ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-archive೭

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ:

  • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

  • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
  • ಅಯಾ ಲೇಖನದ ಚರ್ಚೆ ಪುಟದಲ್ಲಿ ಲೇಖನಕ್ಕೆ ಸೇರಿಸಬೇಕಿರುವ ಮಾಹಿತಿಯ ಬಗ್ಗೆ, ಅದರ ಮೇಲಾಗಬೇಕಿರುವ ಕೆಲಸದ ಬಗ್ಗೆ ಬರೆದಿಡಲು - {{ಮಾಡಬೇಕಾದ ಕೆಲಸಗಳು}} ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.
  • ಈಗಾಗಲೇ ಇರುವ ಟೆಂಪ್ಲೇಟುಗಳನ್ನು ಸಾಧ್ಯವಾದಷ್ಟೂ ಬಳಸಿ. ಹೊಸ ಟೆಂಪ್ಲೇಟುಗಳನ್ನು ಸೇರಿಸುವ ಮುನ್ನ ಒಮ್ಮೆ ಹುಡುಕಿ ನೋಡಿ.
  • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
  • ಚಿತ್ರಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಕನ್ನಡ ವಿಕಿಪೀಡಿಯ ಪಾಲಿಸಿಗಳನ್ನು (ಕಾರ್ಯನೀತಿಗಳನ್ನು)‌ ರೂಪಿಸಬೇಕಿದೆ. ಆಂಗ್ಲ ವಿಕಿಪೀಡಿಯದಿಂದ ಚಿತ್ರಗಳಿಗಾಗಿ ಇರುವ ಲೈಸೆನ್ಸುಗಳ ಟೆಂಪ್ಲೇಟುಗಳನ್ನು ಕನ್ನಡ ವಿಕಿಪೀಡಿಯದಲ್ಲಿ ನಕಲು ಮಾಡಬೇಕಿದೆ. ಆಸಕ್ತಿಯುಳ್ಳವರು ಮುಂದೆ ಬಂದು ಪಾಲ್ಗೊಳ್ಳಿ.

justify

ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ: | | | | | | | | | ೧೦ | ೧೧ | ೧೨|೧೩ | ೧೩ | ೧೪ |೧೫ | ೧೬ | ೨೦ | ೨೧

ಇತರ ಚರ್ಚೆ: | | |

ವಿಕಿಪೀಡಿಯ:ಸಮ್ಮಿಲನ/೨೨ - ಮಾರ್ಚ್೦೭, ೨೦೧೬[ಬದಲಾಯಿಸಿ]

ಕನ್ನಡ ವಿಕಿಪೀಡಿಯಕ್ಕೆ ಹದಿಮೂರು ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯವು ಹದಿಮೂರನೆಯ ವರ್ಷಾಚರಣೆಯನ್ನು ನಡೆಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ನಂತರ ನಡೆಯಬೇಕಾದ ವಿಕಿಸಂಬಂಧಿತ ಕೆಲಸಗಳ ರೂಪುರೇಷೆಗಳನ್ನು ಚರ್ಚಿಸಲು ಕನ್ನಡ ವಿಕಿಪೀಡಿಯ ಸಮುದಾಯವು ಮಾರ್ಚ್ ೦೭, ೨೦೧೬ರಂದು ಐ.ಆರ್.ಸಿ. ಮೂಲಕ ಆನ್‍ಲೈನ್ ಸಭೆ ಸೇರುತ್ತಿದೆ. ಇದರ ಜೊತೆಗೆ ವಿಕಿಪೀಡಿಯ ಸಂಬಂಧಿತ ಇತರ ವಿಷಯಗಳನ್ನೂ ಚರ್ಚಿಸಬಹುದು. ಸಮುದಾಯ ಭಾಗವಹಿಸಲು ಕೋರಿಕೆ. ಸಮ್ಮಿಲನದ ಪುಟ ಇಲ್ಲಿದೆ: ವಿಕಿಪೀಡಿಯ:ಸಮ್ಮಿಲನ/೨೨

ಎರಡನೇ 'ಮೆಕ್ಯಾನಿಕಲ್ ಇಂಜಿನಿಯರಿಂಗ್ ಸಂಪಾದನೋತ್ಸವ' ೨೦೧೬[ಬದಲಾಯಿಸಿ]

ಕನ್ನಡ ವಿಕಿಪೀಡಿಯದ ಹದಿಮೂರನೇ ವರ್ಷಾಚರಣೆಯ ಅಂಗವಾಗಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಲೇಖನಗಳಿಗೆ ಸಂಬಂಧಿಸಿದಂತೆ ಸಂಪಾದನೋತ್ಸವ ಒಂದನ್ನು ಶಿವಮೊಗ್ಗ ಜಿಲ್ಲೆಯ 'ಸಾಗರ'ದಲ್ಲಿ ನಡೆಸಲಾಗಿತ್ತು. ಅದೇ ವಿಷಯಕ್ಕೆ ಸಂಬಂಧಿಸಿದಂತೆ ಎರಡನೇ ಸಂಪಾದನೋತ್ಸವನ್ನು ೨೦೧೬ ಮಾರ್ಚ್ ೧೨,೧೩ ನೇ ದಿನಾಂಕಗಳಂದು ನಡೆಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದು ಯಾವುದೇ ನಿರ್ದಿಷ್ಟ ಊರು, ಪ್ರದೇಶಗಳಲ್ಲಿ ಮಾತ್ರ ನಡೆಯದೇ ಕನ್ನಡ ವಿಕಿ ಸಮುದಾಯ ಎಲ್ಲಿಂದ ಬೇಕಾದರೂ ಭಾಗವಹಿಸಬಹುದಾದ ಆನ್ ಲೈನ್ ಸಂಪಾದನೋತ್ಸವವಾಗಿದೆ. ಮೆಕ್ಯಾನಿಕಲ್ ಎಂಜಿನಿಯರಿಂಗ್‍ಗೆ ಸಂಬಂಧಿಸಿದ ಯೋಜನೆಯ ಪುಟದಲ್ಲಿ ವಿಷಯಗಳನ್ನು ಪಟ್ಟಿಮಾಡಲಾಗಿದೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಡಿಯಲ್ಲೇ ಕೆಲವು ಜನರಲ್ ವಿಷಯಗಳೂ ಇರುವುದರಿಂದ ಮೆಕ್ಯಾನಿಕಲ್ ಹಿನ್ನೆಲೆಯಿಲ್ಲದವರೂ ಕೂಡ ಭಾಗವಹಿಸಬಹುದು. ಯೋಜನೆಯ ಪಟ್ಟಿಯಲ್ಲಿರುವ ವಿಷಯಗಳಲ್ಲದೇ ಸಂಬಂಧಿತ ಬೇರೆ ವಿಷಯಗಳ ಪುಟಗಳನ್ನೂ ರಚಿಸಬಹುದು. ಹೆಚ್ಚಿನ ವಿವರಗಳೊಂದಿಗೆ ಸಂಪಾದನೋತ್ಸವದ ಪುಟ ಇಲ್ಲಿದೆ: ಎರಡನೇ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಂಪಾದನೋತ್ಸವ 2016. ವಿಕಿಸಮುದಾಯದ ಆಸಕ್ತ ಸದಸ್ಯರು ಸಂಪಾದನೋತ್ಸವಕ್ಕೆ ನೋಂದಾಯಿಸಿಕೊಂಡು ಪಾಲ್ಗೊಳ್ಳಬೇಕಾಗಿ ಕೋರಿಕೆ. --Vikas Hegde (ಚರ್ಚೆ) ೧೨:೫೯, ೨೯ ಫೆಬ್ರುವರಿ ೨೦೧೬ (UTC)

Open call for Individual Engagement Grants[ಬದಲಾಯಿಸಿ]

My apologies for posting this message in English. Please help translate it if you can.

Greetings! The Individual Engagement Grants program is accepting proposals until September 29th to fund new tools, community-building processes, and other experimental ideas that enhance the work of Wikimedia volunteers. Whether you need a small or large amount of funds (up to $30,000 USD), Individual Engagement Grants can support you and your team’s project development time in addition to project expenses such as materials, travel, and rental space.

Thanks,

I JethroBT (WMF), Community Resources, Wikimedia Foundation. ೨೦:೫೨, ೪ ಸೆಪ್ಟೆಂಬರ್ ೨೦೧೫ (UTC)

(Opt-out Instructions) This message was sent by I JethroBT (WMF) (talk) through MediaWiki message delivery.

ಕನ್ನಡ ವಿಕಿಪೀಡಿಯ ೧೩ನೆಯ ವಾರ್ಷಿಕೋತ್ಸವ ಆಚರಿಸುವ ಬಗ್ಗೆ[ಬದಲಾಯಿಸಿ]

ಕನ್ನಡ ವಿಕಿಪೀಡಿಯ ಜೂನ್ ೧೨, ೨೦೦೩ರಲ್ಲಿ ಆರಂಭವಾಯಿತು. ಈಗ ಕನ್ನಡ ವಿಕಿಪೀಡಿಯಾಕ್ಕೆ ೧೩ನೆಯ ವರ್ಷಗಳು ತುಂಬುತ್ತಿವೆ. ಈ ನೆಲೆಯಲ್ಲಿ ೧೩ನೆಯ ವರ್ಷಾಚರಣೆಯನ್ನು ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯ ಆಚರಿಸುವ ಯೋಚನೆಯಲ್ಲಿದೆ. ಇದಕ್ಕೆ ತಮ್ಮ ಸಮ್ಮತಿ, ಅಭಿಪ್ರಾಯಗಳು, ಸಲಹೆಗಳನ್ನು ನೀಡಬೇಕಾಗಿ ಕೋರಿಕೆ. ಈ ಕಾರ್ಯಕ್ರಮವನ್ನು ಹೇಗೆ ಮತ್ತು ಯಾವ ರೀತಿ ಆಚರಿಸಬಹುದು ಎಂಬುದಾಗಿಯೂ ಸಲಹೆ ನೀಡಬೇಕಾಗಿ ವಿನಂತಿ. ನಿಮ್ಮ ಸಲಹೆಗಳನ್ನು ಈ ಪುಟದಲ್ಲಿ ದಾಖಲಿಸಬಹುದು.--Vishwanatha Badikana (ಚರ್ಚೆ) ೦೭:೪

  1. (wiki source)ನ ಯೋಜನೆಯನ್ನು ಎತ್ತಿಕೊಳ್ಳಬೇಕು--Preetham Kundar (ಚರ್ಚೆ) ೦೮:೩೩, ೧೩ ಸೆಪ್ಟೆಂಬರ್ ೨೦೧೫ (UTC)
  2. ಮನಶ್ಶಾಸ್ತ್ರ, ಆಧ್ಯಾತ್ಮ ಕುರಿತಾದ ಲೇಖನಗಳನ್ನು ಹಾಕುತ್ತೇನೆ.--SHREEPRADH B (ಚರ್ಚೆ) ೧೩:೨೩, ೧೩ ಸೆಪ್ಟೆಂಬರ್ ೨೦೧೫ (UTC)
  3. ದಕ್ಷಿಣ ಭಾರತದ ಪಕ್ಷಿಗಳ ಪಟ್ಟಿ ಯನ್ನು ಪೂರ್ಣಗೊಳಿಸಬೇಕು.--Vinay bhat (ಚರ್ಚೆ) ೧೩:೨೫, ೧೩ ಸೆಪ್ಟೆಂಬರ್ ೨೦೧೫ (UTC)
  4. ಇದು ಒಂದು ಒಳ್ಳೆಯ ಸಲಹೆಯಾಗಿದ್ದು, ಇದನ್ನು ಮುಂದುವರಿಸಬಹುದೆಂದು ನನ್ನ ಅಭಿಪ್ರಯವಾಗಿದೆ.--Ashwillobo (ಚರ್ಚೆ) ೧೧:೩೧, ೧೩ ಸೆಪ್ಟೆಂಬರ್ ೨೦೧೫ (UTC)
  5. ವಿಕಿಪೀಡಿಯಾವನ್ನು ಹೆಚ್ಚು ಜನರ ಬಳಿ ಕೊಂಡೊಯ್ಯುವ ನಿಟ್ಟಿನಲ್ಲಿ ಇದು ಓಳ್ಳೆಯ ಹೆಜ್ಜೆ. ಈ ಯೋಜನೆ ಕಾರ್ಯಗತಗೊಳಿಸಬೇಕು.--chetan (ಚರ್ಚೆ) ೦೫:೩೮, ೧೪ ಸೆಪ್ಟೆಂಬರ್ ೨೦೧೫ (UTC)
  6. ವಿಜ್ಞಾನ ತಂತ್ರಜ್ಞಾನದಲ್ಲಿ ಉತ್ತಮ ದೈನಂದಿನ ಬಳಕೆಯಲ್ಲಿ ಅನುಕೂಲವಾಗುವಂತೆ ಲೇಖನಗಳನ್ನು ತಯಾರಿಸೋಣ.ವಿದ್ಯಾಧರ ಚಿಪ್ಳಿ (ಚರ್ಚೆ) ೦೮:೦೩, ೧೫ ಸೆಪ್ಟೆಂಬರ್ ೨೦೧೫ (UTC).ಆವು

ಕನ್ನಡ ವಿಕೀಪೀಡಿಯಾದ ೧೩ನೇ ವಾರ್ಷಿಕೋತ್ಸವದ ಬಗ್ಗೆ ನಡೆದ ಸಮ್ಮಿಲನದ ನಂತರ ಆಗಿರುವ ಬೆಳವಣಿಗೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸಮ್ಮಿಲನದಲ್ಲಿ ಮೂಡಿಬಂದ ಯಾವುದಾದರು ಸಲಹೆಗಳು ಕಾರ್ಯಗತಕ್ಕೇ ಬಂದಿದೆಯೇ?--chetan (ಚರ್ಚೆ) ೧೩:೩೩, ೨೮ ಸೆಪ್ಟೆಂಬರ್ ೨೦೧೫ (UTC)

ಕನ್ನಡ ವಿಕಿಪೀಡಿಯ ೧೩ನೆಯ ವಾರ್ಷಿಕೋತ್ಸವ ಆಚರಣೆಯನ್ನು ನಡೆಸುವ ಬಗ್ಗೆ ನಿಮ್ಮ ಅಭಿಪ್ರಾಯಕ್ಕೆ ಕೋರಿಕೆ[ಬದಲಾಯಿಸಿ]

ಈ ಮೇಲಿನ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಮುದಾಯವು ಚಿಂತನೆ ನಡೆಸಿದೆ. ಆ ಪ್ರಕಾರ,

  1. ೧೩ನೆಯ ವಾರ್ಷಿಕೋತ್ಸವವನ್ನು ಯಾವ ದಿನಾಂಕದಂದು ನಡೆಸುವುದೆಂದು ಇಲ್ಲಿ ಚರ್ಚಿಸಬಹುದು.
  2. ಎಲ್ಲಿ ನಡೆಸುವುದೆಂದು ಚರ್ಚಿಸಬಹುದು.--Vishwanatha Badikana (ಚರ್ಚೆ) ೦೩:೧೯, ೧೬ ಅಕ್ಟೋಬರ್ ೨೦೧೫ (UTC)

ಮಂಗಳೂರಿನಲ್ಲಿ ನಡೆಸಬಹುದು[ಬದಲಾಯಿಸಿ]

--Vishwanatha Badikana (ಚರ್ಚೆ) ೧೫:೦೦, ೧೯ ಅಕ್ಟೋಬರ್ ೨೦೧೫ (UTC)

--Ananth subray (ಚರ್ಚೆ) ೧೦:೨೦,೨೭ ಅಕ್ಟೋಬರ್ ೨೦೧೫ (UTC)

--Gopala Krishna A (ಚರ್ಚೆ) ೦೮:೧೦, ೫ ನವೆಂಬರ್ ೨೦೧೫ (UTC)

--Bharathesha Alasandemajalu (ಚರ್ಚೆ) ೧೦:೧೧, ೬ ನವೆಂಬರ್ ೨೦೧೫ (UTC)

ಮೈಸೂರಿನಲ್ಲಿ ನಡೆಸಬಹುದು[ಬದಲಾಯಿಸಿ]

ಶಿವಮೊಗ್ಗದಲ್ಲಿ ನಡೆಸಬಹುದು[ಬದಲಾಯಿಸಿ]

ಬೆಂಗಳೂರಿನಲ್ಲಿ ನಡೆಸಬಹುದು[ಬದಲಾಯಿಸಿ]

  1. Preetham Kundar (ಚರ್ಚೆ) ೦೩:೫೧, ೬ ನವೆಂಬರ್ ೨೦೧೫ (UTC)

ಮೆಟಾದಲ್ಲಿ ಪಿಇಜಿ ಗ್ರಾಂಟ್ ಅರ್ಜಿ[ಬದಲಾಯಿಸಿ]

ಈ ಕಾರ್ಯಕ್ರಮ ಆಯೋಜಿಸಲು ನಾನು ಮೆಟಾದಲ್ಲಿ ಅರ್ಜಿ ಹಾಕಿದ್ದೇನೆ. ಈ ಕಾರ್ಯಕ್ರಮವನ್ನು ಫೆಬ್ರವರಿ ಮೊದಲನೆ/ಎರಡನೆ ವಾರದಲ್ಲಿ ನಡೆಸಲು ನಿಮ್ಮೆಲ್ಲರ ಅನುಮತಿಯನ್ನು ಕೋರುತ್ತಿದ್ದೇನೆ.

  • ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಾಲ್ಕು ಪೂರ್ವಭಾವಿ ಕಾರ್ಯಕ್ರಮಗಳನ್ನು ಸಾಗರ, ಮೈಸೂರು, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಆಯೋಜಿಸಲು ಯೋಜಿಸುತ್ತಿದ್ದೇವೆ.
  • ಈ ಕಾರ್ಯಕ್ರಮಕ್ಕೆ ಸುಮಾರು ರೂ. ೩,೧೧,೦೦=೦೦ ವೆಚ್ಚ ತಗಲಬಹುದೆಂದು ಅಂದಾಜಿಸಿಲಾಗಿದೆ

ದಯವಿಟ್ಟು ಈ ಪುಟದ ಕೊನೆಯಲ್ಲಿ ತಮ್ಮ ಅಭಿಪ್ರಾಯವನ್ನು ನಮೂದಿಸಬೇಕಾಗಿ ಕೋರಿಕೆ.--Vishwanatha Badikana (ಚರ್ಚೆ) ೧೫:೦೨, ೫ ನವೆಂಬರ್ ೨೦೧೫ (UTC)

೧೩ನೆಯ ವಾರ್ಷಿಕೋತ್ಸವದ ಪೂರ್ವಭಾವಿ ಕಾರ್ಯಾಗಾರ[ಬದಲಾಯಿಸಿ]

ಈಗಾಗಲೇ ತೀರ್ಮಾನಿಸಿರುವಂತೆ ೧೩ನೆಯ ವರ್ಷಾಚರಣೆಯ ಅಂಗವಾಗಿ ನಾಲ್ಕು ಕಾರ್ಯಾಗಾರಗಳನ್ನು ನಡೆಸುವ ಸ್ಥಳ, ದಿನಾಂಕಗಳನ್ನು ಈ ಕೆಳಗೆ ನೀಡಲಾಗಿದೆ.

ಮಂಗಳೂರು ಸಂಪಾದನೋತ್ಸವ[ಬದಲಾಯಿಸಿ]

ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜು ಆವರಣದಲ್ಲಿ ೩ ದಿನಗಳ ಕಾರ್ಯಾಗಾರವನ್ನು ದಿನಾಂಕ ೧೦, ೧೧, ೧೨ನೇ ಡಿಸೆಂಬರ್ ೨೦೧೫ರಂದು ನಡೆಸುವುದೆಂದು ತೀರ್ಮಾನಿಸಲಾಗಿದೆ. ಈ ಕಾರ್ಯಾಗಾರದಲ್ಲಿ ಕರಾವಳಿ_ಕರ್ನಾಟಕದ_ಲೇಖಕಿಯರು_ಮತ್ತು_ಸಾಧಕಿಯರು ಕುರಿತಂತೆ ಸಂಪಾದನೋತ್ಸವವನ್ನು ನಡೆಸಲಾಗುತ್ತದೆ.--Vishwanatha Badikana (ಚರ್ಚೆ) ೦೫:೨೭, ೨೨ ನವೆಂಬರ್ ೨೦೧೫ (UTC)

ಬೆಂಗಳೂರು ಸಂಪಾದನೋತ್ಸವ[ಬದಲಾಯಿಸಿ]

ಬೆಂಗಳೂರಿನಲ್ಲಿ ಸಂಪಾದನೋತ್ಸವ. ಡಿಸೆಂಬರ್ ೧೯ ಮತ್ತು ೨೦, ೨೦೧೫ರಂದು. ವಿವರಗಳು ಇಲ್ಲಿವೆ.--Pavanaja (ಚರ್ಚೆ) ೦೯:೫೯, ೨೫ ನವೆಂಬರ್ ೨೦೧೫ (UTC)

ಮೈಸೂರು ಸಂಪಾದನೋತ್ಸವ[ಬದಲಾಯಿಸಿ]

ಮೈಸೂರಿನ ಸಿ.ಪಿ.ಡಿ.ಪಿ.ಎಸ್., ಮಾನಸಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು - ೫೬೦೦೦೬ ಇಲ್ಲಿ ೩ ದಿನಗಳ ಕಾರ್ಯಾಗಾರವನ್ನು ದಿನಾಂಕ ೧೧, ೧೨ ಮತ್ತು ೧೩ನೇ ಜನವರಿ ೨೦೧೬ರಂದು ನಡೆಸುವುದೆಂದು ತೀರ್ಮಾನಿಸಲಾಗಿದೆ. ಈ ಕಾರ್ಯಾಗಾರದಲ್ಲಿ ಕನ್ನಡ ನಾಡು, ಕನ್ನಡ ಸಾಹಿತ್ಯ ಚರಿತ್ರೆ, ಭಾಷೆ, ವ್ಯಾಕರಣ, ಛಂದಸ್ಸು, ಶಾಸನ, ವಿಮರ್ಶೆ, ಜಾನಪದ ಇತ್ಯಾದಿ ಕ್ಷೇತ್ರಗಳನ್ನು ಆಧರಿಸಿ ಕನ್ನಡ ಸಾಹಿತ್ಯ ಚರಿತ್ರೆ ಬಗ್ಗೆ ಲೇಖನಗಳನ್ನು ತಯಾರಿಸುವ ಸಂಪಾದನೋತ್ಸವವನ್ನು ನಡೆಸಲಾಗುತ್ತದೆ. ಈ ಸಂಪಾದನೋತ್ಸವದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ೨೦ ಜನ ಕನ್ನಡ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಸಾಹಿತ್ಯಾಸಕ್ತರು ಈ ಸಂಪಾದನೋತ್ಸವದಲ್ಲಿ ಭಾಗವಹಿಸಬಹುದು. ಅನುಭವಿ ವಿಕಿಪೀಡಿಯನ್ನರು ಈ ಸಂಪಾದನೋತ್ಸವದಲ್ಲಿ ಭಾಗವಹಿಸಿದರೆ ಚೆನ್ನಾಗಿರುತ್ತದೆ. ಈ ಸಂಪಾದನೋತ್ಸದ ಬಗ್ಗೆ ವಿವರಗಳು ಇಲ್ಲಿವೆ. ----Vishwanatha Badikana (ಚರ್ಚೆ) ೧೭:೨೮, ೩೧ ಡಿಸೆಂಬರ್ ೨೦೧೫ (UTC)

ಸಾಗರ ಸಂಪಾದನೋತ್ಸವ[ಬದಲಾಯಿಸಿ]

ಕನ್ನಡ ವಿಕಿಪೀಡಿಯ ಹದಿಮೂರನೆ ವಾರ್ಷಿಕೋತ್ಸವ ನಡೆಸುವ ಪೂರ್ವಭಾವಿ ಯೋಜನೆಯಲ್ಲಿ ಸಾಗರದಲ್ಲಿ ಸಂಪಾದನೋತ್ಸವವನ್ನು ನಡೆಸುವುದೆಂದು ಸಮ್ಮಿಲನ/೧೯ರಂದು ಆಲೋಚಿಸಿ, ೩ ದಿನಗಳ ಕಾರ್ಯಾಗಾರವನ್ನು ದಿನಾಂಕ ೨೫, ೨೬ ಮತ್ತು ೨೭ನೇ ಜನವರಿ ೨೦೧೬ರಂದು ನಡೆಸುವುದೆಂದು ತೀರ್ಮಾನಿಸಲಾಗಿದೆ. ಈ ಕಾರ್ಯಾಗಾರದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‍ಗೆ ಸಂಬಂದಿಸಿದ ಲೇಖನಗಳನ್ನು ತಯಾರಿಸುವ ಸಂಪಾದನೋತ್ಸವವನ್ನು ನಡೆಸಲಾಗುತ್ತದೆ. ಅನುಭವಿ ವಿಕಿಪೀಡಿಯನ್ನರು ಈ ಸಂಪಾದನೋತ್ಸವದಲ್ಲಿ ಭಾಗವಹಿಸಿದರೆ ಚೆನ್ನಾಗಿರುತ್ತದೆ. ಈ ಸಂಪಾದನೋತ್ಸದಲ್ಲಿ ಪಾಲ್ಗೊಳ್ಳುವ ಬಗ್ಗೆ ಮತ್ತು ಸಂಪಾದನೋತ್ಸವದ ಬಗ್ಗೆ ಈ ಪುಟದಲ್ಲಿ ವಿವರಗಳು ಇಲ್ಲಿವೆ.--Vishwanatha Badikana (ಚರ್ಚೆ) ೦೮:೩೯, ೨ ಜನವರಿ ೨೦೧೬ (UTC)

ಆದರೆ ಈಗ ಮತ್ತೆ ಸಾಗರದಲ್ಲೇ ದಿನಾಂಕ ೨೫, ೨೬ ಮತ್ತು ೨೭ನೇ ಜನವರಿ ೨೦೧೬ರಂದು ಕಾರ್ಯಾಗಾರವನ್ನು ನಡೆಸುವುದೆಂದು ತೀರ್ಮಾನಿಸಲಾಗಿದೆ. ವಿದ್ಯಾಧರ ಚಿಪ್ಳಿ (ಚರ್ಚೆ) ೧೧:೦೬, ೧೫ ಜನವರಿ ೨೦೧೬ (UTC).
ಬದಲಾದ ಪುಟವನ್ನು ಇಲ್ಲಿ ವೀಕ್ಷಿಸಬಹುದು.--Vishwanatha Badikana (ಚರ್ಚೆ) ೧೧:೪೨, ೧೫ ಜನವರಿ ೨೦೧೬ (UTC)


New Wikipedia Library Database Access (September 2015)[ಬದಲಾಯಿಸಿ]

Hello Wikimedians!

The TWL OWL says sign up today!

The Wikipedia Library is announcing signups today for free, full-access accounts to published research as part of our Publisher Donation Program. You can sign up for new accounts and research materials from:

  • EBSCOHost - this is one of our largest access donations so far: access to a wide variety of academic, newspaper and magazine sources through their Academic Search Complete, Business Source Complete and MasterFILE Complete
  • Newspaperarchive.com - historical newspapers from the United States, Canada, UK and 20 other countries, and includes an Open Access "clipping" feature (1000 accounts)
  • IMF Elibary- a digital collection of the IMF's reports, studies and research on global economics and development (50 accounts)
  • Sabinet - one of the largest African digital publishers, based in South Africa, with a wide range of content in English and other European and African languages (10 accounts)
  • Numérique Premium - a French language social science and humanities ebook database, with topical collections on a wide range of topics (100)
  • Al Manhal - an Arabic and English database with a wide range of sources, largely focused on or published in the Middle East (60 accounts)
  • Jamalon - an Arabic book distributor, who is providing targeted book delivery to volunteers (50 editors)

Many other partnerships with accounts available are listed on our partners page, including expanded accounts for Elsevier ScienceDirect, British Medical Journal and Dynamed and additional accounts for Project MUSE, DeGruyter, Newspapers.com, Highbeam and HeinOnline. Do better research and help expand the use of high quality references across Wikipedia projects: sign up today!
--The Wikipedia Library Team 19:42, 16 September 2015 (UTC)

We need help! Help us coordinate Wikipedia Library's distribution of accounts, communication of access opportunities and more! Please join our team at our new coordinator signup.
This message was delivered via the Global Mass Message tool to The Wikipedia Library Global Delivery List.

ವಿಕಿಪೀಡಿಯ ಚರ್ಚೆ:ಸಮ್ಮಿಲನ/೧೯ - ಪ್ರವಾಸ ಭತ್ಯೆ ಚರ್ಚೆ[ಬದಲಾಯಿಸಿ]

ವಿಕಿಪೀಡಿಯ ಚರ್ಚೆ:ಸಮ್ಮಿಲನ/೧೯ ಯಲ್ಲಿ ಪ್ರಸ್ತಾಪಿಸಿರುವ ವಿಷಯವನ್ನು ಸಮುದಾಯದ ಮುಂದೆ ಇಡಲು, ಮತ್ತೆ ಇಲ್ಲಿ ಆ ವಿಷಯವನ್ನು ಸೇರಿಸುತ್ತಿದ್ದೇನೆ. ಸಮ್ಮಿಲನದಲ್ಲಿ ಭಾಗವಹಿಸಿದ ಇತರೆ ಜಿಲ್ಲೆಗಳ ವಿಕಿಪೀಡಿಯನ್ನರನ್ನು ಕಂಡು, ಮಾತನಾಡಿ ಮಾಹಿತಿ ವಿನಿಮಯ ಮಾಡಿಕೊಂಡದ್ದು ಸಂತಸದ ವಿಷಯವಾಗಿತ್ತು. ಅವರು ಶ್ರದ್ಧೆಯಿಂದ ಬೆಂಗಳೂರಿಗೆ ಬಂದು, ಸಮ್ಮಿಲನದಲ್ಲಿ ಭಾಗವಹಿಸಿದ್ದು ಕನ್ನಡ ವಿಕಿಪೀಡಿಯ ಸಮುದಾಯ ಬೆಳೆಯುತ್ತಿರುವುದರ ಸಂಕೇತವಾಗಿದೆ. ಬೇರೆ ಜಿಲ್ಲೆಗಳಿಂದ ಇಂತಹ ಕಾರ್ಯಕ್ರಮಕ್ಕೆ ಬಂದು ಹೋಗುವವರಿಗೆ ಕಾರ್ಯಕ್ರಮ ಆಯೋಜಿಸಿದ್ದ ಸಿ.‌ಐ.ಎಸ್‌ನ ಆಕ್ಸೆಸ್ ಟು ನಾಲೆಡ್ಜ್ ತಂಡ ಪ್ರವಾಸ ಭತ್ಯೆಯನ್ನು ನೀಡಿ ಪ್ರೋತ್ಸಾಹಿಸಬಹುದು. ಇದರ ಬಗ್ಗೆ ಎಲ್ಲೂ ಪ್ರಸ್ತಾಪಿಸದಿದ್ದದ್ದು ಕಂಡು ಈ ಚರ್ಚೆಯನ್ನು ಪ್ರಾರಂಭಿಸುತ್ತಿದ್ದೇನೆ. ಸಿ.‌ಐ.ಎಸ್ ಎ೨ಕೆ ಯ ಪ್ರಣಾಳಿಕೆಯಲ್ಲಿ ಸಮುದಾಯ ಸಹಭಾಗಿತ್ವ, ಸಮ್ಮಿಲನಗಳಿಗೆ ಬೇಕಿರುವ ಸಂಪನ್ಮೂಲಗಳ ಬಳಕೆಗೆಂದೇ ಹಣವನ್ನು ಮೀಸಲಿರಿಸಲಾಗಿದೆ ಇದನ್ನು ಸಮುದಾಯದ ಎಲ್ಲರೂ ಸದ್ವಿನಿಯೋಗ ಮಾಡಿಕೊಳ್ಳಲು ಮುಂದೆ ಬರಬೇಕು. ಜೊತೆಗೆ ಈಗಾಗಲೇ ಈ ರೀತಿ ಭತ್ಯೆಗಳನ್ನು ಸಿ.‌ಐ.ಎಸ್ ಎ೨ಕೆ ತಂಡ ನೀಡುತ್ತಿದ್ದಲ್ಲಿ ಅದನ್ನು ಆಯಾ ಕಾರ್ಯಕ್ರಮ ಪಟ್ಟಿಗಳಲ್ಲಿ ಸಾರ್ವಜನಿಕವಾಗಿ ಪ್ರಕಟಿಸಬೇಕು. ಸಂಬಂಧಪಟ್ಟವರು ಇದರತ್ತ ಗಮನ ಹರಿಸುವುದು. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೦೮:೨೪, ೨೦ ಸೆಪ್ಟೆಂಬರ್ ೨೦೧೫ (UTC)

"ಸಿ.‌ಐ.ಎಸ್ ಎ೨ಕೆ ಯ ಪ್ರಣಾಳಿಕೆಯಲ್ಲಿ ಸಮುದಾಯ ಸಹಭಾಗಿತ್ವ, ಸಮ್ಮಿಲನಗಳಿಗೆ ಬೇಕಿರುವ ಸಂಪನ್ಮೂಲಗಳ ಬಳಕೆಗೆಂದೇ ಹಣವನ್ನು ಮೀಸಲಿರಿಸಲಾಗಿದೆ ಇದನ್ನು ಸಮುದಾಯದ ಎಲ್ಲರೂ ಸದ್ವಿನಿಯೋಗ ಮಾಡಿಕೊಳ್ಳಲು ಮುಂದೆ ಬರಬೇಕು. ಜೊತೆಗೆ ಈಗಾಗಲೇ ಈ ರೀತಿ ಭತ್ಯೆಗಳನ್ನು ಸಿ.‌ಐ.ಎಸ್ ಎ೨ಕೆ ತಂಡ ನೀಡುತ್ತಿದ್ದಲ್ಲಿ ಅದನ್ನು ಆಯಾ ಕಾರ್ಯಕ್ರಮ ಪಟ್ಟಿಗಳಲ್ಲಿ ಸಾರ್ವಜನಿಕವಾಗಿ ಪ್ರಕಟಿಸಬೇಕು. ಸಂಬಂಧಪಟ್ಟವರು ಇದರತ್ತ ಗಮನ ಹರಿಸುವುದು" ಎಂಬ ಓಂಶಿವಪ್ರಕಾಶ್ ರ ಚರ್ಚೆಗೆ ಪೂರಕವಾಗಿ ಹೇಳುವುದಾದರೆ, ಸಿ.‌ಐ.ಎಸ್ ಎ೨ಕೆ ಯ ಪ್ರಣಾಳಿಕೆ ಪ್ರಕಾರ ಪ್ರಯಾಣ ಭತ್ಯೆ ಕೊಟ್ಟರೆ ಸಮ್ಮಿಲನದಲ್ಲಿ ಭಾಗವಹಿಸುವ ವಿಕಿಪೀಡಿಯನ್ನರ ಸಂಖ್ಯೆ ದ್ವಿಗುಣವಾಗುವುದರಲ್ಲಿ ಸಂಶಯವಿಲ್ಲ.--ಕೆ.ಸೌಭಾಗ್ಯವತಿ (ಚರ್ಚೆ) ೧೧:೦೯, ೨೦ ಸೆಪ್ಟೆಂಬರ್ ೨೦೧೫ (UTC)
ಹೌದು. ಸಿ.‌ಐ.ಎಸ್ ಎ೨ಕೆ ಯ ಪ್ರಣಾಳಿಕೆಯಲ್ಲಿ ಸಮುದಾಯ ಸಹಭಾಗಿತ್ವ, ಸಮ್ಮಿಲನಗಳಿಗೆ ಬೇಕಿರುವ ಸಂಪನ್ಮೂಲಗಳ ಬಳಕೆಗೆಂದೇ ಹಣವನ್ನು ಮೀಸಲಿರಿಸಲಾಗಿದೆ. ಹಿಂದಿನ ಸಮ್ಮಿಲನದಲ್ಲಿ ಹೊರನಾಡಿನಿಂದ ಬಂದು ಭಾಗವಹಿಸಿದವರಿಗೆ ಪ್ರಯಾಣಭತ್ಯೆ, ಬೆಂಗಳೂರಿನಲ್ಲಿ ಅರ್ಧ ದಿನಕ್ಕೆ ವಾಸ್ತವ್ಯ ಎಲ್ಲ ಏರ್ಪಾಡು ಮಾಡಲಾಗಿತ್ತು. ಈ ಸಮ್ಮಿಲನಕ್ಕೂ ಹಾಗೆಯೇ ಮಾಡಲಾಗಿದೆ. ಹೊರನಾಡಿನಿಂದ ಬಂದು ಭಾಗವಹಿಸಿದ ಎಲ್ಲರಿಗೂ ಪ್ರಯಾಣಭತ್ಯೆ ನೀಡಲಾಗುವುದು.--Pavanaja (ಚರ್ಚೆ) ೧೬:೩೬, ೨೦ ಸೆಪ್ಟೆಂಬರ್ ೨೦೧೫ (UTC)
ಇಂತಹ ಮಾಹಿತಿಯನ್ನು ಸಾರ್ವಜನಿಕವಾಗಿ ಸಮ್ಮಿಲನ ನೆಡೆಯುವ ಮುಂಚೆಯೇ ಲಭ್ಯವಾಗಿಸುವುದು ಅತಿ ಮುಖ್ಯ. ಈ ಮಾಹಿತಿಗಳನ್ನು ಸಮುದಾಯಕ್ಕೆ ಅರಿವಿಲ್ಲದಂತೆ ವಿಕಿ ಹೊರಗೆ ಇಡುವುದು ಸರಿ ಕಾಣುತ್ತಿಲ್ಲ. ವಿಕಿ ಸಮುದಾಯ ಸುತ್ತ ಎಲ್ಲ ಕಾರ್ಯಗಳಲ್ಲಿಯೂ ಪಾರದರ್ಶಕತೆಯ ಕಾಪಾಡಿಕೊಳ್ಳತಕ್ಕದ್ದು. ಸಮ್ಮಿಲನಗಳನ್ನು ಸಮುದಾಯದ ಸದಸ್ಯರು ನಿರ್ಧರಿಸಿ, ಅದಕ್ಕೆ ಬೇಕಿರುವ ಸಂಪನ್ಮೂಲಗಳನ್ನು ಸಿ.‌ಐ.ಎಸ್ ಎ೨ಕೆ / ವಿಕಿಮೀಡಿಯ ಇಂಡಿಯಾ ಚಾಪ್ಟರ್ ನಿಂದ ಪಡೆಯಲು ಬೇಕಿರುವ ಮಾಹಿತಿ/ಸಹಾಯವನ್ನು ಸಂಬಂಧಿಸಿದ ಸಂಸ್ಥೆಗಳ ಮುಖ್ಯಸ್ಥರು ನೀಡುವುದು ಇಲ್ಲಿ ಮುಖ್ಯವಾಗುತ್ತದೆ. ಈ ಸಂಸ್ಥೆಗಳು/ಚಾಪ್ಟರ್ ಸಮುದಾಯದ ಬೆಳವಣಿಗೆಗೆ ತಮ್ಮ ಶಕ್ತಾನುಸಾರ ಕೆಲಸ ನಿರ್ವಹಿಸುತ್ತಿರುವುದು ಮತ್ತು ಅದರ ರೂಪುರೇಷೆಗಳನ್ನು ಸದಸ್ಯರು ಇನ್ನೂ ಅರ್ಥ ಮಾಡಿಕೊಳ್ಳಬೇಕಿದೆ. ಇದೆಲ್ಲವೂ ಇಲ್ಲದಿರುವುದು ನೋಡಿದಲ್ಲಿ, ಇದು ಕೇವಲ ಸಿ.‌ಐ.ಎಸ್ ಎ೨ಕೆ ಸಮ್ಮಿಲನ ಆಗಿರುವಂತೆ ಕಾಣುತ್ತದೆಯೇ ಹೊರತು ಸಮುದಾಯ ಸಮ್ಮಿಲನವಲ್ಲ. ಮುಂದೆ ಸಿ.‌ಐ.ಎಸ್ ಎ೨ಕೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದ್ದಲ್ಲಿ, ಅರಳೀಕಟ್ಟೆಯ ಮೂಲಕ ಸಮುದಾಯಕ್ಕೆ ಸೂಕ್ತ ಮಾಹಿತಿ ಸಲ್ಲಿಸುವುದು ಅವಶ್ಯ ಎಂದು ನನ್ನ ಅನಿಸಿಕೆ. ಸಮುದಾಯ ಯಾವುದೇ ಸಂಸ್ಥೆಯ ಕಾರ್ಯಕ್ರಮ ಪಟ್ಟಿಗಳಲ್ಲಿ ಭಾಗವಹಿಸುವ ಭಾಗೀದಾರರಾಗದೆ, ವಿಕಿ ಸಮುದಾಯಕ್ಕೆ ಬೇಕಾದ ಕಾರ್ಯಚಟುವಟಿಕೆಗಳನ್ನು ತಾನೇ ನೆಡೆಸುವಷ್ಟು ಸ್ವಶಕ್ತವಾಗಬೇಕಿದೆ. ಇದಕ್ಕೆ ಸಿ.‌ಐ.ಎಸ್ ಎ೨ಕೆ ತನ್ನದೇ ಕೊಡುಗೆಯನ್ನು ನೀಡಬೇಕಿದ್ದು, ಮತ್ತಷ್ಟು ಹೊಸ ವಿಕಿಪೀಡಿಯನ್ನರನ್ನು ಈ ಕೆಲಸಗಳಿಗೆ ನಾಯಕರನ್ನಾಗಿ ತಯಾರು ಮಾಡಬೇಕು. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೬:೫೧, ೨೦ ಸೆಪ್ಟೆಂಬರ್ ೨೦೧೫ (UTC)

ಸಂಪಾದಕರುಗಳಿಗೆ ಪ್ರೋತ್ಸಾಹ ಯೋಜನೆ[ಬದಲಾಯಿಸಿ]

ಬೇರೆ ಭಾಷೆಗಳಿಗೆ ಹೋಲಿಸಿದಾಗ ಕನ್ನಡ ವಿಕಿಪೀಡಿಯಾ ಸಶಕ್ತವಾಗಿಲ್ಲ ಎನಿಸುತ್ತದೆ. ಸದಸ್ಯರು ಹೆಚ್ಚಾಗುತ್ತಿರುವರೇ ವಿನಃ ಸಂಪಾದನೆ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಹಾಗಾಗಿ ವಿಕಿಪೀಡಿಯಾ ಕೆಲವು ಯೋಜನೆಗಳನ್ನು ಹಾಕಿಕೊಳ್ಳುವುದು ಸೂಕ್ತವೆನಿಸುತ್ತದೆ. ಏಕೆಂದರೆ ಈಗಾಗಲೆ ತಮಿಳು ವಿಕಿಪೀಡಿಯಾ ಇಂತಹ ಕೆಲವು ಯೋಜನೆಗಳನ್ನು ಹಾಕಿಕೊಂಡಿರುವುದನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುವೆ. ತಮಿಳು ವಿಕಿ ಯೋಜನೆ

