ಎಂ.ವಿ.ಸೀತಾರಾಮಯ್ಯ

ವಿಕಿಪೀಡಿಯ ಇಂದ
Jump to navigation Jump to search

ಎಂ.ವಿ.ಸೀತಾರಾಮಯ್ಯ(ಮೈಸೂರು ವೆಂಕಟದಾಸಪ್ಪ ಸೀತಾರಾಮಯ್ಯ)ನವರು ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು. ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ವ್ಯಾಕರಣ ಕ್ಷೇತ್ರಕ್ಕೆ ಹಾಗೂ ಹಸ್ತಲಿಪಿ ಶಾಸ್ತ್ರಕ್ಕೆ ಅವರ ಕೊಡುಗೆ ಅಪಾರ. ಅವರು ಒಳ್ಳೆಯ ಚಿತ್ರಕಾರರೂ ಆಗಿದ್ದರು. ಕೆಲ ಕಾಲ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯೂ ಆಗಿದ್ದರು.

ಜೀವನ[ಬದಲಾಯಿಸಿ]

ಎಂ.ವಿ.ಸೀತಾರಾಮಯ್ಯನವರು ೧೯೧೦ ಸಪ್ಟಂಬರ ೯ರಂದು ಮೈಸೂರಿನಲ್ಲಿ ಜನಿಸಿದರು. ಇವರ ತಾಯಿ ಸಾವಿತ್ರಮ್ಮ ; ತಂದೆ ವೆಂಕಟದಾಸಪ್ಪ. ಅವರ ಶಿಕ್ಷಣವು ಬನುಮಯ್ಯ ಪ್ರೌಢಶಾಲೆ, ಇಂಟರ್‍ಮೀಡಿಯೇಟ್ ಕಾಲೇಜು ಹಾಗೂ ಮಹಾರಾಜ ಕಾಲೇಜಿನಲ್ಲಿ ನಡೆಯಿತು. ಎಂ.ಎ. ಪದವಿ ಪಡೆದ ಬಳಿಕ ಇವರು ಕನ್ನಡದ ಅಧ್ಯಾಪಕರಾಗಿ ಸೇವೆ ಸಲ್ಲಿಸಿ 1967ರಲ್ಲಿ ನಿವೃತ್ತರಾದರು. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ಕನ್ನಡ ನಿಘಂಟಿನ ಸಹಾಯಕ ಸಂಪಾದಕರಾಗಿ ಸೇವೆ ಸಲ್ಲಿಸಿದರು. ನಿವೃತ್ತಿಯ ನಂತರ ಐದು ವರ್ಷಗಳ ಕಾಲ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಎಂ.ವಿ.ಸೀತಾರಾಮಯ್ಯನವರು 12-3-1990ರಂದು ನಿಧನ ಹೊಂದಿದರು.

ವೃತ್ತಿಜೀವನ[ಬದಲಾಯಿಸಿ]

1934-39: ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ
1939-46: ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ಕನ್ನಡ ನಿಘಂಟಿನ ಸಹಾಯಕ ಸಂಪಾದಕ
1946: ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ
1963: ರೀಡರ್ ಆಗಿ ಬಡ್ತಿ
1967: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಪ್ರಾಧ್ಯಾಪಕ

ಕೃತಿಗಳು[ಬದಲಾಯಿಸಿ]

ರಾಘವ ಎನ್ನುವ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಎಂ.ವಿ. ಸೀತಾರಾಮಯ್ಯನವರು 15 ಕವನಸಂಕಲನಗಳು, 10 ಕಥಾಸಂಕಲನಗಳು, 10 ಕಾದಂಬರಿಗಳು ಹಾಗೂ 9 ನಾಟಕಗಳೂ ಸೇರಿದಂತೆ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಕೃತಿಗಳು ಇಂತಿವೆ:

ಕವನ ಸಂಕಲನ[ಬದಲಾಯಿಸಿ]

 • ಹಕ್ಕಿ ಹಾಡು
 • ರಾಗ
 • ಅಶೋಕ ಚಕ್ರ
 • ಆ ಚಿತ್ರಗಳು ಮತ್ತು ಇತರ ಕಥನ ಕವನಗಳು
 • ವಿಶ್ವಜ್ಯೋತಿ ಬಾಪು
 • ರಾಷ್ಟ್ರರಥ
 • ಗೀತಭಾರತಿ
 • ಹಂಸಪಥ

ಕಥಾ ಸಂಕಲನ[ಬದಲಾಯಿಸಿ]

