ವಿಷಯಕ್ಕೆ ಹೋಗು

ಟಿ.ಎಸ್ ನಾಗರಾಜ ಶೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟಿ.ಎಸ್ ನಾಗರಾಜ ಶೆಟ್ಟಿ
ನಾಗರಾಜ ಶೆಟ್ಟಿ
ಜನನಎಪ್ರಿಲ್ ೧೬ ೧೯೫೧
[ಚಾಕವೇಲು ಗ್ರಾಮ,ಬಾಗೇಪಲ್ಲಿ ತಾಲ್ಲೂಕು,ಕೋಲಾರ ಜಿಲ್ಲೆ]
ವೃತ್ತಿಕವಿ, ಲೇಖಕ, ಪ್ರಾಧ್ಯಾಪಕ, ವಿಮರ್ಶಕ.
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕಥೆ, ಕವಿತೆ,ವಿಮರ್ಶೆ, ಆತ್ಮ ಚರಿತ್ರೆ, ಜೀವನ ಚರಿತ್ರೆ, ಮಕ್ಕಳ ಸಾಹಿತ್ಯ
ವಿಷಯಮಕ್ಕಳ ಸಾಹಿತ್ಯ

ಮಕ್ಕಳ ಮನಸ್ಸನ್ನು ಮುಟ್ಟುವಂತೆ ಮನರಂಜನೆ, ನೀತಿಯನ್ನು ಕತೆ ಕವನಗಳ ಮೂಲಕ ಹೇಳುತ್ತಾ, ಲಯಬದ್ಧವಾಗಿ ಹಾಡಿ ಕುಣಿದು, ಹೂವಿನಂತೆ ಅರಳಿ ಸಂತೋಷಿಸುವಂತಹ ಮಕ್ಕಳ ಸಾಹಿತ್ಯ ರಚನೆಯಲ್ಲಿ ಅಗ್ರಗಣ್ಯರೆನಿಸಿದ್ದು ಪಂಜೆ, ರಾಜರತ್ನಂ, ದೇವುಡು, ಹೊಯ್ಸಳ,ಸಿಸು ಸಂಗಮೇಶ, ಈಶ್ವರ ಚಂದ್ರ ಚಿಂತಾಮಣಿ ಮುಂತಾದವರುಗಳ ಹಾದಿಯಲ್ಲಿ ಸಾಗಿರುವ ನಾಗರಾಜಶೆಟ್ಟರು ಹುಟ್ಟಿದ್ದು ಕೋಲಾರ ಜಿಲ್ಲೆಬಾಗೇಪಲ್ಲಿ ತಾಲ್ಲೂಕಿನ ಚಾಕವೇಲು ಗ್ರಾಮದಲ್ಲಿ ಎಪ್ರಿಲ್ ೧೬ ೧೯೫೧ರಂದು ಜಾನಿಸಿದರು . ತಂದೆ ಶ್ರೀರಾಮಯ್ಯ, ತಾಯಿ ವನಲಕ್ಷಮ್ಮ.

ಶಿಕ್ಷಣ[ಬದಲಾಯಿಸಿ]

ಚಾಕವೇಲುವಿನಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದು ಪ್ರೌಢಶಾಲೆಗೆ ಸೇರಿದ್ದು ಬೆಂಗಳೂರಿನ ರಾಷ್ಟ್ರೀಯ ಪ್ರೌಢಶಾಲೆ. ಸೆಂಟ್ರಲ್ ಕಾಲೇಜಿ ನಿಂದ ಬಿ.ಎ. ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಪಡೆದು ತಿಪಟೂರಿನ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರು.

ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ಸಾಹಿತ್ಯದ ಗೀಳು ಹತ್ತಿಸಿದವರು ಅಧ್ಯಾಪಕಿಯಾಗಿದ್ದ ಟಿ. ಎಸ್. ಸುಬ್ಬಲಕ್ಷ್ಮಿಯವರು. ಅವರು ಭೋಗೋಳ ಶಾಸ್ತ್ರದ ಅಧ್ಯಾಪಕಿಯಾಗಿದ್ದರೂ ವಾಲ್ ಮ್ಯಾಗಜಿನ್ ಕಮಿಟಿಯಲ್ಲಿದ್ದು , ಪ್ರಾರ್ಥನೆಯ ನಂತರ ಮಹಡಿ ಹತ್ತಿ ತರಗತಿಗೆ ಹೋಗುವ ಹಾದಿಯಲ್ಲಿ ಬೋರ್ಡಿಗೆ ಸಿಕ್ಕಿಸಿದ್ದ ಡ್ರಾಯಿಂಗ್ ಶೀಟಿನಲ್ಲಿ ಅಂದಿನ ದಿನವಿಶೇಷಕ್ಕೆ ಸರಿಯಾಗಿ ಚಿತ್ರ ಬಿಡಿಸಿ ಸಾಹಿತ್ಯ ರಚಿಸಬೇಕಿತ್ತು. ಈ ಕೆಲಸದಲ್ಲಿ ನಾಗರಾಜಶೆಟ್ಟರು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ರಚಿಸುತ್ತಿದ್ದ ಸಾಹಿತ್ಯಕ್ಕೆ ಅಧ್ಯಾಪಕಿ ಸುಬ್ಬುಲಕ್ಷ್ಮಿಯವರು ಪ್ರೋತ್ಸಾಹ ನೀಡಿದ್ದು ಇವರಿಗೆ ಸಾಹಿತ್ಯದಲ್ಲಿ ಸಾಧನೆ ಮಾಡಲು ಭದ್ರ ಬುನಾದಿಯನ್ನೊದಗಿಸಿತು.ಹೀಗೆ ಕವನಗಳನ್ನು ಬರೆಯತೊಡಗಿದ್ದು ಬರೆದ ಮೊದಲ ಕವನ ‘ಮೇಕೆ ಮರಿ’ ಯು ಗೋಕುಲ ವಾರಪತ್ರಿಕೆಯಲ್ಲಿ ಪ್ರಕಟಗೊಂಡನಂತರ ಕವನ ಬರೆಯುವ ಹುಚ್ಚಿಗೆ ಒಳಗಾದರು.

ಸಣ್ಣಕತೆಗಳು[ಬದಲಾಯಿಸಿ]

ಸಣ್ಣಕತೆಗಳ ಕ್ಷೇತ್ರವನ್ನು ಪ್ರವೇಶಿಸಿ ಸಾಮಾಜಿಕ ಹಾಗೂ ಬಂಡಾಯ ನೆಲೆಯ ಹಲವಾರು ಕತೆಗಳು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡವು. ಇವರ ಮೊದಲ ಕಥಾ ಸಂಕಲನ ಪ್ರಕಟವಾದದ್ದು ೧೯೭೯ ರಲ್ಲಿ. ನಂತರ ಬಾಲ ಸಾಹಿತ್ಯದತ್ತ ಹೊರಳಿ, ಹಲವಾರು ಮಕ್ಕಳ ಪದ್ಯಗಳನ್ನು ಬರೆದಿದ್ದು, ‘ನವಿಲು ಗರಿ’ ಎಂಬ ಸಂಕಲನವನ್ನು ೧೯೮೨ ರಲ್ಲಿ ಪ್ರಕಟಿಸಿದರು. ನವಿಲು ಗರಿ ಸಂಕಲನಕ್ಕೆ ಶಿವರಾಮ ಕಾರಂತರು ಮುನ್ನುಡಿ ಬರೆದಿದ್ದು “ನಾಲ್ಕು ನಾಲ್ಕು ಪಾದಗಳ ಚುಟುಕಗಳ ರೀತಿಯಲ್ಲಿ ಮಕ್ಕಳಿಗೆ ಪ್ರಿಯವಾಗಬಹುದಾದ, ಕಲ್ಪನೆಗೆ ಎಟುಕಬಹುದಾದ ವಿಷಯಗಳುಳ್ಳ ಅನೇಕ ಹಾಡುಗಳು ಮಕ್ಕಳ ಗಂಟಲಲ್ಲಿ ಕುಳಿತು, ಅವರ ನಿತ್ಯದ ಲೀಲಾಕೇಳಿಗಳಲ್ಲಿ ಮರುಕಳಿಸಿ ಮೂಡಬಹುದಾದ ಗುಣಗಳುಳ್ಳವು” ಎಂದಿದ್ದಾರೆ.

ಇವರ ಎರಡನೆಯ ಕೃತಿ ‘ಸಕ್ಕರೆ ಬೊಂಬೆ’ ಗೆ ಎಂ.ವಿ.ಸೀತಾರಾಮಯ್ಯನವರು ಮುನ್ನುಡಿ ಬರೆದಿದ್ದು “ಪದ್ಯಗಳ ವಸ್ತು ಹಾಗೂ ಆಕರ್ಷಕ ಶೈಲಿಗಳಿಂದ ಮಕ್ಕಳಲ್ಲಿ ಕುತೂಹಲ ಹುಟ್ಟಿಸುವಂತಹ ಕಲೆಗಾರಿಕೆ, ಸ್ವಾರಸ್ಯಕರವಾಗಿ ಹೇಳಿ, ತಿಳಿಹಾಸ್ಯದ ತೆರೆಯನ್ನೆಬ್ಬಿಸಿ ನೀತಿಯನ್ನು ಬೋಧಿಸುತ್ತಾರೆ” ಎಂದಿದ್ದಾರೆ.

ಇವಲ್ಲದೆ ಆಮೆ ಮತ್ತು ಹಂಸಗಳು, ಚಂದ್ರನ ಶಾಲೆ, ಮಕ್ಕಳನೆಹರುಸು, ಕೋತಿ ಮರಿ ಸೈಕಲ್ ಸವಾರಿ ಮುಂತಾದ ಮಕ್ಕಳ ಪದ್ಯಗಳ ಸಂಕಲನಗಳು; ಪ್ರಾಣಿಗಳ ಜಾತ್ರೆ, ಹಾವು ಕಪ್ಪೆ ಏಡಿ, ಚಿಟ್ಟೆಯ ಬಣ್ಣ, ಕರಡಿ ರಸಾಯನ ಮುಂತಾದ ಮಕ್ಕಳ ಕಥಾ ಸಂಕಲನಗಳು, ಚುಟ್ಟಿ ಪುಟ್ಟಿ, ಮಕ್ಕಳ ಯುಗಾದಿ, ಪ್ರಾಣಿಗಳ ಪರೀಕ್ಷೆ, ಪ್ರಾಣಿಗಳ ಪ್ರವಾಸ ಮುಂತಾದ ಮಕ್ಕಳ ಬಾನುಲಿ ರೂಪಕಗಳಲ್ಲದೆ ಮಕ್ಕಳ ಸಾಹಿತ್ಯದ ಆಳವಾದ ಅಧ್ಯಯನವನ್ನು ಕೈಗೊಂಡು ಮಕ್ಕಳ ಸಾಹಿತ್ಯದ ಬಗ್ಗೆ ಸುಳಿವು – ಹೊಳಹುಗಳನ್ನು ನೀಡಿ, ಮಕ್ಕಳ ಸಾಹಿತ್ಯ ಕುರಿತು ಆಲೋಚಿಸುವವರಿಗೆ, ಅಧ್ಯಯನ ಮಾಡುವವರಿಗೆ ಉಪಯುಕ್ತ ಕೃತಿಯಾದ “ಮಕ್ಕಳ ಸಾಹಿತ್ಯ: ಕೆಲವು ಅಧ್ಯಯನಗಳು ಮತ್ತು ಮಕ್ಕಳ ಸಾಹಿತ್ಯದ ಅಂದಿನ ಸ್ಥಿತಿ – ಗತಿಗಳನ್ನು ವಿವೇಚಿಸುತ್ತಾ ಇಂದಿನ ಮಕ್ಕಳ ಸಾಹಿತ್ಯದ ಬಗ್ಗೆ ಪಕ್ಷಿ ನೋಟ ಬೀರುವ ಕೃತಿ “ಮಕ್ಕಳ ಸಾಹಿತ್ಯ: ಅಂದು – ಇಂದು” (ಮಕ್ಕಳ ಸಾಹಿತಿ ಎಂ.ಜಿ.ಗೋವಿಂದರಾಜು ರವರೊಡನೆ ಸಹಲೇಖಕರಾಗಿ) ಮುಂತಾದ ೨೦ ಕ್ಕೂ ಕೃತಿಗಳನ್ನು ತಮ್ಮದೇ ಆದ ನಿರ್ಮಲ ಪ್ರಕಾಶನದಡಿಯಲ್ಲಿ ಹೊರತಂದಿದ್ದಾರೆ

