ವಿಷಯಕ್ಕೆ ಹೋಗು

ಪೋಖ್ರಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೋಖ್ರಾನ್
Pokhran
city
Population
 (2001)
 • Total೧೯,೧೮೬

ಪೋಖ್ರಾನ್ (ಪೋಕರಾನ್ ಎಂದೂ ಕರೆಯಲಾಗುತ್ತದೆ) ಭಾರತದ ರಾಜ್ಯವಾದ ರಾಜಾಸ್ಥಾನದಲ್ಲಿರುವ ಜೈಸಾಲ್ಮರ್ ಜಿಲ್ಲೆಯಲ್ಲಿರುವ ಒಂದು ಮುನಿಸಿಪಾಲಿಟಿ ಹಾಗೂ ನಗರವಾಗಿದೆ. ಇದು ಥಾರ್ ಮರುಭೂಮಿಯ ಒಂದು ಮೂಲೆಯಲ್ಲಿದೆ ಹಾಗೂ ಭಾರತದ ಮೊದಲ ಭೂಗತ ಅಣ್ವಸ್ತ್ರ ಸ್ಫೋಟನ ಪರೀಕ್ಷೆ ನಡೆಸಿದಂತಹ ಸ್ಥಳವಾಗಿದೆ.

ಭೌಗೋಳಿಕತೆ

[ಬದಲಾಯಿಸಿ]
  • ಪೋಖ್ರಾನ್26°55′N 71°55′E / 26.92°N 71.92°E / 26.92; 71.92ಎಂಬ ಸ್ಥಳದಲ್ಲಿದೆ.[] ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ ೨೩೩ ಮೀಟರ್ (೭೬೪ ಅಡಿ) ಎತ್ತರದಲ್ಲಿದೆ.
  • ಬಂಡೆಗಳು, ಮರಳು ಮತ್ತು ಐದು ವಿಧವಾದ ಲವಣಾವಳಿಗಳಿಂದ ಈ ಪ್ರದೇಶವು ಸುತ್ತುವರಿಯಲ್ಪಟ್ಟಿದೆ. ಪೋಕರನ್ ಎಂದರೆ 'ಐದು ಮರೀಚಿಕೆಗಳಿರುವ ಜಾಗ' ಎಂದರ್ಥ. ಇದು ಜೋಧ್ ಪುರ್ ನಿಂದ ಜೈಸಾಲ್ಮೆರ್ ಹಾಗೂ ಬಿಕನೇರ್ ಇಂದ ಜೈಸಾಲ್ಮೇರ್ ಗೆ ಹೋಗುವ ಮಾರ್ಗಗಳಲ್ಲಿದೆ.

ಜನಸಂಖ್ಯೆ

[ಬದಲಾಯಿಸಿ]
  • As of 2001 ಭಾರತೀಯ ಜನಗಣತಿ[] ಪ್ರಕಾರ ಪೋಖ್ರಾನ್ ನಲ್ಲಿ ಆ ಜನಗಣತಿ ನಡೆದಾಗ ಇದ್ದ ಜನಸಂಖ್ಯೆ ೧೯,೧೮೬. ಈ ಜನಸಂಖ್ಯೆಯ ಪೈಕಿ ಪುರುಷರದು ೫೫%ನಷ್ಟು ಭಾಗವಾದರೆ, ಸ್ತ್ರೀಯರದು ೪೫%ನಷ್ಟು ಭಾಗವಾಗಿದೆ.
  • ಖಜುರಾಹೊ ಶೇಕಡ ೫೩ರಷ್ಟು ಸಾಕ್ಷರತೆಯನ್ನು ಹೊಂದಿದ್ದು, ಇದು ರಾಷ್ಟ್ರದ ಸಾಕ್ಷರತಾ ಮಟ್ಟಕ್ಕಿಂತಲೂ ಶೇಕಡಾ ೫.೫ರಷ್ಟಕ್ಕಿಂತ ಕಡಿಮೆ ಇದೆ. ಶೇಕಡಾ ೬೨ರಷ್ಟು ಪುರುಷರು ಮತ್ತು ಶೇಕಡಾ ೪೩ರಷ್ಟು ಮಹಿಳೆಯರು ಸಾಕ್ಷರತೆಯನ್ನು ಹೊಂದಿದ್ದಾರೆ. ಪೋಖ್ರಾನ್ ನ ಜನಸಂಖ್ಯೆಯಲ್ಲಿ ಶೇಕಡಾ ೧೯ರಷ್ಟು ಆರು ವರ್ಷದ ಕೆಳಗಿನ ಮಕ್ಕಳಿದ್ದಾರೆ.

