ವಿಷಯಕ್ಕೆ ಹೋಗು

ಎಸ್. ಆರ್. ರಾಮಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಸ್. ಆರ್. ರಾಮಸ್ವಾಮಿ

[ಬದಲಾಯಿಸಿ]
ಎಸ್. ಆರ್. ರಾಮಸ್ವಾಮಿ*
ಎಸ್. ಆರ್. ರಾಮಸ್ವಾಮಿ
ಜನನಅಕ್ಟೋಬರ್ ೨೯, ೧೯೩೭*
ಬೆಂಗಳೂರು
ವೃತ್ತಿಬರಹಗಾರ, ಪತ್ರಕರ್ತ, ಜೀವನಚರಿತ್ರೆಕಾರ, ಸಾಮಾಜಿಕ ಕಾರ್ಯಕರ್ತ ಮತ್ತು ಪರಿಸರವಾದಿ
ರಾಷ್ಟ್ರೀಯತೆಭಾರತೀಯ

ಸಹಿ


ಸೊಂಡಿಕೊಪ್ಪ ರಾಮಚಂದ್ರಶಾಸ್ತ್ರಿ ರಾಮಸ್ವಾಮಿರವರು ಸಮೃದ್ಧ ಭಾರತೀಯ ಬರಹಗಾರ, ಪತ್ರಕರ್ತ, ಜೀವನಚರಿತ್ರೆಕಾರ, ಸಾಮಾಜಿಕ ಕಾರ್ಯಕರ್ತ ಮತ್ತು ಪರಿಸರವಾದಿ ಆಗಿದ್ದಾರೆ. ಇವರು ಐವತ್ತಕ್ಕು ಹೆಚ್ಚು ಪುಸ್ತಕಗಳು ಮತ್ತು ಸಾವಿರ ಲೇಖನಗಳನ್ನು ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳಲ್ಲಿ ಬರೆದಿದ್ದಾರೆ. ಇವರಿಗೆ ವರ್ಷದ ಅತ್ಯುತ್ತಮ ಪ್ರತಿಷ್ಠಿತ "ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ" (೧೯೯೨) ಸಮಾಜ ವಿಜ್ಞಾನದ ವಿಷಯಕ್ಕೆ ಲಭಿಸಿದೆ. 2015ರಲ್ಲಿ ಇವರಿಗೆ 'ನಾಡೋಜ' ಪ್ರಶಸ್ತಿಯನ್ನು ಕರ್ನಾಟಕದ ಹಂಪಿ ವಿಶ್ವವಿದ್ಯಾಲಯ ಗೌರವಿಸಿತು. ಇವರು ಪರಿಸರ ಸಮಸ್ಯೆಗಳು ಮತ್ತು ಜನರ ಹಕ್ಕುಗಳ ಹುರುಪಿನ ಚಳುವಳಿಗಾರ. ಇವರು ಸರ್ಕಾರದ ಕೆಟ್ಟ ಯೋಜನೆ ಮತ್ತು ಸಿದ್ಧಾಂತಗಳನ್ನು ಶ್ರೀಮಂತ ಸಸ್ಯರಾಶಿ ಮತ್ತು ಪ್ರಾಣಿಸಂಕುಲಗಳ ವಿಶಾಲ ಪ್ರದೇಶಗಳನ್ನು ಸಂರಕ್ಷಿಸಲು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಚಳುವಳಿಗಳಿಗೆ ಕಾರಣರಾಗಿದ್ದಾರೆ. ಇವರ ವರ್ಷಗಳ ಬರಹಗಾರ ಮತ್ತು ಚರಿತ್ರೆ ಜೀವನ, ಇವರನ್ನು ಡಿ.ವಿ. ಗುಂಡಪ್ಪ, ವಿ.ಸೀತಾರಾಮಯ್ಯ, ರಲ್ಲಪಲ್ಲಿ ಅನಂತ ಕೃಷ್ಣ ಶರ್ಮ, ಯಾದವ ರಾವ್ ಜೋಶಿ ಮತ್ತು ಪಿ. ಕೋದಂಡ ರಾವ್ ಮುಂತಾದವರ ಪ್ರಭಾವದ ಕೆಳಗೆ ತಂದಿತು. ಇದರಿಂದ ಇವರು ಸಾಹಿತ್ಯ ಮತ್ತು ಸಾರ್ವಜನಿಕ ಜೀವನವನ್ನು ಕರೆತರುತ್ತಾರೆ. ಇವರ ಬರಹಗಳು ಮೂಲಭೂತವಾಗಿ ಇಂದಿನ ಸನ್ನಿವೇಶದಲ್ಲಿ ಸಮಕಾಲೀನ ಸಾಹಿತ್ಯಿಕ, ಸಾಂಸ್ಕೃತಿಕ, ರಾಷ್ಟ್ರೀಯವಾದಿ ಮತ್ತು ಅಭಿವೃದ್ಧಿಯ ತೊಂದರೆಗಳನ್ನು ಪ್ರತಿಬಿಂಬಿಸುತ್ತದೆ. ಎಸ್. ಆರ್. ರಾಮಸ್ವಾಮಿಯವರು ಬೆಂಗಳೂರಿನ ಕನ್ನಡದ ಮಾಸಿಕ "ಉತ್ಥಾನ" ಮತ್ತು "ರಾಷ್ಟ್ರೋತ್ಥಾನ ಸಾಹಿತ್ಯ"ದ ಪ್ರಸ್ತುತ ಗೌರವ ಮುಖ್ಯ ಸಂಪಾದಕರಾಗಿದ್ದಾರೆ.

