ಕಟೇನಿಯ
Catania | |
---|---|
Comune di Catania | |
Country | Italy |
Region | Sicily |
Province | Catania (CT) |
Frazioni | San Giovanni Galermo |
Government | |
• Mayor | Enzo Bianco (PD) |
Area | |
• Total | ೧೮೦.೮೮ km೨ (೬೯.೮೪ sq mi) |
Elevation | ೭ m (೨೩ ft) |
Population (31 December 2013) | |
• Total | ೩,೧೫,೫೭೬ |
• Density | ೧,೭೦೦/km೨ (೪,೫೦೦/sq mi) |
Demonym | Catanesi |
Time zone | UTC+1 (CET) |
• Summer (DST) | UTC+2 (CEST) |
Postal code | 95100 |
Dialing code | 095 |
Patron saint | St. Agatha |
Saint day | February 5 |
Website | Official website |
ಕಟೇನಿಯ ಇಟೆಲಿ ದೇಶದ ಸಿಸಿಲಿಯ ಒಂದು ನಗರ. ಇದೇ ಹೆಸರಿನ ಪ್ರಾಂತ್ಯದ ರಾಜಧಾನಿ. ಐಯೋನಿಯನ್ ಸಮುದ್ರತೀರದ ವಿಸ್ತಾರವಾದ ಮೈದಾನದಲ್ಲಿ ಎಟ್ನ ಅಗ್ನಿಪರ್ವತಕ್ಕೆ 27 ಕಿಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ 13.1 ಮೀ ಗಳ ಎತ್ತರದಲ್ಲಿದೆ. ಜನಸಂಖ್ಯೆ 291,274 (2011). ಅಗ್ನಿಪರ್ವತಗಳು ಚಿಮ್ಮಿದ ಶಿಲಾ ಪ್ರವಾಹ ಆರಿ ಸಂಭವಿಸಿದ ಚಿಪ್ಪಿನ ಮೇಲೆ ಕಟೇನಿಯ ನಿಂತಿದೆ. ನೆಲ ಉತ್ತರದಿಂದ ದಕ್ಷಿಣಕ್ಕೆ ಇಳಿಜಾರು. ಇಲ್ಲಿಯ ವಾಯುಗುಣ ಸುಖೋಷ್ಣ, ಹಿತಕರ.
11ನೆಯ ಜನವರಿ 1693ರಂದು ಸಂಭವಿಸಿದ ಭೂಕಂಪದಲ್ಲಿ ಈ ನಗರ ಸಂಪುರ್ಣವಾಗಿ ನೆಲಸಮವಾಗಿತ್ತು. ಮತ್ತೆ ಇದನ್ನು ನಕ್ಷೆಗೆ ಅನುಗುಣವಾಗಿ ಕಟ್ಟಲಾಯಿತು. ಆದ್ದರಿಂದ ಈ ನಗರದ ನಡುಭಾಗದ ವಿಶಾಲ ಬೀದಿಗಳ ಆಚೀಚೆ ಚರ್ಚುಗಳೂ ಅರಮನೆಗಳೂ ಇದ್ದು 18ನೆಯ ಶತಮಾನವನ್ನೇ ನೆನಪಿಗೆ ತರುತ್ತವೆ. ಇದು ಕ್ರೈಸ್ತ ಮಠಾಧಿಪತಿಯ ಸ್ಥಾನ. ಆಧುನಿಕ ಕಟೇನಿಯ ಕೈಗಾರಿಕೆಯ ಮತ್ತು ಸರಕು ಸಾಗಾಣಿಕೆಯ ಕೇಂದ್ರ. ಪಲರ್ಮೋ, ಮೆಸೀನ ಮತ್ತು ಸಿರಕಸ್ಗಳಿಗೆ ಇಲ್ಲಿಂದ ರೈಲ್ವೆ ಸಂಪರ್ಕವಿದೆ. ಇದು ಇಟಲಿಯ ಪ್ರಮುಖ ಬಂದರುಗಳಲ್ಲೊಂದು. ಬಳಿಯಲ್ಲೆ ವಿಮಾನ ನಿಲ್ದಾಣವು ಉಂಟು. ಆಹಾರ ಸಂಸ್ಕರಣ, ಯಂತ್ರ ಮತ್ತು ರಾಸಾಯನಿಕ ಪದಾರ್ಥ ತಯಾರಿಕೆ ಇಲ್ಲಿಯ ಮುಖ್ಯ ಕೈಗಾರಿಕೆಗಳು. ಮೀನುಗಾರಿಕೆಯೂ ಒಂದು ಕಸಬು. ಸಿಸಿಲಿಯ ಶುದ್ಧ ಗಂಧಕದ ಒಟ್ಟು ಉತ್ಪಾದನೆಯಲ್ಲಿ ಅರ್ಧಭಾಗ ಕಟೇನಿಯ ಕಾರ್ಖಾನೆಗಳಿಂದಲೇ ಹೊರಬರುತ್ತದೆ. ಈ ನಗರದ ಸುತ್ತಲೂ ಕೃಷಿ ಕ್ಷೇತ್ರಗಳಿರುವುದರಿಂದ ಇದು ವ್ಯವಸಾಯೋತ್ಪನ್ನದ ಮಾರುಕಟ್ಟೆಯೂ ಆಗಿದೆ. ಬಾದಾಮಿ ಮತ್ತು ಕಿತ್ತಳೆಹಣ್ಣು ಇಲ್ಲಿಂದ ರಫ್ತಾಗುತ್ತವೆ.
