ಥಾರ್ ಮರುಭೂಮಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಥಾರ್
ದಿ ಗ್ರೇಟ್ ಇಂಡಿಯನ್ ಡೆಸರ್ಟ್
Desert
none  ಥಾರ್ ಮರುಭೂಮಿ, ರಾಜಸ್ಥಾನ
ಥಾರ್ ಮರುಭೂಮಿ, ರಾಜಸ್ಥಾನ
ದೇಶಗಳು ಭಾರತ, ಪಾಕಿಸ್ತಾನ
ರಾಜ್ಯ ಭಾರತ:
ರಾಜಸ್ಥಾನ
ಹರ್ಯಾಣ
ಪಂಚಾಬ್
ಗುಜರಾತ್

ಪಾಕಿಸ್ತಾನ:
ಸಿಂಧ್
ಪಂಜಾಬ್
Biome Desert


ಥಾರ್ ಮರುಭೂಮಿಯ ಉಪಗ್ರಹ ಚಿತ್ರ

ಭಾರತದ ಮಹಾ ಮರುಭೂಮಿ ಎಂದು ಕರೆಯಲ್ಪಡುವ ಥಾರ್ ಮರುಭೂಮಿ, ಪಶ್ಚಿಮ ಭಾರತರಾಜಸ್ಥಾನ, ಹರಿಯಾಣ, ಪಂಜಾಬ್ ಮತ್ತು ಗುಜರಾತ್ ರಾಜ್ಯಗಳಲ್ಲಿ ಹರಡಿದೆ. ಪಾಕಿಸ್ತಾನಕ್ಕೂ ಸ್ವಲ್ಪ ಚಾಚಿರುವ ಈ ಮರುಭೂಮಿಯನ್ನು ಅಲ್ಲಿ "ಚೋಲಿಸ್ತಾನ್ ಮರುಭೂಮಿ" ಎಂದು ಕರೆಯುತ್ತಾರೆ.

ಈಶಾನ್ಯಕ್ಕೆ ಸಟ್ಲೆಜ್ ನದಿ, ಪೂರ್ವಕ್ಕೆ ಅರಾವಳಿ ಶ್ರೇಣಿ ದಕ್ಷಿಣಕ್ಕೆ ಗುಜರಾತಿನ ಕಚ್ ಜೌಗುಪ್ರದೇಶ ಹಾಗು ಪಶ್ಚಿಮಕ್ಕೆ ಸಿಂಧೂ ನದಿಗಳಿಂದ ಈ ಮರುಭೂಮಿಯ ಸುತ್ತುವರಿಯಲ್ಪಟ್ಟಿದೆ. ಮರುಭೂಮಿಯ ಒಟ್ಟು ವಿಸ್ತೀರ್ಣ ಸುಮಾರು ೪,೪೬,೦೦೦ ಚ. ಕಿಮೀ. ಸುಮಾರು ೮೦೫ ಕಿಮೀ ಉದ್ದ ಮತ್ತು ಸುಮಾರು ೪೮೫ ಕಿಮೀ ಅಗಲವಿದೆ. ೧೦% ಮರಳು ದಿಣ್ಣೆಗಳಿಂದ ಕೂಡಿದ ಇದರ ೯೦% ಭಾಗ ಕಲ್ಲು ಮಣ್ಣಿನ ಶಾಶ್ವತ ದಿಣ್ಣೆಗಳು, ಬಂಡೆಗಳು ಮತ್ತು ಉಪ್ಪಿನ ಬೈಲುಗಳಿಂದ ಕೂಡಿದೆ. ಅಲ್ಲಲ್ಲಿ ಮುಳ್ಳಿನ ಕುರುಚಲು ಗಿಡಗಳು ಮತ್ತು ಹುಲ್ಲುಗಾವಲುಗಳಿದ್ದರೂ ಇದು ಭಾಗಶಃ ಒಣ ಭೂಮಿಯಾಗಿದೆ.

ಇದನ್ನೂ ನೋಡಿ[ಬದಲಾಯಿಸಿ]

ವಿಶ್ವದ ಅತಿ ದೊಡ್ಡ ಮರುಭೂಮಿಗಳ ಪಟ್ಟಿ ಇದು ೯ ನೇ ಅತೀ ದೊಡ್ಡ ಮರುಭೂಮಿ .

ಬಾಹ್ಯ ಸಂಪರ್ಕಗಳು[ಬದಲಾಯಿಸಿ]