ಬ್ಯಾಸ್ಕೆಟ್‌ಬಾಲ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬ್ಯಾಸ್ಕೆಟ್‌ಬಾಲ್‌
Michael Jordan goes for a slam dunk at the old Boston Garden
ಪ್ರಮುಖ ಆಡಳಿತ ನಡೆಸು ಮಂಡಳಿ FIBA
ಮೊದಲ ಆಟ1891, Springfield, Massachusetts, USA
ವಿಶೇಷಗುಣಗಳು
ಸಂಬಂಧContact
ತಂಡ ಸದಸ್ಯರುಗಳು13 to 15 (5 at a time)
ಕಲ ಲಿಂಗSingle
ವರ್ಗೀಕರಣIndoor or Outdoor
ಸಲಕರಣೆBasketball
ಒಲಿಂಪಿಕ್1936

ಬ್ಯಾಸ್ಕೆಟ್‌ಬಾಲ್ ಒಂದು ಸಾಂಘಿಕ ಆಟವಾಗಿದ್ದು, ೫ ಆಟಗಾರರ ಎರಡು ತಂಡಗಳು ಸಂಘಟಿತ ನಿಯಮದಡಿ ೧೦ ಅಡಿ (೩.೦೪೮ ಮೀ) ಎತ್ತರದ ಹೂಪ್‍ನಲ್ಲಿ (ಗೋಲ್ ) ಚೆಂಡನ್ನು ಹಾಕುವ ಮೂಲಕ ಹೆಚ್ಚು ಅಂಕಗಳಿಸಲು ಪರಸ್ಪರ ಸೆಣಸಾಡುತ್ತವೆ. ಬ್ಯಾಸ್ಕೆಟ್‌ಬಾಲ್‌ ಒಂದು ಸುಪ್ರಸಿದ್ಧ ಹಾಗೂ ಪ್ರಪಂಚದಾದ್ಯಂತ ವ್ಯಾಪಕವಾಗಿ ವೀಕ್ಷಿಸುವ ಆಟ.[೧]

ಚೆಂಡನ್ನು ಮೇಲಿಂದ ಬ್ಯಾಸ್ಕೆಟ್‌‍ನೊಳಗೆ ಎಸೆಯುವುದು, ಗೋಲು ಉಂಗುರಕ್ಕೆ ಚೆಂಡನ್ನು ಹಾಕುವುದು ಮತ್ತು ಹೊಡೆಯುವುದು, ಅಥವಾ ಯಾವುದೇ ದೂರದಿಂದ ಚೆಂಡನ್ನು ಬ್ಯಾಸ್ಕೆಟ್‌‍ನೊಳಗೆ ಹಾಕುವುದು ಇತ್ಯಾದಿ ಇತರಾವುದೇ ಚಮತ್ಕಾರಗಳ ಮೂಲಕ ಅಂಕಗಳನ್ನು ಗಳಿಸಬಹುದು. ಆಟದ ಕೊನೆಯಲ್ಲಿ ಹೆಚ್ಚು ಅಂಕಗಳಿಸುವ ತಂಡ ಜಯಶೀಲವಾಗುತ್ತದೆ, ಆದರೆ ಉಭಯ ತಂಡಗಳು ಸಮಾನ ಅಂಕಗಳನ್ನು ಪಡೆದಾಗ ಹೆಚ್ಚುವರಿ ಸಮಯವನ್ನು (ಅಧಿಕಾವಧಿ) ನೀಡಲಾಗುತ್ತದೆ. ತಂಡದ ಆಟಗಾರರು ತಮ್ಮೊಳಗೆ ಚೆಂಡನ್ನು ಪುಟಿಸುತ್ತಾ ಅಥವಾ ಒಬ್ಬರಿಗೊಬ್ಬರು ಕಳಿಸುತ್ತಾ(ಸ್ವಲ್ಪ ಸ್ವಲ್ಪವೇ ಮುಂದಕ್ಕೆ ತೆಗೆದುಕೊಂಡು ಹೋಗು ) ಮುಂದೆ ತೆಗೆದುಕೊಂಡು ಹೋಗುತ್ತಾರೆ. ಆಟದ ವೇಳೆ ಅಡ್ಡಿಪಡಿಸುವ ರೀತಿಯ ಶಾರೀರಿಕವಾಗಿ ತಾಗುವುದು (ಫೌಲ್ ) ದಂಡನೀಯವಾದುದು ಮತ್ತು ಚೆಂಡನ್ನು ಎಸೆಯುವಾಗ ಆಟಗಾರ ಫೌಲ್ ಆದರೆ ಫ್ರೀ-ಥ್ರೋ (ಫ್ರೀ-ಥ್ರೋ=ಚೆಂಡನ್ನು ಅವಿರೋಧವಾಗಿ ಗೋಲಿನತ್ತ ಎಸೆಯುವ ಅವಕಾಶ)ಗಳನ್ನು ನೀಡಲಾಗುತ್ತದೆ, ಅಲ್ಲದೆ ಚೆಂಡನ್ನು ಯಾವ ರೀತಿಯಲ್ಲಿ ಹಿಡಿಯಬೇಕು ಎಂಬುದಕ್ಕೆ ನಿರ್ಬಂಧಗಳಿವೆ (ಉಲ್ಲಂಘನೆಗಳು ).

ಚೆಂಡು ಎಸೆಯುವಿಕೆ, ಚೆಂಡನ್ನು ಒಬ್ಬರಿಂದೊಬ್ಬರಿಗೆ ಮತ್ತು ಮುಂದಕ್ಕೆ ಸಾಗಿಸುವ ಕ್ರಮ, ಆಟಗಾರರ ಸ್ಥಾನಗಳು, ಆಕ್ರಮಣಕಾರಿ ಹಾಗೂ ರಕ್ಷಣಾ ವ್ಯೂಹಗಳು ಹಲವು ಸಾಮಾನ್ಯ ತಂತ್ರಗಳನ್ನು ಒಳಗೊಂಡು ಬ್ಯಾಸ್ಕೆಟ್‌ಬಾಲ್‌ ಕಾಲಕ್ರಮೇಣದಲ್ಲಿ ಅಭಿವೃದ್ಧಿಗೊಂಡಿದೆ. ತಂಡದಲ್ಲಿನ ಎತ್ತರದ ಆಟಗಾರರು ಮಧ್ಯ (ಸೆಂಟರ್‍) ದಲ್ಲಿ ಅಥವಾ ಎರಡು ಮುಂಚೂಣಿ (ಫಾರ್ವರ್ಡ್) ಯ ಸ್ಥಾನಗಳ ಪೈಕಿ ಒಂದರಲ್ಲಿ ಆಡುತ್ತಾರೆ. ಕುಳ್ಳ ಆಟಗಾರರು ಅಥವಾ ಚೆಂಡು ನಿರ್ವಹಣೆ ಕೌಶಲ್ಯ ಮತ್ತು ವೇಗವನ್ನು ಹೊಂದಿರುವ ಆಟಗಾರರು ರಕ್ಷಕ (ಗಾರ್ಡ್‍‌) ಸ್ಥಾನಗಳಲ್ಲಿ ಆಡುತ್ತಾರೆ. ಸ್ಪರ್ಧಾತ್ಮಕ ಬ್ಯಾಸ್ಕೆಟ್‌ಬಾಲ್‌ ಆಟವನ್ನು ಜಾಗರೂಕತೆಯಿಂದ ನಿಯಂತ್ರಿಸಲಾಗುತ್ತದೆ, ಆದರೆ ಸಾಮಾನ್ಯ ಆಟಗಳಿಗೋಸ್ಕರ ಬ್ಯಾಸ್ಕೆಟ್‌ಬಾಲ್‌ನಲ್ಲಿ ಹಲವು ಮಾರ್ಪಾಡುಗಳಾಗಿವೆ. ಕೆಲವು ದೇಶಗಳಲ್ಲಿ ಬ್ಯಾಸ್ಕೆಟ್‌ಬಾಲ್‌ ಜನಪ್ರಿಯ ಪ್ರದರ್ಶನ ಆಟವೂ ಹೌದು.

ಸ್ಪರ್ಧಾತ್ಮಕ ಬ್ಯಾಸ್ಕೆಟ್‌ಬಾಲ್‌ ಪ್ರಧಾನವಾಗಿ ಬ್ಯಾಸ್ಕೆಟ್‌ಬಾಲ್‌ ಅಂಕಣದಲ್ಲಿ ಆಡುವ ಒಂದು ಒಳಾಂಗಣ ಆಟ. ವಿಶೇಷ ನಿಯಮಗಳೇನೂ ಇಲ್ಲದ ಹೊರಾಂಗಣದ ಬ್ಯಾಸ್ಕೆಟ್‌ಬಾಲ್‌ ನಗರದ ಒಳಭಾಗಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ.

ಇತಿಹಾಸ[ಬದಲಾಯಿಸಿ]

ಮೊದಲ ಬ್ಯಾಸ್ಕೆಟ್‌ಬಾಲ್‌ ಅಂಕಣ: ಸ್ಪ್ರಿಂಗ್‌ಫೀಲ್ಡ್‌ ಕಾಲೇಜು.

ಆರಂಭದ ನಿಯಮಗಳು, ಅಂಕಣ ಮತ್ತು ಆಟ[ಬದಲಾಯಿಸಿ]

USAಯ ಮೆಸ್ಸಾಚುಸೆಟ್ಸ್‌ನ ಸ್ಪ್ರಿಂಗ್‌ಫೀಲ್ಡ್‌ನಲ್ಲಿರುವ ಇಂಟರ್‌ನ್ಯಾಷನಲ್ ಯಂಗ್ ಮೆನ್ಸ್ ಕ್ರಿಶ್ಚಿಯನ್ ಅಸೋಸಿಯೇಷನ್ ಟ್ರೈನಿಂಗ್ ಸ್ಕೂಲ್‌ನಲ್ಲಿ [೨] (YMCA) (ಇಂದು, ಸ್ಪ್ರಿಂಗ್‌ಫೀಲ್ಡ್ ಕಾಲೇಜು) ದೈಹಿಕ ಶಿಕ್ಷಣ ಪ್ರಾಧ್ಯಾಪಕ ಮತ್ತು ಬೋಧಕರಾಗಿದ್ದ ಕೆನಡಾ ಸಂಜಾತ ಡಾ. ಜೇಮ್ಸ್ ನೈಸ್ಮಿತ್[೩] ಅವರು ನ್ಯೂ ಇಂಗ್ಲೆಂಡ್‌ನ ದೀರ್ಘಾವಧಿಯ ಚಳಿಗಾಲದ ವೇಳೆ ತಮ್ಮ ವಿದ್ಯಾರ್ಥಿಗಳ ದೈಹಿಕ ಕ್ಷಮತೆ ಕಾಪಾಡುವುದು ಮತ್ತು ವಿದ್ಯಾರ್ಥಿಗಳನ್ನು ಸದಾ ಚಟುವಟಿಕೆಗಳಲ್ಲಿ ನಿರತರಾಗಿಸುವ ನಿಟ್ಟಿನಲ್ಲಿ ೧೮೯೧ರ ಡಿಸೆಂಬರ್‌ನ ಆರಂಭದಲ್ಲಿ ಈ ಒಳಾಂಗಣ ಆಟವನ್ನು ಕಂಡುಹಿಡಿದರು. ವ್ಯಾಯಾಮ ಶಾಲೆಗಳಿಗೆ ಸೂಕ್ತವಾಗದ ಅಥವಾ ಸ್ವಲ್ಪ ಮಟ್ಟಿಗೆ ಮಾತ್ರ ಸರಿಹೊಂದುವ ಇತರ ಚಿಂತನೆಗಳನ್ನು ಕೈಬಿಟ್ಟ ಅವರು ಆಟ ಕುರಿತು ಮೂಲ ನಿಯಮಗಳನ್ನು ಬರೆದರು, ಮಾತ್ರವಲ್ಲದೆ ನೆಲದಿಂದ ೧೦ ಅಡಿ (೩.೦೫ ಮೀ) ಎತ್ತರಕ್ಕೆ ಪೀಚ್ ಬ್ಯಾಸ್ಕೆಟ್‌ನ್ನು ಮೊಳೆ ಹೊಡೆದು ಭದ್ರಪಡಿಸಿದರು. ಈ ಪೀಚ್ ಬ್ಯಾಸ್ಕೆಟ್ ಆಧುನಿಕ ಬ್ಯಾಸ್ಕೆಟ್‌ಬಾಲ್‌ ಬಲೆಯ ರೀತಿ ಇರದೆ ತಳಭಾಗವನ್ನು ಮಾತ್ರ ಹೊಂದಿತ್ತು. ಆದ್ದರಿಂದ ಪ್ರತೀ "ಬ್ಯಾಸ್ಕೆಟ್‌" ಅಥವಾ ಅಂಕ ಗಳಿಸಿದಾಗ ಚೆಂಡುಗಳನ್ನು ಕೈಯಾರೆ ಬ್ಯಾಸ್ಕೆಟ್‌ನಿಂದ ತೆಗೆಯಬೇಕಾಗಿತ್ತು; ಇದು ಸಮರ್ಪಕವಾಗಿರದ ಕಾರಣ ಬ್ಯಾಸ್ಕೆಟ್‌ನ ತಳಭಾಗದಲ್ಲಿ ತೂತುಮಾಡಲಾಯಿತು, ಇದರಿಂದಾಗಿ ಚೆಂಡುಗಳು ಒಳಬೆಣೆಯೊಂದಿಗೆ ಸರಾಗವಾಗಿ ಒಳತೂರಿ ಹೊರಬರುತ್ತಿದ್ದವು. ಅಂತಿಮವಾಗಿ ಬ್ಯಾಸ್ಕೆಟ್‌‍ನ ಹಿಂಬದಿಯಲ್ಲಿ ಲೋಹದ ಹೂಪ್ ಬರುವವರೆಗೆ ಅಂದರೆ ೧೯೦೬ರವರೆಗೆ ಈ ಪೀಚ್ ಬ್ಯಾಸ್ಕೆಟ್‌ಗಳನ್ನೇ ಬಳಸಲಾಗುತ್ತಿತ್ತು. ಚೆಂಡು ಸರಾಗವಾಗಿ ಹಾದುಹೋಗುವ ನಿಟ್ಟಿನಲ್ಲಿ ಇನ್ನೂ ಅನೇಕ ಬದಲಾವಣೆಗಳನ್ನು ಮಾಡಲಾಯಿತು, ಇವು ಇಂದಿನ ನಾವು ತಿಳಿದಿರುವ ಆಟಕ್ಕೆ ಸುಗಮ ನೆಲಗಟ್ಟು ಹಾಕಿಕೊಟ್ಟಿತು. ಬ್ಯಾಸ್ಕೆಟ್‌ಗಳಿಗೆ ಷೂಟ್ ಮಾಡಲು ಕಾಲ್ಚೆಂಡಾಟದ ಚೆಂಡುಗಳನ್ನು ಬಳಸಲಾಗುತ್ತಿತ್ತು. ಒಬ್ಬ ಆಟಗಾರನು ಒಮ್ಮೆ ಬ್ಯಾಸ್ಕೆಟ್‌ನಲ್ಲಿ ಚೆಂಡನ್ನು ಹಾಕಿದಾಗ ಅವನ ತಂಡ ಒಂದು ಅಂಕಗಳಿಸುತ್ತದೆ. ಹೆಚ್ಚು ಅಂಕಗಳಿಸುವ ತಂಡವು ಆಟವನ್ನು ಗೆಲ್ಲುತ್ತದೆ.[೪] ಸಾಮಾನ್ಯವಾಗಿ ಬ್ಯಾಸ್ಕೆಟ್‌ಗಳನ್ನು ಆಟದ ಅಂಕಣದ ಮಧ್ಯದ ಅಂತಸ್ತಿನ ಬಾಲ್ಕನಿಯಲ್ಲಿ ಹೊಡೆಯಲಾಗುತ್ತಿತ್ತು. ಆದರೆ ಬಾಲ್ಕನಿಯಲ್ಲಿರುವ ವೀಕ್ಷಕರು ಚೆಂಡು ಹೊಡೆಯುವುದಕ್ಕಾಗಿ ಮಧ್ಯಪ್ರವೇಶಿಸಲು ಆರಂಭಿಸಿದ್ದರಿಂದ ಇದು ಕಾರ್ಯಸಾಧ್ಯವಾಗಲಿಲ್ಲ. ಈ ಹಸ್ತಕ್ಷೇಪವನ್ನು ತಡೆಯುವುದಕ್ಕಾಗಿ ಹಲಗೆಯನ್ನು ಬಳಸಲಾಯಿತು; ಇದರಿಂದಾಗಿ ಹಿನ್ನೆಗೆತದ ಹೊಡೆತಗಳೂ ಸಾಧ್ಯವಾಯಿತು.[೫] ತಾನು ಕಂಡುಹಿಡಿದ ಹೊಸ ಆಟದ ಬಗ್ಗೆ ನೈಸ್ಮಿತ್‌ನಿಗೇ ಪೂರ್ಣ ಧೈರ್ಯವಿರಲಿಲ್ಲ ಎಂಬುದನ್ನು ಆತನ ಮೊಮ್ಮಗಳು ೨೦೦೬ರ ಆರಂಭದಲ್ಲಿ ಕಂಡುಹಿಡಿದ ಡೈರಿಯ ಕೈಬರಹಗಳು ಬಹಿರಂಗಪಡಿಸಿವೆ. ಅನೇಕ ಬಾರಿ ವೈಫಲ್ಯ ಕಂಡಿದ್ದ "ಡಕ್ ಆನ್ ಎ ರಾಕ್" ಎಂಬ ಮಕ್ಕಳ ಆಟದ ನಿಯಮಗಳನ್ನೇ ಬ್ಯಾಸ್ಕೆಟ್‌ಬಾಲ್‍ಗೂ ಅನ್ವಯಿಸಿದ್ದು ಇದಕ್ಕೆ ಕಾರಣ.

ತಾನು ಕಂಡು ಹಿಡಿದ ಹೊಸ ಆಟವನ್ನು ನೈಸ್ಮಿತ್ "ಬ್ಯಾಸ್ಕೆಟ್‌ಬಾಲ್" ಎಂದು ಕರೆದನು.[೬]

ಮೊದಲ ಅಧಿಕೃತ ಆಟವನ್ನು ೧೮೯೨ರ ಜನವರಿ ೨೦ರಲ್ಲಿ YMCA ಜಿಮ್ನೇಶಿಯಮ್‌ನಲ್ಲಿ ಒಂಬತ್ತು ಆಟಗಾರರೊಂದಿಗೆ ಆಡಲಾಯಿತು. ಆ ಆಟವು ೧-೦ರಲ್ಲಿ ಕೊನೆಗೊಂಡಿತ್ತು; ಮೊದಲ ಹೊಡೆತವನ್ನು 25 feet (7.6 m) ಈಗಿನ ಸ್ಟ್ರೀಟ್‌ಬಾಲ್ ಅಥವಾ ನ್ಯಾಶನಲ್ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್ (NBA) ಅಂಕಣದ ಅರ್ಧದಷ್ಟು ಗಾತ್ರದ ಅಂಕಣದಲ್ಲಿ ಹೊಡೆಯಲಾಗಿತ್ತು. ೧೮೯೭–೧೮೯೮ರ ಹೊತ್ತಿಗೆ ತಂಡದಲ್ಲಿ ತಲಾ ಐದು ಆಟಗಾರರಿರುವುದು ಪ್ರಮಾಣಿತವಾಯಿತು.

ಮಹಿಳೆಯರ ಬ್ಯಾಸ್ಕೆಟ್‌ಬಾಲ್‌[ಬದಲಾಯಿಸಿ]

ಸ್ಮಿತ್ ಕಾಲೇಜ್‍ನಲ್ಲಿ ದೈಹಿಕ ಶಿಕ್ಷಕಿಯಾಗಿದ್ದ ಸೆಂದ ಬೆರೆನ್ಸನ್ ೧೮೯೨ರಲ್ಲಿ ನೈಸ್ಮಿತ್‌ನ ನಿಯಮಗಳನ್ನು ಮಹಿಳೆಯರಿಗಾಗಿ ಮಾರ್ಪಡಿಸಿದಾಗ ಮಹಿಳೆಯರ ಬ್ಯಾಸ್ಕೆಟ್‌ಬಾಲ್ ಆರಂಭವಾಯಿತು. ಸ್ಮಿತ್‌ ಕಾಲೇಜ್‍ಗೆ ಸೇರಿಕೊಂಡು ಸ್ವಲ್ಪ ದಿನಗಳಲ್ಲೆ ಬೆರೆನ್ಸನ್ ಅವರು ಆಟದ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳುವುದಕ್ಕಾಗಿ ನೈಸ್ಮಿತ್‌ನಲ್ಲಿಗೆ ತೆರಳಿದರು.[೭] ಹೊಸ ಆಟ ಹಾಗೂ ಅದು ಕಲಿಸಬಹುದಾದ ಮೌಲ್ಯಗಳಿಂದ ಆಕರ್ಷಿತರಾದ ಅವರು ೧೮೯೩ ಮಾರ್ಚ್ ೨೧ರಲ್ಲಿ ಮೊದಲ ಬಾರಿಗೆ ಕಾಲೇಜು ವಿದ್ಯಾರ್ಥಿನಿಯರ ಬ್ಯಾಸ್ಕೆಟ್‌ಬಾಲ್ ಪಂದ್ಯವನ್ನು ಸಂಘಟಿಸಿದರು. ಈ ಪಂದ್ಯದಲ್ಲಿ ಸ್ಮಿತ್‌ನ ಹೊಸ ವಿದ್ಯಾರ್ಥಿಗಳು ಮತ್ತು ಹಿರಿಯ ವಿದ್ಯಾರ್ಥಿಗಳು ಪರಸ್ಪರ ಆಡಿದರು.[೮] ಬೆರೆನ್ಸನ್‍ರ ನಿಯಮಗಳು ೧೮೯೯ರಲ್ಲಿ ಪ್ರಥಮ ಬಾರಿಗೆ ಪ್ರಕಟವಾದವು. ಎರಡು ವರ್ಷಗಳ ನಂತರ ಬೆರೆನ್ಸನ್ A.G. ಸ್ಪಾಲ್ಡಿಂಗ್‌ನ ಮೊದಲ ಮಹಿಳಾ ಬ್ಯಾಸ್ಕೆಟ್‌ಬಾಲ್‌ ಮಾರ್ಗದರ್ಶಿಯ[೮] ಸಂಪಾದಕರಾದರು. ಈ ಮಾರ್ಗದರ್ಶಿಯು ಬೆರೆನ್ಸನ್‍ರ ಮಹಿಳೆಯರ ಬ್ಯಾಸ್ಕೆಟ್‌ಬಾಲ್ ಆವೃತ್ತಿಗಳನ್ನು ಮತ್ತಷ್ಟು ಪಸರಿಸಿತು.

ಹಠಾತ್ ಜನಪ್ರಿಯತೆ[ಬದಲಾಯಿಸಿ]

ಬ್ಯಾಸ್ಕೆಟ್‌ಬಾಲ್‌ನ ಆರಂಭಿಕ ಆಟಗಾರರನ್ನು ಅಮೇರಿಕಾ ಸಂಯುಕ್ತ ಸಂಸ್ಥಾನದುದ್ದಕ್ಕೂ YMCAಗೇ ಕಳುಹಿಸಲಾಗುತ್ತಿತ್ತು, ಇದು ಬಲುಬೇಗನೆ USA ಮತ್ತು ಕೆನಡಕ್ಕೂ ಪಸರಿಸಿತು. ೧೮೯೫ರ ವೇಳೆಗೆ ಬ್ಯಾಸ್ಕೆಟ್‌ಬಾಲ್‌ ಆಟವನ್ನು ಹಲವು ಮಹಿಳಾ ಪ್ರೌಢಶಾಲೆಗಳು ಸ್ವೀಕರಿಸಿಕೊಂಡವು. ಆಟದ ಅಭಿವೃದ್ಧಿ ಮತ್ತು ವ್ಯಾಪನೆಗೆ ಪ್ರಾರಂಭದಲ್ಲಿ YMCA ಮುಖ್ಯ ಪಾತ್ರವಹಿಸಿತ್ತು, ಆದರೆ ಕಠಿಣ ಆಟ ಮತ್ತು ಪುಂಡುಪೋಕರಿಗಳ ಗುಂಪುಗಳು YMCAಯ ಮೂಲ ಉದ್ದೇಶವನ್ನೇ ಹಾಳುಗೆಡವಿದ್ದರಿಂದ ಆಟ ಆರಂಭವಾಗಿ ದಶಕ ಪೂರೈಸುವಷ್ಟರಲ್ಲೇ ಈ ಹೊಸ ಆಟಕ್ಕೆ ಪ್ರೋತ್ಸಾಹ ನೀಡುವುದನ್ನು ಅದು ನಿಲ್ಲಿಸಿತು. ಆದರೆ ಇತರ ಹವ್ಯಾಸಿ ಕ್ಲಬ್‌ಗಳು, ಕಾಲೇಜುಗಳು ಮತ್ತು ವೃತ್ತಿಪರ ಕ್ಲಬ್‌ಗಳು ಈ ಶೂನ್ಯವನ್ನು ಬಹುಬೇಗನೆ ತುಂಬಿದವು. ವಿಶ್ವ ಸಮರ Iರ ಹಿಂದಿನ ವರ್ಷಗಳಲ್ಲಿ, ಎಮ್ಯಾಚುರ್ ಅಥ್ಲೆಟಿಕ್ ಯೂನಿಯನ್ ಮತ್ತು ಇಂಟರ್‌ಕಾಲೇಜಿಯೇಟ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ದ ಯುನೈಟೆಡ್ ಸ್ಟೇಟ್ಸ್ (NCAAಯ ಪೂರ್ವಜ) ಇವೆರಡೂ ಆಟದ ನಿಯಮಗಳ ಮೇಲೆ ಹಿಡಿತ ಸಾಧಿಸುವುದದಕ್ಕಾಗಿ ಪೈಪೋಟಿ ನಡೆಸುತ್ತಿದ್ದವು. ಆಟಗಾರರನ್ನು ಶೋಷಣೆಯಿಂದ ರಕ್ಷಿಸಲು ಮತ್ತು ಆಟದಲ್ಲಿನ ಒರಟುತನವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ೧೮೯೮ರಲ್ಲಿ 'ನ್ಯಾಶನಲ್ ಬ್ಯಾಸ್ಕೆಟ್‌ಬಾಲ್ ಲೀಗ್' ಸ್ಥಾಪನೆಯಾಯಿತು. ಈ ಸಂಘ ಐದು ವರ್ಷಗಳ ಕಾಲ ಮಾತ್ರ ಬಾಳಿತು.

ಬ್ಯಾಸ್ಕೆಟ್‌ಬಾಲ್‌ ಹಾಲ್ ಆಫ್ ಫೇಮ್ ಸ್ಥಾಪನೆ[ಬದಲಾಯಿಸಿ]

೧೯೫೦ರ ವೇಳೆಗೆ ಬ್ಯಾಸ್ಕೆಟ್‌ಬಾಲ್‌ ಪ್ರಮುಖ ಕಾಲೇಜು ಆಟವಾಯಿತು, ಇದು ವೃತ್ತಿಪರ ಬ್ಯಾಸ್ಕೆಟ್‌ಬಾಲ್‌ನಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದಕ್ಕೆ ದಾರಿಮಾಡಿಕೊಟ್ಟಿತು. ಮೊದಲ ಬಾರಿಗೆ ಬ್ಯಾಸ್ಕೆಟ್‌ಬಾಲ್‌ ಆಡಿದ್ದ ಸ್ಥಳ ಮೆಸ್ಸಾಚುಸೆಟ್ಸ್‌ನ ಸ್ಪ್ರಿಂಗ್‌ಫೀಲ್ಡ್‌ನಲ್ಲಿ ೧೯೫೯ರಲ್ಲಿ ಬ್ಯಾಸ್ಕೆಟ್‌ಬಾಲ್‌ ಹಾಲ್ ಆಫ್ ಫೇಮ್‍ ಸ್ಥಾಪನೆಯಾಯಿತು. ಶ್ರೇಷ್ಠ ಆಟಗಾರರು, ತರಬೇತುದಾರರು, ತೀರ್ಪುಗಾರರು ಮತ್ತು ಆಟದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದವರು ಮೊದಲಾದವರನ್ನು ಇದರ ಸರದಿಪಟ್ಟಿಯು ಒಳಗೊಂಡಿದೆ. ಅಲ್ಲದೆ ಬ್ಯಾಸ್ಕೆಟ್‌ಬಾಲ್‌ ಜೀವನ ವೃತ್ತಿಯಲ್ಲಿ ಅತ್ಯಧಿಕ ಗೋಲು ಬಾರಿಸಿದವರ ಹೆಸರನ್ನೂ ಈ ಹಾಲ್ ಆಫ್ ಫೇಮ್‌‍ಗೆ ಸೇರಿಸಿಕೊಳ್ಳಲಾಗಿದೆ.

ಸಾಧನ ಮತ್ತು ಕೌಶಲ್ಯದ ಅಭಿವೃದ್ಧಿ[ಬದಲಾಯಿಸಿ]

ಆರಂಭದಲ್ಲಿ ಬ್ಯಾಸ್ಕೆಟ್‌ಬಾಲ್‌ನ್ನು ಕಾಲ್ಚೆಂಡಾಟದ ಚೆಂಡಿನಿಂದ ಆಡಲಾಗುತ್ತಿತ್ತು. ಬ್ಯಾಸ್ಕೆಟ್‌ಬಾಲ್‌ಗೆಂದು ವಿಶೇಷವಾಗಿ ತಯಾರಿಸಿದ ಮೊದಲ ಚೆಂಡುಗಳು ಕಂದುಬಣ್ಣದ್ದಾಗಿದ್ದವು. ೧೯೫೦ರ ಉತ್ತರಾರ್ಧದಲ್ಲಿ (ಇಂತಹ ಪ್ರಯತ್ನ ಹಿಂದೆ ನಡೆದಿರಲಿಲ್ಲ) ಆಟಗಾರರು ಮತ್ತು ಪ್ರೇಕ್ಷಕರಿಗಿಬ್ಬರಿಗೂ ಸರಿಯಾಗಿ ಕಾಣಿಸುವ ಚೆಂಡಿಗಾಗಿ ಹುಡುಕಾಟ ನಡೆಸಿದ ಟೋನಿ ಹಿಂಕಲ್ ಕಿತ್ತಳೆ ಬಣ್ಣದ ಚೆಂಡನ್ನು ಪರಿಚಯಿಸಿದನು. ಈ ಚೆಂಡು ಈಗ ಸಾಮಾನ್ಯ ಬಳಕೆಯಲ್ಲಿದೆ. ತಂಡದ ಸಹ ಆಟಗಾರರಿಗೆ "ಬೌನ್ಸ್ ಪಾಸ್" ಮಾಡುವುದನ್ನು ಹೊರತುಪಡಿಸಿದರೆ, ಚೆಂಡನ್ನು ಪುಟಿಸುತ್ತಾ ಮುಂದುವರಿಯುವುದು ಮೂಲ ಆಟದ ಭಾಗವಲ್ಲ. ಚೆಂಡನ್ನು ಸಾಗಿಸುವುದರಿಂದಲೇ ಚೆಂಡಿನ ಚಲನೆಗೆ ಆರಂಭವಾಗಿತ್ತು.

ಚೆಂಡನ್ನು ಪುಟಿಸುತ್ತಾ ಮುಂದುವರಿಯುವುದನ್ನು ಅಂತಿಮವಾಗಿ ಅಳವಡಿಸಿಕೊಳ್ಳಲಾಯಿತು, ಆದರೆ ಆರಂಭದಲ್ಲಿದ್ದ ಚೆಂಡುಗಳ ಅಸಮಪಾರ್ಶ್ವ ರಚನೆಯಿಂದಾಗಿ ಇದು ನಿಯಂತ್ರಿಸಲ್ಪಟ್ಟಿತು. ಚೆಂಡು ತಯಾರಕರು ಚೆಂಡಿಗೆ ಸುಧಾರಿತ ರೂಪು ನೀಡಿದ ನಂತರ, ೧೯೫೦ರ ಸಂದರ್ಭದಲ್ಲಿ ಚೆಂಡನ್ನು ಪುಟಿಸುತ್ತಾ ಮುಂದುವರಿಯುವುದೇ ಆಟದ ಪ್ರಮುಖ ಭಾಗವಾಯಿತು.

