ಭಾರತದಲ್ಲಿ ಬಡತನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದಲ್ಲಿ ಬಡತನ ಬಹುವ್ಯಾಪಕವಾಗಿದ್ದು, ವಿಶ್ವದ ಒಟ್ಟು ಬಡವರ ಸಂಖ್ಯೆಯಲ್ಲಿ ಮ‌ೂರನೇ ಒಂದು ಭಾಗ ರಾಷ್ಟ್ರದಲ್ಲಿದ್ದಾರೆಂದು ಅಂದಾಜು ಮಾಡಲಾಗಿದೆ. ಭಾರತದ ಯೋಜನಾ ಆಯೋಗ ಬಳಸಿದ ಮಾನದಂಡದ ಅನ್ವಯ 2004-2005ರಲ್ಲಿ ಜನಸಂಖ್ಯೆಯ 27.5% ಬಡತನ ರೇಖೆ ಕೆಳಗೆ(ಕಡುಬಡತನ)ವಾಸಿಸಿದ್ದು, 1977-1978ರಲ್ಲಿ 51.3%ಗಿಂತ ಮತ್ತು 1993-1994ರಲ್ಲಿ 36%ಗಿಂತ ಕೆಳಮುಖದಲ್ಲಿದೆ.[೧] UN ಅಭಿವೃದ್ಧಿ ಕಾರ್ಯಕ್ರಮ, ಮಾನವ ಅಭಿವೃದ್ಧಿ ಸೂಚ್ಯಂಕದ(HDI)ಪ್ರಕಾರ,ಭಾರತದ ಜನಸಂಖ್ಯೆಯಲ್ಲಿ 75.6% ದಿನಕ್ಕೆ $2ಗಿಂತ ಕಡಿಮೆ ಆದಾಯದಲ್ಲಿ ಜೀವಿಸುತ್ತಿದ್ದಾರೆ. ಪಾಕಿಸ್ತಾನದ 22.6%ಗೆ ಹೋಲಿಸಿದರೆ ಸುಮಾರು 41.6% ದಿನಕ್ಕೆ $1ಗಿಂತ ಕಡಿಮೆ ಆದಾಯದಲ್ಲಿ ಜೀವಿಸುತ್ತಿದ್ದಾರೆ.[೨] ವಿಶ್ವಬ್ಯಾಂಕ್ ಅಂದಾಜು 2005ರ ಪ್ರಕಾರ, ಭಾರತದ 42% ಜನರು ಅಂತಾರಾಷ್ಟ್ರೀಯ ಬಡತನ ರೇಖೆಯಾದ ದಿನಕ್ಕೆ $1.25(PPP, ಅಂದಾಜು ನಗರಪ್ರದೇಶಗಳಲ್ಲಿ ದಿನಕ್ಕೆ 21.6 ರೂಪಾಯಿಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 14.3 ರೂಪಾಯಿಗಳು)ಗಿಂತ ಕೆಳಗಿದ್ದಾರೆ; 1980ರಲ್ಲಿ 60% ಅಂಕಿಅಂಶಕ್ಕಿಂತ ಕೆಳಗಿಳಿದಿದೆ.[೩]

ಭಾರತದಲ್ಲಿ ಅಧಿಕ ಮಟ್ಟದ ಬಡತನಕ್ಕೆ ಬ್ರಿಟಿಷ್ ಆಡಳಿತದಡಿಯ ಇತಿಹಾಸ, ಅಪಾರ ಜನಸಂಖ್ಯೆ ಮತ್ತು ಕಡಿಮೆ ಸಾಕ್ಷರತೆ ಕಾರಣಗಳನ್ನು ನೀಡಲಾಗಿದೆ. ಭಾರತದ ಜಾತಿ ಪದ್ಧತಿ ಮತ್ತು ಭಾರತದ ಸಮಾಜದಲ್ಲಿ ಮಹಿಳೆಯರ ಪಾತ್ರ ಸೇರಿದಂತೆ ಭಾರತದ ಸಾಮಾಜಿಕ ಸ್ವರೂಪ ಕೂಡ ಮುಖ್ಯವಾಗಿದೆ. ಕೃಷಿ ಮೇಲೆ ಹೆಚ್ಚು ಅವಲಂಬಿತವಾದ್ದರಿಂದ ಮತ್ತು ಭಾರತದ ಸ್ವಾತಂತ್ರ್ಯದ ನಂತರ ಆರ್ಥಿಕ ನೀತಿಗಳನ್ನು ಅಳವಡಿಸಲಾಗಿದ್ದರಿಂದ ಹಿಂದಿನ ಆರ್ಥಿಕ ಪ್ರಗತಿ ಕುಂಠಿತಗೊಂಡಿತು. ಭಾರತ ಸರ್ಕಾರ ಮತ್ತು ಸರ್ಕಾರೇತರ ಸಂಘಟನೆಗಳು ಬಡತನ ನಿವಾರಣೆಗೆ 1950ರ ದಶಕದಿಂದೀಚೆಗೆ ಹಲವಾರು ಕಾರ್ಯಕ್ರಮಗಳನ್ನು ಆರಂಭಿಸಿತು. ಆಹಾರ ಮತ್ತಿತರ ಜೀವನಾವಶ್ಯಕ ವಸ್ತುಗಳಿಗೆ ಸಹಾಯಧನ,ಸಾಲಗಳಿಗೆ ಹೆಚ್ಚು ಅವಕಾಶ ಕಲ್ಪಿಸುವುದು, ಕೃಷಿ ತಂತ್ರಜ್ಞಾನಗಳು ಮತ್ತು ದರ ಬೆಂಬಲಗಳ ಸುಧಾರಣೆ, ಶಿಕ್ಷಣ ಮತ್ತು ಕುಟುಂಬ ಯೋಜನೆಗೆ ಉತ್ತೇಜನ ಇವುಗಳಲ್ಲಿ ಸೇರಿವೆ. ಈ ಕ್ರಮಗಳಿಂದ ಬರಗಾಲಗಳ ನಿವಾರಣೆಗೆ ನೆರವಾಯಿತು,ಪೂರ್ಣ ಬಡತನ ಮಟ್ಟಗಳು ಅರ್ಧಕ್ಕಿಂತಲೂ ಹೆಚ್ಚು ಕಡಿತಗೊಂಡಿತು ಮತ್ತು ಅನಕ್ಷರತೆ ಮತ್ತು ಅಪೌಷ್ಠಿಕತೆ ಇಳಿಮುಖಗೊಂಡಿತು.[೪] ಆದಾಗ್ಯೂ,1990ರ ದಶಕದ ಮಧ್ಯಾವಧಿಯಿಂದ 30 ದಶಲಕ್ಷ ಜನರು ಹಸಿವಿನಿಂದ ನರಳುವವರ ಸಾಲಿಗೆ ಸೇರ್ಪಡೆಯಾದರು ಮತ್ತು 46% ಮಕ್ಕಳು ಕಡಿಮೆತೂಕವುಳ್ಳವರಾಗಿದ್ದರು.[೫]

ಬಡತನ ಅಂದಾಜುಗಳು[ಬದಲಾಯಿಸಿ]

ಸುಮಾರು 456 ದಶಲಕ್ಷ ಭಾರತೀಯರು(ಒಟ್ಟು ಭಾರತದ ಜನಸಂಖ್ಯೆಯಲ್ಲಿ 42%)ಈಗ ದಿನಕ್ಕೆ $1.25(PPP) ಆದಾಯದೊಂದಿಗೆ ಜಾಗತಿಕ ಬಡತನ ರೇಖೆಯಡಿ ಜೀವಿಸುತ್ತಿದ್ದಾರೆಂದು ವಿಶ್ವಬ್ಯಾಂಕ್ ಅಂದಾಜು ಮಾಡಿದೆ. ಜಗತ್ತಿನ ಬಡವರಲ್ಲಿ ಮ‌ೂರನೇ ಒಂದು ಭಾಗ ಈಗ ಭಾರತದಲ್ಲಿ ನೆಲೆಸಿದ್ದಾರೆಂದು ಇದರ ಅರ್ಥ. ಆದಾಗ್ಯೂ,1981ರಲ್ಲಿ ಶೇಕಡ 60ರಿಂದ 2005ರಲ್ಲಿ ಶೇಕಡ 42ಕ್ಕೆ ಬಡತನದ ಗಮನಾರ್ಹ ಕುಸಿತವನ್ನು ಕೂಡ ಇದು ಬಿಂಬಿಸುತ್ತದೆ. ಆಗಿನಿಂದ ರೂಪಾಯಿ ಮೌಲ್ಯ ಕುಸಿದಿದ್ದರೂ, ಪ್ರತಿ ತಿಂಗಳಿಗೆ 538/356 ರೂಪಾಯಿಗಳ ಅಧಿಕೃತ ಮಟ್ಟ ಅದೇ ರೀತಿ ಉಳಿದಿದೆ.[೬][೭] ಭಾರತದಲ್ಲಿ ಆದಾಯದ ಅಸಮಾನತೆ(ಗಿನಿ ಗುಣಾಂಕ:1999-2000 ವರ್ಷದಲ್ಲಿ 32.5)ವರ್ಧಿಸುತ್ತಿದೆ.[೮] ಇನ್ನೊಂದು ಕಡೆ,ಭಾರತದ ಯೋಜನಾ ಆಯೋಗವು ತನ್ನದೇ ಮಾನದಂಡ ಬಳಸುತ್ತಿದ್ದು, 2004-2005ರಲ್ಲಿ ಭಾರತದ ಜನಸಂಖ್ಯೆಯ 27.5% ಬಡತನ ರೇಖೆಯ(ಕಡುಬಡವರು)ಕೆಳಗೆ ವಾಸಿಸಿದ್ದರೆಂದು ಅಂದಾಜು ಮಾಡಿದೆ.ಇದು 1977-1978ರಲ್ಲಿ 51.3% ಮತ್ತು 1993-1994ರಲ್ಲಿ 36%ಕ್ಕಿಂತ ಕಡಿಮೆಯಾಗಿದೆ.[೧] ರಾಷ್ಟ್ರೀಯ ಮಾದರಿ ಸಮೀಕ್ಷೆ((NSS)ಯ 61ನೇ ಸುತ್ತು ಇದಕ್ಕೆ ಮ‌ೂಲವಾಗಿದೆ ಮತ್ತು ಅದು ಬಳಸಿದ ಮಾನದಂಡ ಮಾಸಿಕ ತಲಾ ಉಪಭೋಗದ ವೆಚ್ಚ ಕೆಳಗಿಂತಿದೆ 356.35 ರೂ. ಗ್ರಾಮೀಣ ಪ್ರದೇಶಗಳಿಗೆ ನಗರ ಪ್ರದೇಶಗಳಿಗೆ 538.60.ಗ್ರಾಮೀಣ ಪ್ರದೇಶಗಳಲ್ಲಿ 75% ಬಡವರು ವಾಸವಿದ್ದಾರೆ.ಅವರಲ್ಲಿ ಬಹುತೇಕ ಮಂದಿ ದಿನಗೂಲಿ ನೌಕರರು, ಸ್ವಯಂ ಉದ್ಯೋಗಿ ಗೃಹವಾಸಿಗಳು ಮತ್ತು ಭೂರಹಿತ ಕಾರ್ಮಿಕರು.ಕಳೆದ ಎರಡು ದಶಕಗಳಲ್ಲಿ ಭಾರತದ ಅರ್ಥವ್ಯವಸ್ಥೆ ಸ್ಥಿರವಾಗಿ ಬೆಳವಣಿಗೆ ಸಾಧಿಸಿದ್ದರೂ,ವಿವಿಧ ಸಾಮಾಜಿಕ ಸಮ‌ೂಹಗಳು, ಆರ್ಥಿಕ ಸಮ‌ೂಹಗಳು,ಬೌಗೋಳಿಕ ಪ್ರದೇಶಗಳು ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಹೋಲಿಸಿದರೆ ಅದರ ಬೆಳವಣಿಗೆ ಒಂದೇ ಮಟ್ಟದಲ್ಲಿಲ್ಲ.[೪] 1999 ಮತ್ತು 2008ರ ನಡುವೆ [[ಗುಜರಾತ್(8.8%),ಹರ್ಯಾಣ(8.7%)ಅಥವಾ ದೆಹಲಿ(7.4%)ವಾರ್ಷಿಕ ಬೆಳವಣಿಗೆ ದರಗಳು ಬಿಹಾರ(5.1%),ಉತ್ತರಪ್ರದೇಶ(4.4%)ಅಥವಾ ಮಧ್ಯಪ್ರದೇಶ(3.5%)ಕ್ಕಿಂತ ಹೆಚ್ಚಾಗಿವೆ.|ಗುಜರಾತ್(8.8%),ಹರ್ಯಾಣ(8.7%)ಅಥವಾ ದೆಹಲಿ(7.4%)ವಾರ್ಷಿಕ ಬೆಳವಣಿಗೆ ದರಗಳು ಬಿಹಾರ(5.1%),ಉತ್ತರಪ್ರದೇಶ(4.4%)ಅಥವಾ ಮಧ್ಯಪ್ರದೇಶ(3.5%)ಕ್ಕಿಂತ ಹೆಚ್ಚಾಗಿವೆ.[೯]]] ಬಡತನದ ಪ್ರಮಾಣ ಗ್ರಾಮೀಣ ಒಡಿಶಾ(43%)ಗ್ರಾಮೀಣ ಬಿಹಾರ(41%)ವಿಶ್ವದ ಅತ್ಯಂತ ಬಡತನದ ಪ್ರದೇಶಗಳಲ್ಲಿ ಸೇರಿವೆ.[೧೦] ಭಾರತದಲ್ಲಿ ಮ‌ೂರು ವರ್ಷಕ್ಕಿಂತ ಕೆಳಗಿನ ವಯೋಮಾನದ ಮಕ್ಕಳ ಅಪೌಷ್ಠಿಕತೆ (2007ನೇ ವರ್ಷದಲ್ಲಿ 46%)ವಿಶ್ವದಲ್ಲಿ ಬೇರಾವುದೇ ರಾಷ್ಟ್ರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದೆ.[೪][೧೧] ಗಮನಾರ್ಹ ಆರ್ಥಿಕ ಪ್ರಗತಿ ನಡುವೆಯ‌ೂ, ರಾಷ್ಟ್ರದ ಜನಸಂಖ್ಯೆಯಲ್ಲಿ 1/4 ಭಾಗ ಸರ್ಕಾರಿ ನಮೂದಿತ ಬಡತನ ರೇಖೆಯಾದ ದಿನಕ್ಕೆ 12 ರೂಪಾಯಿ (ಅಂದಾಜು USD $0.25)ಗಿಂತ ಕಡಿಮೆ ಸಂಪಾದನೆ ಮಾಡುತ್ತಿದೆ. ಅಧಿಕೃತ ಅಂಕಿಅಂಶಗಳು 2004-2005ರಲ್ಲಿ ರಾಷ್ಟ್ರೀಯ ಬಡತನ ರೇಖೆಗಿಂತ ಕೆಳಗೆ 27.5% [೧೨] ಭಾರತೀಯರು ವಾಸಿಸುತ್ತಿದ್ದಾರೆಂದು ಅಂದಾಜು ಮಾಡಿವೆ.[೧೩] ರಾಷ್ಟ್ರ ಸ್ವಾಮ್ಯದ ಅಸಂಘಟಿತ ವಲಯದ ಸಂಸ್ಥೆಗಳ ರಾಷ್ಟ್ರೀಯ ಆಯೋಗದ (NCEUS) 2007ರ ವರದಿಯಲ್ಲಿ 77% ಭಾರತೀಯರು ಅಥವಾ 836 ದಶಲಕ್ಷ ಜನರು ಪ್ರತಿ ದಿನಕ್ಕೆ 20ರೂಪಾಯಿಗಿಂತ ಕಡಿಮೆ ಆದಾಯದಲ್ಲಿ(ಅಂದಾಜು USD $0.50;$2 PPP))ಜೀವನ ಸಾಗಿಸುತ್ತಿದ್ದಾರೆ.[೧೪] 2001ನೇ ಜನಗಣತಿ ಅನ್ವಯ, ಭಾರತೀಯ ಗೃಹವಾಸಿಗಳಲ್ಲಿ 35.5% ಬ್ಯಾಂಕಿಂಗ್ ಸೇವೆ ಪಡೆದಿದ್ದಾರೆ, 35.1% ರೇಡಿಯೊ ಅಥವಾ ಟ್ರಾನ್ಸಿಸ್ಟರ್ ಹೊಂದಿದ್ದಾರೆ, 31.6% ದೂರದರ್ಶನ,9.1 ದೂರವಾಣಿ,43.7% ಬೈಸಿಕಲ್, 11.7% ಸ್ಕೂಟರ್,ಮೋಟರ್ ಸೈಕಲ್ ಅಥವಾ ಮೊಪೆಡ್ ಮತ್ತು 2.5% ಕಾರು,ಜೀಪ್ ಅಥವಾ ವ್ಯಾನ್ ಹೊಂದಿದ್ದಾರೆ. 34.5% ಗೃಹವಾಸಿಗಳು ಇದಾವುದೇ ಆಸ್ತಿಗಳನ್ನು ಹೊಂದಿಲ್ಲ.[೧೫] ಭಾರತೀಯ ದೂರಸಂಪರ್ಕ ಇಲಾಖೆಯ ಪ್ರಕಾರ, ದೂರದರ್ಶನ ಸಾಂದ್ರತೆಯು ಡಿಸೆಂಬರ್ 2008ಕ್ಕೆ 33.23% ಜನರನ್ನು ತಲುಪಿದ್ದು,40% ವಾರ್ಷಿಕ ಬೆಳವಣಿಗೆ ಸಾಧಿಸಿದೆ.[೧೬]

