ಡಿ.ವಿ.ಗುಂಡಪ್ಪ
ಡಿ.ವಿ.ಜಿ | |
---|---|
![]() ಮಧ್ಯ ವಯಸ್ಸಿನಲ್ಲಿ ಡಿವಿಜಿ | |
ಜನನ | ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ೧೭ ಮಾರ್ಚ್ ೧೮೮೭ |
ಮರಣ | 7 October 1975 | (aged 88)
ಇತರೆ ಹೆಸರುಗಳು | ಡಿ ವಿ ಜಿ,[ಕಾವ್ಯನಾಮ] |
ಉದ್ಯೋಗ | ತತ್ತ್ವಶಾಸ್ತ್ರ ವಿದ್ವಾಂಸ, ಲೇಖಕ, ಕವಿ, ಪತ್ರಕರ್ತ. |
ಇದಕ್ಕೆ ಖ್ಯಾತರು | ಮಂಕುತಿಮ್ಮನ ಕಗ್ಗ |
ಜೀವನ ಸಂಗಾತಿ | ಭಾಗೀರಥಮ್ಮ [೧] |
ಡಿ ವಿ ಜಿ(ಮಾರ್ಚ್ ೧೭, ೧೮೮೭ - ಅಕ್ಟೋಬರ್ ೭, ೧೯೭೫) ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು.[೨][೩][೪]
ಬಾಲ್ಯ ಜೀವನ[ಬದಲಾಯಿಸಿ]
ಡಿ.ವಿ.ಜಿ ಅವರು ೧೮೮೭, ಮಾರ್ಚ್ ೧೭ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು.
ವೃತ್ತಿ ಜೀವನ[ಬದಲಾಯಿಸಿ]
ಪ್ರೌಢಶಾಲೆಯಲ್ಲಿ
ಸಾಹಿತ್ಯ ಕೃಷಿ[ಬದಲಾಯಿಸಿ]
ದಿವಾನ್ ರಂಗಾಚಾರ್ಯ ಅವರ ಬಗ್ಗೆ ಇಂಗ್ಲಿಷಿನಲ್ಲಿ ಬರೆದ ಲೇಖನ ಡಿ.ವಿ.ಜಿ ಅವರ ಬದುಕಲ್ಲಿ ಹೊಸ ತಿರುವು ಪಡೆಯಿತು. ಮುಂದೆ ಪುಸ್ತಕ ರೂಪಕ್ಕೆ ತರಲು ಹಲವು ಮಾರ್ಪಾಡು ಮಾಡಿದರು. ಇದು ಪ್ರಕಟವಾಗುತ್ತಿದ್ದಂತೆ ಕೃತಿ ಪ್ರಕಟಣೆ ಮೂಲಕವೂ ಹಣ ಬರುವಂತಾಯಿತು.
ಗುಂಡಪ್ಪನವರ ಸಮಗ್ರ ಸಾಹಿತ್ಯ[೫][ಬದಲಾಯಿಸಿ]
ಸಾಹಿತ್ಯ ಮಾತ್ರವಲ್ಲದೆ ಚರಿತ್ರೆ, ರಾಜನೀತಿ, ತತ್ವಜ್ಞಾನ, ಪ್ರಜಾಪ್ರಭುತ್ವ, ಸಮಾಜ ವಿಜ್ಞಾನ, ಸಾರ್ವಜನಿಕ ಜೀವನ, ಮುಂತಾದ ಹಲವಾರು ವಿಷಯಗಳನ್ನು ಕುರಿತು ಅವರು 66 ಕನ್ನಡ ಕೃತಿಗಳನ್ನು ರಚಿಸಿರುವುದರ ಜೊತೆಗೆ, ಇಂಗ್ಲಿಷ್ – ಕನ್ನಡ ಭಾಷೆಗಳೆರಡರಲ್ಲಿಯೂ ನೂರಾರು ಉಪಯುಕ್ತ ಲೇಖನಗಳನ್ನೂ ಬರೆದಿರುತ್ತಾರೆ. ಇವರ ಇಂಗ್ಲಿಷ್ ಕೃತಿಗಳು ಹಾಗೂ ಲೇಖನಗಳನ್ನು ವಿಶ್ವವಿಖ್ಯಾತ ವಿದ್ವಾಂಸರಾದ ಡಾ. ಎ.ಬಿ. ಕೀತ್ ಹಾಗೂ ಸಿ.ಎಫ್. ಆಂಡ್ರ್ಯೂಸ್ ಮತ್ತು ನಮ್ಮ ದೇಶದ ಅಗ್ರಗಣ್ಯ ವ್ಯಕ್ತಿಗಳಾಗಿದ್ದ ಎಸ್.