ಐತಿಹಾಸಿಕ ಪೂರ್ವಚರಿತ್ರೆ[ಬದಲಾಯಿಸಿ]

ಬ್ಯಾಸ್ಕೆಟ್‌ಬಾಲ್‌, ನೆಟ್‌ಬಾಲ್, ಡಾಡ್ಜ್‌ಬಾಲ್, ವಾಲಿಬಾಲ್, ಮತ್ತು ಲಾಕ್ರೊಸ್ಸೆ ಇವುಗಳನ್ನು ಮಾತ್ರ ಉತ್ತರ ಅಮೇರಿಕನ್ನರು ಕಂಡುಹಿಡಿದ ಚೆಂಡಿನ ಆಟಗಳೆಂದು ಗುರುತಿಸಲಾಗಿದೆ. ಇತರ ಚೆಂಡಿನ ಆಟಗಳಾದ ಬೇಸ್‌ಬಾಲ್ ಮತ್ತು ಕೆನಡಿಯನ್ ಫುಟ್ಬಾಲ್‌ ಮೊದಲಾದವು ಕಾಮನ್‌ವೆಲ್ತ್ ಆಫ್ ನೇಷನ್ಸ್, ಯುರೋಪ್‌, ಏಷ್ಯಾ ಅಥವಾ ಆಫ್ರಿಕಾ ಜೊತೆ ಸಂಪರ್ಕವನ್ನು ಹೊಂದಿವೆ. ಬ್ಯಾಸ್ಕೆಟ್‌ಬಾಲ್‌ ಪ್ರಾಚೀನ ಮೆಸೊ ಅಮೇರಿಕನ್ ಚೆಂಡಿನಾಟದಿಂದ ಹುಟ್ಟಿಕೊಂಡಿದೆ ಎಂಬುದಕ್ಕೆ ಇದುವರೆಗೆ ಯಾವುದೇ ನಿಖರ ಸಾಕ್ಷ್ಯಾಧಾರಗಳು ಸಿಗದಿದ್ದರೂ, ಈ ಆಟದ ಕುರಿತ ಅರಿವು ನೈಸ್ಮಿತ್‌ ಸೃಷ್ಟಿಗಿಂತ ಕನಿಷ್ಠ ೫೦ ವರ್ಷಗಳ ಮುಂಚೆಯೇ ಇತ್ತು ಎಂಬುದು ಜಾನ್ ಲಾಯ್ಡ್ ಸ್ಟೀಫನ್ಸ್‌ ಮತ್ತು ಅಲೆಕ್ಸಾಂಡರ್ ವನ್ ಹಂಬಲ್ಡ್‌ನ ಬರವಣಿಗೆಗಳಿಂದ ವೇದ್ಯವಾಗುತ್ತದೆ. ವಿಶೇಷವಾಗಿ ಫ್ರೆಡರಿಕ್ ಕ್ಯಾಥರ್‌ವುಡ್‌ರ ರೇಖಾಚಿತ್ರಗಳನ್ನು ಹೊಂದಿರುವ ಸ್ಟೀಫನ್‌ನ ಕೃತಿಗಳು ೧೯ನೇ ಶತಮಾನದ ಬಹುತೇಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಲಭ್ಯವಾಗಿದೆ, ಹಾಗೂ ಅವು ವ್ಯಾಪಕವಾಗಿ ಪ್ರಚಾರ ಕಂಡು ಜನಪ್ರಿಯವಾಗಿದ್ದವು.

ಕಾಲೇಜು ಬ್ಯಾಸ್ಕೆಟ್‌ಬಾಲ್‌‌ ಆರಂಭಿಕ ಪ್ರಗತಿ[ಬದಲಾಯಿಸಿ]

ಡಾ. ಜೇಮ್ಸ್ ನೈಸ್ಮಿತ್ ಕಾಲೇಜು ಬ್ಯಾಸ್ಕೆಟ್‌ಬಾಲ್‌ ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹೆಸರಾಂತ ತರಬೇತುದಾರ ಪಾರೆಸ್ಟ್ "ಫಾಗ್" ಅಲೆನ್‌ಗೆ ಅಧಿಕಾರವನ್ನು ಹಸ್ತಾಂತರಿಸುವ ಮೊದಲು ಕನ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ನೈಸ್ಮಿತ್ ಆರು ವರ್ಷಗಳ ಕಾಲ ತರಬೇತುದಾರರಾಗಿದ್ದರು. ನೈಸ್ಮಿತ್‌ನ ಶಿಷ್ಯ ಎಮೋಸ್ ಎಲೋಂಜೊ ಸ್ಟ್ಯಾಗ್ ಬ್ಯಾಸ್ಕೆಟ್‌ಬಾಲ್‌ ಆಟವನ್ನು ಚಿಕಾಗೊ ವಿಶ್ವವಿದ್ಯಾನಿಲಯಕ್ಕೆ ತಂದನು. ಅಂತೆಯೇ ಕನ್ಸಾಸ್‌ನಲ್ಲಿ ನೈಸ್ಮಿತ್‌ನ ವಿದ್ಯಾರ್ಥಿಯಾಗಿದ್ದ ಅಡಾಲ್ಫ್ ರುಪ್ ಕೆಂಟುಕಿ ವಿಶ್ವವಿದ್ಯಾನಿಲಯದಲ್ಲಿ ತರಬೇತುದಾರನಾಗಿ ಉತ್ತಮ ಯಶಸ್ಸು ಕಂಡನು.

೧೮೯೫ರ ಫೆಬ್ರವರಿ ೯ರಲ್ಲಿ ಹ್ಯಾಮ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಮೊದಲ ಅಂತರ್‌ಕಾಲೇಜು ೫-ಆನ್-೫ ಪಂದ್ಯ ನಡೆಯಿತು, ಇದು ಹ್ಯಾಮ್ಲಿನ್ ಮತ್ತು ಮಿನ್ನ್‌ಸೊಟ ವಿಶ್ವವಿದ್ಯಾನಿಲಯಕ್ಕೆ ಸೇರಿದ ಕೃಷಿ ವಿಜ್ಞಾನ ಶಾಲೆಯ ನಡುವೆ ನಡೆಯಿತು.[೯][೧೦] ಕೃಷಿ ವಿಜ್ಞಾನ ಶಾಲೆಯು ೯-೩ ಅಂಕಗಳೊಂದಿಗೆ ಜಯಗಳಿಸಿತು.

೧೯೦೧ರಲ್ಲಿ ಚಿಕಾಗೊ ವಿಶ್ವವಿದ್ಯಾನಿಲಯ, ಕೊಲಂಬಿಯ ವಿಶ್ಯವಿದ್ಯಾನಿಲಯ, ದರ್ತ್‌ಮೌತ್ ಶಾಲೆ, ಮಿನ್ನ್‌ಸೊಟ ವಿಶ್ವವಿದ್ಯಾನಿಲಯ, U.S. ನೇವಲ್ ಅಕಾಡೆಮಿ, ಉತಾಹ್ ವಿಶ್ವವಿದ್ಯಾನಿಲಯ ಮತ್ತು ಯೇಲ್ ವಿಶ್ವವಿದ್ಯಾನಿಲಯ ಮೊದಲಾದ ಕಾಲೇಜುಗಳು ಪುರುಷರ ಆಟವನ್ನು ಪ್ರಾಯೋಜಿಸಲು ಶುರುಮಾಡಿದವು. ೧೯೦೫ರಲ್ಲಿ ಫುಟ್ಬಾಲ್ ಮೈದಾನದಲ್ಲಿ ಪದೇಪದೇ ಗಾಯಗಳು ಸಂಭವಿಸುತ್ತಿದ್ದ ಕಾರಣ ಅಧ್ಯಕ್ಷ ತಿಯೋಡರ್ ರೂಸ್‌ವೆಲ್ಟ್ ಅವರು ಕಾಲೇಜುಗಳೇ ಆಡಳಿತ ಸಮಿತಿಯನ್ನು ರಚಿಸಬೇಕೆಂದು ಸಲಹೆ ನೀಡಿದರು. ಇದು ಇಂಟರ್‌ಕಾಲೇಜಿಯೇಟ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ದಿ ಯುನೈಟೆಡ್ ಸ್ಟೇಟ್ಸ್ (IAAUS) ರಚನೆಗೆ ಕಾರಣವಾಯಿತು. ೧೯೧೦ರಲ್ಲಿ, ಅದರ ಹೆಸರು ನ್ಯಾಷನಲ್ ಕಾಲೇಜಿಯೇಟ್ ಅಥ್ಲೆಟಿಕ್ ಅಸೋಸಿಯೇಷನ್ (NCAA) ಎಂದು ಬದಲಾಯಿತು.

ಮಹಿಳಾ ಬ್ಯಾಸ್ಕೆಟ್‌ಬಾಲ್‌ ಆರಂಭಿಕ ಪ್ರಗತಿ[ಬದಲಾಯಿಸಿ]

ಮೊದಲ ಮಹಿಳಾ ಅಂತರ್‌ ಶಿಕ್ಷಣ ಸಂಸ್ಥೆಗಳ ಪಂದ್ಯವಾಳಿ ೧೮೯೧ರಲ್ಲಿ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯ ಮತ್ತು ಮಿಸ್ ಹೆಡ್ಸ್ ಸ್ಕೂಲ್ ನಡುವೆ ನಡೆಯಿತು. ಮೊದಲ ಮಹಿಳಾ ಅಂತರ್‌ಕಾಲೇಜು ಬ್ಯಾಸ್ಕೆಟ್‌ಬಾಲ್‌ ಪಂದ್ಯ ಸ್ಮಿತ್ ಕಾಲೇಜಿನಲ್ಲಿ ೧೮೯೩ರ ಮಾರ್ಚ್ ೨೧ರಲ್ಲಿ ಬೆರೆನ್ಸನ್‌ರ ಹೊಸ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳ ನಡುವೆ ನಡೆಯಿತು.[೧೧] ಅದೇ ವರ್ಷ ಮೌಂಟ್ ಹೊಲ್ಯೋಕ್ ಮತ್ತು ಸೋಫಿ ನ್ಯೂಕೊಂಬ್ ಕಾಲೇಜಿನ (ಕ್ಲೇರ ಗ್ರಿಗೋರಿ ಬೇರ್ ತರಬೇತು ನೀಡಿದ) ಮಹಿಳೆಯರು ಬ್ಯಾಸ್ಕೆಟ್‌ಬಾಲ್‌ ಆಡಲು ಆರಂಭಿಸಿದರು. ೧೮೯೫ರ ಹೊತ್ತಿಗೆ ವೆಲ್ಲೆಸ್ಲೆ, ವಸ್ಸಾರ್, ಮತ್ತು ಬ್ರೈನ್ ಮೌರ್ ಸೇರಿದಂತೆ ರಾಷ್ಟ್ರದಾದ್ಯಂತ ಎಲ್ಲ ಕಾಲೇಜುಗಳಲ್ಲಿ ಹರಡಿತು. ಮೊದಲ ಅಂತರ್‌ಕಾಲೇಜು ಮಹಿಳಾ ಪಂದ್ಯ ೧೮೯೬ರ ಎಪ್ರಿಲ್ ೪ರಲ್ಲಿ ನಡೆಯಿತು. ಸ್ಟ್ಯಾನ್‌ಫೋರ್ಡ್ ಮಹಿಳೆಯರು ಬರ್ಕೆಲೆಯ ವಿರುದ್ಧ ೯-ಆನ್-೯ರಲ್ಲಿ ಆಡಿದರು, ಮತ್ತು ಈ ಪಂದ್ಯದಲ್ಲಿ ೨-೧ರೊಂದಿಗೆ ಸ್ಟ್ಯಾನ್‌ಫೋರ್ಡ್ ಜಯಗಳಿಸಿತು.

ಆರಂಭದ ವರ್ಷಗಳಲ್ಲಿ ಮಹಿಳೆಯರ ಬ್ಯಾಸ್ಕೆಟ್‌ಬಾಲ್‌ ಬೆಳವಣಿಗೆಯು ಪುರುಷರ ಬ್ಯಾಸ್ಕೆಟ್‌ಬಾಲ್‌‌ಗಿಂತ ಹೆಚ್ಚು ವ್ಯವಸ್ಥಿತವಾಗಿತ್ತು. ೧೯೦೫ರಲ್ಲಿ ಅಮೇರಿಕನ್ ಫಿಸಿಕಲ್ ಎಜುಕೇಶನ್ ಅಸೋಸಿಯೇಷನ್‌ ಬ್ಯಾಸ್ಕೆಟ್‌ಬಾಲ್‌ ನಿಯಮಗಳ ಕಾರ್ಯನಿರ್ವಾಹಕ ಸಮಿತಿಯನ್ನು (ರಾಷ್ಟ್ರೀಯ ಮಹಿಳಾ ಬ್ಯಾಸ್ಕೆಟ್‌ಬಾಲ್‌ ಸಮಿತಿ) ರಚಿಸಿತು.[೧೨] ಇದರ ನಿಯಮಗಳು ಪ್ರತಿ ತಂಡದಲ್ಲಿ ಆರರಿಂದ ಒಂಬತ್ತು ಮಂದಿ ಆಟಗಾರರು ಮತ್ತು ೧೧ ಅಧಿಕಾರಿಗಳಿಗೆ ಅವಕಾಶ ನೀಡಿತು. ಇಂಟರ್‍‌‌ನ್ಯಾಶನಲ್ ವುಮೆನ್ಸ್ ಸ್ಪೋರ್ಟ್ಸ್ ಪೆಡರೇಶನ್ (೧೯೨೪) ಮಹಿಳೆಯರ ಬ್ಯಾಸ್ಕೆಟ್‌ಬಾಲ್‌ನ್ನೂ ಸ್ಪರ್ಧೆಗಳಲ್ಲಿ ಸೇರಿಸಿತು. ೩೭ ಮಹಿಳಾ ಪ್ರೌಢ ಶಾಲೆಗಳ ಪ್ರಥಮ ಕ್ರೀಡಾದಳ ಬ್ಯಾಸ್ಕೆಟ್‌ಬಾಲ್‌ ಅಥವಾ ರಾಜ್ಯ ಪಂದ್ಯಾವಳಿಗಳು ೧೯೨೫ರಲ್ಲಿ ನಡೆದವು. ಹಾಗೂ ೧೯೨೬ರಲ್ಲಿ ಎಮ್ಯಾಚುರ್ ಅಥ್ಲೆಟಿಕ್ ಯೂನಿಯನ್ ಸಂಪೂರ್ಣವಾಗಿ ಪುರುಷರ ನಿಯಮಗಳಿರುವ ಮೊದಲ ರಾಷ್ಟ್ರೀಯ ಮಹಿಳಾ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌ನ್ನು ಬೆಂಬಲಿಸಿತು.[೧೨]

ಆಲ್ಬರ್ಟಾದ ಎಡ್ಮಂಟನ್‌‌ನಲ್ಲಿ ನೆಲೆಸಿರುವ ಕೆನಾಡದ ಎಡ್ಮಂಟನ್ ಗ್ರ್ಯಾಡ್ಸ್ ಮಹಿಳಾ ಪ್ರವಾಸಿ ತಂಡ ೧೯೧೫ ಮತ್ತು ೧೯೪೦ರ ನಡುವೆ ಪಂದ್ಯಗಳನ್ನು ಆಡಿತು. ಇದು ಉತ್ತರ ಅಮೇರಿಕಾದಾದ್ಯಂತ ಪ್ರವಾಸ ಮಾಡಿ ಅಸಾಧಾರಣ ಯಶಸ್ಸು ಗಳಿಸಿತು. ತನಗೆ ಸವಾಲಾಗಿ ನಿಂತ ಎಲ್ಲ ತಂಡಗಳನ್ನು ಹಿಮ್ಮೆಟ್ಟಿಸಿ, ಆ ವರ್ಷಗಳಲ್ಲಿ ೫೨೨ ಗೆಲುವನ್ನು ದಾಖಲಿಸಿತು ಮತ್ತು ೨೦ ಪಂದ್ಯಗಳಲ್ಲಿ ಮಾತ್ರ ಸೋಲು ಕಂಡಿತ್ತು. ಪಂದ್ಯಕ್ಕೆ ಟಿಕೆಟ್ ನಿಗದಿಪಡಿಸುವುದರಿಂದ ಪ್ರವಾಸಕ್ಕೆ ಬೇಕಾದ ಹಣ ಜಮಾವಣೆಯಾಗುತ್ತಿತ್ತು.[೧೩] ಯುರೋಪ್‌ನ ಹಲವು ಪ್ರದರ್ಶನ ಪ್ರವಾಸಗಳಲ್ಲೂ ಗ್ರ್ಯಾಡ್ಸ್ ಮಿಂಚಿತು. ೧೯೨೪, ೧೯೨೮, ೧೯೩೨, ಮತ್ತು ೧೯೩೬ ನಾಲ್ಕು ಅನುಕ್ರಮ ಪ್ರದರ್ಶನ ಒಲಿಂಪಿಕ್ಸ್ ಪಂದ್ಯಾವಳಿಗಳನ್ನು ಗೆದ್ದುಕೊಂಡಿತು; ಹೀಗಿದ್ದರೂ ಮಹಿಳಾ ಬ್ಯಾಸ್ಕೆಟ್‌ಬಾಲ್ ೧೯೭೬ರವರೆಗೆ ಅಧಿಕೃತ ಒಲಿಂಪಿಕ್ ಕ್ರೀಡೆಯಾಗಿರಲಿಲ್ಲ. ಗ್ರ್ಯಾಡ್ಸ್‌ ತಂಡದ ಆಟಗಾರರು ವೇತನ ರಹಿತರಾಗಿದ್ದರು ಹಾಗೂ ಏಕಾಂಗಿಯಾಗಿರಬೇಕಾಗಿತ್ತು. ಗ್ರ್ಯಾಡ್ಸ್ ಶೈಲಿಯು ವೈಯಕ್ತಿಕ ಆಟಗಾರರ ಕೌಶಲ್ಯಕ್ಕೆ ಹೆಚ್ಚು ಮಹತ್ವ ನೀಡದೆ ತಂಡದ ಆಟಕ್ಕೆ ಪ್ರಾಮುಖ್ಯತೆ ಕೊಡುತ್ತಿತ್ತು.

ಮೊದಲ ಮಹಿಳಾ AAU ಆಲ್-ಅಮೇರಿಕಾ ತಂಡವನ್ನು ೧೯೨೯ರಲ್ಲಿ ಆರಿಸಲಾಯಿತು.[೧೨] ಅಮೇರಿಕಾ ಸಂಯುಕ್ತ ಸಂಸ್ಥಾನದಾದ್ಯಂತ ಮಹಿಳೆಯರ ಕೈಗಾರಿಕಾ ಲೀಗ್‌ಗಳು ಹುಟ್ಟಿಕೊಂಡವು. ಅವು ಪುರುಷರ ನಿಮಯಗಳನ್ನು ಅಳವಡಿಸಿಕೊಂಡು ಗೋಲ್ಡನ್ ಸೌಕ್ಲೋನ್ಸ್‌‌ ತಂಡದ ಬಾಬೆ ದಿಡ್ರಿಕ್ಸನ್‌ರಂತಹ ಪ್ರಸಿದ್ಧ ಕ್ರೀಡಾಪಟುಗಳನ್ನು ಸೃಷ್ಟಿಸಿದವು, ಮತ್ತು ಆಲ್ ಅಮೇರಿಕನ್ ರೆಡ್ ಹೆಡ್ಸ್ ಟೀಮ್‌ ಪುರುಷರ ತಂಡದ ವಿರುದ್ಧವೇ ಸ್ಪರ್ಧಿಸಿತ್ತು. ೧೯೩೮ರ ಹೊತ್ತಿಗೆ ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಶಿಪ್ ಪ್ರತಿ ತಂಡದಲ್ಲಿ ಆರು ಆಟಗಾರರೊಂದಿಗೆ ಮೂರು-ಅಂಕಣದಿಂದ ಎರಡು-ಅಂಕಣದ ಆಟಕ್ಕೆ ಪರಿವರ್ತನೆಯಾಯಿತು.[೧೨]

ಕೆನಡಾದ ಮೊದಲ ಅಂತರ್‌ ವಿಶ್ವವಿದ್ಯಾನಿಲಯ ಆಟ[ಬದಲಾಯಿಸಿ]

ಕೆನಡಾದ ಮೊದಲ ಅಂತರ್‌ವಿಶ್ವವಿದ್ಯಾನಿಲಯ ಬ್ಯಾಸ್ಕೆಟ್‌ಬಾಲ್‌ ಪಂದ್ಯವನ್ನು ಒಂಟಾರಿಯೋದ ಕಿಂಗ್‌ಸ್ಟನ್‌ನ YMCAಯಲ್ಲಿ ೧೯೦೪ರ ಫೆಬ್ರವರಿ ೬ರಲ್ಲಿ ಆಡಲಾಯಿತು. ಈ ಪಂದ್ಯ ಮ್ಯಾಕ್‌ಗಿಲ್ ವಿಶ್ವವಿದ್ಯಾನಿಲಯ ಮತ್ತು ಕ್ವೀನ್ಸ್ ವಿಶ್ವವಿದ್ಯಾನಿಲಯಗಳ ಮಧ್ಯೆ ನಡೆಯಿತು. ನಿಯಮಾನುಸಾರದ ಆಟದ ಕೊನೆಯಲ್ಲಿ ೭-೭ ಸ್ಕೋರ್ ಇತ್ತು, ಹಾಗಾಗಿ ಫಲಿತಾಂಶಕ್ಕಾಗಿ ಹತ್ತು ನಿಮಿಷ ಹೆಚ್ಚಿಗೆ ಸಮಯವನ್ನು ನೀಡಲಾಯಿತು. ಈ ಅಧಿಕಾವಧಿಯಲ್ಲಿ ಮ್ಯಾಕ್‌ಗಿಲ್ ೯-೭ರೊಂದಿಗೆ ಜಯಗಳಿಸಿತು. ಪ್ರೇಕ್ಷಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಆಟವನ್ನು ವೀಕ್ಷಿಸಿದರು.[೧೪]

ಚಿತ್ರ:Liberator-ad.jpg
1922ರ ಮಾರ್ಚ್‌ ತಿಂಗಳಲ್ಲಿ ನಡೆಯಲಿರುವ ಪ್ರದರ್ಶನ ಪಂದ್ಯವನ್ನು ಉತ್ತೇಜಿಸಿ, ದಿ ಲಿಬರೇಟರ್‌ ಪತ್ರಿಕೆಯಲ್ಲಿ ಪ್ರಕಟಗೊಂಡ ಜಾಹೀರಾತು. ಹುಗೊ ಜೆಲೆರ್ಟ್‌ ರಚಿಸಿದ ಚಿತ್ರ.

ಅಮೇರಿಕಾದ ಆರಂಭಿಕ ವೃತ್ತಿಪರ ಮತ್ತು ಪ್ರವಾಸಿ ತಂಡಗಳು[ಬದಲಾಯಿಸಿ]

೧೯೨೦ರ ಉದ್ದಕ್ಕೂ ಅಮೆರಿಕಾದಲ್ಲಿ ಸಾಕಷ್ಟು ತಂಡಗಳಿದ್ದವು. ಅಮೇರಿಕಾ ಸಂಯುಕ್ತ ಸಂಸ್ಥಾನದ ನಗರ ಹಾಗೂ ಪಟ್ಟಗಳಲ್ಲಿ ನೂರಾರು ಪುರುಷರ ವೃತ್ತಿಪರ ಬ್ಯಾಸ್ಕೆಟ್‌ಬಾಲ್‌ ತಂಡಗಳಿದ್ದವು, ಮತ್ತು ಕೆಲವೊಂದು ವೃತ್ತಿಪರ ಆಟದ ಸಂಸ್ಥೆಗಳೂ ಇದ್ದವು. ಆಟಗಾರರು ತಂಡದಿಂದ ತಂಡಕ್ಕೆ ಹಾರುತ್ತಿದ್ದರು ಹಾಗೂ ಪಂದ್ಯವನ್ನು ಕವಾಯತು ಶಾಲೆ ಮತ್ತು ಮಸುಕಾದ ನೃತ್ಯ ಸಭಾಂಗಣಗಳಲ್ಲಿ ಆಡಲಾಗುತ್ತಿತ್ತು. ಆಟದ ಸಂಸ್ಥೆಗಳು ಬಂದವು ಹೋದವು. ಒರಿಜಿನಲ್ ಸೆಲ್ಟಿಕ್ಸ್ ಮತ್ತು ಎರಡು ಆಲ್-ಆಫ್ರಿಕನ್ ಅಮೇರಿಕನ್ ತಂಡಗಳು, ನ್ಯೂಯಾರ್ಕ್ ರೆನೈಸೆನ್ಸ್ ಫೈವ್ ("ರೆನ್ಸ್") ಮತ್ತು (೨೦೦೯ರವರೆಗೆ ಇನ್ನೂ ಅಸ್ತಿತ್ವದಲ್ಲಿರುವ) ಹಾರ್ಲೆಮ್ ಗ್ಲೋಬ್‌ಟ್ರೋಟರ್ಸ್ ಮೊದಲಾದ ಹವ್ಯಾಸಿ ತಂಡಗಳು ಅವುಗಳ ರಾಷ್ಟ್ರೀಯ ಪ್ರವಾಸದಲ್ಲಿ ಒಂದು ವರ್ಷಕ್ಕೆ ಇನ್ನೂರರಷ್ಟು ಆಟಗಳನ್ನು ಆಡುತ್ತಿದ್ದವು.

ಅಮೇರಿಕಾದ ರಾಷ್ಟ್ರೀಯ ಕಾಲೇಜು ಚಾಂಪಿಯನ್‌ಶಿಪ್[ಬದಲಾಯಿಸಿ]

ನ್ಯಾಶನಲ್ ಅಸೋಸಿಯೇಷನ್ ಆಫ್ ಇಂಟರ್‌ಕಾಲೇಜಿಯೇಟ್ ಬ್ಯಾಸ್ಕೆಟ್‌ಬಾಲ್ ಟೂರ್ನಮೆಂಟ್ ಎಂಬ ಪುರುಷರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನ ಮೊದಲ ಪಂದ್ಯಾವಳಿಯನ್ನು ೧೯೩೭ರಲ್ಲಿ ಸಂಘಟಿಸಲಾಯಿತು. ಅದು ನ್ಯಾಷನಲ್ ಅಸೋಸಿಯೇಷನ್ ಆಫ್ ಇಂಟರ್‌ಕಾಲೇಜಿಯೇಟ್ ಅಥ್ಲೆಟಿಕ್ಸ್ (NAIA) ಪಂದ್ಯಾವಳಿ ಎಂಬ ಹೆಸರಿನಲ್ಲಿ ಈಗಲೂ ಅಸ್ತಿತ್ವದಲ್ಲಿದೆ. ನ್ಯಾಷನಲ್ ಇನ್ವಿಟೇಷನ್ ಟೂರ್ನಮೆಂಟ್‌ (NIT) ಎಂಬ NCAA ತಂಡಗಳ ಮೊದಲ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನ್ನು ೧೯೩೮ರಲ್ಲಿ ನ್ಯೂಯಾರ್ಕ್‌ನಲ್ಲಿ ಆಯೋಜಿಸಲಾಯಿತು; NCAA ರಾಷ್ಟ್ರೀಯ ಪಂದ್ಯಾವಳಿಯು ಒಂದು ವರ್ಷದ ನಂತರ ಪ್ರಾರಂಭವಾಯಿತು.

ಪ್ರಮುಖ ತಂಡಗಳ ಹಲವಾರು ಆಟಗಾರರು ಮ್ಯಾಚ್ ಫಿಕ್ಸಿಂಗ್ ಮತ್ತು ಪಾಯಿಂಟ್ ಶೇವಿಂಗ್‌ನಲ್ಲಿ ತೊಡಗಿದ್ದರಿಂದಾಗಿ ಕಾಲೇಜು ಬ್ಯಾಸ್ಕೆಟ್‌ಬಾಲ್‌ ೧೯೪೮ರಿಂದ ೧೯೫೧ರಲ ಅವಧಿಯಲ್ಲಿ ಜೂಜಾಟದ ಹಗರಣಗಳಲ್ಲಿ ಸಿಕ್ಕಿ ಹಾಕಿಕೊಂಡು ಸಂಕಷ್ಟ ಅನುಭವಿಸಿತು. ಮೋಸದಾಟದಲ್ಲಿ ಭಾಗಶಃ ಭಾಗಿಯಾಗಿದ್ದಕ್ಕಾಗಿ NITಯು NCAA ಪಂದ್ಯಾವಳಿಯಿಂದ ಹೊರನಡೆಯಬೇಕಾಯಿತು.

U.S. ಪ್ರೌಢ ಶಾಲಾ ಬ್ಯಾಸ್ಕೆಟ್‌ಬಾಲ್‌[ಬದಲಾಯಿಸಿ]

ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ವಿಸ್ತಾರವಾಗಿ ಹರಡಿಕೊಂಡಿದ್ದ ಶಾಲೆಗಳು ಒಂದಾಗುವ ಮೊದಲು, ಹೆಚ್ಚಿನ ಪ್ರೌಢ ಶಾಲೆಗಳು ಈಗಿನ ಅವುಗಳ ಪಡಿರೂಪಕ್ಕಿಂತ ತುಂಬಾ ಸಣ್ಣದಾಗಿದ್ದವು. ಸಾಧಾರಣ ಸಾಧನ ಮತ್ತು ವೈಯಕ್ತಿಕ ಅವಶ್ಯಕತೆಗಳಿಂದಾಗಿ ೨೦ನೇ ಶತಮಾನದ ಮೊದಲ ದಶಕದಲ್ಲಿ ಬ್ಯಾಸ್ಕೆಟ್‌ಬಾಲ್‌ ಬಲುಬೇಗನೆ ಅತ್ಯುತ್ತಮ ಅಂತರ್‌ ಶೈಕ್ಷಣಿಕ ಕ್ರೀಡೆಯಾಗಿ ಪರಿವರ್ತನೆಯಾಯಿತು. ವೃತ್ತಿಪರ ಮತ್ತು ಕಾಲೇಜು ಕ್ರೀಡೆಗಳಿಗೆ ವ್ಯಾಪಕವಾಗಿ ದೂರದರ್ಶನ ಪ್ರಚಾರ ಸಿಗುವುದಕ್ಕಿಂತ ಮೊದಲು, ಪ್ರೌಢ ಶಾಲಾ ಬ್ಯಾಸ್ಕೆಟ್‌ಬಾಲ್‌ ಅಮೇರಿಕಾದ ಅನೇಕ ಭಾಗಗಳಲ್ಲಿ ಅಸಮಾನ್ಯ ಜನಪ್ರಿಯತೆ ಪಡೆದಿತ್ತು. ಪ್ರೌಢ ಶಾಲಾ ತಂಡಗಳಲ್ಲೇ ತನ್ನ ಕೌಶಲ್ಯದಿಂದ ದಂತಕತೆಯಾಗಿದ್ದ ತಂಡ ಇಂಡಿಯಾನದ ಫ್ರಾಂಕ್ಲಿನ್ ವಂಡರ್ ಫೈವ್. ಈ ತಂಡ ಇಂಡಿಯಾನ ಬ್ಯಾಸ್ಕೆಟ್‌ಬಾಲ್‌ನಲ್ಲೇ ಪ್ರಬಲವಾಗಿ, ರಾಷ್ಟ್ರೀಯ ಮನ್ನಣೆ ಗಳಿಸಿ ೧೯೨೦ರ ಸನ್ನಿವೇಶದಲ್ಲಿ ಇಡೀ ದೇಶವನ್ನೇ ಮಂತ್ರಮುಗ್ಧಗೊಳಿಸಿತು.