  1. ವಿಕಿ ಸಂಪಾದಕರು ಒಂದು ತಿಂಗಳು ಹೆಚ್ಚು ಸಂಪಾದನೆ ಮಾಡಿದರೆ, ಆ ತಿಂಗಳಿನ ವಿಶೇಷ ವ್ಯಕ್ತಿ ಅವರಾಗಿರುತ್ತಾರೆ. ಅಂತಹವರ ಬಗ್ಗೆ ಮುಖ್ಯ ಪುಟದಲ್ಲಿ ಒಂದೆರಡು ಪ್ರಶಂಸೆಯ ಮಾತುಗಳನ್ನು ಆಡಬೇಕು.
  2. ಹೊಸದಾಗಿ ಸಂಪಾದಕರಾದವರ ಫೋಟೋ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಡಬೇಕು.
  3. ಹೊಸದಾಗಿ ಸಂಪಾದಕರಾದವರು ಒಳ್ಳೆಯ ಹಲವು ಲೇಖನ ಬರೆದಾಗ ಅವರಿಗೆ ಪ್ರೋತ್ಸಾಹ ಧನ ನೀಡಬೇಕು.
  4. ವಿಕಿ ಸಂಪಾದಕರು ಸಕ್ರಿಯವಾಗಿರಲು ಹಲವಾರು ಹೊಸ ಯೋಜನೆಗಳನ್ನೂ ಹಮ್ಮಿಕೊಳ್ಳಬೇಕು
  5. ಶಾಲಾ-ಕಾಲೇಜುಗಳಲ್ಲಿ ವಿಕಿಪೀಡಿಯಾದ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳು ಬೇಗನೆ ಆಗಬೇಕು. -ಇತ್ಯಾದಿ --ಕೆ.ಸೌಭಾಗ್ಯವತಿ (ಚರ್ಚೆ) ೦೩:೩೨, ೨೧ ಸೆಪ್ಟೆಂಬರ್ ೨೦೧೫ (UTC)
ಮೂರನೆಯ ವಿಷಯ, ಪ್ರೋತ್ಸಾಹ ಧನ ನೀಡುವುದು - ಇದು ವಿಕಿಪೀಡಿಯದ ನೀತಿ-ನಿಯಮಗಳಿಗೆ ವಿರುದ್ಧವಾಗಿರುವುದುರಿಂದ ಇದನ್ನು ಜಾರಿಗೆ ತರಲು ಸಾಧ್ಯವಿಲ್ಲ. ಇದರ ಬದಲಿಗೆ ಯಾರಾದರೂ ಪ್ರಾಯೋಜಕರನ್ನು ಹಿಡಿದು ಅವರಿಂದ ಏನಾದರೂ ಪ್ರಶಸ್ತಿ ನೀಡಿಸುವ ಕೆಲಸವನ್ನು ಮಾಡಬಹುದು. ಉಳಿದ ಎಲ್ಲ ವಿಷಯಗಳಿಗೆ ನನ್ನ ಸಹಮತವಿದೆ. ---Pavanaja (ಚರ್ಚೆ) ೧೫:೫೯, ೨೧ ಸೆಪ್ಟೆಂಬರ್ ೨೦೧೫ (UTC)
ನನ್ನ ಪ್ರತಿಕ್ರಿಯೆ ಈ ಕೆಳಗಿನಂತಿದೆ:
ಅ) ತಿಂಗಳಿನ ವಿಕಿ ಸಂಪಾದಕ ಎನಿಸಿಕೊಳ್ಳಲು, ವಿಕಿಯ ಮೂಲ ನಿಯಮಗಳಿಗನುಸಾರ ಲೇಖನಗಳನ್ನು ಸಂಪಾದಿಸಿರಬೇಕು. ಜೊತೆಗೆ ವಿಕಿ ಸಂಪಾದಕ ಎಂದು ಘೋಷಿಸುವ ಮೊದಲು, ಲೇಖನಗಳನ್ನು ಸಮುದಾಯವೇ ಮತ ಹಾಕುವುದರ ಮೂಲಕ ಅಥವಾ ಕೆಲವು ನೀತಿನಿಯಮಗಳನ್ನು ಮೂಲಕ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವುದು ಮುಖ್ಯವಾಗುತ್ತದೆ. ವಿಕಿ ಸಂಪಾದನೆಯ ಗುಣಮಟ್ಟವನ್ನು ಕಾಯ್ದುಕೊಳ್ಳಲೂ ಸಹ ಈ ನೆಡೆ ಸಹಾಯಕ.
ಆ) ಹೊಸ ಸಂಪಾದಕರ ಫೋಟೋ ಪರಿಚಯ ನಿಜವಾಗಿಯೂ ಅವಶ್ಯವಿದೆಯೇ? ನೆನಪಿರಲಿ - ಬೇರೆಯವರು ತೆಗೆದ ನಿಮ್ಮ ಫೋಟೋವನ್ನು ನೀವೇ ಅಪ್ಲೋಡ್ ಮಾಡಲು ವಿಕಿಯಲ್ಲಿ ಅವಕಾಶವಿಲ್ಲ. ಅದನ್ನು ಫೋಟೋ ತೆಗೆದವರೇ ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್‌ನಡಿ ಲಭ್ಯವಾಗಿಸಿದಲ್ಲಿ ಮಾತ್ರ ಅದು ವಿಕಿಯಲ್ಲಿ ಇರಬಲ್ಲದು. ಕೆಲವರು ತಮ್ಮ ಪೂರ್ಣ ಪರಿಚಯವನ್ನು, ಖಾಸಗಿ ಮಾಹಿತಿಯನ್ನು (ಚಿತ್ರವನ್ನೂ ಒಳಗೊಂಡಂತೆ) ವಿಕಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಇರಿಸಲು ಇಚ್ಛಿಸುವುದಿಲ್ಲ. ವಿಕಿ ಈ ಆಯ್ಕೆಯನ್ನು ಗೌರವಿಸುತ್ತದೆ ಕೂಡ. ಆದ್ದರಿಂದ ಹೊಸ ನಿಯಮಗಳು ಇಂತಹ ಸ್ವಾತಂತ್ರ್ಯವನ್ನು ಹೊಸ ಸಂಪಾದಕರಿಂದ ಕಸಿದುಕೊಳ್ಳದಂತಿರಲಿ. ಜೊತೆಗೆ ಪರಿಚಯ ಮಾಡಿಕೊಳ್ಳದೇ ವರ್ಷಾನುಗಟ್ಟಲೆ ಸಂಪಾದನೆಯಲ್ಲಿ ತೊಡಗಿದವರಿದ್ದಾರೆ. ಪರಿಚಯ ವಿಕಿಯ ಬಳಕೆದಾರನ ಹೆಸರಿನಿಂದ ಎಲ್ಲರಿಗೂ ಇದ್ದೇ ಇರುತ್ತದೆ :)
ಇ) ಪ್ರೋತ್ಸಾಹ ಧನ ನೀಡುವುದು ವಿಕಿ ಸಂಸ್ಕೃತಿಗೆ ತಕ್ಕುದಾದದ್ದಲ್ಲ. ಭಾಷೆಗೆ ಮತ್ತು ಭಾಷೆಯ ಬೆಳವಣಿಗೆಗೆ ನಾವು ಸಂಪಾದನೆಯ ಮೂಲಕ ನೀಡುವ ಕೊಡುಗೆ ನೀಡುವ ಖುಷಿ ಎಲ್ಲದಕ್ಕಿಂತ ಮಿಗಿಲಾದದ್ದು. ಇಂತಹ ಪ್ರೋತ್ಸಾಹಕ್ಕೆ ಒಪ್ಪಿಗೆ ಇಲ್ಲ.
ಈ) ಸಂಪಾದಕ ಸಮುದಾಯದಲ್ಲಿ ಯಾವುದೇ ವಿಷಯದ ಮೇಲೆ ಒಟ್ಟಿಗೆ ಕೆಲಸ ಮಾಡುತ್ತಿರುವವರು ಒಂದು ಗೂಡಿ, ತಮ್ಮ ಕಾರ್ಯಯೋಜನೆಗಳನ್ನು ಪಟ್ಟಿ ಮಾಡಿ ಕೆಲಸ ಮಾಡಬಹುದು. ಅರಳಿಕಟ್ಟೆ ಮೂಲಕ ಇತರರನ್ನೂ ತಮ್ಮೊಡನೆ ಸೇರಿಸಿಕೊಂಡಲ್ಲಿ, ಇದು ಸಾಧ್ಯವಾಗುತ್ತದೆ. ನಾವು ಈಗಾಗಲೇ ಪಟ್ಟಿ ಮಾಡಿರುವ ವಿಕಿ ಯೋಜನೆಗಳನ್ನು ಉದಾಹರಣೆಗಾಗಿ ನೋಡುವುದು.
ಉ) ಬಿ.ಸಿ.ಎ ಯ ಮೊದಲನೆ ಸೆಮೆಸ್ಟರ್ ಪಠ್ಯದಲ್ಲಿ ನಾನು ವಿಕಿಯ ಬಗ್ಗೆ ಬರೆದಿರುವ ಲೇಖನವಿದೆ. ಕನ್ನಡ ಸಾಹಿತ್ಯ ಪರಿಷತ್ ಬಿಡುಗಡೆ ಮಾಡಿರುವ 'ಆಧುನಿಕ ಕನ್ನಡ ಸಾಹಿತ್ಯ'ದಲ್ಲೂ ವಿಕಿಪೀಡಿಯ ನೆಡೆದು ಬಂದ ಹಾದಿಯ ಬಗ್ಗೆ ದೀರ್ಘವಾದ ಲೇಖನವಿದೆ. ಇವುಗಳ ಬಗ್ಗೆ ನಿಮಗೆ ತಿಳಿದಿರುವ ಶಾಲಾಕಾಲೇಜುಗಳಿಗೆ ತಿಳಿಸಿ. ಜೊತೆಗೆ ಸ್ಥಳೀಯ ಪತ್ರಿಕೆಗಳಲ್ಲಿ ವಿಕಿಪೀಡಿಯ ಬಗ್ಗೆ ಸಾಧ್ಯವಾದವರು ಆಗ್ಗಾಗೆ ಲೇಖನಗಳನ್ನು ಬರೆಯುವುದರಿಂದ ಜನಜಾಗೃತಿ ಹೆಚ್ಚಿಸಬಹುದಾಗಿದೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೮:೦೧, ೨೧ ಸೆಪ್ಟೆಂಬರ್ ೨೦೧೫ (UTC)

ಇದನ್ನು ಒಪ್ಪಿಕೊಳ್ಳುವವರು ತಮ್ಮ ಹೆಸರನ್ನು ಇಲ್ಲಿ ನೊಂದಾಯಿಸಿ ಕೊಳ್ಳಬಹುದು[ಬದಲಾಯಿಸಿ]

  1. ಮೂರನೆಯ ವಿಷಯ ಬಿಟ್ಟು ಉಳಿದವುಗಳಿಗೆ ಸಹಮತವಿದೆ--Pavanaja (ಚರ್ಚೆ) ೧೫:೫೯, ೨೧ ಸೆಪ್ಟೆಂಬರ್ ೨೦೧೫ (UTC)
  2. ಮೂರನೆಯ ವಿಷಯ ವಿಕಿಪೀಡಿಯಾ ಫಿಲಾಸಫಿಗೆ ಸರಿಯಾದುದಲ್ಲ. ಉಳಿದವುಗಳು ಓಕೆ.ವಿದ್ಯಾಧರ ಚಿಪ್ಳಿ (ಚರ್ಚೆ) ೦೯:೨೯, ೨೨ ಸೆಪ್ಟೆಂಬರ್ ೨೦೧೫ (UTC).
  3. ಅ) ಪರಿಚಯ ಮಾಡಿಕೊಳ್ಳದಿರುವವರನ್ನು ಪರಿಚಯಿಸಿಕೊಳ್ಳುವಂತೆ ಮುಖ್ಯಪುಟದಲ್ಲಿ ಒಂದು ಸೂಚನೆ ಇದ್ದರೆ ಚೆನ್ನಾಗಿರುತ್ತಿತ್ತು. ಆ)ವಿಕಿ ಸಂಪಾದಕರಿಗೆ ಸಂಭಾವನೆ ನೀಡುವ ಅಗತ್ಯವಿಲ್ಲವೆಂದು ನನ್ನ ಅಭಿಪ್ರಾಯ. ಅದರ ಬದಲು ವಿಕಿ ಸಮ್ಮಿಲನಗಳಲ್ಲಿ ಹೆಚ್ಚು ಹೆಚ್ಚು ಸಂಪಾದಕರು ಭಾಗವಹಿಸುವಂತೆ ಪ್ರೋತ್ಸಾಹಿಸುವ ಕುರಿತು ಯೋಚಿಸಿದರೆ ಚೆನ್ನಾಗಿರುತ್ತಿತ್ತು. ಉದಾ:೧)ಪ್ರಯಾಣ ವೆಚ್ಚವನ್ನು ನೀಡಿ ಪ್ರೋತ್ಸಾಹಿಸುವುದು. ೨)ಕಾಲೇಜುಗಳಲ್ಲಿ ಕಾರ್ಯಾಗಾರವನ್ನು ನೀಡುವುದಕ್ಕೆ ಧನ ಸಹಾಯ ನೀಡುವುದು ಇತ್ಯಾದಿ. ಇ)ಬಿ.ಸಿ.ಎ. ಮೊದಲ ಸೆಮಿಸ್ಟರ್‍ನ ಯಾವ ಪಠ್ಯದಲ್ಲಿ ಮತ್ತು ಯಾವ ವಿಶ್ವವಿದ್ಯಾನಿಲಯದ ಪಠ್ಯದಲ್ಲಿ ಎಂಬ ಬಗ್ಗೆ ಮಾಹಿತಿ ನೀಡಿದ್ದರೆ ಚೆನ್ನಾಗಿರುತ್ತಿತ್ತು.ವಿಶ್ವನಾಥ ಬದಿಕಾನ ೨೧:೦೦, ೨೫ ಸೆಪ್ಟೆಂಬರ್ ೨೦೧೫ (UTC).
  4. ಸಹಮತವಿದೆPalagiri (ಚರ್ಚೆ) ೦೪:೫೦, ೨೭ ಸೆಪ್ಟೆಂಬರ್ ೨೦೧೫ (UTC)
  5. ಕನ್ನಡ ವಿಕಿಪೀಡಿಯಾವನ್ನು ಹೆಚ್ಚು ಬಲಗೊಳಿಸಬೇಕು ಎನ್ನುವುದರ ಬಗ್ಗೆ ನನ್ನ ಪೂರ್ಣ ಸಹಮತವಿದೆ. ತಿಂಗಳ ಸಂಪಾದಕ ಎಂದು ಗುರುತಿಸುವ ಮೊದಲು, ಕನ್ನಡದಲ್ಲಿ ಬರಯುವವರ ಸಂಖ್ಯೆ ಹೆಚ್ಚಿಸಬೇಕು. ಆಗ ಮಾತ್ರ ಈ ತರಹದ ಗುರುತಿಸುವಿಕೆಗೆ ಅರ್ಥ ಬರುತ್ತದೆ. ಇರುವ ಕೆಲವೇ ಸಂಪಾದಕರಲ್ಲಿ ಈ ರೀತಿ ಗುರುತಿಸುವುದು ಸರಿ ಅಲ್ಲ ಎಂದು ನನ್ನ ಅಭಿಮತ. ಮೊದಲು ಕನ್ನಡ ವಿಕೀಪೀಡಿಯಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. --chetan (ಚರ್ಚೆ) ೧೩:೩೦, ೨೮ ಸೆಪ್ಟೆಂಬರ್ ೨೦೧೫ (UTC)
  6. ಸಹಮತವಿದೆ--Bharathesha Alasandemajalu (ಚರ್ಚೆ) ೦೭:೫೦, ೧೮ ಡಿಸೆಂಬರ್ ೨೦೧೫ (UTC)
  7. ಸಹಮತವಿದೆ, Pradeepabk (ಚರ್ಚೆ) ೧೭:೫೧, ೧೯ ಡಿಸೆಂಬರ್ ೨೦೧೫ (UTC)
  8. ವಿಕಿಪೀಡಿಯ ಲೇಖನಗಳ ಸೃಷ್ಠಿ ಅಥವಾ ಉತ್ತಮಪಡಿಸುವಿಕೆಯಲ್ಲಿ ಅತೀ ಹೆಚ್ಚು ಸಕ್ರಿಯರಾದ ಒಬ್ಬರನ್ನ ವಾರದ ವ್ಯಕ್ತಿ, ತಿಂಗಳ ವ್ಯಕ್ತಿ ಎಂದು ಗುರುತಿಸಿ, ಪ್ರೋತ್ಸಾಹಿಸುವ ಪ್ರಯತ್ನಕ್ಕೆ ನನ್ನ ಸಹಮತವಿದೆ. ಇದರಿಂದ ಹೊಸಬರಿಗೆ ತಾವೂ ವಿಕಿಯಲ್ಲಿ ತೊಡಗಿಕೊಳ್ಳಲು ಸ್ಪೂರ್ತಿ ನೀಡಿದಂತಾಗುತ್ತದೆ. ಹೊಸಬರನ್ನು ಹಳಬರೊಂದಿಗೆ ತುಲನೆ ಮಾಡುವ ಬದಲು ಎರಡು ಮೂರು ಕೆಟಗರಿಗಳನ್ನು ಮಾಡಬಹುದು. ಉದಾಃ ಹೊಸಬರನ್ನು ಪರಿಚಯಿಸುವುದಕ್ಕೆ ತಿಂಗಳ ಹೊಸಬೆಳಕು ಎಂದೋ, ಹಳಬರಿಗೆ ವಾರದ ವಿಕಿಪೀಡಿಯನ್ ಎಂತಲೋ ಹೊಸ ಹೆಸರುಗಳ ಮೂಲಕ ಅಭಿನಂದಿಸಬಹುದು. ಈ ಅಭಿನಂದನೆಗಳನ್ನು ಮುಖ್ಯಪುಟದಲ್ಲಿ ಮತ್ತು ಆ ವ್ಯಕ್ತಿಯ ಚರ್ಚಾಪುಟದಲ್ಲಿ ಹಾಕಬಹುದು.ಪ್ರಶಸ್ತಿ (ಚರ್ಚೆ) ೧೫:೨೪, ೧ ಮಾರ್ಚ್ ೨೦೧೬ (UTC)

ಕನ್ನಡ ವಿಕಿಪೀಡಿಯಾ ಸಂಪಾದನೆ ಮೊಬೈಲ್‌ನಲ್ಲಿ[ಬದಲಾಯಿಸಿ]

ಕನ್ನಡ ವಿಕಿಪೀಡಿಯಾದ ಸಂಪಾದನೆಯನ್ನು ಮೊಬೈಲ್‌ನಲ್ಲಿ ಸುಲಭವಾಗಿ ಮಾಡುವಂತೆ ರೂಪಿಸಬೇಕು, ವಿಕಿಪೀಡಿಯಾದ ಮಹತ್ವ ಹಾಗೂ ವಸ್ತುನಿಷ್ಠ ಸಂಪಾದನೆಯ ಅಗತ್ಯತೆಯನ್ನು ಎಲ್ಲಾ ಕನ್ನಡಿಗರಿಗೆ ಮನದಟ್ಟು ಮಾಡುವ ಕೆಲಸ ಮಾಡೋಣ, ಯು.ಬಿ ಪವನಜರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಸದಸ್ಯ:ದರ್ಶನ್ ಜೈನ್ ೨೩:೦೦, ೧೮ ಡಿಸೆಂಬರ್ ೨೦೧೫ (UTC)

ಸದಸ್ಯ:ದರ್ಶನ್ ಜೈನ್ ಅಂಡ್ರಾಯ್ಡ್ ಮತ್ತು ಐಓಎಸ್ ಗೆ ಲಭ್ಯವಿರುವ ವಿಕಿಪೀಡಿಯ ಅಪ್ಲಿಕೇಷನ್ ಬಳಸಿ - ಕನ್ನಡವೂ ಸೇರಿದಂತೆ ಹಲವಾರು ಭಾಷಾ ವಿಕಿಗಳನ್ನು ಆಯಾ ಭಾಷೆಯಲ್ಲಿ ಓದುವುದರ ಜೊತೆಗೆ, ಸಂಪಾದನೆಯನ್ನೂ ಮಾಡಬಹುದು. ಬಳಸಿ ನೋಡಿ, ಇತರರಿಗೂ ತಿಳಿಸಿ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೭:೩೪, ೧೮ ಡಿಸೆಂಬರ್ ೨೦೧೫ (UTC)
User:Omshivapraksh/ಓಂಶಿವಪ್ರಕಾಶ್/Omshivaprakash ಅಂಡ್ರಾಯ್ಡ್ ಅಪ್ಲೀಕೇಶನ್‌ನನ್ನೇ ಬಳುಸುತ್ತಿದ್ದೇನೆ, ಆದರೆ ಸರಾಗವಾಗಿ ಸಂಪಾದನೆ ಮಾಡುವುದು ಕಷ್ಟ ~ಸದಸ್ಯ:ದರ್ಶನ್ ಜೈನ್
ಮೊಬೈಲ್ ಸಂಪಾದನೆ ತಾಂತ್ರಿಕ ದೃಷ್ಟಿಗಳಿಂದ ಕಷ್ಟ. ನೀವು ತಂತ್ರಜ್ಞರಾಗಿದ್ದಲ್ಲಿ, ಇದನ್ನು ಉತ್ತಮ ಪಡಿಸಲು ವಿಕಿಮೀಡಿಯ ಫೌಂಡೇಷನ್ ಜೊತೆಗೆ ಕೈ ಜೋಡಿಸಬಹುದು. ವಿಕಿಪೀಡಿಯದ ಮೊಬೈಲ್ ತಂತ್ರಾಂಶ ಮುಕ್ತ ತಂತ್ರಾಂಶವಾಗಿದ್ದು, ಸಮುದಾಯ ಅದನ್ನು ಮತ್ತಷ್ಟು ಉತ್ತಮಪಡಿಸಲು ಯಾರುಬೇಕಾದರೂ ಕೊಡುಗೆ ನೀಡಬಹುದು. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೭:೫೯, ೧೮ ಡಿಸೆಂಬರ್ ೨೦೧೫ (UTC)

ನೀನಾಸಂ ಭೇಟಿ[ಬದಲಾಯಿಸಿ]

ಸಿ.‌ಐ.ಎಸ್ ಎ೨ಕೆ ಅಕ್ಟೋಬರ್ ೨ ಮತ್ತು ೩ನೇ ತಾರೀಖಿನಂದು ನೀನಾಸಂ ಸಂಸ್ಥೆಯೊಂದಿಗೆ ಕನ್ನಡ ವಿಕೀಪೀಡಿಯ ಬೆಳವಣಿಗೆ ಮತ್ತು ಕನ್ನಡ ವಿಕೀಸೋರ್ಸ್ ಅಭಿವೃದ್ಧಿಯ ಕುರಿತು ಚರ್ಚೆ ನಡೆಸುವ ಯೋಜನೆ ಹೊಂದಿದೆ. ಕನ್ನಡ ವಿಕಿ ಬಳಗವು ಈ ಕಾರ್ಯಕ್ರಮದ ಕುರಿತು ಸಲಹೆ ಮತ್ತು ಸೂಚನೆಗಳನ್ನು ನೀಡಬೇಕೆಂದು ವಿನಂತಿ. Lahariyaniyathi (ಚರ್ಚೆ) ೧೦:೩೩, ೨೧ ಸೆಪ್ಟೆಂಬರ್ ೨೦೧೫ (UTC)

-ಈ ಕಾರ್ಯಕ್ರಮವು ಎಲ್ಲಿ ನಡೆಯುವುದು? ಯಾರು ಯಾರು ಪಾಲ್ಗೋಳ್ಳಬಹುದು? ವಿದ್ಯಾಧರ ಚಿಪ್ಳಿ (ಚರ್ಚೆ) ೦೯:೨೬, ೨೨ ಸೆಪ್ಟೆಂಬರ್ ೨೦೧೫ (UTC).

WikiConference India 2016[ಬದಲಾಯಿಸಿ]

ನಮಸ್ತೆ,

ನಾವು ನಿಮ್ಮನ್ನು WikiConference India 2016 ಸಂಘಟಿಸುವುದಕ್ಕೆ ಬಿಡ್ ಮಾಡಲು ಸ್ವಾಗತಿಸುತ್ತೇವೆ. ಈ ಬಿಡ್ ಎರಡು ಸುತ್ತುಗಳನ್ನು ಹೊಂದಿರುತ್ತದೆ. ಮೊದಲ ಹಂತವು ಸುಲಭದ್ದಾಗಿದ್ದು ಭಾಗವಹಿಸುವುದನ್ನು ಪ್ರೋತ್ಸಾಹಿಸುತ್ತದೆ. ಮೊದಲ ಸುತ್ತಿನ ಉದ್ದೇಶ ಸ್ಥಳೀಯ ಸಮುದಾಯದ ಬೆಂಬಲ ಮತ್ತು ಸಾಮರ್ಥ್ಯವನ್ನು ಧೃಡಪಡಿಸಿಕೊಳ್ಳುವುದೇ ಆಗಿದೆ. ಅರ್ಹತೆ ಪಡೆಯುವ ಮೊದಲ ೫ ನಗರಗಳು ಎರಡನೆ ಮತ್ತು ಕೊನೆಯ ಸುತ್ತಿನ ಬಿಡ್ಡಿಂಗ್‌ನಲ್ಲಿ ವಿಸ್ತೃತ ಯೋಜನೆಯೊಂದಿಗೆ ಪಾಲ್ಗೊಳ್ಳಲಿವೆ.

ಮೊದಲ ಸುತ್ತಿನ ಬಿಡ್ಡಿಂಗ್ ಮಾನದಂಡ

  • ನಗರ ಮತ್ತು ಸೂಚಿಸಿದ ಸ್ಥಳ. ಈ ನಗರ ಕನಿಷ್ಠ ಒಂದು ದೇಶೀಯ ಏರ್‌ಪೋರ್ಟ್ ಹೊಂದಿರಬೇಕಾಗುತ್ತದೆ
  • ಇದನ್ನು ನಿಮ್ಮ ನಗರದಲ್ಲಿ ಆಯೋಜಿಸಲು ಬದ್ಧರಾಗಲು ಸಿದ್ಧವಾಗಿರುವ ಮೀಡಿಯ ಯೋಜನೆಗಳಲ್ಲಿ ಸಕ್ರಿಯವಾಗಿರುವ ವಿಕಿಮೀಡಿಯ ಸಂಪಾದಕರ ಸಹಿಗಳು
  • ಬಿಡ್ ಅನ್ನು ಸಮುದಾಯದ ಚರ್ಚೆಗೆ ಒಳಪಡಿಸಿ ಸಹಮತದಿಂದ ಒಪ್ಪಿಗೆ ಸೂಚಿಸಿರುವ ಅರಳಿ ಕಟ್ಟೆಯ ವಿಷಯದ ಕೊಂಡಿ
  • ೫೦೦ ನೊಂದಾಯಿಸಿಕೊಂಡ ಭಾಗಿಗಳ ಕಾರ್ಯಕ್ರಮಕ್ಕೆ ಸೂಚಿಸಲಾಗುವ ಒಟ್ಟು ಬಜೆಟ್ (೧೦೦ ಸ್ಕಾಲರ್‌ಶಿಪ್‌ಗಳನ್ನು ಪಡೆಯುವವರ ೩ ದಿನದ ತಂಗುವ ವ್ಯವಸ್ಥೆಯ ಖರ್ಚೂ ಸೇರಿದಂತೆ).
  • ಈ ರೀತಿಯ ಕಾರ್ಯಕ್ರಮ(ಗಳನ್ನು) ಆಯೋಜಿಸಿರುವ ಹಿಂದಿನ ಅನುಭವ

ನಿಮ್ಮ ಬಿಡ್‌ಗಳನ್ನು ಇಲ್ಲಿರಿಸಿ 18ನೇ ಅಕ್ಟೋಬರ್ 2015 11:59 PM IST ಒಳಗೆ.

ಧನ್ಯವಾದಗಳೊಂದಿಗೆ,

ಡಬ್ಲುಸಿಐ 2016 ಸ್ವಯಂಸೇವಕರು

Only one week left for Individual Engagement Grant proposals![ಬದಲಾಯಿಸಿ]

(Apologies for using English below, please help translate if you are able.)

There is still one week left to submit Individual Engagement Grant (IEG) proposals before the September 29th deadline. If you have ideas for new tools, community-building processes, and other experimental projects that enhance the work of Wikimedia volunteers, start your proposal today! Please encourage others who have great ideas to apply as well. Support is available if you want help turning your idea into a grant request.

I JethroBT (WMF), Community Resources ೨೧:೦೧, ೨೨ ಸೆಪ್ಟೆಂಬರ್ ೨೦೧೫ (UTC)

Reimagining WMF grants report[ಬದಲಾಯಿಸಿ]

ಕೊನೆಯ ತಿಂಗಳು, ನಾವು WMF ಅನುದಾನ ಕಾರ್ಯಕ್ರಮಗಳ ರಚನೆ ಬದಲಾಯಿಸಲು ಒಂದು ಪ್ರಸ್ತಾವನೆಯ ಸಮುದಾಯದ ಪ್ರತಿಕ್ರಿಯೆಯನ್ನು ಕೇಳಿದ್ದೆವು ಭಾಗವಹಿಸಿದ 200 ಜನರಿಗೆ ಧನ್ಯವಾದಗಳು! ಈ ಸಮಾಲೋಚನೆಯನ್ನಾಧರಿಸಿ ಕಲಿತು ಬದಲಾಯಿಸಿದ ವರದಿ ಈಗ ಲಭ್ಯವಿದೆ.

ಬನ್ನಿ ಸಂಶೋಧನೆಗಳು ಮುಂದಿನ ಹಂತಗಳ ಬಗ್ಗೆ ಓದಿ, WMFs ಸಮುದಾಯ ಸಂಪನ್ಮೂಲ ತಂಡವು ನಿಮ್ಮ ಪ್ರತಿಕ್ರಿಯೆಯನ್ನು ಆಧರಿಸಿ ಬದಲಾವಣೆಗಳನ್ನು ಕಾರ್ಯಗತಗೊಳಿಸಲು ಪ್ರಾರಂಭಿಸುತ್ತದೆ. ನಿಮ್ಮ ಪ್ರಶ್ನೆ ಮತ್ತು ಕಾಮೆಂಟ್ ಗಳು ಫಲಿತಾಂಶ ಚರ್ಚಾ ಪುಟದಲ್ಲಿ ಸ್ವಾಗತಾರ್ಹ.

ಧನ್ಯವಾದಗಳೊಂದಿಗೆ, I JethroBT (WMF) ೧೬:೫೬, ೨೮ ಸೆಪ್ಟೆಂಬರ್ ೨೦೧೫ (UTC)

ಪುಸ್ತಕ ಪ್ರಿಯರನ್ನು ಕನ್ನಡ ವಿಕಿಪೀಡಿಯ ಸಂಪಾದಕರನ್ನಾಗಿಸುವ ಯೋಜನೆ (IEG)[ಬದಲಾಯಿಸಿ]

ನಮಸ್ತೆ, ಪುಸ್ತಕ ಪ್ರಿಯರನ್ನು ಕನ್ನಡ ವಿಕಿಪೀಡಿಯ ಸಂಪಾದಕರನ್ನಾಗಿಸುವ ಯೋಜನೆಯೊಂದನ್ನು ಈ ಬಾರಿಯ ಐ.ಇ.ಜಿ (ಇಂಡಿವಿಜುಅಲ್ ಎಂಗೇಜ್‌ಮೆಂಟ್ ಗ್ರಾಂಟ್)ಗೆ ಒಪ್ಪಿಸಿದ್ದೇನೆ. ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಮತ್ತು ಒಸ್ಮಾನಿಯ ಡಿಜಿಟಲ್ ಲೈಬ್ರರಿಯಲ್ಲಿ ಲಭ್ಯವಿದ್ದ ೫೪೦೦ಕ್ಕೂ ಹೆಚ್ಚು ಪುಸ್ತಕಗಳ ಮಾಹಿತಿಯನ್ನು (ಮೆಟಡೇಟಾ) ಸಂಚಯದ ನಮ್ಮ ತಂಡ ಸಮೂಹ ಸಂಚಯ ಸಮುದಾಯ ಸಹಭಾಗಿತ್ವ ವೇದಿಕೆ ಅಡಿಯಲ್ಲಿ ಕನ್ನಡೀಕರಿಸಿ, ಅವುಗಳನ್ನು ಪರಿಶೀಲಿಸುವ ಕಾರ್ಯವನ್ನೂ ಈಗಾಗಲೇ ಮುಗಿಸಿದ್ದು ಬಹಳಷ್ಟು ಮಂದಿಗೆ ಗೊತ್ತಿರುವ ವಿಷಯವಾಗಿದೆ. ಈ ಎಲ್ಲಾ ಪುಸ್ತಕಗಳನ್ನು ನಮ್ಮ ಪುಸ್ತಕ ಸಂಚಯದಲ್ಲಿ ಸುಲಭವಾಗಿ ಹುಡುಕುವಂತೆಯೂ ಮಾಡಿದ್ದೇವೆ. ಈ ಪುಸ್ತಕಗಳನ್ನು ವ್ಯವಸ್ಥಿತವಾಗಿ, ಸೂಕ್ತ ಪರಿಚಯ, ಉಲ್ಲೇಖಗಳೊಂದಿಗೆ ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಕೆಲಸವಾಗಬೇಕಿದೆ. ಇದಕ್ಕೆ ಅವಶ್ಯವಿರುವ ಮೂಲ ಸೌಕರ್ಯವನ್ನು ಅಭಿವೃದ್ಧಿಗೊಳಿಸುವ ಕೆಲಸವನ್ನು ನಮ್ಮ ತಂಡ ಮಾಡಲಿದೆ. ಇದರಿಂದ ಪುಸ್ತಕ ಪ್ರಿಯರು ಡಿಜಿಟಲ್ ಲೈಬ್ರರಿಗಳ ಪುಸ್ತಕಗಳನ್ನು ಹುಡುಕುವುದು ವಿಕಿಪೀಡಿಯದಿಂದ ಮತ್ತಷ್ಟು ಸುಲಭವಾಗಲಿದೆ ಅಷ್ಟೇ ಅಲ್ಲದೆ, ಅವರನ್ನು ವಿಕಿ ಸಂಪಾದಕರನ್ನಾಗಿ ಮಾಡುವ ಅವಕಾಶ ಕೂಡ ಒದಗಿ ಬರುತ್ತದೆ. ಇಲ್ಲಿ ಸಮುದಾಯ ಸಹಭಾಗಿತ್ವದ ಜೊತೆಗೆ ವಿಷಯಾಧಾರಿತ ವಿಕಿ ಸಂಪಾದನೆಯನ್ನು ಹೇಗೆ ಜೊತೆಯಾಗಿ ಕೊಂಡೊಯ್ಯಬಹುದು ಎನ್ನುವ ಅಧ್ಯಯನಕ್ಕೂ ಈ ಯೋಜನೆ ಸಹಕಾರಿ ಆಗಲಿದೆ. ಸವಿವರವಾದ ನಮ್ಮ ಯೋಜನೆಯ ಪ್ರಸ್ತಾವನೆಯನ್ನು ಕನ್ನಡ ವಿಕಿ ಸಮುದಾಯ Grants:IEG/Growing Kannada-language Wikimedia projects with a digital library ಇಲ್ಲಿ ಓದಬಹುದಾಗಿದ್ದು, ತಮ್ಮ ಬೆಂಬಲವನ್ನು ಸೂಚಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ. ಧನ್ಯವಾದಗಳೊಂದಿಗೆ ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೨೧:೧೩, ೨೯ ಸೆಪ್ಟೆಂಬರ್ ೨೦೧೫ (UTC)

ನಮ್ಮ ಯೋಜನೆಯ ವಿಕಿಮೀಡಿಯ ಫೌಂಡೇಷನ್ ಪುರಸ್ಕರಿಸಿದೆ. ನಮಗೆ ಬೆಂಬಲ ಸೂಚಿಸಿದ ಎಲ್ಲರಿಗೂ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಕನ್ನಡ ಪುಸ್ತಕಗಳ ಮಾಹಿತಿಯನ್ನು ವಿಕಿಗೆ ಸೇರಿಸುವ ಕಾರ್ಯದಲ್ಲಿ ನಮ್ಮ ತಂಡದೊಂದಿಗೆ ಸಮುದಾಯ ಕೈಜೋಡಿಸುತ್ತದೆ ಎಂಬ ಭರವಸೆಯೊಂದಿಗೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೮:೩೪, ೮ ಡಿಸೆಂಬರ್ ೨೦೧೫ (UTC)
ಈ ವೈಯುಕ್ತಿಕ ಅನುದಾನ ಯೋಜನೆಗೆ ತನ್ನದೇ ಆದ ಯೋಜನಾ ಪುಟದ ಅವಶ್ಯಕತೆ ಇದ್ದು, ಅದನ್ನು ಯೋಜನೆಗಳು/ಕನ್ನಡ_ವಿಕಿಮೀಡಿಯ_ಯೋಜನೆಗಳನ್ನು_ಡಿಜಿಟಲ್‌_ಲೈಬ್ರರಿಗಳೊಂದಿಗೆ_ಬೆಳಸುವುದು ಇಲ್ಲಿ ಸೃಷ್ಟಿಸಲಾಗಿದೆ. ಈ ಪುಟವನ್ನು ಕನ್ನಡೀಕರಿಸಲಾಗುತ್ತಿದ್ದು, ಯೋಜನೆಯ ಸ್ಥಿತಿಗತಿಗಳನ್ನು ಇಲ್ಲಿಯೇ ಹಂಚಿಕೊಳ್ಳಲಾಗುವುದು. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು
ನಮಸ್ತೆ, ಐ.ಇ.‌ಜಿ ಯೋಜನೆಗಳ ಯೋಜನಾ ಪುಟವನ್ನು ಮೇಲೆ ಹೇಳಿದಂತೆ ಸಂಪಾದಕರ ಪುಟದಲ್ಲಿಯೇ ಉಳಿಸಿಕೊಳ್ಳುವುದೋ ಅಥವಾ ವಿಕಿಪೀಡಿಯ:ಯೋಜನೆ ಇದರ ಕೆಳಗೆ ಸೇರಿಸುವುದು ಎಂದು ಸಮುದಾಯ ತಿಳಿಸಬೇಕೆಂದು ಕೋರುತ್ತಿದ್ದೇವೆ. ತುಂಬಾ ಉದ್ದನೆಯ ಯೋಜನಾ ಹೆಸರನ್ನು ಬಳಸುವುದು ವಿಕಿಯಲ್ಲಿ ಸಾಧ್ಯವಿಲ್ಲ. ಆದ್ದರಿಂದ ಚುಟುಕು ಯೋಜನಾ ಹೆಸರುಗಳನ್ನು ಅಥವಾ ಯೋಜನೆಯ ಸಂಖ್ಯೆ ಬಳಸಿಕೊಳ್ಳಬಹುದು. ನಮ್ಮ ಯೋಜನೆಯ ಕಳೆದ ಒಂದು ತಿಂಗಳ ಕೆಲಸದ ವರದಿ ಮತ್ತು ಮುಂದೆ ನೆಡೆಯುವ ಕಾರ್ಯಕ್ರಮಗಳನ್ನು ಯೋಜನಾ ಪುಟದಲ್ಲಿ ಹಾಗೂ ಅರಳಿ ಕಟ್ಟೆಯ ಈ ಚರ್ಚೆಯಲ್ಲಿಯೂ(ಸಂಕ್ಷಿಪ್ತವಾಗಿ) ಪ್ರಕಟಿಸಾಲಾಗುವುದು. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೩:೧೧, ೨೪ ಜನವರಿ ೨೦೧೬ (UTC)
ಈ ಯೋಜನೆಯ ಔಟ್‍ಪುಟ್ ಅರ್ಥಾತ್ ಪುಸ್ತಕಗಳ ಪಟ್ಟಿ ಎಲ್ಲಿದೆ?--ಪವನಜ (ಚರ್ಚೆ) ೦೬:೧೩, ೧೭ ಜನವರಿ ೨೦೧೭ (UTC)

ಸೆಪ್ಟೆಂಬರ್ ತಿಂಗಳ ಚುಟುಕು ಲೇಖನಗಳ ಪಟ್ಟಿ[ಬದಲಾಯಿಸಿ]

ಕನ್ನಡ ವಿಕಿಪೀಡಿಯದಲ್ಲಿ ತಯಾರಾಗಿರುವ ಚುಟುಕು ಲೇಖನಗಳನ್ನು ಉತ್ತಮ ಲೇಖನಗಳಾಗಿ ಪರಿವರ್ತಿಸುವುದರಿಂದ ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಿಸಬಹುದು. ಈ ಕಾರ್ಯಕ್ಕೆ ಕನ್ನಡ ವಿಕಿಪೀಡಿಯದ ಎಲ್ಲಾ ಆಸಕ್ತ ಲೇಖಕರು ಕೈಜೋಡಿಸುವ ಪ್ರಯತ್ನ ಇದಾಗಿದೆ.


ಕನ್ನಡ ವಿಕಿಪೀಡಿಯದಲ್ಲಿ ೨೦೧೫ ಸೆಪ್ಟೆಂಬರ್ ತಿಂಗಳಿನಲ್ಲಿ ತಯಾರಾದ ಚುಟುಕು ಲೇಖನಗಳ ಯಾದಿ ಇಲ್ಲಿದೆ.

ಈ ಚುಟುಕು ಲೇಖನಗಳನ್ನು, ಲೇಖನ ಪ್ರಾರಂಭಿಸಿರುವ ಸಂಪಾದಕರು ಮತ್ತಷ್ಟು ಮಾಹಿತಿ ಮತ್ತು ಉಲ್ಲೇಖಗಳನ್ನು ಸೇರಿಸುವ ಮೂಲಕ ಉತ್ತಮಗೊಳಿಸಬೇಕಾಗಿ ವಿನಂತಿ. ಕನ್ನಡ ವಿಕಿಪೀಡಿಯದ ಬೇರೆ ಸಂಪಾದಕರು ಸಹ ಈ ಕಾರ್ಯದಲ್ಲಿ ಕೈ ಜೋಡಿಸಬೇಕಾಗಿ ವಿನಂತಿ.

--Lahariyaniyathi (ಚರ್ಚೆ) ೦೩:೩೯, ೪ ಅಕ್ಟೋಬರ್ ೨೦೧೫ (UTC)

ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೫-೧೬ ಗೆ ಲೇಖನ ಸಹಾಯ[ಬದಲಾಯಿಸಿ]

ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೫-೧೬ ಯ ವಿವರಗಳು ಈ ಪುಟದಲ್ಲಿವೆ. ಆ ಪುಟದ ಕೊನೆಯ ವಿಭಾಗವನ್ನುಗಮನಿಸಿ. ಎಸ್.ಡಿ.ಎಂ. ಕಾಲೇಜು ಉಜಿರೆಯಲ್ಲಿ ಸ್ನಾತಕೋತ್ತರ ವಿಷಯವನ್ನು ಕಲಿಯುತ್ತಿರುವ ಎಲ್ಲ ವಿಭಾಗಗಗಳು ಈ ಲೇಖನ ತಯಾರಿಯ ವಿಷಯದಲ್ಲಿ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಕನ್ನಡ ವಿಕಿಪೀಡಿಯ ಸಮುದಾಯವು ಅಲ್ಲಿ ನಮೂದಿಸಿದ ವಿಭಾಗಗಳಲ್ಲಿ ಒಂದೊಂದು ವಿಭಾಗದಲ್ಲೂ ಐದು ಲೇಖನವನ್ನು ಸೂಚಿಸಬೇಕು. ಆ ಲೇಖನಗಳನ್ನು ಅವರು ತಯಾರು ಮಾಡುತ್ತಾರೆ. ಆ ವಿಷಯದ ಲೇಖನ ಕನ್ನಡ ವಿಕಿಪಿಡಿಯದಲ್ಲಿ ಈಗಾಗಲೇ ಇರಬಾರದು. ಅದೇ ವಿಷಯದ ಇಂಗ್ಲಿಶ್ ವಿಕಿಪೀಡಿಯದ ಲೇಖನದ ಕೊಂಡಿ ನೀಡಬೇಕು. ಆಗ ಅವರಿಗೆ ಲೇಖನ ತಯಾರು ಮಾಡಲು ಸಹಾಯ ಆಗುತ್ತದೆ. ದಯವಿಟ್ಟು ಕನ್ನಡ ವಿಕಿಪೀಡಿಯ ಸಮುದಾಯವು ಈ ಐದು ವಿಭಾಗಗಳಲ್ಲಿ ಅಗತ್ಯ ಲೇಖನಗಳನ್ನು ಸೂಚಿಸಿ ಸಹಾಯ ಮಾಡಬೇಕು.--Pavanaja (ಚರ್ಚೆ) ೧೨:೨೫, ೧೦ ಅಕ್ಟೋಬರ್ ೨೦೧೫ (UTC)

ಡಿಜಿಟಲ್ ಸಂಪನ್ಮೂಲ ಕೇಂದ್ರ ಸ್ಥಾಪಿಸುವ ಬಗ್ಗೆ[ಬದಲಾಯಿಸಿ]

ಸಿಐಎಸ್-ಎ೨ಕೆಯು ಕನ್ನಡ ವಿಕಿಮೀಡಿಯ ಸಮುದಾಯವು ಉತ್ತಮ ಪರಿಣಾಮಕಾರಿಯಾಗಿ ಮಾಡುತ್ತಿರುವ ಕೆಲಸಗಳನ್ನು ಇನ್ನಷ್ಟು ಹೆಚ್ಚು ಫಲಕಾರಿಯಾಗುವಂತೆ ಮಾಡಲು ಸಹಾಯ ಮಾಡಲು ಇಚ್ಛಿಸುತ್ತಿದೆ. ಕನ್ನಡ ವಿಕಿಮೀಡಿಯ ಯೋಜನೆಗಳನ್ನು ಬಲಪಡಿಸಲು ಅಗತ್ಯ ಸಂಪನ್ಮೂಲಗಳನ್ನು ವರ್ಗಾಯಿಸಲು, ಹಂಚಲು ಮತ್ತು ಹೊಸ ಸಂಪನ್ಮೂಲಗಳನ್ನು ತಯಾರಿಸಲು ಸಹಾಯಕಾರಿಯಾಗುವಂತೆ ಒಂದು ಡಿಜಿಟಲ್ ಸಂಪನ್ಮೂಲ ಕೇಂದ್ರವನ್ನು ಸ್ಥಾಪಿಸಲು ಆಲೋಚಿಸಲಾಗುತ್ತಿದೆ. ಈ ದಿಸೆಯಲ್ಲಿ ಕನ್ನಡ ವಿಕಿಮೀಡಿಯ ಸಮುದಾಯವು ಅಗತ್ಯ ಡಿಜಿಟಲ್ ಸಂಪನ್ಮೂಲಗಳನ್ನು (ಸ್ಕ್ಯಾನರ್, ರೆಕಾರ್ಡರ್, ಇತ್ಯಾದಿ) ಪಟ್ಟಿ ಮಾಡುವಂತೆ ಕೋರಲಾಗಿದೆ. ಹಾಗೆಯೇ ಈ ಸಂಪನ್ಮೂಲಗಳನ್ನು ಎಲ್ಲಿ ಇಡಬಹುದು ಹಾಗೂ ಇದರ ಉಸ್ತುವಾರಿಯನ್ನು ಯಾರು ವಹಿಸಿಕೊಳ್ಳಬಹುದು ಎಂಬುದನ್ನೂ ಸೂಚಿಸುವಂತೆ ಕೋರಲಾಗುತ್ತಿದೆ--Pavanaja (ಚರ್ಚೆ) ೧೦:೦೧, ೧೩ ಅಕ್ಟೋಬರ್ ೨೦೧೫ (UTC)

ಇದು ಸಮುದಾಯಕ್ಕೆ ಅನುಕೂಲವಾಗುವ ತುಂಬಾ ಒಳ್ಳೆಯ ಆಲೋಚನೆ. ಇದರ ಈಗಿನ ಸ್ಥಿತಿ-ಗತಿ ಬಗ್ಗೆ ದಯಮಾಡಿ ಹೇಳುವಿರಾ? ಧನ್ಯವಾದಗಳು. -- Csyogi (ಚರ್ಚೆ) ೧೮:೦೮, ೩೦ ಡಿಸೆಂಬರ್ ೨೦೧೫ (UTC)
ಒಂದು ಸ್ಕ್ಯಾನರ್ ಮತ್ತು ಕೆಲವು ಪುಸ್ತಕಗಳು ಸದ್ಯಕ್ಕೆ ಬೆಂಗಳೂರಿನ ಸಿಐಎಸ್ ಕಚೇರಿಯಲ್ಲಿ ಲಭ್ಯವಿವೆ--Pavanaja (ಚರ್ಚೆ) ೦೫:೪೧, ೨೮ ಜನವರಿ ೨೦೧೬ (UTC)

ಮಾಡ್ಯೂಲ್:Citation/CS1/Date_validation ನಲ್ಲಿನ Lua error/ದೋಷಗಳನ್ನು ಸರಿಪಡಿಸಲಾಗಿದೆ.[ಬದಲಾಯಿಸಿ]

" Lua error in ಮಾಡ್ಯೂಲ್:Citation/CS1/Date_validation at line 34: attempt to compare number with nil." ಎಂದು ಉಲ್ಲೇಖನಗಳ ಸ್ಥಳದಲ್ಲಿ ಕಂಡುಬರುತ್ತಿದ್ದ ಕೆಂಪು ದೋಷಗಳನ್ನು ಬರದಂತೆ ಮಾಡಿದ್ದು, ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗಿದೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೪:೩೬, ೧೬ ಅಕ್ಟೋಬರ್ ೨೦೧೫ (UTC)

ಗ್ಲೋಬಲ್ ಕಾಂಗ್ರೆಸ್‍ನಲ್ಲಿ ಭಾಗವಹಿಸುವ ಬಗ್ಗೆ[ಬದಲಾಯಿಸಿ]

ದೆಹಲಿಯಲ್ಲಿ ಡಿಸೆಂಬರ್ ೧೫ ರಿಂದ ೧೭ರ ತನಕ ಬೌದ್ಧಿಕ ಹಕ್ಕುಗಳ ಬಗ್ಗೆ ಗ್ಲೋಬಲ್ ಕಾಂಗ್ರೆಸ್ ಕಾರ್ಯಕ್ರಮವಿದೆ. ಅದರಲ್ಲಿ ಭಾಗವಹಿಸಲು ಕನ್ನಡ ವಿಕಿಮೀಡಿಯ ಸಮುದಾಯದಿಂದ ಒಬ್ಬರನ್ನು ಆಯ್ಕೆ ಮಾಡಬೇಕಾಗಿದೆ. ಭಾಗವಹಿಸಲು ಆಸಕ್ತಿ ಇರುವವರು ತಮ್ಮ ಹೆಸರನ್ನು ತಾವೇ ಸೂಚಿಸಬಹುದು ಅಥವಾ ಬೇರೆಯವರೂ ಸೂಚಿಸಬಹುದು. ಹೆಚ್ಚಿನ ವಿವರಗಳು ಈ ಪುಟದಲ್ಲಿವೆ.--Pavanaja (ಚರ್ಚೆ) ೦೪:೨೪, ೨೦ ಅಕ್ಟೋಬರ್ ೨೦೧೫ (UTC)

