ಸುಮಾರು ೨೦೧೦ - ೨೦೧೧ ರಲ್ಲಿ, ಗೂಗಲ್ ತನ್ನ ಗೂಗಲ್ ಟ್ರಾನ್ಸ್ಲೇಷನ್ ಟೂಲ್ ಕಿಟ್‌ನ ಟ್ರಾನ್ಸ್ಲೇಷನ್ ಮೆಮೋರಿಯನ್ನು ಹೆಚ್ಚಿಸುವ ಸಲುವಾಗಿ ಭಾರತೀಯ ಭಾಷಾ ವಿಕಿಪೀಡಿಯಾಗಳಲ್ಲಿ (ಮುಖ್ಯವಾಗಿ ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು) ಹಮ್ಮಿಕೊಂಡ ಯೋಜನೆ ಅಡಿಯಲ್ಲಿ, ಅನೇಕ ಲೇಖನಗಳನ್ನು ಇಂಗ್ಲೀಷ್ ವಿಕಿಪೀಡಿಯಾದಿಂದ ಆಯಾ ಭಾಷೆಯ ವಿಕಿಪೀಡಿಯಾಗಳಿಗೆ ಭಾಷಾಂತರ ಮಾಡಿತು. ಕೆಲವು ಬಳಕೆದಾರರು ಈ ಯೋಜನೆಯ ಬಗ್ಗೆ ತಮ್ಮ ಕಳವಳವನ್ನೂ ವ್ಯಕ್ತಪಡಿಸಿದರು. ವಿಕಿಪೀಡಿಯ ಸಮುದಾಯವನ್ನೇ ಬೆಳೆಸದೆ ಮಾಹಿತಿಯನ್ನು ಮಾತ್ರ ಹುಟ್ಟುಹಾಕುವುದು ಇದಕ್ಕೆ ಮುಖ್ಯ ಕಾರಣವಾಗಿತ್ತು. ಜೊತೆಗೆ, ಬಹಳಷ್ಟು ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಹಾಕಲಾದರೂ, ಅದರ ಅನುವಾದ ಮತ್ತು ಶೈಲಿಯಲ್ಲೂ ಕೂಡ ತೊಂದರೆಗಳು ಕಂಡುಬಂದವು. ಆದಾಗ್ಯೂ, ನಮಗಿಲ್ಲಿ ಒಂದು ಉತ್ತಮ ಅವಕಾಶವಿದೆ, ಏಕೆಂದರೆ ಈ ಯೋಜನೆಯ ಮೂಲಕ ಸೃಷ್ಟಿಸಲಾದ ಲೇಖನಗಳಲ್ಲಿ ಉತ್ತಮ ಮಾಹಿತಿ ಲಭ್ಯವಿದೆ.
ಪ್ರಾರಂಭದಲ್ಲಿ, ೧೨೦೦ ಲೇಖನಗಳು ಇರಬಹುದು ಎಂದು ಕೊಂಡಿದ್ದೆವು - ಆದರೆ ಈ ಸಂಖ್ಯೆ ಸುಮಾರು ೨೦೦೦ ಲೇಖನಗಳನ್ನು ಮುಟ್ಟಬಹುದು ಎನಿಸುತ್ತಿದೆ. ಇದರರ್ಥ ಕನ್ನಡ ವಿಕಿಪೀಡಿಯಾದಲ್ಲಿ ಈಗಿರುವ ೨೦ ಪ್ರತಿಶತ ಲೇಖನಗಳು ಗೂಗಲ್‌ನ ಯೋಜನೆಯಿಂದಾಗಿ ಸೇರ್ಪಡೆ ಆಗಿವೆ ಎಂದಾಯ್ತು.
ನಮ್ಮಲ್ಲಿ ಕೆಲವು ಕನ್ನಡ ವಿಕಿಪೀಡಿಯನ್ನರು ಈ ಲೇಖನಗಳನ್ನು ಹೇಗೆ ಉತ್ತಮ ಪಡಿಸುವುದು ಎಂಬ ಬಗ್ಗೆ ಕೆಲಸ ಮಾಡುತ್ತಿದ್ದು, ಈ ಲೇಖನಗಳನ್ನು ಬಳಸಿಕೊಂಡು ಕನ್ನಡ ವಿಕಿಪೀಡಿಯಕ್ಕೆ ಒಂದಿಷ್ಟು ಉತ್ತಮ ಮಾಹಿತಿ ಕಲೆ ಹಾಕುವ ಉದ್ದೇಶ ನಮ್ಮದು.