ಇಂದು ವಾಸ್ತವಿಕವಾಗಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಪ್ರತಿ ಪ್ರೌಢ ಶಾಲೆಯು ಬ್ಯಾಸ್ಕೆಟ್‌ಬಾಲ್‌ ತಂಡವನ್ನು ಪ್ರಥಮ ಕ್ರೀಡಾದಳ ಸ್ಪರ್ಧೆಯಲ್ಲಿ ಆಡಿಸುತ್ತಿದೆ. ಗ್ರಾಮೀಣ ಪ್ರದೇಶಗಳ ಜನಸಮುದಾಯಗಳ ನಡುವೆಯೂ ಬ್ಯಾಸ್ಕೆಟ್‌ಬಾಲ್‌ ಜನಪ್ರಿಯವಾಗಿದೆ, ಅಲ್ಲದೆ ಕೆಲವು ದೊಡ್ಡ ಶಾಲೆಗಳಲ್ಲಿಯೂ ಅದು ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಈ ಶಾಲೆಗಳ ಹೆಚ್ಚಿನ ಆಟಗಾರರು ಪದವಿ ಶಿಕ್ಷಣದ ನಂತರ ಉನ್ನತ ಹಂತದ ಸ್ಪರ್ಧೆಗಳಲ್ಲಿ ಭಾಗವಹಿಸಲು ತೆರಳುತ್ತಾರೆ. ನ್ಯಾಶನಲ್ ಫೆಡರೇಶನ್ ಆಫ್ ಸ್ಟೇಟ್ ಹೈ ಸ್ಕೂಲ್ ಅಸೋಸಿಯೇಷನ್ಸ್‌‌ನ ಪ್ರಕಾರ ೨೦೦೩–೦೪ ಅವಧಿಯಲ್ಲಿ ಅಂತರ್‌ ಶೈಕ್ಷಣಿಕ ಬ್ಯಾಸ್ಕೆಟ್‌ಬಾಲ್‌ ಸ್ಪರ್ಧೆಯಲ್ಲಿ ೧,೦೦೨,೭೯೭ ಹುಡುಗರು ಮತ್ತು ಹುಡುಗಿಯರು ಅವರವರ ಶಾಲೆಗಳನ್ನು ಪ್ರತಿನಿಧಿಸಿದ್ದರು. ಇಲಿನೋಯಿಸ್, ಇಂಡಿಯಾನ ಮತ್ತು ಕೆಂಟುಕಿಗಳ ರಾಜ್ಯಗಳ ನಿವಾಸಿಗಳು ಪ್ರೌಢ ಶಾಲಾ ಬ್ಯಾಸ್ಕೆಟ್‌ಬಾಲ್‌ ಬಗ್ಗೆ ಹೊಂದಿರುವ ಶ್ರದ್ಧೆಗಾಗಿ ಹೆಸರುವಾಸಿಯಾಗಿದ್ದಾರೆ. ಇಂಡಿಯಾನದಲ್ಲಿ ಸಾಮಾನ್ಯವಾಗಿ ಇದನ್ನು ಹೂಸಿಯರ್ ಹಿಸ್ಟೇರಿಯ ಎಂದು ಕರೆಯುತ್ತಾರೆ; ಈ ಗ್ರಾಮೀಣ ಸಮುದಾಯಗಳಲ್ಲಿ ಪ್ರೌಢ ಶಾಲಾ ಬ್ಯಾಸ್ಕೆಟ್‌ಬಾಲ್ ಬಗ್ಗೆ ಆಳವಾದ ಅರ್ಥವಿರುವುದನ್ನು ವಿಮರ್ಶಕರ ಪ್ರಶಂಸೆಗೆ ಪಾತ್ರವಾದ ಚಿತ್ರ ಹೂಸಿಯರ್ಸ್ ತೋರಿಸುತ್ತದೆ.

ರಾಷ್ಟ್ರೀಯ ಚಾಂಪಿಯನ್‌ಶಿಪ್[ಬದಲಾಯಿಸಿ]

ಬ್ಯಾಸ್ಕೆಟ್‌ಬಾಲ್ ರಾಷ್ಟ್ರೀಯ ಚಾಂಪಿಯನ್‌ನ್ನು ನಿರ್ಣಯಿಸುವ ಯಾವುದೇ ರಾಷ್ಟ್ರೀಯ ಪಂದ್ಯಾವಳಿ ಪ್ರಸ್ತುತ ಇಲ್ಲ.

೧೯೧೭ರಿಂದ ೧೯೩೦ರವರೆಗೆ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ನ್ಯಾಶನಲ್ ಇಂಟರ್‌ಸ್ಕೊಲಾಸ್ಟಿಕ್ ಬ್ಯಾಸ್ಕೆಟ್‌ಬಾಲ್ ಟೂರ್ನಮೆಂಟ್‌ನ್ನು ಹಮ್ಮಿಕೊಂಡದ್ದು ಪ್ರಮುಖ ಸಾಧನೆ. ಇದನ್ನು ಸಂಘಟಿಸಿದ ಅಮೋಸ್ ಅಲೋಂಜೊ ಸ್ಟ್ಯಾಗ್ ಅವರು ರಾಜ್ಯ ಚಾಂಪಿಯನ್ ತಂಡಗಳಿಗೆ ಆಮಂತ್ರಣ ಕಳುಹಿಸಿದ್ದರು. ಈ ಪಂದ್ಯಾವಳಿ ಮಧ್ಯಪಶ್ಚಿಮದಲ್ಲಿ ವ್ಯಾವಹಾರಿಕವಾಗಿ ಆರಂಭವಾಯಿತಾದರೂ ನಂತರ ಬೆಳೆವಣಿಗೆ ಹೊಂದಿತು. ೧೯೨೯ರ ವೇಳೆಗೆ ಇದು ೨೯ ರಾಜ್ಯ ಚಾಂಪಿಯನ್‌ಗಳನ್ನು ಹೊಂದಿತ್ತು. ನ್ಯಾಶನಲ್ ಫೆಡರೇಶನ್ ಆಫ್ ಸ್ಟೇಟ್ ಹೈ ಸ್ಕೂಲ್ ಅಸೋಸಿಯೇಷನ್ಸ್‌‌ ಮತ್ತು ನಾರ್ತ್ ಸೆಂಟ್ರಲ್ ಅಸೋಸಿಯೇಶನ್ ಆಫ್ ಕಾಲೇಜಸ್ ಆಂಡ್ ಸ್ಕೂಲ್ಸ್‌ನಿಂದ ವಿರೋಧವನ್ನು ಎದುರಿಸಿದ ಇದು ೧೯೩೦ರ ಅಂತಿಮ ಪಂದ್ಯಾವಳಿಯ ಹೊತ್ತಿಗೆ ಶಾಲೆಗಳು ಅವುಗಳ ದೃಡೀಕರಣವನ್ನು ಕಳೆದುಕೊಳ್ಳುವ ಆತಂಕಕ್ಕೆ ಎಡೆಮಾಡಿಕೊಟ್ಟಿತು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಶ್ರೇಣಿಯಿಂದ ವೃತ್ತಿಪರ ಆಟಗಾರರನ್ನು ಸೇರಿಸಿಕೊಳ್ಳಲು ಪಂದ್ಯಾವಳಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸಂಘಟನೆಗಳು ಕಳವಳ ವ್ಯಕ್ತಪಡಿಸಿದರು.[೧೫]

ಈ ಪಂದ್ಯಾವಳಿಯು ಅಲ್ಪಸಂಖ್ಯಾತ ಶಾಲೆಗಳನ್ನು ಅಥವಾ ಖಾಸಗಿ/ಪ್ರಾಂತೀಯ ಶಾಲೆಗಳನ್ನು ಆಮಂತ್ರಿಸಿರಲಿಲ್ಲ.

ನ್ಯಾಶನಲ್ ಕ್ಯಾಥೋಲಿಕ್ ಇಂಟರ್‌ಸ್ಕೊಲಾಸ್ಟಿಕ್ ಬ್ಯಾಸ್ಕೆಟ್‌ಬಾಲ್‌ ಟೂರ್ನಮೆಂಟ್ ೧೯೨೪ರಿಂದ ೧೯೪೧ರವರೆಗೆ ಲೊಯೊಲ ವಿಶ್ವವಿದ್ಯಾನಿಲಯದಲ್ಲಿ ನಡೆಯಿತು.[೧೬] ೧೯೫೪ರಿಂದ ೧೯೭೮ರವರೆಗೆ ಕ್ಯಾಥೋಲಿಕ್ ವಿಶ್ವವಿದ್ಯಾನಿಲಯ, ಜಾರ್ಜ್‌ಟೌನ್ ಮತ್ತು ಜಾರ್ಜ್ ಮ್ಯಾಸನ್ ಮೊದಲಾದ ಸರಣಿ ಸ್ಥಳಗಳಲ್ಲಿ ನ್ಯಾಶನಲ್ ಕ್ಯಾಥೋಲಿಕ್ ಇನ್ವಿಟೇಶನಲ್ ಬ್ಯಾಸ್ಕೆಟ್‌ಬಾಲ್‌ ಟೂರ್ನಮೆಂಟ್‌ನ್ನು ಆಡಲಾಯಿತು.[೧೭]

ಬ್ಲ್ಯಾಕ್ ಹೈ ಸ್ಕೂಲ್‌ಗಳ ನ್ಯಾಶನಲ್ ಇಂಟರ್‌ಸ್ಕೊಲಾಸ್ಟಿಕ್ ಬ್ಯಾಸ್ಕೆಟ್‌ಬಾಲ್‌ ಟೂರ್ನಮೆಂಟ್ ೧೯೨೯ರಿಂದ ೧೯೪೨ರವರೆಗೆ ಹ್ಯಾಂಪ್ಟನ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆಯಿತು.[೧೮] ನ್ಯಾಶನಲ್ ಇನ್ವಿಟೇಶನಲ್ ಇಂಟರ್‌ಸ್ಕೊಲಾಸ್ಟಿಕ್ ಬ್ಯಾಸ್ಕೆಟ್‌ಬಾಲ್‌ ಟೂರ್ನಮೆಂಟ್‌ನ್ನು ೧೯೪೧ರಿಂದ ೧೯೬೭ರವರೆಗೆ ಟಸ್ಕೆಗೀ ಇನ್‌ಸ್ಟಿಟ್ಯೂಟ್‌ನಲ್ಲಿ ಆರಂಭಿಸಲಾಯಿತು. ವಿಶ್ವ ಸಮರ IIದ ನಂತರ ಬ್ಯಾಸ್ಕೆಟ್‌ಬಾಲ್ ನಶ್ವಿಲ್ಲೆಯ ಟೆನ್ನಸ್ಸೀ ಸ್ಟೇಟ್ ಕಾಲೇಜಿನಲ್ಲಿ ಪುನರಾರಂಭಗೊಂಡಿತು. ೧೯೫೪ರಲ್ಲಿ ಬ್ರೌನ್ v. ಬೋರ್ಡ್ ಆಫ್ ಎಜುಕೇಶನ್ ಶಾಲೆಗಳ ಏಕೀಕರಣವನ್ನು ಪ್ರಾರಂಭಿಸಿದ ನಂತರ ಚಾಂಪಿಯನ್‌ನ ಆಧಾರ ಕ್ಷೀಣಿಸಿತು. ಕೊನೆಯ ಪಂದ್ಯಾವಳಿಗಳು ಅಲಬಾನ ಸ್ಟೇಟ್ ಕಾಲೇಜಿನಲ್ಲಿ ೧೯೬೪ರಿಂದ ೧೯೬೭ರ ಅವಧಿಯಲ್ಲಿ ನಡೆದವು.[೧೯]

ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆ[ಬದಲಾಯಿಸಿ]

೧೯೪೬ರಲ್ಲಿ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್ ಆಫ್ ಅಮೇರಿಕಾ (BAA) ಸ್ಥಾಪನೆಯಾಯಿತು. ೧೯೪೬ರ ನವೆಂಬರ್ ೧ರಲ್ಲಿ ಕೆನಡಾದ ಒಂಟೊರಿಯೊದ ಟೊರೊಂಟೊದಲ್ಲಿ ಟೊರೊಂಟೊ ಹಸ್ಕೀಸ್ ಮತ್ತು ನ್ಯೂಯಾರ್ಕ್ ಕ್ನಿಕರ್‌ಬೊಕರ್ಸ್ ಮಧ್ಯೆ ಮೊದಲ ಪಂದ್ಯ ನಡೆಯಿತು. ಮೂರು ವರ್ಷಗಳ ನಂತರ ೧೯೪೯ರಲ್ಲಿ ನ್ಯಾಷನಲ್ ಬ್ಯಾಸ್ಕೆಟ್‌ಬಾಲ್‌ ಲೀಗ್‌ನೊಂದಿಗೆ BAA ಸೇರಿಕೊಂಡು ನ್ಯಾಷನಲ್ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್‌ (NBA) ರಚನೆಯಾಯಿತು. ಅಮೇರಿಕನ್ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್ ೧೯೬೭ರಲ್ಲಿ ದಿಢೀರನೆ ಹುಟ್ಟಿಕೊಂಡಿತು, ಮತ್ತು ೧೯೭೬ರಲ್ಲಿ ABA-NBA ಒಕ್ಕೂಟ ಅಸ್ತಿತ್ವಕ್ಕೆ ಬರುವವರೆಗೆ NBAಯ ಪ್ರಾಬಲ್ಯಕ್ಕೆ ಬೆದರಿಕೆಯಾಗಿತ್ತು. ಜನಪ್ರಿಯತೆ, ಸಂಭಾವನೆ, ಕೌಶಲ್ಯ ಮತ್ತು ಸ್ಪರ್ಧೆಯ ಪ್ರತಿಷ್ಠೆಯ ವಿಷಯದಲ್ಲಿ NBA ಇಂದು ಪ್ರಪಂಚದಲ್ಲೇ ಅಗ್ರಸ್ಥಾನದಲ್ಲಿರುವ ವೃತ್ತಿಪರ ಬ್ಯಾಸ್ಕೆಟ್‌ಬಾಲ್‌ ಒಕ್ಕೂಟವಾಗಿದೆ.

"ಬಿಗ್ ಮ್ಯಾನ್" ಜಾರ್ಜ್ ಮಿಕಾನ್; ಬೋಸ್ಟನ್ ಸೆಲ್ಟಿಕ್ಸ್‌‌ನ ಚೆಂಡು-ಹಿಡಿಯುವ ಮಾಂತ್ರಿಕ ಬಾಬ್ ಕೌಸಿ ಮತ್ತು ಡಿಫೆನ್ಸಿವ್ ಪ್ರತಿಭಾಶಾಲಿ ಬೋಸ್ಟನ್ ಸೆಲ್ಟಿಕ್ಸ್‌ನ ಬಿಲ್ ರಸೆಲ್; ಆರಂಭದಲ್ಲಿ ಪ್ರವಾಸಿ ಹಾರ್ಲೆನ್ ಗ್ಲೋಬ್‌ಟ್ರೋಟರ್ಸ್‌ನಲ್ಲಿ ಆಡಿದ ವಿಲ್ಟ್ ಚಾಂಬರ್ಲೈನ್; ಸವ್ಯಸಾಚಿ ಆಟಗಾರರಾದ ಆಸ್ಕರ್ ರೋಬರ್ಟ್ಸನ್ ಮತ್ತು ಜೆರ್ರಿ ವೆಸ್ಟ್; ತೀರ ಇತ್ತೀಚಿನ 'ಬಿಗ್ ಮೆನ್'ಗಳಾದ ಕರೀಮ್ ಅಬ್ದುಲ್-ಜಬ್ಬರ್ ಮತ್ತು ಕಾರ್ಲ್ ಮಲೋನಿ; ಪ್ಲೇಮೇಕರ್ ಜಾನ್ ಸ್ಟೋಕ್ಟನ್; ಕ್ರೌಡ್-ಪ್ಲೀಸಿಂಗ್ ಫಾರ್ವರ್ಡ್ ಜೂಲಿಯಸ್ ಎರ್ವಿಂಗ್; ಯುರೋಪಿಯನ್ ಆಟಗಾರರಾದ ಡಿರ್ಕ್ ನೋವಿಟ್ಜ್‌ಕಿ ಮತ್ತು ಡ್ರಾಜೆನ್ ಪೆಟ್ರೋವಿಕ್ ಮತ್ತು ವೃತ್ತಿಪರ ಆಟವನ್ನು ಜನಪ್ರಿಯತೆಯ ತುತ್ತತುದಿಗೆ ಕೊಂಡೊಯ್ಯಲು ಕಾರಣರಾದ ಮೂರು ಆಟಗಾರರಾದ ಲ್ಯಾರಿ ಬರ್ಡ್, ಈರ್ವಿನ್ "ಮ್ಯಾಜಿಕ್" ಜೋನ್ಸನ್, ಮತ್ತು ಮೈಕೆಲ್ ಜೋರ್ಡನ್ ಮೊದಲಾದ ಹಲವು ಖ್ಯಾತನಾಮರನ್ನು NBA ಹೊಂದಿದೆ.

೨೦೦೧ರಲ್ಲಿ NBA ಅಭಿವೃದ್ಧಿ ಒಕ್ಕೂಟ NBDLಅನ್ನು ರೂಪಿಸಿತು. ೨೦೦೮ರವರೆಗೆ ಒಕ್ಕೂಟವು ಒಟ್ಟು ಹದಿನಾರು ತಂಡಗಳನ್ನು ಹೊಂದಿತ್ತು.

ವುಮೆನ್ಸ್ ನ್ಯಾಶನಲ್ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್[ಬದಲಾಯಿಸಿ]

NBA-ಬೆಂಬಲಿತ ವುಮೆನ್ಸ್ ನ್ಯಾಶನಲ್ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್ (WNBA) ೧೯೯೭ರಲ್ಲಿ ಆರಂಭವಾಯಿತು. ಅದು ಅಸ್ಥಿರ ಹಾಜರಾತಿಯ ಆಟಗಾರರನ್ನು ಹೊಂದಿದ್ದರೂ, ಅನೇಕ ಶ್ರೇಷ್ಠ ಆಟಗಾರರು (ಅವರಲ್ಲಿ ಕೆಲವರು ಲಿಸ ಲೆಸ್ಲಿ, ಡಯಾನ ತೌರಸಿ, ಮತ್ತು ಕ್ಯಾಂಡೇಕ್ ಪಾರ್ಕರ್) ಸಂಸ್ಥೆಯ ಜನಪ್ರಿಯತೆಗೆ ಮತ್ತು ಸ್ಪರ್ಧೆಯ ಪ್ರತಿಷ್ಠೆಗೆ ನೆರವಾಗಿದ್ದಾರೆ. ಅಮೇರಿಕನೇ ಬ್ಯಾಸ್ಕೆಟ್‌ಬಾಲ್‌ ಲೀಗ್‌(1996-1998)ನಂತಹ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಇತರ ವೃತ್ತಿಪರ ಮಹಿಳಾ ಬ್ಯಾಸ್ಕೆಟ್‌ಬಾಲ್‌‌ ಒಕ್ಕೂಟಗಳು WNBAಯ ಜನಪ್ರಿಯತೆಯಿಂದಾಗಿ ಭಾಗಶಃ ಮುಚ್ಚಿದವು.

WNBA ಒಕ್ಕೂಟವನ್ನು ಹಲವು ಲೀಗ್‌ಗಳ ನೆಲೆದಾಣವೆಂದೇ ಕಾಣಲಾಗುತ್ತಿತ್ತು. ಹೀಗಿದ್ದೂ ಒಕ್ಕೂಟ ಇತ್ತೀಚೆಗಿನ ದಿನಗಳಲ್ಲಿ ಮುಂದಡಿ ಇರಿಸಿದೆ.

೨೦೦೭ರ ಜೂನ್‌ನಲ್ಲಿ ESPN ಒಂದಿಗೆ WNBA ಒಪ್ಪಂದಕ್ಕೆ ಸಹಿ ಹಾಕಿತು. ಈ ಹೊಸ ಕರಾರು ೨೦೦೯ರಿಂದ ೨೦೧೬ರವರೆಗೆ ಜಾರಿಯಲ್ಲಿರುತ್ತದೆ. ಈ ಒಪ್ಪಂದದೊಂದಿಗೆ, ಮಹಿಳಾ ವೃತ್ತಿಪರ ಕ್ರೀಡೆಗಳ ಒಕ್ಕೂಟಕ್ಕೆ ಪಾವತಿಸಬೇಕಾದ ಮೊದಲ ಹಕ್ಕುಗಳ ಶುಲ್ಕವೂ ಜಾರಿಗೆ ಬಂತು. ಎಂಟು ವರ್ಷಗಳ ಈ ಒಪ್ಪಂದದ ಪ್ರಕಾರ, "ಲಕ್ಷಾಂತರ ಡಾಲರ್‌ಗಳನ್ನು" "ಒಕ್ಕೂಟದ ತಂಡಗಳಿಗೆ ಹಂಚಲಾಗುತ್ತದೆ".

ಮೇಜರ್ ಲೀಗ್ ಸಾಕರ್ (೨೫೩,೦೦೦)[೨೦] ಮತ್ತು NHL (೩೧೦,೭೩೨) ಇವೆರಡಕ್ಕಿಂತಲೂ WNBA ರಾಷ್ಟ್ರೀಯ ದೂರದರ್ಶನ ಪ್ರಸಾರದಲ್ಲಿ ಹೆಚ್ಚು ವೀಕ್ಷಕರನ್ನು (೪೧೩,೦೦೦) ಹೊಂದಿದೆ.[೨೧]

೨೦೦೯ರ ಮಾರ್ಚ್ ೧೨ರ ಲೇಖನದಲ್ಲಿ NBA ಕಮೀಷನರ್ ಡೇವಿಡ್ ಸ್ಟೆರ್ನ್ ಹೀಗೆ ಹೇಳಿದ್ದಾರೆ -ಕಳಪೆ ಆರ್ಥಿಕತೆಯಲ್ಲಿ "WNBAಗೆ ಹೋಲಿಸಿದರೆ NBA ತುಂಬಾ ಕಡಿಮೆ ಲಾಭದಾಯಕವಾದುದು. ನಮ್ಮಲ್ಲಿ ಹೆಚ್ಚು ಸಂಖ್ಯೆಯ ತಂಡಗಳಿರುವ ಕಾರಣ ಬಹಳಷ್ಟು ಹಣವನ್ನು ಕಳೆದುಕೊಳ್ಳುತ್ತಿದ್ದೇವೆ. ಈ ವರ್ಷವೂ ಸಹ ಲಾಭ ನಷ್ಟದ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ WNBAಗಾಗಿ ಯೋಜನೆ ರೂಪಿಸಿದ್ದೇವೆ."[೨೨]

ಫಿಲಿಪೈನ್ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್[ಬದಲಾಯಿಸಿ]

ಫಿಲಿಪೈನ್ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್ ವಿಶ್ವದಲ್ಲೇ ಎರಡನೇ ಹಳೆಯ ವೃತ್ತಿಪರ ಒಕ್ಕೂಟ. ಮೊದಲ ಪಂದ್ಯವನ್ನು ೧೯೭೫ ಎಪ್ರಿಲ್ ೯ರಲ್ಲಿ ಕ್ವೆಜನ್ ಸಿಟಿಯ ಕ್ಯೂಬಾವೊದ ಅರನೆಟ ಕೊಲಿಸಿಯಮ್‌ನಲ್ಲಿ ಆಡಲಾಯಿತು. ಫಿಲಿಪೈನ್ಸ್‌. ಮನಿಲ ಇಂಡಸ್ಟ್ರಿಯಲ್ ಮತ್ತು ಕಮರ್ಶಿಯಲ್ ಅಥ್ಲೆಟಿಕ್ ಅಸೋಸಿಯೇಷನ್‌(ಈಗಿಲ್ಲ)ನಲ್ಲಿ ಕೆಲವು ತಂಡಗಳು "ಬಂಡಾಯ"ವೆದ್ದ ಪ್ರತಿಫಲವಾಗಿ ಹುಟ್ಟಿಕೊಂಡ ಸಂಸ್ಥೆಯಿದು. ಮನಿಲ ಸಂಸ್ಥೆಯು ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್ ಆಫ್ ದ ಫಿಲಿಪೈನ್ಸ್‌‌ನ (ಈಗಿಲ್ಲ)ನಿಯಂತ್ರಣಕ್ಕೆ ಒಳಪಟ್ಟಿತ್ತು, ನಂತರ- FIBA ರಾಷ್ಟ್ರೀಯ ಸಂಸ್ಥೆಯನ್ನು ಗುರುತಿಸಿತು.

೧೯೭೫ರಲ್ಲಿ ಎಪ್ರಿಲ್ ೯ರಲ್ಲಿ ಆರಂಭವಾದ ಒಕ್ಕೂಟದ ಮೊದಲ ಅವಧಿಯಲ್ಲಿ MICAAಯ ಒಂಬತ್ತು ತಂಡಗಳು ಭಾಗವಹಿಸಿದವು.

ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌[ಬದಲಾಯಿಸಿ]

ಚಿತ್ರ:Munich 1972.jpg
20ನೆಯ ಒಲಿಂಪಿಕ್‌ ಕ್ರೀಡಾಕೂಟ (1972)ದಲ್ಲಿ, ಯುಗೋಸ್ಲಾವಿಯಾದ ಕ್ರೆಸಿಮಿರ್ ಕೊಸಿಕ್‌ (ನೀಲಿ ಅಂಗಿಯಲ್ಲಿ) ವಿರುದ್ಧ ಜೆಕೊಸ್ಲೊವಾಕಿಯಾದ ಪೀಟ್ರ್‌ ನೊವಿಕಿ

ಇಂಟರ್‌ನ್ಯಾಶನಲ್ ಬ್ಯಾಸ್ಕೆಟ್‌ಬಾಲ್‌ ಫೆಡರೇಶನ್‌ ೧೯೩೨ರಲ್ಲಿ ಎಂಟು ರಾಷ್ಟ್ರಗಳಿಂದ ರಚನೆಯಾಯಿತು. ಆ ರಾಷ್ಟ್ರಗಳೆಂದರೆ - ಅರ್ಜೆಂಟೈನಾ, ಜೆಕೊಸ್ಲೊವಾಕಿಯ, ಗ್ರೀಸ್, ಇಟಲಿ, ಲಾತ್ವಿಯ, ಪೋರ್ಚುಗಲ್, ರೊಮೇನಿಯ ಮತ್ತು ಸ್ವಿಟ್ಜರ್‌ಲ್ಯಾಂಡ್. ಈ ವೇಳೆ ಹವ್ಯಾಸಿ ಆಟಗಾರರನ್ನು ಮಾತ್ರ ಒಕ್ಕೂಟ ನೋಡಿಕೊಳ್ಳುತ್ತಿತ್ತು. ಫೆಡರೇಶನ್ ಇಂಟರ್‌ನ್ಯಾಶನಲೆ ದೆ ಬ್ಯಾಸ್ಕೆಟ್‌ಬಾಲ್‌ ಎಮಾಚ್ಯುವರ್ ಎಂಬ ಫ್ರೆಂಚ್ ಪದದಿಂದ ಪಡೆದುಕೊಂಡ ಇದರ ಸಂಕ್ಷಿಪ್ತರೂಪ "FIBA."

೧೯೦೪ರಲ್ಲಿ ಮಾದರಿ ಪ್ರದರ್ಶನ ಪಂದ್ಯಾವಳಿ ನಡೆದರೂ, ಪುರುಷರ ಬ್ಯಾಸ್ಕೆಟ್‌ಬಾಲ್‌ನ್ನು ಬರ್ಲಿನ್ ಒಲಿಂಪಿಕ್ ಗೇಮ್ಸ್‌ನಲ್ಲಿ ೧೯೩೬ರಲ್ಲಿ ಮೊದಲ ಬಾರಿಗೆ ಸೇರಿಸಲಾಯಿತು. ಹೊರಾಂಗಣದಲ್ಲಿ ಆಡಿದ ಮೊದಲ ಅಂತಿಮ ಪಂದ್ಯದಲ್ಲಿ ಕೆನಡಾವನ್ನು ಅಮೇರಿಕಾ ಸಂಯುಕ್ತ ಸಂಸ್ಥಾನ ಸೋಲಿಸಿತು. ಈ ಪಂದ್ಯಾವಳಿಯ ಮೂರು ಪಂದ್ಯಗಳನ್ನು ಹೊರತು ಪಡಿಸಿ ಎಲ್ಲಾ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಅಮೇರಿಕಾ ಸಂಯುಕ್ತ ಸಂಸ್ಥಾನ ಪ್ರಾಬಲ್ಯ ಸಾಧಿಸಿತು. 1972ರಲ್ಲಿ ಮುನಿಚ್‌ನಲ್ಲಿ ನಡೆದ ವಿವಾದಾತ್ಮಕ ಅಂತಿಮ ಪಂದ್ಯದಲ್ಲಿ ಸೋವಿಯತ್ ಒಕ್ಕೂಟದ ವಿರುದ್ಧ ಮೊದಲ ಸೋಲು ಕಂಡಿತು. ಪುರುಷರ ಮೊದಲ FIBA ವಿಶ್ವ ಚಾಂಪಿಯನ್ ೧೯೫೦ರಲ್ಲಿ ಅರ್ಜೆಂಟೈನಾದಲ್ಲಿ ನಡೆಯಿತು. ಮೂರು ವರ್ಷಗಳ ನಂತರ, ಮೊದಲ FIBA ವರ್ಲ್ಡ್ ಚಾಂಪಿಯನ್‌ಶಿಪ್‌ ಫಾರ್ ವುಮೆನ್‌ಅನ್ನು ಚಿಲಿಯಲ್ಲಿ ಆಡಲಾಯಿತು. ೧೯೭೬ರಲ್ಲಿ ಮಹಿಳೆಯರ ಬ್ಯಾಸ್ಕೆಟ್‌ಬಾಲ್‌ನ್ನು ಒಲಿಂಪಿಕ್ಸ್‌ಗೆ ಸೇರಿಸಲಾಯಿತು, ಇದು ಕೆನಡಾದ ಮೋಂಟ್ರಿಯಲ್‌ನಲ್ಲಿ ನಡೆಯಿತು. ಈ ಪಂದ್ಯಾವಳಿಯಲ್ಲಿ ಸೋವಿಯತ್ ಒಕ್ಕೂಟ, ಬ್ರೆಜಿಲ್ ಮತ್ತು ಆಸ್ಟ್ರೇಲಿಯಾ ತಂಡಗಳು ಅಮೇರಿಕಾದ ತಂಡಗಳ ವಿರುದ್ಧ ಸೆಣಸಿದವು.

ಒಲಿಂಪಿಕ್ಸ್‌ನಲ್ಲಿ ಪರವಾದಗಳು[ಬದಲಾಯಿಸಿ]

ಹವ್ಯಾಸಿ ಮತ್ತು ವೃತ್ತಿಪರ ಆಟಗಾರರ ನಡುವಿನ ಭೇದವನ್ನು FIBA ೧೯೮೯ರಲ್ಲಿ ಬಿಟ್ಟುಬಿಟ್ಟಿತು ಹಾಗೂ ೧೯೯೨ರಲ್ಲಿ ವೃತ್ತಿಪರ ಆಟಗಾರರು ಮೊದಲ ಬಾರಿಗೆ ಒಲಿಂಪಿಕ್ ಪಂದ್ಯಾವಳಿಯಲ್ಲಿ ಆಡಿದರು. ಅಮೇರಿಕಾ ಸಂಯುಕ್ತ ಸಂಸ್ಥಾನದ ಪ್ರಾಬಲ್ಯ ಅವರ ಕನಸಿನ ತಂಡದ ಪರಿಚಯದೊಂದಿಗೆ ಮುಂದುವರಿಯಿತು. ಆದರೆ ಇತರೆಡೆಯೂ ಆಟದ ಅಭಿವೃದ್ದಿಗಾಗಿ ಯೋಜನೆಗಳನ್ನು ಹಮ್ಮಿಕೊಂಡದ್ದರಿಂದ ಇತರ ರಾಷ್ಟ್ರದ ತಂಡಗಳು ಅಮೇರಿಕಾ ಸಂಯುಕ್ತ ಸಂಸ್ಥಾನವನ್ನು ಹಿಂದಿಕ್ಕಲು ಪ್ರಾರಂಭಿಸಿದವು. ಸಂಪೂರ್ಣವಾಗಿ NBA ಆಟಗಾರರಿಂದ ರಚನೆಯಾದ ತಂಡ ಇಂಡಿಯನ್‌ಪೋಲಿಸ್‌ನಲ್ಲಿ ನಡೆದ ೨೦೦೨ ವಿಶ್ವ ಚಾಂಪಿಯನ್‌ನಲ್ಲಿ ಆರನೇ ಸ್ಥಾನ ಪಡೆದುಕೊಂಡಿತು. ಇದಕ್ಕಿಂತ ಮೊದಲಿನ ಸ್ಥಾನಗಳಲ್ಲಿದ್ದವು - ಯುಗೋಸ್ಲಾವಿಯ, ಅರ್ಜೆಂಟೈನಾ, ಜರ್ಮನಿ, ನ್ಯೂಜಿಲ್ಯಾಂಡ್ ಮತ್ತು ಸ್ಪೇನ್. 2004 ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನವು ವೃತ್ತಿಪರ ಆಟಗಾರರನ್ನು ಬಳಸಿ ಮೊದಲ ಬಾರಿಗೆ ಒಲಿಂಪಿಕ್‌ನಲ್ಲಿ ಸೋಲು ಕಂಡಿತು, ಆರಂಭದಲ್ಲೇ ಪ್ಯುರ್ಟೊ ರಿಕೊ (೧೯-ಅಂಕ ಕಳೆದುಕೊಂಡು) ಮತ್ತು ಲಿತ್ವೇನಿಯದೊಂದಿಗೆ ಸೋತು, ಸೆಮಿಫೈನಲ್‌ನಲ್ಲಿ ಅರ್ಜೆಂಟೈನಾದ ಎದುರಿಗೆ ಸೋಲುಂಡು ಹೊರಹಾಕಲ್ಪಟ್ಟಿತು. ಇದು ಅಂತಿಮವಾಗಿ ಲಿತ್ವೇನಿಯಾವನ್ನು ಸೋಲಿಸಿ ಕಂಚಿನ ಪದಕವನ್ನು ಗೆದ್ದುಕೊಂಡು, ಅರ್ಜೆಂಟೈನಾ ಮತ್ತು ಇಟಲಿಯ ನಂತರದ ಸ್ಥಾನ ಪಡೆದುಕೊಂಡಿತು. ೨೦೦೬ರಲ್ಲಿ ಜಪಾನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನ ಸೆಮಿಫೈನಲ್‌ವರೆಗೆ ಮುಂದುವರೆಯಿತು, ಆದರೆ ಗ್ರೀಸ್‌ ವಿರುದ್ಧ ೧೦೧-೯೫ರಿಂದ ಸೋತಿತು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅಮೇರಿಕಾ ತಂಡ ಅರ್ಜೆಂಟೈನಾವನ್ನು ಸೋಲಿಸಿ, ಗ್ರೀಸ್ ಮತ್ತು ಸ್ಪೈನ್‌ನ ನಂತರದ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

NBAಯಲ್ಲಿನ ಅಂತರರಾಷ್ಟ್ರೀಯ ಆಟಗಾರರು[ಬದಲಾಯಿಸಿ]

ಎಲ್ಲಾ ವರ್ಷದ ಹುಡುಗರು ಮತ್ತು ಹುಡುಗಿಯರಿಗಾಗಿ ವಿಶ್ವವ್ಯಾಪಿ ಬ್ಯಾಸ್ಕೆಟ್‌ಬಾಲ್‌ ಪಂದ್ಯಾವಳಿಗಳನ್ನು ನಡೆಸಲಾಯಿತು. NBAಯಲ್ಲಿ ತೋರಿದ ರಾಷ್ಟ್ರೀಯತೆಗಳಲ್ಲಿ ಕ್ರೀಡೆಯ ಜಾಗತಿಕ ಜನಪ್ರಿಯತೆಯು ಪ್ರತಿಫಲಿಸಿತು. NBA ತಂಡಗಳಲ್ಲಿ ಕಂಡುಬಂದ ವಿಶ್ವದಲ್ಲೆಡೆಯ ಆಟಗಾರರೆಂದರೆ:

೯೦ರ ದಶಕದಲ್ಲೂ ಅನೇಕ ಅಮೇರಿಕಾದವರಲ್ಲದ ಆಟಗಾರರು NBAಯಲ್ಲಿ ಹೆಸರು ಮಾಡಿದ್ದಾರೆ. ಅವರೆಂದರೆ - ಕ್ರೋಟ್‌ನ ಡ್ರಾಜೆನ್ ಪೆಟ್ರೋವಿಕ್ ಮತ್ತು ಟೋನಿ ಕುಕೋಕ್, ಸರ್ಬ್‌ನ ವ್ಲಾಡೆ ದಿವಕ್, ಲಿತ್ವೇನಿಯದವರಾದ ಆರ್ವಿದಾಸ್ ಸಬೋನಿಸ್ ಮತ್ತು ಸರುನಾಸ್ ಮಾರ್ಕ್ಯುಲಿಯೋನಿಸ್ ಮತ್ತು ಜರ್ಮನಿಯ ಡೆಟ್ಲೆಫ್ ಸ್ಕ್ರೆಂಫ್.