ಈ ಕಾರ್ಯಕ್ರಮವು ಮುಕ್ತ ಲಭ್ಯತೆ, ಮುಕ್ತ ಶಿಕ್ಷಣ ಸಂಪನ್ಮೂಲಗಳು, ಮುಕ್ತ ಜ್ಞಾನ ಮತ್ತು ಇತರೆ ಸ್ವತಂತ್ರ ಮತ್ತು ಮುಕ್ತ ಸಂಸ್ಕೃತಿ ಸುತ್ತಲಿನ ವಿಷಯಗಳ ಬಗ್ಗೆ ನೆಡೆದ ಉತ್ತಮ ಕಾರ್ಯಕ್ರಮವಾಗಿತ್ತು ಎಂದೆನುಸುತ್ತದೆ. ಇದರಲ್ಲಿ ಭಾಗವಹಿಸಿದವರು ತಮ್ಮ ಕಲಿಕೆಯನ್ನು ಕನ್ನಡ ವಿಕಿಮೀಡಿಯ ಸಮುದಾಯದೊಂದಿಗೆ ಹಂಚಿಕೊಂಡರೆ ವಿಕಿಮೀಡಿಯದ ಹಲವಾರು ಯೋಜನೆಗಳ(ವಿಕಿಪೀಡಿಯ, ವಿಕ್ಷನರಿ,ವಿಕಿಸೋರ್ಸ್, etc,.,) ಮುಖಾಂತರ ಈ ಮುಕ್ತ-ಜ್ಞಾನ ಚಳುವಳಿಯಲ್ಲಿ ಭಾಗಿಯಾಗಿರುವ ಸಮುದಾಯದ ಇತರೆ ಸದಸ್ಯರಿಗೂ ಉಪಯುಕ್ತವಾಗುಹುದು. ಧನ್ಯವಾದಗಳು -- Csyogi (ಚರ್ಚೆ) ೧೭:೪೩, ೩೧ ಡಿಸೆಂಬರ್ ೨೦೧೫ (UTC)

ಕನ್ನಡ ವಿಕಿಪೀಡಿಯಕ್ಕೆ ಅಗತ್ಯ ಸಹಾಯ ಕಡತ ಮತ್ತು ವೀಡಿಯೋಗಳ ಬಗ್ಗೆ[ಬದಲಾಯಿಸಿ]

ಕನ್ನಡ ವಿಕಿಪೀಡಿಯಕ್ಕೆ ಹೊಸದಾಗಿ ಸದಸ್ಯರಾಗುವವರಿಗೆ ಸಹಾಯ ಮಾಡಲು ಟ್ಯಟೋರಿಯಲ್ ಫೈಲ್ ಮತ್ತು ವೀಡಿಯೋಗಳು ಲಭ್ಯವಿವೆ. ಕನ್ನಡ ವಿಕಿಪೀಡಿಯ ಎಂದರೆ ಏನು ಎಂದು ವಿವರಿಸುವ ಕರಪತ್ರವೂ ಇದೆ. ಈಗಾಗಲೇ ಇರುವ ಟ್ಯುಟೋರಿಯಲ್ ವೀಡಿಯೋಗಳು ಪರಿಪೂರ್ಣವಲ್ಲ. ಅವುಗಳನ್ನು ಉತ್ತಮ ಪಡಿಸಬೇಕಾಗಿದೆ. ಇಂಗ್ಲಿಶ್ ಭಾಷೆಯಲ್ಲಿ ಲಭ್ಯವಿರುವ ಹಲವು ಕಡತಗಳನ್ನು ಕನ್ನಡೀಕರಿಸಬೇಕಾಗಿದೆ. ಈ ವಿಷಯಗಳಲ್ಲಿ ಮುಂದುವರೆಯಲು ಸಮುದಾಯದ ಸಹಯೋಗ ಬೇಕಾಗಿದೆ. ಇನ್ನೂ ಯಾವ ಯಾವ ಕಡತಗಳು ಮತ್ತು ವೀಡಿಯೋಗಳು ಬೇಕಾಗಿವೆ ಎಂಬುದಾಗಿ ಇಲ್ಲಿ ಸೂಚಿಸಬಹುದು.--Pavanaja (ಚರ್ಚೆ) ೦೪:೩೫, ೨೦ ಅಕ್ಟೋಬರ್ ೨೦೧೫ (UTC)

  • ಕೆಲವು ಇಂಗ್ಲಿಶ್ ಕಡತಗಳು ಇಲ್ಲಿವೆ - Bookshelf
ವಿಕಿಪೀಡಿಯ ಸಂಪಾದಿಸುಲು ಬರುವ ಹೊಸಬರಿಗೆ ತುಂಬಾ ಸಹಾಯವಾಗುವ ಕೈಪಿಡಿಯಾಗಿದೆ. ಈ ಕಡತದಲ್ಲಿರುವ ಮಾಹಿತಿಯೆಲ್ಲವೂ ನಮ್ಮ ವಿಕಿಯ ಸಹಾಯ ಪುಟಗಳಲ್ಲಿದೆಯೇ ಅಥವ ಸೇರಿಸಬೇಕೇ? ಧನ್ಯವಾದಗಳು -- Csyogi (ಚರ್ಚೆ) ೧೮:೦೮, ೩೧ ಡಿಸೆಂಬರ್ ೨೦೧೫ (UTC)

ಮೈಸೂರಿನಲ್ಲಿ ಚರ್ಚೆ ಮಾಡೋಣ[ಬದಲಾಯಿಸಿ]

ಮೈಸೂರಿನಲ್ಲಿ ಜನವರಿ ೧೧, ೨೦೧೬ ರಿಂದ ೧೩, ೨೦೧೬ ರ ತನಕ ಸಂಪಾದನೋತ್ಸವ ನಡೆಯಲಿದೆ. ವಿವರಗಳು ಈ ಪುಟದಲ್ಲಿವೆ. ಆ ಪ್ರಯುಕ್ತ ನಾನು ಈ ಮೂರು ದಿನಗಳಲ್ಲಿ ಮೈಸೂರಿನಲ್ಲಿರುತ್ತೇನೆ. ಈ ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯಕ್ಕೆ ಅಗತ್ಯ ಸಹಾಯ ಕಡತ ಮತ್ತು ವೀಡಿಯೋಗಳ ತಯಾರಿ ಬಗ್ಗೆ ಚರ್ಚೆ ಮಾಡೋಣ. ನಾನು ಮಾನಸ ಗಂಗೋತ್ರಿಯಲ್ಲಿರುತ್ತೇನೆ. ದಯವಿಟ್ಟು ಅಲ್ಲಿಗೆ ಬಂದು ಸಲಹೆ ನೀಡಬೇಕಾಗಿ ವಿನಂತಿ. ಸಾಯಂಕಾಲ ೬ ಗಂಟೆಯ ನಂತರ ಬೇರೆ ಯಾವ ಸ್ಥಳದಲ್ಲಾದರೂ ಭೇಟಿ ಮಾಡಲು ನಾನು ಸಿದ್ಧ. ದಯವಿಟ್ಟು pavanaja AT cis-india.org ಮೂಲಕ ಸಂಪರ್ಕಿಸಬೇಕಾಗಿ ವಿನಂತಿ.--Pavanaja (ಚರ್ಚೆ) ೧೨:೧೪, ೯ ಜನವರಿ ೨೦೧೬ (UTC)

ವಿಕಿಪೀಡಿಯ ಏಷ್ಯನ್ ತಿಂಗಳು[ಬದಲಾಯಿಸಿ]

ವಿಕಿಪೀಡಿಯ ಏಷ್ಯನ್ ತಿಂಗಳು(Wikipedia Asian Month) ಏಷ್ಯಾದ ವಿಕಿಪೀಡಿಯ ಸಮುದಾಯಗಳ ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸುವ ಗುರಿಯಿಂದ ಆಯೋಜಿಸಲಾದ ಆನ್‌ಲೈನ್ ಸಂಪಾದನೋತ್ಸವವಾಗಿದೆ. ನವೆಂಬರ್ ೨೦೧೫ರ ಉದ್ದಕ್ಕೂ ಕನ್ನಡ ವಿಕಿಪೀಡಿಯದಲ್ಲಿ ನೆಡೆಯುವ ಏಷ್ಯನ್ ತಿಂಗಳ(Asian Month) ಉದ್ದೇಶ, ಭಾರತವನ್ನು ಹೊರತುಪಡಿಸಿ ಇತರ ಏಷ್ಯನ್ ದೇಶಗಳ ಬಗೆಗಿನ ಲೇಖನಗಳ ಪ್ರಮಾಣ ಮತ್ತು ಗುಣಮಟ್ಟವನ್ನು ಉತ್ತಮಪಡಿಸುವುದಾಗಿದೆ. ಭಾಗವಹಿಸಿ ನಿಮ್ಮ ಕೊಡುಗೆಯನ್ನು ಇಲ್ಲಿ ಸಲ್ಲಿಸಿ.

ಈ ಆನ್‌ಲೈನ್ ಸಂಪಾದನೋತ್ಸವದಲ್ಲಿ ಭಾಗವಹಿಸಿದ ಸಮುದಾಯದವರೆಲ್ಲರಿಗೂ ಅಭಿನಂದನೆಗಳು! ಇದರ ಫಲಿತಾಂಶಗಳನ್ನು ಈ ಪುಟದಲ್ಲಿ ನೋಡಬಹುದು. ಪ್ರಥಮ ವರ್ಷವಾದ ಈ ವರ್ಷದ ವಿಕಿಪೀಡಿಯ ಏಷ್ಯನ್ ತಿಂಗಳಲ್ಲಿ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ಕಾಣದಿದ್ದರೂ, ಈ ಅಂತರಾಷ್ಟ್ರೀಯ ಸಂಪಾದನೋತ್ಸವದಲ್ಲಿ ಕನ್ನಡ ಸಮುದಾಯವು ಭಾಗಿಯಾಗಿದ್ದು ಒಳ್ಳೆಯ ಸಂಗತಿಯಾಗಿದೆ. ಮುಂದಿನ ವರ್ಷದ ವಿಕಿಪೀಡಿಯ ಏಷ್ಯನ್ ತಿಂಗಳಲ್ಲಿ ಸಮುದಾಯದಿಂದ ಇನ್ನೂ ಉತ್ತಮ ಪಾಲ್ಗೊಳ್ಳುವಿಕೆಯನ್ನು ಆಶಿಸೋಣ.!! ವಿಕಿಪೀಡಿಯ ಏಷ್ಯನ್ ತಿಂಗಳನ್ನು ಪ್ರತಿ ವರ್ಷದ ನವೆಂಬರ್‌ನಲ್ಲಿ ಆಯೋಜಿಸುವ ಆಶಯವಿದೆ. ಧನ್ಯವಾದಗಳು -- Csyogi (ಚರ್ಚೆ) ೧೯:೧೧, ೩೧ ಡಿಸೆಂಬರ್ ೨೦೧೫ (UTC)

ನವಂಬರ್ ಚುಟುಕು ಪುಟಗಳು[ಬದಲಾಯಿಸಿ]

ನವಂಬರ್ ತಿಂಗಳಲ್ಲಿ ಸೃಷ್ಟಿಸಲಾಗಿರುವ ಚುಟುಕು ಪುಟಗಳ ಸೂಚಿ ಇಲ್ಲಿದೆ. ಈ ಪುಟಗಳನ್ನು ಸಂಪಾದಿಸುವ ಕೆಲಸಕ್ಕೆ ಕೈಜೋಡಿಸಬೇಕಾಗಿ ವಿನಂತಿ. Lahariyaniyathi (ಚರ್ಚೆ) ೧೩:೩೦, ೨ ನವೆಂಬರ್ ೨೦೧೫ (UTC)


ಇದು ನನ್ನ ಪ್ರಥಮ ಲೇಖನ. ದಯಮಾಡಿ ಈ ಲೇಖನದ ಬಗ್ಗೆ ತಮ್ಮ ಅಭಿಪ್ರಾಯ ,ಸಲಹೆ ಮತ್ತು ಸೂಚನೆಗಳನ್ನು ತಿಳಿಸಿ.-ನಿತಿನ್ ಹೆಗ್ಡೆ

ನಿಮ್ಮ ಮೊದಲ ಲೇಖನಕ್ಕೆ ಅಭಿನಂದನೆಗಳು ಮತ್ತು ಧನ್ಯವಾದಗಳು. ಲೇಖನದ ಭಾಷೆ, ವ್ಯಾಪ್ತಿ ಎಲ್ಲ ಸರಿಯಾಗಿದೆ. ಉಲ್ಲೇಖಗಳನ್ನು ಮಾತ್ರ ಸರಿಯಾಗಿ ನೀಡಿಲ್ಲ. ಯಾವ ಉಲ್ಲೇಖ ಯಾವ ವಾಕ್ಯಕ್ಕೆ ಸಂಬಂಧಿಸಿದ್ದೋ ಅಲ್ಲೇ ಅದನ್ನು ನೀಡಬೇಕು--Pavanaja (ಚರ್ಚೆ) ೦೯:೩೩, ೯ ನವೆಂಬರ್ ೨೦೧೫ (UTC)

-ಧನ್ಯವಾದಗಳು. ಉಲ್ಲೇಖಗಳನ್ನು ಸೇರಿಸಲು, ದಯವಿಟ್ಟು ಟ್ಯುಟೋರಿಯಲ್ ನೋಡಿ..https://commons.wikimedia.org/wiki/File:Wikipedia_Editing_Tutorial_Kannada.pdf. ಪುಟ ಸಂಖ್ಯೆ. ೧೨, ಹಾಗೂ ನಿಮ್ಮ ಈ-ಮೇಲ್ ಗೆ ಸ್ಕ್ರೀನ್ ಶಾಟ್ ನ್ನು ಕಳುಹಿಸಿದ್ದೇನೆ. ವಿದ್ಯಾಧರ ಚಿಪ್ಳಿ (ಚರ್ಚೆ) ೧೬:೨೨, ೧೯ ನವೆಂಬರ್ ೨೦೧೫ (UTC).

ನಿತಿನ್ ಹೆಗ್ಡೆರವರೇ, ನಿಮ್ಮ ಪ್ರಥಮ ಲೇಖನವನ್ನು ಉತ್ತಮವಾಗಿ ಸಂಪಾದಿಸಿದ್ದೀರಿ! ಅಭಿನಂದನೆಗಳು!!
ಲೇಖನದ ಕೊಂಡಿಗಳಿಗೆ ಸಂಬಂದಿಸಿದಂತೆ ಒಂದು ಸಣ್ಣ ಸಲಹೆ: ವಿಕಿಕೊಂಡಿಗಳನ್ನು ಸೇರಿಸುವಾಗ ಪೂರ್ಣಪದಕ್ಕೆ ಸೇರಿಸಿದರೆ ಉತ್ತಮವಾಗಿರುತ್ತದೆಂದು ನನ್ನ ಅನಿಸಿಕೆ. (ಉದಾ: [[ಉಷ್ಣತೆ]]ಯನ್ನು ಇದರ ಬದಲು '''[[ಉಷ್ಣತೆ|ಉಷ್ಣತೆಯನ್ನು]]''' ). ವಿಕಿಕೊಂಡಿಗಳ ಬಗ್ಗೆ ಹೆಚ್ಚಿನದಕ್ಕಾಗಿ, ಮೇಲಿನ ವಿಕಿ ಕೈಪಿಡಿಯನ್ನು ನೋಡಿ ಅಥವಾ ಇಲ್ಲಿ ನೋಡಿರಿ. ಸಮುದಾಯದ ಇತರರು ಸಲಹೆ/ಸೂಚನೆಗಳನ್ನು ನೀಡಲು ಕೋರಿಕೊಳ್ಳುತ್ತೇನೆ. ನಿಮ್ಮ ವಿಕಿಪಯಣ ಮುಂದುವರೆಯಲಿ.! ಧನ್ಯವಾದಗಳು. -- Csyogi (ಚರ್ಚೆ) ೨೦:೦೧, ೩೧ ಡಿಸೆಂಬರ್ ೨೦೧೫ (UTC)

UPDATE: 2015 Global Congress on Intellectual Property and the Public Interest[ಬದಲಾಯಿಸಿ]

Hello,
Apologies for writing in English, please feel free to translate this message to your language. Earlier, we announced in the mailing lists informing you all about the 2015 Global Congress on Intellectual Property and the Public Interest that is going to be held between 15 and 17 December at National Law University, Delhi. 10 Wikimedians from various Indian language Wikimedia communities and Indian English Wikipedia/Wikimedia community will be selected to attend this event where the event is aimed at helping them to work on various policy level works for their respective communities.

So far, from your community we have got one nomination. We would like more applications from your community from which you would be selecting only one participant by endorsing. Please edit the subsections below and endorse the applicant you think should be representing your community in the event. We also encourage more applicants, especially more female applicants, to apply and share their application with other fellow Wikimedians in your language community for endorsements. Though we understand it is quite difficult to assess one’s contribution on the basis of endorsements

Last date of nomination/endorsement is: 15 November 2015, 23:59 (IST) --Titodutta (ಚರ್ಚೆ) ೧೨:೫೧, ೯ ನವೆಂಬರ್ ೨೦೧೫ (UTC)

User:Vishwanatha Badikana[ಬದಲಾಯಿಸಿ]

Endorsements[ಬದಲಾಯಿಸಿ]

See endorsements on Meta

Update[ಬದಲಾಯಿಸಿ]

Thanks for getting involved.. Based on your discussion and endorsements the following user has been selected: User:Vishwanatha Badikana. --Titodutta (ಚರ್ಚೆ) ೦೫:೨೦, ೨೮ ನವೆಂಬರ್ ೨೦೧೫ (UTC)

Hope the user who has attended this event has found this to be was very useful for his work around open-knowledge, open-access, etc,. Request the user to share his learnings with the community so that it can also help other community members here. Happy editing! Thanks. -- Csyogi (ಚರ್ಚೆ) ೨೦:೦೭, ೩೧ ಡಿಸೆಂಬರ್ ೨೦೧೫ (UTC)
It will be great if the attendee can share his experience with the community. -- ಕಿರಣ್, ೦೩:೨೧, ೧೨ ಜನವರಿ ೨೦೧೬ (UTC)

Community Wishlist Survey[ಬದಲಾಯಿಸಿ]

Community Tech Team via MediaWiki message delivery (ಚರ್ಚೆ) ೨೧:೫೮, ೯ ನವೆಂಬರ್ ೨೦೧೫ (UTC)

Wikimania 2016 scholarships ambassadors needed[ಬದಲಾಯಿಸಿ]

Hello! Wikimania 2016 scholarships will soon be open; by the end of the week we'll form the committee and we need your help, see Scholarship committee for details.

If you want to carefully review nearly a thousand applications in January, you might be a perfect committee member. Otherwise, you can volunteer as "ambassador": you will observe all the committee activities, ensure that people from your language or project manage to apply for a scholarship, translate scholarship applications written in your language to English and so on. Ambassadors are allowed to ask for a scholarship, unlike committee members.

Wikimania 2016 scholarships subteam ೧೦:೪೭, ೧೦ ನವೆಂಬರ್ ೨೦೧೫ (UTC)

Highlight or Discuss your community issues in CIS-A2K's policy handbook[ಬದಲಾಯಿಸಿ]

Hello,
Currently at CIS-A2K, we are working on a handbook called "Indic Wikipedia Policies and Guidelines Handbook" where we are discussing a number of things such as: Creating new policies, Modifying existing ones; and to explain these we had to discuss Village Pump, Consensus etc. The book is in English, but we hope to translate and print the book in a few Indian languages.

Now,

a) We are eager to add your frequently asked questions on policies and guidelines, and discuss the difficulties you are facing to manage, enforce or deal with any policy on your Wikipedia.

For this reason, we are inviting you to ask questions or discuss things related to your Wikipedia's policies and guidelines.

Selected questions or discussions will be published in our handbook and askers/participants will be given credits in the book.

and/or

b) We are also inviting you to preview the handbook and give your feedback to improve it.

Please fill this form and let us know if you want to join this survey

Regards. --Titodutta (ಚರ್ಚೆ) ೦೯:೧೭, ೧೭ ನವೆಂಬರ್ ೨೦೧೫ (UTC)

Harassment consultation[ಬದಲಾಯಿಸಿ]

ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ

The Community Advocacy team the Wikimedia Foundation has opened a consultation on the topic of harassment on Meta. The consultation period is intended to run for one month from today, November 16, and end on December 17. Please share your thoughts there on harassment-related issues facing our communities and potential solutions. (Note: this consultation is not intended to evaluate specific cases of harassment, but rather to discuss the problem of harassment itself.)

Regards, Community Advocacy, Wikimedia Foundation

ಕನ್ನಡ page is being continuously vandalized by anonymous users. Would be great if admins can keep this article in their watchlist. I have reverted some edits. Csyogi (ಚರ್ಚೆ) ೦೯:೩೯, ೨೨ ನವೆಂಬರ್ ೨೦೧೫ (UTC)

Thanks for protecting the page. Csyogi (ಚರ್ಚೆ) ೧೦:೫೫, ೨೨ ನವೆಂಬರ್ ೨೦೧೫ (UTC)
ಕನ್ನಡ ಪುಟಕ್ಕೆ ಮತ್ತೆ ಬೇಡದಿರುವ ಬದಲಾವಣೆಗಳನ್ನು ನೋಂದಾಯಿಸಿದ ಸದಸ್ಯರೇ ಮಾಡಿತ್ತಿದ್ದಾರೆ. ದಯವಿಟ್ಟು ಈ ಪುಟದ ಚರ್ಚಾಪುಟವನ್ನು ನೋಡಲು ವಿನಂತಿಸುತ್ತೇನೆ. ಧನ್ಯವಾದಗಳು. -- Csyogi (ಚರ್ಚೆ) ೦೭:೩೫, ೨೭ ಡಿಸೆಂಬರ್ ೨೦೧೫ (UTC)

ಪ್ರೋಗ್ರಾಂ ಅಸೋಸಿಯೇಟ್ ನೇಮಕ[ಬದಲಾಯಿಸಿ]

ಸೆಂಟರ್ ಫಾರ್ ಇಂಟರ್‌ನೆಟ್ ‍ ಆಂಡ್ ಸೊಸೈಟಿ (ಸಿಐಎಸ್) ಅವರು ಕನ್ನಡ ಭಾಷೆಗಾಗಿ ಕೆಲಸ ಮಾಡಲು ಪ್ರೋಗ್ರಾಂ ಅಸೋಸಿಯೇಟ್ ಕೆಲಸಕ್ಕೆ ಅರ್ಜಿಗಳನ್ನು ಆಹ್ವಾನಿಸಿದ್ದು ನೆನಪಿರಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಎರಡು ಸಲ ಮುಂದೂಡಲಾಯಿತು. ಹರೀಶ, ತೇಜಸ್ ಜೈನ್ ಮತ್ತು ವಿಕಾಸ ಹೆಗಡೆಯರು ಆಯ್ಕೆ ಸಮಿತಿಯ ಸದಸ್ಯರಾಗಿದ್ದುಕೊಂಡು ಅಂತಿಮವಾಗಿ ಅನಂತ ಸುಬ್ರಾಯರನ್ನು ಆಯ್ಕೆ ಮಾಡಿದ್ದಾರೆ. ಈ ಬಗ್ಗೆ ಕನ್ನಡ ವಿಕಿಪೀಡಿಯ ಮೈಲಿಂಗ್ ಲಿಸ್ಟ್ ಮೂಲಕ ಘೋಷಣೆ ಮಾಡಲಾಗಿದೆ. ಅದು ಇಲ್ಲಿದೆ.

ಅನಂತ ಸುಬ್ಬರಾಯ ಬಗ್ಗೆ[ಬದಲಾಯಿಸಿ]

ಅನಂತ ಸುಬ್ಬರಾಯ ಅವರ ಹುಟ್ಟೂರು ಕರ್ನಾಟಕದ ತುಮಕೂರು. ಅವರು ತಮ್ಮ ಶಿಕ್ಷಣವನ್ನು ತುಮಕೂರಿನ ಮಹೇಶ್ ಪದವಿಪೂರ್ವ ಕಾಲೇಜಿನಲ್ಲಿ ಮಾಡಿದರು. ಈಗ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷ ಬಿ.ಎಸ್‍ಸಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಕ್ರೈಸ್ಟ್ ವಿಶ್ವವಿದ್ಯಾಲಯದ ಕನ್ನಡ ವಿಕಿಸೋರ್ಸ್ ಮತ್ತು ವಿಕಿಪೀಡಿಯ ಶಿಕ್ಷಣ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಸೆಂಟರ್ ಫಾರ್ ಇಂಟರ್ ನೆಟ್ ಸೊಸೈಟಿ ಆಯೋಜಿಸಿದ ತರಬೇತಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಇವರ ವೈಯುಕ್ತಿಕ ಜೀವನಕ್ಕೆ ಬರುವುದಾದರೆ ಖೋ-ಖೋ, ಸೈಕ್ಲಿಂಗ್, ಪುಸ್ತಕಗಳನ್ನು ಓದುವುದು ಮತ್ತು ದ್ವಿಚಕ್ರವಾಹನವನ್ನು ಓಡಿಸುವುದು ಇವರ ಆಸಕ್ತಿಯ ಕ್ಷೇತ್ರಗಳು. ಇವರು ಮಕ್ಕಳ ವಿದ್ಯಾಭ್ಯಾಸದಲ್ಲಿ ಸಹಾಯ ಮಾಡುವುದಕ್ಕಾಗಿ ಲಕ್ಷ್ಯ ಎಂಬ ಸರ್ಕಾರೇತರ ಸಂಸ್ಥೆಯೊಂದನ್ನು ಸ್ಥಾಪಿಸಿದ್ದಾರೆ. --Pavanaja (ಚರ್ಚೆ) ೧೬:೧೭, ೨೨ ನವೆಂಬರ್ ೨೦೧೫ (UTC)

ಸ್ವಾಗತ ಕೋರುವವರು[ಬದಲಾಯಿಸಿ]

- ಕನ್ನಡ ವಿಕಿಪೀಡಿಯದ ಹೊಸ ಪ್ರೋಗ್ರಾಂ ಅಸೋಸಿಯೇಟ್ ಶ್ರೀ ಅನಂತ ಸುಬ್ಬರಾಯರವರಿಗೆ ಶುಭಾಷಯಗಳು. ತಮ್ಮಿಂದ ವಿಕಿಪೀಡಿಯಕ್ಕೆ ಉತ್ತಮ ಸೇವೆ ದೊರಕಲಿ. ಹಾರೈಕೆಗಳು.ವಿದ್ಯಾಧರ ಚಿಪ್ಳಿ (ಚರ್ಚೆ) ೧೩:೫೪, ೨೪ ನವೆಂಬರ್ ೨೦೧೫ (UTC).

  1. ಶುಭ ಹಾರೈಸಿ. ಅನಿತಾ ಪಿ.ಹೆಚ್. (ಚರ್ಚೆ) ೧೫:೧೮, ೨೪ ನವೆಂಬರ್ ೨೦೧೫ (UTC).
  2. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು
  3. -- ತೇಜಸ್ / ಚರ್ಚೆ/ ೦೬:೧೭, ೩ ಡಿಸೆಂಬರ್ ೨೦೧೫ (UTC)

ಅನಿಸಿಕೆ[ಬದಲಾಯಿಸಿ]

  1. ಆಯ್ಕೆ ಸಮಿತಿಯ ಮಾಹಿತಿಯನ್ನು ಅರಳಿಕಟ್ಟೆಯಲ್ಲಿ ಹಂಚಿಕೊಳ್ಳಲಾಗಿಲ್ಲ. ಆಯ್ಕೆ ಸಮಿತಿಯ ಅನಿಸಿಕೆಗಳನ್ನಾದರೂ ಒಂದೆಡೆ ಸೇರಿಸಬಹುದಿತ್ತು. ಕನ್ನಡ ವಿಕಿಯ ಸುತ್ತ ನೆಡೆಯುವ ಕೆಲಸಗಳು ಪಾರದರ್ಶಕವಾಗಿರಲಿ. ಮೇಲಿಂಗ್‌ಲಿಸ್ಟ್ ನಲ್ಲಿ ಮಾಡಿದ ಘೋಷಣೆ ಇಂಗ್ಲೀಷ್‌ನಲ್ಲಿತ್ತು. ಅದನ್ನು ಕನ್ನಡದಲ್ಲಿ ಬರೆದು, ಪ್ರೋಗ್ರಾಮ್ ಅಸೋಸಿಯೇಟ್‌ ಸಮುದಾಯಕ್ಕೆ ಒದಗಿಸಿಕೊಡಬಹುದಾದ ಬೆಂಬಲದ ಬಗ್ಗೆ ವಿವರಿಸಿದ್ದರೆ ಉತ್ತಮವಾಗಿರುತ್ತಿತ್ತು. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೨೦:೩೭, ೨೯ ನವೆಂಬರ್ ೨೦೧೫ (UTC)
  2. ಅನಂತ ಸುಬ್ಬರಾಯರಿಗೆ ಕನ್ನಡ ವಿಕಿ ಬಳಗಕ್ಕೆ ಸಾಗತ. ತಮ್ಮ ಈ ಮೂರು ತಿಂಗಳ ಪ್ರಯೋಗಾತ್ಮಕ ಅವಧಿಯನ್ನು ಸಮುದಾಯ ಒರೆಹಚ್ಚಲು ಅನುಕೂಲವಾಗುವಂತೆ ಕೆಲ ವರದಿಗಳನ್ನು ನೀಡುವುದು ಉತ್ತಮವೆಂದು ನಾನು ಭಾವಿಸುತ್ತೇನೆ.
    • ಕೆಲಸದ ದಿನಗಳ ದೈನಂದಿನ ಕಾರ್ಯಕ್ರಮಗಳ ವರದಿ
    • ಯೋಜನೆಗಳ ಸ್ಥಿತಿಗತಿಗಳ ವರದಿ
    • ಯೋಜನೆಗಳ ಪ್ರಭಾವದ ವರದಿ
    • ಮುಂದಿನ ಕಾರ್ಯತಂತ್ರಗಳ ವರದಿ
      • ಸಮುದಾಯ ಬೆಳೆಸುವಬಗ್ಗೆ
      • ಲೇಖನಗಳ ಗುಣಮಟ್ಟ ಕಾಪಾಡಿಕೊಳ್ಳುವಬಗ್ಗೆ
      • ಸಹಭಾಗಿತ್ವಗಳ ಪ್ರಭಾವ ಹೆಚ್ಚಿಸುವ ಬಗ್ಗೆ
    • ಇತ್ಯಾದಿ

ಈಗಾಗಲೇ ನೀವು ಒಂದು ತಿಂಗಳು ಕಾರ್ಯ ಪೂರೈಸಿರಿರುವುದರಿಂದ ಕಳೆದ ಒಂದು ತಿಂಗಳ ವರದಿಯನ್ನು ಸದ್ಯದಲ್ಲಿ ಎದುರುನೋಡುತೀದ್ದೇನೆ -- ತೇಜಸ್ / ಚರ್ಚೆ/ ೦೬:೧೭, ೩ ಡಿಸೆಂಬರ್ ೨೦೧೫ (UTC)

ಅನಂತರೇ, ನಿಮ್ಮ ಉತ್ತರದ ನಿರೀಕ್ಷೆಯಲ್ಲಿದ್ದೇನೆ -- ತೇಜಸ್ / ಚರ್ಚೆ/ ೦೮:೦೧, ೭ ಡಿಸೆಂಬರ್ ೨೦೧೫ (UTC)
ನಾನೇನಾದರೂ ಅನಗತ್ಯ ವಿವರಗಳನ್ನು ಕೇಳಿದ್ದರೆ ವಿಕಿ ಬಳಗದ ಸದಸ್ಯರು ದಯವಿಟ್ಟು ತಿದ್ದಿ. ಸಂಬಂಧಿಸಿದವರ ಉತ್ತರವನ್ನು ಎದುರುನೋಡುತೀದ್ದೇನೆ -- ತೇಜಸ್ / ಚರ್ಚೆ/ ೦೭:೪೮, ೮ ಡಿಸೆಂಬರ್ ೨೦೧೫ (UTC)

ತೇಜಸ್ ರವರೆ ನನ್ನ ತಡವಾದ ಉತ್ತರಕ್ಕೆ ಕ್ಷಮೆಯಿರಲಿ

  • ಯೋಜನೆಗಳ ಸ್ಥಿತಿಗತಿಯ ವರದಿ ಮತ್ತು ಪ್ರಭಾವದ ವರದಿಯನ್ನು ಈಗಾಗಲೆ ಅರಳಿ ಕಟ್ಟೆಯಲ್ಲಿ ಪ್ರಕಟಿಸಿದ್ದೇನೆ.
  • ಕನ್ನಡ ವಿಕಿಯಸಮುದಾಯ ಲೆಖನಗಳ ಗುಣ ಮಟ್ಟವನ್ನು ಹೆಚ್ಚಾಗಿ ಗಮನಿಸುತ್ತಿದೆ ಅದಕಾಗಿ ನಾನು ಕೂಡ ಸಮುದಾಯಕ್ಕೆ ಬೇಕಾಗಿರುವಂತೆ ನಾನು ಕೆಲಸ ಮಾಡುತಿದ್ದೇನೆ. ಈಗಾಗಲೆ ವಿಕಿಯಲ್ಲಿ ಇರುವ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ನಾನು ನನ್ನ ಪ್ರಯತ್ನವನ್ನು ಮಾಡುತಿದ್ದೇನೆ, ಈ ಕೂಂಡಿಯಲ್ಲಿ ಮೊದಲು ೨೫೦೦ಲೇಖನಗಳಿದ್ದವು ಅದರೆ ಈಗ ೯೮೧ ಮಾತ್ರವಿದೆ. ಸೇಂಟ್ ಅಲೋಶಿಯಸ್ ಕಾಲೇಜ್ ಮಂಗಳೂರು, ಇಂಟರ್ನಗಳು ಕೂಡ ನನಗೆ ಸಾಹಾಯ ಸಹಾಯ ಮಾಡಿದರು.
  • ಉಲೇಖಗಳಿಲ್ಲದ ಲೇಖನಗಳು ಕನ್ನಡ ವಿಕಿಯಲ್ಲಿ ಕೆಲವಿದೆ. ಅವುಗಳಿಗೆ ನಾನು ಉಲ್ಲೇಖ ಸೇರಿಸುತ್ತಿದ್ದೇನೆ.
  • ಕೂಂಡಿಯಲ್ಲಿ ನಾನು ಮಾಡಿದ ಕೆಲಸದ ಪರಿಣಾಮದಿಂದ ಕನ್ನಡ ವಿಕಿಗೆ
  • ಕನ್ನಡ ವಿಕಿಸೋರ್ಸ್ ನಲ್ಲಿ ಹೆಚ್ಚಿನ ಕೆಲಸವಾಗಿಲ್ಲ, ಆದ್ದರಿಂದ ನಾನು ವಿಕಿಸೋರ್ಸ್ ಸಿನ ಪ್ರಸ್ತುತ ಸ್ಥಿತಿಯನ್ನು ಸಂಗ್ರಹಿಸಿದ್ದೇನೆ.
  • ನಿರಂಜನ ಮತ್ತು ಕರ್ನಾಟಕ ಸರ್ಕಾರ ನೀಡಿದ ಪುಸ್ತಕಗಳ ಕೆಲಸ ಮಾಡುತ್ತಿದ್ದೇನೆ.ನಿರಂಜನ ಅವರ ಪುಸ್ತಕಗಳು ಯಾವ ಯಾವ ಗ್ರಂಥಾಲದಲ್ಲಿದೆ ಎಂದು ಪತ್ತೆ ಹಚ್ಚಿ ಅದರ ಸ್ಕ್ಯಾನಿಂಗ್ ಪ್ರಾರಂಭಿಸಿದೇನೆ.ಅನಂತ್ (ಚರ್ಚೆ)
@Ananth subray: ಕೊನೆಯಂಚಿನ ಪುಟಗಳು ಇವುಗಳನ್ನು ಉದ್ಧರಿಸಲು ನೀವು ಮಾಡಿದ ಕೆಲಸವನ್ನು ವಿವರಿಸಬಹುದೇ? ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೮:೨೯, ೧೭ ಡಿಸೆಂಬರ್ ೨೦೧೫ (UTC)
TablesWikipediaKN.htm ಈ ಕೊಂಡಿ ನೀಡಿದ್ದರ ಉದ್ದೇಶ ಅರ್ಥವಾಗಲಿಲ್ಲ. ವಿವರಿಸಿ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೮:೩೨, ೧೭ ಡಿಸೆಂಬರ್ ೨೦೧೫ (UTC)

ಸಮ್ಮಿಲನ ೨೦[ಬದಲಾಯಿಸಿ]

ಹೊಸದಾಗಿ ನೇಮಕವಾಗಿರುವ ಪ್ರೋಗ್ರಾಂ ಅಸೋಸಿಯೇಟ್ ಕುರಿತು ಸಮುದಾಯದ ಅಭಿಪ್ರಾಯ ಪಡೆಯುಲು . ಹೆಚ್ಚಿನ ವಿವರಗಳಿಗೆ ಮತ್ತು ನೋಂದಣಿಗೆ ಈ ಪುಟಕ್ಕೆ ಭೇಟಿ ನೀಡಿ.--ಅನಂತ್ ೧೬:೫೩, ೨೩ ನವೆಂಬರ್ ೨೦೧೫ (UTC)

ಸಮ್ಮಿಲನ ಮುಗಿದಿದ್ದು, ಸಮುದಾಯದ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಸಾಧ್ಯವಾಗಿಲ್ಲ. ಸಮ್ಮಿಲನದಲ್ಲಿ ಚರ್ಚಿಸಿದ ವಿಷಯಗಳು ಸಮ್ಮಿಲನ ಪುಟದಲ್ಲಿ ಲಭ್ಯವಿದೆ. ಸಮುದಾಯದ ಇತರೆ ಸದಸ್ಯರು ಇದರತ್ತ ಗಮನ ಹರಿಸಿ, ತಮ್ಮ ಅಭಿಪ್ರಾಯಗಳನ್ನೂ ಅರಳಿ ಕಟ್ಟೆಯ ಇದೇ ವಿಷಯದ ಕೆಳಗೆ ಹಂಚಿಕೊಂಡರೆ ಉತ್ತಮ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೨೦:೩೨, ೨೯ ನವೆಂಬರ್ ೨೦೧೫ (UTC)
ಅನಂತ್ ರವರೇ, ಆರಂಭದಲ್ಲಿ ನೀವು ಮಾಡಬೇಕೆಂದಿರುವ ವಿಕಿ ಕೆಲಸಗಳನ್ನು ನಿಮ್ಮ ಸದಸ್ಯ ಪುಟದ ಮುಖಾಂತರ ಸಮುದಾಯಕ್ಕೆ ತಿಳಿಸಿದರೆ, ಸದಸ್ಯರು ನಿಮಗೆ ಸಹಾಯ/ಸಲಹೆಗಳನ್ನು ನೀಡಲು ಸುಲಭವಾಗುತ್ತದೆ. ಶುಭವಾಗಲಿ. Csyogi (ಚರ್ಚೆ) ೧೪:೨೫, ೩೦ ನವೆಂಬರ್ ೨೦೧೫ (UTC)

೨೦ನೇ ಸಮ್ಮಿಲನದ ಐಆರ್‍ಸಿ ಲಾಗ್ ನೋಡಿದೆ. ಕೆಲವು ಅಭಿಪ್ರಾಯಗಳು ಇಂತಿವೆ.

  1. ಐಆರ್‍ಸಿ ಕನ್ನಡ ವಿಕಿಪೀಡಿಯದ ಸಣ್ಣ ಸಮುದಾಯದ ಚರ್ಚಾವೇದಿಕೆಯಾಗಿ ಉತ್ತಮವಾಗಿ ಬಳಕೆಯಾಗುತ್ತಿಲ್ಲ ಅಥವಾ ಇದು ಸರಿಯಾದ ಸಲಕರಣೆಯಲ್ಲ.
  2. ಚರ್ಚೆಯ ಬಹು ಸಮಯ ಪರಸ್ಪರ ಸ್ವಾಗತ-ವಿದಾಯ ಹೇಳುವುದರಲ್ಲೇ ಕಳೆದು ಹೋಗುತ್ತಿದೆ
  3. ಚರ್ಚೆಗೆ ಮೊದಲು ಅನಂತರು ಕೊಂಚ ಸಿದ್ದತೆ ಮಾಡಿಕೊಳ್ಳಬೇಕಿತ್ತು (ತಮ್ಮ ಕಾರ್ಯತಂತ್ರಗಳು, ಕಾರ್ಚಸೂಚಿ, ಇತ್ಯಾದಿ)
  4. ಸಮುದಾಯ ಬೆಳವಣಿಗೆಯ ಬಗ್ಗೆ ಅಥವಾ ಇನ್ನಾವುದೇ ಅಗತ್ಯ ವಿಚಾರಗಳ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ
  5. ಓಂಶಿವಪ್ರಕಾಶ್ ಅವರನ್ನುಳಿದು ಇನ್ನಾರೂ (ನನ್ನನ್ನೂ ಸೇರಿ) ಚರ್ಚೆಯಲ್ಲಿ ಭಾಗವಹಿಸಿಲ್ಲ. ಇದು ಸಮುದಾಯದ ಸ್ಥಿತಿಯ ಅಪಾಯದ ಸಂಕೇತ.
  6. ಸಮುದಾಯ ಬೆಳೆಯುವ ವರೆಗೆ ಐಆರ್‍ಸಿಯನ್ನು ನಿಲ್ಲಿಸಿ ಗೂಗಲ್ ಹ್ಯಾಂಗೌಟ್ ಉಪಯೋಗಿಸುವುದು ಉತ್ತಮ. ಅದನ್ನು ಯೂಟ್ಯೂಬ್ನಲ್ಲಿ ಉಳಿಸಿ ಇಡಬಹುದು ಮತ್ತು ಸದಸ್ಯರು ಮುಕ್ತವಾಗಿ, ಭಾವನಾತ್ಮಕವಾಗಿ, ವೇಗವಾಗಿ (ಟೈಪಿಸುವ ರಗಳೆಯಿಲ್ಲದೆ) ಸಂವಹಿಸಬಹುದು. ಬೇರೆ ಸಲಹೆಗಳಿಗೆ ಸ್ವಾಗತ.
  7. ಸಮುದಾಯದ ಬೆಳೆವಣಿಗೆಗೆ ಸ್ಕ್ರಮ್[೧] ರೀತಿಯ ಕಾರ್ಯಸೂಚಿ ಅಗತ್ಯ

-- ತೇಜಸ್ / ಚರ್ಚೆ/ ೦೮:೦೪, ೩ ಡಿಸೆಂಬರ್ ೨೦೧೫ (UTC)

ಈ ವಿಚಾರವಾಗಿ ಏನಾದರೂ ನಿರ್ಣಯ ಕೈಗೊಳ್ಳುವುದು ಸಾಧ್ಯವೇ? -- ತೇಜಸ್ / ಚರ್ಚೆ/ ೦೮:೦೨, ೭ ಡಿಸೆಂಬರ್ ೨೦೧೫ (UTC)
ಸದಸ್ಯರು ಈ ವಿಚಾರವಾಗಿ ಏನಾದರೂ ಹೇಳುವುದಿದೆಯೇ? -- ತೇಜಸ್ / ಚರ್ಚೆ/ ೦೭:೫೦, ೮ ಡಿಸೆಂಬರ್ ೨೦೧೫ (UTC)
ಆನ್‌ಲೈನ್ ಸಮ್ಮಿಲನಗಳು ಇನ್ಮುಂದೆ ಗೂಗಲ್ ಹ್ಯಾಂಗ್‌ಔಟ್ ಮೂಲಕ ಆಗುವುದು ಒಳ್ಳೆಯದೇ. ಸಮ್ಮಿಲನದ ಉದ್ದೇಶ ಮುಂಚೆಯೇ ನಿರ್ಧಾರ ಮಾಡಿಕೊಂಡರೆ, ಚರ್ಚೆಯ ಸಂದರ್ಭದಲ್ಲಿ ಸೂಕ್ತ ಉತ್ತರ ಕಂಡುಕೊಳ್ಳಬಹುದು. ಇದಕ್ಕೆ ನನ್ನ ಸಮ್ಮತಿ ಇದೆ. ತೇಜಸ್ ಸ್ಕ್ರಮ್ ಕಾರ್ಯಸೂಚಿಯ ಬಗ್ಗೆ ಹೊಸ ಚರ್ಚೆ ಪ್ರಾರಂಭಿಸಿ ಅಥವಾ ಆ ಕಾರ್ಯಸೂಚಿ ಯಾವ ಮಾದರಿ ಇರುತ್ತದೆ, ಹೇಗೆ ಕನ್ನಡ ವಿಕಿಗೆ ಅಳವಡಿಸಿಕೊಳ್ಳಬಹುದು ಎಂದು ವಿಸ್ತಾರವಾಗಿ ಚರ್ಚಿಸಬಹುದು ಎನಿಸುತ್ತದೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೬:೫೮, ೮ ಡಿಸೆಂಬರ್ ೨೦೧೫ (UTC)

This is a message regarding the proposed 2015 Free Bassel banner. Translations are available.

Hi everyone,

This is to inform all Wikimedia contributors that a straw poll seeking your involvement has just been started on Meta-Wiki.

As some of your might be aware, a small group of Wikimedia volunteers have proposed a banner campaign informing Wikipedia readers about the urgent situation of our fellow Wikipedian, open source software developer and Creative Commons activist, Bassel Khartabil. An exemplary banner and an explanatory page have now been prepared, and translated into about half a dozen languages by volunteer translators.

We are seeking your involvement to decide if the global Wikimedia community approves starting a banner campaign asking Wikipedia readers to call on the Syrian government to release Bassel from prison. We understand that a campaign like this would be unprecedented in Wikipedia's history, which is why we're seeking the widest possible consensus among the community.

Given Bassel's urgent situation and the resulting tight schedule, we ask everyone to get involved with the poll and the discussion to the widest possible extent, and to promote it among your communities as soon as possible.

(Apologies for writing in English; please kindly translate this message into your own language.)

Thank you for your participation!

