ಭಾರತದ ಮುಖ್ಯ ನ್ಯಾಯಾಧೀಶರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತದ ಮುಖ್ಯ ನ್ಯಾಯಾಧೀಶರು
ಭಾರತದ ಸುಪ್ರೀಂ ಕೋರ್ಟ್‌ನ ಲಾಂಛನ
ಅಧಿಕಾರಸ್ಥ
ಜಸ್ಟಿಸ್ ಶರದ್ ಅರವಿಂದ್ ಬೊಬ್ಡೆ

ಎಂದಿನಿಂದ-೧೮ ನವೆಂಬರ್ ೨೦೧೯
ಭಾರತದ ನ್ಯಾಯಾಂಗ
ಸಂಕ್ಷಿಪ್ತ ನಾಮಸಿಜೆಐ
Seatಭಾರತದ ಸರ್ವೋಚ್ಛ ನ್ಯಾಯಾಲಯ, ನವ ದೆಹಲಿ
ಅನುಮೋದಕCollegium of the Supreme Court
ನೇಮಕಾಧಿಕಾರಿರಾಷ್ಟ್ರಪತಿಗಳು
ಅಧಿಕಾರಾವಧಿage of 65 yrs (upto 02/12/2015)[೧]
ಕಾಯಿದೆಯ ಪ್ರಕಾರಭಾರತದ ಸಂವಿಧಾನ (ಅನುಚ್ಛೇಧ ೧೨೪)
ಹುದ್ದೆಯ ಸ್ಥಾಪನೆ೧೯೫೦
ಪ್ರಥಮ ಅಧಿಕಾರಿಜಸ್ಟಿಸ್ ಹೀರಾಲಾಲ್ ಜೆ ಕಾನಿಯ (26/01/1950 - 06/11/1951)[೨]
ಕೊನೆಯ ಅಧಿಕಾರಿಜಸ್ಟಿಸ್ ಜಗದೀಶ್ ಸಿಂಗ್ ಕೇಹರ್ (27/04/2014 - 27/09/2014)[೩]
ಅಧೀಕೃತ ಜಾಲತಾಣಭಾರತದ ಸರ್ವೋಚ್ಛ ನ್ಯಾಯಾಲಯ

ಭಾರತದ ಮುಖ್ಯ ನ್ಯಾಯಾಧೀಶರು ಎನ್ನುವುದು ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿನ ಅತ್ಯಂತ ಶ್ರೇಷ್ಠ ನ್ಯಾಯಾಧೀಶರ ಪದವಿಯಾಗಿದೆ. ಇದು ಭಾರತದಲ್ಲಿ ಒಬ್ಬ ನ್ಯಾಯಾಧೀಶರು ಹೊಂದಬಹುದಾದ ನ್ಯಾಯಾಧೀಶರ ಅತ್ಯುನ್ನತ ಸ್ಥಾನವಾಗಿದೆ. ಮುಖ್ಯ ನ್ಯಾಯಾಧೀಶರು ಸರ್ವೋಚ್ಛ ನ್ಯಾಯಾಲಯದ ಆಡಳಿತಾತ್ಮಕ ಕಾರ್ಯಗಳನ್ನು ನೋಡಿಕೊಳ್ಳುವುದಲ್ಲದೆ, ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿರುವ ಪ್ರಮುಖ ನ್ಯಾಯಾಧೀಶರಂತೆ ಸಕ್ರಿಯ ಕಾರ್ಯ ನಿರ್ವಹಿಸುವರು.

ನ್ಯಾಯಾಧೀಶರ ಆಡಳಿತಾತ್ಮಕ ಕಾರ್ಯಗಳು[ಬದಲಾಯಿಸಿ]

ಆಡಳಿತಾತ್ಮಕವಾಗಿ ಮುಖ್ಯ ನ್ಯಾಯಾಧೀಶರು ಈ ಕೆಳಗಿನ ಕಾರ್ಯಗಳನ್ನು ನೆರವೇರಿಸುವರು;

  • ಸರ್ವೋಚ್ಛ ನ್ಯಾಯಾಲಯದಲ್ಲಿರುವ ಇತರ ನ್ಯಾಯಾಧೀಶರಿಗೆ ಪ್ರಕರಣಗಳ(ವಿಷಯ ಪಟ್ಟಿ) ಹಂಚಿಕೆ
  • ಸಿಬ್ಬಂದಿ ಅನುಕ್ರಮ ಪಟ್ಟಿ ನಿಭಾಹಿಸುವಿಕೆ ಮತ್ತು ನಿರ್ವಹಣೆ
  • ನ್ಯಾಯಾಲಯದ ಅಧಿಕಾರಿಗಳ, ಕಚೇರಿ ಸಿಬ್ಬಂದಿ ನೇಮಕಾತಿ.
  • ಸರ್ವೋಚ್ಛ ನ್ಯಾಯಾಲಯದ ಮೇಲ್ವಿಚಾರಣೆ ಮತ್ತು ಕಾರ್ಯಗಳಿಗೆ ಸಂಬಂಧಿಸಿದ ಸಾಮಾನ್ಯ ಮತ್ತು ಇತರ ಬಹುಮುಖದ ವಿಷಯಗಳು.

