ಉದಯಪುರ

ವಿಕಿಪೀಡಿಯ ಇಂದ
Jump to navigation Jump to search
Udaipur
उदयपुर
Venice of the east
Metropolitan City
City palace, Udaipur
City palace, Udaipur
Nickname(s): White City and The City of Lakes
Country  India
State Rajasthan
District Udaipur district
Area
 • Total ೬೪
Elevation ೬೦೦
Population (2011)<[೧]
 • Total ೫೯೮
 • Rank 6th
 • Density ೨೪೨
Time zone IST (UTC+5:30)
PIN 313001/24
Telephone code 0294
Vehicle registration RJ-27
Nearest city Jodhpur, Kota, Jaipur, Indore,rajsamand
Website www.udaipur.nic.in

ಉದಯಪುರ ಭಾರತದ ರಾಜಾಸ್ತಾನ ರಾಜ್ಯದ ಒಂದು ನಗರ. ಜಿಲ್ಲೆಯ ಮುಖ್ಯ ಸ್ಥಳ. ಜನಸಂಖ್ಯೆ 389317 (2001) ಉ. ಅ. 23º 46'-25 `56' ಹಾಗೂ ಪೊ. ರೇ. 72º 50'-75º 38' ನಡುವೆ, ಜಯಪುರದ ನೈರುತ್ಯಕ್ಕೆ 340 ಕಿಮೀ. ದೂರದಲ್ಲಿ, ಆರಾವಳಿ ಶ್ರೇಣಿಯ ಬೆಟ್ಟವೊಂದರ ಕೋಡುಗಲ್ಲಿನ ಮೇಲೆ, ಸಮುದ್ರ ಮಟ್ಟದಿಂದ 750 ಮೀ. (2,469') ಎತ್ತರದಲ್ಲಿದೆ. ಸು. (1570)ರಲ್ಲಿ ಈ ನಗರಸ್ಥಾಪನೆ ಮಾಡಿದ ಮಹಾರಾಣಾ ಉದಯಸಿಂಹನಿಂದ ಇದಕ್ಕೆ ಈ ಹೆಸರು ಬಂದಿದೆ. ಪಿಚೋಡಾ ಸರೋವರದ ಪೂರ್ವ ದಂಡೆಯ ಮೇಲೆ ಆತ ಈ ನಗರವನ್ನು ಸ್ಥಾಪಿಸಿ ಸುತ್ತ ಭದ್ರವಾದ 30 ಮೀ. (100) ಎತ್ತರದ ಕೋಟೆ ಕಟ್ಟಿಸಿದ. ಇಲ್ಲಿರುವ ಅರಮನೆ ಇಡೀ ರಾಜಾಸ್ತಾನದಲ್ಲೇ ಅತ್ಯಂತ ದೊಡ್ಡದು. 