ವಿಷಯಕ್ಕೆ ಹೋಗು

ವಿಕಿಪೀಡಿಯ ಚರ್ಚೆಪುಟ:ಸಮ್ಮಿಲನ/೧೯

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇವುಗಳು ಚರ್ಚಾ ಪುಟದಲ್ಲಿದ್ದರೇ ಒಳ್ಳೆಯದು. ಆದುದರಿಂದ ಅವುಗಳನ್ನು ಸಮ್ಮಿಲನ ಪುಟದಿಂದ ಚರ್ಚಾ ಪುಟಕ್ಕೆ ಸ್ಥಳಾಂತರಿಸಿದ್ದೇನೆ-Pavanaja (ಚರ್ಚೆ) ೧೪:೫೭, ೭ ಸೆಪ್ಟೆಂಬರ್ ೨೦೧೫ (UTC)

  • ಕನ್ನಡ ವಿಕಿಪೀಡಿಯಕ್ಕೆ ಹಲವಾರು ಉಪಯುಕ್ತ ಲೇಖನಗಳನ್ನು ಸೇರಿಸಿ, ಹೊಸ ಮೆರುಗನ್ನು ಕೊಟ್ಟು ಜನಪ್ರಿಯ ಮಾಡುತ್ತಿರುವ ಎಲ್ಲ ಗೆಳೆಯ ಗೆಳತಿಯರಿಗೂ ನನ್ನ ಅಭಿಮಾನಪೂರ್ವಕ ನಮಸ್ಕಾರಗಳು. ನನಗೆ ಬರಲು ಆಶೆ. ಆದರೆ ಮನೆಯ, ಆರೋಗ್ಯದ ಸಮಸ್ಯೆಗಳು ಹಲವು. ನಿಮ್ಮ ಕಮ್ಮಟ/ಸಮ್ಮಿಲನದಲ್ಲಿ ಹೊಸ ಹೊಸ ಸಕ್ರಿಯ ಮತ್ತು ಪ್ರಗತಿಶೀಲ ವಿಷಯಗಳು ಚಿಮ್ಮಿ ಬರಲಿ. ವಿಕಿಪೀಡಿಯ ಹಣೆಯ ಬರಹ ಪಟ್ಟಿ ಬಾವುಟಗಳು ಇಲ್ಲದೆ ಅವೆಲ್ಲಾ ಸಂಪೂರ್ಣ ಲೇಖನಗಳ ದರ್ಜೆಯನ್ನು ಪಡೆಯಲಿ. ನಿರ್ವಾಹಕರು ಸಕ್ರಿಯರಾಗಿ ಒಂದು ಹಣೆಪಟ್ಟಿ ಅಂಟಿಸಿ ಸುಮ್ಮನಾಗುವ ದಿನಗಳು ಮುಗಿಯಲಿ. ಅವರಲ್ಲಿ ಕರ್ತವ್ಯಪ್ರಜ್ಞೆ ಮತ್ತು ಮುಂದಾಲೋಚನೆಗಳು ಒಡಮೂಡಲಿ. ಈ ದಿಶೆಯಲ್ಲಿ ದೇವರು ಅವರಿಗೆ ಸದ್ಬುದ್ಧಿ ದಯಪಾಲಿಸಲಿ. ಲೇಖನಗಳ ಪೂರ್ಣರೂಪ ಮುಖ್ಯ. ಸಾಮಾನ್ಯವಾಗಿ ವಿಕಿಪೀಡಿಯದ ಲೇಖಕರು ಅಂತಹ ಪ್ರಾವೀಣ್ಯತೆಯನ್ನು ಹೊಂದಿರುವುದಿಲ್ಲ. ಅದನ್ನು ಹೆಚ್ಛಾಗಿ ಅಪೇಕ್ಷಿಸುವುದೂ ಸರಿಯಲ್ಲ.-(suMkadavar ೦೬:೪೩, ೨ ಸೆಪ್ಟೆಂಬರ್ ೨೦೧೫ (UTC))