 • ರತಿದೇವಿ ಮತ್ತು ಇತರ ಕಥೆಗಳು
 • ಬಿಸಿಲು ಬೆಳದಿಂಗಳು
 • ನಿಲ್ದಾಣಗಳ ನಡುವೆ
 • ಶಿಲಾಮುಖ
 • ಯೌವನಸುಧೆ
 • ಮಾರ್ಗದರ್ಶಕ
 • ಕರುಣಾಲಹರಿ

ನಾಟಕ[ಬದಲಾಯಿಸಿ]

 • ತೆರೆಮರೆಯ ಚಿತ್ರಗಳು
 • ತೊಟ್ಟಿಲು ತೂಗದ ಕೈ
 • ಸ್ವಯಂವರ
 • ಜೀವನ ನಾಟಕ

ಕಾದಂಬರಿ[ಬದಲಾಯಿಸಿ]

 • ಭಾಗ್ಯಲಕ್ಷ್ಮಿ
 • ನಂಜಿನ ಸವಿ
 • ಜೀವನದ ಜೊತೆಗಾರ
 • ಮಾವನ ಮಗಳು
 • ಸ್ನೇಹದ ಕಾಣಿಕೆ
 • ತಾಯ ಬಯಕೆ

ಪ್ರಬಂಧ[ಬದಲಾಯಿಸಿ]

 • ಧೂಮಲೀಲೆ
 • ಮುಗಿಲುಗಳು
 • ಹಿಡಿಹೂವು
 • ಹಿತಚಿಂತನ
 • ಬಾಳಿನ ಬುತ್ತಿ

ಸಂಪಾದನೆ[ಬದಲಾಯಿಸಿ]

 • ಚಿನ್ನದ ಬೆಳಸು
 • ಕವಿರಾಜಮಾರ್ಗ
 • ಉದಯಾದಿತ್ಯಾಲಂಕಾರ

ವಿಮರ್ಶೆ[ಬದಲಾಯಿಸಿ]

 • ಹೊಸಗನ್ನಡ ಸಾಹಿತ್ಯ ಮತ್ತು ಇತರ ಲೇಖನಗಳು
 • ಭಾರತೀಯ ಕಾವ್ಯಮೀಮಾಂಸೆಗೆ ಕನ್ನಡ ಕವಿಗಳ ಕೊಡುಗೆ
 • ಕಾವ್ಯ ಮೀಮಾಂಸೆ
 • ಜೈಮಿನಿ ಭಾರತ ಸಮೀಕ್ಷೆ

ಬಾಲಸಾಹಿತ್ಯ[ಬದಲಾಯಿಸಿ]

 • ಹಾವಾಡಿಗ
 • ಹೂವಾಡಗಿತ್ತಿ
 • ಕೋಡಂಗಿ

ಇತರೆ[ಬದಲಾಯಿಸಿ]

 1. ಸಾಹಿತ್ಯ ಮತ್ತು ಚಿತ್ರಕಲೆ

ಪುರಸ್ಕಾರ[ಬದಲಾಯಿಸಿ]

 • ‘ಆ ಚಿತ್ರಗಳು’ ನೀಳ್ಗವನಕ್ಕೆ ಬಿ.ಎಂ.ಶ್ರೀ. ಸ್ವರ್ಣಪದಕ ದೊರೆತಿದೆ.
 • ‘ಹಕ್ಕಿ ಹಾಡು’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ.
 • ‘ಮಾವನ ಮಗಳು’ ಕಾದಂಬರಿಗೆ ‘ದೇವರಾಜ ಬಹಾದ್ದೂರ್’ ಬಹುಮಾನ ಲಭಿಸಿದೆ.
 • ‘ತೊಟ್ಟಿಲು ತೂಗದ ಕೈ’ ಮತ್ತು ‘ಜೀವನ ನಾಟಕ’ ಗಳಿಗೆ ಕರ್ನಾಟಕ ಸರಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ಬಹುಮಾನ,
 • ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ,
 • ಜ.ಚ.ನಿ ಅವರಿಂದ ‘ವಿಚಾರ ರತ್ನಾಕರ’ ಬಿರುದು ದೊರೆತಿವೆ.
 • ರಾಜ್ಯೋತ್ಸವ ಪ್ರಶಸ್ತಿ

ಅಭಿನಂದನಾ ಗ್ರಂಥ[ಬದಲಾಯಿಸಿ]

ಇವರ ಅಭಿಮಾನಿಗಳು 'ಆಸ್ವಾದ' ಎಂಬ ಅಭಿನಂದನಾ ಗ್ರಂಥವನ್ನು ಅರ್ಪಿಸಿದ್ದಾರೆ.