ಇವುಗಳಲ್ಲದೆ ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಇಂಗ್ಲಿಷಿನಿಂದ ಅನುವಾದಿಸಿದ ಕೃತಿ “ಆದ್ಭುತ ಗ್ರಹದ ಕತೆ ಮತ್ತಿತರ ಕಥೆಗಳು”, “ಚೆಲುವನಹಳ್ಳಿ ಚತುರರು” (ಮಕ್ಕಳ ಸಾಹಸ ಕಾದಂಬರಿಯ ಸಹ ಲೇಖಕರು). ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ಮಕ್ಕಳ ಸಾಹಿತ್ತ- ೧೯೮೯ ಸಂಪಾದಕರಾಗಿ, ಕಾಲು ಶತಮಾನದ ಮಕ್ಕಳ ಸಾಹಿತ್ಯ ಸಂಪುಟ ೧-೨ ರ ಸಹಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಪ್ರಕಟಿತ ಪುಸ್ತಕಗಳು[ಬದಲಾಯಿಸಿ]

 1. ಸಂಕರ- ಸಣ್ಣಕತೆಗಳು-೧೯೭೯
 2. ನವಿಲು ಗರಿ-ಶಿಶುಗೀತೆಗಳು-೧೯೮೨[೧]
 3. ಸಕ್ಕರೆ ಬೂಂಬೆ-ಮಕ್ಕಳ ಪದ್ಯಗಳು- ೧೯೮೫
 4. ಚುಟ್ಟಿ ಪುಟ್ಟಿ-ಮಕ್ಕಳ ಬಾನುಲಿ ರೂಪಕಗಳೂ- ೧೯೮೮
 5. ಚಂದ್ರನ ಶಾಲೆ-ಮಕ್ಕಳ ಕವಿತೆಗಳು- ೧೯೮೯
 6. ಪ್ರಾಣಿಗಳ ಜಾತ್ರೆ-ಮಕ್ಕಳ ಕತೆಗಳು-೧೯೯೦
 7. ಹೀಗಿದ್ದರು ಹಿರಿಯರು-ಜೀವನ ಪ್ರಸಂಗಗಳು- ೧೯೯೦
 8. ಮಕ್ಕಳ ನೆರಹ-ನೆರಹ ಕುರಿತು ಗೀತೆಗಳು-೧೯೯೧
 9. ಹಾವು ಕಪ್ಪೆ-ಮಕ್ಕಳ ಕತೆಗಳು-೧೯೯೨
 10. ಮಕ್ಕಳ ಯುಗಾದಿ-ಮಕ್ಕಳ ಬಾನುಲಿ ರೂಪಕಗಳು-೧೯೯೩
 11. ಚಿಟೆಯ ಬಣ್ಣ-ಮಕ್ಕಳ ಕತೆಗಳು-೧೯೯೪
 12. ಪ್ರಾಣಿಗಳ ಪರೀಕ್ಶೆ- ಮಕ್ಕಳ ಬಾನುಲಿ ರೂಪಕಗಳು-೧೯೯೪
 13. ಸಮಗ್ರ ಮಕ್ಕಳ ಕವಿತೆಗಳು-೧೩೧ ಮಕ್ಕಳ ಕವನಗಳು-೧೯೯೬
 14. ಕರಡಿ ರಸಾಯನ- ೨೫ ಮಕ್ಕಳ ಕತೆಗಳು
 15. ಪ್ರಾಣಿಗಳ ಪ್ರವಾಸ
 16. ಬಾನುಲಿ ರೂಪಕಗಳು -೧೯೯೮
 17. ಅಸ್ವಾದನೆ-ವಿಮಶಾ೯ ಲೇಖನಗಳು -೧೯೯೬
 18. ಮಕ್ಕಳ ಸಾಹಿತ್ಯ-ಕೆಲವು ಅದ್ಯಯನಗಳು-೨೦೦೫

