ವಿಷಯಕ್ಕೆ ಹೋಗು

ಗುರಗಾಂವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುರಗಾಂವ್
Gurgaon
गुड़गांव
ನಗರ
Nickname: 
ಮಿಲ್ಲೇನಿಯಮ್ ನಗರ
Population
 (೨೦೦೧)
 • Total೨೨೮೮೨೦
Websitehttp://gurgaon.nic.in/

ಭಾರತರಾಜ್ಯ ಹರಿಯಾಣದಲ್ಲಿರುವ ಗುರಗಾಂವ್ ಗುಡ್ಗಾಂವ್ ಹಿಂದಿ:गुड़गांव 6ನೇ ಅತೀದೊಡ್ಡ ನಗರವಾಗಿದೆ. ಗುರಗಾಂವ್ ಹರಿಯಾಣಕೈಗಾರಿಕೆ ಮತ್ತು ಆರ್ಥಿಕ ಕೇಂದ್ರವಾಗಿದೆ. ಪ್ರಾಚೀನ ಹಿಂದು ಪುರಾಣದ ಪ್ರಮುಖ ಪಟ್ಟಣವಾದ ಗುರಗಾಂವ್ ದೆಹಲಿಯ ನಾಲ್ಕು ಪ್ರಮುಖ ಉಪನಗರಗಳಲ್ಲಿ ಒಂದಾಗಿದ್ದು,ಭಾರತದ ರಾಷ್ಟ್ರೀಯ ರಾಜಧಾನಿ ಪ್ರದೇಶದ ಭಾಗವಾಗಿದೆ. ಕಳೆದ 10 ವರ್ಷಗಳಲ್ಲಿ ನಗರವು ತ್ವರಿತ ಬೆಳವಣಿಗೆ ಮತ್ತು ನಿರ್ಮಾಣಕ್ಕೆ ಒಳಪಟ್ಟಿದೆ.[] 1997ರಲ್ಲಿ GE ಕಂಪೆನಿ ಗುರಗಾಂವ್‌ನಲ್ಲಿ ಕಾಲ್‌ಸೆಂಟರ್ ಸ್ಥಾಪಿಸಿದ ಬಳಿಕ ಇತರ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಕಾಲ್‌ಸೆಂಟರ್‌ಗಳನ್ನು ತೆರೆಯಲು ಗುರಗಾಂವ್‌ನ್ನು ಆಯ್ಕೆ ಮಾಡಿಕೊಂಡಿವೆ. ಇದು ಗುರಗಾಂವ್‌‌ನ್ನು ಕಾಲ್ ಸೆಂಟರ್ ಪ್ರಪಂರಾಜಧಾನಿಯನ್ನಾಗಿಸಿದೆ.[] ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಪ್ರಾದೇಶಿಕ ಮುಖ್ಯ ಕಚೇರಿಗಳನ್ನು ಮುಂಬಯಿ ಅಥವಾ ದೆಹಲಿಯ ಬದಲು ಗುರಗಾಂವ್‌‌ನಲ್ಲಿ ಸ್ಥಾಪಿಸಲು ಆಯ್ಕೆ ಮಾಡಿಕೊಂಡರು.[] ಬಿಸಿನೆಸ್ ಟುಡೆ ನಿಯತಕಾಲಿಕೆಯ ಪ್ರಕಾರ, ಇಂದು ಉದ್ಯೋಗಕ್ಕೆ ಗುರಗಾಂವ್‌ ಭಾರತದಲ್ಲೇ ಅತ್ಯುತ್ತಮ ನಗರ ಮತ್ತು ವಾಸಯೋಗ್ಯ ನಗರವಾಗಿ ಭಾರತದಲ್ಲೇ ಅತ್ಯುತ್ತಮವೆಂದು ಪರಿಗಣಿತವಾಗಿದೆ.[] ಗುರಗಾಂವ್‌‌ನಲ್ಲಿ ತಲಾದಾಯ 122,212 INR ಆಗಿದ್ದು,ಚಂಡೀಗಢ ಮತ್ತು ಮುಂಬಯಿ ಬಳಿಕ ಭಾರತದಲ್ಲೇ 3ನೇ ಅತ್ಯಧಿಕ ತಲಾದಾಯ ಹೊಂದಿದೆ.[]

ವ್ಯುತ್ಪತ್ತಿ ಶಾಸ್ತ್ರ

[ಬದಲಾಯಿಸಿ]

ಹಿಂದು ಪುರಾಣದಲ್ಲಿ ನಗರದ ಹೆಸರಿನ ಮ‌ೂಲದ ಉಲ್ಲೇಖವಿದೆ. ಭಾರತದ ಮಹಾಗ್ರಂಥ ಮಹಾಭಾರತ ದಲ್ಲಿ ಪಾಂಡವರು ಮತ್ತು ಕೌರವರ ಗುರು ದ್ರೋಣಾಚಾರ್ಯ ಅವರ ಪೂರ್ವಿಕರ ಗ್ರಾಮ ಗುರಗಾಂವ್ ಎಂಬ ಪ್ರತೀತಿಯಿದೆ. ಸಂಸ್ಕೃತದಲ್ಲಿ ಗುರು ವೆಂದರೆ ಬೋಧಕನೆಂಬ ಅರ್ಥವಿದ್ದು,ಈ ಪ್ರಕರಣದಲ್ಲಿ ದ್ರೋಣಾಚಾರ್ಯ ಅವರನ್ನು ಉಲ್ಲೇಖಿಸಲಾಗಿದೆ ಮತ್ತು ಗ್ರಾಮ್ ಎಂದರೆ ಹಳ್ಳಿಯೆಂದರ್ಥ. ಹಿಂದು ಪುರಾಣದ ಪ್ರಕಾರ, ಋಷಿ ಭಾರದ್ವಾಜರ ಪುತ್ರರಾದ ದ್ರೋಣಾಚಾರ್ಯರಿಗೆ ಪಾಂಡವರು ಮತ್ತು ಕೌರವರು ಗ್ರಾಮವನ್ನು ದಾನ ನೀಡಿದರು. ಆದ್ದರಿಂದ ಅದು ಗುರು-ಗ್ರಾಮ್ ಎಂದೇ ಹೆಸರಾಯಿತು. ಕಾಲಕ್ರಮೇಣ ಗ್ರಾಮ್ ಬದಲಿಗೆ ಪ್ರಾಕೃತದಲ್ಲಿ ಗ್ರಾಮವೆಂದು ಅರ್ಥಹೊಂದಿರುವ ಆಡುಮಾತಿನ ಗಾಂವ್ ಪದ ಬಳಕೆಗೆ ಬಂದು, ಗುರಗಾಂವ್ ಹೆಸರು ಹೊಮ್ಮಿತು.