ಮುಖ್ಯ ನ್ಯಾಯಾಧೀಶರು ಪ್ರಕರಣಗಳ ಹಂಚಿಕೆ ಮತ್ತು ಕಾನೂನಿನ ಪ್ರಮುಖ ವಿಷಯಗಳೊಂದಿಗೆ ವ್ಯವಹರಿಸಲು ಸಾಂವಿಧಾನಿಕ ಪೀಠಗಳನ್ನು ರಚಿಸುವ ಜವಾಬ್ದಾರಿ ಸಹ ಹೊಂದಿರುವರು. ಭಾರತದ ಸಂವಿಧಾನದ ಅನುಚ್ಛೇಧ ೧೪೫ ಮತ್ತು ೧೯೬೬ನ ಸರ್ವೋಚ್ಛ ನ್ಯಾಯಾಲಯದ ಕಾರ್ಯವಿಧಾನಗಳ ನಿಯಮದಂತೆ, ಮುಖ್ಯ ನ್ಯಾಯಾಧೀಶರು ಇತರ ನ್ಯಾಯಾಧೀಶರಿಗೆ ಕಾರ್ಯಭಾರ ಹಂಚುತ್ತಾರೆ. ಇತರ ನ್ಯಾಯಾಧೀಶರಿಗೆ ಹೆಚ್ಚು ಸಾಮರ್ಥ್ಯದ ಪೀಠದ ಅಗತ್ಯವಿದ್ದರೆ, ಮುಖ್ಯ ನ್ಯಾಯಾಧೀಶರನ್ನು ಕೇಳಿಪಡೆಯಬೇಕು.

ಭಾರತದ ಮುಖ್ಯ ನ್ಯಾಯಾಧೀಶರ ನೇಮಕಾತಿ:[ಬದಲಾಯಿಸಿ]

  • ಭಾರತದ ಸಂವಿಧಾನದಡಿ ಅನುಚ್ಛೇಧ ೧೨೪ದಲ್ಲಿ ಸರ್ವೋಚ್ಛ ನ್ಯಾಯಾಲಯಕ್ಕೆ ನ್ಯಾಯಾಧೀಶರ ನೇಮಕದ ವಿಧಾನ ವಿವರಿಸಲಾಗಿದೆ. ಆದಾಗ್ಯೂ ಸರ್ವೋಚ್ಛ ನ್ಯಾಯಾಲಯಕ್ಕೆ ಮುಖ್ಯ ನ್ಯಾಯಾಧೀಶರ ನೇಮಕದ ಬಗ್ಗೆ ಯಾವುದೇ ವಿಶೇಷ ನಿಬಂಧನೆಗಳಿಲ್ಲ. ಹಾಗಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ನ್ಯಾಯಾಧೀಶರ ನೇಮಕದ ಪ್ರಕ್ರಿಯೆಯು ಮುಖ್ಯ ನ್ಯಾಯಾಧೀಶರ ನೇಮಕಾತಿಗೂ ಅನ್ವಯಿಸುವುದು.
  • ಸರ್ವೋಚ್ಛ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಧೀಶರಾಗುವವರನ್ನು ಭಾರತ ಸರಕಾರವು ರಾಷ್ಟ್ರಪತಿಗಳಿಗೆ ಸೂಚಿಸುವುದು. ರಾಷ್ಟ್ರಪತಿಗಳು ಅದಕ್ಕೆ ಸಮ್ಮತಿಸಿ ಅಗತ್ಯವಿದ್ದರೆ ಸರ್ವೋಚ್ಛ ನ್ಯಾಯಾಲಯದ ಇತರ ನ್ಯಾಯಾಧೀಶರು ಮತ್ತು ರಾಜ್ಯಗಳಲ್ಲಿರುವ ಉಚ್ಚ ನ್ಯಾಯಾಲಯಗಳ ಸಲಹೆಯ ಮೇರೆಗೆ ಮುಖ್ಯ ನ್ಯಾಯಾಧೀಶರ ನೇಮಕಕ್ಕೆ ಚಾಲನೆ ನೀಡುವರು.
  • ಇಲ್ಲಿ ಹಿರಿತನವನ್ನು ವಯಸ್ಸಿನ ಮೂಲಕ ಪರಿಗಣಿಸದೆ, ಸರ್ವೋಚ್ಛ ನ್ಯಾಯಾಲಯದೊಳಗೆ ಸಲ್ಲಿಸಿದ ಸೇವೆಯ ಆಧಾರದ ಮೇಲೆ ಪರಿಗಣಿಸಲಾಗುವುದು. ಹಾಗಾಗಿ ಸರ್ವೋಚ್ಛ ನ್ಯಾಯಾಲಯದಲ್ಲಿ ಹೆಚ್ಚು ಅನುಭವವಿರುವ ನ್ಯಾಯಾಧೀಶರು ಸಾಮಾನ್ಯವಾಗಿ ಸರಕಾರದಿಂದ ನಾಮಕರಣಗೊಂಡು ಮುಖ್ಯ ನ್ಯಾಯಾಧೀಶರಾಗಿ ನೇಮಕವಾಗಬಹುದು.

ವಿಧ್ಯುಕ್ತ ವಿಧಾನದ ಉಲ್ಲಂಘನೆ[ಬದಲಾಯಿಸಿ]

[೪] ಪ್ರಮುಖವಾದದ್ದು.