ಆರಂಭಿಕ ಜೀವನ

[ಬದಲಾಯಿಸಿ]

ಎಸ್. ಆರ್. ರಾಮಸ್ವಾಮಿರವರು ಅಕ್ಟೋಬರ್ ೨೯, ೧೯೩೭ ರಂದು ಮುಳುಕನಾಡು ಬ್ರಾಹ್ಮಣ ಪೋಷಕರಾದ ಎಸ್. ರಾಮಚಂದ್ರ ಶಾಸ್ತ್ರಿ ಮತ್ತು ಸರಸ್ವತಮ್ಮರವರಿಗೆ ಬೆಂಗಳೂರಿನಲ್ಲಿ ಜನಿಸಿದರು. ವಿದ್ವತ್ಪೂರ್ಣ ವಂಶಾವಳಿಯಲ್ಲಿ ಹುಟ್ಟಿದ ಇವರು ಶ್ರೇಷ್ಠ ಭಾರತೀಯ ಇತಿಹಾಸಕಾರ ಮತ್ತು ಬಹುಭಾಷಿ ಎಸ್. ಶ್ರೀಕಂತ ಶಾಸ್ತ್ರಿ ಹಾಗೂ ಅಸ್ಥಾನ್ ವಿದ್ವಾನ್ ಮೊಟಗನಹಲ್ಲಿ ಸುಬ್ರಹ್ಮಣ್ಯ ಶಾಸ್ತ್ರಿರವರ ಸೋದರಳಿಯ. "ಭಾಗವತ"ವನ್ನು ಮೂಲ ಸಂಸ್ಕೃತದಿಂದ ಕನ್ನಡಕ್ಕೆ ಭಾಷಾಂತರಿಸಿದ ಮೊದಲ ವ್ಯಕಿಯಾದ ಮಹಾ ಅಸ್ಥಾನ್ ವಿದ್ವಾನ್ ಮೊಟಗನಹಲ್ಲಿ ರಾಮಶೇಷ ಶಾಸ್ತ್ರಿರವರ ಸೋದರ ಮೊಮ್ಮಗನು. ಎಸ್. ಆರ್. ರಾಮಸ್ವಾಮಿಯವರು ಖ್ಯಾತ ಪತ್ರಕರ್ತ ಮತ್ತು "ಪ್ರಜಾಮಾತ"ದ ಮಾಜಿ ಫೀಚರ್ ಎಡಿಟರ್ ಆದ ಎಸ್. ಆರ್. ಕೃಷ್ಣಮೂರ್ತಿರವರ ಕಿರಿಯ ಸಹೋದರ ಎಂದು ಸಂಭವಿಸುತ್ತದೆ.

ಎಸ್. ಆರ್. ರಾಮಸ್ವಾಮಿಯವರು ಬೆಂಗಳೂರಿನ 'ಬೆಂಗಳೂರು ಪ್ರೌಢಶಾಲೆ'ಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ನಂತರ ತಮ್ಮ "ಮಧ್ಯಂತರ" ಕೋರ್ಸ್ ಅಧ್ಯಯನವನ್ನು ೧೯೫೩-೫೪ರಲ್ಲಿ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಮುಗಿಸಿದರು.

ಜೀವನ ಮತ್ತು ವೃತ್ತಿ

[ಬದಲಾಯಿಸಿ]