ಇತಿಹಾಸ

[ಬದಲಾಯಿಸಿ]
1903ರಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ಗುರಗಾಂವ್‌.
ಗುರಗಾಂವ್ ದೆಹಲಿಯ ವಾರಸುದಾರಿಕೆ ಅರಸರು ಮತ್ತು ಯದುವಂಶಿ, ರಜಪೂತರು, ತುಘಲಕ್‌ಗಳು, ಕಂಝಾಡೆ ಮುಸ್ಲಿಮರು ಮತ್ತು ಮೊಘಲರು ಮತ್ತು ಅವರಿಂದ ನೇಮಕವಾದ ಆಡಳಿತಗಾರರು ಗುರಗಾಂವ್ ಮೇಲೆ ಅನುಕ್ರಮವಾಗಿ ನಿಯಂತ್ರಣ ಹೊಂದಿದ್ದರು.[] ಪ್ರಸಕ್ತ ಜನಸಂಖ್ಯೆಯ ಪ್ರಮುಖ ಭಾಗ ಯಾದವರನ್ನು ಒಳಗೊಂಡಿದೆ. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ಪಂಜಾಬ್ ಪ್ರಾಂತ್ಯದೊಂದಿಗೆ ಏಕೀಕೃತಗೊಂಡ ಗುರಗಾಂವ್ ಜಿಲ್ಲೆ ಮತ್ತು ತೆಹ್ಸೀಲ್ ಮುಖ್ಯ ಕಚೇರಿಯಾಗಿ ಕಾರ್ಯನಿರ್ವಹಿಸಿದೆ. ಭಾರತದ ಸ್ವಾತಂತ್ರ್ಯದ ಬಳಿಕ ಗುರಗಾಂವ್‌ನ ಇಂದಿನ ಪ್ರತಿ ಭಾಗ ಹರಿಯಾಣಕ್ಕೆ ಸೇರಿದ್ದು, 1966ರಲ್ಲಿ ಪಂಜಾಬ್ ಪುನರ್‌ಸಂಘಟನೆವರೆಗೆ ಪಂಜಾಬ್ ರಾಜ್ಯದ ಭಾಗವಾಗಿತ್ತು. ಬಳಿಕ ಪಂಜಾಬ್ ರಾಜ್ಯ ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶವಾಗಿ ವಿಭಾಗಗೊಂಡಿದ್ದರಿಂದ ಹರ್ಯಾಣ ರಚನೆಯಾಯಿತು.ಗುರಗಾಂವ್‌ ಸಣ್ಣ ಕೃಷಿ ಗ್ರಾಮವಾಗಿ ಉಳಿದು, ನೆರೆಯ ದೆಹಲಿಯು ಭಾರತದ ರಾಜಕೀಯ ರಾಜಧಾನಿಯಾಗಿ ಹೊರಹೊಮ್ಮಿತು. ದೆಹಲಿಯ ಆರ್ಥಿಕ ಏಳಿಗೆಯಿಂದ ರಾಜಸ್ಥಾನ, ಬಿಹಾರ ಮುಂತಾದ ನೆರೆಯ ಪ್ರದೇಶಗಳಲ್ಲಿನ ಕಾರ್ಮಿಕರನ್ನು ದೊಡ್ಡ ಪ್ರಮಾಣದಲ್ಲಿ ಆಕರ್ಷಿಸಿದ್ದರಿಂದ ದೆಹಲಿಯ ಜನಸಂಖ್ಯೆಯು ತ್ವರಿತ ಗತಿಯಲ್ಲಿ ವೃದ್ಧಿಸಿತು.[] 1990ರ ಆದಿಯಲ್ಲಿ, ದೆಹಲಿಯು ವಿಶ್ವದಲ್ಲೇ ಅತ್ಯಂತ ಜನಸಂಖ್ಯೆಯ ಮತ್ತು ಜನನಿಬಿಡ ನಗರಗಳಲ್ಲಿ ಒಂದೆನಿಸಿ ಉಪನಗರವೊಂದರ ಅಗತ್ಯ ಹೆಚ್ಚು ಸ್ಪಷ್ಟವಾಗಿ ಕಂಡುಬಂತು. ವಿಸ್ತೃತ ಅಭಿವೃದ್ಧಿ ಕಾಣದ ಕೃಷಿ ಭೂಮಿಗಳು ಮತ್ತು ದೆಹಲಿಗೆ ಸಮೀಪವೂ ಇದ್ದುದರಿಂದ ಉಪನಗರ ನಿರ್ಮಾಣಕ್ಕೆ ಗುರಗಾಂವ್ ಸೂಕ್ತ ಸ್ಥಳವಾಗಿ ಕಂಡುಬಂತು. ಹರಿಯಾಣದ ನಗರಾಭಿವೃದ್ಧಿ ಪ್ರಾಧಿಕಾರ ಗುರಗಾಂವ್ ರೈತರಿಂದ ದೊಡ್ಡ ಪ್ರಮಾಣದ ಜಮೀನನ್ನು ಖರೀದಿಸಿ ಅಲ್ಲಿನ ವಸತಿ ಮತ್ತು ವಾಣಿಜ್ಯ ಕ್ಷೇತ್ರಗಳನ್ನು ಅಭಿವೃದ್ದಿಪಡಿಸಿತು.1990ರಲ್ಲಿ ಹರಿಯಾಣ ಸರ್ಕಾರ ತೆರಿಗೆ ಕಾನೂನುಗಳಲ್ಲಿ ಸುಧಾರಣೆ ತರುವುದರೊಂದಿಗೆ ಗುರಗಾಂವ್‌ನಲ್ಲಿ ವಿಶ್ವದರ್ಜೆಯ ಕಟ್ಟಡಗಳ ನಿರ್ಮಾಣಕ್ಕೆ ಖಾಸಗಿ ಕಂಪೆನಿಗಳನ್ನು ತನ್ನತ್ತ ಸೆಳೆದುಕೊಂಡಿತು.[] ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅತೀ ಸಾಮಿಪ್ಯತೆ ಕೂಡ ಖಾಸಗಿ ಸಂಸ್ಥೆಗಳನ್ನು ಗುರಗಾಂವ್‌ನತ್ತ ಆಕರ್ಷಿಸಿತು.[] ಇತ್ತೀಚೆಗೆ ಮುಕ್ತಾಯವಾದ ಖಾಸಗಿ ದೆಹಲಿ-ಗುರಗಾಂವ್ ಎಕ್ಸ್‌ಪ್ರೆಸ್ ಹೆದ್ದಾರಿಯು ಗುರಗಾಂವ್‌ ಜೊತೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶ್ವದರ್ಜೆಯ ಸಂಪರ್ಕ ಕಲ್ಪಿಸಿದೆ. ಇದರಿಂದಾಗಿ ಇನ್ನಷ್ಟು ಸಂಸ್ಥೆಗಳು ಗುರಗಾಂವ್‌ನಲ್ಲಿ ತಮ್ಮ ಕಚೇರಿಗಳನ್ನು ತೆರೆಯಲು ಉತ್ಸುಕವಾಗಿವೆ.[]

