ಕನ್ನಡ ಸಾಹಿತ್ಯ ಪರಿಷತ್ತು
ವಿಳಾಸ: | ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು - ೫೬೦೦೧೮ |
---|---|
ಫೋನ್: | +೯೧ ೦೮೦ ೨೬೬೧೨೯೯೧ (+91 080 26612991) |
ಅಧ್ಯಕ್ಷರು : | ಡಾ. ಮಹೇಶ್ ಜೋಷಿ |
ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ೧೯೧೫ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು.ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ ೧೯೩೫ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು.ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ. ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸಲು ಈ ಹಿಂದೆ ಸಾಧ್ಯವಾಗಿಸಿದೆ. ಈ ಸಂಸ್ಥೆಯ ಈಗಿನ ಅಧ್ಯಕ್ಷರಾಗಿ ಡಾ. ಮಹೇಶ್ ಜೋಷಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳ ಪಟ್ಟಿ
[ಬದಲಾಯಿಸಿ]೧೯೧೫ ರಿಂದ ೧೯೪೦ ರವರೆಗೆ ಕಸಾಪ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತಿತ್ತು. ಬಳಿಕ ಚುನಾವಣಾ ಪದ್ಧತಿ ಜಾರಿಗೆ ಬಂದಿತು.[೧]
- ಶ್ರೀ ಎಚ್. ವಿ. ನಂಜುಂಡಯ್ಯ - ೧೯೧೫-೧೯೨೦
- ಸರ್. ಎಂ. ಕಾಂತರಾಜ ಅರಸ್ - ೧೯೨೦-೧೯೨೩
- ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಬಹದ್ದೂರ್ - ೧೯೨೪ - ೧೯೪೦
- ಶ್ರೀ ಜಯಚಾಮರಾಜ ಒಡೆಯರ್ ಬಹದ್ದೂರ್ - ೧೯೪೦-೧೯೪೦
- ಶ್ರೀ ಬಸವಪ್ರಭು ರಾಜಾ ಲಖಮನಗೌಡ ಸರದೇಸಾಯಿ ಬಹದ್ದೂರ್ - ೧೯೪೧-೧೯೪೬
- ಶ್ರೀ ಲೋಕೂರ್ ನಾರಾಯಣರಾವ್ ಸ್ವಾಮಿರಾವ್ - ೮-೬-೧೯೪೭ ರಿಂದ ೨೯-೧೨-೧೯೪೭
- ಶ್ರೀ ತಿರುಮಲೆ ತಾತಾಚಾರ್ಯ ಶರ್ಮ - ೨೯-೧೨-೧೯೪೭ ರಿಂದ ೬-೩-೧೯೪೯
- ಶ್ರೀ ರೆವರೆಂಡ್ ಉತ್ತಂಗಿ ಚೆನ್ನಪ್ಪ - ೬-೩-೧೯೪೯ ರಿಂದ ೧೭-೧೨-೧೯೫೦
- ಶ್ರೀ ಎಂ. ಆರ್. ಶ್ರೀನಿವಾಸಮೂರ್ತಿ - ೧೭-೧೨-೧೯೫೦ ರಿಂದ ೧೬-೯-೧೯೫೩
- ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ -೩೦-೯-೧೯೫೩ ರಿಂದ ೯-೫-೧೯೫೪
- ಪ್ರೊ. ಎ. ಎನ್. ಮೂರ್ತಿರಾವ್ ೯-೫-೧೯೫೪ ರಿಂದ೧೭-೫-೧೯೫೬
- ಶ್ರೀ ಬಿ. ಶಿವಮೂರ್ತಿ ಶಾಸ್ತ್ರಿ - ೧೭-೫-೧೯೫೬ ರಿಂದ ೨೫-೧೦-೧೯೬೪
