ಭಾರತದ ನ್ಯಾಯವ್ಯವಸ್ಥೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕರ್ನಾಟಕದ ಉಚ್ಛ ನ್ಯಾಯಾಲಯ

ಭಾರತದ ನ್ಯಾಯವ್ಯವಸ್ಥೆಯು ಭಾರತದಲ್ಲಿ ಈಗ ಕಾರ್ಯನಡೆಸುತ್ತಿರುವ ಕಾನೂನು ವ್ಯವಸ್ಥೆ. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಬ್ರಿಟಿಷ್ ವಸಾಹತುಶಾಹಿ ಪ್ರಭಾವದ ದೀರ್ಘ ಅವಧಿಯ ಕಾರಣದಿಂದಾಗಿ ಇದು ಬಹುಮಟ್ಟಿಗೆ ಇಂಗ್ಲೆಂಡ್‌ನ ಸಾಮಾನ್ಯ ಕಾನೂನಿನ ಮೇಲೆ ಆಧಾರಿತವಾಗಿದೆ. ಸಮಕಾಲೀನ ಭಾರತೀಯ ಕಾನೂನಿನ ಬಹುತೇಕ ಭಾಗವು ಗಮನಾರ್ಹವಾಗಿ ಐರೋಪ್ಯ ಮತ್ತು ಅಮೇರಿಕದ ಪ್ರಭಾವವನ್ನು ತೋರಿಸುತ್ತದೆ.

ನ್ಯಾಯಾಂಗದ ಮೇಲೆ ಒತ್ತಡ: ಕಣ್ಣೀರಿಟ್ಟ ಸಿಜೆಐ[ಬದಲಾಯಿಸಿ]

ಚಿತ್ರ:Supreme Court of India - Central Wing.jpg
ಸುಪ್ರೀಂ ಕೋರ್ಟ್'ಕಟ್ಟಡದಲ್ಲಿ ಮುಖ್ಯ ನ್ಯಾಯಮೂರ್ತಿಗಳ ಪೀಠವಿರುವ ಕೇಂದ್ರಭಾಗ

ನವದೆಹಲಿಯಲ್ಲಿ ೨೪-೪-೨೦೧೬ ರಂದು, ಮುಖ್ಯಮಂತ್ರಿಗಳು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಟಿ.ಎಸ್. ಠಾಕೂರ್ ದೇಶದ ಅಭಿವೃದ್ಧಿಯಲ್ಲಿ ಪರಿಣಾಮಕಾರಿಯಾದ ನ್ಯಾಯಾಂಗ ವ್ಯವಸ್ಥೆ ಸಹ ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದ್ದಾರೆ. ನ್ಯಾಯ ವಿತರಣೆ ಪ್ರಕ್ರಿಯೆ ನ್ಯಾಯಾಧೀಶರ ಸಂಖ್ಯೆಯ ಅನುಪಾತದಿಂದ ಹಾಗೂ ದೀರ್ಘಾವಧಿಯಿಂದ ಖಾಲಿ ಇರುವ ಹುದ್ದೆಗಳಿಂದ ಪ್ರತಿಕೂಲ ಪರಿಣಾಮ ಎದುರಿಸುತ್ತಿದೆ, ಅಭಿವೃದ್ಧಿ ಹೊಂದಿರುವ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಇಲ್ಲಿನ ನ್ಯಾಯ ವಿತರಣೆ ಪ್ರಕ್ರಿಯೆ ನಿರಾಶಾದಾಯಕವಾಗಿದೆ ಎಂದಿರುವ ಅವರು ಎಲ್ಲದಕ್ಕೂ ನ್ಯಾಯಾಂಗ ವ್ಯವಸ್ಥೆಯನ್ನೇ ದೂಷಿಸುವ ಪ್ರವೃತ್ತಿ ಬಗ್ಗೆ ಬೇಸರ ವ್ಯಕ್ತಪಡಿಸಿ ಪ್ರಧಾನಿ ಮೋದಿ ಎದುರಲ್ಲೇ ಕಣ್ಣೀರಿಟ್ಟ ಪ್ರಸಂಗವು ನಡೆಯಿತು.

 • ಭಾರತದ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರು ಭಾರತದ ನ್ಯಾಯವ್ಯವಸ್ಥೆಯಲ್ಲಿ ಇರುವ ಕೊರತೆ ಅದರ ಮೇಲಿರುವ ವತ್ತಡವನ್ನು ಹೇಳುತ್ತಾ ಭಾವುಕರಾದರು.