ಭೌಗೋಳಿಕ ಮತ್ತು ಹವಾಮಾನ ವಿವರ

[ಬದಲಾಯಿಸಿ]
ಸುಲ್ತಾನ್‌ಪುರ್ ರಾಷ್ಟ್ರೀಯ ಉದ್ಯಾನದಲ್ಲಿ ಸಾರಸ್ ಕ್ರೇನ್

ಇದು ಗುರಗಾಂವ್ ಇರುವ ಸ್ಥಳ 28°28′N 77°02′E / 28.47°N 77.03°E / 28.47; 77.03.[] ಇದು ಸರಾಸರಿ 220 ಮೀಟರ್(721 ಅಡಿ)ಎತ್ತರದಲ್ಲಿದೆ.ಗುರಗಾಂವ್ ಜಿಲ್ಲೆಯು ಪಟೌಡಿ, ಸೊಹ್ನಾ, ಗುರಗಾಂವ್ ಮತ್ತು ಫರೂಕ್‌ನಗರವೆಂಬ ನಾಲ್ಕು ಬ್ಲಾಕ್‌ಗಳನ್ನು ಒಳಗೊಂಡಿದ್ದು,1979ರ ಆಗಸ್ಟ್‌ನಲ್ಲಿ ಸ್ಥಾಪನೆಯಾಯಿತು. ಇದು ಹರಿಯಾಣದ ದಕ್ಷಿಣದಲ್ಲಿ ಕೊನೆಯ ಜಿಲ್ಲೆ. ಉತ್ತರದಲ್ಲಿ, ರೋಹ್ಟಕ್ ಜಿಲ್ಲೆ ಮತ್ತು ದೆಹಲಿ ಕೇಂದ್ರಾಡಳಿತ ಪ್ರದೇಶದಿಂದ ಇದು ಸುತ್ತುವರಿದಿದೆ. ಫರೀದಾಬಾದ್ ಜಿಲ್ಲೆಯು ಇದರ ಪೂರ್ವದಲ್ಲಿದೆ. ದಕ್ಷಿಣದಲ್ಲಿ ಜಿಲ್ಲೆಯು ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳನ್ನು ಗಡಿಗಳಾಗಿ ಹಂಚಿಕೊಂಡಿದೆ. ಇದರ ಪೂರ್ವಕ್ಕೆ ರೆವಾರಿ ಜಿಲ್ಲೆ ಮತ್ತು ರಾಜಸ್ಥಾನ ರಾಜ್ಯವಿದೆ. ಹಿಮಾಲಯಗಳು ಮತ್ತು ಅರಾವಳಿ ಪರ್ವತ ಶ್ರೇಣಿಗಳ ನಡುವೆ ಗುರಗಾಂವ್ ಸ್ಥಾಪಿತವಾಗಿದೆ. ಹರಿಯಾಣ ಇದರ ಮ‌ೂರು ಕಡೆಯನ್ನು ಸುತ್ತುವರಿದಿದ್ದು, ಪೂರ್ವಕ್ಕೆ ಯಮುನಾ ನದಿಗೆ ಅಡ್ಡಲಾಗಿ ಉತ್ತರ ಪ್ರದೇಶದಿಂದ ಸುತ್ತುವರಿದಿದೆ. ಇದರ ಅತೀ ಹೆಚ್ಚು ಉದ್ದ 13 ಮೈಲಿಗಳಾಗಿದ್ದು, 17 ಮೈಲುಗಳಷ್ಟು ವಿಸ್ತಾರವಾಗಿದೆ. ದೆಹಲಿಯ ಎತ್ತರ ಸಮುದ್ರಮಟ್ಟಕ್ಕಿಂತ 213ರಿಂದ 305 ಮೀಟರ್ ಎತ್ತರಲ್ಲಿದಲ್ಲಿದೆ.[] ನಗರದ ಕೇಂದ್ರ ಭಾಗದಿಂದ ಕರಾರುವಕ್ಕಾಗಿ 15.32 ಕಿಮೀ ದೂರದಲ್ಲಿರುವ ಸುಲ್ತಾನ್‌ಪುರ್ ರಾಷ್ಟ್ರೀಯ ಉದ್ಯಾನವು ಸಾರಸ್ ಕ್ರೇನ್, ಇಂಡಿಯನ್ ಪೀಫೌಲ್, ಯುರೇಶಿಯನ್ ವಿಜೆನ್ ಮುಂತಾದ ಪಕ್ಷಿಗಳಿಗೆ ವಲಸೆ ಪಕ್ಷಿಗಳ ರಕ್ಷಿತ ಧಾಮವಾಗಿದೆ.

ಜನಸಂಖ್ಯೆ

[ಬದಲಾಯಿಸಿ]

As of 2001ಭಾರತದ ಜನಗಣತಿ[೧೦] ಯಲ್ಲಿ ಗುರಗಾಂವ್ 228,820 ಜನಸಂಖ್ಯೆಯನ್ನು ಹೊಂದಿತ್ತು. ಒಟ್ಟು ಜನಸಂಖ್ಯೆಯಲ್ಲಿ 54% ಪುರುಷರೂ ಮತ್ತು 46% ಮಹಿಳೆಯರೂ ಇದ್ದಾರೆ. ಗುರಗಾಂವ್‌ 77% ಸರಾಸರಿ ಸಾಕ್ಷರತಾ ಪ್ರಮಾಣವನ್ನು ಹೊಂದಿದ್ದು, ರಾಷ್ಟ್ರೀಯ ಸರಾಸರಿಯಾದ 59.5% ಕ್ಕಿಂತ ಹೆಚ್ಚಿಗಿದೆ. ಪುರುಷರ ಸಾಕ್ಷರತೆ ಪ್ರಮಾಣ 81% ಮತ್ತು ಮಹಿಳಾ ಸಾಕ್ಷರತೆ ಪ್ರಮಾಣ 73% ರಷ್ಟಿದೆ. ಗುರಗಾಂವ್‌ನಲ್ಲಿ ಜನಸಂಖ್ಯೆಯ 13%ರಷ್ಟು 6 ವರ್ಷ ವಯೋಮಿತಿಗಿಂತ ಕೆಳಗಿನವರು.

ಜನಾಂಗೀಯತೆ

[ಬದಲಾಯಿಸಿ]

ಗುರಗಾಂವ್ ಮ‌ೂಲ ನಿವಾಸಿಗಳು ವಿವಿಧ ಸಮುದಾಯದ ಜನವರ್ಗಕ್ಕೆ ಸೇರಿದ್ದಾರೆ, ಆದರೆ 49% ನಿವಾಸಿಗಳು ದೊಡ್ಡ ಸಮುದಾಯವಾದ ಯಾದವ ಜಾತಿಗೆ ಸೇರಿದ್ದು, ಉಳಿದ 40% ರಷ್ಟು ಜನರು ಗುಜ್ಜಾರ್‌ಗಳು, ಜಾಟರು, ಸೈನಿ ಮತ್ತು ರಜಪೂತರಿದ್ದಾರೆ ಮತ್ತು ಪ್ರತಿಯೊಂದು ಗ್ರಾಮದಲ್ಲೂ ಸಣ್ಣ ಅಥವಾ ದೊಡ್ಡ ಪ್ರಮಾಣದಲ್ಲಿ ದಲಿತ ಜನಾಂಗದವರಿದ್ದಾರೆ. ದೇಶ ವಿಭಜನೆಗಿಂತ ಮುಂಚೆ ಗುರಗಾಂವ್‌ನಲ್ಲಿ ಗಣನೀಯವಾಗಿ ಮುಸ್ಲಿಂ ಜನಸಂಖ್ಯೆಯಿತ್ತು; ಅವರಲ್ಲಿ ಬಹುತೇಕ ಮಂದಿ 1857ರಲ್ಲಿ ರಕ್ತಮಯ ಸ್ವಾತಂತ್ರ್ಯ ಹೋರಾಟದ ಬಳಿಕ ದೆಹಲಿ ಮತ್ತು ವಾಯವ್ಯ ಪ್ರಾಂತ್ಯಗಳಿಂದ (ಈಗ ಉತ್ತರ ಪ್ರದೇಶ)ಬಂದು ಇಲ್ಲಿ ವಾಸ್ತವ್ಯ ಹೂಡಿದ್ದರು. ದೇಶ ವಿಭಜನೆಯ ಬಳಿಕ ಈ ಮಂದಿ ಪಾಕಿಸ್ತಾನಕ್ಕೆ ವಲಸೆ ಹೋದರು (ಅನೇಕ ಮಂದಿ ಪಟೌಡಿ ಮತ್ತು ಫಿರೋಜ್‌ಪುರ್ ಜಿರ್ಕಾ ರಾಜ್ಯಗಳಲ್ಲಿ ಉಳಿದರು); 1947ರಲ್ಲಿ ದೇಶ ವಿಭಜನೆಯಾದ ಬಳಿಕ ಇಲ್ಲಿಗೆ ಆಗಮಿಸಿದ ಸಾವಿರಾರು ಪಂಜಾಬಿಗಳು (ಪಾಕಿಸ್ತಾನ ಪಂಜಾಬಿನ ಹಿಂದು ವಲಸೆಗಾರರು)ಇಲ್ಲಿ ವಾಸ್ತವ್ಯ ಹೂಡಿದರು, ಆದರೆ ಇಂದು ಇಲ್ಲಿ ವಿಶ್ವದಾದ್ಯಂತದ ಜನರು ಬಂದು ತಳವೂರಿದ್ದಾರೆ.[೧೧][೧೨]

