ಸಮುದಾಯ ಮತ್ತು ಸಿಐಎಸ್-ಎ೨ಕೆ ನಡುವೆ ಸಂಪರ್ಕ-ಸೇತುವೆಯಂತೆ ಕೆಲಸ ಮಾಡುವುದು. (ದತ್ತಿಗಳ ಬೇಡಿಕೆಗಳನ್ನು ವಿಶ್ಲೇಷಿಸುವುದು, ಸಮ್ಮಿಲನ ಮತ್ತು ಇತರೆ ಕಾರ್ಯಕ್ರಮಗಳ ಉಸ್ತುವಾರಿ ಮತ್ತು ಇತರೆ ಕ್ರಿಯಾಯೋಜನೆಗಳ ಉಸ್ತುವಾರಿ)
ತಿಂಗಳ ಯೋಜನಾ ವರದಿ.
ತಿಂಗಳ ಐಆರ್‌ಸಿ ಸಮ್ಮಿಲನ, ಸುದ್ದಿಪತ್ರಿಕೆ, ಸಮ್ಮಿಲನ, ಹಾಗೂ ದಾಖಲೀಕರಣ.
ಐಇಜಿ ದತ್ತಿ ಪಡೆದವರ ಜೊತೆ ಕೆಲಸ ಮಾಡುವುದು, ಅವರಿಗೆ ಅಗತ್ಯ ಸಹಾಯ ನೀಡುವುದು, ಐಇಜಿ ಪ್ರಸ್ತಾವನೆ ತಯಾರಿಸುವುದು.
ಕನ್ನಡ ವಿಕಿಪೀಡಿಯ ಮತ್ತು ಸಮುದಾಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಗತ್ಯ ಪ್ರಚಾರ ಮತ್ತು ತಾಂತ್ರಿಕ ಬೆಂಬಲ.
ಪ್ರತಿ ಮೂರು ತಿಂಗಳುಗಳಿಗೆ ಒಮ್ಮೆ ಕೆಲಸದ ಪ್ರಗತಿಯ ವಿಶ್ಲೇಷಣೆ ನಡೆಸಲಾಗುವುದು.
ಸಿಐಎಸ್-ಎ೨ಕೆ ಪ್ರೋಗ್ರಾಮ್ ಡೈರೆಕ್ಟರ್ ಅವರ ನಿರ್ದೇಶನದಂತೆ ಆಗಾಗ ಇತರೆ ಕೆಲಸಗಳನ್ನು ಸೂಚಿಸಲಾಗುವುದು.
ನವೆಂಬರ್ ೩೦ರಿಂದ ಡಿಸೆಂಬರ್ ೩ರ ವರೆಗೂ ಸಿ.ಐ.ಎಸ್. ಕಚೇರಿಯಲ್ಲಿ ಪಿ.ಎ. ಓರಿಯಂಟೇಶನ್ ಕಾರ್ಯಕ್ರಮ ನಡೆದಿತ್ತು.ಅದರಲ್ಲಿ ಕಾರ್ಯಾಗಾರ ನಡೆಸುವುದು ಹೇಗೆ ಮತ್ತು ಸಮುದಾಯದ ಬೆಳವಣಿಗೆ ಮಾಡುವುದು ಹೇಗೆ ಎಂದು ತಿಳಿಸಿಕೊಟ್ಟರು.
ಡಿಸೆಂಬರ್ ೪ರಿಂದು ನಿರಂಜನ ಅವರ ಪುಸ್ತಕಗಳನ್ನು ಹುಡುಕಲು ಈ ಕೆಳಗಿನ ಗ್ರಂಥಾಲಯಗಳಿಗೆ ಭೇಟಿ ಕೊಟ್ಟೆ.
ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್ ಗ್ರಂಥಾಲಯ
ಬಿ.ಎಂ.ಶ್ರೀ ಪ್ರತಿಷ್ಟಾನ ಗ್ರಂಥಾಲಯ
ಕ್ರೈಸ್ಟ್ ಯೂನಿವರ್ಸಿಟಿ ಗ್ರಂಥಾಲಯ
ಹಳೆಯ ಪುಸ್ತಕದ ಅಂಗಡಿಗಳು
ಲೋಕಲ್ ಬುಕ್ ಫೇರ್ಸ್
ಕೆಲವು ಪುಸ್ತಕಗಳನ್ನು ನಿರಂಜನ ಅವರ ಮಗಳಾದ ತೇಜಸ್ವಿನಿ ನಿರಂಜನ ಅವರಿಂದ ಪಡೆಯಲಾಗಿದೆ.ಒಟ್ಟಾಗಿ ೫೩ ಪುಸ್ತಕಗಳನ್ನು ಸಂಗ್ರಹಿಸಿದ್ದೇನೆ.