ಐತಿಹಾಸಿಕ ಪ್ರವೃತ್ತಿ[ಬದಲಾಯಿಸಿ]

ಬಡತನ ರೇಖೆಯ ಕೆಳಗಿರುವ(ಕಡುಬಡತನ)ಭಾರತದ ಜನಸಂಖ್ಯೆಯ ಪ್ರಮಾಣವು ಹಿಂದೆ ವ್ಯಾಪಕ ಏರಿಳಿತ ಕಂಡಿತು. ಆದರೆ ಒಟ್ಟಾರೆ ಪ್ರವತ್ತಿ ಕೆಳಮುಖದಲ್ಲಿತ್ತು. ಆದಾಗ್ಯೂ,ಆದಾಯದ ಬಡತನದಲ್ಲಿ ಹೆಚ್ಚುಕಡಿಮೆ ಮ‌ೂರು ಅವಧಿಗಳ ಪ್ರವೃತ್ತಿಗಳನ್ನು ಒಳಗೊಂಡಿದೆ. 1950ರಿಂದ ಮಧ್ಯಾವಧಿ-1970ರ ದಶಕ ಆದಾಯ ಬಡತನ ಇಳಿಮುಖವು ಯಾವುದೇ ಗುರುತಿಸಬಲ್ಲ ಪ್ರವೃತ್ತಿಯನ್ನು ತೋರಿಸಿಲ್ಲ. 1951ರಲ್ಲಿ ಭಾರತದ ಗ್ರಾಮೀಣ ಜನಸಂಖ್ಯೆಯಲ್ಲಿ 47% ಜನರು ಬಡತನ ರೇಖೆಯ ಕೆಳಗೆ(ಕಡುಬಡತನ)ಜೀವಿಸುತ್ತಿದ್ದರು. ಈ ಪ್ರಮಾಣವು 1954-55ರಲ್ಲಿ 64% ಏರಿಕೆಯಾಯಿತು; ಆದರೆ 1960-61ರಲ್ಲಿ 45%ಗೆ ಇಳಿಯಿತು ಆದರೆ 1977-78ರಲ್ಲಿ,ಪುನಃ 51%ಗೆ ಏರಿಕೆಯಾಯಿತು. ಮಧ್ಯಾವಧಿ-1970ರ ದಶಕದಿಂದ 1990 :ಆದಾಯ ಬಡತನವು ಮಧ್ಯಾವಧಿ-1970ರ ದಶಕ ಮತ್ತು 1980ರ ದಶಕದ ಕೊನೆಯ ನಡುವೆ ಗಮನಾರ್ಹ ಕುಸಿತ ಉಂಟಾಯಿತು. ಗ್ರಾಮೀಣ ಆದಾಯ ಬಡತನವು 51% ರಿಂದ 39%ಗೆ ಕುಸಿಯುವುದರೊಂದಿಗೆ, ಆದಾಯ ಬಡತನದ ಕುಸಿತವು 1977-78 ಮತ್ತು 1986-87ರ ನಡುವೆ ಹೆಚ್ಚು ಸುಸ್ಪಷ್ಟವಾಗಿ ಕಂಡುಬಂತು. ಇದು 1989-90ರಲ್ಲಿ 34%ಗೆ ಮತ್ತಷ್ಟು ಇಳಿಮುಖವಾಯಿತು. ನಗರ ಆದಾಯ ಬಡತನವು 1977-78ರಲ್ಲಿ 41%ನಿಂದ 1986-87ರಲ್ಲಿ 34%ಗೆ ಕುಸಿಯಿತು. 1989-90ರಲ್ಲಿ 33%ಗೆ ಮತ್ತಷ್ಟು ಕುಸಿಯಿತು.1991ರ ನಂತರ ಆರ್ಥಿಕ ಸುಧಾರಣೆ ಪೂರ್ವ ಅವಧಿಯು ಹಿನ್ನಡೆ ಮತ್ತು ಪ್ರಗತಿ ಎರಡಕ್ಕೂ ನಿದರ್ಶನವಾಯಿತು. ಗ್ರಾಮೀಣ ಆದಾಯ ಬಡತನವು 1989-90ರಲ್ಲಿ 34%ನಿಂದ 1992ರಲ್ಲಿ 43%ಗೆ ಏರಿಕೆಯಾಯಿತು ಮತ್ತು 1993-94ರಲ್ಲಿ 37%ಗೆ ಕುಸಿಯಿತು. ನಗರ ಆದಾಯದ ಬಡತನವು 1989-90ರಲ್ಲಿ 33.4%ರಿಂದ 1992ರಲ್ಲಿ 33.7%ಕ್ಕೆ ಏರಿಕೆಯಾಯಿತು ಮತ್ತು 1993-94ರಲ್ಲಿ 32%ಗೆ ಕುಸಿತವುಂಟಾಗಿದೆ.1994-95ನಿಂದ 1998ಕ್ಕೆ NSS ಅಂಕಿಅಂಶವು ಕಡಿಮೆ ಬಡತನ ಇಳಿಮುಖ ಅಥವಾ ಯಾವುದೇ ಬಡತನ ಇಳಿಮುಖ ತೋರಿಸಿಲ್ಲ. ಆದ್ದರಿಂದ 1999-2000ವರೆಗೆ ನಿದರ್ಶನದಲ್ಲಿ ಬಡತನವು ವಿಶೇಷವಾಗಿ ಗ್ರಾಮೀಣ ಬಡತನವು ಸುಧಾರಣೆ-ನಂತರ ಕಾಲಾವಧಿಯಲ್ಲಿ ವರ್ಧಿಸಿದೆ. ಆದಾಗ್ಯೂ,1999-2000ರ ಬಡತನದ ಅಧಿಕೃತ ಅಂದಾಜು 26.1%,ಗಮನಾರ್ಹ ಕುಸಿತವಾಗಿದ್ದು, ಹೆಚ್ಚು ಚರ್ಚೆಗೆ ಮತ್ತು ವಿಶ್ಲೇಷಣೆಗೆ ಆಸ್ಪದ ಕಲ್ಪಿಸಿದೆ. ಏಕೆಂದರೆ ಈ ವರ್ಷ NSS ಹೊಸ ಸಮೀಕ್ಷೆ ವಿಧಾನವನ್ನು ಅಳವಡಿಸಿದ್ದರಿಂದ ಅಧಿಕ ಅಂದಾಜಿನ ಸರಾಸರಿ ಉಪಭೋಗ ಮತ್ತು ಅಂದಾಜು ವಿತರಣೆ ಎರಡೂ ಹಿಂದಿನ NSS ಸಮೀಕ್ಷೆಗಳಿಗಿಂತ ಹೆಚ್ಚು ಸಮಾನವಾಗಿತ್ತು. ಇತ್ತೀಚಿನ 2004-05ರ NSS ಸಮೀಕ್ಷೆಯು 1999-2000ಕ್ಕಿಂತ ಮುಂಚಿತವಾಗಿ ನಡೆದ ಸಮೀಕ್ಷೆಗಳಿಗೆ ಪೂರ್ಣ ಹೋಲಿಕೆ ಮಾಡಬಹುದಾಗಿದೆ. ಏಕರೂಪದ ಸಂಸ್ಮರಣೆ ಅವಧಿಯ ಉಪಭೋಗವನ್ನು ಬಳಸಿಕೊಂಡು ಇದು ಗ್ರಾಮೀಣ ಪ್ರದೇಶಗಳಲ್ಲಿ 28.3% ಬಡತನ ತೋರಿಸುತ್ತದೆ, ನಗರಪ್ರದೇಶಗಳಲ್ಲಿ 25.7% ಮತ್ತು ರಾಷ್ಟ್ರದ ಒಟ್ಟಾರೆ ಬಡತನವನ್ನು 27.5% ತೋರಿಸುತ್ತದೆ. ಮಿಶ್ರಿತ ಸಂಸ್ಮರಣೆ ಅವಧಿಯ ಉಪಭೋಗ ವಿಧಾನವನ್ನು ಬಳಸಿಕೊಂಡು ಸಂಬಂಧಿತ ಅಂಕಿಅಂಶಗಳು ಕ್ರಮವಾಗಿ 21.8%, 21.7% ಮತ್ತು 21.8%ರಷ್ಟಿತ್ತು. ಹೀಗೆ, ಬಡತನವು 1998ರ ನಂತರ ಇಳಿಮುಖವಾಯಿತು. ಆದರೂ,1989-90 ಮತ್ತು 1999-00 ನಡುವೆ ಯಾವುದೇ ಗಮನಾರ್ಹ ಬಡತನ ಇಳಿಮುಖವಾಗಿದೆಯೇ ಎನ್ನುವುದು ಇನ್ನೂ ಚರ್ಚಾಸ್ಪದ ವಿಷಯವಾಗಿದೆ. ಇತ್ತೀಚಿನ NSS ಸಮೀಕ್ಷೆಯನ್ನು ಸಾಮಾನ್ಯ ಅಂದಾಜನ್ನು ನೀಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು,1999-2000ದ ಸಮೀಕ್ಷೆಗೆ ಹೋಲಿಸಿದರೆ ಪೂರ್ಣ ಅಂದಾಜು ನೀಡುವುದಿಲ್ಲ. ಇದರಿಂದ 1993-94ರಿಂದ 2004-05ರ ಅವಧಿಯಲ್ಲಿ ಗ್ರಾಮೀಣ ಬಡತನದಲ್ಲಿ ಬಹುತೇಕ ಕುಸಿತವು ವಾಸ್ತವವಾಗಿ 1999-2000 ನಂತರ ಸಂಭವಿಸಿದೆ.

