ಮಲಾವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Republic of Malaŵi
[Chalo cha Malawi, Dziko la Malaŵi] Error: {{Lang}}: text has italic markup (help)
Flag of Malawi
Flag
Coat of arms of Malawi
Coat of arms
Motto: Unity and Freedom[೧]
Anthem: [Mulungu dalitsa Malaŵi] Error: {{Lang}}: text has italic markup (help)  (Chichewa)
"Oh God Bless Our Land of Malawi"
[೨]
Location of Malawi
CapitalLilongwe
Largest cityBlantyre[೩]
Official languagesEnglish[೪]
Recognised regional languagesChichewa[೪]
Demonym(s)Malawian
GovernmentMulti-party democracy
• President
Peter Mutharika
Saulos Chilima
Independence 
from the United Kingdom
• Independence declared
July 6, 1964
Area
• Total
118,484 km2 (45,747 sq mi) (99th)
• Water (%)
20.6%
Population
• 2009 estimate
15,028,757 (64)
• 1998 census
9,933,868[೫]
• Density
128.8/km2 (333.6/sq mi) (94th)
GDP (PPP)2009 estimate
• Total
$12.81 billion (139)
• Per capita
$900 (218)
GDP (nominal)2008 estimate
• Total
$4.268 billion[೬]
• Per capita
$312[೬]
Gini (2008)38
medium
HDI (2008)Increase 0.457[೭]
Error: Invalid HDI value · 162nd
CurrencyKwacha (D) (MWK)
Time zoneUTC+2 (CAT)
• Summer (DST)
UTC+2 (not observed)
Driving sideleft
Calling code+265[೪]
ISO 3166 codeMW
Internet TLD.mw[೪]
1 Population estimates for this country explicitly take into account the effects of excess mortality due to AIDS; this can result in lower life expectancy, higher infant mortality and death rates, lower population and growth rates, and changes in the distribution of population by age and sex than would otherwise be expected.
2Information is drawn from the CIA Factbook unless otherwise noted.

ಮಲವಿ ಗಣರಾಜ್ಯ pronounced /məˈlɑːwi/; ಚಿಚೇವಾ [malaβi][need tone] ಆಫ್ರಿಕಾದ ಆಗ್ನೇಯ ದಿಕ್ಕಿನಲ್ಲಿ ಭೂಮಿಯಿಂದ ಸುತ್ತುವರಿಯಲ್ಪಟ್ಟಿರುವ ಒಂದು ರಾಷ್ಟ್ರ. ಅದನ್ನು ಮೊದಲು ನ್ಯಾಸಾಲ್ಯಾಂಡ್ ಎಂದು ಕರೆಯುತ್ತದ್ದರು. ಅದು ವಾಯುವ್ಯದಲ್ಲಿ ಜಾಂಬಿಯಾ, ಈಶಾನ್ಯದಲ್ಲಿ ತಾಂಜಾನಿಯಾ, ಮತ್ತು ಪೂರ್ವ, ದಕ್ಷಿಣ ಹಾಗೂ ಪಶ್ಚಿಮದಲ್ಲಿ ಮೊಜಾಂಬಿಕ್ ಗಡಿ ಪ್ರದೇಶಗಳನ್ನು ಹೊಂದಿದೆ. ಮಲವಿ ಸರೋವರದಿಂದ ಈ ದೇಶವು ತಾಂಜಾನಿಯಾ ಹಾಗೂ ಮೊಜಾಂಬಿಕ್ ನಿಂದ ಬೇರ್ಪಡಿಸಲ್ಪಟ್ಟಿದೆ. ಅಂದಾಜು 13,900,೦೦೦ ಗಿಂತಲೂ 118,000 km2 (45,560 sq mi)ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಬ್ಲಾಂಟೈರ್ ಇದರ ಅತ್ಯಂತ ದೊಡ್ಡ ನಗರ. ಲಿಲೊಗ್ವೆ ಇದರ ರಾಜಧಾನಿ. ಆ ಪ್ರದೇಶದಲ್ಲಿ ನೆಲೆಸಿರುವ ನ್ಯಾಂಜಾ ಜನಗಳ ಪುರಾತನ ಹೆಸರಾದ ಮರಾವಿಯಿಂದ ಮಲವಿ ಎಂಬ ಹೆಸರು ಬಂದಿದೆ.

ಮಲವಿಯು 10ನೇ ಶತಮಾನದ ಅವಧಿಯಲ್ಲಿ ಮೊದಲು ಸ್ಥಾಪಿಸಲ್ಪಟ್ಟಿತು ಹಾಗೂ 1891ರ ವರೆಗೂ ದೇಶೀಯ ನಿವಾಸಿಗಳ ಆಡಳಿತದಲ್ಲಿತ್ತು, ನಂತರ 1964ರ ವರೆಗೂ ಆ ದೇಶವನ್ನು ಆಳಿದ ಬ್ರಿಟಿಷರು ಅದನ್ನು ತಮ್ಮ ವಸಾಹತುವಾಗಿ ಮಾಡಿಕೊಂಡಿದ್ದರು. ಸ್ವಾತಂತ್ರ್ಯ ಗಳಿಸಿದ ನಂತರ ಅದು ಹೇಸ್ಟಿಂಗ್ಸ್ ಬಂಡ ರ ಅಧ್ಯಕ್ಷತೆಯಲ್ಲಿ ಏಕೈಕ ಪಕ್ಷದ ರಾಜ್ಯವಾಗಿ ಆಡಳಿತದಲ್ಲಿತ್ತು, 1994ರ ವರೆಗೂ ರಾಷ್ಟ್ರಪತಿಗಳಾಗಿ ಉಳಿದ ಅವರನ್ನು ನಂತರ, ಅಧಿಕಾರದಿಂದ ಉಚ್ಛಾಟಿಸಲಾಯಿತು. 2004ರಲ್ಲಿ ಚುನಾಯಿಸಲ್ಪಟ್ಟ ಬಿಂಗು ಮುತಾರಿಕ ಈಗ ಸದ್ಯದ ರಾಷ್ಟ್ರಪತಿಗಳು. ಮಲವಿಯು ಬಹು ಪಕ್ಷೀಯಸರ್ಕಾರದ ಒಂದು ಗಣರಾಜ್ಯವನ್ನು ಹೊಂದಿದೆ. ಮಲವಿಯು ಭೂ ಸೇನೆ, ನೌಕಾ ಸೈನ್ಯ ಹಾಗೂ ವಾಯು ದಳ ಗಳನ್ನು ಒಳಗೊಂಡಿರುವ ಒಂದು ಚಿಕ್ಕ ಸೇನಾಪಡೆಯನ್ನು ಹೊಂದಿದೆ. ಮಲವಿಯ ವಿದೇಶಾಂಗ ರಾಜನೀತಿಯುಪಾಶ್ಚಿಮಾತ್ಯದ ಪರವಾಗಿದೆ ಹಾಗೂ ಅತ್ಯಂತ ಹೆಚ್ಚಿನ ರಾಷ್ಟ್ರಗಳ ಜೊತೆ ನಿಶ್ಚಿತ ರಾಯಭಾರ ಸಂಬಂಧ ಹೊಂದಿದ್ದು, ಅನೇಕ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಭಾಗವಹಿಸುತ್ತಿದೆ.

ಮಲವಿಯು ಪ್ರಪಂಚದ ಅತ್ಯಂತ ಕಡಿಮೆ ಅಭಿವೃದ್ಧಿಯಾದ ಹಾಗೂ ಅತ್ಯಂತ ಹೆಚ್ಚು ಜನಸಾಂದ್ರತೆಯುಳ್ಳ ದೇಶಗಳಲ್ಲಿ ಒಂದು. ಗ್ರಾಮೀಣ ಜನಸಂಖ್ಯೆ ಹೆಚ್ಚಾಗಿರುವ ಇಲ್ಲಿ, ಹಣಕಾಸಿನ ವ್ಯವಸ್ಥೆ ಬಹಳಷ್ಟು ಕೃಷಿಯನ್ನೇ ಅತ್ಯಧಿಕವಾಗಿ ಆಧರಿಸಿದೆ. 2000 ದಿಂದೀಚೆಗೆ ಈ ನೆರವು (ಮತ್ತು ನೀಡಿದ ಸಹಾಯ) ಕಡಿಮೆಯಾಗಿದ್ದಾಗ್ಯೂ, ಮಲವಿ ಸರ್ಕಾರವು ತನ್ನ ಅಭಿವೃದ್ಧಿಯ ಅವಶ್ಯಕತೆಗಳನ್ನು ಸರಿದೂಗಿಸಲು ಹೆಚ್ಚಾಗಿ ಹೊರ ದೇಶದ ಬೆಂಬಲವನ್ನೇ ಅವಲಂಬಿಸಿರುತ್ತದೆ. ಆರ್ಥಿಕ ಬೆಳವಣಿಗೆಯಲ್ಲಿ, ಶಿಕ್ಷಣ ಸುಧಾರಣೆ, ಆರೋಗ್ಯ ರಕ್ಷಣೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಮಲವಿ ಸರ್ಕಾರವು ಪೈಪೋಟಿಯನ್ನು ಎದುರಿಸುತ್ತಾ ಆರ್ಥಿಕವಾಗಿ ಸ್ವತಂತ್ರವಾಗಲು ಪ್ರಯತ್ನಿಸುತ್ತಿದೆ. ಈ ವಿಷಯಗಳ ಮೇಲೆ ಕೇಂದ್ರಿಕರಿಸಿ 2005 ರಿಂದೀಚೆಗೆ ಅನೇಕ ಕಾರ್ಯಕ್ರಮಗಳಲ್ಲಿ ಮುನ್ನಡೆದಿದೆ, ಹಾಗೂ 2007 ಮತ್ತು 2008 ರಲ್ಲಿ ಕಂಡಂತೆ ಆರ್ಥಿಕ ಬೆಳವಣಿಗೆ, ಶಿಕ್ಷಣ ಹಾಗೂ ಆರೋಗ್ಯ ರಕ್ಷಣೆಯಲ್ಲಿ ಅಭಿವೃದ್ಧಿ ಸಹಿತ, ರಾಷ್ಟ್ರದ ದೃಷ್ಟಿಕೋನವು ಪ್ರಗತಿಯನ್ನು ಕಾಣುತ್ತಿದೆ.

ಮಲವಿಯು ಕಡಿಮೆ ಆಯುಃ ಪ್ರಮಾಣ ಮತ್ತು ಹೆಚ್ಚಿನ ಶಿಶು ಮರಣವನ್ನು ಹೊಂದಿದೆ. ಹೆಚ್ ಐ ವಿ / ಏಡ್ಸ್ ನ ಒಂದು ದೊಡ್ಡ ಪ್ರಭುತ್ವವೇ ಇಲ್ಲಿದೆ, ಇದು ಸರ್ಕಾರಿ ವೆಚ್ಚ ಮತ್ತು ಕಾರ್ಮಿಕ ದುಡಿಮೆಯನ್ನು ನುಂಗಿ ಹಾಕುತ್ತಿದೆ, ಹಾಗೂ 2010ರ ವೇಳೆಗೆ ಒಟ್ಟಾರೆ ದೇಶದ ಉತ್ಪನ್ನ ದರದ(ಜಿ ಡಿ ಪಿ) ಮೇಲೆ ಒಂದು ಪ್ರಮುಖ ಪ್ರಭಾವವನ್ನು ಹೊಂದಬಹುದೆಂದು ನಿರೀಕ್ಷಿಸಲಾಗಿದೆ. ಅನೇಕ ಭಾಷೆಗಳನ್ನು ಮಾತನಾಡುವ ಹಾಗೂ ಧಾರ್ಮಿಕ ನಂಬಿಕೆಗಳ ಸಹಿತ, ಮೂಲ ನಿವಾಸಿಗಳು, ಏಷಿಯನ್ನರು ಮತ್ತು ಯೂರೋಪಿಯನ್ನರಂತಹ ಹಲವು ಬಗೆಯ ವೈವಿಧ್ಯ ಜನ ಸಂಖ್ಯೆಯಿದೆ. ಈ ಹಿಂದೆ ಗುಡ್ಡಗಾಡು ಜನರ ಗುಂಪು ಘರ್ಷಣೆ ಇದ್ದಾಗ್ಯೂ, 2008 ರಿಂದ ಅದು ಗಣನೀಯವಾಗಿ ಕಡಿಮೆಯಾಗಿದೆ ಮತ್ತು ಮಲಾವಿಯನ್ ರಾಷ್ಟ್ರೀಯತೆಯ ಕಲ್ಪನೆಯು ರೂಪಗೊಳ್ಳುತ್ತಿದೆ. ಕ್ರೀಡೆಗಳು, ಕಲೆ, ನೃತ್ಯ ಮತ್ತು ಸಂಗೀತ ವನ್ನೊಳಗೊಂಡಂತೆ, ಮಲವಿಯು ದೇಶೀಯ ಹಾಗೂ ವಸಾಹತು ವಿಷಯಾಂಶಗಳ ಒಟ್ಟಾರೆ ಒಂದು ಸಂಸ್ಕೃತಿಯನ್ನು ಹೊಂದಿದೆ.

ಇತಿಹಾಸ[ಬದಲಾಯಿಸಿ]

10 ನೇ ಶತಮಾನದ ಸುತ್ತಮುತ್ತ ಉತ್ತರದಿಂದ ಬಂಟುಗಳು ಗುಂಪು ಗುಂಪಾಗಿ ವಲಸೆ ಬರುವುದಕ್ಕಿಂತ ಮೊದಲು ಬೇಟೆಗಾರರ ಗುಂಪಿನ ಅತಿ ಚಿಕ್ಕ ಜನಸಂಖ್ಯೆಯನ್ನು ಈಗ ಮಲವಿ ಎಂದು ಕರೆಯಲ್ಪಡುವ ಆಫ್ರಿಕಾದ ಪ್ರದೇಶವು ಹೊಂದಿತ್ತು. ಅತ್ಯಂತ ಹೆಚ್ಚು ಬಂಟುಗಳು ದಕ್ಷಿಣ ದಿಕ್ಕಿನಲ್ಲೇ ಮುಂದುವರಿದರೂ, ಕೆಲವರು ಶಾಶ್ವತವಾಗಿ ಅಲ್ಲಿಯೇ ನೆಲೆಸಿದರು ಹಾಗೂ ಸಾಮಾನ್ಯ ಮನೆತನ ಆಧರಿಸಿದ ಬುಡಕಟ್ಟು ಜನಾಂಗವನ್ನು ಸ್ಥಾಪಿಸಿದರು.[೩] 1500 ಎ.ಡಿ ಯಲ್ಲಿ ಬುಡಕಟ್ಟಿನವರು ಒಂದು ರಾಜ್ಯವನ್ನು ನೆಲೆಗೊಳಿಸಿದರು, ಅದು ಈಗ ನಖೋಡಕೊಟ ಎನ್ನುವ ಉತ್ತರದಿಂದ ಜಂಬೇಜಿ ನದಿಯವರೆಗೆ ಹಾಗೂ ಮಲವಿ ಸರೋವರದಿಂದ ಈಗ ಜಾಂಬಿಯಾ ಎನ್ನುವ ಲುಆಂಗ್ವ ನದಿಯವರೆಗೂ ತಲುಪಿತು[೯].

