ಹುಡುಗಿ
ಒಬ್ಬ ಹುಡುಗಿ ಯು, ಯಾವುದೇ ಹೆಣ್ಣು (ಸ್ತ್ರೀ ) ಮನುಷ್ಯ ರೂಪದಲ್ಲಿ ಜನಿಸಿದ್ದು ಬಾಲ್ಯ ಮತ್ತು ತಾರುಣ್ಯದಿಂದ ಪ್ರೌಢಾವಸ್ಥೆಯನ್ನು ಹೊಂದುತ್ತಾಳೆ. ಈ ಶಬ್ದವನ್ನು ಕಿರಿಯ ಹೆಂಗಸು [೧]ಎಂತಲೂ ಅರ್ಥೈಸಿ ಉಪಯೋಗಿಸಬಹುದು.
ಶಬ್ದವ್ಯುತ್ಪತ್ತಿ ಶಾಸ್ತ್ರ
[ಬದಲಾಯಿಸಿ]ಹುಡುಗಿ ಶಬ್ದವು ಮೊದಲು ಕಾಣಿಸಿಕೊಂಡಿದ್ದು ಮಧ್ಯದ ವರ್ಷಗಳ ಕಾಲದಲ್ಲಿ 1250 ಮತ್ತು 1300 ರ ಸಿ ಇ ಮಧ್ಯೆ ಮತ್ತು ಆಂಗ್ಲೋ-ಸಕ್ಸೋನ್ ಶಬ್ದ ಗೆರ್ಲೆ ದಿಂದ ಬಂದಿದ್ದು, ( ಗಿರ್ಲೆ ಅಥವಾ ಗುರ್ಲೆ ಎಂತಲೂ ಉಚ್ಚರಿಸಬಹುದು.), ಓಲ್ಡ್ ಲೋ ಜರ್ಮನ್ ನ ಗರ್ ಎಂಬ ಶಬ್ದದ ಜೊತೆಗಿನ ಸ್ವಜಾತೀಯ ಶಬ್ದದಂತೆ ಕಾಣುತ್ತದೆ. (ಕೆಲವು ವೇಳೆ ಕೆರ್ಲ್ ಎಂತಲೂ ಕೊಟ್ಟಿದೆ. ).[೨] ಆಂಗ್ಲೋ -ಸಕ್ಸೋನ್ ನ ಗೆರೆಲ ಶಬ್ದದ ಅರ್ಥವು ಉಡುಪು ಅಥವಾ ಧರಿಸುವ ವಸ್ತು . ಕೆಲವು ಪರಿಜ್ಞಾನಗಳಲ್ಲಿ [೩] ಮೆತೊಂಯಮ್ ಅಂತಲೂ ಉಪಯೋಗಿಸುತ್ತಿರುವುದು ಕಂಡುಬರುತ್ತದೆ.
ಸುಮಾರು 1530 ರಿಂದಲೂ ಹುಡುಗಿ ಎಂಬ ಶಬ್ದವು ಯಾವುದೇ ಕಿರಿಯ ಮದುವೆಯಾಗದ ಸ್ತ್ರೀ ಎಂಬ ಅರ್ಥವನ್ನು ಹೊಂದಿದೆ. 1648 ರಲ್ಲಿ ಇದರ ಮೊದಲ ಅರ್ಥವು ಸ್ವೀಟ್ ಹಾರ್ಟ್ ಎಂದು ತಿಳಿದುಬಂದಿತ್ತು. ಇತ್ತೀಚೆಗಿನ ತಿಳುವಳಿಕೆಯಂತೆ, 1892ರಲ್ಲಿ ಗರ್ಲ್-ಫ್ರೆಂಡ್ ಎಂಬ ಭಾವನೆ ಕಾಣಿಸಿಕೊಂಡಿದ್ದು ಮತ್ತು ಗರ್ಲ್ ನೆಕ್ಸ್ಟ್ ಡೋರ್ ಅಂದರೆ, ಹದಿಹರೆಯದ ಹುಡುಗಿ ಅಥವಾ ಕಿರಿ ವಯಸ್ಸಿನ ಹೆಂಗಸಿಗೆ, ಒಂದು ರೀತಿಯ ಸಂಪೂರ್ಣ ಗುಣಲಕ್ಷಣವನ್ನು ಹೊಂದಿರುವುದು 1961[೪]ರಲ್ಲಷ್ಟೇ ಕಂಡುಬಂದಿದೆ.
ಪ್ರೌಢರ ಉಪಯೋಗಗಳಿಗಾಗಿ
[ಬದಲಾಯಿಸಿ]ಕೆಲವು ವೇಳೆಗಳಲ್ಲಿ ವಯಸ್ಕ ಸ್ತ್ರೀಯನ್ನು ಸೂಚಿಸುವ ಸಲುವಾಗಿ ಗರ್ಲ್ ಎಂಬ ಶಬ್ದವು ಉಪಯೋಗಿಸಲ್ಪಡುತ್ತದೆ. ಹೇಗೆ ವಯಸ್ಕ ಪುರುಷನನ್ನು ಬಾಯ್ ಶಬ್ದದ ಪ್ರಯೋಗದಿಂದ ಅಲ್ಲಗಳೆದಂತಾಗುತ್ತದೆಯೋ, ಹಾಗೆಯೇ ಗರ್ಲ್ ಶಬ್ದದ ಉಪಯೋಗವು ಬಹುಶಃ ಹೆಸರು ಕೆಡಿಸುವುದಾಗಿರಬಹುದು, ಅಥವಾ ಕಸುಬಿನಿಂದ ಅಗೌರವ ಸೂಚಕವಾಗಿರಬಹುದು, ಅಥವಾ ಇತರ ಔಪಚಾರಿಕ ಅರ್ಥಾನ್ವಯವಾಗಿರಬಹುದು. ಆದುದರಿಂದ, ಈ ಉಪಯೋಗವನ್ನು ಆಗಾಗ್ಗೆ ವಿರೋಧಿಸಲಾಗುತ್ತಿದೆ.[೩] ಮಕ್ಕಳಲ್ಲಿ ಭೇಧವನ್ನು ಉಂಟುಮಾಡುವ ("ನೀನು ಕೇವಲ ಹುಡುಗಿ ") ಎಂಬುದರ ಉಪಯೋಗವನ್ನು ವಿರೋಧಿಸಲಾಗಿದೆ.
ಸಾಮಾನ್ಯ ಅರ್ಥದಂತೆ, ಈ ಶಬ್ದವು ಧನಾತ್ಮಕ ಉಪಯೋಗವನ್ನು ಹೊಂದಿದ್ದು, ಹೆಸರುವಾಸಿಯಾದ ಸಂಗೀತದ ಶಿರೋನಾಮೆಗಳಲ್ಲಿ ಇದರ ಉಪಯೋಗವಾಗಿರುವುದು ಪ್ರಮಾಣಿತವಾಗಿದೆ. ಉತ್ಸಾಹದ ರೀತಿಯಲ್ಲಿ ಜನರು ನಟಿಸುವಾಗ, ತಮಾಷೆಯ ರೀತಿಯಲ್ಲಿ ಉಪಯೋಗಿಸಲ್ಪಟ್ಟಿದೆ. (ಫುರ್ತದೋ'ಸ್ ನ "ಪ್ರಾಮಿಸ್ ಕ್ಯುಯುಸ್ ಗರ್ಲ್ ") ಅಥವಾ ಎಲ್ಲ ವಯಸ್ಸಿನ ಹೆಂಗಸರನ್ನು , ಒಂದು ಬಾರಿ ಅವರು ಹುಡುಗಿಯಾಗಿದ್ದರ ಆಧಾರದ ಮೇಲೆ ಒಟ್ಟುಗೂಡಿಸುವ ಒಂದು ಮಾರ್ಗ. (ಮಕ್ ಬ್ರೈಡ್ 'ಸ್" ನ ದಿಸ್ ಒನ್'ಸ್ ಫಾರ್ ದಿ ಗರ್ಲ್ಸ್ "). ಈ ಎರಡೂ ವಿಷಯಗಳಲ್ಲಿ ಧನಾತ್ಮಕ ಉಪಯೋಗಗಳೆಂದರೆ, ಈ ಶಬ್ದದ ಉಪಯೋಗವು ಒಟ್ಟಾಗಿ ಅವರ ವಯಸ್ಸಿಗಿಂತಲೂ ಹೆಚ್ಚಾಗಿ ಸ್ತ್ರೀಲಿಂಗವನ್ನು ತೋರಿಸುತ್ತದೆ.
ಜನಸಾಂದ್ರತೆ
[ಬದಲಾಯಿಸಿ]ಹುಡುಗಿಯರಿಗಿಂತ ಹುಡುಗರ ಜನನ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿರುತ್ತದೆ.(ಅಮೆರಿಕಾದಲ್ಲಿ ಈ ಸರಾಸರಿ ಪ್ರಮಾಣ ಸುಮಾರು ಪ್ರತೀ 100 ಹುಡುಗಿಯರ ಜನನಕ್ಕೆ 105 ಹುಡುಗರ ಜನನವಾಗುತ್ತದೆ), ಆದರೆ ಬಾಲ್ಯಾವಸ್ಥೆಯ ವೇಳೆಯಲ್ಲಿ, ಹುಡುಗರಿಗಿಂತ ಹುಡುಗಿಯರ ಮರಣ ಸ್ವಲ್ಪ ಕಡಿಮೆಯೆಂದು ಕಂಡು ಬರುತ್ತದೆ, ಆದುದರಿಂದ 15 ವರ್ಷದ ಕೆಳಗಿನ ಸರಾಸರಿ ಪ್ರಮಾಣ ಪ್ರತೀ 100 ಹುಡುಗಿಯರಿಗೆ 104 ಹುಡುಗರುಗಳು.[೫] [೬] 1700 ರಿಂದಲೂ ಮನುಷ್ಯನ ಸರಾಸರಿ ಲಿಂಗದ ಪ್ರಮಾಣ ವನ್ನು ಗಮನಿಸಿದಾಗ ಸುಮಾರು ಪ್ರತೀ 1,000 ಹುಡುಗಿಯರಿಗೆ 1,050 ಹುಡುಗರು ಜನಿಸುತ್ತಾರೆ ಮತ್ತು ಲಿಂಗ ನಿರ್ಣಯ ದ ಮೇಲೆ ಪೋಷಕರ ಪಾಲು ಇರುವುದರಿಂದಾಗಿ ಹೆಣ್ಣಿನ ಜನನ ಪ್ರಮಾಣದ ಸಂಖ್ಯೆ ಮತ್ತೆ ಕ್ಷೀಣಿಸುತ್ತಿದೆ. ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಅಂತರರಾಷ್ಟ್ರೀಯ ಒಡಂಬಡಿಕೆಯ "ಪ್ರಾಥಮಿಕ ಶಿಕ್ಷಣವು ಕಡ್ಡಾಯ ಮತ್ತು ಇದು ಎಲ್ಲರಿಗೂ ಉಚಿತವಾಗಿ ದೊರೆಯುತ್ತದೆ" ಎಂಬ ಒತ್ತಾಯದ ಹೇಳಿಕೆಯಿದ್ದರೂ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಸೇರ್ಪಡೆಯಾದ ವಿದ್ಯಾರ್ಥಿಗಳಲ್ಲಿ ಹುಡುಗಿಯರು ಸ್ವಲ್ಪಮಟ್ಟಿಗೆ ಕಡಿಮೆಯೆಂದು ತೋರುತ್ತದೆ.(ಶೇಕಡಾ70: ಶೇಕಡಾ 74: ಮತ್ತು ಶೇಕಡಾ 59:ಶೇಕಡಾ 65 ) ಈ ತಾರತಮ್ಯವನ್ನು ಕೊನೆಗಾಣಿಸಲು ವಿಶ್ವದಾದ್ಯಂತ ಪ್ರಯತ್ನಗಳನ್ನು ಮಾಡುತ್ತಿದ್ದು,(ಮಿಲೇನಿಯಂ ಡೆವಲಪ್ಮೆಂಟ್ ಗೋಲ್ಸ್ ಮುಂತಾದುವುಗಳ ಮುಖಾಂತರ )1990[೭]ರ ವೇಳೆಗೆ ಅಂತರವನ್ನು ಕಡಿಮೆಗೊಳಿಸಲಾಯಿತು.
ಲಿಂಗ ಮತ್ತು ಪರಿಸರ (ಪ್ರದೇಶ )
[ಬದಲಾಯಿಸಿ]ಜೀವಶಾಸ್ತ್ರದ ಲಿಂಗವು ಪರಿಸರದೊಂದಿಗೆ ಪರಸ್ಪರ ಕಲೆತಾಗ ಹೇಗೆ ಆಗುತ್ತದೆ ಎಂಬುದು ಇನ್ನೂ ಯಾರಿಗೂ ಪೂರ್ಣವಾಗಿ ಅರ್ಥವಾಗದ ವಿಷಯ.[೮] ಒಂದೇ ವಿಧದ, ಹುಟ್ಟಿನಿಂದಲೇ ಬೇರೆಯಾದ ಅವಳಿ ಹುಡುಗಿಯರು ಮತ್ತು ಹತ್ತಾರು ವರ್ಷಗಳ ನಂತರ ಮತ್ತೆ ಸೇರಿಸಿದ ಮಕ್ಕಳೆರಡರಲ್ಲೂ ಆಶ್ಚರ್ಯಕರವಾದ ಸಾಮ್ಯತೆಗಳು ಮತ್ತು ವ್ಯತ್ಯಾಸಗಳು[೯] ಕಂಡುಬಂದಿದೆ. 2005ರಲ್ಲಿ, ಎಮೋರಿ ವಿಶ್ವವಿದ್ಯಾನಿಲಯದ ಕಿಂ ವಾಲ್ಲೇನ್ ತಿಳಿಸಿದಂತೆ, " 'ಪ್ರಕೃತಿ ಮತ್ತು ಪೋಷಣೆ' ಎಂಬ ಪ್ರಶ್ನೆ ಅರ್ಥಪೂರ್ಣವಾದುದಲ್ಲ, ಏಕೆಂದರೆ ಅದು ಅವುಗಳನ್ನು ಸ್ವತಂತ್ರ ಪ್ರತಿನಿಧಿಯನ್ನಾಗಿ (ಸಂಗತಿ)ಉಪಚರಿಸುತ್ತದೆ, ಆದರೆ ನಿಜವಾಗಿ ಪ್ರತಿಯೊಂದೂ ಸಹ ಪ್ರಕೃತಿ ಮತ್ತು ಪೋಷಣೆ"ಗೆ ಸಂಭಂಧಿಸಿದೆ. ವಾಲೆನ್ ಹೇಳಿದಂತೆ, ಲಿಂಗದ ವ್ಯತ್ಯಾಸವು, ಬಹಳ ಬೇಗನೆ ಗೋಚರಕ್ಕೆ ಬರುತ್ತದೆ ಹಾಗು ಪುರುಷ ಮತ್ತು ಸ್ತ್ರೀಯರು ಆರಿಸಿಕೊಳ್ಳುವ ಚಟುವಟಿಕೆಗಳ ಪ್ರಾಮುಖ್ಯತೆಯನ್ನು ಅವಲಂಬಿಸುವುದರ ಮುಖಾಂತರ, ಇದನ್ನು ಕಾಣಬಹುದು. "ಹುಡುಗಿಯರು ಆಟದ ಬೊಂಬೆ ಮತ್ತು ಇತರ ವಸ್ತುಗಳ ಜೊತೆ ಕಲೆಯುವ(ಆಟವಾಡುವ) ಆಸೆ ಅಥವಾ ಉದ್ಧೇಶವನ್ನು ಇಟ್ಟುಕೊಂಡರೆ, ಹುಡುಗರು "ಕೈ ಚಳಕ/ಕೌಶಲವನ್ನು ತೋರುವ ವಸ್ತುಗಳು ಮತ್ತು ಅವುಗಳನ್ನು ಮಾಡುವುದರೊಂದಿಗೆ" ಆಟವಾಡಲು ಹೆಚ್ಚು ಇಷ್ಟಪಡುತ್ತಾರೆ.
ವಾಲೆನ್ ಪ್ರಕಾರ, ಹುಡುಗಿಯರು ಹೇಗೆ ಪಾಂಡಿತ್ಯ ಪ್ರದರ್ಶನ ಮಾಡುತ್ತಾರೆ ಎಂಬುದು, ಅವರ ಮೇಲಿನ ನಿರೀಕ್ಷಣೆಯನ್ನು ಅವಲಂಬಿತವಾಗಿದೆ. ಉದಾಹರಣೆಗಾಗಿ, ಗಣಿತ ವಿದ್ಯೆಯಲ್ಲಿನ ಕುಶಲತೆಯನ್ನು ಹೊಂದಿರುವ ಹೆಣ್ಣು ಮಕ್ಕಳಿಗೆ, ಪರೀಕ್ಷೆಯು "ಲಿಂಗ ನಿಸ್ಪಕ್ಷಪಾತಿ"ಯಾದುದು ಎಂದು ಹೇಳಿದಾಗ, ಅವರು ಹೆಚ್ಚು ಅಂಕಗಳನ್ನು ಗಳಿಸಿದರು, ಆದರೆ ಇದೇ ಹೆಣ್ಣು ಮಕ್ಕಳಿಗೆ, ಮೊದಲಿನಿಂದಲೂ ಗಂಡು ಮಕ್ಕಳು ಹುಡುಗಿಯರಿಗಿಂತ ಉತ್ತಮ ಅಂಕಗಳನ್ನು ಗಳಿಸಿದ್ದಾರೆ ಎಂದು ಹೇಳಿದರೆ, ಹುಡುಗಿಯರು ಕಳಪೆ ಮಟ್ಟದ ಪ್ರದರ್ಶನ ಮಾಡುತ್ತಾರೆ. "ವಿಚಿತ್ರವೆಂದರೆ," ವಾಲೆನ್ ಗಮನಿಸಿದಂತೆ , "ಸಂಶೋಧನೆಯ ಪ್ರಕಾರ, ಹೆಂಗಸಿಗೆ, ಗಣಿತ ಪರೀಕ್ಷೆಯು ನಿನ್ನಿಂದ ಮಾಡಲಾಗದ ಕೆಲಸ ಎನ್ನುವ ಜೀವನಪರ್ಯಂತ ಅನುಭವಿಸಿದ ಸಾಮಾಜಿಕ ಹೊರೆಯನ್ನು ಹೋಗಲಾಡಿಸಬೇಕಾದರೆ, ಗಣಿತ ಪರೀಕ್ಷೆಗೆ ಲಿಂಗ ಭೇಧವಿಲ್ಲ, ಯಾರು ಬೇಕಾದರೂ ಇದನ್ನು ಸಾಧಿಸಿ ತೋರಿಸಬಹುದು ಎಂಬ ಆತ್ಮವಿಶ್ವಾಸವನ್ನು ನೀಡಿದರಷ್ಟೇ ಸಾಕು, ಅವಳು ಸಾಮಾಜಿಕ ಹೊರೆಯಿಂದ ಹೊರಬರಲು ಸಾಧ್ಯ[೧೦] ಲೇಖಕ ಜುಡಿತ್ ಹ್ಯಾರ್ರಿಸ್ ಹೇಳಿದಂತೆ, ಅವರ ಉತ್ಪತ್ತಿ ಸಂಬಂಧ ಶಾಸ್ತ್ರದ (ಜೀನ್ಸ್ ನ) ಕೊಡುಗೆಯಲ್ಲದೆ, ತಂದೆ-ತಾಯಿಗಳಿಂದ ಸಿಗುವ ಪಾಲನೆ-ಪೋಷಣೆ ಕೂಡ ದೀರ್ಘಾವಧಿಯ ಪರಿಣಾಮ ತರುವುದಿಲ್ಲ, ಆದರೆ ಇತರ ಪ್ರಾದೇಶಿಕ (ಸುತ್ತಮುತ್ತಲಿನ) ರೂಪಗಳಾದ ಮಕ್ಕಳ ಪೀರ್ ಗ್ರೂಪ್[೧೧]ಗಳು ಹೆಚ್ಚಿನ ಅವಧಿಯ ಪ್ರಭಾವವೇ ಸಂತಾನದ ಮೇಲಿರುತ್ತದೆ.