  • ೧೯೭೩ರಲ್ಲಿ ರಾಯ್‌ರವರಿಗಿಂತ ಮೂರು ಜನ ಹಿರಿಯ ನ್ಯಾಯಾಧೀಶರಿದ್ದರೂ, ಅವರನ್ನೇ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕಮಾಡಲಾಗಿತ್ತು. ಈ ನೇಮಕಾತಿ ಪ್ರಕ್ರಿಯೆಯು ಇಂದಿರಾ ಗಾಂಧಿ ಭಾರತದ ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ನಡೆಯಿತು. ನಿಷ್ಟ ನ್ಯಾಯಾಧಿಕರಣ ಅಥವಾ ಸಮಾಜವಾದಿ ಸರ್ಕಾರಕ್ಕೆ ನಿಷ್ಟವಾದ ನ್ಯಾಯಾಧೀಶರ ಅಗತ್ಯವಿದೆ ಎಂದು ಈ ನೇಮಕಾತಿಯನ್ನು ಸರ್ಕಾರ ಸಮರ್ಥಿಸಿಕೊಂಡಿತ್ತು.
  • ರಾಯ್‌ರವರು ಉದಾರವಾಗಿದ್ದಾರೆಂದು ತಿಳಿದು, ಪ್ರಸ್ತುತ ಸರಕಾರದಿಂದಾಗಿ ಸಾಂವಿಧಾನಿಕ ಬಿಕ್ಕಟ್ಟು ಎದುರಿಸುತ್ತಿದ್ದ ಇಂದಿರಾ ಗಾಂಧಿಯನ್ನು ಬೆಂಬಲಿ ಸುವರೆನ್ನುವ ನಂಬಿಕೆ ಮೇಲೆ ಅವರನ್ನು ನೇಮಿಸಲಾಯಿತು ಎಂಬ ಆಪಾದನೆಯೂ ಇದೆ. ಈ ನೇಮಕಾತಿ ಕುರಿತು ರಾಜಕೀಯ ಪ್ರತಿಗಾಮಿ ಮುತ್ಸದ್ದಿ ರಾಜ್‌ ನಾರಾಯಣ್‌ ಪ್ರತಿಭಟಿಸಿದರು.
  • ಹೀಗಾಗಿ ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿ ಮುಂದುವರಿಕೆಗೆ ಇದೇ ಪ್ರಮುಖ ಕಾನೂನು ತೊಡಕಾಗಿತ್ತು. ತುರ್ತುಪರಿಸ್ಥಿಯ ನಂತರ, ಐತಿಹಾಸಿಕ ತೀರ್ಪುಗಳ ಸರಣಿಯಿಂದಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ಹೆಚ್ಚಿನ ಅಧಿಕಾರ-ಸಾಮರ್ಥ್ಯ ಬಂದಿತು.
  • ಈ ತೀರ್ಪುಗಳಲ್ಲಿ ಒಂದೆಂದರೆ (ಸಾಂವಿಧಾನಿಕ ಪೀಠ ಎಸ್.ಪಿ. ಗುಪ್ತ - II ಪ್ರಕರಣದಲ್ಲಿ), ಭಾರತ ಸರಕಾರವು ಮುಖ್ಯ ನ್ಯಾಯಾಧೀಶರ ಸ್ಥಾನಕ್ಕಾಗಿ ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯಾಧೀಶರನ್ನು ಮಾತ್ರ ಸೂಚಿಬಹುದಾಗಿರುವುದು. ಇದರಿಂದಾಗಿ ಸರಕಾರ ಅಥವಾ ಅದರ ಸಾಮರ್ಥ್ಯ ಬಳಸಿ, ನ್ಯಾಯಾಂಗದ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲ. ಅಲ್ಲಿಂದೀಚೆಗೆ ನೇಮಕಾತಿ ಪ್ರಕ್ರಿಯೆ ಯಾವುದೇ ವಿನಾಯಿತಿಯಿಲ್ಲದೆ ನಡೆಯುತ್ತಿದೆ.
  • ಮುಖ್ಯ ನ್ಯಾಯಾಧೀಶರು ಒಮ್ಮೆ ನೇಮಕವಾದರೆ, ಐದು ವರ್ಷಗಳವರೆಗೆ ಅಥವಾ ಅವರು ನಿವೃತ್ತಿಯಾಗುವವರೆಗೆ ಅಥವಾ ಅವುಗಳಲ್ಲಿ ಯಾವುದು ಮೊದಲು ಬರುವುದೋ, ಅಲ್ಲಿ ಯವರೆಗೆ ಅಥವಾ ದೋಷಾರೋಪಣೆಯ ಮೂಲಕ ಪದವಿಯಿಂದ ತೆಗೆದು ಹಾಕದೆ ಇರುವವರೆಗೆ ಹುದ್ದೆಯಲ್ಲಿರುತ್ತಾರೆ.