6ನೆಯ ಶತಮಾನದಲ್ಲಿದ್ದ ಇಮರದ ಗ್ರೀಕ್ ಪದ್ಯಕಾರ ಕವಿ ಸ್ಟೆಸಿಕೊರಸನ ಸಮಾಧಿಯನ್ನು ಈ ನಗರದಲ್ಲಿ ಕಾಣಬಹುದು. ಕಟೇನಿಯದ ಸಾಂಸ್ಕೃತಿಕ ಚರಿತ್ರೆ ಆಗಲೇ ಆರಂಭವಾಯಿತೆನ್ನಬಹುದು. ಕಟೇನಿಯ ವಿಶ್ವವಿದ್ಯಾಲಯ ಸ್ಥಾಪಿತವಾದದ್ದು 1434ರಲ್ಲಿ-ಆರಗಾನಿನ ಆಲ್ಫಾಸೋವಿನಿಂದ, 1755ರಲ್ಲಿ ಸ್ಥಾಪಿತವಾದ ಇಲ್ಲಿಯ ಗ್ರಂಥಾಲಯದಲ್ಲಿ 14 ಮತ್ತು 15ನೆಯ ಶತಮಾನಗಳ ಅಮೂಲ್ಯ ಕೈಬರೆಹದ ಪ್ರತಿಗಳಿವೆ. ಇಲ್ಲಿಯ ಪೌರಸಭಾ ಗ್ರಂಥಾಲಯದಲ್ಲಿರುವ 14ನೆಯ ಶತಮಾನದ ಪೀಟ್ರೊ ಕವಲಿನಿ ಪಂಥದ ಅಲಂಕೃತಾಕ್ಷರದ ಬೈಬಲ್ ಗ್ರಂಥವೂ ಅನೇಕರ ಹಸ್ತಾಕ್ಷರಗಳೂ ಚರ್ಮ ಕಾಗದದ ಹಸ್ತಪ್ರತಿಗಳೂ ಇವೆ. ನಾರ್ಮ ಸಂಗೀತ ನಾಟಕವನ್ನು ರಚಿಸಿದ ವಿಂಜೆಂಸೆó ಬೆಲೀನಿ ಹುಟ್ಟಿದ್ದು ಕಟೇನಿಯದಲ್ಲಿ (1801). ಈತನ ಜನ್ಮಸ್ಥಳದಲ್ಲಿರುವ ವಸ್ತು ಸಂಗ್ರಹಾಲಯದಲ್ಲಿ ಇವನ ಶವದ ಹೊದಿಕೆಯನ್ನೂ ಈತನ ಹಾರ್ಪ್ಸಿಕಾರ್ಡ್ ತಂತಿ ವಾದ್ಯವನ್ನೂ ಇತರ ಸ್ಮಾರಕಗಳನ್ನೂ ಇಟ್ಟಿದ್ದಾರೆ. ಈತ ಸತ್ತ 40 ವರ್ಷಗಳ ಅನಂತರ 1835ರಲ್ಲಿ ಇವರ ಅವಶೇಷಗಳನ್ನು ಕಟೇನಿಯಕ್ಕೆ ತಂದು ಚರ್ಚಿನಲ್ಲಿ ಸಮಾಧಿ ಮಾಡಲಾಯಿತು. ಕವಿ ಮೇರಿಯೊ ರಾಪಿಸಾರ್ಡಿ, ಕಾದಂಬರಿಕಾರ ಗಯವನ್ನಿ ವೇರ್ಗ-ಇವರು ಕಟೇನಿಯದವರು.
