ಲೋಕೋಪಯೋಗಿ ಶಿಲ್ಪ ವಿಜ್ಞಾನ
ಲೋಕೋಪಯೋಗಿ ಶಿಲ್ಪ ವಿಜ್ಞಾನದ ತಂತ್ರಜ್ಞಾನ (ಸಿವಿಲ್ ಇಂಜಿನಿಯರಿಂಗ್) ವು ವೃತ್ತಿಪರ ಎಂಜಿನೀಯರಿಂಗ್ ಕ್ಷೇತ್ರದ ಶಿಸ್ತು ಬದ್ದ ಕಾರ್ಯಾಚರಣೆ ಎನಿಸಿದೆ.ಇದು ವಿನ್ಯಾಸ,ನಿರ್ಮಾಣ ಮತ್ತು ಭೌತಿಕ ಮತ್ತು ನೈಸರ್ಗಿಕ ವಾತಾವರಣದ ಉಸ್ತುವಾರಿ,ಅಂದರೆ ಸೇತುವೆಗಳು,ರಸ್ತೆಗಳು,ಕಾಲುವೆ-ನಾಲೆಗಳು,ಅಣೆಕಟ್ಟೆಗಳು ಮತ್ತು ಕಟ್ಟಡಗಳ [೧] ಕೆಲಸವನ್ನು [೨][೨][೩] ಒಳಗೊಂಡಿದೆ. ಮಿಲಿಟರಿ ಎಂಜಿನೀಯರಿಂಗ್ ನಂತರ ಲೋಕೋಪಯೋಗಿ ಶಿಲ್ಪವಿಜ್ಞಾನವು ಅತ್ಯಂತ ಪುರಾತನ ಎಂಜಿನೀಯರಿಂಗ್ ಸೂತ್ರವಾಗಿದೆ.ಮಿಲಿಟರಿ-ರಹಿತ ಎಂಜನೀಯರಿಂಗ್ ನ್ನು ಮಿಲಿಟರಿ ಎಂಜನೀಯರಿಂಗ್ ನಿಂದ ಬೇರ್ಪಡಿಸಲು ಇದನ್ನು ಪ್ರತ್ಯೇಕವಾಗಿ [೪][೫] ವ್ಯಾಖ್ಯಾನಿಸಲಾಗಿದೆ. ಸಾಂಪ್ರದಾಯಕವಾಗಿ ಇದನ್ನು ಹಲವಾರು ಉಪ-ಸೂತ್ರಗಳಲ್ಲಿ ವಿಭಜಿಸಲಾಗಿದೆ.ಪರಿಸರ ಎಂಜಿನೀಯರಿಂಗ್, ಭೌಗೋಳಿಕ ತಂತ್ರಜ್ಞಾನದ ಎಂಜನೀಯರಿಂಗ್,ರಚನಾತ್ಮಕ ಎಂಜಿನೀಯರಿಂಗ್ ,ಸಾರಿಗೆ ಎಂಜನೀಯರಿಂಗ್,ಪುರಸಭೆ ಅಥವಾ ನಗರೀಕರಣದ ಎಂಜನೀಯರಿಂಗ್,ಜಲಸಂಪನ್ಮೂಲ ಎಂಜಿನೀಯರಿಂಗ್ ,ಕಚ್ಚಾ ಸಾಮಗ್ರಿಗಳ ಎಂಜನೀಯರಿಂಗ್,ಕರಾವಳಿ ಎಂಜನೀಯರಿಂಗ್, ಸರ್ವೇಕ್ಷಣೆ, ಮತ್ತು ನಿರ್ಮಾಣ ಎಂಜಿನೀಯರಿಂಗ್ ಗಳನ್ನು [೪][೬] ಒಳಗೊಂಡಿದೆ. ಲೋಕೋಪಯೋಗಿ ವಿಜ್ಞಾನಶಾಸ್ತ್ರವು ಎಲ್ಲಮಟ್ಟಗಳಲ್ಲಿ ತನ್ನ ಅಸ್ತಿತ್ವ ತೋರಿಸುತ್ತದೆ:ಸಾರ್ವಜನಿಕ ವಲಯದಲ್ಲಿ ಮುನ್ಸಿಪಾಲ್ಟಿಗಳಿಂದ ಹಿಡಿದು ಫೆಡರಲ್ ಒಕ್ಕೂಟದ ವರೆಗೆ,ಮತ್ತು ಖಾಸಗಿ ವಲಯದಲ್ಲಿ ವೈಯಕ್ತಿಕ ಗೃಹಮಾಲಿಕರಿಂದ ಹಿಡಿದು ಅಂತಾರಾಷ್ಟ್ರೀಯ ಕಂಪೆನಿಗಳ ವರೆಗಿನ ಮಟ್ಟದಲ್ಲಿ ಅದು ತನ್ನ ಬಾಹು [ಸೂಕ್ತ ಉಲ್ಲೇಖನ ಬೇಕು]ಚಾಚಿದೆ.