ಕೆಲ ತುಣುಕುಗಳು[ಬದಲಾಯಿಸಿ]

  • ಭಾರತದ ಸಂವಿಧಾನ ಅನುಚ್ಛೇಧ ೬೦ರ ಪ್ರಕಾರ ಭಾರತದ ಮುಖ್ಯ ನ್ಯಾಯಾಧೀಶರು ಭಾರತದ ರಾಷ್ಟ್ರಪತಿಗಳಿಗೆ ಪ್ರಮಾಣವಚನ ಬೋದಿಸುವರು.
  • ಉಪ ರಾಷ್ಟ್ರಪತಿ ಮತ್ತು ಭಾರತದ ರಾಷ್ಟ್ರಪತಿಗಳ ಅನುಪಸ್ಥಿತಿಯಲ್ಲಿ, ಮುಖ್ಯ ನ್ಯಾಯಾಧೀಶರು ಭಾರತದ ಹಂಗಾಮಿ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸುವರು.
  • ಮುಖ್ಯ ನ್ಯಾಯಾಧೀಶರು ಅಧಿಕಾರ ವಹಿಸುವುದರೊಂದಿಗೇ ಸಾಮಾನ್ಯವಾಗಿ ಭಾರತದಲ್ಲಿರುವ ಹೆಚ್ಚಿನ ಸ್ವಾಯತ್ತ ಸಂಸ್ಥೆಯ ಕಾನೂನು ಶಾಲೆಗಳಿಗೆ ಕುಲಪತಿ/ಸಂದರ್ಶನ ಪ್ರಾಧ್ಯಾಪರಾಗಿರುವರು.
  • ಇಲ್ಲಿಯವರೆಗೆ ಯಾವುದೇ ಮಹಿಳೆಯು ಭಾರತದ ಮುಖ್ಯ ನ್ಯಾಯಾಧೀಶರಾಗಿ ಆಯ್ಕೆಯಾಗಿಲ್ಲ. ೨೦೦೦ರ ಜನವರಿ ೨೮ರಂದು ರುಮಾ ಪಾಲ್‌ರವರು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡರು. ಎರಡು ದಿನದ ಮೊದಲು ನ್ಯಾಯಾಧೀಶರಾಗಿ ನೇಮಕಗೊಂಡಿದ್ದರೆ, ಅವರು ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಾಧೀಶರಾಗಬಹುದಿತ್ತು.
  • ಆದರೆ ೨೦೦೦ರ ಜನವರಿ ೨೬ರಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ವೈ.ಕೆ. ಸಭರ್ವಾಲ್‌ ನೇಮಕವಾಗಿದ್ದರು. ರುಮಾ ಪಾಲ್‌ಗಿಂತ ಎರಡು ದಿನ ಮೊದಲು ಸೇವೆಗೆ ಸೇರಿದ್ದರಿಂದಾಗಿ, ಸಭರ್ವಾಲ್‌ರು ಭಾರತದ ಮುಖ್ಯ ನ್ಯಾಯಾಧೀಶರಾದರು. ಹೀಗಾಗಿ ಕೇವಲ್ ಎರಡು ದಿನಗಳ ಹಿರಿತನವಿಲ್ಲದವರಿಗೆ ಅವಕಾಶ ಕೈತಪ್ಪಿತು.
  • ಹೆಚ್.ಜೆ. ಕಾನಿಯಾ ಅವರು ಸರ್ವೋಚ್ಛ ನ್ಯಾಯಾಲಯದ ಮೊದಲ ಮುಖ್ಯ ನ್ಯಾಯಾಧೀಶರಾಗಿ ವರ್ಗಾವಣೆಯಾದರು ಅಥವಾ ನೇಮಕಗೊಂಡರು . ಇದಕ್ಕೂ ಮೊದಲು ಅವರು ಭಾರತದ ಸರ್ವೋಚ್ಛ ನ್ಯಾಯಾಲಯಕ್ಕೆ ಪೂರ್ವವರ್ತಿ(ಪೂರ್ವಾಧಿಕಾರಿ)ಯಾಗಿದ್ದ ಫೆಡರಲ್‌ ಕೋರ್ಟ್‌ ಆಫ್‌ ಇಂಡಿಯಾದ ಮುಖ್ಯ ನ್ಯಾಯಾಧೀಶರಾಗಿದ್ದರು

ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು[ಬದಲಾಯಿಸಿ]