ಎಸ್. ಆರ್. ರಾಮಸ್ವಾಮಿರವರು ೧೯೫೦ರಲ್ಲಿ ಬೆಂಗಳೂರಿನ ವಿಲಿಯಂ ಕ್ವಾನ್ ಜಡ್ಜ್ (W. Q. Judge) ಪ್ರೆಸ್ ನ ಸಹಾಯಕ ಸಂಪಾದಕರಾಗಿ ಪತ್ರಿಕೋದ್ಯಮದಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸಂಕ್ಷಿಪ್ತ ವಿರಾಮದ ನಂತರ ೧೯೭೨ರಲ್ಲಿ ಕನ್ನಡ ಸಾಪ್ತಾಹಿಕ "ಸುಧಾ" ಪತ್ರಿಕೆಯ ಮುಖ್ಯ ಉಪ ಸಂಪಾದಕರಾಗಿ ೧೯೭೯ರವರೆಗೆ ಕಾರ್ಯ ನಿರ್ವಹಿಸುತ್ತಿದ್ದರು. ೧೯೮೦ರಲ್ಲಿ ಬೆಂಗಳೂರಿನ "ರಾಷ್ಟ್ರೋತ್ಥಾನ ಸಾಹಿತ್ಯ" ಮತ್ತು ಕನ್ನಡ ಮಾಸಿಕ "ಉತ್ಥಾನ"ದ ಪ್ರಧಾನ ಗೌರವ ಸಂಪಾದಕರನ್ನಾಗಿ ಕೆಲಸ ಮಾಡಿದರು ಮತ್ತು ಈ ಸ್ಥಾನದಲ್ಲೆ ತಮ್ಮ ಕಾರ್ಯವಿಧಾನವನ್ನು ಮುಂದುವರಿದಿದ್ದಾರೆ. ಎಸ್. ಆರ್. ರಾಮಸ್ವಾಮಿಯವರು ಸಕ್ರಿಯವಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ವಿಷಯಗಳ ಬಗ್ಗೆ ವ್ಯಾಪಕ ಶ್ರೇಣಿಯ ಸಂಬಂಧಿಸಿದಂತೆ ದೇಶಾದ್ಯಂತ ವಿಚಾರಗೋಷ್ಠಿಗಳು ಮತ್ತು ಸಮಾವೇಶಗಳಲ್ಲಿ ಉಪನ್ಯಾಸಗಳನ್ನು ತಲುಪಿಸಿದ್ದಾರೆ.

ತೀವ್ರ ಚಿಂತಕ, ಬೌದ್ಧಿಕ, ಸಾಮಾಜಿಕ ಕಾರ್ಯಕರ್ತ ಮತ್ತು ಜೀವನಚರಿತ್ರೆಕಾರರಾದ ಎಸ್. ಆರ್. ರಾಮಸ್ವಾಮಿರವರು ಸಕ್ರಿಯವಾಗಿ ತಮ್ಮ ಕೊಡುಗೆಯನ್ನು ಕನ್ನಡ ದಿನಪತ್ರಿಕೆಗಳಾದ "ಪ್ರಜಾವಾಣಿ" ಮತ್ತು "ಕನ್ನಡ ಪ್ರಭ"ರಲ್ಲಿ ಮುಂದುವರೆಯುತ್ತಿದಾರೆ. ಎಸ್. ಆರ್. ರಾಮಸ್ವಾಮಿರವರು ಸಂಸ್ಕೃತ, ಹಿಂದಿ, ಜರ್ಮನ್, ಫ್ರೆಂಚ್, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಪಾರಂಗತರಾಗಿದ್ದಾರೆ ಮತ್ತು ವಿವಿಧ ಭಾಷೆಗಳಲ್ಲಿಂದ ಕನ್ನಡಕ್ಕೆ ಅನುವಾದವನ್ನು ಮಾಡಿದ್ದಾರೆ. ಅಲ್ಲದೆ ಸಾವಿರ ಲೇಖನಗಳು ಮತ್ತು ೫೫ ಪುಸ್ತಕಗಳನ್ನು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬರೆದಿದ್ದಾರೆ. ಇವರ ಮೊದಲಿನ ವಿಭಾಗಗಳಲ್ಲಿ, ಒಂದು ಉದ್ಧೃತ ಎಂದರೆ ಫ್ರೆಂಚ್ ಕವಿ, ಪ್ರಬಂಧಕಾರ ಮತ್ತು ತತ್ವಜ್ಞಾನಿಯಾದ ಆಮ್ಬ್ರೋಯಿಸೆ ಪಾಲ್ ಟೌಸಿಯಂಟ್ ಜೂಲ್ಸ್ ವಾಲೆರಿ ರವರ ಬಗ್ಗೆ ವಿಮರ್ಶೆ ಮಾಡಿದ್ದು. ಎಸ್. ಆರ್. ರಾಮಸ್ವಾಮಿರವರು ಕಲಾ ವಿಮರ್ಶಕನಾಗಿ ಪ್ರಾಮುಖ್ಯತೆಯನ್ನು ಪಡೆದಿದ್ದು, ಪ್ರಸಿದ್ಧ ರಷ್ಯನ್ ಚಿತ್ರ ಕಲಾವಿದ ಸ್ವೆಟೋಸ್ಲಾವ್ ರೋರಿಕ್ ಮೇಲೆ "ಆರ್ಟ್ ಕ್ಯಾಟಲಾಗ್" ಪುಸ್ತಕವನ್ನು ಬರೆದಾಗ. ಈ ಪುಸ್ತಕ ಹೆಚ್ಚಾಗಿ ನಿಕಿತಾ ಕ್ರುಶ್ಚೇವ್ ಮೊದಲಾದವರು ಪಂಡಿತ ಜವಾಹರಲಾಲ್ ನೆಹರೂ ರಾಜ್ಯಗಳ ಮುಖ್ಯಸ್ಥರಿಗೆ ತನ್ನ ಕೃತಿಗಳನ್ನು ಪ್ರದರ್ಶಿಸುವ ಮೆಚ್ಚುಗೆ ಹಾಗೂ ರಷ್ಯಾದ ವರ್ಣಚಿತ್ರಕಾರರು ಚಿತ್ರಿಸುವ ಅಪರೂಪದ ಛಾಯಾಚಿತ್ರಗಳನ್ನು ಹೊಂದಿದೆ. ನಿಯಮಿತ ಸಂಖ್ಯೆಯಲ್ಲಿ ಮುದ್ರಿತವಾದ ಈ ಪುಸ್ತಕ ವಿರಳವಾಗಿ ಗ್ರಂಥಾಲಯಗಳಲ್ಲಿ ಕಾಣಿಸುತ್ತದೆ ಮತ್ತು ಜಿಲ್ಲಾಧಿಕಾರಿಗಳ ಇಂದಿನ ವಸ್ತುವಾಗಿದೆ. ರಾಮಸ್ವಾಮಿರವರು ಸಹ ಕಲಾ ವಿಮರ್ಶಕರಾದ ವೆಂಕಟರಾಮ್ ಮೊದಲಾದ ಶ್ರೇಷ್ಠ ವ್ಯಕ್ತಿಗಳ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಾಂಧಿವಾದಿ ಅರ್ಥಶಾಸ್ತ್ರಜ್ಞರಾದ ಲಕ್ಷ್ಮಿ ಚಂದ್ ಜೈನ್ ಮತ್ತು ಶ್ರೀ ಕುಮಾರಪ್ಪರವರ ಸಂಪರ್ಕಕ್ಕೆ ಬಂದರು.