ಬ್ಯಾಸ್ಕೆಟ್‌ಬಾಲ್‌‌ನ ಜಾಗತೀಕರಣ[ಬದಲಾಯಿಸಿ]

ತೀರ ಇತ್ತೀಚೆಗಿನ 2002ರ ಇಂಡಿಯಾನಪೊಲಿಸ್‍‌‌ ಮತ್ತು 2006ರಲ್ಲಿ ಜಪಾನ್‌ನಲ್ಲಿ ನಡೆದ FIBA ವಿಶ್ವ ಚಾಂಪಿಯನ್‌ಶಿಪ್‌ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಎಲ್ಲಾ ತಂಡಗಳು ಆಟದ ಜಾಗತೀಕರಣವನ್ನು ಗಮನ ಸೆಳೆಯುವ ರೀತಿಯಲ್ಲಿ ನಾಟಕೀಯವಾಗಿ ಪ್ರದರ್ಶಿಸಿದವು. ೨೦೦೬ರ ತಂಡದಲ್ಲಿದ್ದ ಒಬ್ಬನೇ ಒಬ್ಬ ಅಮೇರಿಕಾದ ಆಟಗಾರನೆಂದರೆ ಕಾರ್ಮೆಲೊ ಆಂಥೊನಿ. ೨೦೦೨ರ ತಂಡವು ಯುಗೋಸ್ಲಾವಿಯಾದ (ಈಗ ಸರ್ಬಿಯಾ) ನೋವಿಟ್ಜ್‌ಕಿ, ಗಿನೋಬಿಲಿ, ಯಾವೊ,ಪೇಜ ಸ್ಟೊಜಕೊವಿಕ್ ಮತ್ತು ನ್ಯೂಜಿಲ್ಯಾಂಡ್‌ನ ಪೆರೊ ಕ್ಯಾಮೆರಾನ್ ಮೊದಲಾದವರನ್ನು ಹೊಂದಿತ್ತು. ಗಿನೊಬಿಲಿಯೂ ಸಹ ೨೦೦೬ರ ತಂಡವನ್ನು ರಚಿಸಿದನು; ಅದರಲ್ಲಿದ್ದ ಇತರ ಆಟಗಾರರೆಂದರೆ -ಆಂಥೋನಿ, ಗಸೋಲ್, ಅವನ ಸಹ ಆಟಗಾರ ಸ್ಪೇನಿಶ್‌ನ ಜಾರ್ಜ್ ಗಾರ್ಬಜೋಸ ಮತ್ತು ಗ್ರೀಸ್‌ನ ತಿಯೋಡೊರೋಸ್ ಪಪಲೋಕಸ್. ಮೇಲಿನ ಯಾವುದಾದರೂ ಒಂದು ತಂಡದಲ್ಲಿದ್ದು, NBA ಸೇರದ ಆಟಗಾರರೆಂದರೆ ಕ್ಯಾಮೆರಾನ್ ಮತ್ತು ಪಪಲೌಕಸ್ ಮಾತ್ರ. ಕೊನೆಯ ಮೂರು FIBA ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಸರ್ಬಿಯಾ (೧೯೯೮ರಲ್ಲಿ ಯುಗೋಸ್ಲಾವಿಯಾ) ಮತ್ತು ಸ್ಪೇನ್ ಗೆದ್ದುಕೊಂಡದ್ದರಿಂದಾಗಿ ಬ್ಯಾಸ್ಕೆಟ್‌ಬಾಲ್‌‌ನ ಪ್ರಾಬಲ್ಯತೆಯು ಅಂತರರಾಷ್ಟ್ರೀಯವಾಗಿ ಎಷ್ಟಿರಬಹುದು ಎಂಬುದು ಸ್ಪಷ್ಟವಾಗುತ್ತದೆ.

ನಿಯಮಗಳು ಮತ್ತು ನಿಬಂಧನೆಗಳು[ಬದಲಾಯಿಸಿ]

ಈ ವಿಭಾಗದಲ್ಲಿ ಚರ್ಚಿಸಿದ ವಿಸ್ತೀರ್ಣ ಮತ್ತು ಸಮಯ ಮಿತಿಗಳು ಪಂದ್ಯಾವಳಿಗಳು ಮತ್ತು ಸಂಸ್ಥೆಗಳಿಗೆ ಅನುಸಾರವಾಗಿ ಬದಲಾಗುತ್ತವೆ; ಅಂತರರಾಷ್ಟ್ರೀಯ ಮತ್ತು NBA ನಿಯಮಗಳನ್ನು ಈ ವಿಭಾಗದಲ್ಲಿ ವಿವರಿಸಲಾಗಿದೆ.

ಎದುರಾಳಿಯ ಬ್ಯಾಸ್ಕೆಟ್‌ನಲ್ಲಿ ಚೆಂಡು ಹಾಕುವುದು ಹಾಗೂ ಎದುರಾಳಿಯು ತಮ್ಮ ಬ್ಯಾಸ್ಕೆಟ್‌ಗೆ ಚೆಂಡು ಹಾಕಿ ಸ್ಕೋರ್ ಸಾಧಿಸುವುದನ್ನು ತಡೆಯುವುದೇ ಆಟದ ಮೂಲ ಉದ್ಧೇಶವಾಗಿದೆ. ಈ ರೀತಿಯಲ್ಲಿ ಸ್ಕೋರ್ ಮಾಡಲು ಪ್ರಯತ್ನಿಸುವುದನ್ನು ಶಾಟ್ ಎನ್ನುತ್ತಾರೆ. ಶಾಟ್ ಯಶಸ್ವಿಯಾದರೆ ಎರಡು ಅಂಕಗಳು ಲಭಿಸುತ್ತವೆ. ಅಥವಾ 6.25 metres (20 feet 6 inches) ಅಂತರರಾಷ್ಟ್ರೀಯ ಪಂದ್ಯ ಮತ್ತು 23 feet 9 inches (7.24 m) NBA ಪಂದ್ಯಗಳಲ್ಲಿ ಬ್ಯಾಸ್ಕೆಟ್‌ನಲ್ಲಿರುವ ಮೂರು-ಅಂಕದ ಕಮಾನ್‌ನನ್ನು ದಾಟಿ ಹೋದರೆ ಆಗ ಮೂರು ಅಂಕಗಳು ಸಿಗುತ್ತವೆ.

ಆಡುವ ನಿಬಂಧನೆಗಳು[ಬದಲಾಯಿಸಿ]

ಪಂದ್ಯಗಳನ್ನು ೧೦ (ಅಂತರರಾಷ್ಟ್ರೀಯ) ಅಥವಾ ೧೨ (NBA) ನಿಮಿಷಗಳ ನಾಲ್ಕು ಹಂತಗಳಲ್ಲಿ ಆಡಲಾಗುತ್ತದೆ. ಕಾಲೇಜು ಪಂದ್ಯಗಳು ೨೦-ನಿಮಿಷಗಳ ಎರಡು ಹಂತಗಳನ್ನು ಬಳಸುತ್ತವೆ. ಹೆಚ್ಚಿನ ಪ್ರೌಢ ಶಾಲಾ ಪಂದ್ಯಗಳು ಎಂಟು ನಿಮಿಷಗಳ ನಾಲ್ಕು ಹಂತಗಳನ್ನು ಬಳಸಿಕೊಳ್ಳುತ್ತವೆ. ಅರ್ಧ-ಆಟದ ನಂತರದ ವಿರಾಮಕ್ಕೆ ಹದಿನೈದು ನಿಮಿಷ ಹಾಗೂ ಇತರ ವಿರಾಮಗಳಿಗೆ ಎರಡು ನಿಮಿಷಗಳನ್ನು ನೀಡಲಾಗುತ್ತದೆ. ಓವರ್‌ಟೈಮ್ ಅವಧಿಯು ಐದು ನಿಮಿಷವಿರುತ್ತದೆ. ಅರ್ಧ ಆಟದ ನಂತರ ತಂಡಗಳು ಬ್ಯಾಸ್ಕೆಟ್‌ಗಳನ್ನು ಬದಲಾಯಿಸಿಕೊಳ್ಳುತ್ತವೆ. ನಿಗದಿಪಡಿಸಿದ ಸಮಯದಲ್ಲಿ ಆಡುವ ಸಮಯ ಮಾತ್ರ ಇರುತ್ತದೆ; ಆಟ ನಡೆಯುತ್ತಿಲ್ಲದಿದ್ದರೆ ಸಮಯವನ್ನು ಸೂಚಿಸುವ ಮಾಪಕವನ್ನು ನಿಲ್ಲಿಸಲಾಗುತ್ತದೆ. ಆದ್ದರಿಂದ ಪಂದ್ಯಗಳು ಸಾಮಾನ್ಯವಾಗಿ ಪೂರ್ಣಗೊಳ್ಳಲು ಗೊತ್ತುಪಡಿಸಿದ ಆಟದ ಸಮಯಕ್ಕಿಂತ ಹೆಚ್ಚು ಕಾಲ, ಸುಮಾರು ಎರಡು ಗಂಟೆಗಳಷ್ಟು, ತೆಗೆದುಕೊಳ್ಳುತ್ತವೆ.

ಒಂದು ಬಾರಿಗೆ ಪ್ರತೀ ತಂಡದಿಂದ ಐದು ಆಟಗಾರರು (ಹನ್ನೆರಡು ಆಟಗಾರರ ಸರದಿಪಟ್ಟಿಯಿಂದ) ಅಂಕಣದಲ್ಲಿರುತ್ತಾರೆ. ಬದಲಿ ನೇಮಕಾತಿಗಳಿಗೆ ಮಿತಿ ಇಲ್ಲ ಆದರೆ ಆಟವು ನಿಂತರೆ ಮಾತ್ರ ಅದನ್ನು ಮಾಡಲಾಗುತ್ತದೆ. ತಂಡಗಳು ತರಬೇತುದಾರರನ್ನೂ ಹೊಂದಿರುತ್ತವೆ, ಅವರು ತಂಡದ ಬೆಳವಣಿಗೆ ಮತ್ತು ನಿರ್ವಹಣಾ ಕೌಶಲ್ಯವನ್ನು ನೋಡಿಕೊಳ್ಳುತ್ತಾರೆ. ಸಹಾಯಕ ತರಬೇತುದಾರರು, ವ್ಯವಸ್ಥಾಪಕರು, ಸಂಖ್ಯಾಶಾಸ್ತ್ರಜ್ಞರು, ವೈದ್ಯರು ಮತ್ತು ದೈಹಿಕ ಶಿಕ್ಷಕರು ತಂಡದಲ್ಲಿರುವ ಇತರ ಸಿಬ್ಬಂದಿಗಳು.

ಪುರುಷರು ಮತ್ತು ಮಹಿಳೆಯರ ಎರಡು ತಂಡಗಳಿಗೂ ಪ್ರಮಾಣಿತ ಸಮವಸ್ತ್ರವಿದ್ದು, ಇದು ಒಂದು ಜೊತೆ ಶಾರ್ಟ್ಸ್ ಮತ್ತು ಜರ್ಸಿಯನ್ನು ಒಳಗೊಂಡಿರುತ್ತದೆ. ಸಮವಸ್ತ್ರದ ಹಿಂಭಾಗ ಮತ್ತು ಮುಂಭಾಗದಲ್ಲಿ ತಂಡದ ಆಟಗಾರನ ನಿರ್ದಿಷ್ಟ ಸಂಖ್ಯೆಯನ್ನು ಸ್ಪಷ್ಟವಾಗಿ ಕಾಣುವಂತೆ ಅಚ್ಚೊತ್ತಿರುತ್ತಾರೆ. ಆಟಗಾರರು ಹೆಚ್ಚು ಎತ್ತರದ ಅಟ್ಟೆಯಿರುವ ಶೂಗಳನ್ನು ಧರಿಸುತ್ತಾರೆ, ಅವು ಕಣಕಾಲಿಗೆ ಹೆಚ್ಚು ಆಧಾರವನ್ನು ಕೊಡುತ್ತವೆ. ಸಮವಸ್ತ್ರದ ಮೇಲೆ ತಂಡಗಳ ಹೆಸರು, ಆಟಗಾರರ ಹೆಸರು ಮಾತ್ರವಲ್ಲದೆ, ಉತ್ತರ ಅಮೇರಿಕಾದಿಂದ ಹೊರಗೆ ಪ್ರಾಯೋಜಕರ ಹೆಸರನ್ನೂ ಅಚ್ಚೊತ್ತಿರುತ್ತಾರೆ.

ಆಟಗಾರರೊಂದಿಗೆ ಅಲ್ವಾವಧಿಯ ಭೇಟಿಗಾಗಿ ತರಬೇತುದಾರ ಕೋರಿದಾಗ ಸಮಯ ಸೂಚಕವನ್ನು ನಿಲ್ಲಿಸಲಾಗುತ್ತದೆ, ಈ ರೀತಿಯ ಒಂದು ಸೀಮಿತ ಸಂಖ್ಯೆಯ ಟೈಮ್ ಔಟ್‌ಗಳನ್ನು ಆಟದಲ್ಲಿ ಅನುಮತಿಸಲಾಗಿದೆ. ಈ ಭೇಟಿಯು ಸಾಮಾನ್ಯವಾಗಿ ಒಂದು ನಿಮಿಷಕ್ಕಿಂತ ಹೆಚ್ಚಿರುವುದಿಲ್ಲ, ಒಂದು ವೇಳೆ ಪಂದ್ಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಲ್ಲಿ ಜಾಹೀರಾತುಗಳು ಪ್ರಸಾರಗೊಳ್ಳುವ ಸಂದರ್ಭದಲ್ಲಿ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು.

ತೀರ್ಪುಗಾರರು (NBAಯಲ್ಲಿ ತಂಡದ ಮುಖ್ಯಾಧಿಕಾರಿ ಎನ್ನುತ್ತಾರೆ), ಒಂದು ಅಥವಾ ಎರಡು ಅಂಪೈರುಗಳು (NBAಯಲ್ಲಿ ತೀರ್ಪುಗಾರರು ಎಂದು ಕರೆಯುತ್ತಾರೆ) ಮತ್ತು ಅಂಕಿಅಂಶಗಳನ್ನು ನಿರ್ವಹಿಸುವ ಅಧಿಕಾರಿಗಳು ಮೊದಲಾದವರು ಆಟವನ್ನು ನಿಯಂತ್ರಿಸುತ್ತಾರೆ. ಕಾಲೇಜು, NBA ಮತ್ತು ಅನೇಕ ಪ್ರೌಢ ಶಾಲೆಗಳ ಆಟದಲ್ಲಿ ಒಟ್ಟು ಮೂರು ತೀರ್ಪುಗಾರರು ಅಂಕಣದಲ್ಲಿ ಇರುತ್ತಾರೆ. ಅಂಕಿಅಂಶಗಳನ್ನು ನಿರ್ವಹಿಸುವ ಅಧಿಕಾರಿಗಳು ಪ್ರತೀ ತಂಡಗಳ ಅಂಕಗಳು, ಟೈಮ್‌ಕೀಪಿಂಗ್, ವೈಯಕ್ತಿಕ ಮತ್ತು ತಂಡಗಳ ಫೌಲುಗಳು, ಆಟಗಾರರ ಬದಲಿ ನೇಮಕಾತಿಗಳು, ತಂಡದ ಹತೋಟಿ ರೇಖೆಗಳು, ಮತ್ತು ಶಾಟ್ ಕ್ಲಾಕ್ ಮೊದಲಾದ ಅಂಶಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಾರೆ.

ಸಾಧನ[ಬದಲಾಯಿಸಿ]

ಶಾಸ್ತ್ರೀಯ ಎಂಟು-ಪಂಕ್ತಿಗಳ ಬ್ಯಾಸ್ಕೆಟ್‌ಬಾಲ್‌

ಬ್ಯಾಸ್ಕೆಟ್‌ಬಾಲ್‌ ಆಟದಲ್ಲಿ ಮುಖ್ಯವಾಗಿ ಬೇಕಾಗುವ ಸಾಧನಗಳೆಂದರೆ ಬ್ಯಾಸ್ಕೆಟ್‌ಬಾಲ್‌ ಮತ್ತು ಅಂಕಣ. ಅಂಕಣವು ಸಮತಟ್ಟಾಗಿದ್ದು, ಆಯತಾಕೃತಿ ಮೇಲ್ಮೈಯನ್ನು ಹೊಂದಿರುತ್ತದೆ ಮತ್ತು ಅಂಕಣದ ವಿರುದ್ಧ ತುದಿಗಳಲ್ಲಿ ಬ್ಯಾಸ್ಕೆಟ್‌ಗಳಿರುತ್ತದೆ(ಅಥವಾ ೩-ಆನ್-೩ ಸ್ಟ್ರೀಟ್ ಬ್ಯಾಸ್ಕೆಟ್‌ಬಾಲ್‌ನ ಅಂಕಣದಲ್ಲಿ ಒಂದು ಬ್ಯಾಸ್ಕೆಟ್‌ ಮಾತ್ರ ಇರುತ್ತದೆ). ಸ್ಪರ್ಧಾತ್ಮಕ ಹಂತಗಳಲ್ಲಿ ಗಡಿಯಾರ, ಸ್ಕೋರ್‌ಶೀಟ್‌, ಸ್ಕೋರ್‌ಬೋರ್ಡ್, ಪರ್ಯಾಯ ಹತೋಟಿ ರೇಖೆಗಳು, ಶಬ್ಧ ಮಾಡುವ ಸ್ಟಾಪ್-ಕ್ಲಾಕ್ ವ್ಯವಸ್ಥೆ ಇತ್ಯಾದಿ ಹೆಚ್ಚಿನ ಸಾಧನಗಳನ್ನು ಬಳಸುವ ಅಗತ್ಯವಿರುತ್ತದೆ.

ಹೊರಾಂಗಣದ ಬ್ಯಾಸ್ಕೆಟ್‌ಬಾಲ್‌ ಬಲೆ.

ಅಂತರರಾಷ್ಟ್ರೀಯ ಪಂದ್ಯದ ಒಂದು ಮಾದರಿ ಬ್ಯಾಸ್ಕೆಟ್‌ಬಾಲ್‌ ಅಂಕಣವು ೨೮ ಮೀಟರ್ ಉದ್ದ ೧೫ ಮೀಟರ್ ಅಗಲವಿರುತ್ತದೆ (ಸುಮಾರು ೯೨ ಅಡಿ ಉದ್ದ ೪೯ ಅಡಿ ಅಗಲ) ಹಾಗೂ NBAಯ ಅಂಕಣವು ೯೪ ಅಡಿ ಉದ್ದ ೫೦ ಅಡಿ ಅಗಲವಿರುತ್ತದೆ (೨೯ ಮೀ ಉದ್ದ ೧೫ ಮೀ ಅಗಲ). ಹೆಚ್ಚಿನ ಅಂಕಣಗಳನ್ನು ಸಾಮಾನ್ಯವಾಗಿ ಮ್ಯಾಪಲ್‌ ಮರದಿಂದ ಮಾಡಿರುತ್ತಾರೆ.[೨೩] ಬಲೆ ಮತ್ತು ಹಿಂಬದಿ ಹಲಗೆಯನ್ನು ಹೊಂದಿರುವ ಸ್ಟೀಲ್ ಬ್ಯಾಸ್ಕೆಟ್‌ನ್ನು ಅಂಕಣದ ಪ್ರತಿಯೊಂದು ಮೂಲೆಯಲ್ಲಿ ತೂಗುಹಾಕಿರುತ್ತಾರೆ. ಹೆಚ್ಚಿನ ಎಲ್ಲಾ ಹಂತದ ಸ್ಪರ್ಧೆಯಲ್ಲಿ ರಿಮ್‌ನ (ಉಂಗುರ) ಮೇಲ್ತುದಿಯು ಸರಿಯಾಗಿ 10 feet (3.05 metres) ಅಂಕಣದ ಮೇಲ್ಭಾಗದಲ್ಲಿರುತ್ತದೆ ಹಾಗೂ 4 feet (1.2 metres) ಬೇಸ್‌ಲೈನ್‌ನ ಒಳಗಿರುತ್ತದೆ. ಅಂಕಣ ಮತ್ತು ಹಿಂಬದಿಯ ಹಲಗೆಯ ಅಳತೆಗಳಲ್ಲಿ ಬದಲಾವಣೆಗಳಿರಬಹುದು, ಆದರೆ ಬ್ಯಾಸ್ಕೆಟ್ ಸರಿಯಾದ ಎತ್ತರದಲ್ಲಿರುವುದು ಮುಖ್ಯ. ರಿಮ್ ಅಷ್ಟೇನು ಸಂಬಂಧಿಸಿಲ್ಲದಿದ್ದರೂ ಚೆಂಡು ಎಸೆಯುವ ಸಂದರ್ಭದಲ್ಲಿ ಪ್ರತಿಕೂಲ ಪ್ರಭಾವ ಬೀರುತ್ತವೆ.

ಬ್ಯಾಸ್ಕೆಟ್‌ಬಾಲ್‌ನ ಗಾತ್ರ ಹೇಗಿರಬೇಕೆಂಬುದಕ್ಕೂ ನಿಬಂಧನೆಗಳಿವೆ. ಮಹಿಳೆಯರು ಆಡುವ ಅಧಿಕೃತ ಬ್ಯಾಸ್ಕೆಟ್‌ಬಾಲ್‌ನ ಸುತ್ತಳತೆ ೨೮.೫" (ಗಾತ್ರ ೬) ಮತ್ತು ತೂಕ ೨೦ oz. ಪುರುಷರ ಆಟದ ಅಧಿಕೃತ ಚೆಂಡಿನ ಸುತ್ತಳತೆ ೨೯.೫" (ಗಾತ್ರ ೭) ಮತ್ತು ಅದು ೨೨ oz ತೂಗುತ್ತದೆ.

ಉಲ್ಲಂಘನೆಗಳು[ಬದಲಾಯಿಸಿ]

ಚೆಂಡನ್ನು ಎಸೆಯುವುದು, ಆಟಗಾರರ ಮಧ್ಯೆ ಪಾಸ್ ಮಾಡುವುದು, ಬಿಸಾಡುವುದು, ಹೊಡೆಯುವುದು, ಉರುಳಿಸುವುದು ಅಥವಾ ಪುಟಿಸುತ್ತಾ ಮುಂದಕ್ಕೆ ತೆಗೆದುಕೊಂಡು ಹೋಗುವುದು (ಓಡುವಾಗ ಚೆಂಡನ್ನು ಪುಟಿಸುವುದು) ಇವೆಲ್ಲವನ್ನು ಮಾಡುವುದರ ಮೂಲಕ ಚೆಂಡನ್ನು ಬ್ಯಾಸ್ಕೆಟ್ ಬಳಿಗೆ ಕೊಂಡೊಯ್ಯಬಹುದು.

ಚೆಂಡು ಅಂಕಣದ ಒಳಗೆ ಇರಬೇಕು. ಚೆಂಡು ಗಡಿ ರೇಖೆಯನ್ನು ದಾಟುವ ಮೊದಲು ಮುಟ್ಟುವ ತಂಡವು ಹತೋಟಿಯನ್ನು ಕಳೆದುಕೊಳ್ಳುತ್ತದೆ. ಚೆಂಡು ಸೀಮಾರೇಖೆಯನ್ನು ಸೋಕಿದರೆ ಅಥವಾ ದಾಟಿದರೆ, ಅಥವಾ ಗಡಿಯಿಂದ ಹೊರಗಿರುವ ಆಟಗಾರ ಮುಟ್ಟಿದರೆ ಗಡಿರೇಖೆಯಿಂದ ಹೊರಗುಳಿಯುತ್ತದೆ. ಚೆಂಡಿನ (ಅಥವಾ ಆಟಗಾರ) ಯಾವುದೇ ಭಾಗವು ಸೀಮಾರೇಖೆಯನ್ನು ಸೋಕಿದರೂ ಚೆಂಡು ಒಳಗೇ ಇದೆ ಎಂದು ಪರಿಗಣಿಸಲಾಗುವ ಸಾಕರ್, ವಾಲಿಬಾಲ್, ಮತ್ತು ಟೆನ್ನಿಸ್ (ಆದರೆ ರಗ್ಬಿ ಅಥವಾ ಅಮೇರಿಕಾದ ಫುಟ್ಬಾಲ್ ಅಲ್ಲ) ಮೊದಲಾದ ಕ್ರೀಡೆಗಳಿಗಿಂತ ಇದು ಭಿನ್ನವಾದದ್ದು.

ಚೆಂಡು ಹಿಡಿದಿರುವವನು ಚೆಂಡನ್ನು ಪುಟಿಸದೆ ಎರಡೂ ಹೆಜ್ಜೆಗಳನ್ನಿಟ್ಟರೆ ಇದನ್ನು ಟ್ರಾವೆಲಿಂಗ್ ಎನ್ನುತ್ತಾರೆ ಹಾಗೂ ಎರಡೂ ಕೈಗಳಿಂದ ಪುಟಿಸಿದರೆ ಅಥವಾ ಪುಟಿಸುವ ಮಧ್ಯದಲ್ಲಿ ಚೆಂಡನ್ನು ಹಿಡಿದರೆ ಡಬಲ್ ಡ್ರಿಬ್ಲಿಂಗ್ ಎನ್ನುತ್ತಾರೆ. ಚೆಂಡನ್ನು ಪುಟಿಸುವಾಗ ಆಟಗಾರನ ಕೈ ಚೆಂಡಿನ ಕೆಳಗಿರಬಾರದು, ಹಾಗಿದ್ದರೆ ಅದನ್ನು ಕ್ಯಾರಿಂಗ್ ದಿ ಬಾಲ್ ಎನ್ನುತ್ತಾರೆ. ಅಂಕಣದ ಮುಂದಿನ ಭಾಗದಲ್ಲಿ ಚೆಂಡಿನ ನಿಯಂತ್ರಣ ಸ್ಥಾಪಿಸಿದ ತಂಡವು ಚೆಂಡನ್ನು ಹಿಂಬದಿ ಅಂಕಣಕ್ಕೆ ಹಿಂದಿರುಗಿಸುವುದಿಲ್ಲ. ಚೆಂಡನ್ನು ಮುಷ್ಟಿಯಿಂದ ಒದೆಯಬಾರದು, ಇಲ್ಲವೇ ಅಪ್ಪಳಿಸುವಂತಿಲ್ಲ. ಈ ನಿಯಮಗಳ ಉಲ್ಲಂಘನೆ ಮಾಡಿದರೆ ಚೆಂಡಿನ ಮೇಲಿನ ಹತೋಟಿ ಕಳೆದುಕೊಳ್ಳಬೇಕಾಗುತ್ತದೆ ಅಥವಾ ಇದು ಡಿಫೆನ್ಸ್ ಮಾಡಿದ್ದರೆ ಶಾಟ್ ಕ್ಲಾಕ್‌ನ್ನು ಮರುಹೊಂದಿಸಬೇಕಾಗುತ್ತದೆ.

ಅರ್ಧದಾರಿವರೆಗೆ ಚೆಂಡನ್ನು ಮುಂದುವರಿಸುವ ಮೊದಲು(ಅಂತರರಾಷ್ಟ್ರೀಯ ಮತ್ತು NBAಯಲ್ಲಿ ೮ ಸೆಕಂಡುಗಳು; NCAA ಮತ್ತು ಪ್ರೌಢ ಶಾಲೆಗಳಲ್ಲಿ ೧೦ ಸೆಕೆಂಡುಗಳು), ಶಾಟ್‌ಗೆ ಪ್ರಯತ್ನಿಸುವ ಮೊದಲು (NBAಯಲ್ಲಿ ೨೪ ಸೆಕೆಂಡುಗಳು, NCAA ಮಹಿಳೆಯರು ಮತ್ತು ಎರಡೂ ಲಿಂಗಗಳ ಕೆನಡಾದವರ ಅಂತರ್‌-ವಿಶ್ವವಿದ್ಯಾನಿಲಯ ಕ್ರೀಡೆಯಲ್ಲಿ ೩೦ ಸೆಕೆಂಡುಗಳು ಮತ್ತು NCAA ಪುರುಷರ ಪಂದ್ಯದಲ್ಲಿ ೩೫ ಸೆಕೆಂಡುಗಳು), ರಕ್ಷಣಾತ್ಮಕವಾಗಿದ್ದಾಗ ಚೆಂಡನ್ನು ಹಿಡಿದುಕೊಳ್ಳಲು (೫ ಸೆಕೆಂಡುಗಳು), ಮತ್ತು ನಿರ್ಬಂಧಿತ ವಲಯದಲ್ಲಿ (ಲೇನ್ ಅಥವಾ "ಕೀ") (೩ ಸೆಕೆಂಡುಗಳು) ತೆಗೆದುಕೊಳ್ಳುವ ಸಮಯಕ್ಕೆ ಮಿತಿ ಇದೆ. ಹೆಚ್ಚಿನ ಉಲ್ಲಂಘನೆಗಳನ್ನು ನಿಯಂತ್ರಿಸುವುದಕ್ಕಾಗಿ ಈ ನಿಯಮಗಳನ್ನು ರೂಪಿಸಲಾಗಿದೆ.

ಚೆಂಡು ಬ್ಯಾಸ್ಕೆಟ್‌ನೊಳಕ್ಕೆ ಬೀಳುವಾಗ ಚೆಂಡಿಗೆ ಅಥವಾ ಬ್ಯಾಸ್ಕೆಟ್‌ಗೆ, ಅಥವಾ ಅದು ರಿಮ್‌ನ ಮೇಲಿರುವಾಗ (ಅಥವಾ NBAಯಲ್ಲಿ ಅದು ನೇರವಾಗಿ ಬ್ಯಾಸ್ಕೆಟ್‌ನ ಮೇಲಿರುವಾಗ) ಯಾವುದೇ ಆಟಗಾರ ಕೈಹಾಕಬಾರದು, ಹಾಗೆ ಮಾಡುವ ಉಲ್ಲಂಘನೆಯನ್ನು ಗೋಲ್‌ಟೆಂಡಿಂಗ್ ಎನ್ನುತ್ತಾರೆ. ಡಿಫೆನ್ಸಿವ್ ಆಟಗಾರ ಗೋಲ್‌ಟೆಂಡ್ ಮಾಡಿದರೆ, ಪ್ರಯತ್ನಿಸಿದ ಶಾಟ್ ಯಶಸ್ವಿ ಎಂಬುದಾಗಿ ಪರಿಗಣಿಸಲಾಗುತ್ತದೆ. ಹೊಡೆಯುವವ ಸಹ ಆಟಗಾರ ಗೋಲ್‌ಟೆಂಡ್ ಮಾಡಿದರೆ, ಬ್ಯಾಸ್ಕೆಟ್‌ನ್ನು ರದ್ದುಗೊಳಿಸಲಾಗುತ್ತದೆ ಮತ್ತು ಚೆಂಡನ್ನು ಹತೋಟಿ ಪಡೆದುಕೊಂಡ ಡಿಫೆನ್ಸಿವ್ ತಂಡ ಆಟವನ್ನು ಮುಂದುವರಿಸುತ್ತದೆ.

