ಎಮ್. ಹೆಚ್. ಕಾನಿಯಾ
ಮಧುಕರ್ ಹೀರಾಲಾಲ್ ಕಾನಿಯಾ (ಎಮ್.ಹೆಚ್.ಕಾನಿಯಾ) (ಡಿಸೆಂಬರ್ ೧೯೯೧ ರಿಂದ ೧೭ ನವೆಂಬರ್ ೧೯೯೨ ವರೆಗೆ)ಭಾರತದ ೨೩ ನೆಯ ಮುಖ್ಯ ನ್ಯಾಯಾಧೀಶರಾಗಿದ್ದರು. [೧]
ಬಾಲ್ಯ ಮತ್ತು ಶಿಕ್ಷಣ
[ಬದಲಾಯಿಸಿ]ಮಧುಕರ್ ಹೀರಾಲಾಲ್ ಕಾನಿಯಾ (ಎಮ್.ಹೆಚ್.ಕಾನಿಯಾ) ಕಾನಿಯಾರವರು ೧೮ ನವೆಂಬರ್ ೧೯೨೭ರಲ್ಲಿ ಮುಂಬಯಿ ನಲ್ಲಿ ಜನಿಸಿದರು.ಇವರ ತಂದೆ ಹೀರಾಲಾಲ್ ಜೆ. ಕಾನಿಯಾ ಭಾರತ ದ ಮುಖ್ಯ ನ್ಯಾಯಾಧೀಶರು. ಭಾರತದ ಮೊದಲ ಮುಖ್ಯ ನ್ಯಾಯಾಧೀಶರು ಮತ್ತು ತಾಯಿ ಭಾನುಮತಿ.ಇವರು ರೂಪಾ ರವರನ್ನು ಮದುವೆ ಯಾದರು.ಇವರು ಸರ್ಕಾರಿ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿ ಪದವಿ ಮುಗಿಸಿ ಅರೆಕಾಲಿಕ ಪ್ರಾಧ್ಯಾಪಕರಾಗಿ ೧೯೪೯- ೧೯೬೨ ಕೆಲಸವನ್ನು ಮಾಡಿದರು ಮತ್ತು ಸಹಾಯಕ ಸರ್ಕಾರದ ನ್ಯಾಯಾವಾದಿಯಾಗಿ ಮುಂಬಯಿ ಸಿವಿಲ್ ನ್ಯಾಯಾಲಯದಲ್ಲಿ ಸೇವೆಯನ್ನು ಸಲ್ಲಿಸಿದರು.ಇವರಿಗೆ ಗಾಳಿಪಟ ಹಾರಿಸುವುದಕೆ ಮತ್ತೆ ಪ್ರಯಾಣಿಸುವು ದೆಂದರೆ ತುಂಬಾ ಇಷ್ಟವಾಗುತಿತ್ತು. ಅರೆಕಾಲಿಕ ಪ್ರಾಧ್ಯಾಪಕರಾಗಿ ೧೯೪೯- ೧೯೬೨ ಕೆಲಸವನ್ನು ಮಾಡಿದರು.
