ಮಯೂರವರ್ಮ
The Talagunda pillar inscription provides insights into the life of Mayurasharma and the Kadamba lineage
ಕದಂಬ ರಾಜ್ಯವನ್ನು ಕರ್ನಾಟಕದ ಪ್ರಥಮ ರಾಜ್ಯವೆಂದು ವರ್ಣಿಸಲಾಗುತ್ತಿದೆ. ಈ ರಾಜ್ಯದ ಸ್ಥಾಪಕ ಮಯೂರವರ್ಮ ( ಕ್ರಿ.ಶ. ೩೨೫-೩೪೫). ಈತನ ರಾಜಧಾನಿ ಬನವಾಸಿ. ತಾಳಗುಂದ ಗ್ರಾಮದಲ್ಲಿ ಹುಟ್ಟಿ ಬೆಳೆದ ಯುವಕನೊಬ್ಬ ಉನ್ನತ ವ್ಯಾಸಂಗಕ್ಕಾಗಿ ಕಂಚಿ ಪಟ್ಟಣಕ್ಕೆ ತೆರಳಿದ್ದಾಗ ಪಲ್ಲವರಿಂದ ಅವಮಾನಿತನಾಗುತ್ತಾನೆ. ತನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದ ಪಲ್ಲವರ ವಿರುದ್ದ ಖಡ್ಗ ಹಿಡಿದು, ಅವರ ಸೊಲ್ಲಡಗಿಸಿ ಸ್ವಾಭಿಮಾನದ ಸಂಕೇತವಾಗಿ ಕದಂಬ ಸಾಮ್ರಾಜ್ಯ ನಿರ್ಮಾಣ ಮಾಡುತ್ತಾನೆ ಎಂಬುದು ಇತಿಹಾಸ.
ಈತನ ಕುರಿತಾಗಿ ವರನಟ ರಾಜಕುಮಾರ್ ಅವರ ಅಭಿನಯದಲ್ಲಿ "ಮಯೂರ" ಚಲನಚಿತ್ರವು ತಯಾರಾಗಿದೆ .