ಸಂ. ಹೆಸರು ಅಧಿಕಾರ ಸ್ವೀಕರಿಸಿದ ದಿನಾಂಕ ಅಧಿಕಾರದಿಂದ ನಿರ್ಗಮಿಸಿದ್ದು ಮೂಲ ರಾಜ್ಯ ಮುಖ್ಯ ನ್ಯಾಯಾಧೀಶರಾಗಿರುವ ಅವಧಿಯಲ್ಲಿ ನೀಡಿದ ಪ್ರಮುಖ ತೀರ್ಪುಗಳು
೦೧ ಹೀರಾಲಾಲ್.ಜೆ. ಕಾನಿಯಾ ೧೫ ಆಗಸ್ಟ್‌ ೧೯೪೭ ೧೬ ನವೆಂಬರ್‌ ೧೯೫೧ ಬಾಂಬೆ (ಈಗಿನ ಮುಂಬಯಿ) AK ಗೋಪಾಲನ್‌ ವಿರುದ್ಧ ಭಾರತ ಸರಕಾರ
೦೨ ಮಂಡಕೊಳತ್ತೂರು ಪತಂಜಲಿ ಶಾಸ್ತ್ರಿ ೧೬ ನವೆಂಬರ್‌ ೧೯೫೧ ೩ ಜನವರಿ ೧೯೫೪ ಮದ್ರಾಸ್‌ (ಈಗಿನ ಚೆನ್ನೈ)
೦೩ ಮೆಹರ್‌ ಚಂದ್‌ ಮಹಾಜನ್‌ ೩ ಜನವರಿ ೧೯೫೪ ೨೨ ಡಿಸೆಂಬರ್‌ ೧೯೫೪ ಲಾಹೋರ್‌/ಕಾಶ್ಮೀರ
೦೪ ಬಿ. ಕೆ. ಮುಖರ್ಜೀಯಾ ೨೨ ಡಿಸೆಂಬರ್‌ ೧೯೫೪ ೩೧ ಜನವರಿ ೧೯೫೬ ಪಶ್ಚಿಮ ಬಂಗಾಳ
೦೫ ಸುಧಿ ರಂಜನ್‌ ದಾಸ್‌ ೩೧ ಜನವರಿ ೧೯೫೬ ೩೦ ಸಪ್ಟೆಂಬರ್‌ ೧೯೫೯ ಪಶ್ಚಿಮ ಬಂಗಾಳ
೦೬ ಭುವನೇಶ್ವರ್‌ ಪ್ರಸಾದ್ ಸಿಂಹ ೩೦ ಸಪ್ಟೆಂಬರ್‌ ೧೯೫೯ ೩೧ ಜನವರಿ ೧೯೬೪ ಬಿಹಾರ
೦೭ ಪಿ. ಬಿ. ಗಜೇಂದ್ರಗಡ್ಕರ್‌ ೩೧ ಜನವರಿ ೧೯೬೪ ೧೫ ಮಾರ್ಚ್ ೨೦೦೧ ಬಾಂಬೆ (ಈಗಿನ ಮಹಾರಾಷ್ಟ್ರ)
೦೮ ಎ. ಕೆ. ಸರ್ಕಾರ್‌ ೧೬ ಮಾರ್ಚ್‌ ೧೯೬೬ ೨೯ ಜೂನ್‌ ೧೯೬೬ ಪಶ್ಚಿಮ ಬಂಗಾಳ
೦೯ ಕೆ. ಸುಬ್ಬಾ ರಾವ್‌ ೩೦ ಜೂನ್‌ ೧೯೬೬ ೧೧ ಎಪ್ರಿಲ್‌ ೧೯೬೭ ಮದ್ರಾಸ್‌ (ಈಗಿನ ತಮಿಳುನಾಡು) ಗೋಲಕ್‌ ನಾಥ್‌ ವಿರುದ್ಧ ಪಂಜಾಬ್‌
೧೦ ಕೈಲಾಸ್‌ ನಾಥ್‌ ವಾಂಚೂ ೧೨ ಎಪ್ರಿಲ್‌ ೧೯೬೭ ೨೪ ಫೆಬ್ರವರಿ ೧೯೬೮ ಉತ್ತರ ಪ್ರದೇಶ
೧೧ ಎಮ್. ಹಿದಯತುಲ್ಲಾ ೨೫ ಫೆಬ್ರವರಿ ೧೯೬೮ ೧೬ ಡಿಸೆಂಬರ್‌ ೧೯೭೦ ಈಗಿನ ಛತ್ತಿಸ್‌ಗಢ್‌
೧೨ ಜಯಂತಿಲಾಲ್‌ ಚೋಟಾಲಾಲ್‌ ಷಾ ೧೭ ಡಿಸೆಂಬರ್‌ ೧೯೭೦ ೨೧ ಜನವರಿ ೧೯೭೧ ಪ್ರಸ್ತುತ ಗುಜರಾತ್‌
೧೩ ಎಸ್. ಎಮ್. ಸಿಕ್ರಿ ೨೦೦೮ರ ಜನವರಿ ೨೨). ೨೫ ಎಪ್ರಿಲ್‌ ೧೯೭೩ ಪಂಜಾಬ್‌ ಕೇಶವಾನಂದ ಭಾರತಿ ವಿರುದ್ಧ ಕೇರಳ