ಸಾರ್ವಜನಿಕ ಜೀವನ ಮತ್ತು ಸಾಮಾಜಿಕ ಕ್ರಿಯಾವಾದ

[ಬದಲಾಯಿಸಿ]

ಎಸ್. ಆರ್. ರಾಮಸ್ವಾಮಿರವರು ಐದು ದಶಕಗಳಿಂದ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ಕೆಲಸಮಾಡುತ್ತಿದ್ದರು ಹಾಗೂ ಭಾರತದಲ್ಲಿ "ಸ್ವದೇಶಿ ಚಳುವಳಿ"ಯ ಒಂದು ದೃಢ ವಕೀಲರು ಕೂಡ. ಕಳೆದ ಕೆಲವು ದಶಕಗಳಲ್ಲಿ, ರಾಮಸ್ವಾಮಿರವರು ಸ್ವಯಮಾಡಳಿತದ ಮತ್ತು ಉತ್ತಮ ಆಡಳಿತಕ್ಕೆ ಗ್ರಾಮೀಣ ಅಧಿಕಾರದ ಗುರಿಯೊಂದಿಗೆ ಭಾರತದ ಕರ್ನಾಟಕ ರಾಜ್ಯದಲ್ಲಿ "ವಾಲಂಟರಿ ಗ್ರಾಮೀಣಾಭಿವೃದ್ಧಿ ಉಪಕ್ರಮಗಳು"ಯಲ್ಲಿ ಮುಂಚೂಣಿಯಾಗಿದ್ದರು. ಇವರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಪರಿಸರದ ಹೋರಾಟಗಳನ್ನು ಮಾಡಿ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಹೆಗ್ಗುರುತು ಕಾನೂನು ಸಮರಗಳಲ್ಲಿ ಸಾಮಾನ್ಯವಾಗಿ ತಮ್ಮನ್ನು ಮೂಡಿಸಿಕೊಂಡಿದ್ದಾರೆ. ರಾಮಸ್ವಾಮಿರವರು ಗಮನಗೊಂಡ ಸಂಯೋಜಕ, ಗಾಯಕ ಮತ್ತು ಬರಹಗಾರರಾದ ರಲ್ಲಪಲ್ಲಿ ಅನಂತ ಕೃಷ್ಣ ಶರ್ಮಾರವರ ಸಂಘದಿಂದ ಕರ್ಣಾಟಿಕ್ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಕುಶಲತೆಯನ್ನು ಹೊಂದಿದ್ದರು. ಇವರು ಖ್ಯಾತ ನೃತ್ಯ ಮೆಸ್ಟ್ರೋರಾದ ವಿ. ಎಸ್. ಕೌಶಿಕ್ ರವರ ವರ್ಷಗಳ ಸಂಘದಿಂದ ಭಾರತೀಯ ಶಾಸ್ತ್ರಿಯ ನೃತ್ಯರೂಪವಾದ ಭರತನಾಟ್ಯಂನಲ್ಲಿ ಕುಶಲತೆಯನ್ನು ಹೊಂದಿದ್ದರು.