ಈ ಯೋಜನೆಯ ಬಗ್ಗೆ ಹಲವಾರು ಸುತ್ತಿನ ಮಾತುಕತೆಗಳನ್ನು, ಚರ್ಚೆಗಳನ್ನು ಹಮ್ಮಿಕೊಂಡು ಯೋಜನಾ ಪುಟ ಹಾಗೂ ಐ.ಆರ್.ಸಿ ಯ ಚರ್ಚೆಗಳಲ್ಲಿ ನಾವೆಲ್ಲರೂ ಒಪ್ಪಿಗೆ ಸೂಚಿಸಿ, ನಿರ್ಣಯಕ್ಕೆ ಬಂದ ಕೆಲವು ಅಂಶಗಳು ಇಲ್ಲಿವೆ.
ನಮ್ಮ ಕೆಲಸಕ್ಕೆ ಒಂದು ನಿಶ್ಚಿತ ರೂಪ ಕೊಡಲು, ಈ ಯೋಜನೆಯನ್ನು ೧೪ ಸಣ್ಣ ಕಾರ್ಯಗಳಾಗಿ ವಿಂಗಡಿಸಲಾಗಿದೆ.
ಲೇಖನಗಳಲ್ಲಿ ಕಂಡುಬರುವ ಕೆಂಪುಬಣ್ಣದ ಮುರಿದ ಕೊಂಡಿಗಳನ್ನು ಈಗಲೇ ತೆಗೆಯುವುದು ಬೇಡ ಎಂದು ನಿರ್ಧರಿಸಲಾಗಿದೆ ( ಬೇರೆ ಸಂವರ್ಧನಾ ಯೋಜನೆಗಳನ್ನು ಹೊರತುಪಡಿಸಿ) - ಏಕೆಂದರೆ ಇದರ ಮೂಲಕ ಹೊಸ ವಿಕಿ ಸಂಪಾದಕರನ್ನು ಈ ಲೇಖನಗಳ ಸೃಷ್ಟಿಗೆ ಪ್ರೇರೇಪಿಸುವುದು ನಮ್ಮ ಉದ್ದೇಶ. ಬೇಕಿದ್ದಲ್ಲಿ ಮುಂದೆ ಈ ನಿರ್ಣಯವನ್ನು ಮತ್ತೆ ಪರಾಮರ್ಶಿಸಬಹುದು.
ಲೇಖನದ ಪರಿಚಯ ಭಾಗಗಳನ್ನು ಉತ್ತಮ ಪಡಿಸುವುದನ್ನು ಪ್ರಮುಖ ಕೆಲಸವನ್ನಾಗಿ ತೆಗೆದು ಕೊಂಡಿದ್ದು, ಇತರೆ ಭಾಗಗಳನ್ನು ಬಗ್ಗೆ ಸದ್ಯ ಅಲೋಚಿಸದಿರುವಂತೆ ತೀರ್ಮಾನಿಸಿದ್ದೇವೆ. ಯಾವುದೇ ಲೇಖನವನ್ನು ಸಮೃದ್ಧಗೊಳಿಸಲು ತೊಡಗಿದಲ್ಲಿ ಬಹಳಷ್ಟು ಕೆಲಸಗಳು ಒತ್ತಟ್ಟಿಗೆ ಬರುತ್ತಲೇ ಹೋಗುವುದರಿಂದ ಈ ಒಂದು ನಿರ್ಣಯಕ್ಕೆ ಬರಲಾಗಿದೆ. ಲೇಖನದ ಇತರ ಭಾಗಗಳನ್ನು ಇದಕ್ಕಿಂತಲೂ ಹೆಚ್ಚು ಉತ್ತಮ ಪಡಿಸುವ ಕಾರ್ಯಗಳನ್ನು ಮುಂದಕ್ಕೆ ಹಾಕಿಕೊಳ್ಳಲಾಗುವುದು.
ನಾವು ಅನುವಾದದಿಂದ ಪರಿಣಾಮ ಹೊಂದಿರುವ ಎಲ್ಲಾ ಲೇಖನಗಳ ಪಟ್ಟಿ ಪರಿಶೀಲಿಸಿ ಯೋಜನೆಯ ಪ್ರಾರಂಭದ ಹಂತಕ್ಕಾಗಿ ಸುಮಾರು ೧೫೦ ಲೇಖನಗಳನ್ನು ಆಯ್ಕೆ ಮಾಡಿದ್ದೇವೆ.
ಬಳಕೆದಾರರಿಗೆ ಸಮಯ ಹಿಡಿಯುವ ಕೆಲವು ಕಾರ್ಯಗಳನ್ನು (ಖಾಲಿ ಜಾಗಗಳು / ಸಾಲುಗಳನ್ನು ತೆಗೆಯುವುದು) ಸ್ವಯಂಚಾಲಿತವಾಗಿ ಮಾಡಬಹುದು.
