ಅಶೋಕ್ ಲೇಲ್ಯಾಂಡ್
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (September 2008) |
Expression error: Unexpected < operator.
ಚಿತ್ರ:Ashok Leyland logo.svg | |
ಸಂಸ್ಥೆಯ ಪ್ರಕಾರ | Public |
---|---|
ಸ್ಥಾಪನೆ | 1948 |
ಮುಖ್ಯ ಕಾರ್ಯಾಲಯ | Chennai, ತಮಿಳುನಾಡು, India |
ಪ್ರಮುಖ ವ್ಯಕ್ತಿ(ಗಳು) | R. Seshasayee, R. J. Shahaney, S. P. Hinduja , D. G. Hinduja , Vinod Dasari |
ಉದ್ಯಮ | automotive |
ಉತ್ಪನ್ನ | Automobiles Engines |
ಆದಾಯ | US$ 1.4 billion (2008-09) |
ಉದ್ಯೋಗಿಗಳು | 11,500 |
ಪೋಷಕ ಸಂಸ್ಥೆ | Hinduja Group |
ಉಪಸಂಸ್ಥೆಗಳು | Ennore foundries Limited Automotive Coaches and Components Limited Gulf-Ashley Motors Limited Ashley Holdings Limited Ashley Investments Limited Ashley Design and Engineering Services (ADES) Avia Ashok Leyland Ashok Leyland Project Services Limited Lanka Ashok Leyland[೧] |
ಅಶೋಕ್ ಲೇಲ್ಯಾಂಡ್ (ಎನ್‌ಎಸ್‌ಇ: ASHOKLEY, ಬಿಎಸ್‌ಇ: ೫೦೦೪೭೭) ಭಾರತದ ಚೆನ್ನೈ, ಮೂಲದ ಒಂದು ವಾಣಿಜ್ಯ ವಾಹನ ತಯಾರಿಕಾ ಕಂಪನಿಯಾಗಿದೆ. ೧೯೪೮ರಲ್ಲಿ ಸ್ಥಾಪಿಸಲ್ಪಟ್ಟ ಈ ಕಂಪನಿಯು ಭಾರತದಲ್ಲಿ ಟ್ರಕ್‌ಗಳು, ಬಸ್‌ಗಳು ಹಾಗೂ ತುರ್ತು ಮಿಲಿಟರಿ ವಾಹನಗಳಂತಹ ವಾಣಿಜ್ಯ ವಾಹನಗಳನ್ನು ತಯಾರು ಮಾಡುವ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ. ಅಶೋಕ್ ಲೇಲ್ಯಾಂಡ್ ಆರು ಪ್ರಮುಖ ತಯಾರಿಕಾ ಘಟಕಗಳನ್ನು ಹೊಂದಿರುವುದಲ್ಲದೇ , ಕೈಗಾರಿಕೆಗಳಲ್ಲಿ ಹಾಗೂ ಸಮುದ್ರಯಾನಗಳಲ್ಲಿ ಬಳಸುವ ಯಂತ್ರಗಳ ಬಿಡಿಭಾಗಗಳು ಮತ್ತು ಎಂಜಿನ್‌ಗಳ ತಯಾರಿಕೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದೆ. ಇದು ಪ್ರತಿ ವರ್ಷ ಸುಮಾರು ೬೦,೦೦೦ ವಾಹನಗಳನ್ನು ಮತ್ತು ೭,೦೦೦ ಎಂಜಿನ್ ಗಳನ್ನು ಮಾರಾಟ ಮಾಡುತ್ತದೆ. ಇದು ಭಾರತದ ಮಾಧ್ಯಮದಲ್ಲಿ ಎರಡನೇ ಅತಿ ದೊಡ್ಡ ವಾಣಿಜ್ಯ ವಾಹನಾ ತಯಾರಿಕಾ ಕಂಪನಿಯಾಗಿದೆ ಹಾಗೂ ಮಾರುಕಟ್ಟೆಗೆ ತನ್ನ ೨೮% (೨೦೦೭–೦೮) ಕೊಡುಗೆಯ ಮೂಲಕ ಅತಿ ದೊಡ್ಡ ವಾಣಿಜ್ಯ ವಾಹನಾ ವಲಯ (M&HCV) ಎನಿಸಿಕೊಂಡಿದೆ. ೧೯ರಿಂದ ೮೦ ಆಸನಗಳವರೆಗಿನ ಸಾರಿಗಾ ಅವಕಾಶವನ್ನು ಹೊಂದಿರುವ ಅಶೋಕ್ ಲೇಲ್ಯಾಂಡ್ ಬಸ್ ವಲಯದಲ್ಲಿ ಮಾರುಕಟ್ಟೆಯ ಪ್ರಮುಖ ಕಂಪನಿ ಎಂಬ ಖ್ಯಾತಿಯನ್ನು ಹೊಂದಿದೆ. ಈ ಕಂಪನಿಯು ಪ್ರತಿ ದಿನ ಸುಮಾರು ೬೦ ಮಿಲಿಯನ್ ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಖಾತ್ರಿ ಪಡಿಸಿದ್ದು , ಭಾರತದ ಇಡೀ ರೈಲ್ವೆ ಜಾಲಕ್ಕಿಂತಲೂ ಇದು ಹೆಚ್ಚು ಎನ್ನಲಾಗಿದೆ. ಟ್ರಕ್‌ಗಳ ವಲಯದಲ್ಲಿ ಅಶೋಕ್ ಲೇಲ್ಯಾಂಡ್ ಪ್ರಮುಖವಾಗಿ ೧೬ ಟನ್‌ಗಳಿಂದ ೨೫ಟನ್‌ಗಳವರೆಗಿನ ವ್ಯಾಪ್ತಿಯ ಟ್ರಕ್‌ಗಳ ಉತ್ಪಾದನೆಯಲ್ಲಿ ತೊಡಗಿದೆ. ಆದರೆ ಅಶೋಕ್ ಲೇಲ್ಯಾಂಡ್‌ನ ಈಗಿನ ಟ್ರಕ್ ವ್ಯಾಪ್ತಿ ೭.೫ ಟನ್‌ಗಳಿಂದ ೪೯ ಟನ್‌ಗಳ ವರೆಗೆ ಇದೆ. ಜಪಾನಿನ ನಿಸ್ಸಾನ್ ಮೋಟಾರ್ಸ್ ನೊಂದಿಗೆ ಜಂಟಿ ಕಾರ್ಯವನ್ನು ಘೋಷಿಸಿದ ನಂತರ ಹಗುರ ವಾಣಿಜ್ಯ ವಾಹನಗಳ(LCV) ವಲಯದಲ್ಲಿ (<7.5 ಟನ್ನುಗಳು) ಸುಧಾರಣೆ ಕಂಡುಬಂದಿತು.
ಇತಿಹಾಸ
[ಬದಲಾಯಿಸಿ]This section may require a complete rewrite to comply with Wikipedia's quality standards. (September 2010) |