2ನೆಯ ಶತಮಾನದ ರೋಮನ್ ವರ್ತುಲ ನಾಟಕಶಾಲೆ, ರೋಮನ್ ಸ್ನಾನ ಘಟ್ಟ ಮತ್ತು ಕಾಲುವೆಗಳ ಅವಶೇಷಗಳೂ 13ನೆಯ ಶತಮಾನದಲ್ಲಿ ಎರಡನೆಯ ಫ್ರೆಡರಿಕನಿಗಾಗಿ ನಿರ್ಮಿಸಲಾದ ದುರ್ಗವಾಗಿದ್ದು ಈಗ ವಸ್ತು ಸಂಗ್ರಹಾಲಯವಾಗಿರುವ ಕಟ್ಟಡವೂ ಇನ್ನೂ ಅನೇಕ ಕಟ್ಟಡಗಳೂ ಶಿಲ್ಪಗಳೂ ನಗರದಲ್ಲಿವೆ. ಶಿಲಾ ಪ್ರವಾಹದಲ್ಲಿ ಮುಚ್ಚಿಹೋಗಿರುವ, ಮೊದಲನೆಯ ರೋಜರ್ ನಿರ್ಮಿಸಿದ, ಚರ್ಚಿನ ಅವಶೇಷಗಳಿವೆ. 1693ರ ಭೂಕಂಪದ ಅನಂತರ ನಾರ್ಮನ್ ವಾಸ್ತುಶಿಲ್ಪಿಗಳಾದ ಫ್ರಾಫಿಯಾಲ್ಮೊ ಫಲಜೊಟೊ ಮತ್ತು ಗಿಯಾವನಿ ಬಟಿಸ್ಟವಕಾರಿನಿ (1702-68) ಇವರು ಇದನ್ನು ಪುನಃ ನಿರ್ಮಿಸಿದರು. ಸಂತ ಅಗಾಥ ಚರ್ಚಿನಲ್ಲಿ ಸಿಯ್ನಾದ ಗಯವನ್ನಿ ಬಾರ್ಟುಲೊ ನಿರ್ಮಿಸಿದ 14ನೆಯ ಶತಮಾನದ ಸಂತನ ಬೆಳ್ಳಿ ವಿಗ್ರಹ ಮತ್ತು ಅವಶೇಷಗಳನ್ನೊಳಗೊಂಡ ಕರಂಡ ಇವೆ. ಇವನ್ನು ಸಂತನ ಉತ್ಸವದ ದಿನ ಪ್ರದರ್ಶಿಸುತ್ತಾರೆ. ಬೆಲ್ಲೀನಿಯ ಸಮಾಧಿಯ ಹತ್ತಿರವೇ 17ನೆಯ ಶತಮಾನದ ಸಂತ ಅಗಾಥ ಚರ್ಚಿದೆ. 1736ರಲ್ಲಿ ನಿರ್ಮಿಸಲಾದ ಆನೆ ಕಾರಂಜಿಯನ್ನೂ ನಗರ ಸಭಾ ಮಂದಿರವನ್ನೂ ಕಾಣಬಹುದು.
ಸಿಸಿಲಿಯಲ್ಲೆ ದೊಡ್ಡದಾದ (17ನೆಯ ಶತಮಾನದ) ಸಂತ ನಿಕೊಲೊ ಚರ್ಚ್ 65ಮೀ ಎತ್ತರದ ಗೋಪುರದಿಂದ ಕಂಗೊಳಿಸುತ್ತದೆ. ಇದಕ್ಕೆ ಸೇರಿದ ಕ್ರೈಸ್ತ ಸಂನ್ಯಾಸಿ ಮಠ 14ನೆಯ ಶತಮಾನದಲ್ಲಿ ಪ್ರಾರಂಭವಾಗಿ ಮೂರು ಶತಮಾನಗಳ ಅನಂತರ ಪುರ್ಣಗೊಂಡಿತು. ಪ್ರಪಂಚದ ದೊಡ್ಡ ಮಠಗಳಲ್ಲಿ ಇದೂ ಒಂದು ಎಂದು ಇದನ್ನು ಹೊಗಳುತ್ತಾರೆ. 17ನೆಯ ಶತಮಾನದ ಮಾದರಿ ಇದು. 18ನೆಯ ಶತಮಾನದ ಸಂತ ಕಾರ್ಸಿರೆ ಚರ್ಚ್ 13ನೆಯ ಶತಮಾನದ ಬಿಷಪ್ ಆರಾಧನಾ ಮಂದಿರದ ಹೆಬ್ಬಾಗಿಲನ್ನೊಳಗೊಂಡಿದೆ. ಕಪ್ಪು ಲಾವಾ ಶಿಲೆಯಿಂದಲೂ ಬಿಳಿಯ ಸುಣ್ಣಕಲ್ಲಿನಿಂದಲೂ ಕಟ್ಟಿರುವ 18ನೆಯ ಶತಮಾನದ ಪೊರ್ಟಾ ಗರಿಬಾಲ್ಡಿ ಕಟ್ಟಡ ಬಲು ಆಕರ್ಷಕ.