1600 ರ ನಂತರ, ಒಬ್ಬ ದೇಶೀಯ ರಾಜನ ಆಳ್ವಿಕೆಯಲ್ಲಿ ಆ ಪ್ರದೇಶವು ಸುಮಾರು ಒಂದುಗೂಡಿದ ಕೂಡಲೆ, ಮೂಲ ನಿವಾಸಿ ಬುಡಕಟ್ಟಿನವರು, ಪೋರ್ಚುಗೀಸ್ ವ್ಯಾಪಾರಗಾರರು ಮತ್ತು ಸೇನಾಪಡೆ ಸದಸ್ಯರ ಜೊತೆ ವ್ಯಾಪಾರ ಮಾಡಲು ಮತ್ತು ಮೈತ್ರಿ ಬೆಳೆಸಲು ವಿಚಾರಮಾಡಿ ಪ್ರಾರಂಭಿಸಿದರು. 1700 ರ ಸುಮಾರಿಗೆ, ಆದಾಗ್ಯೂ, ರಾಷ್ಟ್ರವು ಅನೇಕ ವೈಯಕ್ತಿಕ ಪಂಗಡಗಳ ಬುಡಕಟ್ಟಿನವರ ಹಿಡಿತದಲ್ಲಿರುವ ಪ್ರದೇಶಗಳಾಗಿ ಒಡೆಯಲ್ಪಟ್ಟವು, ಇದನ್ನು ಪೋರ್ಚುಗೀಸರು ತಮ್ಮ ಮಾಹಿತಿ ಸಂಗ್ರಹಗಳಲ್ಲಿ ಬರೆದಿದ್ದಾರೆ.[೧೦]

ಡೇವಿಡ್ ಲಿವಿಂಗ್ ಸ್ಟೋನ್ 1859 ರಲ್ಲಿ ಮಲವಿ ಸರೋವರವನ್ನು (ಆಗ ನ್ಯಾಸಾ ಸರೋವರ) ತಲುಪಿದನು,[೧೧] ಹಾಗೂ ಮಲವಿಯು ಬ್ರಿಟೀಷರ ಆಳ್ವಿಕೆಯಲ್ಲಿ ಮೂಲತಃ ನ್ಯಾಸಾ ಪ್ರದೇಶವೆಂದು ಹೆಸರಾಗಿತ್ತು.[೧೨] ಆಫ್ರಿಕಾದಲ್ಲಿ ವಸಾಹತು ಅಧಿಕಾರದ "ಥಿನ್ ವೈಟ್ ಲೈನ್" ಎಂದು ಕೆಲವು ವೇಳೆ ಕರೆಯಲ್ಪಡುವ ಒಂದು ಉತ್ತಮ ಉದಾಹರಣೆಯಲ್ಲಿ, 1891 ರಲ್ಲಿ ನ್ಯಾಸಾ ಪ್ರದೇಶದ ವಸಾಹತು ಸರ್ಕಾರವು ಸ್ಥಾಪಿಸಲ್ಪಟ್ಟಿತು. ಅಧಿಕಾರಿಗಳಿಗೆ ವಾರ್ಷಿಕ ಆಯವ್ಯಯಕ್ಕಾಗಿ 10,000 ಪೌಂಡುಗಳು ಕೊಡಲ್ಪಟ್ಟಿತು, ಇದು ಹತ್ತು ಯೂರೋಪಿಯನ್ ನಾಗರಿಕರು, ಇಬ್ಬರು ಸೇನಾ ಪಡೆಯ ಅಧಿಕಾರಿಗಳು, ಎಪ್ಪತ್ತು ಪಂಜಾಬಿಸಿಖ್ಖರು ಹಾಗೂ ಎಂಬತ್ತೈದು ಜಾಂಜಿಬಾರಿನ ಕೂಲಿಯಾಳುಗಳನ್ನು ಕೆಲಸಕ್ಕೆ ಸೇರಿಸಿ ಕೊಳ್ಳಲು ಸಾಕಾಗುತ್ತಿತ್ತು. ಈ ಕೆಲವು ಕೆಲಸಗಾರರು ನಂತರ ಆಡಳಿತ ನಡೆಸಲು ಹಾಗೂ ಒಂದರಿಂದ ಎರಡು ಮಿಲಿಯನ್ ಜನಗಳ, 94,000 ಚದುರ ಕಿಲೋ ಮೀಟರ್ ನಡುವಿನ ಒಂದು ಪ್ರದೇಶವನ್ನು ರಕ್ಷಣೆ ಮಾಡಲು ನಿರೀಕ್ಷಿಸಲಾಗಿತ್ತು.[೧೩]

ಬ್ರಿಟಿಷ್ ಸರ್ಕಾರಕ್ಕೆ ಸ್ಥಳೀಯ ಹಿತಾಸಕ್ತಿಗಳನ್ನು ಉತ್ತೇಜಿಸಲು ನ್ಯಾಸಾ ಪ್ರದೇಶದ ಆಫ್ರಿಕನ್ನರಿಂದ 1944 ರಲ್ಲಿ, ನ್ಯಾಸಾಲ್ಯಾಂಡ್ ಆಫ್ರಿಕನ್ ಕಾಂಗ್ರೆಸ್(ಎನ್ ಎ ಸಿ) ಸ್ಥಾಪಿಸಲ್ಪಟ್ಟಿತು[೧೪] 1953 ರರಲ್ಲಿ, ಸೆಟ್ರಲ್ ಆಫ್ರಿಕನ್ ಫೆಡರೇಶನ್(ಸಿ ಎ ಎಫ್)[೧೨] ಎಂದು ಕರೆಯಲ್ಪಡುತ್ತಿದ್ದ, ಉತ್ತರ ಮತ್ತು ದಕ್ಷಿಣ ರೊಡೇಶಿಯಾ ಜೊತೆ ನ್ಯಾಸಾ ಪ್ರದೇಶವನ್ನು ಬ್ರಿಟನ್ ಅನೇಕ ರಾಜಕೀಯ ಕಾರಣಗಳಿಗಾಗಿ ಸೇರಿಸಿತು.[೧೫] ಈ ಜೋಡಣೆಯು ಆಫ್ರಿಕನ್ ರಾಷ್ಟ್ರೀಯವಾದಿಗಳ ವಿರೋಧವನ್ನು ಕೆರಳಿಸಿತು ಹಾಗೂ ಎನ್ ಎ ಸಿ ಜನಪ್ರಿಯ ಬೆಂಬಲವನ್ನು ಗಳಿಸಿತು. ಘಾನಾದಲ್ಲಿ ಕೆಲಸ ಮಾಡುತ್ತಿದ್ದ ಯೂರೋಪಿನಲ್ಲಿ ತರಬೇತಿ ಪಡೆದ ವೈದ್ಯ ಡಾ. ಹೇಸ್ಟಿಂಗ್ಸ್ ಕಮುಜು ಬಂಡ, ಸಿ ಎ ಎಫ್ ನ ಒಬ್ಬ ಪ್ರಭಾವಶಾಲಿ ವಿರೋಧಿಯಾಗಿದ್ದನು, ರಾಷ್ಟ್ರೀಯ ಧ್ಯೇಯಕ್ಕೆ ಸಹಾಯ ಮಾಡಲು 1958 ರಲ್ಲಿ ಅವನು ನ್ಯಾಸಾ ಪ್ರದೇಶಕ್ಕೆ ಹಿಂತಿರುಗಲು ಒತ್ತಾಯಿಸಲ್ಪಟ್ಟನು. ಬಂಡ ಎನ್ ಎ ಸಿ ಯ ಅಧ್ಯಕ್ಷನಾಗಿ ಚುನಾಯಿಸಲ್ಪಟ್ಟನು ಹಾಗೂ ಅವನು 1959 ರಲ್ಲಿ ವಸಾಹತು ಅಧಿಕಾರಿಗಳಿಂದ ಕಾರಾಗೃಹಕ್ಕೆ ಕಳುಹಿಸುವ ಮೊದಲು ರಾಷ್ಟ್ರೀಯ ಮನೋಭಾವವನ್ನು ಸಜ್ಜು ಗೊಳಿಸಲು ಕೆಲಸ ಮಾಡಿದನು. ಅವನು 1960 ರಲ್ಲಿ ಬಿಡುಗಡೆ ಮಾಡಲ್ಪಟ್ಟನು ಮತ್ತು ಕಾಲೋನಿಯ ಶಾಸನ ಸಭೆಯ ಸಮಾಲೋಚನೆಯಲ್ಲಿ ಆಫ್ರಿಕನ್ನರಿಗೆ ಬಹುಮತ ಕೊಡಿಸುವಂತಹ ಒಂದು ಉಪವಾಕ್ಯ ಸಹಿತ, ನ್ಯಾಸಾ ಪ್ರದೇಶಕ್ಕೆ ಹೊಸ ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಲು ಸಹಾಯ ಮಾಡುವಂತೆ ಕೇಳಿಕೊಳ್ಳಲ್ಪಟ್ಟನು.[೩]

1961 ರಲ್ಲಿ ಬಂಡನ ಮಲವಿ ಕಾಂಗ್ರೆಸ್ ಪಾರ್ಟಿ(ಎಮ್ ಸಿ ಪಿ) ಶಾಸನ ಸಭೆಯಲ್ಲಿ ಬಹುಮತ ಗಳಿಸಿತು ಹಾಗೂ 1963 ರಲ್ಲಿ ಬಂಡ ಪ್ರಧಾನ ಮಂತ್ರಿಯಾಗಿ ಚುನಾಯಿಸಲ್ಪಟ್ಟನು. 1963 ರರಲ್ಲಿ ರಾಜ್ಯಗಳ ಒಕ್ಕೂಟ ಸಭೆಯು ವಿಸರ್ಜಿಸಲ್ಪಟ್ಟಿತು, ಹಾಗೂ ಜುಲೈ 6, 1964 ರಂದು, ಬ್ರಿಟೀಷರಿಂದ ನ್ಯಾಸಾ ಪ್ರದೇಶವು ಸ್ವತಂತ್ರವಾಗಿ ಮಲವಿ ಎಂಬ ಹೆಸರನ್ನು ಪಡೆಯಿತು. ಹೊಸ ಸಂವಿಧಾನದಡಿಯಲ್ಲಿ, ಎಮ್ ಸಿ ಪಿ ಆಳ್ವಿಕೆಯ ಮಲವಿಯು ಏಕೈಕ ಪಕ್ಷದ ರಾಜ್ಯವಾಯಿತು. 1970 ರಲ್ಲಿ ಬಂಡ ಸ್ವತಃ ಅಜೀವ ರಾಷ್ಟ್ರಪತಿಯೆಂದು ಘೋಷಿಸಿಕೊಂಡನು. ಸುಮಾರು 30 ವರ್ಷಗಳ ತನಕ ಬಂಡ ತನ್ನ ಪಕ್ಷಕ್ಕೆ ಎಲ್ಲಾ ವಿರೋಧವನ್ನು ನಿಗ್ರಹಿಸಿ, ಮತ್ತು ತನಗೆ ಯಾವುದೇ ವೈಯಕ್ತಿಕ ಅಡ್ಡಿಯಿಲ್ಲವೆಂದು ಭರವಸೆಗೊಳಿಸಿ ಸ್ಥಿರವಾಗಿ ಆಳಿದನು.[೧೬]

ತನ್ನ ರಾಜಕೀಯ ಕ್ರೂರ ನಡತೆಯಿದ್ದಾಗ್ಯೂ ಒಂದು ಬಡ, ಭೂಮಿಯಿಂದ ಸುತ್ತುವರಿಯಲ್ಪಟ್ಟಿರುವ, ಹೆಚ್ಚು ಜನಸಾಂದ್ರತೆಯ, ಖನಿಜ-ಕೊರತೆಯ ರಾಷ್ಟ್ರ ಹೇಗೆ ಕೃಷಿ ಹಾಗೂ ಕೈಗಾರಿಕೆಗಳೆರಡರಲ್ಲೂ ಪ್ರಗತಿಯನ್ನು ಸಾಧಿಸ ಬಹುದು ಎಂಬುದಕ್ಕೆ ಬಂಡ ರಾಷ್ಟ್ರಾಧ್ಯಕ್ಷನಾದಾಗ ಮಲವಿಯ ಆರ್ಥಿಕ ವ್ಯವಸ್ಥೆಯು ಆಗಾಗ್ಗೆ ಉದಾಹರಿಸಲ್ಪಡುತ್ತಿತ್ತು.[೧೭] ಅಧಿಕಾರದಲ್ಲಿರುವಾಗ, ಹಾಗೂ ದೇಶದ ಮೇಲೆ ತನ್ನ ಹಿಡಿತವನ್ನು ಉಪಯೋಗಿಸಿ, ಬಂಡ ಒಂದು ವ್ಯಾಪಾರದ ಸಾಮ್ರಾಜ್ಯವನ್ನೇ ಕಟ್ಟಿದನು. ಅದು ಕೊನೆಗೆ ದೇಶದ ಜಿ ಡಿ ಪಿ ಯ ಮೂರನೆಯ-ಒಂದು ಭಾಗವನ್ನು ಉತ್ಪಾದಿಸಿ, ಸಂಬಳ-ಪಡೆಯುವವರ ನೌಕರ ಪಡೆಯ ಶೇಕಡ 10 ರಷ್ಟನ್ನು ಕೆಲಸಕ್ಕಿಟ್ಟುಕೊಂಡನು.[೧೮]

ಹೆಚ್ಚಾದ ರಾಜಕೀಯ ಸ್ವಾತಂತ್ರ್ಯದ ಒತ್ತಾಯದಿಂದ, 1993 ರಲ್ಲಿ, ಬಂಡ ಪ್ರಜಾಭಿಪ್ರಾಯ ಸಂಗ್ರಹಕ್ಕೆ ಒಪ್ಪಿದನು, ಅದರಲ್ಲಿ ಜನತೆಯು ಬಹು ಪಕ್ಷೀಯ ಪ್ರಜಾಪ್ರಭುತ್ವವನ್ನು ಚುನಾಯಿಸಿದರು. 1993 ರ ಕೊನೆಯಲ್ಲಿ ನಡೆದ ಚುನಾವಣೆಗಳನ್ನು ಅನುಸರಿಸಿ, ಒಂದು ರಾಷ್ಟ್ರಾಧ್ಯಕ್ಷರ ಸಮಿತಿಯು ಪ್ರಾರಂಭಿಸಲ್ಪಟ್ಟಿತು. ಅಜೀವ ರಾಷ್ಟ್ರಪತಿ ಪದವಿಯನ್ನು ರದ್ದು ಪಡಿಸಲಾಯಿತು ಹಾಗೂ ಎಮ್ ಸಿ ಪಿ ಯ ಆಳ್ವಿಕೆಯನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸಿ, ಒಂದು ಹೊಸ ಸಂವಿಧಾನವನ್ನು ಅದರ ಸ್ಥಾನದಲ್ಲಿ ಜಾರಿಗೊಳಿಸಲಾಯಿತು.[೧೬] 1994 ರಲ್ಲಿ ಮಲವಿಯಲ್ಲಿ ಮೊದಲನೆಯ ಬಹು-ಪಕ್ಷೀಯ ಚುನಾವಣೆಗಳು ನಡೆದು, ಬಕಲಿ ಮುಲುಜಿ ರಾಷ್ಟ್ರಾಧ್ಯಕ್ಷನಾದನು. 2004 ರಲ್ಲಿ ಡಾ. ಬಿಂಗು ವ ಮುಥಾರಿಕ ಚುನಾಯಿಸಲ್ಪಡುವವರೆಗೂ, ಮುಲುಜಿ ರಾಷ್ಟ್ರಪತಿಯಾಗಿದ್ದನು. ರಾಜಕೀಯ ಸನ್ನಿವೇಶವು 2009 ರಂತೆ "ಸ್ಪರ್ಧಾತ್ಮಕವೆಂದು" ವರ್ಣಿಸಲ್ಪಟ್ಟಿದ್ದರೂ, ಮಲವಿಯಲ್ಲಿ ಬಹು ಪಕ್ಷೀಯ ವ್ಯವಸ್ಥೆಯು ಇನ್ನೂ ಜಾರಿಯಲ್ಲಿದೆ.[೮] ಮೇ 2009 ರಲ್ಲಿ, ಮಲವಿಯಲ್ಲಿ ನಾಲ್ಕನೆಯ ಬಾರಿಗೆ ಬಹು ಪಕ್ಷೀಯ ಸಂಸತ್ತಿನ ಹಾಗೂ ರಾಷ್ಟ್ರಪತಿಗಳ ಚುನಾವಣೆಗಳು ನಡೆಸಲ್ಪಟ್ಟವು. ತನ್ನ ವಿರೋಧಿಯಿಂದ ಚುನಾವಣಾ ಮೋಸದ ಆರೋಪಗಳನ್ನೆದುರಿಸಿದ ರಾಷ್ಟ್ರಪತಿ ಬಿಂಗು ವ ಮುಥಾರಿಕನು ಯಶಸ್ವಿಯಾಗಿ ಪುನಃ ಆರಿಸಲ್ಪಟ್ಟನು.[೧೯]