  1. ಈಗ ನಾನು ವಿಕಿಪೀಡಿಯಾಕ್ಕೆ ಲೇಖನ ಹಾಕುವುದನ್ನೂ ನಿಲ್ಲಿಸಿದ್ದೇನೆ; - ಕಾರಣ, ನಾನು ಕನ್ನಡ-ವಿಕಿಪೀಢಿಯಾಕ್ಕೆ ಕೆಲಸ ಮಾಡುತ್ತಿದ್ದಂತೆಯೇ, ನನ್ನ ಕೋರಿಕೆಯನ್ನು ತಿರಸ್ಕರಿಸಿ , ನನ್ನ ಹೆಸರನ್ನು ಬೇರೆಯವರಿಗೆ ಲಿಂಕ್ ಮಾಡಿದ್ದರಿಂದ, ಬೇಸರವಾಗಿ, ಕನ್ನಡ ವಿಕಿಪೀಡಿಯಾಕ್ಕೆ ಬರೆಯುತ್ತಿಲ್ಲ ಆ ತಾಣವನ್ನು ರದ್ದುಮಾಡಲು ಕೇಳಿದರೆ ರದ್ದುಮಾಡಬೇಕು. ಹಾಗೆ ಮಾಡದೆ ಇರವುದು ನನ್ನ ಮನಸ್ಸಿಗೆ ನೋವುಂಟುಮಾಡಿದೆ. ನಿರ್ವಾಹಕರಿಗೆ ಯಜಮಾನಿಕೆ - ಕೆಲಸಗಾರರ (snobbism) ಭಾವನೆಯಿದ್ದಂತೆ ನನಗೆ ಕಂಡಿದೆ.) .) ನೋಡಿ: ಚರ್ಚೆ
  2. ನಾನು ಸುಮಾರು 3000 ಪುಟಗಳ 350 ಕ್ಕೂ ಹೆಚ್ಚು ಲೇಖನಗಳನ್ನು ಯಾವ ಪ್ರತಿಫಲಾಪೇಕ್ಷೆಯಿಲ್ಲದೆ ಕನ್ನಡ-ವಿಕಿಗೆ ಹಾಕಿದ್ದೇನೆ - - ಸದಸ್ಯ:Bschandrasgr ವಿಕಿ-ನಿರ್ವಾಹಕರಿಗೆ “ವಿಕಿಪೀಡಿಯಾ ಅಭಿವೃದ್ಧಿಗಿಂತ” ಅವರ ಪ್ರಿಸ್ಟೀಜ್ (ಅಹಮಿಕೆಯೇ) ಹೆಚ್ಚಿನದಾಗಿರುವಂತೆ ನನಗೆ ತೋರುವುದು.
  3. ಇತ್ತೀಚೆಗೆ ತರಬೇತಿಹೊಂದಿದ ಮತ್ತು ಇತರೆ ಸದಸ್ಯರು ಹಾಕುತ್ತಿರುವ ಲೇಖನಗಳಿಗೆ ಒಂದಕ್ಕೂ ಉಲ್ಲೇಖ ಅಥವಾ ಆಧಾರ , ವರ್ಗ ಹಾಕುತ್ತಿಲ್ಲ -ಹೊಸ ಸದಸ್ಯರಿಗೆ ನಿರ್ದೇಶನ/ಸಲಹೆ ನೀಡುವ ಸದಸ್ಯರ ಚರ್ಚೆ ಪುಟದಲ್ಲಿ ಎಲ್ಲಿಯೂ ಆಧಾರ / ಉಲ್ಲೇಖವನ್ನು ಹಾಕಲೇಬೇಕೆಂಬ ಸೂಚನೆ ಇದ್ದಂತೆ ಕಾಣಲಿಲ್ಲ. ಅದರಿಂದ ಹೊಸಬರಿಗೆ ಲೇಖನಕ್ಕೆ ಆಧಾರ ಹಾಕಲು ಒತ್ತಡವಿಲ್ಲ. ಅನುಭವಿಗಳ ಕೆಲವು ಲೇಖನಗಳಿಗೂ ಉಲ್ಲೇಖ ಹಾಕದೆ ಇರುವುದು ಇದೆ. ಇದನ್ನು ನಾನು ವಿಕಿಪೀಡಿಯಾ ಅಭಿವೃದ್ಧಿಯ ದೃಷ್ಟಿಯಿಂದ ಮಾತ್ರಾ ಹೇಳುತ್ತಿದ್ದೇನೆ -ಅನ್ಯಥಾ ಭಾವಿಸಬಾರದು.
  4. ಶ್ರೀ ರಾಧಾತನಯರು ಮೇಲೆ ಹೇಳಿದಂತೆ - -“ನಿರ್ವಾಹಕರು ಸಕ್ರಿಯರಾಗಿ ಒಂದು ಹಣೆಪಟ್ಟಿ ಅಂಟಿಸಿ ಸುಮ್ಮನಾಗುವ ದಿನಗಳು ಮುಗಿಯಲಿ. ಅವರಲ್ಲಿ ಮುಂದಾಲೋಚನೆಗಳು ಒಡಮೂಡಲಿ. ಈ ದಿಶೆಯಲ್ಲಿ ದೇವರು ಅವರಿಗೆ ಸದ್ಬುದ್ಧಿ ದಯಪಾಲಿಸಲಿ”. ಅವರಿಂದ ಮಾದರಿಯ ಲೇಖನಗಳು ಬರಲಿ. ನಿರ್ವಾಹಕರಾದ ಶ್ರೀ ಪಾಲಗಿರಿಯವರು ಮಾತ್ರಾ ತೆಲಗು ಭಾಷೆಯವರಾದರೂ ಅನೇಕ ಉತ್ತಮ ಲೇಖನಗಳನ್ನೂ ಹಾಕಿ ಹೊಸಬರ ಲೇಖನಕ್ಕೆ ಫೋಟೋಗಳನ್ನೂ -ವರ್ಗಗಳನ್ನೂ ಅವರೇ ಹಾಕಿ ಹೊಸಬರಿಗೆ ಮಾರ್ಗದರ್ಶನ ಮಾಡುತ್ತಿರುವುದು ಶ್ಲಾಘನೀಯ. ಕನ್ನಡ ವಿಕಿ ಅಭಿವೃದ್ಧಿಪಡಿಸುತ್ತಿರುವುದಕ್ಕಾಗಿ ಅವರಿಗೆ ನನ್ನ ವಿಶೇಷ ಧನ್ಯವಾದಗಳು.
  5. ಶುಭವಾಗಲಿ ! ! ಸದಸ್ಯ:Bschandrasgr/ಚರ್ಚೆ