'ಫೌಲ್‌'ಗಳು[ಬದಲಾಯಿಸಿ]

'ಫೌಲ್‌' ಎಸಗಲಾಗಿದೆಯೆಂದು ರೆಫರೀ ಸೂಚಿಸುತ್ತಿರುವುದು.

ಶಾರೀರಿಕವಾಗಿ ತಾಗಿಸುವ ಮೂಲಕ ಎದುರಾಳಿ ಆಟಗಾರನನ್ನು ತಡೆಯುವ ಯತ್ನ ನಿಯಮಬಾಹಿರ ; ಇದನ್ನು 'ಫೌಲ್‌' ಎಂದು ಪರಿಗಣಿಸಲಾಗುತ್ತದೆ. ರಕ್ಷಣಾತ್ಮಕ ಆಟಗಾರರು 'ಫೌಲ್‌' ಕೃತ್ಯಗಳನ್ನೆಸಗುವುದು ಸಾಮಾನ್ಯವಾಗಿದೆ. ಆದರೂ ಕೆಲವೊಮ್ಮೆ, ಅಕ್ರಮಣ ಮಾಡುವ (=ಚೆಂಡಿನೊಂದಿಗೆ ಮುನ್ನುಗ್ಗುತ್ತಿರುವ) ಆಟಗಾರರೂ ಸಹ 'ಫೌಲ್‌' ಎಸಗುವ ಸಾಧ್ಯತೆಗಳೂ ಉಂಟು. 'ಫೌಲ್‌'ಗೆ ಈಡಾದ ಆಟಗಾರರಿಗೆ ಚೆಂಡು ಅಂಕಣದೊಳಗೆ ರವಾನಿಸಲು ಅವಕಾಶ ಲಭಿಸಬಹುದು; ಅಥವಾ, ಗೋಲು ಮಾಡುವ ಯತ್ನದಲ್ಲಿರುವಾಗ 'ಫೌಲ್‌'ಗೀಡಾದಲ್ಲಿ, ಒಂದು ಅಥವಾ ಹೆಚ್ಚು 'ಫ್ರೀ-ಥ್ರೋ'ಗಳನ್ನು ಪಡೆಯಬಹುದು. ಇದು ಚೆಂಡು ಎಸೆತದ ಸಫಲತೆಯನ್ನು ಅವಲಂಬಿಸಿದೆ. ಬ್ಯಾಸ್ಕೆಟ್‌ನಿಂದ ನಿರ್ದಿಷ್ಟ ದೂರದಲ್ಲಿರುವ ರೇಖೆಯಿಂದ15 feet (4.6 metres) ಯತ್ನಿಸಲಾದ ಒಂದು 'ಫ್ರೀ-ಥ್ರೋ'ಗೆ ಒಂದು ಅಂಕವನ್ನು ನೀಡಲಾಗುವುದು.

'ಫೌಲ್‌' ಎಂದು ನಿರ್ಧರಿಸುವಾಗ ರೆಫರಿ ತಮ್ಮ ವಿವೇಚನೆಯನ್ನು ಬಳಸಬಹುದು (ಉದಾಹರಣೆಗೆ, ನ್ಯಾಯವಲ್ಲದ ಮೇಲುಗೈ ಸಾಧಿಸಲಾಗಿತ್ತೇ ಎಂಬುದನ್ನು ಪರಿಗಣಿಸುವಾಗ). ರೆಫರಿಗಳು ಕೆಲವೊಮ್ಮೆ ವಿವಾದಾತ್ಮಕ 'ಫೌಲ್‌' ನಿರ್ಧಾರಗಳನ್ನು ತೆಗೆದುಕೊಂಡದ್ದೂ ಉಂಟು. 'ಫೌಲ್‌'ಗೆ ಸಂಬಂಧಿಸಿದಂತೆ ಪಂದ್ಯ, ಲೀಗ್‌ ಮತ್ತು ರೆಫರಿಗಳ ನಡುವೆ ವ್ಯತ್ಯಾಸಗಳಾಗಬಹುದು.

ಆಟಗಾರ ಅಥವಾ ತರಬೇತುದಾರ ಕೀಳು ಕ್ರೀಡಾ ಮನೋಭಾವ ಪ್ರದರ್ಶಿಸುವುದು, ಉದಾಹರಣೆಗೆ, ರೆಫರಿ ಜೊತೆ ವಾದ ಅಥವಾ ಇನ್ನೊಬ್ಬ ಆಟಗಾರನೊಂದಿಗೆ ಜಗಳಕ್ಕಿಳಿಯುವುದನ್ನು ಗಂಭೀರವಾಗಿ ಪರಿಗಣಿಸಿ 'ತಾಂತ್ರಿಕ ಫೌಲ್‌ (=ಟೆಕ್ನಿಕಲ್‌ ಫೌಲ್‌)' ಎಂದು ಪರಿಗಣಿಸಲಾಗುತ್ತದೆ.

ಪ್ರತಿಬಂಧಕ(ಪೆನಲ್ಟಿ)'ಫ್ರೀ-ಥ್ರೋ'ಗಳು (ವೈಯಕ್ತಿಕ ಫೌಲ್‌ಗಿಂತಲೂ ಭಿನ್ನವಾಗಿ, ಎದುರಾಳಿಯ ತಂಡವು 'ಫ್ರೀ-ಥ್ರೋ' ಎಸೆಯಲು ಯಾವುದೇ ಆಟಗಾರನನ್ನು ಆಯ್ಕೆ ಮಾಡಬಹುದು)ಮತ್ತು ಇದು ಲೀಗ್‌ಗಳ ನಡುವೆ ವ್ಯತ್ಯಾಸವಾಗುತ್ತದೆ.

'ಫೌಲ್‌' ಘಟನೆಗಳು ಮರುಕಳಿಸಿದಲ್ಲಿ ಆಟಗಾರನನ್ನು ಹೊರಗೆ ಕಳುಹಿಸಲಾಗುವುದು. ಮಿತಿಮೀರಿದ ಅಥವಾ ಚೆಂಡನ್ನು ವಶಪಡಿಸಿಕೊಳ್ಳುವ ಯತ್ನವಲ್ಲದ ಶಾರೀರಿಕ ತಾಗುವಿಕೆ ಮತ್ತು ಬೇಕಾಬಿಟ್ಟಿ 'ಫೌಲ್‌'ಗಳನ್ನು 'ಕ್ರೀಡಾ ಮನೋಭಾವಕ್ಕೆ ವಿರುದ್ಧವಾದ ಫೌಲ್'ಗಳೆಂದು (NBAದಲ್ಲಿ 'ಫ್ಲ್ಯಾಗ್ರಂಟ್‌ ಫೌಲ್‌'(=ಎದ್ದು ಕಾಣುವಂತಹ 'ಫೌಲ್‌') ಎಂದು) ಪರಿಗಣಿಸಿ, ಕೂಡಲೇ ಆಟಗಾರನನ್ನು/ರನ್ನು ಅಂಕಣದಿಂದ ಹೊರಗೆ ಕಳುಹಿಸಲಾಗುತ್ತದೆ.

ತಂಡವೊಂದು (ಕಾಲು ಅಥವಾ ಅರ್ಧ) ನಿರ್ದಿಷ್ಟ ಅವಧಿಯಲ್ಲಿ 'ತಂಡ ಫೌಲ್‌'ಗಳು- NBA ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ನಾಲ್ಕು 'ಫೌಲ್‌'ಗಳು- ಮಿತಿಯನ್ನು ಮೀರಿದ್ದಲ್ಲಿ, ಆ ಅವಧಿಯ ಉಳಿದ ಸಮಯದಲ್ಲಿ ಸಂಭವಿಸುವ ಪ್ರತಿಯೊಂದು 'ಫೌಲ್‌'ಗೂ ಎದುರಾಳಿ ತಂಡಕ್ಕೆ ಒಂದು ಅಥವಾ ಎರಡು 'ಫ್ರೀ-ಧ್ರೋ' ಅವಕಾಶಗಳನ್ನು ನೀಡಲಾಗುವುದು. 'ಫ್ರೀ-ಥ್ರೋ'ಗಳ ಸಂಖ್ಯೆಯು ಲೀಗ್‌ನ್ನು ಅವಲಂಬಿಸಿದೆ. US ಕಾಲೇಜು ಪಂದ್ಯದಲ್ಲಿ ತಂಡವೊಂದು ಅರ್ಧಾವಧಿಯಲ್ಲಿ ಏಳು 'ಫೌಲ್‌'ಗಳನ್ನು ಮೀರಿದಲ್ಲಿ, ಎದುರಾಳಿ ತಂಡಕ್ಕೆ 'ಒನ್-ಅಂಡ್‌-ಒನ್‌ ಫ್ರೀ-ಥ್ರೋ' ಅವಕಾಶ ನೀಡಲಾಗುವುದು. (ಮೊದಲ 'ಫ್ರೀ-ಥ್ರೋ' ಯತ್ನ ಮಾಡುವ ಆಟಗಾರನೊಬ್ಬನಿಗೆ ಎರಡನೆಯ ಅವಕಾಶವನ್ನು ನೀಡಲಾಗುವುದು). ತಂಡವೊಂದು ಅರ್ಧಾವಧಿಯಲ್ಲಿ ಹತ್ತು 'ಫೌಲ್‌'ಗಳನ್ನು ಮೀರಿದಲ್ಲಿ, ಆ ಅವಧಿಯ ಉಳಿದ ಸಮಯದಲ್ಲಿ ಸಂಭವಿಸುವ ಪ್ರತಿಯೊಂದು ಫೌಲ್‌ಗೆ ಎದುರಾಳಿ ತಂಡಕ್ಕೆ ಎರಡು ಫ್ರೀ-ಥ್ರೋ ಅವಕಾಶಗಳನ್ನು ನೀಡಲಾಗುವುದು. ಆಟಗಾರನೊಬ್ಬನು ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ (ತಾಂತ್ರಿಕ ಫೌಲ್‌ ಸೇರಿ) ಐದು ಫೌಲ್‌ಗಳನ್ನೆಸಗಿದಲ್ಲಿ, ಅಥವಾ NBA ಪಂದ್ಯವೊಂದರಲ್ಲಿ (ತಾಂತ್ರಿಕ ಫೌಲ್‌ ಹೊರತುಪಡಿಸಿ) ಆರು ಫೌಲ್‌ಗಳನ್ನೆಸಗಿದಲ್ಲಿ, ಪಂದ್ಯದ ಉಳಿದ ಭಾಗದಲ್ಲಿ ಆತ ಆಡುವಂತಿಲ್ಲ; 'ಫೌಲ್ಡ್‌ ಔಟ್‌' ಆಗುತ್ತಾನೆ.

ತಂಡವೊಂದು ನಿರ್ದಿಷ್ಟ ಫೌಲ್‌ಗಳನ್ನೆಸಗಿದಾಗ ಅದು 'ಇನ್‌ ದಿ ಪೆನಲ್ಟಿ'ಯಲ್ಲಿದೆಯೆಂದು ಹೇಳಲಾಗುತ್ತದೆ. ಸ್ಕೋರುಬೋರ್ಡ್‌ಗಳಲ್ಲಿ 'ಬೋನಸ್‌' ಅಥವಾ 'ಪೆನಲ್ಟಿ' ಎಂಬುದನ್ನು ದೀಪವೊಂದು ಸಾಮಾನ್ಯವಾಗಿ ತೋರಿಸುತ್ತದೆ, ಅಂತೆಯೇ ಎದುರಾಳಿ ತಂಡದಿಂದ ಫೌಲ್‌ಗೊಳಪಟ್ಟ ತಂಡವು ಗಳಿಸುವ 'ಫ್ರೀ-ಥ್ರೋ'ಗಳನ್ನು ಬೆಳಗುತ್ತಿರುವ ದಿಗ್ಬಾಣವೊಂದು ಸೂಚಿಸುತ್ತದೆ. (ಕೆಲವು ಸ್ಕೋರುಬೋರ್ಡ್‌ಗಳು ಎಸಗಲಾದ ಫೌಲ್‌ಗಳ ಸಂಖ್ಯೆಯನ್ನೂ ಸಹ ತೋರಿಸುತ್ತವೆ.)

ಗೋಲು ಹೊಡೆಯುವ ಯತ್ನದಲ್ಲಿರದ ಆಟಗಾರನೊಬ್ಬನು ಫೌಲ್‌ಗೊಳಗಾದಲ್ಲಿ, ಫೌಲ್‌ಗಳ ಸಂಖ್ಯೆಯೊಂದಿಗೆ ನೀಡಲಾದ ಫ್ರೀ-ಥ್ರೋಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಆರಂಭದಲ್ಲಿ, ಒಂದು ಗೋಲು ಮಾಡುವ ಅವಕಾಶವನ್ನು ನೀಡಲಾಗುತ್ತದೆ; ಆದರೆ ಹೆಚ್ಚುವರಿ ಫೌಲ್‌ಗಳಾದಲ್ಲಿ, ಎದುರಾಳಿ ತಂಡಕ್ಕೆ (ಎ) ಒಂದು ಎಸೆತದ ಅವಕಾಶ, ಇದರ ಗೋಲು ಸಫಲವಾದಲ್ಲಿ ಇನ್ನೊಂದು ಎಸೆತಕ್ಕೆ ಅವಕಾಶ (ಒನ್‌-ಅಂಡ್‌-ಒನ್‌) ಅಥವಾ (ಬಿ) ಎರಡು ಎಸೆತಗಳ ಅವಕಾಶವನ್ನು ನೀಡಲಾಗುವುದು. 'ಒನ್‌-ಅಂಡ್‌-ಒನ್‌ ಫ್ರೀ-ಥ್ರೋ'ನಲ್ಲಿ ತಂಡದ ಮೊದಲ ಎಸೆತವು (ಅಥವಾ 'ಫ್ರಂಟ್‌ ಎಂಡ್‌'ನ) ಗುರಿ ತಪ್ಪಿದಾಗ, ಎದುರಾಳಿ ತಂಡವು ಚೆಂಡನ್ನು ಪುನರ್ ಪಡೆಯಲು ಯತ್ನಿಸಿ ಆಟವನ್ನು ಮುಂದುವರೆಸಬಹುದು. ತಂಡದ ಎರಡು ಗೋಲು ಎಸೆತಗಳ ಫ್ರೀ-ಥ್ರೋನಲ್ಲಿ ಮೊದಲ ಎಸೆತ ಗುರಿ ತಪ್ಪಿದರೆ, ಎದುರಾಳಿ ತಂಡ ಎರಡನೆಯ ಎಸೆತ ಮುಗಿಯುವವರೆಗೂ ಕಾದು, ನಂತರ ಚೆಂಡನ್ನು ಪುನರ್ ಪಡೆಯಲು ಯತ್ನಿಸಿ ಆಟವನ್ನು ಮುಂದುವರೆಸಬಹುದು.

ಚೆಂಡನ್ನು ಎಸೆಯುವ ಯತ್ನದಲ್ಲಿ ಆಟಗಾರನೊಬ್ಬನು ಫೌಲ್‌ಗೆ ಒಳಗಾಗಿ ಗೋಲು ಮಾಡುವ ಯತ್ನ ವಿಫಲವಾದಲ್ಲಿ, ಆ ಆಟಗಾರ ಗೋಲಿಗೆ ಯತ್ನಿಸಿದಷ್ಟೇ ಸಮಾನ ಸಂಖ್ಯೆಯಲ್ಲಿ 'ಫ್ರೀ-ಥ್ರೋ'ಗಳನ್ನು ನೀಡಲಾಗುವುದು. ಮಾಮೂಲು ಎರಡು-ಅಂಕಕ್ಕಾಗಿ ಚೆಂಡು ಎಸೆಯುವಾಗ ಆಟಗಾರರು 'ಫೌಲ್‌'ಗೆ ಒಳಗಾದಲ್ಲಿ, ಅವರಿಗೆ ಎರಡು 'ಫ್ರೀ-ಥ್ರೋ'ಗಳು ಲಭಿಸುತ್ತವೆ. ಮೂರು-ಅಂಕಗಳಿಗಾಗಿ ಚೆಂಡು ಎಸೆಯುವಾಗ ಆಟಗಾರರು 'ಫೌಲ್‌'ಗೆ ಒಳಗಾದಲ್ಲಿ, ಅವರಿಗೆ ಮೂರು 'ಫ್ರೀ-ಥ್ರೋ'ಗಳು ಲಭಿಸುತ್ತವೆ.

ಚೆಂಡು ಎಸೆಯುವಾಗ ಆಟಗಾರರು ಫೌಲ್‌ಗೆ ಒಳಪಟ್ಟು, ಗೋಲಿಗೆ ಎಸೆದ ಚೆಂಡು ಸಫಲತೆ ಕಂಡಲ್ಲಿ, ಆ ಆಟಗಾರನಿಗೆ ಹೆಚ್ಚುವರಿ ಒಂದು ಅಂಕಕ್ಕಾಗಿ ಒಂದು ಫ್ರೀ-ಥ್ರೋ ಲಭಿಸುತ್ತದೆ. ಮಾಮೂಲು ಗೋಲು ಎಸೆತದ ಜೊತೆಗೆ, ಇದಕ್ಕೆ ಸಂಯುಕ್ತವಾಗಿ 'ಥ್ರೀ-ಪಾಯಿಂಟ್‌-ಪ್ಲೇ' ಅಥವಾ 'ಫೋರ್-ಪಾಯಿಂಟ್‌-ಪ್ಲೇ' (ಅಥವಾ ಆಡುಮಾತಿನಲ್ಲಿ 'ಅಂಡ್‌ ಒನ್‌')ಎನ್ನಲಾಗುತ್ತದೆ; ಏಕೆಂದರೆ, ಇದರಲ್ಲಿ ಫೌಲ್‌ ಘಟಿಸುವ ಕ್ಷಣದಲ್ಲಿ ಎಸೆದ ಗೋಲು (೨ ಅಥವಾ ೩ ಅಂಕಗಳು) ಮತ್ತು ಹೆಚ್ಚುವರಿ ಫ್ರೀ-ಥ್ರೋ (೧ ಅಂಕ) ಸೇರಿರುತ್ತದೆ.

ಸಾಮಾನ್ಯ ಕೌಶಲಗಳು ಮತ್ತು ಅಭ್ಯಾಸಗಳು[ಬದಲಾಯಿಸಿ]

ಸ್ಥಾನಗಳು ಮತ್ತು ರಚನೆಗಳು[ಬದಲಾಯಿಸಿ]

ಅಕ್ರಮಣಕಾರಿ ವಲಯದಲ್ಲಿ ಬ್ಯಾಸ್ಕೆಟ್‌ಬಾಲ್‌ ಸ್ಥಾನಗಳು

ಬ್ಯಾಸ್ಕೆಟ್‌ಬಾಲ್‌ನ ನಿಯಮಗಳು ಯಾವುದೇ ಸ್ಥಾನಗಳನ್ನು ವಿಶಿಷ್ಟವಾಗಿ ಸೂಚಿಸದಿದ್ದರೂ, ಅವು ಆಟದ ಅಂಶವಾಗಿ ವಿಕಸನಗೊಂಡಿವೆ. ಬ್ಯಾಸ್ಕೆಟ್‌ಬಾಲ್‌ನ ವಿಕಸನದ ಮೊದಲ ಐದು ದಶಕಗಳ ಕಾಲದಲ್ಲಿ, ಒಬ್ಬ ಗಾರ್ಡ್, ಇಬ್ಬರು ಫಾರ್ವರ್ಡ್‌ಗಳು ಮತ್ತು ಇಬ್ಬರು ಸೆಂಟರ್‌ಗಳು; ಅಥವಾ, ಇಬ್ಬರು ಗಾರ್ಡ್‌ಗಳು, ಇಬ್ಬರು ಫಾರ್ವರ್ಡ್‌ಗಳು ಮತ್ತು ಒಬ್ಬ ಸೆಂಟರ್‌ ಸ್ಥಾನಗಳನ್ನು ಬಳಸಲಾಯಿತು. ೧೯೮೦ರ ದಶಕದಲ್ಲಿ, ಕೆಳಕಂಡಂತೆ ಇನ್ನಷ್ಟು ವಿಶಿಷ್ಟ ಸ್ಥಾನಗಳು ವಿಕಸನಗೊಂಡವು:

 1. ಪಾಯಿಂಟ್‌ ಗಾರ್ಡ್‌: ಈತ ತಂಡದಲ್ಲಿ ಅತಿ ವೇಗವಾದ ಆಟಗಾರನಾಗಿದ್ದು, ಚೆಂಡನ್ನು ನಿಯಂತ್ರಿಸಿ ಅದು ಸರಿಯಾದ ಸಮಯದಲ್ಲಿ ಸರಿಯಾದ ಆಟಗಾರನಿಗೆ ತಲುಪಿಸುವುದರ ಮೂಲಕ ತಂಡದ ಆಕ್ರಮಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ.
 2. ಷೂಟಿಂಗ್‌ ಗಾರ್ಡ್‌: ಈ ಆಟಗಾರ ಆಕ್ರಮಣ ಸಮಯದಲ್ಲಿ ಅನೇಕ ಸಲ ಗೋಲು ಮಾಡಲು ಯತ್ನಿಸುತ್ತಾನೆ. ರಕ್ಷಣಾ ಸಂದರ್ಭದಲ್ಲಿ ಎದುರಾಳಿ ತಂಡದ ಅತ್ಯುತ್ತಮ ಪರಿಧಿ ಆಟಗಾರ(=ಪೆರಿಮೀಟರ್‌ ಪ್ಲೆಯರ್‌)ರ ಕಾವಲುಗಾರನಾಗುವನು.
 3. ಸ್ಮಾಲ್ ಫಾರ್ವರ್ಡ್‌: ಈ ಆಟಗಾರನು ಪ್ರಾಥಮಿಕವಾಗಿ ಚೆಂಡನ್ನು ಪುಟಿಸಿಕೊಂಡು ಮುನ್ನುಗ್ಗಿ ಬೋರ್ಡಿಗೆ ತಾಗಿ ಹೋಗುವ ಗೋಲು ಎಸೆತಕ್ಕೆ ಯತ್ನಿಸುತ್ತಾನೆ; ರಕ್ಷಣಾ ಸಂದರ್ಭದಲ್ಲಿ ಹಿನ್ನೆಗೆತದ ಮೂಲಕ ಚೆಂಡನ್ನು ಕಸಿದುಕೊಳ್ಳುವನು, ಆದರೆ ಕೆಲವೊಮ್ಮೆ ಇನ್ನಷ್ಟು ಕ್ರಿಯಾಶೀಲರಾಗಿ ಆಡುವರು.
 4. ಪವರ್‌ ಫಾರ್ವರ್ಡ್‌: ಈ ಮಂದಿ ಆಗಾಗ್ಗೆ ಬ್ಯಾಸ್ಕೆಟ್‌ನತ್ತ ತಮ್ಮ ಬೆನ್ನು ಮಾಡಿ ಅಕ್ರಮಣಕಾರಿ ಆಟವನ್ನಾಡುವರು; ರಕ್ಷಣಾ ಸಂದರ್ಭದಲ್ಲಿ ಅವರು (ಝೋನ್‌ ಡಿಫೆನ್ಸ್‌ನಲ್ಲಿ) ಬ್ಯಾಸ್ಕೆಟ್‌ನ ಕೆಳಗೆ ನಿಲ್ಲುವರು, ಅಥವಾ ಎದುರಾಳಿಯ ಪವರ್‌ ಫಾರ್ವರ್ಡ್‌ನನ್ನು (ಮ್ಯಾನ್‌-ಟು-ಮ್ಯಾನ್‌ ಡಿಫೆನ್ಸ್‌ನಲ್ಲಿ) ತಡೆಯಲು ಯತ್ನಿಸುವರು.
 5. ಸೆಂಟರ್‌: ತಮ್ಮ ಎತ್ತರ ಮತ್ತು ಗಾತ್ರವನ್ನು ಬಳಸಿ ಆಕ್ರಮಣದ ಸಂದರ್ಭದಲ್ಲಿ ಗೋಲು ಚೆಂಡು ಎಸೆಯುವರು; ರಕ್ಷಣೆಯ ಸಂದರ್ಭದಲ್ಲಿ ಅವರು ಬ್ಯಾಸ್ಕೆಟ್‌ನ್ನು ರಕ್ಷಿಸುವರು, ಅಥವಾ ಹಿಂಪುಟಿಯುವ ಚೆಂಡನ್ನು ಕಸಿಯಲು ಯತ್ನಿಸುವರು.

ಮೇಲ್ಕಂಡ ವಿವರಗಳು ಸಮಯಕ್ಕೆ ತಕ್ಕಂತೆ ಹೊಂದಿಕೊಳ್ಳಬಹುದಾಗಿವೆ. ಕೆಲವೊಮ್ಮೆ ತಂಡಗಳು ಫಾರ್ವರ್ಡ್ಸ್ ಅಥವಾ ಸೆಂಟರ್‌ರ ಸ್ಥಾನದಲ್ಲಿ ಮೂರನೆಯ ಗಾರ್ಡ್‌ನ್ನು ಬಳಸುವುದರ ಮೂಲಕ ಥ್ರೀ ಗಾರ್ಡ್‌ ಆಫೆನ್ಸ್‌ ಬಳಸಲು ಇಚ್ಛಿಸುತ್ತವೆ. ಒಂದು ವೇಳೆ ಇಬ್ಬರು ಆಟಗಾರರೂ ಉತ್ತಮ ನಾಯಕತ್ವ ಮತ್ತು ಚೆಂಡು ನಿರ್ವಹಣಾ ಕುಶಲತೆಯನ್ನು ಹೊಂದಿದ್ದಲ್ಲಿ, ಪಾಯಿಂಟ್‌ ಗಾರ್ಡ್‌ ಮತ್ತು ಷೂಟಿಂಗ್‌ ಗಾರ್ಡ್‌ ಸರ್ವೇ ಸಾಮಾನ್ಯವಾಗಿ ವಿನಿಮಯಗೊಳ್ಳುವ ಸ್ಥಾನಗಳಾಗಿವೆ.

ಆಟದಲ್ಲಿ ಎರಡು ಪ್ರಮುಖ ರಕ್ಷಣಾ ತಂತ್ರಗಳಿವೆ: ಝೋನ್‌ ಡಿಫೆನ್ಸ್‌ ಮತ್ತು ಮ್ಯಾನ್‌-ಟು-ಮ್ಯಾನ್‌ ಡಿಫೆನ್ಸ್‌ . ಝೋನ್‌ ಡಿಫೆನ್ಸ್‌ನಲ್ಲಿ, ತಮ್ಮ ವಲಯಕ್ಕೆ ದಾಳಿಯಿಟ್ಟ ಎದುರಾಳಿ ಆಟಗಾರನನ್ನು ತಡೆಯಲು ಆಟಗಾರರು ರಕ್ಷಣಾ ಸ್ಥಾನಗಳಲ್ಲಿ ನಿಲ್ಲುವರು. ಮ್ಯಾನ್‌-ಟು-ಮ್ಯಾನ್‌ ಡಿಫೆನ್ಸ್‌ನಲ್ಲಿ, ಪ್ರತಿಯೊಬ್ಬ ರಕ್ಷಣಾ ಆಟಗಾರನೂ ನಿರ್ದಿಷ್ಟ ಎದುರಾಳಿ ಆಟಗಾರನಿಗೆ ತಡೆಗೋಡೆಯಾಗಿ ನಿಂತು, ಆತನ ಮುನ್ನಡೆಯನ್ನು ತಡೆಯುವನು.

ಆಕ್ರಮಣಕಾರಿ ಆಟಗಳು ವೈವಿಧ್ಯಮಯವಾಗಿದ್ದು, ಸಾಮಾನ್ಯವಾಗಿ ಚೆಂಡಿನ ರವಾನೆ ಮತ್ತು ಅಂಕಣದಲ್ಲಿ ಚೆಂಡು ಹೊಂದಿರದ ಆಟಗಾರರ ಚಲನೆ ಯೋಜನಾಬದ್ಧವಾಗಿರುತ್ತವೆ. ಚೆಂಡನ್ನು ಹೊಂದಿರದ ಆಕ್ರಮಣಕಾರಿ ಆಟಗಾರನೊಬ್ಬನು ವೇಗವಾಗಿ ಚಲಿಸಿ ಅನುಕೂಲಕರ ಸ್ಥಾನಕ್ಕೆ ಬಂದು ಮೇಲುಗೈ ಸಾಧಿಸುವ ತಂತ್ರವನ್ನು ಕಟ್‌ ಎನ್ನಲಾಗುವುದು. ತಂಡದ ಸಹಯೋಗಿಯನ್ನು ತಡೆಯಲು ಯತ್ನಿಸುವ ಎದುರಾಳಿ ತಂಡದ ರಕ್ಷಣಾತ್ಮಕ ಆಟಗಾರರನ್ನು ತಡೆಯಲೆಂದು ಅವರ ಹಾದಿಯಲ್ಲಿ ನಿಲ್ಲುವ ನ್ಯಾಯಸಮ್ಮತ ಯತ್ನಕ್ಕೆ ಸ್ಕ್ರೀನ್‌ ಅಥವಾ ಪಿಕ್‌ ಎನ್ನಲಾಗುವುದು. (ಇದರಿಂದ ಎದುರಾಳಿಯ ಪಕ್ಕದಲ್ಲಿ 'ಕಟ್‌' ಮೂಲಕ ಸಹಯೋಗಿಯು ಮುನ್ನುಗ್ಗುತ್ತಾರೆ) ಪಿಕ್‌ ಅಂಡ್‌ ರೋಲ್‌ ನಲ್ಲಿ ಈ ಎರಡು ಆಟಗಳು ಸಂಯೋಜಿತವಾಗಿವೆ. ಇದರಲ್ಲಿ ಆಟಗಾರರು ಪಿಕ್‌ ಆಟಗಾರನನ್ನು ಸ್ಥಾಪಿಸಿ, ನಂತರ 'ರೋಲ್‌' ಪಿಕ್‌ರಿಂದ ದೂರವಾಗುತ್ತಾ ಬ್ಯಾಸ್ಕೆಟ್‌ನತ್ತ ಮುನ್ನುಗ್ಗುತ್ತಾರೆ. ಆಕ್ರಮಣಕಾರಿ ಆಟಗಳಲ್ಲಿ ಸ್ಕ್ರೀನ್‌ಗಳು ಮತ್ತು ಕಟ್‌ಗಳು ಬಹಳ ಮುಖ್ಯವಾಗಿರುತ್ತವೆ; ಇವು ಚೆಂಡನ್ನು ವೇಗವಾಗಿ ರವಾನಿಸಲು ಮತ್ತು ಸಾಂಘಿಕ ಆಟಕ್ಕೆ ಅನುವು ಮಾಡಿಕೊಡುತ್ತವೆ, ಅಲ್ಲದೆ ಯಶಸ್ವಿಯಾಗಿ ಗೋಲು ಮಾಡಲು ಸಾಧ್ಯವಾದೀತು. ತಮ್ಮ ಚಲನವಲನಗಳನ್ನು ಮೊದಲೇ ಊಹಿಸುವುದನ್ನು ತಪ್ಪಿಸಲು ತಂಡಗಳು ಯಾವಾಗಲೂ ಹಲವು ಆಕ್ರಮಣಕಾರಿ ಅಟಗಳನ್ನು ಯೋಜಿಸಿರುತ್ತವೆ. ಯಾವ ರೀತಿಯ ಆಟ ನಡೆಯುತ್ತದೆಂಬುದನ್ನು ಸೂಚಿಸುವುದು ಸಾಮಾನ್ಯವಾಗಿ ಅಂಕಣದಲ್ಲಿರುವ ಪಾಯಿಂಟ್‌ ಗಾರ್ಡ್‌ನ ಜವಾಬ್ದಾರಿಯಾಗಿರುತ್ತದೆ.

ಬ್ಯಾಸ್ಕೆಟ್‌ಬಾಲ್‌‌ನ ಉನ್ನತ ಮಟ್ಟದ ಆಟಗಳಲ್ಲಿ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ರಚನೆಗಳು, ಹಾಗೂ ಸ್ಥಾನಗಳಿಗೆ ಒತ್ತು ನೀಡಲಾಗುತ್ತದೆ; ತರಬೇತುದಾರರು ಸಾಮಾನ್ಯವಾಗಿ ಟೈಮ್‌-ಔಟ್‌ ಅನುಮತಿ ಕೋರುವುದು ಇದಕ್ಕಾಗಿಯೇ.