Posted by the MediaWiki message delivery 21:47, 25 November 2015 (UTC) • TranslateGet help

ಸಂಪಾದನೋತ್ಸವ ಬೆಂಗಳೂರು[ಬದಲಾಯಿಸಿ]

ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆಯನ್ನು ಆಚರಿಸುವ ಬಗ್ಗೆ ಸಮ್ಮಿಲನ-೧೯ರಲ್ಲಿ ಚರ್ಚೆಯಾಗಿ ಕೆಲವು ತಿರ್ಮಾನಗಳನ್ನು ತೆಗೆದುಕೊಳ್ಳಲಾಯಿತು. ಅದರಂತೆ ಅಂತಿಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಸಾಗರಗಳಲ್ಲಿ ವಿಷಯಾಧಾರಿತ (theme based) ಸಂಪಾದನೋತ್ಸವಗಳನ್ನು ನಡೆಸುವುದೆಂದೂ ತೀರ್ಮಾನಿಸಲಾಯಿತು. ಈ ಮಾಲಿಕೆಯಲ್ಲಿ ಬೆಂಗಳೂರಿನಲ್ಲಿ ಡಿಸೆಂಬರ್ ೧೯ ಮತ್ತು ೨೦, ೨೦೧೫ರಂದು ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವ ಸಂಪಾದನೋತ್ಸವ ಆಯೋಜಿಸಲಾಗಿದೆ. ಸಂಪಾದನೋತ್ಸವದ ವಿವರಗಳು ಮತ್ತು ನೋದಣಿಗೆ ಈ ಪುಟಕ್ಕೆ ಭೇಟಿ ನೀಡಿ.--Pavanaja (ಚರ್ಚೆ) ೦೫:೧೪, ೨೬ ನವೆಂಬರ್ ೨೦೧೫ (UTC)

ಈ ಗೂಗಲ್ ಕೊಂಡಿಯಲ್ಲಿ ವಿಕಿಪೀಡಿಯಾ 13ನೇ ವರ್ಷಾಚರಣೆ - ಬೆಂಗಳೂರು ಕಾರ್ಯಕ್ರಮಕ್ಕೆ ನೋಂದಾಯಿಸಲು ಫಾರ್ಮ್ ಎಂದಾಗಿದೆ, ಇದು ಪೂರ್ವಭಾವಿ ಸಂಪಾದನೋತ್ಸವ ಮಾತ್ರ ಎಂದು ಕಾರ್ಯಕ್ರಮ ಪುಟ ತಿಳಿಸುತ್ತದೆ. ಸರಿಪಡಿಸಿ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೨೦:೩೧, ೨೯ ನವೆಂಬರ್ ೨೦೧೫ (UTC)

ಸಂಪಾದನೋತ್ಸವ ಕಾರ್ಯಾಗಾರಗಳು[ಬದಲಾಯಿಸಿ]

ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆಯನ್ನು ಆಚರಿಸುವ ಬಗ್ಗೆ ಸಮ್ಮಿಲನ-೧೯ರಲ್ಲಿ ಚರ್ಚೆಯಾಗಿ ಕೆಲವು ತಿರ್ಮಾನಗಳನ್ನು ತೆಗೆದುಕೊಳ್ಳಲಾಯಿತು. ಅದರಂತೆ ಅಂತಿಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಸಾಗರಗಳಲ್ಲಿ ವಿಷಯಾಧಾರಿತ (theme based) ಸಂಪಾದನೋತ್ಸವಗಳನ್ನು ನಡೆಸುವುದೆಂದೂ ತೀರ್ಮಾನಿಸಲಾಯಿತು. ಆ ಪ್ರಯುಕ್ತ ಬೆಂಗಳೂರು ಮತ್ತು ಮಂಗಳೂರಿನಲ್ಲಿ ನಡೆಯುವ ಕಾರ್ಯಾಗಾರಗಳ ದಿನಾಂಕವನ್ನು ನಿಗದಿಪಡಿಸಲಾಗಿದೆ. ಮೈಸೂರು ಮತ್ತು ಸಾಗರದಲ್ಲಿ ನಡೆಯುವ ದಿನಾಂಕ ಮತ್ತು ಸ್ಥಳವನ್ನು ನಿಗದಿಪಡಿಸಿಲ್ಲ. --Vishwanatha Badikana (ಚರ್ಚೆ) ೦೪:೩೪, ೧ ಡಿಸೆಂಬರ್ ೨೦೧೫ (UTC)

ಮೈಸೂರು ಮತ್ತು ಸಾಗರಗಳಲ್ಲಿ ನೆಡೆಯುವ ಸಂಪಾದನೋತ್ಸವಗಳಿಗೆ ಶುಭವಾಗಲಿ! -- Csyogi (ಚರ್ಚೆ) ೨೦:೧೬, ೩೧ ಡಿಸೆಂಬರ್ ೨೦೧೫ (UTC)
ಸಾಗರದ ಬದಲು ಶಿವಮೊಗ್ಗದಲ್ಲಿ ಸಂಪಾದನೋತ್ಸವ ನಡೆಸಲಾಗುವುದು. ವಿವರಗಳು ಇಲ್ಲಿವೆ--Pavanaja (ಚರ್ಚೆ) ೧೨:೦೭, ೯ ಜನವರಿ ೨೦೧೬ (UTC)

ಸಿಐಎಸ್-ಎ೨ಕೆಯ ೨೦೧೫-೨೦೧೬ರ ಕ್ರಿಯಾಯೊಜನೆ, ಘೋಷಿತ ಗುರಿ ಮತ್ತು ಸದ್ಯದ ಸ್ಥಿತಿ ಗತಿ[ಬದಲಾಯಿಸಿ]

ಸಿಐಎಸ್-ಎ೨ಕೆಯು ಕನ್ನಡ ವಿಕಿಪೀಡಿಯ ಮತ್ತು ವಿಕಿಸೋರ್ಸ್ ಸಮುದಾಯ ಜೊತೆಗೂಡಿ ತಯಾರಿಸಿದ ಕನ್ನಡ ವಿಕಿಪೀಡಿಯ ಕ್ರಿಯಾಯೋಜನೆ ಜುಲೈ ೨೦೧೫ - ಜೂನ್ ೨೦೧೬ ಇಲ್ಲಿದೆ. ಅಂತೆಯೇ ಕನ್ನಡ ವಿಕಿಸೋರ್ಸ್ ಕ್ರಿಯಾಯೋಜನೆ ಜುಲೈ ೨೦೧೫ - ಜೂನ್ ೨೦೧೬ ಇಲ್ಲಿದೆ. ಘೋಷಿತ ಗುರಿ ಮತ್ತು ಸದ್ಯದ ಸ್ಥಿತಿ ಗತಿಗಳನ್ನು ಕೆಳಗೆ ನೀಡಲಾಗಿದೆ.

ವಿಕಿಪೀಡಿಯ[ಬದಲಾಯಿಸಿ]

ಯೋಜನೆ ನೆರವೇರಿಸುವುದು ಮುನ್ನೂಹೆ ಕೆಲಸಗಳು ಫಲಿತಾಂಶ
ಗುಣಮಟ್ಟ ಸುಧಾರಣೆ ನಿರಂತರ ಮೇಲ್ವಿಚಾರಣೆ ಮೂಲಕ ಗುಣಮಟ್ಟ ಸುಧಾರಣೆ ಕಳಪೆ ಲೇಖನಗಳ ಗುಣಮಟ್ಟದ ಹೆಚ್ಚಿಸುವುದು ಕೊಂಡಿಯಿಲ್ಲದ ಲೇಖನಗಳ ಸುದಾರಣೆ ಮಾಡಲಾಗುತ್ತಿದೆ ಶೇಕಡ ೬೫% ಕೆಲಸ ಮಾಡಲಾಗಿದೆ
ವಿಷಯ ವೈವಿಧ್ಯ ನಿರ್ದಿಷ್ಟ ವಿಷಯದ ಮೇಲೆ ಕಾರ್ಯಾಗಾರಗಳು ಪ್ರತಿ ಆಯ್ಕೆ ವಿಷಯಗಳುಲ್ಲಿ ೨೫ ಲೇಖನಗಳು ವಿಜ್ಞಾನ, ಮೆಕ್ಯಾನಿಕಲ್ ಇಂಜಿನಿಯರಿಂಗ್ ೬೦ ವಿಜ್ಞಾನ ಲೇಖನಗಳು, ೧೨ ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು
ವಿಶ್ವವ್ಯಾಪಿಯಾಗಲಿ ಕರ್ನಾಟಕ ಹೊರಗಿನ ಕನ್ನಡ ಸಂಘಗಳು, ಬರಹಗಾರರನ್ನು ಗುರುತಿಸಿ. ಕನ್ನಡ ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸುವ ಬಗ್ಗೆ ಅವರಿಗೆ ಮಿಂಚಂಚೆ ಕಳುಹಿಸುವುದು ೨೦ ಹೊಸ ಸಂಪಾದಕರು ಮತ್ತು ೩-೬ ಸಕ್ರಿಯ ಸಂಪಾದಕರು ಕೆಲಸ ಸಾದ್ಯವಾಗಲಿಲ್ಲ
ಸಂಸ್ಥೆಗಳ ಜೊತೆ ಪಾಲುದಾರಿಕೆ ೫೦೦ ಲೇಖನಗಳನ್ನು ರಚಿಸಲಾಗುವುದು ಕ್ರೈಸ್ಟ್ ವಿಶ್ವವಿದ್ಯಾಲಯ,SDM ಕಾಲೇಜು,DSERT,ಅಲೋಶಿಯಸ್ ಕಾಲೇಜು ೩೪೦ರಷ್ಟು ಲೇಖನಗಳು ಬಂದಿದೆ
ನಿಯತಾಂಕಗಳು ನಿರೀಕ್ಷಿತ ಗುರಿ ಕಲ್ಪನೆಗೂ ಮೀರಿದ ಗುರಿ ಸದ್ಯದ ಅಂಕೆ-ಸಂಖ್ಯೆ
ಸಂಪಾದಕರ ಸಂಖ್ಯೆ ೧೦೦೦ ೧೨೦೦ ೮೦೦
ಹೊಸ ಸಂಪಾದಕರ ಸಂಖ್ಯೆ ೨೦೦ ೩೦೦ ೪೭
ಸಕ್ರಿಯ ಸಂಪಾದಕರ ಸಂಖ್ಯೆ ೫೦ ೮೦ ೨೬
ಲೇಖನಗಳ ಸಂಖ್ಯೆ ೨೨,೦೦೦ ೨೪,೦೦0 ೧೯,೧೩೬

ವಿಕಿಸೋರ್ಸ್[ಬದಲಾಯಿಸಿ]

ಯೋಜನೆ ನೆರವೇರಿಸುವುದು ಮುನ್ನೂಹೆ ಕೆಲಸಗಳು ಫಲಿತಾಂಶ
cc ಅಡಿಯಲ್ಲಿ ವಿಷಯ ಸೇರಿಸುವುದು ಕಾರ್ಯಾಗಾರಳನ್ನು ನಡೆಸುವುದು ಪ್ರತಿ ಕಾರ್ಯಾಗಾರದಲ್ಲಿ ೫-೧೦ ಪುಸ್ತಕಗಳನ್ನು ಸೇರಿಸುವುದು ಮೈಸೂರು ವಿಶ್ವವಿದ್ಯಾಲಯ,ಕರ್ನಾಟಕ ಸರ್ಕಾರದ ಪುಸ್ತಕಗಳು, ನಿರಂಜನ ಪುಸ್ತಕಗಳು ೪೦ರಷ್ಟು ಪುಸ್ತಕಗಳನ್ನು ಸೇರಿಸಿದೆ
ಕ್ರೈಸ್ಟ್ ವಿಶ್ವವಿದ್ಯಾಲಯ ಪದವಿಪೂರ್ವ ವಿದ್ಯಾರ್ಥಿಗಳಿಗೆ ತರಬೇತಿಕೊಡುವುದು ೭೫೦ ಪುಟಗಳು ಸೇರಿಸುವುದು ಪ್ರಗತಿಯಲ್ಲಿದೆ ೭೧೦ ಪುಟಗಳನ್ನು ಸೇರಿಸಲಾಗಿದೆ
ಸರ್ಕಾರಿ ಪಠ್ಯ ಪುಸ್ತಕಗಳು ಸರ್ಕಾರದ ಮನವರಿಸಲು ಪ್ರಯತ್ನ ಮಾಡಲಾಗುತ್ತದೆ ೬೦ ಪುಸ್ತಕಗಳನ್ನು ಸೇರಿಸುವುದು ಪ್ರಗತಿಯಲ್ಲಿದೆ -
ನಿಯತಾಂಕಗಳು ಉಧೇಶಿತ ಗುರಿ ಕಲ್ಪನೆಗೂ ಮೀರಿದ ಗುರಿ ಸದ್ಯದ ಅಂಕೆ-ಸಂಖ್ಯೆ
ಸಂಪಾದಕರ ಸಂಖ್ಯೆ ೩೦೦ ೪೦೦ ೨೯೩
ಹೊಸ ಸಂಪಾದಕರ ಸಂಖ್ಯೆ ೧೭೦ ೨೭೦ ೨೫೦
ಸಕ್ರಿಯ ಸಂಪಾದಕರ ಸಂಖ್ಯೆ ೨೦ ೩೦ ೨೯
ಲೇಖನಗಳ ಸಂಖ್ಯೆ ೫,೦೦೦ ೧೨,೦೦0 ೭೬೫೨

--ಅನಂತ್ ೧೩:೪೭, ೨೯ ನವೆಂಬರ್ ೨೦೧೫ (UTC)

ಈ ವರದಿಯನ್ನು ಕ್ರಿಯಾಯೊಜನೆಯ ಪುಟದಲ್ಲಿ ಸೇರಿಸಿ, ಅದಕ್ಕೆ ಸಂಬಂಧಿಸಿದ ಕೊಂಡಿಯನ್ನು ಮಾತ್ರ ಅರಳಿ ಕಟ್ಟೆಯಲ್ಲಿ ನೀಡಿ. ಯಾವುದಾದರೂ ಅಂಶದ ಬಗ್ಗೆ ಸಮುದಾಯದ ಚರ್ಚೆ ಅವಶ್ಯವಿದ್ದಲ್ಲಿ, ಅದಕ್ಕೆ ಸಂಬಂಧಿಸಿದ ವಿಷಯಾಧಾರಿತ ಚರ್ಚೆ ಪ್ರಾರಂಭಿಸಿ. ವರದಿಗಳಲ್ಲಿ ಅವಶ್ಯ ಯೋಜನೆಗಳ, ವರದಿಗಳ ಕೊಂಡಿಗಳನ್ನು ಸೇರಿಸುವುದನ್ನು ಮರೆಯಬೇಡಿ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು

ಅನಿಸಿಕೆ[ಬದಲಾಯಿಸಿ]

ವಿಕಿಪೀಡಿಯ ಮತ್ತು ವಿಕಿಸೋರ್ಸ್ ಫಲಿತಾಂಶಗಳಿಗೆ ಸಂಬಂಧಪಟ್ಟಂತೆ ಸೂಕ್ತ ಕೊಂಡಿಗಳನ್ನು ನೀಡಿ. ಉದಾಹರೆಣೆಗೆ, ಶೇಕಡ ೬೫% ಕೆಲಸ ಮಾಡಿರುವ ಲೇಖನಗಳ ಪಟ್ಟಿಯಿರುವ ಕೊಂಡಿಯನ್ನು ನೀಡಿದರೆ ಉತ್ತಮವಾಗಿರುತ್ತದೆ. ಮತ್ತು ನೀವು ತಿಳಿಸಿರುವ ೬೦ ವಿಜ್ಞಾನ ಲೇಖನಗಳು, ೧೨ ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು ಹೊಸದಾಗಿ ಸೃಷ್ಟಿಸಿದ ಲೇಖನಗಳ ಅಥವಾ ಗುಣಮಟ್ಟ ಸುಧಾರಣೆ ಮಾಡಿದ ಲೇಖನಗಳ ಎಂಬುದು ಸ್ಪಷ್ಟವಾಗಿಲ್ಲ. Csyogi (ಚರ್ಚೆ) ೧೪:೩೭, ೩೦ ನವೆಂಬರ್ ೨೦೧೫ (UTC)
೬೦ ವಿಜ್ಞಾನ ಲೇಖನಗಳು ಮತ್ತು ೧೨ ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು ಹೊಸದಾಗಿ ವಿಕಿಪೀಡಿಯಾಕೆ ಬಂದಿರುವ ಲೇಖನಗಳು.

--ಅನಂತ್ (ಚರ್ಚೆ)

ಅನಂತ್‌ರವರೇ, ಯೋಜನಾ ಪುಟದ ಕೊಂಡಿಗಾಗಿ ಧನ್ಯವಾದಗಳು. ಈ ಪುಟದಲ್ಲಿರುವ ಲೇಖನಗಳು ಉತ್ತಮವಾಗಿವೆ, ಇದರಲ್ಲಿ ಭಾಗಿಯಾದ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳು. ಗಮನಿಸಿದ ಕೆಲ ಅಂಶ/ಅನಿಸಿಕೆಗಳು -
* ಒಟ್ಟು ಲೇಖನಗಳು: ೬೦ವಿಜ್ಞಾನ ಲೇಖನಗಳೆಂದು ಮೇಲಿನ ಕೋಷ್ಟಕದಲ್ಲಿ ತಿಳಿಸಲಾಗಿದೆ, ಆದರೆ ಕೇವಲ ೧೬ ಲೇಖನಗಳನ್ನು ಯೋಜನಾ ಪುಟದಲ್ಲಿ ಪಟ್ಟಿಮಾಡಲಾಗಿದೆ. ಇನ್ನುಳಿದ ಲೇಖನಗಳನ್ನು ದಯವಿಟ್ಟು ಸೇರಿಸಿ.
* ವರ್ಗಗಳು: ಲೇಖನ ಪುಟಗಳನ್ನು ಸೂಕ್ತವಾದ ವರ್ಗಗಳಿಗೆ ಸೇರಿಸಿದರೆ ಇನ್ನು ಉತ್ತಮವಾಗಿರುತ್ತದೆ. ಗಮನಿಸಿದ ಅರ್ಧಕ್ಕಿಂತಲೂ ಹೆಚ್ಚಿನ ಲೇಖನಗಳಿಗೆ ಯಾವುದೆ ವರ್ಗಗಳನ್ನು ಸೇರಿಸಲಾಗಿಲ್ಲ.
* ಶೀರ್ಷಿಕೆ ಮತ್ತು ಉಪಶೀರ್ಷಿಕೆಗಳು: ಪುಟದ ಶೀರ್ಷಿಕೆ ಮತ್ತು ಉಪ-ಶೀರ್ಷಿಕೆಗಳನ್ನು ಸರಿಯಾದ ಕ್ರಮದಲ್ಲಿ ಸೇರಿಸಿ(ಉದಾ: ಕ್ಯಾಲ್ಕುಲೇಟರ್) ಮತ್ತು ಶೀರ್ಷಿಕೆಯಿಲ್ಲದೆ ನೇರವಾಗಿ ಉಪ-ಶೀರ್ಷಿಕೆಗಳನ್ನು ಸೇರಿಸಬೇಡಿ.(ಉದಾ: ರೋಸಾಲಿಂಡ್ ಫ್ರಾಂಕ್ಲಿನ್). ಹಾಗೂ, ಶೀರ್ಷಿಕೆಗಳನ್ನು ಬೋಲ್ಡ್ ಅಕ್ಷರಗಳನ್ನಾಗಿ ಕೆಲ ಲೇಖನಗಳಲ್ಲಿ ಮಾಡಲಾಗಿದೆ (ಉದಾ: ಎಸ್. ಆರ್. ರಾಮಸ್ವಾಮಿ, ಟಿ.ಎಸ್ ನಾಗರಾಜ ಶೆಟ್ಟಿ), ಇದರ ಅಗತ್ಯವೇನಿದೆ ತಿಳಿಸಿ? ವಿಕಿ ಪುಟಗಳಲ್ಲಿ ತನಾಗಿಯೇ ಉಪ-ಶೀರ್ಷಿಕೆಗಳು ಬೋಲ್ಡ್ ಅಕ್ಷಗಳಾಗುತ್ತವೆ, ಶೀರ್ಷಿಕೆಗಳನ್ನು ಸಂಪಾದಿಸುವಾಗ ಬೋಲ್ಡ್ ಮಾಡುವ ಅಗತ್ಯವಿರುವುದಿಲ್ಲ.
ಸಮುದಾಯದಿಂದ ಇನ್ನೇನಾದರೂ ಸಲಹೆಗಳಿದ್ದರೆ ಸೇರಿಸಬಹುದು. -- Csyogi (ಚರ್ಚೆ) ೧೫:೨೭, ೧೭ ಡಿಸೆಂಬರ್ ೨೦೧೫ (UTC)
ಉಲ್ಲೇಖಗಳಾಗ ಬಹುದಾದ ಕೊಂಡಿಗಳು ಮತ್ತು ಬಾಹ್ಯಕೊಂಡಿಗಳು - ಇದರ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ ಎನಿಸುತ್ತಿದೆ. ಪತ್ರಿಕೆ/ಮಾಸಿಕ ಇತ್ಯಾದಿಗಳ ಕೊಂಡಿಗಳಲ್ಲದ, ಮೂರನೇ ವ್ಯಕ್ತಿಗಳ ಜಾಲತಾಣಗಳು ಬಾಹ್ಯಕೊಂಡಿಯಲ್ಲಿರಬೇಕಲ್ಲವೇ? ಉಲ್ಲೇಖನಗಳನ್ನು ಸೇರಿಸಲು ಸಂಪಾದನೆಯ ಸ್ಥಳದಲ್ಲಿಯೇ ಸಹಾಯದ ಮಾರ್ಗದರ್ಶಿ ನೀಡಿದೆ. ಉಲ್ಲೇಖನಗಳನ್ನು ಸೇರಿವುದನ್ನು ಹೇಳಿಕೊಡುವವರು ಇದನ್ನು ಮೊದಲು ಕಲಿಯಬೇಕಿದೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೭:೫೭, ೧೭ ಡಿಸೆಂಬರ್ ೨೦೧೫ (UTC)
ಚಿತ್ರ:Medara_ketayya.jpg ವನ್ನು User:Indresh guptha ತಮ್ಮ ಸ್ವಂತ ಕೆಲಸವೆಂದು ಪರವಾನಗಿ ಅಡಿಯಲ್ಲಿ ಹೇಳಿದ್ದಾರೆ. ಚಿತ್ರದ ಮೂಲ ಇಲ್ಲಿದೆ. ಬೇರೆಯವರ ಚಿತ್ರಗಳನ್ನು ಬಳಸುವಾಗ ಕಾಪಿರೈಟ್ ಬಗ್ಗೆ ಎಚ್ಚರದಿಂದಿರುವಂತೆ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಲಾಗಿಲ್ಲವೇ? ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೮:೧೭, ೧೭ ಡಿಸೆಂಬರ್ ೨೦೧೫ (UTC)
ಕ್ರೈಸ್ಟ್ ಯುನಿವರ್ಸಿಟಿ ವಿದ್ಯಾರ್ಥಿಗಳಿಗೆ ಉಲ್ಲೇಖ,ಚಿತ್ರ ಸೇರಿಸುವುದು ಮತ್ತು ಕಾಪಿರೈಟ್ ಬಗ್ಗೆ ಮಾಹಿತಿ ನೀಡಿದ್ದೇವೆ.ಆದರೆ ಅದು ಪೂರ್ಣವಾಗಿ ಫಲಕಾರಿಯಾಗಿಲ್ಲ,ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ ಪುಟದಲ್ಲಿ ಸಮುದಾಯದಿಂದ ಯಾರಾದರೂ ಬಂದು ತರಬೇತಿ ನೀಡಬೇಕೆಂದು ವೇಳಾಪಟ್ಟಿ ಸಿದ್ಧಪಡಿಸಲಾಗಿತ್ತು ಆದರೆ ಕಾರಣಾಂತರದಿಂದ ಸಮುದಾಯದಿಂದ ಯಾರೂ ಬಂದಿರಲಿಲ್ಲ.ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ೩೫ ವಿದ್ಯಾರ್ಥಿಗಳನ್ನು ವಿಕಿಪೀಡಿಯದ ಕೆಲಸಗಳಿಗೆ ರಾಯಭಾರಿಗಳನ್ನಾಗಿ ನೇಮಿಸಿದ್ದೇವೆ ಮತ್ತು ವೇಳಾಪಟ್ಟಿಯನ್ನು ಮರು ಸಿದ್ಧಪಡಿಸಲಾಗುತ್ತಿದೆ,ಅದ್ದರಿಂದ ಸಮುದಾಯದಿಂದ ಯಾರಾದರೂ ಬಂದು ಈ ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು. --ಅನಂತ್ (ಚರ್ಚೆ) ೧೨:೧೩, ೧೭ ಡಿಸೆಂಬರ್ ೨೦೧೫ (UTC)
ಸಮುದಾಯ ಚಿಕ್ಕದಿದೆ, ವಾರದ ಮಧ್ಯೆ ಕೆಲಸದ ಸಮಯದಲ್ಲಿ ಯಾರೂ ಬರಲಾಗುವುದಿಲ್ಲ ಎಂದು ಗೊತ್ತಿದ್ದೂ, ಇದನ್ನು ಸಂಪೂರ್ಣವಾಗಿ ಸಮುದಾಯದ ತಪ್ಪೆಂದು ಹೇಳಲಾಗುತ್ತಿದೆಯೇ? ಜೊತೆಗೆ, ಅನಂತ್ ಇದು ನಿಮಗೆ ಕೇಳಿದ ವೈಯುಕ್ತಿಕ ಪ್ರಶ್ನೆ ಅಲ್ಲ. ಉಲ್ಲೇಖ, ಚಿತ್ರ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ, ತಯಾರಾದ ಲೇಖನಗಳನ್ನು ಸ್ಯಾಂಡ್‌ಬಾಕ್ಸ್‌ನಿಂದ ಮುಖ್ಯ ಪುಟಗಳಿಗೆ ರವಾನಿಸುವಾಗ ಅದರ ಗುಣಮಟ್ಟ ಪರೀಕ್ಷಿಸುತ್ತೇವೆ ಎಂದು ಹಿಂದೆ ಹೇಳಲಾಗಿತ್ತು. ಈಗ ಅವುಗಳಲ್ಲಿ ಕಂಡು ಬಂದ ನ್ಯೂನ್ಯತೆಗಳನ್ನು ನೋಡಿ ಅನಿಸಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. ಯೋಜನೆಯ ವಿಷಯಕ್ಕೆ ಸಂಬಂಧಿಸಿದ ಈ ಪ್ರತಿಕ್ರಿಯೆಗೆ, ತಪ್ಪಾಗಿದ್ದಲ್ಲಿ, ಹೇಗೆ ಸರಿಪಡಿಸಬೇಕು ಎಂಬುದು ಉತ್ತರವಾದರೆ, ಸಮುದಾಯಕ್ಕೆ ಒಳಿತು. ೨೫ ಜನ ವಿದ್ಯಾರ್ಥಿ ರಾಯಭಾರಿಗಳು ಎಂದು ಹೇಳುತ್ತಿದ್ದೀರಿ. ಈ ವಿಕಿ ರಾಯಭಾರಿಗಳ ಬಗ್ಗೆ ಯೋಜನಾ ನಿರ್ವಾಹಕರು ಮಾಹಿತಿ ಹಂಚಿಕೊಳ್ಳಬಹುದೇ? ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೪:೫೦, ೧೮ ಡಿಸೆಂಬರ್ ೨೦೧೫ (UTC)

Community Wishlist Survey[ಬದಲಾಯಿಸಿ]

MediaWiki message delivery (ಚರ್ಚೆ) ೧೪:೩೮, ೧ ಡಿಸೆಂಬರ್ ೨೦೧೫ (UTC)

ವಿಕಿಸೋರ್ಸ್‌ನಲ್ಲಿ ಸಂಪಾದನೆ ಮಾಡುವುದು ಹೇಗೆ? - ಬ್ಲಾಗ್ ಬೇಕಿದೆ[ಬದಲಾಯಿಸಿ]

ವಿಕಿಸೋರ್ಸ್‌ನಲ್ಲಿ ನೆಡೆಯುತ್ತಿರುವ ನಿರಂಜನರ ಪುಸ್ತಕಗಳ ಸಂಪಾದನಾ ಕೆಲಸವನ್ನು ನಿರ್ವಹಿಸುವುದು ಹೇಗೆ ಎಂದು ಯಾರಾದರೂ ಬ್ಲಾಗ್ ಬರೆಯಬಹುದೇ? ಹೊಸ ಸಂಪಾದಕರಿಗೆ ಇದರಿಂದ ತಮ್ಮ ಶಕ್ತಾನುಸಾರ ಕೆಲಸ ಮಾಡಲು ಸಾಧ್ಯವಾಗುತ್ತದೆ. ಸಮಯಾಭಾವದಿಂದ ನಾನೇ ಈ ಕೆಲಸ ಮಾಡಲಾಗುತ್ತಿಲ್ಲ. ಬ್ಲಾಗ್‌ ವಿಮರ್ಶಿಸಿ ಕೊಡಬಲ್ಲೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೦:೨೫, ೨ ಡಿಸೆಂಬರ್ ೨೦೧೫ (UTC)

ವಿಕಿಸೋರ್ಸ್ ಸಂಪಾದಕರಿಗೆ ಉಪಯೋಗವಾಗಲೆಂದು ಈ ಸಹಾಯ ಪುಟ ಸಿದ್ಧಪಡಿಸಿದ್ದೇನೆ. ಸಂಪಾದನೋತ್ಸವಗಳಲ್ಲಿ ಅಥವಾ ಹೊಸ ಸಂಪಾದಕರಿಗೆ ಅವಶ್ಯವಿದ್ದಲ್ಲಿ ಇದನ್ನು ಹಂಚಿಕೊಳ್ಳುವುದು. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೯:೩೫, ೧೯ ಡಿಸೆಂಬರ್ ೨೦೧೫ (UTC)
ವಿಕಿಸೋರ್ಸ್ ಪುಟಗಳ ಸ್ಥಿತಿಗತಿಯನ್ನು ಅರಿಯಲು ಸ್ಥಿತಿಗತಿ ಸಹಾಯ ಪುಟವು ತುಂಬ ಉಪಕಾರಿವಾಗಲಿದೆ. ಇದನ್ನು ಸಿದ್ಧಪಡಿಸಿದ್ದಕ್ಕಾಗಿ ಧನ್ಯವಾದಗಳು. -- Csyogi (ಚರ್ಚೆ) ೨೦:೨೩, ೩೧ ಡಿಸೆಂಬರ್ ೨೦೧೫ (UTC)

ಪುಟದ ಮೇಲ್ಭಾಗದಲ್ಲಿ ಕಂಡುಬರುವ Sitenoticeನಲ್ಲಿ ಇತ್ತೀಚಿನ ೩೦ ದಿನಗಳ ಲೇಖನ[ಬದಲಾಯಿಸಿ]

ಇದರ ಅಗತ್ಯವಿದೆಯೇ? ಇದ್ದರೆ ಅದನ್ನು ಯಾಕೆ ಅಪ್ಡೇಟ್ ಮಾಡುತ್ತಿಲ್ಲ? ಡಿಸೆಂಬರ್ ಬಂದರೂ ಇನ್ನೂ ಸಪ್ಟೆಂಬರ್ ತಿಂಗಳಿನ ಪಟ್ಟಿಯಿದೆ. ~ ಹರೀಶ / ಚರ್ಚೆ / ಕಾಣಿಕೆಗಳು ೧೬:೫೧, ೨ ಡಿಸೆಂಬರ್ ೨೦೧೫ (UTC)

SiteNotice ಅನ್ನು ಅತಿಮುಖ್ಯ ಕಾರ್ಯಕ್ರಮಗಳನ್ನು ತಿಳಿಸಿ ಹೇಳುವುದಕ್ಕೆ ಮಾತ್ರ ಬಳಸಿದರೆ ಸಾಕು ಎನಿಸುತ್ತದೆ. ಚುಟುಕು ಲೇಖನಗಳ ಪಟ್ಟಿಯ ಬದಲು ಸಕ್ರಿಯವಾಗಿರುವ ಸದಸ್ಯರ ೩೦ ದಿನಗಳ ಸಂಪಾದನೆ ನೋಡಿ, ಅವರಿಗೆ ಚುಟುಕುಗಳನ್ನು ಉತ್ತಮ ಲೇಖನವಾಗಿಸುವುದು ಹೇಗೆ ಎಂದು ತಿಳಿ ಹೇಳುವುದು ಒಳಿತು. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೯:೨೮, ೨ ಡಿಸೆಂಬರ್ ೨೦೧೫ (UTC)
+೧ ~ ಹರೀಶ / ಚರ್ಚೆ / ಕಾಣಿಕೆಗಳು ೧೭:೦೦, ೭ ಡಿಸೆಂಬರ್ ೨೦೧೫ (UTC)
ಕೆಲವು ತಾಂತ್ರಿಕ ಕಾರಣಗಳಿಂದಾಗಿ ಚುಟುಕು ಪುಟಗಳ ಪಟ್ಟಿ ತಯಾರಿಯಲ್ಲಿ ಅಡಚಣೆ ಬಂದಿತ್ತು. ಚುಟುಕು ಪುಟಗಳ ಸಂಪೂರ್ಣ ಪಟ್ಟಿ ಇಲ್ಲಿದೆ. ತಿಂಗಳ ಚುಟುಕು ಪುಟಗಳ ಪಟ್ಟಿ ಮತ್ತು ಬಳಕೆದಾರ ಚುಟುಕು ಪುಟಗಳ ಪಟ್ಟಿ ಎರಡೂ ಇವೆ. ಅವುಗಳ ಕಡೆ ಸಂಪಾದಕರುಗಳ ಗಮನ ಹರಿಯಲಿ ಮತ್ತು ಅವುಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿ ಎಂಬ ಆಶಯದಿಂದ Sitenotice ಬಳಸಲು ಪ್ರಾರಂಭಿಸಲಾಯಿತು. ಇದು ಅಗತ್ಯವಿಲ್ಲ ಎಂದು ಸಮುದಾಯ ತೀರ್ಮಾನಿಸಿದರೆ ಹಾಗೆಯೇ ಮಾಡಬಹುದು. ಅತಿಮುಖ್ಯ ಕಾರ್ಯಕ್ರಮಗಳನ್ನು ತಿಳಿಸಿ ಹೇಳುವುದಕ್ಕೆ Sitenotice ಬಳಸುವುದು ಉತ್ತಮ ಆಲೋಚನೆ.--Pavanaja (ಚರ್ಚೆ) ೧೩:೨೯, ೪ ಡಿಸೆಂಬರ್ ೨೦೧೫ (UTC)
"ಕಳೆದ ೩೦ ದಿನಗಳಲ್ಲಿ" ಎಂದು ಬರೆದಿರುವುದೇ ತಪ್ಪು. ಅದು ತಿಂಗಳಿಗೊಮ್ಮೆ ಮಾಡುವ ಪಟ್ಟಿಯಾಗುವುದಿಲ್ಲ. ಯಾವಾಗಲೂ ಬದಲಾಗುತ್ತಿರುವ ಪಟ್ಟಿಯಾಗಬೇಕಾಗುತ್ತದೆ. ~ ಹರೀಶ / ಚರ್ಚೆ / ಕಾಣಿಕೆಗಳು ೧೭:೦೦, ೭ ಡಿಸೆಂಬರ್ ೨೦೧೫ (UTC)
+೧ ~ Csyogi (ಚರ್ಚೆ) ೦೫:೫೮, ೮ ಡಿಸೆಂಬರ್ ೨೦೧೫ (UTC)

ಪಠ್ಯ ಪುಸ್ತಕದಲ್ಲಿನ ಮಾಹಿತಿಯ ನಕಲು[ಬದಲಾಯಿಸಿ]

ವಿಕಿಯಲ್ಲಿ ಪಠ್ಯಪುಸ್ತಕದ ಮಾಹಿತಿಗಳನ್ನು ನೇರವಾಗಿ ನಕಲು ಇಳಿಸುತ್ತಿರುವುದನ್ನು ನೋಡಿದೆ. ಈ ಲೇಖನಗಳು ವಿಕಿ ಶೈಲಿಯಲ್ಲಿಲ್ಲದೆ ಪಠ್ಯವನ್ನೇ ನೇರವಾಗಿ ಟೈಪ್ ಮಾಡಿರುವಂತಿದೆ. ಪಠ್ಯಪುಸ್ತಕದಲ್ಲಿನ ಲೇಖನಗಳನ್ನು ನೇರವಾಗಿ ವಿಕಿಯಲ್ಲಿ ಬಳಸಿಕೊಳ್ಳಲು ಪಠ್ಯಪುಸ್ತಕದ ಪರವಾನಗಿ ಅನುವು ಮಾಡಿಕೊಳ್ಳುತ್ತದೆಯೇ? ಸರ್ಕಾರವೇ ಪ್ರಕಟಿಸಿದ ಪುಸ್ತಕವಾದರೂ, ಪಠ್ಯವನ್ನು ಪಡೆದುಕೊಂಡ ಮೂಲ ಇತ್ಯಾದಿಗಳ ಪರವಾನಗಿ ಮಾಹಿತಿಯ ಮುಕ್ತ ಹಂಚಿಕೆಯನ್ನು ಒಪ್ಪಿಕೊಳ್ಳದೇ ಇರಬಹುದು. ಈ ಬಗ್ಗೆ ಸಮುದಾಯದಲ್ಲಿ ಚರ್ಚಿಸಿ ಮುಂದುವರೆಯುವುದು ಒಳಿತು. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೯:೩೩, ೨ ಡಿಸೆಂಬರ್ ೨೦೧೫ (UTC)

ಯಾವ ಲೇಖನ? ಕೊಂಡಿ ನೀಡಿದರೆ ಉತ್ತಮ.--Pavanaja (ಚರ್ಚೆ) ೦೬:೧೯, ೩ ಡಿಸೆಂಬರ್ ೨೦೧೫ (UTC)
ಉ.ದಾ: ಯೋಜಿಸುವಿಕೆ. ಲೇಖನ ಯಾವುದೇ ಆಗಿದ್ದರೂ, ವಿಕಿಗೆ ಬರುತ್ತಿರುವ ಲೇಖನಗಳು ಕೃತಿಚೌರ್ಯದ ಆರೋಪದಿಂದಾಗಿ ಮುಂದೆ ಯೋಜನೆಯನ್ನು ಸಂಕಷ್ಟಕ್ಕೆ ಸಿಲುಕಿಸದಿರಲಿ ಎಂಬುದೇ ಆಶಯ. ಕಣಜದಿಂದ ಎತ್ತಿ ಹಾಕಿರುವ ಲೇಖನ ಇಲ್ಲಿದೆ ದಲಿತ_ಚಳುವಳಿ, ಇದರ ಚರ್ಚಾಪುಟದಲ್ಲಿ ಅದನ್ನು ಕಂಡುಹಿಡಿದದ್ದು ಹೇಗೆ ಎಂಬ ಮಾಹಿತಿಯೂ ಇದೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೦೯:೧೯, ೩ ಡಿಸೆಂಬರ್ ೨೦೧೫ (UTC)
ನಿಯ೦ತ್ರಿಸುವಿಕೆ ಲೇಖನವು ಸಹ ಪಠ್ಯಪುಸ್ತಕದ ನಕಲೆನಿಸುತ್ತದೆ. ಹಾಗಯೇ ವಿದ್ಯಾರ್ಥಿಗಳಿಗೆ ಅನುಸ್ವರದ ಬದಲಾಗಿ ಸೊನ್ನೆಯನ್ನು ಬಳಸಬಾರದೆಂದು ತಿಳಿಸಿಕೊಟ್ಟರೆ ಉತ್ತಮ. ~ Csyogi (ಚರ್ಚೆ) ೦೬:೦೫, ೮ ಡಿಸೆಂಬರ್ ೨೦೧೫ (UTC)

ಡಿಸೆಂಬರ್ ಚುಟುಕು ಪುಟಗಳು[ಬದಲಾಯಿಸಿ]

ಡಿಸೆಂಬರ್ ತಿಂಗಳಲ್ಲಿ ಸೃಷ್ಟಿಸಲಾಗಿರುವ ಚುಟುಕು ಪುಟಗಳ ಸೂಚಿ ಇಲ್ಲಿದೆ. ಈ ಪುಟಗಳನ್ನು ಸಂಪಾದಿಸುವ ಕೆಲಸಕ್ಕೆ ಕೈಜೋಡಿಸಬೇಕಾಗಿ ವಿನಂತಿ--ಅನಂತ್ ೧೧:೪೮, ೪ ಡಿಸೆಂಬರ್ ೨೦೧೫ (UTC)

ಕನ್ನಡ ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ ಕಾರ್ಯಯೋಜನೆಯ ಪೂರ್ವಭಾವಿ ತಯಾರಿ[ಬದಲಾಯಿಸಿ]

ಕನ್ನಡ ವಿಕಿಪೀಡಿಯಾಕ್ಕೆ ಹದಿಮೂರನೆಯ ವರ್ಷಗಳು ತುಂಬುವ ಈ ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯವು ಹದಿಮೂರನೆಯ ವರ್ಷಾಚರಣೆಯನ್ನು ನಡೆಸುವ ಯೋಚನೆಯಲ್ಲಿದೆ. ಈ ನೆಲೆಯಲ್ಲಿ ಹದಿಮೂರನೆಯ ವರ್ಷಾಚರಣೆಯನ್ನು ನಡೆಸುವಂತೆ ಸಂಪಾದಕ ಸಮುದಾಯ ಆಚರಿಸುವ ಯೋಜನೆಯನ್ನು ರೂಪಿಸುತ್ತಿದ್ದೇವೆ. ಈ ಉದ್ದೇಶದೊಂದಿಗೆ ನಾನು ದಿನಾಂಕ ೭ ಮತ್ತು ೮ ಡಿಸೆಂಬರ್ ಮೈಸೂರಿಗೆ ಭೇಟಿ ನೀಡಲಿದ್ಡೇನೆ. ಮೈಸೂರಿನಲ್ಲಿರುವ ವಿಕಿಮೀಡಿಯ ಸದಸ್ಯರು ತಮ್ಮ ಬಿಡುವಿನ ಸಮಯವನ್ನು ತಿಳಿಸಿದರೆ ನಿಮ್ಮನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ. ಈ ಭೇಟಿಯಲ್ಲಿ ರಂಗಾಯಣದ ನಿರ್ದೇಶಕರನ್ನು ಭೇಟಿ ಮಾಡುವ ಉದ್ದೇಶವೂ ಇದೆ.

--Lahariyaniyathi (ಚರ್ಚೆ) ೧೩:೪೯, ೪ ಡಿಸೆಂಬರ್ ೨೦೧೫ (UTC) --Bharathesha Alasandemajalu (ಚರ್ಚೆ) ೦೭:೪೮, ೧೮ ಡಿಸೆಂಬರ್ ೨೦೧೫ (UTC)

ಕಾರ್ಯನೀತಿ ಚರ್ಚೆ: ಲೇಖನಗಳಲ್ಲಿ ಪುಟದ ಮಾದರಿಗಳನ್ನು ಬರೆಯುವುದು[ಬದಲಾಯಿಸಿ]

ಪುಟದ ಮಾದರಿಯನ್ನು ದಯವಿಟ್ಟು ಸಂದಂಧಪಟ್ಟ ಯೋಜನೆಪುಟಗಳಲ್ಲಿ ಅಥವಾ ಪ್ರಯೋಗಪುಟಗಳಲ್ಲಿ ಇಲ್ಲವಾದಲ್ಲಿ ಲೇಖನದ ಚರ್ಚಾಪುಟದಲ್ಲಿ ಬರೆಯುವುದು ಉತ್ತಮ. ಉದಾ: ಹೈದರಾಬಾದ್ ಕರ್ನಾಟಕದ ಲೇಖಕಿಯರು ಮತ್ತು ಸಾಧಕಿಯರು, ದಕ್ಷಿಣ_ಕರ್ನಾಟಕದ_ಲೇಖಕಿಯರು_ಮತ್ತು_ಸಾಧಕಿಯರು ಮತ್ತು ಉತ್ತರ ಕರ್ನಾಟಕದ ಲೇಖಕಿಯರು ಮತ್ತು ಸಾಧಕಿಯರು ಲೇಖನದಲ್ಲಿ ಪುಟದ ಮಾದರಿಯನ್ನು ಬರೆಯಲಾಗಿದೆ. Csyogi (ಚರ್ಚೆ) ೧೩:೫೫, ೪ ಡಿಸೆಂಬರ್ ೨೦೧೫ (UTC)

ನನ್ನ ಅಭಿಪ್ರಾಯದಲ್ಲಿ ಆ ರೀತಿಯ ಎಲ್ಲಾ ಪುಟಗಳು ವಿಕಿಪೀಡಿಯ ನೇಂಸ್ಪೇಸ್‌ಗೆ ಹೋಗಬೇಕು. ---ರಹಮಾನುದ್ದೀನ್ (ಚರ್ಚೆ) ೦೩:೧೩, ೫ ಡಿಸೆಂಬರ್ ೨೦೧೫ (UTC)
ಈ ಪುಟಗಳ ಅವಶ್ಯಕತೆ ಇಲ್ಲ ಎನಿಸುತ್ತದೆ. ವರ್ಗಗಳನ್ನು ಸಿದ್ಧಪಡಿಸಿದರೆ ಆಯಾ ಸ್ಥಳಕ್ಕೆ ಸಂಬಂಧಿಸಿದ ಜನರ ಪಟ್ಟಿಯನ್ನು ಒಂದೆಡೆ ಪಡೆಯಬಹುದು. ಇದು ನಿರ್ವಹಣೆಯ ದೃಷ್ಟಿಯಿಂದ ಉಚಿತವೂ ಹೌದು. ಜೊತೆಗೆ ವ್ಯಕ್ತಿಗಳನ್ನು ಈ ಪುಟದಲ್ಲಿ ಪರಿಷ್ಕರಸದಿದ್ದರೆ, ಪುಟವನ್ನು ಕಾಲ ಉರುಳಿದಂತೆ ಉಪೇಕ್ಷಿಸಲಾಗುತ್ತದೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೮:೧೬, ೮ ಡಿಸೆಂಬರ್ ೨೦೧೫ (UTC)
ಈ ಪುಟಗಳನ್ನು ಸೃಷ್ಟಿಸಿದ ವಿಶ್ವನಾಥರವರು ಈ ಲೇಖನಗಳನ್ನು ಹೇಗೆ ಉತ್ತಮ ಪಡಿಸಬಹುದೆಂಬುದರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಕೋರಿಕೊಳ್ಳುತ್ತೇನೆ. ಧನ್ಯವಾದಗಳು -- Csyogi (ಚರ್ಚೆ) ೨೦:೩೧, ೩೧ ಡಿಸೆಂಬರ್ ೨೦೧೫ (UTC)

ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ - ವಿಕಿ ಪುಟದ ಮಾಹಿತಿ ಬಗ್ಗೆ[ಬದಲಾಯಿಸಿ]

ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ ಈ ಲೇಖನದಲ್ಲಿ ಸಂಸ್ಥೆಯ ಜಾಲತಾಣವನ್ನೇ ಉಲ್ಲೇಖವನ್ನಾಗಿ ನೀಡಲಾಗಿದೆ. ಸಂಸ್ಥೆಯಲ್ಲಿ ಓದುತ್ತಿರುವ, ಕೆಲಸ ಮಾಡುತ್ತಿರುವ ಎಲ್ಲರ ಹೆಸರನ್ನು ವಿಶ್ವಕೋಶದ ಪುಟದಲ್ಲಿ ನೀಡಲಾಗಿದೆ. ವಿಶ್ವಕೋಶಕ್ಕೆ ತಕ್ಕಂತೆ ಅವಶ್ಯ ಮಾಹಿತಿ ಇದ್ದರೆ ಸಾಕಲ್ಲವೇ. ವಿಕಿಗೆ ಸಂಸ್ಥೆ ಮಾಡಿದ ಕೆಲಸವನ್ನು ಅದೇ ಸಂಸ್ಥೆಯ ವಿಕಿಪುಟದಲ್ಲಿ ವಿವರಿಸುವ ಅಗತ್ಯವಿಲ್ಲ. ವಿಕಿ ಜಾಹೀರಾತು ತಾಣವಲ್ಲ ಮತ್ತು ವಿಕಿಪೀಡಿಯ ಸುತ್ತ ನೆಡೆಯುತ್ತಿರುವ ಕೆಲಸಗಳಲ್ಲಿ ಭಾಗವಹಿಸಿದ ಸಂಸ್ಥೆಗಳು ಅದನ್ನು ದೊಡ್ಡ ಸಾಧನೆ ಎಂದು ಗುರುತಿಸಿಕೊಳ್ಳುವುದು ಜಾಹೀರಾತಿನಂತಾಗುತ್ತದೆ ಅಲ್ಲವೇ? ಈ ಲೇಖನದಲ್ಲಿ, ಸಂಸ್ಥೆಯಲ್ಲಿ ಓದಿದರೆನ್ನಲಾದ ಮಹನೀಯರ ಬಗ್ಗೆ ಲಭ್ಯ ಉಲ್ಲೇಖನಗಳು ಇತ್ಯಾದಿಗಳನ್ನು ತುಂಬಿದಲ್ಲಿ, ಮತ್ತಷ್ಟು ಉತ್ತಮ ವಿಕಿ ಪುಟಗಳನ್ನು ಬೆಸೆಯಬಹುದು. ಸಾಂಸ್ಥಿಕ ಸಹಭಾಗಿತ್ವ ಹೊಂದಿರುವ ಸಂಸ್ಥೆಗಳ ಪುಟಗಳು ವಿಕಿಯ ಮೂಲ ಆಧಾರಗಳ ಬಗ್ಗೆ ಮಾಹಿತಿ ಪಡೆದಿರುವಂತೆ ಸಂಬಂಧಪಟ್ಟವರು ನೋಡಿಕೊಳ್ಳಬೇಕಿದೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೮:೧೨, ೮ ಡಿಸೆಂಬರ್ ೨೦೧೫ (UTC)

ಇಡೀ ಪುಟವನ್ನು ಮತ್ತು ಪುಟದಲ್ಲಿರುವ ಕ್ರಿಯಾಯೋಜನೆ ಭಾಗವನ್ನು ಓದಿದರೆ, ವಿಕಿಪೀಡಿಯದ ಮೊದಲೆರೆಡು ಆಧಾರ ಸ್ಥಂಬಗಳಿಗೆ ಸರಿಹೊಂದುತ್ತಿಲ್ಲ ಎನಿಸುತ್ತಿದೆ. ಈ ಪುಟವನ್ನು ವಿಶ್ವಕೋಶಕ್ಕೆ ತಕ್ಕಂತೆ ಸರಿಪಡಿಸಿದರೆ ಇನ್ನೂ ಉತ್ತಮವಾಗುವುದೆಂದು ನನ್ನ ಸಣ್ಣ ಸಲಹೆ. ಧನ್ಯವಾದಗಳು - Csyogi (ಚರ್ಚೆ) ೧೭:೫೧, ೧೧ ಜನವರಿ ೨೦೧೬ (UTC)

New Wikipedia Library Accounts Available Now (December 2015)[ಬದಲಾಯಿಸಿ]


Hello Wikimedians!

