ಅರಾವಳಿ ಪರ್ವತಗಳು
ಅರಾವಳಿ ಪರ್ವತಗಳು ಭಾರತದ ಪಶ್ಚಿಮ ಭಾಗದಲ್ಲಿನ ಒಂದು ಪರ್ವತ ಶ್ರೇಣಿ. ರಾಜಸ್ಥಾನದಲ್ಲಿ ಈಶಾನ್ಯ ಭಾಗದಿಂದ ನೈಋತ್ಯದವರೆಗೆ ಸುಮಾರು ೩೦೦ ಮೈಲಿಗಳವರೆಗೆ ಅರಾವಳಿ ಪರ್ವತಗಳು ಹಬ್ಬಿವೆ. ಶ್ರೇಣಿಯ ಉತ್ತರದ ಅಂಚು ಬಿಡಿಬಿಡಿಯಾದ ಬೆಟ್ಟಗಳು ಮತ್ತು ಶಿಲಾಕೊರಕಲುಗಳಂತೆ ಇದ್ದು ಹರ್ಯಾಣಾ ರಾಜ್ಯದ ಮೂಲಕ ದೆಹಲಿಯ ಸಮೀಪದವರೆಗೆ ಹರಡಿದೆ. ಅರಾವಳಿ ಶ್ರೇಣಿಯ ಅತಿ ಎತ್ತರ ಶಿಖರವೆಂದರೆ ಮೌಂಟ್ ಆಬುವಿನ ಗುರು ಶಿಖರ. ೫೬೫೦ ಅಡಿ (೧೭೨೨ ಮೀ.) ಎತ್ತರವಿರುವ ಈ ಶಿಖರ ಅರಾವಳಿ ಶ್ರೇಣಿಯ ದಕ್ಷಿಣದ ತುದಿಯಲ್ಲಿದ್ದು ಗುಜರಾತ್ ರಾಜ್ಯದ ಗಡಿಗೆ ಹೊಂದಿಕೊಂಡಿದೆ. ಉದಯಪುರ ನಗರವು ಅರಾವಳಿ ಪರ್ವತಗಳ ದಕ್ಷಿಣದ ಮಗ್ಗುಲಲ್ಲಿ ಇದೆ. ಅರಾವಳಿ ಸಮುದಾಯವು : ಭಾರತದ ಪರ್ಯಾಯದ್ವೀಪ ಭಾಗದ ಒಂದು ಮುಖ್ಯ ಪರ್ವತ ಶ್ರೇಣಿ. ಕೇಟ್ರಿಯಿಂದ (28 ಡಿಗ್ರಿ ಉ75ಡಿಗ್ರಿ 47' ಪೂ) ಭಕಾರ್ ವರೆಗೆ (24 ಡಿಗ್ರಿ 20' ಉ-72 ಡಿಗ್ರಿ 53' ಹಬ್ಬಿದೆ. ರಾಜಸ್ತಾನದ ಮಧ್ಯೆ ಹಾದುಹೋಗಿದೆ. ಇಲ್ಲಿನ ಅಬುಪರ್ವತ ಒಂದು ಪುಣ್ಯಕ್ಷೇತ್ರ. ಈಶಾನ್ಯದಲ್ಲಿ ದೆಹಲಿಯಿಂದ ನೈರುತ್ಯದಲ್ಲಿ ಗುಜರಾತಿನವರೆಗೆ ಉದ್ದವಾಗಿವೆ. ಸಿಂಧೂ ಮತ್ತು ಗಂಗಾ ನದಿಗಳ ಜಲಾನಯನ ಪ್ರದೇಶಗಳನ್ನು ಪ್ರತ್ಯೇಕಿಸುತ್ತವೆ. ಸರಾಸರಿ ಎತ್ತರ 400 ರಿಂದ 600 ಮೀ. ಈಶಾನ್ಯದಲ್ಲಿ ಅಲ್ಪಾರ್ ಮತ್ತು ತೋರಾವಲಿ ಮತ್ತು ನೈರುತ್ಯದಲ್ಲಿ ಮೇವಾರದ ಬೆಟ್ಟಗಳಿವೆ. ಈಶಾನ್ಯಕ್ಕಿಂತ ನೈರುತ್ಯದಲ್ಲಿ ಹೆಚ್ಚು ಎತ್ತರ. ಇಲ್ಲಿನ ಮೌಂಟ್ ಅಬು (1158 ಮೀ)ವಿನಲ್ಲಿ ಗುರುಶಿಕಾರ್ ಎಂಬುದು ಅತಿಎತ್ತರದ ಶಿಖರ (1,722 ಮೀ) ಅಬುಪರ್ವತ ರಾಜಸ್ತಾನದ ಪ್ರಸಿದ್ಧ ಗಿರಿಧಾಮ. ಖೋ (979ಮೀ), ರಘುನಾಥಪುರ (1052 ಮೀ) ಮತ್ತು ತಾತಾಘುಕ್ (870ಮೀ) ಇತರ ಶಿಖರಗಳು. ಅರಾವಳಿ ಸ್ತೋಮಗಳಲ್ಲಿ ಲೂನಿ ಮತ್ತು ಬನಾಸ್ ನದಿಗಳು ಉಗಮವಾಗುತ್ತವೆ.