ಲೋಕೋಪಯೋಗಿ ಶಿಲ್ಪ ವಿಜ್ಞಾನದ ವೃತ್ತಿಪರ ಇತಿಹಾಸ
[ಬದಲಾಯಿಸಿ]ಮಾನವನ ಅಸ್ತಿತ್ವದ ಆರಂಭದಿಂದಲೂ ಶಿಲ್ಪವಿಜ್ಞಾನವು ಬದುಕಿನ ಅವಿಭಾಜ್ಯ ಅಂಗವಾಗಿದೆ. ಲೋಕೋಪಯೋಗಿ ಶಿಲ್ಪ ವಿಜ್ಞಾನವು 4000 ಮತ್ತು 2000BC ನಡುವಿನ ಅವಧಿಯಲ್ಲಿ ನಿಖರವಾಗಿ ಆರಂಭಗೊಂಡ ಪ್ರಾಚೀನ ಈಜಿಪ್ತ್ ಮತ್ತು ಮೆಸ್ ಪೊಟಮಿಯಾ ಸಂಸ್ಕೃತಿಗಳ ನಂತರ ಮಾನವರು ಅಲೆದಾಟ ನಿಲ್ಲಿಸಿ ಆಶ್ರಯ ತಾಣಗಳ ನಿರ್ಮಾಣದ ಅವಶ್ಯಕತೆ ಕಂಡುಕೊಂಡರು. ಇದೇ ಅವಧಿಯಲ್ಲಿ ಸಾರಿಗೆಯ ಅಗತ್ಯತೆಯಲ್ಲಿ ಹೆಚ್ಚಳ ಕಂಡು ಅಭಿವೃದ್ಧಿಯ ಆವರ್ತನದ ಚಕ್ರ ಮತ್ತು ಜಲಸಂಚಾರದ ಡೋಣಿ ಮತ್ತು ನಾವಿಕತೆಯು ಪ್ರಚಲಿತಗೊಂಡಿತು. ಈಜಿಪ್ತ್ ನಲ್ಲಿ ಪಿರಾಮಿಡ್ ಗಳ ನಿರ್ಮಾಣವು ಮೊದಲ ಬೃಹತ್ ಪ್ರಮಾಣದ ಕಟ್ಟಡ ರಚನೆಗೆ ನಾಂದಿ ಹಾಡಿತು. ಇನ್ನುಳಿದ ಪುರಾತನ ಲೋಕೋಪಯೋಗಿ ವಿಜ್ಞಾನಶಾಸ್ತ್ರದ ನಿರ್ಮಾಣವೆಂದರೆ,ಪ್ರಾಚೀನ ಗ್ರೀಸ್ ನ ಇಕ್ತಿನೋಸ್ ಜನಾಂಗದವರಿಂದ (447-438 BC)ಯಲ್ಲಿ ನಿರ್ಮಾಣಗೊಂಡ ಪಾರ್ಥೆನನ್(ಅಥೆನಾ ದೇವತೆಯ ದೇವಸ್ಥಾನ ನಿರ್ಮಾಣ),ರೊಮನ್ ಎಂಜಿನೀಯರುಗಳಿಂದ ಅಪ್ಪಿಯನ್ ಮಾರ್ಗ(ದೊಡ್ಡ ಕಾಲುವೆಯ) ನಿರ್ಮಾಣಗಳು. ಅವಧಿ (c.312 BC) ಯಲ್ಲಿ ಚೀನಾದ ಚಕ್ರವರ್ತಿಶಿಹ್ ಹೌಂಗ್ ತಿ ಯವರ ಆಜ್ಞೆಯಂತೆ ಜನರಲ್ ಮೆಂಗ್ ತೆಯಿನ್ ಗ್ರೇಟ್ ವಾಲ್ ಆಫ್ ಚೀನಾದ ನಿರ್ಮಾಣ ಮಾಡಿದರು. (c. 220 BC)ಯಲ್ಲಿ ಪ್ರಾಚೀನ ಶ್ರೀಲಂಕಾದಲ್ಲಿ ಬೌದ್ದ ಧರ್ಮದ ಸ್ತೂಪಗಳನ್ನು ನಿರ್ಮಿಸಲಾಯಿತು.ಅದರಲ್ಲಿ ಜಿತವಾನರಮಯ ಮತ್ತು ಅನುರಾಧಾಪುರದಲ್ಲಿನ ದೊಡ್ಡ ಪ್ರಮಾಣದ ನೀರಾವರಿ ಕೆಲಸ ಕಾರ್ಯಗಳು ಒಳಗೊಂಡಿವೆ. ರೊಮನ್ ರು ತಮ್ಮ ಸಾಮ್ರಾಜ್ಯದಾದ್ಯಂತ ಲೋಕೋಪಯೋಗಿ ಕಟ್ಟಡ ರಚನಾ ಕಾರ್ಯಗಳನ್ನು ಅಭಿವೃದ್ಧಿಪಡಿಸಿದರು.ಬಹುಮುಖ್ಯವಾಗಿ ದೊಡ್ಡ ದೊಡ್ಡ ಕಾಲುವೆಯಗಳ ನಿರ್ಮಾಣ,ತಡೆಗೋಡೆಗಳ ರಚನೆ,ಬಂದರುಗಳು,ಸೇತುವೆಗಳು,ಅಣೆಕಟ್ಟುಗಳು ಮತ್ತು ರಸ್ತೆಗಳು ಒಳಗೊಂಡಿವೆ.