ರಾಜಕಾರಣ[ಬದಲಾಯಿಸಿ]

ರಾಷ್ಟ್ರಪತಿ ಬಿಂಗು ವ ಮುಥಾರಿಕನ ಮುಖಂಡತ್ವದಲ್ಲಿ ಸಧ್ಯ ಈಗ, ಮಲವಿಯು ಬಹು ಪಕ್ಷೀಯ ಸರ್ಕಾರದ ಒಂದು ಗಣರಾಜ್ಯ.[೧೬] ಈಗ ಹಾಲಿ ಇರುವ ಸಂವಿಧಾನವು ಮೇ 18, 1995 ರಂದು ಜಾರಿಗೆ ಬಂದಿತು. ಸರ್ಕಾರವು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಶಾಖೆಗಳನ್ನು ಒಳಗೊಂಡಿದೆ. ಕಾರ್ಯಾಂಗದಲ್ಲಿ ರಾಜ್ಯದ ನಾಯಕ ಹಾಗೂ ಸರ್ಕಾರದ ಮುಖ್ಯಸ್ಥನೆರಡೂ ರಾಷ್ಟ್ರಪತಿಗಳೆ ಆಗಿರುತ್ತಾರೆ, ಒಂದನೆಯ ಮತ್ತು ಎರಡನೆಯ ಉಪ ರಾಷ್ಟ್ರಪತಿಗಳು ಹಾಗೂ ಒಂದು ಸಚಿವ ಸಂಪುಟವನ್ನು ಒಳಗೊಂಡಿರುತ್ತದೆ. ರಾಷ್ಟ್ರಪತಿಗಳು ಪ್ರತಿ ಐದು ವರ್ಷಕ್ಕೊಮ್ಮೆ ಚುನಾಯಿಸಲ್ಪಡುತ್ತಾರೆ ಹಾಗೂ ಅವರ ಜೊತೆಯೇ ಉಪ ರಾಷ್ಟ್ರಪತಿಯೂ ಆರಿಸಲ್ಪಡುತ್ತಾರೆ. ರಾಷ್ಟ್ರಪತಿಗಳು ಆರಿಸುವುದಾದರೆ, ಎರಡನೆಯ ಉಪ ರಾಷ್ಟ್ರಪತಿಯನ್ನು ಅವರು ಬೇರೆ ಪಕ್ಷದವರಾಗಿದ್ದಾಗ್ಯೂ, ನೇಮಿಸಲ್ಪಡಬಹುದು. ರಾಷ್ಟ್ರಪತಿಗಳು ಮಂತ್ರಿ ಮಂಡಲದ ಸದಸ್ಯರನ್ನು ಶಾಸಕಾಂಗದ ಒಳಗಡೆ ಅಥವಾ ಹೊರಗಡೆಯಿಂದಲಾದರೂ ನೇಮಿಸುತ್ತಾರೆ.[೯]

ಶಾಸಕಾಂಗವು ಪ್ರತಿ ಐದು ವರ್ಷಕ್ಕೊಮ್ಮೆ ಚುನಾಯಿಸಲ್ಪಡುವ 193 ಸದಸ್ಯರ ಏಕಸದನದ ಒಂದು ರಾಷ್ಟ್ರೀಯ ಸಭೆಯನ್ನು ಹೊಂದಿರುತ್ತದೆ, ಹಾಗೂ ಮಲವಿಯ ಸಂವಿಧಾನದಲ್ಲಿ 80 ಸದಸ್ಯರ ಸೆನೆಟ್ ಗೆ ಅವಕಾಶವಿದ್ದರೂ, ಅದು ಹಾಗೇನು ಆಚರಣೆಯಲ್ಲಿಲ್ಲ. ಒಂದು ವೇಳೆ ರಚಿಸಲ್ಪಟ್ಟರೆ, ಸೆನೆಟ್, ಪರಂಪರೆಯ ಮುಖಂಡರಿಗೆ ಹಾಗೂ ವಿವಿಧ ಭೌಗೋಳಿಕ ಜಿಲ್ಲೆಗಳೂ ಅಲ್ಲದೆ ವಿಕಲಾಂಗರೂ, ಯುವಕರು ಹಾಗೂ ಮಹಿಳೆಯರೂ ಸೇರಿದಂತೆ ವಿಶೇಷ ಹಿತಾಸಕ್ತಿಯ ತಂಡಗಳಿಗೆ ಪ್ರಾತಿನಿಧ್ಯವನ್ನು ಒದಗಿಸುವುದು. ಸ್ವತಂತ್ರವಾದ ನ್ಯಾಯಾಂಗ ಶಾಖೆಯು ಇಂಗ್ಲೀಷ್ ಮಾದರಿಯನ್ನು ಆಧರಿಸಿದೆ ಮತ್ತು ಒಂದು ಸಂವಿಧಾನಾತ್ಮಕ ನ್ಯಾಯಾಲಯ, ಒಂದು ಉಚ್ಚ ನ್ಯಾಯಾಲಯ, ಅಪೀಲು ಹೋಗುವ ಒಂದು ಉಚ್ಚತಮ ನ್ಯಾಯಾಲಯ ಹಾಗೂ ಅಧೀನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳನ್ನು ಹೊಂದಿದೆ. ಈಗ ಸಧ್ಯ ಒಂಬತ್ತು ರಾಜಕೀಯ ಪಕ್ಷಗಳಿವೆ, ಡೆಮಾಕ್ರೆಟಿಕ್ ಪ್ರೋಗ್ರಸಿವ್ ಪಾರ್ಟಿಯು ಆಡಳಿತ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಮಲವಿ ಕಾಂಗ್ರೆಸ್ ಪಾರ್ಟಿ ಹಾಗೂ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್, ರಾಷ್ಟ್ರೀಯ ಸಭೆಯಲ್ಲಿ ಮುಖ್ಯ ವಿರೋಧ ಪಕ್ಷಗಳಾಗಿ ಕೆಲಸ ಮಾಡುತ್ತಿವೆ. 18 ವರ್ಷ ವಯಸ್ಸಿಗೆ ಸಾರ್ವತ್ರಿಕ ಮತಾಧಿಕಾರವಿರುತ್ತದೆ, 2007/2008 ಕ್ಕೆ ಕೇಂದ್ರ ಸರ್ಕಾರದ ಆಯವ್ಯಯವು 1.24 ಬಿಲಿಯನ್ ಡಾಲರುಗಳಾಗಿದೆ.[೯]

ಮಲವಿ ಮೂರು ವಲಯಗಳನ್ನು ಹೊಂದಿದೆ (ಉತ್ತರ, ಕೇಂದ್ರೀಯ ಹಾಗೂ ದಕ್ಷಿಣ ವಲಯಗಳು),[೫] ಅವುಗಳನ್ನು 28 ಜಿಲ್ಲೆಗಳು,[೨೦] ಹಾಗೂ ಮುಂದುವರಿದು ಸುಮಾರು 250 ಪಾರಂಪರಿಕ ಸಭೆಗಳು ಮತ್ತು 110 ಆಢಳಿತಾತ್ಮಕ ವಿಭಾಗಗಳಾಗಿ ಬೇರ್ಪಡಿಸಲ್ಪಟ್ಟಿವೆ.[೫] ಸ್ಥಳೀಯ ಸರ್ಕಾರವನ್ನು ಕೇಂದ್ರ ಸರ್ಕಾರದಿಂದ ನೇಮಿಸಲ್ಪಟ್ಟ ವಲಯಾಧಿಕಾರಿಗಳೂ ಹಾಗೂ ಜಿಲ್ಲಾ ಕಮೀಶನರುಗಳು ಆಡಳಿತ ನಡೆಸುತ್ತಾರೆ. ಬಹು ಪಕ್ಷೀಯ ಕಾಲದಲ್ಲಿ ಮೊದಲ ಬಾರಿಗೆ, ಸ್ಥಳೀಯ ಚುನಾವಣೆಗಳು 2000, ನವೆಂಬರ್ 21 ರಲ್ಲಿ ನಡೆದು, ಯು ಡಿ ಎಫ್ ಪಕ್ಷವು ಪ್ರಾಪ್ತವಿರುವ ಸೀಟುಗಳ ಶೇಕಡಾ 70 ರಷ್ಟನ್ನು ಪಡೆಯಿತು. ಮೇ 2005 ರಲ್ಲಿ, ಸಂವಿಧಾನಾತ್ಮಕವಾಗಿ ಒಪ್ಪಿಗೆ ಪಡೆದ ಎರಡನೆ ಸುತ್ತಿನ ಸ್ಥಳೀಯ ಚುನಾವಣೆಗಳು ಸಮಯಕ್ಕೆ ಸರಿಯಾಗಿ ನಡೆಯ ಬೇಕಾಗಿತ್ತು, ಆದರೆ ಅವುಗಳನ್ನು ಕೇಂದ್ರ ಸರ್ಕಾರವು ರದ್ದು ಪಡಿಸಿತು.[೯]

ಫೆಬ್ರವರಿ 2005 ರಲ್ಲಿ,ರಾಷ್ಟ್ರಾಧ್ಯಕ್ಷ ಮುಥಾರಿಕನು ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ ನಿಂದ ಬೇರ್ಪಟ್ಟು, ಡೆಮೊಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿ ಎನ್ನುವ ತನ್ನದೆ ಒಂದು ಸ್ವಂತ ಪಕ್ಷವನ್ನು ಪ್ರಾರಂಭಿಸಿದನು, ಇದು ಇತರೆ ಪಕ್ಷಗಳಿಂದ ಸುಧಾರಣಾ ಮನೋಭಾವದ ಅಧಿಕಾರಿಗಳನ್ನು ಆಕರ್ಷಿಸಿ 2006 ರಿಂದ ದೇಶದ ಉದ್ದಗಲಕ್ಕೂ ಚುನಾವಣೆಗಳಲ್ಲಿ ಜಯಶಾಲಿಯಾಗುತ್ತಿದೆ. 2008 ರಲ್ಲಿ, ರಾಷ್ಟ್ರಪತಿ ಮುಥಾರಿಕ, ಅಪರಾಧದ ಆಪಾದನೆಯನ್ನು ಎದುರಿಸುತ್ತಿರುವ ಕೊನೆಯ ಪಕ್ಷ ಐದು ಪ್ರಮುಖ ಯು ಡಿ ಎಫ್ ಪಕ್ಷದ ಸದಸ್ಯರ ಸಹಿತ, ದೇಶದ ಪ್ರಧಾನ ಭ್ರಷ್ಟಾಚಾರ ಸಮಸ್ಯೆಯನ್ನು ಸಂಬೊಧಿಸಲು ಸುಧಾರಣೆಗಳನ್ನು ಜಾರಿಗೊಳಿಸಿದನು.[೨೧] ಆಫ್ರಿಕಾದ ದೇಶಗಳ ಆಳ್ವಿಕೆಯ ಒಂದು ವ್ಯಾಪಕವಾದ ಅವಲೋಕನವನ್ನು ಒದಗಿಸಿ ಅನೇಕ ಮಾರ್ಪಾಡುಗಳನ್ನು ತರುವಂತಹ ಆಫ್ರಿಕನ್ ರಾಷ್ಟ್ರಗಳ ಇಬ್ರಾಹಿಂ ಸೂಚಿಯಲ್ಲಿ, 2008 ರಲ್ಲಿ ಎಲ್ಲಾ ಉಪ-ಸಹಾರಾ ಆಫ್ರಿಕಾದ ದೇಶಗಳಲ್ಲಿ ಮಲವಿಯು 11 ನೇ ಸ್ಥಾನವನ್ನು ಪಡೆಯಿತು.[೨೨]

ಆಡಳಿತಾತ್ಮಕ ವಲಯಗಳು[ಬದಲಾಯಿಸಿ]

ಮಲವಿಯ ಜಿಲ್ಲೆಗಳು, ಜೊತೆಗೆ ರಾಜಧಾನಿ ಲಿಲೊಂಗ್ವೆಯನ್ನು ಕೆಂಪು ಬಣ್ಣದಲ್ಲಿ ಗುರುತಿಸಲಾಗಿದೆ.

ಮಲವಿಯು ಮೂರು ವಲಯಗಳಲ್ಲಿ 28 ಜಿಲ್ಲೆಗಳಾಗಿ ವಿಭಾಗಿಸಲ್ಪಟ್ಟಿದೆ:

ಕೇಂದ್ರೀಯ ವಲಯ
----
ಉತ್ತರ ವಲಯ
----
ದಕ್ಷಿಣ ವಲಯ
----

ವಿದೇಶಾಂಗ ಸಂಬಂಧಗಳು[ಬದಲಾಯಿಸಿ]

2008 ರವರೆಗೂ ಮುಂದುವರಿದ ಪಾಶ್ಚಿಮಾತ್ಯ ಪರವಾಗಿರುವವಿದೇಶಾಂಗ ಕಾರ್ಯನೀತಿಯನ್ನು ಹಿಂದಿನ ರಾಷ್ಟ್ರಪತಿ ಬಂಡ ನೆಲೆಗೊಳಿಸಿದ್ದರು ಹಾಗೂ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳ ಜೊತೆ ಒಳ್ಳೆಯ ರಾಯಭಾರ ಸಂಬಂಧಗಳನ್ನು ಒಳಗೊಂಡಿತ್ತು. ಏಕೈಕ ಪಕ್ಷದ ರಾಜ್ಯದಿಂದ ಬಹು ಪಕ್ಷೀಯ ಗಣರಾಜ್ಯವಾದ ಮೇಲೆ ಮಲವಿಯು ಸಂಯುಕ್ತ ಸಂಸ್ಥಾನದ ಜೊತೆ ಸಂಬಂಧವನ್ನು ಬಲಪಡಿಸಿತು. ಮಲವಿಯಿಂದ ಗಮನಾರ್ಹ ಸಂಖ್ಯೆಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಸಂಯುಕ್ತ ಸಂಸ್ಥಾನಕ್ಕೆ ಹೋಗುತ್ತಾರೆ. ಮಲವಿಯಲ್ಲಿ ಸಂಯುಕ್ತ ಸಂಸ್ಥಾನವು ಶಾಂತಿ ಪಡೆಗಳ ಸಕ್ರೀಯ ಶಾಖೆಗಳು, ರೋಗ ನಿರೋಧಕ ಹಾಗೂ ತಡೆಗಟ್ಟುವಿಕೆಯ ಕೇಂದ್ರಗಳು, ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ಮತ್ತು ಅಂತರಾಷ್ಟ್ರೀಯ ಅಭಿವೃದ್ಧಿಯ ಸೇವಾ ಸಂಸ್ಥೆಯನ್ನುಹೊಂದಿದೆ. ಮಲವಿಯು ಸಂಪೂರ್ಣ ವರ್ಣದ್ವೇಷ ಕಾಲದಲ್ಲಿ ದಕ್ಷಿಣ ಆಫ್ರಿಕಾದ ಜೊತೆ ನಿಕಟ ಸಂಪರ್ಕವನ್ನು ಹೊಂದಿತ್ತು. ಇದು ಇತರೆ ಆಫ್ರಿಕಾದ ದೇಶಗಳ ಸಂಗಡ ಮಲವಿಯ ಸಂಬಂಧವನ್ನು ಹಾಳುಮಾಡಿತು, ಆದರೆ 1994 ರಲ್ಲಿ ವರ್ಣದ್ವೇಷ ನೀತಿಯು ಕುಸಿದು ಬಿದ್ದಾಗ, 2008 ರ ವರೆಗೂ ಮಲವಿ ಮತ್ತು ಇತರ ಎಲ್ಲಾ ಆಫ್ರಿಕಾ ರಾಷ್ಟ್ರಗಳ ಮಧ್ಯೆ ದೃಢವಾದ ರಾಯಭಾರ ಸಂಬಂಧಗಳು ಪುನರ್ಸ್ಥಾಪಿಸಲ್ಪಟ್ಟು ಮುಂದುವರಿಯುತ್ತಿದೆ.[೯]

ರಾಷ್ಟ್ರಪತಿ ಬಿಂಗು ವ ಮುಥಾರಿಕ.

