ವಿಕ್ಟೋರಿಯಾ ಸ್ಮಾರಕ
22°32′42″N 88°20′33″E / 22.5449°N 88.3425°E
Victoria Memorial Hall | |
---|---|
ಸ್ಥಾಪನೆ | 1921 |
ಸ್ಥಳ | Queen's Way - ಕೊಲ್ಕತ್ತ, India |
ವರ್ಗ | Museum |
ಸಂಗ್ರಹದ ಗಾತ್ರ | Nearly ೩೦,೦೦೦ (as on March ೩೧, ೨೦೦೯)[೧] |
ಪರಿಪಾಲಕ | Chittaranjan Panda |
ಜಾಲತಾಣ | victoriamemorial-cal.org |
ಈ ವಿಕ್ಟೋರಿಯಾ ಸ್ಮಾರಕ ವನ್ನು ಅಧಿಕೃತವಾಗಿ ವಿಕ್ಟೋರಿಯಾ ಮೆಮೊರಿಯಲ್ ಹಾಲ್ ಎನ್ನಲಾಗಿದ್ದು ಈ ಕಟ್ಟಡವನ್ನುಯುನೈಟೈಡ್ ಕಿಂಗ್ಡಮ್ ನ ವಿಕ್ಟೋರಿಯಾ ಮಹಾರಾಣಿ ಮತ್ತು ಭಾರತದ ಸಾಮ್ರಾಜ್ಞಿಗೆ ಉಲ್ಲೇಖಿಸಲಾಗುತ್ತದೆ.ಇದು ಭಾರತದ ಪಶ್ಚಿಮ ಬಂಗಾಳದ ರಾಜ್ಯದ ಕೊಲ್ಕತ್ತಾದಲ್ಲಿದ್ದು ಇದು ಬ್ರಿಟಿಶ್ ಇಂಡಿಯಾದ ಅಂದಿನ ರಾಜಧಾನಿಯಾಗಿತ್ತು. ಸದ್ಯ ಅದೀಗ ವಸ್ತು ಸಂಗ್ರಹಾಲಯ ಮತ್ತು ಪ್ರವಾಸಿ ಆಕರ್ಷಣೆಯೆನಿಸಿದೆ.[೨] ಇದು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದಡಿಯ ಸ್ವಾಯತ್ತ ಸಂಸ್ಥೆಯಾಗಿದೆ.
ವಿನ್ಯಾಸ ಮತ್ತು ನಿರ್ಮಾಣದ ರಚನೆ
[ಬದಲಾಯಿಸಿ]ಈ ಸ್ಮಾರಕದ ವಿನ್ಯಾಸವನ್ನು ವಿಲಿಯಮ್ ಎಮೆರ್ಸನ್ [೩] ಅವರು ಇಂಡೊ-ಸಾರ್ಸೆನಿಕ್ ಶೈಲಿ (ಭಾರತದಲ್ಲಿನ ಇಸ್ಲಾಮ್ ಶೈಲಿ)ಯು ಆಗಿನ ಮೊಘಲ್ ರಚನಾ ಕೌಶಲದ ಅಂಶಗಳನ್ನು ಸೇರಿಸಿ ವಿನ್ಯಾಸಗೊಳಿಸಿದ್ದಾರೆಂದು ಹೇಳಲಾಗಿದೆ. ಲಾರ್ಡ್ ರೆಡ್ಸ್ಡೇಲ್ ಮತ್ತು ಸರ್ ಡೇವಿಡ್ ಪ್ರೇನ್ ಇಲ್ಲಿನ ಉದ್ಯಾನಗಳನ್ನು ವಿನ್ಯಾಸಗೊಳಿಸಿದ್ದಾರೆ. ಈ ಸ್ಮಾರಕಕ್ಕೆ ೧೯೦೬ ರಲ್ಲಿ ಶಂಕುಸ್ಥಾಪನೆ ಮಾಡಲಾಗಿದೆ. ಈ ಐತಿಹಾಸಿಕ ಸ್ಮಾರಕವು ಭಾರತದಲ್ಲಿನ ಬ್ರಿಟಿಶ್ ಸಾಮ್ರಾಜ್ಯಶಾಹಿಗೆ ತೋರುವ ಒಂದು ಗೌರವವಾಗಿದೆ.