ಸಂಕ್ಷೇಪವಾಗಿ,NSS ದಾಖಲಿಸಿದ ಅಧಿಕೃತ ಬಡತನ ದರಗಳು:

ವರ್ಷ ಸುತ್ತು ಏಕರೂಪದ ಬಡತನ ದರ(%) ಮಿಶ್ರಿತ(%) ಪ್ರತಿ ವರ್ಷಕ್ಕೆ ಬಡತನ ಇಳಿಮುಖ(%) ಮಿಶ್ರಿತ ಇಳಿಮುಖ(%)
1977-78 32 51.3
1983 38 44.5 1.3
1987-88 43 38.9 1.2
1993–94 50 36.0 0.5
1999-00 55 26.9
2004-05 61 27.5 21.8 0.8 1.0

ಭಾರತದಲ್ಲಿ ಬಡತನಕ್ಕೆ ಕಾರಣಗಳು[ಬದಲಾಯಿಸಿ]

ಜಾತಿ ಪದ್ಧತಿ[ಬದಲಾಯಿಸಿ]

ಅನುಪಾತರಹಿತ ದೊಡ್ಡ ಪ್ರಮಾಣದ ಬಡವರು ಕೆಳ ಜಾತಿಯ ಹಿಂದುಗಳು[೧೭]

S. M. ಮೈಕೇಲ್ ಪ್ರಕಾರ, ಬಡವರು ಮತ್ತು ನಿರುದ್ಯೋಗಿಗಳಲ್ಲಿ ದಲಿತರು ಬೃಹತ್ ಪ್ರಮಾಣದಲ್ಲಿದ್ದಾರೆ.[೧೮]

ಪ್ಯಾನ್-ಇಂಡಿಯ ಸಾಮಾಜಿಕ ರಚನೆಯ ಜಾತಿ ಪದ್ಧತಿಯು ಬಡ ಕೆಳ ವರ್ಗದ ಗುಂಪನ್ನು ಹೆಚ್ಚು ಸಂಪದ್ಭರಿತ ಉನ್ನತ ವರ್ಗದ ಗುಂಪು ಶೋಷಣೆ ಮಾಡುವ ಪದ್ಧತಿಯೆಂಬಂತೆ ಅನೇಕ ಮಂದಿ ಭಾವಿಸಿದ್ದಾರೆ. ಭಾರತದ ಅನೇಕ ಭಾಗಗಳಲ್ಲಿ,ನಿರ್ದಿಷ್ಟ ಮೇಲ್ಜಾತಿಯ(ಬ್ರಾಹ್ಮಣ,ಕ್ಷತ್ರಿಯ)ಉನ್ನತ ವರ್ಗದ ಆಸ್ತಿ ಮಾಲೀಕರು ಬಹುತೇಕ ಭೂಮಿಯನ್ನು ಹೊಂದಿದ್ದು, ಕೆಳ ವರ್ಗದ ಭೂರಹಿತ ಕಾರ್ಮಿಕರು ಮತ್ತು ಕುಶಲಕರ್ಮಿಗಳನ್ನು ಆರ್ಥಿಕವಾಗಿ ಶೋಷಣೆ ಮಾಡುತ್ತಾ, ದೇವರು ಅರ್ಪಿಸಿದ್ದೆಂದು ಹೇಳಲಾಗಿರುವ ಕೀಳು ಸ್ಥಾನಮಾನದ ಬಗ್ಗೆ ಸದಾ ಧಾರ್ಮಿಕ ಆಚರಣೆಗಳನ್ನು ಹೇರುವ ಮ‌ೂಲಕ ಅವರನ್ನು ಕೆಳಮಟ್ಟಕ್ಕೆ ತಳ್ಳಿದ್ದಾರೆ. ವಿಲಿಯಂ A.ಹವಿಲ್ಯಾಂಡ್ ಪ್ರಕಾರ,ಜಾತೀಯತೆ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡಿದ್ದು, ದಲಿತರನ್ನು ಪ್ರತ್ಯೇಕಿಸುವುದನ್ನು ಮುಂದುವರಿಸಿದೆ.[೧೯] ಆದಾಗ್ಯೂ, ಸಾಮಾಜಿಕ ಸುಧಾರಣೆಗಳು ಮತ್ತು ಉದ್ಯೋಗ ಮತ್ತು ಸೌಲಭ್ಯಗಳಲ್ಲಿ ಮೀಸಲಾತಿಗಳು ಅನುಷ್ಠಾನದ ಮ‌ೂಲಕ ದಲಿತರು ಸ್ಥಿರ ಏಳಿಗೆ ಮತ್ತು ಸಬಲತೆ ಹೊಂದಿದ್ದನ್ನು ಇತರರು ಗಮನಿಸಿದ್ದಾರೆ.[೨೦][೨೧]

ಬ್ರಿಟಿಷ್ ಯುಗ[ಬದಲಾಯಿಸಿ]

ಮಹಾ ಮೊಘಲರ ಇಸ್ಲಾಮಿಕ್ ರಾಜವಂಶದ ಆಳ್ವಿಕೆಯು ಭಾರತದಲ್ಲಿ ಅಭೂತಪೂರ್ವ ಸಂಪದಭಿವೃದ್ಧಿಯ ಶಕೆಯಾಗಿತ್ತು.[೨೨] ಸುಮಾರು 1800ರಲ್ಲಿ ಮೊಘಲ್ ಶಕೆ ಅಂತ್ಯಗೊಂಡಿತು. "ಭಾರತದ ಭಾಗಗಳ ಪೈಕಿ ಬ್ರಿಟಿಷ್ ಆಳ್ವಿಕೆ ಸುದೀರ್ಘಾವಧಿ ಅನುಭವಿಸಿದ ಭಾಗಗಳು ಇಂದು ಅತೀ ಬಡತನದಲ್ಲಿರುವ ಗಮನಾರ್ಹ ಸತ್ಯ ದೃಢಪಟ್ಟಿದೆ"ಎಂದು ಜವಾಹರಲಾಲ್ ನೆಹರೂ ಹೇಳಿದ್ದಾರೆ. [೫] ವಸಾಹತುಶಾಹಿ ಖಾಸಗೀಕರಣಗಳು, ಉತ್ಪಾದಿತ ಅಥವಾ ನವೀಕೃತ ಭಾರತದ ಸರಕುಗಳ ಮೇಲೆ ನಿಯಂತ್ರಣಗಳು ಮತ್ತು ಸುಂಕಗಳು,ತೆರಿಗೆಗಳು ಮತ್ತು ನೇರ ಸ್ವಾಧೀನಗಳ ಮ‌ೂಲಕ ಭಾರತದ ಅರ್ಥವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ಮತ್ತು ತೀವ್ರವಾಗಿ ಕೈಗಾರೀಕರಣದಿಂದ ಕುಂಠಿತಗೊಳಿಸಲಾಯಿತು.(ವಿಶೇಷವಾಗಿ ವಸ್ತ್ರೋದ್ಯಮಗಳು ಮತ್ತು ಲೋಹ-ಕೆಲಸ ಕ್ಷೇತ್ರಗಳಲ್ಲಿ)ಎಂದು ಭಾಷಾಶಾಸ್ತ್ರಜ್ಞ ಮತ್ತು ವಿಮರ್ಶಕ ನೋಮ್ ಚಾಮ್ಸ್ಕಿ ಹೇಳಿದ್ದಾರೆ.[೨೩] ಆದಾಗ್ಯೂ, ಅರ್ಥಶಾಸ್ತ್ರಜ್ಞ ಆಂಗಸ್ ಮ್ಯಾಡಿಸನ್ ಪ್ರಕಾರ, ಇಂತಹ ವಿವರಣೆಯು ಬೇಡಿಕೆ ಮತ್ತು ತಂತ್ರಜ್ಞಾನದಲ್ಲಿ ಪಾತ್ರವನ್ನು ಕಡೆಗಣಿಸುತ್ತದೆ.[೨೪] ಭಾರತ 1830ರಲ್ಲಿ ಬ್ರಿಟನ್ ಕೈಗಾರಿಕಾ ಉತ್ಪಾದನೆ 9.5%ಗೆ ಪ್ರತಿಯಾಗಿ 17.6% ಕೈಗಾರಿಕೆ ಉತ್ಪಾದನೆಗೆ ಕಾರಣವಾಗಿದೆ. ಆದರೆ 1900ರಲ್ಲಿ ಭಾರತದ ಪಾಲು ಬ್ರಿಟನ್ನಿನ 18.5% ವಿರುದ್ಧ 1.7% ಕುಂಠಿತವಾಯಿತು. ಭಾರತದ ಜನಸಂಖ್ಯೆ ಬೆಳವಣಿಗೆಯಿಂದ ಕೈಗಾರಿಕಾ ಉತ್ಪಾದನೆಯಲ್ಲಿ ತಲಾ ಬದಲಾವಣೆಯು ಇನ್ನಷ್ಟು ತೀವ್ರಗೊಂಡಿತು. ಏಕೆಂದರೆ,ಯುರೋಪ್- ವಿಶೇಷವಾಗಿ ಬ್ರಿಟನ್, ಜಗತ್ತಿನ ಉಳಿದ ರಾಷ್ಟ್ರಗಳಿಗಿಂತ ಮುಂಚಿತವಾಗಿ ಕೈಗಾರೀಕರಣಗೊಂಡಿತು.ಭಾರತದಲ್ಲಿ ಬ್ರಿಟನ್ ನೀತಿಗಳ ಕಾರಣದಿಂದ ಹವಾಮಾನ ಪರಿಸ್ಥಿತಿಗಳು ಉಲ್ಬಣಗೊಂಡು ಸಾಮ‌ೂಹಿಕ ಬರಗಾಲಗಳಿಗೆ ಆಸ್ಪದ ಕಲ್ಪಿಸಿತೆಂದು ಈ ಅಭಿಪ್ರಾಯ ಹೇಳುತ್ತದೆ.ಇವೆಲ್ಲವನ್ನೂ ಒಟ್ಟಿಗೆ ತೆಗೆದುಕೊಂಡರೆ ಭಾರತದ ವಸಾಹತುಗಳಲ್ಲಿ ಹಸಿವು 30ರಿಂದ 60 ದಶಲಕ್ಷ ಜನರನ್ನು ಬಲಿತೆಗೆದುಕೊಂಡಿದೆ. ಸಮುದಾಯ ಧಾನ್ಯ ಬ್ಯಾಂಕುಗಳನ್ನು ಬಲವಂತದಿಂದ ನಿರುಪಯುಕ್ತಗೊಳಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು]ಸ್ಥಳೀಯ ಉಪಭೋಗಕ್ಕಿದ್ದ ಆಹಾರದ ಬೆಳಗಳ ಭೂಮಿಯನ್ನು ಹತ್ತಿ,ಅಫೀಮು,ಚಹಾ ಮತ್ತು ರಫ್ತಾಗುವ ಧಾನ್ಯ ಬಹುತೇಕ ಪ್ರಾಣಿಗಳ ಮೇವಿನ ಧಾನ್ಯಕ್ಕೆ ಪರಿವರ್ತಿಸಲಾಯಿತು. [೬]ಆಂಗಸ್ ಮ್ಯಾಡಿಸನ್ ಪ್ರಕಾರ, ಅವರು "ನಿರುಪಯುಕ್ತ ಸೇನಾ ನಿರಂಕುಶವಾದವನ್ನು ಆಡಳಿತಶಾಹಿ ಮಿಲಿಟರಿ ವ್ಯವಸ್ಥೆಯಾಗಿ ಉಪಯುಕ್ತ ತಂತ್ರಶಾಸ್ತ್ರಜ್ಞರ ಎಚ್ಚರಿಕೆಯ ವಿನ್ಯಾಸದಿಂದ ಬದಲಿಸಿದರು. ಇದು ಕಾನೂನು ಸುವ್ಯವಸ್ಥೆಯನ್ನು ದಕ್ಷತೆಯಿಂದ ಪಾಲಿಸಲು ಸಾಧ್ಯವಾಗಿಸಿತು. [...] ಹೊಸ ಮೇಲ್ವರ್ಗದ ಜನರು ಜನಾನ ಮತ್ತು ಅರಮನೆಗಳನ್ನು ಇಟ್ಟುಕೊಳ್ಳದೇ, ಉತ್ಕೃಷ್ಟ ಮಸ್ಲಿನ್ ಉಡುಪುಗಳು,ಅಲಂಕೃತ ಕತ್ತಿಗಳನ್ನು ಧರಿಸದೇ ಉಪಭೋಗದ ನ‌ಮೂನೆ ಬದಲಾಯಿತು. ಸಾಂಪ್ರದಾಯಿಕ ಕರಕುಶಲ ಕ್ಷೇತ್ರದಲ್ಲಿ ಇದು ಸ್ವಲ್ಪ ನೋವಿನ ಮರುಹೊಂದಾಣಿಕೆಗಳನ್ನು ಉಂಟುಮಾಡಿತು. ಮೊಘಲ್ ಭಾರತದ ಕಾಲಾವಧಿಯಲ್ಲಿ ಶೂನ್ಯಕ್ಕೆ ಸಮೀಪವಿದ್ದ ಉತ್ಪಾದಿತ ಬಂಡವಾಳದಲ್ಲಿ ಹೆಚ್ಚಳ ಉಂಟಾದ ಸಾಧ್ಯತೆ ಕಂಡುಬಂದಿರಬಹುದು : ರೈಲ್ವೆಗಳಲ್ಲಿ ಮತ್ತು ನೀರಾವರಿಯಲ್ಲಿ ಸ್ವತಃ ಸರ್ಕಾರ ಉತ್ಪಾದಿತ ಬಂಡವಾಳವನ್ನು ಕೈಗೊಂಡಿತು. ಇದರ ಪರಿಣಾಮವಾಗಿ ಕೃಷಿ ಮತ್ತು ಕೈಗಾರಿಕಾ ಉತ್ಪಾದನೆ ಎರಡರಲ್ಲೂ ಬೆಳವಣಿಗೆ ಉಂಟಾಯಿತು." [೨೪]