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

ಇವರು ಮಕ್ಕಳ ಸಾಹಿತ್ಯ ಸೇವೆಗಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ[೨], ಧಾರವಾಡದ ಮಕ್ಕಳ ಮನೆ ಪುರಸ್ಕಾರ, ಬನಹಟ್ಟಿಯ ಮಕ್ಕಳ ಸಾಹಿತ್ಯ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಕಾವ್ಯ ಸಿಂಧು ಪುರಸ್ಕಾರ, ಸಿಸುಸಂಗಮೇಶ ದತ್ತಿ ಪ್ರಶಸ್ತಿ, ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಬಾಲವಿಕಾಸ ಅಕಾಡಮಿ ಗೌರವ ಪ್ರಶಸ್ತಿ, ಡಾ. ಚನ್ನಬಸವ ಪಟ್ಟದೇವರ ಮಕ್ಕಳ ಸಾಹಿತ್ಯ ಪ್ರಶಸ್ತಿ ಮತ್ತು ಆರ್. ಕಲ್ಯಾಣಮ್ಮ ಮಕ್ಕಳ ಸಾಹಿತ್ಯ ಪ್ರಶಸ್ತಿಗಳು ದೊರೆತಿವೆ.

 1. ಚುಟ್ಟಿ ಪುಟ್ಟಿ ಪುಸ್ತಕಕ್ಕೆ ರಾಷ್ಟ್ರೀಯ ಪ್ರಶಸ್ತಿ ೧೯೯೧(ನವ ದೆಹಲಿಯ ರಾಷ್ರ್ಟೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯಿಂದ)
 2. ನವಿಲು ಗರಿಗೆ ಧಾರವಾಡದ ಮಕ್ಕಳ ಮನೆಯ ಪುರಸ್ಕಾರ ೧೯೮೩
 3. ಪ್ರಾಣಿಗಳ ಜಾತ್ರೆಗೆ ಧಾರವಾಡದ ಮಕ್ಕಳ ಮನೆಯ ಪುರಸ್ಕಾರ ೧೯೮೩
 4. ಮಕ್ಕಳ ಯುಗಾದಿಗೆ ಬನಹಟ್ಟಿಯ ಮಕ್ಕಯ ಸಂಗಮದಿಂದ ದಿವಂಗತ (ಮಹಾದೇವ ಲೋಕಪಾಕುರ್ಲಟ್ಟಿ ಸ್ಮಾರಕ ಮಕ್ಕಳ ಸಾಹಿತ್ಯ ಪ್ರಶಸ್ತಿ)೧೯೯೪
 5. ಸಮಗ್ರ ಮಕ್ಕಳ ಕವಿತೆಗಳು ಕೃತಿಗೆ ಆರ್ಯಭಟ್ಟ ಸಾಹಿತ್ಯ ಪ್ರಶಸ್ತಿ ೧೯೯೮
 6. ಪ್ರಾಣಿಗಳ ಪ್ರವಾಸ ಕೃತಿಗೆ ಗೊರೂರು ಸಾಹಿತ್ಯ ಪ್ರಶಸ್ತಿ ೧೯೯೮
 7. ಪ್ರಾಣಿಗಳ ಪ್ರವಾಸ ಕೃತಿಗೆ ಕಾವ್ಯ ಸಿಂಧು ಪುರಸ್ಕಾರ ೧೯೯೯
 8. ಕೋತಿಮರಿ ಸೈಕಲ್ ಸವಾರಿ ಕೃತಿಗೆ ಸಿಸು ಸಂಗಮಮೇಶ ಮಕ್ಕಳ ಸಾಹಿತ್ಯ ಅತ್ತಿ ಪ್ರಶಸ್ತಿ(ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು) ೨೦೦೬
 9. ಡಾ.ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ಪ್ರಶಸ್ತಿ(ಶಿವಮೊಗ್ಗದ ಕರ್ನಾಟ್ಕ ಸಂಘ ದಿಂದ) ೨೦೦೯
 10. ಡಾ.ಚನ್ನಬಸವ ಪಟ್ಟದೇವರು ಮಕ್ಕಳ ಸಾಹಿತ್ಯ ಪ್ರಶಸ್ತಿ(ಹಿರೇಮಠ ಸಂಸ್ಥಾನ ಭಾಲ್ಕಿ- ಇವರಿಂದ) ೨೦೦೯
 11. ಮಕ್ಕಳ ಕಣ್ಮಣಿ ಆರ್.ಕಲ್ಯಣಮ್ಮ ಮಕ್ಕಳ ಸಾಹಿತ್ಯ ಪ್ರಶಸ್ತಿ(ಮಕ್ಕಳ ಬೆಂಗಳೂರು) ೨೦೧೦
 12. ಗೌರವ ಪ್ರಶಸ್ತಿ (ಮಕ್ಕಳ ಸಾಹಿತ್ಯ ಸಾಧನೆಗಳು)ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಧಾರವಾಡ ೨೦೧೨