ಕ್ರೈಸ್ಟ್ ಯೂನಿವರ್ಸಿಟಿ ವಿದ್ಯಾರ್ಥಿಗಳಿಂದ ತಯಾರಾದ ಲೇಖನಗಳನ್ನು ಸರಿ ಪಡಿಸಲು ಇಂಟರ್ನ್ಶಿಪ್ ಆಯೋಜಿಸಿ ೬೫ ಲೇಖನಗಳನ್ನು ಸೇರಿಸಲಾಗಿದೆ.
ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಡಿಸೆಂಬರ್ ೧೦,೧೧ ಮತ್ತು ೧೨ರಂದು ವಿಷಯಾಧಾರಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಾಗಾರದಿಂದ ೨೨ ಹೊಸ ಲೇಖಕಿಯರು ವಿಕಿಪೀಡಿಯವನ್ನು ಸೇರಿದರು ಮತ್ತು ಅವರಿಂದ ೪೪ ಕರಾವಳಿ ಕರ್ನಾಟಕದ ಲೇಖಕಿಯರ ಮತ್ತು ಸಾಧಕಿಯರ ಲೇಖನಗಳು ತಯಾರಾದವು.
ಭಾಗವಹಿಸಿದವರ ಸಂಖೈ
ಲೇಖನಗಳ ಸಂಖ್ಯೆ
ಸೇರಿಸಲಾಗಿರುವ ಬೈಟ್ಗಳು
ಸಂಪಾದನೆಗಳ ಸಂಖ್ಯೆ
೨೨
೧೦೦
೫೯೧೮೯೪.೦
೧೨೨೦
ಬೆಂಗಳೂರಿನ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಯಲ್ಲಿ ಡಿಸೆಂಬರ್ ೧೯ ಮತ್ತು ೨೦ರಂದು ವಿಷಯಾಧಾರಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಾಗಾರದಿಂದ ೯ ಹೊಸ ಲೇಖಕರು ವಿಕಿಪೀಡಿಯವನ್ನು ಸೇರಿದರು ಮತ್ತು ಅವರಿಂದ ಸುಮಾರು ೩೦ ವಿಜ್ಞಾನ ಲೇಖನಗಳು ತಯಾರಾದವು.ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲರೂ ಸಕ್ರಿಯವಾಗಿ ಲೇಖನಗಳನ್ನು ಸೇರಿಸುತ್ತಿದ್ದಾರೆ.
ಭಾಗವಹಿಸಿದವರ ಸಂಖೈ
ಲೇಖನಗಳ ಸಂಖ್ಯೆ
ಸೇರಿಸಲಾಗಿರುವ ಬೈಟ್ಗಳು
ಸಂಪಾದನೆಗಳ ಸಂಖ್ಯೆ
೯
೪೯
೬೦೦೬೬೩.೦
೭೬೩
ಕ್ರೈಸ್ಟ್ ಯೂನಿವರ್ಸಿಟಿಯ ೬೦೦ ವಿದ್ಯಾರ್ಥಿಗಳಿಗೆ ಅವರ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ೨೦ ವಿವಿಧ ತರಗತಿಗಳಿಗೆ ಹೋಗಿ ತರಬೇತಿ ಕೊಡಲಾಗಿತ್ತು.
ಹಳೆಯ ವಿಕಿಪೀಡಿಯನ್ನರ ಬಳಿ ಮಾತನಾಡಿ,ಅವರನ್ನು ಮತ್ತೆ ಸಂಪಾದಕರನ್ನಾಗಿ ಮಾಡಲು ಪ್ರಯತ್ನ ನಡೆಸಲಾಗಿತ್ತು.