ಇಂಗ್ಲೆಂಡ್ ನಲ್ಲಿ, ನ್ಯಾಷನಲ್ ಲಿಟ್ರಸಿ ಟ್ರಸ್ಟ್ ನ ಸಂಶೋಧನೆಯ ಪ್ರಕಾರ, ಎಲ್ಲಾ ವಿದ್ಯಾಶಾಲೆಯ ವಲಯಗಳಲ್ಲಿ 7 ರಿಂದ 16 ರ ವಯಸ್ಸಿನ ಮಕ್ಕಳಲ್ಲಿ ಹುಡುಗರಿಗಿಂತ ಹುಡುಗಿಯರೇ ಒಂದೇ ಸಮನಾಗಿ ಹೆಚ್ಚು ಗಳಿಸುತ್ತಿದ್ದಾರೆ, ಇದರ ಗಮನಾರ್ಹ ವ್ಯತ್ಯಾಸವು ಓದುಗಾರಿಕೆ ಮತ್ತು ಬರಹದ ಕೌಶಲ್ಯಗಳಲ್ಲಿ ಕಾಣಬಹುದು.[೧೨] ಐತಿಹಾಸಿಕವಾಗಿ, ಹುಡುಗಿಯರು ಪ್ರಮಾಣಬದ್ಧವಾದ ಪರೀಕ್ಷೆಗಳಲ್ಲಿ ಹಿಂದೆ ಬೀಳುತ್ತಿದ್ದರು. 1996ರಲ್ಲಿ ಎಲ್ಲಾ ಜನಾಂಗದ ಅಮೆರಿಕಾದ ಹುಡುಗಿಯರಿಗೆ ಸಾಟ್(ಎಸ್ ಎ ಟಿ)ನ ವಾಚಕ ಪರೀಕ್ಷೆಯಲ್ಲಿ 503ರ ಸರಾಸರಿ ಗಳಿಕೆಯು ಹುಡುಗರಿಗಿಂತ 4 ಅಂಕಗಳು ಕಡಿಮೆಯಿದ್ದು, ಗಣಿತದಲ್ಲಿ ಹುಡುಗಿಯರಿಗೆ ಸರಾಸರಿ 492ಇದ್ದು, ಹುಡುಗರಿಗಿಂತ 35 ಅಂಕಗಳು ಕಡಿಮೆಯಿದೆ. ವೇಯ್ನ್ ಕಾಮರ, ಕಾಲೇಜ್ ಬೋರ್ಡ್ ನ ಸಂಶೋದಕ ವಿಜ್ಞಾನಿಯ ವಿಮರ್ಶೆಯಂತೆ,"ಹಡುಗರು ಆರಿಸಿಕೊಂಡ ಕೋರ್ಸ್-ಗಳನ್ನೇ ಹುಡುಗಿಯರು ಸಹ ತೆಗೆದುಕೊಂಡರೆ, ಈ 35 ಅಂಕಗಳ ಅಂತರವು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ." ಆ ವೇಳೆಯಲ್ಲಿ, ಸೆಂಟರ್ ಫಾರ್ ವುಮೆನ್ ಪಾಲಿಸಿ ಸ್ಟಡೀಸ್ ನ ಅಧ್ಯಕ್ಷರಾದ ಲೆಸ್ಲೀ ಆರ್. ವೊಲ್ಫ್ ಹೇಳಿದಂತೆ, ಹುಡುಗಿಯರ ಗಣಿತ ಪರೀಕ್ಷೆಯ ಗಳಿಕೆಯ ಅಂಕ ಭಿನ್ನವಾಗಿರುತ್ತದೆ, ಏಕೆಂದರೆ ಅವರು ಸಮಸ್ಯೆಗಳನ್ನು (ಲೆಕ್ಕ) ಬಿಡಿಸಲು ಕೆಲಸ ಮಾಡುತ್ತಿದ್ದರೆ, ಹುಡುಗರು "ಪರೀಕ್ಷೆ-ಯುಕ್ತಿಯ ಉಪಯೋಗ"ಗಳಾದ, ಈಗಾಗಲೇ ಕೊಟ್ಟಿರುವ ಬಹು-ಆಯ್ಕೆಯ ಪ್ರಶ್ನೆಗಳ ಉತ್ತರಗಳನ್ನು ತಕ್ಷಣವೇ ಪರಿಶೀಲಿಸುತ್ತಾರೆ, ಮತ್ತು ಹುಡುಗಿಯರು ಸಮಚಿತ್ತದಿಂದ ಮತ್ತು ಪೂರ್ಣತೆಯಿಂದ ಪರೀಕ್ಷೆಯನ್ನು ತೆಗೆದುಕೊಂಡರೆ, "ಹುಡುಗರು ಪಿನ್-ಬಾಲ್ ಮೆಷಿನ್ ನಲ್ಲಿ ಆಟವಾಡಿದಂತೆ, ಈ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ". (ಎಸ್ ಎ ಟಿ)ಸಾಟ್ ನಲ್ಲಿ ಹುಡುಗಿಯರ ಗಳಿಕೆ ಕೆಳಮಟ್ಟದಲ್ಲಿದ್ದರೂ, ಅವರು ಒಂದೇ ಸಮನಾಗಿ ಕಾಲೇಜಿನಲ್ಲಿ[೧೩] ಅವರ ಮೊದಲ ವರ್ಷದ ಎಲ್ಲ ಕೋರ್ಸ್ ಗಳಲ್ಲೂ ಹುಡುಗರನ್ನು ಮೀರಿಸಿ ಉನ್ನತ ಶ್ರೇಣಿಗಳನ್ನು ಪಡೆದಿದ್ದಾರೆ ಎಂದೂ ಸಹ ವೊಲ್ಫ್ ಹೇಳಿಕೆ ನೀಡಿದ್ದಾಳೆ. 2006ರ ವೇಳೆಗೆ ಹುಡುಗಿಯರು (ಎಸ್ ಎ ಟಿ)ಸಾಟ್ನ ವಾಚಕ ಭಾಗದಲ್ಲಿ ಹುಡುಗರಿಗಿಂತ 11 ಅಂಕಗಳ [೧೪]ಹೆಚ್ಚಳವನ್ನು ಗಳಿಸುತ್ತಿದ್ದರು. ಚಿಕಾಗೋ ವಿಶ್ವವಿಧ್ಯಾನಿಲಯದ 2005ರ ಸಂಶೋಧನೆಯ ತೋರಿಸಿದಂತೆ, ತರಗತಿಯಲ್ಲಿನ ಹುಡುಗಿಯರ ಇರುವಿಕೆಯ ಬಹುಮತವು, ಹುಡುಗರ [೧೫]ವಿದ್ಯಾಭ್ಯಾಸದ ಮಟ್ಟವನ್ನು ಉತ್ತಮ ಪಡಿಸಲು ಆಸ್ಪದ ಕೊಟ್ಟಂತಾಗುತ್ತದೆ.