ಆಡಳಿತ ಮತ್ತು ರಾಜಕೀಯ

[ಬದಲಾಯಿಸಿ]

ಹರಿಯಾಣ ಭಾರತದ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಐದು ಸ್ಥಾನಗಳನ್ನು ಹೊಂದಿದೆ ಮತ್ತು ಕೆಳಮನೆ ಲೋಕಸಭೆಯಲ್ಲಿ 10 ಸ್ಥಾನಗಳನ್ನು ಹೊಂದಿದೆ. ಹರಿಯಾಣದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಬಹುಜನ್ ಸಮಾಜ ಪಕ್ಷ, ಹರಿಯಾಣ ಜನಹಿತ ಕಾಂಗ್ರೆಸ್, ಭಾರತೀಯ ಜನತಾಪಕ್ಷ ಮತ್ತು ಭಾರತೀಯ ರಾಷ್ಟ್ರೀಯ ಲೋಕದಳ ಪ್ರಮುಖ ರಾಜಕೀಯ ಪಕ್ಷಗಳಾಗಿವೆ. ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಆಳ್ವಿಕೆಯಡಿಯಲ್ಲಿ ಹರಿಯಾಣ ಸ್ಥಿರ ಸರ್ಕಾರವನ್ನು ಹೊಂದಿದೆ, ಮತ್ತು ಈಚೆಗೆ ಗುರಗಾಂವ್‌ ಲೋಕಸಭಾ ಕ್ಷೇತ್ರದಿಂದ ರಾವ್ ಇಂದ್ರಜಿತ್ ಸಿಂಗ್ ಸಂಸತ್ತಿಗೆ ಹೊಸದಾಗಿ ಆಯ್ಕೆಯಾಗಿದ್ದಾರೆ.

ಆರ್ಥಿಕತೆ

[ಬದಲಾಯಿಸಿ]
ಗುರಗಾಂವ್‌ನಲ್ಲಿ ಪ್ರಮುಖ ಕಚೇರಿ ಸಂಕೀರ್ಣ.ಅತೀ ದೊಡ್ಡ ಕ್ಷೇತ್ರವಾಗಿ IT ಸೇವೆಗಳು ರೂಪುಗೊಂಡಿದ್ದು, ಅದಕ್ಕೆ ನಿಕಟವಾಗಿ ಚಿಲ್ಲರೆ ಮಾರಾಟ ಕ್ಷೇತ್ರ ಸ್ಥಾಪನೆಯಾಗಿದೆ.
DLF ನಗರ ಹಂತ III, ಸೈಬರ್ ಗ್ರೀನ್ಸ್

ಹರಿಯಾಣ ಸರ್ಕಾರದ ಅನುಕೂಲಕರ ತೆರಿಗೆ ನೀತಿ, ಹರಿಯಾಣ ಸರ್ಕಾರದ ಮೇಲೆ ರಾಜೀವ್ ಗಾಂಧಿ ಒತ್ತಡ ಹಾಕಿದ ಬಳಿಕ ಖಾಸಗಿ ಕಂಪೆನಿಗಳಿಂದ ಕಟ್ಟಡಗಳ ನಿರ್ಮಾಣ, ಮಾಧ್ಯಮಗಳು ಒತ್ತಡ ಹೇರಿದ ನಂತರ ಹರಿಯಾಣ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದ ಮ‌ೂಲಸೌಲಭ್ಯದಲ್ಲಿ ಸುಧಾರಣೆ ಮತ್ತು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಗರದ ಸಾಮೀಪ್ಯತೆಯಿಂದಾಗಿ ಗುರಗಾಂವ್ ವಿಶ್ವದಲ್ಲೇ ಅತ್ಯಂತ ಪ್ರಮುಖ ಹೊರಗುತ್ತಿಗೆ ಮತ್ತು ಸಾಗರೋತ್ತರ ವ್ಯವಹಾರ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಲು ಸಾಧ್ಯವಾಯಿತು. ಸ್ಥಿರಾಸ್ತಿ, ವಾಹನೋದ್ಯಮ, ಚಿಲ್ಲರೆ ಉದ್ಯಮ ಮತ್ತು ಬ್ಯಾಂಕಿಂಗ್ ಇತರ ಪ್ರಮುಖ ಉದ್ಯಮಗಳು. ಹರಿಯಾಣ ಸರ್ಕಾರಕ್ಕೆ ಸಂದಾಯವಾಗುವ ತೆರಿಗೆ ಆದಾಯದಲ್ಲಿ 50%ರಷ್ಟು ಗುರಗಾಂವ್‌ನಿಂದಲೇ ಬರುತ್ತದೆ, ಇದೇ ಸಾಲಲ್ಲಿ ಫರೀದಾಬಾದ್ ಕೂಡ ಇದೆ.[೧೩] ಇಲ್ಲಿನ ಗುತ್ತಿಗೆ ಕಂಪೆನಿಗಳ ವಿತರಣೆಯು ಈಗ ಐಟಿಯೇತರ ಸೇವೆಗಳತ್ತ ವಾಲಿಕೊಂಡಿದೆ.[ಸೂಕ್ತ ಉಲ್ಲೇಖನ ಬೇಕು] GE ಕ್ಯಾಪಿಟಲ್‌ನ ಭಾರತೀಯ ಮ‌ೂಲದ ಉದ್ಯಮ ಪ್ರಕ್ರಿಯೆ ಸೇವೆಗಳ ನಿರ್ವಹಣೆಗಳಾಗಿ GE ಕ್ಯಾಪಿಟಲ್ ಅಂತಾರಾಷ್ಟ್ರೀಯ ಸೇವೆಗಳು(GECIS) 1997ರಲ್ಲಿ ಗುರಗಾಂವ್‌ನಲ್ಲಿ ಸ್ಥಾಪನೆಯಾದಾಗ ಭಾರತದಲ್ಲಿ ಮೊದಲ ಬಾರಿಗೆ ಹೊರಗುತ್ತಿಗೆ ಉದ್ಯಮ ಚಿಗುರೊಡೆಯಿತು.[ಸೂಕ್ತ ಉಲ್ಲೇಖನ ಬೇಕು] 2005ರಲ್ಲಿ GECIS ಜೆನ್‌ಪ್ಯಾಕ್ಟ್ ಎಂಬ ಸ್ವತಂತ್ರ ಕಂಪನಿಯಾಗಿ ರೂಪು ತಳೆದು, ಈಗ ಗುರಗಾಂವ್‌ನಲ್ಲಿ ಮುಖ್ಯ ಕಚೇರಿಯನ್ನು ಹೊಂದಿದೆ. ಇತರೆ ಅನೇಕ ಸಂಸ್ಥೆಗಳು ನಗರದಲ್ಲಿ ಸ್ಥಾಪನೆಯಾದ ಬಳಿಕ ಈ ಪ್ರವೃತ್ತಿ ಮುಂದುವರಿಯಿತು. ಗುರಗಾಂವ್‌ ಪ್ರಮುಖ ಉತ್ಪಾದನಾ ಕೈಗಾರಿಕೆಯನ್ನು ಕೂಡ ಹೊಂದಿದೆ. ಕಾರು ತಯಾರಿಕೆ ಸೌಲಭ್ಯಗಳಲ್ಲಿ ಭಾರತದ ಅತೀ ದೊಡ್ಡ ಕಾರು ಕಂಪೆನಿಯಾದ ಮಾರುತಿ ಸುಜುಕಿ ಮತ್ತು BMW, ಅಲ್ಲದೆ ಮೋಟರ್ ಸೈಕಲ್ ಕಂಪೆನಿ ಹೀರೋ ಹೋಂಡಾ ಕೂಡ ಗುರಗಾಂವ್‌ನಲ್ಲಿ ಮ‌ೂಲ ಘಟಕವನ್ನು ಹೊಂದಿದೆ. ಚಿಲ್ಲರೆ ಮಾರಾಟ ಗುರಗಾಂವ್‌ನ ಇನ್ನೊಂದು ದೊಡ್ಡ ಉದ್ಯಮವಾಗಿದ್ದು, ಅತೀ ದೊಡ್ಡ ಭಾರತದ ಮಳಿಗೆ (ಮಾಲ್‌) ಸೇರಿದಂತೆ 43 ಮಳಿಗೆಗಳನ್ನು ಗುರಗಾಂವ್ ಹೊಂದಿದೆ. ಭಾರತದ ನಗರವೊಂದರಲ್ಲಿ 3ನೇ ಅತ್ಯಧಿಕ ಮಳಿಗೆಗಳನ್ನು ಹೊಂದಿದ ನಗರವೆಂಬ ಹೆಗ್ಗಳಿಕೆಗೆ ಅದು ಪಾತ್ರವಾಗಿದೆ.[೧೪]