೧೪ ಎ. ಎನ್. ರಾಯ್‌ ೨೫ ಎಪ್ರಿಲ್‌ ೧೯೭೩ ೨೮ ಜನವರಿ ೧೯೭೭ ಪಶ್ಚಿಮ ಬಂಗಾಳ ಎಡಿಎಮ್ ಜಬಾಲ್ಪುರ್‌ ವಿರುದ್ಧ ಶಿವಕಾಂತ್‌ ಶುಕ್ಲ
೧೫ ಮಿರ್ಜಾ ಹಮೀದುಲ್ಲಾ ಬೇಗ್‌ ೨೯ ಜನವರಿ ೧೯೭೭ ೨೧ ಫೆಬ್ರವರಿ ೧೯೭೮ ಉತ್ತರ ಪ್ರದೇಶ
೧೬ ವೈ. ವಿ. ಚಂದ್ರಚುಡ್‌ ೨೨ ಫೆಬ್ರವರಿ ೧೯೭೮ ೧೧ ಜುಲೈ ೧೯೮೫ ಬಾಂಬೆ (ಈಗಿನ ಮಹಾರಾಷ್ಟ್ರ)
೧೭ ಪಿ. ಎನ್. ಭಗವತಿ ೧೨ ಜುಲೈ ೧೯೮೫ ೨೦ ಡಿಸೆಂಬರ್‌ ೧೯೮೬ ಬಾಂಬೆ (ಈಗಿನ ಮಹಾರಾಷ್ಟ್ರ)
೧೮ ಆರ್. ಎಸ್. ಪಾಠಕ್‌ ೨೧ ಡಿಸೆಂಬರ್‌ ೧೯೮೬ ೬ ಜೂನ್‌ ೧೯೮೯ ಉತ್ತರ ಪ್ರದೇಶ
೧೯ ಇ. ಎಸ್. ವೆಂಕಟರಾಮಯ್ಯ ೧೯ ಜೂನ್‌ ೧೯೮೯ ೧೭ ಡಿಸೆಂಬರ್‌ ೧೯೮೯ ಮೈಸೂರ್‌ (ಈಗಿನ ಕರ್ನಾಟಕ)
೨೦ ಮುಖರ್ಜಿ ೧೮ ಡಿಸೆಂಬರ್‌ ೧೯೮೯ ೨೫ ಸಪ್ಟೆಂಬರ್‌ ೧೯೯೦ ಪಶ್ಚಿಮ ಬಂಗಾಳ
೨೧ ರಂಗನಾಥ್ ಮಿರ್ಶಾ ೨೫ ಸಪ್ಟೆಂಬರ್‌ ೧೯೯೦ ೨೪ ನವೆಂಬರ್‌ ೧೯೯೧ ಒಡಿಶಾ
೨೨ ಕಮಲ್‌ ನಾರಾಯಣ್‌ ಸಿಂಗ್‌ ೨೫ ನವೆಂಬರ್‌ ೧೯೯೧ ೧೨ ಡಿಸೆಂಬರ್‌ ೧೯೯೧ ಉತ್ತರ ಪ್ರದೇಶ
೨೩ ಎಮ್. ಹೆಚ್. ಕಾನಿಯಾ ೧೩ ಡಿಸೆಂಬರ್‌ ೧೯೯೧ ೧೭ ನವೆಂಬರ್‌ ೧೯೯೨ ಮಹಾರಾಷ್ಟ್ರ
೨೪ ಲಲಿತ್‌ ಮೋಹನ್‌ ಶರ್ಮಾ ೧೮ ನವೆಂಬರ್‌ ೧೯೯೨ ೧೧ ಫೆಬ್ರವರಿ ೧೯೯೩ ಬಿಹಾರ
೨೫ ಎಮ್. ಎನ್. ವೆಂಕಟಾಚಲಯ್ಯ ೧೨ ಫೆಬ್ರವರಿ ೧೯೯೩ ೨೪ ಅಕ್ಟೋಬರ್‌ ೧೯೯೪ ಕರ್ನಾಟಕ
೨೬ ಎ. ಎಮ್. ಅಹ್ಮದಿ (೨೦೦೨ರ ಅಕ್ಟೋಬರ್‌ ೨೫). ೨೪ ಮಾರ್ಚ್‌ ೧೯೯೭ ಗುಜರಾತ್‌‌
೨೭ ಜೆ. ಎಸ್. ವರ್ಮಾ ೨೫ ಮಾರ್ಚ್‌ ೧೯೯೭ ೧೮ ಜನವರಿ ೧೯೯೮ ಮಧ್ಯ ಪ್ರದೇಶ್
೨೮ ಎಮ್. ಎಮ್. ಪುಂಚಿ ೧೮ ಜನವರಿ ೧೯೯೮ ೯ ಅಕ್ಟೋಬರ್‌ ೧೯೯೮ ಪಂಜಾಬ್‌
೨೯ ಎ. ಎಸ್. ಆನಂದ ೧೦ ಅಕ್ಟೋಬರ್‌ ೧೯೯೮ ೧ ನವೆಂಬರ್‌ ೨೦೦೧ ಜಮ್ಮು ಮತ್ತು ಕಾಶ್ಮೀರ್‌
೩೦ ಎಸ್. ಪಿ. ಭರುಚ ೨ ನವೆಂಬರ್‌ ೨೦೦೭ ೬ ಮೇ ೨೦೦೨ ಮಹಾರಾಷ್ಟ್ರ
೩೧ ಬಿ. ಎನ್. ಕಿರ್ಪಾಲ್‌ ೬ ಮೇ ೨೦೦೨ ೧೧ ನವೆಂಬರ್‌ ೨೦೦೨ ದೆಹಲಿ