ಭಾತರದ ಸ್ವಾತಂತ್ರದ ನಂತರ ಮೊದಲ ಪ್ರಧಾನ ಮಂತ್ರಿಗಳಾದ ಪಂಡಿತ್ ಜವಹಾರ ಲಾಲ್ ನೆಹರೂರವರು ಶ್ರೀ ರಘುನಂದನ್ ಶರಣ್ರವರನ್ನು ಸ್ವಯಂ ಯಾನ ತಯಾರಿಕೆಯನ್ನು ಪ್ರಾರಂಭಿಸುವಂತೆ ಮನವೊಲಿಸಿದರು. ೧೯೪೮ರಲ್ಲಿ ಈ ಕಂಪನಿಯು ಆಸ್ಟಿನ್ ಕಾರುಗಳ ಬಿಡಿ ಭಾಗಗಳನ್ನು ಜೋಡಿಸುವದಕ್ಕಾಗಿ ಅಶೋಕ್ ಮೋಟಾರ್ಸ್, ಎಂಬ ಹೆಸರಿನಲ್ಲಿ ಆರಂಭಗೊಂಡಿತು. ೧೯೫೫ರಲ್ಲಿ ಈ ಕಂಪನಿ ಪುನರ್ನಾಮಕರಣಗೊಂಡು ಬ್ರಿಟೀಷ್ ಲೇಲ್ಯಾಂಡ್ನ ಸಹಭಾಗಿತ್ವದೊಂದಿಗೆ ವಾಣಿಜ್ಯ ವಾಹನಗಳ ತಯಾರಿಕೆಯನ್ನು ಪ್ರಾರಂಭಿಸಿತು. ಇಂದು ಈ ಕಂಪನಿಯು ಬ್ರಿಟೀಷ್ ಆಧಾರಿತ- ಭಾರತದ ಮೂಲದ ಸಂಕ್ರಮಣ ಗುಂಪಾದ ಹಿಂದುಜಾ ಗ್ರೂಪ್ನ ಚುಕ್ಕಾಣಿಯಾಗಿದೆ. ಇದು ಉತ್ಪಾದಿಸಿದ ಮೊದಲ ಉತ್ಪನ್ನಗಳೆಂದರೆ ಟ್ರಕ್ ಚಾಸ್ಸಿಯ ಮೇಲೆ ನಿರ್ಮಾಣಗೊಂಡ ಲೇಲ್ಯಾಂಡ್ ಕಾಮೆಟ್ ಎಂಬ ಪ್ಯಾಸೆಂಜರ್ ಬಸ್. ಇದನ್ನು ಹೈದರಾಬಾದ ರಸ್ತೆ ಸಾರಿಗೆ ಸಂಸ್ಥೆ, ಅಹಮದಾಬಾದ್ ಮುನ್ಸಿಪಾಲಿಟಿ,ಟ್ರಾವಂಕೋರ್ ಸಾರಿಗೆ ಸಂಸ್ಥೆ, ಬಾಂಬೆ ರಾಜ್ಯ ಸಾರಿಗೆ ಸಂಸ್ಥೆ ಹಾಗೂ ದೆಹಲಿ ರಸ್ತೆ ಸಾರಿಗೆ ಪ್ರಾಧಿಕಾರವನ್ನೊಳಗೊಂಡಂತೆ ಅನೇಕ ಸಾರಿಗೆ ಸಂಸ್ಥೆಗಳಿಗೆ ಮಾರಾಟ ಮಾಡಲಾಯಿತು. ೧೯೬೩ರರೊಳಗಾಗಿ ಭಾರತದಲ್ಲಿ ಎಲ್ಲಾ ರಾಜ್ಯ ಸಾರಿಗೆ ಸಂಸ್ಥೆಗಳೂ ಕಾಮೆಟ್ ಅನ್ನು ಬಳಸಲು ಆರಂಭಿಸಿದ್ದವು. ಆ ವೇಳೆಗೆ ೮೦೦೦ಕ್ಕಿಂತಲೂ ಹೆಚ್ಚಿನ ಬಸ್ಸುಗಳ ಸೇವೆ ಲಭ್ಯವಾಯಿತು. ಕೆಲವೇ ದಿನಗಳೊಳಗಾಗಿ ಕಾಮೆಟ್ಲೇಲ್ಯಾಂಡ್ ಟೈಗರ್ ಎಂಬ ಇನ್ನೊಂದು ಬಗೆಯ ಉತ್ಪಾದನೆಯೊಂದಿಗೆ ಸೇರಿಕೊಂಡಿತು. ೧೯೬೮ರಲ್ಲಿ ಬ್ರಿಟನ್‌ನಲ್ಲಿ ಲೇಲ್ಯಾಂಡ್ ಟೈಟಾನ್ನ ಉತ್ಪಾದನೆ ಸ್ಥಗಿತಗೊಂಡಿತು. ಆದರೆ ಭಾರದಲ್ಲಿ ಅಶೋಕ್ ಲೇಲ್ಯಾಂಡ್ ಅದನ್ನು ಪುನಃ ಪ್ರಾರಂಭಿಸಿತು. ಟೈಟಾನ್ PD೩ನ್ನು ರೂಪಾಂತರಗೊಳಿಸಿ , ಅಶೋಕ್ ಲೇಲ್ಯಾಂಡ್‌ನ O.೬೮೦ ಎಂಜಿನ್‌ನೊಂದಿಗೆ ಒಂದು ಪಂಚ ವೇಗವುಳ್ಳ ಭಾರವಾದ ಸ್ಥಿರ-ಜಾಲರಂದ್ರ ಗಿಯರ್ ಬಾಕ್ಸ್ ನ್ನು ಬಳಸಲಾಯಿತು. ಅಶೋಕ್ ಲೇಲ್ಯಾಂಡ್‌ನ ಟೈಟಾನ್ ಅತ್ಯಂತ ಯಶಸ್ವಿಯಾಗುವುದರೊಂದಿಗೆ , ಇದರ ತಯಾರಿಕೆಯನ್ನು ಬಹಳ ಕಾಲ ಮುಂದುವರೆಸಿತು. ಅಶೋಕ್ ಲೇಲ್ಯಾಂಡ್ ವಾಹನಗಳು ಬಹಳ ವರ್ಷಗಳಿಂದಲೂ ತಮ್ಮ ಭರವಸೆ ಹಾಗೂ ದೃಡತೆಯನ್ನು ಕಾಪಾಡಿಕೊಂಡು ಬಂದಿವೆ. ತನ್ನ ತಯಾರಿಕೆಯಲ್ಲಿ ಬ್ರಿಟೀಷ್ ಲೇಲ್ಯಾಂಡ್ ನ ವಿನ್ಯಾಸ ನೀತಿಯನ್ನು ಕಾಪಾಡಿಕೊಂಡು ಬಂದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಅಶೋಕ್ ಲೇಲ್ಯಾಂಡ್ ಜಪಾನ್ ಕಂಪನಿಯ ಹಿನೋ ಮೋಟಾರ್ಸ್‌ನೊಂದಿಗೆ ಸಹಭಾಗಿತ್ವವನ್ನು ಹೊಂದಿತ್ತು. ಇದರಿಂದಲೇ H-ಸರಣಿಯ ಎಂಜಿನ್‌ಗಳ ತಂತ್ರಜ್ಞಾನವನ್ನು ಪಡೆಯಿತು. ೪ ಮತ್ತು ೬ ಸಿಲಿಂಡರ್ ಗಳುಳ್ಳ ದೇಶೀಯ H-ಸರಣಿ ಎಂಜಿನ್ ಗಳನ್ನು ಅಭಿವೃದ್ಧಿಪಡಿಸಿತು ಮತ್ತು ಅಷ್ಟೇ ಅಲ್ಲದೆ ಭಾರತದಲ್ಲಿ BS೨ ಹಾಗೂ BS೩ ಹೊರಸೂಸುವಿಕೆಯ ಆದರ್ಶಗಳಿಗೆ ಸರಿಹೊಂದುವಂತೆ ಇವುಗಳನ್ನು ವಿನ್ಯಾಸಗೊಳಿಸಲಾಗಿತ್ತು. ಈ ಎಂಜಿನ್‌ಗಳು ಗ್ರಾಹಕರಿಗೆ ಅವಶ್ಯಕವಾದ ಅತ್ಯುತ್ತಮ ಎಂಜಿನ್ ದಕ್ಷತೆಯನ್ನು ಹೊಂದಿರುವುದರಿಂದ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಗಳಿಸಿವೆ. ಅಶೋಕ್ ಲೇಲ್ಯಾಂಡ್‌ನ ಇತ್ತೀಚೆಗಿನ ಅತ್ಯಾಧುನಿಕ ಮಾದರಿಗಳೆಂದರೆ H- ಸರಣಿ ಎಂಜಿನ್‌ಗಳು. ೧೯೮೭ರಲ್ಲಿ ಪಾಶ್ಚಿಮಾತ್ಯ ಹಿಡಿತದಲ್ಲಿದ್ದ ಲ್ಯಾಂಡ್ ರೋವರ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಲ್‌ಆರ್‌ಎಲ್‌ಐಎಚ್) ಅನ್ನು ಅನಿವಾಸಿ ಭಾರತೀಯ ಸಂಕ್ರಮಣ ಗುಂಪಾದ ಹಿಂದುಜಾ ಗ್ರೂಪ್ ಮತ್ತು ಯೂರೋಪಿನ ಪ್ರಸಿದ್ಧ ಟ್ರಕ್ ಉತ್ಪಾದಕವಾದ ಮತ್ತು ಫಿಯಾಟ್ ಗ್ರೂಪ್ ನ ಭಾಗವಾದ ಐವಿಇಸಿಒ ಫಿಯಟ್ ಎಸ್‌ಪಿಎ, ನಡುವಣ ಜಂಟಿ ಕಂಪನಿಯು ಸ್ವಾಧೀನಪಡಿಸಿಕೊಂಡಿತು. ಅಶೋಕ್ ಲೇಲ್ಯಾಂಡ್‌ನ ದೀರ್ಘಕಾಲಿಕ ಯೋಜನೆಯೆಂದರೆ ಜಾಗತಿಕ ಗುಣಮಟ್ಟದ ತಂತ್ರಜ್ಞಾನವನ್ನು ಬೆಳೆಸಿ ತನ್ಮೂಲಕ ಜಾಗತಿಕ ಹಂತದಲ್ಲಿ ಗುರುತಿಸಲ್ಪಡುವುದಾಗಿದೆ. ಅಂತರಾಷ್ಟ್ರೀಯ ತಂತ್ರಜ್ಞಾನದ ಪ್ರವೇಶ ಹಾಗೂ US$೨೦೦ ಮಿಲಿಯನ್‌ನಷ್ಟು ಬಂಡವಾಳ ಹೂಡಿಕೆ ಅಂತರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳ ತಯಾರಿಕೆಗೆ ಅನುಕೂಲವಾಗುವ ವಾತಾವರಣವನ್ನು ಕಲ್ಪಿಸಿಕೊಟ್ಟಿತು. ಇದು ಅಶೋಕ್ ಲೇಲ್ಯಾಂಡ್ ಯೂರೋಪಿಯನ್ ಮೂಲದ ಫೋರ್ಡ್ ಕಾರ್ಗೊ ಟ್ರಕ್‌ಗಳ ಕಾರ್ಗೋ ವ್ಯಾಪ್ತಿಯ ಟ್ರಕ್‌ಗಳ ತಯಾರಿಕೆಗೆ ಅನುವು ಮಾಡಿಕೊಟ್ಟಿತು. ಈ ವಾಹನಗಳು ಐವೆಕೊ ಎಂಜಿನ್ ಗಳನ್ನು ಬಳಸಿಕೊಂಡಿದ್ದವು ಮತ್ತು ಮೊಟ್ಟ ಮೊದಲ ಬಾರಿಗೆ ಕೈಗಾರಿಕೆ ಅಳವಡಿಸಿದ ಕ್ಯಾಬ್ ಗಳನ್ನು ಇವುಗಳಲ್ಲಿ ಜೋಡಿಸಲಾಗಿತ್ತು. ಕಾರ್ಗೋ ಟ್ರಕ್‌ಗಳ ಉತ್ಪಾದನೆ ಈಗ ಇಲ್ಲದಿದ್ದರೂ ಸಹ , ಐವೆಕೊ ಎಂಜಿನ್‌ಗಳ ಬಳಕೆಯನ್ನು ನಿಲ್ಲಿಸಲಾಯಿತು. ಇದಕ್ಕೆ ಬದಲಾಗಿ ಕಾಮೆಟ್ ವ್ಯಾಪ್ತಿಯ ಟ್ರಕ್‌ಗಳಲ್ಲಿ ಕ್ಯಾಬ್‌ಗಳನ್ನು ಬಳಸುವುದನ್ನು ಮುಂದುವರೆಸಲಾಯಿತು. ಜಾಗತಿಕ ಗುಣಮಟ್ಟದ ಪಯಣದಲ್ಲಿ , ೧೯೯೩ರಲ್ಲಿ ಐಎಸ್‌ಒ ೯೦೦೨ ದೃಡೀಕರಣವನ್ನು ಗೆಲ್ಲುವುದರ ಮೂಲಕ ಭಾರತದ ಆಟೊಮೊಬೈಲ್ ಇತಿಹಾಸದಲ್ಲೇ ಈ ಪ್ರಶಸ್ತಿಯನ್ನು ಗೆದ್ದುಕೊಂಡ ಪ್ರಪ್ರಥಮ ಕಂಪನಿಯಾಗಿದ್ದು ಅಶೋಕ್ ಲೇಲ್ಯಾಂಡ್ ಒಂದು ಪ್ರಮುಖ ಮೈಲಿಗಲ್ಲನ್ನು ತಲುಪಿತು. ೧೯೯೪ರಲ್ಲಿ ಇನ್ನೂ ಹೆಚ್ಚಿನ ವ್ಯಾಪಕ ದೃಡಿಕರಣವಾದ ಐಎಸ್‌ಒ ೯೦೦೧ , ೧೯೯೮ರಲ್ಲಿ ಕ್ಯುಎಸ್ ೯೦೦೦ ಮತ್ತು ೨೦೦೨ರಲ್ಲಿ ಎಲ್ಲಾ ವಾಹನ ತಯಾರಿಕಾ ಘಟಕಗಳಿಗೂ ಐಎಸ್‌ಒ ೧೪೦೦೧ ದೃಡೀಕರಣ ದೊರೆಯಿತು. ೨೦೦೬ರಲ್ಲಿ ಟಿಎಸ್೧೬೯೪೯ ಕಾರ್ಪೊರೇಟ್ ದೃಡೀಕರಣವನ್ನು ಪಡೆಯುವುದರ ಮೂಲಕ ಇದನ್ನು ಪಡೆದ ಭಾರತದ ಮೊದಲ ಆಟೋಮೊಬೈಲ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಸಂಪಾದಕರ ನುಡಿ: ಇದು ಕಾರ್ ಉದ್ಯಮಗಳನ್ನು ಹಾಗೂ ಚೀನಾ, ಭಾರತ, ದಕ್ಷಿಣ ಕೊರಿಯಾ ಮತ್ತು ಜರ್ಮನಿಯ ಕಾರು ತಯಾರಕರನ್ನು ಸ್ವಚ್ಛಂದಗೊಳಿಸುವ ಲೇಖನಗಳ ಸರಣಿಯಾಗಿದೆ. ಅನೇಕ ಗುರಿಗಳನ್ನು ಹೊಂದಿರುವ ಅಶೋಕ್ ಲೇಲ್ಯಾಂಡ್ ತನ್ನ ಮಾರುಕಟ್ಟೆಯನ್ನು ಪಾಶ್ಚಿಮಾತ್ಯ ದೇಶಗಳಿಗೂ ವಿಸ್ತರಿಸುವ ಉದ್ದೇಶವನ್ನು ಹೊಂದಿದೆ. ಚೀನಾ ಮತ್ತು ಇತರ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಸಣ್ಣ ಪ್ರಮಾಣದಲ್ಲಿ ಕಾರು ತಯಾರಿಕಾ ಘಟಕಗಳನ್ನು ಸ್ಥಾಪಿಸುವುದು ಕಂಪನಿಯ ಯೋಜನೆಗಳಲ್ಲಿ ಒಂದಾಗಿದೆ. ಅಕ್ಟೋಬರ್ ೨೦೦೬ರಲ್ಲಿ ಅಶೋಕ್ ಲೇಲ್ಯಾಂಡ್ ಸಿಝೆಕ್ ಮೂಲದ ಏವಿಯಾದ ಬಹುಪಾಲನ್ನು ಕೊಂಡುಕೊಂಡಿತು. ಏವಿಯಾ ಅಶೋಕ್ ಲೇಲ್ಯಾಂಡ್ ಎಂದು ಕರೆಯಲ್ಪಡುವ ಇದು ಅಶೋಕ್ ಲೇಲ್ಯಾಂಡ್ ಗೆ ಯೂರೋಪ್ ನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಒಂದು ಹೊಸ ದಾರಿಯನ್ನು ಮಾಡಿಕೊಟ್ಟಿತು. ಕಂಪನಿಯ ಪ್ರಕಾರ , ಯೂರೋಪಿನಲ್ಲಿ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಗಳ ಹೊರತಾಗಿಯೂ ೨೦೦೮ರಲ್ಲಿ ಜಂಟಿ ಕಾರ್ಯಾಚರಣೆಯಿಂದ ೫೧೮ ಎಲ್‌ಸಿವಿಗಳನ್ನು ಮಾರಾಟ ಮಾಡಲು ಸಾಧ್ಯವಾಯಿತು. ಇಷ್ಟೇ ಅಲ್ಲದೆ ,ಜಾನ್ ಡಿಯರ್ ನೊಂದಿಗೆ ಕಂಪನಿಯು ಸಹಭಾಗಿತ್ವವನ್ನು ಹೊಂದಿ ಕಂಪನಿಯು ತನ್ನ ಉತ್ಪನ್ನಗಳನ್ನು ನಿರ್ಮಾಣಾ ಸಾಧನಗಳಿಗೂ ವಿಸ್ತರಿಸುವ ಯೋಚನೆಯಲ್ಲಿದೆ. ೨೦೦೯ಜೂನ್ ನಲ್ಲಿ ಹೊಸದಾಗಿ ರೂಪುಗೊಂಡ ಜಾನ್ ಡಿಯರ್ ಸಹಭಾಗಿತ್ವ ಕಂಪನಿಗಳ ನಡುವೆ ೫೦/೫೦ ಪಾಲುದಾರಿಕೆಯನ್ನು ಹೊಂದಿದೆ. ಕಂಪನಿಯು ಹೇಳುವಂತೆ ಭೂ ಸ್ವಾಧೀನ ಕಾರ್ಯ ಮುಂದುವರೆದಿದ್ದು ,ಉತ್ಪನ್ನ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಅಕ್ಟೋಬರ್ ೨೦೧೦ ರಲ್ಲಿ ವೀಲ್ ಲೋಡರ್ ಗಳು ಹಾಗೂ ಬ್ಯಾಕ್ ಹೂ ಲೊಡರ್ ಗಳನ್ನು ಉರುಳಿಸುವ ಕಾರ್ಯವನ್ನು ಆರಂಭಿಸಲು ಸಹಪಾಲುದಾರಿಕೆ ಆಲೋಚಿಸಿದೆ ತನ್ನ ಕಂಪನಿಯ ಸಂಪೂರ್ಣ ವಿಸ್ತರಣೆಯ ಯೋಜನೆಯೊಂದಿಗೆ, ಅಶೋಕ್ ಲೇಲ್ಯಾಂಡ್ ಪರಿಸರದ ಬಗ್ಗೆಯೂ ಹೆಚ್ಚಿನ ಕಾಳಜಿಯನ್ನು ಹೊಂದಿದೆ. ವಾಸ್ತವವಾಗಿ, ತನ್ನ ಅನೇಕ ಘಟಕಗಳಲ್ಲಿ ಪರಿಸರ ಸ್ನೇಹಿ ಪ್ರಕ್ರಿಯಗಳ ಅಳವಡಿಕೆಯ ಮೂಲಕ , ಪರಿಸರದ ಸಂರಕ್ಷಣೆಗೆ ಪ್ರಭಲವಾಗಿ ಬದ್ದವಾದ ಕಂಪನಿಗಳಲ್ಲಿ ಇದೂ ಒಂದಾಗಿದೆ. ಅವು ವಿಭಿನ್ನ ನೇರಗಳಲ್ಲಿ ಚಲಿಸುತ್ತಾ ಇದ್ದರೂ , ಅಶೋಕ್ ಲೇಲ್ಯಾಂಡ್ ಆರ್&ಡಿ ಗ್ರೂಪ್ ಅನ್ನು ಕಾಪಾಡಿಕೊಳ್ಳುವುದರ ಮೂಲಕ ತನ್ನ ವಾಹನಗಳು ಹೆಚ್ಚು ಇಂಧನ ದಕ್ಷತೆಯನ್ನು ಹೊಂದುವಂತೆ ಹಾಗೂ ಹೊರಸೂಸುವಿಕೆ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಉದ್ದೇಶಗಳನ್ನು ಹೊಂದಿದೆ. ವಾಸ್ತವವಾಗಿ, ಕಾರುಗಳ ಹೊರಸೂಸುವಿಕೆಗೆ ಸಂಬಂಧಿಸಿದಂತೆ ಕಾನೂನುಗಳು ಬರುವುದಕ್ಕಿಂತ ಮುಂಚೆಯೇ ಅಶೋಕ್ ಲೇಲ್ಯಾಂಡ್ ಕನಿಷ್ಠ ಹೊರಸೂಸುವಿಕೆ ವಾಹನಗಳನ್ನು ಉತ್ಪಾದಿಸುತ್ತಿತ್ತು. ಅಷ್ಟೇ ಅಲ್ಲದೆ ೧೯೯೭ರಲ್ಲಿ ಸಿಎನ್‌ಜಿ ತಂತ್ರ ಜ್ಞಾನದ ಆಧಾರದ ಮೇಲೆ ಕಡಿಮೆ ಪ್ರಮಾಣದ ಮಲಿನಕಾರಿಗಳನ್ನು ಹೊರಸೂಸುವ ಉತ್ತಮ ಎಂಜಿನ್ ಗಳುಳ್ಳ ಬಸ್ಸು ಗಳನ್ನು ಈಗಾಗಲೇ ಮಾರುಕಟ್ಟೆಗೆ ಬಿಡಲಾಗಿತ್ತು. ೨೦೦೨ರಲ್ಲಿ ಇದು ಮೊಟ್ಟ ಮೊದಲ ಮಿಶ್ರ ತಯಾರಿಕಾ ವಿದ್ಯುತ್ ವಾಹನವನ್ನು ತಯಾರಿಸಿತು. ಇಷ್ಟೇ ಅಲ್ಲದೇ , ಅಶೋಕ್ ಲೇಲ್ಯಾಂಡ್ ನವದೆಹಲಿಯ ಪ್ರವೇಶ ದ್ವಾರಗಳ ಹೆದ್ದಾರಿಗಳಲ್ಲಿ ಕಾರ್ಯವನ್ನು ಮಾಡಬಹುದಾದ ಒಂದು ಸಂಚಾರಿ ಹೊರಸೂಸುವಿಕಾ ಕ್ಲಿನಿಕ್ ನ್ನು ಆರಂಭಿಸಿದೆ. ಈ ಕ್ಲಿನಿಕ್ ವಾಹನಗಳ ಹೊರಸೂಸುವಿಕೆಯನ್ನು ಪತ್ತೆ ಹಚ್ಚುವುದಲ್ಲದೆ, ಅದಕ್ಕೆ ಪರಿಹಾರೋಪಾಯಗಳನ್ನು ನಿಡುತ್ತದೆ. ಹಾಗೂ ವಾಹನದ ನಿರ್ವಹಣೆ ಮತ್ತು ಎಚ್ಚರಿಕೆಯ ಬಗ್ಗೆ ಕೆಲವು ಮಾಹಿತಿಯನ್ನು ನೀಡುತ್ತದೆ. ಈ ಕಾರ್ಯವು ಅತ್ಯಮೂಲ್ಯವಾದ ದತ್ತಾಂಶವನ್ನು ಪಡೆಯುವುದಕ್ಕೆ ಸಹಾಯ ಮಾಡುವುದಲ್ಲದೇ ಮುಂದಿನ ಸುಧಾರಣೆಗೆ ಅತ್ಯಮೂಲ್ಯವಾದ ಮಾರ್ಗದರ್ಶನ ನೀಡುತ್ತದೆ. ಪರಿಸರ ಸ್ನೇಹಿ ತಂತ್ರ ಜ್ಞಾನದ ಅಭಿವೃದ್ಧಿಗೆ ಬಂದಾಗ ಅಶೋಕ್ ಲೇಲ್ಯಾಂಡ್ ಹೈಥೇನ್ ಎಂಜಿನ್‌ಗಳನ್ನು ಅಭಿವೃದ್ಧಿ ಗೊಳಿಸಿರುವುದು ಗಮನಾರ್ಹ. ಆಸ್ಟ್ರೇಲಿಯಾ ಕಂಪನಿಯಾದ ಏಡೇನ್ ಎನರ್ಜಿಯೊಂದಿಗೆ ಸೇರಿ , ಅಶೋಕ್ ಲೇಲ್ಯಾಂಡ್ ನೈಸರ್ಗಿಕ ಅನಿಲ ಹಾಗೂ ಸುಮಾರು ೨೦% ರಷ್ಟು ಹೈಡ್ರೋಜನ್ ಮಿಶ್ರಣವಿರುವ ಹೈಥೇನ್ (H-CNG,) ನ್ನು ಬಳಸಿಕೊಳ್ಳಬಹುದಾದ ೬-ಸಿಲಿಂಡರ್,೬-ಲೀಟರ್ ೯೨ kW BS-೪ ಎಂಜಿನ್ ನ್ನು ತಯಾರಿಸುವಲ್ಲಿ ಯಶಸ್ವಿಯಾಗಿದೆ. ಹೈಡ್ರೋಜನ್ ಎಂಜಿನ್‌ನ ದಕ್ಷತೆಯನ್ನು ಹೆಚ್ಚಿಸುವುದಕ್ಕೆ ಸಹಾಯ ಮಾಡಿದರೂ ಸಹ ಸಿಎನ್‌ಜಿ ಹೊರಸೂಸುವಿಕೆಯನ್ನು ನಿಯಂತ್ರಿತ ಮಟ್ಟದಲ್ಲಿ ಕಾಪಾಡಿಕೊಳುವುದನ್ನು ಖಾತ್ರಿಪಡಿಸುತ್ತದೆ. ಭಾರತೀಯ ತೈಲ ಕಾರ್ಪೊರೇಶನ್ ಹಾಗೂ MNRE ( ಶಕ್ತಿಯ ನೂತನ ಹಾಗೂ ಪುನಶ್ಚೇತನ ಸಚಿವಾಲಯ) ದ ಜಂಟಿ R&D ಕಾರ್ಯ ಯೋಜನೆಯು H-CNG ಗಾಗಿ ಒಂದು ೪-ಸಿಲಿಂಡರ್ ೪-ಲೀಟರ್ ೬೩ KW ಎಂಜಿನ್ ನ್ನು ಅಭಿವೃದ್ಧಿಗೊಳಿಸಿದೆ. H-CNG ಪರಿಕಲ್ಪನೆಯು ಈಗ ಹೆಚ್ಚು ಚಾಲ್ತಿಯಲ್ಲಿದ್ದು , ದೆಹಲಿಯ ಸುತ್ತ ಮುತ್ತ ಈ ತಂತ್ರ ಜ್ಞಾನದ ವಾಹನಗಳು ೫,೫೦೦ಕ್ಕಿಂತಲೂ ಹೆಚ್ಚಿವೆ. ಕಂಪನಿಯು ಹೈಥೇನ್ ಎಂಜಿನ್ ಗಳ ಬಳಕೆಯ ಬಗ್ಗೆ ಈಗಾಗಲೇ ಭಾರತ ಸರ್ಕಾರದೊಂದಿಗೆ ಚರ್ಚೆ ನಡೆಸಿದೆ. ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಇವುಗಳ ಬಳಕೆ ಇಲ್ಲದೇ ಹೋದರೂ ಸಧ್ಯದಲ್ಲೇ ಇವು ಯಶಸ್ಸು ಗಳಿಸುವ ಸಾಧ್ಯತೆಗಳಿವೆ. ಅಶೋಕ್ ಲೇಲ್ಯಾಂಡ್ ಹಾಗೂ ನಿಸ್ಸಾನ್ ನ ಪಾಲುದಾರಿಕೆಯು ವಾಹನ, ವಿದ್ಯುತ್ ರೈಲುಗಳು ಮತ್ತು ಮೂರು ಜಂಟಿ ಸಹಭಾಗಿತ್ವದಲ್ಲಿ ತಂತ್ರ ಜ್ಞಾನದ ಅಭಿವೃದ್ಧಿ ಕಡೆಗೆ ಕೇಂದ್ರೀಕೃತಗೊಳಿಸಿದೆ. ಜಂಟಿ ಸಹಭಾಗಿಗಳು ಪರಿಣಾಮಕಾರಿ ಹೂಡಿಕೆಯಿಂದ ಯೂರೋ೩ ಹಾಗೂ ಯೂರೋ ೪ ಹೊರಸೂಸುವಿಕೆ ಗುಣಮಟ್ಟದ ಡೀಸಲ್ ಎಂಜಿನ್ ಗಳನ್ನು ಹೊಂದಿರುವ ಟ್ರಕ್ ಗಳ ತಯಾರಿಕೆಯ ಕಡೆಗೆ ಹೆಚ್ಚಿನ ಗಮನ ಹರಿಸಿವೆ. ಮುಂಬರುವ ವರ್ಷಗಳಲ್ಲಿ, ಅಶೋಕ್ ಲೇಲ್ಯಾಂಡ್ ಕೆಲವು ಮಿಶ್ರ ಟ್ರಕ್‌ಗಳನ್ನು ಹಾಗೂ ಬಸ್ಸುಗಳನ್ನು ಮಾರುಕಟ್ಟೆಗೆ ಬಿಡುವ ಯೋಚನೆಯಲ್ಲಿದೆ. ಬಸ್ಸುಗಳು ಹಾಗೂ ಟ್ರಕ್‌ಗಳು ತಂತಿ ವರ್ಗಾಯಿತ ತಂತ್ರಜ್ಞಾನದ ಮೂಲಕ ನೂತನ ಎಲೆಕ್ಟ್ರಾನಿಕ್ ಪಲ್ಲಟವನ್ನು ಹೊಂದುವುದರಲ್ಲಿದ್ದು ಇದರೊಂದಿಗೆ ಹೆಚ್ಚಿನ ಇಂಧನ ದಕ್ಷತೆಗಾಗಿ ಎಲೆಕ್ಟ್ರಾನಿಕ್ ನಿಯಂತ್ರಿತ ಎಂಜಿನ್‌ಗಳನ್ನು ಪಡೆಯುವ ಸಾಧ್ಯತೆಗಳಿವೆ. ಸ್ವಯಂಚಾಲಿತ ಸಾಮರ್ಥ್ಯಕ್ಕೆ ಧಕ್ಕೆ ಬಾರದಂತೆ ಇಂಧನ ದಕ್ಷತೆಯನ್ನು ಸುಧಾರಿಸುವುದರ ಬಗ್ಗೆ ಅಶೋಕ್ ಲೇಲ್ಯಾಂಡ್ ಹೆಚ್ಚು ಕೇಂದ್ರೀಕೃತಗೊಂಡಿದೆ. ಇದರಿಂದ ವಾಹನಗಳು ೫% ರಷ್ಟು ಇಂಧನ ದಕ್ಷತೆಯಲ್ಲಿ ಸುಧಾರಣೆ ಹೊಂದುವ ಸಾಧ್ಯತೆ ಇದೆ. ಇಷ್ಟೇ ಅಲ್ಲದೆ ಅಶೋಕ ಲೇಲ್ಯಾಂಡ್ ವಿದ್ಯುತ್ ಚಾಲಿತ ಬ್ಯಾಟರಿಗಳು ಹಾಗೂ ಜೈವಿಕ ಇಂಧನಗಳನ್ನು ಅಭಿವೃದ್ಧಿಗೊಳಿಸುತ್ತಿದೆ. ಅಶೋಕ್ ಲೇಲ್ಯಾಂಡ್‌ನ ಮಾಸಿಕ ಉತ್ಪನ್ನ ವರದಿಗಳು ತೋರಿಸುವಂತೆ ೧೩೮% ರಷ್ಟು ಏರಿಕೆ ಇರುವುದರಿಂದ ಅದರ ತ್ರೈ ಮಾಸಿಕ ಫಲಿತಾಂಶಗಳು ಪರಿಣಾಮಕಾರಿಯಾಗಿವೆ. ಆದರೆ ಇದರ ಮಾರಾಟವು ಕೆಳೆದ ವರ್ಷದ ಹಿಂದೆ ೧೩೯% ರಷ್ಟಿದ್ದರೂ ೩೧೭%ರಷ್ಟು ನಿವ್ವಳ ಲಾಭದಲ್ಲಿನ ಹೆಚ್ಚಳ ಪ್ರಭಾವ ಬೀರಿದ ಅಂಶವಾಗಿದೆ. ಅಶೋಕ್ ಲೇಲ್ಯಾಂಡ್ ತನ್ನ ಲಾಭಾಂಶ ೧೦.