ಕವಿತೆಗಳು[ಬದಲಾಯಿಸಿ]
- ನಿವೇದನ (1942)
- ಉಮರನ ಒಸಗೆ
- ಮಂಕುತಿಮ್ಮನ ಕಗ್ಗ - I
- ಮರುಳ ಮುನಿಯನ ಕಗ್ಗ - II
- ಶ್ರೀರಾಮ ಪರೀಕ್ಷಣಂ
- ಅ೦ತಃಪುರಗೀತೆ
- ಗೀತ ಶಾಕುಂತಲಾ
- ಜ್ಞಾಪಕ ಚಿತ್ರಶಾಲೆ
ನಿಬಂಧ[ಬದಲಾಯಿಸಿ]
- ಜೀವನ ಸೌಂದರ್ಯ ಮತ್ತು ಸಾಹಿತ್ಯ
- ಸಾಹಿತ್ಯ ಶಕ್ತಿ
- ಸಂಸ್ಕೃತಿ
- ಬಾಳಿಗೊಂದು ನಂಬಿಕೆ
- ಜೀವವನಧರ್ಮ ಯೋಗ (ದೈನಂದಿನ ಜೀವನದ ಯೋಗ)-(ಗೀತೆಯ ಮೇಲೆ ಪ್ರವಚನ ಸಂಗ್ರಹ)
ನಾಟಕ[ಬದಲಾಯಿಸಿ]
- ವಿದ್ಯಾರಣ್ಯ ವಿಜಯ
- ಜಾಕ್ ಕೇಡ್
- ಮ್ಯಾಕ್
ಇಂಗ್ಲಿಷಿನಲ್ಲಿ[ಬದಲಾಯಿಸಿ]
- Vedanta and Nationalism (1909)
- The Problems of Indian Native States (1917)
- The Native States in the Empire (1918)
- The Indian Native States and the Montagu-Chelmsford Report (1918)
- The Government of India and the Indian States, The Indian States Committee : A Note on its Terms of Reference and Their Implications (1928)
- All About Mysore (1931)
- The States and their People in the Indian Constitution (1931)
ಸಾಧನೆ[ಬದಲಾಯಿಸಿ]
- ೧೯೩೫ ರಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸ್ಥಾಪಿಸಿದರು.
- ಡಿ.ವಿ.ಜಿ. ಅವರು, ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿದ ‘ಇಂಗ್ಲಿಷ್–ಕನ್ನಡ ನಿಘಂಟು’ ಕೃತಿಯ ಸಂಪಾದಕ ಸಮಿತಿಯಲ್ಲಿದ್ದರು.
- 1939ರಲ್ಲಿ ಮೈಸೂರು ರಾಜ್ಯಾಂಗ ಸುಧಾರಣಾ ಸಮಿತಿ ಸದಸ್ಯರಾಗಿದ್ದರು.