The TWL OWL says sign up today!

The Wikipedia Library is announcing signups today for, free, full-access accounts to published research as part of our Publisher Donation Program. You can sign up for new accounts and research materials from:

  • Gale - multidisciplinary periodicals, newspapers, and reference sources - 10 accounts
  • Brill - academic e-books and journals in English, Dutch, and other languages - 25 accounts
  • Finnish Literature Society (in Finnish)
  • Magiran (in Farsi) - scientific journal articles - 100 articles
  • Civilica (in Farsi) - Iranian journal articles, seminars, and conferences - 50 accounts

Many other partnerships with accounts available are listed on our partners page, including EBSCO, DeGruyter, and Newspaperarchive.com. Do better research and help expand the use of high quality references across Wikipedia projects: sign up today!
--The Wikipedia Library Team 01:01, 11 December 2015 (UTC)

Help us a start Wikipedia Library in your language! Email us at wikipedialibrary@wikimedia.org
This message was delivered via the Global Mass Message tool to The Wikipedia Library Global Delivery List.

ಯಕ್ಷಗಾನ ಕತಕ್ಕಳಿ ದೊಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಕಿಗೆ ಕಲೆಗಳ ಮಾಹಿತಿ ತುಂಬಿ[ಬದಲಾಯಿಸಿ]

ಕಲಾಮಂಡಲಂ ಗೋಪಿ ಅಭಿನಯಿಸುತ್ತಿರುವ ಯಕ್ಷಗಾನ ಕತಕ್ಕಳಿ ದೊಂದಿ ಕಾರ್ಯಕ್ರಮ ನಾಳೆ ಮಂಗಳೂರಿನಲ್ಲಿ ನೆಡೆಯುತ್ತಿದ್ದು, ಸಂಚಿ ಫೌಂಡೇಷನ್ ಇದರ ದಾಖಲೀಕರಣದ ಜವಾಬ್ದಾರಿ ವಹಿಸಿಕೊಂಡಿದೆ. ಈ ದಾಖಲೀಕರಣ ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್‌ನಡಿ ಲಭ್ಯವಿರಲಿದ್ದು, ವಿಕಿಪೀಡಿಯಕ್ಕೆ ಈ ಕಲೆಗಳ ಮಾಹಿತಿಯನ್ನು, ವಿಡಿಯೋ, ಫೋಟೋ ಇತ್ಯಾದಿಗಳ ಅಗಾಧ ಮಾಹಿತಿಯ ಮಹಾಪೂರ ಹರಿಸಲಿದೆ. ಮಂಗಳೂರಿನಲ್ಲಿರುವ ಮಿತ್ರರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಾವೂ ಫೋಟೋ, ಮಾಹಿತಿ ಇತ್ಯಾದಿಗಳನ್ನು ಸಂಗ್ರಹಿಸಿ ವಿಕಿಗೆ ಅಲ್ಲಿಂದಲೇ ಸೇರಿಸುವ ಸಾಹಸ ಪ್ರಾರಂಭಿಸಬಹುದು. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೧:೪೩, ೧೧ ಡಿಸೆಂಬರ್ ೨೦೧೫ (UTC)

ಕಾರ್ಯನೀತಿ ಚರ್ಚೆ: ವಿಕಿಸೋರ್ಸ್ ಮಾಹಿತಿಗಳನ್ನು ಕನ್ನಡ ವಿಕಿಯಲ್ಲಿ ಬಳಸುವುದು[ಬದಲಾಯಿಸಿ]

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ವರ್ಗದಲ್ಲಿ ೧,೩೦೮ ಪುಟಗಳನ್ನು ಇದುವರೆಗೆ ಸೇರಿಸಲಾಗಿದೆ. ಈ ಪುಟಗಳಲ್ಲಿರುವ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ವಿಕಿಸೋರ್ಸ್‌ನಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಶ್ವಕೋಶದಲ್ಲವೆ. ಈ ಉತ್ತಮವಾದ ಯೋಜನೆಯಲ್ಲಿ ಭಾಗಿಯಾಗಿರುವ ಎಲ್ಲರಿಗೂ ಅಭಿನಂದನೆಗಳು, ಇದರಿಂದಾಗಿ ಕನ್ನಡ ವಿಕಿ ಮತ್ತು ವಿಕಿಸೋರ್ಸ್‌ ಎರಡೂ ಮೈಸೂರು ವಿಶ್ವವಿದ್ಯಾನಿಲಯದ ಕೊಡುಗೆಯಿಂದ ಬಲಗೊಂಡಿವೆ.

Wikipedia:Wikisource ನಲ್ಲಿ ವಿಕಿಸೋರ್ಸ್ ನ ಬಳಕೆ ಹೇಗಿರಬೇಕೆಂದು ವಿವರಿಸಲಾಗಿದೆ. ಆದರೆ, ನಮ್ಮ ವಿಕಿಯ ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ ವರ್ಗದಲ್ಲಿರುವ ಬಹುಪಾಲು ವಿಕಿ ಪುಟಗಳಲ್ಲಿ ನೇರವಾಗಿ ಕನ್ನಡ ವಿಕಿಸೋರ್ಸ್‌ನ ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದ ಲೇಖನಗಳಿಂದ ಪ್ರತಿಮಾಡಿ-ನಕಲಿಳಿಸಿ(copy-paste) ಸೇರಿಸಲಾಗಿದೆ. ವಿಕಿಪುಟಗಳಲ್ಲಿರುವ ವಿಷಯವನ್ನು ವಿಕಿಸೋರ್ಸ್‌ಗೆ ಉಲ್ಲೇಖಿಸುವ ಮೂಲಕ ಬರೆಯುವ ಬದಲಿಗೆ, ವಿಷಯದ ಪಠ್ಯವನ್ನೆ ಪ್ರತಿಮಾಡಿ-ನಕಲಿಳಿಸುವದರಿಂದ ವಿಕಿಪೀಡಿಯ ಮತ್ತು ವಿಕಿಸೋರ್ಸ್‌ ನಡುವಣ ವಿಷಯ ದ್ವಿಗುಣನ(duplication) ಮಾಡುದಂತ್ತಾಗುತ್ತಿದೆ. ವಿಕಿಸೋರ್ಸ್‌ನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಶ್ವಕೋಶದ ಪೂರ್ಣ ಪಠ್ಯ ಎಂದಿಗೂ ಲಭ್ಯವಿರುತ್ತದೆ, ಆದರೆ ವಿಕಿಗೆ ಸೇರಿಸುವ ಲೇಖನಗಳು ಕಾಲ ಸವೆದಂತೆ ಬದಲಾಗುವುದರಿಂದ ಕೇವಲ ವರ್ಗ ಹಾಕಿದರೆ ಮಾತ್ರ ನಮ್ಮ ಕೆಲಸ ಮುಗಿಯುವುದಿಲ್ಲ. ವಿಕಿಸೋರ್ಸ್‌ನಲ್ಲಿರುವ ವಿಷಯಗಳನ್ನು ವಿಕಿಗೆ ಸರಿಯಾಗಿ ಸೇರಿಸುವ ಬಗ್ಗೆ ನಮ್ಮ ವಿಕಿಯಲ್ಲಿ ಚರ್ಚೆ ನೆಡೆದರೆ ಉತ್ತಮವಾಗಿರುತ್ತದೆ, ಮತ್ತೊಂದು ವಿಶ್ವಕೋಶವನ್ನು ಮೂಲವಾಗಿ ಬಳಸಿಕೊಂಡು ವಿಕಿಪೀಡಿಯವನ್ನು ಬಲಪಡಿಸಬೇಕು. ಈಗಾಗಲೇ ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶವನ್ನು ಬಳಸುತ್ತಿರುವವರು ಕನ್ನಡ ವಿಕಿಪೀಡಿಯವನ್ನು ಅದರ ನಕಲೆಂದು ಭಾವಿಸದಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. Copyvio Detector ಈಗಾಗಲೇ ನಮ್ಮ ಕನ್ನಡ ಲೇಖನಗಳನ್ನು ನಕಲು ಎಂದು ಕಂಡು ಹಿಡಿಯುತ್ತಿರುವುದನ್ನು ಈ ಉದಾಹರಣೆಗಳಲ್ಲಿ ನೋಡಬಹುದು: ಅಮೆರಿಕದ ಆದಿವಾಸಿಗಳು, ಅಂಡ, ಅಲ್ತಮಷ್. ಸಮುದಾಯ ಮತ್ತಷ್ಟು ಲೇಖನಗಳನ್ನು ವಿಕಿಸೋರ್ಸ್ ನಿಂದ ಇಲ್ಲಿಗೆ ಸೇರಿಸುವುದಕ್ಕೆ ಮುಂಚೆ, ಅವಶ್ಯಕ ಕಾರ್ಯನೀತಿಯ ಚರ್ಚೆಯಲ್ಲಿ ಭಾಗವಹಿಸುತ್ತದೆ ಎಂದು ನಂಬುತ್ತಾ ನನ್ನ ಅನಿಸಿಕೆಗಳನ್ನು ಮತ್ತು ಕಲಿಕೆಯನ್ನು ಇಲ್ಲಿ ತಿಳಿಸುತ್ತಿದ್ದೇನೆ.

ಧನ್ಯವಾದಗಳೊಂದಿಗೆ - Csyogi (ಚರ್ಚೆ) ೧೭:೪೧, ೧೩ ಡಿಸೆಂಬರ್ ೨೦೧೫ (UTC)

checkY+೧ ಈ ಚರ್ಚೆಯನ್ನು ನಾನು ಬೆಂಬಲಿಸುತ್ತೇನೆ. ಮಾಹಿತಿ ಮೂಲಗಳನ್ನು ಆಕರವಾಗಿ ಬಳಸಬೇಕು. ಅವುಗಳನ್ನು ಇಲ್ಲಿಗೆ ನೇರವಾಗಿ ನಕಲಿಸುವ ಬದಲಿ ವಿಕಿಗೆ ತಕ್ಕ ಲೇಖನಗಳ ಸಂಪಾದನೆ ಆಗಬೇಕು. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೭:೪೫, ೧೩ ಡಿಸೆಂಬರ್ ೨೦೧೫ (UTC)


ಮೊದಲು ಮಾಹಿತಿ ಸೇರ್ಪಡೆಯ ಕೆಲಸ ಆಗಲಿ , ನಂತರ ವಿಕೀಕರಣ, ಚಿತ್ರ ಸೇರ್ಪಡೆ , ಮಾಹಿತಿ ನವೀಕರಣ ಮುಂತಾದವನ್ನು ಆಸಕ್ತರು ಮತ್ತು ಆ ಕೆಲಸ ಮಾಡಬಲ್ಲವರು ಕೈಗೆತ್ತಿಕೊಳ್ಳಬಹುದು ಎಂಬುದು ನನ್ನ ಅನಿಸಿಕೆ ಆಗಿತ್ತು. ( ಹೇಗೂ ಇದೆಲ್ಲವನ್ನೂ ಒಬ್ಬರೇ ಮಾಡುವದು ಸಾಧ್ಯವೂ ಇಲ್ಲವಲ್ಲ ?) ನಾನು ಸೇರಿಸಿದ ಕೆಲವು ಅಂಥ ಪುಟಗಳನ್ನು - ಸಸ್ಸ್ಯಗಳಿಗೆ ಸಂಬಂಧ ಪಟ್ಟವು - ವಸಂತ್ ಅವರು ಸುಧಾರಣೆ ಮಾಡಿದ್ದನ್ನು ನೀವು ಗಮನಿಸಿರಬಹುದು Shreekant.mishrikoti (ಚರ್ಚೆ) ೦೯:೫೩, ೧೮ ಡಿಸೆಂಬರ್ ೨೦೧೫ (UTC)
ಉದಾಹರಣೆಗೆ ಈ ಪುಟವನ್ನು ನೋಡಬಹುದು https://kn.wikipedia.org/wiki/ಕಟೇನಿಯ Shreekant.mishrikoti (ಚರ್ಚೆ) ೦೯:೫೯, ೧೮ ಡಿಸೆಂಬರ್ ೨೦೧೫ (UTC)
Shreekant.mishrikoti ನಮಸ್ತೆ, ಮಾಹಿತಿ ಸೇರ್ಪರ್ಡೆಗೆ ಬೇರೊಂದು ವಿಶ್ವಕೋಶವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಈ ಚರ್ಚೆಯ ಮುಖ್ಯ ಉದ್ದೇಶವಾಗಿದೆ. ಮೈಸೂರು ವಿವಿಯ ಮಾಹಿತಿಯೇ ವಿಕಿಸೋರ್ಸ್‌ನಲ್ಲಿಯೂ, ವಿಕಿಪೀಡಿಯದಲ್ಲಿಯೂ ಇದ್ದಲ್ಲಿ ಅದು ಬರಿ ನಕಲು ಸಂಪಾದನೆ ಆಗುತ್ತದೆ ಅಲ್ಲವೇ? ಅದಕ್ಕೆ ಈ ಸಂದಿಗ್ಧವನ್ನು ಪರಿಹರಿಸಿಕೊಳ್ಳಲೆಂದೇ ಇಲ್ಲಿ ಸಮುದಾಯ ಚರ್ಚೆಗೆ ಕರೆಯಲಾಗಿದೆ. ವಸಂತ್ ಮತ್ತು ನಿಮ್ಮ ಕೆಲಸ ಎಂದಿಗೂ ಶ್ಲಾಘನೀಯ :) ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೪:೪೩, ೧೮ ಡಿಸೆಂಬರ್ ೨೦೧೫ (UTC)
ಯಾವದೇ ಮಾಹಿತಿ ಹುಡುಕುವವರು ವಿಕಿಪೀಡಿಯದಲ್ಲಿ ಅದನ್ನು ಹುಡುಕುತ್ತಾರೆ . ಅಲ್ಲಿ ಆ ಮಾಹಿತಿ ಇರದೇ ವಿಕಿಸೋರ್ಸ ನಲ್ಲಿ ಇರುವಾಗ ವಿಕಿಸೋರ್ಸ ನಲ್ಲಿ ಹುಡುಕಲು ಅವರಿಗೆ ಹೇಗೆ ಗೊತ್ತಾಗುತ್ತದೆ.? ವಿಕಿಸೋರ್ಸ ಬಗ್ಗಾಗಲೀ ವಿಕಿಯ ಇತರ ಯೋಜನೆಗಳ ಬಗ್ಗಾಗಲೀ ಎಷ್ಟು ಜನಕ್ಕೆ ಅರಿವಿದೆ ? ಮತ್ತು ಅದು ಪ್ರಾರಂಭಕ್ಕೆ ನಕಲಿದ್ದೀತು. ಆದರೆ ನಂತರ ಸಮುದಾಯದ ಸದಸ್ಯರ update ಗಳ ನಂತರ ಸ್ವತಂತ್ರ ವಾಗಿ ಬೆಳೆಯುತ್ತದೆ ಅಲ್ಲವೇ Shreekant.mishrikoti (ಚರ್ಚೆ) ೧೬:೦೯, ೧೮ ಡಿಸೆಂಬರ್ ೨೦೧೫ (UTC)
ವಿಕಿಯಲ್ಲಿ ಮಾಹಿತಿ ಇದ್ದರೆ ಅದನ್ನು ಇಂಟರ್ನೆಟ್ ಮೂಲಕ ಹುಡುಕುವುದು ಸಾಧ್ಯ. ಮೇಲಿನ ಚರ್ಚೆಯಲ್ಲಿ Wikipedia:Wikisource ಬೇರೆಯ ವಿಶ್ವಕೋಶಗಳನ್ನು ಬಳಸಿಕೊಂಡು ಹೇಗೆ ಬೆಳೆಯ ಬೇಕು ಎಂದು ವಿವರಿಸಲಾಗಿದೆಯೇ ಹೊರತು, ವಿಕಿಸೋರ್ಸ್‌ನ ಮಾಹಿತಿ ಇಲ್ಲಿ ಬೇಡ ಎಂದಿಲ್ಲ, ಆದರೆ ಅದನ್ನು ಮೂಲ ಆಕರದಂತೆಯೇ ಬಳಸಬೇಕೆ, ಬೇಡವೇ ಅಥವಾ ಸಂಪಾದನೆ ಮಾಡುವವರು ಇದನ್ನು Wikipedia:Wikisource ನಲ್ಲಿ ಹೇಳಿರುವಂತೆ ಉತ್ತಮಗೊಳಿಸಬಹುದೇ ಎಂದು. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೬:೨೩, ೧೮ ಡಿಸೆಂಬರ್ ೨೦೧೫ (UTC)
checkYಈ ಚರ್ಚೆಯನ್ನು ಬೆಂಬಲಿಸುತ್ತೇನೆ. ಇಲ್ಲಿ ಕನಿಷ್ಠಪಕ್ಷವೆಂದರೂ ಮೂರು ಅಂಶಗಳನ್ನು ಪ್ರಸ್ತಾಪಿಸಬಹುದು. ೧. Wikipedia:Wikisourceನ ಮಾರ್ಗದರ್ಶನದ ಪ್ರಕಾರ ವಿಕಿಪೀಡಿಯದಲ್ಲಿನ ಲೇಖನಗಳು ವಿಕಿಸೋರ್ಸ್‌‍ಗಿಂತ ಭಿನ್ನವಾಗಿರುತ್ತವೆ. ೨. ಕೃತಿಚೌರ್ಯ: ಆಕರ ಗ್ರಂಥಗಳು ಮತ್ತು ವಿಕಿಪೀಡಿಯದಲ್ಲಿನ ಲೇಖನಗಳು ಬೇರಯಾಗಿರಬೇಕೆಂಬ ಮಾರ್ಗದರ್ಶನವಿಲ್ಲದಿದ್ದರೆ ಮುಂದೊಂದು ದಿನ ಕೃತಿಚೌರ್ಯದ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಆಕರ ಗ್ರಂಥಗಳು ವಿಕಿಸೋರ್ಸ್‌ನಲ್ಲಿರುವುದರಿಂದ ಈಗ ಸಮಸ್ಯೆಯಿಲ್ಲದಿದ್ರೂ ಕಾರ್ಯನೀತಿಯಿಲ್ಲದಿದ್ದರೆ ಮುಂದೆ ಸಮಸ್ಯೆ ತಲೆದೋರಬಹದು (ನಾನು ವಿಕಿಗೆ ಹೊಸಬನಾದ್ದರಿಂದ ಈ ಅಂಶ ಸರಿಯಿಲ್ಲದಿರಬಹುದು). ೩. ವಿಕಿಪೀಡಿಯ ಓದುಗನು ಯಾವುದೇ ಲೇಖನದ ಸಾರಾಂಶವನ್ನು ಎದುರುನೋಡುತ್ತಾನೆ. ಆಕರ ಗ್ರಂಥದಲ್ಲಿರುವಂತಹ ವಿವರವನ್ನು ಓದಿ ಜೀರ್ಣಿಸಿಕೊಳ್ಳುವುದು ಕಷ್ಟಸಾಧ್ಯವೇ ಸರಿ. ~ ವಿಶ್ವನಾಥ/Vishwanatha (ಚರ್ಚೆ) ೧೮:೪೦, ೨೭ ಡಿಸೆಂಬರ್ ೨೦೧೫ (UTC)
checkY ನೇರವಾಗಿ ನಕಲಿಸುವ ಬದಲಿ ವಿಕಿಗೆ ತಕ್ಕ ಲೇಖನಗಳಂತೆ ಸಂಪಾದನೆ ಆಗಬೇಕು ಎಂಬುದು ನನ್ನ ಅಭಿಪ್ರಾಯ. --Vikas Hegde (ಚರ್ಚೆ) ೧೨:೪೨, ೨೯ ಡಿಸೆಂಬರ್ ೨೦೧೫ (UTC)
ಪ್ರತಿಕ್ರಿಯೆ ನೀಡಿದ ಸಮುದಾಯದವರೆಲ್ಲರಿಗು ವಂದನೆಗಳು. ಇಲ್ಲಿ ಚರ್ಚಿಸಿದಂತೆ ವಿಕಿಸೋರ್ಸ್‌ನ ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಿಂದ ವಿಕಿಪೀಡಿಯಗೆ ನಕಲಿಸುವುದು ಕಡಿಮೆಯಾಗುವುದೆಂದು ಆಶಿಸುತ್ತೇನೆ. ಧನ್ಯವಾದಗಳು. - Csyogi (ಚರ್ಚೆ) ೧೭:೫೯, ೧೧ ಜನವರಿ ೨೦೧೬ (UTC)
ಇತ್ತೀಚಿಗೆ ನಾನು ಒಬ್ಬನೇ ಈ ಕೆಲಸ ಮಾಡುತ್ತಿರುವಂತಿದೆ. ಸಮುದಾಯದ ಸದಸ್ಯರಿಗೆ ಈ ರೀತಿಯ "ವಿಕೀಕರಣಗೊಳಿಸಿದ ನಕಲಿಳಿಸುವಿಕೆ" ಸಮಂಜಸವೆನಿಸದಿದ್ದರೆ ಈ ಕೆಲಸವನ್ನು ನಾನು ನಿಲ್ಲಿಸುತ್ತೇನೆ.ದಯವಿಟ್ಟು ಅಭಿಪ್ರಾಯ ತಿಳಿಸಿ. ದನ್ಯವಾದಗಳು.--VASANTH S.N. (ಚರ್ಚೆ) ೧೧:೦೪, ೧೭ ಜನವರಿ ೨೦೧೬ (UTC)
ವಿಕಿಸೋರ್ಸ್‍ನಿಂದ ವಿಕಿಪೀಡಿಯಕ್ಕೆ ನೇರವಾಗಿ ನಕಲಿಸುವ ಬದಲಿಗೆ ಅದನ್ನು ವಿಕೀಕರಣಗೊಳಿಸಿ, ಅಂದರೆ ಕೊಂಡಿಗಳು, ಉಲ್ಲೇಖಗಳು, ಸಾಧ್ಯವಿದ್ದಲ್ಲಿ ಚಿತ್ರಗಳನ್ನು ಸೇರಿಸಿ, ಕೆಲವು ವಿಷಯಗಳಲ್ಲಿ ಇತ್ತೀಚೆಗಿನ ಹೊಸ ಮಾಹಿತಿಗಳನ್ನು ಸೇರಿಸಿ ವಿಕಿಪೀಡಿಯಕ್ಕೆ ಸೇರಿಸುವುದು ಸರಿಯಾದ ವಿಧಾನ. ಆದರೆ ಇದೆಲ್ಲವನ್ನೂ ಒಬ್ಬರಿಗೇ ಮಾಡಲು ಸಮಯಾಭಾವವಿದ್ದಲ್ಲಿ ಸಮುದಾಯವು ಕೈಜೋಡಿಸಿ ಮಾಡಿದರೆ ಉತ್ತಮ. ಒಬ್ಬರು ವಿಕಿಸೋರ್ಸ್‍ನಿಂದ ನಕಲಿಸುವುದು, ಇನ್ನೊಬ್ಬರು ವಿಕೀಕರಣಗೊಳಿಸುವುದು, ಮತ್ತೊಬ್ಬರು ವಿಸ್ತರಿಸುವುದು, ನವೀಕರಿಸುವುದು, ಇತ್ಯಾದಿ ಮಾಡಬಹುದು. ಆದುದರಿಂದ ಈ ಕೆಲಸ ಮುಂದುವರೆಯಲಿ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ--Pavanaja (ಚರ್ಚೆ) ೧೧:೧೬, ೧೮ ಜನವರಿ ೨೦೧೬ (UTC)
ವಿಕಿಪೀಡಿಯದ ಲೇಖನ ಸಂಖ್ಯೆ ಹೆಚ್ಚಿಸುವುದು ಮಾತ್ರ ನೇರ ನಕಲಿನಿಂದ ಸಾಧ್ಯ. ಒಮ್ಮೆ "ಯಾವುದೋ ಒಂದು ಪುಟ" ಕ್ಲಿಕ್ಕಿಸಿ ನೋಡಿದವನಿಗೆ ನಾವು ಹೇಳುತ್ತಿರುವ ವಿಕಿಗೆ ತಕ್ಕ ಲೇಖನ ಸಿಗದಿರುವುದು ವಿಕಿಯ ಗುಣಮಟ್ಟವನ್ನು ತಿಳಿಸುತ್ತದೆ. ನೇರ ನಕಲಿಗೆ ನನ್ನ ವಿರೋಧವಿದೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೦೨:೩೭, ೨೦ ಜನವರಿ ೨೦೧೬ (UTC)
Wikipedia:Wikisourceನಲ್ಲಿರುವಂತೆ ವಿಕಿಸೋರ್ಸ್‌ನಲ್ಲಿರುವ ಮೂಲಕೃತಿಗಳನ್ನು ಆಕರವಾಗಿ ಬಳಸಿ ವಿಕಿಪೀಡಿಯದಲ್ಲಿ ಪುಟಗಳನ್ನು ಸೇರಿಸುವ/ಉತ್ತಮಗೊಳಿಸುವ ಕೆಲಸ ಮುಂದುವರಿಯಲಿ, ಆದರೆ ನೇರವಾಗಿ ನಕಲಿಸುವುದರ ಬಗ್ಗೆ ಇಲ್ಲಿ ಚರ್ಚೆಯಾಗಿದೆ. ಸರಿಯಾದ ವಿಧಾನದಲ್ಲಿ ಸಮುದಾಯದ ಯಾವ ಸದಸ್ಯರಾದರೂ ವಿಷಯಗಳನ್ನು ಸೇರಿಸಿ ಕನ್ನಡ ವಿಕಿಯನ್ನು ಉತ್ತಮಗೊಳಿಸುವುದು ಇದರ ಆಶಯವಾಗಿದೆ. ಧನ್ಯವಾದಗಳು. -- Csyogi (ಚರ್ಚೆ) ೨೧:೦೫, ೧೯ ಜನವರಿ ೨೦೧೬ (UTC)

ಕಾರ್ಯನೀತಿ ಚರ್ಚೆ: ಪುಸ್ತಕ ನಿಧಿ ಸ್ಥಾಪನೆಯ ಕುರಿತು[ಬದಲಾಯಿಸಿ]

ವಿಕಿ ಸಂಪಾದನೆಗಳಿಗೆ ಸಹಾಯಕವಾಗುವಂತೆ ಪುಸ್ತಕ ನಿಧಿ ಸ್ಥಾಪನೆಯ ಕುರಿತು ನಿರಂಜನರ ಪುಸ್ತಕಗಳನ್ನು ವಿಕಿಸೋರ್ಸ್‌ಗೆ ಸೇರಿಸಲು ಪ್ರಾರಂಭಿಸಿದಾಗ User:Lahariyaniyathi ಅವರೊಡನೆ ಚರ್ಚೆ ಪ್ರಾರಂಭ ಮಾಡಿದ್ದೆ. ನಂತರದ ದಿನಗಳಲ್ಲಿ, ಕೆಲವೊಂದು ಪುಸ್ತಕಗಳನ್ನು ಸಿ.‌ಐ.‌ಎಸ್ ಎ೨ಕೆ ತಂಡ ಕೊಂಡು ತಂದಿತ್ತು. ಇತ್ತೀಚೆಗೆ ಕನ್ನಡದ ಶಾಸನಗಳು, ಸಾಹಿತ್ಯದ ಇತಿಹಾಸಗಳ ಬಗ್ಗೆ ಮಾಹಿತಿ ತುಂಬಲು, ವಿಕ್ಷನರಿಯ ಪದಗಳನ್ನು, ಅರ್ಥಗಳನ್ನು ಪರೀಕ್ಷಿಸಲು ಮೂಲ ನಿಘಂಟುಗಳನ್ನು ಖರೀದಿಸಿ ಸಮುದಾಯಕ್ಕೆ ಲಭ್ಯ ಮಾಡಿದರೆ ಉತ್ತಮ ಅಲ್ಲವೇ ಎಂದು ಕೊಂಡಾಗ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ User:Csyogi ಅವರೊಟ್ಟಿಗೆ ಕೆಲವೊಂದು ಪುಸ್ತಕಗಳನ್ನು ಕೊಂಡುತಂದೆವು. ಈ ರೀತಿ ವಿಕಿಗೆ ತರುವ ಪುಸ್ತಕಗಳ ಸುತ್ತ ಕೆಲವೊಂದು ಕನಿಷ್ಠ ನಿಯಮಗಳನ್ನು ರಚಿಸಿ, ಪುಸ್ತಕಗಳ ಬಳಕೆಯನ್ನು ವಿಕಿಯ ಸಂಪಾದನೆಯ ಕೆಲಸಗಳಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂದು ಸಮುದಾಯ ಚರ್ಚಿಸಿ ಪುಸ್ತಕ ನಿಧಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬಹುದು. ಸಧ್ಯಕ್ಕೆ ವಿಕ್ಷನರಿಗಾಗಿ ತಂದ ಸಾಹಿತ್ಯ ಪರಿಷತ್ತಿನ ನಿಘಂಟುಗಳು ಸಿ.‌ಐ.‌ಎಸ್ ಎ೨ಕೆಯ ಬೆಂಗಳೂರಿನ ಕಚೇರಿಯಲ್ಲಿ ಲಭ್ಯವಿವೆ. ಜೊತೆಗೆ ಮೇವುಂಡಿ ಮಲ್ಲಾರಿಯವರ ಕನ್ನಡ ನಾಡಿನ ಶಾಸನಕವಿಗಳು, ಎ. ಎಂ. ಅಣ್ಣಿಗೇರಿ ಮತ್ತು ಡಾ|| ಆರ್. ಶೇಷಶಾಸ್ತ್ರಿ ಅವರು ಸಂಪಾದಿಸಿದ ಶಾಸನ ಸಂಗ್ರಹ, ತ.ಸು ಶಾಮರಾಯರ ಕನ್ನಡ ಸಾಹಿತ್ಯ ಚರಿತ್ರೆ ಪುಸ್ತಕಗಳು ನನ್ನಲ್ಲಿ ಲಭ್ಯವಿವೆ. ಇವನ್ನೂ ಮುಂದಿನ ವಾರಗಳಲ್ಲಿ ಸಿ.‌ಐ.‌ಎಸ್ ಎ೨ಕೆಯಲ್ಲಿ ಇರಿಸಲಾಗುವುದು. ಸಿ.‌ಐ.‌ಎಸ್ ಎ೨ಕೆ ತಂಡ ಕೂಡ ಮತ್ತಷ್ಟು ಪುಸ್ತಕಗಳನ್ನು ಖರೀದಿಸಿ ತಂದಿದೆ. ಹೊಸ ಪುಸ್ತಕಗಳ ಖರೀದಿ ಅಷ್ಟೇ ಈ ಯೋಜನೆಯ ಉದ್ದೇಶವಾಗಿರದೆ, ಈಗಾಗಲೇ ನಮ್ಮಲ್ಲಿರುವ ಪುಸ್ತಕಗಳನ್ನು ವಿಕಿ ಸಂಪಾದನೆಗೆ ಕೊಡುಗೆಯಾಗಿ ಅಥವಾ ಎರವಲು ಕೊಡಬಯಸುವವರಿಗೂ ಇದು ಒಂದು ವೇದಿಕೆ ಆಗಬೇಕು, ಜೊತೆಗೆ ವಿಷಯಾಧಾರಿತ ಸಂಪಾದನೆ ಮಾಡಲು ಇಚ್ಚಿಸುವವರಿಗೆ ಅವಶ್ಯ ಸಂಪನ್ಮೂಲ ಕ್ರೂಢೀಕರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇದಕ್ಕೆ ಅವಶ್ಯವಿರುವ ಯೋಜನಾ ಪುಟ, ನಡವಳಿ/ಕಾರ್ಯನೀತಿ ಇತ್ಯಾದಿಗಳ ಚರ್ಚೆ ಇವು ಮುಂದಿನ ಹೆಜ್ಜೆಗಳು. ಸಮುದಾಯ ಇದರಲ್ಲಿ ಉತ್ಸಾಹದಿಂದ ಭಾಗವಹಿಸಬೇಕು ಎಂದು ಈ ಮೂಲಕ ಕೋರಿಕೊಳ್ಳುತ್ತೇನೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೬:೩೯, ೧೮ ಡಿಸೆಂಬರ್ ೨೦೧೫ (UTC)

ನಮ್ಮ ಕನ್ನಡ ವಿಕಿಯಲ್ಲಿ ಈ ಪುಸ್ತಕಗಳಲ್ಲಿರುವ ವಿಷಯಗಳಗೆ ಸಂಭಂದಿಸಿದ ಈಗಾಗಲೇ ಇರುವ ಲೇಖನಗಳಿಗೆ ಮತ್ತು ಹೊಸ ಲೇಖನಗಳಿಗೆ ಉಲ್ಲೇಖಿಸಲು ಈ ಪುಸ್ತಕಗಳು ಉಪಯುಕ್ತವಾಗುತ್ತವೆ. - Csyogi (ಚರ್ಚೆ) ೧೯:೩೬, ೧೧ ಜನವರಿ ೨೦೧೬ (UTC)

This is a message from the Wikimedia Foundation. Translations are available.

As many of you know, January 15 is Wikipedia’s 15th Birthday!

People around the world are getting involved in the celebration and have started adding their events on Meta Page. While we are celebrating Wikipedia's birthday, we hope that all projects and affiliates will be able to utilize this celebration to raise awareness of our community's efforts.

Haven’t started planning? Don’t worry, there’s lots of ways to get involved. Here are some ideas:

Everything is linked on the Wikipedia 15 Meta page. You’ll find a set of ten data visualization works that you can show at your events, and a list of all the Wikipedia 15 logos that community members have already designed.

If you have any questions, please contact Zachary McCune or Joe Sutherland.

Thanks and Happy nearly Wikipedia 15!
-The Wikimedia Foundation Communications team

Posted by the MediaWiki message delivery, ೨೦:೫೮, ೧೮ ಡಿಸೆಂಬರ್ ೨೦೧೫ (UTC) • ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿಸಹಾಯ

ಸಂಪಾದನೋತ್ಸವ ಬೆಂಗಳೂರಿನ ವರದಿ[ಬದಲಾಯಿಸಿ]

ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ೧೩ನೇ ವರ್ಷದಾಚರಣೆಯ ಅಂಗವಾಗಿ ವಿಷಯಾಧಾರಿತ ಕಾರ್ಯಾಗಾರಗಳನ್ನು ಏರ್ಪಡಿಸಬೇಕೆಂದು ತೀರ್ಮಾನವಾಗಿತ್ತು.ಅದರ ಅಂಗವಾಗಿ ಬೆಂಗಳೂರಿನ ಟೆಕ್ಸಾಸ್ ಇನ್ಸ್ಟ್ರುಮೆಂಟ್ ಎಂಬ ಸಂಸ್ಥೆಯಲ್ಲಿ ಡಿಸೆಂಬರ್ ೧೯ ಮತ್ತು ೨೦ ರಂದು ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.ಇದರಲ್ಲಿ ಉತ್ತಮ ಗುಣಮಟ್ಟದ ಲೇಖನಗಳು ಹೊರಬಂದಿದೆ ಎಂಬುದು ನನ್ನ ಅಭಿಪ್ರಾಯ.ಇದರಲ್ಲಿ ಭಾಗವಹಿಸಿದ ಎಲ್ಲಾ ಸಾಫ್ಟ್ ವೇರ್ ಇಂಜಿನಿಯರ್ಸ್ ಗಳಿಗೂ ಧನ್ಯವಾದಗಳು. ಲೇಖನಗಳ ಕೊಂಡಿ ಇಲ್ಲಿದೆ.ಆ ಲೇಖನಗಳನ್ನು ಸಮುದಾಯದವರು ಪರಿಶೀಲಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕೆಂದು ವಿನಂತಿ. ಅನಂತ್ (ಚರ್ಚೆ) ೦೬:೨೧, ೨೧ ಡಿಸೆಂಬರ್ ೨೦೧೫ (UTC)

ಲೇಖನಗಳಿಗೆ ಆಯ್ದುಕೊಂಡ ವಿಷಯಗಳು ಚೆನ್ನಾಗಿವೆ. ಲೇಖನಗಳನ್ನು ಓದುವುದು ಬಾಕಿ ಇದೆ. ವಾರಾಂತ್ಯದಲ್ಲಿ ನೋಡುವೆ. ಯೂಟ್ಯೂಬ್, ಇಂಗ್ಲೀಷ್ ವಿಕಿಪೀಡಿಯ ಲೇಖನಗಳ ಕೊಂಡಿಗಳು, ಬ್ಲಾಗ್‌ಗಳ ಕೊಂಡಿಗಳನ್ನು ಉಲ್ಲೇಖವನ್ನಾಗಿ ಕೊಡಲಾಗಿದೆ. Help:Referencing for beginners ಮತ್ತು Wikipedia:Citing_sources ಈ ಕೊಂಡಿಗಳಲ್ಲಿ ಉಲ್ಲೇಖಗಳ ಬಗ್ಗೆ, ಆಕರವನ್ನು ಉಲ್ಲೇಖಿಸುವುದರ ಬಗ್ಗೆ ನೀಡಲಾಗಿದೆ. ಸಂಪಾದನೆಯನ್ನು ಹೇಳಿಕೊಡುವವರು, ಉಲ್ಲೇಖಗಳು, ಮೂಲ ಆಕರಗಳ ಬಗ್ಗೆ ಮತ್ತು ಬಾಹ್ಯಕೊಂಡಿಗಳನ್ನು ವಿಕಿಪೀಡಿಯದಲ್ಲಿ ಬಳಸುವುದನ್ನು ಕಲಿಯುವುದು ಮತ್ತು ಅದನ್ನು ಸಂಪಾದನೆಯಲ್ಲಿ ರೂಢಿಸಿಕೊಳ್ಳುವುದು ಅವಶ್ಯ, ನಂತರವಷ್ಟೇ ಇತರರು ಅದನ್ನು ಅನುಕರಿಸುವುದು ಸಾಧ್ಯವಾಗುತ್ತದೆ. ಮತ್ತಷ್ಟು ಅನಿಸಿಕೆಗಳನ್ನು ಲೇಖನಗಳನ್ನು ಓದಿದ ನಂತರ ಸೇರಿಸುತ್ತೇನೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೨೧:೧೬, ೨೨ ಡಿಸೆಂಬರ್ ೨೦೧೫ (UTC)
ಬೆಂಗಳೂರು ಸಂಪಾದನೋತ್ಸವದಲ್ಲಿ ತುಂಬ ಉತ್ತಮ ಲೇಖನಗಳು ಮೂಡಿ ಬಂದಿವೆ. ಎಲ್ಲರೂ ಬರೆದ ಲೇಖನಗಳು ಎಂದು ಹೇಳಲು ಆಗದಿದ್ದರೂ ಬಂದಿರುವ ಲೇಖನಗಳಲ್ಲಿ ಕೆಲವು ತುಂಬ ಉತ್ತಮವಾಗಿವೆ.--Vishwanatha Badikana (ಚರ್ಚೆ) ೧೫:೧೯, ೨೩ ಡಿಸೆಂಬರ್ ೨೦೧೫ (UTC)
ಈ ಸಂಪಾದನೋತ್ಸವದಲ್ಲಿ ಭಾಗವಹಿಸಿ ಕಾಣಿಕೆಗಳನ್ನು ನೀಡಿದವರೆಲ್ಲರಿಗೂ ಅಭಿನಂದನೆಗಳು. ಸಂಪಾದನೋತ್ಸವದ ಆಯೋಜಕರು/ಭಾಗವಹಿಸಿದವರು ಸಹ ಪ್ರಾಥಮಿಕವಾಗಿ ಲೇಖನಗಳಲ್ಲಿ ಒಮ್ಮೆ ಉಲ್ಲೇಖಗಳು, ಮೂಲ ಆಕರಗಳು ಮತ್ತು ಬಾಹ್ಯಕೊಂಡಿಗಳನ್ನು ಪರಿಶೀಲಿಸಿದರೆ ಉತ್ತಮವಾಗಿರುತ್ತದೆಂದು ನನ್ನ ಅನಿಸಿಕೆ. ಧನ್ಯವಾದಗಳು -- Csyogi (ಚರ್ಚೆ) ೨೧:೨೪, ೧೯ ಜನವರಿ ೨೦೧೬ (UTC)

ಮಂಗಳೂರಿನಲ್ಲಿ ನಡೆದ ಸಂಪಾದನೋತ್ಸವದ ವರದಿ[ಬದಲಾಯಿಸಿ]

ಹದಿಮೂರನೆಯ ವರ್ಷಾಚರಣೆಯನ್ನು ನಡೆಸುವ ಪೂರ್ವಭಾವಿ ತಯಾರಿಯ ಸಂಪಾದನೋತ್ಸವಗಳಲ್ಲಿ ಮಂಗಳೂರಿನಲ್ಲಿ ದಿನಾಂಕ ೧೦, ೧೧ ಮತ್ತು ೧೨ನೇ ಡಿಸೆಂಬರ್ ೨೦೧೫ರಂದು ನಡೆದ ಕಾರ್ಯಾಗಾರವು ತುಂಬ ಉತ್ತಮವಾಗಿ ಮೂಡಿ ಬಂದಿದೆ. ಮಹಿಳಾ ಬರಹಗಾರ್ತಿಯರನ್ನು ಗಮನದಲ್ಲಿರಿಸಿಕೊಂಡು ಕರಾವಳಿ ಕರ್ನಾಟಕದ ಮಹಿಳಾ ಬರಹಗಾರ್ತಿಯರ ಬಗೆಗೆ ಲೇಖನಗಳನ್ನು ಬರೆಸುವ ಇರಾದೆಯನ್ನು ಇಟ್ಟುಕೊಳ್ಳಲಾಗಿತ್ತು. ಅದರಂತೆ ಸೈಂಟ್ ಆಗ್ನೆಸ್ ಕಾಲೇಜಿನ ೨೨ ವಿದ್ಯಾರ್ಥಿನಿಯರು ಈ ಕಾರ್ಯಾಗಾರದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದಾರೆ. ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ಸಂಪಾದಕರಿಗೆ ಡಿಸೆಂಬರ್ ೨೧ರಂದು ಸಣ್ಣ ಮಟ್ಟದ ಮಾಹಿತಿಯನ್ನು ನೀಡಲಾಗಿದೆ. ಅವರು ಬರೆದ ಲೇಖನಗಳ ಕೊಂಡಿ ಇಲ್ಲಿದೆ. ಈ ಲೇಖನಗಳನ್ನು ಸಮುದಾಯದವರು ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕೆಂದು ವಿನಂತಿ.--Vishwanatha Badikana (ಚರ್ಚೆ) ೧೫:೩೨, ೨೩ ಡಿಸೆಂಬರ್ ೨೦೧೫ (UTC)