ಚರಿತ್ರೆ
[ಬದಲಾಯಿಸಿ]ಕಟೇನಿಯಗರ ಪ್ರ.ಶ.ಪು 729ರಲ್ಲಿ ನ್ಯಾಕ್ಸಾನಿನ ಕ್ಯಾಲ್ಸಿಡಿಯನ್ ವಲಸೆಗಾರರಿಂದ ಸ್ಥಾಪಿತವಾಯಿತು. ಲ್ಯಾಟಿನಿನಲ್ಲಿ ಕಾಟಿನಮ್ ಎಂದರೆ ಜಲಾನಯನ ಭೂಮಿ. ಇದು ಕಟೇನಿಯದ ಭೌಗೋಳಿಕ ಸನ್ನಿವೇಶವನ್ನು ತಿಳಿಸುತ್ತದೆ. ಸಿರಕಸಿನ ಕ್ರೂರ ದೊರೆ ಒಂದನೆಯ ಹೈಯರೋ (ಪ್ರ.ಶ.ಪು 478-466) ಕಟೇನಿಯವನ್ನಾಕ್ರಮಿಸಿ ಇಲ್ಲಿಯವರನ್ನೆಲ್ಲ ಲಿರ್ಯೊಟನಿಗೆ ಸಾಗಿಸಿ 5,000 ಮಂದಿ ಸಿರಕಸ್ ಪ್ರಜೆಗಳನ್ನೂ 5,000 ಮಂದಿ ಫಿಲೊಫಿಯನ್ ಜನರನ್ನೂ ತಂದು ಪಟ್ಟಣದ ಹೆಸರನ್ನು ಎಟ್ನ ಎಂದು ಬದಲಿಸಿದ. ಪ್ರ.ಶ.ಪು 461ರಲ್ಲಿ ಇಲ್ಲಿಯ ಪ್ರಾಚೀನ ನಿವಾಸಿಗಳು ಪಟ್ಟಣವನ್ನು ಮತ್ತೆ ವಶಮಾಡಿಕೊಂಡು ಅದಕ್ಕೆ ಪುರ್ವದ ಹೆಸರನ್ನೇ ಇರಿಸಿದರು. ಕಟೇನಿಯ ಪ್ರ.ಶ.ಪು 415-413ರ ವರೆಗೆ ಅಥೆನ್ಸಿನ ಯುದ್ಧ ನೆಲೆಯಾಗಿ ಸಿರಕಸ್ ಜನರ ಯುದ್ಧಕ್ಕೆ ಸಹಾಯ ಮಾಡಿತು. 403ರಲ್ಲಿ ಡೆಯನಾಸಿಯಸ್ ಕಟೇನಿಯವನ್ನು ಕೊಳ್ಳೆ ಹೊಡೆದು, ಸ್ಥಳೀಯರನ್ನು ಕೈಸೆರೆ ಹಿಡಿದು ಅವರನ್ನು ಗುಲಾಮರಾಗಿ ಮಾಡಿ, ತನ್ನ ಕೂಲಿ ಸೈನಿಕರಿಗೆ ಇದನ್ನು ನೆಲೆ ಮಾಡಿಕೊಟ್ಟ. ಪ್ರ.ಶ.ಪು 263ರ ಮೊದಲನೆಯ ಪ್ಯುನಿಕ್ ಯುದ್ಧದಲ್ಲಿ ರೋಮನರು ಸಿಸಿಲಿಯ ಪಟ್ಟಣಗಳಲ್ಲಿ ಮೊದಲನೆಯದಾಗಿ ಇದನ್ನು ಆಕ್ರಮಿಸಿಕೊಂಡರು. ಪ್ರ.ಶ.ಪು 123ರಲ್ಲಿ ಎಟ್ನ ಪರ್ವತದ ಅಗ್ನಿಪರ್ವದಿಂದ ಆದ ನಷ್ಟವನ್ನು ರೋಮನರಿಗೆ ತುಂಬಿಕೊಡಲು ಕಟೇನಿಯದ ಜನ 10 ವರ್ಷ ತೆರ ಕೊಡಬೇಕಾಯ್ತು. 1ನೆಯ ಶತಮಾನದಲ್ಲಿ ಇದು ಮತ್ತೆ ಅಭಿವೃದ್ಧಿ ಹೊಂದಿತು. ಆದರೂ ಆಗಾಗ್ಗೆ ದಾಳಿಗೆ ಗುರಿಯಾಗುತ್ತಿತ್ತು. ಆಗಸ್ಟಸ್ ದೊರೆಯ ಕಾಲದಲ್ಲಿ ಇದು ರೋಮನರ ವಸಾಹತಾಯಿತು. ಸ್ಟ್ರಾಬೊ ಬರೆವಣಿಗೆಯಿಂದ ಮತ್ತು ಅನೇಕ ಶಾಸನಗಳಿಂದ ಕಟೇನಿಯ ಆಗ ಒಂದು ಪ್ರಮುಖ ನಗರವಾಗಿತ್ತೆಂದು ತಿಳಿಯುತ್ತದೆ. ಆಗ ಕಟೇನಿಯದ ಕ್ರೈಸ್ತರು ನಾನಾ ಚಿತ್ರಹಿಂಸೆಗಳಿಗೆ ಗುರಿಯಾಗಿದ್ದರು. ರೋಮನರ ಬಯಲುರಂಗಮಂದಿರ ನಾಶವಾಯಿತು. 