ಆಧುನಿಕ ಕಾಲದ ವರೆಗೂ ಲೋಕೋಪಯೋಗಿ ಶಿಲ್ಪ ವಿಜ್ಞಾನಶಾಸ್ತ್ರ ಮತ್ತು ವಾಸ್ತುಶಿಲ್ಪದ ನಡುವಿನ ಸ್ಫಷ್ಟ ಅಂತರ ಗೊತ್ತಾಗಿರಲಿಲ್ಲ.ಅಭಿಯಂತರ ಮತ್ತು ವಾಸ್ತುತಜ್ಞ ಪದಗಳು ಬಹುಮುಖ್ಯವಾಗಿ ಭೌಗೋಳಿಕ ಏರುಪೇರಿನ ಮೇಲೆ ಆಧರಿಸಿ ವ್ಯಕ್ತಿಗತವಾಗಿರುತ್ತವೆ.ಅದೂ ಅಲ್ಲದೇ ಆಗಾಗ್ಗೆ ಇವುಗಳನ್ನು ಪರಸ್ಪರ ಬದಲಾದ ಪರಿಸ್ಥಿಗಳಲ್ಲಿ [೭] ಬಳಸಲಾಗುತ್ತದೆ.[೫] ಲೋಕೋಪಯೋಗಿ ವಿಜ್ಞಾನ ಶಾಸ್ತ್ರವು 18ನೆಯ ಶತಮಾನದ ಹೊತ್ತಿಗೆ ಮಿಲಿಟರಿ ಎಂಜಿನೀಯರಿಂಗ್ ನೊಂದಿಗೆ ಪ್ರತ್ಯೇಕ ವ್ಯಾಖ್ಯಾನವಾಗಿ ಗುರುತಿಸಿಕೊಳ್ಳಲು [೫] ಆರಂಭಿಸಿತು.
ಮೊಟ್ಟಮೊದಲ ಸ್ವಯಂ-ಘೋಷಿತ ಸಿವಿಲ್ ಎಂಜಿನೀಯರರೆಂದರೆ ಜಾನ್ ಸ್ಮಿಟಾನ,ಈತ ಎಡ್ಡಿಸ್ಟೋನ್ ಲೈಟ್ ಹೌಸನ್ನು [೪][೬] ನಿರ್ಮಿಸಿದ. ಇಸವಿ1771ರಲ್ಲಿ ಸ್ಮಿಲ್ಟಾನ್ ಮತ್ತು ಕೆಲವು ಆತನ ಸಹೋದ್ಯೋಗಿಗಳು ಸ್ಮಿಟಾನಿಯನ್ ಸೊಸೈಟಿ ಆಫ್ ಸಿವಿಲ್ ಎಂಜಿನೀಯರ್ಸ,ಎಂಬ ಹಿರಿಯ ವೃತ್ತಿಪರರ ಗುಂಪೊಂದು ಅನೌಪಚಾರಿಕವಾಗಿ ರಾತ್ರಿ ಊಟದ ಔತಣ ಕೂಟದಲ್ಲಿ ಭೇಟಿಯಾದರು. ಆದಾಗ್ಯೂ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಸಭೆಗಳು ನಡೆದ ಪುರಾವೆಗಳಿದ್ದರೂ,ಇದು ಸಾಮಾಜಿಕ ವಲಯದಲ್ಲಿ ಸಾಮಾನ್ಯಕ್ಕಿಂತ ಕೆಲಮಟ್ಟಿಗೆ ಹೆಚ್ಚು ಎಂದೇ ಹೇಳಬೇಕು.
ಇಸವಿ 1818ರಲ್ಲಿ ಇನ್ ಸ್ಟಿಟ್ಯೂಟ್ ಆಫ್ ಎಂಜಿನೀಯರ್ಸ್ ಸಂಸ್ಥೆಯನ್ನು ಲಂಡನ್ ನಲ್ಲಿ ಸಂಸ್ಥಾಪಿಸಲಾಯಿತು.1820ರಲ್ಲಿ ಶ್ರೇಷ್ಠ ಎಂಜಿನೀಯರ್(ಅಭಿಯಂತರ)ಥಾಮಸ್ ಟೆಲ್ಫೊರ್ಡ್ ಅದರ ಮೊದಲ ಅಧ್ಯಕ್ಷರಾದರು. ಈ ಸಂಸ್ಥೆಯು 1828ರಲ್ಲಿ ರಾಜವಂಶದ ಸನ್ನದನ್ನು ಪಡೆದು ಔಪಚಾರಿಕವಾಗಿ ಲೋಕೋಪಯೋಗಿ ವಿಜ್ಞಾನವನ್ನು ಒಂದು ವೃತ್ತಿಯನ್ನಾಗಿ ಗುರುತಿಸಿಕೊಂಡಿತು. ಈ ಸನ್ನದು ಲೋಕೋಪಯೋಗಿ ವಿಜ್ಞಾನವನ್ನು ಹೀಗೆ ವ್ಯಾಖ್ಯಾನಿಸಿತು.