ಈ ಸಂಪಾದನೋತ್ಸವದಲ್ಲಿ ಭಾಗವಹಿಸಿ ಮಹಿಳಾ ಬರಹಗಾರ್ತಿಯರ ಬಗ್ಗೆ ಕಾಣಿಕೆಗಳನ್ನು ನೀಡಿದ ಎಲ್ಲಾ ೨೨ ವಿದ್ಯಾರ್ಥಿನಿಯರಿಗೆ ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನೆಗಳು. ಸಮಾನ್ಯವಾಗಿ ಜೀವನ ಚರಿತ್ರೆಯ ಲೇಖನಗಳಿಗೆ ಮಾಹಿತಿ ಪೆಟ್ಟಿಗೆಯನ್ನು ಬಳಸಲಾಗುತ್ತದೆ, ಇದನ್ನು ಬಳಿಸದರೆ ಈ ಲೇಖನಗಳು ಇನ್ನೂ ಉತ್ತಮವಾಗುತ್ತವೆ. ಕೆಲ ಲೇಖನಗಳಲ್ಲಿ(ಉದಾ) ಬೇಡವಾದ ಆಂಗ್ಲ ಪದಗಳು, ಸಂಬಂಧವಿಲ್ಲದ ಬಾಹ್ಯ ಕೊಂಡಿಗಳನ್ನು ಬಳಸಲಾಗಿದೆ. ಹಾಗೆಯೇ, ಸದಸ್ಯರ ಪ್ರಯೋಗಪುಟದಿಂದ ಲೇಖನ ಪುಟಕ್ಕೆ ಸರಿಯಾಗಿ ನಕಲಿಸುವುದನ್ನೂ ಮಾಡಲಾಗಿಲ್ಲ(ಉದಾ: ದೇವಕಿ_ಮೂರ್ತಿ). ಸಂಪಾದನೋತ್ಸವದ ಆಯೋಜಕರು/ಸಂಪನ್ಮೂಲ ವ್ಯಕ್ತಿಗಳು ಪ್ರಾಥಮಿಕವಾಗಿ ಈ ಹೊಸ ಸದಸ್ಯರು ಬರೆದ ಲೇಖನಗಳನ್ನು ಒಮ್ಮೆ ಪರಿಶೀಲಿಸಿದರೆ ಉತ್ತಮವಾಗಿರುತ್ತದೆಂದು ನನ್ನ ಅನಿಸಿಕೆ. ಸಮುದಾಯದಲ್ಲಿ ಮಹಿಳಾ ಲೇಖಕರ ಸಂಖ್ಯೆ ತುಂಬಾ ಕಡಿಮೆಯಿದೆ, ಇವರ ಕಾಣಿಕೆಗಳು ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಮುಂದುವರೆಯಲಿ. ಇವರನ್ನು ತೊಡಗಿಸಿಕೊಳ್ಳಲು ಈ ಉತ್ತಮ ಸಂಪಾದನೋತ್ಸವವನ್ನು ಆಯೋಜಿಸದ್ದಕ್ಕಾಗಿ ಧನ್ಯವಾದಗಳು. Csyogi (ಚರ್ಚೆ) ೨೨:೧೮, ೧೯ ಜನವರಿ ೨೦೧೬ (UTC)

ಕನ್ನಡ ೧೩ನೇ ವರ್ಷದಾಚರಣೆ ಬೆಂಗಳೂರು ಮತ್ತು ಇತರೆ ನಗರಗಳಲ್ಲಿ[ಬದಲಾಯಿಸಿ]

ಕನ್ನಡ ವಿಕಿಪೀಡಿಯ ೧೩ನೇ ವರ್ಷದಾಚರಣೆಯ ಪ್ರಯುಕ್ತ ಫೋಟೋನಡಿಗೆ ಆಯೋಜಿಸುವ ಸಲಹೆ ಕನ್ನಡ ವಿಕಿಮೀಡಿಯ ಸಮುದಾಯದಿಂದ ಬಂದಿದೆ. ಈ ಫೋಟೋನಡಿಗೆ ಕಾರ್ಯಕ್ರಮವು ಕರ್ನಾಟಕದ ಬೇರೆ ಬೇರೆ ನಗರಗಳಲ್ಲಿ ಆಯೋಜಿಸುವ ಇರಾದೆ ಇದೆ. ಈ ಕುರಿತು ಓಂಶಿವಪ್ರಕಾಶ, ಕಿರಣ್‍ರವಿಕುಮಾರ್ ಮತ್ತು ಸಮುದಾಯದಿಂದ ಸಲಹೆಗಳನ್ನು ಕೋರುತ್ತಿದ್ದೇವೆ. --Lahariyaniyathi (ಚರ್ಚೆ) ೦೯:೦೭, ೨೩ ಡಿಸೆಂಬರ್ ೨೦೧೫ (UTC)

ಇಂದು ಸಂಜೆ ವಿಕಿ ಹೊರಗೆ ನೆಡೆಸಿದ ಚರ್ಚೆಯ ಪ್ರಕಾರ, ಕರ್ನಾಟಕ ಪ್ರತಿನಿಧಿಸುವ ವಿಕಿಪೀಡಿಯನ್ನರ ಜಿಲ್ಲಾವಾರು ಮಾಹಿತಿ ತೆಗೆದು, ಯಾರು ಆಯಾ ಜಿಲ್ಲೆಗಳ ಮುಂದಾಳತ್ವವಹಿಸುತ್ತಾರೆಂದು ಪಟ್ಟಿ ಮಾಡುವ ಕೆಲಸ ಮೊದಲುಗೊಳಿಸಬೇಕಿದೆ. ನಂತರ ಇಂತದ್ದೊಂದು ಕಾರ್ಯಕ್ರಮವನ್ನು ಆಯೋಜಿಸಿ, ಅದನ್ನು ನಿರ್ವಹಿಸುವ ಬಗ್ಗೆ ಮತ್ತಷ್ಟು ಚರ್ಚೆಗಳಾಗಬೇಕಿದೆ. ಇನ್ಮುಂದಿನ ದಿನಗಳಲ್ಲಿ ಇದರ ಚರ್ಚೆ ಮುಂದುವರೆಸೋಣ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೮:೨೭, ೨೭ ಡಿಸೆಂಬರ್ ೨೦೧೫ (UTC)
  • -- ನನ್ನ ಸಹಮತವಿದೆ. ಇದು ಒಂದು ಒಳ್ಳೆಯ ಯೋಜನೆ. ಆದರೆ ಇದರ ರೂಪುರೇಷೆಗಳನ್ನು ತಿಳಿಸಿದ್ದರೆ ಚೆನ್ನಾಗಿತ್ತು. --Vishwanatha Badikana (ಚರ್ಚೆ) ೧೫:೧೬, ೨೩ ಡಿಸೆಂಬರ್ ೨೦೧೫ (UTC)

checkY ನನ್ನ ಸಹಮತವಿದೆ. ಜನವರಿ ಇಪ್ಪತ್ತೈದರಿಂದ ಶಿವಮೊಗ್ಗದಲ್ಲಿ ವಿಕಿ ಕಾರ್ಯಾಗಾರ ನಡೆಸೋ ಕಾರ್ಯ ಪ್ರಗತಿಯಲ್ಲಿರುವದಿಂದ ೨೪ಕ್ಕೆ ಸಾಗರದಲ್ಲಿ ಫೋಟೋ ನಡಿಗೆ ನಡೆಸಿದರೆ ಹೇಗೆ ? ಸಾಗರದ ಸುತ್ತಮುತ್ತಲ ಸ್ಥಳಗಳಾದ ಕೆಳದಿ,ಇಕ್ಕೇರಿ,ಕಲಸೆ,ವರದಹಳ್ಳಿ ಮುಂತಾದ ಸ್ಥಳಗಳನ್ನು ಭೇಟಿ ನೀಡಬಹುದು ಪ್ರಶಸ್ತಿ (ಚರ್ಚೆ) ೧೩:೦೯, ೨ ಜನವರಿ ೨೦೧೬ (UTC)

ಸಾಗರ ಸುತ್ತಮುತ್ತ (ಇಕ್ಕೇರಿ, ಕೆಳದಿ, ಇತ್ಯಾದಿ) ಸ್ಥಳಗಳಲ್ಲಿ ಫೋಟೋನಡಿಗೆಗೆ ನನ್ನ ಸಹಮತವಿದೆ--Pavanaja (ಚರ್ಚೆ) ೧೩:೧೬, ೨ ಜನವರಿ ೨೦೧೬ (UTC)

checkY ನನ್ನ ಸಹಮತವಿದೆ.ವಿದ್ಯಾಧರ ಚಿಪ್ಳಿ (ಚರ್ಚೆ) ೦೬:೪೯, ೯ ಜನವರಿ ೨೦೧೬ (UTC).

ಮಾಹಿತಿ[ಬದಲಾಯಿಸಿ]

ಒಳ್ಳೆಯ ಕಾರ್ಯಕ್ರಮ. ಆದರೆ, ಕರ್ನಾಟಕ ಪ್ರತಿನಿಧಿಸುವ ವಿಕಿಪೀಡಿಯನ್ನರ ಜಿಲ್ಲಾವಾರು ಮಾಹಿತಿ ಮತ್ತು ಯಾರು ಆಯಾ ಜಿಲ್ಲೆಗಳ ಮುಂದಾಳತ್ವವಹಿಸುತ್ತಾರೆಂಬ ಪಟ್ಟಿ ಕಾಣಲಿಲ್ಲ. ದಯವಿಟ್ಟು ಕೊಂಡಿ/ಮಾಹಿತಿಯನ್ನು ನೀಡಲು ಕೇಳಿಕೊಳ್ಳುತ್ತಿದ್ದೇನೆ. ಧನ್ಯವಾದಗಳು. -- Csyogi (ಚರ್ಚೆ) ೨೨:೩೭, ೧೯ ಜನವರಿ ೨೦೧೬ (UTC)

ಮುಂದಿನ ಹಂತ[ಬದಲಾಯಿಸಿ]

ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಈ ಕಾರ್ಯವನ್ನು ಸಂಪೂರ್ಣಗೊಳಿಸಲು ವಿಕಿಕಾಮನ್ಸ್ ಹಾಗೂ Upload Wizard‌ ಗೆ ಸಂಬಂಧಿಸಿದ ಟೆಂಪ್ಲೇಟುಗಳ ಕನ್ನಡೀಕರಣ ಆಗಬೇಕಿದೆ. ಈ ಕಾರ್ಯಗಳನ್ನು ಇನ್ಮುಂದೆ ಇಲ್ಲಿ ಪಟ್ಟಿ ಮಾಡುವೆ.

  • Upload Wizard ಅನುವಾದ ಕಾರ್ಯದಲ್ಲಿ ಜೊತೆಯಾಗಿ.
  • Non-free_content ನಲ್ಲಿ ತೋರಿಸಿರುವಂತೆ ಕನ್ನಡಕ್ಕೂ ಒಂದು exemption doctrine policy ಪುಟದ ಅವಶ್ಯಕತೆ ಇದೆ. ಈ ಕಾರ್ಯದಲ್ಲಿ ಸಹಾಯ ಮಾಡಲಿಚ್ಚಿಸುವವರು ಚರ್ಚೆಗೆ ಪ್ರತಿಕ್ರಿಯಿಸಿ.

~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೮:೫೩, ೩೦ ಡಿಸೆಂಬರ್ ೨೦೧೫ (UTC)

Upload Wizard ಅನುವಾದ ಇನ್ನೂ ೭೫% ರಷ್ಟು ಆಗಬೇಕಿದೆ. ಅನುವಾದಕರು ಕೈಜೋಡಿಸಿ. -- Csyogi (ಚರ್ಚೆ) ೨೨:೪೭, ೧೯ ಜನವರಿ ೨೦೧೬ (UTC)
ನಾನು ಅನುವಾದ ಮಾಡುತ್ತಿದ್ದೇನೆ. --Vikas Hegde (ಚರ್ಚೆ) ೦೮:೨೦, ೨೧ ಜನವರಿ ೨೦೧೬ (UTC)

ಸಂಪಾದಕ ಮತ್ತು ಸಿಸ್-ಆಪ್ ಗಳಿಗಾಗಿ ವಿಶೇಷ ತರಬೇತಿ ಕಾರ್ಯಯೋಜನೆ[ಬದಲಾಯಿಸಿ]

ನಮಸ್ಕಾರ,
ಸಿಐಸ್-ಎ೨ಕೆ ಆಯೋಜಿಸುತ್ತಿರುವ ಸದಸ್ಯ-ಸಂಪಾದಕರ ಕೌಶಲ್ಯ ಉತ್ತಮಪಡಿಸು ಕುರಿತಾದ ಹೊಸ ಕಾರ್ಯಕ್ರಮದ ವಿವರಣೆ ಇಲ್ಲಿದೆ Train-a-Wikipedian. ಈ ಕಾರ್ಯಕ್ರಮ ಹೊಸ ಸದಸ್ಯರಿಗಾಗಿ ಮತ್ತು ಸಂಭಾವ್ಯ ಸಿಸ್-ಆಪ್ ಗಳಿಗಾಗಿ ರೂಪಿಸಲಾಗಿದೆ. ಈ ಕಾರ್ಯಕ್ರಮವು ಆನ್ಲೈನ್ ಅವತರಣಿಕೆಯಲ್ಲಿ ನಡೆಯಲಿದೆ. ಕಲಿಯುವ ಉತ್ಸಾಹ ಮತ್ತು ಉಮೇದು ಇರುವ ಸಂಪಾದಕರಿಗೆ ಅನೇಕ ಸಲ ಸರಿಯಾದ ಮಾಹಿತಿ ದೊರಕುವುದಿಲ್ಲ.

ಈ ಕಾರ್ಯಕ್ರಮ:

  • ಸಂಪಾದಕರನ್ನು-ಉತ್ತಮ ಸಂಪಾದಕರನ್ನಾಗಿ ರೂಪಿಸುವುದು
  • ಸಂಭಾವ್ಯ ಸಿಸ್-ಆಪ್ ಗುರುತಿಸಿ ತರಬೇತಿ ನೀಡುವುದು (ವಿಕಿಪೀಡಿಯ ನೀತಿ-ನಿಯಮಗಳ ಕುರಿತಾದ ಚರ್ಚೆ ಮತ್ತು ಸಿಸ್-ಆಪ್ ಕಾರ್ಯ ನಿರ್ವಹಣೆಯ ಕುರಿತು ಮಾಹಿತಿ. ಸಿಸ್-ಆಪ್ ಗಳನ್ನು ಸಮುದಾಯದ ಪ್ರತಿನಿಧಿಗಳು ಆಯ್ಕೆ ಮಾಡುತ್ತಾರೆ. ಸಿಐಸ್-ಎ೨ಕೆ ಸಂಭಾವ್ಯ ಸಿಸ್-ಆಪ್ ಗುರುತಿಸಿ ತರಬೇತಿ ನೀಡುವ ಕೆಲಸ ಮಾತ್ರ ಮಾಡಲಿದೆ).
  • ಕಾರ್ಯನಿರತ ಸಿಸ್-ಆಪ ಗಳಿಗೆ ಕೌಶಲ್ಯ ವರ್ಧನ ತರಬೇತಿ ನೀಡುವುದು.

ಈ ತರಬೇತಿಯಲ್ಲಿ ಭಾಗವಹಿಸುವ ಇಚ್ಚೆಯಿದ್ದಲ್ಲಿ ತಮ್ಮ ಸದಸ್ಯ ನಾಮ/ಹೆಸರನ್ನು ಇಲ್ಲಿ ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ:

  1. ಭಾಗವಹಿಸುಲು ಇಚ್ಚಿಸುತ್ತೇನೆ - Csyogi (ಚರ್ಚೆ) ೦೭:೪೭, ೨೮ ಡಿಸೆಂಬರ್ ೨೦೧೫ (UTC)
  2. ವಾರಾಂತ್ಯದಲ್ಲಿದ್ದರೆ ಭಾಗವಹಿಸಲು ಇಚ್ಛಿಸುತ್ತೇನೆ - ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೨೦:೨೦, ೩೧ ಡಿಸೆಂಬರ್ ೨೦೧೫ (UTC)
  3. ವಾರಾಂತ್ಯದಲ್ಲಿದ್ದರೆ ಭಾಗವಹಿಸಲು ಇಚ್ಛಿಸುತ್ತೇನೆ - ವಿಶ್ವನಾಥ/Vishwanatha (ಚರ್ಚೆ) ೦೪:೪೪, ೩ ಜನವರಿ ೨೦೧೬ (UTC)

ಕಾರ್ಯನೀತಿ ಚರ್ಚೆ: ಆಂಗ್ಲ ಶೀರ್ಷಿಕೆಯ ಲೇಖನಗಳನ್ನು ಕನ್ನಡ ಶೀರ್ಷಿಕೆಯ ಲೇಖನಗಳಿಗೆ ಪುನರ್ನಿರ್ದೇಶಿಸಿರುವ ಬಗ್ಗೆ[ಬದಲಾಯಿಸಿ]

ಇದರ ಬಗ್ಗೆ ಈ ಹಿಂದೆ ಚರ್ಚೆಯಾಗಿರುವುದು ಎಲ್ಲಿಯೂ ಕಾಣಲಿಲ್ಲ. ವಿಕಿಪೀಡಿಯ:ಕಾರ್ಯನೀತಿ ಪುಟದಲ್ಲಿ ಶೀರ್ಷಿಕೆಯು ಆಂಗ್ಲ ಭಾಷೆಯಲ್ಲಿ ಇರಬಾರದೆಂದು ಇದೆ. ಆದರೆ ಈಗಾಗಲೇ ಇರುವ ಹಳೆ ಆಂಗ್ಲ ಶೀರ್ಷಿಕೆಯ ಆನೇಕ ಲೇಖನಗಳಿಗೆ(ಉದಾ: Auto_rickshaw, ಜರ್ಮನಿ, etc.,.) ಪುನರ್ನಿರ್ದೇಶನ(Redirect)ಗಳನ್ನು ಸೇರಿಸಲಾಗಿದೆ. ಹೀಗೆ ಕನ್ನಡ ಶೀರ್ಷಿಕೆಯ ಲೇಖನಗಳಿಗೆ ಪುನರ್ನಿರ್ದೇಶಿಸಿವುದರ ಬಗ್ಗೆ ವಿಕಿಪೀಡಿಯ:ಕಾರ್ಯನೀತಿ ಪುಟದಲ್ಲಿ ಏನು ಕಾಣಲಿಲ್ಲ, ಆದ್ದರಿಂದ ಈ ಪುನರ್ನಿರ್ದೇಶನಗಳನ್ನು ಸೇರಿಸಲಾಗಿರುವ ಆಂಗ್ಲ ಶೀರ್ಷಿಕೆಯ ಲೇಖನಗಳನ್ನು ಅಳಿಸುವಿಕೆಗೆ ಗುರುತುಮಾಡಬೇಕೊ ಅಥವಾ ಹಾಗೆಯೇ ಬಿಡಬೇಕೊ ಎಂಬುದರ ಬಗ್ಗೆ ಸಮುದಾಯದ ಸದಸ್ಯರಿಂದ ಅನಿಸಿಕೆಗಳನ್ನು ವಿನಂತಿಸುತ್ತಿದ್ದೇನೆ. ಧನ್ಯವಾದಗಳು -- Csyogi (ಚರ್ಚೆ) ೧೫:೨೬, ೨೮ ಡಿಸೆಂಬರ್ ೨೦೧೫ (UTC)

ಶೀರ್ಷಿಕೆ ಕನ್ನಡದಲ್ಲೇ ಇರತಕ್ಕದ್ದು ಎಂಬುದನ್ನು ನಾನು ಬೆಂಬಲಿಸುತ್ತೇನೆ. ಇಂಗ್ಲಿಷ್ ಭಾಷೆಯಲ್ಲಿ ಶೀರ್ಷಿಕೆ ಇರುವ ಲೇಖನ ಕಂಡುಬಂದಾಗಲೆಲ್ಲ ಅವುಗಳನ್ನು ಅಳಿಸಿದ್ದೇನೆ.--Pavanaja (ಚರ್ಚೆ) ೧೬:೧೬, ೨೮ ಡಿಸೆಂಬರ್ ೨೦೧೫ (UTC)
ಇಂಗ್ಲಿಷ್ ಶೀರ್ಷಿಕೆಯ ಲೇಖನದಿಂದ ಕನ್ನಡ ಲೇಖನಕ್ಕೆ ಪುನರ್ನಿರ್ದೇಶನ ಅಗತ್ಯವಿಲ್ಲ ಎಂಬುದು ನನ್ನ ನಿಲುವು--Pavanaja (ಚರ್ಚೆ) ೧೬:೧೭, ೨೮ ಡಿಸೆಂಬರ್ ೨೦೧೫ (UTC)
ಇಂಗ್ಲೀಷ್ ಶೀರ್ಷಿಕೆ ಇದ್ದು, ಲೇಖನ ಕನ್ನಡದಲ್ಲಿದ್ದರೆ, ಲೇಖನದ ಹೆಸರನ್ನು ಕನ್ನಡಕ್ಕೆ ಬದಲಿಸಿ. ನಂತರ ಇಂಗ್ಲೀಷ್ ಹೆಸರಿನ ಲೇಖನವನ್ನು ಅಳಿಸುವಿಕೆಗೆ ಹಾಕುವುದು ಸರಿಯಾದ ಕ್ರಮ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೭:೩೦, ೨೮ ಡಿಸೆಂಬರ್ ೨೦೧೫ (UTC)
ಒಂದು ಮನವಿ: ತಾಂತ್ರಿಕ ಕಾರಣಗಳಿಂದ ಸಹಾಯ , ವಿಕಿಪೀಡಿಯ ನೇಮ್‌ಸ್ಪೇಸ್‌ಗಳ ಅಡಿ ಕೆಲವೊಂದು ಇಂಗ್ಲೀಷ್ ಲೇಖನಗಳನ್ನು ಆಮದು ಮಾಡಿಕೊಳ್ಳಲಾಗಿದ್ದು, ಇಂತಹವು ಕಂಡುಬಂದಲ್ಲಿ ಹಾಗೆಯೇ ಬಿಡಿ. ಸಾಧ್ಯವಾದಲ್ಲಿ ಅವುಗಳ ಪಟ್ಟಿ ಮಾಡಿ ಒಂದೊಂದಾಗಿ ಚರ್ಚಿಸುವುದು ಒಳಿತು. ಅಥವಾ ಈ ಪುಟಗಳನ್ನು ಸಧ್ಯಕ್ಕೆ ಹಾಗೇ ಬಿಡುವುದು. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೭:೩೪, ೨೮ ಡಿಸೆಂಬರ್ ೨೦೧೫ (UTC)
ಪುಟದಲ್ಲಿರುವ ಮಾಹಿತಿ ಕನ್ನಡದಲ್ಲಿದ್ದರೆ ಅಂತಹ ಪುಟಗಳನ್ನು ಕನ್ನಡ ಶೀರ್ಷಿಕೆಯ ಪುಟಕ್ಕೆ ವರ್ಗಾಯಿಸಿ, ಇಂಗ್ಲೀಷ್ ಶೀರ್ಷಿಕೆಯುಳ್ಳ ಪುಟವನ್ನು ಅಳಿಸುವುದಕ್ಕೆ ಹಾಕಬಹುದು. --Vikas Hegde (ಚರ್ಚೆ) ೦೬:೫೦, ೨೯ ಡಿಸೆಂಬರ್ ೨೦೧೫ (UTC)
@Ananth subray: ಇಂಗ್ಲೀಷ್ ಶೀರ್ಷಿಕೆಯ ಲೇಖನಗಳ ಪಟ್ಟಿ ಮಾಡಿಕೊಡಲು ಸಾಧ್ಯವೇ? ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೨:೨೧, ೩೦ ಡಿಸೆಂಬರ್ ೨೦೧೫ (UTC)
ಪ್ರತಿಕ್ರಿಯೆ ನೀಡಿದ ಸಮುದಾಯದವರೆಲ್ಲರಿಗು ವಂದನೆಗಳು. ಇಲ್ಲಿ ಚರ್ಚಿಸಿದಂತೆ ಲೇಖನ(೦) ನೇಂಸ್ಪೇಸ್‌ನಲ್ಲಿರುವ ಕನ್ನಡ ಲೇಖನಗಳಿಗೆ ಪುನರ್ನಿರ್ದೇಶನವಾಗುತ್ತಿರುವ ಆಂಗ್ಲ ಶೀರ್ಷಿಕೆಯ ಲೇಖನಗಳನ್ನು ಅಳಿಸುವಿಕೆಗೆ ಹಾಕಲಾಗುವುದು. ಈ ಲೇಖನಗಳ ಪಟ್ಟೆ ತಯಾರಿಸಿದ್ದೇನೆ, ಇವುಗಳನ್ನು ಮೊತ್ತಮ್ಮೆ ವೀಕ್ಷಿಸಿ ಅಳಿಸುವಿಕೆಗೆ ಹಾಕಬಹುದು. ಧನ್ಯವಾದಗಳು. -- Csyogi (ಚರ್ಚೆ) ೨೩:೨೦, ೧೯ ಜನವರಿ ೨೦೧೬ (UTC)
@Csyogi: ಪಟ್ಟಿಯಲ್ಲಿದ್ದ ಎಲ್ಲ ಇಂಗ್ಲೀಷ್ ಪುಟಗಳನ್ನು ತೆಗೆಯಲಾಗಿದೆ. ಉಳಿದಿರುವ ಕೆಲವು ಪುಟಗಳು ಮುಖ್ಯ ನೇಮ್‌ಸ್ಪೇಸ್‌ನಲ್ಲಿರುವವಾಗಿದ್ದು, ಅವುಗಳು ಇನ್ನೆಲ್ಲಿಗೆ ಸಂಪರ್ಕಗೊಂಡಿವೆ ಎಂಬುದನ್ನು ನೋಡಿದ ನಂತರ ತೆಗೆಯಬೇಕಿದೆ ಅಥವಾ ಅವುಗಳನ್ನು ಹಾಗೆಯೇ ಉಳಿಸಿಕೊಂಡಲ್ಲಿ ತೊಂದರೆ ಇಲ್ಲ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೮:೫೩, ೨೩ ಜನವರಿ ೨೦೧೬ (UTC)

ಕನ್ನಡ ಮತ್ತು ಸಂಸ್ಕೃತಿ ವಿಭಾಗ, ಕರ್ನಾಟಕ ಸರಕಾರದ ಪುಸ್ತಕಗಳ ಪರಿವರ್ತನೆ ಯೋಜನೆಗೆ ಸಂಬಂಧಿಸಿದಂತೆ[ಬದಲಾಯಿಸಿ]

ವಿಕಿಪೀಡಿಯ:ಯೋಜನೆ/ಕನ್ನಡ ಮತ್ತು ಸಂಸ್ಕೃತಿ ವಿಭಾಗ, ಕರ್ನಾಟಕ ಸರಕಾರದ ಪುಸ್ತಕಗಳ ಪರಿವರ್ತನೆ ಯೋಜನೆ ಈ ಪುಟದಲ್ಲಿ ಸೂಚಿಸಿರುವ ಪುಸ್ತಕಗಳ ಪಟ್ಟಿಯಲ್ಲಿ ೧೦ ಪುಸ್ತಕಗಳನ್ನು ಹೊರತು ಪಡಿಸಿ, ಮಿಕ್ಕವನ್ನು ಕಾಮನ್ಸ್‌ನಿಂದ ತೆಗೆದಿರುವಂತಿದೆ. ಇದಕ್ಕೆ ಕಾರಣವೇನೆಂದು ಗಮನಿಸಿ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೦೫:೩೦, ೨೯ ಡಿಸೆಂಬರ್ ೨೦೧೫ (UTC)

ಈ ಪುಸ್ತಕಗಳನ್ನು ಕಳೆದ ವರ್ಷ ಏಪ್ರಿಲ್‌ನಲ್ಲಿ ಅಪ್ಲೋಡ್ ಮಾಡಿದ ನಂತರ ಜೂನ್‌ವರೆಗೂ OTRS ಒಪ್ಪಿಗೆ ಸಿಗದ ಕಾರಣ ಕಾಮನ್ಸ್‌ನಿಂದ ಆಳಿಸಲ್ಪಡಲಾಗಿವೆ. (ಉದಾ: ಅರಮನೆ ಪುಸ್ತಕ) -- Csyogi (ಚರ್ಚೆ) ೧೩:೦೪, ೨೧ ಜನವರಿ ೨೦೧೬ (UTC)

ಕಾರ್ಯನೀತಿ ಚರ್ಚೆ: ಸ್ವಯಂಚಾಲಿತ ತಂತ್ರಾಂಶಗಳನ್ನು ಬಳಸುವ ಬಗ್ಗೆ[ಬದಲಾಯಿಸಿ]

AWB ಇತ್ಯಾದಿ ಸ್ವಯಂಚಾಲಿತ ತಂತ್ರಾಂಶಗಳನ್ನು ಬಳಸುವುದರ ಬಗ್ಗೆ ಕನ್ನಡ ವಿಕಿ ಸಮುದಾಯ ಕಾರ್ಯನೀತಿ ರೂಪಿಸಬೇಕಿದೆ. ಇಂತಹ ತಂತ್ರಾಂಶಗಳನ್ನು ಬಾಟ್ ಅಕೌಂಟ್ ಬಳಸಬೇಕು. ಹಾಗೂ ಈ ಟೂಲ್‌ಗಳನ್ನು ಬಳಸುವ ಮೊದಲು ಸಮುದಾಯಕ್ಕೆ ತಾವು ಮಾಡಿತ್ತಿರುವ ಕೆಲಸವನ್ನು ವಿವರಿಸಿ, ಒಪ್ಪಿಗೆ ಪಡೆಯತಕ್ಕದ್ದು. ಸಮುದಾಯದ ಇತರರು ತಮ್ಮ ಅನಿಸಿಕೆಯನ್ನು ಈ ಕಾರ್ಯನೀತಿಯ ಬಗ್ಗೆ ಇಲ್ಲಿ ಚರ್ಚಿಸಬಹುದು. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೧:೩೯, ೨೯ ಡಿಸೆಂಬರ್ ೨೦೧೫ (UTC)

Wikipedia:AutoWikiBrowser#Rules_of_use ಹೆಚ್ಚಿನ ಮಾಹಿತಿಗೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೧:೫೧, ೨೯ ಡಿಸೆಂಬರ್ ೨೦೧೫ (UTC)
ಸಮಾನ್ಯವಾಗಿ ಆಂಗ್ಲ ವಿಕಿಯಲ್ಲಿ ಲೇಖನ ನೇಂಸ್ಪೇಸ್‌ನಲ್ಲಿ ೨೫೦ ಅರೆ-ಸ್ವಯಂಚಾಲಿತವಲ್ಲದ ಸಂಪಾದನೆಗಳು ಮತ್ತು ೫೦೦ ಒಟ್ಟು ಸಂಪಾದನೆಗಳಿರುವ ಸದಸ್ಯರಿಗೆ ಮಾತ್ರ ಈ ತಂತ್ರಾಂಶಗಳನ್ನು ಬಳಸುವ ಅನುಮತಿ ನೀಡಬಹುದೆಂದಿದೆ. ಇದನ್ನು ನಮ್ಮ ವಿಕಿಯ ಕಾರ್ಯನೀತಿಲ್ಲೂ ಸೇರಿಸಬಹುದು. ಇದಕ್ಕೂ ಮುನ್ನ ಇಲ್ಲಿರುವ ಕೋರಿಕೆ ಪುಟಗಳ ಅಗತ್ಯವಿದೆ, ಈ ಪುಟಕ್ಕೆ ವಿಕಿಪೀಡಿಯ:ಅನುಮತಿಗೆ_ಕೋರಿಕೆಗಳು ಕನ್ನಡ ಶೀರ್ಷಿಕೆ ಸರಿಹೊಂದಬಹುದೆ? ಧನ್ಯವಾದಗಳು -- Csyogi (ಚರ್ಚೆ) ೧೪:೧೬, ೨೧ ಜನವರಿ ೨೦೧೬ (UTC)

ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳ ಕೊಡುಗೆಗಳ ಬಗ್ಗೆ[ಬದಲಾಯಿಸಿ]

ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳ ಲೇಖನಗಳನ್ನು ನೇರವಾಗಿ ಮುಖ್ಯ ನೇಮ್‌ಸ್ಪೇಸ್‌ಗೆ ಸೇರಿಸಲಾಗುತ್ತಿದೆ. ಹೀಗೆ ಸಿದ್ಧಪಡಿಸುತ್ತಿರುವ ಲೇಖನಗಳಲ್ಲಿ ಉಲ್ಲೇಖಗಳಿಲ್ಲ ಮತ್ತು ಕೆಲವು ಲೇಖನಗಳು ಪ್ರಬಂಧದಂತಿವೆ. ಸಂಬಂಧಪಟ್ಟವರು ಇದರತ್ತ ಗಮನಿಸುವುದು. ಈ ವಿದ್ಯಾರ್ಥಿಗಳು ಅನುಸ್ವಾರದ ಬದಲು ಸೊನ್ನೆ ಬಳಸುತ್ತಿರುವುದು ಕೂಡ ಹೆಚ್ಚಾಗುತ್ತಿದೆ. ಇದನ್ನು ತಿದ್ದಬಹುದೇ? ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೦೯:೫೩, ೩೦ ಡಿಸೆಂಬರ್ ೨೦೧೫ (UTC)

ಸಂತ ಅಲೋಶಿಯಸ್ ಕಾಲೇಜಿನ ಮಕ್ಕಳು ಲೇಖನವನ್ನು ನೇರವಾಗಿ ನೇಮ್‍ಸ್ಪೇಸ್‍ಗೆ ಸೇರಿಸುತ್ತಿರುವುದನ್ನು ಗಮನಿಸುತ್ತಿದ್ದೇವೆ. ಮತ್ತು ಅವರಿಗೆ ತರಗತಿಗಳಲ್ಲಿ ಮಾಹಿತಿ ನೀಡುತ್ತಿದ್ದೇವೆ. ಬಹಳಷ್ಟು ವಿದ್ಯಾರ್ಥಿಗಳು ಹೊಸಬರಾಗಿರುವ ಕಾರಣ ಈ ರೀತಿಯ ತಪ್ಪುಗಳಾಗುವುದು ಸಹಜ. ಹೊಸ ತಲೆಮಾರು ತುಂಬ ಅವಸರದಲ್ಲಿ ಇಂತಹ ತಪ್ಪುಗಳನ್ನು ಮಾಡಿರುವುದು ಸಹಜ. ಅನುಸ್ವಾರದ ಬದಲು ಸೊನ್ನೆಯನ್ನು ಸೇರಿಸಬಾರದೆಂಬ ಮಾಹಿತಿ ಅವರಿಗೆ ತಿಳಿದಿರಲಿಕ್ಕಿಲ್ಲ. ಭಾಷಾವಿಜ್ಞಾನದ ಪರಿಜ್ಞಾನವನ್ನು ಕನ್ನಡ ವಿಕಿಪೀಡಿಯದಲ್ಲಿ ಪರಿಣತಿಯಿರುವ ಪ್ರತಿಯೊಬ್ಬರಿಗೂ ತಿಳಿಸಿಕೊಡುವ ಅಗತ್ಯ ಇದೆ. ಸಂಧಿ-ಸಮಾಸದೋಷ, ಕಾಗುಣಿತ ದೋಷ, ವಿಭಕ್ತಿ ಮತ್ತು ಆಖ್ಯಾತ ಪ್ರತ್ಯಯ ದೋಷ, ಪದದೋಷ, ವಾಕ್ಯದೋಷ ಮುಂತಾದ ವ್ಯಾಕರಣದೋಷ ಭಾಷಾದೋಷಗಳು ಎಲ್ಲಾ ಲೇಖನಗಳಲ್ಲಿ ಕಂಡುಬರುತ್ತಿವೆ. ಭಾಷಾವಿಜ್ಞಾನಕ್ಕೆ ಸಂಬಂಧಿಸಿದ ಒಂದು ಸಂಪಾದನೋತ್ಸವವನ್ನು ಮುಂದಕ್ಕೆ ನಡೆಸಬೇಕಾಗಬಹುದು. ಸದ್ಯಕ್ಕೆ ಹೊಸಬರಿಗೆ ನಾವೆಲ್ಲರೂ ಸರಿಯಾದ ಮಾರ್ಗದರ್ಶನ ನೀಡುವುದು ಅನಿವಾರ್ಯ. ತಪ್ಪು ಮಾಡುತ್ತಿರುವ ಹೊಸಬರಿಗೆ ಅವರ ಚರ್ಚಾ ಪುಟಕ್ಕೆ ಮಾಹಿತಿ ನೀಡಿದರೆ ಇನ್ನೂ ಉತ್ತಮವಲ್ಲವೇ ? ಈಗ ಕಾಲೇಜಿಗೆ ಕ್ರಿಸ್‍ಮಸ್ ಪ್ರಯುಕ್ತ ರಜೆಯಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಈಗ ಮಾಹಿತಿ ನೀಡುವುದು ಸ್ವಲ್ಪ ಕಷ್ಟ. ರಜೆ ಕಳೆದ ನಂತರ ಈ ವಿಚಾರಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳ ಗಮನಕ್ಕೆ ತರುತ್ತೇವೆ. ನಿಮ್ಮ ಸಲಹೆಗೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಲೇಖನಗಳನ್ನು ಸಂಪಾದಿಸುವ ಸಂಪಾದನೋತ್ಸವವನ್ನು ನಡೆಸಲು ಆಲೋಚಿಸುತ್ತಿದ್ದೇವೆ. ನುರಿತವರು ಅಥವಾ ತಾವು ದಯವಿಟ್ಟು ಈ ಸಂಪಾದನೋತ್ಸವದಲ್ಲಿ ಭಾಗವಹಿಸುವಿರಾಗಿ ಮತ್ತು ಇಂತಹ ತಪ್ಪು ಮಾಡುವವರಿಗೆ ಸರಿಯಾದ ಮಾಹಿತಿ ನೀಡಬಹುದೆಂದು ಬಯಸುತ್ತೇವೆ. ಈ ಬಗ್ಗೆ ಭಿನ್ನ ಅಭಿಪ್ರಾಯಗಳಿದ್ದರೆ ಖಂಡಿತವಾಗಿಯೂ ಸಲಹೆ ನೀಡಬಹುದು. ----Vishwanatha Badikana (ಚರ್ಚೆ) ೧೧:೩೮, ೩೦ ಡಿಸೆಂಬರ್ ೨೦೧೫ (UTC)
ಈಗಾಗಲೇ ಅವರಿಗೆ ಚರ್ಚಾ ಪುಟದಲ್ಲಿಯೂ ಮಾಹಿತಿ ನೀಡುತ್ತಿದ್ದೇನೆ. ಜೊತೆಗೆ {{Cleanup}}, {{cite-needed}}/{{cn}} ಟೆಂಪ್ಲೇಟುಗಳ ಮೂಲಕ ಮಾಹಿತಿಯನ್ನೂ ನೀಡುತ್ತಿದ್ದೇನೆ. ಕಾರ್ಯಕ್ರಮ ನೆಡೆಸುವಾಗ ಇಂತಹ ವಿಚಾರಗಳತ್ತ ಹೆಚ್ಚು ಗಮನ ಹರಿಸುವುದರಿಂದ, ಜೊತೆಗೆ ಪ್ರಾಯೋಗಿಕ ತರಬೇತಿಗಳನ್ನು ಇನ್ನಷ್ಟು ಹೆಚ್ಚಿಸುವುದರ ಮೂಲಕ ಇಂತಹ ತಪ್ಪುಗಳನ್ನು ಸುಲಭವಾಗಿ ತಿದ್ದಬಹುದು. ಪ್ರಯೋಗಪುಟವನ್ನು ಹೆಚ್ಚಾಗಿಬಳಸಲು ತಿಳಿಸಬಹುದು. ಅವರ ಲೇಖನಗಳ ಗುಣಮಟ್ಟವನ್ನು ಅಳೆದು, ಪ್ರತಿಕ್ರಿಯೆ ಇತ್ಯಾದಿಗಳನ್ನು ನೀಡಲು ಸಾಧ್ಯವಾಗುವ ಪರಿಕರಗಳನ್ನು ವಿಕಿಗೆ ಸೇರಿಸಲು ನನ್ನ ಬಿಡುವಿನ ಸಮಯದಲ್ಲಿ ಒಂದಷ್ಟು ಸಂಶೋಧನೆಯನ್ನೂ ಮಾಡುತ್ತಿರುವೆ. ಅದರ ಫಲಿತಾಂಶವನ್ನು ಸಾಧ್ಯವಾದಷ್ಟೂ ಬೇಗ ಸಮುದಾಯದೊಂದಿಗೂ ಹಂಚಿಕೊಳ್ಳುವೆ. ಆದರೆ, ದೋಷಪೂರಿತ ಲೇಖನಗಳು ಹೊಸದಾಗಿ ಕನ್ನಡ ವಿಕಿಯನ್ನು ಗೂಗಲ್ ಇತ್ಯಾದಿಗಳ ಮೂಲಕ ಹುಡುಕಿಬರುವ ಬಳಕೆದಾರರಿಗೆ ಚೊಕ್ಕವಾಗಿ ಕಾಣಲೆಂದು ನನ್ನ ಅನಿಸಿಕೆಯನ್ನು ಇಲ್ಲಿ ತಿಳಿಸಿದ್ದೇನೆ. ಜೊತೆಗೆ ಕಾಲೇಜು ವಿದ್ಯಾರ್ಥಿಗಳು ಬಳಸುತ್ತಿದ್ದ ಟೆಂಪ್ಲೇಟನ್ನು ಬಳಸುವುದನ್ನು ನಿಲ್ಲಿಸಲಾಗಿದ್ದು, ಅವು ಇನ್ನೂ ಸಂಪಾದಿಸಲ್ಪಡುತ್ತಿರುವ ಲೇಖನಗಳೆಂದೂ ತಿಳಿಯುವುದಿಲ್ಲ. ಯಾಕೆ ಈ ಒಂದು ಅಭ್ಯಾಸವನ್ನು ಕಡೆಗಣಿಸಲಾಯ್ತು ಎಂದು ತಿಳಿದು ಬರಲಿಲ್ಲ. ಕಡೇ ಪಕ್ಷ ವಿದ್ಯಾರ್ಥಿಗಳ ಲೇಖನಗಳನ್ನು ಒಂದು ವರ್ಗಕ್ಕಾದರೂ ಸೇರಿಸಬಹುದಲ್ಲವೇ? ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೨:೧೬, ೩೦ ಡಿಸೆಂಬರ್ ೨೦೧೫ (UTC)
ಸಂಪಾದನೋತ್ಸವದಲ್ಲಿ ಭಾಗವಹಿಸಲು ಆಹ್ವಾನಿಸಿದ್ದಕ್ಕೆ ಧನ್ಯವಾದಗಳು. ವೈಯುಕ್ತಿಕ ಹಾಗೂ ಕೆಲಸಕಾರ್ಯಗಳ ಕಾರಣಗಳಿಂದ, ನಾನು ಎಲ್ಲಿಯೂ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಪ್ರತಿದಿನ ವಿಕಿ ಸಂಪಾದಿಸುವ ಎಲ್ಲರೂ ದಿನಕಳೆದಂತೆ ನುರಿತ ವಿಕಿಪೀಡಿಯನ್ನರಾಗುತ್ತಾರೆ. ಅವಶ್ಯವಿರುವ ಮಾಹಿತಿಯನ್ನು ಅರಳಿಕಟ್ಟೆಯ ಮೂಲಕವೂ, ಸಾಧ್ಯವಾದೆಡೆ ಚರ್ಚಾಪುಟಗಳಲ್ಲಿಯೂ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಾ, ನಿಮಗೆ ಸಂಪಾದನೆಯಲ್ಲಿ ಸಹಾಯ ಮಾಡಬಲ್ಲೆ. ಅರ್ಥ ಮಾಡಿಕೊಳ್ಳುತ್ತೀರೆಂದು ಕೊಳ್ಳುತ್ತೇನೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೨:೧೮, ೩೦ ಡಿಸೆಂಬರ್ ೨೦೧೫ (UTC)
ಹೌದು. ನಿಮ್ಮ ಮಾತಿನಂತೆ ಪ್ರತಿದಿನ ವಿಕಿ ಸಂಪಾದಿಸುವ ಎಲ್ಲರೂ ದಿನಕಳೆದಂತೆ ನುರಿತ ವಿಕಿಪೀಡಿಯನ್ನರಾಗುತ್ತಾರೆ. ಆದರೆ ವಿಕಿಪೀಡಿಯಕ್ಕೆ ಪ್ರವೇಶ ಮಾಡಿದ ಕೂಡಲೇ ಅವರು ಒಂದು ಪರಿಪೂರ್ಣ ವಿಕಿ ಲೇಖನ ತಯಾರಿಸಬೇಕೆಂಬ ಅತಿ ಭರವಸೆ ಬೇಡವೆನಿಸುತ್ತದೆ. ವಿಕಿಪೀಡಿಯದಲ್ಲಿ ಬರೆಯುವ ಎಲ್ಲರೂ ಒಂದಲ್ಲ ಒಂದು ತಪ್ಪನ್ನು ಪೂರ್ವದಲ್ಲಿ ಮಾಡಿರುತ್ತಾರೆ. ಬೇರೆ ಬೇರೆ ಹುದ್ದೆಯಲ್ಲಿದ್ದುಕೊಂಡು ಕನ್ನಡದ ಪ್ರೀತಿಯಿಂದ ಸ್ವಯಂಪ್ರೇರಿತರಾಗಿ ವಿಕಿಯಲ್ಲಿ ಕೆಲಸ ಮಾಡುವವರೇ ಬಹಳ. ಪ್ರೋತ್ಸಾಹವಿಲ್ಲದ ಕಡೆ ವಿಕಿಪೀಡಿಯದ ಸಹವಾಸ ಬೇಡವೆಂದು ದೂರ ಹೋಗುವವರು ತಯಾರಾಗುತ್ತಾರೆ. ಆಗಿದ್ದಾರೆ. ಹೊಸಬರಿಗೆ ಒಂದಷ್ಟು ಅವಕಾಶ ಕೊಡೋಣ. ವಿಕಿ ಸಮುದಾಯ ಎಂಬುದು ವೈಯಕ್ತಿಕ ಆಗಬಾರದು. ಈಗಾಗಲೇ ಸಂಪಾದನೋತ್ಸವ ನೀಡಿರುವಲ್ಲೆಲ್ಲಾ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಹಾಗಾಗಿ ಮಾಹಿತಿ ನೀಡುತ್ತಿರುವವರು ತಪ್ಪು ಮಾಡಿಲ್ಲ. ಮಾಹಿತಿ ನೀಡುವ ಕಡೆಗಣನೆಯಾಗಿರಲಿಕ್ಕಿಲ್ಲ. ವಿದ್ಯಾರ್ಥಿಗಳ ಲೇಖನಗಳನ್ನು ಒಂದು ವರ್ಗಕ್ಕೆ ಸೇರಿಸುವ ಕೆಲಸವನ್ನು ಮಾಡಬೇಕಾದವರು ನಿಮ್ಮಂತಹವರು. ಹಾಗಂತ ಅವರನ್ನು ಸಂಪೂರ್ಣ ಕಡೇ ವರ್ಗಕ್ಕೆ ಕೊಂಡೊಯ್ಯುವುದು ಸರಿಯಲ್ಲ ಎಂದು ನನ್ನ ಭಾವನೆ. ವಿದ್ಯಾರ್ಥಿಗಳು ಸರಿಮಾಡುವುದಿಲ್ಲವೆಂದು ಹೇಳಿಕೊಂಡು ಅವರ ಆಸಕ್ತಿಯನ್ನು ಚಿವುಟಿದರೆ ಮುಂದೆ ವಿಕಿಪೀಡಿಯ ಲೇಖಕರನ್ನು ಸೃಷ್ಟಿಸುವ ಪ್ರಯತ್ನವನ್ನು ಹೇಗೆ ಮಾಡುವುದು ? ನೀವೇ ಹೇಳಿ. ಟೆಂಪೇಟುಗಳ ಬಗೆಗೆ ನಿಮಗಿರುವಷ್ಟು ಮಾಹಿತಿ ಬಹಳಷ್ಟು ಜನರಿಗೆ ಇರಲಿಕ್ಕಿಲ್ಲ. ಹಾಗಾಗಿ ಮಂಗಳೂರಿಗೆ ಒಂದು ಸಂಪಾದನೋತ್ಸವಕ್ಕೆ ಕರೆದಾಗ ಬರುವಿರೆಂದು ಇನ್ನೊಮ್ಮೆ ನನ್ನ ಕೋರಿಕೆ.--Vishwanatha Badikana (ಚರ್ಚೆ) ೧೮:೨೮, ೩೦ ಡಿಸೆಂಬರ್ ೨೦೧೫ (UTC)
ವಿಕಿಚರ್ಚೆಯನ್ನು ನೀವು ವೈಯುಕ್ತಿಕವಾಗಿ ತೆಗೆದುಕೊಳ್ಳುತ್ತಿದ್ದೀರೆಂದು ಭಾವಿಸುವೆ. ಇಲ್ಲಿ ಯಾರನ್ನೂ ತಪ್ಪು ಮಾಡಲೇ ಬೇಡಿ, ಎಲ್ಲವನ್ನೂ ಸರಿಯಾಗಿಯೇ ಮಾಡಿ ಎಂದು ಯಾರೂ ಹೇಳುತ್ತಿಲ್ಲವಲ್ಲ. ತರಬೇತಿ ನೀಡುತ್ತಿರುವವರಿಗೆ ಸಲಹೆ ಸೂಚನೆಗಳನ್ನು ಅರಳಿಕಟ್ಟೆಯ ಮೂಲಕ ಹಂಚಿಕೊಳ್ಳುತ್ತಿರುವುದಷ್ಟೇ. ಹೊಸಬರಿಗೆ ಚರ್ಚಾಪುಟ ಇತ್ಯಾದಿಗಳಲ್ಲಿ ಹಾಕುತ್ತಿರುವ ಮಾಹಿತಿಗಳನ್ನು ನೀವು ಓದುತ್ತಿಲ್ಲವಷ್ಟೇ. ಯಾರನ್ನೂ ವರ್ಗೀಕರಿಸುವ ಕೆಲಸವೂ ಆಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಪ್ರಯೋಗ ಪುಟವನ್ನು ಬಳಸಲು ಸಲಹೆ ನೀಡಿದ್ದಷ್ಟೇ. ನಾನೂ ವಿಕಿ ಸಂಪಾದನೆ ಕಲಿತಿರುವುದು ತಪ್ಪುಗಳನ್ನು ಮಾಡಿ ಸ್ವತ: ಬೇರೆಯವರ ಸರಿಯಾದ ಸಂಪಾದನೆಯನ್ನು ಕಂಡು ತಿದ್ದುಕೊಂಡ ನಂತರವಷ್ಟೇ. ನೀಡಿದ ಮಾಹಿತಿಯನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳದೆ, ಚರ್ಚೆಯನ್ನು ಬೇರೆ ವಿಷಯಗಳೊಂದಿಗೆ ದಯವಿಟ್ಟು ಹೆಣೆಯಬೇಡಿ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೮:೪೩, ೩೦ ಡಿಸೆಂಬರ್ ೨೦೧೫ (UTC)