[೧]

ಇಂದಿನ ನ್ಯಾಯದಾನದಲ್ಲಿ ಸಮಸ್ಯೆ[ಬದಲಾಯಿಸಿ]

 • ರಾಜಧಾನಿ ದೆಹಲಿಯಲ್ಲಿ ನಡೆದ ಪ್ರಧಾನಿ, ಸಿಎಂಗಳು ಮತ್ತು ಮುಖ್ಯ ನ್ಯಾಯಾಧೀಶರ ಜಂಟಿ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ನ್ಯಾಯಾಧೀಶರ ಕೊರತೆ ಮತ್ತು ನ್ಯಾಯದಾನ ವಿಳಂಬದಿಂದ ಹೇಗೆ ದೇಶದ ಮೇಲೆ ಪರಿಣಾಮವಾಗುತ್ತಿದೆ ಮತ್ತು ನ್ಯಾಯಾಂಗವು ಹೇಗೆ ಇತರರಿಂದ ಅವಹೇಳನಕ್ಕೆ ಗುರಿಯಾಗುತ್ತಿದೆ ಎಂದು ವಿವರಿಸಿ ನ್ಯಾ|ಟಿ.ಎಸ್‌. ಠಾಕೂರ್‌ ಕಣ್ಣೀರಿಟ್ಟರು.
ಸುಪ್ರೀಂ ಕೋರ್ಟ್‌ ಕಟ್ಟಡ: ಎದುರು ತಾಯಿ ಮತ್ತು ಮಗುವಿನ ಶಿಲ್ಪ ಕೃತಿ
ವಿವರ
 • "ಒಂದೆಡೆ ಅರ್ಜಿಗಳ ಹಿಮಪಾತವಾಗುತ್ತಿದೆ. ಇನ್ನೊಂದೆಡೆ ಅರ್ಜಿಗಳ ತ್ವರಿತ ವಿಲೇವಾರಿಗಾಗಿ ನ್ಯಾಯಾಧೀಶರ ಸಂಖ್ಯೆಯನ್ನು 21 ಸಾವಿರದಿಂದ 40 ಸಾವಿರಕ್ಕೆ ಹೆಚ್ಚುತ್ತಿಸಬೇಕು ಎಂಬ ದಶಕಗಳ ಬೇಡಿಕೆಯು ಸರ್ಕಾರದ ಒಪ್ಪಿಗೆ ಪಡೆಯದೇ ಹಾಗೇ ಕೊಳೆಯುತ್ತಿದೆ'
 • 1987ರಿಂದ ಯಾವುದೇ ಪ್ರಗತಿ ಕಂಡಿಲ್ಲ. 50 ಲಕ್ಷ ಜನಕ್ಕೆ 10 ನ್ಯಾಯಾಧೀಶರು ಈಗ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಸಂಖ್ಯೆಯನ್ನು 50ಕ್ಕೆ ಏರಿಸಬೇಕು ಎಂದು ನ್ಯಾಯಾಂಗ ಆಯೋಗ 87ರಲ್ಲೇ ಶಿಫಾರಸು ಮಾಡಿತ್ತು. ಆದರೆ ಸರ್ಕಾರ ಈ ಬಗ್ಗೆ ನಿಷ್ಕ್ರಿಯವಾಗಿದೆ. ನ್ಯಾಯಾಧೀಶರ ಹೆಚ್ಚಳ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಮೂಲಸೌಕರ್ಯ ಒದಗಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಹೊಣೆಗಾರಿಕೆಯಾಗಿದೆ ಎಂದು ಅವರು ಸಮಸ್ಯೆಯನ್ನು ಕೂಲಂಕುಷವಾಗಿ ಬಿಡಿಸಿ ಇಟ್ಟರು.