ಒಡೆಯರು

[ಬದಲಾಯಿಸಿ]
  • ತೊಮಾರ್ ರಾಜರು - ರಾಜ ಅಜ್ಮಲ್ ತೊಮಾರ್ ದೆಹಲಿಯ ಅಂಗ್ ಪಾಲ್ ತೊಮಾರ್ ರ ವಂಶಸ್ಥರಾಗಿದ್ದರು. ಅವರ ಪುತ್ರನೇ ಬಾಬಾ ರಾಮ್ ದೇವ್ ಜೀ
  • ಮಾರ್ವಾಡ್-ಜೋಧ್ ಪುರ್ ರಾಜ್ಯದ ರಾಥೋಡ್ ಗಳ ಉಪ-ಪಂಗಡವಾದ ಚಂಪಾವತ್ಸ್ ನ ಮಖಂಡರ ಪೀಠವಿರುವ ಸ್ಥಳವಿದು.

ಮೈಲಿಗಲ್ಲುಗಳು

[ಬದಲಾಯಿಸಿ]
  • "ಬಾಲಘಡ್" ಎಂದೂ ಖ್ಯಾತವಾಗಿರುವ ಈ ೧೪ನೆಯ ಶತಮಾನದ ಕೋಟೆಯಾದ ಪೋಖ್ರಾನ್ ಕೋಟೆಯು ಥಾರ್ ಮರುಭೂಮಿಯ ಮಧ್ಯದಲ್ಲಿ ಸ್ಥಿತವಾಗಿದೆ. ಈ ಸ್ಮಾರಕವು ಮಾರ್ವಾಡ್-ಜೋಧ್ ಪುರ್ ರಾಜ್ಯದ ರಾಥೋಡ್ ಗಳ ಪಂಗಡದ ಉಪ-ಪಂಗಡವಾದ ಚಂಪಾವತ್ಸ್ ಜನಾಂಗ ದವರ ಮುಖಂಡರ ಪ್ರಮುಖ ಕೋಟೆಯಾಗಿದೆ.
  • ಪ್ರವಾಸಿಗರ ತಾಣವೆಂದೇ ಖ್ಯಾತವಾದ ಜೈಸಾಲ್ಮೆರ್ ನಗರ ಮತ್ತು ಕೋಟೆಗಳನ್ನು ಈ ಸ್ಥಳದಿಂದ ಕೆಲವೇ ಗಂಟೆಗಳಲ್ಲಿ ಹೆದ್ದಾರಿಯ ಮೂಲಕ ತಲುಪಬಹುದು.
  • ಪೋಖ್ರಾನ್ ಜೈನರ ಯಾತ್ರಾಸ್ಥಳವಾಗಿದೆ. ೨೩ ನೆಯ ತೀರ್ಥಂಕರರಾದ ಭಗವಾನ್ ಪಾರ್ಶ್ವನಾಥರಿಗೆ ಅರ್ಪಿತವಾದ ಒಂದು ಜೈನ ಮಂದಿರವು ಈ ಸ್ಥಳದಲ್ಲಿದೆ.
  • ಪೋಖ್ರಾನ್ ನಲ್ಲಿ ಗುರುದ್ವಾರ ದಮ್ ದಮಾ ಸಾಹಿಬ್ ಎಂಬ ಐತಿಹಾಸಿಕ ಸಿಖ್ ಗುರುದ್ವಾರವೊಂದಿದೆ. ಸಂತ ಗುರುನಾನಕ ದೇವರು ತಮ್ಮ ಪ್ರಯಾಣದ ಅಂಗವಾಗಿ ಈ ಸ್ಥಳಕ್ಕೆ ಒಮ್ಮೆ ಭೇಟಿ ನೀಡಿದ್ದರು.

