ಸದಸ್ಯ:Ashwillobo

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಪರಿಚಯ[ಬದಲಾಯಿಸಿ]

ನನ್ನ ಹೆಸರು ಅಶ್ವಿಲ್ ಜೋಸ್ಮನ್ ಲೋಬೊ.ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮೂರನೇಯ ವರುಷದ ವಾಣಿಜ್ಯ ಅಧ್ಯಯನವನ್ನು ಮಾಡುತ್ತಿದ್ದೇನೆ. ನಾನು ಜೆಸ್ವಿಟ್ ಎಂಬ ಗುರು ತರಬೇತಿಯಲ್ಲಿ ಇದ್ದು ಮುಂದೆ ಸಮಾಜೋದ್ದಾರಕ್ಕಾಗಿ ದುಡಿಯಬೇಕೆಂದು ಆಶಿಸಿದ್ದೇನೆ. ಮಂಗಳೂರಿನ ಪಂಪ್ವೆಲ್ ನ ಹತ್ತಿರವಿರುವ "ಆಶಾಕಿರಣ" ಎಂಬ ಮನೆಯಲ್ಲಿ ನಾನು ವಾಸವಾಗಿದ್ದೇನೆ. ಇಲ್ಲಿ ನನ್ನ ಹಾಗೆ ೪೦ ಕ್ಕಿಂತ ಅಧಿಕ ವಿಧ್ಯಾರ್ತಿಗಳು ಅವರ ತರಬೇತಿಯನ್ನು ಪಡೆಯುತ್ತಿದ್ದಾರೆ.

ನನ್ನ ಸ್ವಂತ ಊರು ಚಿಕ್ಕಮಗಳೂರು ಜಿಲ್ಲೆಗೆ ಸೇರಿದ ಕೊಪ್ಪ ತಾಲೂಕು ಆಗಿದೆ. ನಾನು ನನ್ನ ಎಲ್ಲಾ ಕಿರಿಯ ಹಾಗು ಪ್ರೌಢ ವಿಧ್ಯಾಭ್ಯಾಸವನ್ನು ಮಾಡಿದ್ದು ಇಲ್ಲಿಯೆ. ತದನಂತರದ ಎಲ್ಲಾ ವಿಧ್ಯಾಭ್ಯಾಸವನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮಾಡಿದ್ದೇನೆ. ನನ್ನ ಮುಖ್ಯವಾದ ಎರಡು ಪ್ರೀಯವಾದ ಹವ್ಯಾಸವೆಂದರೆ ಮ್ಯೂಸಿಕ್ ಹಾಗು ಬುಟ್ಟಿ ಚೆಂಡು ಆಟ. ಇದರ ನಡುವೆ ಲೇಖನವನ್ನೂ ಕೂಡ ಬರೆಯುತ್ತೇನೆ. ಕಾದಂಬರಿಯನ್ನು ಓದುವುದು ಹಾಗು ಕ್ರಿಯಾತ್ಮಕ ಲೇಖನವನ್ನು ಬರೆಯುವುದು ನನ್ನ ಒಂದು ಮುಖ್ಯ ಹವ್ಯಾಸವಾಗಿದೆ.