ಕಲೆ ಮತ್ತು ಸಾಹಿತ್ಯ
[ಬದಲಾಯಿಸಿ]ಈಜಿಫ್ಟಿಯನ್ ಮುರಲ್ಸ್ನಲ್ಲಿ ರಾಜಮನೆತನದ ಚಿಕ್ಕ ಹುಡುಗಿಯರ ಸಹಾನುಭೂತಿಯುಳ್ಳ ಭಾವಚಿತ್ರವೂ ಕೂಡಿದೆ. ಸಪ್ಪ್ಹೋ 'ನ ಕವಿತೆಗಳು ಹುಡುಗಿಯರನ್ನು ಸಂಭೋಧಿಸುವ ಪ್ರೇಮ ಕವನಗಳನ್ನು ಹೊತ್ತು ತರುತ್ತವೆ.
ಯುರೋಪ್ ನಲ್ಲಿ, ಹುಡುಗಿಯರ ಮುಖಭಾವವಿರುವ ಕೆಲವು ಮುಂಚಿನ ವರ್ಣಚಿತ್ರಗಳೆಂದರೆ, ಪೆಟ್ರುಸ್ ಕ್ರಿಸ್ಟುಸ್ ' ಪೋರ್ಟ್ ರೈಟ್ ಆಫ್ ಎ ಯಂಗ್ ಗರ್ಲ್ (ಸುಮಾರು 1460), ಜುಯನ್ ದೇ ಫ್ಲನ್ದೆಸ್ ' ಪೋರ್ಟ್ ರೈಟ್ ಆಫ್ ಎ ಯಂಗ್ ಗರ್ಲ್ (ಸುಮಾರು 1505), ಫ್ರಾನ್ಸ್ ಹಾಲ್ಸ್ ' ಡೈ ಅಮ್ಮೆ ಮಿತ್ ಡೆಮ್ ಕೈಂಡ್ 1620 ರಲ್ಲಿ ಡಿಎಗೋ ವೆಲಝೆಡ್ಕ್ವೆಜ್ ' ಲಾಸ್ ಮೆನಿನಸ್ 1656 ರಲ್ಲಿ ಜಾನ್ ಸ್ಟೀನ್ ನ ದಿ ಫೀಸ್ಟ್ ಆಫ್ ಎಸ್ ಟಿ . ನಿಕೋಲಸ್ (ಸುಮಾರು 1660) ಮತ್ತು ಜಾನ್ನೆಸ್ ವೇರ್ಮೀರ್ ನ ಗರ್ಲ್ ವಿಥ್ ಎ ಪರ್ಲ್ ಇಯರ್ ರಿಂಗ್ ಅದರ ಜೊತೆಗೆ ಗರ್ಲ್ ರೀಡಿಂಗ್ ಎ ಲೆಟರ್ ಅಟ್ ಅನ್ ಓಪನ್ ವಿಂಡೋ . ಹುಡುಗಿಯರ, ನಂತರದ ವರ್ಣ ಚಿತ್ರಗಳಲ್ಲಿ ಆಲ್ಬರ್ಟ್ ಅನ್ಕೆರ್ನ ಭಾವಚಿತ್ರವಾದ ಗರ್ಲ್ ವಿಥ್ ಎ ದೊಮಿನೋ ಟವರ್ ಮತ್ತು ಕ್ಯಾಮಿಲ್ಲೆ ಪಿಸ್ಸರ್ರೋ ನ 1883 ಪೋರ್ಟ್ ರೈಟ್ ಆಫ್ ಎ ಫೆಲಿಕ್ಸ್ ಡಾಟರ್ , ಇವೆಲ್ಲವೂ ಕೂಡಿದೆ.
ಹುಡುಗಿಯರ ಮುಖಭಾವವನ್ನು ಹೊಂದಿರುವ ಅಮೆರಿಕಾದ ವರ್ಣಚಿತ್ರಗಳಲ್ಲಿ ಮೇರಿ ಕಾಸ್ಸತ್ತ್ ನ 1884 ಚಿಲ್ದ್ರೆನ್ ಆನ್ ದಿ ಬೀಚ್ ಮತ್ತು ವ್ಹಿಸ್ತ್ಲರ್ ನ ಹಾರ್ಮೋನಿ ಇನ್ ಗ್ರೆಯ್ ಅಂಡ್ ಗ್ರೀನ್ : ಮಿಸ್ ಸಿಸೆಲಿ ಅಲೆಕ್ಸಾಂಡರ್ ಮತ್ತು ದಿ ವೈಟ್ ಗರ್ಲ್ (ಬಲಗಡೆಗೆ ತೋರಿಸಿದೆ, ಇವೆಲ್ಲವೂ ಸೇರಿದೆ.
ಹಲವು ಕಥೆಗಳು ಅದರ ನಾಯಕಿಯ ಬಾಲ್ಯದಿಂದಲೇ ಪ್ರಾರಂಭವಾಗುತ್ತದೆ, ಅವುಗಳೆಂದರೆ ದಬಾಲಿಕೆಗೆ ಒಳಗಾಗಿ ಒದ್ದಾಡುವ ಜಾನೆ ಐರ್ ಅಥವಾ ಸೂಕ್ಷ್ಮ ಮನಸ್ಸುಳ್ಳ ವಾರ್ ಅಂಡ್ ಪೀಸ್ ನಲ್ಲಿನ ನತಾಶ. ಇತರ ಕಥೆಗಳಾದ ಹಾರ್ಪರ್ ಲೀ ನ ಟು ಕಿಲ್ ಎ ಮಾಕಿಂಗ್ ಬರ್ಡ್ ನಲ್ಲಿ ಕಿರಿಯ ಹುಡುಗಿಯೊಬ್ಬಳು ವೀರನಾಯಕಿಯಾಗಿದ್ದಾಳೆ. ವ್ಲಾಡಿಮಿರ್ ನಬೋಕೊವ್ ನ ಚರ್ಚೆಯ ಪುಸ್ತಕವಾದ ಲೋಲಿತ (1955)ದಲ್ಲಿ, ಸುಮಾರು 12 ವರ್ಷ ವಯಸ್ಸಿನ ಹುಡುಗಿ ಮತ್ತು ಪ್ರೌಢ ಪಾಂಡಿತ, ಇವರಿಬ್ಬರೂ ಅಮೆರಿಕಾದ್ಯಂತ ಪ್ರಯಾಣ ಬೆಳೆಸುತ್ತಿರುವಾಗ ಅವರಲ್ಲಿನ ವಿಧಿ ಲಿಖಿತ ಸಂಬಂಧವು ಇದರ ಕಥಾವಸ್ತಾಗಿದೆ. ಆರ್ಥರ್ ಗೋಲ್ಡನ್ ನ ಮೆಮೊಇರ್ಸ್ ಆಫ್ ಎ ಗಯಿಶ ದಲ್ಲಿ ಹೆಣ್ಣಿನ ಮುಖ್ಯ ಪಾತ್ರ ಮತ್ತು ಅವಳ ತಂಗಿಯನ್ನು ಕುಟುಂಬದಿಂದ ಬೇರ್ಪಟ್ಟ ನಂತರ ವೇಶ್ಯಾವಾಟಿಕೆಗೆ ಹಾಕಲಾಯಿತು.
ಲೆವಿಸ್ ಕಾರ್ರೋಲ್ ನ ಅಲೈಸ್ ನ ಅದ್ವೆಂಚ್ಯುರ್ಸ್ ಇನ್ ವಂಡರ್ ಲ್ಯಾಂಡ್ ನಲ್ಲಿ ಹೆಚ್ಚು ಚಿರಪರಿಚಿತಳಾದ ಹೆಣ್ಣುನ್ನು ವೀರನಾಯಕಿಯನ್ನಾಗಿ ಚಿತ್ರಿಸಲಾಗಿದೆ. ಅದೂ ಅಲ್ಲದೆ , ಕಾರ್ರೋಲ್ ನ ಹುಡುಗಿಯರ ಭಾವಚಿತ್ರಗಳು ಛಾಯಾಗ್ರಹಣ ಕಲೆಯ ಇತಿಹಾಸದಲ್ಲಿ ಆಗಾಗ್ಗೆ ತೋರಿಸಲಾಗುತ್ತದೆ.
ಪ್ರಖ್ಯಾತ ಸಂಸ್ಕೃತಿ
[ಬದಲಾಯಿಸಿ]ಯೂರೋಪಿನ ಫೈರಿ ಟೇಲ್ (ಯಕ್ಷಿಣಿ ಕಥೆಗಳು ) ಹುಡುಗಿಯರ ಬಗ್ಗೆ ನೆನಪಿನಲ್ಲಿಡುವಂತಹ ಕಥೆಗಳನ್ನು ಜೀವಂತವಾಗಿಟ್ಟಿದೆ. ಅವುಗಳಲ್ಲಿ ಕೆಲವು ಹೀಗಿವೆ ಗೋಲ್ಡಿ ಲೋಕ್ಕ್ಸ್ ಮತ್ತು ದಿ ತ್ರೀ ಬೇರ್ಸ್ , ರಪುನ್ಜೆಲ್ , ಹಂಸ್ ಕ್ರಿಸ್ಟಿಯನ್ ಅನ್ದೆರ್ ಸೇನ್ ನ ದಿ ಲಿಟಲ್ ಮ್ಯಾಚ್ ಗರ್ಲ್ , ದಿ ಲಿಟಲ್ ಮೇರ್ ಮಿಡ್ , ದಿ ಪ್ರಿನ್ಸೆಸ್ಸ್ ಅಂಡ್ ದಿ ಪೀ ಅಂಡ್ ದಿ ಬ್ರದೆರ್ಸ್ ಗ್ರಿಮ್ಮ್ ನ ಲಿಟಲ್ ರೆಡ್ ರೈಡಿಂಗ್ ಹೂಡ್ .
ಹುಡುಗಿಯರ ಬಗ್ಗೆಯೂ ಸೇರಿದಂತೆ ಮಕ್ಕಳ ಪುಸ್ತಕಗಳು ಅಲಿಸ್ ಇನ್ ವಂಡರ್ ಲ್ಯಾಂಡ್ , ಹೇಇದಿ , ದಿ ವಂಡರ್ಫುಲ್ ವಿಜಾ ರ್ಡ್ ಆಫ್ ಒಜ್ , ದಿ ನಾನ್ಸಿ ಡ್ರೆವ್ ಸೀರೀಸ್ , ಲಿಟಲ್ ಹೌಸ್ ಆನ್ ದಿ ಪ್ರೈರಿ , ಮೇಡ್ ಲೈನ್ , ಪಿಪ್ಪಿ ಲಾಂಗ್ ಸ್ಟಾಕಿಂಗ್ , ಎ ರಿಂಕಲ್ ಇನ್ ಟೈಮ್ , ಡ್ರಾಗನ್ ಸಾಂಗ್ , ಮತ್ತು ಲಿಟಲ್ ವುಮೆನ್ . ಪುಸ್ತಕಗಳು ಹುಡುಗ ಮತ್ತು ಹುಡುಗಿ ಇಬ್ಬರನ್ನು ಒಳಗೊಂಡಿದ್ದು,ಮುಖಂಡರ ಪಾತ್ರಗಳಿಗೆ ಹುಡುಗರ ಮೇಲೆ ಹೆಚ್ಚು ಬೆಳಕು ಚೆಲ್ಲಲಾಗಿದೆ, ಆದರೆ ಮುಖ್ಯವಾಗಿ ಹುಡುಗಿ ಪಾತ್ರಗಳು ನೈಟ್ಸ್ ಕಾಸಲ್ , ದಿ ಲಯನ್ , ದಿ ವಿಚ್ ಅಂಡ್ ದಿ ವಾರ್ಡ್ ರೋಬ್ , ದಿ ಬುಕ್ ಆಫ್ ತ್ರೀ ಅಂಡ್ ದಿ ಹಾರಿ ಪಾಟರ್ ಸರಣಿಗಳಲ್ಲಿ ಕಾಣಿಸಿಕೊಂಡಿವೆ .
ಅಮೆರಿಕಾದ ಅನೇಕ ಕಾಮಿಕ್ (ಹಾಸ್ಯದ ) ಪುಸ್ತಕಗಳಲ್ಲಿ ಮತ್ತು ಹಾಸ್ಯದ ಪಟ್ಟಿಯನ್ನು ಹೊಂದಿದ ವಿಶಿಷ್ಟ ಹುಡುಗಿಯ ಪ್ರಧಾನ ಪಾತ್ರಗಳೆಂದರೆ ಲಿಟಲ್ ಲುಲು ಅಂಡ್ ಲಿಟಲ್ ಅರ್ಫನ್ ಅನ್ನಿ . ವಂಡರ್ ವುಮನ್ನ ಸೈಡ್ ಕಿಕ್ಕ್ ಗಳಲ್ಲಿ ಒಬ್ಬಳಾದ ಏತ್ತ ಕ್ಯಾಂಡಿ ಪಾತ್ರವು, ಸೂಪರ್ ಹೀರೋ ಕಾಮಿಕ್ ಬುಕ್ಸ್ ನಲ್ಲಿನ ಮೊದಲ ಹುಡುಗಿ ಪಾತ್ರವಾಗಿದೆ. ( ಚಾರ್ಲೆಸ್ ಸ್ಚುಲ್ಜ್ ನ )ಪೀನಟ್ಸ್ ಸರಣಿಗಳಲ್ಲಿ ಪೆಪ್ಪೆರ್ಮಿಂಟ್ ಪಟ್ಟಿ , ಲುಸಿ ವ್ಯಾನ್ ಪೆಲ್ಟ್ ಮತ್ತು ಸ್ಯಾಲಿ ಬ್ರೌನ್ ಎಂಬ ಹುಡುಗಿಯ ಪಾತ್ರಗಳೂ ಸೇರಿದೆ.
ಜಪಾನ್ ನೀಯರ ಅನಿಮೇಟಡ್ ಕಾರ್ಟೂನ್ಸ್ ಮತ್ತು ಕಾಮಿಕ್ ಬುಕ್ಸ್ ಗಳಲ್ಲಿ ಹುಡುಗಿಯರು ಆಗಾಗ್ಗೆ ವೀರನಾಯಕಿಗಳಾಗಿದ್ದಾರೆ. ಹಯಾವ್ ಮಿಯಜ್ಯಕಿ ನ ಹಲವಾರು ಅನಿಮೇಟಡ್ ಚಿತ್ರಗಳಲ್ಲಿ ಹುಡುಗಿಯನ್ನು ನಾಯಕಿಯನ್ನಾಗಿ ಚಿತ್ರಿಸಿಲಾಗಿದ್ದು, ಉದಾಹರಣೆಗಾಗಿ ಮಜೋ ನೋ ಟಕ್ಕ್ಯು ಬಿನ್ (ಕಿಕಿಸ್ ಡೆಲಿವರಿ ಸರ್ವಿಸ್ ). ಹುಡುಗಿಯರನ್ನು ಪ್ರೇಕ್ಷಕರನ್ನಾಗಿ ಮಾಡುವ ಗುರಿಯನ್ನು ಹೊಂದಿದ ಶೋಜೋ ಶೈಲಿಯ ಮಾಂಗದಲ್ಲಿ ಇತರ ಹಲವು ಹುಡುಗಿಯರು ಮುಖಂಡ ರಾಗಿದ್ದಾರೆ. ಅವುಗಳಲ್ಲಿ ಕೆಲವು ದಿ ವಾಲ್ ಫ್ಲವರ್ , ಸೆರೆಸ್ , ಸೆಲೆಸ್ಟಿ ಅಲ್ ಲೆಜೆಂಡ್ , ಟೋಕ್ಯೋ ಮ್ಯುಮ್ಯು ಮತ್ತು ಫುಲ್ ಮೂನ್ ಓ ಸಗಶಿತೆ . ಈ ಮಧ್ಯೆ , ಜಪಾನೀಯರ ಕೆಲವು ಪ್ರಖ್ಯಾತ ಕಾರ್ಟೂನ್ ಗಳು ಹುಡುಗಿಯರ ಕಾಮಭರಿತ ವಾಸ್ತವತೆಯ ಭಾವಚಿತ್ರಗಳನ್ನು ಚಿತ್ರಿಸಿದೆ.
ಗರ್ಲ್ ಎಂಬ ಶಬ್ದವು ಪ್ರಖ್ಯಾತ ಸಂಗೀತ ಸಾಹಿತ್ಯಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತದೆ. (ಅದೆಂದರೆ "ಎಬೌಟ್ ಎ ಗರ್ಲ್ " ಹಾಡಿನ ಜೊತೆ ), ಆಗಾಗ್ಗೆ ಹೆಚ್ಚು ಅರ್ಥ ಕೊಡುವ ಕಿರಿಯ ಪ್ರೌಡ ಅಥವಾ ಹರೆಯದ ಹುಡುಗಿ.
ಇವನ್ನೂ ಗಮನಿಸಿ
[ಬದಲಾಯಿಸಿ]ಟಿಪ್ಪಣಿಗಳು
[ಬದಲಾಯಿಸಿ]- ↑ ಶಬ್ದಕೋಶ .ಕಾಮ್, ಗರ್ಲ್ , 2008 ಜನವರಿ 2 ರಲ್ಲಿ ಪರಿಷ್ಕರಿಸಲಾಗಿದೆ.
- ↑ ವೆಬ್ಸ್ಟರ್ಸ್ ರಿವೈಸ್ಡ್ ಅನಬ್ರಿದ್ಜ್ದ್ ಡಿಕ್ಷನರಿ (1913), ಗರ್ಲ್ Archived 2009-01-22 ವೇಬ್ಯಾಕ್ ಮೆಷಿನ್ ನಲ್ಲಿ. , 2008 ಜನವರಿ 2 ಪರಿಷ್ಕರಿಸಲಾಗಿದೆ.