ನಗರೀಕರಣ

[ಬದಲಾಯಿಸಿ]

ದೆಹಲಿಯ ನೈರುತ್ಯಕ್ಕೆ ಆರಂಭದಲ್ಲಿ ಸಣ್ಣ ಕೃಷಿಯಾಧಾರಿತ ಗ್ರಾಮವಾಗಿದ್ದ ಗುರಗಾಂವ್, ಸ್ಥಿರಾಸ್ತಿ ವಹಿವಾಟು ಸಂಸ್ಥೆ DLF ಸಮ‌ೂಹ ಸ್ಥಳೀಯ ಜನರ[ಸೂಕ್ತ ಉಲ್ಲೇಖನ ಬೇಕು] ಒಡೆತನದ ಕೃಷಿಭೂಮಿಗಳನ್ನು ಖರೀದಿಸಿ, ಗೃಹ ನಿರ್ಮಾಣ ಸಂಘಗಳ ನಿರ್ಮಾಣ ಆರಂಭಿಸಿದ ಬಳಿಕ ನಗರದ ಜನಸಂಖ್ಯೆ ಮತ್ತು ಆರ್ಥಿಕತೆಯಲ್ಲಿ ಭಾರೀ ಏರುಮುಖ ಕಂಡು ಬಂತು.ಹಿಂದುಗಳು ಮತ್ತು ಮೊಘಲ್ ಅಧಿಪತ್ಯದ ಕಾಲಗಳಲ್ಲಿ ಗುರಗಾಂವ್ ನಗರವು ಬಹುತೇಕ ದೇವಸ್ಥಾನಗಳು ಮತ್ತು ಕೋಟೆಗಳಿಂದ ಕೂಡಿದ್ದು, ಕೋಟೆಗಳನ್ನು ದೆಹಲಿಯ ಭದ್ರತೆಗೆ ತಡೆಗೋಡೆಯಾಗಿ ಬಳಸಲಾಗುತ್ತಿತ್ತು. ಗುರಗಾಂವ್‌ನ ಪ್ರಸಕ್ತ ನಗರವು ಮಹಾನಗರ ಪ್ರದೇಶವೆಂದು ಪರಿಗಣಿತವಾಗಿದ್ದು, ಮ‌ೂಲನಗರದ ಸುತ್ತಮುತ್ತಲ ಪ್ರತಿಯೊಂದು ಪ್ರದೇಶವನ್ನು ಆವರಿಸಿಕೊಂಡು, ನೆರೆಹೊರೆಯ ಹೊಸ ಪ್ರದೇಶಗಳು ಮತ್ತು ಜಿಲ್ಲೆಗಳ ಸ್ಥಾಪನೆಯೊಂದಿಗೆ ಮತ್ತಷ್ಟು ವಿಸ್ತರಣೆ ಹೊಂದಿದೆ.

ಸಾರಿಗೆ

[ಬದಲಾಯಿಸಿ]
ಗುರಗಾಂವ್ ಮತ್ತು ದೆಹಲಿ ನಡುವೆ 8 ಲೇನ್ ಎಕ್ಸ್‌ಪ್ರೆಸ್ ಹೆದ್ದಾರಿ
ರಾಷ್ಟ್ರೀಯ ಹೆದ್ದಾರಿ 8ರಲ್ಲಿರುವ 32 ಲೇನ್ ಟಾಲ್ ಗೇಟ್ ಏಷ್ಯಾದಲ್ಲೇ ಅತೀ ದೊಡ್ಡದಾಗಿದ್ದು, ವಿಶ್ವದಲ್ಲೇ ಮ‌ೂರನೇ ದೊಡ್ಡ ಸ್ಥಾನ ಪಡೆದಿದೆ.

ವೈಮಾನಿಕ

[ಬದಲಾಯಿಸಿ]

ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಗರ ಕೇಂದ್ರದಿಂದ 10 ಕಿಮೀ ದೂರದಲ್ಲಿದೆ.

ರಸ್ತೆ

[ಬದಲಾಯಿಸಿ]

ದೆಹಲಿ ಮತ್ತು ಗುರಗಾಂವ್ ನಡುವೆ 8 ಲೇನ್ ಎಕ್ಸ್‌ಪ್ರೆಸ್ ಹೆದ್ದಾರಿಯಿದ್ದು, NH‌8ಕ್ಕೆ ಸಂಪರ್ಕ ಕಲ್ಪಿಸಿದೆ. (ದೆಹಲಿ-ಜೈಪುರ್-ಮುಂಬಯಿ ರಾಷ್ಟ್ರೀಯ ಹೆದ್ದಾರಿ). ಎಕ್ಸ್‌ಪ್ರೆಸ್ ಹೆದ್ದಾರಿಯು ದೆಹಲಿಯ ದೌಲಾಕಾನ್‌ವರೆಗೆ 28 ಕಿ.ಮೀ ದೂರದ ಸಂಪರ್ಕ ಹೊಂದಿದೆ. ಗುರಗಾಂವ್ ಬಸ್ ನಿಲ್ದಾಣದಿಂದ ದೆಹಲಿ ಮತ್ತು ಹರಿಯಾಣದ ನಗರಗಳು ಮತ್ತು ಪಟ್ಟಣಗಳು ಮತ್ತು ನೆರೆಯ ರಾಜ್ಯಗಳಿಗೆ ಬಸ್‌ಗಳ ಸಂಪರ್ಕ ಹೊಂದಿದೆ.ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಜೈಪುರದವರೆಗೆ (225.6 ಕಿಮೀ)ವಿಸ್ತರಿಸಲಾಗಿದೆ ಮತ್ತು ಜೂನ್ 2011ರ ವೇಳೆಗೆ ಕಾಮಗಾರಿ ಮುಗಿಯಲಿದೆ.[೧೫][೧೬]