ಸ್ನಾತಕನಾಗಿ ಇರುವುದರಿಂದ, ಎಸ್. ಆರ್. ರಾಮಸ್ವಾಮಿರವರು ಸಾರ್ವಜನಿಕ ಜೀವನದಲ್ಲಿ ಕ್ರಿಯಾಶೀಲವಾಗಿ ಮುಂದುವರೆದಿದ್ದಾರೆ. ಹೆಸರಾಂತ ಕನ್ನಡ ಬರಹಗಾರ ಮತ್ತು ದಾರ್ಶನಿಕನಾಗಿರುವ ಡಿ.ವಿ. ಗುಂಡಪ್ಪರವರು ಸ್ವತಂತ್ರ, ಪಕ್ಷಾತೀತ ಮತ್ತು ಜಾತ್ಯಾತೀತ ಸಂಸ್ಥೆಯಾದ "ಗೋಖಲೆ ಇನ್ಸ್ಟಿಟ್ಯೂಟ್ ಆಪ್ ಪಬ್ಲಿಕ್ ಅಪೇರ್ಸ್"ಅನ್ನು ಸ್ಥಾಪಿಸಿ ಅದರಿಂದ ಒಂದು ರಚನಾತ್ಮಕ ಪ್ರಜಾಪ್ರಭುತ್ವದ ಪೌರತ್ವದ ಕಡೆಗೆ ಸಾರ್ವಜನಿಕರ ಶಿಕ್ಷಣವನ್ನು ಕೇಂದ್ರ ಕಾರ್ಯವಾಗಿ ನಿರ್ಮಿಸಲಾಯಿತು. ಡಿ.ವಿ. ಗುಂಡಪ್ಪರವರ ತರುವಾಯ, ಸಂಸ್ಥೆಯ ಆಡಳಿತವು ನಿವೃತ್ತರಾದ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾದ ನಿಟ್ಟೂರ್ ಶ್ರೀನಿವಾಸ ರಾವ್ ರವರಿಗೆ ಆಡಳಿತವನ್ನು ನೀಡಲಾಯಿತು. ಅಂದಿನಿಂದ ಅವರು ತಮ್ಮ ಆಡಳಿತಾತ್ಮಕ ಹೊಣೆಗಾರಿಕೆಗಳನ್ನು ಉಯಿಲಿನ ಮೂಲಕ ಎಸ್. ಆರ್. ರಾಮಸ್ವಾಮಿರವರಿಗೆ ನೀಡಲ್ಪಟ್ಟಿದ್ದರಿಂದ ರಾಮಸ್ವಾಮಿರವರು ಕಾರ್ಯದರ್ಶಿಯ ಸ್ಥಾನಕ್ಕೆ ಸಂಘಟನೆಯ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಎಸ್. ಆರ್. ರಾಮಸ್ವಾಮಿರವರು ೧೨ ತಿಂಗಳುಗಳಲ್ಲಿ ನಾಲ್ಕು ಕಾರ್ಯಕ್ರಮಗಳನ್ನು ಸಂಘಟಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ಎಸ್. ಆರ್. ರಾಮಸ್ವಾಮಿರವರು ಸತತವಾಗಿ ವಿವಿಧ ಸಮ್ಮೇಳನಗಳು ಮತ್ತು ವಿಚಾರಗೋಷ್ಠಿಗಳು ಸಂಬಂಧಿಸಿದಂತೆ ವಿದೇಶ ಪ್ರಯಾಣವನ್ನು ತಿರಸ್ಕರಿಸಿದ್ದಾರೆ. ವಾಸ್ತವವಾಗಿ, ಅವರು ವೈಯಕ್ತಿಕ ಕಾರಣ ನೀಡಿ ೧೯೯೦ ರಲ್ಲಿ "ರಿಯೊ ಡಿ ಜನೈರೊ" ಎಂಬ ಗ್ಲೋಬಲ್ ಎನ್ವಿರಾನ್ಮೆಂಟಲ್ ಶೃಂಗಸಭೆ ವಿಶ್ವಸಂಸ್ಥೆಯ ಕಚೇರಿಯ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಆದರೆ, ರಾಮಸ್ವಾಮಿರವರು ಸಕ್ರಿಯವಾಗಿ ಭಾರತೀಯ ವ್ಯವಸ್ಥೆಯಲ್ಲಿ ಭಾಗವಹಿಸಿ "ಶರತ್ ಚಂದ್ರ"(೧೯೯೭), "ಟೂವರ್ಡ್ಸ್ ಅಂಡರ್ಸ್ಟಾಂಡಿಂಗ್ ಹಿಂದು ಸೊಸೈಟಿ"(೧೯೯೦), "ಗಾಂಧಿಯನ್ ಕಾನ್ಸೆಪ್ಟ್ ಆಪ್ ಎಕೊಲೊಜಿ"(೧೯೯೨), "ನೇತಾಜಿ ಸುಭಾಷ್ ಚಂದ್ರ ಬೋಸ್"(೧೯೯೬), "ದಿ ರೆಗಿಮ್ ಆಪ್ ಸರ್ ಮಿರ್ಜಾ ಇಸ್ಮಾಯಿಲ್"(೧೯೯೮), "ಲೈಪ್ ಆಂಡ್ ವರ್ಕ್ ಆಪ್ ವಿ. ಸೀತಾರಾಮಯ್ಯ", "ಸ್ವದೇಶಿ ಮೂವ್ಮೆಂಟ್ ಆಫ್ ೧೯೦೫: ಹಿಸ್ಟೋರಿಕ್ ಟರ್ನಿಂಗ್ ಪಾಯಿಂಟ್"(೨೦೦೫), "ಸಾಗಾ ಆಫ್ ಪೇಟ್ರಿಯಾಟಿಸಮ್: ಮಾರ್ಟಿರ್ಸ್ ಇನ್ ದಿ ಫ್ರೀಡಂ ಮೂವ್ಮೆಂಟ್"(೨೦೦೭), "ಕಾಂಟ್ರಿಬ್ಯೂಷನ್ ಆಫ್ ರಲ್ಲಪಲ್ಲಿ ಅನಂತ ಕೃಷ್ಣ ಶರ್ಮ ಟು ಕನ್ನಡ ಆಂಡ್ ತೆಲುಗು"(೨೦೧೦), "ಲೈಫ್ ಆಂಡ್ ವರ್ಕ್ ಆಫ್ ಡಿ. ವಿ. ಗುಂಡಪ್ಪ"(೨೦೧೧), "ಕಾಂಟ್ರಿಬ್ಯೂಷನ್ ಆಫ್ ಸಾಂಸ್ಕ್ರಿಟಿಸ್ಟ್ ಪ್ರೊಫೆಸರ್ ಕೆ. ರಾಮಚಂದ್ರ ರಾವ್"(೨೦೧೩) ಮತ್ತು "ಬೆಳಗೆರೆ ಕೃಷ್ಣ ಶಾಸ್ತ್ರಿ"(೨೦೧೩) ಮುಂತಾದ ವಿಷಯಗಳ ಬಗ್ಗೆ ಸುಮಾರು ೧೦೦ ಕಾಗದಗಳ ವಿಚಾರಗೋಷ್ಠಿಗಳನ್ನು ಸಮರ್ಪಿಸಿದ್ದಾರೆ.