the art of directing the great sources of power in nature for the use and convenience of man, as the means of production and of traffic in states, both for external and internal trade, as applied in the construction of roads, bridges, aqueducts, canals, river navigation and docks for internal intercourse and exchange, and in the construction of ports, harbours, moles, breakwaters and lighthouses, and in the art of navigation by artificial power for the purposes of commerce, and in the construction and application of machinery, and in the drainage of cities and towns.[೮]
ಲೋಕೋಪಯೋಗಿ ವಿಜ್ಞಾನ ಶಾಸ್ತ್ರವನ್ನು ಮೊದಲ ಬಾರಿಗೆ 1819ರಲ್ಲಿ ಕ್ಯಾಪ್ಟನ್ ಅಲ್ಡನ್ ಪಾರ್ಟ್ರಿಜೆ ಸ್ಥಾಪಿಸಿದ ಯುನೈಟೈಡ್ ಸ್ಟೇಟ್ಸ್ ನ , ನಾರ್ವಿಚ್ ವಿಶ್ವ ವಿದ್ಯಾಲಯದಲ್ಲಿ [೯] ಕಲಿಸಲಾಯಿತು.. ಲೋಕೋಪಯೋಗಿ ವಿಜ್ಞಾನ ಶಾಸ್ತ್ರದಲ್ಲಿ ಮೊದಲ ಪದವಿಯನ್ನು ಯುನೈಟೆಡ್ ಸ್ಟೇಟ್ಸ್ ನಲ್ಲಿರುವ ರೆನ್ಸೆಲೇರ್ ಪಾಲಿಟೆಕ್ನಿಕ್ ಇನ್ ಸ್ಟಿಟ್ಯೂಟ್ 1835 ರಲ್ಲಿ [೧೦] ಪ್ರದಾನ ಮಾಡಿತು. ಮೊದಲ ಇಂತಹ ಪದವಿಯನ್ನು ನೊರಾ ಸ್ಟ್ಯಾಂಟೊನ್ ಬ್ಲ್ಯಾಚ್ ಎಂಬ ಮಹಿಳೆಗೆ ಕೊರ್ನೆಲ್ ವಿಶ್ವ ವಿದ್ಯಾಲಯವು 1905ನಲ್ಲಿ ಪ್ರದಾನ [ಸೂಕ್ತ ಉಲ್ಲೇಖನ ಬೇಕು]ಮಾಡಿತು.
ಲೋಕೋಪಯೋಗಿ ಶಾಸ್ತ್ರ ವಿಜ್ಞಾನದ ಐತಿಹಾಸಿಕ ವಿಜ್ಞಾನ
[ಬದಲಾಯಿಸಿ]ಲೋಕೋಪಯೋಗಿ ಶಿಲ್ಪ ವಿಜ್ಞಾನವನ್ನು ಭೌತಿಕ ಮತ್ತು ವೈಜ್ಞಾನಿಕ ತತ್ವಗಳ ಅಳವಡಿಕೆ ಎಂದು ಕರೆಯಲಾಗುತ್ತದೆ.ಇತಿಹಾಸದುದ್ದಕ್ಕೂಭೌತ ಶಾಸ್ತ್ರ ಮತ್ತು ಗಣಿತಗಳಲ್ಲಿನ ಪ್ರಗತಿ ಕಂಡುಕೊಳ್ಳುವ ಒಂದು ಸಂಕೀರ್ಣ ವ್ಯವಸ್ಥೆಯೆನಿಸಿದೆ. ಲೋಕೋಪಯೋಗಿ ಶಿಲ್ಪ ವಿಜ್ಞಾನವು ವಿಶಾಲವ್ಯಾಪ್ತಿ ಮತ್ತು ಸುಭದ್ರ ತಳಹದಿಯ ವೃತ್ತಿ, ಇದು ವಿಭಿನ್ನ ಪ್ರತ್ಯೇಕ ವಿಶಿಷ್ಟತೆಯ ಉಪ ನಿಯಮಗಳನ್ನು ಒಳಗೊಂಡಿದೆ.ಇದರ ಇತಿಹಾಸವು ಕಟ್ಟಡ ವಿನ್ಯಾಸಗಳ ವಿಜ್ಞಾನ,ಭೌತಿಕ ವಸ್ತು(ಭೌತ) ವಿಜ್ಞಾನ,ಭೂಗೋಳಶಾಸ್ತ್ರ,ಭೂ ವಿಜ್ಞಾನ,ಮಣ್ಣುಗಳು,ಜಲವಿಜ್ಞಾನ,ಪರಿಸರ,ಯಂತ್ರೋಪಕರಣ ಮತ್ತು ಇತರೆ ಕ್ಷೇತ್ರಗಳನ್ನು ಒಳಗೊಂಡಿದೆ.