ಇತರೆ ಭಾಷೆಗಳಿಗೆ[ಬದಲಾಯಿಸಿ]

ಇವರು ಹಲವಾರು ಮಕ್ಕಳ ಕತೆಗಳು ಹಿಂದಿ ಹಾಗೂ ಮರಾಠಿಗೂ ಅನುವಾದ ಗೊಂಡಿದೆ. ಹಲವಾರು ಕವಿತೆ, ಕತೆಗಳು ಕರ್ನಾಟಕ ಸರಕಾರದ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಪಠ್ಯಗಳಲ್ಲಿ, ಮಹಾರಾಷ್ಟ್ರ ಸರಕಾರದ ಅಲ್ಪ ಸಂಖ್ಯಾತರ ಕನ್ನಡ ಪಠ್ಯ ಪುಸ್ತಕಗಳಲ್ಲೂ ಸೇರಿವೆ.

 1. ಪ್ರಾಣಿಗಳ ಜಾತ್ರೆ ಕತೆ ಹಿಂದಿ ಭಾಷೆಗೆ (ಕಲಕತ್ತದ ಭಾರತೀಯ ಭಾಷಾ ಪರಿಷತ ಶ್ರೀ ಬಾಲತಾರಿ ರೆಡ್ಡಿಯವರ ಸಂಪಾದಕತ್ವದಲ್ಲಿ ಬಂದಿರುವ ಶ್ರೇಷ್ಠ ಬಾಅಲ ಕಥಾನಿಯಾ ಸಂಪುಟದಲ್ಲಿ ಸೇರಿದೆ)೧೯೯೩
 2. ಚಿಟ್ಟೆಯ ಬಣ್ಣ ಮಕ್ಕಳ ಕತೆ ಮರಾಠಿ ಭಾಷೆಗೆ ಅನುವಾದಗೊಂಡು ಕೇಸರಿ ಪತ್ರಿಕೆಯಲ್ಲಿ ಪ್ರಕಟವಾಗಿದೆ
 3. ಪುಟ್ಟು ಮತ್ತು ಮರ ಮಕ್ಕಳ ಕತೆ ಮರಾಠಿ ಭಾಷೆಗೆ ಅನುವಾದಗೊಂಡು ಸಾಧನಾ ಪತ್ರಿಕೆಯಲ್ಲಿ ಪ್ರಕಟವಾಗಿದೆ ೧೨-೬-೨೦೦೪

ಇತರ ಗೌರವಗಳು[ಬದಲಾಯಿಸಿ]