ರಾಜಕೀಯ ದೃಷ್ಟಿಕೋನ[ಬದಲಾಯಿಸಿ]
- ಅವರ ಈ ಮಾತುಗಳು: ‘ರಾಜದಂಡ ಹುಟ್ಟಿದ್ದು ಮನುಷ್ಯನಿಗೆ ಮನುಷ್ಯನ ವಿಷಯದಲ್ಲಿರುವ ಹೆದರಿಕೆಯಿಂದ. ರಾಜ್ಯನಿಬಂಧನೆಯಾದದ್ದೂ ಮನುಷ್ಯನಿಗೆ ಮನುಷ್ಯನಲ್ಲಿರುವ ಅಪನಂಬಿಕೆಯಿಂದ. ಮನುಷ್ಯರು ಅನ್ಯೋನ್ಯ ಸಹವಾಸದಲ್ಲಿರಬೇಕಾಗಿಬಂದ ಮೇಲೆ, ಒಬ್ಬನನ್ನೊಬ್ಬನು ನಂಬದಿದ್ದರೆ ಬದುಕು ಸಾಗದು; ಪೂರ್ತಿ ನಂಬುವುದೆಂದರೆ ವಂಚನೆಯ ಶಂಕೆ.
- ಹೀಗೆ ನಂಬಿಕೆ–ಅಪನಂಬಿಕೆಗಳ ಬೆರಕೆಯೇ ರಾಜ್ಯಸಂಬಂಧಗಳ ಒಳತಿರುಳು... ಸಾರ್ವಜನಿಕ ಕಾರ್ಯಕ್ಕೆಂದು ಮುಂದೆ ಬರುವವರ ಮನಸ್ಸುಗಳಲ್ಲಿ ಪ್ರತ್ಯಕ್ಷವಾಗಲ್ಲದಿದ್ದರೆ ಪರೋಕ್ಷವಾಗಿಯಾದರೂ, ಸಮೀಪದಲ್ಲಿ ಅಲ್ಲದಿದ್ದರೆ ದೂರವಾಗಿಯಾದರೂ, ಸ್ವಪ್ರಯೋಜನದ ನಿರೀಕ್ಷೆ ಅಷ್ಟೋ ಇಷ್ಟೋ ಇರುವುದು ಅಸ್ವಾಭಾವಿಕವಲ್ಲ. ಆದರೆ ಎಲ್ಲಿ ಅವರು ನೂರಕ್ಕೆ ನೂರು ಮಂದಿಯೂ ಅಂಥವರೇ ಆಗಿದ್ದಾರೆಯೋ ಆ ದೇಶ ತೀರ ಬಡದೇಶವೆನ್ನಬೇಕು.
- ಸ್ವಾಭಾವಿಕವಾದ ಆಶಾಪ್ರವೃತ್ತಿಯ ಮಟ್ಟದಿಂದ ಮೇಲೇರಿ ನಡೆಯಬಲ್ಲವನು ದೇಶದ ನೂರರಲ್ಲಿ ಹತ್ತು ಮಂದಿಯಾದರೂ ಎಲ್ಲಿ ದೊರೆಯುತ್ತಾರೆಯೋ ಅದೇ ಪ್ರಜಾರಾಜ್ಯವನ್ನು ಅನರ್ಥದಿಂದ ಉಳಿಸಿಕೊಳ್ಳಬಲ್ಲ ದೇಶ’.