ವಾಸ್ತುಶಿಲ್ಪಿ ವಿಲಿಯಮ್ ಎಮೆರ್ಸನ್ ಇಂತಹ ಸ್ಮಾರಕಕ್ಕಾಗಿ ನಿಜವಾದ ಯೋಜನೆಯೊಂದನ್ನು ಸಿದ್ದಪಡಿಸಿದ್ದರು. ಈ ಕಟ್ಟಡದ ರಚನೆಯು ಬ್ರಿಟಿಶ್ ಮತ್ತು ಮೊಘಲ್ ರ ವಾಸ್ತು ಶೈಲಿಯ ಮಿಶ್ರಣವನ್ನು ಪ್ರತಿನಿಧಿಸುತ್ತದೆ. ಶ್ವೇತ ಮಕ್ರಾನಾ ಅಮೃತಶಿಲೆಯನ್ನು ವಿಕ್ಟೋರಿಯಾ ಸ್ಮಾರಕ ಹಾಲ್ ನ ರಚನೆಯಲ್ಲಿ ಬಳಸಲಾಗಿದೆ.ನೂತನ ಕಟ್ಟಡವನ್ನು ೧೯೨೧ ರಲ್ಲಿ ಉದ್ಘಾಟಿಸಲಾಯಿತು. ಈ ಬೃಹತ್ ಹಾಲ್ 338 feet (103 m) ರಿಂದ228 feet (69 m) ಮತ್ತು ಒಟ್ಟು 184 feet (56 m) ರಷ್ಟು ಎತ್ತರ ಹೊಂದಿದೆ.
ಇದರ ನಿರ್ಮಾಣಕ್ಕಾಗಿ ಬ್ರಿಟಿಶ್ ಸರ್ಕಾರದ ಹಣವನ್ನು ಉಪಯೋಗಿಸಿಲ್ಲ. ಬ್ರಿಟಿಶ್ ಸರ್ಕಾರದಿಂದ ಕೆಲವು ಕೆಲಸ ಕಾರ್ಯಗಳಿಗೆ ಅವಲಂಬಿತ ಭಾರತದ ಕೆಲ ವ್ಯಕ್ತಿಗಳು ಈ ಕಾರ್ಯಕ್ಕಾಗಿ ತಮ್ಮ ದೇಣಿಗೆ ನೀಡಿದ್ದಾರೆ.ಹೀಗೆ ಈ ವಿಕ್ಟೋರಿಯಾ ಮೆಮೊರಿಯಲ್ ಹಾಲ್ ಕಟ್ಟಡ ರೂಪ ತಳೆದಿದೆ.[ಸೂಕ್ತ ಉಲ್ಲೇಖನ ಬೇಕು]
ಉಪಯೋಗ
[ಬದಲಾಯಿಸಿ]ಈ ವಿಕ್ಟೋರಿಯಾ ಮೆಮೊರಿಯಲ್ ಸ್ಮಾರಕವು ಗಾತ್ರದಲ್ಲಿ ಬಹುದೊಡ್ಡದಾಗಿದ್ದು ಇದು ವಿಶಾಲವಾದ ಉದ್ಯಾನಗಳ ಮಧ್ಯೆ ಇದು ಹರಡಿ ಒಟ್ಟು 64 acres (260,000 m2) ರಷ್ಟು ಪ್ರದೇಶ ಹೊಂದಿದೆ. ಈ ವಸ್ತುಸಂಗ್ರಹಾಲಯದಲ್ಲಿ ವಿಕ್ಟೋರಿಯಾ ಮತ್ತು ಬ್ರಿಟಿಶ್ ಉಪಸ್ಥಿತಿಯ ಬಗ್ಗೆ ಮಾಹಿತಿ ನೀಡುವ ಹಲವು ಪ್ರದರ್ಶನಗಳಿವೆ.ಇದಲ್ಲದೇ ಇನ್ನೂ ಹಲವು ದೊಡ್ಡ ಪ್ರಮಾಣದ ಸಂಗ್ರಹಗಳಿವೆ.. ಈ ಸ್ಮಾರಕದಲ್ಲಿ ರಾಯಲ್ ಗ್ಯಾಲರಿಯಲ್ಲಿ ವಿಕ್ಟೋರಿಯಾ ರಾಣಿಯ ವಿವಿಧ ಚಿತ್ರಗಳು ಮತ್ತು ಪ್ರಿನ್ಸ್ ಅಲ್ಬರ್ಟ್ ರ ಭಾವಚಿತ್ರಗಳನ್ನು ಕಾಣಬಹುದು.ಅಲ್ಲಿರುವ ಸಾಕಷ್ಟು ಚಿತ್ರಕಲೆಗಳು ಅವರ ಬದುಕಿನ ಚಿತ್ರಣವನ್ನು ನೀಡುತ್ತವೆ...