251ರಲ್ಲಿ ಎಟ್ನ ಅಗ್ನಿಪರ್ವತದಿಂದ ನಷ್ಟವಾಯಿತು. ಬೈಜಾಂಟಿಯನರೂ ಅರಬೀಯರೂ ನಾರ್ಮನರೂ ಕಟೀನಿಯವನ್ನು ವಶಪಡಿಸಿಕೊಂಡಿದ್ದರು. 1170ರ ಭೂಕಂಪದಲ್ಲಿ ಪಟ್ಟಣ ನಾಶವಾಯಿತು. 1197ರಲ್ಲಿ 6ನೆಯ ಹೆನ್ರಿ ಪಟ್ಟಣವನ್ನು ಹಾಳುಗೆಡವಿದ. 13ನೆಯ ಮತ್ತು 14ನೆಯ ಶತಮಾನಗಳಲ್ಲಿ ಇದು ರಾಜಪ್ರತಿನಿಧಿಗಳ ವಾಸಸ್ಥಳವಾಯಿತು. ಡಿ ವಿಗೊ ಎಂಬ ರಾಜಪ್ರತಿನಿಧಿ 1552ರಲ್ಲಿ ಕೋಟೆ ಕಟ್ಟಿಸಿದ. 1669ರಲ್ಲಿ ಎಟ್ನದಿಂದ ಇದರ ಬಂದರಿನ ಮುಕ್ಕಾಲು ಭಾಗ ಮುಚ್ಚಿಹೋಯಿತು. ಪಟ್ಟಣ ಉಳಿಯಿತು. ಆದರೆ 1693ರಲ್ಲಿ ಪಟ್ಟಣವೂ ಉಳಿಯಲಿಲ್ಲ. ಕಟೇನಿಯ ಕಡಲುಗಳ್ಳರಿಂದ ಆಕ್ರಮಣಕಾರರಿಂದ ಮತ್ತು ರೋಗೋವದ್ರವಗಳಿಂದ ಕೆಲವು ಕಾಲ ನರಳಿತು. ಸಿಸಿಲಿಯಿಂದ ಬೇರ್ಪಟ್ಟು ಸ್ವತಂತ್ರ್ಯವಾಗಲು ಕಟೇನಿಯ ಹೋರಾಟ ನಡೆಸಿದ್ದು 1848ರಲ್ಲಿ. ಆದರೆ ಈ ದಂಗೆಯನ್ನು ಅಡಗಿಸಲಾಯಿತು.
ಎರಡನೆಯ ಮಹಾಯುದ್ಧದಲ್ಲಿ-1943 ಜುಲೈ 9ರಂದು-ಮಿತ್ರ ಸೇನೆಗಳು ಸಿಸಿಲಿಯಲ್ಲಿ ಬಂದಿಳಿದಾಗ ಕಟೇನಿಯ ಬಾಂಬ್ ದಾಳಿಗೆ ಗುರಿಯಾಗಬೇಕಾಯಿತು. 1943 ಆಗಸ್ಟ್ 5ರ ವರೆಗೆ ಜರ್ಮನರು ಬ್ರಿಟಷರನ್ನು ಇಲ್ಲಿ ತಡೆದು ಹೋರಾಟ ನಡೆಸಿದ್ದರು.
- Pages with non-numeric formatnum arguments
- Short description is different from Wikidata
- Articles containing Italian-language text
- Official website different in Wikidata and Wikipedia
- Pages using infobox settlement with unknown parameters
- Pages using infobox settlement with no coordinates
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