- ರಾಜಕೀಯ ಒಂದು ಉದ್ಯಮವಾಗಿ ಪರಿವರ್ತನೆಯಾಗುವುದರ ಅಪಾಯದ ಬಗ್ಗೆಯೂ ಡಿವಿಜಿ ಎಚ್ಚರಿಸಿದ್ದರು. ‘ಅನ್ನ ವಸ್ತು ಸಂಪಾದನೆಗಾಗಿ ಬೇರೆ ವೃತ್ತಿಯನ್ನಿರಿಸಿಕೊಂಡು, ಕೇವಲ ಸಾರ್ವಜನಿಕ ಹಿತದೃಷ್ಟಿಯಿಂದ ರಾಜಕೀಯಕ್ಕೆ ಕೈ ಹಚ್ಚುವವರೆಲ್ಲ ನಿಷ್ಪಾಕ್ಷಿತ ರಾಜ್ಯಸ್ಥರೇ. ಅಂಥವರ ಸ್ವತಂತ್ರ ಪೋಷಣೆಯಿಂದ ಬೆಳೆಯಬೇಕಾದದ್ದು ನಮ್ಮ ರಾಜಕೀಯ’ ಎಂದು ಆಶಿಸಿದರು.[೬]
ಗೌರವಗಳು / ಪ್ರಶಸ್ತಿಗಳು[ಬದಲಾಯಿಸಿ]
- ಡಿ.ವಿ.ಗುಂಡಪ್ಪನವರು ೧೯೩೨ ರಲ್ಲಿ ಮಡಿಕೇರಿಯಲ್ಲಿ ನಡೆದ ೧೮ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದರು.[೭]
- ೧೯೬೧ ರಲ್ಲಿ ಡಿ.ವಿ.ಜಿ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಿ. ಲಿಟ್. ಪದವಿ ನೀಡಿ ಗೌರವಿಸಿತು. ಇದು ಡಿ.ವಿ.ಜಿ ಅವರು ಪತ್ರಿಕೋದ್ಯಮ ಹಾಗೂ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಗಾಗಿ ಸಂದ ಪುರಸ್ಕಾರ.
- ೧೯೬೭ ರಲ್ಲಿ ಶ್ರೀಮದ್ಭಗವದ್ಗೀತಾ ತಾತ್ಪರ್ಯ[೮] ಎಂಬ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.
- ೧೯೭೩ ರಲ್ಲಿ ಡಿ.ವಿ.ಜಿ ಸನ್ಮಾನ ಸಮಿತಿ ಇವರಿಗೆ ಒಂದು ಲಕ್ಷ ರೂಪಾಯಿಗಳ ಗೌರವಧನ ಸಮರ್ಪಿಸಿತು. ಇದನ್ನು ತಾವೇ ಸ್ಥಾಪಿಸಿದ ಗೋಖಲೆ ಸಂಸ್ಥೆಗೆ ದಾನ ಮಾಡಿದರು.
- ೧೯೭೪ರಲ್ಲಿ ಭಾರತ ಸರ್ಕಾರ "ಪದ್ಮಭೂಷಣ ಪ್ರಶಸ್ತಿ" ನೀಡಿ ಗೌರವಿಸಿತು.[೯]
- ಭಾರತೀಯ ಅಂಚೆ ಸೇವೆ ಡಿವಿಜಿಯವರ ನೆನಪಿಗಾಗಿ ೧೯೮೮ರಲ್ಲಿ ಅಂಚೆಚೀಟಿ ಬಿಡುಗಡೆ ಮಾಡಿತು.[೧೦]
ಅವರ ಹಾಸ್ಯಪ್ರಜ್ಞೆ[ಬದಲಾಯಿಸಿ]
ಜೀವನದಲ್ಲಿ ತೊಂದರೆಗಳಿದ್ದರೂ ಅವರಲ್ಲಿ ಹಾಸ್ಯ ಪ್ರವೃತ್ತಿಯೂ ಇತ್ತು. ಅವರು ವ್ಯಾಕರಣಕಲಿಯಲು ಗರಣಿಕೃಷ್ಣಾಚಾರ್ಯರಲ್ಲಿ ಹೋದಾಗ ಅವರಿಗೆ ಶಬ್ದಶಾಸ್ತ್ರ ಒಲಿಯದೆ ಸೂಪಶಾಸ್ತ್ರದಲ್ಲಿ ಪರಿಣತಿ ಪಡೆದುದಾಗಿ ಒಂದು ಹಾಸ್ಯ ಭರಿತ ಸಂಸ್ಕೃತ ಶ್ಲೋಕದಲ್ಲಿ ಹೇಳುತ್ತಾರೆ:
ನ ವೇದಾಂತೇ ಗಾಢಾ ನಚ ಪರಿಚಿತಂ ಶಬ್ದಶಾಸ್ತ್ರಂ|
ನ ವಾ ತರ್ಕೇ ವೇದೇ ನ ಚ ಸರಸತಾ ಕಾವ್ಯನಿಹವೇ|
ವಯಂ ಶ್ರೀಮದ್ಬ್ಯಾಳೀಹುಳಿ ಪಳದ್ಯ ಕೊಸುಂಂಬ್ರಿತೊವ್ವೀ|
ಹಯಗ್ರೀವಾಂಬೋಡೀ ಕರಿಗಡಬು ದಧ್ಯನ್ನ ರಸಿಕಾಃ||
ಅರ್ಥ: ನಾವು ವೇದಂತದಲ್ಲಿ ನುರಿತವರಲ್ಲ, ವ್ಯಾಕರಣವನ್ನೂ ಅರಿತವರಲ್ಲ, ತರ್ಕವೇದಗಳನ್ನೂ ತಿಳಿದವರಲ್ಲ, ಸಾಹಿತ್ಯದಲ್ಲಿ ಸರಸತೆಇಲ್ಲ, ಆದರೆ ಕೇವಲ ಶ್ರೀಮದ್ ಬೇಳೇಹುಳಿ,ಪಳದ್ಯ, ಕೋಸಂಬರಿ, ತೊವ್ವೆ,ಹಯಗ್ರೀವ, ಅಂಬೊಡೆ, ಕರಿಗಡಬು ಮತ್ತು ಮೊಸರನ್ನದಲ್ಲಿ ರಸಿಕರು.[೧೧]
ಸ್ಮಾರಕ[ಬದಲಾಯಿಸಿ]
ನಿಧನ[ಬದಲಾಯಿಸಿ]
೧೯೭೫ ರ ಅಕ್ಟೋಬರ್ ೭ ರಂದು ಡಿ ವಿ ಜಿ ನಿಧನರಾದರು.[೧೪][೧೫][೧೬]
ಹೆಚ್ಚಿಗೆ ಓದಲು[ಬದಲಾಯಿಸಿ]
- ಬಿ. ಜಿ. ಎಲ್. ಸ್ವಾಮಿ
- ಮಂಕುತಿಮ್ಮನ ಕಗ್ಗ
- ಮರುಳ ಮುನಿಯನ ಕಗ್ಗ
- ಕನ್ನಡ ನೆಲದಲ್ಲಿ ಗಾಂಧಿ ಡಿ.ವಿ.ಜಿ.ಗಾಂಧೀಜಿಯವರನ್ನು ಮೊಟ್ಟಮೊದಲಿಗೆ ಕರ್ನಾಟಕಕ್ಕೆ ಕರೆತಂದಿದ್ದರು.
- ಡಿ.ವಿ. ಗುಂಡಪ್ಪನವರ ಚೊಚ್ಚಿಲ ಕೃತಿ ‘ವೇದಾಂತ ಅಂಡ್ ನ್ಯಾಷನಲಿಸಂ[೧] Archived 2022-07-05 ವೇಬ್ಯಾಕ್ ಮೆಷಿನ್ ನಲ್ಲಿ.
- ಡಿವಿಜಿ:ಪ್ರಜಾಪ್ರಭುತ್ವದ ಬೆಳಕು;ಎಸ್. ಸೂರ್ಯಪ್ರಕಾಶ ಪಂಡಿತ್;17 Mar, 2017 Archived 2017-03-19 ವೇಬ್ಯಾಕ್ ಮೆಷಿನ್ ನಲ್ಲಿ.;
- ಕಣಜ-ಡಿವಿಗುಂಡಪ್ಪ.[ಶಾಶ್ವತವಾಗಿ ಮಡಿದ ಕೊಂಡಿ]
- ‘ಡಿ.ವಿ.ಗುಂಡಪ್ಪ: ಹೃದಯವಂತ ಧೀಮಂತ;Nateshababu H | Vijaya KarnatakaUpdated: 17 Mar 2012;ಅ.ರಾ.ಮಿತ್ರ
ಉಲ್ಲೇಖಗಳು[ಬದಲಾಯಿಸಿ]
- ↑ G Venkatasubiah (10 September 1995). D. V. Gundappa. Sahithya academy. ISBN 81-260-1386-9.