ಗ್ರಂಥಸೂಚಿ

[ಬದಲಾಯಿಸಿ]

ಎಸ್. ಆರ್. ರಾಮಸ್ವಾಮಿರವರು ಅದೃಷ್ಟದಿಂದ ಬೌದ್ಧಿಕ ದೈತ್ಯರಾದ ಡಿ.ವಿ. ಗುಂಡಪ್ಪ, ವಿ. ಸೀತಾರಾಮಯ್ಯ, ರಲ್ಲಪಲ್ಲಿ ಅನಂತ ಕೃಷ್ಣ ಶರ್ಮ, ಎ. ಆರ್. ಕೃಷ್ಣಶಾಸ್ತ್ರಿ, ಪಿ. ಕೋದಂಡ ರಾವ್ ಮತ್ತು ಯಾದವ ರಾವ್ ಜೋಶಿ ಮುಂತಾದವರ ಆಶ್ರಯದಡಿಯಲ್ಲಿ ಬಂದರು. ಡಿ. ವಿ. ಗುಂಡಪ್ಪ ರವರ ನಿಕಟ ಒಡನಾಟದಿಂದ ರಾಮಸ್ವಾಮಿ ರವರ ಬಗ್ಗೆ ಪ್ರೀತಿ ಮತ್ತು ಕೃತಜ್ಞತೆಯಿಂದ ಡಿ. ವಿ. ಜಿ. ರವರು ತಮ್ಮ ಪುಸ್ತಕವಾದ "ಜ್ಞಾಪಕ ಚಿತ್ರಶಾಲೆ"ಯಲ್ಲಿ ಬರೆದಿದ್ದಾರೆ. ವಾಸ್ತವವಾಗಿ, ಎಸ್. ಆರ್. ರಾಮಸ್ವಾಮಿರವರು ಡಿ.ವಿ.ಜಿ. ರವರ ಅನೇಕ ಕೃತಿಗಳ ಸಂಕಲನ, ಸಂಪಾದನೆ ಮತ್ತು ಪುರಾವೆ ಓದುವಿಕೆಯನ್ನು ಮಾಡಿದ್ದರು. ಅದರಲ್ಲಿ ಮುಖ್ಯವಾದುದೆಂದರೆ "ಜೀವನಧರ್ಮಯೋಗ" ಮತ್ತು "ಭಗವಧ್ ತಾತ್ಪರ್ಯ". ಎಸ್. ಆರ್. ರಾಮಸ್ವಾಮಿರವರ ಮೊದಲ ಪುಸ್ತಕ "ಮಹಾಭಾರತದ ಬೆಳವಣಿಗೆ"(೧೯೭೨). ಅವರ ಪ್ರಸಿದ್ಧ ಕೃತಿಯಾದ "ಶತಮಾನದ ತಿರುವಿನಲ್ಲಿ ಭಾರತ"(೧೯೮೯) ೧೯೯೨ರಲ್ಲಿ ಪ್ರತಿಷ್ಠಿತ "ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ" ಸಾಧಿಸಿತು. ಬಿ.ಆರ್.ಅಂಬೇಡ್ಕರ್ ರವರ ಜೀವನಚರಿತ್ರೆಯನ್ನು ಸಹಲೇಖಕರಾದ ಚಂದ್ರಶೇಖರ್ ಭಂಡಾರಿ ರವರ ಜೊತೆ ಸೇರಿ "ಸಮಾಜ ಚಿಕಿತ್ಸಕ ಅಂಬೇಡ್ಕರ್" ಎಂಬ ಪುಸ್ತಕವನ್ನು ೧೯೯೦ರಲ್ಲಿ ಪ್ರಕಟಿಸಿದರು. ಈ ಪುಸ್ತಕ ಸತ್ಯಸಂಧತೆ, ನಿಖರತೆ ಮತ್ತು ಪಕ್ಷಪಾತ ಕೊರತೆಯಿಂದ ಹೆಚ್ಚಿನ ಗಮನ ಮತ್ತು ಪ್ರಶಂಸೆಯನ್ನು ಆಕರ್ಷಿಸಿತು. ವಾಸ್ತವವಾಗಿ, ಇದು ವ್ಯಾಪಕವಾಗಿ ವರ್ಷಗಳಲ್ಲಿ ಅನೇಕ ಭಾರತದ ದೇಶೀಯ ಭಾಷೆಗಳಿಗೆ ಭಾಷಾಂತರಿಸಲಾಗಿಯಿತು.