ಪುರಾತನ ಮತ್ತು ಮಧ್ಯಯುಗೀನ ಇತಿಹಾಸದಲ್ಲಿ ಬಹಳಷ್ಟು ವಾಸ್ತು ವಿನ್ಯಾಸ ಮತ್ತು ನಿರ್ಮಾಣಗಳನ್ನು ಕಸಬುದಾರಿಕೆಯ ಕಲಾಗಾರರು,ಅಂದರೆ ಕಲ್ಲುಕುಟಿಕರು(ವಡ್ಡರು) ಮತ್ತು ಬಡಗಿ ಗಳು ಕೈಗೆತ್ತಿಕೊಳ್ಳುತ್ತಿದ್ದರು.ಉನ್ನತಮಟ್ಟದ ಕಟ್ಟಡಗಳ ನಿರ್ಮಿಸುವವರ ಮಹತ್ವದ ಪಾತ್ರವನ್ನು ಈ ಮೂಲಕ ಪರಿಗಣಿಸಿ ಇಂತಹ ಎಂಜಿನೀಯರಗಳ ಅಗತ್ಯ ಕಂಡು ಬಂತು. ಮೂಲ ಜ್ಞಾನವು ವಿಶೇಷ ಒಕ್ಕೂಟಗಳಲ್ಲಿ ಮಾತ್ರ ಕಾಣುತಿತ್ತು.ಕೆಲವೊಮ್ಮೆ ಇದು ಪ್ರಗತಿಗಳ ದುರಾಕ್ರಮಣಕ್ಕೆ ತುತ್ತಾಗುತಿತ್ತು. ಕಟ್ಟಡ ರಚನೆಗಳು,ರಸ್ತೆಗಳು ಮತ್ತು ಮೂಲಭೂತ ಸೌಲಭ್ಯಗಳು ಮರುಕಳಿಸುತ್ತಿದ್ದವು.ಗಾತ್ರ ಪ್ರಮಾಣದಲ್ಲಿ ಹೆಚ್ಚಳವಾದವುಗಳು ಪ್ರಾಶಸ್ತ್ಯ [೧೧] ಪಡೆಯುತ್ತಿದ್ದವು.
ಲೋಕೋಪಯೋಗಿ ಶಿಲ್ಪ ವಿಜ್ಞಾನದ ಮೊದಲ ಭೌತಿಕ ಮತ್ತು ಗಣಿತದ ಸಮಸ್ಯೆಗಳನ್ನು 3ನೆಯ ಶತಮಾನದ ಆರ್ಕಿಮಿಡಿಸ್ ನ ತತ್ವಗಳನ್ನಾಧರಿಸಿ ಅವುಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳಲಾಯಿತು.ಪುನ:ಶ್ಚೇತನದ ತತ್ವಗಳನ್ನು ತಿಳಿದುಕೊಳ್ಳಲು ನಾವು ಆರ್ಕಿಮಿಡಿಸ್ ನ ಸ್ಕ್ರಿವ್ ಪ್ರಾಯೋಗಿಕತೆಯ ಮೂಲಕ ಪರಿಹಾರಗಳನ್ನು ಅರಿತುಕೊಳ್ಳಲು ಇದು ನೆರವಾಗುತ್ತದೆ. ಬ್ರಹ್ಮಗುಪ್ತಾ ಎಂಬ ಭಾರತೀಯ ಗಣಿತಜ್ಞ 7ನೆಯ ಶತಮಾನದಲ್ಲಿ ಹಿಂದು-ಅರೆಬಿಕ್ ಮೂಲದ ಸಂಖ್ಯಾಶಾಸ್ತ್ರವನ್ನು ಲೆಕ್ಕಾಚಾರಗಳ ಸಂಶೋಧನೆಗಾಗಿ ಅಂಕಗಣಿತವನ್ನು [೧೨] ಬಳಸಿಕೊಂಡ.