ಮ‌ೂಲ ನಗರದ ಪಶ್ಚಿಮ ಕೊನೆಯಲ್ಲಿರುವ ಗುರಗಾಂವ್ ರೈಲ್ವೆ ನಿಲ್ದಾಣ ದಕ್ಷಿಣಾಭಿಮುಖವಾಗಿ ರೆವಾರಿಯನ್ನು ಮತ್ತು ದೆಹಲಿಯನ್ನು ಸಂಪರ್ಕಿಸುತ್ತದೆ.

ಸ್ಥಳೀಯ ಸಾರಿಗೆ

[ಬದಲಾಯಿಸಿ]
ರೇಡಿಯೊ ಟ್ಯಾಕ್ಸಿ
ಸದ್ಯದಲ್ಲೇ ಬರಲಿದೆ ದೆಹಲಿ ಮೆಟ್ರೊ

ಬಸ್‌ಗಳು

[ಬದಲಾಯಿಸಿ]

ನಗರದ ಮುಖ್ಯ ಬಸ್ ಡಿಪೊ ದೆಹಲಿ, ಜೈಪುರ, ಆಳ್ವಾರ್ ಮತ್ತು ಚಂಡೀಗಢ ಸೇರಿದಂತೆ ನೆರೆಯ ಪಟ್ಟಣಗಳಿಗೆ ಸಂಪರ್ಕ ಹೊಂದಿದೆ. ರೋಹ್ಟಕ್, ಜಮ್ಮು,ಫರೀದಾಬಾದ್, ಧಾರುರಾ ಮತ್ತಿತರ ಸ್ಥಳಗಳಿಗೆ ಕೂಡ ಬಸ್ ಸಾರಿಗೆ ಹೊಂದಿದೆ. ಇತ್ತೀಚೆಗೆ, ಗುರಗಾಂವ್ ಆಡಳಿತ ಮತ್ತು ಹರಿಯಾಣ ರೋಡ್‌ವೇಸ್ ಹಲವಾರು ಅಶೋಕ್ ಲೇಲ್ಯಾಂಡ್‌ನ ಲೋ ಫ್ಲೋರ್ ಬಸ್‌ಗಳನ್ನು ಖರೀದಿಸಿದೆ ಮತ್ತು ನ್ಯೂಗುರಗಾಂವ್‌ನಲ್ಲಿ ನಗರ ಬಸ್ ಸಂಚಾರದ ಹೊಸ ಮಾರ್ಗಗಳನ್ನು ಆರಂಭಿಸಿದ್ದು, ಆ ಮಾರ್ಗಗಳು MG ರಸ್ತೆಯನ್ನು DLF ನಗರ ಮತ್ತು ಯ‌ೂನಿಟೆಕ್ ಅಂತಾರಾಷ್ಟ್ರೀಯ ವಾಣಿಜ್ಯ ಪಾರ್ಕ್ ಮುಂತಾದ ಅನೇಕ ವಾಣಿಜ್ಯ ಪಾರ್ಕ್‌ಗಳ ಜತೆ ಸಂಪರ್ಕಿಸಿದೆ.[೧೭]. ದೆಹಲಿ ಸಾರಿಗೆ ನಿಗಮವು ದೆಹಲಿ-ಗುರಗಾಂವ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಕೂಡ ಬಸ್‌ಗಳನ್ನು ಓಡಿಸುತ್ತದೆ.[೧೮]

ಮೆಟ್ರೊ

[ಬದಲಾಯಿಸಿ]

ಗುರಗಾಂವ್‌‌ನಲ್ಲಿ ಎರಡು ಮೆಟ್ರೊ ಯೋಜನೆಗಳು ಸಾಗಿವೆ. ದೆಹಲಿ ಮೆಟ್ರೊಯೆಲ್ಲೊ ಲೈನ್ ಗುರಗಾಂವ್‌ಗೆ ವಿಸ್ತರಿಸಲಾಗಿದ್ದು, MG ರಸ್ತೆಯಲ್ಲಿ ಐದು ನಿಲ್ದಾಣಗಳಿವೆ. ಈ ಮಾರ್ಗವು 2010ರಲ್ಲಿ ಮುಕ್ತಾಯವಾಗುವುದೆಂದು ನಿರೀಕ್ಷಿಸಲಾಗಿದೆ.[೧೯] ಇದರ ಜತೆಗೆ ಖಾಸಗಿ ಒಡೆತನ ಮತ್ತು ನಿರ್ವಹಣೆಯ, DLF ಆರ್ಥಿಕ ನೆರವು ಹೊಂದಿದ ಗುರಗಾಂವ್ ಮೆಟ್ರೊ ರೈಲು ಸಂಪರ್ಕವು ದೆಹಲಿ ಮೆಟ್ರೊನ ಸಿಕಂದರ್ ನಿಲ್ದಾಣವನ್ನು 6 ಕಿಮೀ ಎತ್ತರಿಸಿದ ಸಂಪರ್ಕದಲ್ಲಿ 6 ನಿಲ್ದಾಣಗಳೊಂದಿಗೆ NH-8ಕ್ಕೆ ಸಂಪರ್ಕ ಕಲ್ಪಿಸಲು ಯೋಜಿಸಿದೆ.[೨೦]

ಶಿಕ್ಷಣ

[ಬದಲಾಯಿಸಿ]

ದೆಹಲಿಯ ಶಾಲೆಗಳು ಮತ್ತು ಉನ್ನತ ಶೈಕ್ಷಣಿಕ ಸಂಸ್ಥೆಗಳು ಶಿಕ್ಷಣ ನಿರ್ದೇಶನಾಲಯ ಮಂಡಳಿ, NCT ಸರಕಾರ, ಅಥವಾ ಖಾಸಗಿ ಸಂಸ್ಥೆಗಳಿಂದ ನಿರ್ವಹಿಸಲ್ಪಡುತ್ತದೆ.ವ್ಯವಸ್ಥಾಪನೆ ಅಭಿವೃದ್ದಿ ಸಂಸ್ಥೆ; ITM ತಂತ್ರಜ್ಞಾನ ಮತ್ತು ವ್ಯವಸ್ಥಾಪನೆ ಸಂಸ್ಥೆ;ಗುರಗಾಂವ್ ತಂತ್ರಜ್ಞಾನ ಮತ್ತು ವ್ಯವಸ್ಥಾಪನೆ ಸಂಸ್ಥೆ; IlMS(ರಾಷ್ಟ್ರೀಯ ಕಾನೂನು ಕಾಲೇಜು ಎಂದು ಮುಂಚೆ ಹೆಸರಾಗಿದ್ದ ಕಾನೂನು ಮತ್ತು ವ್ಯವಸ್ಥಾಪನೆ ಅಧ್ಯಯನ ಸಂಸ್ಥೆ); IIlM ಉನ್ನತ ಶಿಕ್ಷಣ ಸಂಸ್ಥೆ, ದ್ರೋಣಾಚಾರ್ಯ ಉನ್ನತ ಶಿಕ್ಷಣ ಸಂಸ್ಥೆ, ದ್ರೋಣಾಚಾರ್ಯ ಎಂಜಿನಿಯರಿಂಗ್ ಕಾಲೇಜು, JK ಬಿಸಿನೆಸ್ ಶಾಲೆ(ಸೋಹ್ನಾ ರಸ್ತೆ)ಗಳಿಗೆ ಆವಾಸಸ್ಥಾನವಾಗಿದೆ.ನಗರದಲ್ಲಿ ಪ್ರತಿಷ್ಠಿತ ಪ್ರಾಥಮಿಕ, ಮಾಧ್ಯಮಿಕ, ಸೆಕೆಂಡರಿ ಮತ್ತು ಪ್ರೌಢಶಾಲೆಗಳು ಕೂಡ ಇವೆ. ಡೆಲ್ಲಿ ಪಬ್ಲಿಕ್ ಸ್ಕೂಲ್ ಮತ್ತು ಮದರ್ಸ್ ಪ್ರೈಡ್ ಅಂತಹ ಎರಡು ಉದಾಹರಣೆಗಳು.

ಗುರಗಾಂವ್‌ ಜನಜೀವನ

[ಬದಲಾಯಿಸಿ]
ಟ್ರೈಡೆಂಟ್ ಹೊಟೇಲ್ ಗುರಗಾಂವ್‌

ಶಾಪಿಂಗ್

[ಬದಲಾಯಿಸಿ]

ಗುರಗಾಂವ್ ಭಾರತದ ವ್ಯಾಪಾರ ಮಳಿಗೆ ರಾಜಧಾನಿ ಎಂದು ಪರಿಗಣಿತವಾಗಿದ್ದು, ಅತೀ ದೊಡ್ಡ ಮಾಲ್ ಆಫ್ ಇಂಡಿಯ ಸೇರಿದಂತೆ 40 ಮಳಿಗೆಗಳಿಗೆ ಇದು ನೆಲೆಯಾಗಿದೆ. ವಿದ್ಯುತ್ ಉಳಿತಾಯ ಮತ್ತು ಮುಕ್ತವಾಹನ ಸಂಚಾರಕ್ಕೆ ನೆರವಾಗಲು ಪ್ರತಿವಾರ ಒಂದು ದಿನ ಎಲ್ಲ ಮಳಿಗೆಗಳನ್ನು ಮತ್ತು ಶಾಪಿಂಗ್ ಕೇಂದ್ರಗಳನ್ನು ಮುಚ್ಚುವ ಅಗತ್ಯದ ಬಗ್ಗೆ ಮಾರ್ಚ್ 2008ರಲ್ಲಿ ಕಾನೂನೊಂದು ಜಾರಿಗೆ ಬಂದಿದ್ದರಿಂದ ಎಲ್ಲ ಮಳಿಗೆಗಳನ್ನು ಮತ್ತು ಮಾರಾಟ ಕೇಂದ್ರಗಳನ್ನು ಮಂಗಳವಾರ ಮುಚ್ಚಲಾಗುತ್ತದೆ.

ಜಿಲ್ಲಾಡಳಿತ

[ಬದಲಾಯಿಸಿ]
  • ಭಾರತೀಯ ಆಡಳಿತಾತ್ಮಕ ಸೇವೆಗೆ ಸೇರಿದ ಅಧಿಕಾರಿಯಾದ ಜಿಲ್ಲಾ ವರಿಷ್ಠ ಜಿಲ್ಲೆಯ ಸಾಮಾನ್ಯ ಆಡಳಿತದ ಸಂಪೂರ್ಣ ಉಸ್ತುವಾರಿ ಹೊಂದಿದ್ದಾರೆ. ಹರಿಯಾಣ ನಾಗರಿಕ ಸೇವೆ ಮತ್ತಿತರ ಹರಿಯಾಣ ಸರ್ಕಾರಿ ಸೇವೆಗಳಿಗೆ ಸೇರಿದ ಅನೇಕ ಅಧಿಕಾರಿಗಳು ಅವರಿಗೆ ನೆರವಾಗುತ್ತಾರೆ.
  • ಇತ್ತೀಚಿನವರೆಗೆ,ಭಾರತೀಯ ಪೊಲೀಸ್ ಸೇವೆಗೆ ಸೇರಿದ ಅಧಿಕಾರಿಯಾದ ಪೊಲೀಸ್ ಸೂಪರಿಂಟೆಂಡೆಂಟ್ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಂಬಂಧಿತ ವಿಷಯಗಳ ಪಾಲನೆಯ ಹೊಣೆ ವಹಿಸಿದ್ದರು. ಅವರಿಗೆ ಹರಿಯಾಣ ಪೊಲೀಸ್ ಸೇವೆಯ ಅಧಿಕಾರಿಗಳು ಮತ್ತಿತರ ಹರಿಯಾಣ ಪೊಲೀಸ್ ಅಧಿಕಾರಿಗಳು ನೆರವಾಗುತ್ತಿದ್ದರು. ಜೂನ್ 2007ರಿಂದೀಚೆಗೆ ದೆಹಲಿ ಮತ್ತು ಪುಣೆಯಲ್ಲಿರುವಂತೆ ಪೊಲೀಸ್ ಆಯುಕ್ತ ವ್ಯವಸ್ಥೆಗೆ ಪೊಲೀಸ್ ವ್ಯವಸ್ಥೆಯು ಪರಿವರ್ತನೆಯಾಯಿತು. ಗುರಗಾಂವ್‌ನಲ್ಲಿ ಈಗ IPS ಕೇಡರ್‌ನ ಪೊಲೀಸ್ ಆಯುಕ್ತರು ಮತ್ತು ಮ‌ೂವರು ಸಹಾಯಕ ಆಯುಕ್ತರು(ACP)ಇದ್ದಾರೆ.
  • ಭಾರತೀಯ ಅರಣ್ಯ ಸೇವೆಗೆ ಸೇರಿದ ಅಧಿಕಾರಿಯಾದ ಅರಣ್ಯಗಳ ಉಪಸಂರಕ್ಷಕರು ಜಿಲ್ಲೆಯಲ್ಲಿ ಅರಣ್ಯಗಳು, ಪರಿಸರ ಮತ್ತು ವನ್ಯಜೀವಿ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ ಅವರಿಗೆ ಹರಿಯಾಣ ಅರಣ್ಯಸೇವೆಯ ಅಧಿಕಾರಿಗಳು ಮತ್ತಿತರ ಹರಿಯಾಣ ಅರಣ್ಯ ಅಧಿಕಾರಿಗಳು ಮತ್ತು ಹರ್ಯಾಣ ವನ್ಯಜೀವಿ ಅಧಿಕಾರಿಗಳು ನೆರವಾಗುತ್ತಾರೆ.
  • PWD], ಆರೋಗ್ಯ, ಶಿಕ್ಷಣ, ಕೃಷಿ, ಪಶುಸಂಗೋಪನೆ ಇತರೆ, ಮುಂತಾದ ಪ್ರತಿ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮುಖ್ಯಸ್ಥರು/ಅಧಿಕಾರಿ ವಲಯ ಅಭಿವೃದ್ಧಿಯ ಉಸ್ತುವಾರಿ ವಹಿಸುತ್ತಾರೆ. ಈ ಅಧಿಕಾರಿಗಳು ಹರಿಯಾಣ ರಾಜ್ಯಸೇವೆಗಳಿಗೆ ಸೇರಿದವರಾಗಿದ್ದಾರೆ.
  • ಗುರಗಾಂವ್‌ ಸ್ವತಃ ಸಂಸತ್ ಸದಸ್ಯರನ್ನು ಹೊಂದಿದೆ(ನಗರವು ಗುರಗಾಂವ್ ಸಂಸದೀಯ ಕ್ಷೇತ್ರದ ಸಣ್ಣ ಭಾಗವಾಗಿದೆ ಮತ್ತು ರಾಜ್ಯ ವಿಧಾನಸಭೆಯಲ್ಲಿ ಗುರಗಾಂವ್ ಮತ್ತು ಬಾದ್‌ಶಾಹಪುರ್ ವಿಧಾನಸಭೆ ಕ್ಷೇತ್ರಗಳನ್ನು ಪ್ರತಿನಿಧಿಸುತ್ತದೆ). ಈ ನಗರದಲ್ಲಿ ವಾಸಿಸುವ ಭಾರತೀಯ ಪೌರರು ಮತದಾನದ ಹಕ್ಕನ್ನು ಹೊಂದಿದ್ದಾರೆ.[೨೧]