೩೨ ಜಿ. ಬಿ. ಪಾಟ್ನಾಯಿಕ್‌ ೧೧ ನವೆಂಬರ್‌ ೨೦೦೨ ೧೯ ಡಿಸೆಂಬರ್‌ ೨೦೦೨ ಒಡಿಶಾ
೩೩ ವಿ. ಎನ್. ಖಾರೆ ೧೯ ಡಿಸೆಂಬರ್‌ ೨೦೦೨ ೨ ಮೇ ೨೦೦೪ ಉತ್ತರ ಪ್ರದೇಶ ಬೆಸ್ಟ್‌ ಬೇಕರಿ ಪ್ರಕರಣ, ಟಿ.ಎಮ್.ಎ. ಪೈ ವಿರುದ್ಧ ಭಾರತ ಸರಕಾರ (ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ)
೩೪ ಎಸ್ ರಾಜೇಂದ್ರ ಬಾಬು ೨ ಮೇ ೨೦೦೪ ೧ ಜೂನ್‌ ೨೦೦೪ ಕರ್ನಾಟಕ
೩೫ ಆರ್. ಸಿ. ಲಹೋತಿ ೧ ಜೂನ್‌ ೨೦೦೪ ೧ ನವೆಂಬರ್‌ ೨೦೦೫ ಉತ್ತರ ಪ್ರದೇಶ
೩೬ ಯೋಗೇಶ್ ಕುಮಾರ್ ಸಭರವಾಲ್ ೧ ನವೆಂಬರ್‌ ೨೦೦೫ ೯ ಜನವರಿ ೨೦೦೭. ದೆಹಲಿ ಲ್ಯಾಂಡ್ ಸೀಲಿಂಗ್‌ ಪ್ರಕರಣ (ಎಮ್.ಸಿ. ಮೆಹ್ತಾ ವಿರುದ್ಧ ಭಾರತ ಸರಕಾರ)
೩೭ ಕೆ. ಜಿ. ಬಾಲಕೃಷ್ಣನ್‌ ೯ ಜನವರಿ ೨೦೦೭. ೧೧ ಮೇ ೨೦೧೦ ಕೇರಳ OBC ಮೀಸಲಾತಿ ಪ್ರಕರಣ (ಅಶೋಕ್ ಕುಮಾರ್ ಠಾಕೂರ್‌ ವಿರುದ್ಧ ಭಾರತ ಸರಕಾರ)
೩೮ ಎಸ್ ಎಚ್ ಕಪಾಡಿಯಾ ೨೭ ಮೇ ೨೦೧೪ ೨೭ ಸೆಪ್ಟೆಂಬರ್ ೨೦೧೪ ಮಹಾರಾಷ್ಟ್ರ
೩೯ ಅಲ್ತಮಸ್ ಕಬೀರ್ ೨೯ ಸಪ್ಟೆಂಬರ್ ೨೦೧೨. ೧೮ ಜುಲೈ ೨೦೧೩ ಪಶ್ಚಿಮ ಬಂಗಾಳ
೪೦ ಪಿ ಸದಾಶಿವಂ ೧೯ ಜುಲೈ ೨೦೧೩. ೨೬ ಏಪ್ರಿಲ್ ೨೦೧೪ ತಮಿಳುನಾಡು
೪೧ ರಾಜೇಂದ್ರಮಲ್ ಲೋಧಾ ೨೭ ಏಪ್ರಿಲ್ ೨೦೧೪ ೨೭ ಸೆಪ್ಟೆಂಬರ್ ೨೦೧೪ ರಾಜಸ್ತಾನ
೪೨ ಹಂದ್ಯಾಲ ಲಕ್ಷ್ಮೀನಾರಾಯಣಸ್ವಾಮಿ ದತ್ತು ೨೭ ಏಪ್ರಿಲ್ ೨೦೧೪ ೨ ಡಿಸೆಂಬರ್ ೨೦೧೫ ಕರ್ನಾಟಕ
೪೩ ತೀರಥ್ ಸಿಂಗ್ ಠಾಕೂರ್ ೩ ಡಿಸೆಂಬರ್ ೨೦೧೫ ೩ ಜನವರಿ ೨೦೧೭ ಜಮ್ಮು ಕಾಶ್ಮೀರ ಉಚ್ಚ ನ್ಯಾಯಾಲಯ
೪೪ ಜಗದೀಶ್ ಸಿಂಗ್ ಕೇಹರ್ ೪ ಜನವರಿ ೨೦೧೭ ನಿವೃತ್ತ| ಪಂಜಾಬ-ಹರ್ಯಾಣ ಉಚ್ಚ ನ್ಯಾಯಾಲಯ
೪೫ ದೀಪಕ್ ಮಿಶ್ರಾ ೨೮ ಆಗಸ್ಟ್ ೨೦೧೭ ಪ್ರಸಕ್ತ| ಒಡಿಶಾ/ಬಿಹಾರ ಉಚ್ಚ ನ್ಯಾಯಾಲಯ ನಿರ್ಭಯಾ ಹತ್ಯೆ ಆರೋಪಿಗಳು ಮತ್ತು ಯಾಕೂಬ್ ಮೆಮನ್ ಇವರುಗಳ ಗಲ್ಲು ಶಿಕ್ಶೆ ಖಾಯಂಗೊಳಿಸಿದ್ದು