ಮೇಲ್ಮೈ ಲಕ್ಷಣ
[ಬದಲಾಯಿಸಿ]ಈ ಶ್ರೇಣಿಯ ಬಹುಭಾಗ ಹೆಚ್ಚಿನ ರೀತಿಯ ಶಿಥಿಲೀಕರಣಕ್ಕೊಳಗಾಗದಿರುವ ಕಾರಣ ನೆಲಭಾಗದಿಂದ ಆವೃತವಾಗಿದ್ದು ಪ್ರಸ್ಥಭೂಮಿಯಂತೆ ಮಾರ್ಪಟ್ಟಿದೆ. ಇವುಗಳನ್ನು ಅವಶೇಷ ಮಡಿಕೆ ಪರ್ವತ ಶ್ರೇಣಿಗಳೆಂದು ಕರೆಯುವರು. ಪರ್ಯಾಯದ್ವೀಪ ಭಾಗದ ಮೇಲ್ಮೈಲಕ್ಷಣವನ್ನು ರೂಪಿಸುವಲ್ಲಿ ಇದರ ಪಾತ್ರ ಹಿರಿದು. ಕ್ಷೋಭೆಗೆ ಕಾರಣವಾದ ಶಕ್ತಿಗಳ ಅಕ್ಷ ಸಮುದಾಯಕ್ಕೆ ಸಮಾಂತರವಾಗಿರುವುದೇ ಈ ಸಮುದಾಯದ ಲಕ್ಷಣ. ಸಮಾಂತರವಾಗಿ ರಾಜಸ್ತಾನದಲ್ಲಿ ಈ ಪರ್ವತಶ್ರೇಣಿ ಈಶಾನ್ಯ-ನೈರುತ್ಯ ದಿಕ್ಕಿನಲ್ಲಿ ಹಬ್ಬಿದೆ. ಅಜ್ಮೀರ್‍ನಿಂದ ಪ್ರಾರಂಭವಾಗಿ ನೈರುತ್ಯ ದಿಕ್ಕಿನಲ್ಲಿ ಮುಂದುವರಿದು ಅಬುಪರ್ವತದವರೆಗೂ ಬೆಟ್ಟದ ಸಾಲು ಹಬ್ಬಿದೆ. ಉತ್ತರ ಹಿಮಾಚಲ ಮತ್ತು ದಕ್ಷಿಣ ನೀಲಗಿರಿಗಳ ಮಧ್ಯೆ ಕಂಡುಬರುವ ಅತ್ಯಂತ ಉನ್ನತ ಪ್ರದೇಶಗಳಲ್ಲಿ ಈ ಸ್ತೋಮ ಒಂದಾಗಿದೆ. ನೈರುತ್ಯದಲ್ಲಿ ಥಾರ್ ಮರುಭೂಮಿಯ ಮರಳಿನಿಂದಲೂ ನದಿಮೆಕ್ಕಲಿನಿಂದಲೂ ಆವೃತವಾಗಿದೆ. ಅಲ್ಲದೆ ಮರುಭೂಮಿಯ ಮರಳು ಇನ್ನಷ್ಟು ಹರಡದಂತೆ ಅಡ್ಡಗಟ್ಟುವ ಒಂದು ದೊಡ್ಡ ತಡೆಯಾಗಿದೆ. ದೆಹಲಿಯತ್ತ ಅರಾವಳಿ ಅಲ್ಲೊಂದು ಇಲ್ಲೊಂದರಂತೆ ಕಂಡುಬರುವ ಬೆಟ್ಟಗಳಂತೆ, ಕಡಿದಾದ ಬಂಡೆಗಳಂತೆ ಹಬ್ಬಿದೆ. ಅಲ್ಲದೆ ಕಾಥೆವಾರ್ ಮತ್ತು ಕಚ್ ಪ್ರದೇಶಗಳಲ್ಲಿ ಅಳಿದುಳಿದ ಹಲವಾರು ಶಿಖರಗಳಿವೆ. ಈ ಸಮುದಾಯದ ಶಿಲೆಗಳು ಭೂಚರಿತ್ರೆಯಲ್ಲಿ ಅತ್ಯಂತ ಪುರಾತನಯುಗವಾದ ಅರ್ಷೇಯಕಲ್ಪ ಮತ್ತು ಪ್ರಿ-ಕೇಂಬ್ರಿಯನ್ ಯುಗಕ್ಕೆ ಸೇರಿವೆ. ಪುರಾಣಯುಗದ ವಿಂಧ್ಯ ಶಿಲಾಸಮುದಾಯ ಅರಾವಳಿ ಶ್ರೇಣಿಯ ಇಕ್ಕೆಲದಲ್ಲೂ ಕಂಡುಬಂದಿರುವುದರಿಂದ ಇದು ಪುರಾಣಯುಗಕ್ಕಿಂತ ಹಿಂದಿನದೆಂದು ಹೇಳಬಹುದು. ಅಲ್ಲದೆ ವಿಂಧ್ಯ ಶಿಲಾ ಸಮುದಾಯಕ್ಕೆ ಸೇರಿದ ಪ್ರಸ್ತರಗಳು ಯಾವ ವಿಧವಾದ ಮಡಿಕೆ, ಸ್ತರಭಂಗ ಮುಂತಾದವನ್ನು ತೋರಿಸದೆ ಸಮತಲವಾಗಿ ಕಂಡುಬರುವುದು ಈ ಅಭಿಪ್ರಾಯವನ್ನು ಪುಷ್ಟೀಕರಿಸುತ್ತದೆ. ನಿರ್ಜೀವಯುಗದ ಲ್ಲಾದ ಖನಿಜಪರಿವರ್ತನೆ ಈ ಸಮುದಾಯದ ಹಲವಾರು ಭಾಗಗಳಲ್ಲಿ ಕಂಡು ಬರುತ್ತದೆ. ಅರಾವಳಿ ಶಿಲಾಸ್ತೋಮವನ್ನು ಈ ರೀತಿ ವಿಭಜಿಸಲಾಗಿದೆ:
- 4 ಖನಿಜ ನಿಕ್ಷೇಪಗಳು
- 7. ರಾಂಧಂಬೋರ್ ಮರಳು ಶಿಲಾಪದರಗಳು ಮತ್ತು ಸರಿಸಮವರ್ಗಗಳು
- 6. ಖಾರ್ಡಿಯೋಲ ಒರಟು ಮರಳುಶಿಲೆ
- 5. ಕನೋಜ್ ಒರಟು ಮರಳುಶಿಲೆ
- 4. ಅಂತರಪದರಯುತ ಮತ್ತು ಅಡ್ಡ ಹಾಯ್ದ ಕ್ವಾರ್ಟ್ಸೈಟ್ ಪ್ರಸ್ತರಗಳು
- 3. ಖೇರ್ ಮಾಲಿಯ ಲಾವಾಗಳು
- 2. ಕಬ್ಬಿಣಯುಕ್ತ ಜಾಸ್ಪರ್ ಮತ್ತು ಹಿಮಟೈಟ್ ಪ್ರಸ್ತರಗಳು
- 1. ಬಿನೋಟ ಜೇಡುಶಿಲೆ
- 3 ಜೇಡು ಶಿಲಾಸಮೂಹ
- 2 ತಳದ ಕಬ್ಬಿಣಯುಕ್ತ ಸುಣ್ಣಶಿಲೆ
- 1 ತಳದ ಕ್ವಾಟ್ರ್ಸೈಟ್ ಅಥವಾ ಪೆಂಟೆ ಶಿಲೆ
ಮೇಲ್ಕಾಣಸಿರುವ ವಿವಿಧ ಘಟ್ಟದ ಶಿಲಾಪ್ರಸ್ತರಗಳನ್ನು ಕೆಳಗಿನಿಂದ ಮೇಲಕ್ಕೆ ಓದಬೇಕು.ಏಕೆಂದರೆ ಅವನ್ನು ಇಲ್ಲಿ ನಿಕ್ಷೇಪಗೊಂಡ ಕ್ರಮದಲ್ಲೇ ಜೋಡಿಸಿದೆ. ಅವುಗಳ ಒಟ್ಟು ಮಂದ 3050 ಮೀ. 1. ತಳದ ಕ್ವಾಟ್ರ್ಸೈಟ್ ಅಥವಾ ಪೆಂಟೆಶಿಲೆ: ಬಹುಮಟ್ಟಿಗೆ ಮೇವಾರದಲ್ಲಿ ಕಂಡುಬಂದಿದೆ. ಇವು ಭಾರತದ ಭೂಚರಿತ್ರೆಯಲ್ಲಿನ ಬಹು ಪುರಾತನವಾದ ಸಮುದ್ರತೀರದ ಅಸ್ತಿತ್ವವನ್ನು ಸಾರಿಹೇಳುತ್ತ್ತದೆ. ಈ ಗುಂಪಿನಲ್ಲಿ ಬಹು ಸಣ್ಣನೆಯ ಕಣಗಳಿಂದ ಕೂಡಿದ ಕ್ವಾಟ್ರ್ಸೈಟ್ ಒರಟು ಕಣಗಳಿಂದಾದ ಮರಳು ಶಿಲೆ ಮತ್ತು ದಪ್ಪ ದಪ್ಪ ಪೆಂಟೆಗಳಿಂದಾದ ಪೆಂಟೆಕಲ್ಲುಇವುಗಳನ್ನು ಕಾಣಬಹುದು. ತ¼ಬಾಗದಲ್ಲಿರುವ ನೈಸ್ ಶಿಲಾಸ್ತೋಮಕ್ಕೂ ಇವುಗಳಿಗೂ ನಡುವೆ ಅಷ್ಟು ಮಂದವಲ್ಲದೆ ಆರ್ಕೋಸ್ ಪ್ರಸ್ತರವಿದೆ. ಇದಕ್ಕೂ ನೈಸ್ ಶಿಲೆಗೂ ಹೆಚಿನ ಸಂಬಂಧವನ್ನು ಗುರುತಿಸಬಹುದು. ಪೆಂಟೆಶಿಲೆಯಲ್ಲಿರುವ ಉರುಟು ಕಲ್ಲುಗಳು (ಪೆಬಲ್ಸ್) ದುಂಡಗೆ ಅದರ ವಕ್ರಾಕಾರವನ್ನು ತೋರಿಸುತ್ತವೆ. ಹಲವು ಬಾರಿ ಒಂದೇ ದಿಕ್ಕಿನಲ್ಲಿ ಚಪ್ಪಟೆಯಾಗಿ ಹರಡಿರುತ್ತವೆ. ಇವು ಗಾತ್ರದಲ್ಲಿ ಕ್ರಿಕೆಟ್ ಚೆಂಡಿನಿಂದ ಹಿಡಿದು ತೆಂಗಿನಕಾಯಷ್ಟು ದಪ್ಪವಾಗಿವೆ. 2. ತಳದ ಕಬ್ಬಿಣಯುಕ್ತ ಸುಣ್ಣಶಿಲೆ: ತಳದ ಕ್ವಾಟ್ರ್ಸೈಟ್‍ಗಳ ಮೇಲೆ ಹರಡಿವೆ. ಮಂದದಲ್ಲಿ ಒಂದೇ ರೀತಿಯಾಗಿಲ್ಲ. ಹಲವು ಕಡೆ ನೈಸ್ ಶಿಲೆಗಳ ಮೇಲೂ ಇವೆ. ಒಮ್ಮೊಮ್ಮೆ ಈ ಸುಣ್ಣ ಶಿಲೆಯ ಪದರಗಳು ಪರಸ್ಪರ ಹೆಣೆದುಕೊಂಡಿವೆ. ಹಲವು ಪ್ರದೇಶಗಳಲ್ಲಿ ಇವುಗಳಲ್ಲಿ ಮೊನಚಾದ ಬೆನಚಿನ ಹರಳುಗುಚ್ಛಗಳನ್ನು ಕಾಣಬಹುದು. ತಳಭಾಗದ ಗ್ರಾನೈ ಟ್‍ಗಳು ಶಿಥಿಲಗೊಂಡಾಗ ಅವುಗಳಲ್ಲಿನ ಸುಣ್ಣ ಶಿಲಾಪ್ರಸ್ತರಗಳು ಆಗಿರಬಹುದು ಎಂದು ಊಹಿಸಲಾಗಿದೆ. ಇವುಗಳಲ್ಲಿ ಆಗಾಗ್ಗೆ ಅಭ್ರಕ ಮತ್ತು ಆಂಫಿಬೋಲ್ ಖನಿಜಗಳ ಕಣಗಳನ್ನು ಗುರುತಿಸಬಹುದು. ಈ ಎರಡು ಘಟ್ಟಗಳನ್ನು ಕೆಳ ಅರಾವಳಿ ಸ್ತೋಮವೆಂದು ಪರಿಗಣಿಸಲಾಗಿದೆ. ಇವು ರಾಜಸ್ತಾನದ ದಕ್ಷಿಣದ ತುದಿಯಲ್ಲಿ ಒಂದೇ ಸರಪಳಿಯ ಕೊಂಡಿಗಳಂತಿರುವ ಬೆಟ್ಟಗುಡ್ಡಗಳ ಸಾಲಿನಂತೆ ಹಬ್ಬಿವೆ. ಈ ಗುಡ್ಡಗಳು ಕ್ವಾಟ್ರ್ಸೈಟ್ ಮತ್ತು ಒರಟು ಮರಳುಶಿಲೆಯಿಂದ ಕೂಡಿವೆ. ವಾಯವ್ಯ ತುದಿಯಲ್ಲಿ ವಿಶೇಷವಾಗಿ ಪೆಂಟೆ ಶಿಲೆಯ ಗುಡ್ಡಗಳೂ ಉತ್ತರಕ್ಕೆ ಥಾನ ಬಳಿ ಹಿಮಟೈಟ್ ಪದರಶಿಲೆಯೂ ಹಬ್ಬಿವೆ. ಬರುಂದಿಯ ಪಶ್ಚಿಮಕ್ಕೆ 0.9 ಮೀ. ಮಂದ ಪೆಂಟೆಶಿಲೆಯ ಪ್ರಸ್ತರಗಳನ್ನೂ ನೋಡಬಹುದು. ಈ ಶಿಲೆಯಲ್ಲಿ ಕಡುಬಿನಾಕಾರದ ಕ್ವಾಟ್ರ್ಸ್, ಜಾಸ್ಪರ್ ಮತ್ತು ಚೆರ್ಟೆಪೆಂಟೆಗಳಿವೆ. ಆದರೆ ಈ ಭಾಗದಲ್ಲಿ ನೈಸ್ ಮತ್ತು ಪೆಂಟೆಶಿಲೆಯ ಪರಸ್ಪರ ಸಂಬಂಧ ಅಸ್ಪಷ್ಟ ಮತ್ತು ಅನಿಶ್ಚಿತ. ಇವುಗಳ ಅಧ್ಯ ಯನದಿಂದ ಕೆಳ ಅರಾವಳಿ ಶಿಲಾಸ್ತೋಮ ನಿಕ್ಷೇಪಗೊಂಡಾಗ ಇದ್ದ ಪರಿಸ್ಥಿತಿಯನ್ನು ಊಹಿಸಬಹುದು. ಬಹುಶಃ ಈ ಸ್ತೋಮ ಪ್ರಸ್ತರಗಳಿಗೆ ಬೇಕಾದ ಜೇಡು ಬುಂದೇಲ್‍ಖಂಡ ಕಣಶಿಲಾಭಾಗದಿಂದ ಬಂದಿರಬಹುದೆಂದು ತಿಳಿದರೆ ತಪ್ಪಾಗಲಾರದು. ಹಿಂದಿನ ಈ ಕರಾವಳಿ ಪ್ರದೇಶದಲ್ಲಿ ತೇವವಾದ ಅದರ ಉಷ್ಣವಲಯದ ವಾಯುಗುಣವವನ್ನು ಸೂಚಿಸುವ ಯಾವ ರುಜವಾತೂ ದೊರೆಯದೆ ಎಲ್ಲೆಡೆಯೂ ಒಣಹವೆ ಇದ್ದಿತೆಂದು ಹೇಳಬಹುದು. 3 ಜೇಡುಶಿಲಾಸಮೂಹ: ಅರಾವಳಿಸ್ತೋಮದ ಬಹುಭಾಗ ಫಿಲೈಟ್ ಮತ್ತು ಬಯೊಟೈಟ್ ಅಭ್ರಕ ಪzರು ಶಿಲೆಗಳಿಂದ ಅವೃತವಾಗಿದೆ. ಅನೇಕ ಕಡೆ ಈ ಪ್ರಸ್ತರಗಳು ಕೆಳಗಣ ಅರಾವಳಿ ಘಟ್ಟದ ತಳದ ಕ್ವಾಟ್ರ್ಸೈಟ್ ಮತ್ತು ಸುಣ್ಣಶಿಲಾಪ್ರಸ್ತರಗಳ ಮೇಲೆ ಹರಡಿವೆ. ಆದರೆ ಕೆಲವು ಪ್ರದೇಶಗಳಲ್ಲಿ ಈ ಘಟ್ಟವೇ ಇಲ್ಲದೆ ನೇರವಾಗಿ ಬುಂದೇಲ್‍ಖಂಡ ನೈಸ್ ಮೇಲೆ ಕಂಡುಬಂದಿದೆ. ಇದು ಬಹುಶಃ ತೀವ್ರ ಗತಿಯ ಭೂಕ್ಷೋಭೆಯಿಂದಾಗಿರಬಹು ದೆಂದು ಭಾವಿಸಬಹುದು. ಬುಂದೇಲ್‍ಖಂಡ ಗ್ರಾನೈ ಟ್ ಹೆಚಿನ ದರ್ಜೆಯ ರೂಪಾಂತರವನ್ನು ಸಹ ಉಂಟು ಮಾಡಿದೆ ಎಂದು ಭಾವಿಸಲಾಗಿದೆ. ಈ ಜೇಡುಶಿಲೆಗಳು ರಚನೆಯಲ್ಲಿ ಬಹುಸೂಕ್ಮವಾಗಿದ್ದು ಬಣ್ಣದಲ್ಲಿ ವಿವಿಧ ಛಾಯೆಗಳನ್ನು ತೋರ್ಪಡಿಸುತ್ತವೆ. ಪ್ರಸ್ತರೀಕರಣವನ್ನು ವರ್ಣವಿಭೇದದಿಂದಲೂ ಸುಲಭವಾಗಿ ಗುರುತಿಸ ಬಹುದು. ಹಲವು ಬಾರಿ ವಿವಿಧ ವರ್ಣದ ಪಟ್ಟೆಗಳು ಶಿಲಾಪ್ರಸ್ತರಗಳನ್ನೂ ಸೀಳುಗಳನ್ನೂ ಹಾಯ್ದುಹೋಗುವುದುಂಟು. ಬಿನೋಟ ಜೇಡುಶಿಲೆಗಳು: ಅರಾವಳಿಯ ಪೂರ್ವ ಇಳಿಜಾರಿನ ಉದ್ದಕ್ಕೂ ಕಂಡುಬಂದು ಬಹುಶಃ ಪ್ರಮುಖ ಸೀಮಾಸ್ತರಭಂಗವನ್ನು (ಗ್ರೇಟ್ ಚಾಂಡರಿ ಫಾಲ್ಟ್) ಸೂಚಿಸಬಹುದು. ಕಬ್ಬಿಣವಿರುವ ಜಾಸರ್ ಮತ್ತು ಹಿಮಟೈಟ್ ಪ್ರಸ್ತರಗಳು: ಅರಾವಳಿ ಶಿಲಾಸ್ತೋಮದ ಸಿಲಿಕಯುಕ್ತ ಶಿಲೆಗಳು ಮತ್ತು ಕಬ್ಬಿಣದ ಶಿಲೆಗಳು ಹಲವು ದ್ರವಗಳ ಚಟುವಟಿಕೆಯಿಂದ ಉಂಟಾದುವೆಂದು ನಂಬಲಾಗಿದೆ. ಬಹುಶಃ ಈ ಚಟುವಟಿಕೆಯೇ ಕಬ್ಬಿಣವುಳ್ಳ ಜಾಸರ್ ಮತ್ತು ಹಿಮಟೈಟ್ ಪ್ರಸ್ತರಗಳಿಗೂ ಕಾರಣವಾಗಿರಬಹುದು. ಜಾಸರ್ ಮತ್ತು ಹಿಮಟೈಟ್ ಪ್ರಸ್ತರಗಳು ಪರಸ್ಪರ ಒಂದರ ಮೇಲೊಂದು ಸಂಚಿತವಾಗಿವೆ. ಕೆಲವು ಪ್ರದೇಶಗಳಲ್ಲಿ ಒರಟು ಮರಳುಶಿಲೆಯ ಪ್ರಸ್ತರಗಳು ಅನನುರೂಪವಾಗಿ ಇವುಗಳ ಮೇಲೆ ಶೇಖರಗೊಂಡಿರು ವುದನ್ನೂ ಕಾಣಬಹದು. ಇವು ಅನಾದಿಕಾಲದ ಸ್ತರಗಳನ್ನು ಪ್ರತಿನಿಧಿಸುವುವೆಂದು ತಿಳಿಯಲಾಗಿದೆ. ಅಲ್ಲದೆ ಇವುಗಳನ್ನು ಬುಂದೇಲ್‍ಖಂಡ ಗ್ರಾನೈ ಟಿನ ಅಂತಸ್ಸರಣಗಳು ತೂರಿಕೊಂಡುಬರುತ್ತವೆ. ಖೇರ್‍ಮಾಲಿಯ ಲಾವಾಗಳು: ಖೇರ್‍ಮಾಲಿಯ ಪ್ರದೇಶಗಳಲ್ಲಿ ಒರಟು ಮರಳುಶಿಲೆ ಮತ್ತು ಸ್ಲೇಟ್‍ಗಳ ನಡುವೆ ಈ ಅಗ್ನಿಶಿಲೆಯ ಪ್ರಸ್ತರಗಳನ್ನು ನೋಡಬಹುದು. ಇವು ಬಹುಶಃ ಸ್ಲೇಟ್ ಶಿಲಾಪದರಗಳಲ್ಲಿ ಮತ್ತು ಬುಂದೇಲ್‍ಖಂಡ ಗ್ರಾನೈ ಟ್‍ಗಳಲ್ಲಿ ಕಂಡುಬರುವ ಡಾಲರೈಟ್ ಅಂತಸ್ಸರಣಗಳ ಬಾಹ್ಯರೂಪಗಳೆಂದು ಭಾವಿಸಲಾಗಿದೆ. ಇವು ನೇರಳೆ ಕಪ್ಪುಬಣ್ಣ ದಿಂದಿದ್ದು ನಾನಾ ಗಾತ್ರದ, ಆಕಾರದ ರಂಧ್ರಗಳಿಂದ ಕೂಡಿವೆ. ಹಲವು ರಂಧ್ರಗಳಲ್ಲಿ ಆನುಷಂಗಿಕ ಖನಿಜಗಳು ತುಂಬಿವೆ . ಅಂತರಪದರಯುತ ಮತ್ತು ಅಡ್ಡಹಾಯ್ದ ಕ್ವಾಟ್ರ್ಸೈಟ್ ಪ್ರಸ್ತರಗಳು: ಅರಾವಳಿ ಸೋಮದ ಹಲವೆಡೆ ಕಡುಬಿನಾಕಾರದ (ಮಸೂರಾಕಾರz)ಕ್ವಾಟ್ರ್ ಸೈಟ್ ಮತ್ತು ಪೆಂಟೆಕಲ್ಲಿನ ಪ್ರಸ್ತರಗಳು ಫಿಲೈಟ್ ಮತ್ತು ಪದರುಶಿಲೆಗಳೊಡನೆ ಕಾಣಿಸುತ್ತವೆ. ಅಲ್ಲದೆ ಸ್ಲೇಟ್‍ಗಳ ಮಧ್ಯೆಯೂ ನಿರಾಕಾರ ಕ್ವಾಟ್ರ್ಸೈಟ್ ಗಳನ್ನು ನೋಡಬಹುದು. ಹಲವು ಪ್ರದೇಶಗಳಲ್ಲಿ ಇವು ನೂರಾರು ಅಡಿಗಳಷ್ಟು ಮಂದವಾಗಿದ್ದು ಕಡಿದಾದ ಬೆಟ್ಟದ ಏಣಿನಂತೆ ಕಂಡುಬರುತ್ತವೆ. ಬಡೆಸಾರ್ ಮತ್ತು ಮೇವಾರ್ ಬಳಿ ಇವುಗಳ ಜಾಡಿನಲ್ಲಿ ತೀವ್ರ ಬದಲಾವಣೆಯನ್ನು ಕಾಣಬಹುದು. ಅಲ್ಲಿ ಇವು ಸೇಟ್‍ಗಳೂಡನೆ ಹಾಸುಹೊಕ್ಕಾಗಿವೆ. ಡಾ.ಹೆರಾನ್ ಅವರ ಅಭಿಪ್ರಾಯದಂತೆ ಬಹುಶಃ ಸ್ಲೇಟುಗಳು ಈ ಕ್ವಾಟ್ರ್ಸೈಟ್ ಗಳ ಮಧ್ಯೆ ಸಿಕ್ಕಿಬಿದ್ದು ಇರುಕಲ್ಪಟ್ಟಿವೆ. ಕನೂಜ್ ಒರಟು ಮರಳುಶಿಲೆ: ಕನೂಜ್ ಸಮೀಪದಲ್ಲಿ ಹೆಚ್ಚು ಕಬ್ಬಿಣಾಂಶವುಳ್ಳ ಒರಟು ಮರುಳುಶಿಲೆ ಮತ್ತು ಜೇಡುಶಿಲಾಪ್ರಸ್ತರಗಳು ಅನುರೂಪವಾಗಿ ಬಿಳಿಯ ಬೆಣಚಿನ ಪದರುಶಿಲೆಗಳ ಮೇಲಿವೆ. ಇವು ಬೂದುಬಣ್ಣದವು. ಬಹು ಸುಲಭವಾಗಿ ಶಿಥಿಲವಾಗುತ್ತವೆ. ಖಾರ್ಡಿಯೋಲ ಒರಟು ಮರಳುಶಿಲೆ: ಇವು ಖೇರ್‍ಮಾಲಿಯ ಲಾವಾಪ್ರಸ್ತರUಳ ಮೇಲೆ ಸಂಚಿತವಾಗಿವೆ. ಅಲ್ಲದೆ ಇವುಗಳ ಮೇಲೆ ವಯಸ್ಸಿನಲ್ಲಿ ಕಿರಿದಾದ ರಯಾಲೋ ಪ್ರಸ್ತರಗಳು ಶೇಖರವಾಗಿರುವುದನ್ನು ಕಾಣಬಹುದು. ಕೆಲವೆಡೆ ಬುಂದೇಲ್‍ಖಂಡ ಗ್ರಾನೈ ಟ್, ಅರಾವಳಿ ಸ್ಲೇಟ್ ಶಿಲಾಸಮೂಹ ಮತ್ತು ಡಾಲರೈಟ್‍ಗಳ ಮೇಲೆ ಅನನುರೂಪವಾಗಿ ಇವೆ. ತಳಭಾಗದಲ್ಲಿ ಮರಳುಮಿಶ್ರಿತ ಜೇಡು, ಸ್ಲೇಟು ಮತ್ತು ಸುಣ್ಣಶಿಲೆಯ ನಾನಾ ಗಾತ್ರದ ತೇಪೆಗಳಿವೆ. ರಾಂಧಂಬೋರ್ ಕ್ವಾಟ್ರ್ಸೈಟ್ ಪ್ರಸ್ತರಗಳ ಸಮವರ್ಗಗಳು: ಅರಾವಳಿ ಸ್ತೋಮದ ತುದಿಯಲ್ಲಿ ಜಯಪುರದ ಒರಿಸಾದ್ರಿ ಮತ್ತು ಮೇವಾರದ ಮಂಡಲ್‍ಘರ್ ಬಳಿ ಕಂಡುಬಂದಿವೆ. ಇವುಗಳಲ್ಲಿ ಸಮುದ್ರದ ಅಲೆಗಳ ಗುರುತುಗಳೂ ಪವಾಹ ಪ್ರಸ್ತರಗಳೂ ಇವೆ. ಜಯಪುರದ ಬಳಿ ಅಲ್ಪಸ್ವಲ್ಪವಾಗಿ ಕಂಡುಬಂದರೂ ಹೋರಾ ಸಮೀಪದಲ್ಲಿ 450-600 ಮೀ ಮಂದವಾಗಿದ್ದು ಬೆಟ್ಟಗಳಂತೆ ಕಂಡುಬರುತ್ತ್ತವೆ. ಅಂತರಪದರ ಸುಣ್ಣಶಿಲೆ : ಬಹುಮಟ್ಟಿಗೆ ದಕ್ಷಿಣ ಮೇವಾರ ಪ್ರಾಂತ್ಯದಲ್ಲಿವೆ. ಸಂಯೋಜನೆಯಲ್ಲಿ ಡಾಲೊಮೈಟ್ ಎನ್ನಬಹುದು. ಜೇಡುಶಿಲಾಪ್ರಸ್ತರಗಳೂಡನೆ ಬೆರೆತಿರು ವುದೂ ಉಂಟು. ಸಂಯೋಜನೆಯಲ್ಲಿ ಜೇಡಿನ ಅಂಶ ಸಹ ಕಂಡುಬಂದಿದೆ. ಕ್ಯಾಲ್ಕ್ ನೈಸ್‍ಗಳಂತೆ ಬಯೊಟೈಟ್ ಮತ್ತು ಆಂಫಿಬೋಲ್ ಖನಿಜಗಳಿಂದ ಕೂಡಿರುವುದೂ ಉಂಟು. ಹಲವುಬಾರಿ ಟ್ರಿಮೊಲೈಟ್, ಫಲ್ಡ್‍ಸ್ಟಾರ್ ಮತ್ತು ಮ್ಯಾಗ್ನಟೈಟ್ ಖನಿಜಗಳಿಂದ ಕೂಡಿದ ಪಟ್ಟಿಗಳನ್ನೂ ಕಾಣಬಹುದು. ಹಲವು ಬಾರಿ ಕಂದು ಬಣ್ಣದ ಸಿಲಿಕಾಂಶಯುಕ್ತ ಮತ್ತು ಕಬ್ಬಿಣಾಂಶಯುಕ್ತ ಫಿಲೈಟ್ ಪಟ್ಟೆಗಳನ್ನೂ ನೋಡಬಹುದು. ಉದಯಪುರದ ಸುತ್ತಮುತ್ತ ಮಸೂರಾಕಾರದ ಕಪ್ಪುಬಣ್ಣದ ಸುಣ್ಣ ಶಿಲಾಪ್ರಸ್ತರಗಳಿವೆ. ಹಲವು ಪ್ರದೇಶಗಳಲ್ಲಿ ಒರಟು ಬೆಕ್ಷಿಯ (ಪೆಂಟೆಕಲ್ಲು) ನಿಕ್ಷೇಪಗಳು ಸುಣ್ಣಶಿಲೆಯ ಮಧ್ಯೆ ಎದ್ದು ಕಾಣುತ್ತ್ತವೆ. ಅಂತಸ್ಸರಣಗಳು : ಶಿಲೆಯ ರಾಸಾಯನಿಕ ಸಂಯೋಜನೆಗನುಗುಣವಾಗಿ ಈ ಸ್ತೋಮದ ಅಂತಸ್ಸರಣಗಳನ್ನು ಅತಿಕ್ಷಾರೀಯ, ಕ್ಷಾರೀಯ ಮತ್ತು ಆಮ್ಲೀಯವೆಂದು ವಿಭಜಿಸಬಹುದು. ಅತಿಕ್ಷಾರೀಯ ಅಂತಸ್ಸರಣಗಳು ಮೇವಾರ, ದುಂಗರ್‍ಪುರ ಮತ್ತು ಇದರ್ ಪ್ರಾಂತ್ಯಗಳಲ್ಲಿವೆ. ಮೊದಲಿಗೆ ಪೆರಿಡೊಟೈಟ್ ಅಥವಾ ಪೈರಾಕ್ಸಿನೈ ಟ್‍ಗಳಂತೆ ಇದ್ದವೆಂದು ಹೇಳಬಹುದು. ಕ್ರಮೇಣ ಭೂಮಿಯ ಬದಲಾವಣೆಗೊಳಗಾಗಿ ಪ್ರಸಕ್ತ ಟಾಲ್ಕ್, ಸರ್ಪೆಂಟೀನ್, ಕೋರೈಟ್ ಪದರುಶಿಲೆಗಳಂತೆ ಕಂಡುಬರುತ್ತವೆ. ಇವು ಬಣ್ಣದಲ್ಲಿ ಹಸುರು ಹಲವು ವೇಳೆ ಟೈಟನೈಟ್, ಗಾರ್ನೆಟ್, ಕೋಮೈಟ್ ಆಂಫಿಬೋಲ್ ಫ್ಲಾಗೋಪೈಟ್, ಕ್ಯಾಲ್ಸೈಟ್ ಇತ್ಯಾದಿ ಖನಿಜಗಳನ್ನು ಇವುಗಳಲ್ಲಿ ಗುರುತಿಸಬಹುದು. ಇವು ಹುಗಿದ ಕಡೆ ಫಿಲೈಟ್‍ಗಳು ಅಭ್ರಕಪದರು ಶಿಲೆಗಳಾಗಿರೂಪಾಂತರ ಹೊಂದಿವೆ. ಈ ಕಾರಣಕ್ಕಾಗಿಯೇ ಬಿಳಿಯ ಕ್ವಾರ್ಟ್ಸೈಟ್‍ಗಳು ಬೂದು ಬಣ್ಣವನ್ನು ತಳೆದಿವೆ. ಕ್ಷಾರೀಯ ಅಂತಸ್ಸರಗಳು ಮೊದಲಿಗೆ ಡಾಲರೈಟ್ ಮತ್ತು ಆಂಫಿಬೋಲೈಟ್‍ಗಳಂತಿದ್ದು ಪ್ರಸಕ್ತ ಎಪಿಡಿಯೊರೈಟ್ ಮತ್ತು ಹಾರ್ನ್‍ಬೆಂಡ್ ಪದರುಶಿಲೆಗಳಾಗಿ ಮಾರ್ಪಟ್ಟಿವೆ. ಡೈಕ್ ಮತ್ತು ಸಿಲ್‍ಗಳಂತೆ ಇವನ್ನು ಸ್ತೋಮದ ನಾನಾ ಭಾಗಗಳಲ್ಲಿ ಸುಲಭವಾಗಿ ಗುರುತಿಸಬಹುದು. ಆಮ್ಲೀಯ ಅಂತಸ್ಸರಣಗಳು ಬಹುಮಟ್ಟಿಗೆ ಕ್ವಾಟ್ರ್ಸ್ ಸಿರಗಳೋಪಾದಿಯಲ್ಲಿ ಅರಾವಳಿ ಸ್ತೋಮದ ಫಿಲೈಟ್‍ಗಳ ನಡುವೆ ಕಂಡುಬಂದಿವೆ. ಅಲ್ಲದೇ ಪೆಗ್ಮಟೈಟ್ ಮತ್ತು ಆಪ್ಲೈಟ್ ಸಿರಗಳನ್ನೂ ಕಾಣಬಹುದು. ಇವು ನೈಸ್ ಮತ್ತು ಪದರುಶಿಲೆಗಳನ್ನು ಅಡ್ಡಹಾಯುವುದೂ ಉಂಟು. ಹಲವು ಬಾರಿ ಅವುಗಳೂಡನೆ ಬೆರೆತು ಮಿಶ್ರ ಶಿಲೆಗಳಿಗೂ ಕಾರಣವಾಗಿವೆ. ಖನಿಜನಿಕ್ಷೇಪಗಳು : ಅರಾವಳಿ ಶಿಲಾಸ್ತೋಮದಲ್ಲಿ ಇವಕ್ಕೆ ಕೊರತೆಯಿಲ್ಲ. ಸೀಸ ಮತ್ತು ಸತುವಿನ ಸಿರಗಳು, ಶಿಲಾಸೀಳು, ಬಿರುಕು ಮತ್ತು ಸ್ತರಭಂಗಗಳ ಜಾಡಿನಲ್ಲಿ ಹರಡಿವೆ. ಜೈಪುರ ಮತ್ತು ಮೇವಾರ್ ದಲ್ಲಿನ ಡಾಲೊಮೈಟ್, ಫಿಲೈಟ್ ಮತ್ತು ಕ್ವಾರ್ಟ್ಸೈಟ್ ಶಿಲಾಪ್ರಸ್ತರಗಳು ಈ ಖನಿಜಗಳಿಗೆ ತವರು. ಭಾರತದ ಏಕೈಕ ಸೀಸ ಮತ್ತು ಸತುವಿನ ಗಣಿ ಎನಿಸಿದ ಚಾವರ್ ಗಣಿ ಉದಯಪುರದ ಬಳಿ ಇದೆ. ಈ ಲೋಹ ಖನಿಜಗಳಲ್ಲದೆ ಅರಾವಳಿ ಸ್ತೋಮದಲ್ಲಿ ಉತ್ತಮ ದರ್ಜೆಯ ಸುಣ್ಣಶಿಲೆ ಮತ್ತು ಹಾಸುಗಲ್ಲುಗಳೂ ದೊರೆಯುತ್ತವೆ. ಕಟ್ಟಡದ ಕೆಲಸಗಳಿಗೆ ಇವು ಹೆಚ್ಚು ಉಪಯುಕ್ತವಾಗಿವೆ. ಬುಂಡಿ ಬಳಿಯ ಉಮ್ರೊರ್ ಸುತ್ತಲಿನ ಸುಣ್ಣಶಿಲೆಯೂ ಜೈಪುರದ ಬಳಿಯ ರಘುನಾಥ್ ಘರ್ ನ ಹಾಸುಗಲ್ಲುಗಳೂ ಬಹು ಪ್ರಸಿದ್ಧವಾದುವು.
ಛಾಯಾಂಕಣ
[ಬದಲಾಯಿಸಿ]<gallery> File:Aravali range inside Ranthambhore, Rajasthan.jpg|The Aravalli Range inside Ranthambhore National Park, in Rajasthan. File:Ranthambore National Park.JPG|Ranthambore National Park, in Rajasthan. File:Arbuda Mountains.JPG|The Aravalli Range, seen from the range's highest point at Guru Shikhar, in Rajasthan. Image:Aravalli Hills.jpg|Aravalli Hill </gallery
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Aravali Range Homepage India Environment Portal.
- http://www.savearavali.com Archived 2016-05-01 ವೇಬ್ಯಾಕ್ ಮೆಷಿನ್ ನಲ್ಲಿ.
- http://www.rajirrigation.gov.in/1rainfall.htm Archived 2006-02-14 ವೇಬ್ಯಾಕ್ ಮೆಷಿನ್ ನಲ್ಲಿ.