- ↑ Sahithya Academ(1988), p 1057
- ↑ Murthy (1992), pp. 173, 174, 178, 190
- ↑ Sahitya Akademi (1988), p. 1437
- ↑ ಈಶೋಪನಿಷತ್. ಕಾವ್ಯಾಲಯ, ಮೈಸೂರು. 1953. p. 53.
{{cite book}}
: Unknown parameter|Author=
ignored (|author=
suggested) (help) - ↑ "ಡಿವಿಜಿ: ಪ್ರಜಾಪ್ರಭುತ್ವದ ಬೆಳಕು;ಎಸ್. ಸೂರ್ಯಪ್ರಕಾಶ ಪಂಡಿತ್;17 Mar, 2017". Archived from the original on 2017-03-19. Retrieved 2017-03-17.
{{cite web}}
:|archive-date=
/|archive-url=
timestamp mismatch (help) - ↑ Vikas Kamat. "D.V. Gundappa". kamatdotcom. Retrieved 2013-08-02.
- ↑ "The Gita for Every Man". Yabaluri.org. Retrieved 2013-02-12.
- ↑ "Padma Bhushan Awardees". Archived from the original on 2014-08-09. Retrieved 2014-04-18.
{{cite news}}
:|archive-date=
/|archive-url=
timestamp mismatch (help) - ↑ "Commemorative stamp of Gundappa". Indianpost.com. 1988-03-17. Retrieved 2013-02-12.
- ↑ (ಜ್ಞಾಪಕಚಿತ್ರಶಾಲೆ:ಪ್ರಜಾವಾಣಿ:೩೦-೭-೨೦೧೬:)
- ↑ "Renovated Bugle Rock Park opens". The Times Of India. Archived from the original on 2014-01-17. Retrieved 2014-04-18.
{{cite news}}
:|archive-date=
/|archive-url=
timestamp mismatch (help) - ↑ "A park where legends met".
- ↑ "D.V.G ( Dr. D V Gundappa )". Archived from the original on 2012-11-05. Retrieved 2013-08-12.
{{cite news}}
:|archive-date=
/|archive-url=
timestamp mismatch (help) - ↑ "Retaining the old world charm". New Indian Express. Retrieved 2013-08-12.[ಶಾಶ್ವತವಾಗಿ ಮಡಿದ ಕೊಂಡಿ]
- ↑ "Mulbagal is cold to installation of DVG statue near KEB Circle". Deccan Herald. Retrieved 2013-08-12.
ಬಾಹ್ಯ ಸಂಪರ್ಕಗಳು[ಬದಲಾಯಿಸಿ]

- ಡಿ.ವಿ.ಜಿ. ಅವರ ಪತ್ರಗಳು Archived 2020-01-02 ವೇಬ್ಯಾಕ್ ಮೆಷಿನ್ ನಲ್ಲಿ.
- ಮರುಳ ಮುನಿಯನ ಕಗ್ಗ
- CS1 errors: unsupported parameter
- CS1 errors: archive-url
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ನವೆಂಬರ್ 2022
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Pages using infobox person with unknown parameters
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಜನವರಿ 2023
- Commons link is locally defined
- ಕನ್ನಡ ಸಾಹಿತ್ಯ
- ಸಾಹಿತಿಗಳು
- ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು
- ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
- ಕನ್ನಡ ಕವಿಗಳು