ನಡ ಲಿಪಿಯಿರುವ ನಾಣ್ಯಗಳು ದೊರಕಿವೆ.[೧] ರಾಜಾ ಭಗೀರಥ (ಕ್ರಿ.ಶ. ೩೯೦-೪೧೫) ನ ಕಾಲದ , ಶ್ರೀ ಮತ್ತು ಭಾಗಿ ಎಂಬ ಕನ್ನಡ ಶಬ್ದಗಳಿರುವ ಬಂಗಾರದ ನಾಣ್ಯವೂ ದೊರಕಿದೆ. ಈಚೆಗೆ ಬನವಾಸಿಯಲ್ಲಿ ದೊರಕಿದ ಐದನೆಯ ಶತಮಾನದ ತಾಮ್ರದ ನಾಣ್ಯದಲ್ಲಿಯೂ ಶ್ರೀಮಾನರಾಗಿ ಎಂಬ ಕನ್ನಡ ಶಬ್ದವಿದ್ದು ಕದಂಬರ ಕಾಲದಲ್ಲಿ ಕನ್ನಡ ಆಡಳಿತ ಭಾಷೆಯಾಗಿತ್ತು ಎಂಬುದನ್ನು ಇನ್ನಷ್ಟು ಪುಷ್ಟಿಗೊಳಿಸುತ್ತದೆ.


ರಾಜಾ ಶಾಂತಿವರ್ಮನ (ಕ್ರಿ.ಶ. ೪೫೦) ಕಾಲದ ತಾಳಗುಂದದ ಶಾಸನ ಕದಂಬರ ಸಾಮ್ರಾಜ್ಯದ ಹುಟ್ಟಿನ ಬಗ್ಗೆ ಸಂಭವನೀಯ ವಿವರಗಳನ್ನು ನೀಡುತ್ತದೆ. ಅದರ ಪ್ರಕಾರ , ತಾಳಗುಂದ ( ಇಂದಿನ ಶಿವಮೊಗ್ಗ ಜಿಲ್ಲೆಯಲ್ಲಿದೆ)ದ ನಿವಾಸಿ ಮಯೂರಶರ್ಮನು , ತನ್ನ ಅಜ್ಜ ಮತ್ತು ಗುರು , ವೀರಶರ್ಮನೊಂದಿಗೆ ಕ್ರಿ.ಶ. ೩೪೫ರಲ್ಲಿ ವೈದಿಕ ವಿದ್ಯಾರ್ಜನೆಗೋಸ್ಕರ ಕಂಚಿಗೆ ಹೋಗುತ್ತಾನೆ. ಅಲ್ಲಿ ಪಲ್ಲವರ ಕಾವಲು ಭಟರೊಂದಿಗೆ ಮನಸ್ತಪವಾಗಿ , ಅವರಿಂದ ಅವಮಾನಿತನಾಗುತ್ತಾನೆ. ಇದರಿಂದ ಕೋಪಿತಗೊಂಡು , ಪ್ರತೀಕಾರದ ಪ್ರತಿಜ್ಞೆಗೈದು, ಕಂಚಿಯನ್ನು ಬಿಟ್ಟು ವ

ಹೆಚ್ಚಿಗೆ ಓದಲು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ೧.೪ "ಕನ್ನಡದ ಮೊಟ್ಟ ಮೊದಲ ರಾಜ ವಂಶ ಲಿಕದಂಬಳಿ".