ಟೆಂಪ್ಲೇಟು:Infobox Military Test Site

ಅಣು ಪರೀಕ್ಷಾ ಕೇಂದ್ರ

[ಬದಲಾಯಿಸಿ]

ಸೆಪ್ಟೆಂಬರ್ ೭, ೧೯೭೪ರಂದು ಅಂದಿನ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರು ಟ್ರಾಂಬೆಯ ಭಾಭಾ ಅಣು ಸಂಶೋಧನಾ ಕೇಂದ್ರ(ಬಿಎಆರ್ ಸಿ)ದ ವಿಜ್ಞಾನಿಗಳಿಗೆ ಸ್ಥಳೀಯವಾಗಿಯೇ ರಚಿಸಿದ ಅಣು ಸಾಧನವನ್ನು ವಿಸ್ಫೋಟಿಸಲು ಅನುಮತಿಯಿತ್ತಾಗ, ಅದನ್ನು ಸ್ಫೋಟಿಸಿದ ಸ್ಥಳವಾದ ಪೋಖ್ರಾನ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಕಿಗೆ ಬಂದಿತು. ಅದು ಅಭಿವೃದ್ಧಿಗೊಳ್ಳುವಷ್ಟು ಕಾಲವೂ, ಆ ಸಾಧನವನ್ನು ಔಪಚಾರಿಕವಾಗಿ "ಶಾಂತಿಯುತ ಅಣು ಸ್ಫೋಟಕ"ವೆಂದು ಕರೆಯಲಾಗುತ್ತಿತ್ತು. ಆದರೆ ಅದನ್ನು ಸಾಮಾನ್ಯವಾಗಿ ನಗುತ್ತಿರುವ ಬುದ್ಧ ಎಂದು ಕರೆಯಲಾಗುತ್ತಿತ್ತು.

ವಿಜ್ಞಾನಿಗಳು ಮತ್ತು ಇಂಜಿನಿಯರ್ ಗಳ ತಂಡ

[ಬದಲಾಯಿಸಿ]

ರಾಜಗೋಪಾಲ ಚಿದಂಬರಂ ಈ ತಂಡದ ಮುಖಂಡರಾಗಿದ್ದರು. ಈ ತಂಡದಲ್ಲಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಮ್ (ತಮಿಳ್ ನಾಡು), ಪಿ.ಕೆ. ಐಯ್ಯಂಗಾರ್ (ಕೇರಳ), ರಾಜಗೋಪಾಲ ಚಿದಂಬರಂ (ತಮಿಳ್ ನಾಡು), ನಾಗಪಟ್ಟಣಂ ಸಾಂಬಶಿವ ವೆಂಕಟೇಶನ್ (ಆಂಧ್ರಪ್ರದೇಶ) ಮತ್ತು ಡಾ. ವಾಮನ್ ದತ್ತಾತ್ರೇಯ ಪಟವರ್ಧನ್ (ಮಹಾರಾಷ್ಟ್ರ) ಇದ್ದರು. ಈ ಯೋಜನೆಗೆ ೧೯೬೭-೧೯೭೪ರ ಅವಧಿಯಲ್ಲಿ ೭೫ ವಿಜ್ಞಾನಿಗಳು ಮತ್ತು ಎಂಜಿನಿಯರ್ ಗಳಿಗಿಂತ ಹೆಚ್ಚಿನ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಲಿಲ್ಲ. ಗುಂಪು ಚಿಕ್ಕದಾದುದರಿಂದ ಗೌಪ್ಯತೆ ಕಾಪಾಡಿಕೊಳ್ಳುವುದು ಸಾಧ್ಯವಾಯಿತು ಎನ್ನುತ್ತಾರೆ ಸಂಶೋಧಕರಾದ ಜೆಫ್ರೀ ರಿಷೆಲ್ಸನ್.

ಅಣು ಸಾಧನಗಳು

[ಬದಲಾಯಿಸಿ]