ಭಾರತ ೧೯೪೭ ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ವಿಕ್ಟೋರಿಯಾ ಸ್ಮಾರಕಕ್ಕೆ ಕೆಲವು ಹೆಚ್ಚುವರಿಗಳನ್ನು ಸೇರಿಸಿ ಅದರಲ್ಲಿ ಕಾಯ್ಡಿಡಲಾಗಿದೆ. ಈ ಹೆಚ್ಚುವರಿ ಸಂಗ್ರಹದಲ್ಲಿ ನ್ಯಾಶನಲ್ ಲೀಡರ್ಸ್ ಗ್ಯಾಲರಿ ಇದ್ದು,ಇದರಲ್ಲಿ ಚಿತ್ರಗಳು,ಭಾವಚಿತ್ರಗಳು,ತೈಲ ಚಿತ್ರಗಳು,ಚಿತ್ರ ಕಲೆಗಳು ಅದಲ್ಲದೇ ಭಾರತದ ಸ್ವಾತಂತ್ರ್ಯಕ್ಕೆ ಸಂಭಂಧಿಸಿದ ದಾಖಲೆಗಳ ಚಿತ್ರಣವಿದೆ.
ಚಿತ್ರಗಳ ಗ್ಯಾಲರಿ
[ಬದಲಾಯಿಸಿ]-
ವಿಕ್ಟೋರಿಯಾ ಸ್ಮಾರಕ
-
ಸ್ಮಾರಕದಲ್ಲಿರುವ ವಿಕ್ಟೋರಿಯಾ ರಾಣಿಯ ವಿಗ್ರಹ
-
ವಿಕ್ಟೋರಿಯಾ ಸ್ಮಾರಕದ ಮುಂಭಾಗದ ಅಂಚು
-
ಸಂಯೋಜಿತ ಪ್ರತಿಬಿಂಬ
-
ಕೊಲ್ಕತ್ತಾದಲ್ಲಿನ ವಿಕ್ಟೋರಿಯಾ ಮೆಮೊರಿಯಲ್ ಹಾಲ್ ಸಾಯಂಕಾಲದಲ್ಲಿನ ನೋಟ
-
ಕೊಲ್ಕತ್ತಾದಲ್ಲಿರುವ ವಿಕ್ಟೋರಿಯಾ ಮೆಮೊರಿಯಲ್ ನಲ್ಲಿರುವ ಕಿಂಗ್ ಎಡ್ವರ್ಡ್ VII ಆರ್ಚ್
ಉಲ್ಲೇಖಗಳು
[ಬದಲಾಯಿಸಿ]- ↑ Government of India, Ministry of Culture, ANNUAL REPORT ೨೦೦೮-೦೯ p. ೩೦
- ↑ http://www.iloveindia.com/indian-monuments/victoria-memorial.html
- ↑ http://www.kolkatainformation.com/calhert/v_mem.htm Archived 2007-03-10 ವೇಬ್ಯಾಕ್ ಮೆಷಿನ್ ನಲ್ಲಿ. [kolkatainformation.com]
- ವಿಕಿಟ್ರಾವೆಲ್ ನಲ್ಲಿ ವಿಕ್ಟೋರಿಯಾ ಸ್ಮಾರಕ ಪ್ರವಾಸ ಕೈಪಿಡಿ (ಆಂಗ್ಲ)
- ಅಧಿಕೃತ ಜಾಲತಾಣ Archived 2007-05-19 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಕ್ಟೋರಿಯಾ ಸ್ಮಾರಕ: ಕೊಲಕತ್ತಾದ ಅಭಿಮಾನದ್ಯೋತಕ. ರಿಡಿಫ್ ನಿವ್ಜ್ .[೧]
- Pages using gadget WikiMiniAtlas
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Coordinates on Wikidata
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with unsourced statements from January 2010
- Articles with invalid date parameter in template
- Commons link is locally defined
- ಕೊಲ್ಕತ್ತಾದಲ್ಲಿರುವ ಕಟ್ಟಡಗಳು ಮತ್ತು ನಿರ್ಮತಿಯ ರಚನೆಗಳು
- ಕೊಲ್ಕತ್ತಾದಲ್ಲಿರುವ ಪ್ರವಾಸಿಗರ ಆಕರ್ಷಣೆಗಳು
- ಭಾರತದ ಸ್ಮಾರಕಗಳು ಮತ್ತು ಸ್ಮರಣಿಕೆಗಳು
- ಕೊಲ್ಕತ್ತಾದ ಇತಿಹಾಸ
- 2010ರಲ್ಲಿ ಸಂಪೂರ್ಣಗೊಳಿಸಲಾದ ಕಟ್ಟಡಗಳು ಮತ್ತು ರಚನೆಗಳು
- ಪಶ್ಚಿಮ ಬಂಗಾಳದಲ್ಲಿನ ವಸ್ತು ಸಂಗ್ರಹಾಲಯಗಳು
- ವಸ್ತು ಸಂಗ್ರಹಾಲಯಗಳು