ಭಾರತದ ಆರ್ಥಿಕ ನೀತಿಗಳು[ಬದಲಾಯಿಸಿ]

ಭಾರತದ ಅತೀ ಬಡ ರಾಜ್ಯ ಬಿಹಾರದಲ್ಲಿ ಗ್ರಾಮೀಣ ಕಾರ್ಮಿಕ ಬೆರಣಿಯನ್ನು ಒಣಗಿಸುತ್ತಿರುವುದು.

$1,818; $3,259; $13,317; and $15,720.[೨೫] (1990 ಅಂತಾರಾಷ್ಟ್ರೀಯ ಮ್ಯಾಡಿಸನ್ ಡಾಲರ್‌ಗಳಲ್ಲಿ ಅಂಕಿಗಳಿವೆ) ಇನ್ನೊಂದು ರೀತಿಯಲ್ಲಿ,ಭಾರತದ ಸರಾಸರಿ ಆದಾಯವು 1947ರ ದಕ್ಷಿಣ ಕೊರಿಯ ಆದಾಯಕ್ಕಿಂತ ಹೆಚ್ಚು ವ್ಯತ್ಯಾಸವಿರಲಿಲ್ಲ.ಆದರೆ ದಕ್ಷಿಣಕೊರಿಯ 2000ದಷ್ಟರಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಬೆಳವಣಿಗೆ ಸಾಧಿಸಿತು. ಇದೇ ಸಂದರ್ಭದಲ್ಲಿ, ಭಾರತ ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿ ಉಳಿಯಿತು.ಹಿಂದು ಪ್ರಗತಿ ದರವು ಭಾರತದ ಅರ್ಥವ್ಯವಸ್ಥೆಯ ಕಡಿಮೆ ವಾರ್ಷಿಕ ಪ್ರಗತಿ ದರವನ್ನು ಉಲ್ಲೇಖಿಸಲು ಬಳಸುವ ಪದುಪ್ರಯೋಗವಾಗಿದೆ.ಅದು 1950ರ ದಶಕದಿಂದ 1980ರ ದಶಕದವರೆಗೆ ಸುಮಾರು 3.5% ಸ್ಥಗಿತಗೊಂಡಿತು ಹಾಗೂ ತಲಾದಾಯವು ಸರಾಸರಿ 1.3%ಗೆ ಮುಟ್ಟಿತು.[೨೬] ಇದೇ ಸಂದರ್ಭದಲ್ಲಿ ಪಾಕಿಸ್ತಾನವು 8% ಬೆಳವಣಿಗೆಯಾಯಿತು,ಇಂಡೋನೇಶಿಯ 9%, ಥಾಯ್ಲೆಂಡ್ 9%,ದಕ್ಷಿಣ ಕೊರಿಯ 10% ಮತ್ತು ಟೈವಾನ್ 12% ಬೆಳವಣಿಗೆ ಸಾಧಿಸಿತು.[೨೭] ಈ ಪದವನ್ನು ಭಾರತಅರ್ಥಶಾಸ್ತ್ರಜ್ಞ ರಾಜ್ ಕುಮಾರ್ ಕೃಷ್ಣ ಹುಟ್ಟುಹಾಕಿದರು.ಲೈಸನ್ಸ್ ರಾಜ್ ವ್ಯಾಪಕ ಪರವಾನಗಿಗಳು,ನಿಯಂತ್ರಣಗಳು ಮತ್ತು ಅದರ ಜತೆಗೂಡಿದ ಆಡಳಿತಶಾಹಿ ಕಡಿವಾಣಗಳನ್ನು ಉಲ್ಲೇಖಿಸಿವೆ. ಇವು 1947 ಮತ್ತು 1990ರ ನಡುವೆ ಭಾರತದಲ್ಲಿ ಉದ್ಯಮಗಳನ್ನು ಸ್ಥಾಪಿಸಿ ನಡೆಸಲು ಅಗತ್ಯವಾಗಿತ್ತು.[೨೮] ಯೋಜಿತ ಅರ್ಥವ್ಯವಸ್ಥೆ ಹೊಂದುವ ಭಾರತದ ನಿರ್ಧಾರದ ಫಲವೇ ಲೈಸೆನ್ಸ್ ರಾಜ್ ವ್ಯವಸ್ಥೆಯಾಗಿದ್ದು, ಅಲ್ಲಿ ಆರ್ಥಿಕತೆಯ ಎಲ್ಲ ಅಂಶಗಳು ರಾಷ್ಟ್ರದಿಂದ ನಿಯಂತ್ರಿತವಾಗುತ್ತದೆ ಮತ್ತು ಪರವಾನಗಿಗಳನ್ನು ಆಯ್ದ ಕೆಲವರಿಗೆ ನೀಡಲಾಗುತ್ತದೆ. ಈ ವ್ಯವಸ್ಥೆಯಡಿಯಲ್ಲಿ ಭ್ರಷ್ಟಾಚಾರ ಹುಲುಸಾಗಿ ಬೆಳೆಯಿತು.[೨೯]

The labyrinthine bureaucracy often led to absurd restrictions - up to 80 agencies had to be satisfied before a firm could be granted a licence to produce and the state would decide what was produced, how much, at what price and what sources of capital were used.

— BBC[೩೦]

ಭಾರತವು 1950ರ ದಶಕದಲ್ಲಿ ಇವುಗಳೊಂದಿಗೆ ಆರಂಭಿಸಿತು:[೩೧]

 • ಅಧಿಕ ಪ್ರಗತಿ ದರಗಳು
 • ವ್ಯಾಪಾರ ಮತ್ತು ಬಂಡವಾಳಕ್ಕೆ ಮುಕ್ತತೆ
 • ಉತ್ತೇಜನಕಾರಿ ರಾಷ್ಟ್ರ
 • ಸಾಮಾಜಿಕ ವೆಚ್ಚ ಜಾಗೃತಿ
 • ಬೃಹತ್ ಆರ್ಥಿಕತೆ ಸ್ಥಿರತೆ

ಆದರೆ 1980ರ ದಶಕದಲ್ಲಿ ಇವುಗಳೊಂದಿಗೆ ಕೊನೆಗೊಂಡವು:

 • ಕಡಿಮೆ ಪ್ರಗತಿ ದರಗಳು(ಹಿಂದು ಬೆಳವಣಿಗೆ ದರ)
 • ವ್ಯಾಪಾರ ಮತ್ತು ಬಂಡವಾಳಕ್ಕೆ ಕೊನೆ
 • ಪರವಾನಗಿ-ಪೀಡಿತ ನಿರ್ಬಂಧಿತ ರಾಷ್ಟ್ರ

ಪರವಾನಗಿ ರಾಜ್

 • ಸಾಮಾಜಿಕ ವೆಚ್ಚಗಳನ್ನು ಸುಸ್ಥಿರಗೊಳಿಸುವ ಅಸಾಮರ್ಥ್ಯ
 • ಬೃಹದಾರ್ಥಿಕ ಅಸ್ಥಿರತೆ,

ವಾಸ್ತವವಾಗಿ ಬಿಕ್ಕಟ್ಟು.

1980ರ ದಶಕದಲ್ಲಿ ಸುಧಾರಣೆಗಳು ಆರಂಭವಾದ ಬಳಿಕ ಬಡತನ ಗಮನಾರ್ಹವಾಗಿ ಇಳಿಮುಖವಾಯಿತು.[೩೨][೩೩] ಅಲ್ಲದೇ:

 • ಕೃಷಿ ಮೇಲೆ ಹೆಚ್ಚು ಅವಲಂಬನೆ ಕೃಷಿಯಲ್ಲಿ ಹೆಚ್ಚುವರಿ ದುಡಿಮೆ ರೈತರು ದೊಡ್ಡ ಓಟ್ ಬ್ಯಾಂಕ್‌ ಆಗಿದ್ದರು ಮತ್ತು ಅಧಿಕ ಆದಾಯದ ಕೈಗಾರಿಕೆ ಯೋಜನೆಗಳಿಗೆ ಭೂಮಿಯ ಮರುಮಂಜೂರಾತಿ ಪ್ರತಿರೋಧಿಸುವುದಕ್ಕಾಗಿ ತಮ್ಮ ಮತಗಳನ್ನು ಬಳಸಿಕೊಂಡರು. ಸೇವೆಗಳು ಮತ್ತು ಕೈಗಾರಿಕೆ ಎರಡಂಕಿಗಳಲ್ಲಿ ಬೆಳೆಯಿತು,ಕೃಷಿ ಬೆಳವಣಿಗೆ ದರವು 4.8%ರಿಂದ 2%ಗೆ ಕುಸಿಯಿತು. ಜನಸಂಖ್ಯೆಯ ಸುಮಾರು 60% ಕೃಷಿ ಮೇಲೆ ಅವಲಂಬಿತವಾಗಿದೆ.ಆದರೆ ಕೃಷಿಯಿಂದ GDPಗೆ ಕೊಡುಗೆ ಸುಮಾರು 18%.[೩೪]*ಅಧಿಕ ಜನಸಂಖ್ಯೆ ಬೆಳವಣಿಗೆ ದರ,ಇದು ಬಡತನಕ್ಕೆ ಕಾರಣವಲ್ಲ, ಬದಲಿಗೆ ಲಕ್ಷಣ ಎಂದು ಜನಸಂಖ್ಯಾಶಾಸ್ತ್ರಜ್ಞರು ಸಾಮಾನ್ಯವಾಗಿ ಒಪ್ಪುತ್ತಾರೆ.ಇದಲ್ಲದೇ,ಭಾರತವು ಪ್ರಸಕ್ತ ತನ್ನ ಮಧ್ಯಮ ವರ್ಗದ ಜನಸಂಖ್ಯೆಗೆ ಪ್ರತಿ ವರ್ಷ 40 ದಶಲಕ್ಷ ಜನರನ್ನು ಸೇರ್ಪಡೆ ಮಾಡುತ್ತದೆ.[ಸೂಕ್ತ ಉಲ್ಲೇಖನ ಬೇಕು] ಅಂದಾಜು 300 ದಶಲಕ್ಷ ಭಾರತೀಯರು ಮಧ್ಯವರ್ಗಕ್ಕೆ ಈಗ ಸೇರಿದ್ದಾರೆ; ಅವರಲ್ಲಿ ಮ‌ೂರನೇ ಒಂದು ಭಾಗವು ಕಳೆದ 10 ವರ್ಷಗಳಲ್ಲಿ ಬಡತನದಿಂದ ಹೊರಬಂದಿದ್ದಾರೆಂದು "ಪೋರ್‌ಕಾಸ್ಟಿಂಗ್ ಇಂಟರ್‌ನ್ಯಾಷನಲ್" ಸಂಸ್ಥಾಪಕ ಮಾರ್ವಿನ್ J.ಸೆಟ್ರನ್ ಮುಂತಾದ ವಿಶ್ಲೇಷಕರು ಬರೆದಿದ್ದಾರೆ. ಪ್ರಸಕ್ತ ಪ್ರಗತಿ ದರದಲ್ಲಿ, ಬಹುತೇಕ ಭಾರತೀಯರು 2025ರಷ್ಟರಲ್ಲಿ ಮಧ್ಯಮ-ವರ್ಗಕ್ಕೆ ಸೇರ್ಪಡೆಯಾಗುತ್ತಾರೆ. ಸಾಕ್ಷರತೆ ದರಗಳು ಇದೇ ಅವಧಿಯಲ್ಲಿ ಶೇಕಡ 52ರಿಂದ 65ಕ್ಕೆ ಏರಿದೆ.[೩೫]