ನ್ಯಾಯಾಧೀಶರಾಗಿ
[ಬದಲಾಯಿಸಿ]ಕಾನಿಯಾ ಅವರು ಕಾನೂನು ವೃತ್ತಿಯನು ೧೯೬೪ ರಲಿ ಆರಂಭಿಸಿದರು ,ಸಹಾಯಕ ಸರ್ಕಾರದ ನ್ಯಾಯಾವಾದಿಯಾಗಿ ಮುಂಬಯಿ ಸಿವಿಲ್ ನ್ಯಾಯಾಲಯದಲ್ಲಿ ಸೇವೆಯನ್ನು ಸಲ್ಲಿಸಿಧಳದರು, ಇವರನ್ನು ನವೆಂಬರ್ ೧೯೭೧ ರಲ್ಲಿ ಮುಂಬಯಿ ಹೈಕೋರ್ಟ್ನ ನ್ಯಾಯಾಧೀಶರಾಗಿ ನೇಮಕ ಮಾಡಲಾಯಿತು. ನಂತರ ಜೂನ್ ೧೯೮೬ ರಲ್ಲಿ ಮುಂಬಯಿ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿ ನೇಮಿಸಿಲಾಯಿತು.ಅವರ ಅಧಿಕಾರದ ಅವಧಿಯಲ್ಲಿ ಆದಾಯ ತೆರಿಗೆ, ಮಾರಾಟ ತೆರಿಗೆ, ಹಿಡುವಳಿ ಹೀಗೆ ಅನೇಕ ಸಂದರ್ಭಗಳನ್ನು ವ್ಯವಹರಿಸಿದಾರೆ. ಮೇ ೧೯೮೭ ರಲ್ಲಿ ಇವರನ್ನು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿ ನೇಮಿಸಲಾಯಿತು, ನಂತರ ಡಿಸೆಂಬರ್ ೧೯೯೧ ರಲ್ಲಿ ಮುಖ್ಯ ನ್ಯಾಯಾಧೀಶರಾಗಿ ಆಯ್ಕೆಯಾದರು. ಇವರು ಭಾರತದ ೨೩ ನೆಯ ಮುಖ್ಯ ನ್ಯಾಯಾಧೀಶರಾಗಿದರು, ಸೇವೆಯನು ೧೩ ಡಿಸೆಂಬರ್ ೧೯೯೧ ರಿಂದ ಪ್ರಾರಂಭಿಸಿ ಅವರ ನಿವೃತ್ತಿ ೧೭ ನವೆಂಬರ್ ೧೯೯೨ ವರೆಗೂ ಸೇವೆ ಸಲಿಸಿದರು.ತನ್ನ ಇಡೀ ನ್ಯಾಯಾಂಗ ವೃತ್ತಿ ಜೀವನದಲ್ಲಿ ಎಲ್ಲಾ ಸಂದರ್ಭಗಳನು ಸಂಫೂರ್ಣ ಗ್ರಹಿಕೆಯಲ್ಲಿ ವ್ಯವಹರಿಸಿದರು ಇದನೇ ಪ್ರತಿ ನಾಗರಿಕನು ನ್ಯಾಯಾಧೀಶರಿಂದ ನಿರೀಕ್ಷಿಸುತಾರೆ.
ನಿವೃತ್ತಿ
[ಬದಲಾಯಿಸಿ]ಇವರು ೧೭ ನವೆಂಬರ್ ೧೯೯೨ ರಲ್ಲಿ ನಿವೃತ್ತರಾದರು. [೨]
ಹಿರಿಮೆ
[ಬದಲಾಯಿಸಿ]ಶೇರು ಮಾರುಕಟ್ಟೆಯ ವಿನಿಮಯಸಂಸ್ಥೆ ಸೆಬಿಯ ಕಾರ್ಯವ್ಯಾಪ್ತಿಯನ್ನು ವಿಮರ್ಶಿಸುವ ಆಯೋಗದ ಮುಖ್ಯಸ್ಥರಾಗಿ 2005-06ರಲ್ಲಿ ಕಾರ್ಯಗೈದರು.[೩] [೪]
ಟೀಕೆ
[ಬದಲಾಯಿಸಿ]ನ್ಯಾ ಕಾನಿಯಾ ತಮ್ಮ ಕುಟುಂಬಕ್ಕೆ ಸಹಾಯಗೈಯಲು ಮುಖ್ಯ ನ್ಯಾಯಮೂರ್ತಿ ಪದವಿಯನ್ನು ದುರುಪಯೋಗಗೈದರು ಎಂಬ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಪ್ರಶಾಂತ್ ಭೂಷಣ ಹೂಡಿದ್ದರು. ಆದರೆ, ಆ ಆರೋಪ ಸಾಬೀತುಗೈಯಲು ರುಜುವಾತು ಇಲ್ಲದೆ ವಜಾ ಆಯಿತು. [೫]
ಉಲ್ಲೇಖಗಳು
[ಬದಲಾಯಿಸಿ]- ↑ Brief biography
- ↑ http://supremecourtofindia.nic.in/judges/rcji/23mhkania.htm
- ↑ http://www.financialexpress.com/archive/sebi-board-clears-kania-panel-report/144824/
- ↑ http://www.livemint.com/Industry/38zmSmI6pa7CQgpWsde0aL/Sebi-to-revise-rules-to-reinstate-discretionary-power-on-pen.html
- ↑ http://www.dnaindia.com/india/report-eight-former-chief-justices-corrupt-says-ex-law-minister-1439048