೫%.ಕ್ಕೆ ಹೋಲಿಸಿದರೆ ೧೩% ರಷ್ಟು ಗಳಿಸಿರುವುದು ಗಮನಾರ್ಹ . ಪರಿಮಾಣದಲ್ಲಿನ ಹೆಚ್ಚಳ , ಬಹು -ಅಚ್ಚು ವಾಹನಗಳು ಹಾಗೂ ಟ್ರಾಕ್ಟರ್ ಟ್ರೈಲರ್ ಗಳ ಮಾರಾಟ ಮತ್ತು ಬೆಲೆಯ ಕಡಿತಗಳು ಅಲ್ಪ ಪ್ರಮಾಣದ ವಿಸ್ತರಣೆಗಳಿಗೆ ಪ್ರಮುಖ ಕಾರಣಗಳಾಗಿವೆ.೨೦೧೧ಕ್ಕೆ ಇದರ ಪರಿಮಾಣದ ಹೆಚ್ಚಳವು ಸಂರಕ್ಷಣಾತ್ಮಕವಾಗಿದ್ದು, ೨೦೧೦ರ ಆರ್ಥಿಕ ವರ್ಷದಲ್ಲಿನ ೩೦% ಕ್ಕೆ ಹೋಲಿಸಿದಲ್ಲಿ ೧೫% ರಷ್ಟು ಹೆಚ್ಚಳವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಜವಹಾರ ಲಾಲ್ ನೆಹರೂ ರಾಷ್ಟ್ರೀಯ ನಗರೀಕರಣ ಪುನಶ್ಚೇತನ ಮಿಶನ್ ಯೋಜನೆಯಡಿಯಲ್ಲಿ ಆದೇಶಿತ ೫,೦೯೮ ಬಸ್ಸುಗಳಲ್ಲಿ ಸುಮಾರು ೧೨೦೦ ಬಸ್ಸುಗಳನ್ನು ಬಿಡಬೇಕಾಗಿದೆ. ಇದರೊಂದಿಗೆ ರಾಜ್ಯ ಸಾರಿಗೆ ಸಂಸ್ಥೆ ಯಡಿಯಲ್ಲಿ ಇತರ ೨೦೦೦ ಬಸ್ಸುಗಳ ಆದೇಶವನ್ನು ತನ್ನಲ್ಲಿ ಕಾಯ್ದಿರಿಸಿಕೊಂಡಿದೆ. ಮುಂಬರುವ ಎರಡು ವರ್ಷಗಳಲ್ಲಿ ರೂ.೧೨೦೦ಕೋಟಿ ಬಂಡವಾಳ ಹೂಡುವುದರ ಮೂಲಕ ತನ್ನ ಬಂಡವಾಳ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಆಲೋಚನೆಯಲ್ಲಿದೆ. ಹೊಸ ಕ್ಯಾಬ್‌ಗಳು ಮತ್ತು ಎಂಜಿನ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಇದರೊಂದಿಗೆ, ಜಂಟಿ ಸಹಭಾಗಿತ್ವದಲ್ಲಿ ರೂ.೮೦೦ ಕೋಟಿ ಬಂಡವಾಳವನ್ನು ಹೂಡುವ ಯೋಜನೆಯನ್ನು ಹೊಂದಿದೆ. ವಿಶ್ಲೇಷಕರ ಪ್ರಕಾರ ಉತ್ತರಖಾಂಡ್ ಘಟಕವು ೨೦೧೧ಆರ್ಥಿಕ ವರ್ಷದಲ್ಲಿ ತನ್ನ ಮೊದಲ ವರ್ಷದ ಸಂಪೂರ್ಣ ಕಾರ್ಯದ ಮೂಲಕ ೨೨,೦೦೦-೨೫,೦೦೦ ರಷ್ಟು ವಾಹನಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿದೆ. ಇಷ್ಟೇ ಅಲ್ಲದೆ ಕಂಪನಿಯು ೨೦೧೦ರ ಮೊದಲ ತ್ರೈಮಾಸಿಕ ದಲ್ಲಿ ೨೧-೨೨% ರಿಂದ ನಾಲ್ಕನೇ ತ್ರೈಮಾಸಿಕ ಅವಧಿಗೆ ೨೮-೨೯% ಗೆ ಹೆಚ್ಚುವ ಮೂಲಕ ಶೇರು ಮಾರುಕಟ್ಟೆಯಲ್ಲಿ ನಿಧಾನಗತಿಯ ಗಳಿಕೆಯನ್ನು ಸಾಧಿಸಿದೆ. ಆದರೆ ಪೂರ್ವ ಮಾರುಕಟ್ಟೆಯಲ್ಲಿ ಇನ್ನೂ ತನ್ನ ಪ್ರಾಭಲ್ಯವನ್ನು ಮೆರೆಯದೇ ಇರುವುದು ಬೇಸರದ ಸಂಗತಿಯಾಗಿದೆ. ಇದರೊಂದಿಗೆ, ತನ್ನ ಸಾಂಪ್ರದಾಯಿಕ ಹಿಡಿತದಲ್ಲಿರುವ ದಕ್ಷಿಣ ಮಾರುಕಟ್ಟೆಯಲ್ಲೂ ೨೦೧೦ರಲಿ ಕೇವಲ ೧೫% ರಷ್ಟು ಮಾತ್ರ ಹೆಚ್ಚಳವನ್ನು ಸಾಧಿಸಿದೆ. ಈ ವರ್ಷದಲ್ಲಿ ಭಾರತದ ಉಳಿದ ಭಾಗಗಳಲ್ಲಿ (ಪ್ರಮುಖವಾಗಿ ಉತ್ತರ ಹಾಗೂ ದಕ್ಷಿಣ) ದಲ್ಲಿ ೪೦% ರಷ್ಟು ಹೆಚ್ಚಳವನ್ನು ಸಾಧಿಸಿದೆ. ಅಶೋಕ್ ಲೇಲ್ಯಾಂಡ್ -ನಿಸ್ಸಾನ್ ಜಂಟಿ ಸಹಪಾಲುದಾರಿಕೆಯು ಬೆಂಗಳೂರಿನ ಹತ್ತಿರವಿರುವ ಹೊಸೂರಿನಲ್ಲಿ ಹಗುರ ವಾಣಿಜ್ಯ ವಾಹನಗಳನ್ನು (LCVs) ಉತ್ಪಾದಿಸಿದೆ ಹಾಗೂ ಚನ್ನೈ ಬಳಿ ಇರುವ ರೆನಾಲ್ಟ್ -ನಿಸ್ಸಾನ್ ಕಾರ್ ಘಟಕವೂ ಸಹ ಈ ವಾಹನಗಳನ್ನು ತಯಾರಿಸಿದೆ.[೨]
ಪ್ರಚಲಿತ ಸ್ಥಿತಿ
[ಬದಲಾಯಿಸಿ]ಅಶೋಕ್ ಲೇಲ್ಯಾಂಡ್ ಭಾರತದ ವಾಣಿಜ್ಯ ವಾಹನಗಳ ವಲಯ ತಂತ್ರ ಜ್ಞಾನದಲ್ಲಿ ಟಾಟಾ ಮೋಟಾರ್ಸ್ ನಂತರ ಎರಡನೇ ಸ್ಥಾನದಲ್ಲಿದೆ. ಕಂಪನಿಯ ಇತಿಹಾಸವು ಅನೇಕ ತಾಂತ್ರಿಕ ಅನ್ವೇಷಣೆಗಳನ್ನು ಹೊಂದಿದ್ದು, ಇವು ಕೈಗಾರಿಕೆಗಳ ಆದರ್ಶಗಳಾಗಿ ಉಳಿದಿವೆ. ಬಹು -ಗಾಲಿಗಳ ಟ್ರಕ್ ಗಳು ಹಾಗೂ ಸಂಪೂರ್ಣ ಹವಾ ನಿಯಂತ್ರಕಗಳನ್ನು ಪರಿಚಯಿಸಿದ ಮೊಟ್ಟಮೊದಲ ಆಟೊಮೊಬೈಲ್ ಕಂಪನಿ ಇದಾಗಿದೆ. ಭಾರತದಲ್ಲಿ ಹಿಂಬದಿ ಎಂಜಿನ್ ಗಳು ಹಾಗೂ ಸಂಧುಗಳನ್ನು ಹೊಂದಿರುವ ಬಸ್ಸುಗಳನ್ನು ಅನ್ವೇಷಿಸಿದ ಕೀರ್ತಿಯೂ ಇದಕ್ಕೆ ಸಲ್ಲುತ್ತದೆ. ೧೯೯೭ರಲ್ಲಿ, ಕಂಪನಿಯು ದೇಶದಲ್ಲೇ ಮೊದಲ ಸಿಎನ್‌ಜಿ ಬಸ್ಸನ್ನು ಉತ್ಪಾದಿಸಿತು. ೨೦೦೨ರಲ್ಲಿ ಮೊದಲ ಮಿಶ್ರ ವಿದ್ಯುತ್ ಚಾಲಿತ ವಾಹನವನ್ನು ತಯಾರಿಸಿತು. ಕಳೆದ ೬೦ ವರ್ಷಗಳಿಂದ ಕಂಪನಿಯು ತನ್ನ ಲಾಭವನ್ನು ಕಾಪಾಡಿಕೊಂಡು ಬಂದ ದಾಖಲೆಯನ್ನು ಹೊಂದಿದೆ. ೨೦೦೮-೦೯ ರಲ್ಲಿ ಕಂಪನಿಯ ವಾರ್ಷಿಕ ವಹಿವಾಟು USD ೧.