1985 ರಿಂದ ಮೊಜಾಂಬಿಕ್ ಮತ್ತು ರ್ವಾಂಡ ಸೇರಿದಂತೆ ಬೇರೆ ಆಫ್ರಿಕಾ ರಾಷ್ಟ್ರಗಳಿಂದ ಬರುವ ನಿರಾಶ್ರಿತರಿಗೆ ಮಲವಿಯು ಒಂದು ಸ್ವರ್ಗವಾಗಿದೆ. ನಿರಾರ್ಶಿತರ ಈ ಒಳಹರಿವು ಮಲವಿಯ ಆರ್ಥಿಕ ವ್ಯವಸ್ಥೆಯ ಮೇಲೆ ಒಂದು ದೊಡ್ಡ ಹೊರೆಯಾಗಿದೆ, ಆದರೆ ಇತರೆ ರಾಷ್ಟ್ರಗಳಿಂದ ಸಾಕಷ್ಟು ಸಹಾಯವು ಹರಿದು ಹರುತ್ತಿದೆ. ಮಲವಿಯ ದಾನಿಗಳಲ್ಲಿ ಸಂಯುಕ್ತ ಸಂಸ್ಥಾನ, ಕೆನಡ, ಜರ್ಮನಿ, ಐಸ್ಲ್ಯಾಂಡ್, ಜಪಾನ್, ನೆದರ್ ಲ್ಯಾಂಡ್, ನಾರ್ವೆ, ಸ್ವೀಡನ್, ಐರ್ಲ್ಯಾಂಡ್ ಮತ್ತು ಇಂಗ್ಲೆಂಡ್, ಹಾಗೂ ವಿಶ್ವ ಬ್ಯಾಂಕ್, ಐ ಎಮ್ ಎಫ್, ಯುರೋಪಿಯನ್ ಸಂಘ, ಆಫ್ರಿಕಾ ಅಭಿವೃದ್ಧಿ ಬ್ಯಾಂಕ್ ಮತ್ತು ವಿಶ್ವ ಸಂಸ್ಥೆಯಂತಹ ಅಂತರಾಷ್ಟ್ರೀಯ ಸಂಸ್ಥೆಗಳು ಸೇರಿವೆ.

ಮಲವಿಯು ವಿಶ್ವ ಸಂಸ್ಥೆ ಹಾಗೂ ಅದರ ಶಾಖೆಗಳು, ಐ ಎಮ್ ಎಫ್, ವಿಶ್ವ ಬ್ಯಾಂಕ್, ಆಫ್ರಿಕಾ ಸಂಘಟನೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯೂ ಸೇರಿದಂತೆ ಅನೇಕ ಅಂತರಾಷ್ಟ್ರೀಯ ಸಂಸ್ಥೆಗಳ ಸದಸ್ಯ ದೇಶವಾಗಿದೆ. ಮಲವಿಯು ದಕ್ಷಿಣ ಆಫ್ರಿಕಾದಲ್ಲಿ ಅನಿವಾರ್ಯತೆಯೆಂದು ಆರ್ಥಿಕ ಹಾಗೂ ರಾಜಕೀಯ ಸ್ಥಿರತೆಯನ್ನು ಅವಲೋಕಿಸಲು ಕಾಪಾಡುತ್ತದೆ ಮತ್ತು ವಿಚಾರ ವಿನಿಮಯದ ಮುಖಾಂತರ ಶಾಂತಿ ಪರಿಹಾರಗಳನ್ನು ಪ್ರತಿಪಾದಿಸುತ್ತದೆ. ಆಫ್ರಿಕಾ ವಿಷಮಸ್ಥಿತಿ ಪ್ರತಿಕ್ರಿಯೆಯಪ್ರಾರಂಭ ದಡಿ ಶಾಂತಿ ಕಾಪಾಡುವ ಸೈನ್ಯದ ತರಬೇತಿ ಪಡೆದ ದಕ್ಷಿಣ ಆಫ್ರಿಕಾದಲ್ಲೇ ಮೊದಲ ರಾಷ್ಟ್ರವಿದು.[೯]

ಸೈನಿಕ ದಳ[ಬದಲಾಯಿಸಿ]

ಮಲವಿಯ ಯುದ್ಧ ಪಡೆಯುಭೂ ಸೇನೆ, ನೌಕಾ ಸೇನೆ, ಹಾಗೂ ವಾಯು ದಳಗಳನ್ನು ಹೊಂದಿದೆ, ಎಲ್ಲವೂ ಮಲವಿ ಸೈನ್ಯದ ಬೇರೆ ಬೇರೆ ವಿಭಾಗಗಳೆಂದು ಪರಿಗಣಿಸಲ್ಪಟ್ಟಿದೆ. ಮೂರೂ ದಳಗಳ ಮಧ್ಯೆ ಸುಮಾರು 5,500 ಸೈನಿಕ ದಳದ ಉದ್ಯೋಗಿಗಳ ಮಂಡಲ, 1,500 ಅರೆ ಸೈನಿಕಪೋಲೀಸರು ಮತ್ತು ಯಾವುದೂ ಯುದ್ಧ ವಿಮಾನವಲ್ಲದ 80 ವಿಮಾನಗಳು ಇವೆ. ನೌಕಾ ವಿಭಾಗವನ್ನು ಮಲವಿ ಸರೋವರದ ಮಂಕಿ ಬೇ ಯ ಹೊರಗೆ ನೆಲೆಗೊಳಿಸಲಾಗಿದೆ.[೨೩]

ಭೌಗೋಳಿಕ ವಿವರಣೆ[ಬದಲಾಯಿಸಿ]

ಗೊಲೊಮೊಟಿ ಇಳಿಜಾರು

ಮಲವಿಯು ಆಗ್ನೇಯ ಆಫ್ರಿಕಾದಲ್ಲಿ ಭೂಮಿಯಿಂದ ಸುತ್ತುವರಿಯಲ್ಪಟ್ಟ ರಾಷ್ಟ್ರ. ವಾಯುವ್ಯಕ್ಕೆ ಜಾಂಬಿಯಾ, ಈಶಾನ್ಯಕ್ಕೆ ತಾಂಜಾನಿಯಾ ಹಾಗೂ ದಕ್ಷಿಣ, ನೈರುತ್ಯ ಮತ್ತು ಆಗ್ನೇಯಕ್ಕೆ ಮೊಜಾಂಬಿಕ್ ಇದರ ಗಡಿಗಳು. ಗ್ರೇಟ್ ರಿಫ್ಟ್ ಕಣಿವೆಯು ಉತ್ತರದಿಂದ ದಕ್ಷಿಣಕ್ಕೆ ದೇಶದ ಮುಖಾಂತರ ಹೋಗುತ್ತದೆ, ಮತ್ತು ಮಲವಿಯ ಪೂರ್ವ ಮೇರೆಯ ಮುಕ್ಕಾಲು ಭಾಗಕ್ಕಿಂತಲೂ ಹೆಚ್ಚು ಪ್ರದೇಶವನ್ನು ಆಕ್ರಮಿಸಿರುವ ಮಲವಿ ಸರೋವರವು(ನ್ಯಾಸಾ ಸರೋವರವೆಂಬ ಹೆಸರೂ ಇದೆ) ಕಣಿವೆಯ ಪೂರ್ವ ಭಾಗದ ಗಡಿಯಾಗಿದೆ.[೩] ಮಲವಿ ಸರೋವರವು 365 miles (587 km) ಉದ್ದ ಮತ್ತು 52 miles (84 km) ಅಗಲವಿರುವುದರಿಂದ, ಅದನ್ನು ಕೆಲವು ಬಾರಿ ಕ್ಯಾಲೆಂಡರ್ ಸರೋವರವೆಂದು ಕರೆಯುತ್ತಾರೆ.[೨೪]

ಸರೋವರದ ದಕ್ಷಿಣ ತುದಿಯಿಂದ ಶೈರ್ ನದಿಯು ಹರಿದು, ಮೊಜಾಂಬಿಕ್ ನಲ್ಲಿ ದೂರ250 miles (400 km) ದಕ್ಷಿಣದಲ್ಲಿರುವ ಜಾಂಬೆಜಿ ನದಿಯನ್ನು ಸೇರುತ್ತದೆ. ಮಲವಿ ಸರೋವರದ ಮೇಲ್ಮೈ ಸಮುದ್ರ ಮಟ್ಟಕ್ಕಿಂತ 1,500 feet (457 m) ಮೇಲೆ ಇದೆ, ಅದರ ಗರಿಷ್ಠ ಆಳ 2,300 feet (701 m), ಅಂದರೆ ಕೆಲವು ಗೊತ್ತಾದ ಸ್ಥಳಗಳಲ್ಲಿ ಸರೋವರದ ತಳವು ಸಮುದ್ರ ಮಟ್ಟಕ್ಕಿಂತಲೂ 700 feet (213 m) ಹೆಚ್ಚು ಕೆಳಗಿದೆ.

ರಿಫ್ಟ್ ಕಣಿವೆಯನ್ನು ಸುತ್ತುವರೆದಿರುವ ಪರ್ವತಮಯ ಪ್ರದೇಶಗಳಲ್ಲಿ ಪ್ರಸ್ಥ ಭೂಮಿಗಳು ಸಾಮಾನ್ಯವಾಗಿ ಸಮುದ್ರ ಮಟ್ಟಕ್ಕಿಂತ 3,000 to 4,000 feet (914 to 1,219 m) ಮೇಲೇರುತ್ತವೆ, ಆದಾಗ್ಯೂ ಉತ್ತರದಲ್ಲಿ ಕೆಲವು 8,000 feet (2,438 m) ರಷ್ಟು ಎತ್ತರಕ್ಕಿರುತ್ತವೆ. ಮಲವಿ ಸರೋವರದ ದಕ್ಷಿಣಕ್ಕೆ ಶೈರ್ ಗುಡ್ಡಗಾಡು ಪ್ರದೇಶಗಳಿವೆ, ನಿಧಾನವಾಗಿ ಉರುಳುವ ಭೂಮಿಯು ಸಮುದ್ರ ಮಟ್ಟಕ್ಕಿಂತ ಸುಮಾರು 3,000 feet (914 m) ಎತ್ತರದಲ್ಲಿದೆ. ಈ ಪ್ರದೇಶದಲ್ಲಿ, ಜೊಂಬ ಮತ್ತು ಮಲಂಜೆ ಪರ್ವತ ಶಿಖರಗಳ ಎತ್ತರಗಳು ಕ್ರಮವಾಗಿ 7,000 feet (2,134 m) ಹಾಗೂ 10,000 feet (3,048 m) .[೩]

ಮಲವಿಯ ರಾಜಧಾನಿ ಲಿಲೊಂಗ್ವೆ ಮತ್ತು 500,000 ಕ್ಕಿಂತಲೂ ಹೆಚ್ಚು ಜನಸಂಖ್ಯೆಯುಳ್ಳ ಬ್ಲಾಂಟೈರ್ ಅದರ ವ್ಯಾಪಾರ ಕೇಂದ್ರ ಮತ್ತು ಅತ್ಯಂತ ದೊಡ್ಡ ನಗರ.[೩] ಮಲವಿಯಲ್ಲಿನ ಎರಡು ಸ್ಥಳಗಳು ಯುನೆಸ್ಕೊ ವಿಶ್ವ ಪರಂಪರೆ ಸಂರಕ್ಷಿತ ಪಟ್ಟಿಯಲ್ಲಿಸೇರಿಸಲ್ಪಟ್ಟಿವೆ. ಮಲವಿ ಸರೋವರ ರಾಷ್ಟ್ರೀಯ ಉದ್ಯಾನವನವು1984 ರಲ್ಲಿ ಮೊದಲು ಸೇರಿಸಲ್ಪಟ್ಟಿತು ಮತ್ತು ಚೊಂಗೊನಿ ರಾಕ್ ಆರ್ಟ್ ಪ್ರದೇಶವು 2006 ರಲ್ಲಿ ಪಟ್ಟಿಗೆ ಸೇರ್ಪಡೆಯಾಯಿತು.[೨೫]

ವಾಯುಗುಣ[ಬದಲಾಯಿಸಿ]

ಮಲವಿಯ ದಕ್ಷಿಣದ ಕೆಳಮಟ್ಟದ ಪ್ರದೇಶಗಳಲ್ಲಿ ಹವಾಮಾನದಲ್ಲಿ ಬಹಳ ಉಷ್ಣಾಂಶ ಹಾಗೂ ಉತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಸಮತೀತೋಷ್ಣವಿರುತ್ತದೆ. ಎತ್ತರವು ಉಷ್ಣಾಂಶವನ್ನು ಕಡಿಮೆಗೊಳಿಸುತ್ತದೆ, ಇಲ್ಲದಿದ್ದರೆ ಅಲ್ಲಿ ಸಮಭಾಜಕವೃತ್ತದ ವಾಯುಗುಣವಿರುತ್ತಿತ್ತು. ನವೆಂಬರ್ ಮತ್ತು ಏಪ್ರಿಲ್ ನಡುವೆ ಉಷ್ಣಾಂಶವು ಗುಡುಗು ಮಿಂಚಿನ ಬಿರುಗಾಳಿ ಮತ್ತು ಭೂ ಮಧ್ಯೆರೇಖೆಯ ಮಳೆಯಿಂದ ಬೆಚ್ಚಗಿರುತ್ತದೆ, ಮಾರ್ಚ ಕೊನೆಯಲ್ಲಿ ಬಿರುಗಾಳಿಯ ಕಠೋರತೆಯು ತನ್ನ ತುಟ್ಟ ತುದಿಯನ್ನು ತಲುಪುತ್ತದೆ. ಮಾರ್ಚ್ ನಂತರ, ಮಳೆಯ ವೇಗ ಕಡಿಮೆಯಿರುತ್ತದೆ. ಮೇ ಯಿಂದ ಸೆಪ್ಟೆಂಬರ್ ವರೆಗೆ ಪರ್ವತಮಯ ಪ್ರದೇಶದಿಂದ ಪ್ರಸ್ಥಭೂಮಿಯ ಕಡೆಗೆ ತೇವದ ಮಂಜು ತೇಲುತ್ತದೆ, ಈ ತಿಂಗಳುಗಳ ಅವಧಿಯಲ್ಲಿ ಹೆಚ್ಚು ಕಡಿಮೆ ಮಳೆಯೇ ಆಗುವುದಿಲ್ಲ.[೩]