ನವ ಉದಾರವಾದಿ ನೀತಿಗಳು ಮತ್ತು ಅವುಗಳ ಪ್ರಭಾವಗಳು[ಬದಲಾಯಿಸಿ]

1990ರ ದಶಕಗಳ ಪೂರ್ವದಲ್ಲಿ ಆರಂಭಿಸಿದ ಆರ್ಥಿಕ ಸುಧಾರಣೆಗಳು ಗ್ರಾಮೀಣ ಆರ್ಥಿಕತೆಗಳ ಕುಸಿತಕ್ಕೆ ಮತ್ತು ಪ್ರಸಕ್ತ ಕೃಷಿಗೆ ಸಂಬಂಧಿಸಿದ ಬಿಕ್ಕಟ್ಟಿಗೆ ಕಾರಣವಾಯಿತು ಎಂದು ಇತರ ದೃಷ್ಟಿಕೋನಗಳಿವೆ. ದಿ ಹಿಂದು ಪತ್ರಕರ್ತ ಮತ್ತು ಗ್ರಾಮೀಣ ವ್ಯವಹಾರಗಳ ಸಂಪಾದಕ ಪಿ.ಸಾಯಿನಾಥ್ ಭಾರತದ ಗ್ರಾಮೀಣ ಆರ್ಥಿಕತೆಗಳ ಬಗ್ಗೆ ತಮ್ಮ ವರದಿಗಳಲ್ಲಿ ವಿವರಿಸುತ್ತಾ,ಅಸಾಮಾನ್ಯ ಎತ್ತರಗಳಿಗೆ ಅಸಮಾನತೆಯ ಮಟ್ಟ ಏರಿದ್ದು, ಇದೇ ಸಂದರ್ಭದಲ್ಲಿ ಭಾರತದಲ್ಲಿ ಹಸಿವು ದಶಕಗಳಲ್ಲೇ ಅತ್ಯಧಿಕ ಮಟ್ಟಕ್ಕೆ ಮುಟ್ಟಿದೆ ಎಂದು ಹೇಳಿದ್ದಾರೆ. ಭಾರತ ಸರ್ಕಾರ 1990ರ ದಶಕದಿಂದ ಅನುಸರಿಸಿದ ನವ ಉದಾರವಾದಿ ನೀತಿಗಳಿಂದ ಭಾರತದಾದ್ಯಂತ ಗ್ರಾಮೀಣ ಆರ್ಥಿಕತೆಗಳು ಕುಸಿದಿದೆ ಅಥವಾ ಕುಸಿತದ ಅಂಚಿನಲ್ಲಿದೆ ಎಂದು ಅವರು ಗಮನಸೆಳೆದಿದ್ದಾರೆ.[೩೬] "ಉದಾರೀಕರಣ"ಕ್ಕೆ ಮಾನವ ಕೊಟ್ಟ ಬೆಲೆ ಅತ್ಯಂತ ದುಬಾರಿಯಾಗಿತ್ತು. ಅಧಿಕೃತ ಅಂಕಿಅಂಶಗಳ ಪ್ರಕಾರ, ಭಾರತದ ಗ್ರಾಮೀಣ ಜನಸಂಖ್ಯೆಯಲ್ಲಿ 1997ರಿಂದ 2007ರವರೆಗೆ ರೈತರ ಬೃಹತ್ ಪ್ರಮಾಣದ ಆತ್ಮಹತ್ಯೆಗಳು ಒಟ್ಟು 200,000 ಸಮೀಪಕ್ಕೆ ಮುಟ್ಟಿತು.[೩೭] ಆ ಸಂಖ್ಯೆ ವಿವಾದಿತವಾಗಿ ಉಳಿದಿದ್ದು, ನಿಜವಾದ ಸಂಖ್ಯೆ ಇನ್ನೂ ಹೆಚ್ಚಾಗಿದೆ ಎನ್ನುವುದು ಕೆಲವರ ಅಭಿಪ್ರಾಯ. ಸರ್ಕಾರದ ಅನುಸರಿಸಿದ ನೀತಿಗಳಲ್ಲಿ ಟೀಕಾಕಾರರು ತಪ್ಪು ಹುಡುಕಿದ್ದಾರೆ.ಸಾಯಿನಾಥ್ ಪ್ರಕಾರ,ಗ್ರಾಮೀಣ ಗೃಹವಾಸಿಗಳಲ್ಲಿ ಅತ್ಯಧಿಕ ಭಾಗ ಸಾಲದ ವಿಷವರ್ತುಲದಲ್ಲಿ ಸಿಲುಕಿದ ಫಲವಾಗಿ ರೈತರು ಅಧಿಕ ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಶರಣಾದರು. ಕೃಷಿಗೆ ಸಂಬಂಧಿಸಿದ ಭಾರತದ ಉನ್ನತ ಅರ್ಥಶಾಸ್ತ್ರಜ್ಞ ಉತ್ಸ ಪಾಟ್ನಾಯಕ್ ಹೀಗೆ ಸ್ಪಷ್ಟಪಡಿಸಿದ್ದಾರೆ, ಬಡ ಕುಟುಂಬವೊಂದು 1997ರಲ್ಲಿ ಪ್ರತಿವರ್ಷ ಉಪಭೋಗಿಸಿದ್ದಕ್ಕಿಂತ 100 ಕೇಜಿ ಕಡಿಮೆ ಆಹಾರವನ್ನು 2007ರಲ್ಲಿ ಉಪಭೋಗಿಸಿದೆ.[೩೮] ಸಾಂಪ್ರದಾಯಿಕ ಆಹಾರ ಬೆಳೆಗಳಿಂದ ವಾಣಿಜ್ಯ ಬೆಳೆಗಳಿಗೆ ಬದಲಾಯಿಸುವಂತೆ ರೈತರಿಗೆ ಉತ್ತೇಜಿಸಿದ ಸರ್ಕಾರದ ನೀತಿಗಳ ಫಲವಾಗಿ ರೈತ ಉತ್ಪಾದನೆ ವೆಚ್ಚಗಳಲ್ಲಿ ಅಸಾಮಾನ್ಯ ಏರಿಕೆ ಉಂಟಾಯಿತು.ಮಾರುಕಟ್ಟೆ ಶಕ್ತಿಗಳು ವಾಣಿಜ್ಯ ಬೆಳೆಗಳ ದರವನ್ನು ನಿರ್ಧರಿಸಿದವು.[೩೯]

ವಾಣಿಜ್ಯ ಬೆಳೆಗಳಿಗೆ ಸಂಬಂಧಿಸಿದಂತೆ ಅನುಪಾತರಹಿತ ದೊಡ್ಡ ಸಂಖ್ಯೆಯಲ್ಲಿ ರೈತರ ಆತ್ಮಹತ್ಯೆಗಳು ಸಂಭವಿಸಿದೆಯೆಂದು ಸಾಯಿನಾಥ್ ಗಮನಸೆಳೆದಿದ್ದಾರೆ. ಏಕೆಂದರೆ ಅಕ್ಕಿ ಮುಂತಾದ ಆಹಾರ ಬೆಳಗಳ ದರ ಕುಸಿದರೂ ಕೂಡ ಬದುಕುಳಿಯಲು ಆಹಾರ ಸಿಗುತ್ತದೆ. ಅಸಮಾನತೆಯು ಭಾರತ ಎಂದೂ ಕಂಡಿರದ ಅತ್ಯಧಿಕ ಮಟ್ಟಗಳನ್ನು ಮುಟ್ಟಿದೆಯೆಂದು ಅವರು ಗಮನಸೆಳೆದಿದ್ದಾರೆ. ಮೋರ್ಗಾನ್ ಸ್ಟಾನ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಚೇತನ್ ಆಹ್ಯಾ ವರದಿಯಲ್ಲಿ,ಭಾರತದ ಷೇರುಮಾರುಕಟ್ಟೆಯಲ್ಲಿ 2003-2007 ಕಾಲಮಿತಿಯಲ್ಲಿ 1 ಲಕ್ಷಕೋಟಿ $(1 ಟ್ರಿಲಿಯನ್) ಸಂಪತ್ತು ಹೆಚ್ಚಳವಾಗಿದೆಯೆಂದು ಮತ್ತು ಭಾರತದ ಜನಸಂಖ್ಯೆಯಲ್ಲಿ ಯಾವುದೇ ಷೇರು ಹೊಂದಿದವರು 4-7% ಎಂದು ಗಮನಸೆಳೆದಿದ್ದಾರೆ.[೪೦] ಕೃಷಿಯಲ್ಲಿ ಸಾರ್ವಜನಿಕ ಹೂಡಿಕೆಯು GDPಯ 2%ಗೆ ಕುಸಿದ ಸಂದರ್ಭದಲ್ಲಿ,ರಾಷ್ಟ್ರವು ದಶಕಗಳಲ್ಲೇ ಭೀಕರವಾದ ಕೃಷಿಸಂಬಂಧಿತ ಬಿಕ್ಕಟ್ಟನ್ನು ಅನುಭವಿಸಿತು,ಅದೇ ಸಂದರ್ಭದಲ್ಲಿ ಭಾರತವು ಎರಡನೇ ಅತ್ಯಧಿಕ ಸಂಖ್ಯೆಯ ಡಾಲರ್ ಕೋಟ್ಯಾಧಿಪತಿಗಳನ್ನು ಹೊಂದಿದ ರಾಷ್ಟ್ರವಾಯಿತು.[೪೧] ಸಾಯಿನಾಥ್ ಹೀಗೆಂದು ವಾದಿಸುತ್ತಾರೆ

ಕೃಷಿ ಆದಾಯಗಳು ಕುಸಿದವು. ಹಸಿವು ಅತೀ ವೇಗವಾಗಿ ಪಸರಿಸಿತು. ಕೃಷಿಯಲ್ಲಿ ಸಾರ್ವಜನಿಕ ಹೂಡಿಕೆಯು ಬಹು ಹಿಂದೆಯೇ ಏನೂ ಇಲ್ಲದ ಮಟ್ಟಕ್ಕೆ ಕುಗ್ಗಿತು. ಉದ್ಯೋಗ ಪತನಗೊಂಡಿತು. ಕೃಷಿಯೇತರ ಉದ್ಯೋಗಗಳು ಸ್ಥಗಿತಗೊಂಡವು. (ಕೇವಲ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯು ಇತ್ತೀಚಿನ ಸಂದರ್ಭಗಳಲ್ಲಿ ಕೆಲವು ಸೀಮಿತ ಉಪಶಮನ ತಂದಿತು). ಲಕ್ಷಾಂತರ ಜನರು ನಗರಗಳಿಗೆ ಮತ್ತು ಪಟ್ಟಣಗಳಿಗೆ ವಲಸೆ ಹೋದರು,ಅಲ್ಲಿ ಕೂಡ ಕೆಲವೇ ಕೆಲಸಗಳು ಸಿಕ್ಕಿದವು.

ಒಂದು ಅಂದಾಜಿನ ಪ್ರಕಾರ,ಶೇಕಡ 85 ಗ್ರಾಮೀಣ ವಾಸಿಗಳು ಭೂರಹಿತರು,ಅತೀ ಸಣ್ಣ ಅಥವಾ ಸಣ್ಣ ರೈತರಾಗಿದ್ದರು. ಕಳೆದ 15 ವರ್ಷಗಳಲ್ಲಿ ಉತ್ತಮ ಪರಿಸ್ಥಿತಿಗೆ ಬದಲಾಗುವ ಯಾವುದೇ ಲಕ್ಷಣಗಳು ಸಂಭವಿಸಲಿಲ್ಲ. ಅದು ಇನ್ನಷ್ಟು ಕೆಟ್ಟದಾಗುವಂತ ಪರಿಸ್ಥಿತಿಗಳು ಸಂಭವಿಸಿದವು.

ಜೀವ ಕಳೆದುಕೊಂಡ ರೈತರು ಸಾಲದ ಸುಳಿಯಲ್ಲಿ ತೀವ್ರವಾಗಿ ಮುಳುಗಿದ್ದರು-ನವ ಉದಾರವಾದಿ "ಆರ್ಥಿಕ ಸುಧಾರಣೆ"ಗಳ ಪ್ರಥಮ ದಶಕದಲ್ಲಿ ರೈತರ ಮನೆಗಳಲ್ಲಿ ಸಾಲವು ಶೇಕಡ 26ರಿಂದ ಶೇಕಡ 48.6ಕ್ಕೆ ಎರಡುಪಟ್ಟು ಹೆಚ್ಚಾಯಿತು. ಏತನ್ಮಧ್ಯೆ,ಭಾರತವು ಕೃಷಿಯಲ್ಲಿ ಹೂಡಿಕೆಯನ್ನು ಕುಂಠಿತಗೊಳಿಸುತ್ತಾ ಬರುವುದನ್ನು ಮುಂದುವರಿಸಿತು(ಪ್ರಮಾಣೀಕೃತ ನವ ಉದಾರವಾದಿ ವಿಧಾನ) ಸಣ್ಣ ರೈತರಿಗೆ ಜೀವನ ಹೆಚ್ಚೆಚ್ಚು ಅಸಾಧ್ಯವೆನಿಸಿತು.

2006ರಲ್ಲಿದ್ದಂತೆ, ಸರ್ಕಾರ ಕೃಷಿಗೆ GDPಯ 0.2%ಕ್ಕಿಂತ ಕಡಿಮೆ ವೆಚ್ಚಮಾಡುತ್ತದೆ ಮತ್ತು ಶಿಕ್ಷಣಕ್ಕೆ GDPಯ 3%ಗಿಂತ ಕಡಿಮೆ ವೆಚ್ಚ ಮಾಡುತ್ತದೆ.[೪೨] ಆದಾಗ್ಯೂ, ಮಧ್ಯಾಹ್ನದ ಬಿಸಿಯೂಟ

ಯೋಜನೆ ಮುಂತಾದ ಕೆಲವು ಸರ್ಕಾರಿ ಯೋಜನೆಗಳು ಮತ್ತು NREGA ಆಂಶಿಕ ಯಶಸ್ಸು ಗಳಿಸಿ,ಗ್ರಾಮೀಣ ಆರ್ಥಿಕತೆಗೆ ಜೀವಸೆಲೆ ಒದಗಿಸಿತು ಮತ್ತು ಬಡತನದ ಮತ್ತಷ್ಟು ಏರಿಕೆಯನ್ನು ನಿರ್ಬಂಧಿಸಿತು.

ಬಡತನ ನಿವಾರಣೆಗೆ ಪ್ರಯತ್ನಗಳು[ಬದಲಾಯಿಸಿ]

ಸರ್ಕಾರ,1950ರ ದಶಕದ ಪೂರ್ವದಲ್ಲೇ,ಆಹಾರೋತ್ಪಾದನೆಯಲ್ಲಿ ಬಡವರು ಸ್ವಾವಲಂಬನೆ ಸಾಧಿಸುವಲ್ಲಿ ನೆರವಾಗಲು ವಿವಿಧ ಯೋಜನಾ ವಿತರಣೆಗಳನ್ನು ಆರಂಭಿಸಿ,ಸುಸ್ಥಿರಗೊಳಿಸಿತು ಮತ್ತು ನವೀಕರಿಸಿತು. ಬಹುಶಃ ಅತ್ಯಂತ ಮುಖ್ಯ ಉಪಕ್ರಮವು ಮ‌ೂಲಭೂತ ಪದಾರ್ಥಗಳ ಪೂರೈಕೆ,ವಿಶೇಷವಾಗಿ ಬಡವರು ತಮ್ಮ ಆದಾಯದ ಶೇಕಡ 80ನ್ನು ಆಹಾರಕ್ಕೆ ವೆಚ್ಚಮಾಡುವುದರಿಂದ ದೇಶಾದ್ಯಂತ ನಿಯಂತ್ರಿತ ದರಗಳಲ್ಲಿ ಆಹಾರ ಪದಾರ್ಥಗಳು ಲಭ್ಯವಾಯಿತು.

ಬಡತನ ನಿವಾರಣೆಯ ಹೊರನೋಟ[ಬದಲಾಯಿಸಿ]

ಭಾರತದಲ್ಲಿ ಬಡತನ ನಿವಾರಣೆಯನ್ನು ಸಾಮಾನ್ಯವಾಗಿ ಸುದೀರ್ಘಾವಧಿ ಗುರಿಯನ್ನಾಗಿ ಪರಿಗಣಿಸಲಾಗಿದೆ. ಮಧ್ಯಮ ವರ್ಗ ನಿಧಾನವಾಗಿ ಬೆಳೆಯುತ್ತಿರುವ ಪರಿಣಾಮವಾಗಿ,ಮುಂದಿನ 50 ವರ್ಷಗಳಲ್ಲಿ ಬಡತನ ನಿವಾರಣೆಯು ಹಿಂದಿಗಿಂತ ಹೆಚ್ಚು ಪ್ರಗತಿ ಸಾಧಿಸುವುದೆಂದು ನಿರೀಕ್ಷಿಸಲಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು,ಸರ್ಕಾರಿ ಉದ್ಯೋಗಗಳಲ್ಲಿ ಸ್ಥಾನಗಳ ಮೀಸಲಾತಿ ಮತ್ತು ಮಹಿಳೆಯರಿಗೆ ಮತ್ತು ಸಮಾಜದ ಆರ್ಥಿಕ ದುರ್ಬಲ ವರ್ಗಗಳಿಗೆ ಹೆಚ್ಚಿನ ಸಬಲೀಕರಣವು ಬಡತನ ನಿವಾರಣೆಗೆ ಕೊಡುಗೆ ನೀಡುವುದೆಂದು ನಿರೀಕ್ಷಿಸಲಾಗಿದೆ. ಎಲ್ಲ ಬಡತನ ನಿವಾರಣೆ ಕಾರ್ಯಕ್ರಮಗಳು ವಿಫಲವಾಗಿವೆಯೆಂದು ಹೇಳುವುದು ಸರಿಯಲ್ಲ. ಮಧ್ಯಮ ವರ್ಗದ ಬೆಳವಣಿಗೆಯಿಂದ(ಭಾರತ ಆಗಸ್ಟ್ 1947ರಲ್ಲಿ ಸ್ವತಂತ್ರ ರಾಷ್ಟ್ರವಾದಾಗ ಇದು ಅಕ್ಷರಶಃ ಅಸ್ತಿತ್ವರಹಿತವಾಗಿತ್ತು)ಯು ಭಾರತದಲ್ಲಿ ಆರ್ಥಿಕ ಸಂಪದಭಿವೃದ್ಧಿಯು ಪರಿಣಾಮಕಾರಿಯಾಗಿದೆ. ಆದರೆ ಸಂಪತ್ತಿನ ವಿಭಜನೆ ಸಮರ್ಪಕವಾಗಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಉದಾರೀಕರಣ ಪ್ರಕ್ರಿಯೆ ಮತ್ತು ಸಮಾಜವಾದಿ ಮಾದರಿಯಿಂದ ದೂರಸರಿದ ನಂತರ,ಭಾರತ ಪ್ರತಿ ವರ್ಷ ಮಧ್ಯಮವರ್ಗಕ್ಕೆ 60ರಿಂದ 70 ದಶಲಕ್ಷ ಜನರನ್ನು ಸೇರ್ಪಡೆ ಮಾಡುತ್ತಿದೆ. "ಫೋರ್‌ಕ್ಯಾಸ್ಟಿಂಗ್ ಇಂಟರ್‌ನ್ಯಾಷನಲ್" ಸಂಸ್ಥಾಪಕ ಮಾರ್ವಿನ್ J.ಸೆಟ್ರಾನ್ ಮುಂತಾದ ವಿಶ್ಲೇಷಕರು ಈ ಕುರಿತು ಬರೆಯುತ್ತಾ, ಸುಮಾರು 390 ದಶಲಕ್ಷ ಭಾರತೀಯರು ಈಗ ಮಧ್ಯಮ ವರ್ಗಕ್ಕೆ ಸೇರಿದ್ದಾರೆ;ಕಳೆದ ಹತ್ತು ವರ್ಷಗಳಲ್ಲಿ ಅವರಲ್ಲಿ ಮ‌ೂರನೇ ಒಂದು ಭಾಗ ಬಡತನದ ಬೇಗೆಯಿಂದ ಹೊರಬಂದಿದ್ದಾರೆ. ಪ್ರಸಕ್ತ ಪ್ರಗತಿ ದರದಲ್ಲಿ,ಬಹುತೇಕ ಭಾರತೀಯರು 2025ಕ್ಕೆ ಮಧ್ಯಮವರ್ಗಕ್ಕೆ ಸೇರ್ಪಡೆಯಾಗಲಿದ್ದಾರೆ. ಉದಾರೀಕರಣದ ಆರಂಭಿಕ ದಶಕದ(1991-2001) ಸಂದರ್ಭದಲ್ಲಿ ಸಾಕ್ಷರತೆ ಪ್ರಮಾಣಗಳು[ಸೂಕ್ತ ಉಲ್ಲೇಖನ ಬೇಕು] ಶೇಕಡ 52ರಿಂದ ಶೇಕಡ 65ಕ್ಕೆ ಏರಿಕೆಯಾಯಿತು.

ಬಡತನ ತಗ್ಗಿಸುವ ಪ್ರಮಾಣದ ಬಗ್ಗೆ ವಿವಾದ[ಬದಲಾಯಿಸಿ]

ಭಾರತದಲ್ಲಿ ಬಡತನದ ವ್ಯಾಖ್ಯೆಯನ್ನು UN ವಿಶ್ವ ಆಹಾರ ಕಾರ್ಯಕ್ರಮ ಪ್ರಶ್ನಿಸಿದೆ. ಜಾಗತಿಕ ಹಸಿವು ಸೂಚ್ಯಂಕದ ತನ್ನ ವರದಿಯಲ್ಲಿ ಭಾರತ ಸರ್ಕಾರದ ಬಡತನ ವ್ಯಾಖ್ಯೆಯನ್ನು ಅದು ಪ್ರಶ್ನಿಸುತ್ತಾ ಹೇಳಿದೆ:

ಬಡತನ ರೇಖೆಯ ಕೆಳಗಿನ ಗ್ರಾಮೀಣ ಜನಸಂಖ್ಯೆಯ ಪ್ರಮಾಣ ತ್ವರಿತಗತಿಯಲ್ಲಿ ಇಳಿಮುಖವಾಗುತ್ತಿರುವ ಅವಧಿಯಲ್ಲಿ ಕ್ಯಾಲೋರಿ ನಷ್ಟ ಹೆಚ್ಚುತ್ತಿರುವ ಸತ್ಯಾಂಶವು,ಅಧಿಕೃತ ಬಡತನ ಅಂದಾಜುಗಳು ಮತ್ತು ಕ್ಯಾಲೊರಿ ನಷ್ಟದ ನಡುವೆ ಹೆಚ್ಚುತ್ತಿರುವ ಅಂತರದ ಬಗ್ಗೆ ಗಮನಸೆಳೆದಿದೆ.[೪೩]

ಒಟ್ಟಾರೆ ಭಾರತದ ಬಡತನದ ಪ್ರಮಾಣ ಕುಸಿದರೂ,ಬಡತನ ಇಳಿಮುಖದ ಪ್ರಮಾಣವು ಆಗಾಗ್ಗೆ ಚರ್ಚಾಸ್ಪದ ವಿಷಯವಾಗಿದೆ. ಬಡತನವು 1993-94 ಮತ್ತು 2004-05 ನಡುವೆ ವೃದ್ದಿಯಾಗಿಲ್ಲವೆಂಬ ಬಗ್ಗೆ ಒಮ್ಮತವಿದ್ದರೂ, ಇತರೆ ಹಣಕಾಸೇತರ(ಆರೋಗ್ಯ,ಶಿಕ್ಷಣ,ಅಪರಾಧ ಮತ್ತು ಮ‌ೂಲಸೌಲಭ್ಯಕ್ಕೆ ಅವಕಾಶ ಮುಂತಾದವು)ಆಯಾಮಗಳನ್ನು ಪರಿಗಣಿಸಿದರೆ ಈ ಚಿತ್ರಣವು ಅಷ್ಟೊಂದು ಸ್ಪಷ್ಟವಾಗಿಲ್ಲ. ಭಾರತ ಶೀಘ್ರ ಆರ್ಥಿಕ ಪ್ರಗತಿ ಹೊಂದುತ್ತಿರುವ ನಡುವೆ,ಗ್ರಾಮೀಣ ಜನಸಂಖ್ಯೆಯ ಗಮನಾರ್ಹ ಭಾಗವು ನಗರಗಳತ್ತ ವಲಸೆ ಮುಂದುವರಿಸಿದ್ದು,ದೀರ್ಘಾವಧಿಯಲ್ಲಿ ನಗರ ಬಡತನದ ವಿಷಯ ಹೆಚ್ಚು ಮಹತ್ವ ಪಡೆಯುತ್ತಿದೆ.[೪೪] ಕಡು ಬಡತನ ಹೆಚ್ಚಿರದಿದ್ದರೂ,UN ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತವನ್ನು ಕೆಟ್ಟ ಸ್ಥಾನದಲ್ಲಿರಿಸಿದೆಯೆಂದು ಪತ್ರಕರ್ತ P.ಸಾಯಿನಾಥ್ ಮುಂತಾದ ಕೆಲವರು ಅಭಿಪ್ರಾಯ ಹೊಂದಿದ್ದಾರೆ. ಭಾರತವು 2007-08 UN HDI ಸೂಚ್ಯಂಕದಲ್ಲಿ 132ond ಸ್ಥಾನ ಪಡೆದಿದೆ. ಸುಮಾರು 10 ವರ್ಷಗಳಲ್ಲಿ ಇದು ರಾಷ್ಟ್ರಕ್ಕೆ ನೀಡಿದ ಅತ್ಯಂತ ಕಡಿಮೆ ದರ್ಜೆಯದ್ದಾಗಿದೆ. ಭಾರತವು 1992ರಲ್ಲಿ ಇದೇ ಸೂಚ್ಯಂಕದಲ್ಲಿ 122ondಸ್ಥಾನದಲ್ಲಿತ್ತು. ಒಟ್ಟಾರೆ ಯೋಗಕ್ಷೇಮದ ನಿರ್ಣಾಯಕ ಸೂಚಕಗಳಲ್ಲಿ ಪರಿಸ್ಥಿತಿ ತೀರಾ ಕೆಟ್ಟದಾಗಿದೆ ಎಂದು ವಾದಿಸಲಾಗಿದೆ.2008ರ ಅಂಕಿಅಂಶಗಳ ಪ್ರಕಾರ ಅಪೌಷ್ಠಿಕ ಜನರ ಸಂಖ್ಯೆ(ಭಾರತದಲ್ಲಿ 230 ದಶಲಕ್ಷ ಅತ್ಯಧಿಕ ಸಂಖ್ಯೆಯ ಅಪೌಷ್ಠಿಕತೆಯುಳ್ಳ ಜನರಿದ್ದು, ವಿಶ್ವ ಹಸಿವು ಸೂಚ್ಯಂಕದಲ್ಲಿ 119ರ ಪೈಕಿ 94ನೆಯ ಸ್ಥಾನದಲ್ಲಿದೆ), ಮತ್ತು ಅಪೌಷ್ಠಿಕ ಮಕ್ಕಳ ಸಂಖ್ಯೆ(ಭಾರತದ ಮಕ್ಕಳಲ್ಲಿ 5 ವರ್ಷಕ್ಕಿಂತ ಕೆಳಗಿನ 43% ಮಕ್ಕಳು ಕಡಿಮೆತೂಕವುಳ್ಳರಾಗಿದ್ದು(BMI<18.5)ವಿಶ್ವದಲ್ಲೇ ಅತ್ಯಧಿಕವಾಗಿದೆ)[೪೩]. ಭಾರತದಲ್ಲಿ ಒಟ್ಟಾರೆ ಬಡತನದ ಇಳಿಮುಖ ನಿರೂಪಿಸುವ ಅನೇಕ ಅಂಕಿಅಂಶಗಳ ಕ್ರಮಬದ್ಧತೆ ಮತ್ತು ಭಾರತದಲ್ಲಿ ಬಡತನವು ಗಮನಾರ್ಹವಾಗಿ ಇಳಿಮುಖವಾಗಿದೆಯೆಂದು ಭಾರತದ ಮಾಜಿ ವಿತ್ತಸಚಿವ ಯಶವಂತ ಸಿನ್ಹಾ ಘೋಷಣೆಯನ್ನು ಅರ್ಥಶಾಸ್ತ್ರಜ್ಞ ಪ್ರವೀಣ್ ವಿಸಾರಿಯ ಸಮರ್ಥಿಸಿಕೊಂಡಿದ್ದಾರೆ. 1999-2000 ಸಮೀಕ್ಷೆಯು ಉತ್ತಮ ವಿನ್ಯಾಸ ಮತ್ತು ಮೇಲ್ವಿಚಾರಣೆಯಿಂದ ಕೂಡಿದೆಯೆಂದು ಪ್ರತಿಪಾದಿಸಿರುವ ಅವರು,ಭಾರತದ ಬಡತನದ ಬಗ್ಗೆ ಪೂರ್ವಭಾವಿ ಕಲ್ಪನೆಗಳಿಗೆ ಹೊಂದಿಕೊಳ್ಳುವುದಿಲ್ಲವೆಂದು ಕಂಡ ಹಿನ್ನೆಲೆಯಲ್ಲಿ ಅದನ್ನು ಸಾರಾಸಗಟಾಗಿ ತಳ್ಳಿಹಾಕಲು ಆಗುವುದಿಲ್ಲವೆಂದು ಭಾವಿಸಿದ್ದಾರೆ.[೪೫] ನಿಕೋಲಾಸ್ ಸ್ಟರ್ನ್, ವಿಶ್ವಬ್ಯಾಂಕ್ ಉಪಾಧ್ಯಕ್ಷ ಬಡತನ ಇಳಿಮುಖದ ಅಂಕಿಅಂಶಗಳ ಸಮರ್ಥನೆಗಳನ್ನು ಪ್ರಕಟಿಸಿದ್ದಾರೆ. ಜಾಗತೀಕರಣದ ಹೆಚ್ಚಳ ಮತ್ತು ಬಂಡವಾಳ ಅವಕಾಶಗಳು ದೇಶದ ಬಡತನ ಇಳಿಮುಖಕ್ಕೆ ಗಮನಾರ್ಹ ಕಾಣಿಕೆಯನ್ನು ನೀಡಿದವೆಂದು ಅವರು ವಾದಿಸಿದ್ದಾರೆ. ತಲಾದಾಯದಲ್ಲಿ ತೀವ್ರಗತಿಯ ಏರಿಕೆಯಿಂದ ಜಾಗತೀಕರಣದ ಸ್ಪಷ್ಟ ಪ್ರವೃತ್ತಿಗಳನ್ನು ಭಾರತ ಚೀನಾದ ಜತೆ ತೋರಿಸಿದೆ.[೪೬]. ರಾಷ್ಟ್ರ ಸ್ವಾಮ್ಯದ ಅಸಂಘಟಿತ ವಲಯದ ಸಂಸ್ಥೆಗಳ(NCEUS)ರಾಷ್ಟ್ರೀಯ ಆಯೋಗದ 2007ನೇ ವರದಿಯಲ್ಲಿ 77% ಭಾರತೀಯರು ಅಥವಾ 836 ದಶಲಕ್ಷ ಜನರು ದಿನಕ್ಕೆ 20ರೂಪಾಯಿಗಳಿಗಿಂತ ಕಡಿಮೆ ಆದಾಯದಲ್ಲಿ ಜೀವಿಸುತ್ತಿದ್ದಾರೆ(USD 0.50 ಅಂದಾಜು,PPPಯಲ್ಲಿ USD 2.0)ಬಹುತೇಕ ಮಂದಿ ಅನೌಪಚಾರಿಕ ಕಾರ್ಮಿಕ ವಲಯದಲ್ಲಿ ಯಾವುದೇ ಉದ್ಯೋಗ ಅಥವಾ ಸಾಮಾಜಿಕ ಭದ್ರತೆಯಿಲ್ಲದೇ ಕಡುಬಡತನದಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ.[೪೭][೪೮] ಮಿಕಿನ್‌ಸೆ ಗ್ಲೋಬಲ್ ಇನ್‌ಸ್ಟಿಟ್ಯೂಟ್ 1985ರಲ್ಲಿ ನಡೆಸಿದ ಅಧ್ಯಯನದಲ್ಲಿ ಭಾರತದ ಜನಸಂಖ್ಯೆಯಲ್ಲಿ 93% ಜನರು ವರ್ಷಕ್ಕೆ 90,000ಕ್ಕಿಂತ ಕಡಿಮೆ ಆದಾಯದಲ್ಲಿ ಬದುಕಿದ್ದಾರೆ ಅಥವಾ ಪ್ರತಿ ವ್ಯಕ್ತಿಗೆ ಪ್ರತಿ ದಿನ ಒಂದು ಡಾಲರ್ ಆದಾಯ; 2005ರಲ್ಲಿ ಆ ಪ್ರಮಾಣವು ಸುಮಾರು ಅರ್ಧಕ್ಕೆ 54%ಗೆ ಕಡಿತಗೊಂಡಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಒಂದು ತಲೆಮಾರಿನ ಹಾದಿಯಲ್ಲಿ 103 ದಶಲಕ್ಷಕ್ಕೂ ಹೆಚ್ಚು ಜನರು ಹತಾಶ ಬಡತನದಿಂದ ಹೊರಬಂದಿದ್ದಾರೆ.

ಭಾರತ ಮುಂದಿನ 20 ವರ್ಷಗಳಲ್ಲಿ 7.3% ವಾರ್ಷಿಕ ಪ್ರಗತಿ ಸಾಧಿಸಿದರೆ,465 ದಶಲಕ್ಷ ಜನರನ್ನು ಬಡತನದಿಂದ ಮುಕ್ತಗೊಳಿಸಬಹುದೆಂದು ಅವು ಮುನ್ನಂದಾಜು ಮಾಡಿವೆ. ಜನಪ್ರಿಯ ಪರಿಕಲ್ಪನೆಗಳಿಗೆ ವಿರುದ್ಧವಾಗಿ ಈ ಪ್ರಗತಿಯಿಂದ ಗ್ರಾಮೀಣ ಭಾರತ ಅನುಕೂಲ ಪಡೆದಿದೆ:ತೀರಾ ಗ್ರಾಮೀಣ ಬಡತನವು 1985ರಲ್ಲಿ 94%ನಿಂದ 2005ರಲ್ಲಿ 61%ಕ್ಕೆ ಕುಸಿದಿದೆ ಮತ್ತು 2025ರಲ್ಲಿ 26%ಗೆ ಕುಸಿಯುತ್ತದೆಂದು ಅವರು ಮುನ್ನಂದಾಜು ಮಾಡಿದ್ದಾರೆ. ಭಾರತದ ಆರ್ಥಿಕ ಸುಧಾರಣೆಗಳು ಮತ್ತು ಅದರ ಫಲವಾಗಿ ವೃದ್ಧಿಗೊಂಡ ಬೆಳವಣಿಗೆಯು ರಾಷ್ಟ್ರದ ಅತ್ಯಂತ ಯಶಸ್ವಿ ಬಡತನ ನಿಗ್ರಹ ಕಾರ್ಯಕ್ರಮಗಳಾಗಿವೆಂದು ಹೇಳುವುದರೊಂದಿಗೆ ವರದಿ ಸಮಾಪ್ತಿಯಾಗುತ್ತದೆ.[೪೯][೫೦][೫೧]

ಮಕ್ಕಳಲ್ಲಿ ಸತತ ಅಪೌಷ್ಠಿಕತೆ[ಬದಲಾಯಿಸಿ]

ನ್ಯೂಯಾರ್ಕ್ ಟೈಮ್ಸ್ ಪ್ರಕಾರ,ಭಾರತದ 42.5% ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆಂದು ಅಂದಾಜು ಮಾಡಲಾಗಿದೆ.[೫೨] ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಅಂದಾಜುಗಳನ್ನು ಉದಾಹರಿಸಿ ವಿಶ್ವಬ್ಯಾಂಕ್ "ವಿಶ್ವದ ಕಡಿಮೆತೂಕದ ಶೇಕಡ 49 ಮಕ್ಕಳು,ವಿಶ್ವದ ಕುಂಠಿತ ಬೆಳವಣಿಗೆಯ ಶೇಕಡ 34 ಮಕ್ಕಳು ಮತ್ತು ವಿಶ್ವದ ಕೃಶಶರೀರದ ಮಕ್ಕಳಲ್ಲಿ ಶೇಕಡ 46 ಭಾರತದಲ್ಲಿ ವಾಸವಿದ್ದಾರೆ" ಎಂದು ವಿವರಿಸಿದೆ. ಬಡತನವು ಮಕ್ಕಳಲ್ಲಿ ಅಪೌಷ್ಠಿಕತೆಗೆ ಮುಖ್ಯ ಕಾರಣವೆಂದು ವಿಶ್ವಬ್ಯಾಂಕ್ ಗಮನಸೆಳೆದಿದ್ದು ,ಸಬ್ ಸಹರಾ ಆಫ್ರಿಕಾದ ರಾಷ್ಟ್ರಗಳಿಗೆ ಹೋಲಿಸಿದರೆ ದಕ್ಷಿಣ ಏಷ್ಯಾ ರಾಷ್ಟ್ರಗಳು ಮೇಲ್ಮಟ್ಟದ ಆರ್ಥಿಕ ಪ್ರಗತಿ ಸಾಧಿಸಿದ್ದರೂ ಕೂಡ, ದಕ್ಷಿಣ ಏಷ್ಯಾ ಮಗುವಿಗೆ ಮೇಲ್ದರ್ಜೆಯ ಪೌಷ್ಠಿಕತೆ ಒದಗಿಸುವುದರಲ್ಲಿ ಪರಿವರ್ತನೆಯಾಗಿಲ್ಲ ಎಂದು ವಿಶ್ವಬ್ಯಾಂಕ್ ಗಮನ ಸೆಳೆದಿದೆ.[೫೩] ಸಬ್-ಸಹರಾ ಆಫ್ರಿಕಾಗಿಂತ ಭಾರತದಲ್ಲಿ ಅಪೌಷ್ಠಿಕತೆ ಪ್ರಮಾಣವು ಎರಡು ಪಟ್ಟಿದೆಯೆಂದು ಭಾರತದ ಸುಪ್ರೀಂಕೋರ್ಟ್ ವಿಶೇಷ ಆಯೋಗವು ಗಮನಸೆಳೆದಿದೆ.[೫೪]

ಇದನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. ೧.೦ ೧.೧ ಪಾವರ್ಟಿ ಎಸ್ಟಿಮೇಟ್ಸ್ ಫಾರ್ 2004-05, ಯೋಜನಾ ಆಯೋಗ,ಭಾರತ ಸರ್ಕಾರ, ಮಾರ್ಚ್ 2007, ಆಗಸ್ಟ್ 25, 2007ರಂದು ಮರುಸಂಪಾದಿಸಿದೆ.
 2. "ಆರ್ಕೈವ್ ನಕಲು". Archived from the original on 2010-02-11. Retrieved 2010-06-17.
 3. ."New Global Poverty Estimates — What it means for India". World Bank. Archived from the original on 2012-05-06. Retrieved 2010-06-17.
 4. ೪.೦ ೪.೧ ೪.೨ ""Inclusive Growth and Service delivery: Building on India's Success"" (PDF). World Bank. 2006. Retrieved 2007-04-28.
 5. http://news.bbc.co.uk/2/hi/in_depth/8309979.stm
 6. "ಆರ್ಕೈವ್ ನಕಲು". Archived from the original on 2010-06-10. Retrieved 2010-06-17.
 7. "ಆರ್ಕೈವ್ ನಕಲು". Archived from the original on 2012-11-07. Retrieved 2010-08-08.
 8. "Fact Sheet: Gini Coefficient" (PDF). Source: The World Bank (2004) and Census and Statistics Department (2002). Legislative Council Secretariat Hong Kong. Retrieved 2007-08-01. Note: The Gini coefficient in this datasheet is calculated on a scale of 0 to 1 and not 0 to 100. Hence, on a scale of 100 India's Gini coefficient (1999-2000) is 32.5 rather than 3.25
 9. [http://www.economist.com/surveys/displaystory.cfm?story_id=12749719&fsrc=rss ಎ ಸ್ಪೆಷಲ್ ರಿಪೋರ್ಟ್ ಆನ್ ಇಂಡಿಯ: ರೂಲಡ್ ಬೈ ಲಕ್ಷ್ಮಿ ಡಿಸೆಂಬರ್ 11, 2008 ಫ್ರಂ ದಿ ಎಕನಾಮಿಸ್ಟ್ ಪ್ರಿಂಟ್ ಎಡಿಷನ್]
 10. "Development Policy Review". World Bank. Archived from the original on 2010-03-16. Retrieved 2010-06-17.
 11. Page, Jeremy (February 22, 2007). ""Indian children suffer more malnutrition than in Ethiopia"". The Times. Retrieved 2007-04-28.
 12. ಈ ಅಂಕಿಅಂಶವು ಸಮೀಕ್ಷೆ ಮಾಡಿದ ವಿಧಿವಿಧಾನಕ್ಕೆ ತೀವ್ರ ಸಂವೇದಿಯಾಗಿದೆ. ಏಕರೂಪ ಮರುಸ್ಮರಣೆ ಅವಧಿ (URP) 27.5% ನೀಡುತ್ತದೆ. ಮಿಶ್ರಿತ ಮರುಸ್ಮರಣೆ ಅವಧಿ (MRP)21.8% ಅಂಕಿಅಂಶವನ್ನು ನೀಡುತ್ತದೆ.
 13. ಪ್ಲಾನಿಂಗ್ ಕಮೀಷನ್ ಆಫ್ ಇಂಡಿಯ.ಪಾವರ್ಟಿ ಎಸ್ಟಿಮೇಟ್ಸ್ ಫಾರ್ 2004-2005
 14. "Nearly 80 Percent of India Lives On Half Dollar A Day". Reuters. August 10, 2007. Retrieved 2007-08-15.
 15. "Households Availing Banking Services with Households in India" (PDF). Town and Country Planning Organisation, Ministry of Urban Affairs. 2001. Retrieved 2009-07-31.[ಶಾಶ್ವತವಾಗಿ ಮಡಿದ ಕೊಂಡಿ]
 16. "Department of Telecom, memo Feb 2009" (PDF). Department of Telecommunication of India. 2009.
 17. A 'ಬ್ರೋಕನ್ ಪೀಪಲ್'ಇನ್ ಬೂಮಿಂಗ್ ಇಂಡಿಯ - ದಿ ವಾಷಿಂಗ್ಟನ್ ಪೋಸ್ಟ್, ಜೂನ್ 21, 2007
 18. ಅನ್‌ಟಚೇಬಲ್, S. M. ಮೈಕೇಲ್ ಅವರಿಂದ.
 19. ವಿಲಿಯಂ ಎ.ಹವಿಲ್ಯಾಂಡ್, ಆಂಥ್ರೋಪೊಲೊಜಿ: ದಿ ಹ್ಯೂಮನ್ ಚಾಲೆಂಜ್ , 10 ಎಡಿಷನ್,ಥಾಮ್ಸ್‌ಸನ್ ವಾಡ್ಸ್‌ವರ್ಥ್, 2005, ISBN 0534623611, p. 575.'
 20. ಮೆಂಡೆಲ್‌ಸಾನ್, ಆಲಿವರ್ & ವಿಕ್ಜಿಯಾನಿ, ಮಾರಿಯ, "ದಿ ಅನ್‌ಟಚೇಬಲ್ಸ್, ಸಬೋರ್ಡಿನೇಷನ್, ಪಾವರ್ಟಿ ಅಂಡ್ ದಿ ಸ್ಟೇಟ್ ಇನ್ ಮಾಡರ್ನ್ ಇಂಡಿಯ", ಕೇಂಬ್ರಿಜ್ ಯೂನಿವರ್ಸಿಟಿ ಪ್ರೆಸ್, 1998
 21. ಕೇವಿನ್ ರೈಲಿ, ಸ್ಟೀಫನ್ ಕಾಫ್‌ಮನ್, ಏಂಜೆಲಾ ಬೊಡೈನೊ,ರೇಸಿಸಂ: ಎ ಗ್ಲೋಬಲ್ ರೀಡರ್ P21, M.E. ಶಾರ್ಪ್, 2003 ISBN 0765610604.
 22. ...ಫಾಲ್ ಆಫ್ ಎನ್ ಎಂಪೈರ್
 23. [೧]
 24. ೨೪.೦ ೨೪.೧ http://www.ggdc.net/maddison/articles/moghul_3.pdf
 25. MEGHNAD DESAI (2003). "INDIA and CHINA: AN ESSAY IN COMPARATIVE POLITICAL ECONOMY" (PDF). IMF.
 26. ರಿಡಿಫೈನಿಂಗ್ ದಿ ಹಿಂದು ರೇಟ್ ಆಫ್ ಗ್ರೋಥ್. ದಿ ಫೈನಾನ್ಸಿಯಲ್ ಎಕ್ಸ್‌ಪ್ರೆಸ್
 27. "Industry passing through phase of transition". The Tribune India. Archived from the original on 2008-07-06. Retrieved 2010-06-17.
 28. ಸ್ಟ್ರೀಟ್ ಹಾಕಿಂಗ್ ಪ್ರಾಮಿಸ್ ಜಾಬ್ಸ್ ಇನ್ ಫ್ಯೂಚರ್ Archived 2008-03-29 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಟೈಮ್ಸ್ ಆಫ್ ಇಂಡಿಯ, 2001-11-25
 29. ದಿ ಇಂಡಿಯ ರಿಪೋರ್ಟ್ Archived 2009-01-14 ವೇಬ್ಯಾಕ್ ಮೆಷಿನ್ ನಲ್ಲಿ.. ಆಸ್ಟೈರ್ ರಿಸರ್ಚ್
 30. India: the economy. Published in 1998 by BBC.
 31. "What Went Wrong: Derailing after the 1950s".
 32. Datt, Ruddar & Sundharam, K.P.M. "22". Indian Economy. pp. 367, 369, 370.{{cite book}}: CS1 maint: multiple names: authors list (link)
 33. "Sarkaritel.com : ಕಾರ್ಪೊರೇಟ್ ನ್ಯೂಸ್ & ಫೀಚರ್ಸ್ : ಹೈಲೈಟ್ಸ್ ಆಫ್ ಎಕನಾಮಿಕ್ ಸರ್ವೆ 2004-2005". Archived from the original on 2009-01-12. Retrieved 2010-06-17.
 34. India Archived 2008-06-11 ವೇಬ್ಯಾಕ್ ಮೆಷಿನ್ ನಲ್ಲಿ. CIA ವರ್ಲ್ಡ್ ಫ್ಯಾಕ್ಟ್ ಬುಕ್ ಆಗಸ್ಟ್‌ 7, 2008 ಅಗಸ್ಟ್ 20, 2008ರಲ್ಲಿ ಮರು ಸಂಪಾದನೆ.
 35. "Dr. ಮಾರ್ವಿನ್ J, ಸೆಟ್ರಾನ್". Archived from the original on 2012-02-04. Retrieved 2010-06-17.
 36. "ಆರ್ಕೈವ್ ನಕಲು". Archived from the original on 2009-06-26. Retrieved 2010-08-08.
 37. [61] ^ [60]
 38. "ಆರ್ಕೈವ್ ನಕಲು". Archived from the original on 2010-01-30. Retrieved 2010-06-17.
 39. "ಆರ್ಕೈವ್ ನಕಲು". Archived from the original on 2010-08-24. Retrieved 2010-08-08.
 40. [೨][ಶಾಶ್ವತವಾಗಿ ಮಡಿದ ಕೊಂಡಿ]
 41. [೩]
 42. "ಆರ್ಕೈವ್ ನಕಲು". Archived from the original on 2010-11-23. Retrieved 2010-06-17.
 43. ೪೩.೦ ೪೩.೧ [೪]
 44. ದಿ ಮಲ್ಟಿ‌ಡೈಮೆನ್ಶನ್ಸ್ ಆಫ್ ಅರ್ಬನ್ ಪಾವರ್ಟಿ ಇನ್ ಇಂಡಿಯ Archived 2006-06-19 ವೇಬ್ಯಾಕ್ ಮೆಷಿನ್ ನಲ್ಲಿ.,ಸೆಂಟರ್ ಡೆ ಸೈನ್ಸಸ್ ಹುಮೇನ್ಸ್ - ನಿವ್ ಡೆಲ್ಲಿ
 45. ಲಿಫ್ಟಿಂಗ್ ದಿ ಪಾವರ್ಟಿ ವೈಲ್ Archived 2010-08-11 ವೇಬ್ಯಾಕ್ ಮೆಷಿನ್ ನಲ್ಲಿ. J. ರಮೇಶ್, ಇಂಡಿಯ ಟುಡೆ
 46. ವರ್ಲ್ಡ್ ಬ್ಯಾಂಕ್ ICRIER
 47. ನಿಯರ್ಲಿ 80 ಪರ್ಸೆಂಟ್ ಲೀವ್ಸ್ ಆನ್ ಹಾಫ್ ಡಾಲರ್ ಎ ಡೆ, ರಾಯ್ಟರ್ಸ್,ಆಗಸ್ಟ್ 10, 2007., ಆಗಸ್ಟ್ 15, 2007 ರಂದು ಮರುಸಂಪಾದಿಸಿದೆ.
 48. "ರಿಪೋರ್ಟ್ಸ್ ಆನ್ ಕಂಡೀಷನ್ಸ್ ಆಫ್ ವರ್ಕ್ ಅಂಡ್ ಪ್ರೊಮೋಷನ್ ಆಫ್ ಲೈವ್ಲಿಹುಡ್ಸ್ ಇನ್ ದಿ ಅನ್‌ಆರ್ಗ‌ನೈಸ್ಡ್ ಸೆಕ್ಟರ್"ಅಸಂಘಟಿತ ವಲಯದ ಸಂಸ್ಥೆಗಳ ರಾಷ್ಟ್ರೀಯ ಆಯೋಗ,ಭಾರತ ಸರ್ಕಾರ, ಆಗಸ್ಟ್ ,2007, ಆಗಸ್ಟ್ 25, 2007ರಂದು ಮರುಸಂಪಾದಿಸಿದೆ.
 49. "ಆರ್ಕೈವ್ ನಕಲು". Archived from the original on 2008-01-01. Retrieved 2021-08-10.
 50. "ಇಂಡಿಯಾಸ್ ಮಿ ಡಲ್ ಕ್ಲಾಸ್ - ಟ್ರಾಕಿಂಗ್ ದಿ ಗ್ರೋಥ್ ಆಫ್ ಇಂಡಿಯಾಸ್ ಮಿಡಲ್ ಕ್ಲಾಸ್ - ಎಕನಾಮಿಕ್ ಸ್ಟಡೀಸ್ - ಕಂಟ್ರಿ ರಿಪೋರ್ಟ್ಸ್ - ದಿ ಮಿಕೆನ್ಸೆ ಕ್ವಾರ್ಟರ್ಲಿ". Archived from the original on 2008-07-15. Retrieved 2010-06-17.
 51. ದಿ ಟ್ರಿಬ್ಯೂನ್, ಚಂಡೀಗಢ್, ಇಂಡಿಯ - ಬಿಸಿನೆಸ್
 52. https://www.nytimes.com/2009/03/13/world/asia/13malnutrition.html?_r=1
 53. "'India has highest number of underweight children'". The Indian Express. 2009-04-14. Retrieved 2009-04-28.
 54. http://www.medindia.net/news/Malnutrition-Among-Indian-Children-Worse-Than-in-Sub-Saharan-Africa-30955-1.htm

ಹೆಚ್ಚಿನ ಓದಿಗೆ[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]