ಸರಕಾರಿ ವಸ್ತುಸಂಗ್ರಹಾಲಯ,ಬೆಂಗಳೂರಿನಲ್ಲಿ ಗ್ಲಾಮ್(GLAM) ಪ್ರಾಜೆಕ್ಟ್ ಮಾಡಿ ಕರ್ನಾಟಕ ಸರ್ಕಾರಿ ವಸ್ತುಸಂಗ್ರಹಾಲಯ (ಬೆಂಗಳೂರು) ಲೇಖನವನ್ನು ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸಲಾಗಿತ್ತು.
ಮೈಸೂರಿನ ಸಿ.ಪಿ.ಡಿ.ಪಿ.ಎಸ್., ಮಾನಸಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜನವರಿ ೧೧,೧೨ ಮತ್ತು ೧೩ರಂದು ವಿಷಯಾಧಾರಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಾಗಾರದಿಂದ ೧೨ ಹೊಸ ಲೇಖಕರು ವಿಕಿಪೀಡಿಯವನ್ನು ಸೇರಿದರು ಮತ್ತು ಅವರಿಂದ ೧೨ ಸಾಹಿತ್ಯ ಲೇಖನಗಳು ತಯಾರಾದವು.
ಭಾಗವಹಿಸಿದವರ ಸಂಖೈ
ಲೇಖನಗಳ ಸಂಖ್ಯೆ
ಸೇರಿಸಲಾಗಿರುವ ಬೈಟ್ಗಳು
ಸಂಪಾದನೆಗಳ ಸಂಖ್ಯೆ
೧೨
೩೭
೩೬೯೫೯೪.೦
೪೮೨
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ರಾಜಾಜಿನಗರ, ಬೆಂಗಳೂರಿನಲ್ಲಿ ಜನವರಿ ೧೧,೧೨ ಮತ್ತು ೧೩ರಂದು ವಿಷಯಾಧಾರಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಾಗಾರದಿಂದ ೧೪ ಹೊಸ ಲೇಖಕರು ವಿಕಿಪೀಡಿಯವನ್ನು ಸೇರಿದರು ಮತ್ತು ಅವರಿಂದ ೨೮ ವಿಜ್ಞಾನ ಲೇಖನಗಳು ತಯಾರಾದವು.
ಭಾಗವಹಿಸಿದವರ ಸಂಖೈ
ಲೇಖನಗಳ ಸಂಖ್ಯೆ
ಸೇರಿಸಲಾಗಿರುವ ಬೈಟ್ಗಳು
ಸಂಪಾದನೆಗಳ ಸಂಖ್ಯೆ
೧೨
೩೪
೫೩೮೩೫೪.೦
೬೭೮
ಆಡಿಟರ್ ಶ್ರೀ. ಬಿ. ವಿ. ರವಿಂದ್ರನಾಥ್ ರವರ ಕಛೇರಿ,ಸಾಗರದಲ್ಲಿ ಜನವರಿ ೨೬ ಮತ್ತು ೨೭ರಂದು ವಿಷಯಾಧಾರಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಾಗಾರದಿಂದ ೧೨ ಹೊಸ ಲೇಖಕರು ವಿಕಿಪೀಡಿಯವನ್ನು ಸೇರಿದರು ಮತ್ತು ಅವರಿಂದ ೧೨ ಮೆಕ್ಯಾನಿಕಲ್ ಇಂಜಿನಿಯರಿಂಗ್‍ಗೆ ಸಂಬಂದಿಸಿದ ಲೇಖನಗಳು ತಯಾರಾದವು.
ಭಾಗವಹಿಸಿದವರ ಸಂಖೈ
ಲೇಖನಗಳ ಸಂಖ್ಯೆ
ಸೇರಿಸಲಾಗಿರುವ ಬೈಟ್ಗಳು
ಸಂಪಾದನೆಗಳ ಸಂಖ್ಯೆ
೧೨
೧೫
೧೨೫೭೮೪.೦
೧೨೮
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಫೋಟೊವಾಕ್ ಏರ್ಪಡಿಸಿ,ಅಲ್ಲಿ ತೆಗೆದ ಫೋಟೊಗಳಿಗೆ ತಕ್ಕ ಲೇಖನಗಳನ್ನು ಬರೆದು ವಿಕಿಪೀಡಿಯಕ್ಕೆ ಸೇರಿಸಲಾಯಿತು.