ಈ ಸಾಧನವು ಶ್ರೇಷ್ಠಮಟ್ಟದ ಒಳಸ್ಫೋಟಗೊಳ್ಳುವ ಸ್ಫೋಟನಾ ಕ್ರಮವನ್ನು ಬಳಸಿತು; ಇದನ್ನು ಚಂದೀಘಡದ ಭದ್ರತಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿ (TBRL)ಯವರು, ಮಹಾಯುದ್ಧ IIದಲ್ಲಿ ಅಮೆರಿಕದವರು ನಿರ್ಮಿಸಿದ್ದ ಸಾಧನವನ್ನು ಮೂಲವಾಗಿರಿಸಿಕೊಂಡು ರಚಿಸಿದರು. ಆದರೆ ಭಾರತೀಯ ವಿನ್ಯಾಸವು ಅಮೆರಿಕದ ಕ್ರಮಕ್ಕಿಂತಲೂ ಹೆಚ್ಚು ಸರಳ ಹಾಗೂ ಉತ್ತಮವಾಗಿತ್ತು. ಒಳಸ್ಫೋಟಗೊಳ್ಳಲು ಬೇಕಾದಂತಹ ಸ್ಫೋಟಕ ವಿಧಾನವನ್ನು/ಸಾಧನವನ್ನು ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿ, (HEMRL) of ದ್ರ್ದೋ, ಪುಣೆಯಲ್ಲಿ ಅಭಿವೃದ್ಧಿಗೊಳಿಸಲಾಯಿತು. ೬ ಕಿಲೋ ತೂಕದ ಪ್ಲುಟೋನಿಯಂ ಮುಂಬಯಿ (ಆಗಿನ ಬಾಂಬೆ)ನ ಟ್ರಾಂಬೆಯಲ್ಲಿರುವ BARCಯ CIRUS ರಿಯಾಕ್ಟರ್ ನಿಂದ ಬಂದಿತು. ನ್ಯೂಟ್ರಾನ್ ಇನಿಷಿಯೇಟರ್ ಗಳು ಪೋಲೋನಿಯಂ-ಬೆರಿಲಿಯಂ ಮಾದರಿಯವಾಗಿದ್ದು (ಮತ್ತೆ ಮೊದಮೊದಲ ಯು.ಎಸ್. ಬಾಂಭ್ ಗಳಲ್ಲಿ ಬಳಸಿದ ಫ್ಯಾಟ್ ಮ್ಯಾನ್ ಮಾದರಿಯವು)ಯವಾಗಿದ್ದು ಅವುಗಳ ಸಾಂಕೇತಿಕ ನಾಮ "ಫ್ಲವರ್" ಆಗಿತ್ತು. ಈ ಇಡೀ ಮೂಲಾಂಶಗಳನ್ನು ಟ್ರಾಂಬೆಯಲ್ಲೇ ಜೋಡಣೆ ಮಾಡಿ ನಂತರ ಪರೀಕ್ಷಾ ಸ್ಥಳಕ್ಕೆ ರವಾನೆ ಮಾಡಲಾಯಿತು.

ಅಣು ಬಾಂಬ್ ನ ಸೈದ್ಧಾಂತಿಕ ಇಳುವರಿ

[ಬದಲಾಯಿಸಿ]

ಸಂಪೂರ್ಣವಾಗಿ ಜೋಡಣೆಗೊಂಡ ಸಾಧನವು ಷಟ್ಕೋನದ ಆಕಾರದಲ್ಲಿದ್ದು ೧.೨೫ ಮೀಟರ್ ವ್ಯಾಸವಿದ್ದು, ಸುಮಾರು ೧೪೦೦ ಕಿಲೋಗಳಷ್ಟು ಭಾರವಿರುತ್ತದೆ. ಈ ಸಾಧನವನ್ನು ಬೆಳಗ್ಗೆ ೮ ಘಂಟೆ, ೦೫ ನಿಮಿಷಕ್ಕೆ ಸ್ಫೋಟಿಸಲಾಯಿತು; ಸ್ಫೋಟಗೊಂಡದ್ದು ಕೊಳವೆ ಸೇನಾ ಪೋಖ್ರಾನ್ ಪರೀಕ್ಷಾ ಪ್ರದೇಶದಲ್ಲಿ ಭೂಮಿಯಿಂದ ೧೦೭ ಮೀಟರ್ ಆಳದಲ್ಲಿ. ಸ್ಫೋಟನೆಯ ಸ್ಥಳ ರಾಜಾಸ್ಥಾನದ ಥಾರ್ ಮರುಭೂಮಿ (ಅಥವಾ ಗ್ರೇಟ್ ಇಂಡಿಯನ್ ಡೆಸರ್ಟ್). ಸ್ಫೋಟದಿಂದಾದ ಹಳ್ಳದ ಅಕ್ಷಾಂಶ-ರೇಖಾಂಶಗಳೆಂದರೆ (ಮಾನದಂಡಗಳೆಂದರೆ) [ಪರಸ್ಪರ ಪ್ರಕ್ರಿಯೆಯುಳ್ಳ ಭೂಪಟ ದಲ್ಲಿ ಸ್ಥಳವನ್ನು ಸೂಚಿಸಿರಿ] 27°05′42″N 71°45′11″E / 27.095°N 71.753°E / 27.095; 71.753. ಅಧಿಕೃತ ವರದಿಯ ಪ್ರಕಾರ ಈ ಸ್ಫೋಟದ ಇಳುವರಿ (ಸ್ಫೋಟದಿಂದ ಮೂಡಿದ ಶಕ್ತಿ) ೧೨ kt, ಆದರೆ ಬಾಹ್ಯ ಅಂದಾಜುಗಳ/ವರದಿಗಳ ಪ್ರಕಾರ ಇದು ೨ kt ಇಂದ ೨೦ ktುವರೆಗೆ ಎಂದು ಅಂದಾಜಿಸಲಾಗಿದೆ.