ವಿಕಿಪೀಡಿಯ:ಯೋಜನೆ/ಕನ್ನಡ ಮತ್ತು ಸಂಸ್ಕೃತಿ ವಿಭಾಗ, ಕರ್ನಾಟಕ ಸರಕಾರದ ಪುಸ್ತಕಗಳ ಪರಿವರ್ತನೆ ಯೋಜನೆ ಪುಟದ ಬಗ್ಗ[ಬದಲಾಯಿಸಿ]

ವಿಕಿಪೀಡಿಯ:ಯೋಜನೆ/ಕನ್ನಡ ಮತ್ತು ಸಂಸ್ಕೃತಿ ವಿಭಾಗ, ಕರ್ನಾಟಕ ಸರಕಾರದ ಪುಸ್ತಕಗಳ ಪರಿವರ್ತನೆ ಯೋಜನೆ ಈ ಪುಟವನ್ನು ಅಳಿಸಲಾಗಿದೆ. ವಿಕಿಪೀಡಿಯ_ಚರ್ಚೆ:ಯೋಜನೆ/ಕನ್ನಡ_ಮತ್ತು_ಸಂಸ್ಕೃತಿ_ವಿಭಾಗ,_ಕರ್ನಾಟಕ_ಸರಕಾರದ_ಪುಸ್ತಕಗಳ_ಪರಿವರ್ತನೆ_ಯೋಜನೆ ಇಲ್ಲಿ ಅದಕ್ಕೆ ಕಾರಣವನ್ನೂ ಕೇಳಿದ್ದೆ. ಜೊತೆಗೆ ಈ ಪುಟದಲ್ಲಿದ್ದ ಅನೇಕ ಪುಸ್ತಕಗಳನ್ನು ಅಳಿಸಲಾಗಿದ್ದು, ಇದಕ್ಕೆ ಕಾರಣವನ್ನು ಅರಳಿಕಟ್ಟೆಯಲ್ಲಿ ಹುಡುಕಲು ಕೇಳಿಕೊಳ್ಳಲಾಗಿತ್ತು. ಅಳಿಸುವಿಕೆಗೆ ಹಾಕಲಾದ ಲೇಖನಗಳನ್ನು ಚರ್ಚೆ ಪ್ರಾರಂಭವಾದಾಗಲೂ ಉತ್ತರಿಸದೇ ಅಳಿಸುವುದು ಏತಕ್ಕೆ? ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೭:೫೪, ೩೦ ಡಿಸೆಂಬರ್ ೨೦೧೫ (UTC)

ಪುಟವನ್ನು ಹಿಂದಿನಂತೆ ಮರುಸ್ಥಾಪನೆ ಮಾಡಿದ್ದೇನೆ. ಈ ಯೋಜನೆಯ ಸ್ಥಿತಿಗತಿಯ ಚರ್ಚೆ ಮುಂದುವರೆಸುವುದರ ಬಗ್ಗೆ, ಅಳಿಸುವಿಕೆಗೆ ಹಾಕಿದ/ಹಾಕಲಾಗುವ ಲೇಖನಗಳ ಬಗ್ಗೆ ಕಾರ್ಯಸೂಚಿ ತಯಾರಾಗಬೇಕಿದೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೮:೦೩, ೩೦ ಡಿಸೆಂಬರ್ ೨೦೧೫ (UTC)
ಇದು ವಿಕಿಸೋರ್ಸ್ ಬಗೆಗಿನ ಯೋಜನೆಯಾಗಿರುವುದರಿಂದ ಇದನ್ನು ವಿಕಿಸೋರ್ಸ್‍ನಲ್ಲೇ ನಡೆಸುವುದು ಒಳ್ಳೆಯದು. ಅಂತೆಯೇ ಪುಟವನ್ನು ವಿಕಿಸೋರ್ಸ್‍ನಲ್ಲಿ ತಯಾರಿಸಲಾಗಿದೆ. ಆದುದರಿಂದ ವಿಕಿಪೀಡಿಯದಿಂದ ಅನ್ನು ತೆಗೆಯುವುದು ಸೂಕ್ತ ಎಂದು ಅಂತೆಯೇ ಮಾಡಲಾಗಿದೆ. ಅಳಿಸುವಿಕೆಗೆ ಹಾಕುವಾಗ ಅದಕ್ಕೆ ಕಾರಣ ನೀಡಲು ಮಾತ್ರ ಮರೆತು ಹೋಗಿತ್ತು. ಅಷ್ಟೆ. ಯೋಜನಾ ಪುಟ ಈಗ ವಿಕಿಸೋರ್ಸ್‍ನಲ್ಲಿ ಇದೆ.--Pavanaja (ಚರ್ಚೆ) ೧೮:೦೮, ೩೦ ಡಿಸೆಂಬರ್ ೨೦೧೫ (UTC)
ಪುಟವನ್ನು ವಿಕಿಸೋರ್ಸ್‌ಗೆ ರೀಡೈರೆಕ್ಟ್ ಮಾಡಿದ್ದೇನೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೮:೧೯, ೩೦ ಡಿಸೆಂಬರ್ ೨೦೧೫ (UTC)

ವರ್ಗ:Pages with reference errors ನಲ್ಲಿನ ಪುಟಗಳನ್ನು ಸರಿಪಡಿಸುವ ಬಗ್ಗೆ[ಬದಲಾಯಿಸಿ]

ಈ ವರ್ಗದ ಕೆಳಗೆ ೪೩೪ ಲೇಖನಗಳಿವೆ. ಇದರಲ್ಲಿನ ಲೇಖನಗಳಲ್ಲಿ ಉಲ್ಲೇಖಗಳನ್ನು ಸರಿಯಾದ ಪಠ್ಯವಿಲ್ಲದೆ, ಅಥವಾ ಒಂದೇ ಉಲ್ಲೇಖವನ್ನು ಒಂದಕ್ಕಿಂತ ಹೆಚ್ಚು ಬಾರಿ ಉಪಯೋಗಿಸಿದಾಗ ಕಂಡು ಬರುವ ದೋಷಗಳಿಂದ ಕೂಡಿರುವುದನ್ನು ಕಾಣಬಹುದು. ಈ ಪುಟಗಳನ್ನು ಸರಿಪಡಿಸುವ ಇಚ್ಛೆ ಇದ್ದವರು ನನಗೊಂದು ಸಂದೇಶ ಕಳುಹಿಸಿ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೨೦:೨೦, ೩೦ ಡಿಸೆಂಬರ್ ೨೦೧೫ (UTC)

ಅವನ್ನು ಸರಿಪಡಿಸುವ ವಿಧಾನ ಏನು? ಪ್ರೋಗ್ರಾಮ್ ಅಥವಾ ಸ್ಕ್ರಿಪ್ಟ್ ಬಳಸಿ ಸರಿಪಡಿಸಲು ಸಾಧ್ಯವೇ?--Pavanaja (ಚರ್ಚೆ) ೦೬:೩೬, ೩೧ ಡಿಸೆಂಬರ್ ೨೦೧೫ (UTC)
ಪ್ರೋಗ್ರಾಮ್ ಅಥವಾ ಸ್ಕ್ರಿಪ್ಟ್ ಬಳಸಿ ಸರಿಪಡಿಸಲು ಬರುವುದಿದ್ದರೆ, ಇಲ್ಲಿ ಈ ಮನವಿಯೇ ಇರುತ್ತಿರಲಿಲ್ಲ :). ದೋಷದ ಸಂದೇಶ ಓದಿದಾಗ ಸಿಗುವ ರೆಫರೆನ್ಸ್‌ನ ಹೆಸರನ್ನು ಹುಡುಕಿ, ಅವುಗಳು ಸರಿಯಾಗಿವೆಯೇ ಪರೀಕ್ಷಿಸಬೇಕು, ನಂತರ ಅವಶ್ಯವಿಲ್ಲದ, ಕೊಂಡಿ ಇಲ್ಲದ, ಅಥವಾ ಹೆಸರಿಸಿದ ರೆಫರೆನ್ಸ್ ಅಥವಾ ರೆಫರೆನ್ಸ್ ಗುಂಪು ಇಲ್ಲದಿದ್ದಲ್ಲಿ ಅವನ್ನು ಮ್ಯಾನುಅಲ್‌ಆಗಿ ತೆಗೆಯ ಬೇಕಾಗುತ್ತದೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೨೦:೪೩, ೩೧ ಡಿಸೆಂಬರ್ ೨೦೧೫ (UTC)

ಕರ್ನಾಟಕ ರಾಜ್ಯದ ಗ್ರಾಮಗಳ ಬಗೆಗಿನ ಲೇಖನಗಳ ಯೋಜನೆ[ಬದಲಾಯಿಸಿ]

ಕರ್ನಾಟಕ ರಾಜ್ಯದಲ್ಲಿರುವ ಗ್ರಾಮಗಳ ಬಗೆಗಿನ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕನ್ನಡ ವಿಕಿಪೀಡಿಯದಲ್ಲಿ ಕರ್ನಾಟಕ ರಾಜ್ಯದ ಗ್ರಾಮಗಳ ಬಗೆಗಿನ ವಿವರಗಳ ಅಗತ್ಯವಿದೆ. ಈಗ ಕನ್ನಡ ವಿಕಿಪೀಡಿಯದಲ್ಲಿ ಕೇವಲ ೨೮ ಕರ್ನಾಟಕ ರಾಜ್ಯದ ಗ್ರಾಮಗಳ ಬಗ್ಗೆ ಮಾತ್ರ ಲೇಖನಗಳಿವೆ. ಆದರೆ ಇಂಗ್ಲಿಷ್ ವಿಕಿಪೀಡಿಯದಲ್ಲಿ ಸುಮಾರು ೩೦೦೦ ಕರ್ನಾಟಕ ರಾಜ್ಯದ ಗ್ರಾಮಗಳ ಬಗ್ಗೆ ಲೇಖನಗಳಿವೆ. ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳು ಈ ಪುಟದಲ್ಲಿವೆ. --Ashok (ಚರ್ಚೆ) ೧೦:೩೧, ೩೧ ಡಿಸೆಂಬರ್ ೨೦೧೫ (UTC)

ಕನ್ನಡ ಮತ್ತು ಇಂಗ್ಲೀಷ್ ಅಂಕೆಗಳನ್ನು ಅದಲು ಬದಲು ಮಾಡುವ ಸವಲತ್ತು ಸೇರಿಸುವ ಬಗ್ಗೆ[ಬದಲಾಯಿಸಿ]

ಕನ್ನಡ ಅಂಕೆಗಳನ್ನು ಅಥವಾ ಇಂಗ್ಲೀಷ್ ಅಂಕೆಗಳನ್ನು ಇಚ್ಛಾನುಸಾರ ಸಂಪಾದಕರು ಬಳಸುವಂತಾಗಲು ಸಂಸ್ಕೃತ ಮತ್ತು ಇತರೆ ಭಾಷಾವಿಕಿಗಳಲ್ಲಿ ಬಳಸುತ್ತಿರುವ ಸವಲತ್ತನ್ನು ಕನ್ನಡ ವಿಕಿಗೆ ಅಳವಡಿಸುವ ಅವಶ್ಯಕತೆ ಇದೆ. ಕನ್ನಡ ಅಂಕೆಗಳನ್ನು ಓದಲು ಬರದವರಿಗೆ ಇದು ಅನುಕೂಲ ಮಾಡಿಕೊಡುವುದರ ಜೊತೆಗೆ, ಅವರಿಗೆ ನಿಧಾನವಾಗಿ ಕನ್ನಡ ಅಂಕಿಗಳನ್ನು ಕಲಿತು ಬಳಸಲೂ ನೆರವಾಗುತ್ತದೆ. ಸಮುದಾಯ ಇದಕ್ಕೆ ತನ್ನ ಒಪ್ಪಿಗೆ ಸೂಚಿಸಬೇಕೆಂದು ಈ ಮೂಲಕ ಕೋರುವೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೨೦:೦೭, ೨ ಜನವರಿ ೨೦೧೬ (UTC)

  1. ಒಪ್ಪಿಗೆ ಇದೆ.--VASANTH S.N. (ಚರ್ಚೆ) ೦೯:೩೩, ೩ ಜನವರಿ ೨೦೧೬ (UTC)
  2. ನನಗೂ ಇದರ ಅವಶ್ಯಕತೆ ಬರೆದಿರುವ ೨-೩ ಲೇಖನಗಳಲ್ಲೇ ಅನೇಕ ಬಾರಿ ಕಂಡಿದೆ. --ವಿಶ್ವನಾಥ/Vishwanatha (ಚರ್ಚೆ) ೧೪:೨೭, ೩ ಜನವರಿ ೨೦೧೬ (UTC)
ಯಾವ ಸವಲತ್ತು ಎಂಬ ಬಗ್ಗೆ ಸ್ವಲ್ಪ ವಿವರ ನೀಡಿದ್ದರೆ ಒಳ್ಳೆಯದಿತ್ತು. ಇಂಗ್ಲಿಶ್ ಅಂಕೆಗಳಿಂದ ಕನ್ನಡ ಅಂಕೆಗಳಿಗೆ ಬದಲಾಯಿಸಲು ಹರೀಶ ಅವರು ಒಂದು ಸ್ಕ್ರಿಪ್ಟ್ ಬರೆದು ಬಳಸುತ್ತಿರುವ ಬಗ್ಗೆ ತಿಳಿದಿದ್ದೆ. ಈಗ ನೀವು ಹೇಳುತ್ತಿರುವುದು ಯಾವುದು?--Pavanaja (ಚರ್ಚೆ) ೧೫:೨೩, ೩ ಜನವರಿ ೨೦೧೬ (UTC)
ಇದು ಲೇಖನದ ಒಳಗೆ ಅಂಕಿಗಳನ್ನು ಬದಲಿಸುವ ಬಗ್ಗೆ ಅಲ್ಲ, ಕನ್ನಡ ವಿಕಿಪೀಡಿಯ ಓದಲು ಬರುವ ಯಾವುದೇ ಬಳಕೆದಾರ ಯಾವುದೇ ಪುಟದಲ್ಲಿ ಕನ್ನಡ ಅಂಕಿಗಳನ್ನು ಓದಲು ಸಾಧ್ಯವಿರದಿದ್ದರೆ, ಅದನ್ನು ರೋಮನ್ ‌ಅಂಕೆಗಳಲ್ಲಿ ಓದಲು ಸಾಧ್ಯವಾಗಿಸುವ ಪ್ಲಗಿನ್. ಸಂಸ್ಕೃತ ವಿಕಿಯನ್ನೊಮ್ಮೆ ನೋಡಿ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೮:೨೪, ೫ ಜನವರಿ ೨೦೧೬ (UTC)

ಸಂಪಾದನೋತ್ಸವ ಡಿ.ಎಸ್.ಇ.ಆರ್.ಟಿ.[ಬದಲಾಯಿಸಿ]

ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವ ಯೋಜನೆ ಪ್ರಗತಿಯಲ್ಲಿದೆ. ಉನ್ನತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ (ತರಗತಿ ೫ ರಿಂದ ೧೦) ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವವರಿಗೆ ಅತೀ ಅಗತ್ಯವಿರುವ ಕೆಲವು ವಿಷಯಗಳ ಬಗ್ಗೆ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆಯಾಗಿದೆ ಇದು. ಇದರ ಅಂಗವಾಗಿ ಬೆಂಗಳೂರಿನಲ್ಲಿ ಜನವರಿ ೧೧, ೧೨ ಮತ್ತು ೧೩, ೨೦೧೬ರಂದು ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವ ಸಂಪಾದನೋತ್ಸವ ಆಯೋಜಿಸಲಾಗಿದೆ.ಈ ಸಂಪಾದನೋತ್ಸದ ಬಗ್ಗೆ ವಿವರಗಳು ಇಲ್ಲಿವೆ.

ಹದಿಮೂರನೆಯ ವರ್ಷಾಚರಣೆ ಸ್ಥಳ ಮತ್ತು ದಿನಾಂಕ ನಿರ್ಧಾರ[ಬದಲಾಯಿಸಿ]

ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆಯನ್ನು ಆಚರಿಸುವ ಬಗ್ಗೆ ಸಮ್ಮಿಲನ-೧೯ರಲ್ಲಿ ಚರ್ಚೆಯಾಗಿ ಕೆಲವು ತಿರ್ಮಾನಗಳನ್ನು ತೆಗೆದುಕೊಳ್ಳಲಾಗಿತ್ತು. ಅದರಂತೆ ಅಂತಿಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬೆಂಗಳೂರು, ಮೈಸೂರು, ಮಂಗಳೂರು, ಡಿ.ಎಸ್.ಇ.ಆರ್.ಟಿ. ಬೆಂಗಳೂರು ಮತ್ತು ಶಿವಮೊಗ್ಗ ನಗರಗಳಲ್ಲಿ ವಿಷಯಾಧಾರಿತ (theme based) ಸಂಪಾದನೋತ್ಸವಗಳು ನಡೆಯುತ್ತಿವೆ. ಈಗಾಗಲೇ ಮಂಗಳೂರು ಮತ್ತು ಬೆಂಗಳೂರು ಎರಡು ಕಡೆ ಯಶಸ್ವಿಯಾಗಿ ಸಂಪಾದನೋತ್ಸವ ನಡೆದಿದೆ. ಮೈಸೂರು, ಶಿವಮೊಗ್ಗ ಮತ್ತು ಡಿ.ಎಸ್.ಇ.ಆರ್.ಟಿ. ಬೆಂಗಳೂರಿನಲ್ಲಿ ಸಂಪಾದನೋತ್ಸವಗಳ ದಿನ ನಿರ್ಧಾರವಾಗಿದೆ. ಬೆಂಗಳೂರು ಮತ್ತು ಮಂಗಳೂರು ನಗರಗಳಲ್ಲಿ ನಡೆದ ಸಂಪಾದನೋತ್ಸವದ ಬಗೆಗೆ ಇದೇ ಪುಟದಲ್ಲಿ ಚರ್ಚಿಸಲಾಗಿದೆ.

ಹದಿಮೂರನೆಯ ವರ್ಷಾಚರಣೆಯನ್ನು ಸದಸ್ಯರ ಒಪ್ಪಿಗೆಯಂತೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆಸುವುದೆಂದು ಆಲೋಚಿಸಲಾಗಿದೆ. ದಿನಾಂಕ ೦೭-೦೨-೨೦೧೬ರಂದು ಭಾನುವಾರ ನಡೆಸಬಹುದೆಂಬ ಇರಾದೆಯಿದೆ. ಈ ಬಗ್ಗೆ ಸಮುದಾಯ ಒಪ್ಪಿಗೆ ನೀಡಿದರೆ ಇದೇ ಸ್ಥಳ ಮತ್ತು ದಿನಾಂಕವನ್ನು ಅಂತಿಮಗೊಳಿಸಲಾಗುವುದು. ಸಮುದಾಯದ ಅಭಿಪ್ರಾಯ ಕೋರುತ್ತಿದ್ದೇನೆ. ನಿಮ್ಮ ಒಪ್ಪಿಗೆಯನ್ನು ಈ ಕೆಳಗೆ ಸೂಚಿಸಬಹುದು.--Vishwanatha Badikana (ಚರ್ಚೆ) ೧೮:೧೩, ೩ ಜನವರಿ ೨೦೧೬ (UTC)

ಒಪ್ಪಿಗೆ ಇದೆ[ಬದಲಾಯಿಸಿ]

ಒಪ್ಪಿಗೆ ಇದ್ದಲ್ಲಿ ಇದನ್ನು ನಕಲಿಸಿ ಕೊನೆಯ ಸಾಲಿಗೆ ಸೇರಿಸಿ: {{tick}} -~~~~

checkY -ವಿದ್ಯಾಧರ ಚಿಪ್ಳಿ (ಚರ್ಚೆ) ೧೨:೩೨, ೪ ಜನವರಿ ೨೦೧೬ (UTC)

checkY -ಅನಿತಾ ಪಿ.ಹೆಚ್. (ಚರ್ಚೆ) ೧೨:೪೫, ೪ ಜನವರಿ ೨೦೧೬ (UTC)

checkY-ಅನಂತ್ (ಚರ್ಚೆ) ೧೨:೫೭, ೪ ಜನವರಿ ೨೦೧೬ (UTC)

checkY--ಪವನಜ (ಚರ್ಚೆ) ೧೩:೨೧, ೪ ಜನವರಿ ೨೦೧೬ (UTC)

checkY--ಕೆ.ಸೌಭಾಗ್ಯವತಿ(ಚರ್ಚೆ) ೧೯:೨೦, ೪ ಜನವರಿ ೨೦೧೬‎

checkY -ನಿತಿನ್ ಹೆಗ್ಡೆ ಎಂ.ಬಿ. (ಚರ್ಚೆ) ೧೭:೫೨, ೪ ಜನವರಿ ೨೦೧೬ (UTC) checkY

ಚರ್ಚೆ[ಬದಲಾಯಿಸಿ]

  • ಶಿವಮೊಗ್ಗದ ಸಂಪಾದನೋತ್ಸವವು ೨೭ರಂದು ಮುಗಿಯಲಿದ್ದು ಉದ್ದೇಶಿತ ೭ನೇ ತಾರೀಖಿಗೆ ಅಂದರೆ ನಡುವೆ ಕೇವಲ ಒಂದೂವರೆ ವಾರಗಳಷ್ಟೆ ಸಮಯವಿದ್ದಂತಾಗುತ್ತದೆ. ತಯಾರಿಗೆ ಮತ್ತು ಭಾಗವಹಿಲಚ್ಛಿಸುವ ವಿಕಿಪಿಡಿಯನ್ನರ ಪ್ರಯಾಣ ಕಷ್ಟವಾಗಬಹುದು. ಹಾಗಾಗಿ ಇದನ್ನು ಆದರ ಮುಂದಿನ ವಾರಗಳಿಗೆ (14,21,28 ಫೆಬ್) ರಿಶೆಡ್ಯೂಲ್ ಮಾಡುವುದಕ್ಕಾದರೆ ಒಳ್ಳೆಯದು.--Vikas Hegde (ಚರ್ಚೆ) ೧೨:೩೬, ೫ ಜನವರಿ ೨೦೧೬ (UTC)
  • ದಿನ ನಿರ್ಧಾರದ ಬಗ್ಗೆ ಇನ್ನಷ್ಟು ಅಭಿಪ್ರಾಯಗಳಿದ್ದರೆ ಚೆನ್ನಾಗಿತ್ತು. --Vishwanatha Badikana (ಚರ್ಚೆ) ೧೮:೦೭, ೬ ಜನವರಿ ೨೦೧೬ (UTC)
  • ಪೆ. ೧೪ ಆದರೆ ನನಗೆ ತುಂಬಾ ಒಳ್ಳೆಯದು. ಏಕೆಂದರೆ, ಪೆ. ೧೨ ರಂದು ಮಂಗಳೂರಿಗೆ ವೈಯಕ್ತಿಕ ಕಾರ್ಯಕ್ರಮಗೋಸ್ಕರ ಬರುವುದಿದೆ. ಇದರಿಂದ ಎರೆಡೆರೆಡು ಸಲ ಓಡಾಟ ತಪ್ಪುವುದು. ವಿದ್ಯಾಧರ ಚಿಪ್ಳಿ (ಚರ್ಚೆ).
  • ಫೆ.೧೪ ಆದರೂ ನನ್ನ ಅಡ್ಡಿಯಿಲ್ಲ.--Pavanaja (ಚರ್ಚೆ) ೦೭:೨೯, ೯ ಜನವರಿ ೨೦೧೬ (UTC)
  • ಫೆ.೧೪ ಆದರೂ ನನ್ನ ಅಡ್ಡಿಯಿಲ್ಲ.--ಅನಂತ್ (ಚರ್ಚೆ) ೦೭:೪೨, ೯ ಜನವರಿ ೨೦೧೬ (UTC)
  • ಫೆ.೧೪ ಆಗಬಹುದು. ಹದಿಮೂರನೆಯ ವಾರ್ಷಿಕಾಚರಣೆಯನ್ನು ಒಂದು ದಿನ ಪೂರ್ತಿ ಆಚರಿಸಬೇಕೆಂಬುದು ನಮ್ಮ ಅಭಿಪ್ರಾಯ. ಬೆಳಿಗ್ಗಿಂದ ಮಧ್ಯಾಹ್ನ ತನಕ ಸಭಾ ಕಾರ್ಯಕ್ರಮ. ಮಧ್ಯಾಹ್ನ ನಂತರ ೨ ಗಂಟೆಯಿಂದ ೫ ಗಂಟೆ ತನಕ ಸಂಪಾದನೋತ್ಸವ ನಡೆಸುವುದೆಂದು ಅಭಿಪ್ರಾಯ. ನಿಮ್ಮ ಅಭಿಪ್ರಾಯವನ್ನು ತಿಳಿಸಿರಿ.--Vishwanatha Badikana (ಚರ್ಚೆ) ೧೮:೦೭, ೯ ಜನವರಿ ೨೦೧೬ (UTC)
ಪೆ. ೧೪ಒಳ್ಳೆಯ ಅಭಿಪ್ರಾಯ. ನನ್ನ ಸಹಮತವಿದೆ--Pavanaja (ಚರ್ಚೆ) ೧೪:೨೮, ೧೦ ಜನವರಿ ೨೦೧೬ (UTC)
  • ಆದರೆ ಒಳ್ಳೆಯದು.ಅನಿತಾ ಪಿ.ಹೆಚ್. (ಚರ್ಚೆ) ೧೪:೦೫, ೧೦ ಜನವರಿ ೨೦೧೬ (UTC).
  • ಪೆ. ೧೪ ನನಗೆ ಒಪ್ಪಿಗೆ ಇದೆ. --Alphonsa maya (ಚರ್ಚೆ) ೦೯:೨೪, ೧೩ ಜನವರಿ ೨೦೧೬ (UTC)
  • ೧೪ ನೇ ಫೆಬ್ರವರಿ ತಾರೀಖಿಗೆ ನನಗೆ ಒಪ್ಪಿಗೆ ಇದೆ. --NAYANAPAUL12 (ಚರ್ಚೆ) ೦೯:೩೫, ೧೩ ಜನವರಿ ೨೦೧೬ (UTC)
  • ಫೆಬ್ರವರಿ ೧೪ ತಾರೀಖಿಗೆ ನನಗೆ ಒಪ್ಪಿಗೆ ಇದೆ. --Spandana jaanu (ಚರ್ಚೆ) ೦೯:೩೭, ೧೩ ಜನವರಿ ೨೦೧೬ (UTC)
  • ಫೆ.೧೪ ಆಗಬಹುದು. --Prathiba s (ಚರ್ಚೆ) ೦೯:೩೩, ೧೩ ಜನವರಿ ೨೦೧೬ (UTC)
  • ಫೆಬ್ರವರಿ ೧೪ ಆಗಬಹುದು ನನ್ನ ಒಪ್ಪಿಗೆ ಇದೆ.--Smitha shetty (ಚರ್ಚೆ) ೧೦:೨೮, ೧೩ ಜನವರಿ ೨೦೧೬ (UTC)

ಜನವರಿ ಚುಟುಕು ಪುಟಗಳು[ಬದಲಾಯಿಸಿ]

ಜನವರಿ ತಿಂಗಳಲ್ಲಿ ಸೃಷ್ಟಿಸಲಾಗಿರುವ ಚುಟುಕು ಪುಟಗಳ ಸೂಚಿ ಇಲ್ಲಿದೆ. ಈ ಪುಟಗಳನ್ನು ಸಂಪಾದಿಸುವ ಕೆಲಸಕ್ಕೆ ಕೈಜೋಡಿಸಬೇಕಾಗಿ ವಿನಂತಿ--ಅನಂತ್ (ಚರ್ಚೆ) ೧೨:೫೬, ೪ ಜನವರಿ ೨೦೧೬ (UTC)

Wikimania 2016 Scholarships - Deadline soon![ಬದಲಾಯಿಸಿ]

ಒಂದು ಜ್ಞಾಪನೆ - "ಯೇಸಿನೋ ಲಾರಿಯೋ ನಲ್ಲಿ ವಿಕಿಮೇನಿಯ ೨೦೧೬ ರ, ಇಟಲಿ ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಸ್ವೀಕರಿಸುವ ಅವಧಿ ಶೀಘ್ರದಲ್ಲೇ ಮುಗಿಯಲಿದೆ! ದಯವಿಟ್ಟು ನಿಮ್ಮ ಅರ್ಜಿಯನ್ನು ಜನವರಿ 9 ರ ಒಳಗೆ ಪಡೆಯಿರಿ. ಅರ್ಜಿಸಲು, ಕೆಳಗಿನ ಪುಟ ಭೇಟಿ:

Patrick Earley (WMF) via MediaWiki message delivery (ಚರ್ಚೆ) ೦೧:೪೯, ೫ ಜನವರಿ ೨೦೧೬ (UTC)

ಕನ್ನಡ ವಿಕಿಪೀಡಿಯ ೧೩ನೆಯ ವಾರ್ಷಿಕೋತ್ಸವ ಆಚರಣೆ ನಿರ್ಧಾರ[ಬದಲಾಯಿಸಿ]

೧೯ನೆಯ ಸಮ್ಮಿಲನದಲ್ಲಿ ಮಾತುಕತೆಯಾದಂತೆ ಹದಿಮೂರನೆಯ ವರ್ಷಾಚರಣೆಯನ್ನು ಮಂಗಳೂರಿನಲ್ಲಿ ನಡೆಸಬಹುದೆಂದು ಹಾಗೂ ೧೪ನೇ ಫೆ. ೨೦೧೬ರಂದು ನಸೆಸುವುದೆಂದು ಸಮುದಾಯದ ಸದಸ್ಯರು ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಸಮುದಾಯದ ಅಭಿಪ್ರಾಯದಂತೆ ಈ ಸಂಭ್ರಮಾಚರಣೆಯ ರೂಪುರೇಷೆಯನ್ನು ನೀಡಲಾಗಿದೆ.

ಹದಿಮೂರನೆಯ ವಾರ್ಷಿಕಾಚರಣೆಯ ಕಾರ್ಯಕ್ರಮಕ್ಕೆ ಸಮುದಾಯದ ಪ್ರತಿಯೊಬ್ಬರಿಗೂ ಆಹ್ವಾನ[ಬದಲಾಯಿಸಿ]

ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ @ ಮಂಗಳೂರು "Wikidata"
ಕನ್ನಡ ವಿಕಿಪೀಡಿಯವು ಹದಿಮೂರನೆಯ ಫಲಪ್ರದ ವರ್ಷಗಳ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಸಂತಸವನ್ನು ಹಂಚಿಕೊಳ್ಳಲು ಎಲ್ಲ ವಿಕಿಪೀಡಿಯನ್ನರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಫೆಬ್ರವರಿ ೧೩, ೨೦೧೬ರಂದು ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಮತ್ತು ಫೆಬ್ರವರಿ ೧೪, ೨೦೧೬ರಂದು ಭಾನುವಾರ ಹದಿಮೂರನೆ ವಾರ್ಷಿಕ ಆಚರಣೆಯನ್ನು, ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ, ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಆಚರಿಸುವುದೆಂದು ದಿನ ನಿರ್ಧಾರ ಆಗಿದೆ. ಇಲ್ಲಿ ನಡೆಯಲಿರುವ ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಸಮಾರಂಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸರ್ವರೂ ಪಾಲ್ಗೊಂಡು, ತಮ್ಮೆಲ್ಲರ ಇರುವಿಕೆಯಿಂದ ಕನ್ನಡ ವಿಕಿಪೀಡಿಯ ಸಮುದಾಯದ ಬಲ ಹೆಚ್ಚುವಂತೆ ಆಗಲಿ ಎಂದು ಆಶಿಸುತ್ತೇವೆ. ತಮ್ಮ ಪಾಲ್ಗೊಳ್ಳುವಿಕೆಯನ್ನು ಈ ಪುಟದ ಕೊನೆಯ ಪಟ್ಟಿಯಲ್ಲಿ ಸೇರಿಸಿರಿ. ಕನ್ನಡ ವಿಕಿಪೀಡಿಯ ಸಮುದಾಯದ ಮತ್ತು ಈಗಾಗಲೇ ಬೇರೆ ಬೇರೆ ಕಡೆ ನಡೆದ ಸಂಪಾದನೋತ್ಸವಗಳಲ್ಲಿ ಪಾಲ್ಗೊಂಡಿರುವ ಅನೇಕ ಹೊಸ ಸಂಪಾದಕರನ್ನು ಒಟ್ಟಾಗಿ ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಜೊತೆಗೆ ಸಮುದಾಯದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಮುದಾಯದ ಪರವಾಗಿ ಪ್ರತಿಯೊಬ್ಬರಿಗೂ ಪ್ರೀತಿಯ ಸ್ವಾಗತ --Vishwanatha Badikana (ಚರ್ಚೆ) ೧೨:೫೧, ೧೭ ಜನವರಿ ೨೦೧೬ (UTC)

ಪಾಲ್ಗೊಳ್ಳುವವರು[ಬದಲಾಯಿಸಿ]

Geographical Indications in India Edit-a-thon[ಬದಲಾಯಿಸಿ]

Hello,

CIS-A2K is going to organize an edit-a-thon between 25 and 31 January this year. The aim of this edit-a-thon is creating and improving Geographical Indications in India related articles.

We welcome all of you to join this edit-a-thon.
Please see the event and add your name as a participant: meta:CIS-A2K/Events/Geographical_Indications_in_India_Edit-a-thon

Feel free to ask if you have question(s).
Regards. --Titodutta (ಚರ್ಚೆ) ೧೭:೫೧, ೧೮ ಜನವರಿ ೨೦೧೬ (UTC)

2016 WMF Strategy consultation[ಬದಲಾಯಿಸಿ]

ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ

Hello, all.

The Wikimedia Foundation (WMF) has launched a consultation to help create and prioritize WMF strategy beginning July 2016 and for the 12 to 24 months thereafter. This consultation will be open, on Meta, from 18 January to 26 February, after which the Foundation will also use these ideas to help inform its Annual Plan. (More on our timeline can be found on that Meta page.)

Your input is welcome (and greatly desired) at the Meta discussion, 2016 Strategy/Community consultation.

Apologies for English, where this is posted on a non-English project. We thought it was more important to get the consultation translated as much as possible, and good headway has been made there in some languages. There is still much to do, however! We created m:2016 Strategy/Translations to try to help coordinate what needs translation and what progress is being made. :)

If you have questions, please reach out to me on my talk page or on the strategy consultation's talk page or by email to mdennis@wikimedia.org.

I hope you'll join us! Maggie Dennis via MediaWiki message delivery (ಚರ್ಚೆ) ೧೯:೦೭, ೧೮ ಜನವರಿ ೨೦೧೬ (UTC)

ಕನ್ನಡ ವಿಕಿಯಲ್ಲಿ ಇತ್ತೀಚೆಗೆ (ನನ್ನ ವರದಿ)[ಬದಲಾಯಿಸಿ]

ವಿಕಿಯಲ್ಲಿ ಕಂಡದ್ದು ಸಂಪಾದನೋತ್ಸವಗಳಲ್ಲಿ ಆಗುತ್ತಿರುವ ತಪ್ಪುಗಳ ಪಟ್ಟಿ - ಮುಂದೆ ತಿದ್ದಿಕೊಳ್ಳಲು ಸಾಧ್ಯವಾಗಬಹುದೆಂದು ಇಲ್ಲಿ ನೀಡುತ್ತಿದ್ದೇನೆ:

  • ಲೇಖನದ ಚರ್ಚಾಪುಟದಲ್ಲಿ, ಒಬ್ಬ ಸಂಪಾದಕರ ಬಗ್ಗೆ ಮೆಚ್ಚುಗೆಯ ಮಾತುಗಳು. ಲೇಖಕರ ಚರ್ಚಾಪುಟದ ಬಗ್ಗೆ ತಿಳುವಳಿಕೆ ಇಲ್ಲದಿರುವುದನ್ನು ತೋರಿಸುತ್ತದೆ.
  • ಲೇಖನಗಳಲ್ಲಿ ಇಂಟರ್‌ವಿಕಿ ಪುಟಗಳ ಉಲ್ಲೇಖ ನೀಡುವುದು ಮುಂದುವರೆದಿದೆ.
  • ಲೇಖನಗಳಲ್ಲಿ ಬ್ಲಾಗ್, ನಂಬಲರ್ಹವಲ್ಲದ ಮೂರನೇ ವ್ಯಕ್ತಿ, ಸಂಸ್ಥೆ, ಸುಲೇಖಾ ರೀತಿಯ ಜಾಹೀರಾತು ತಾಣಗಳ ಕೊಂಡಿಗಳನ್ನು ಉಲ್ಲೇಖವಾಗಿ ನೀಡುವುದು ಮುಂದುವರೆದಿದೆ. ಈ ಅಭ್ಯಾಸ ಹೆಚ್ಚಾಗುತ್ತಿದೆ.

ಕಾರ್ಯನೀತಿ ಅವಶ್ಯಕತೆ

  • ನೇಮ್‌ಸ್ಪೇಸ್‌ಗಳ ಬಳಕೆ - ವಿಕಿಪೀಡಿಯ ನೇಮ್‌ಸ್ಪೇಸ್‌ನಡಿ ಯಾವ ಪುಟಗಳಿರಬೇಕು, ಸಮ್ಮಿಲನ ಇತ್ಯಾದಿಗಳ ಬಗ್ಗೆ ಎಲ್ಲಿ ಪುಟ ತೆರೆಯ ಬೇಕು ಎನ್ನುವುದಕ್ಕೆ ಸೂಕ್ತ ಕಾರ್ಯ ನೀತಿಯ ಅವಶ್ಯಕತೆ ಇದೆ

ಪ್ರೋಗ್ರಾಮ್ ಅಸೋಸಿಯೇಟ್ ಅವರ ಬಗ್ಗೆ ನನ್ನ ಅನಿಸಿಕೆ

  • ಪ್ರೋಗ್ರಾಮ್ ಅಸೋಶಿಯೇಟ್ ಅವರ ಮಾಸಿಕ ವರದಿ ಇನ್ನೂ ಕಂಡು ಬರುತ್ತಿಲ್ಲ.
  • ಅವರ ಸಂಪಾದನೆಗಳು ಸಾಮಾನ್ಯ ಸ್ವಯಂಸೇವಕನಿಗಿಂತ ಹೆಚ್ಚಿನದೇನೂ ಅಲ್ಲ. ಜೊತೆಗೆ ಅವರ ಕಾಲೇಜಿನ ಪುಟ ಸಂಪಾದನೆಯೇ ಕಂಡು ಬರುತ್ತಿದೆ.

ನಿರ್ವಾಹಕ ಕಾರ್ಯ (ನಾನು ಕೈಗೊಂಡದ್ದು)

  • User:Fahimaktharullal ರಿಂದ ವಿಕಿಗೆ ತಕ್ಕುದಲ್ಲದ, ಉಲ್ಲೇಖಗಳಿಲ್ಲದ ಮಾಹಿತಿ ಹೆಚ್ಚಾಗಿದ್ದು, ಸೂಚನೆಗಳಿಗೆ ಸ್ಪಂದನೆ ಇಲ್ಲದಿರುವುದರಿಂದ ಅವರನ್ನು ತಾತ್ಕಾಲಿಕವಾಗಿ ಅವರ ಸಂಪಾದನೆಗೆ ತಡೆಹಿಡಿದಿದ್ದೇನೆ.
  • ಮತ್ತಷ್ಟು ಟೆಂಪ್ಲೇಟುಗಳನ್ನು ಕನ್ನಡೀಕರಿಸಿದ್ದಾಗಿದೆ.
  • ಜಿಲ್ಲೆ/ತಾಲ್ಲೂಕುಗಳ ಬಗ್ಗೆ ಸೇರಿಸುವ ಟೆಂಪ್ಲೇಟುಗಳಲ್ಲಿ ಆಗುತ್ತಿದ್ದ ತಪ್ಪುಗಳ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ಒದಗಿಸಿದ್ದು.