ಡಿಸೆಂಬರ್ ನಲ್ಲಿ ಸಂಗ್ರಹಿಸಿದ ನಿರಂಜನ ಅವರ ಪುಸ್ತಕಗಳನ್ನು ಸ್ಕ್ಯಾನ್ನಿಂಗ್ ಮಾಡಲಾಯಿತು,ಅವುಗಳನ್ನು ವಿಕಿಮೀಡಿಯ ಕಾಮನ್ಸ್‍ಗೆ ಸೇರ್ಪಡಿಸಿ ವಿಕಿಸೋರ್ಸ್‍ನಲ್ಲಿ ಪರಿವಿಡಿಪುಟ ಸೃಷ್ಟಿಸಲಾಯಿತು.
ನಿರಂಜನ ಅವರ ೯ ಪುಸ್ತಕಗಳ ಟೈಪಿಂಗ್ ಸಮುದಾಯದ ಸಹಾಯದೊಂದಿಗೆ ಪೂರ್ಣಗೊಳಿಸಲಾಗಿದೆ ಮತ್ತು ಕನ್ನಡ ವಿಕಿಸೋರ್ಸ್‍ನಲ್ಲಿ ಮೊದಲ ಬಾರಿಗೆ ಒಂದು ಪುಸ್ತಕವನ್ನು ಅಂತಿಮ ಘಟ್ಟದವರೆಗೆ ತಯಾರುಮಾಡಲು ಸಾಧ್ಯವಾಯಿತು.ಈಗ ಆ ಪುಸ್ತಕ ೩ ವಿವಿಧ ರೀತಿಯ ಫಾರ್ಮ್ಯಾಟ್‍ಗಳಲ್ಲಿ ಲಭ್ಯವಿದೆ.
ಇಂಟರ್ನ್ಸ್‍ಗಳ ಸಹಾಯದಿಂದ ಹೊಸ ಯೋಜನೆಯನ್ನು ಪ್ರಾರಂಭಿಸಿ ಮತ್ತು ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ವಿಭಾಗ, ಕರ್ನಾಟಕ ಸರಕಾರದ ಪುಸ್ತಕಗಳ ಪರಿವರ್ತನೆ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ(ಎಲ್ಲಾ ಪುಸ್ತಕಗಳನ್ನು ವಿಕಿಮೀಡಿಯ ಕಾಮನ್ಸ್‍ಗೆ ಸೇರ್ಪಡಿಸಿ ವಿಕಿಸೋರ್ಸ್ ನಲ್ಲಿ ಪರಿವಿಡಿಪುಟ ಸೃಷ್ಟಿಸಲಾಯಿತು).
ಕ್ರೈಸ್ಟ್ ಯೂನಿವರ್ಸಿಟಿಯ ವಿದ್ಯಾರ್ಥಿಗಳಿಗೆ ಅವರ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ತರಬೇತಿ ಕೊಡಲಾಗಿತ್ತು.
ಬೆಂಗಳೂರಿನಲ್ಲಿರುವ ಕೆಲವು ಕನ್ನಡ ಟೈಪಿಂಗ್ ತರಬೇತಿ ನೀಡುವ ಇನ್ಸ್ಟಿಟ್ಯೂಟ್‍ಗಳನ್ನು ಸಂಪರ್ಕಿಸಿ,ವಿಕಿಸೋರ್ಸನ್ನು ಕನ್ನಡ ಟೈಪಿಂಗ್ ತರಬೇತಿ ನೀಡಲು ಉಪಯೋಗಿಸಿ ಎಂದು ಮಾತುಕತೆ ನಡೆಸಲಾಗಿತ್ತು.
ವಿಕಿಕೋಟ್‍ನಲ್ಲಿ ಒಂದು ಹೊಸ ಯೋಜನೆಯನ್ನು ಪ್ರಾರಂಭಿಸಲಾಗಿದೆ ಮತ್ತು ವಿಕಿಕೋಟಿನ ಮುಖ್ಯ ಪುಟ ಡಿಸೈನ್ ಮಾಡಲಾಗಿದೆ.
ವಿಕಿಪೀಡಿಯಾದ ೧೩ನೇ ವರ್ಷಾಚರಣೆಯ ಬಗ್ಗೆ ಚರ್ಚೆ ಮಾಡಲು ಐ.ಆರ್.ಸಿ ಏರ್ಪಡಿಸಲಾಗಿತ್ತು.