- ಪ್ರೊ. ಜಿ. ವೆಂಕಟಸುಬ್ಬಯ್ಯ - ೨೫-೧೦-೧೯೬೪ ರಿಂದ ೧೧-೬-೧೯೬೯
- ಶ್ರೀ ಜಿ. ನಾರಾಯಣ - ೧೧-೬-೧೯೬೯ ರಿಂದ ೨೩-೭-೧೯೭೮
- ಡಾ. ಹಂಪ ನಾಗರಾಜಯ್ಯ - ೨೩-೭-೧೯೭೮ ರಿಂದ ೧೯-೨-೧೯೮೬
- ಹೆಚ್. ಬಿ. ಜ್ವಾಲನಯ್ಯ - ೧೯-೨-೧೯೮೬ ರಿಂದ ೧-೧೧-೧೯೮
- ಪ್ರೊ. ಜಿ. ಎಸ್. ಸಿದ್ದಲಿಂಗಯ್ಯ - ೭೨-೨-೧೯೮೯ ರಿಂದ ೧೪-೫-೧೯೯೨
- ಶ್ರೀ ಗೊ. ರು. ಚನ್ನಬಸಪ್ಪ - ೧೪-೫-೧೯೯೨ ರಿಂದ ೨೨-೬-೧೯೯೫
- ಡಾ. ಸಾ. ಶಿ. ಮರುಳಯ್ಯ - ೨೨-೬-೧೯೯೫ ರಿಂದ ೧೦-೭-೧೯೯೮
- ಶ್ರೀ ಎನ್. ಬಸವಾರಾಧ್ಯ - ೧೦-೭-೧೯೯೮ ರಿಂದ ೧೧-೭-೨೦೦೧
- ಶ್ರೀ ಹರಿಕೃಷ್ಣ ಪುನರೂರು - ೧೧-೭-೨೦೦೧ ರಿಂದ ೨-೧೧-೨೦೦೪
- ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ)- ೨-೧೧-೨೦೦೪ ರಿಂದ ೩೦-೪-೨೦೦೮
- ಡಾ. ನಲ್ಲೂರು ಪ್ರಸಾದ್ ಆರ್. ಕೆ - ೨೭-೮-೨೦೦೮ ರಿಂದ ೨೭-೨-೨೦೧೨
- ಪುಂಡಲೀಕ ಹಾಲಂಬಿ - ೦೩-೦೫-೨೦೧೨ ರಿಂದ ೨೦೧೫
- ಡಾ. ಮನು ಬಳಿಗಾರ್ - ೦೩-೦೩-೨೦೧೬ ರಿಂದ ಹಾಲಿ ಅಧ್ಯಕ್ಷ[೨]
- ಡಾ. ಮಹೇಶ್ ಜೋಷಿ - ೨೨-೧೧-೨೦೨೧ ರಿಂದ ೨೧-೧೧-೨೦೨೬ [೩]
ಕನ್ನಡ ಸಾಹಿತ್ಯ ಸಮ್ಮೇಳನಗಳು
[ಬದಲಾಯಿಸಿ]- ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಕನ್ನಡ ಸಾಹಿತ್ಯ ಲೋಕದ ದಿಗ್ಗಜರು,ಸಾಹಿತ್ಯಾಸಕ್ತರು,ಕನ್ನಡ ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಒಂದೆಡೆ ಸೇರಿ,ಪ್ರಚಲಿತ ಸಾಹಿತ್ಯದ ಸ್ಥಿತಿಗತಿಗಳನ್ನು ಚರ್ಚಿಸುವಂತಹ ಬಹುದೊಡ್ಡ ವೇದಿಕೆ-ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಪ್ರತಿ ವರ್ಷ ನಾಡಿನ ಬೇರೆ ಬೇರೆ ಸ್ಥಳಗಳಲ್ಲಿ ೩ ಅಥವಾ ೪ ದಿನಗಳ ಕಾಲ ಏರ್ಪಾಡಾಗುವ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರ ಗೋಷ್ಠಿಗಳು,ಕವಿ ಗೋಷ್ಠಿಗಳು,ಸಂವಾದಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು ಉನ್ನತ ಮಟ್ಟದಲ್ಲಿ ನಡೆಯುತ್ತವೆ.[೪]
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೃಪತುಂಗ ಸಾಹಿತ್ಯ ಪ್ರಶಸ್ತಿ [೫] ಇಂದು ಬಹಳ ಜನರಿಗೆ ನೃಪತುಂಗ ಪ್ರಶಸ್ತಿ ದೊರೆತಿದೆ
ನಿಧಿಗಳು
[ಬದಲಾಯಿಸಿ]ಕನ್ನಡ ನಿಧಿ
[ಬದಲಾಯಿಸಿ](projectಶತಮಾನದ ಹೊಸ್ತಿಲಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದಿಷ್ಟು ಹಣಕಾಸು ಕ್ರೋಢಿಕರಿಸಬೇಕು. ಆ ಮೂಲಕ ಕನ್ನಡ ತಾಯಿಯ ಸೇವೆಯನ್ನು ವ್ಯಾಪಕಗೊಳಿಸಬೇಕೆಂಬ ನಿಟ್ಟಿನಲ್ಲಿ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಡಾ. ನಲ್ಲೂರು ಪ್ರಸಾದ್ ಆರ್.ಕೆ. ಅವರು 'ಕನ್ನಡ ನಿಧಿ' ಎಂಬ ವಿನೂತನ ಯೋಜನೆಯನ್ನು ಪ್ರಾರಂಭಿಸಿದರು. ಈ ನಿಧಿಗೆ ಹತ್ತು ರೂಪಾಯಿಯಿಂದ ಗರಿಷ್ಠ ಎಷ್ಟು ಬೇಕೆಂದರೂ ಉದಾರವಾಗಿ ದೇಣಿಗೆ ನೀಡಬಹುದು).ಈ ದೇಣಿಗೆ ತೆರಿಗೆ ವಿನಾಯಿತಿಯನ್ನೂ ಪಡೆದಿದೆ.ಈ ಹಣವನ್ನು ಬ್ಯಾಂಕಿನ ಖಾತೆಗೆ ಜಮಾ ಮಾಡಿ ಮೂಲಧನವನ್ನು ಯಾವುದೇ ಸಂದರ್ಭದಲ್ಲಿ ಬಳಸದಂತೆ ಹಾಗೂ ಆ ಹಣದಿಂದ ಬಡ್ಡಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಅದರಲ್ಲೂ ಜಿಲ್ಲಾ,ತಾಲೂಕು ಮತ್ತು ಹೋಬಳಿ ಮಟ್ಟದವರೆಗೂ ವಿಸ್ತರಿಸಲಾಗುತ್ತಿದೆ.ಕನ್ನಡ ನಿಧಿ ಯೋಜನೆ ಆರಂಭಗೊಂಡ ತಕ್ಷಣವೇ ಎಲ್ಲ ಕನ್ನಡಿಗರೂ ತಮ್ಮ ಉದಾರ ಹಸ್ತವನ್ನು ಚಾಚಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಶ್ರೀ ಟಿ.ಎ.ನಾರಾಯಣಗೌಡ ಕನ್ನಡ ನಿಧಿಗೆ ೫೦,೦೦೦ ರೂ.ನೀಡುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದ್ದಾರೆ.ಅದೇ ರೀತಿ ಮಾಜಿ ಶಾಸಕಿ ಹಾಗೂ ಪ್ರಸಿದ್ಧ ವಕೀಲರಾದ ಶ್ರೀಮತಿ ಪ್ರಮೀಳಾ ನೇಸರ್ಗಿ ೧,೦೦,೦೦೧ ರೂ.ನೀಡುವ ಮೂಲಕ ಕನ್ನಡ ಕೈಂಕರ್ಯದಲ್ಲಿ ತಾವೂ ತೊಡಗಿಸಿಕೊಂಡಿದ್ದಾರೆ. ಅನೇಕ ಕನ್ನಡಿಗರು ಹಾಗೂ ಸಂಘ ಸಂಸ್ಥೆಗಳು ನಿಧಿಗೆ ತಮ್ಮ ಕಾಣಿಕೆ ನೀಡುತ್ತಿದ್ದಾರೆ.
ಕನ್ನಡ ನಿಧಿಗೆ ದೇಣಿಗೆ ನೀಡುವ ಆಸಕ್ತಿಯುಳ್ಳವರು ಬೆಂಗಳೂರಿನ ಸಿಂಡಿಕೇಟ್ ಬ್ಯಾಂಕ್ ಚಾಮರಾಜಪೇಟೆ ಶಾಖೆಯ ಖಾತೆ ಸಂಖ್ಯೆ ೨೦೧/೫೬೬೭೭ ಇಲ್ಲಿಗೆ ನೇರವಾಗಿ ಹಣವನ್ನು ಜಮಾ ಮಾಡಿ ಚಲನ್ ಪ್ರತಿಯನ್ನು ಪರಿಷತ್ತಿಗೆ ಕಳುಹಿಸಿದರೆ ಅಂತಹ ಉದಾರಿಗಳಿಗೆ (೧೦೦೦ ರೂ.ಗಿಂತ ಮೇಲ್ಪಟ್ಟ)'ಕನ್ನಡ ಮಾನಧನರು'ಎಂಬ ಅಭಿನಂದನಾ ಪತ್ರವನ್ನು ಪರಿಷತ್ತು ನೀಡಿ ಗೌರವಿಸಲಿದೆ.ಈ ನಿಧಿಗೆ ನೀಡುವ ಹಣಕ್ಕೆ ೮೦ ಜಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಇರುತ್ತದೆ.