ವಿತ್ತ/ಆರ್ಥಿಕ ವ್ಯವಸ್ಥೆ[ಬದಲಾಯಿಸಿ]

ಲಿಲೊಂಗ್ವೆಯಲ್ಲಿನ ಕರಕುಶಲ ವಸ್ತುಗಳ ಮಾರುಕಟ್ಟೆ

ಮಲವಿಯು ವಿಶ್ವದ ಅತ್ಯಂತ ಕಡಿಮೆ ಅಭಿವೃದ್ಧಿಶೀಲ ಹಾಗೂ ಅತ್ಯಂತ ದಟ್ಟವಾದ ಜನಸಾಂದ್ರತೆಯ ದೇಶಗಳಲ್ಲಿ ಒಂದು. ಹಣಕಾಸು ವ್ಯವಸ್ಥೆಯು ಬಹಳವಾಗಿ ಕೃಷಿ ಆಧಾರಿತವಾಗಿದೆ, ಹಾಗೂ ಜನಸಂಖ್ಯೆಯ ಶೇಕಡಾ 85 ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಜಿ ಡಿ ಪಿ ಯ ಮೂರನೆಯ ಒಂದು ಭಾಗಕ್ಕಿಂತಲೂ ಹೆಚ್ಚು ಹಾಗೂ ರಫ್ತಿನ ಆದಾಯದ ಶೇಕಡಾ 90 ರಷ್ಟು ಕೃಷಿಯಿಂದ ಬರುತ್ತದೆ. ಹಿಂದೆ ಮಲವಿಯು ಆರ್ಥಿಕವಾಗಿ ವಿಶ್ವ ಬ್ಯಾಂಕ್, ಅಂತರಾಷ್ಟ್ರೀಯ ಹಣಕಾಸಿನ ಪುದುವಟ್ಟು(ಐ ಎಮ್ ಎಫ್)ಮತ್ತು ವೈಯಕ್ತಿಕ ರಾಷ್ಟ್ರಗಳಿಂದ ಗಣನೀಯ ಪ್ರಮಾಣದ ಆರ್ಥಿಕ ಸಹಾಯವನ್ನು ಅವಲಂಬಿಸಿತ್ತು.[೨೦]

ಡಿಸೆಂಬರ್ 2000 ರಲ್ಲಿ ಭ್ರಷ್ಟಾಚಾರದ ಆರೋಪದ ಕಾರಣ ಐ ಎಮ್ ಎಫ್ ಹಣ ವಿತರಣೆಯ ಸಹಾಯವನ್ನು ನಿಲ್ಲಿಸಿತು ಹಾಗೂ ಅನೇಕ ವೈಯಕ್ತಿಕ ದಾನಿಗಳು ಅದನ್ನೇ ಅನುಸರಿಸಿದರು, ಪರಿಣಾಮವಾಗಿ ಮಲವಿಯ ಅಭಿವೃದ್ಧಿಯ ಆಯವ್ಯಯ ಪಟ್ಟಿಯಲ್ಲಿ ಸುಮಾರು ಶೇಕಡಾ 80 ರಷ್ಟು ಇಳಿಕೆಯಾಯಿತು.[೨೧] ಆದಾಗ್ಯೂ, 2005 ರಲ್ಲಿ, ಮಲವಿಯು ಸಂಯುಕ್ತ ಸಂಸ್ಥಾನದ 575 ಮಿಲಿಯನ್ ಡಾಲರುಗಳಿಗಿಂತಲೂ ಹೆಚ್ಚಿನ ಧನ ಸಹಾಯವನ್ನು ಪಡೆಯಿತು. ಮಲವಿ ಸರ್ಕಾರವು ಮಾರುಕಟ್ಟೆ ಆರ್ಥಿಕ ವ್ಯವಸ್ಥೆ ಆಭಿವೃದ್ಧಿ, ಪರಿಸರ ಸಂರಕ್ಷಣೆಯ ಸುಧಾರಣೆ, ವೇಗವಾಗಿ ಹೆಚ್ಚುತ್ತಿರುವ ಹೆಚ್ ಐ ವಿ / ಏಡ್ಸ್ ಸಮಸ್ಯೆಯ ಜೊತೆ ವ್ಯವಹರಿಸುತ್ತಾ, ಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿ ಮುಂತಾದ ಪೈಪೋಟಿಗಳನ್ನು ಎದುರಿಸುತ್ತಿದೆ, ಆರ್ಥಿಕವಾಗಿ ಸ್ವಾವಲಂಬಿಯಾಗ ಬೇಕೆಂದು ಅದು ಕೆಲಸ ಮಾಡುತ್ತಾ ತನ್ನ ವಿದೇಶಿ ದಾನಿಗಳನ್ನು ತೃಪ್ತಿಗೊಳಿಸಲು ಪ್ರಯತ್ನಿಸುತ್ತಿದೆ. 2005 ರಿಂದ ರಾಷ್ಟ್ರಪತಿ ಮುಥಾರಿಕ ಮತ್ತು ಆರ್ಥಿಕ ಮಂತ್ರಿ ಗೊಂಡ್ವೆ ಯ ಮುಖಂಡತ್ವದಲ್ಲಿ ಸುಧಾರಿಸಿದ ಹಣಕಾಸಿನ ಶಿಸ್ತು ಕಂಡುಬರುತ್ತಿದೆ.

ಆದಾಗ್ಯೂ, ಕೆಲವು ಹಿಂಜರಿಕೆಗಳು ಕಂಡುಬಂದವು, ಮತ್ತು 2009 ರಲ್ಲಿ ಹಣಹೂಡಿಕೆಯ ಶೇಕಡಾ 23 ರಷ್ಟು ಭಾಗ ಕೆಳಗಿಳಿದ ಕಾರಣ, ವಿದೇಶಿ ವಿನಿಮಯದ ಸಾಮಾನ್ಯ ಕೊರತೆಯಿಂದ ಅಮದುಗಳಿಗೆ ಹಣ ಕೊಡಲು ಅದು ತನ್ನ ಸಾಮರ್ಥ್ಯವನ್ನು ಕಳೆದು ಕೊಂಡಿತು. ಸೇವಾ ಸೌಲಭ್ಯಗಳ ಹೆಚ್ಚಿನ ವೆಚ್ಚ ಮತ್ತು ವಿದ್ಯುತ್, ನೀರು ಹಾಗೂ ದೂರಸಂಪರ್ಕಗಳಿಗೆ ಗಮಾರ್ಹವಲ್ಲದ ಮೂಲಭೂತ ಸೌಕರ್ಯವನ್ನು ಒಳಗೊಂಡಂತೆ ಮಲವಿಯಲ್ಲಿ ಬಂಡವಾಳ ಹೂಡಿಕೆಗೆ ಅನೇಕ ಅಡ್ಡಿಗಳಿವೆ ಹಾಗೂ ಇವುಗಳನ್ನು ಸರ್ಕಾರವು ಸಂಬೋಧಿಸಲು ವಿಫಲವಾಗಿದೆ. 2009 ರಂತೆ ಮಲವಿಯು 12.81 ಬಿಲಿಯನ್ ಡಾಲರುಗಳ ಜಿ ಡಿ ಪಿ (ಕೊಂಡುಕೊಳ್ಳುವ ಸಾಮರ್ಥ್ಯದ ಸಮಾನತೆ) ಯನ್ನು ಹೊಂದಿದೆಯೆಂದು ಅಂದಾಜು ಮಾಡಲಾಗಿದೆ, 900 ಡಾಲರುಗಳ ವ್ಯಕ್ತಿಗತ ಜಿ ಡಿ ಪಿ ಸಹಿತ ಹಾಗೂ 2009 ರಲ್ಲಿ ಶೇಕಡಾ 8.5 ರಷ್ಡು ಹಣದುಬ್ಬರವಿತ್ತೆಂದು ಅಂದಾಜಿಸಲಾಗಿದೆ.[೨೦]

ಜಿ ಡಿ ಪಿ ಯ ಶೇಕಡಾ 35 ರಷ್ಟು ಕೃಷಿಗೆ, ಶೇಕಡಾ 19 ರಷ್ಟು ಕೈಗಾರಿಕೆಗೆ ಹಾಗೂ ಉಳಿದ ಶೇಕಡಾ 46 ರಷ್ಟು ಸೇವಾ ಸೌಲಭ್ಯಗಳಿಗೆಂದು ವಿವರಿಸಲಾಗಿದೆ.[೮] 2008 ರಲ್ಲಿ ಆರ್ಥಿಕ ಬೆಳವಣಿಗೆಯು ಶೇಕಡಾ 9.7 ಎಂದು ಅಂದಾಜು ಮಾಡಲಾಗಿದ್ದರೂ ಹಾಗೂ 2009 ಕ್ಕ ಅಂತರಾಷ್ಟ್ರೀಯ ಹಣಕಾಸು ಪುದುವಟ್ಟಿನಿಂದ[೨೧] ಹೆಚ್ಚಿನ ಬೆಳವಣಿಗೆಯಿದೆಯೆಂದು ಹೇಳಲ್ಪಟ್ಟಿದ್ದಾಗ್ಯೂ ಮಲವಿಯು ವಿಶ್ವದಲ್ಲೇ ಅತಿ ಕಡಿಮೆ ವ್ಯಕ್ತಿಗತ ಆದಾಯವನ್ನು ಹೊಂದಿದೆ.[೨೬] ಸರ್ಕಾರದ ಕೆಲಸ ಹಾಗೂ ಬೆಂಬಲಿಸುವ ಸಂಸ್ಥೆಗಳ ಮುಖಾಂತರ ಮಲವಿಯಲ್ಲಿ ಬಡತನದ ಮಟ್ಟವು ಕಡಿಮೆಯಾಗುತ್ತಲಿದೆ. ಬಡತನದ ರೇಖೆಯ ಕೆಳಗೆ ವಾಸಿಸುವ ಜನ ಸಂಖ್ಯೆಯು 1990 ರಲ್ಲಿ ಶೇಕಡಾ 54 ರಿಂದ 2006 ರಲ್ಲಿ ಶೇಕಡಾ 40 ಕ್ಕೆ ಇಳಿಮುಖವಾಗಿದೆ, ಹಾಗೂ ಅತ್ಯಂತ ಬಡವರ ಶೇಕಡಾ ದರವು 1990 ರಲ್ಲಿ ಶೇಕಡಾ 24 ರಿಂದ 2007 ರಲ್ಲಿ ಶೇಕಡಾ 15 ಕ್ಕೆ ಇಳಿಯಿತು.[೨೭]

ಮಲವಿಯಲ್ಲಿನ ಒಂದು ಮಾದರಿ ರಸ್ತೆ

ಕೃಷಿ[ಬದಲಾಯಿಸಿ]

ಹೊಗೆಸೊಪ್ಪು, ಕಬ್ಬು, ಹತ್ತಿ, ಚಹ, ಕಾರ್ನ್, ಆಲೂಗಡ್ಡೆ, ಸೊರ್ಗುಮ್, ದನಕರು ಮತ್ತು ಮೇಕೆಗಳು ಮಲವಿಯ ಮುಖ್ಯ ಕೃಷಿ ಉತ್ಪಾದನೆಗಳು. ಹೊಗೆಸೊಪ್ಪು, ಚಹ ಮತ್ತು ಸಕ್ಕರೆ ತಯಾರಿಕೆ, ಮರದ ದಿಮ್ಮಿಗಳನ್ನು ಕೊಯ್ಯುವ ಉತ್ಪಾದನೆಗಳು,ಸಿಮೆಂಟ್ ಹಾಗೂ ಗ್ರಾಹಕರ ಸಾಮಾನುಗಳು ಪ್ರಮುಖ ಕೈಗಾರಿಕೆಗಳು. ಕೈಗಾರಿಕಾ ಉತ್ಪಾದನೆಯ ಬೆಳವಣಿಗೆಯ ದರ ಶೇಕಡಾ 10 ರಷ್ಟೆಂದು ಅಂದಾಜು ಮಾಡಲಾಗಿದೆ (2009). ದೇಶವು ನೈಸರ್ಗಿಕ ಅನಿಲದ ಗಮನಾರ್ಹ ಉಪಯೋಗವನ್ನು ಮಾಡುತ್ತಿಲ್ಲ. 2008 ರಂತೆ, ಮಲವಿಯು ಯಾವುದೇ ವಿದ್ಯುತ್ ಅನ್ನು ಅಮದಾಗಲಿ ಅಥವ ರಫ್ತಾಗಲಿ ಮಾಡುವುದಿಲ್ಲ, ಆದರೆ ದೇಶದಲ್ಲಿ ಉತ್ಪಾದನೆಯಿಲ್ಲದ ಕಾರಣ, ತನ್ನ ಎಲ್ಲಾ ಪೆಟ್ರೋಲಿಯಂ ಅನ್ನು ಅಮದು ಮಾಡಿಕೊಳ್ಳುತ್ತದೆ.[೨೦] 2006 ರ ಮೊದಲಲ್ಲಿ ಅಮದಾದ ಇಂಧನದ ಅವಲಂಬನೆಯನ್ನು ಕಡಿಮೆ ಮಾಡಲು, ದೇಶದೊಳಗೆ ಎರಡು ಸ್ಥಾವರಗಳಲ್ಲಿ, ಶೇಕಡಾ 10 ರಷ್ಟು ಎಥನಾಲ್ ಅನ್ನು ಲೆಡ್ ಇಲ್ಲದ ಪೆಡ್ರೋಲ್ ಗೆ ಸೇರಿಸಿ ಉತ್ಪಾದಿಸಲು ಪ್ರಾರಂಭಿಸಿತು. 2008 ರಲ್ಲಿ, ಮಲವಿಯು ಕೇವಲ ಎಥನಾಲ್ ಮೇಲೆ ಓಡುವಂತಹ ಕಾರುಗಳನ್ನು ಪರೀಕ್ಷಿಸಲು ಶುರು ಮಾಡಿತು, ಹಾಗೂ ಪ್ರಾಥಮಿಕ ಫಲಿತಾಂಶಗಳು ಆಶಾದಾಯಕವಾಗಿರುವುದರಿಂದ, ದೇಶವು ತನ್ನ ಎಥನಾಲ್ ಉಪಯೋಗವನ್ನು ಹೆಚ್ಚಿಸಿ ಕೊಳ್ಳಲು ಪ್ರಯತ್ನಿಸುತ್ತಿದೆ.[೨೮]