ಷೂಟಿಂಗ್‌ (ಗೋಲು ಎಸೆತ)[ಬದಲಾಯಿಸಿ]

ಆಟಗಾರ್ತಿಯೊಬ್ಬಳು ಚೆಂಡನ್ನು ಹೂಪ್‌ನತ್ತ ಎಸೆಯುವುದನ್ನು ಆಕೆಯ ಡಿಫೆಂಡರ್‌ ಅಡ್ಡಿಪಡಿಸಲು ಯತ್ನಿಸಿ ನೆಲಕ್ಕುರುಳಿರುವುದು.

ಷೂಟಿಂಗ್‌ ಎಂದರೆ ಚೆಂಡನ್ನು ಬ್ಯಾಸ್ಕೆಟ್‌ನ ಮೂಲಕ (ಗೋಲು‌) ಎಸೆದು ಅಂಕಗಳನ್ನು ಗಳಿಸುವ ಯತ್ನ. ಗೋಲು ಎಸೆತದ ರೀತಿ-ವಿಧಾನಗಳು ಆಟಗಾರರು ಮತ್ತು ಪರಿಸ್ಥಿತಿಗಳಿಗೆ ಅನುಗುಣವಾಗಿ ವ್ಯತ್ಯಾಸವಾಗಬಹುದು, ಆದರೆ ಸರ್ವೇಸಾಮಾನ್ಯ ತಂತ್ರ ಕೆಳಕಂಡಂತಿದೆ:

ಆಟಗಾರರು ತಮ್ಮ ಪಾದಗಳನ್ನು ಭುಜದಗಲದಷ್ಟು ದೂರವಿರಿಸಿ, ಮೊಣಗಾಲು ಸ್ವಲ್ಪ ಮಟ್ಟಿಗೆ ಬಾಗಿಸಿ, ಬೆನ್ನು ನೇರವಾಗಿಸಿ ಬ್ಯಾಸ್ಕೆಟ್‌ನತ್ತ ಮುಖಮಾಡಿ ನಿಲ್ಲುತ್ತಾರೆ. ಆಟಗಾರರು ತಮ್ಮ ತಲೆಯ ಮಟ್ಟಕ್ಕಿಂತ ಸ್ವಲ್ಪ ಮೇಲೆ ಬಲಿಷ್ಠ ಕೈಯನ್ನು ಚಾಚಿ (ಗೋಲು ಎಸೆಯುವ ಕೈಯ) ಬೆರಳತುದಿಗಳಲ್ಲಿ ಚೆಂಡನ್ನು ಹಿಡಿಯುತ್ತಾರೆ; ಅವರ ಇನ್ನೊಂದು ಕೈ ಚೆಂಡಿನ ಬದಿಗೆ ಆಸರೆಯಾಗಿರುತ್ತದೆ. ಚೆಂಡನ್ನು ಬ್ಯಾಸ್ಕೆಟ್‌ನತ್ತ ಗುರಿಯಿಡಲು, ಆಟಗಾರರ ಮೊಣಗೈ ಲಂಬವಾಗಿರಬೇಕು, ಮುಂಗೈ ಬ್ಯಾಸ್ಕೆಟ್‌ನ ದಿಕ್ಕಿಗೆ ತೋರಬೇಕು. ಬಾಗಿದ ಮೊಣಗಾಲುಗಳನ್ನು ನೆಟ್ಟಗಾಗಿಸಿ, ಎಸೆಯುವ ಕೈಯನ್ನು ನೇರವಾಗಿಸುವುದರೊಂದಿಗೆ ಚೆಂಡನ್ನು ಬ್ಯಾಸ್ಕೆಟ್‌ನತ್ತ ಎಸೆಯಲಾಗುತ್ತದೆ; ಚೆಂಡು ಬೆರಳತುದಿಗಳಿಂದ ತೆರಳುವಾಗ ಎರಡೂ ಕೈಗಳ ಮಣಿಕಟ್ಟುಗಳು ಕೆಳಕ್ಕೆ ಬಾಗಿ ಒಟ್ಟು ಚಲನೆಯನ್ನು ಸಂಪೂರ್ಣಗೊಳಿಸುತ್ತವೆ. ಚೆಂಡನ್ನು ಎಸೆದ ನಂತರ, ಒಂದು ಕ್ಷಣ ಅದನ್ನು ಎಸೆದ ಕೈ ನೇರವಾಗಿದ್ದು, ಮಣಿಕಟ್ಟು ಬಾಗಿ, ಬೆರಳುಗಳು ಕೆಳದಿಕ್ಕಿಗೆ ತೋರುವ ಸ್ಥಿತಿಯಲ್ಲಿರುತ್ತವೆ. ಇದಕ್ಕೆ 'ಫಾಲೊ-ಥ್ರೂ' ಎನ್ನಲಾಗುತ್ತದೆ. ಇದನ್ನು ಸರಿಯಾಗಿ ಮಾಡಿದಲ್ಲಿ, ಗೋಲು ಎಸೆತದ ನಿಖರತೆಯೂ ಹೆಚ್ಚುತ್ತದೆ. ಸಾಮಾನ್ಯವಾಗಿ ಎಸೆಯದ ಕೈ (ಇನ್ನೊಂದು ಕೈ) ಎಸೆತಕ್ಕೆ ಬೆಂಬಲ ನೀಡುವುದೇ ಹೊರತು, ಚೆಂಡಿಗೆ ಬಲ ನೀಡದು.

ಬ್ಯಾಸ್ಕೆಟ್‌ನ ಅಂಚಿಗೆ ಚೆಂಡು ಬಡಿದಾಗ ಉಂಟಾಗುವ ಪ್ರಭಾವವನ್ನು ಶೂನ್ಯಗೊಳಿಸಲು ಆಟಗಾರರು ಚೆಂಡನ್ನು ಎಸೆಯುವಾಗಲೇ 'ಹಿಂ-ಗಿರಕಿ' ನೀಡುತ್ತಾರೆ. ಎಸೆತದ ಪರಿಪೂರ್ಣತೆಯ ಬಗ್ಗೆ ಚರ್ಚೆಯುಂಟು, ಆದರೆ ತರಬೇತುದಾರರು ಸಾಮಾನ್ಯವಾಗಿ ಸರಿಯಾದ ಕಮಾನು ರೂಪದಲ್ಲಿ ಎಸೆಯುವುದನ್ನು ಶಿಫಾರಸು ಮಾಡುತ್ತಾರೆ. ಆಟಗಾರರು ಚೆಂಡನ್ನು ನೇರವಾಗಿ ಬ್ಯಾಸ್ಕೆಟ್‌ನೊಳಗೆ ಎಸೆಯಬಹುದು ಅಥವಾ ಚೆಂಡನ್ನು ಫಲಕಕ್ಕೆ ಹೊಡೆಯುವಂತೆ ಎಸೆದು ಅದನ್ನು ಬ್ಯಾಸ್ಕೆಟ್‌ಗೆ ಪುನರ್ನಿರ್ದೇಶಿಸುತ್ತಾರೆ.

ಮೇಲೆ ವಿವರಿಸಿದ ತಂತ್ರವನ್ನು ಬಳಸುವ ಎರಡು ಸಾಮಾನ್ಯ ಎಸೆತಗಳು ಸೆಟ್‌ ಷಾಟ್‌ ಮತ್ತು ಜಂಪ್‌ ಷಾಟ್‌ . ಸೆಟ್‌ ಷಾಟ್‌ ಎಂಬುದನ್ನು ನಿಂತ ಭಂಗಿಯಲ್ಲಿ, ಎರಡೂ ಪಾದವೂ ನೆಲದ ಮೇಲೆಯೇ ಇಟ್ಟುಕೊಂಡು ಬ್ಯಾಸ್ಕೆಟ್‌ನತ್ತ ಎಸೆಯಲಾಗುವುದು; ಇದನ್ನು ಫ್ರೀ-ಥ್ರೋಗಳಲ್ಲಿ ಬಳಸಲಾಗುತ್ತದೆ. ಜಂಪ್‌ ಷಾಟ್‌ ಎಂಬುದನ್ನು ನೆಗೆಯುವಾಗ ಬ್ಯಾಸ್ಕೆಟ್‌ನತ್ತ ಎಸೆಯಲಾಗುವುದು; ನೆಗೆದು ಅತಿ ಎತ್ತರಕ್ಕೇರಿದ ಸ್ಥಿತಿಯಲ್ಲಿ ಚೆಂಡನ್ನು ಎಸೆಯಲಾಗುತ್ತದೆ. ಇದು ಅಧಿಕ ಬಲ ಮತ್ತು ವ್ಯಾಪ್ತಿಯನ್ನು ನೀಡುತ್ತದೆ, ಅಲ್ಲದೆ ಚೆಂಡು ಎಸೆಯುವ ಆಟಗಾರ ರಕ್ಷಣಾತ್ಮಕ ಆಟಗಾರರಿಗಿಂತಲೂ ಮೇಲೇರಲು ಅನುವು ಮಾಡಿಕೊಡುತ್ತದೆ. ಪಾದಗಳು ನೆಲಕ್ಕೆ ವಾಪಸಾಗುವ ಮುಂಚೆ ಚೆಂಡನ್ನು ಎಸೆಯಲು ವಿಫಲವಾದಲ್ಲಿ ಅದನ್ನು ಒಯ್ಯುವ ಉಲ್ಲಂಘನೆ(=ಟ್ರ್ಯಾವೆಲಿಂಗ್‌ ವಯೊಲೆಷನ್‌) ಎಂದು ಪರಿಗಣಿಸಲಾಗುತ್ತದೆ.

ಲೇಯಪ್‌ ಎಂಬುದು ಇನ್ನೊಂದು ಸಾಮಾನ್ಯ ಎಸೆತ. ಈ ಎಸೆತದಲ್ಲಿ ಆಟಗಾರರು ಚೆಂಡಿನೊಂದಿಗೆ ಬ್ಯಾಸ್ಕೆಟ್‌ನತ್ತ ಧಾವಿಸಿ, ಚೆಂಡನ್ನು ಫಲಕದ ಮಾರ್ಗವಾಗಿ ಬ್ಯಾಸ್ಕೆಟ್‌ನೊಳಗೆ ಇರಿಸುತ್ತಾರೆ. ಚೆಂಡನ್ನು ಹಸ್ತ ಮತ್ತು ಬೆರಳುಗಳ ಮೂಲಕ ಫಲಕಕ್ಕೆ ಪುಟಿಸದೆ ಬ್ಯಾಸ್ಕೆಟ್‌ನೊಳಗೆ ನೇರವಾಗಿ ಉರುಳಿಸುವ ತಂತ್ರಕ್ಕೆ ಫಿಂಗರ್‌ ರೋಲ್‌ ಎನ್ನಲಾಗುತ್ತದೆ. ಪ್ರೇಕ್ಷಕರ ಮನರಂಜಿಸುವ, ಅತಿ ಹೆಚ್ಚು ನಿಖರವಾದ ಗೋಲು ಎಸೆತವೆಂದರೆ ಸ್ಲ್ಯಾಮ್‌-ಡಂಕ್‌ . ಇದರಲ್ಲಿ ಆಟಗಾರರು ಬಹಳ ಎತ್ತರಕ್ಕೆ ನೆಗೆದು, ಚೆಂಡನ್ನು ನೇರವಾಗಿ ಬ್ಯಾಸ್ಕೆಟ್‌ನೊಳಗೆ ಎಸೆಯುತ್ತಾರೆ.

ಸಾಮಾನ್ಯವಾಗಿ ಬಳಸಲಾಗುವ ಇನ್ನೊಂದು ಎಸೆತ 'ಸರ್ಕಸ್‌ ಷಾಟ್‌'. ಚೆಂಡ ಎಸೆಯುವ ಆಟಗಾರರು ಆಯ ತಪ್ಪಿದಾಗ, ನೆಗೆದಾಗ, ಕೆಳಗೆ ಬೀಳುವಾಗ/ಅಥವಾ ಬ್ಯಾಸ್ಕೆಟ್‌ಗೆ ಬೆನ್ನು ಮಾಡಿರುವಾಗ, ಚೆಂಡನ್ನು ಕ್ಷಿಪ್ರವಾಗಿ ಚಿಮ್ಮಿಸಿ, ಬೀಸಿ, ಎತ್ತಿ, ಬ್ಯಾಸ್ಕೆಟ್‌ನತ್ತ ಬಲವಾಗಿ ಎಸೆದು ಗೋಲು ಮೂಲಕ ಅಂಕ ಗಳಿಸುವ ತಂತ್ರವಿದು.

ಗೋಲು ಎಸೆಯುವ ಯತ್ನದಲ್ಲಿ ಚೆಂಡು ಬ್ಯಾಸ್ಕೆಟ್‌ ಮತ್ತು ಫಲಕವೆರಡನ್ನೂ ತಪ್ಪಿಸಿಕೊಂಡಲ್ಲಿ ಏರ್‌ ಬಾಲ್‌ ಎನ್ನಲಾಗುವುದು. ನಿರ್ದಿಷ್ಟವಾಗಿ ಕಳಪೆ ಗೋಲು ಎಸೆತ, ಅಥವಾ ಕೇವಲ ಫಲಕಕ್ಕೆ ಬಡಿದ ಎಸೆತವನ್ನು ವಿಡಂಬನಾತ್ಮಕವಾಗಿ ಬ್ರಿಕ್‌ ಎನ್ನಲಾಗುತ್ತದೆ.

ಹಿಂಪುಟಿತ (=ರಿಬೌಂಡಿಂಗ್‌‌)[ಬದಲಾಯಿಸಿ]

ಮಾಮೂಲು ಗೋಲು ಎಸೆದ ಸಂದರ್ಭದಲ್ಲಾಗಲೀ, ಫ್ರೀ-ಥ್ರೋನಲ್ಲಾಗಲೀ ಬ್ಯಾಸ್ಕೆಟ್‌ ಅಥವಾ ಫಲಕದಿಂದ ಪುಟಿದು ಬಂದ ಚೆಂಡನ್ನು ಯಶಸ್ವಿಯಾಗಿ ಕಸಿದುಕೊಳ್ಳುವುದೇ ಹಿಂಪುಟಿತದ ಧ್ಯೇಯ. ಇದು ಆಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಏಕೆಂದರೆ ಆಕ್ರಮಣ ಮಾಡುವ ತಂಡವು ಎಸೆದ ಚೆಂಡು ಗುರಿ ತಪ್ಪಿದರೆ ಬಹಳಷ್ಟು ಬಾರಿ ಚೆಂಡು ಆ ತಂಡದ ಕೈತಪ್ಪಿಹೋಗುವುದು ರೂಢಿ. ಹಿಂಪುಟಿತದಲ್ಲಿ ಎರಡು ವಿಧಗಳಿವೆ: ಆಕ್ರಮಣಕಾರಿ ಹಿಂಪುಟಿತಗಳು - ಇದರಲ್ಲಿ ಆಕ್ರಮಣಕಾರಿ ತಂಡವೇ ಹಿಂಪುಟಿದ ಚೆಂಡನ್ನು ಹಿಡಿಯುವಲ್ಲಿ ಸಫಲವಾಗುತ್ತದೆ; ಹಾಗೂ, ರಕ್ಷಣಾತ್ಮಕ ಹಿಂಪುಟಿತಗಳು - ಇದರಲ್ಲಿ ಹಿಂಪುಟಿದ ಚೆಂಡು ಅಕ್ರಮಣಕಾರಿ ತಂಡದ ಕೈತಪ್ಪಿ ರಕ್ಷಣಾತ್ಮಕ ತಂಡದ ಪಾಲಾಗುತ್ತದೆ. ಹಿಂಪುಟಿತಗಳಲ್ಲಿ ಬಹುಪಾಲು ರಕ್ಷಣಾತ್ಮಕವಾಗಿವೆ, ಏಕೆಂದರೆ ರಕ್ಷಣೆಯ ಆಟದಲ್ಲಿರುವ ತಂಡ ಗುರಿ ತಪ್ಪಿದ ಗೋಲು ಎಸೆತಗಳನ್ನು ಪಕ್ಕನೆ ಹಿಡಿಯಲು ಸನ್ನದ್ಧ ಸ್ಥಿತಿಯಲ್ಲಿರುತ್ತದೆ.

ಚೆಂಡಿನ ರವಾನೆ (=ಪಾಸಿಂಗ್‌)[ಬದಲಾಯಿಸಿ]

ತಂಡದ ಆಟಗಾರರ ನಡುವೆ ಚೆಂಡು ರವಾನಿಸುವ ರೀತಿಯನ್ನು 'ಪಾಸ್‌' ಎನ್ನಲಾಗಿದೆ. ಒಂದು ಹೆಜ್ಜೆ ಮುಂದಿಟ್ಟೇ ಚೆಂಡನ್ನು ರವಾನಿಸಲಾಗುತ್ತದೆ, ಹೀಗೆ ಮಾಡಿದಾಗ ಎಸೆತಕ್ಕೆ ಬಲ ಬರುತ್ತದೆ ಮತ್ತು ಜೊತೆಗೆ ಚೆಂಡಿನ ನಿಖರತೆಯನ್ನು ಕಾಯ್ದುಕೊಳ್ಳಲು ಕೈಬೀಸಲಾಗುವುದು.(=ಫಾಲೊ-ಥ್ರೂ)

ಚೆಸ್ಟ್‌ ಪಾಸ್‌ ಚೆಂಡು ರವಾನೆಯಲ್ಲಿ ಪ್ರಧಾನವಾದ್ದು. ಚೆಂಡನ್ನು ಕಳುಹಿಸುವ ಮತ್ತು ಪಡೆಯುವ ಆಟಗಾರನ ಎದೆಯ ಮಟ್ಟಕ್ಕೆ ನೇರವಾಗಿ ಚೆಂಡನ್ನು ರವಾನಿಸಲಾಗುತ್ತದೆ. ಹೆಬ್ಬೆರಳುಗಳನ್ನು ಹೊರಮುಖವಾಗಿಸಿ ಕ್ಷಿಪ್ರಗತಿಯಲ್ಲಿ ಚೆಂಡನ್ನು ತಳ್ಳಿ ರವಾನೆಗೆ ವೇಗವನ್ನು ನೀಡುವುದು ಮತ್ತು ಎದುರಾಳಿ ತಂಡದ ರಕ್ಷಣಾತ್ಮಕ ಆಟಗಾರರಿಗೆ ಪ್ರತಿಕ್ರಿಯಿಸಲು ಕೂಡ ಅವಕಾಶ ನೀಡದಿರುವುದನ್ನು ಸಮರ್ಪಕ ಚೆಸ್ಟ್‌ ಪಾಸ್‌ ಎನ್ನುತ್ತೇವೆ.

ಬೌನ್ಸ್‌ ಪಾಸ್‌ ಎಂಬುದು ರವಾನೆಯ ಇನ್ನೊಂದು ತಂತ್ರ. ಈ ತಂತ್ರದ ಪ್ರಕಾರ ಚೆಂಡನ್ನು ರವಾನಿಸುವ ಆಟಗಾರ ಚೆಂಡನ್ನು ಪಡೆಯುವವರತ್ತ ಕಳುಹಿಸುವ ಅರ್ಧಹಾದಿಯಲ್ಲೇ ಅದನ್ನು ಪುಟಿಸುತ್ತಾನೆ. ಚೆಂಡು ನೆಲಕ್ಕೆ ಬಡಿದು ಪಡೆಯುವವರತ್ತ ಪುಟಿಯುತ್ತದೆ. ಚೆಸ್ಟ್‌ ಪಾಸ್‌ಗಿಂತ ಬೌನ್ಸ್‌ ಪಾಸ್‌ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೂ ಎದುರಾಳಿ ತಂಡಕ್ಕೆ ಚೆಂಡನ್ನು ಅಡ್ಡಗಟ್ಟಲು ಕಷ್ಟವಾಗುತ್ತದೆ (ಚೆಂಡನ್ನು ಉದ್ದೇಶಪೂರ್ವಕವಾಗಿ ಒದೆಯುವುದನ್ನು ಉಲ್ಲಂಘನೆಯೆಂದು ಪರಿಗಣಿಸಲಾಗುತ್ತದೆ). ಹೀಗಾಗಿ ಆಟಗಾರರು ಸುತ್ತುವರಿದಿದ್ದ ಸಂದರ್ಭಗಳಲ್ಲಿ ಅಥವಾ ರಕ್ಷಕನನ್ನು ತಪ್ಪಿಸಿ ಚೆಂಡನ್ನು ರವಾನಿಸಲು, ಆಟಗಾರರು ಆಗಾಗ್ಗೆ ಬೌನ್ಸ್‌ ಪಾಸ್‌ ತಂತ್ರವನ್ನು ಬಳಸುತ್ತಾರೆ.

ಎದುರಾಳಿ ತಂಡದ ರಕ್ಷಣಾತ್ಮಕ ಆಟಗಾರರ ತಲೆಯ ಮೇಲೆ ಚೆಂಡನ್ನು ರವಾನಿಸಲು ಒವರ್‌ಹೆಡ್‌ ಪಾಸ್‌ ತಂತ್ರವನ್ನು ಬಳಸಲಾಗುತ್ತದೆ. ಚೆಂಡು ಕಳುಹಿಸುವವರ ತಲೆಯ ಮೇಲಿದ್ದಾಗ ಚೆಂಡು ಬಿಡುಗಡೆಯಾಗುತ್ತದೆ.

ತಂಡವೊಂದು ರಕ್ಷಣಾತ್ಮಕ ಹಿಂಪುಟಿತವನ್ನು ಪಡೆದಾಗ ಔಟ್ಲೆಟ್‌ ಪಾಸ್‌ ಮಾಡಲಾಗುತ್ತದೆ. ಹಿಂಪುಟಿತದ ನಂತರದ ರವಾನೆಯನ್ನು ಔಟ್ಲೆಟ್‌ ಪಾಸ್‌ ಎನ್ನಲಾಗುತ್ತದೆ.

ಚೆಂಡನ್ನು ಅಡ್ಡಗಟ್ಟಲು ಸಾಧ್ಯವಾಗದೇ ಇರುವುದು ಯಾವುದೇ ಉತ್ತಮ ರವಾನೆಯ ನಿರ್ಣಾಯಕ ಅಂಶ. ಉತ್ತಮ ರವಾನೆಗಾರರು ಚೆಂಡನ್ನು ಬಹಳ ನಿಖರತೆಯಿಂದ ರವಾನಿಸುತ್ತಾರೆ, ಅಲ್ಲದೆ ತಮ್ಮ ಪ್ರತಿ ಜೊತೆ ಆಟಗಾರ ಚೆಂಡನ್ನು ಎಲ್ಲಿ ಪಡೆಯಲು ಇಚ್ಛಿಸುತ್ತಾರೆಂಬುದನ್ನು ಅವರು ನಿಖರವಾಗಿ ತಿಳಿದಿರುತ್ತಾರೆ. ಈ ವಿಧಾನದಲ್ಲಿ ಚೆಂಡನ್ನು ಸ್ವೀಕರಿಸುವ ಜೊತೆ ಆಟಗಾರನತ್ತ ನೋಡದೆಯೇ ಚೆಂಡನ್ನು ರವಾನಿಸುವುದು ವಿಶೇಷ. ಇದಕ್ಕೆ ನೊ-ಲುಕ್‌ ಪಾಸ್‌ ಎನ್ನಲಾಗುತ್ತದೆ.

ಬಿಹೈಂಡ್‌ ದಿ ಬ್ಯಾಕ್‌ ಪಾಸ್‌ ಎಂಬುದು ಚೆಂಡು ರವಾನೆಯ ಇನ್ನೊಂದು ಆಧುನಿಕ ಶೈಲಿ. ಹೆಸರೇ ಹೇಳುವಂತೆ ಚೆಂಡನ್ನು ಕಳುಹಿಸುವವರು ತಮ್ಮ ಬೆನ್ನಿನ ಹಿಂದೆ ಚೆಂಡನ್ನೆಸೆದು ಸಹ ಆಟಗಾರನಿಗೆ ರವಾನಿಸುತ್ತಾರೆ. ಕೆಲವು ಆಟಗಾರರು ಇಂತಹ ರವಾನೆಯನ್ನು ಮಾಡಲು ಶಕ್ಯರಾದರೂ, ಹಲವು ತರಬೇತುದಾರರು ನೊ-ಲುಕ್‌ ಅಥವಾ ಬಿಹೈಂಡ್‌ ದಿ ಬ್ಯಾಕ್‌ ಪಾಸ್‌ ಮಾಡುವುದು ಬೇಡವೆನ್ನುತ್ತಾರೆ, ಏಕೆಂದರೆ ಅವುಗಳನ್ನು ನಿಯಂತ್ರಿಸಲು ಕಷ್ಟಕರ ಮತ್ತು ಚೆಂಡು ಕೈತಪ್ಪಿ ಎದುರಾಳಿ ತಂಡದ ಪಾಲಾಗುವ ಅಥವಾ ಉಲ್ಲಂಘನೆಗಳು ಸಂಭವಿಸುವ ಸಾಧ್ಯತೆಗಳುಂಟು.

ಡ್ರಿಬ್ಲಿಂಗ್ (ಚೆಂಡನ್ನು ಪುಟಿಸುವಿಕೆ)[ಬದಲಾಯಿಸಿ]

U.S. ನೌಕಾ ಸೇನಾ ಅಕಾಡೆಮಿ ('ನೇವಿ') ಆಟಗಾರನೊಬ್ಬ (ಎಡ) U.S. ಸೇನಾ ಅಕಾಡೆಮಿ ('ಭೂಸೇನೆ') ಡಿಫೆಂಡರ್‌ನನ್ನೂ ಮೀರಿಸಿ ಗೋಲು ಗಳಿಸುತ್ತಿರುವುದು.

ಡ್ರಿಬ್ಲಿಂಗ್‌ ಎಂಬುದು ಚೆಂಡನ್ನು ಒಂದು ಕೈಯಲ್ಲಿ ಸತತವಾಗಿ ಪುಟಿಸುವ ಕ್ರಿಯೆ. ಆಟಗಾರರು ಚೆಂಡಿನೊಂದಿಗೆ ಮುನ್ನುಗ್ಗಬೇಕೆಂದಲ್ಲಿ ಚೆಂಡನ್ನು ಪುಟಿಸುವುದು ಅಗತ್ಯ ಕ್ರಮವಾಗಿದೆ. ಉತ್ತಮ ನಿಯಂತ್ರಣಕ್ಕಾಗಿ, ಆಟಗಾರರು ಚೆಂಡನ್ನು ಹಸ್ತದಿಂದ ತಟ್ಟುವುದಕ್ಕಿಂತ ಹೆಚ್ಚಾಗಿ, ಅದನ್ನು ಕೇವಲ ಬೆರಳತುದಿಗಳಿಂದ ನೆಲದತ್ತ ತಳ್ಳುತ್ತಾರೆ.

ಎದುರಾಳಿ ಆಟಗಾರರನ್ನು ದಾಟಿ ಚೆಂಡನ್ನು ಪುಟಿಸುತ್ತಿದ್ದರೆ, ಅವರು ಚೆಂಡನ್ನು ಕಸಿದುಕೊಳ್ಳಲು ಬಹಳ ಕಷ್ಟವಾಗುವಂತೆ ಮಾಡಲು, ಎದುರಾಳಿಗೆ ಆದಷ್ಟು ದೂರದಲ್ಲಿರುವ ತಮ್ಮ ಕೈಯಿಂದ ಆಟಗಾರರು ಚೆಂಡನ್ನು ಪುಟಿಸಬೇಕು. ಆದ್ದರಿಂದ, ಅಟಗಾರರು ತಮ್ಮ ಎರಡೂ ಕೈಗಳಿಂದ ಚೆಂಡನ್ನು ಸತತವಾಗಿ ಪುಟಿಸುವ ಕೌಶಲ ಹೊಂದುವುದು ಬಹಳ ಮುಖ್ಯ.

ಉತ್ತಮವಾಗಿ ಚೆಂಡು ಪುಟಿಸುವವರು (ಅಥವಾ 'ಚೆಂಡು ನಿರ್ವಾಹಕರು') ನೆಲದಿಂದ ಕಡಿಮೆ ಎತ್ತರದಲ್ಲಿ ಚೆಂಡನ್ನು ಪುಟಿಸುವ ಪ್ರವೃತ್ತಿಯವರಾಗಿರುತ್ತಾರೆ. ನೆಲದಿಂದ ಕೈಗೆ ಚೆಂಡು ಕ್ರಮಿಸುವ ದೂರವು ಕಡಿಮೆಯಾಗಿರುವ ಕಾರಣ, ಎದುರಾಳಿ ತಂಡದ ಆಟಗಾರರು ಚೆಂಡನ್ನು ಕಸಿಯಲು ಬಹಳ ಕಷ್ಟವಾಗುತ್ತದೆ. ಉತ್ತಮ ಚೆಂಡು ನಿರ್ವಹಣಾಕಾರರು ಆಗಾಗ್ಗೆ ತಮ್ಮ ಬೆನ್ನಿನ ಹಿಂದೆ, ಕಾಲುಗಳ ನಡುವೆ ಚೆಂಡು ಪುಟಿಸಿ, ಇದ್ದಕ್ಕಿದ್ದಂತೆ ದಿಕ್ಕು ಬದಲಿಸಿ, ರಕ್ಷಿಸಿಕೊಳ್ಳಲು ಕಷ್ಟಕರವಾದ ಅನಿರೀಕ್ಷಿತ ಪುಟಿತದ ಮಾದರಿಯನ್ನು ಅನುಸರಿಸುತ್ತಾರೆ. ಇದಕ್ಕೆ ಕ್ರಾಸ್‌ಒವರ್‌ ಎನ್ನಲಾಗಿದೆ. ಚೆಂಡು ಪುಟಿಸುತ್ತಾ ರಕ್ಷಣಾತ್ಮಕ ಆಟಗಾರರನ್ನು ದಾಟಿ ಮುನ್ನುಗ್ಗಲು ಇದು ಅತ್ಯಂತ ಪ್ರಭಾವೀ ರೀತಿಯಾಗಿದೆ.

ಕುಶಲ ಆಟಗಾರನೊಬ್ಬ ಚೆಂಡಿನ ಮೇಲೆ ಕಣ್ಣಿಡದೇ ಅದನ್ನು ಪುಟಿಸುತ್ತಾ ಸಾಗಬಲ್ಲ; ಚೆಂಡಿನ ಪುಟಿತ ಅಥವಾ ಹೊರಮೈಯ ಆಧಾರದಲ್ಲಿ ಪುಟಿತದ ಚಲನೆಯ ಮೇಲೆ ನಿಗಾವಿಡಬಲ್ಲ. ಆಟಗಾರನೊಬ್ಬ ಕೇವಲ ಚೆಂಡಿನ ಮೇಲೆಯೇ ಗಮನ ಕೇಂದ್ರೀಕರಿಸುವ ಅಗತ್ಯವಿಲ್ಲ, ತಮ್ಮ ತಂಡದ ಸಹ ಆಟಗಾರನತ್ತ ಗಮನಕೊಡಬಹುದು ಅಥವಾ ಗೋಲಿನ ಅವಕಾಶಗಳಿಗಾಗಿ ಕಾಯಬಹುದು. ಇದರಿಂದಾಗಿ ಎದುರಾಳಿ ತಂಡದವರು ತಮ್ಮಿಂದ ಚೆಂಡನ್ನು ಕಸಿದುಕೊಳ್ಳುವ ಅಪಾಯವನ್ನು ತಪ್ಪಿಸಬಹುದು.

ತಡೆಗಟ್ಟುವಿಕೆ[ಬದಲಾಯಿಸಿ]

ಗೋಲು ಎಸೆದಾಗ, ಎದುರಾಳಿ ತಂಡದ ಆಟಗಾರರು ಚೆಂಡನ್ನು ತಡೆದು ಅದರ ಹಾದಿ ತಪ್ಪಿಸುವುದನ್ನು 'ತಡೆಗಟ್ಟುವಿಕೆ' (=ಬ್ಲಾಕಿಂಗ್‌) ಎನ್ನಲಾಗಿದೆ. ಬಹುಶಃ ಆಟದ ಎಲ್ಲಾ ವಿಭಿನ್ನರೂಪಗಳಲ್ಲಿಯೂ, ಚೆಂಡು ಬ್ಯಾಸ್ಕೆಟ್‌ನಲ್ಲಿ ಕೆಳಗಿಳಿಯುತ್ತಿರುವಾಗ ಅದನ್ನು ಮುಟ್ಟುವುದು ನಿಯಮದ ಉಲ್ಲಂಘನೆಯಾಗುತ್ತದೆ. ಇದಕ್ಕೆ ಗೋಲ್‌ಟೆಂಡಿಂಗ್‌ ಎನ್ನಲಾಗುತ್ತದೆ. NBA ಮತ್ತು NCAA ಪುರುಷರ ಬ್ಯಾಸ್ಕೆಟ್‌ಬಾಲ್‌ ಪಂದ್ಯಗಳಲ್ಲಿ ಚೆಂಡು ಫಲಕಕ್ಕೆ ಬಡಿದ ನಂತರ, ಅಥವಾ ಬ್ಯಾಸ್ಕೆಟ್‌ ಅಂಚಿನ ಮೇಲಿರುವಾಗ ಚೆಂಡನ್ನು ತಡೆಗಟ್ಟುವುದು ನಿಯಮದ ಉಲ್ಲಂಘನೆಯಾಗುತ್ತದೆ.