೪ ಬಿಲಿಯನ್ ಗಳಷ್ಟಿತ್ತು. ೨೦೦೮-೦೯ರಲ್ಲಿ ೫೪,೪೩೧ ಮಧ್ಯಮ ಹಾಗೂ ಭಾರವಾದ ವಾಹನಗಳನ್ನು ಮಾರುವುದರ ಮೂಲಕ, ಅಶೋಕ್ ಲೇಲ್ಯಾಂಡ್ ಭಾರತದಲ್ಲೇ ಮಧ್ಯಮ ಮತ್ತು ಭಾರ ಟ್ರಕ್ಕುಗಳನ್ನು ರಪ್ತು ಮಾಡುವುದರಲ್ಲಿ ಅತಿ ದೊಡ್ಡ ಕಂಪನಿಯಾಗಿದೆ. ಅಷ್ಟೇ ಅಲ್ಲದೆ ಇದು ಭಾರತದಲ್ಲೇ ಅತಿ ದೊಡ್ಡ ಖಾಸಗಿ ವಲಯದ ಉದ್ಯಮಗಳಲ್ಲಿ ಇದೂ ಒಂದಾಗಿದ್ದು , ಸುಮಾರು ೧೨,೦೦೦ ನೌಕರರು ೬ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದು, ಇದರ ಕಛೇರಿಗಳು ಭಾರತದ ಉದ್ದಗಲಕ್ಕೂ ಹರಡಿಕೊಂಡಿವೆ. ಕಂಪನಿಯು ವರ್ಷಕ್ಕೆ ೧೦೫,೦೦೦ ವಾಹನಗಳಂತೆ ತನ್ನ ಉತ್ಪಾದನಾ ದರದ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಇಷ್ಟೇ ಅಲ್ಲದೆ ಬಂಡವಾಳ ಹೂಡಿಕೆ ಯೋಜನೆಗಳು ಉತ್ತರ ಭಾರತದ ಉತ್ತರಖಾಂಡ್‌ನಲ್ಲಿ ಹಾಗೂ ಮಧ್ಯ -ಪೂರ್ವ ಏಷ್ಯಿಯಾದಲ್ಲಿ ಒಂದು ಬಸ್ ನಿರ್ಮಾಣದ ಘಟಕವನ್ನು ಒಳಗೊಂಡಂತೆ ಎರಡು ನೂತನ ಘಟಕಗಳನ್ನು ಸ್ಥಾಪಿಸುವುದನ್ನು ಒಳಗೊಂಡಿದೆ. ಇದು ಈಗಾಗಲೇ ಆಫ್ರಿಕಾ ರಾಷ್ಟ್ರಗಳಾದ ನೈಜೀರಿಯಾ, ಘಾನಾ,ಈಜಿಫ್ಟ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ತನ್ನ ಘಟಕಗಳನ್ನು ಸ್ಥಾಪಿಸಿದೆ. ಅಶೋಕ್ ಲೇಲ್ಯಾಂಡ್ ಕೆಲವು ಮಹತ್ವದ ಪಾಲುದಾರಿಕೆಯ ಮೂಲಕ ಜಾಗತೀಕರಣ ಹಾಗೂ ವೈವಿದ್ಯೀಕರಣವು ಬೆಳವಣಿಗೆಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ. ಸ್ವಯಂಚಾಲಿತ ಇನ್ಫ್ರಾನಿಕ್ಸ್ ಗಾಗಿ ಭೂಖಂಡ ಕಾರ್ಪೊರೇಷನ್ ನೊಂದಿಗೆ ಹೆಚ್ಚಿನ ಒತ್ತಡ ಡೈ ಕಾಸ್ಟಿಂಗ್‌ಗಾಗಿ ಫೈನ್ ಲ್ಯಾಂಡ್ ನಲ್ಲಿರುವ ಆಲ್ ಟೀಮ್ಸ್‌ನೊಂದಿಗೆ ಹಾಗೂ ಇತ್ತೀಚೆಗೆ ನಿರ್ಮಾಣ ಸಾಧನಗಲಿಗಾಗಿರುವ ಜಾನ್ ಡಿಯರ್ ಕಂಪನಿಯೊಂದಿಗೆ ಸೇರಿ ಈ ಅವಕಾಶಗಳನ್ನು ಹೆಚ್ಚಿಸಿಕೊಂಡಿದೆ.[೩] ಜಾಗತಿಕ ನೀತಿಯ ಒಂದು ಭಾಗವಾಗಿ , ಕಂಪನಿಯು ಸಿಝೆಕ್ ಗಣರಾಜ್ಯ-ಆಧಾರಿತ ಏವಿಯಾ ಟ್ರಕ್ ವ್ಯಾಪಾರವನ್ನು ಸ್ವಾಧೀನ ಪಡಿಸಿಕೊಂಡಿದೆ. ಹೊಸದಾಗಿ ಆರಂಭವಾದ ಕಂಪನಿಗೆ ಏವಿಯಾ ಅಶೋಕ್ ಲೇಲ್ಯಾಂಡ್ ಮೋಟಾರ್ಸ್ ಎಸ್.ಆರ್.ಒ. ಎಂದು ಹೆಸರಿಡಲಾಗಿದೆ. ಇದು ಅಶೋಕ್ ಲೇಲ್ಯಾಂಡ್‌ಗೆ ಅತ್ಯಂತ ಪೈಪೋಟಿಯುಳ್ಳ ಯೂರೋಪ್ ನ ಟ್ರಕ್ ಮಾರುಕಟ್ಟೆಯಲ್ಲಿ ತನ್ನ ಛಾಪನ್ನು ಒತ್ತಲು ಅವಕಾಶ ಕಲ್ಪಿಸಿಕೊಟ್ಟಿದೆ. ೨೦೦೭ರಲ್ಲಿ ಹಿಂದುಜಾ ಗ್ರೂಪ್ ಐವೆಕೋನ ಪರೋಕ್ಷ ಪಾಲನ್ನು ಅಶೋಕ್ ಲೇಲ್ಯಾಂಡ್‌ನಲ್ಲಿ ಕೊಂಡುಕೊಂಡಿದೆ. ಈಗ ಪ್ರಮೋಟರ್ ಶೇರು ೫೧%ನಷ್ಟಿದೆ.
ನಿಸ್ಸಾನ್ ಅಶೋಕ್ ಲೇಲ್ಯಾಂಡ್
[ಬದಲಾಯಿಸಿ]೨೦೦೭ರಲ್ಲಿ ಕಂಪನಿಯು ಭಾರತದ ಚೆನ್ನೈನಲ್ಲಿ ತಯಾರಿಕಾ ಸೌಲಭ್ಯವನ್ನು ಹಂಚಿಕೊಳ್ಳಲು ಜಪಾನಿನ ಆಟೋ ಜಾಯಿಂಟ್ ನಿಸ್ಸಾನ್ (ರೆನಾಲ್ಟ್ ನಿಸ್ಸಾನ್ ಗ್ರೂಪ್) ನೊಂದಿಗೆ ಜಂಟಿ ಸಹಪಾಲುದಾರಿಕೆಯನ್ನು ಘೋಷಿಸಿತು. ಶೇರು ಪಾಲುದಾರಿಕೆಯನ್ನು ಹೊಂದಿರುವ ಮೂರು ಜಂಟಿ ಸಹಪಾಲು ಕಂಪನಿಗಳೆಂದರೆ
- ಅಶೋಕ್ ಲೇಲ್ಯಾಂಡ್ ನಿಸ್ಸಾನ್ ವೆಹಿಕಲ್ ಪ್ರೈವೇಟ್ ಲಿಮಿಟೆಡ್, ಈ ವಾಹನ ತಯಾರಿಕಾ ಕಂಪನಿಯ ೫೧% ರಷ್ಟು ಒಡೆತನವನ್ನು ಅಶೋಕ್ ಲೇಲ್ಯಾಂಡ್ ಹೊಂದಿದೆ ಮತ್ತು ೪೯% ರಷ್ಟು ನಿಸ್ಸಾನ್ ಹೊಂದಿದೆ.
- ನಿಸ್ಸಾನ್ ಅಶೋಕ್ ಲೇಲ್ಯಾಂಡ್ ಪವರ್ ಟ್ರೈನ್ ಪ್ರೈವೇಟ್ ಲಿಮಿಟೆಡ್, ಈ ಪವರ್ ಟ್ರೈನ್ ತಯಾರಿಕಾ ಕಂಪನಿಯ ೫೧% ರಷ್ಟು ಒಡೆತನವನ್ನು ನಿಸ್ಸಾನ್ ಹೊಂದಿದೆ ಹಾಗೂ ೪೯% ರಷ್ಟು ಅಶೋಕ್ ಲೇಲ್ಯಾಂಡ್ ಹೊಂದಿದೆ.
- ನಿಸ್ಸಾನ್ ಅಶೋಕ್ ಲೇಲ್ಯಾಂಡ್ ಟೆಕ್ನಾಲಾಜಿಸ್ಟ್ ಪ್ರೈವೇಟ್ ಲಿಮಿಟೆಡ್ , ಈ ತಂತ್ರ ಜ್ಞಾನ ಅಭಿವೃದ್ಧಿ ಕಂಪನಿಯ ಒಡೆತನವನ್ನು ಪಾಲುದಾರರು ೫೦:೫೦ ರಷ್ಟು ಹಂಚಿಕೊಳ್ಳುತ್ತಾರೆ.
ಡಾ. ವಿ. ಸುಮಂತ್ರನ್ ರವರು ಹಿಂದುಜಾ ಆಟೋಮೊಟಿವ್ ಲಿಮಿಟೆಡ್ ನ ಕಾರ್ಯನಿರ್ವಾಹಕ ಉಪಾದ್ಯಕ್ಷರಾಗಿದ್ದಾರೆ. ಅಶೋಕ್ ಲೇಲ್ಯಾಂಡ್ ಮಂಡಳಿಯ ನಿರ್ದೇಶಕರಾಗಿರುವ ಇವರು ಪವರ್ ಟ್ರೈನ್ ಕಂಪನಿಯ ಅದ್ಯಕ್ಷರೂ ಆಗಿದ್ದಾರೆ. ಅಷ್ಟೇ ಅಲ್ಲದೆ ಇವರು ಇತರೆ ಎರಡು ಜಂಟಿ ಸಹಪಾಲುದಾರಿಕೆ ಕಂಪನಿಗಳ ಮಂಡಳಿಯಲ್ಲಿಯೂ ಇದ್ದಾರೆ. ಸಹಭಾಗಿತ್ವವನ್ನು ಒಮ್ಮೆ ತೆಗೆದು ಹಾಕುವುದಾದರೆ ,ದೇಶದ ಸ್ವಯಂಚಾಲಿತ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಬಂಡವಾಳ ಹೂಡಿದ ಕಂಪನಿ ಇದಾಗುತ್ತದೆ.