2009 ರಂತೆ, ಮಲವಿಯು ಅಂದಾಜು 945 ಮಿಲಿಯನ್ ಯು ಎಸ್ ಡಾಲರುಗಳ ಸಾಮಾನುಗಳನ್ನು ಪ್ರತಿ ವರ್ಷವೂ ರಫ್ತು ಮಾಡುತ್ತದೆ. ಹೊಗೆಸೊಪ್ಪಿನ ಮೇಲೆ ಅತಿ ಹೆಚ್ಚಾದ ಅವಲಂಬನೆಯು (ಅದು ಸುಮಾರು ಶೇಕಡಾ 70 ರಷ್ಟು ರಫ್ತಿನ ಆದಾಯದ ಭಾಗವಾಗಿದೆ) ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಭಾರವಾದ ಹೊರೆಯನ್ನು ಹೇರಿದೆ, ಕಾರಣ ವಿಶ್ವದಲ್ಲಿ ಬೆಲೆಯು ಕುಸಿಯಿತು ಹಾಗೂ ಹೊಗೆಸೊಪ್ಪಿನ ಉತ್ಪಾದನೆಯನ್ನು ಮಿತಿಗೊಳಿಸಲು ಅಂತರಾಷ್ಟ್ರೀಯ ಸಂಸ್ಥೆಯು ಒತ್ತಡವನ್ನು ಹೆಚ್ಚಿಸಿತು. ಮಲವಿಯ ರಫ್ತಿನ ಆದಾಯದ ಶೇಕಡಾ 90 ಕ್ಕಿಂತಲೂ ಹೆಚ್ಚು ಆದಾಯ ತರುವ ಚಹ, ಸಕ್ಕರೆ, ಕಾಫಿ ಮತ್ತು ಈ ಮೂರರ ಜೊತೆಗೆ ಹೊಗೆಸೊಪ್ಪಿನ ಉತ್ಪಾದನೆಯ ಮೇಲೆ ದೇಶವು ಅತಿಯಾಗಿ ಅವಲಂಬಿಸಿದೆ. 2007 ಮತ್ತು 2008 ರ ಮಧ್ಯೆ ರಫ್ತಿನ ಉತ್ಪತ್ತಿಯು ಶೇಕಡಾ 53 ರರಿಂದ ಶೇಕಡಾ 70 ಕ್ಕೆ ಉತ್ಪನ್ನವು ಏರಿದ ಕಾರಣ ಮಲವಿಯ ಹೊಗೆಸೊಪ್ಪಿನ ಮೇಲಿನ ಅವಲಂಬಿಕೆಯು ಹೆಚ್ಚುತ್ತಲಿದೆ.[೨೦][೨೧]

ಹತ್ತಿ, ಸೇಂಗಾ, ಮರದ ಉತ್ಪನ್ನಗಳು ಮತ್ತು ಸಿದ್ಧ ಪಡಿಸಿದ ಉಡುಪುಗಳು ಇತರೆ ರಫ್ತಿನ ಸಾಮಾನುಗಳು. ದಕ್ಷಿಣ ಆಫ್ರಿಕಾ, ಜರ್ಮನಿ, ಈಜಿಪ್ಟ್, ಜಿಂಬಾಬ್ವೆ, ಸಂಯುಕ್ತ ಸಂಸ್ಥಾನ, ರಷ್ಯಾ ಹಾಗೂ ನೆದರ್ ಲ್ಯಾಡ್ಸ್ ದೇಶಗಳು ಮಲವಿಯ ರಫ್ತಿನ ಮುಖ್ಯ ನಿರ್ದಿಷ್ಟ ಪ್ರದೇಶಗಳು. ಮುಖ್ಯ ವ್ಯಾಪಾರಿ ವಸ್ತುಗಳಾದ ಆಹಾರ, ಪೆಟ್ರೋಲಿಯಂ ಉತ್ಪನ್ನಗಳು, ಗ್ರಾಹಕರ ಸಾಮಾನುಗಳು ಹಾಗೂ ಸಾಗಾಣಿಕೆಯ ಸಲಕರಣೆಗಳನ್ನು ಒಳಗೊಂಡಂತೆ, ಮಲವಿಯು ಈಗ ಸುಮಾರು ಯು ಎಸ್ 1,625 ಬಿಲಿಯನ್ ಡಾಲರುಗಳ ಸಾಮಾನುಗಳನ್ನು ಪ್ರತಿ ವರ್ಷವೂ ಅಮದು ಮಾಡಿಕೊಳ್ಳುತ್ತದೆ. ದಕ್ಷಿಣ ಆಫ್ರಿಕ, ಭಾರತ, ಜಾಂಬಿಯಾ, ತಾಂಜಾನಿಯಾ, ಸಂಯುಕ್ತ ಸಂಸ್ಥಾನ ಮತ್ತು ಚೈನಾ ದಂತಹ ಮುಖ್ಯ ದೇಶಗಳಿಂದ ಮಲವಿಯು ಅಮದು ಮಾಡಿಕೊಳ್ಳುತ್ತದೆ.[೨೦]

2006 ರರಲ್ಲಿ, ವಿಪತ್ಕಾರಕ ಕಡಿಮೆ ಕೃಷಿಯ ಸುಗ್ಗಿಗೆ ಪ್ರತಿಕ್ರಯಿಸಿ, ಭೂಮಿಯನ್ನು ಪುನಶ್ಚೇತನಗೊಳಿಸಲು ಮತ್ತು ಬೆಳೆ ಉತ್ಪಾದನೆಯನ್ನು ಹೆಚ್ಚಿಸುವಂತಹ ರಚನೆಯಾದ ರಾಸಾಯನಿಕ ಸಹಾಯ ಧನ ಕೊಡುವ ಕಾರ್ಯಕ್ರಮವನ್ನು ಮಲವಿಯು ಪ್ರಾರಂಭಿಸಿತು. ಈ ಕಾರ್ಯಕ್ರಮವು ದೇಶದ ರಾಷ್ಟ್ರಪತಿಗಳ ಮುಂದಾಳತ್ವದಲ್ಲಿ, ಮಲವಿಯ ಕೃಷಿಯನ್ನು ಆಮೂಲಾಗ್ರವಾಗಿ ಸುಧಾರಿಸುತ್ತಿದೆ ಹಾಗೂ ಹತ್ತಿರದ ದೇಶಗಳಿಗೆ ಮಲವಿಯು ಆಹಾರದ ಒಂದು ನಿವ್ವಳ ರಫ್ತಿನ ದೇಶವಾಗಲು ಕಾರಣವಾಗಿದೆಯೆಂದು ವರದಿಮಾಡಲ್ಪಟ್ಟಿದೆ.[೨೯] ಹಾಗೂ 2006 ರರಲ್ಲಿ, ಅಂತರಾಷ್ಟ್ರೀಯ ಹೆಸರುವಾಸಿಯಾದ ಸೂಪರ್ ಸ್ಟಾರ್ ಮಡೋನ್ನ, ರೈಸಿಂಗ್ ಮಲವಿ ಎಂಬ ಒಂದು ಪ್ರತಿಷ್ಠಾನವನ್ನು ಸ್ಥಾಪಿಸಿದಳು. ಇದು ಮಲವಿಯಲ್ಲಿ ಏಡ್ಸ್ ಅನಾಥರಿಗೆ ಸಹಾಯ ಮಾಡಲು, ಮೂಲಭೂತ ಸೌಕರ್ಯ ಕಟ್ಟಲು ಮತ್ತು ಹಣ ಸಂಗ್ರಹಿಸಲು ಕೇಂದ್ರೀಕರಿಸುತ್ತದೆ. ಆ ಸಂಸ್ಥೆಯು ಒಂದು ಅನಾಥ ರಕ್ಷಣಾ ಕೇಂದ್ರವನ್ನು ಕಟ್ಟಿತು, ಮತ್ತು ಮಡೋನ್ನ ಮಲವಿಯ ಅನಾಥರು ಅನುಭವಿಸಿದ ಸಂಕಷ್ಟಗಳ ಬಗ್ಗೆ ಒಂದು ಸಾಕ್ಷ್ಯ ಚಿತ್ರಕ್ಕೆ ಧನ ಸಹಾಯ ಮಾಡಿದಳು.[೩೦] ಮಲವಿಯಲ್ಲಿ ಶಿಕ್ಷಣ, ಆರೋಗ್ಯ ರಕ್ಷಣೆ, ಮೂಲಭೂತ ಸೌಕರ್ಯ ಮತ್ತು ವ್ಯವಸಾಯವನ್ನು ಸುಧಾರಿಸಲು ಮೆಲೆನಿಯಮ್ ವಿಲೇಜಸ್ ಪ್ರಾಜೆಕ್ಟ್ ಜೊತೆ ರೈಸಿಂಗ್ ಮಲವಿ ಸಂಸ್ಥೆಯು ಸಹ ಕೆಲಸ ಮಾಡುತ್ತದೆ.[೩೧]

ಮೂಲಭೂತ ಸೌಕರ್ಯ[ಬದಲಾಯಿಸಿ]

2009 ರಂತೆ, ಮಲವಿಯು 6 ಉತ್ತಮ ರನ್ ವೇಗಳು ಮತ್ತು 26 ಕಚ್ಚಾ ರನ್ ವೇ ಗಳುಳ್ಳ 32 ವಿಮಾನ ನಿಲ್ದಾಣಗಳನ್ನು ಹೊಂದಿದೆ. ದೇಶವು ಎಲ್ಲಾ ನ್ಯಾರೊ ಗೇಜ್ ನ 495 miles (797 km) ರೈಲು ಮಾರ್ಗಗಳು, ಮತ್ತು 9,601 miles (15,451 km) ರಸ್ತೆ ಮಾರ್ಗಗಳು, 4,322 miles (6,956 km) ಉತ್ತಮ ಹಾಗೂ 5,279 miles (8,496 km) ಕಚ್ಚಾ ರಸ್ತೆಗಳನ್ನು ಹೊಂದಿದೆ. ಅಲ್ಲದೆ ಮಲವಿಯು, ಮಲವಿಯ ಸರೋವರದ ಮೇಲೆ ಮತ್ತು ಶೈರ್ ನದಿಯ ಉದ್ದಕ್ಕೂ435 miles (700 km) ಜಲ ಮಾರ್ಗಗಳನ್ನು ಹೊಂದಿದೆ.[೨೦]

2008 ರಂತೆ, ಮಲವಿಯಲ್ಲಿ 236,000 ಭೂ ಮಾರ್ಗದದೂರವಾಣಿಗಳು, ಮತ್ತು ಪ್ರತಿ 100 ಜನಗಳಿಗೆ 15 ಸೆಲ್ ಫೊನಿನಂತೆ, 1,781 ಮಿಲಿಯನ್ ಸೆಲ್ ಫೊನ್ ಗಳು ಇದ್ದವು. 2008 ರಂತೆ 316,000 ಅಂತರ್ಜಾಲ ಉಪಯೋಗಿಸುವವರು, ಮತ್ತು 2009 ರಂತೆ 741 ಅಂತರ್ಜಾಲ ಹೋಸ್ಟ್ ಗಳು ಇದ್ದರು. 2001 ರಂತೆ 14 ಆಕಾಶವಾಣಿ ನಿಲಯಗಳು ಮತ್ತು 1 ದೂರದರ್ಶನ ಕೇಂದ್ರವು ಇದ್ದವು.[೨೦] ಹಿಂದೆ ಮಲವಿಯ ದೂರಸಂಪರ್ಕ ವ್ಯವಸ್ಥೆಯು ಆಫ್ರಿಕಾದಲ್ಲೇ ಅತ್ಯಂತ ಹೀನ ಸ್ಥಿತಿಯಲ್ಲಿರುವುದೆಂದು ಪರಿಗಣಿಸಲ್ಪಟ್ಟಿತ್ತು, ಆದರೆ ಈಗ ಪರಿಸ್ಥಿತಿಗಳು ಸುಧಾರಿಸುತ್ತಿದೆ, 2000 ಮತ್ತು 2007 ರ ನಡುವೆ 130,000 ಭೂ ಮಾರ್ಗದ ದೂರವಾಣಿಗಳು ಜೋಡಿಸಲ್ಪಟ್ಟವು. ನಗರ ಪ್ರದೇಶಗಳಲ್ಲಿ ದೂರವಾಣಿಗಳು ಹೆಚ್ಚು ಸುಲಭ ಸಾಧ್ಯವಾದರೆ, ಗ್ರಾಮೀಣ ಪ್ರದೇಶಗಳಲ್ಲಿ ಭೂ ಮಾರ್ಗಗಳು ಅದರ ಕಾಲು ಭಾಗಕ್ಕಿಂತಲೂ ಕಡಿಮೆಯಿವೆ.[೩೨]

ಜನಸಂಖ್ಯಾಶಾಸ್ತ್ರ[ಬದಲಾಯಿಸಿ]

1961 ರಿಂದ 2003 ರರವರೆಗೆ ಮಲವಿಯ ಜನಸಂಖ್ಯೆ (ಸಾವಿರಗಳಲ್ಲಿ)

ಮಲವಿಯು 15 ಮಿಲಿಯನ್ ಗಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ, 2009 ರ ಪ್ರಕಾರ, ಬೆಳವಣಿಗೆಯ ವೇಗ ಶೇಕಡಾ 2.75 ಎಂದು ಅಂದಾಜು ಮಾಡಲಾಗಿದೆ.[೨೦]

ಮಲವಿಯ ಜನಸಂಖ್ಯೆಯು ಏಷಿಯನ್ನರು ಹಾಗೂ ಯುರೋಪಿಯನ್ನರು ಸೇರಿದಂತೆ, ಚೇವ, ನ್ಯಾಂಜ, ತುಂಬುಕ, ಯವೊ, ಲೊಮ್ವೆ, ಸೆನ, ಟೊಂಗ, ನಗೊನಿ, ಮತ್ತು ನಗೊಡೆ ಮೂಲ ನಿವಾಸಿ ಜನಾಂಗೀಯರ ತಂಡಗಳನ್ನು ಒಳಗೊಂಡಿದೆ. ಜನಸಂಖ್ಯೆಯ ಶೇಕಡಾ 57 ಕ್ಕಿಂತಲೂ ಹೆಚ್ಚು ಜನರು ಮಾತನಾಡುವ ಅಧಿಕೃತ ಭಾಷೆಯಾದ ಚಿಚೆವ ಸೇರಿದಂತೆ,ಚಿನ್ಯಾಂಜ(12.8%), ಚಿಯವೊ (10.1%) ಮತ್ತು ಚಿಟುಂಬುಕ(9.5%) ಇವು ಪ್ರಮುಖ ಭಾಷೆಗಳಾಗಿವೆ.[೨೦]

ದೇಶದ ಆಗ್ನೇಯದಲ್ಲಿ ಸುಮಾರು 250,000 ಜನರು ಮಾತನಾಡುವ ಮಲವಿಯನ್ ಲೊಮ್ವೆ; ಆಗ್ನೇಯದಲ್ಲಿಯೇ ಸುಮಾರು 200,000 ಜನರು ಮಾತನಾಡುವ ಕೊಕೊಲ; ವಾಯುವ್ಯದ ತುದಿಯಲ್ಲಿ 45,000 ಜನರು ಮಾತನಾಡುವ ಲಂಬ್ಯ; ಸುಮಾರು 70,000 ಜನಗಳ ಭಾಷೆಯಾದ ನಡಲಿ; ಈಶಾನ್ಯ ಮಲವಿಯಲ್ಲಿ ಸುಮಾರು 300,000 ಜನರ ಭಾಷೆಯಾದ ನಯಕ್ಯುಸ-ನಗೊಂಡೆ; ಮಲವಿಯನ್ ಸೆನ, ದಕ್ಷಿಣ ಮಲವಿಯಲ್ಲಿ ಸುಮಾರು 270,000 ಜನರ ಆಡುವ ಭಾಷೆ; ಮತ್ತು ಉತ್ತರದಲ್ಲಿ ತೊಂಗ, 170,000 ಜನರ ಆಡು ಭಾಷೆ, ಇವು ಇತರೆ ಮೂಲ ಭಾಷೆಗಳಾಗಿವೆ.[೩೩]

ಧರ್ಮ[ಬದಲಾಯಿಸಿ]