ಪುಸ್ತಕಗಳ ಪಟ್ಟಿ

[ಬದಲಾಯಿಸಿ]
  • ಮಹಾಭಾರತದ ಬೆಳವಣಿಗೆ (೧೯೭೨)
  • ಸ್ವೆಟೋಸ್ಲಾವ್ ರೋರಿಕ್ (೧೯೭೪)
  • ಡಿ. ವಿ. ಜಿ. - ಆತ್ಮಕಥನ (೧೯೭೬)
  • ಉದಯ ಶಂಕರ್ - ಆತ್ಮಕಥನ (೧೯೭೯)
  • ಶ್ರೀಪದ್ ದಾಮೋದರ್ ಸತ್ವಾಲೇಕರ್ (೧೯೮೦)
  • ಶತಮಾನದ ತಿರುವಿನಲ್ಲಿ ಭಾರತ (೧೯೮೯) 'ಉಲ್ಲೇಖ ದೋಷ: Invalid parameter in <ref> tag
  • ಸಮಾಜ ಚಿಕಿತ್ಸಕ ಅಂಬೇಡ್ಕರ್- ಚಂದ್ರಶೇಖರ್ ಭಂಡಾರಿ ಜೊತೆ ಸಹಲೇಖಕ (೧೯೯೦)
ದೀವಟಿಗೆಗಳು
  • ಭಾರತದಲ್ಲಿ ಸಮಾಜಕಾರ್ಯ (೧೯೯೨)
  • ಸ್ವದೇಶಿ ಜಾಗೃತಿ (೧೯೯೪)
  • ಆರ್ಥಿಕತೆಯ ಎರಡು ದೃವ (೧೯೯೪) ಉಲ್ಲೇಖ ದೋಷ: Invalid parameter in <ref> tag
  • ಸ್ವದೇಶಿ: ಒಂದು ಸಂವಾದ (೧೯೯೪)
  • ಕೊಲ್ಮಿಂಚು (೧೯೯೬)
  • ಸ್ವಾತಂತ್ರೋದ್ಯಾಯದ ಮೈಲಿಗಲ್ಲು (೧೯೯೭)
  • ದೀವಟಿಗೆಗಳು (೧೯೯೮)
  • ಮತಂತರ: ಒಂದು ಸಂವಾದ- ಚಂದ್ರಶೇಖರ್ ಭಂಡಾರಿ ಜೊತೆ ಸಹಲೇಖಕ (೧೯೯೯)
  • ಕಾರ್ಗಿಲ್ ಕಂಪಣ (೧೯೯೯)
  • ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ- ಆತ್ಮಕಥನ (೨೦೦೦)
  • ಸರ್ದಾರ್ ವಲ್ಲಭಾಯ್ ಪಟೇಲ್- ಆತ್ಮಕಥನ (೨೦೦೦)
  • ಮಾಗಡಿ ಲಕ್ಷ್ಮಿನರಸಿಂಹಶಾಸ್ತ್ರಿ- ಆತ್ಮಕಥನ (೨೦೦೧)
  • ಕೌಟಿಲ್ಯನ ಅರ್ಥಶಾಸ್ತ್ರ (೨೦೦೯)
  • ಕೆಲವು ಇತಿಹಾಸ ಪರ್ವಗಳು (೨೦೧೦)
  • ದೀಪ್ತಿಮಂತರು (೨೦೧೧)
  • ದೃವಜಲ (೨೦೧೧)
  • ಭಾರತ ಬಾಸ್ಕರ ರವೀಂದ್ರನಾಥ ಠಾಗೋರ್ (೨೦೧೧)
  • ನವೋತ್ಥಾನದ ಪಥದರ್ಶಕ ಸ್ವಾಮಿ ವಿವೇಕಾನಂದ (೨೦೧೩)
  • ಕಾವಲಿಗೆ (೨೦೧೪)