ಲೋಕೋಪಯೋಗಿ ವಿಜ್ಞಾನದ ಶಾಸ್ತ್ರಜ್ಞ
[ಬದಲಾಯಿಸಿ]ಶಿಕ್ಷಣ ಮತ್ತು ಪರವಾನಿಗೆ
[ಬದಲಾಯಿಸಿ]ಸಿವಿಲ್ ಎಂಜಿನೀಯರ್ ಎನಿಸಿಕೊಂಡವರು ಹೆಚ್ಚಾಗಿ ಲೋಕೋಪಯೋಗಿ ಶಿಲ್ಪ ವಿಜ್ಞಾನದಲ್ಲಿ ಶೈಕ್ಷಣಿಕ ಪದವಿ ಹೊಂದಿರುತ್ತಾರೆ. ಇಂತಹ ಪದವಿ ಶಿಕ್ಷಣವು ಸುಮಾರು ಮೂರರಿಂದ ಐದು ವರ್ಷಗಳ ಅವಧಿಯದ್ದಾಗಿರುತ್ತದೆ.ಇದನ್ನು ಪೂರ್ಣಗೊಳಿಸಿದವರಿಗೆ ಬ್ಯಾಚ್ಲರ್ ಆಫ್ ಎಂಜಿನೀಯರಿಂಗ್ ಎಂದು ಕರೆಯುತ್ತಾರೆ.ಇನ್ನು ಕೆಲವು ವಿಶ್ವ ವಿದ್ಯಾನಿಲಯಗಳು ಇದನ್ನು ಬ್ಯಾಚ್ಲರ್ ಆಫ್ ಸೈನ್ಸ್ ಎಂದು ನೀಡುತ್ತವೆ. ಲೋಕೋಪಯೋಗಿ ಶಿಲ್ಪ ವಿಜ್ಞಾನ ವಿಷಯದ ಪಠ್ಯಾನುಕ್ರಮದಲ್ಲಿ ಭೌತಶಾಸ್ತ್ರ,ಗಣಿತಶಾಸ್ತ್ರ,ಯೋಜನಾ ನಿರ್ವಹಣೆ,ವಿನ್ಯಾಸ ಮತ್ತು ಎಂಜಿನೀಯರಿಂಗ್ ನಲ್ಲಿನ ವಿಶೇಷ ಪಠ್ಯಕ್ರಮದ ಅಳವಡಿಕೆ ಒಳಗೊಂಡಿದೆ. ಆರಂಭಿಕವಾಗಿ ಲೋಕೋಪಯೋಗಿ ಶಿಲ್ಪ ವಿಜ್ಞಾನವು ಬಹುತೇಕ ಎಲ್ಲಾ ಉಪನಿಯಮ-ನಿಭಂದನೆಗಳನ್ನು ಒಳಗೊಂಡಿರುತ್ತದೆ. ಪದವಿಯ ನಂತರ ವಿದ್ಯಾರ್ಥಿಗಳು ಇದರಲ್ಲಿನ ಒಂದು ಅಥವಾ ಅದಕ್ಕಿಂತ ಹೆಚ್ಚು ವಿಷಯಗಳಲ್ಲಿ ಪರಿಣತಿ ಪಡೆದುಕೊಳ್ಳುವುದು [೧೩] ಸಾಮಾನ್ಯ. ಎಂಜಿನೀಯರಿಂಗ್ ಪದವಿಗಾಗಿ (BEng/BSc)ಓದುತ್ತಿರುವ ಯಶಸ್ವಿ ವಿದ್ಯಾರ್ಥಿಗಳಿಗಾಗಿ ಕೈಗಾರಿಕಾ ಪ್ರಮಾಣ ಪತ್ರ ನೀಡಲಾಗುತ್ತದೆ.ಕೆಲವು ವಿಶ್ವವಿದ್ಯಾನಿಲಯಗಳು ಸ್ನಾತಕೋತ್ತರ ಪದವಿಗಳನ್ನು(MEng/MSc)ನೀಡಿ ವಿಶೇಷ ವಿಷಯಗಳಲ್ಲಿ ಪರಿಣತಿ ಹೊಂದುವಂತೆ [೧೪] ಮಾಡುತ್ತವೆ.
ಬಹಳಷ್ಟು ದೇಶಗಳಲ್ಲಿನ ಎಂಜಿನೀಯರಿಂಗ್ ಪದವಿಯುವೃತ್ತಿಪರ ಪ್ರಮಾಣೀಕರಣವನ್ನು ಸೂಚಿಸುತ್ತದೆ.ಇದರ ಪ್ರೊಗ್ರಾಮಿಂಗ್ ಕೂಡಾ ವೃತ್ತಿಪರ ಸಂಸ್ಥೆಯಿಂದ ನೀಡಲಾಗುತ್ತದೆ. ಪ್ರಮಾಣೀಕರಣದ ಪ್ರೊಗ್ರಾಮ್ ನಂತರ ಹೊಸ ಎಂಜಿನೀಯರ್ ಕೆಲವು ಅಗತ್ಯಗಳನ್ನು ಪೂರೈಸಬೇಕಾಗುತ್ತದೆ.(ಕಾರ್ಯಾನುಭವ ಮತ್ತು ಪರೀಕ್ಷಾ ನಿಯಮಗಳು) ಹೀಗೆ ಒಮ್ಮೆ ಪ್ರಮಾಣೀಕರಿಸಿದ ನಂತರ ಒಬ್ಬ ಎಂಜಿನೀಯರ್ ವೃತ್ತಿಪರ ಎಂಜಿನೀಯರ್ ಆಗುತ್ತಾನೆ.(ಯುನೈಟೈಡ್ ಸ್ಟೇಟ್ಸ,ಕೆನಡಾ ಮತ್ತು ದಕ್ಷಿಣ ಆಫ್ರಿಕಾ),ಚಾರಟರ್ಡ್ ಎಂಜಿನೀಯರೆಂದು(ಬಹುತೇಕ ಕಾಮನ್ವೆಲ್ಥ್ ರಾಷ್ಟ್ರಗಳಲ್ಲಿ),ಚಾರಟರ್ಡ್ ವೃತ್ತಿಪರ ಎಂಜನೀಯರ್ (ಆಸ್ಟ್ರೇಲಿಯಾದಲ್ಲಿ,ನ್ಯೂಜಿಲೆಂಡ,ಅಥವಾ ಯುರೊಪಿಯನ್ ಎಂಜಿನೀಯರ್ (ಬಹುತೇಕ ಯುರೊಪಿಯನ್ ಯುನಿಯನ್ ಗಳಲ್ಲಿ ಹೀಗೆ ಕರೆಯಲಾಗುತ್ತದೆ) ಕೆಲವು ವೃತ್ತಿಪರ ಅಂತಾರಾಷ್ಟ್ರೀಯ ಅಧಿಕೃತ ಸಂಸ್ಥೆಗಳ ನಡುವೆ ಒಪ್ಪಂದವಾಗಿದ್ದು ಇದರಿಂದ ಎಂಜಿನೀಯರುಗಳು ಅಂತಾರಾಷ್ಟ್ರೀಯ ವಲಯದಲ್ಲಿ ತಮ್ಮ ವೃತ್ತಿಪರತೆಯನ್ನು ಮೆರೆಯಬಹುದಾಗಿದೆ.