ನಾವು ಹೊಸ ಬಳಕೆದಾರರನ್ನು ಆಕರ್ಷಿಸಲು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕನ್ನಡ ಆನ್ಲೈನ್ ಮತ್ತು ಆಫ್ಲೈನ್ ಸಮುದಾಯಗಳಲ್ಲಿ ಈ ಯೋಜನೆಯ ಪ್ರಚಾರ ಮಾಡಬೇಕಾಗಿದೆ. ಈ ಯೋಜನೆಯ ಉದ್ದೇಶ ಕೇವಲ ಲೇಖನಗಳನ್ನು ಸುಧಾರಣೆ ಮಾಡುವುದು ಮಾತ್ರವಲ್ಲ, ಸಮುದಾಯ ಕಟ್ಟವುದು ಕೂಡ ಆಗಿದೆ.
ಯೋಜನೆಯ ಪುಟವು ಯಾವಾಗಲೂ ಸಮುದಾಯದ ಸದಸ್ಯರು ಪ್ರಸ್ತುತ ಗಮನ ಹರಿಸುತ್ತಿರುವ ಲೇಖನಗಳ ಪಟ್ಟಿಯನ್ನು ಹೊಂದಿರುತ್ತದೆ. ಯಾವುದೇ ಇತರ ಲೇಖನದ ಮೇಲೆ ಯಾರಾದರೂ ಕೆಲಸ ಮಾಡಲು ಬಯಸುವ ಸಂದರ್ಭದಲ್ಲಿ, ಈ ಯೋಜನೆಯ ಅಂಗವಾಗಿರುವ ಎಲ್ಲಾ ಲೇಖನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
The aim of this project is to enhance around 1800 articles created by translators. Which means, if we complete this project successfully we will have a good number of excellent articles in Kannada wikipedia.
ನೀವು ಈ ಯೋಜನೆಯಲ್ಲಿ ಹೇಗೆ ಸಹಾಯ ಮಾಡಬಹುದು?
ನಿಮ್ಮ ಹೆಸರನ್ನು ಸದಸ್ಯರ ಪಟ್ಟಿಯಲ್ಲಿ ಸೇರಿಸಿ ಮತ್ತು ಕೆಲಸದ ಪಟ್ಟಿಯಲ್ಲಿರುವ ಕೆಲಸಗಳನ್ನು ಓದಿ ಅರ್ಥ ಮಾಡಿಕೊಳ್ಳಿ.
ನಿಮ್ಮ ಇಷ್ಟವಾಗುವ ಲೇಖವವೊಂದನ್ನು ಲೇಖನಗಳ ವಿಭಾಗದಲ್ಲಿರುವ ಪಟ್ಟಿಯಿಂದ ಆಯ್ದುಕೊಂಡು, ನಿಮಗೆ ಸಾಧ್ಯವಿರುವ ಕೆಲಸಗಳನ್ನು ಸಂಪೂರ್ಣಗೊಳಿಸಿ.
ನಿಮ್ಮ ಹೆಸರನ್ನು ಲೇಖನದ ಆಯಾ ಕೆಲಸದ ಸಾಲುಗಳಲ್ಲಿ ಸೇರಿಸಿ.
ಸೂಚನೆ: ಕೆಲಸಗಳನ್ನು ಮುಗಿಸಿದ ನಂತರವಷ್ಟೇ ನಿಮ್ಮ ಹೆಸರನ್ನು ಪಟ್ಟಿಯ ಆಯಾ ಕಾರ್ಯದ ಸಾಲಿನಲ್ಲಿ ಸೇರಿಸಿ. ಯೋಜನಾ ನಿರ್ವಹಣೆಗೆ ಇದು ಸಹಾಯ ಮಾಡುತ್ತದೆ.
Enhance the introduction section. This might require to rewrite the introduction section to make it more reader friendly and a stronger summary of the subject.
Add proper categories to the article and add interwiki links.
Create infoboxes and Templates and remove unnecessary red links.
Remove the extra space in the beginning of paragraph
Change Indo-Arabic numerals to Kannada numerals
If there are red link images find suitable images from Commons (or en wiki) and add it to article.
Use correct Kannada names in the title of the articles (for example, rename English only titles to Kannada or use correct Kannada titles if the current title is a mix of English and Kannada in the title. ) (for example, this article)
Translate the English text in articles (especially quotations) to Kannada
Translate the English red links in Infobox and other sections to Kannada.
Convert the external links inside text into references.
Copy edit where ever possible. In so many of the articles, there is a large amount of copy editing that can be done to make it easier to read and remove grammatical errors & spelling mistakes. Overall, most of the articles have considerable scope for improvement in terms of content as well as per Wikipedia's manual of style.
If there is no scope for improvement remove the junk content from the article. But retain at least the introduction section by rewriting it.