ಜೊಂಬದಲ್ಲಿನ ಒಂದು ಮಸೀದಿ

2007 ರ ಅಂದಾಜಿನ ಪ್ರಕಾರ, ಜನಸಂಖ್ಯೆಯ ಸುಮಾರು ಶೇಕಡಾ 80 ರಷ್ಟು ಕ್ರೈಸ್ತರು, ಅವರಲ್ಲಿ ರೋಮನ್ ಕ್ಯಾಥೋಲಿಕ್ ಚರ್ಚ್ ಮತ್ತು ಕೇಂದ್ರೀಯ ಆಫ್ರಿಕಾದ ಹಿರಿಯ ಪಾದ್ರಿಗಳ ಚರ್ಚ್ ಅತ್ಯಂತ ದೊಡ್ಡ ಕ್ರೈಸ್ತರ ತಂಡಗಳಾಗಿವೆ. ಕಡಿಮೆ ಸಂಖ್ಯೆಯ ಆಂಗ್ಲಿಕನ್ನರ, ಬಾಪ್ಟಿಸ್ಟರ, ಇವಾನ್ಗೆಲಿಕಲ್ಸ ಮತ್ತು ಏಳನೆಯ ದಿನದ ಅಡ್ವೆಂಟಿಸ್ಟ್ ಗಳು ಇದ್ದಾರೆ. ಜನಸಂಖ್ಯೆಯ ಶೇಕಡಾ 13 ರಷ್ಟು ಮುಸ್ಲಿಮರು, ಆ ಮುಸ್ಲಿಮ್ ಜನಸಂಖ್ಯೆಯಲ್ಲಿ ಖದ್ರಿಯ ಇಲ್ಲವೇ ಸುಕ್ಕುಟು ಗುಂಪನ್ನು ಒಳಗೊಂಡಿರುವ ಸುನ್ನಿ ಪಂಗಡದವರೆ ಅತಿ ಹೆಚ್ಚಾಗಿದ್ದಾರೆ. ದೇಶದೊಳಗಡೆ ಜ್ಯೂಗಳು, ರಸ್ಟಫೆರಿಯನ್ನರು, ಹಿಂದೂಗಳು ಮತ್ತು ಬಹಾಯ್ಗಳನ್ನು ಒಳಗೊಂಡಂತಹ ಇತರೇ ಧಾರ್ಮಿಕ ತಂಡದವರೂ ಇದ್ದಾರೆ. ಜನಸಂಖ್ಯೆಯ ಶೇಕಡಾ 4 ರಷ್ಟು ನಾಸ್ತಿಕರು, ಆದಾಗ್ಯೂ ಪರಂಪರೆಯ ಆಫ್ರಿಕಾ ಧರ್ಮಗಳನ್ನು ಆಚರಿಸುವ ಜನಗಳನ್ನೂ ಈ ಸಂಖ್ಯೆಯು ಒಳಗೊಂಡಿದೆ.[೩೪]

ಆರೋಗ್ಯ[ಬದಲಾಯಿಸಿ]

ಶಿಶುಗಳ ಮರಣ ಸಂಖ್ಯೆ ಹೆಚ್ಚು, ಹಾಗೂ ಆಯು ಪ್ರಮಾಣ ಹುಟ್ಟಿದಾಗ 50.03 ವರ್ಷಗಳು. ವಯಸ್ಕರಲ್ಲಿ ಹೆಚ್ ಐ ವಿ / ಏಡ್ಸ್ ಪ್ರಭುತ್ವದ ಮಟ್ಟ ಹೆಚ್ಚಾಗಿದೆ, 2007 ರಲ್ಲಿ ಅಂದಾಜು 930,000 ಮಯಸ್ಕರು (ಅಥವ ಜನಸಂಖ್ಯೆಯ ಶೇಕಡಾ 11.9 ರಷ್ಟು) ಈ ಕಾಯಿಲೆಯಿಂದ ಬದುಕುತ್ತಿದ್ದಾರೆ. ಹೆಚ್ ಐ ವಿ / ಏಡ್ಸ್ ನಿಂದ ಪ್ರತಿ ವರ್ಷ ಸುಮಾರು 68,000 ಸಾವು ಸಂಭವಿಸುತ್ತದೆ (2007).[೨೦] ಪ್ರತಿ ದಿನ ಅಂದಾಜು 250 ಹೊಸಬರಿಗೆ ಈ ಸೋಂಕು ತಗಲುತ್ತದೆ, ಹಾಗೂ ಮಲವಿಯ ಆಸ್ಪತ್ರೆಯ ಕಡೆ ಪಕ್ಷ ಶೇಕಡಾ 70 ರಷ್ಟು ಹಾಸಿಗೆಗಳು ಹೆಚ್ ಐ ವಿ / ಏಡ್ಸ್ ರೋಗಿಗಳಿಂದ ತುಂಬಿರುತ್ತವೆ. ಈ ಹೆಚ್ಚಿನ ರೋಗದ ಸೋಂಕಿನಿಂದ ಮರಣಹೊಂದುತ್ತಿರುವ ಕೃಷಿ ಕ್ಷೇತ್ರದ ದುಡಿಮೆಯವರು ಸುಮಾರು ಶೇಕಡಾ 5.8 ರಷ್ಟು ಇದ್ದಾರೆ, ಹಾಗೂ ಹೆಚ್ ಐ ವಿ / ಏಡ್ಸ್ 2010 ರ ವೇಳೆಗೆ ಕಡೇ ಪಕ್ಷ ಶೇಕಡಾ 10 ರಷ್ಟು ದೇಶದ ಜಿ ಡಿ ಪಿ ಯನ್ನು ಕಡಿಮೆ ಮಾಡುವುದೆಂದು ಅಂದಾಜು ಮಾಡಲಾಗಿದೆ. ಈ ಕಾಯಿಲೆಯಿಂದ ಮರಣಹೊಂದುವ ಸರ್ಕಾರಿ ಕೆಲಸಗಾರರ ಶವ ಸಂಸ್ಕಾರಕ್ಕೆಂದು ಸರ್ಕಾರವು ಪ್ರತಿ ವರುಷ 120,000 ಡಾಲರಿಗಿಂತಲೂ ಹೆಚ್ಚು ಹಣವನ್ನು ಖರ್ಚು ಮಾಡುತ್ತದೆ.[೨೧]

ಕೀಟಾಣುಗಳ ಮತ್ತು ಪ್ರೊಟೊಜೋವಾದ ಅತಿಭೇದಿ, ಹೆಪಟೈಟಿಸ್ ಎ, ಟೈಫಾಯಿಡ್ ಜ್ವರ, ಮಲೇರಿಯಾ, ಪ್ಲೇಗ್, ಸ್ಖಿಸ್ಟೊಸೊಮಿಯಾಸಿಸ್ ಮತ್ತು ನಾಯಿ ಹುಚ್ಚು ಗಳನ್ನು ಒಳಗೊಂಡಂತೆ ಪ್ರಮುಖ ಅಂಟುಜಾಡ್ಯಗಳ ಅತಿ ಹೆಚ್ಚಿನ ಅಪಾಯದ ಮಟ್ಟವಿದೆ.[೨೦] ಮಲವಿಯು ಶಿಶುಗಳ ಮರಣ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಹೆಚ್ ಐ ವಿ / ಏಡ್ಸ್, ಮಲೇರಿಯಾ ಹಾಗೂ ಇತರೆ ಕಾಯಿಲೆಗಳ ಘಟನೆಗಳನ್ನು ಕಡಿಮೆಗೊಳಿಸುವಲ್ಲಿ ಪ್ರಗತಿ ಸಾಧಿಸುತ್ತಿದೆ; ಆದಾಗ್ಯೂ, ದೇಶವು ತಾಯಂದಿರ ಮರಣ ಸಂಖ್ಯೆಯನ್ನು ಇಳಿಸುವಲ್ಲಿ ಮತ್ತುಲಿಂಗ ಸಮಾನತೆಯನ್ನು ಪ್ರೋತ್ಸಾಹಿಸುವುದರಲ್ಲಿ "ನಿರುತ್ಸಾದಾಯಕವಾಗಿ [ಕೆಲಸ ಮಾಡುತ್ತಿದೆ]".[೨೭]

ಶಿಕ್ಷಣ[ಬದಲಾಯಿಸಿ]

ಮಲವಿಯಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯವಲ್ಲ, ಆದರೆ ಸಂವಿಧಾನವು ಎಲ್ಲಾ ಜನಗಳೂ ಕಡೆ ಪಕ್ಷ ಐದು ವರ್ಷಗಳಾದರೂ ಪ್ರಾಥಮಿಕ ಶಿಕ್ಷಣವನ್ನು ಹೊಂದಿರಬೇಕೆಂದು ತಿಳಿಸುತ್ತದೆ. 1994 ರಲ್ಲಿ ಹಾಜರಾತಿ ಸಂಖ್ಯೆಯ ಮಟ್ಟವನ್ನು ಹೆಚ್ಚಿಸಿದ, ಎಲ್ಲಾ ಮಕ್ಕಳಿಗೆ ಮುಫತ್ತಾದ ಪ್ರಾಥಮಿಕ ಶಿಕ್ಷಣವು ಸರ್ಕಾರದಿಂದ ಸ್ಥಾಪಿಸಲ್ಪಟ್ಟಿತು. ಹುಡುಗಿಯರು ಲಿಂಗ-ಆಧಾರಿತ ಹಿಂಸೆಯನ್ನು ಅತಿ ಹೆಚ್ಚಾಗಿ ಎದುರಿಸುವುದರಿಂದ, ಶಾಲೆಗೆ ಬಹು ದೂರದ ಪ್ರಯಾಣದ ಅವಧಿಯಲ್ಲಿ ಸುರಕ್ಷಾ ಸಮಸ್ಯೆಯ ಕಾರಣದಿಂದ, ಶಾಲೆ ಬಿಡುವವರಲ್ಲಿ ಹುಡುಗರಿಗಿಂತ [೩೫] ಹುಡುಗಿಯರ ಸಂಖ್ಯೆಯೇ ಹೆಚ್ಚು. ಆದಾಗ್ಯೂ, ಎಲ್ಲಾ ಮಕ್ಕಳ ಹಾಜರಾತಿ ದರವು ಸುಧಾರಿಸುತ್ತಿದೆ, ಪ್ರಾಥಮಿಕ ಶಾಲೆಗಳ ದಾಖಲಾತಿ ಮಟ್ಟವು 1992 ರಲ್ಲಿ ಶೇಕಡಾ 58 ರಿಂದ 2007ರಲ್ಲಿ ಶೇಕಡಾ 75 ಕ್ಕೆ ಏರಿತು, ಗ್ರೇಡ್ ಒಂದರಿಂದ ಪ್ರಾರಂಭಿಸಿ ಐದನೆಯ ಗ್ರೇಡನ್ನು ಮುಗಿಸುವ ವಿದ್ಯಾರ್ಥಿಗಳ ಸಂಖ್ಯೆಯು 1992 ರಲ್ಲಿ ಶೇಕಡಾ 64 ರಿಂದ 2006 ರಲ್ಲಿ ಶೇಕಡಾ 86 ಕ್ಕೆ ಏರಿದೆ. ಯುವಕರ ಸಾಕ್ಷರತೆಯು ಸಹ 2000 ದಲ್ಲಿ ಶೇಕಡಾ 68 ರಿಂದ 2007 ರಲ್ಲಿ ಶೇಕಡಾ 82 ಕ್ಕೆ ಹೆಚ್ಚಿದೆ. ಈ ಹೆಚ್ಚಳವು ಪ್ರಮುಖವಾಗಿ, ಶಾಲಾ ವ್ಯವಸ್ಥೆಯ ಉದ್ದಕ್ಕೂ ಜಾರಿಗೊಳಿಸಲ್ಪಟ್ಟಂತಹ ಶಾಲೆಗಳಲ್ಲಿ ಸುಧಾರಿಸಿದ ಕಲಿಕೆಯ ಸಾಧನಗಳು, ಒಳ್ಳೆಯ ಮೂಲಭೂತ ಸೌಕರ್ಯಗಳು ಹಾಗೂ ಪೋಷಿಸುವ ಕಾರ್ಯಕ್ರಮಗಳೇ ಕಾರಣವಾಗಿವೆ.[೨೭]

ಸಂಸ್ಕೃತಿ[ಬದಲಾಯಿಸಿ]

ಮಲವಿಯಲ್ಲಿ ಒಬ್ಬ ಮನುಷ್ಯ ಪಾರಂಪರಿಕ ಸಂಗೀತ ವಾದ್ಯವನ್ನು ನುಡಿಸುತ್ತಿರುವುದು.

"ಮಲವಿ" ಎಂಬ ಹೆಸರು ಮರವಿಯಿಂದ ಬಂದಿದೆ, ಕ್ರಿ.ಶ.1400 ರ ಸುಮಾರಿಗೆ ದಕ್ಷಿಣ ಕಾಂಗೊದಿಂದ ಬಂಟು ಜನಗಳು ವಲಸೆ ಬಂದರು. ಉತ್ತರದ ಮಲವಿ ಸರೋವರವನ್ನು ತಲುಪಿದ ನಂತರ, ತಂಡವು ವಿಭಾಗವಾಯಿತು, ಒಂದು ಗುಂಪು ಸರೋವರದ ಪಶ್ಚಿಮ ದಡದ ದಕ್ಷಿಣಕ್ಕೆ ಚಲಿಸುತ್ತಾಚೆವ ಎಂಬ ಗುಡ್ಡಗಾಡು ಜನಾಂಗದವರಾದರು, ಇಂದಿನ ನ್ಯಾಂಜ ಬುಡಕಟ್ಟಿನ ಪೂರ್ವಜರ ಒಂದು ಗುಂಪು ಮಲವಿಯ ದಕ್ಷಿಣ ವಿಭಾಗದ ಸರೋವರದ ಪೂರ್ವ ಭಾಗಕ್ಕೆ ನಡೆದರು.