ಗೋಲು ಎಸೆತವನ್ನು ತಡೆಗಟ್ಟಲು, ರಕ್ಷಣಾತ್ಮಕ ತಂಡದ ಆಟಗಾರರು ಚೆಂಡನ್ನು ಎಸೆದ ಸ್ಥಳಕ್ಕಿಂತಲೂ ಎತ್ತರ ಏರಬೇಕು. ಆದ್ದರಿಂದ, ಚೆಂಡನ್ನು ತಡೆಗಟ್ಟುವಲ್ಲಿ ಆಟಗಾರರ ಎತ್ತರವು ಅನುಕೂಲವಾಗಿರುತ್ತದೆ. ಕುಳ್ಳಗಿನ ಅಥವಾ ರಕ್ಷಣಾತ್ಮಕ ಆಟಗಾರರಿಗಿಂತಲೂ ಎತ್ತರವಿರುವ, ಪವರ್‌ ಫಾರ್ವರ್ಡ್‌ ಅಥವಾ ಸೆಂಟರ್‌ ಸ್ಥಾನಗಳಲ್ಲಿರುವ ಆಟಗಾರರು ಸಾಮಾನ್ಯವಾಗಿ ಅಧಿಕ ಸಂಖ್ಯೆಯಲ್ಲಿ ಚೆಂಡು ತಡೆಗಟ್ಟುವಿಕೆಗಳನ್ನು ದಾಖಲಿಸುವರು. ಆದರೂ, ಸಮಯೋಚಿತ ಯೋಜನೆ ಮತ್ತು ಸಾಕಷ್ಟು ಎತ್ತರದ ನೆಗೆತದ ಮೂಲಕ ಕುಳ್ಳಗಿನ ಆಟಗಾರರೂ ಸಹ ಗೋಲು ಎಸೆತಗಳನ್ನು ತಡೆಗಟ್ಟಬಹುದು.

ಎತ್ತರ[ಬದಲಾಯಿಸಿ]

ವೃತ್ತಿಪರ ಮಟ್ಟದಲ್ಲಿ ಬಹುತೇಕ ಪುರುಷ ಆಟಗಾರರು 6 feet 3 inches (1.91 m) ಮತ್ತು ಮಹಿಳಾ ಆಟಗಾರರು 5 feet 7 inches (1.70 m) ಎತ್ತರವಿರುತ್ತಾರೆ. ಗಾರ್ಡ್‌ ಸ್ಥಾನದಲ್ಲಿರುವವರು ಶಾರೀರಿಕ ಸಹಕಾರ ಮತ್ತು ಚೆಂಡು ನಿರ್ವಹಣಾ ಕೌಶಲ ಹೊಂದಿರುವುದು ನಿರ್ಣಾಯಕವಾಗಿದ್ದರೂ, ಈ ಸ್ಥಾನದಲ್ಲಿ ಕುಳ್ಳಗಿರುವ ಆಟಗಾರರೇ ನಿಲ್ಲುವುದು ಪ್ರವೃತ್ತಿ. ಪುರುಷರ ಪ್ರೊ ಲೀಗ್‌ನಲ್ಲಿರುವ ಬಹುಶಃ ಎಲ್ಲಾ ಫಾರ್ವರ್ಡ್‌ಗಳು 6 feet 6 inches (1.98 m) ಅಥವಾ ಅದಕ್ಕಿಂತಲೂ ಎತ್ತರವಿರುವ ಆಟಗಾರರಿದ್ದಾರೆ. ಬಹುತೇಕ ಸೆಂಟರ್‌ಗಳು 6 feet 10 inches (2.08 m)ಅಗತ್ಯಕ್ಕಿಂತಲೂ ಎತ್ತರವಿದ್ದಾರೆ. ಎಲ್ಲಾ NBA ತಂಡಗಳಿಗೂ ನೀಡಲಾದ ಸಮೀಕ್ಷೆ ಪ್ರಕಾರ, ಎಲ್ಲಾ NBA ಆಟಗಾರರ ಸರಾಸರಿ ಎತ್ತರ 6 feet 7 inches (2.01 m)ದ ತುಸು ಕಡಿಮೆಯಿದ್ದು ಮತ್ತು ಸರಾಸರಿ ಎತ್ತರ 222 pounds (101 kg) ಹತ್ತಿರವಿದೆ. NBA ಇದುವರೆಗೂ ಕಂಡ ಅತಿ ಎತ್ತರದ ಆಟಗಾರರೆಂದರೆ; ಮ್ಯಾನುಟ್‌ ಬೊಲ್‌ ಮತ್ತು ಘೋರ್ಘ್‌ ಮುರೆಸನ್‌. ಇವರಿಬ್ಬರೂ 7 feet 7 inches (2.31 m) ಎತ್ತರವಿದ್ದರು. ಹಾಲಿ NBA ತಂಡದಲ್ಲಿ 7 feet 6 inches (2.29 m)ಎತ್ತರವಿರುವ ಯಾವೊ ಮಿಂಗ್‌ ಸದ್ಯಕ್ಕೆ ಅತಿ ಎತ್ತರದ ಆಟಗಾರರಾಗಿದ್ದಾರೆ.

5 feet 3 inches (1.60 m) ಎತ್ತರದ ಮಗ್ಸಿ ಬೊಗ್ಸ್‌ NBAನಲ್ಲಿ ಆಡಿದ ಅತಿ ಕುಳ್ಳ ಆಟಗಾರರಾಗಿದ್ದರು. ಇತರೆ ಕುಳ್ಳ ಆಟಗಾರರೂ ಸಹ ಪ್ರೊ ಲೆವೆಲ್‌ನಲ್ಲಿ ಯಶಸ್ವಿಯಾಗಿದ್ದಾರೆ. ಆಂತೊನಿ 'ಸ್ಪಡ್‌' ವೆಬ್‌ ಕೇವಲ 5 feet 7 inches (1.70 m) ಎತ್ತರವಿದ್ದರು. ಆದರೂ ಆವರು ೪೨ ಅಂಗುಲ (೧.೦೭ ಮೀ.) ಎತ್ತರ ನೆಗೆಯಬಲ್ಲವರಾಗಿದ್ದರು. ಹಾಗಾಗಿ ನೆಗೆಯುವಾಗ ಗಮನಾರ್ಹ ಎತ್ತರವನ್ನು ತಲುಪುತ್ತಿದ್ದರು. ೫ ಅಡಿ ೫ ಅಂಗುಲ (೧.೬೫ ಮೀ.) ಎತ್ತರವಿರುವ ಅರ್ಲ್‌ ಬಾಯ್ಕಿನ್ಸ್‌ ೨೦೦೬-೦೭ ಋತುವಿನ ಪ್ರಕಾರ NBAನ ಅತಿ ಕುಳ್ಳಗಿನ ಆಟಗಾರರಾಗಿದ್ದರು. ಕುಳ್ಳಗಿನ ಆಟಗಾರರು ಆಗಾಗ್ಗೆ ಗೋಲು ಎಸೆತಗಳನ್ನು ತಡೆಯುವುದರಲ್ಲಿ ಅಷ್ಟು ಪರಿಣತರಲ್ಲದಿದ್ದರೂ, ಕಿಕ್ಕಿರಿದ ಅಂಕಣದಲ್ಲಿ ವೇಗವಾಗಿ ಕ್ರಮಿಸಿ, ಕೆಳಮಟ್ಟಕ್ಕೆ ಬಾಗಿ ಚೆಂಡನ್ನು ಕಸಿದುಕೊಳ್ಳುವುದು ಅವರ ಸಾಮರ್ಥ್ಯವಾಗಿದೆ.

ಮಾರ್ಪಾಟುಗಳು ಮತ್ತು ಸಮಾನ-ರೂಪದ ಆಟಗಳು[ಬದಲಾಯಿಸಿ]

ಬ್ಯಾಸ್ಕೆಟ್‌ಬಾಲ್‌ ಆಟದಲ್ಲಿ ಬಳಸುವ ಸಾಮಾನ್ಯ ಕೌಶಲಗಳು ಮತ್ತು ಉಪಕರಣಗಳನ್ನು (ಪ್ರಾಥಮಿಕವಾಗಿ ಚೆಂಡು ಮತ್ತು ಬ್ಯಾಸ್ಕೆಟ್‌) ಅವಲಂಬಿಸಿ ಬ್ಯಾಸ್ಕೆಟ್‌ಬಾಲ್‌ ಆಟದಲ್ಲೂ ವ್ಯತ್ಯಾಸಗಳಾಗುತ್ತವೆ.

ಕೆಲವು ಮಾರ್ಪಾಡುಗಳು ನಿಯಮಗಳಲ್ಲಾದ ಕೇವಲ ಬಾಹ್ಯ ಬದಲಾವಣೆಗಳನ್ನು ಒಳಗೊಂಡಿವೆ. ಇನ್ನೂ ಕೆಲವು, ವಿವಿಧ ಹಂತಗಳಲ್ಲಿ ಬ್ಯಾಸ್ಕೆಟ್‌ಬಾಲ್‌ ಮೂಲ ಆಟದ ಪ್ರಭಾವಕ್ಕೆ ಒಳಗಾಗಿ ಪ್ರತ್ಯೇಕ ಆಟಗಳಾಗಿವೆ. ಇತರೆ ಮಾರ್ಪಾಟುಗಳಲ್ಲಿ ಮಕ್ಕಳ ಆಟಗಳು, ಸ್ಪರ್ಧೆಗಳು ಅಥವಾ ತಮ್ಮ ಕೌಶಲಗಳನ್ನು ಉತ್ತಮಗೊಳಿಸಲು ಆಟಗಾರರು ಕೈಗೊಂಡ ಚಟುವಟಿಕೆಗಳು ಸೇರಿಕೊಂಡಿವೆ.

ಬ್ಯಾಸ್ಕೆಟ್‌ಬಾಲ್‌ ಆಟದ ಮಾರ್ಪಾಟುಗಳನ್ನು ಹೊಂದಿರುವ ಪ್ರಮುಖ ಆಟಗಳಿವೆ. ಇವುಗಳಲ್ಲಿ ಗಾಲಿಕುರ್ಚಿ (=ವ್ಹೀಲ್‌ಛೇರ್‌) ಬ್ಯಾಸ್ಕೆಟ್‌ಬಾಲ್‌ , ಜಲ (=ವಾಟರ್‌) ಬ್ಯಾಸ್ಕೆಟ್‌ಬಾಲ್‌ , ಕಡಲತೀರ (=ಬೀಚ್‌) ಬ್ಯಾಸ್ಕೆಟ್‌ಬಾಲ್‌ , ಸ್ಲ್ಯಾಮ್‌ಬಾಲ್‌ , ಸ್ಟ್ರೀಟ್‌ಬಾಲ್‌ ಮತ್ತು ಯುನಿಸೈಕಲ್‌ ಬ್ಯಾಸ್ಕೆಟ್‌ಬಾಲ್‌ ಸೇರಿವೆ. ಬ್ಯಾಸ್ಕೆಟ್‌ಬಾಲ್‌ನ ಮುಂಚಿನ ಆವೃತ್ತಿಯು ಸಿಕ್ಸ್‌-ಆನ್‌-ಸಿಕ್ಸ್‌ ಬ್ಯಾಸ್ಕೆಟ್‌ಬಾಲ್‌ ಎಂಬ ಆಟವಾಗಿದ್ದು, ೧೯೫೦ರ ದಶಕದ ಕೊನೆಯವರೆಗೂ ಆಡಲಾಗುತ್ತಿತ್ತು. ಕತ್ತೆಗಳ ಮೇಲೆ ಕುಳಿತು ಆಡಲಾದ ಕತ್ತೆ (=ಡಾಂಕಿ) ಬ್ಯಾಸ್ಕೆಟ್‌ಬಾಲ್ ಸಹ ಇದೆ. ಆದರೆ ಈ ಆಟವು ಪ್ರಾಣಿದಯಾ ಸಂಘಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ.

ಬ್ಯಾಸ್ಕೆಟ್‌ಬಾಲ್‌ ಕೌಶಲ ಮತ್ತು ಉಪಕರಣಗಳನ್ನು ಬಳಸಿ ಆಡಲಾದ ಆಟಗಳಲ್ಲಿ, ಅನೌಪಚಾರಿಕ ರೀತಿಯ, ಯಾವುದೇ ರೆಫರಿ ಮತ್ತು ಕಟ್ಟುನಿಟ್ಟಾದ ನಿಯಮಗಳಿಲ್ಲದ ಅರ್ಧ-ಅಂಕಣ(=ಹಾಫ್‌-ಕೋರ್ಟ್‌) ಆಟದ ಜನಪ್ರಿಯ ಆವೃತ್ತಿಗಳೂ ಸೇರಿವೆ. ಬ್ಯಾಸ್ಕೆಟ್‌ಬಾಲ್‌ ಆಟದ ಬಹುಶಃ ಸಾಮಾನ್ಯ ಮಾರ್ಪಾಟು ಈ ಅರ್ಧ-ಅಂಕಣ ಆಟವೇ ಆಗಿದೆ. ಇಲ್ಲಿ ಒಂದೇ ಬ್ಯಾಸ್ಕೆಟ್‌ನ ಬಳಕೆಯಾಗುತ್ತದೆ; ಹಾಗೂ, ಚೆಂಡು ಒಂದು ತಂಡದಿಂದ ಇನ್ನೊಂದು ತಂಡದ ಪಾಲಾದಾಗೆಲ್ಲ, ಅರ್ಧ-ಅಂಕಣದ ಅಥವಾ ಥ್ರೀ-ಪಾಯಿಂಟ್‌ ಲೈನ್‌ನ ಹೊರಗೆ ಚೆಂಡನ್ನು 'ಕ್ಲಿಯರ್‌' ಮಾಡುವ (ರವಾನಿಸುವ ಅಥವಾ ಪುಟಿಸುವ) ಅಗತ್ಯವಿರುತ್ತದೆ. ಅರ್ಧ-ಅಂಕಣ ಆಟಗಳಿಗೆ ಹೃದಯ ರಕ್ತನಾಳದ ಸಾಮರ್ಥ್ಯದ ಅಗತ್ಯ ಕಡಿಮೆ, ಏಕೆಂದರೆ ಆಟಗಾರರು ಪೂರ್ಣ ಅಂಕಣದ ಉದ್ದಗಲಕ್ಕೂ ಓಡಾಡುವ ಅಗತ್ಯವಿರುವುದಿಲ್ಲ. ಬಹಳ ಮಂದಿ ಆಟಗಾರರು ಆಡಲು ಇಚ್ಛಿಸಿದಲ್ಲಿ, ಅಂಕಣವನ್ನು ಬಳಸಲು ಅರ್ಧ-ಅಂಕಣದ ಆಟಗಳನ್ನು ಆಡುವ ಅವಕಾಶ ನೀಡಲಾಗುತ್ತದೆ. (ಸ್ವಾರಸ್ಯವೆಂದರೆ ಪೂರ್ಣ ತಂಡಗಳನ್ನು ರಚಿಸಲು ಸಾಕಷ್ಟು ಮಂದಿ ಆಟಗಾರರು ಅಲಭ್ಯರಾದಲ್ಲಿ, ಅರ್ಧ-ಅಂಕಣ ಆಟಗಳನ್ನು ಆಡಲಾಗುತ್ತದೆ.)

ಕೆಳಕಂಡಂತೆ ಇತರೆ ಬ್ಯಾಸ್ಕೆಟ್‌ಬಾಲ್‌ ಆಟಗಳೂ ಇವೆ:

ಗಾಲಿಕುರ್ಚಿ (=ವ್ಹೀಲ್‌ಛೇರ್‌) ಬ್ಯಾಸ್ಕೆಟ್‌ಬಾಲ್‌[ಬದಲಾಯಿಸಿ]

ಗಾಲಿಕುರ್ಚಿ ಬ್ಯಾಸ್ಕೆಟ್‌ಬಾಲ್‌ಅನ್ನು ಅಂಗವೈಕಲ್ಯಗೊಂಡ ಎರಡನೆಯ ವಿಶ್ವ ಯುದ್ಧದ ಅನುಭವಿ ಸೈನಿಕ[೨೪] ರು ರಚಿಸಿದ್ದಾರೆ, ದೈಹಿಕವಾಗಿ ದುರ್ಬಲರಾದವರು ವಿಶೇಷವಾಗಿ ವಿನ್ಯಾಸ ಮಾಡಲಾದ ಗಾಲಿಕುರ್ಚಿಗಳನ್ನು ಬಳಸಿ ಆಡುತ್ತಾರೆ. ಗಾಲಿಕುರ್ಚಿ ಬ್ಯಾಸ್ಕೆಟ್‌ಬಾಲ್‌ ಆಟದ ಆಡಳಿತ ಮಂಡಳಿ [[ಅಂತರರಾಷ್ಟ್ರೀಯ ಗಾಲಿಕುರ್ಚಿ ಬ್ಯಾಸ್ಕೆಟ್‌ಬಾಲ್‌ ಒಕ್ಕೂಟ (=ಇಂಟರ್ನ್ಯಾಷನಲ್‌ ವ್ಹೀಲ್‌ಛೇರ್‌ ಬ್ಯಾಸ್ಕೆಟ್‌ಬಾಲ್‌ ಫೆಡರೆಷನ್‌)]][೨೫] (IWBF).

ಜಲ ಬ್ಯಾಸ್ಕೆಟ್‌ಬಾಲ್‌[ಬದಲಾಯಿಸಿ]

ಈಜುಕೊಳದಲ್ಲಿ ಆಡಲಾಗುವ ಜಲ ಬ್ಯಾಸ್ಕೆಟ್‌ಬಾಲ್‌, ಬ್ಯಾಸ್ಕೆಟ್‌ಬಾಲ್‌ ಮತ್ತು ವಾಟರ್‌ಪೊಲೊ ನಿಯಮಗಳನ್ನು ಒಂದಾಗಿಸುತ್ತದೆ.

ಕಡಲತೀರ (=ಬೀಚ್‌) ಬ್ಯಾಸ್ಕೆಟ್‌ಬಾಲ್‌[ಬದಲಾಯಿಸಿ]

ಇದು ಬ್ಯಾಸ್ಕೆಟ್‌ಬಾಲ್‌ನ ಪರಿವರ್ತಿತ ಆವೃತ್ತಿಯಾಗಿದೆ. ಫಿಲಿಪ್‌ ಬ್ರಯಂಟ್‌[೨೬] ಹುಟ್ಟು ಹಾಕಿದ ಈ ಆಟವನ್ನು ಕಡಲ ತೀರಗಳಲ್ಲಿ ಆಡಲಾಗುತ್ತದೆ. ಕಡಲತೀರದ ಬ್ಯಾಸ್ಕೆಟ್‌ಬಾಲ್‌ ಆಟವನ್ನು, ಫಲಕಗಳಿಲ್ಲದ ಬ್ಯಾಸ್ಕೆಟ್‌ಗಳನ್ನು ಹೊಂದಿದ ದುಂಡಗಿನ ಅಂಕಣದಲ್ಲಿ ಆಡಲಾಗುತ್ತದೆ. ಚೆಂಡಿನ ಚಲನವಲನಗಳನ್ನು ರವಾನೆಗಳ ಅಥವಾ ೨½ ಹೆಜ್ಜೆಗಳ ಮೂಲಕ ಮಾಡಬೇಕಾಗಿದೆ, ಏಕೆಂದರೆ ಮೃದುವಾದ (ಮರಳಿನ) ಮೇಲ್ಮೈ ಮೇಲೆ ಚೆಂಡನ್ನು ಪುಟಿಸುವುದು ಬಹಳ ಅಸಾಧ್ಯ.[೨೭] ಕಡಲತೀರ ಬ್ಯಾಸ್ಕೆಟ್‌ಬಾಲ್‌ ಸ್ಪರ್ಧಾತ್ಮಕ ಆಟವಾಗಿ, ವ್ಯಾಪಕ ಜನಪ್ರಿಯತೆ ಗಳಿಸಿದೆ. ಹದಿನೈದು ವಾರ್ಷಿಕ ವಿಶ್ವ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ.

ಡಂಕ್‌ ಹೂಪ್ಸ್‌[ಬದಲಾಯಿಸಿ]

ಡಂಕ್‌ ಹೂಪ್ಸ್‌ (ಇದನ್ನು ಡಂಕ್‌ ಬಾಲ್‌ ಎಂದೂ ಕರೆಯಲಾಗಿದೆ) ಬ್ಯಾಸ್ಕೆಟ್‌ಬಾಲ್‌ ಆಟದ ಮಾರ್ಪಾಟಾಗಿದ್ದು, ಬ್ಯಾಸ್ಕೆಟ್‌ಗಳನ್ನು ಕಡಿಮೆ ಎತ್ತರದಲ್ಲಿ ಅಳವಡಿಸಲಾಗಿರುತ್ತದೆ (ಬ್ಯಾಸ್ಕೆಟ್‌ಬಾಲ್‌ ನಿಯಮಗಳ ಪ್ರಕಾರ, ಬ್ಯಾಸ್ಕೆಟ್‌ ನೆಲದಿಂದ ೧೦ ಅಡಿ ಎತ್ತರದಲ್ಲಿರಬೇಕು). ಸ್ಲ್ಯಾಮ್‌ ಡಂಕ್‌ನ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ಈ ರೀತಿಯ ಆಟದ ಆರಂಭವಾಯಿತು. ಹೆಚ್ಚು ಡಂಕ್‌ಗಳಿಗೆ ಅವಕಾಶಗಳನ್ನು ನೀಡಲು ಬ್ಯಾಸ್ಕೆಟ್‌ಗಳ ಎತ್ತರವನ್ನು ಕಡಿಮೆಗೊಳಿಸಿ, ಈ ಆಟಕ್ಕಾಗಿ ಗೋಲ್‌ಟೆಂಡಿಂಗ್‌ ನಿಯಮಗಳನ್ನು ಪರಿವರ್ತಿಸಲಾಯಿತು.

ಸ್ಲ್ಯಾಮ್‌ಬಾಲ್‌[ಬದಲಾಯಿಸಿ]

ಸ್ಲ್ಯಾಮ್‌ಬಾಲ್‌ ಎಂಬುದು ಪೂರ್ಣ-ತಾಗುವಿಕೆಗೆ ಆಸ್ಪದ ನೀಡುವ, ಟ್ರ್ಯಾಂಪೊಲೀನ್‌ಗಳನ್ನೊಳಗೊಂಡ ಬ್ಯಾಸ್ಕೆಟ್‌ಬಾಲ್‌ ಆಟ. ಬ್ಯಾಸ್ಕೆಟ್‌ಬಾಲ್‌ ಆಟದಂತೆ, ಗೋಲು ಎಸೆತಗಳ ಮೂಲಕ ಅಂಕಗಳನ್ನು ಗಳಿಸಲಾಗುತ್ತದೆ. ಆದರೂ, ಅಂಕ-ಗಳಿಕೆಯ ನಿಯಮಗಳನ್ನು ಪರಿವರ್ತಿಸಲಾಗಿದೆ. ಮೂಲ ಆಟದಿಂದ ಪ್ರಮುಖ ವ್ಯತ್ಯಾಸವೇನೆಂದರೆ, ಅಂಕಣ, ಬ್ಯಾಸ್ಕೆಟ್‌ ಮತ್ತು ಫಲಕಗಳ ಕೆಳಗೆ ನಾಲ್ಕು ಟ್ರ್ಯಾಂಪೊಲೀನ್‌ಗಳನ್ನು ನೆಲದಲ್ಲಿ ಅಳವಡಿಸಲಾಗುತ್ತದೆ. ಆಟಗಾರರು ಟ್ರ್ಯಾಂಪೊಲೀನ್‌ಗಳ ಮೇಲೆ ನೆಗೆದು ಹೆಚ್ಚು ಎತ್ತರ ತಲುಪಿ ಸ್ಲ್ಯಾಮ್‌ ಡಂಕ್‌ ಮಾಡಬಹುದು. ಈ ಆಟದಲ್ಲಿ ನಾಲ್ವರು ಆಟಗಾರರನ್ನು ಹೊಂದಿರುವ ಪ್ರತಿ ತಂಡಗಳ ನಡುವೆ ಸ್ವಲ್ಪ ಮಟ್ಟಿಗಿನ ಶಾರೀರಿಕ ತಾಗುವಿಕೆಗೆ ನಿಯಮಗಳು ಅನುವು ಮಾಡಿಕೊಡುತ್ತವೆ.

ಸ್ಟ್ರೀಟ್‌ಬಾಲ್‌[ಬದಲಾಯಿಸಿ]

ಇದು ಬ್ಯಾಸ್ಕೆಟ್‌ಬಾಲ್‌ನ ಅನೌಪಚಾರಿಕ ಮಾರ್ಪಾಡಾಗಿದೆ. ವಿಶ್ವಾದ್ಯಂತ ಈ ಆಟವನ್ನು ಆಟದ ಮೈದಾನ ಮತ್ತು ವ್ಯಾಯಾಮಶಾಲೆ (=ಜಿಮ್ನಷಿಯಮ್‌)ಗಳಲ್ಲಿ ಆಡುತ್ತಾರೆ. ಇದರಲ್ಲಿ ಆಗಾಗ್ಗೆ ಅಂಕಣದ ಅರ್ಧಭಾಗವನ್ನು ಮಾತ್ರ ಬಳಸಲಾಗುತ್ತದೆ. ಉಳಿದಂತೆ ಈ ಆಟದ ನಿಯಮಗಳು ಮೂಲ ಬ್ಯಾಸ್ಕೆಟ್‌ಬಾಲ್‌ ಆಟದ ನಿಯಮಗಳಂತೆಯೇ ಇವೆ. ಆಟ ಅಥವಾ ಓಟ ವೊಂದರಲ್ಲಿ ಭಾಗವಹಿಸುವವರ ಸಂಖ್ಯೆಯು ಒಬ್ಬ ರಕ್ಷಕ ಮತ್ತು ಒಬ್ಬ ಆಕ್ರಮಣಕಾರಿ ಆಟಗಾರರಿಂದ (ಒನ್‌-ಆನ್‌-ಒನ್‌ ) ಹಿಡಿದು, ತಲಾ ಐದು ಆಟಗಾರರನ್ನು ಹೊಂದಿರುವ ಎರಡು ತಂಡಗಳ ವರೆಗೂ ಉಂಟು.

ಸ್ಟ್ರೀಟ್‌ಬಾಲ್‌ ವಿಶ್ವಾದ್ಯಂತ ಬಹಳ ಜನಪ್ರಿಯ ಆಟವಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದ ಕೆಲವು ನಗರಗಳಲ್ಲಿ ಮಧ್ಯರಾತ್ರಿಯ ಬ್ಯಾಸ್ಕೆಟ್‌ಬಾಲ್‌ನಂತಹ ಸ್ಟ್ರೀಟ್‌ಬಾಲ್‌ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ಹಲವು ನಗರಗಳೂ ಸಹ ತಮ್ಮದೇ ಆದ, ವಾರದುದ್ದಕ್ಕೂ ನಡೆಯುವ ಸ್ಟ್ರೀಟ್‌ಬಾಲ್‌ ಪಂದ್ಯಾವಳಿಗಳನ್ನು ಆಯೋಜಿಸುತ್ತವೆ.

ಯುನಿಸೈಕಲ್‌ ಬ್ಯಾಸ್ಕೆಟ್‌ಬಾಲ್‌[ಬದಲಾಯಿಸಿ]

ಮಾಮೂಲು ಬ್ಯಾಸ್ಕೆಟ್‌ಬಾಲ್‌ ಅಂಕಣದಲ್ಲಿ, ಮೂಲ ಆಟದ ನಿಯಮಾವಳಿಗಳನ್ನೇ ಅನುಸರಿಸಿ, (ಉದಾಹರಣೆಗೆ, ಆಕ್ರಮಣಕಾರಿ ಆಟಗಾರನು ಚೆಂಡಿನೊಂದಿಗೆ ಎದುರಾಳಿಯ ಬ್ಯಾಸ್ಕೆಟ್‌ನತ್ತ ಮುನ್ನುಗ್ಗುವಾಗ ಚೆಂಡನ್ನು ಪುಟಿಸಬೇಕು) 'ರೆಗ್ಯುಲೆಷನ್‌ ಬ್ಯಾಸ್ಕೆಟ್‌ಬಾಲ್‌' ಚೆಂಡನ್ನು ಬಳಸಿ ಆಡಲಾದ ಆಟವೇ ಯುನಿಸೈಕಲ್‌ ಬ್ಯಾಸ್ಕೆಟ್‌ಬಾಲ್‌. ಯುನಿಸೈಕಲ್‌ ಬ್ಯಾಸ್ಕೆಟ್‌ಬಾಲ್‌ ಆಟಕ್ಕೇ ವಿಶಿಷ್ಟವಾಗಿರುವ ಹಲವು ನಿಯಮಗಳುಂಟು. ಉದಾಹರಣೆಗೆ ಆಟಗಾರರು ಚೆಂಡನ್ನು ಒಳಗೆ ಕಳುಹಿಸುವಾಗ ಕನಿಷ್ಠ ಒಂದು ಹೆಜ್ಜೆಯನ್ನು ಪೆಡಲ್‌ ಮೇಲಿರಿಸಬೇಕು. ಯುನಿಸೈಕಲ್ ಬ್ಯಾಸ್ಕೆಟ್‌ಬಾಲ್‌ ೨೪" ಅಥವಾ ಕಡಿಮೆ ಅಂಗುಲದ ಯುನಿಸೈಕಲ್‌ ಸವಾರರನ್ನೊಳಗೊಂಡು ಆಡಲಾಗುತ್ತದೆ. ಈ ಯುನಿಸೈಕಲ್‌ಗಳಿಗೆ ಪ್ಲಾಸ್ಟಿಕ್‌ ಪೆಡಲ್‌ಗಳಿರುತ್ತವೆ, ಹೀಗಾಗಿ ಅಂಕಣಕ್ಕೆ ಮತ್ತು ಆಟಗಾರರ ಮಂಡಿಗಳಿಗೆ ಪೆಟ್ಟುಬೀಳುವುದಿಲ್ಲ. ಜನಪ್ರಿಯವಾದ ಯುನಿಸೈಕಲ್‌ ಆಟಗಳನ್ನು ಉತ್ತರ ಅಮೆರಿಕಾದಲ್ಲಿ ಆಯೋಜಿಸಲಾಗಿದೆ.[೨೮]

ಇನ್ನಷ್ಟು ದೂರ-ಸಂಬಂಧಿತ ಬ್ಯಾಸ್ಕೆಟ್‌ಬಾಲ್‌ ಆಟಗಳು[ಬದಲಾಯಿಸಿ]

ಮೂಲ ಬ್ಯಾಸ್ಕೆಟ್‌ಬಾಲ್‌ ಆಟದ ಉಪ-ಉತ್ಪನ್ನವಾಗಿ ಇಂದು ಪ್ರತ್ಯೇಕ ಆಟಗಳಲ್ಲಿ ಕೆಳಕಂಡವು ಸೇರಿವೆ:

 • ಕಾರ್ಫ್‌ಬಾಲ್‌ (ಡಚ್‌: Korfbal): ನೆದರ್ಲೆಂಡ್ಸ್‌ನಲ್ಲಿ ಆರಂಭವಾದ ಇದನ್ನು ವಿಶ್ವಾದ್ಯಂತ ಮಿಶ್ರ ಲಿಂಗೀ ತಂಡದ ಆಟವಾಗಿ ಆಡಲಾಗುತ್ತಿದೆ. ಇದು ಮಿಶ್ರಿತ ನೆಟ್‌ಬಾಲ್‌ ಮತ್ತು ಬ್ಯಾಸ್ಕೆಟ್‌ಬಾಲ್‌ನಂತೆಯೇ ಇದೆ.
 • ನೆಟ್‌ಬಾಲ್‌ : ಇದು (ಮುಂಚೆ ಮಹಿಳೆಯರ ಬ್ಯಾಸ್ಕೆಟ್‌ಬಾಲ್‌ ಎನ್ನಲಾಗಿತ್ತು, ಆದರೆ ಇದು ಇಂದು ಪುರುಷ-ಮಹಿಳೆಯರಿಬ್ಬರೂ ಆಡುವ ಆಟ) ಕನಿಷ್ಠ ಶಾರೀರಿಕ ತಾಗುವಿಕೆಯನ್ನೊಳಗೊಂಡಿರುವ ತಂಡದ ಆಟವಾಗಿದೆ. ತಂಡವೊಂದರಲ್ಲಿ ಏಳು ಮಂದಿ ಆಟಗಾರರುಂಟು. ಇಲ್ಲಿ ತಂಡ ಎತ್ತರದಲ್ಲಿರುವ ಹೂಪ್‌ನ ಮೂಲಕ ಚೆಂಡನ್ನು ಎಸೆಯುವುದರ ಮೂಲಕ ಎದುರಾಳಿ ತಂಡದ ವಿರುದ್ಧ ಅಂಕಗಳಿಸಲು ಯತ್ನಿಸುತ್ತದೆ.
 • ಸ್ಲ್ಯಾಮ್‌ಬಾಲ್‌ : ಇದು ಪೂರ್ಣ ಶಾರೀರಿಕ ತಾಗುವಿಕೆಗೆ ಅನುವು ಮಾಡುವ ಬ್ಯಾಸ್ಕೆಟ್‌ಬಾಲ್‌ ಆಟವಾಗಿದೆ. ಸ್ಲ್ಯಾಮ್‌ಬಾಲ್‌ನಲ್ಲಿ ಟ್ರ್ಯಾಂಪೊಲೀನ್‌ಗಳನ್ನು ಬಳಸಲಾಗುತ್ತದೆ. ಬ್ಯಾಸ್ಕೆಟ್‌ಬಾಲ್‌ ಆಟದಂತೆಯೇ, ಚೆಂಡನ್ನು ಬ್ಯಾಸ್ಕೆಟ್‌ನಲ್ಲಿ ಎಸೆಯುವ ಮೂಲಕ ಅಂಕಗಳನ್ನು ಗಳಿಸಲಾಗುತ್ತದೆ, ಆದರೆ ಅಂಕ-ಗಳಿಕೆಯ ನಿಯಮಾವಳಿಗಳನ್ನು ಪರಿವರ್ತಿಸಲಾಗಿವೆ. ಮೂಲ ಆಟದಿಂದ ಪ್ರಮುಖ ವ್ಯತ್ಯಾಸವೇನೆಂದರೆ, ಅಂಕಣ, ಬ್ಯಾಸ್ಕೆಟ್‌ ಮತ್ತು ಫಲಕಗಳ ಕೆಳಗೆ ನಾಲ್ಕು ಟ್ರ್ಯಾಂಪೊಲೀನ್‌ಗಳನ್ನು ನೆಲದಲ್ಲಿ ಅಳವಡಿಸಲಾಗುತ್ತದೆ. ಆಟಗಾರರು ಟ್ರ್ಯಾಂಪೊಲೀನ್‌ಗಳ ಮೇಲೆ ನೆಗೆದು ಹೆಚ್ಚು ಎತ್ತರ ತಲುಪಿ ಸ್ಲ್ಯಾಮ್‌ ಡಂಕ್‌ ಮಾಡಬಹುದು. ನಾಲ್ವರು ಆಟಗಾರರನ್ನು ಹೊಂದಿರುವ ತಂಡಗಳ ನಡುವೆ ಸ್ವಲ್ಪಮಟ್ಟಿಗಿನ ತಾಗುವಿಕೆಯನ್ನು ನಿಯಮಗಳು ಅನುವು ಮಾಡುತ್ತವೆ.