ಸಮ್ಮಿಲನದಲ್ಲಿ ಭಾಗವಹಿಸಿದ ವಿಕಿಪೀಡಿಯನ್ನರ ಪ್ರವಾಸ ಭತ್ಯೆ ವಿಷಯವಾಗಿ

[ಬದಲಾಯಿಸಿ]

ಸಮ್ಮಿಲನದಲ್ಲಿ ಭಾಗವಹಿಸಿದ ಇತರೆ ಜಿಲ್ಲೆಗಳ ವಿಕಿಪೀಡಿಯನ್ನರನ್ನು ಕಂಡು, ಮಾತನಾಡಿ ಮಾಹಿತಿ ವಿನಿಮಯ ಮಾಡಿಕೊಂಡದ್ದು ಸಂತಸದ ವಿಷಯವಾಗಿತ್ತು. ಅವರು ಶ್ರದ್ಧೆಯಿಂದ ಬೆಂಗಳೂರಿಗೆ ಬಂದು, ಸಮ್ಮಿಲನದಲ್ಲಿ ಭಾಗವಹಿಸಿದ್ದು ಕನ್ನಡ ವಿಕಿಪೀಡಿಯ ಸಮುದಾಯ ಬೆಳೆಯುತ್ತಿರುವುದರ ಸಂಕೇತವಾಗಿದೆ. ಬೇರೆ ಜಿಲ್ಲೆಗಳಿಂದ ಇಂತಹ ಕಾರ್ಯಕ್ರಮಕ್ಕೆ ಬಂದು ಹೋಗುವವರಿಗೆ ಕಾರ್ಯಕ್ರಮ ಆಯೋಜಿಸಿದ್ದ ಸಿ.‌ಐ.ಎಸ್‌ನ ಆಕ್ಸೆಸ್ ಟು ನಾಲೆಡ್ಜ್ ತಂಡ ಪ್ರವಾಸ ಭತ್ಯೆಯನ್ನು ನೀಡಿ ಪ್ರೋತ್ಸಾಹಿಸಬಹುದು. ಇದರ ಬಗ್ಗೆ ಎಲ್ಲೂ ಪ್ರಸ್ತಾಪಿಸದಿದ್ದದ್ದು ಕಂಡು ಈ ಚರ್ಚೆಯನ್ನು ಪ್ರಾರಂಭಿಸುತ್ತಿದ್ದೇನೆ. ಸಿ.‌ಐ.ಎಸ್ ಎ೨ಕೆ ಯ ಪ್ರಣಾಳಿಕೆಯಲ್ಲಿ ಸಮುದಾಯ ಸಹಭಾಗಿತ್ವ, ಸಮ್ಮಿಲನಗಳಿಗೆ ಬೇಕಿರುವ ಸಂಪನ್ಮೂಲಗಳ ಬಳಕೆಗೆಂದೇ ಹಣವನ್ನು ಮೀಸಲಿರಿಸಲಾಗಿದೆ ಇದನ್ನು ಸಮುದಾಯದ ಎಲ್ಲರೂ ಸದ್ವಿನಿಯೋಗ ಮಾಡಿಕೊಳ್ಳಲು ಮುಂದೆ ಬರಬೇಕು. ಜೊತೆಗೆ ಈಗಾಗಲೇ ಈ ರೀತಿ ಭತ್ಯೆಗಳನ್ನು ಸಿ.‌ಐ.ಎಸ್ ಎ೨ಕೆ ತಂಡ ನೀಡುತ್ತಿದ್ದಲ್ಲಿ ಅದನ್ನು ಆಯಾ ಕಾರ್ಯಕ್ರಮ ಪಟ್ಟಿಗಳಲ್ಲಿ ಸಾರ್ವಜನಿಕವಾಗಿ ಪ್ರಕಟಿಸಬೇಕು. ಸಂಬಂಧಪಟ್ಟವರು ಇದರತ್ತ ಗಮನ ಹರಿಸುವುದು. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೦೮:೨೦, ೨೦ ಸೆಪ್ಟೆಂಬರ್ ೨೦೧೫ (UTC)

ಹೌದು. ಸಿ.‌ಐ.ಎಸ್ ಎ೨ಕೆ ಯ ಪ್ರಣಾಳಿಕೆಯಲ್ಲಿ ಸಮುದಾಯ ಸಹಭಾಗಿತ್ವ, ಸಮ್ಮಿಲನಗಳಿಗೆ ಬೇಕಿರುವ ಸಂಪನ್ಮೂಲಗಳ ಬಳಕೆಗೆಂದೇ ಹಣವನ್ನು ಮೀಸಲಿರಿಸಲಾಗಿದೆ. ಹಿಂದಿನ ಸಮ್ಮಿಲನದಲ್ಲಿ ಹೊರನಾಡಿನಿಂದ ಬಂದು ಭಾಗವಹಿಸಿದವರಿಗೆ ಪ್ರಯಾಣಭತ್ಯೆ, ಬೆಂಗಳೂರಿನಲ್ಲಿ ಅರ್ಧ ದಿನಕ್ಕೆ ವಾಸ್ತವ್ಯ ಎಲ್ಲ ಏರ್ಪಾಡು ಮಾಡಲಾಗಿತ್ತು. ಈ ಸಮ್ಮಿಲನಕ್ಕೂ ಹಾಗೆಯೇ ಮಾಡಲಾಗಿದೆ. ಹೊರನಾಡಿನಿಂದ ಬಂದು ಭಾಗವಹಿಸಿದ ಎಲ್ಲರಿಗೂ ಪ್ರಯಾಣಭತ್ಯೆ ನೀಡಲಾಗುವುದು.--Pavanaja (ಚರ್ಚೆ) ೧೬:೩೬, ೨೦ ಸೆಪ್ಟೆಂಬರ್ ೨೦೧೫ (UTC)
ಅರಳಿಕಟ್ಟೆ - ವಿಕಿಪೀಡಿಯ ಚರ್ಚೆ:ಸಮ್ಮಿಲನ/೧೯ - ಪ್ರವಾಸ ಭತ್ಯೆ ಚರ್ಚೆ ಇಲ್ಲಿ ಚರ್ಚೆಯನ್ನು ಮುಂದುವರೆಸಲಾಗಿದೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೬:೫೨, ೨೦ ಸೆಪ್ಟೆಂಬರ್ ೨೦೧೫ (UTC)