ಪವನಜ ಅವರ ನೇತೃತ್ವದಲ್ಲಿ ಅಂತರಜಾಲ ಸಂಪರ್ಕವಿಲ್ಲದ ಕಡೆಗಳಲ್ಲಿ ವಿಕಿಪೀಡಿಯಾವನ್ನು ತಲುಪಿಸಲು ಆಫ್ಲೈನ್ ಕನ್ನಡ ವಿಕಿಪೀಡಿಯ ತಯಾರಿಸಿ ಕೆಲ ಸಂಸ್ಥೆಗಳಿಗೆ ನೀಡಲಾಗಿದೆ.
ಫೆಬ್ರುವರಿ ೧೩ ಮತ್ತು ೧೪ರಂದು ಕನ್ನಡ ವಿಕಿಪೀಡಿಯಾದ ೧೩ನೇ ವರ್ಷಾಚರಣೆಯನ್ನು ಆಚರಿಸಲಾಗಿತ್ತು.ಅದರ ಅಂಗವಾಗಿ ಪಿಳಿಕುಳ ಎಂಬ ನಿಸರ್ಗಧಾಮಕ್ಕೆ ಭೇಟಿ ನೀಡಿ ಫೋಟೊ ನಡಿಗೆ ಮಾಡಲಾಗಿತ್ತು.ಮರುದಿನ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಫೆಬ್ರುವರಿ ೧೬ ಮತ್ತು ೧೭ರಂದು ವಿಷಯಾಧಾರಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಾಗಾರದಿಂದ ೨೫ ಹೊಸ ಲೇಖಕರು ವಿಕಿಪೀಡಿಯವನ್ನು ಸೇರಿದರು ಮತ್ತು ಅವರಿಂದ ೫ ಲೇಖನಗಳು ತಯಾರಾದವು ಮತ್ತು ಈ ಕಾರ್ಯಾಗಾರದಲ್ಲಿ ಕೆಲವರಿಂದ ವಿಕಿಸೋರ್ಸಿನ ಒಂದು ಪುಸ್ತಕದ ಕೆಲಸವನ್ನು ಮಾಡಿಸಲಾಗಿತ್ತು(ವಿದ್ಯಾರ್ಥಿಗಳಿಗೆ ಟೈಪಿಂಗ್ ಬರದ ಕಾರಣ ವಿಕಿಸೋರ್ಸನ್ನು ಬಳಸಿ ಅವರಿಗೆ ತರಬೇತಿ ನೀಡಲಾಗಿತ್ತು).
ಸಮುದಾಯವನ್ನು ಬಲಪಡಿಸಲು ಯತಿರಾಜುರವರ ಬಳಿ ಮಾತನಾಡಿ ಕರ್ನಾಟಕದ ಬೇರೆ ಬೇರೆ ಸ್ಥಳಗಳಲ್ಲಿ ಕಾರ್ಯಾಗಾರವನ್ನು ಮಾಡುವುದು ಮತ್ತು ಅವರನ್ನು ಸಕ್ರಿಯ ವಿಕಿಪೀಡಿಯನ್ನರಾಗಿ ಮಾಡುವುದರ ಬಗ್ಗೆ ಮಾತನಾಡಲಾಗಿತ್ತು.
ಕ್ರೈಸ್ಟ್ ಯೂನಿವರ್ಸಿಟಿಯ ವಿದ್ಯಾರ್ಥಿಗಳಿಗೆ ಅವರ ಲೇಖನಗಳ ಗುಣಮಟ್ಟವನ್ನು ಹೆಚ್ಚಿಸಲು ತರಬೇತಿ ಕೊಡಲಾಗಿತ್ತು.
ಕನ್ನಡ ವಿಕಿಪೀಡಿಯಕಾಗಿ ಕೆಲಸ ಮಾಡಲು ೪೦ಜನ ಕ್ರೈಸ್ಟ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಅರ್ಜಿ ಹಾಕ್ಕಿದರು, ಅದರಲ್ಲಿ ೧೩ ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ಅವರಿಂದ ಕನ್ನಡ ವಿಕಿಪೀಡಿಯದ ಗುಣಮಟ್ಟವನ್ನು ಹೆಚ್ಚಿಸುವ ಕೆಸಲಗಳನ್ನು ಮಾಡಿಸಲಾಗಿದೆ.