ಗುಡ್ಡಗಾಡಿನವರ ಗುಂಪು ಘರ್ಷಣೆ ಹಾಗೂ ನಿರಂತರ ವಲಸೆಯು, 20 ನೇ ಶತಮಾನದ ಉದಯದವರೆಗೂ ಅಪೂರ್ವ ಮತ್ತು ಹೊಂದಿಕೊಳ್ಳುವ ಸ್ವಭಾವದ ಮಲವಿಗಳ ಸಮಾಜದ ನಿರ್ಮಾಣವನ್ನು ತಡೆಗಟ್ಟಿತು. ಕಳೆದ ಶತಮಾನದ ನಂತರ, ಜನಾಂಗೀಯ ಮತಭೇದವು ಒಂದು ಅಂಶದವರೆಗೆ ಕಡಿಮೆಯಾಗಿದೆ, ಅಲ್ಲಿ ಗಮನಾರ್ಹವಾದ ಒಳ-ಜನಾಂಗೀಯ ಮತಭೇದಗಳಿಲ್ಲ, ಆದರೆ ವಲಯದ ವಿಭಾಗಗಳು ಇನ್ನೂ ಆಗುತ್ತಲಿವೆ. ಸಾಮಾನ್ಯವಾಗಿ ಪೂರ್ವಾಚಾರಪ್ರಿಯರು ಮತ್ತು ಪಾರಂಪರಿಕ ಅಹಿಂಸಾವಾದಿಗಳಾದ ಒಂದು ಪ್ರಬಲವಾದ ಗ್ರಾಮೀಣ ಜನಗಳ ಸುತ್ತ ಮಲವಿ ರಾಷ್ಟ್ರೀಯತೆಯ ಭಾವನೆಯು ವಿರ್ಮಾಣವಾಗುತ್ತಲಿದೆ.[೯]

ಮಲವಿ ಧ್ವಜವು ಕಪ್ಪು, ಕೆಂಪು ಮತ್ತು ಹಸಿರು ಬಣ್ಣದ ಮೂರು ಸಮನಾದ ಸಮತಲದ ಪಟ್ಟಿಗಳಿಂದ ಮಾಡಲ್ಪಟ್ಟಿದೆ, ಜೊತೆಗೆ ಉದಯಿಸುತ್ತಿರುವ ಕೆಂಪು ಸೂರ್ಯನನ್ನು ಕಪ್ಪು ಪಟ್ಟಿಯ ಮಧ್ಯದ ಮೇಲಿರಿಸಲಾಗಿದೆ. ಕಪ್ಪು ಪಟ್ಟಿಯು ಆಫ್ರಿಕಾದ ಜನತೆಯನ್ನು ಪ್ರತಿನಿಧಿಸುತ್ತದೆ, ಕೆಂಪು ಆಫ್ರಿಕಾದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರ ರಕ್ತವನ್ನು ನಿರೂಪಿಸುತ್ತದೆ, ಹಸಿರು ಮಲವಿಯ ನಿತ್ಯಹರಿದ್ವರ್ಣದ ಪ್ರಕೃತಿಯನ್ನು ಬಿಂಬಿಸುತ್ತದೆ ಹಾಗೂ ಉದಯಿಸುತ್ತಿರುವ ಸೂರ್ಯ ಸ್ವಾತಂತ್ರ್ಯದ ಮುಂಬೆಳಗು ಮತ್ತು ಆಫ್ರಿಕಾಕ್ಕೆ ಭರವಸೆಯನ್ನು ಚಿತ್ರಿಸುತ್ತದೆ.[೧]

ಮಲವಿಯ ಸಂಸ್ಕೃತಿಯ ಮುಖ್ಯ ಭಾಗ ಅದರ ನೃತ್ಯಗಳು, ಮತ್ತು ಸರ್ಕಾರದಿಂದ ನವೆಂಬರ್ 1987 ರಲ್ಲಿ ರಾಷ್ಟ್ರೀಯ ನೃತ್ಯ ತಂಡವು(ಹಿಂದೆ ಕ್ವಛ ಸಾಂಸ್ಕೃತಿಕ ತಂಡ) ಪ್ರಾರಂಭವಾಯಿತು.[೨೫] ಪಾರಂಪರಿಕ ಸಂಗೀತ ಹಾಗೂ ನೃತ್ಯಗಳನ್ನು ದೀಕ್ಷಾ ಸಂಸ್ಕಾರಗಳು, ಶಾಸ್ತ್ರ ವಿಧಿಗಳು, ವಿವಾಹ ಸಂದರ್ಭಗಳು ಮತ್ತು ಆಚರಣೆಗಳಲ್ಲಿ ಕಾಣಬಹುದು. ಬ್ರಿಟಿಷ್ ವಸಾಹತು ಆಡಳಿತ ಕಾಲದಲ್ಲಿ ಪರಿಚಯಿಸಲ್ಪಟ್ಟ ಫುಟ್ಬಾಲ್ ಮಲವಿಯ ಅತ್ಯಂತ ಸಾಮಾನ್ಯ ಕ್ರೀಡೆ. ಬ್ಯಾಸ್ಕೆಟ್ ಬಾಲ್ ಸಹ ಜನಪ್ರಿಯತೆಯನ್ನು ಗಳಿಸಲಾರಂಭಿಸಿದೆ.

ಮಲವಿಯ ಮೂಲ ನಿವಾಸಿ ಬುಡಕಟ್ಟಿನವರು ಬೆತ್ತದ ಬುಟ್ಟಿ ಮಾಡುವ ಹಾಗೂ ಮುಖವಾಡ ಕೆತ್ತನೆಯ ಒಂದು ಶ್ರೀಮಂತ ಪರಂಪರೆಯನ್ನು ಹೊಂದಿದ್ದಾರೆ, ಹಾಗೂ ಈ ವಸ್ತುಗಳಲ್ಲಿ ಕೆಲವನ್ನು ಇಂದಿಗೂ ಮೂಲನಿವಾಸಿಗಳಿಂದ ಆಚರಿಸಲ್ಪಡುವ ಪಾರಂಪರಿಕ ಸಮಾರಂಭಗಳಲ್ಲಿ ಉಪಯೋಗಿಸುತ್ತಾರೆ. ಮರದ ಕೆತ್ತನೆ ಮತ್ತು ತೈಲ ವರ್ಣ ಚಿತ್ರಗಳೂ ಸಹ ಅನೇಕ ನಗರ ಕೇಂದ್ರಗಳಲ್ಲಿ ಜನಪ್ರಿಯವಾಗಿದೆ, ಇವುಗಳಲ್ಲಿ ತಯಾರಿಸಲ್ಪಟ್ಟ ಹೆಚ್ಚಿನ ವಸ್ತುಗಳು ಪ್ರವಾಸಿಗಳಿಗೆ ಮಾರಾಟವಾಗುತ್ತವೆ. ಕವಿ ಜಾಕ್ ಮಪಂಜೆ, ಐತಿಹಾಸಿಕ ಮತ್ತು ಕಲ್ಪನಾ ಕಥೆಗಾರ ಪೌಲ್ ಜಿಲೆಜ, ಮತ್ತು ಲೇಖಕರಾದ ಲೆಗ್ಸನ್ ಕಯಿರ, ಫಲಿಕ್ಸ್ ಮಂಥಾಲಿ, ಫ್ರಾಂಕ್ ಚಿಪಸೂಲ ಮತ್ತು ಡೇವಿಡ್ ರುಬಾದಿರಿ ರವರನ್ನು ಒಳಗೊಂಡಂತೆ ಮಲವಿಯಿಂದ ಅನೇಕ ಅಂತರಾಷ್ಟ್ರೀಯ ಖ್ಯಾತಿವೆತ್ತ ಸಾಹಿತ್ಯಿಕ ವ್ಯಕ್ತಿಗಳಿದ್ದಾರೆ.[೩೬]

ಅಂತರಾಷ್ಟ್ರೀಯ ಶ್ರೇಣೀಕರಣ[ಬದಲಾಯಿಸಿ]

ಸಂಘಟನೆ ಸಮೀಕ್ಷೆ ಶ್ರೇಯಾಂಕ
ಇನ್‌ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಆಂಡ್ ಪೀಸ್ [45] ಗ್ಲೋಬಲ್ ಪೀಸ್ ಇಂಡೆಕ್ಸ್[47] 144ರಲ್ಲಿ 45
ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಂ ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್ 180ರಲ್ಲಿ 151
ಟ್ರಾನ್ಸ್ಪರೆನ್ಸಿ ಇಂಟರ್‌ನ್ಯಾಷನಲ್ ಕರಪ್ಷನ್ ಪರ್ಸೆಪ್ಷನ್ಸ್ ಇಂಡೆಕ್ಸ್ 180ರಲ್ಲಿ 151
ವಿಶ್ವ ಆರ್ಥಿಕ ಪ್ರತಿಷ್ಠಾನ ಗ್ಲೋಬಲ್ ಕಂಪಿಟೆಟಿವ್ನೆಸ್ ರಿಪೋರ್ಟ 180ರಲ್ಲಿ 151

ಇವನ್ನೂ ಗಮನಿಸಿ[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

 1. ೧.೦ ೧.೧ Berry, Bruce (February 6, 2005). "Malawi". Flags of the World Website. Flags of the World. Archived from the original on 2010-08-21. Retrieved 2008-08-23.
 2. "Malawi National Anthem Lyrics". National Anthem Lyrics. Lyrics on Demand. Retrieved 2008-08-24.
 3. ೩.೦ ೩.೧ ೩.೨ ೩.೩ ೩.೪ ೩.೫ ೩.೬ ಕ್ಯುಟರ್, ಆಫ್ರಿಕ 2006 , ಪುಟ. 142
 4. ೪.೦ ೪.೧ ೪.೨ ೪.೩ "Country profile: Malawi". BBC News Online. BBC. March 13, 2008. Retrieved 2008-08-17.
 5. ೫.೦ ೫.೧ ೫.೨ Benson, Todd. "Chapter 1: An Introduction" (PDF). Malawi: An Atlas of Social Statistics. National Statistical Office, Government of Malawi. p. 2. Retrieved 2008-08-24.
 6. ೬.೦ ೬.೧ {{cite web|url=http://www.imf.org/external/pubs/ft/weo/2009/02/weodata/weorept.aspx?sy=2006&ey=2009&scsm=1&ssd=1&sort=country&ds=.&br=1&c=676&s=NGDPD%2CNGDPDPC%2CPPPGDP%2CPPPPC%2CLP&grp=0&a=&pr.x=41&pr.y=11 |title=Malawi|publisher=International Monetary Fund|accessdate=2009-10-01}}
 7. "2008 Statistical Update: Malawi". United Nations Development Programme. Archived from the original on 2009-02-27. Retrieved 2009-04-19.
 8. ೮.೦ ೮.೧ ೮.೨ "Country Brief - Malawi". The World Bank. September 2008. Archived from the original on 2014-08-05. Retrieved 2009-01-03.
 9. ೯.೦ ೯.೧ ೯.೨ ೯.೩ ೯.೪ ೯.೫ ೯.೬ "Background Note: Malawi". Bureau of African Affairs. U.S. Department of State. 2008. Retrieved 2008-08-24. {{cite web}}: Unknown parameter |month= ignored (help)
 10. ಡೇವಿಡ್ಸನ್, ಇತಿಹಾಸದಲ್ಲಿ ಆಫ್ರಿಕ , ಪುಟ 164-165
 11. ಟರ್ನರ್, ದ ಸ್ಟೇಟಮನ್ಸ್ ಇಯರ್ ಬುಕ್ , ಪುಟ.821
 12. ೧೨.೦ ೧೨.೧ ಮರ್ಫಿ, ಸೆಂಟ್ರಲ್ ಆಫ್ರಿಕ , ಪುಟ xxvii
 13. ರೀಡರ್, ಆಫ್ರಿಕ , ಪುಟ 579
 14. ಮರ್ಫಿ, ಸೆಂಟ್ರಲ್ ಆಫ್ರಿಕ , ಪುಟ 28
 15. ಮರ್ಫಿ, ಸೆಂಟ್ರಲ್ ಆಫ್ರಿಕ , ಪುಟ li
 16. ೧೬.೦ ೧೬.೧ ೧೬.೨ ಕ್ಯುಟರ್, ಆಫ್ರಿಕ 2006 , ಪುಟ 143
 17. ಮೆರೆಡಿತ್, ದ ಫೇಸ್ ಆಫ್ ಆಫ್ರಿಕ , ಪುಟ 285
 18. ಮೆರೆಡಿತ್, ದ ಫೇಸ್ ಆಫ್ ಆಫ್ರಿಕ , ಪುಟ 380
 19. "Malawi president wins re-election". BBC News. May 22, 2009. Retrieved 2009-08-06.
 20. ೨೦.೦೦ ೨೦.೦೧ ೨೦.೦೨ ೨೦.೦೩ ೨೦.೦೪ ೨೦.೦೫ ೨೦.೦೬ ೨೦.೦೭ ೨೦.೦೮ ೨೦.೦೯ ೨೦.೧೦ ೨೦.೧೧ "Malawi". The World Factbook. CIA. Archived from the original on 2018-12-24. Retrieved 2010-02-06.
 21. ೨೧.೦ ೨೧.೧ ೨೧.೨ ೨೧.೩ ೨೧.೪ ಡಿಕೊವಿಕ್, ಆಫ್ರಿಕ 2008 , ಪುಟ 278
 22. "Ibrahim Index of African Governance". Mo Ibrahim Foundation. Archived from the original on 2009-07-28. Retrieved 2009-07-17.
 23. ಟರ್ನರ್, ದ ಸ್ಟೇಟಮನ್ಸ್ ಇಯರ್ ಬುಕ್ , ಪುಟ.822
 24. Douglas, John (Summer 1998). "Malawi: The Lake of Stars". Travel Africa (4). Archived from the original on 2009-01-14. Retrieved 2008-08-22.
 25. ೨೫.೦ ೨೫.೧ ಟರ್ನರ್, ದ ಸ್ಟೇಟಮನ್ಸ್ ಇಯರ್ ಬುಕ್ , ಪುಟ.824
 26. Banda, Mabvuto (April 1, 2009). "Malawi economy grew by around 9.7 pct in 2008: IMF". Reuters Africa. Archived from the original on 2011-07-17. Retrieved 2009-04-07.
 27. ೨೭.೦ ೨೭.೧ ೨೭.೨ "Malawi releases the 2008 MDGs Report". United Nations Development Programme Malawi. December 23, 2008. Retrieved 2009-01-03.
 28. Chimwala, Marcel (October 10, 2008). "Malawi's ethanol-fuel tests show promise". Engineering News. Retrieved 2009-01-03.
 29. Dugger, Celia W. (December 2, 2007). "Ending Famine, Simply by Ignoring the Experts". New York Times. Retrieved 2008-08-05.
 30. Luscombe, Belinda (August 6, 2006). "Madonna Finds a Cause". Time. Archived from the original on 2013-08-23. Retrieved 2008-10-24.
 31. Hutton, Punch (2007). "Raising Malawi". Vanity Fair. Retrieved 2008-10-24. {{cite journal}}: Unknown parameter |month= ignored (help)
 32. "Malawi". NICI in Africa. Economic Commission for Africa. Archived from the original on 2009-04-10. Retrieved 2008-11-06.
 33. "Languages of Malawi". Ethnologue. SIL International. Retrieved 2008-11-21.
 34. "Malawi". International Religious Freedom Report 2007. U.S. Department of State. 2007-09-14. Retrieved 2008-12-18.
 35. "Malawi". Bureau of International Labor Affairs, US Dept. of Labor. Archived from the original on 2008-10-06. Retrieved 2008-10-06.
 36. ಗಾಲ್, ವರ್ಲ್ಡಮಾರ್ಕ್ ಎನ್ಸೈಕ್ಲೊಪೀಡಿಯಾ ಆಫ್ ಕಲ್ಚರ್ಸ್ ಮತ್ತು ಡೈಲಿ ಲೈಫ್ , ಪುಟಗಳು 101-102

ಆಕರಗಳು[ಬದಲಾಯಿಸಿ]

 • Cutter, Charles H. (2006). Africa 2006 (41st ed.). Harpers Ferry, WV: Stryker-Post Publications. ISBN 1887985727.
 • Davidson, Basil (1991). Africa in History: Themes and Outlines (Revised and Expanded ed.). New York, NY: Collier Books, MacMillan Publishing Company. ISBN 0020427913.
 • Dickovick, J. Tyler (2008). Africa 2008 (43rd ed.). Harpers Ferry, WV: Stryker-Post Publications. ISBN 9781887985901.
 • Gall, Timothy L. (ed.) (1998). Worldmark Encyclopedia of Cultures and Daily Life. Vol. Volume 1 - Africa. Cleveland, OH: Eastword Publications Development Inc. ISBN 0787605530. {{cite book}}: |author= has generic name (help); |volume= has extra text (help)
 • Meredith, Martin (2005). The Fate of Africa - From the Hopes of Freedom to the Heart of Despair: A History of 50 Years of Independence. New York, NY: Public Affairs. ISBN 1586482467.
 • Murphy, Philip (editor) (2005). Central Africa: Closer Association 1945-1958. London, UK: The Stationary Office. ISBN 0112905862. {{cite book}}: |author= has generic name (help)
 • Reader, John (1999). Africa: A Biography of the Continent (First Vintage Books ed.). New York, NY: Vintage Books. ISBN 067973869X.
 • Turner, Barry (ed.) (2008). The Statesman's Yearbook 2009: The Politics, Cultures and Economies of the World. Macmillan Publishers Ltd. ISBN 1403992789. {{cite book}}: |author= has generic name (help)

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಮಲಾವಿ&oldid=1215165" ಇಂದ ಪಡೆಯಲ್ಪಟ್ಟಿದೆ