ಗುರುತಿಸುವಿಕೆ

[ಬದಲಾಯಿಸಿ]

ಪತ್ರಿಕೋದ್ಯಮ, ಸಾಹಿತ್ಯ, ವಿಮರ್ಶೆ ಮತ್ತು ಸಾಮಾಜಿಕ ಚಟುವಟಿಕೆಯ ಪ್ರಪಂಚಕ್ಕೆ ಎಸ್. ಆರ್. ರಾಮಸ್ವಾಮಿರವರ ವ್ಯಾಪಕ ಕೊಡುಗೆ ಅವರಿಗೆ ಹಲವು ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ವರ್ಷಗಳಿಂದ ತಂದುಕೊಟ್ಟಿವೆ. ಆದರೂ ಅವರ ಬುದ್ದಿವಂತಿಕೆಯ ಮಹಾನ್ ಗುರುತಿಸುವಿಕೆ ಸಾರ್ವಜನಿಕ ಓದುಗರ ಅಂಕಗಳು ತನ್ನ ಪ್ರತಿಭೆ ಮತ್ತು ಕಟ್ಟಾ ನಿಷ್ಠೆಯ ತನ್ನ ಬರಹಗಳನ್ನು ತೋರಿಸುತ್ತವೆ.ಅವರ ಕೆಲವು ಪ್ರಶಸಿಗಳೆಂದರೆ:

  1. "ದಿ ಲೈಫ್ ಆಫ್ ಸೊಲಿಗ ತ್ರೈಬಲ್ಸ್"(೧೯೮೩) ಲೇಖನಕ್ಕೆ ಮೊದಲ ಬಹುಮಾನ, "ಕೆನರಾ ಬ್ಯಾಂಕ್ ಪ್ರಶಸ್ತಿ"
    ಹಂಪಿ ವಿಶ್ವವಿದ್ಯಾಲಯದಿಂದ 'ನಾಡೋಜ ಪ್ರಶಸ್ತಿ'
  2. "ಸ್ಟೇಟ್ ಆಫ್ ಲ್ಯಾಂಡ್ ರಿಪಾರ್ಮ್ಸ್"(೧೯೮೪) ಲೇಖನಕ್ಕೆ ಮೊದಲ ಬಹುಮಾನ, "ಕೆನರಾ ಬ್ಯಾಂಕ್ ಪ್ರಶಸ್ತಿ"
  3. "ಶತಮಾನದ ತಿರುವಿನಲ್ಲಿ ಭಾರತ"(೧೯೮೯) ಕೃತಿಗೆ "ಕರ್ನಾಟಕ ಸಾಹಿತ್ಯ ಅಕಾಡೆಮಿ" ಪ್ರಶಸ್ತಿ ,ಸಮಾಜ ವಿಜ್ಞಾನದಲ್ಲಿ ಬರೆದ ಅತ್ಯುತ್ತಮ ಕೆಲಸ(೧೯೯೨)
  4. ಪತ್ರಿಕೋದ್ಯಮಕ್ಕೆ "ಆರ್ಯಭಟ್ಟ ಪ್ರಶಸ್ತಿ" (೨೦೦೬)
  5. ಸಾಹಿತ್ಯದ ಕೊಡುಗೆಗೆ "ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ" (೨೦೦೮)
  6. ವಿದ್ವತ್ಪೂರ್ಣ ಸಾಧನೆಗೆ "ಮೈತಿಕ್ ಸೊಸೈಟಿ ಸೆನಿಟರಿ ಪ್ರಶಸ್ತಿ" (೨೦೦೯)
  7. ಪತ್ರಿಕೋದ್ಯಮಕ್ಕೆ ಐದು ದಶಕಗಳ ಸೇವೆಯನ್ನು ಗುರುತಿಸಿ ಕರ್ನಾಟಕ ಮಧ್ಯಮ ಅಕಾಡೆಮಿ "ವರ್ಷದ ವ್ಯಕ್ತಿ" ಎಂದು ಗೌರವಿಸಿತು.
  8. ಡಿ.ವಿ.ಜಿ ಪ್ರಶಸ್ತಿ - ಡಿ.ವಿ.ಜಿ ಬಳಗ, ಮೈಸೂರು
  9. "ನಾಡೋಜ" ಪ್ರಶಸ್ತಿ - ಹಂಪಿ ವಿಶ್ವವಿದ್ಯಾಲಯದ , ಕರ್ನಾಟಕ (೨೦೧೫)

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]