- ↑ ೩.೦ ೩.೧ ಡಿಕ್ಷನರಿ .ಕಾಮ್ , ಗರ್ಲ್ , 2008 ಜನವರಿ 2 ಪರಿಷ್ಕರಿಸಲಾಗಿದೆ.
- ↑ ಆನ್ ಲೈನ್ ಎತ್ಯ್ಮೋಲೋಜಿ ಡಿಕ್ಷನರಿ , ಗರ್ಲ್ , 2008 ಜನವರಿ 2 ಪರಿಷ್ಕರಿಸಲಾಗಿದೆ.
- ↑ "CIA Fact Book". The Central Intelligence Agency of the United States. Archived from the original on 2018-12-26. Retrieved 2010-04-07.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ ಇನ್ -ಜಂಡರ್.ಕಾಮ್ , ದಿ ಅದ್ದ್ಸ್ ಆಫ್ ಹ್ಯಾವಿಂಗ್ ಎ ಬಾಯ್ ಆರ್ ಎ ಗರ್ಲ್ , 2009 ಜನವರಿ 8 ಪರಿಷ್ಕರಿಸಲಾಗಿದೆ.
- ↑ [೧] Archived 2018-06-20 ವೇಬ್ಯಾಕ್ ಮೆಷಿನ್ ನಲ್ಲಿ.ದಿ ಸ್ಟೇಟ್ ಆಫ್ ದಿ ವರ್ಲ್ದ್ಸ್ ಚಿಲ್ದ್ರೆನ್ 2004 - ಗರ್ಲ್ಸ್ , ಎಜುಕೇಶನ್ ಅಂಡ್ ಡೆವಲಪ್ಮೆಂಟ್ , ಯುನಿಸೆಫ್ , 2004
- ↑ ಸಲೋನ್ .ಕಾಮ್ , ಕುರ್ತ್ ಕ್ಲಇನೆರ್ , ಎ ಮೈಂಡ್ ಆಫ್ ದೇರ್ ಓನ್ Archived 2011-06-06 ವೇಬ್ಯಾಕ್ ಮೆಷಿನ್ ನಲ್ಲಿ. (ಪರಿಷ್ಕರಿಸಲ್ಪಟ್ಟ ಪುಸ್ತಕ ಪ್ರಕೃತಿಯ ಮೂಲಕ ಪೋಷಣೆ ಮತ್ಟ್ ರಿದ್ಲೆಯ್ ರವರಿಂದ ), 19 ಜೂನ್ 2003, 2008 ಜನವರಿ 2 ಪರಿಷ್ಕರಿಸಲಾಗಿದೆ.
- ↑ ಬಿಬಿಸಿ , ಜೇನ್ ಬೇರೆಸ್ ಫೋರ್ಡ್ , ಟ್ವಿನ್ಸ್ ರಿಯುನೈಟೆಡ್ , ಆಫ್ಟರ್ 35 ಇಯರ್ಸ್ ಅಪಾರ್ಟ್ , 31 ಡಿಸೆಂಬರ್ 2007, 2008 ಜನವರಿ 2 ಪರಿಷ್ಕರಿಸಲಾಗಿದೆ.
- ↑ ಎಮೋರಿ ಯುನಿವೆರ್ಸಿಟಿ ವೆಬ್ಸೈಟ್ , ವುಮೆನ್ಸ್ ವರ್ಕ್ ? Archived 2011-06-29 ವೇಬ್ಯಾಕ್ ಮೆಷಿನ್ ನಲ್ಲಿ. , ಸೆಪ್ಟಂಬರ್ 2005, 2008 ಜನವರಿ 2 ಪರಿಷ್ಕರಿಸಲಾಗಿದೆ.
- ↑ ಪಿಬಿಎಸ್ .ಓ ಆರ್ ಜಿ , ನೇಚರ್ ವರ್ಸಸ್ . ನರ್ಚರ್ Archived 2010-03-27 ವೇಬ್ಯಾಕ್ ಮೆಷಿನ್ ನಲ್ಲಿ. , 20 ಅಕ್ಟೋಬರ್ 1998, 2008 ಜನವರಿ 2 ಪರಿಷ್ಕರಿಸಲಾಗಿದೆ.
- ↑ ಲಿಟ್ರಸಿ ಟ್ರಸ್ಟ್ .ಓ ಆರ್ ಜಿ , ಲಿಟ್ರಸಿ ಅಚೀವ್ಮೆಂಟ್ ಇನ್ ಇಂಗ್ಲೆಂಡ್ , ಇನ್ಕ್ಲುಡಿಂಗ್ ಜಂಡರ್ ಸ್ಪ್ಲಿಟ್ , 2007, 2008 ಡಿಸಂಬರ್ 7 ಪರಿಷ್ಕರಿಸಲಾಗಿದೆ
- ↑ ನ್ಯೂ ಯಾರ್ಕ್ ಟೈಮ್ಸ್ , ಕಥೆರಿನೆ ಕ್ಯು ಸೀಲ್ಯೇ , ಗ್ರೂಪ್ ಸೀಕ್ಸ್ ಟು ಅಲ್ಟರ್ ಎಸ್.ಎ.ಟಿ . ಟು ರೈಸ್ ಗರ್ಲ್ಸ್ ' ಸ್ಕೋರ್ಸ್ , 14 ಮಾರ್ಚ್ 1997, 2008 ಜನವರಿ 2 ಪರಿಷ್ಕರಿಸಲಾಗಿದೆ
- ↑ ಎಬಿಸಿ ನ್ಯೂಸ್ , ಜಾನ್ ಬರ್ಮನ್ , ಗರ್ಲ್ಸ್ ಅಚೀವ್ ರೇರ್ ಎಸ್ಎಟಿ ಸ್ಕೋರ್ಸ್ , 30 ಆಗಸ್ಟ್ 2006, 2008 ಜನವರಿ 2 ಪರಿಷ್ಕರಿಸಲಾಗಿದೆ
- ↑ ಹಾರ್ರಿಸ್ ಸ್ಕೂಲ್ .ಯುಚಿಕಾಗೋ .ಇಡಿಯು , ಗರ್ಲ್ -ಡಾಮಿನೇಟಡ್ ಕ್ಲಾಸ್ ರೂಮ್ಸ್ ಕ್ಯಾನ್ ಇಮ್ಪ್ರೋವ್ ಬಾಯ್ಸ್ ’ ಅರ್ಲಿ ಸ್ಕೂಲ್ ಪೆರ್ಫಾರ್ಮನ್ಸ್ , 2008 ಜನವರಿ 2 ಪರಿಷ್ಕರಿಸಲಾಗಿದೆ