(ಮೇಲಿನ ಮಾಹಿತಿ ಕೈಗೊಂಡ/ಕಂಡ ಎಲ್ಲ ಮಾಹಿತಿಯನ್ನೂ ಒಳಗೊಂಡಿಲ್ಲ. ನೆನಪಿನಲ್ಲಿದ್ದದ್ದನ್ನು ಇಲ್ಲಿ ಸೇರಿಸಿದ್ದೇನೆ. ಇನ್ಮುಂದೆ ವಿಕಿ ಡೈರಿ ಬರೆಯುವ ಇರಾದೆ ಇದೆ.) ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೮:೫೪, ೧೯ ಜನವರಿ ೨೦೧೬ (UTC)

ಶಾಸನಗಳು ಲೇಖನದ ಬಗ್ಗೆ[ಬದಲಾಯಿಸಿ]

ಲೇಖನ ತಯಾರಿಯಲ್ಲಿರುವಾಗ {{under construction}} ಎಂದು ಮೇಲ್ಗಡೆ ಸೇರಿಸಿದ್ದರೂ ಅವರು ಆ ಲೇಖನವನ್ನು ಚೊಕ್ಕಗೊಳಿಸ ಬೇಕಾಗಿರುವ ಗುಂಪಿಗೆ ಸೇರಿಸಿದ್ದ ಏಕೆಂದು ತಿಳಿಯಲಿಲ್ಲ. ನೀವು ಅಪ್ರತಿಮ ಬುದ್ದಿವಂತರಾಗಿದ್ದರೆ ಒಂದು ಲೇಖನ ಹೇಗಿಬೇಕೆಂಬುದನ್ನು ದಯವಿಟ್ಟು ತಿಳಿಸಿಕೊಡಿ. ಆಗಲಾದರೂ ಒಳ್ಳೆಯ ಲೇಖನಗಳು ವಿಕಿಗೆ ಧಕ್ಕಿದಂತಾಗುತ್ತದೆ. ಒಂದು ಲೇಖನವನ್ನು ಪೂರ್ಣಗೊಳಿಸುವ ಮೊದಲೇ ಅದರ ಬಗ್ಗೆ ತಕರಾರು ತೆಗೆಯುವುದು ವಿಕಿ ನಿಯಮದಲ್ಲಿ ಇದೆಯೇ ?! ಹೀಗಾದರೆ ವಿಕಿಗೆ ಲೇಖನವನ್ನು ಸೇರ್ಪಡೆಗೊಳಿಸುವುದು ಹೇಗೆ ಸಾದ್ಯ? ಒಂದು ಲೇಖನವನ್ನು ಪೂರ್ಣಗೊಳಿಸುವ ಮೊದಲೇ ಅದರ ಬಗ್ಗೆ ತಕರಾರು ತೆಗೆಯುವುದು ಸಭ್ಯತೆ, ಸಂಸ್ಕೃತಿಯ ಲಕ್ಷಣವಲ್ಲ. ವಿನಾಕಾರಣ ನಾನು ಬರೆವ ಲೇಖನಗಳ ಬಗ್ಗೆ ಹಸ್ತಕ್ಷೇಪವನ್ನು ಮಾಡಲಾಗುತ್ತಿದೆ. ನಾನು ಮಾಡಿದ್ದೇ ಶ್ರೇಷ್ಠ ಬೇರೆಯವರು ಮಾಡುವುದು ಕನಿಷ್ಠ ಎಂಬಂತಿದೆ. ಜೊತೆಗೆ ಮೊಸರಿನಲ್ಲಿ ಕಲ್ಲನ್ನು ಹುಡುಕುವ ಪ್ರಯತ್ನದಿಂದ ಏನೂ ಪ್ರಯೋಜನವಿಲ್ಲ. ಸಾಮರ್ಥ್ಯ ಇರುವವರು, ನಿಖರತೆ ಇರುವವರು "ಶಾಸನಗಳು" ಲೇಖನವನ್ನು ಚೊಕ್ಕಟಗೊಳಿಸಿ, ಲೇಖನ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಲಿ. ಆಕ್ಷೇಪ ಮಾಡಿರುವವರಿಗೆ ಈ ಬಗ್ಗೆ ಬೌದ್ದಿಕ ದಾರಿದ್ರ್ಯವಿಲ್ಲ ಎಂಬುದು ನನ್ನ ನಂಬುಗೆ. ಗಾಜಿನ ಮನೆಯೊಳಗಿದ್ದು ಬೇರೆಯವರಿಗೆ ಕಲ್ಲುತೂರುವುದು ಸರಿಯಲ್ಲ ಎಂಬುದು ನಮ್ಮ ವಿಕಿ ಸಮುದಾಯಕ್ಕೆ ತಿಳಿಯಬೇಕು.--ಕೆ.ಸೌಭಾಗ್ಯವತಿ (ಚರ್ಚೆ) ೧೧:೪೦, ೨೦ ಜನವರಿ ೨೦೧೬ (UTC)

ಲೇಖನ ಹೇಗೆ ಉತ್ತಮಗೊಳಿಸಬಹುದು ಎಂದು ಕ್ಲೀನ್‌ಅಪ್ ಟೆಂಪ್ಲೇಟು ಸೇರಿಸಲಾಗಿದೆ. ಇದು ಗುಣಮಟ್ಟ ಹೆಚ್ಚಿಸಲು ಮಾಡಬೇಕಿರುವ ಕೆಲಸವನ್ನು ಸೂಚಿಸುತ್ತದೆ. ಜೊತೆಗೆ ಚೊಕ್ಕಗೊಳಿಸಬೇಕಿರುವ ವರ್ಗಕ್ಕೆ ಲೇಖನ ಸೇರಿಸುತ್ತದೆ. ಸಂಪಾದನೆಯ ಮುಂದಿನ ಹಂತಕ್ಕೆ ಇದು ಅವಶ್ಯಕವಾಗಿ ನೆರವಾಗುತ್ತದೆ. ಇದೇ ಕೆಲಸವನ್ನು ಈ ಲೇಖನದಲ್ಲಿ ಮಾಡಲಾಗಿದ್ದು, ನಿಮ್ಮ ಬರಹಗಳ ಬಗ್ಗೆ ಆಕ್ಷೇಪ ಎತ್ತಲಾಗುತ್ತಿದೆ ಎನ್ನುವ ಮಾತನ್ನು ಒಪ್ಪಲಾರೆ. ನೆನ್ನೆ ರಾತ್ರಿ ೨೫೦ ಲೇಖನಗಳನ್ನು (ಇತ್ತೀಚಿನ ಸಂಪಾದನೆಗಳನ್ನು) ಪರಿಶೀಲಿಸಿ ಅವುಗಳಿಗೆ ಅವಶ್ಯವಿರುವ ಸಂಪಾದನೆ ಮಾಡಿದ್ದೇನೆ. ಅಗತ್ಯವಿದ್ದಲ್ಲಿ ನನ್ನ ಕಾಣಿಕೆಗಳನ್ನು ನೋಡಿ. ಯಾವುದೇ ವ್ಯಕ್ತಿಯ ಕೆಲಸವನ್ನು ಕನಿಷ್ಠ ಎಂದು ತೋರುವ ಕೆಲಸ ಇಲ್ಲಾಗುತ್ತಿಲ್ಲ ನಾನು ಖುದ್ದಾಗಿ ಮಾಡಿಯೂ ಇಲ್ಲ. ವಿಕಿ ಯಾವಾಗಲೂ ನಿರಂತರವಾಗಿ ಸಂಪಾದನೆಯಾಗುವ ವಿಶ್ವಕೋಶ ಇಲ್ಲಿ ಬದಲಾವಣೆ ಶಾಶ್ವತ. ಒಬ್ಬೊಬ್ಬರೂ ಒಂದೊಂದು ರೀತಿ ಸಂಪಾದನೆಗೆ ಮುಂದಾಗುತ್ತಾರೆ. ಪ್ರತಿಯೊಬ್ಬರ ಕೆಲಸವನ್ನೂ ಗೌರವಿಸುವ ದೊಡ್ಡತನ ಮತ್ತು ಅರ್ಥ ಮಾಡಿಕೊಳ್ಳುವ ಸಂಯಮ ಇರಬೇಕಷ್ಟೇ. ಇದಿದ್ದಲ್ಲಿ, ಹೀಗೆ ದಾರಿದ್ರ್ಯ, ಕನಿಷ್ಠ ಇತ್ಯಾದಿ ಪದಗಳ ಪ್ರಯೋಗ ಅವಶ್ಯವಿರಲಿಲ್ಲ. ಶಾಸನಗಳ ಬಗ್ಗೆ ಮಾಹಿತಿಯನ್ನು ಓದುತ್ತಿದ್ದೇನಷ್ಟೇ. ಅದರ ಬಗ್ಗೆ ಸಂಶೋಧನೆ ಮಾಡಿ ಅರ್ಥಮಾಡಿಕೊಳ್ಳುವ ಆಸೆಯೂ ಇದೆ, ಸಾಧ್ಯವಾದ ಪ್ರಯತ್ನವನ್ನೂ ಪಡುತ್ತಿದ್ದೇನೆ. ಮುಂದೊಮ್ಮೆ ಇವುಗಳಿಗೆ ಸಂಬಂಧಿಸಿದ ಲೇಖನಗಳನ್ನು ಸಂಪಾದಿಸಲು ಅಡ್ಡಿ ಇಲ್ಲ. ನಿಮ್ಮಷ್ಟು ಈ ವಿಷಯದಲ್ಲಿ ಜಾಣ್ಮೆ, ಅರಿವು ಇಲ್ಲದಿರುವುದರಿಂದ ಉಲ್ಲೇಖಗಳಲ್ಲಿ ಆಗುತ್ತಿರುವ ತೊಂದರೆಯ ಬಗ್ಗೆ ತಿಳಿಸಿ, ಅದನ್ನು ಇತರರು ಸರಿ ಪಡಿಸಲಿ ಎಂದು ಮೇಲೆ ಹೇಳಿದ ಟೆಂಪ್ಲೇಟ್ ಹಾಕಿದ್ದೇನೆ. ಇದರಲ್ಲಿ ಗುಣಮಟ್ಟ ಸರಿಪಡಿಸುವುದು ಹೇಗೆ ಎನ್ನುವ ಕೊಂಡಿ ಇದ್ದೇ ಇದೆ. ಈ ರೀತಿ ಬೇರೆಯವರ ಸಂಪಾದನೆಗಳ ಬಗ್ಗೆ ಇದ್ದಕ್ಕಿದ್ದಂತೆ ತಕ್ಕುದಲ್ಲದ ಭಾಷೆಯಲ್ಲಿ ಅರಳಿ ಕಟ್ಟೆಯಲ್ಲಿ ಬರೆಯುವ ಬದಲು, ಸಹಾಯ ಪುಟದ ಕೊಂಡಿಯನ್ನೋ, ಅದು ಇಲ್ಲದ ಪಕ್ಷದಲ್ಲಿ ಅದನ್ನು ಸೃಷ್ಟಿಸುವ ಬಗ್ಗೆ ಚರ್ಚಿಸಿದ್ದಿದ್ದರೆ ಜೊತೆಗೆ ಕೆಲಸ ಮಾಡುವ ಖುಷಿಯಾದರೂ ಸಿಗುತ್ತಿತ್ತು. ಈ ರೀತಿಯ ವಾಕ್‌ಚಾತುರ್ಯದ ಬಳಕೆ ಬೇಕಿರಲಿಲ್ಲ ಎನಿಸುತ್ತಿದೆ ಮತ್ತೊಮ್ಮೆ ಯೋಚಿಸಿ ನೋಡಿ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೨:೦೭, ೨೦ ಜನವರಿ ೨೦೧೬ (UTC)
ಪ್ರಗತಿಯಲ್ಲಿರುವ ಪುಟಗಳಿಗೆ under construction ಟೆಂಪ್ಲೇಟ್ ಹಾಕಬಹುದು. ವಿಕಿ ಸಮುದಾಯಕ್ಕೆ ಆಗ ಲೇಖನ ಪೂರ್ಣಗೊಂಡಿಲ್ಲ ಎಂದು ತಿಳಿಯುತ್ತದೆ. --Vikas Hegde (ಚರ್ಚೆ) ೧೧:೫೧, ೨೦ ಜನವರಿ ೨೦೧೬ (UTC)
under construction ಟೆಂಪ್ಲೇಟ್ ಬಳಕೆಗೂ ಒಂದು ಮಿತಿ ಬೇಕಿದೆ. ಇದನ್ನು ಕಾರ್ಯ‌ನೀತಿ ಚರ್ಚೆಯ ಮೂಲಕ ಸಮುದಾಯ ತೀರ್ಮಾನಿಸಬಹುದು.~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೨:೧೦, ೨೦ ಜನವರಿ ೨೦೧೬ (UTC)
ಚರ್ಚೆ ಇತ್ಯಾದಿಗಳಲ್ಲಿ ಟೆಂಪ್ಲೇಟು ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುವಾಗ nowiki ಟ್ಯಾಗ್ ಮಧ್ಯೆ ಟೆಂಪ್ಲೇಟಿನ ಹೆಸರು ಬಳಸಿದರೆ ಅದು ಬೇರೆ ಪುಟದಲ್ಲಿ ಹುದುಗಿದಂತೆ ಕಾಣುವುದಿಲ್ಲ. {{under construction}} ಅನ್ನು ಈ ಚರ್ಚೆಯಲ್ಲಿ ಬದಲಾಯಿಸಿದ್ದೇನೆ. ಇತಿಹಾಸ ನೋಡಿ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೨:೧೧, ೨೦ ಜನವರಿ ೨೦೧೬ (UTC)
reason=ಬ್ಲಾಗ್‌ಗಳು, ನಂಬಲರ್ಹವಲ್ಲದ ಮೂರನೇ ವ್ಯಕ್ತಿಗಳ ಖಾಸಗಿ ವೆಬ್‌ಸೈಟ್ ಇತ್ಯಾದಿಗಳು ಉಲ್ಲೇಖವಾಗುವುದಿಲ್ಲ. ಸರಿಯಾದ ಉಲ್ಲೇಖಗಳನ್ನು ನೀಡಿ ಲೇಖನವನ್ನು ಉತ್ತಮಗೊಳಿಸಬೇಕಿದೆ. - ಈ ಭಾಷೆಯೂ ಸಂಪಾದನೆಯ ಉದ್ದೇಶವನ್ನು ತಿಳಿಸುವಾಗ, ಇದರಲ್ಲಿ ಬೇರೆಯವರನ್ನು ಕೀಳಾಗಿ ನೋಡಿದ್ದು ಎಲ್ಲಿ ಎಂದು ತಿಳಿದವರು ಹೇಳಬೇಕು. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೨:೧೬, ೨೦ ಜನವರಿ ೨೦೧೬ (UTC)

ಹದಿಮೂರನೆಯ ವರ್ಷಾಚರಣೆಯ ಐ.‌ಆರ್.ಸಿ ಚಾನೆಲ್[ಬದಲಾಯಿಸಿ]

ಹದಿಮೂರನೆಯ ವರ್ಷಾಚರಣೆ ಪ್ರಯುಕ್ತ ಕಾರ್ಯಕ್ರಮದ ರೂಪರೇಷೆಯ ಬಗ್ಗೆ ದಿನಾಂಕ ೦೧.೦೨.೨೦೧೬ರಂದು ಸೋಮವಾರ ರಾತ್ರಿ ೮.೩೦ರಿಂದ ೯.೩೦ರ ವರೆಗೆ ನಡೆಯುವ ಐ ಆರ್ ಸಿ ಚರ್ಚೆಯಲ್ಲಿ ಭಾಗವಹಿಸಿ. ಅದರ ಪುಟದಲ್ಲಿ ನಿಮ್ಮ ಹೆಸರು ನೋಂದಾಯಿಸಿ ಮತ್ತು ಭಾಗವಹಿಸಿ.

Watchlist notice for Geographical Indication edit-a-thon[ಬದಲಾಯಿಸಿ]

We have already informed you about the upcoming Geographical Indications in India edit-a-thon. I am requesting admins of this Wikipedia to put a watchlist notice/banner for the event

Locations required:

  • India/Global

Possible messages:

Please translate to Kannada

Date range required:

  • Until 2016-01-28

Thank you. --Titodutta (ಚರ್ಚೆ) ೦೨:೧೩, ೨೩ ಜನವರಿ ೨೦೧೬ (UTC)

@Titodutta: Is there any template that has been created for this? ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೮:೫೭, ೨೩ ಜನವರಿ ೨೦೧೬ (UTC)
Code Result
<center><div style="clear: both; width: 100%; height: auto; padding-top: 6px"><div style="border: 1px solid #93c9ed; padding: 14px; {{Gradient|#f6f6f6|white|vertical}}"><span style="font-family: Siyam Rupali; font-size: 110%; >[[File:Geographical Indications in India collage.jpg|50px|left]]Participate in '''[[:m:CIS-A2K/Events/Geographical Indications in India Edit-a-thon|Geographical Indications in India Edit-a-thon]]''' between this 25—31 January.</span></span></span></div></div></center>
Participate in Geographical Indications in India Edit-a-thon between this 25—31 January.

Please translate that sentence to Kannada. --Titodutta (ಚರ್ಚೆ) ೨೦:೪೦, ೨೩ ಜನವರಿ ೨೦೧೬ (UTC)

Thanks. Site notice has been updated. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೨೦:೪೬, ೨೩ ಜನವರಿ ೨೦೧೬ (UTC)

ನುರಿತ ವಿಕಿಪೀಡಿಯನ್ನರ ಕಾರ್ಯನೀತಿ ಚರ್ಚೆ ಮತ್ತು ಸಂವಾದ[ಬದಲಾಯಿಸಿ]

ಫೆಬ್ರವರಿ ೭ನೇ ತಾರೀಖು, ಭಾನುವಾರ ಬೆಂಗಳೂರಿನ ಸೆಂಟರ್‌ಫಾರ್ ಇಂಟರ್ನೆಟ್ & ಸೊಸೈಟಿ‌ಯಲ್ಲಿ ಕನ್ನಡ ವಿಕಿಪೀಡಿಯಕ್ಕೆ ಮುಖ್ಯವಾದ ಕಾರ್ಯಸೂಚಿ ಪುಟಗಳು, ಸಿಐಎಸ್ ವಿಕಿ ಕಾರ್ಯಸೂಚಿ ಸುತ್ತ ಎಲ್ಲ ಭಾರತೀಯ ಭಾಷಾ ವಿಕಿಗಳೊಡನೆ ಮಾಡುತ್ತಿರುವ ಕೆಲಸ (User:Titodutta ಇದರ ಮುಂದಾಳತ್ವವಹಿಸುತ್ತಿದ್ದಾರೆ) ಇತ್ಯಾದಿಗಳ ಬಗ್ಗೆ ಚರ್ಚಿಸಲು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಯೋಚಿಸಲಾಗುತ್ತಿದೆ. ಈ ಕೆಳಗಿನ ವಿಷಯಗಳನ್ನು ಚರ್ಚೆಗೆ ತೆಗೆದುಕೊಳ್ಳುವುದಾಗಿ Titodutta ತಿಳಿಸಿರುತ್ತಾರೆ. ಸಿ.ಐ.ಎಸ್. ಪರವಾಗಿ ಡಾ. ಯು.ಬಿ. ಪವನಜ ಭಾಗವಹಿಸುವುದಾಗಿ ತಿಳಿಸಲಾಗಿದೆ.

  1. Followup of our policy portal work and analyze Kannada Wikipedia policy portal
  2. Discuss our training program and 2 activities (based on Kannada Wikipedians' questions)

ಕನ್ನಡ ವಿಕಿಪೀಡಿಯದ ನುರಿತ ವಿಕಿಪೀಡಿಯನ್ನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಕಿ ಯೋಜನೆಯ ಕಾರ್ಯನೀತಿ, ಮುಂದಿನ ಕಾರ್ಯ ಯೋಜನೆಗಳು, ಸಮುದಾಯ ಮತ್ತು ಸಿ.‌ಐ.ಎಸ್ ಎ೨ಕೆ ತಂಡದ ಜವಾಬ್ದಾರಿಗಳನ್ನು ಎಳೆ ಎಳೆಯಾಗಿ ಚರ್ಚಿಸಬೇಕಾಗಿ ಈ ಮೂಲಕ ಕೇಳಿಕೊಳ್ಳಲಾಗುತ್ತಿದೆ. ಭಾಗವಹಿಸಲು ಇಚ್ಚಿಸುವವರು ಈ ಕೆಳಗೆ ತಮ್ಮ ಹೆಸರನ್ನು ನಮೂದಿಸಿ, ಜೊತೆಗೆ ಮೇಲಿನ ಪಟ್ಟಿಗೆ ಮತ್ತಷ್ಟು ಚರ್ಚೆಗಳನ್ನು ಕೂಡ ಸೇರಿಸಬಹುದು. ಸಮಯದ ಲಭ್ಯತೆಯ ಆಧಾರದ ಮೇಲೆ, ಹೆಚ್ಚುವರಿ ಚರ್ಚೆಗಳನ್ನು ಸಂವಾದದ ಸಂದರ್ಭದಲ್ಲಿ ನೆಡೆಸಬಹುದು. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೨೦:೦೫, ೨೩ ಜನವರಿ ೨೦೧೬ (UTC)

ಈ ಕಾರ್ಯಕ್ರಮ ಈ ಭಾನುವಾರ ಫೆಬ್ರವರಿ ೭, ೨೦೧೬ ರಂದು ಮಧ್ಯಾಹ್ನ ೨ರಿಂದ ೫ರವರೆಗೆ ನೆಡೆಯಲಿದೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೨:೦೩, ೫ ಫೆಬ್ರುವರಿ ೨೦೧೬ (UTC)

ಭಾಗವಹಿಸಲು ಇಚ್ಚಿಸುವವರು[ಬದಲಾಯಿಸಿ]

  1. checkY ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು
  2. Titodutta (ಚರ್ಚೆ) ೨೦:೨೭, ೨೩ ಜನವರಿ ೨೦೧೬ (UTC)
  3. Csyogi (ಚರ್ಚೆ) ೧೮:೦೮, ೨೪ ಜನವರಿ ೨೦೧೬ (UTC)

ಚರ್ಚಿಸಬಹುದಾದ ಮತ್ತಷ್ಟು ವಿಚಾರಗಳು[ಬದಲಾಯಿಸಿ]

ಸಮಯವಿದ್ದಲ್ಲಿ ಈ ಕೆಳಗಿನ ಕೆಲವು ವಿಷಯಗಳನ್ನೂ ಚರ್ಚೆಗೆ ತೆಗೆದುಕೊಳ್ಳಬಹುದು:

  1. ಕನ್ನಡ ಪುಸ್ತಕಗಳ ಸುತ್ತಲಿನ ಐ.ಇ.ಜಿ ಯೋಜನೆಯ ಕಾರ್ಯ ಪ್ರಗತಿ
  2. ಕನ್ನಡ ವಿಕಿಸೋರ್ಸ್ ನಲ್ಲಿನ ಮೈಸೂರು ವಿವಿ ವಿಶ್ವಕೋಶ ದ ಲೇಖನ ಗಳ ಬಳಕೆಯ ಯೋಜನೆ - ವಿಕಿಪೀಡಿಯ ಕ್ಕಾಗಿ

ಚುಟುಕು ವರದಿ[ಬದಲಾಯಿಸಿ]

ಫೆಬ್ರವರಿ ೭, ೨೦೧೬ ರಂದು ಈ ಕಾರ್ಯಕ್ರಮ ಬೆಂಗಳೂರಿನಲ್ಲಿ ನೆಡೆಯಿತು. ಇಲ್ಲಿ ನೆಡೆದ ಚರ್ಚೆ ಇತ್ಯಾದಿಗಳನ್ನು ಈಥರ್ ಪ್ಯಾಡ್ ನಲ್ಲಿ ಉಳಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ತಟಸ್ಥ ದೃಷ್ಟಿಕೋನ ಹಾಗೂ ಪರಿಶೀಲನಾರ್ಹತೆ ಕಾರ್ಯನೀತಿಗಳ ಬಗ್ಗೆ ವಿವರವಾದ ಚರ್ಚೆ ನೆಡೆಯಿತು. ಕನ್ನಡ ವಿಕಿಪೀಡಿಯದಲ್ಲಿ ಇದಕ್ಕೆ ಸಂಬಂಧಿಸಿದಂತೆ ಅವಶ್ಯ ಕನ್ನಡ ಪುಟಗಳು ಮತ್ತು ಅವುಗಳಲ್ಲಿನ ಮಾಹಿತಿ ಕೊರತೆ ನಿವಾರಿಸಲು, ಕಾರ್ಯನೀತಿ ಪುಟಗಳನ್ನು ಇಂಗ್ಲೀಷ್‌ನಿಂದ ಅನುವಾದಿಸಲು ಆಲೋಚಿಸಲಾಯ್ತು. ನಂತರದ ಹಂತದಲ್ಲಿ ಈ ಕಾರ್ಯನೀತಿಗಳನ್ನು ಕನ್ನಡ ವಿಕಿಗೆ ಉಪಯುಕ್ತವಾಗುವಂತೆ ಉದ್ಧರಿಸುವ ಕಾರ್ಯವನ್ನು ಸಮುದಾಯ ಕೈಗೊಳ್ಳಬಹುದಾಗಿದೆ. ಸಿ.ಐ.ಎಸ್.ಎ೨ಕೆ ಕಾರ್ಯನಿರ್ವಹಣೆ, ಪ್ರೋಗ್ರಾಮ್ ಅಸೋಸಿಯೇಟ್ ಕೆಲಸ, ಕಾಲೇಜುಗಳಲ್ಲಿ ನೆಡೆಯುತ್ತಿರುವ ಸಂಪಾದನೋತ್ಸವಗಳ ಬಗ್ಗೆ ಮಾಹಿತಿ ವಿನಿಮಯದ ಜೊತೆಗೆ ಸಮುದಾಯದ ಅನಿಸಿಕೆ ಮತ್ತು ಸಲಹೆಗಳನ್ನು ಹಂಚಿಕೊಳ್ಳಲಾಯ್ತು. ಈ ಎಲ್ಲ ಚರ್ಚೆಯ ಮಾಹಿತಿ ವಿವರವಾಗಿ ದಾಖಲಿಸಲು ಕಾರ್ಯಕ್ರಮದ ಸಮ್ಮಿಲನ ಪುಟ ಸಿದ್ಧಪಡಿಸಲು ಈ ಮೂಲಕ ಸಮುದಾಯದ ಅನುಮತಿ ಕೇಳಲಾಗುತ್ತಿದೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೨೦:೨೭, ೮ ಫೆಬ್ರುವರಿ ೨೦೧೬ (UTC)

Kannada is missing[ಬದಲಾಯಿಸಿ]

Kannada is missing from this page:
https://meta.wikimedia.org/wiki/There_is_also_a_Wikipedia_in_your_language
More than 100 languages are now listed.
Thank you, Varlaam (ಚರ್ಚೆ) ೧೬:೫೬, ೨೫ ಜನವರಿ ೨೦೧೬ (UTC)

Thank you. It has been added. Lahariyaniyathi (ಚರ್ಚೆ) ೦೫:೪೩, ೨೬ ಜನವರಿ ೨೦೧೬ (UTC)

Thanks very much for your help! Varlaam (ಚರ್ಚೆ) ೦೬:೫೪, ೨೬ ಜನವರಿ ೨೦೧೬ (UTC)

GI edit-a-thon 2016 updates[ಬದಲಾಯಿಸಿ]

Geographical Indications in India Edit-a-thon 2016 has started, if you have not signed up still, please consider joining now.

Updates

Here are a few updates:

  1. More than 80 Wikipedians have joined this edit-a-thon
  2. More than 20 articles have been created/expanded already (this may not be the exact number, see "Ideas" section #1 below)
  3. Infobox geographical indication has been started on English Wikipedia. You may help to create a similar template for on your Wikipedia.
Become GI edit-a-thon language ambassador

If you are an experienced editor, become an ambassador. Ambassadors are community representatives and they will review articles created during this edit-a-thon, and perform a few other administrative tasks.

Translate the Meta event page

Please translate this event page into your own language. Event page has been started in Bengali, English and Telugu, please start a similar page on your Wikipedia too.

Ideas
  1. Please report the articles you are creating or expanding here. It'll be difficult for us to count or review articles unless you report it.
  2. These articles may also be created or expanded:

See more ideas and share your own here.

Further updates

Please keep checking the Meta-Wiki event page for the latest updates. --MediaWiki message delivery (ಚರ್ಚೆ) ೦೮:೩೩, ೨೭ ಜನವರಿ ೨೦೧೬ (UTC)

ಭಾಗವಹಿಸುವವರಿಗೆ ಪ್ರಯಾಣ ಮತ್ತು ವಸತಿ ವ್ಯವಸ್ಥೆ ಸಹಾಯ[ಬದಲಾಯಿಸಿ]

ಹದಿಮೂರನೆಯ ವರ್ಷಾಚರಣೆಯು ನಡೆಯುವ ದಿನ, ಕಾರ್ಯಕ್ರಮ ವಿವರ ಈಗಾಗಲೇ ನಿರ್ಧಾರವಾಗಿದೆ, ಆ ಪ್ರಯುಕ್ತ ಕಾರ್ಯಕ್ರಮದಲ್ಲಿ ಹೊರಗಿನ ಜಿಲ್ಲೆಯವರು ಭಾಗವಹಿಸಲು ಇಚ್ಚಿಸುವವರಿಗೆ ಪ್ರಯಾಣ ವೆಚ್ಚ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಈಗಾಗಲೇ ಮೆಟಾದಲ್ಲಿ ೩೦ ಜನರಿಗೆ ಭಾಗವಹಿಸಲು ಅವಕಾಶವನ್ನು ಕೋರಿದ್ದೆವು. ಆದರೆ ಗ್ರಾಂಟ್ ಚರ್ಚೆಯಂತೆ ಅದನ್ನು ೧೫ ಜನರಿಗೆ ಮೊಟಕುಗೊಳಿಸುವಂತೆ ಸೂಚನೆ ಬಂದಿದೆ. ಪಿಇಜಿ ಅಪ್ಲಿಕೇಶನ್‍ ಪ್ರಕಾರ ನಾವು ಕೇಳಿರುವಸ್ಟು ಹಣ ಮಂಜೂರಾಗಲಿಲ್ಲ. ಆದರೆ ಹದಿಮೂರನೆಯ ವರ್ಷಾಚರಣೆ ಮುಗಿದ ನಂತರ ಈಗಾಗಲೇ ಆರಂಭಿಸಿರುವ ಸಂಪಾದನೋತ್ಸವ ಯೋಜನೆಯ ಮುಂದುವರಿಕೆಗಾಗಿ ಇನ್ನೊಂದಷ್ಟು ಹಣ ಬೇಕಾಗುವುದಾದರೆ ಕೋರಿಕೆ ಸಲ್ಲಿಸಲು ಅವಕಾಶವಿದೆ. ಭಾಗವಹಿಸುವವರ ಆಯ್ಕೆ ಸಮಿತಿ ಮಾಡಲಾಗಿದೆ. ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಪ್ರಯಾಣ ಮತ್ತು ವಸತಿ ಸಹಾಯ ಬಯಸುವವರು ಈ ಪುಟದಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕಾಗಿ ವಿನಂತಿ.--Vishwanatha Badikana (ಚರ್ಚೆ) ೦೭:೪೯, ೨೮ ಜನವರಿ ೨೦೧೬ (UTC)

Conflict of Interest - ಭಾಗವಹಿಸುವವರ ಆಯ್ಕೆ ಸಮಿತಿ ಮತ್ತು ಪ್ರಯಾಣ ಮತ್ತು ವಸತಿ ಸಹಾಯ ಬಯಸುವವರು[ಬದಲಾಯಿಸಿ]

ಹದಿಮೂರನೆ ವರ್ಷಾಚರಣೆಯ ಸ್ವಯಂಸೇವಕರ ಸಂಖ್ಯೆ ೧೧ ಇದ್ದರು, ಅವರಲ್ಲಿ ಯಾರು ಭಾಗವಹಿಸುವವರ ಆಯ್ಕೆ ಸಮಿತಿಯಲ್ಲಿ ಇಲ್ಲ. ಹಾಗು, ಭಾಗವಹಿಸುವವರ ಆಯ್ಕೆ ಸಮಿತಿಯಲ್ಲಿ ಇರುವವರೆ ಪ್ರಯಾಣ ಮತ್ತು ವಸತಿ ಸಹಾಯ ಬಯಸಿರುವುದು ಸಮಂಜಸವೆ?. -- ಕಿರಣ್, ೨ ಫೆಬ್ರವರಿ ೨೦೧೬, ೬:೫೪ (UTC)

ಸ್ವಯಂಸೇವಕನಾಗಿಯೂ ನಾನು ನೋಂದಾಯಿಸಿಕೊಳ್ಳಬೇಕಿತ್ತು. ಮರೆತಿದ್ದೆ. ಈಗ ನೋಂದಾಯಿಸಿದ್ದೇನೆ. ೧೧ ಸ್ವಯಂಸೇವಕರು ಸ್ಥಳೀಯರು. ಆಯ್ಕೆ ಸಮಿತಿಯಲ್ಲಿ ಇಬ್ಬರು ಮಾತ್ರ ಹೊರಗಿನಿಂದ ಬರುವವರು. ಪ್ರಯಾಣ-ವಸತಿ ಭತ್ಯೆಗೆ ಇನ್ನೂ ಹದಿಮೂರು ಜನಕ್ಕೆ ಅವಕಾಶ ಇದೆ. ಹದಿಮೂರು ಜನಕ್ಕಿಂತ ಹೆಚ್ಚು ಜನ ನೊಂದಾಯಿಸಿಕೊಂಡರೆ ಆಗ ಆಯ್ಕೆ ಸಮಿತಿಯ ಜವಾಬ್ದಾರಿ ಬೇರೆಯವರಿಗೆ ನೀಡಬೇಕಾಗಬಹುದು. ಆಗ conflict ಇರುವುದಿಲ್ಲ ಅಂದುಕೊಳ್ಳುತ್ತೇನೆ.--Vikas Hegde (ಚರ್ಚೆ) ೧೪:೧೧, ೨ ಫೆಬ್ರುವರಿ ೨೦೧೬ (UTC)
ಒಮ್ಮೆ Conflict of interest ಪುಟವನ್ನು ನೋಡಿ. ನೀವು ಇವಾಗ ಸ್ವಯಂಸೇವಕರಾಗಿ ನೋಂದಾಯಿಸುವುದು ಸರಿ ಕಾಣುವುದಿಲ್ಲ. ಆಯ್ಕೆ ಸಮಿತಿಯ ಮೂವರಲ್ಲಿ ಇಬ್ಬರು ಪ್ರಯಾಣ ಮತ್ತು ವಸತಿ ಸಹಾಯ ಬಯಸಿರುವುದು clear conflict of interest. -- ಕಿರಣ್, ೩ ಫೆಬ್ರವರಿ ೨೦೧೬, ೬:೨೧ (UTC)
ಸ್ವಯಂಸೇವಕನಾಗಿ ನೋಂದಾಯಿಸಿಕೊಳ್ಳಲು ಕಾಲಗಡುವು ಇಲ್ಲ. ಸ್ವಯಂಸೇವಕರಾಗಿ ಮೊದಲೇ ನೋಂದಾಯಿಸಿಕೊಂಡವರು ಮಾತ್ರ ಭತ್ಯೆಗೆ ಅರ್ಜಿ ಸಲ್ಲಿಸಬಹುದು ಅಂತಲೂ ಇಲ್ಲ. ಸ್ವಯಂಸೇವಕನಾಗಿ ನೋಂದಾಯಿಸಿಕೊಂಡಿರುವುದು ಒಬ್ಬ ವಿಕಿಪೀಡಿಯನ್ ಆಗಿ ಅವತ್ತಿನ ಸಂಬಂಧಿತ ಕೆಲಸಗಳನ್ನು ಮಾಡುವುದಕ್ಕಾಗಿ ಮತ್ತು ಭತ್ಯೆಗೆ ನೋಂದಾಯಿಸಿಕೊಂಡಿರುವುದು ಒಬ್ಬ ವಿಕಿಪೀಡಿಯನ್ ಆಗಿ ಆಚರಣೆಯಲ್ಲಿ ಭಾಗವಹಿಸುವುದಕ್ಕಾಗಿ. ಹಾಗಾಗಿ ಅದಕ್ಕೂ ಆಯ್ಕೆಸಮಿತಿಯ ಸ್ಥಾನಕ್ಕೂ ಸಂಬಂಧ ಇಲ್ಲ. ಅಲ್ಲಿ ಅವಕಾಶವಿರುವುದಕ್ಕಿಂತ ಹೆಚ್ಚಿನ ಜನ ಭತ್ಯೆಗೆ ನೊಂದಾಯಿಸಿಕೊಂಡರೆ ಆಯ್ಕೆಸಮಿತಿ ಹೊಣೆಗಾರಿಕೆಯಿಂದ ಹೊರಬರಬೇಕಾಗಬಹುದು ಎಂಬುದನ್ನು ಸ್ಪಷ್ಟಪಡಿಸಿರುವುದರಿಂದ conflict of interest ಆಗುವುದಿಲ್ಲ. Thank you. --Vikas Hegde (ಚರ್ಚೆ) ೦೭:೧೩, ೩ ಫೆಬ್ರುವರಿ ೨೦೧೬ (UTC)
ಕಿರಣ್ ಅವರ Conflict of Interest ಗಾಗಿ; ಪ್ರಯಾಣ ಮತ್ತು ವಸತಿ ಸಹಾಯ ಎಂಬ ಕೋರಿಕೆಗೆ ಭಾಗವಹಿಸುವವರ ಆಯ್ಕೆ ಸಮಿತಿಯಲ್ಲಿ ಇರುವವರು ಹೆಸರನ್ನು ನೋಂದಾಯಿಸಿರುವುದರಲ್ಲಿ ಅಪರಾಧವೇನೂ ಆಗಿಲ್ಲ. ಕಾರ್ಯಕ್ರಮ ಆಯೋಜನೆಯಲ್ಲಿ ಇಂತಹ ಏರುಪೇರುಗಳು ಆಗಿರುವುದನ್ನು ದೊಡ್ಡ ಪ್ರಮಾದವೆಂದು ಬಿಂಬಿಸಿರುವುದರಿಂದ ಸಮುದಾಯದ ಸದಸ್ಯರಿಗೆ ಸ್ವಲ್ಪ ಇರುಸು ಮುರುಸು ಆಗುವಂತಹ ತೀರ್ಮಾನಗಳನ್ನು ತಳೆಯೋದು ಬೇಡವೆಂದು ನಮ್ಮ ಅಭಿಪ್ರಾಯ. ಹದಿಮೂರನೆಯ ವರ್ಷಾಚರಣೆ ಸಿದ್ಧತೆ ಚೆನ್ನಾಗಿದೆ. ನೀವೂ ಬನ್ನಿ. ಈ ಕುರಿತಂತೆ ಪ್ರಯಾಣ ಮತ್ತು ವಸತಿ ಸಹಾಯ ಭಾಗವನ್ನು ಸ್ವಲ್ಪ ತಿದ್ದುಪಡಿ ಮಾಡಲಾಗಿದೆ.--Vishwanatha Badikana (ಚರ್ಚೆ) ೧೭:೫೪, ೩ ಫೆಬ್ರುವರಿ ೨೦೧೬ (UTC)
ನಾನು ಸಮುದಾಯದ ಸದಸ್ಯನಾಗಿಯೆ ಈ ಪ್ರಶ್ನೆಯನ್ನು ಕೇಳಿದ್ದು. ಸಮುದಾಯದ ಕೆಲವರಿಗೆ ಇದರಿಂದ ಇರುಸು ಮುರುಸು ಆಗಿದ್ದರೆ ಅದು ಅವರ ವೈಯುಕ್ತಿಕ ನಿಲುವು. ಕಾರ್ಯಕ್ರಮ ಆಯೋಜನೆಗೆ ಬಂದಿರುವ ಹಣದ (237,916 INR - considering all 4 other events) ಸದ್ಬಳಕೆಯ ಉದ್ದೇಶದಿಂದ ಈ ವಿಷಯವನ್ನು ಕೇಳಿರುವುದು. ಮತ್ತು ಕಾರ್ಯಕ್ರಮಕ್ಕೆ ಮತ್ತೋಮ್ಮೆ ಆಹ್ವಾನಿಸಿರುವುದಕ್ಕೆ ಧನ್ಯವಾದಗಳು. -- ಕಿರಣ್, ೪ ಫೆಬ್ರವರಿ ೨೦೧೬, ೭:೩೪ (UTC)

ಕನ್ನಡ ವಿಕಿಪೀಡಿಯದಲ್ಲಿ ಡ್ರಾಫ್ಟ್ ನೇಮ್ ಸ್ಪೇಸ್ ಸೇರಿಸುವ ಬಗ್ಗೆ[ಬದಲಾಯಿಸಿ]

ವಿಕಿಪೀಡಿಯದ ಎಲ್ಲಾ ಬಳಕೆದಾರರಿಗು ಪ್ರಯೋಗಪುಟ ಲಭ್ಯವಿದೆ. ಆದರೆ ಅದರಲ್ಲಿ ಕೆಲವು ಕೊರತೆಗಳಿವೆ. ಆದುದರಿಂದ ಇಂಗ್ಲೀಷ್ ವಿಕಿಪೀಡಿಯಾದಲ್ಲಿ ಡ್ರಾಫ್ಟ್ ನೇಮ್ ಸ್ಪೇಸ್ ಪ್ರಾರಂಭಿಸಿದ್ದಾರೆ. ಇದನ್ನು ಕನ್ನಡ ವಿಕಿಪೀಡಿಯಾದಲ್ಲೂ ಪ್ರಾರಂಭಿಸಬೇಕು. ಅದಕ್ಕಾಗಿ ನಿಮ್ಮ ಸಲಹೆಗಳನ್ನು ಕೊಡಬೇಕೆಂದು ವಿನಂತಿ.--ಅನಂತ್ (ಚರ್ಚೆ) ೦೭:೪೦, ೪ ಫೆಬ್ರುವರಿ ೨೦೧೬ (UTC)

checkY ಒಪ್ಪಿಗೆ ಇದೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೩:೨೮, ೫ ಫೆಬ್ರುವರಿ ೨೦೧೬ (UTC)
checkY ಒಪ್ಪಿಗೆ ಇದೆ.--Vikas Hegde (ಚರ್ಚೆ) ೧೩:೪೨, ೫ ಫೆಬ್ರುವರಿ ೨೦೧೬ (UTC)
checkY ಒಪ್ಪಿಗೆ ಇದೆ.----ಕೆ.ಸೌಭಾಗ್ಯವತಿ (ಚರ್ಚೆ) ೧೪:೩೧, ೫ ಫೆಬ್ರುವರಿ ೨೦೧೬ (UTC)
checkY ಒಪ್ಪಿಗೆ ಇದೆ.-Pavanaja (ಚರ್ಚೆ) ೧೬:೨೮, ೫ ಫೆಬ್ರುವರಿ ೨೦೧೬ (UTC)
checkY --ರಹಮಾನುದ್ದೀನ್ (ಚರ್ಚೆ) ೦೬:೦೩, ೬ ಫೆಬ್ರುವರಿ ೨೦೧೬ (UTC)
checkY ಒಪ್ಪಿಗೆ ಇದೆ. ಈ ನೇಮ್‍ಸ್ಪೇಸ್ ಬಗೆಗಿನ ವಿವರಗಳು ಎಲ್ಲಿವೆ? ಯಾವ ಬಗೆಯ ಸಲಹೆಗಳು? --ವಿಶ್ವನಾಥ/Vishwanatha (ಚರ್ಚೆ) ೧೭:೫೨, ೬ ಫೆಬ್ರುವರಿ ೨೦೧೬ (UTC)
ವಿಶ್ವನಾಥ/Vishwanatha, ಮೇಲೆ ಮೂಲ ವಿಷಯ ಪ್ರಸ್ತಾಪದಲ್ಲಿ 'ಇಂಗ್ಲೀಷ್' ಎಂದಿರುವ ಕಡೆ ಹೈಪರ್ ಲಿಂಕ್ ಕ್ಲಿಕ್ಕಿಸಿದರೆ ವಿವರಗಳಿಗೆ ಕೊಂಡೊಯ್ಯುತ್ತದೆ.--Vikas Hegde (ಚರ್ಚೆ) ೧೪:೦೧, ೭ ಫೆಬ್ರುವರಿ ೨೦೧೬ (UTC)
checkY Support following the discussion with Kannada Wikipedians today. I feel this is going to help them. --Titodutta (ಚರ್ಚೆ) ೨೧:೨೨, ೭ ಫೆಬ್ರುವರಿ ೨೦೧೬ (UTC)
checkY ಒಪ್ಪಿಗೆ ಇದೆ.--Madhusarthij (ಚರ್ಚೆ) ೦೪:೧೦, ೧೩ ಫೆಬ್ರುವರಿ ೨೦೧೬ (UTC)
checkY ಒಪ್ಪಿಗೆ ಇದೆ.G Shreeraj (ಚರ್ಚೆ) ೧೮:೦೬, ೧೩ ಫೆಬ್ರುವರಿ ೨೦೧೬ (UTC)
checkY ಒಪ್ಪಿಗೆ ಇದೆ ಭವಾನಿ ಸಿ (ಚರ್ಚೆ) ೦೩:೦೮, ೧೪ ಫೆಬ್ರುವರಿ ೨೦೧೬ (UTC)

The visual editor is coming to this wiki[ಬದಲಾಯಿಸಿ]

Hello. Please excuse the English. ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ. ಧನ್ಯವಾದಗಳು!

Hi everybody,

My name is Erica, and I am a Community Liaison at the Wikimedia Foundation. I'm here to let you know that the visual editor is coming to editors at this Wikipedia soon. It allows people to edit Wikipedia articles as if they were using word processing software.

You don't have to wait until the deployment to test it; you can test the visual editor right now. To turn it on, select "ಬೀಟಾ" in your preferences. Choose "ದೃಶ್ಯ ಸಂಪಾದಕ" and click save. When it is enabled, you will press the "ಸಂಪಾದಿಸಿ" button to edit an article in the new software. To use the wikitext editor, you can press "ಮೂಲವನ್ನು ಸಂಪಾದಿಸು".

After the deployment, everyone will automatically have the option to use either the visual editor or the current wikitext editor. For more information about how to use the visual editor, see mw:Help:VisualEditor/User guide.

More information about preparing for the visual editor is posted here.

Thank you, and happy editing! --Elitre (WMF) (talk) ೧೮:೨೯, ೫ ಫೆಬ್ರುವರಿ ೨೦೧೬ (UTC)

ಸಿಐಎಸ್-ಎ೨ಕೆ ಪ್ರೋಗ್ರಾಂ ಅಸೋಸಿಯೇಟ್ ಮಾಡಬೇಕಾಗಿರು ಕೆಲಸಗಳು[ಬದಲಾಯಿಸಿ]

ನಾನು ಮಾಡಿರುವ ಕೆಲಸದ ವರದಿ ಕೊಡುವುದರಲ್ಲಿ ವಿಫಲನಾಗಿದ್ದೇನೆ. ಅದ್ದಕಾಗಿ ನಾನು ಕ್ಷಮೆ ಕೊರುತ್ತೇನೆ. ನಾನು ಮಾಡಬೇಕಾಗಿರುವ ಕೆಲಸದ ಪಟ್ಟಿ ಕೊಡಬೇಕೆಂದು ಸಮುದಾಯದಲ್ಲಿ ಕೋರುತ್ತೇನೆ.--ಅನಂತ್ (ಚರ್ಚೆ) ೧೪:೨೧, ೭ ಫೆಬ್ರುವರಿ ೨೦೧೬ (UTC)

  • ಡಿಸೆಂಬರ್ ನಿಂದ ಫೆಬ್ರುವರಿ ೭ರವರೆಗೆ ನಾನು ಮಾಡಿರುವ ಕೆಲಸಗಳ ಪಟ್ಟಿ ಇಲ್ಲಿದೆ --ಅನಂತ್ (ಚರ್ಚೆ) ೧೧:೩೬, ೮ ಫೆಬ್ರುವರಿ ೨೦೧೬ (UTC)
  • ಇದರಲ್ಲಿ ವಿಫಲತೆ ಏನು? ವರದಿ ಕೊಡಲು ಕಾಲಮಿತಿ ಏನಾದರೂ ಇದೆಯೇ? ಇದ್ದರೆ ಅದು ಎಷ್ಟು ಅವಧಿ? ಪ್ರೋಗ್ರಾಮ್ ಅಸೋಸಿಯೇಟ್ ಅವರ ಕೆಲಸಗಳನ್ನು ವಿಕಿಸಮ್ಮಿಲನ, ವಿಕಿ ಸಂಪಾದನೋತ್ಸವಗಳು, ಪೋಟೋನಡಿಗೆ, ವರ್ಷಾಚರಣೆಯ ತಯಾರಿ ಮುಂತಾದ ಚಟುವಟಿಕೆಗಳಲ್ಲಿ ಪಾಲ್ಗೊಂಡ/ಪಾಲ್ಗೊಳ್ಳುತ್ತಿರುವ ಸಮುದಾಯದ ಸದಸ್ಯರು ಖುದ್ದಾಗಿ ನೋಡಿದ್ದಾರೆ. ಸಮುದಾಯ ವರದಿಗಾಗಿ ಒತ್ತಡ ಹಾಕಿಲ್ಲ ಅಂದುಕೊಂಡಿದ್ದೇನೆ. ಆದಾಗ್ಯೂ ವರದಿ ಕೊಡುವುದು ಕರ್ತವ್ಯವಾಗಿದ್ದಲ್ಲಿ ಕಾಲಾವಕಾಶವಾದಾಗ ಕೊಡಬಹುದಲ್ಲ. ಪ್ರೋಗ್ರಾಮ್ ಅಸೋಸಿಯೇಟ್ ಅವರು ವಿಕಿಸಮುದಾಯದ ಚಟುವಟಿಕೆಗಳನ್ನು ಇನ್ನೂ ಹೆಚ್ಚಿಸುವ ಪ್ರಯತ್ನ ಹಾಗೂ ಸಂಪಾದನೋತ್ಸವ, ಕಾರ್ಯಾಗಾರಗಳ ನಂತರ ಹೊಸದಾಗಿ ಸೇರಿದ ಸಂಪಾದಕರ followup, ಸಹಾಯ, ಮಾರ್ಗದರ್ಶನ ಮಾಡಬಹುದು ಎಂದು ನನ್ನನಿಸಿಕೆ. --Vikas Hegde (ಚರ್ಚೆ) ೦೫:೦೭, ೮ ಫೆಬ್ರುವರಿ ೨೦೧೬ (UTC)