ಇತರ ಉತ್ತಮ ನ್ಯಾಯಾಧೀಶರು[ಬದಲಾಯಿಸಿ]

  • ಭಾರತದ ಮುಖ್ಯ ನ್ಯಾಯಾಧೀಶರ ನೇವಕಾತಿಯು ಸೇವಾ ಹಿರಿತನದ ಆಧಾರದ ಮೇಲೆ ನಡೆಯುತ್ತದೆ. ಇದರಿಂದಾಗಿ ಹಲವು ನ್ಯಾಯಾಧೀಶರು ಮತ್ತು ಸಂವಿಧಾನ ಪರಿಣತರು ಈ ನೇಮಕಾತಿ ವಿಧಾನವು ಪ್ರತಿಭೆಗಳಿಗೆ ವಿರುದ್ಧ ಮತ್ತು ನಾಯಕತ್ವ ಸಾಮರ್ಥ್ಯ ಗುರುತಿಸದ ಕ್ರಮ ಎಂದು ಟೀಕಿಸಿದ್ದಾರೆ.
  • ಸರ್ವೋಚ್ಛ ನ್ಯಾಯಾಲಯದ ಹಲವಾರು ನ್ಯಾಯಮೂರ್ತಿಗಳು ಸ್ಪೂರ್ತಿದಾಯಕ ನಾಯಕತ್ವದ ಸಾಮರ್ಥ್ಯ ಪ್ರದರ್ಶಿಸಿದರೂ ಸಹ, ಸೇವಾ ಹಿರಿತನದ ಅಹ್ರತೆಯ ಪರಿಗಣನೆ ಯಿಂದಾಗಿ ಭಾರತದ ಮುಖ್ಯ ನ್ಯಾಯಾಧೀಶರಾಗಲು ಸಾಧ್ಯವಾಗಲಿಲ್ಲ. ಅವರಲ್ಲಿ ಕೆಲವರು ಈ ಕೆಳಗಿನಂತಿದ್ದಾರೆ;
  • ನ್ಯಾಯಾಧೀಶರಾದ ಹಂಸರಾಜ್ ಖನ್ನಾರು ಹೇಬಿಯಸ್ ಕಾರ್ಪಸ್‌ ಪ್ರಕರಣದಲ್ಲಿ ನೀಡಿದ ತೀರ್ಪು ನ್ಯಾಯಾಂಗದಲ್ಲಿ ಹೆಗ್ಗುರುತಾಗಿ ಉಳಿದುಕೊಂಡಿತು.
  • ನ್ಯಾಯಾಧೀಶರಾದ ವೈ.ಆರ್. ಕೃಷ್ಣ ಅಯ್ಯರ್‌ರು ತಮ್ಮ ಮಾನವ ಹಕ್ಕುಗಳು ಚಿಂತನೆ ಮತ್ತು ತೀರ್ಪು ನೀಡುವಲ್ಲಿ ಸಾಹಿತ್ಯಕ ಮೌಲ್ಯ ಗಳೊಂದಿಗೆ ಪ್ರಸಿದ್ಧರಾಗಿದ್ದರು.
  • ನ್ಯಾಯಾಧೀಶರಾದ R.ಎಸ್. ಸರ್ಕಾರಿಯಾರು ಆಡಳಿತಾತ್ಮಕ ಕಾನೂನು ಸೇರಿದಂತೆ ಇತ್ಯಾದಿಗಳಲ್ಲಿ ಕುರಿತು ತಮ್ಮಲ್ಲಿರುವ ಉನ್ನತ ಜ್ಞಾನಕ್ಕೆ ಪ್ರಸಿದ್ಧರಾಗಿದ್ದರು.
  • ನ್ಯಾಯಾಧೀಶರಾದ ಓ.ಪಿ. ಚೆನ್ನಪ್ಪ ರೆಡ್ಡಿ ಅವರು ಸಾಂವಿಧಾನಿಕ ಕಾನೂನಿನಲ್ಲಿ ತಮ್ಮ ತೀರ್ಪುಗಳ ಮೂಲಕ ಪ್ರಸಿದ್ಧರಾಗಿದ್ದರು.
  • ನ್ಯಾ. ಹಂಸರಾಜ್ ಖನ್ನಾರ ಹಿರಿತನವನ್ನು ಕಡೆಗಣಿಸಿ, ನ್ಯಾ. ಮಿರ್ಜಾ ಬೇಗ್ ರನ್ನು ಮುಖ್ಯ ನ್ಯಾಯಾಧೀಶ ಹುದ್ದೆಗೆ ನೇಮಕ ಮಾಡಲಾಯಿತು, ಈ ಕ್ರಮವನ್ನು ಬದ್ಧತೆಯ ನ್ಯಾಯದಾನ(Committed Judiciary)[೫] ಕ್ಕಾಗಿ ಎಂದು ಇಂದಿರಾ ಗಾಂಧಿ ಸರ್ಕಾರ ಸಮರ್ಥಿಸಿಕೊಂಡಿತು.[೬]

[೭] [೮]

ಇವನ್ನೂ ಗಮನಿಸಿ[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]

  1. http://supremecourtofindia.nic.in/judges/judges.htm
  2. http://supremecourtofindia.nic.in/judges/rcji.htm
  3. http://supremecourtofindia.nic.in/judges/rcji1.htm
  4. "ಆರ್ಕೈವ್ ನಕಲು". Archived from the original on 2012-10-26. Retrieved 2014-10-01.
  5. http://acorn.nationalinterest.in/2007/04/25/how-mrs-gandhi-got-committed-judges/
  6. http://www.thebetterindia.com/12687/judge-stood-against-prime-minister-hans-raj-khanna-indira-gandhi-emergency/
  7. http://www.firstpost.com/india/hr-khanna-at-100-the-judge-who-stood-up-to-indira-gandhi-365539.html
  8. http://www.thehindu.com/todays-paper/tp-opinion/A-profile-in-judicial-courage/article15179852.ece