 • "ನಾನು ಕೇವಲ ಅರ್ಜಿದಾರರ ಪರ ಅಥವಾ ಜೈಲಲ್ಲಿ ಕೊಳೆಯುತ್ತಿರುವವರ ಪರ ಮಾತನಾಡುತ್ತಿಲ್ಲ. ದೇಶದ ಅಭಿವೃದ್ಧಿಯೂ ಇದರಲ್ಲಿ ಅಡಗಿದೆ. ಈಗಲೂ ತಡವಾಗಿಲ್ಲ. ಸಂದರ್ಭಕ್ಕೆ ತಕ್ಕಂತೆ ಸೆಟೆದು ನಿಲ್ಲಬೇಕು. ನ್ಯಾಯದಾನ ವಿಳಂಬಕ್ಕೆ ಕೇವಲ ನ್ಯಾಯಾಂಗ ಕಾರಣ ಎಂದು ಬೆಟ್ಟು ಮಾಡುವುದನ್ನು ಬಿಡಬೇಕು. ಏಕೆಂದರೆ ನ್ಯಾಯಾಧೀಶರ ನೇಮಕವು ಶಾಸಕಾಂಗ-ಕಾರ್ಯಾಂಗದ ಕೈಯಲ್ಲಿದೆಯೇ ವಿನಾ ನ್ಯಾಯಾಂಗದ ಕೈಯಲ್ಲಿಲ್ಲ' ಎಂದು ಹೇಳಿ ಗದ್ಗದಿತರಾದರು.
ಜಡ್ಜ್ ಗಳ ಕೊರತೆ ಆದದ್ದು ಹೀಗೆ...
 • ದೇಶದಲ್ಲಿ ನ್ಯಾಯಾಧೀಶರ ಕೊರತೆ ಹೇಗಾಯಿತು ಎಂದು ನ್ಯಾ| ಟಿ.ಎಸ್‌. ಠಾಕೂರ್‌ ಅವರೇ ಖುದ್ದಾಗಿ ೨೪-೪-೨೦೧೬ಭಾನುವಾರ ವಿವರಿಸಿದರು.
 • 1950ರಲ್ಲಿ ಸುಪ್ರೀಂ ಕೋರ್ಟ್‌ ಸ್ಥಾಪನೆಯಾದಾಗ ಇದರಲ್ಲಿ ಭಾರತದ ಮುಖ್ಯ ನ್ಯಾಯಾಧೀಶರು ಸೇರಿ 8 ನ್ಯಾಯಾಧೀಶರು ಇದ್ದರು. ಆಗ 1215 ಕೇಸುಗಳು ಇದ್ದವು. ಪ್ರತಿ ಜಡ್ಜ್'ಗಳಿಗೆ ಸರಾಸರಿ 100 ಪ್ರಕರಣಗಳಿದ್ದವು.
 • 1960ರಲ್ಲಿ ಸುಪ್ರೀಂ ಕೋರ್ಟ್‌ ಜಡ್ಜ್ ಗಳ ಬಲ 14ಕ್ಕೇರಿತು. ಪ್ರಕರಣಗಳ ಸಂಖ್ಯೆ 3247ಕ್ಕೇರಿತು.
 • 1977ರಲ್ಲಿ 18 ನ್ಯಾಯಾಧೀಶರಿದ್ದರು. 14,501 ಪ್ರಕರಣಗಳು ಬಾಕಿ ಇದ್ದವು.
 • 2009ರಲ್ಲಿ ಸುಪ್ರೀಂ ಕೋರ್ಟ್‌ ಜಡ್ಜ್ಗಳ ಸಂಖ್ಯೆ 31ಕ್ಕೇರಿತು. ಆದರೆ ಪ್ರಕರಣಗಳ ಸಂಖ್ಯೆ 77,181ಕ್ಕೇರಿತು.
ನ್ಯಾ|ಠಾಕೂರ್‌ ಹೇಳಿದ್ದು
 • ನ್ಯಾಯಾಧೀಶರ ಸಂಖ್ಯೆ 21 ಸಾವಿರದಿಂದ 40 ಸಾವಿರಕ್ಕೇರಿಸುವ ಪ್ರಸ್ತಾಪ 1987ರಿಂದಲೂ ನೆನೆಗುದಿಯಲ್ಲಿದೆ
 • ಈ ಬಗ್ಗೆ ಸರ್ಕಾರ ನಿಷ್ಕ್ರಿಯವಾಗಿದೆ. ನ್ಯಾಯಾಧೀಶರ ಹೆಚ್ಚಳ ಕೇಂದ್ರ, ರಾಜ್ಯ ಸರ್ಕಾರಗಳ ಜಂಟಿ ಹೊಣೆಗಾರಿಕೆ
 • ದೇಶದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಕೊರತೆಯಿಂದ ನ್ಯಾಯಾಂಗದ ಕೈಯನ್ನು ಕಟ್ಟಿಹಾಕಿದಂತಾಗಿದೆ
 • ಪರಿಸ್ಥಿತಿ ಹೀಗಿದ್ದರೂ ತ್ವರಿತ ನ್ಯಾಯದಾನ ಸಾಧ್ಯವಾಗದೆ ಇರುವುದಕ್ಕೆ ನ್ಯಾಯಾಂಗವನ್ನು ದೂಷಿಸಲಾಗುತ್ತಿದೆ

[೨]

ಇದನ್ನೂ ನೋಡಿ[ಬದಲಾಯಿಸಿ]


 1. [[೧]]
 2. [[೨]]