ದತ್ತಿನಿಧಿ
[ಬದಲಾಯಿಸಿ](Project ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದಂತೆ ಪ್ರಶಸ್ತಿ ನೀಡಲು ಹಾಗೂ ಕಾರ್ಯಕ್ರಮಗಳನ್ನು ನಡೆಸಲು ಮತ್ತು ಸ್ಪರ್ಧೆಗಳನ್ನು ಏರ್ಪಡಿಸಲು ಅನೇಕ ಸಾಹಿತ್ಯಾಭಿಮಾನಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿಗಳನ್ನು ಸ್ಥಾಪಿಸಿದ್ದಾರೆ).ಈ ಮೂಲನಿಧಿಯನ್ನು ಶಾಶ್ವತ ಠೇವಣಿಯಾಗಿಟ್ಟು ಅದರಿಂದ ಬರುವ ಬಡ್ಡಿ ಹಣದಲ್ಲಿ ಪ್ರತಿವರ್ಷ ಕಾರ್ಯಕ್ರಮಗಳನ್ನು ದಾನಿಗಳ ಅಪೇಕ್ಷೆಯಂತೆ ನಡೆಸಿಕೊಂಡು ಬರಲಾಗುತ್ತಿದೆ.ಈಗ ಇಂತಹ ೮೫೦ ದತ್ತಿನಿಧಿಗಳಿವೆ. ಉಪನ್ಯಾಸ, ಸಾಹಿತ್ಯಕ ಸ್ಪರ್ಧೆ, ಗ್ರಂಥಭಂಡಾರಕ್ಕೆ ಪುಸ್ತಕ ಖರೀದಿ, ಪುಸ್ತಕ ಪ್ರಕಟಣೆ, ಬಹುಮಾನ, ಪ್ರಶಸ್ತಿ ನೀಡಿಕೆ ಇತ್ಯಾದಿ ಆಶಯಗಳನ್ನು ತಿಳಿಸಿದ ದತ್ತಿನಿಧಿಗಳಿವೆ.(project ಚಾವುಂಡರಾಯ ಪ್ರಶಸ್ತಿ, ಬಿ. ಸರೋಜಾದೇವಿ ಪ್ರಶಸ್ತಿ, ಹಾ.ಮಾ.ನಾ ಪ್ರಶಸ್ತಿ, ಭಾರತೀಸುತ ಪ್ರಶಸ್ತಿ ಇತ್ಯಾದಿ ಸಾಹಿತ್ಯಕ ಪ್ರಶಸ್ತಿಗಳನ್ನು ಪ್ರತಿವರ್ಷ ಆಯ್ದ ಹಿರಿಯ ನೆರವಾಗುತ್ತದೆ)
ಶಿಕ್ಷಣ
[ಬದಲಾಯಿಸಿ]ಸಾಹಿತ್ಯ ಪರೀಕ್ಷೆಗಳು
[ಬದಲಾಯಿಸಿ]- ೧೯೪೦ನೇ ಇಸವಿಯಿಂದ ಪ್ರಾರಂಭವಾಗಿರುವ ಸಾಹಿತ್ಯ ಪರೀಕ್ಷೆಗಳು ಪರಿಷತ್ತಿನ ಜನಪ್ರಿಯ ಕಾರ್ಯ ಚಟುವಟಿಕೆಗಳಲ್ಲಿ ಒಂದು. ಕನ್ನಡ ಸಾಹಿತ್ಯ-ಸಂಸ್ಕೃತಿಯ ತಿಳಿವಳಿಕೆನೀಡುವ ಕನ್ನಡ ಕಾವ, ಜಾಣ, ರತ್ನ ಪರೀಕ್ಷೆಗಳನ್ನು ಪ್ರತಿ ವರ್ಷ ನಡೆಸಿಕೊಂಡು ಬರುವುದರ ಜೊತೆಗೆ ಹೊಸದಾಗಿ ಕನ್ನಡ ಕಲಿಯುವ ಆಸಕ್ತರಿಗಾಗಿ ಕನ್ನಡ ಪ್ರವೇಶವೆಂಬ ಪರೀಕ್ಷೆಯನ್ನು ಏರ್ಪಡಿಸುತ್ತಿದೆ. ಪರೀಕ್ಷೆಗಳು ಸರ್ಕಾರದಿಂದ ಅಂಗೀಕಾರ ಪಡೆದಿರುತ್ತವೆ. ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನ ಸಾಹಿತ್ಯ ಪರೀಕ್ಷೆಗಳ ಪ್ರಯೋಜನ ಪಡೆದಿದ್ದಾರೆ.