1571ರಲ್ಲಿ ಕಟ್ಟಿಸಲಾದ ಈ ಅರಮನೆಯನ್ನು ಮುಂದೆ ಪದೇ ಪದೇ ವಿಸ್ತರಿಸಲಾಗಿದ್ದು ಇದು ಹಲವುಬಗೆಯ ಶಿಲ್ಪಶೈಲಿಗಳನ್ನೊಳಗೊಂಡಿದೆ. ಪಿಚೋಡಾ ಸರೋವರದಲ್ಲಿನ ಎರಡು ದ್ವೀಪಗಳೂ ಅವುಗಳ ಮೇಲೆ ಅಮೃತಶಿಲೆಯಿಂದ ನಿರ್ಮಿತವಾದ ಜಗಮಂದಿರ ಮತ್ತು ಜಗನಿವಾಸ ಅರಮನೆಗಳೂ ಇತಿಹಾಸ ಪ್ರಸಿದ್ಧ. ಮೊಗಲ್ ಚಕ್ರವರ್ತಿ ಜಹಾಂಗೀರನ ಮಗ ಷಾ ಜಹಾನ್ ತಂದೆಯ ವಿರುದ್ಧ ಬಂಡಾಯವೆದ್ದಾಗ ಈ ದ್ವೀಪಗಳಲ್ಲೊಂದರಲ್ಲಿ ವಾಸಿಸುತ್ತಿದ್ದನೆಂದು ಹೇಳಲಾಗಿದೆ. ಉದಯಪುರದ ಸುತ್ತಮುತ್ತ ಪಿಚೋಡಾದಂತೆ ಅನೇಕ ಕೃತಕ ಸರೋವರಗಳಿವೆ. ಕಾಡಿನ ನಡುವೆ ಕುಳಿತಂತಿರುವ ಈ ನಗರದಲ್ಲಿ ಉಪವನಗಳಿಗೂ ಕೊರತೆಯಿಲ್ಲ. ಭೂದೃಶ್ಯ ಉಪವನಯೋಜನೆಯ (ಲ್ಯಾಂಡ್ಸ್ಕೇಪ್ ಗಾರ್ಡನಿಂಗ್) ಭಾರತೀಯ ಪದ್ಧತಿಗೆ ಇಲ್ಲಿರುವ ಉದ್ಯಾನವೊಂದು ಉತ್ತಮ ಉದಾಹರಣೆ. ಹಿಂದಿನ ಶತಮಾನಗಳ ಸ್ತಬ್ಧಚಿತ್ರಗಳನ್ನು ಕಾಣಬಯಸಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ಇಲ್ಲಿ ಇನ್ನೂ ಅನೇಕ ಬಗೆಯ ಆಕರ್ಷಣೆಗಳುಂಟು. ಉದಯಪುರದ ಪೂರ್ವಕ್ಕೆ ಎರಡು ಮೈಲಿ ದೂರದಲ್ಲಿ ಪುರಾತನ ನಗರವೊಂದರ ಪಳೆಯುಳಿಕೆಗಳಿವೆ. ನಗರದ ಸ್ಥಾಪಕನೇ ನಿರ್ಮಿಸಿದನೆಂದು ಹೇಳಲಾದ ಉದಯ ಸರೋವರ ಇರುವುದು 10 ಕಿಮೀ. ದೂರದಲ್ಲಿ. ನಗರದ ಉತ್ತರಕ್ಕೆ 64 ಕಿಮೀ. ದೂರದಲ್ಲಿರುವ ರಾಜ್ಸಮಂದ್ ಸರೋವರ ಇನ್ನೊಂದು ಸುಂದರ ತಾಣ. ಇದರ ಗಾರೆಯ ಏರಿಗೆ ಅಮೃತಶಿಲೆಯ ನೆಲಗಟ್ಟು; ನೀರಿನ ಸಮಾಗಮ ಬಯಸಿ ಸಾಗರದಂತಿರುವ ಹಾಲ್ಗಲ್ಲಿನ ಮೆಟ್ಟಿಲು; ಹೊಳೆಯುವ ಬಿಳಿಶಿಲೆಯಲ್ಲಿ ಕೆತ್ತಿ ನಿಲ್ಲಿಸಿದ ಚಿತ್ತಾರದ ಮೂರು ಮಂಟಪಗಳು. ಈ ಸರೋವರದ ಪಕ್ಕಕ್ಕೆ ಹೊದಿಸಿರುವ ಕಲ್ಲಿನ ಮೇಲೆ ಸಂಸ್ಕೃತ ಶಾಸನವೊಂದಿದೆ (1675). ಇದು ಭಾರತದಲ್ಲೇ ಅತ್ಯಂತ ದೊಡ್ಡದೆಂದು ಹೇಳಲಾಗಿದೆ. ಇಪ್ಪತೈದು ಚಪ್ಪಡಿಗಳ ಮೇಲೆ ಹರಿದಿರುವ ಈ ಶಾಸನಕ್ಕೆ ಮೇವಾಡದ ಇತಿಹಾಸವೇ ವಸ್ತು.

ಛಾಯಾಂಕಣ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಉದಯಪುರ&oldid=715527" ಇಂದ ಪಡೆಯಲ್ಪಟ್ಟಿದೆ