ಐಬಸ್-
[ಬದಲಾಯಿಸಿ]೨೦೦೮ರ ಆರಂಭದಲ್ಲಿ ಅಶೋಕ್ ಲೇಲ್ಯಾಂಡ್ ಐಬಸ್ ಅನ್ನು ಘೋಷಿಸಿತು. ಇದು ಮುಂದೆ ದೇಶದಲ್ಲಿ ವಾಹನ ಸಂಚಾರ ಹೆಚ್ಚುತ್ತಿರುವ ಪ್ರಮುಖ ನಗರಗಳ ಒಂದು ಭಾಗವಾಗಬಹುದು ಎಂದು ಅಂದಾಜು ಮಾಡಲಾಗಿತ್ತು. ೨೦೦೮ ರಲ್ಲಿ ಭಾರತದ ಆಟೋ ಎಕ್ಸ್ ಪೊ ಪರಿಕಲ್ಪನೆಯಲ್ಲಿ ವಿನ್ಯಾಸ ಗೊಂಡ ಒಂದು ವಾಹನ ಈ ವರ್ಷದ ಅಂತ್ಯದಲ್ಲಿ ಪೈಲೆಟ್ ಮಾದರಿಯ ಉತ್ಪನ್ನವಾಗಿ ಹೊರಹೊಮ್ಮಲು ಸಿದ್ಧವಾಗಿತ್ತು. ಸಂಪೂರ್ಣ ಪ್ರಮಾಣದ ಉತ್ಪನ್ನವು ೨೦೦೯ರಲ್ಲಿ ಆರಂಭಗೊಂಡಿತು. ಪ್ರಾಯಶಃ ಈ ಬಸ್ಸು ನೂತನ ನೆಪ್ಚೂನ್ ಕುಟುಂಬದ ಎಂಜಿನ್ ನ್ನು ಹೊಂದಿದ್ದು ,ಅಶೋಕ್ ಲೇಲ್ಯಾಂಡ್ ಇದನ್ನು ವಸ್ತು ಪ್ರದರ್ಶನದಲ್ಲಿ ಪರಿಚಯಿಸಿದೆ. ಇವು BS೪/Euro ೪ ಹೊರಸೂಸುವಿಕೆಯ ನಿಯಂತ್ರಕಗಳಿಗೆ ಸಿದ್ದವಾಗಿದ್ದು , ಯೂರೋ ೫ಕ್ಕೂ ಹೆಚ್ಚಿಸಬಹುದಾಗಿದೆ.[೪]
ಸೌಲಭ್ಯಗಳು
[ಬದಲಾಯಿಸಿ]- ಕಂಪನಿಯು ಭಾರತದಲ್ಲಿ ಆರು ತಯಾರಕಾ ಘಟಕಗಳನ್ನು ಹೊಂದಿದೆ:
- ಎನ್ನೋರ್ ಹಾಗೂ ಹೊಸೂರ್, ತಮಿಳುನಾಡು (ಹೊಸೂರು - ೧, ಹೊಸೂರು - ೨, ಸಿಪಿಪಿಎಸ್)
- ಅಲ್ವಾರ್, ರಾಜಸ್ಥಾನ್
- ಭಂಡಾರ, ಮಹಾರಾಷ್ಟ್ರ
- ಅಶೋಕ್ ಲೇಲ್ಯಾಂಡ್ ನ ತಾಂತ್ರಿಕ ಕೇಂದ್ರವು ಚನ್ನೈನ ಹೊರವಲಯದಲ್ಲಿರುವ ವೆಲ್ಲಿವೊಯಾಲ್ಚವಾಡಿಯಲ್ಲಿದೆ. ಇದು ಕಲಾತ್ಮಕ -ಉತ್ಪನ್ನ ಸೌಲಭ್ಯವನ್ನು ಹೊಂದಿದ್ದು ,ಆಧುನಿಕ ಪರೀಕ್ಷಾ ಜಾಡುಗಳು ಮತ್ತು ಘಟಕ ಪರೀಕ್ಷಾ ಪ್ರಯೋಗಾಲಯಗಳನ್ನು ಹೊಂದಿದೆ.ಇಷ್ಟೇ ಅಲ್ಲದೆ ಭಾರತದ ಏಕೈಕ ಸಿಕ್ಸ್ ಪೋಸ್ಟರ್ ಪರೀಕ್ಷಾ ಸಲಕಣೆಯನ್ನೂ ಹೊಂದಿದೆ.
- ಕಂಪನಿಯು ಹೊಸೂರಿನಲ್ಲಿ ಎಂಜಿನ್ ಸಂಶೋಧನೆ ಹಾಗೂ ಅಭಿವೃದ್ಧಿ ಸೌಲಭ್ಯವನ್ನು ಹೊಂದಿದೆ.
- ಉತ್ತರ ಭಾರತದ ಉತ್ತರಖಾಂಡ್ ನ ಪಾಂಟ್ ನಗರ್ ದಲ್ಲಿ ಸುಮಾರು ರೂ.೧೨೦೦ ಕೋಟಿಗಳಷ್ಟು ಬಂಡವಾಳವನ್ನು ಹೂಡುವುದರ ಮೂಲಕ ಕಂಪನಿಯು ಒಂದು ಹೊಸ ಘಟಕವನ್ನು ಪ್ರಾರಂಭಿಸುತ್ತಿದೆ.
ಈ ಘಟಕವು ೨೦೧೦ರಂದು ಪ್ರಾರಂಭಗೊಳ್ಳುವ ಹಂತದಲ್ಲಿದೆ. ಈ ಘಟಕವು ಸುಮಾರು ೪೦೦೦೦ ಸಾವಿರ ವಾಣಿಜ್ಯ ವಾಹನಗಳನ್ನು ಉತ್ಪತ್ತಿ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಸಾಧ್ಯತೆ ಇದ್ದು, ಪ್ರಮುಖವಾಗಿ ಉತ್ತರ ಭಾರತದ ಮಾರುಕಟ್ಟೆಯ ಅವಶ್ಯಕತೆಗಳನ್ನು ತೆರಿಗೆ ವಿನಾಯಿತಿ ಹಾಗೂ ಸುಂಕಗಳ ಪ್ರಯೋಜನದ ಮೂಲಕ ಪೂರೈಸುವ ನಿರೀಕ್ಷೆ ಇಟ್ಟುಕೊಂಡಿದೆ.
- ಕಂಪನಿಯು ಮಧ್ಯ ಏಷ್ಯಿಯಾದಲ್ಲಿ ಒಂದು ಬಸ್ ನಿರ್ಮಾಣ ಘಟಕವನ್ನು ಆರಂಭಿದ್ದರಿಂದ ಯು.ಎ.ಇ. ನಲ್ಲಿ ರಾಸ್ ಆಲ್ ಖಾಯಿಮಾ ಬಂಡವಾಳ ಪ್ರಾಧಿಕಾರ(RAKEZ) ದೊಂದಿಗೆ ಒಂದು ಒಪ್ಪಂದಕ್ಕೆ ಸಹಿ ಹಾಕಬೇಕಾಯಿತು.
ಮುಖಂಡತ್ವ
[ಬದಲಾಯಿಸಿ]೧೯೯೮ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶ್ರೀ ಆರ್. ಸೇಶಾಸಾಯಿಯವರು ಅಶೋಕ್ ಲೇಲ್ಯಾಂಡ್‌ನ ಈಗಿನ ಮುಖ್ಯಸ್ಥರಾಗಿದ್ದಾರೆ. ಇವರ ನೇತೃತ್ವದಲ್ಲಿ ಈ ಕಂಪನಿಯು ಒಂದು ಅಪ್ಪಟ ಭಾರತೀಯ ಕೇಂದ್ರೀಕೃತ ಕಂಪನಿಯಿಂದ ಒಂದು ಜಾಗತಿಕ ಮಟ್ಟದ ಕಆಂಪನಿಯಾಗಿ ವಿಸ್ತರಿಸಲ್ಪಟ್ಟಿದೆ. ಶ್ರೀ ಸೇಶಾಸಾಯಿಯವರು ೨೦೦೬-೨೦೦೭ರ ಭಾರತದ ಕೈಗಾರಿಕೋದ್ಯಮವನ್ನು ಪ್ರತಿನಿಧಿಸಿದ ಉತ್ತುಂಗ ಅಂಗ ಸಂಸ್ಥೆಯಾದ CII (ಭಾರತದ ಕೈಗಾರಿಕೋದ್ಯಮದ ಒಕ್ಕೂಟ)ದ ಅಧ್ಯಕ್ಷರೂ ಆಗಿದ್ದರು. ಕೆಳಕಂಡವರು ಅಶೋಕ್ ಲೇಲ್ಯಾಂಡ್‌ನ ಕಾರ್ಯನಿರ್ವಾಹಕ ಮಂಡಳಿಯ ಮುಖ್ಯಸ್ಥರಾಗಿದ್ದಾರೆ:
- ಮಿ. ವಿನೋದ್ ದಾಸಾರಿ - ನಿರ್ದೇಶಕರು
- ಮಿ. ಕೆ.ಶ್ರೀಧರನ್ - ಮುಖ್ಯ ಹಣಕಾಸು ಅಧಿಕಾರಿ
- ಮಿ. ಜೆ.ಎನ್.ಅಮ್ರೋಲಿಯಾ, ನಿರ್ವಾಹಕ ನಿರ್ದೇಶಕ - ಕನ್ಸ್‌ಟ್ರಕ್ಷನ್ ಅಂಡ್ ಅಲ್ಲೈಡ್ ಬಿಸಿನೆಸ್
- ಮಿ. ಅನುಪ್ ಭಟ್, ನಿರ್ವಾಹಕ ನಿರ್ದೇಶಕ - ಸ್ಟ್ರ್ಯಾಟಿಜಿಕ್ ಸೋರ್ಸಿಂಗ್
- ಮಿ. ಎಸ್.ಬಾಲಸುಬ್ರಹ್ಮಣ್ಯಂ, ನಿರ್ವಾಹಕ ನಿರ್ದೇಶಕ - ಯೋಜನೆಗಳು
- ಮಿ. ಎ.ಕೆ.ಜೈನ್, ನಿರ್ವಾಹಕ ನಿರ್ದೇಶಕ -ಪ್ರಾಜೆಕ್ಟ್ ಪ್ಲ್ಯಾನಿಂಗ್
- ಮಿ. ಆರ್.ಆರ್.ಜಿ.ಮೆನನ್, ನಿರ್ವಾಹಕ ನಿರ್ದೇಶಕ - ಪ್ರಾಡಕ್ಟ್ ಡೆವಲಪ್ಮೆಂಟ್
- ಮಿ. ಎನ್.ಮೋಹನ್‌ಕೃಷ್ಣನ್, ನಿರ್ವಾಹಕ ನಿರ್ದೇಶಕ - ಇಂಟರ್ನಲ್ ಆಡಿಟ್
- ಮಿ. ಎಮ್.ನಟರಾಜ್, ನಿರ್ವಾಹಕ ನಿರ್ದೇಶಕ - ಗ್ಲೋಬಲ್ ಬಸ್ ಸ್ಟ್ರ್ಯಾಟೆಜಿ
- ಮಿ. ರಾಜಿಂದರ್ ಮಲ್ಹಾನ್, ನಿರ್ವಾಹಕ ನಿರ್ದೇಶಕ - ಅಂತರರಾಷ್ಟ್ರೀಯ ಕಾರ್ಯಾಚರಣೆ
- ಮಿ. ರಾಜೀವ್ ಸಹಾರಿಯಾ, ನಿರ್ವಾಹಕ ನಿರ್ದೇಶಕ - ಮಾರ್ಕೆಟಿಂಗ್
- ಮಿ. ಶೇಖರ್ ಅರೋರಾ, ನಿರ್ವಾಹಕ ನಿರ್ದೇಶಕ - ಮಾನವ ಸಂಪನ್ಮೂಲ
- ಮಿ. ಬಿ.ಎಮ್.ಉದಯಶಂಕರ್, ನಿರ್ವಾಹಕ ನಿರ್ದೇಶಕ - ಉತ್ಪಾದನೆ