ಅಣುಸ್ಥಾವರವಾಗಿ ಪೋಖ್ರಾನ್

[ಬದಲಾಯಿಸಿ]

ಪೋಖ್ರಾನ್ ಭಾರತದ ಅಣು ಯೋಜನೆಗಳಿಗೆ ಪರೀಕ್ಷಾ ಕೇಂದ್ರವಾಗಿದೆ. ಭಾರತದ ಅಣುಶಕ್ತಿ ಆಯೋಗವು ತನ್ನ ಮೊದಲ ಭೂಗತ ಅಣ್ವಸ್ತ್ರವನ್ನು ಪೋಖ್ರಾನ್ ನಲ್ಲಿ ೧೮ ಮೇ ೧೯೭೪ರಂದು ಸ್ಫೋಟಿಸಿತು. ಭಾರತ ಸರ್ಕಾರವು, ತಾನು ಅಣ್ವಸ್ತ್ರವನ್ನು ತಯಾರಿಸುವ ಸಾಮರ್ಥ್ಯವನ್ನು ಪಡೆದಿದ್ದರೂ ಸಹ ಅಣ್ವಸ್ತ್ರಗಳನ್ನು ತಯಾರಿಸುವುದಿಲ್ಲವೆಂದು ಘೋಷಿಸಿತು. ಪೋಖ್ರಾನ್ ಅಣು ಸ್ಫೋಟವು ಭಾರತವು ಅಣುಶಕ್ತಿಯನ್ನು ಶಾಂತಿಯುತ ಕಾರಣಗಳಿಗಾಗಿ ಬಳಸಿಕೊಳ್ಳಲು ರಕ್ಷಾಕವಚವಾಗಿ ಅಣುಶಕ್ತಿ ಪಡೆಯಲೋಸುಗ ಮಾಡಿದ ಸ್ಫೋಟವೆಂದೂ, ಭಾರತವು ಅಣುಶಕ್ತಿ ತಂತ್ರಜ್ಞಾನ ದಲ್ಲಿ ಸ್ವಾವಲಂಬನೆಯನ್ನು ಹೊಂದಲು ಈ ಸ್ಫೋಟವನ್ನು ಕೈಗೊಳ್ಳಲಾಯಿತೆಂದೂ ಹೇಳಿಕೆ ನೀಡಿತು; ಆದರೆ ನಂತರದ ದಿನಗಳಲ್ಲಿ ಭಾರತವು ಐದು ಅಣು ಪರೀಕ್ಷೆಗಳನ್ನು ೧೯೯೮ರ ಮೇ ೧೧ ಮತ್ತು ೧೩ರಂದು ಕೈಗೊಂಡಿತು. ಅಂದಿನಿಂದ ಭಾರತವು ಅಣುಪರೀಕ್ಷೆಗಳ ಮೇಲೆ ಅನಿರ್ದಿಷ್ಟ ಅವಧಿಯವರೆಗೆ ನಿಷೇಧ ಹೂಡಿದೆ.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಭಾನಿಯನ

ಉಲ್ಲೇಖಗಳು

[ಬದಲಾಯಿಸಿ]
  1. "Falling Rain Genomics, Inc. - Map and weather data for Pokhran".
  2. GRIndia