ಬ್ಯಾಸ್ಕೆಟ್‌ಬಾಲ್‌ ಆಟದ ಸಾಮಾಜಿಕ ರೂಪಗಳು[ಬದಲಾಯಿಸಿ]

ಹಲವು ಸಾಮಾಜಿಕ ಸಮುದಾಯಗಳು ಬ್ಯಾಸ್ಕೆಟ್‌ಬಾಲ್‌ ಆಟವನ್ನು ಒಪ್ಪಿ ಅಳವಡಿಸಿಕೊಂಡಿವೆ. ಅವುಗಳು ತಮ್ಮದೇ ಆದ ವಾತಾವರಣಗಳನ್ನು ಮತ್ತು ನಿಯಮಗಳನ್ನು ರೂಪಿಸಿಕೊಂಡಿವೆ. ಬ್ಯಾಸ್ಕೆಟ್‌ಬಾಲ್‌ ಆಟದ ಸಾಮಾಜಿಕ ರೂಪಗಳಲ್ಲಿ ಕೆಳಕಂಡವು ಸೇರಿವೆ:

 • ಮನರಂಜನಾತ್ಮಕ ಬ್ಯಾಸ್ಕೆಟ್‌ಬಾಲ್‌ : ಮನರಂಜನಾತ್ಮಕ ಬ್ಯಾಸ್ಕೆಟ್‌ಬಾಲ್ ಆಟದಲ್ಲಿ ಆಟವೊಂದನ್ನು ಗೆಲ್ಲುವುದಕ್ಕಿಂತಲೂ ಹೆಚ್ಚಾಗಿ ವಿನೋದ, ಮನರಂಜನೆ, ಕುಟುಂಬ ಮತ್ತು ನಿಕಟಸ್ನೇಹಯೇ ಪ್ರಧಾನವಾಗಿದೆ.
 • ಬ್ಯಾಸ್ಕೆಟ್‌ಬಾಲ್‌ ಶಾಲೆಗಳು ಮತ್ತು ಅಕಾಡೆಮಿಗಳು : ಇಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಸ್ಕೆಟ್‌ಬಾಲ್ ಆಟದ ಮೂಲಭೂತ ವಿಚಾರಗಳಲ್ಲಿ ತರಬೇತಿ ನೀಡಲಾಗುತ್ತದೆ. ಜೊತೆಗೆ, ಅವರು ದೈಹಿಕ ಸಾಮರ್ಥ್ಯ ಮತ್ತು ಸಹಿಷ್ಣುತಾ ಪರೀಕ್ಷೆಗಳಿಗೆ ಒಳಗಾಗಿ, ನಂತರ ವಿವಿಧ ಬ್ಯಾಸ್ಕೆಟ್‌ಬಾಲ್‌ ಕೌಶಲಗಳನ್ನು ಕಲಿಯುತ್ತಾರೆ. ಬ್ಯಾಸ್ಕೆಟ್‌ಬಾಲ್‌ ವಿದ್ಯಾರ್ಥಿಗಳು ಚೆಂಡಿನ ರವಾನೆ, ನಿರ್ವಹಣೆ, ವಿವಿಧ ದೂರಗಳಿಂದ ಗೋಲು ಎಸೆತ, ಹಿಂಪುಟಿತ, ಅಕ್ರಮಣಕಾರಿ ಚಲನವಲನಗಳು, ರಕ್ಷಣಾತ್ಮಕ ಆಟ, ಲೇಅಪ್ ಗೋಲು ಎಸೆತ, ಸ್ಕ್ರೀನ್‌ ಇತ್ಯಾದಿ ತಂತ್ರಗಳು ಮತ್ತು ಬ್ಯಾಸ್ಕೆಟ್‌ಬಾಲ್‌ ನಿಯಮಾವಳಿ ಮತ್ತು ಆಚಾರಸೂತ್ರಗಳನ್ನೂ ಸಹ ಕಲಿಯುತ್ತಾರೆ. ಬ್ಯಾಸ್ಕೆಟ್‌ಬಾಲ್‌ ಪಂದ್ಯಾವಳಿಗಳಿಗೆ ಹಾಗೂ ಕೌಶಲಗಳನ್ನು ಉತ್ತಮಗೊಳಿಸುವ ಬ್ಯಾಸ್ಕೆಟ್‌ಬಾಲ್‌ ಕ್ಲಿನಿಕ್‌ ಗಳಿಗೆ ಪೂರ್ವಸಿದ್ಧತೆಗಾಗಿ ವಿವಿಧ ಸಂದರ್ಭಗಳಲ್ಲಿ ಆಯೋಜಿಸಲಾದ ಬ್ಯಾಸ್ಕೆಟ್‌ಬಾಲ್‌ ಶಿಬಿರ ಗಳು ಸಹ ಜನಪ್ರಿಯವಾಗಿವೆ.
 • ಉನ್ನತ ಶಿಕ್ಷಣ ನೀಡುವ ವಿದ್ಯಾ ಸಂಸ್ಥೆಗಳಲ್ಲಿ ಆಡಲಾದ ಕಾಲೇಜ್‌ ಮತ್ತು ವಿಶ್ವವಿದ್ಯಾನಿಲಯ ಬ್ಯಾಸ್ಕೆಟ್‌ಬಾಲ್‌ :
 • ಅಂಗವಿಕಲರ ಬ್ಯಾಸ್ಕೆಟ್‌ಬಾಲ್‌ : ಇದನ್ನು ವಿವಿಧ ಅಂಗವಿಕಲ ಸಮುದಾಯಗಳು ಆಡುವರು, ಉದಾಹರಣೆಗೆ:
 • ಜನಾಂಗೀಯ ಮತ್ತು ಧರ್ಮ-ಆಧಾರಿತ ಬ್ಯಾಸ್ಕೆಟ್‌ಬಾಲ್‌‌ : ಇದರಲ್ಲಿ ಉದಾಹರಣೆಗೆ, ಅಮೆರಿಕಾ ಸಂಯುಕ್ತ ಸಂಸ್ಥಾನ ಅಥವಾ ಕೆನಡಾದಲ್ಲಿ ಭಾರತ-ಪಾಕಿಸ್ತಾನ ಯಾ ರಷ್ಯಾ-ಅರ್ಮೆನಿಯಾ ಲೀಗ್‌ಗಳು; ಅಥವಾ, ಅಮೆರಿಕಾ ಸಂಯುಕ್ತ ಸಂಸ್ಥಾನ ಯಾ ಕೊಲ್ಲಿಯಲ್ಲಿ ಫಿಲಿಪಿನೊ ಪರದೇಶಿಗಳ ಬ್ಯಾಸ್ಕೆಟ್‌ಬಾಲ್‌ ಲೀಗ್‌ಗಳು ನಡೆಯುತ್ತವೆ. ಧರ್ಮ-ಆಧಾರಿತ ಬ್ಯಾಸ್ಕೆಟ್‌ಬಾಲ್‌ ಆಟವು ಮುಖ್ಯವಾಗಿ ಚರ್ಚ್‌-ಸಂಬಂಧಿತ ಕ್ರಿಶ್ಚಿಯನ್‌ ಬ್ಯಾಸ್ಕೆಟ್‌ಬಾಲ್‌ ಲೀಗ್‌ಗಳು, ಇದಲ್ಲದೆ ಹಿಂದೂ, ಯಹೂದಿ ಮತ್ತು ಮುಸ್ಲಿಮ್‌ ಬ್ಯಾಸ್ಕೆಟ್‌ಬಾಲ್‌ ಲೀಗ್‌ಗಳನ್ನು ಒಳಗೊಂಡಿರುತ್ತದೆ. ಜೊತೆಗೆ, ಕಾಪ್ಟಿಕ್‌, ಸಿರಿಯಾಕ್‌/ಅಸಿರಿಯನ್‌ನಂತಹ ಪಂಗಡ-ಆಧಾರಿತ ಬ್ಯಾಸ್ಕೆಟ್‌ಬಾಲ್‌ ಲೀಗ್‌ಗಳು ಅಮೆರಿಕಾ ಸಂಯುಕ್ತ ಸಂಸ್ಥಾನ ಯಾ ಕೆನಡಾ ದೇಶಗಳಲ್ಲಿ ನಡೆಯುತ್ತವೆ.
 • ಸಲಿಂಗಕಾಮಿ ಬ್ಯಾಸ್ಕೆಟ್‌ಬಾಲ್‌ : ಸಲಿಂಗಕಾಮಿ ಬ್ಯಾಸ್ಕೆಟ್‌ಬಾಲ್‌ ಲೀಗ್‌ಗಳಲ್ಲಿ ಸಲಿಂಗಕಾಮಿ, ಸಲಿಂಗಕಾಮಿ ಸ್ತ್ರೀ, ದ್ವಿಲಿಂಗೀ ಮತ್ತು 'ಲಿಂಗಾಂತರಿ' (=ಟ್ರ್ಯಾನ್ಸ್‌-ಜೆಂಡರ್‌) ಸಮುದಾಯಗಳು ಭಾಗವಹಿಸುತ್ತವೆ. ಸಲಿಂಗಕಾಮಿ ಕ್ರೀಡಾಕೂಟ, ವರ್ಲ್ಡ್‌ ಔಟ್‌ಗೇಮ್ಸ್‌ ಮತ್ತು ಯುರೊಗೇಮ್ಸ್‌ನಲ್ಲಿ ಬ್ಯಾಸ್ಕೆಟ್‌ಬಾಲ್‌ ಆಟವು ಕ್ರೀಡಾ ಚಟುವಟಿಕೆಗಳ ಪ್ರಮುಖ ಭಾಗವಾಗಿದೆ.
 • ಮಧ್ಯರಾತ್ರಿಯ ಬ್ಯಾಸ್ಕೆಟ್‌ಬಾಲ್‌ : ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಇತರೆಡೆ, ನಗರವಾಸಿ ಯುವಕರನ್ನು ಬ್ಯಾಸ್ಕೆಟ್‌ಬಾಲ್‌ ಆಟವಾಡುವಂತೆ ಪ್ರೇರೇಪಿಸುವುದರ ಮೂಲಕ ಅವರನ್ನು ರಸ್ತೆಗಳಿಂದ ದೂರವಿಟ್ಟು ಮಾದಕವಸ್ತು ಮತ್ತು ಅಪರಾಧಗಳ ಬದಲಿಗೆ ಪರ್ಯಾಯವಾಗಿ ಕ್ರೀಡೆಯತ್ತ ತರುವ ಯತ್ನವಿದು.
 • ಪುಟ್ಟ ಮಕ್ಕಳು ಆಡುವಂತಹ ಮಿನಿ ಬ್ಯಾಸ್ಕೆಟ್‌ಬಾಲ್‌
 • ವಯೋಮಿತಿ ಮೀರಿದ ವ್ಯಕ್ತಿಗಳಿಗಾಗಿ ಮ್ಯಾಕ್ಸಿ ಬ್ಯಾಸ್ಕೆಟ್‌ಬಾಲ್‌
 • ಕಾರಾಗೃಹ ಮತ್ತು ಸುಧಾರಣಾ ಕಾರಾಗೃಹಗಳಲ್ಲಿ ಅಭ್ಯಸಿಸಿದ ಪ್ರಿಸನ್‌ ಬ್ಯಾಸ್ಕೆಟ್‌ಬಾಲ್‌ . ಸೆರೆಯಾಳುಗಳೊಂದಿಗೆ ಬ್ಯಾಸ್ಕೆಟ್‌ಬಾಲ್‌ ಆಡಲು ಬ್ಯಾಸ್ಕೆಟ್‌ಬಾಲ್‌ ಧರ್ಮಪ್ರಚಾರಕ ಸಮುದಾಯಗಳು ಸಕ್ರಿಯವಾಗಿವೆ. ಕೆಲವು ಬಂದೀಖಾನೆಗಳು ತಮ್ಮದೇ ಆದ ಕಾರಾಗೃಹ ಬ್ಯಾಸ್ಕೆಟ್‌ಬಾಲ್‌ ಲೀಗ್‌ಗಳನ್ನು ರೂಪಿಸಿವೆ. ಎಲ್ಲಾ ಸ್ವಸ್ಥಳ ಮತ್ತು ಎದುರಾಳಿ ನೆಲೆಯ ಆಟಗಳನ್ನೂ ಸಹ ಕಾರಾಗೃಹದ ಅಂಕಣದಲ್ಲಿಯೇ ಆಡಿದ್ದಲ್ಲಿ, ಕೆಲವೊಮ್ಮೆ ಸೆರೆಯಾಳುಗಳಲ್ಲದವರೂ ಸಹ ಇಂತಹ ಲೀಗ್‌ಗಳಲ್ಲಿ ಆಡಬಹುದಾಗಿದೆ. ಪ್ರಿಸನ್‌ ಬಾಲ್‌ ಎಂಬ ಒಂದು ಸಾಕ್ಷ್ಯಚಿತ್ರ(=ಡಾಕ್ಯುಮೆಂಟರಿ)ವನ್ನು ಚಲನಚಿತ್ರ ನಿರ್ದೇಶಕ ಜೇಸನ್‌ ಮೊರಿಯರ್ಟಿ ಬಿಡುಗಡೆಗೊಳಿಸಿದ್ದಾರೆ.
 • ರಿಜ್‌ಬಾಲ್‌ ರಿಸರ್ವೇಷನ್‌ ಬಾಲ್‌ ಎಂಬುದರ ಸಂಕ್ಷಿಪ್ತವಾಗಿದ್ದು, ಸ್ಥಳೀಯ ಅಮೆರಿಕನ್ನರು ಬ್ಯಾಸ್ಕೆಟ್‌ಬಾಲ್‌ ಆಟದಲ್ಲಿ ತೋರುವ ಉತ್ಸಾಹಕ್ಕೆ ಮತ್ತು ಸ್ಥಳೀಯ ಅಮೆರಿಕನ್‌ ತಂಡಗಳ ಆಟದ ಶೈಲಿಯನ್ನು 'ರಿಜ್‌ಬಾಲ್‌' ಪದ ಬಳಸಿ ವಿವರಿಸಲಾಗುತ್ತದೆ.
 • ಎಲ್ಲಾ ಶಾಲಾ ವ್ಯವಸ್ಥೆಗಳಲ್ಲಿ ಆಗಾಗ ಅಭ್ಯಸಿಸಲಾದ ಮತ್ತು ಜನಪ್ರಿಯವಾದ ಆಟಗಳಲ್ಲಿ ಶಾಲಾ / ಪ್ರೌಢಶಾಲಾ ಬ್ಯಾಸ್ಕೆಟ್‌ಬಾಲ್‌ ಸಹ ಒಂದು.
 • ಮನರಂಜನೆಯ ಪ್ರದರ್ಶನಾ ತಂಡಗಳಿಂದ ಷೋ ಬ್ಯಾಸ್ಕೆಟ್‌ಬಾಲ್‌ ಆಡಲಾಗಿದೆ. ಹರ್ಲೆಮ್‌ ಗ್ಲೊಬ್‌ಟ್ರಾಟರ್ಸ್‌ ಎಂಬುದು ಮನರಂಜನಾ ಬ್ಯಾಸ್ಕೆಟ್‌ಬಾಲ್‌ ತಂಡಗಳಲ್ಲಿ ಪ್ರಧಾನ ಉದಾಹರಣೆ. ಇನ್ನೂ ಕೆಲವು ನಿಷ್ಣಾತ ಮನರಂಜನಾ ತಂಡಗಳಿವೆ:
  • ಸೆಲೆಬ್ರಿಟಿ ಬ್ಯಾಸ್ಕೆಟ್‌ಬಾಲ್‌ ತಂಡಗಳಲ್ಲಿ ಖ್ಯಾತನಾಮರು (ನಟ-ನಟಿಯರು, ಗಾಯಕ-ಗಾಯಕಿಯರು ಇತ್ಯಾದಿ) ಮನರಂಜನೆಗಾಗಿ ಅಥವಾ ಧನಸಹಾಯಾರ್ಥ ಕಾರ್ಯಕ್ರಮಗಳ ಅಂಗವಾಗಿ ತಮ್ಮದೇ ಆದ ಲೀಗ್‌ಗಳಲ್ಲಿ ಅಥವಾ ಸಾರ್ವಜನಿಕವಾಗಿ ಆಡುತ್ತಾರೆ.
  • ಕುಳ್ಳ ಅಥ್ಲೀಟ್‌ಗಳ ತಂಡಗಳು ಬ್ಯಾಸ್ಕೆಟ್‌ಬಾಲ್‌ ಬಳಸಿ ಪ್ರದರ್ಶನಾತ್ಮಕ ಆಟಗಳನ್ನು ಆಡುವುದಕ್ಕೆ ಮಿಡ್ಗೆಟ್‌ ಬ್ಯಾಸ್ಕೆಟ್‌ಬಾಲ್‌ ಎನ್ನಲಾಗುತ್ತದೆ.
  • ಮನರಂಜನಾ ಕಾರ್ಯಕ್ರಮಗಳಾಗಿ ಸ್ಲ್ಯಾಮ್‌ಬಾಲ್‌ ಆಡಲಾಗಿದೆ.
 • ಮಹಿಳೆಯರಿಂದ ಆಡಲಾದ ಮಹಿಳೆಯರ ಬ್ಯಾಸ್ಕೆಟ್‌ಬಾಲ್‌

ಫ್ಯಾಂಟೆಸಿ ಬ್ಯಾಸ್ಕೆಟ್‌ಬಾಲ್‌[ಬದಲಾಯಿಸಿ]

ಫ್ಯಾಂಟೆಸಿ ಬ್ಯಾಸ್ಕೆಟ್‌ಬಾಲ್‌ ಫ್ಯಾಂಟೆಸಿ ಬೇಸ್‌ಬಾಲ್‌ನಿಂದ ಪ್ರೇರಿತವಾಗಿತ್ತು. ಮೂಲತಃ ಅಂಗೈಯಲ್ಲಿರುವ ಅಂಕಿ-ಅಂಶಗಳನ್ನು ಗಮನವಿಡುತ್ತಾ ಆಡಲಾಗುವ ಈ ಆಟವು, ಅಂತರ್ಜಾಲದ ಬಳಕೆ ಹೆಚ್ಚಾಗುತ್ತಿದ್ದಂತೆ ಈ ಆಟವನ್ನು ೧೯೯೦ರ ದಶಕದಲ್ಲಿ ಜನಪ್ರಿಯಗೊಳಿಸಲಾಯಿತು. ಈ ಆಟವಾಡುವವರನ್ನು ಕೆಲವೊಮ್ಮೆ, ನೈಜ NBA ಆಟಗಾರರನ್ನು ಸೇರಿಸಿ ಅವರ ಬ್ಯಾಸ್ಕೆಟ್‌ಬಾಲ್‌ ಅಂಕಿಅಂಶಗಳನ್ನು ಲೆಕ್ಕಹಾಕುವ ಪ್ರಧಾನ ವ್ಯವಸ್ಥಾಪಕರು ಎನ್ನಲಾಗುತ್ತದೆ. ESPN ಫ್ಯಾಂಟೆಸಿ ಸ್ಪೋರ್ಟ್ಸ್‌, NBA.com, ಮತ್ತು Yahoo! ಫ್ಯಾಂಟೆಸಿ ಸ್ಪೋರ್ಟ್ಸ್‌ನಿಂದ ಜನಪ್ರಿಯಗೊಳಿಸಲಾಯಿತು. ಇತರೆ ಆಟಗಳ ಅಂತರ್ಜಾಲ ತಾಣಗಳು (=ವೆಬ್‌ಸೈಟ್‌ಗಳು) ಇದೇ ವಿನ್ಯಾಸವನ್ನು ನೀಡಿ, ಭಾಗವಹಿಸಿದವರು ನಿರ್ದಿಷ್ಟ ಆಟಗಾರರ ಮಾಲೀಕರಾಗಲು ಪ್ರೇರೇಪಿಸುವುದರ ಮೂಲಕ ಆಟದಲ್ಲಿನ ಆಸಕ್ತಿಯನ್ನು ಉಳಿಸಿಕೊಳ್ಳುವಲ್ಲಿ ನೆರವಾದವು.

ಇದನ್ನೂ ನೋಡಿರಿ[ಬದಲಾಯಿಸಿ]

ಚಿತ್ರ:Monument to basketball.jpg
ವಿಲ್ನಿಯಸ್‌ನಲ್ಲಿರುವ ಲಿಥುವೇನಿಯಾದ ಬ್ಯಾಸ್ಕೆಟ್‌ಬಾಲ್‌ ಸ್ಮಾರಕ

ಆಕರಗಳು[ಬದಲಾಯಿಸಿ]

 1. "They think it's all over". The Guardian. 2008-12-06. Retrieved 2008-12-24.
 2. "Hoop Hall History Page". Archived from the original on 2001-04-19. Retrieved 2021-07-16.{{cite web}}: CS1 maint: bot: original URL status unknown (link)
 3. "The Greatest Canadian Invention".
 4. "James Naismith Biography". 2007-02-14. Archived from the original on 2007-02-05. Retrieved 2007-02-14.
 5. ಥಿಂಕ್‌ಕ್ವೆಸ್ಟ್‌, ಬ್ಯಾಸ್ಕೆಟ್‌ಬಾಲ್‌ Archived 2005-03-18 ವೇಬ್ಯಾಕ್ ಮೆಷಿನ್ ನಲ್ಲಿ.. ೨೦೦೯ರ ಜನವರಿ ೨೦ರಂದು ಸಂದರ್ಶಿಸಲಾಯಿತು.
 6. "Newly found documents shed light on basketball's birth". ESPN.com. Associated Press. 2006-11-13. Retrieved 2007-01-11.
 7. "Pioneers in Physical Education". pp. 661–662. Archived from the original on 2009-06-20. Retrieved 2009-06-03.
 8. ೮.೦ ೮.೧ "Senda Berenson Papers". Archived from the original on 2016-02-03. Retrieved 2009-06-03.
 9. "ಹ್ಯಾಮ್ಲಿನ್‌ ಯುನಿವರ್ಸಿಟಿ ಅಥ್ಲೆಟಿಕ್ಸ್‌: ಹಟನ್‌ ಅರೆನಾ". Archived from the original on 2010-05-28. Retrieved 2009-11-17.
 10. "ಹ್ಯಾಮ್ಲಿನ್‌ ಯುನಿವರ್ಸಿಟಿ ಅಥ್ಲೆಟಿಕ್ಸ್‌: ಅಡ್ಮಿಷನ್‌ ಅಥ್ಲೆಟಿಕ್ಸ್‌ ಇಂಟ್ರೊ ಪೇಜ್‌". Archived from the original on 2009-09-20. Retrieved 2009-11-17.
 11. "You Come in as a Squirrel and Leave as an Owl". Retrieved 2009-06-02.
 12. ೧೨.೦ ೧೨.೧ ೧೨.೨ ೧೨.೩ "Historical Timeline". Archived from the original on 2009-06-21. Retrieved 2009-06-02.
 13. "The Great Teams". Retrieved 2009-06-02.
 14. ಕ್ವೀನ್ಸ್‌ ಜರ್ನಲ್‌ , vol. ೩೧, no. ೭, ಫೆಬ್ರುವರಿ ೧೬, ೧೯೦೪; ೧೦೫ ಇಯರ್ಸ್‌ ಆಫ್‌ ಕೆನಡಿಯನ್‌ ಯುನಿವರ್ಸಿಟಿ ಬ್ಯಾಸ್ಕೆಟ್‌ಬಾಲ್‌ , ಬೈ ಅರ್ಲ್‌ ಝುಕರ್ಮನ್‌, http://www.cisport.ca/e/m_basketball/story_detail.cfm?id=೧೩೬೧೮[ಶಾಶ್ವತವಾಗಿ ಮಡಿದ ಕೊಂಡಿ]
 15. ರಾಷ್ಟ್ರೀಯ ಅಂತರ್‌-ಶಾಲಾ ಬ್ಯಾಸ್ಕೆಟ್‌ಬಾಲ್‌ ಪಂದ್ಯಾವಳಿ - hoopedeia.nba.com - ಸೆಪ್ಟೆಂಬರ್‌ 13, 2009 ರಂದು ಮರು ಸಂಪಾದಿಸಲಾಗಿದೆ
 16. ರಾಷ್ಟ್ರೀಯ ಕೆಥೊಲಿಕ್‌ ಅಂತರ್‌‌-ಶಾಲಾ ಬ್ಯಾಸ್ಕೆಟ್‌ಬಾಲ್‌ ಪಂದ್ಯಾವಳಿ, 1924–1941 - hoopedia.nba.com - ಸೆಪ್ಟೆಂಬರ್‌ 13, 2009 ರಂದು ಮರು ಸಂಪಾದಿಸಲಾಗಿದೆ.
 17. ರಾಷ್ಟ್ರೀಯ ಕೆಥೊಲಿಕ್‌ ಇನ್ವಿಟೇಷನ್ಸ್‌ ಬ್ಯಾಸ್ಕೆಟ್‌ಬಾಲ್‌ - hoopedia.nba.com - ಸೆಪ್ಟೆಂಬರ್‌ 13, 2009 ರಂದು ಮರು ಸಂಪಾದಿಸಲಾಗಿದೆ.
 18. hoopedia.nba.com - ಶ್ಯಾಮವರ್ಣೀಯ ಪ್ರೌಢಶಾಲೆಗಳಿಗಾಗಿ ರಾಷ್ಟ್ರೀಯ ಅಂತರ್‌-ಶಾಲಾ ಬ್ಯಾಸ್ಕೆಟ್‌ಬಾಲ್‌ ಪಂದ್ಯಾವಳಿ, 1929–1942 - ಸೆಪ್ಟೆಂಬರ್‌ 13, 2009 ರಂದು ಮರು ಸಂಪಾದಿಸಲಾಗಿದೆ.
 19. ನ್ಯಾಷನಲ್‌ ಇನ್ವಿಟೇಷನಲ್‌ ಅಂತರ್‌-ಶಾಲಾ ಬ್ಯಾಸ್ಕೆಟ್‌ಬಾಲ್‌ ಪಂದ್ಯಾವಳಿ - hoopedia.nba.com - ಸೆಪ್ಟೆಂಬರ್‌ 13, 2009 ರಂದು ಮರು ಸಂಪಾದಿಸಲಾಗಿದೆ.
 20. ಸ್ಟ್ರೀಟ್‌ ಅಂಡ್‌ ಸ್ಮಿತ್ಸ್‌ ಸ್ಪೋರ್ಟ್ಸ್‌ಬ್ಯುಸಿನೆಸ್‌ಜರ್ನಲ್‌ , MLS ಹಾಜರಿ, TV ವೀಕ್ಷಣಾ ಅಂಕಗಳ ಇಳಿಮುಖ Archived 2016-01-25 ವೇಬ್ಯಾಕ್ ಮೆಷಿನ್ ನಲ್ಲಿ.
 21. ಸ್ಟ್ರೀಟ್‌ ಅಂಡ್‌ ಸ್ಮಿತ್ಸ್‌ ಸ್ಪೋರ್ಟ್ಸ್‌ಬ್ಯುಸಿನೆಸ್‌ಜರ್ನಲ್‌ , NHLನ ಹಾಜರಿ, TV ವೀಕ್ಷಣಾ ಅಂಕಗಳೆರಡರಲ್ಲೂ ಹೆಚ್ಚಳ Archived 2010-12-23 ವೇಬ್ಯಾಕ್ ಮೆಷಿನ್ ನಲ್ಲಿ.
 22. ಟೆಲೆವಿಷನ್‌ ನ್ಯೂಜೀಲೆಂಡ್‌ , ಬ್ಯಾಸ್ಕೆಟ್‌ಬಾಲ್‌ | ಕಷ್ಟಕಾಲದಿಂದ ಹೊರಬರುತ್ತಿರುವ NBA Archived 2015-03-18 ವೇಬ್ಯಾಕ್ ಮೆಷಿನ್ ನಲ್ಲಿ.
 23. "Connor Sports Flooring". Archived from the original on 2009-12-10. Retrieved 2009-06-03.
 24. "ಲರ್ನ್‌ ಬ್ಯಾಸ್ಕೆಟ್‌ಬಾಲ್‌ ಆನ್‌ ಫೈಂಡ್‌ಸ್ಪೋರ್ಟ್ಸ್‌ನವ್‌". Archived from the original on 2017-10-07. Retrieved 2009-11-17.
 25. IWBF ಜಾಲತಾಣ
 26. ವಿಶ್ವ ಕಡಲತೀರದ ಬ್ಯಾಸ್ಕೆಟ್‌ಬಾಲ್‌ ಜಾಲತಾಣ
 27. [೧] Beachbasketball‌.com ಜಾಲತಾಣ
 28. ಕಾಮ್‌ಕ್ಯಾಸ್ಟ್‌ ಸ್ಪೋರ್ಟ್ಸ್‌‌ನೆಟ್‌ ಫೀಚರ್‌ ಎಬೌಟ್‌ ಬರ್ಕಲೇ ಯುನಿಸೈಕಲ್‌ ಬ್ಯಾಸ್ಕೆಟ್‌ಬಾಲ್‌[ಶಾಶ್ವತವಾಗಿ ಮಡಿದ ಕೊಂಡಿ]
 29. ಬ್ಯಾಂಕ್‌ಷಾಟ್‌ ಬ್ಯಾಸ್ಕೆಟ್‌ಬಾಲ್‌ ಜಾಲತಾಣ

ಹೊರಗಿನ ಕೊಂಡಿಗಳು[ಬದಲಾಯಿಸಿ]

ಐತಿಹಾಸಿಕ[ಬದಲಾಯಿಸಿ]

ಸಂಸ್ಥೆಗಳು[ಬದಲಾಯಿಸಿ]

ಇತರೆ[ಬದಲಾಯಿಸಿ]

ಟೆಂಪ್ಲೇಟು:Fb start

ಟೆಂಪ್ಲೇಟು:Fb end