ಮಾಧ್ಯಮ

[ಬದಲಾಯಿಸಿ]

ರಾಜಧಾನಿ ನಗರಕ್ಕೆ ಸಾಮೀಪ್ಯ ಹೊಂದಿರುವುದರಿಂದ, ಗುರಗಾಂವ್ ಸಮೀಪದ ದೆಹಲಿ ಜತೆ ಮಾಧ್ಯಮ ಹೊರದಾರಿಗಳನ್ನು ಹಂಚಿಕೊಂಡಿದೆ.

ಕ್ರೀಡೆಗಳು ಮತ್ತು ಮನರಂಜನೆ

[ಬದಲಾಯಿಸಿ]

ಗುರಗಾಂವ್‌ ಎರಡು 18 ಹೋಲ್ ಗಾಲ್ಫ್ ಕೋರ್ಸ್‌ಗಳನ್ನು ಹೊಂದಿದ್ದು, DLF ಗಾಲ್ಫ್ ಮತ್ತು ಕಂಟ್ರಿ ಕ್ಲಬ್‌ನಲ್ಲಿ 2008ನೇ ಜಾನಿ ವಾಕರ್ ಕ್ಲಾಸಿಕ್ ಆತಿಥ್ಯ ವಹಿಸಿತ್ತು. ಆಗಸ್ಟ್ 2009ರಲ್ಲಿ DLF ಲಿಮಿಟೆಡ್ ಮನರಂಜನೆ ಮತ್ತು ವಿರಾಮ ಉದ್ಯಾನದ ನಿರ್ಮಾಣಕ್ಕಾಗಿ 1750 ಕೋಟಿ INR ($361.6m) ಮೌಲ್ಯದ 350 ಎಕರೆ(141.64 ಹೆಕ್ಟೇರ್)ನಿವೇಶನವನ್ನು ಪಡೆಯಿತು.[೨೨] DLF 7 ವರ್ಷಗಳು ಮತ್ತು ಇನ್ನೂ 1700 ಕೋಟಿ INR ಖರ್ಚು ಮಾಡಿ ಯೋಜನೆಯನ್ನು ಮುಗಿಸಲಿದೆ.[೨೩]

ಇದನ್ನೂ ನೋಡಿರಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ಗುರಗಾಂವ್ 2009 ಕುರಿತ BBC ಸುದ್ದಿ ವರದಿ
  2. ೨.೦ ೨.೧ ೨.೨ ೨.೩ http://businesstoday.intoday.in/index.php?option=com_content&task=view&id=11654&issueid=62&sectionid=22
  3. "ಆರ್ಕೈವ್ ನಕಲು". Archived from the original on 2013-10-05. Retrieved 2021-09-05.
  4. ಬಿಸಿನೆಸ್ ಟುಡೆ-ಗುರಗಾಂವ್ ಉದ್ಯೋಗ ಮತ್ತು ವಾಸಕ್ಕೆ ಉತ್ತಮ ನಗರ
  5. ವಾಸಿಸಲು,ಕೆಲಸಮಾಡಲು ಮತ್ತು ಆಟವಾಡಲು ಉತ್ತಮ ನಗರಗಳು ಕುರಿತ ಬಿಸಿನೆಸ್ ಟುಡೆ ಲೇಖನ
  6. https://dsal.uchicago.edu/reference/gazetteer/pager.html?objectid=DS405.1.I34_V12_409.gif
  7. "ಆರ್ಕೈವ್ ನಕಲು". Archived from the original on 2010-03-31. Retrieved 2009-12-17.
  8. ಫಾಲಿಂಗ್ ರೇನ್ ಜಿನೋಮಿಕ್ಸ್, ಇಂಕ್-ಗುರಗಾಂವ್
  9. ದೆಹಲಿ-ಭೂಮಿ-ಬೌಗೋಳಿಕ, ರಾಜಧಾನಿ,ಪ್ರದೇಶ, ಜನಸಂಖ್ಯೆ, ಸಾಕ್ಷರತೆ ಇತರೆ
  10. GRIndia
  11. http://timesofindia.indiatimes.com/Bangladeshis_will_outnumber_Marathis_in_Mumbai_warns_BJP_leader/rssarticleshow/3549836.cms
  12. "ಆರ್ಕೈವ್ ನಕಲು". Archived from the original on 2009-12-20. Retrieved 2009-12-17.
  13. ಹರಿಯಾಣದಲ್ಲಿ 50%ಗಿಂತ ಹೆಚ್ಚು IT ಫರೀದಾಬಾದ್, ಗುರಗಾಂವ್‌ನಲ್ಲಿದೆ-ಚಂದೀಗಢ್ ಟ್ರಿಬ್ಯೂನ್
  14. ಗುರಗಾಂವ್ ಕುರಿತು ಬಿಸಿನೆಸ್ ಟುಡೆ ಲೇಖನ
  15. http://economictimes.indiatimes.com/ET-Realty/Emerging-residential-destinations-to-get-high-speed-road-corridors/articleshow/4917330.cms
  16. http://www.projectsmonitor.com/detailnews.asp?newsid=17329
  17. "ಆರ್ಕೈವ್ ನಕಲು". Archived from the original on 2009-09-19. Retrieved 2009-12-17.
  18. [೧]
  19. https://archive.is/20130629110621/epaper.hindustantimes.com/Web/Article/2009/02/04/002/04_02_2009_002_005.jpg
  20. "ಗುರಗಾಂವ್‌ನ ಸ್ವಂತ ಮೆಟ್ರೊ[ಶಾಶ್ವತವಾಗಿ ಮಡಿದ ಕೊಂಡಿ]" ಹಿಂದುಸ್ತಾನ್ ಟೈಮ್ಸ್, ಜುಲೈ 15, 2009 [೨]
  21. "Gurgaon Voter List". Archived from the original on 2009-08-16. Retrieved 2009-06-23.
  22. http://www.business-standard.com/india/news/dlf-bags-gurgaon-land-for-rs-1750-cr/367664/
  23. http://www.business-standard.com/india/news/dlf-bankingland/367798/

ಬಾಹ್ಯ ಲಿಂಕ್‌ಗಳು

[ಬದಲಾಯಿಸಿ]