 1. ಕೇರಳದ ತಿರುವನಂತಪುರದ 'ದಿ ಸ್ಟೇಟ್ ಇನ್ಸ್ಟಿಟ್ಯೂಟ್ ಆಫ್ ಚಿಲ್ಡ್ರನ್ಸ್ ಲಿಟರೇಚರ್' ಸಂಸ್ಥೆಯ ಆಹ್ವಾನದ ಮೇರೆಗೆ ನವೆಂಬರ್ ೨೦೦೩ರ ವಿಚಾರ ಸಂಕಿರಣದಲ್ಲಿ 'ಚಿಲ್ಡ್ರನ್ಸ್ ಲಿಟರೇಚರ್ ಇನ್ ಕನ್ನಡ' ಪ್ರಬಂಧ ಮಂಡನೆ.
 2. ಚಂಡೀಗಢದ 'ಇಂಡಿಯಾ ಕಾಂಟಿನೆಂಟಲ್ ಕಲ್ಚರಲ್ ಅಸೋಸಿಯೇಷನ್' ಕುರುಕ್ಷೇತ್ರದಲ್ಲಿ ನಡೆಸಿದ 'ಅಂತಾರಾಷ್ಟ್ರೀಯ ಲೇಖಕರ ಸಮಾವೇಶ ೨೦೦೬'ರಲ್ಲಿ 'ಶಾಂತಿಗೀತೆ' ಕವನ ವಾಚನ(ದಿನಾಂಕ:೨೧-೦೩-೨೦೦೮)
 3. ಅಸ್ಸಾಮಿನ ಗುವಾಹಟಿಯಲ್ಲಿನ ಪ್ರಾಗ್ಜೋತಿಷ ಕಾಲೇಜಿನ ಅಸ್ಸಾಮಿ ಭಾಷಾ ವಿಭಾಗ 'ಅಸೋಮ್ ಕಲಾತೀರ್ಥ'ದ ಸಹಯೋಗದಲ್ಲಿ ನಡೆಸಿದ ಮೂರನೆಯ ಅಂತಾರಾಷ್ಟ್ರೀಯ ಸಮಾವೇಶದಲ್ಲಿ 'ಶರಣ ಮುವ್ಮೆಂಟ್ ಆಫ್ ಟ್ವೆಲ್ತ್ ಸೆಂಚುರಿ ಇನ್ ಕರ್ನಾಟಕ' ಪ್ರಬಂಧ ಮಂಡನೆ.(ದಿನಾಂಕ:೧೧-೦೩-೨೦೦೭)
 4. ಪ್ರಯಾಗದ 'ಭಾರತೀ ಪರಿಷತ್' ಲಕ್ನೋದಲ್ಲಿ ನಡೆಸಿದ ಅಖಿಲ ಭಾರತ ಲೇಖಕರ ಸಮಾವೇಶದಲ್ಲಿ ಕೇದರಿನಾಥ ತ್ರಿಪಾಠಿ ಅವರಿಂದ ಸನ್ಮಾನ ಸಹಿತ 'ಹಿಂದಿ ಮಾರ್ತಾಂಡ್' ಉಪಾಧಿ ಸ್ವೀಕಾರ.
 5. ಪ್ರಯಾಗದ 'ಭಾರತೀ ಪರಿಷತ್' ಉತ್ತರ ಭಾರತದ ಜೈಪುರದಲ್ಲಿ ನಡೆಸಿದ ಸಾಹಿತಿಗಳ ಸಮಾವೇಶದಲ್ಲಿ 'ಸದ್ಯದ ಕನ್ನಡ ಭಾಷೆಯ ಸ್ಥಿತಿಗತಿಗಳು' ಕುರಿತು ಉಪನ್ಯಾಸ.
 6. ೧೯೯೧ರಲ್ಲಿ ಆಗಿನ ರಾಷ್ಟ್ರಪತಿಗಳಾದ ಡಾ.ಶಂಕರ್ ದಯಾಳ್ ಶರ್ಮಾ ಅವರಿಂದ 'ರಾಷ್ಟ್ರ ಪ್ರಶಸ್ತಿ' ಸ್ವೀಕಾರ.
 7. ೨೦೦೭ರಲ್ಲಿ ಆಗಿನ ರಾಷ್ಟ್ರಪತಿಗಳಾದ ಡಾ.ಎ.ಪಿ.ಜೆ.ಅಬ್ದು ಕಲಾಮ್ ಅವರಿಂದ ದಿನಾಂಕ ೨೬-೦೧-೨೦೦೭ರ ಗಣರಾಜ್ಯೋತ್ಸವದ ಚಹಾಕೂಟಕ್ಕೆ ಆಹ್ವಾನಿತ.
 8. ೧೯೯೮ರಿಂದ ೨೦೦೧ರವರೆಗೆ 'ಕರ್ನಾಟಕ ಸಾಹಿತ್ಯ ಅಕಾಡೆಮಿ'ಯ ಸದಸ್ಯನಾಗಿ ಸೇವೆ.

ವಿಶೇ‌‍ಷ ಲೇಖನಗಳು[ಬದಲಾಯಿಸಿ]

 1. ಹಂತಿಯ ಕನ್ನಡ
 2. ಮಕ್ಕಳ ಕಾವ್ಯ
 3. ಕುವೆಂಪು ಅವರ ಮಕ್ಕಳ ಸಾಹಿತ್ಯ
 4. ಜೆ.ಪಿ. ರಾಜರತ್ನಂ ಅವರ ಮಕ್ಕಳ ಸಾಹಿತ್ಯ

ಉಲ್ಲೇಖ[ಬದಲಾಯಿಸಿ]

 1. http://www.engineeringbooks.in/Books/Author-search-T.S.+Nagaraja+Setty--1-.html[ಶಾಶ್ವತವಾಗಿ ಮಡಿದ ಕೊಂಡಿ]
 2. "ಆರ್ಕೈವ್ ನಕಲು". Archived from the original on 2015-08-14. Retrieved 2015-09-01.