- ಮಿ. ಎ.ಆರ್.ಚಂದ್ರಶೇಖರನ್, ನಿರ್ವಾಹಕ ನಿರ್ದೇಶಕ - ಸೆಕ್ರೆಟೇರಿಯಲ್ ಅಂಡ್ ಕಂಪನಿ ಸೆಕ್ರೆಟರಿ
ಸಾಧನೆಗಳು
[ಬದಲಾಯಿಸಿ]- ಅಶೋಕ್ ಲೇಲ್ಯಾಂಡ್‌ನ ಬಸ್ಸುಗಳು ಪ್ರತಿದಿನ ೬೦ ಮಿಲಿಯನ್ ಪ್ರಯಾಣಿಕರನ್ನು ಹೊತ್ತೊಯ್ಯುತ್ತವೆ, ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಕರ ಸಂಖ್ಯೆಗಿಂತಲೂ ಹೆಚ್ಚು
- ಭಾರತದ ಮೆರೈನ್ ಡೀಸೆಲ್ ಎಂಜಿನ್‌ಗಳ ಮಾರುಕಟ್ಟೆಯಲ್ಲಿ ಅಶೋಕ್ ಲೇಲ್ಯಾಂಡ್ ಸುಮಾರು ೮೫% ಶೇರುಗಳನ್ನು ಹೊಂದಿದೆ
- ೨೦೦೨ರಲ್ಲಿ, ಅಶೋಕ್ ಲೇಲ್ಯಾಂಡ್‌ನ ಎಲ್ಲಾ-ತಯಾರಿಕಾ ಘಟಕಗಳು ಎನ್ವಿರಾನ್ಮೆಂಟಲ್ ಮ್ಯಾನೇಜ್‌ಮೆಂಟ್ ಸಿಸ್ಟಂನಿಂದ ಐಎಸ್‌ಒ ೧೪೦೦೧ ಪ್ರಮಾಣೀಕೃತಗೊಂಡಿವೆ, ಭಾರತದಲ್ಲಿ ಹೀಗೆ ಪಡೆದು ಕೊಂಡ ಕಂಪನಿಗಳಲ್ಲಿ ಇದು ಮೊದಲ ವಾಣಿಜ್ಯ ವಾಹನ ತಯಾರಿಕಾ ಕಂಪನಿಯಾಗಿದೆ.
- ೨೦೦೫ರಲ್ಲಿ, ಕಂಪನಿಯ ಇನ್ಫಾರ್ಮೇಶನ್ ಸೆಕ್ಯುರಿಟಿ ಮ್ಯಾನೇಜ್ಮೆಂಟ್ ಸಿಸ್ಟಂ (ಐಎಸ್‌ಎಮ್‌ಎಸ್)ಗಾಗಿ ಬಿಎಸ್೭೭೯೯ ಪ್ರಮಾಣಪತ್ರ ಪಡೆದುಕೊಂಡಿದೆ, ಹೀಗೆ ಪಡೆದುಕೊಂಡ ಭಾರತದ ಮೊದಲ ವಾಹನ ತಯಾರಿಕಾ ಕಂಪನಿಯಾಗಿದೆ.
- ೨೦೦೬ರಲ್ಲಿ, ಐಎಸ್‌ಒ/TS ೧೬೯೪೯ ಕಾರ್ಪೊರೇಟ್ ಸರ್ಟಿಫಿಕೇಶನ್ ಪಡೆದು ಕೊಂಡಿತು. ಇದನ್ನು ಪಡೆದುಕೊಂಡ ಭಾರತದ ಮೊದಲ ವಾಹನ ತಯಾರಿಕಾ ಕಂಪನಿಯಾಗಿದೆ.
- ಇದು ವಿಶ್ವದಲ್ಲಿಯೇ ರಕ್ಷಣಾ ಪಡೆಗಳಿಗೆ ವಾಹನಗಳನ್ನು ಸರಬರಾಜು ಮಾಡುವ ಅತಿ ದೊಡ್ಡ ಕಂಪನಿಯಾಗಿದೆ ಹಾಗೂ ಭಾರತೀಯ ಭೂಸೈನ್ಯಕ್ಕೆ ಸರಕು ವಾಹನಗಳನ್ನು ಕೂಡಾ ಒದಗಿಸುತ್ತದೆ.
ಉತ್ಪನ್ನಗಳು
[ಬದಲಾಯಿಸಿ](ಎಕ್ಸಾಸ್ಟೀವ್ ಅಲ್ಲದ)
- ಲಕ್ಸುರಾ
- ವಿಕಿಂಗ್ ಬಿಎಸ್-I - ನಗರ ಸಾರಿಗೆ
- ವಿಕಿಂಗ್ ಬಿಎಸ್-II - ನಗರ ಸಾರಿಗೆ
- ವಿಕಿಂಗ್ ಬಿಎಸ್-III - ನಗರ ಸಾರಿಗೆ
- ಚೀತಾಹ್ ಬಿಎಸ್-I
- ಚೀತಾಹ್ ಬಿಎಸ್-II
- ಪ್ಯಾಂಥರ್
- ೧೨ಎಮ್ ಬಸ್
- ಸ್ಟ್ಯಾಗ್ ಮಿನಿ
- ಸ್ಟ್ಯಾಗ್ ಸಿಎನ್‌ಜಿ
- ೨೨೨ ಸಿಎನ್‌ಜಿ
- ಲಿಂಕ್ಸ್
- ಡಬಲ್ ಡೆಕ್ಕರ್
- ವೆಸ್ಟಿಬುಲ್ ಬಸ್
- ಏರ್‌ಪೋರ್ಟ್ ಟರ್ಮ್ಯಾಕ್ ಕೋಚ್
- ಜೆನ್‌ಸೆಟ್‌ಗಳು
ಗೋಡ್ಸ್ ವಿಭಾಗ
[ಬದಲಾಯಿಸಿ]- ಕಾಮೆಟ್ ೧೬೧೧
- ೧೬೧೨ ಎಚ್
- ೧೬೧೩ ಎಚ್
- ೧೬೧೩ H/೨ (೧೨m ಗೂಡ್ಸ್)
- ೪/೫೧ ಜಿಎಸ್
- ೧೬೧೩
- ತಾರಸ್ ೨೫೧೬/೨ (೬x೪) ಟಿಪ್ಪರ್
- CT ೧೬೧೩ H/೧ & H/೨
- ಬೈಸನ್ ಟಿಪ್ಪರ್
- ೧೬೧೩ ST (೪x೨)
- ತಾರಸ್ ಎಚ್‌ಡಿ ೨೫೧೬MT/೧ (೬x೪)
- ತಾರಸ್ ೨೫೧೬ - ೬X೪
- ೨೫೧೬ ಎಚ್ (೬X೨)
- ತಾರಸ್ ೨೫೧೬ - ೬ X ೨
- ೪೦೧೮ ಟ್ರ್ಯಾಕ್ಟರ್
- ಅರ್ಟಿಕ್ ೩೦.೧೪ ಟ್ರ್ಯಾಕ್ಟರ್
- ಟಸ್ಕರ್ ಟರ್ಬೊ ಟ್ರ್ಯಾಕ್ಟರ್ ೩೫೧೬
- ಎಕೊಮೆಟ್ ೯೧೨
- ಎಕೊಮೆಟ್ ೧೧೧i
- ೪೯೨೧
ಇವನ್ನೂ ನೋಡಿ
[ಬದಲಾಯಿಸಿ]- ಬ್ರಿಟಿಷ್ ಲೇಲ್ಯಾಂಡ್
- ಲೇಲ್ಯಾಂಡ್ ಮೋಟಾರ್ಸ್ ಲಿಮಿಟೆಡ್
ಉಲ್ಲೇಖಗಳು
[ಬದಲಾಯಿಸಿ]- ↑ "Lanka Ashok Leyland". Ashok Leyland. Archived from the original on 2008-10-05. Retrieved 2008-09-28.
Established in 1982, this is a joint venture between Ashok Leyland and the Government of Sri Lanka. Equity holding of Ashok Leyland Ltd. in the joint venture is 28%.
- ↑ ಎಸ್‌ಎಮ್‌ಇ ಟೈಮ್ಸ್ ನ್ಯೂಸ್ ಬ್ಯೂರೋ | ೩೦ ಏಪ್ರಿಲ್, ೨೦೧೦
- ↑ "ಲೇಲ್ಯಾಂಡ್, ಜಾನ್ ದೀರೆ ಸಂಪೂರ್ಣ ಜೆವಿ ನಿಯಮಗಳು". Archived from the original on 2009-07-19. Retrieved 2011-01-27.
- ↑ ", ಅಶೋಕ್ ಲೇಲ್ಯಾಂಡ್‍ನ ರೂ 60 ಲಕ್ಷ ಐಬಸ್". Archived from the original on 2010-04-05. Retrieved 2011-01-27.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Articles needing additional references from September 2008
- Articles with invalid date parameter in template
- All articles needing additional references
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Wikipedia articles needing rewrite from September 2010
- Commons link is locally defined
- ಬಸ್ ತಯಾರಕರು
- ಟ್ರಕ್ ತಯಾರಕರು
- ಭಾರತದ ಮೋಟಾರು ವಾಹನ ತಯಾರಕರು
- ಚೆನ್ನೈ ಮೂಲದ ಕಂಪನಿಗಳು
- ಮಿಲಿಟರಿ ವಾಹನ ತಯಾರಕರು
- ಲೇಲ್ಯಾಂಡ್ ಮೋಟಾರ್ಸ್
- ಉದ್ಯಮ