ಎಂ.ಫಿಲ್ ಮತ್ತು ಪಿ.ಹೆಚ್.ಡಿ
[ಬದಲಾಯಿಸಿ]- ಕನ್ನಡ ಎಂ.ಫಿಲ್ ಮತ್ತು ಪಿ.ಹೆಚ್.ಡಿ - ಕನ್ನಡ ವಿಶ್ವವಿದ್ಯಾಲಯ, ಹಂಪಿಯು ೨೦೧೧ನೇ ಸಾಲಿನಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಎಂ.ಫಿಲ್ ಮತ್ತು ಪಿ.ಹೆಚ್.ಡಿ ಪದವಿಗಳಿಗೆ ಮಾನ್ಯತೆ ನೀಡಿದೆ.
ಶಾಸನಶಾಸ್ತ್ರ ಮತ್ತು ಜಾನಪದ ಡಿಪ್ಲೋಮಾ ತರಗತಿಗಳು
[ಬದಲಾಯಿಸಿ]- ಶಾಸನಶಾಸ್ತ್ರ ಮತ್ತು ಜಾನಪದ ಡಿಪ್ಲೋಮಾ ತರಗತಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುತ್ತಿವೆ. ಇದು ೯ ತಿಂಗಳ ಕೋರ್ಸ್ ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ಪರಿಷತ್ತನ್ನು ಸಂಪರ್ಕಿಸುವುದು.
ಕನ್ನಡದ ಅಕಾಡಮಿಗಳು
[ಬದಲಾಯಿಸಿ]ವೆಬ್‌ಸೈಟ್
[ಬದಲಾಯಿಸಿ]ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕೃತ ಜಾಲತಾಣ: [೧]
ಓದಿ
[ಬದಲಾಯಿಸಿ]- ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಿ ಬೆಳೆಸಿದ ಮಹನೀಯರು, (ಲೇ: ಎಸ್.ವಿ. ಶ್ರೀನಿವಾಸರಾವ್)
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ↑ ಕನ್ನಡ ಸಾಹಿತ್ಯ ಪರಿಷತ್ತು: ಈವರೆಗಿನ ಅಧ್ಯಕ್ಷರ ಪಟ್ಟಿ ಜನವರಿ ೨೦೧೫[ಶಾಶ್ವತವಾಗಿ ಮಡಿದ ಕೊಂಡಿ]
- ↑ ಮನು ಬಳಿಗಾರ್ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರು, ಒನ್ ಇಂಡಿಯಾ ಕನ್ನಡ, ೦೩ ಮಾರ್ಚ್ ೨೦೧೬
- ↑ https://www.thehindu.com/news/national/karnataka/mahesh-joshi-set-to-head-kannada-sahitya-parishat/article37636480.ece
- ↑ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಕಸಪ ಜಾಲತಾಣದ ಕೊಂಡಿ.
- ↑ ಹೆಚ್ಚಿನ ವಿವರ, ಕಸಾಪ ಮತ್ತು ಬಿ.ಎಂ.ಟಿ.ಸಿ ಜಂಟಿಯಾಗಿ ಸ್ಥಾಪಿಸಿರುವ ನೃಪತುಂಗ ಪ್ರಶಸ್ತಿಯ ಬಗ್ಗೆ ಹೆಚ್ಚಿನ ವಿವರ.
- ಕಸಾಪ 24ನೇ ಅಧ್ಯಕ್ಷರಾಗಿ ಪುಂಡಲೀಕ ಹಾಲಂಬಿ[ಶಾಶ್ವತವಾಗಿ ಮಡಿದ ಕೊಂಡಿ] ಒನ್ ಇಂಡಿಯಾ ಕನ್ನಡ ಮೇ ೨, ೨೦೧೨]
- ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗದ್ದಲ, ಗಲಾಟೆ - ಪ್ರಜಾವಾಣಿ ಸೆಪ್ಟೆಂಬರ್ ೨೬, ೨೦೦೫[ಶಾಶ್ವತವಾಗಿ ಮಡಿದ ಕೊಂಡಿ]
- ಕನ್ನಡ ವಿಶ್ವವಿದ್ಯಾಲಯ
- ಇ-ಜ್ಞಾನ,ಟಿ.ಜಿ.ಶ್ರೀನಿಧಿ, ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ-ಬೇಳೂರು ಸುದರ್ಶನ Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಫೆಬ್ರವರಿ 2024
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಕನ್ನಡ ಸಾಹಿತ್ಯ
- ಕರ್ನಾಟಕ