ಪ್ರಮಾಣಿಕರಣದ ಅನುಕೂಲಗಳು ಆಯಾ ಸ್ಥಳೀಯತೆಯನ್ನು ಹೊಂದಿವೆ. ".[೧೫] ಉದಾಹರಣೆಗೆ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾಗಳಲ್ಲಿ"ಪರವಾನಿಗೆ ಪಡೆದ ಎಂಜಿನೀಯರ್ ಮಾತ್ರ ಯೋಜನೆ ಸಿದ್ದಪಡಿಸುವುದು,ರುಜು ಮತ್ತು ಮುದ್ರೆ ಹಾಕುವುದು,ನಂತರ ತನ್ನ ಯೋಜನೆ ಮತ್ತು ನಕ್ಷೆಯನ್ನು ಸಾರ್ವಜನಿಕ ಪ್ರಾಧಿಕಾರದ ಮುಂದೆ ಸಮ್ಮತಿಗೆ ಕಳಿಸಬಹುದಾಗಿದೆ.ಇಲ್ಲವೆ ಸಾರ್ವಜನಿಕ ಮತ್ತು ಖಾಸಗಿ ಎಂಜನೀಯರಿಂಗ್ ಕೆಲಸಗಳಿಗೆ ರುಜು [೧೫] ಮಾಡಬೇಕಾಗುತ್ತದೆ." ಕ್ವೆಬೆಕ್ಸ್ ಎಂಜಿನೀಯರ್ ಕಾನೂನಿನಂತೆ ಈ ಅಗತ್ಯಗಳನ್ನು ಆಯಾ ರಾಜ್ಯ ಮತ್ತು ಪ್ರಾಂತ್ಯಗಳು ವಿಧಿಸಿದ ಶಾಸನಬದ್ದ ನಿಯಮಗಳನ್ನು [೧೬] ಜಾರಿಗೊಳಿಸಲಾಗುತ್ತದೆ. ಬೇರೆ ದೇಶಗಳಲ್ಲಿ ಇಂತಹ ಶಾಸನಬದ್ದ ವಿಧಿ-ವಿಧಾನಗಳಿಲ್ಲ. ಆಸ್ಟ್ರೇಲಿಯಾದಲ್ಲಿ ಎಂಜಿನೀಯರರಿಗೆ ಪರವಾನಿಗೆಯನ್ನು ನೀಡುವುದು ಸ್ಟೇಟ್ ಆಫ್ ಕ್ವೀನ್ಸ್ ಲ್ಯಾಂಡಿಗೆ ಮಾತ್ರ ಸೀಮಿತಗೊಂಡಿದೆ. ಪ್ರಾಯೋಗಿಕವಾಗಿ ಪ್ರಮಾಣೀಕರಿಸುವ ಸಂಸ್ಥೆಗಳು ತಮ್ಮದೇ ಆದ ನೀತಿ-ಸಂಹಿತೆಯನ್ನು ಹೊಂದಿದ್ದು ಪ್ರತಿಯೊಬ್ಬ ಸದಸ್ಯರೂ ಇದಕ್ಕೆ ಬದ್ದರಾಗಿರಬೇಕಲ್ಲದೇ ಯಾವದೇ ಹೊಣೆಗಾರಿಕೆಯಿಂದ ನುಣಿಚಿಕೊಳ್ಳಬಾರದೆನ್ನುವ [೧೭] ನಿಭಂದನೆಯೂ ಇದೆ. ಈ ರೀತಿಯಾಗಿ ಇಂತಹ ಸಂಸ್ಥೆಗಳು ಕೆಲವು ಆಚಾರ ಸಂಹಿತೆಗಳನ್ನು ಪಾಲಿಸಿ ವೃತ್ತಿಪರತೆಯ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಕೆಲವು ಪ್ರದೇಶಗಳಲ್ಲಿ ಪ್ರಮಾಣೀಕರಣ ಅತ್ಯಲ್ಪ ಅಥವಾ ಕೆಲಸ ಕುರಿತ ಅಂತಹ ಕಾನೂನು ಇಲ್ಲದಿದ್ದರೆ ಎಂಜಿನೀಯರುಗಳು ಕರಾರು-ಒಪ್ಪಂದಗಳಿಗೆ ಒಳಪಡಬೇಕಾಗುತ್ತದೆ. ಎಂಜಿನೀಯರುಗಳ ಕಾರ್ಯ ವಿಫಲಗೊಂಡರೆ ಆತ ಅಥವಾ ಆಕೆ ಕಾನೂನು ನಿರ್ಲಕ್ಷಿಸಿದ ಮತ್ತು ಕೆಲವು ಗಂಭೀರ ಪ್ರಕರಣಗಳಲ್ಲಿ ಅಪರಾಧ ನಿರ್ಲಕ್ಷದ ಮೊಕದ್ದಮೆಗಳು [ಸೂಕ್ತ ಉಲ್ಲೇಖನ ಬೇಕು] ಉದ್ಭವಿಸಲು ಕಾರಣವಾಗುತ್ತವೆ. ಒಬ್ಬ ಎಂಜಿನೀಯರನ ಕೆಲಸ ಹಲವಾರು ನೀತಿ ನಿಯಮಗಳ ಚೌಕಟ್ಟನ್ನು ಒಳಗೊಂಡಿರುತ್ತದೆ. ಇದನ್ನು ಆತ ಪೂರೈಸಬೇಕಾಗುತ್ತದೆ.ಉದಾಹರಣೆಗಾಗಿ ಕಟ್ಟಡದ ಸಂಹಿತೆಗಳು ಮತ್ತು ಪರಿಸರಕ್ಕೆ ಸಂಬಂಧಿಸಿದ ಕಾನೂನುಗಳು ಇತ್ಯಾದಿ.
ಬದುಕುವ ಮಾರ್ಗ (ಜೀವನಪಥ)
[ಬದಲಾಯಿಸಿ]ಲೋಕೋಪಯೋಗಿ ಶಿಲ್ಪ ವಿಜ್ಞಾನದ ಎಂಜಿನೀಯರುಗಳಿಗೆ ಒಂದೇ ಸಮರೂಪದ ಬದುಕಿನ ಮಾರ್ಗವಿರದೆ ಇದು ಹಲವು ಅವಕಾಶಗಳಿಗೆ ಮುನ್ನುಡಿಯಾಗಿದೆ. ಬಹಳಷ್ಟು ಎಂಜಿನೀಯರಿಂಗ್ ಪದವಿಧರರು ಸಣ್ಣ ಜವಾಬ್ದಾರಿಯ ಕೆಲಸದೊಂದಿಗೆ ತಮ್ಮ ವೃತ್ತಿಜೀವನ ಆರಂಭಿಸುತ್ತಾರೆ,ದಿನಗಳೆದಂತೆ ತಮ್ಮ ಕಾರ್ಯ ಸಫಲತೆಗನುಗುಣವಾಗಿ ಹೆಚ್ಚು ಹೆಚ್ಚು ಪೈಪೋಟಿಗಳನ್ನು ಅವರು ಎದುರಿಸಲು ಸಮರ್ಥರಾಗುತ್ತಾರೆ.ಹೀಗೆ ಎಂಜಿನೀಯರಿಂಗ್ ನ ವಿವಿಧ ಮತ್ತು ವಿಭಿನ್ನ ವಲಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮುಂದಾಗುತ್ತಾರೆ. ಕೆಲವು ಕಂಪೆನಿ ಮತ್ತು ಸಂಸ್ಥೆಗಳಲ್ಲಿ ಪ್ರವೇಶ ಮಟ್ಟದ ಎಂಜಿನೀಯರುಗಳನ್ನು ಕಟ್ಟಡ ನಿರ್ಮಾಣದ ಉಸ್ತುವಾರಿಯ ಜವಾಬ್ದಾರಿ ನೀಡಲಾಗುತ್ತದೆ.ಇಲ್ಲಿ ಅವರು ಹಿರಿಯ ವಿನ್ಯಾಸ ಎಂಜಿನೀಯರುಗಳ "ಕಣ್ಣು ಮತ್ತು ಕಿವಿ"ಗಳಾಗಿ ಕೆಲಸ ಕಾರ್ಯನಿರ್ವಹಿಸಬೇಕಾಗುತ್ತದೆ.ಇನ್ನುಳಿದ ಕ್ಷೇತ್ರದಲ್ಲಿ ಪ್ರವೇಶ ಮಟ್ಟದ ಎಂಜಿನೀಯರುಗಳು ಮಾಮೂಲಿ ಕೆಲಸಗಳಾದ ವಿಶ್ಲೇಷಣೆ ಅಥವಾ ವಿನ್ಯಾಸ ಮತ್ತು ವ್ಯಾಖ್ಯಾನ ಮಟ್ಟದ ಕಾರ್ಯಗಳಲ್ಲಿ ತೊಡ ಗಿಕೊಳ್ಳಬೇಕಾಗುತ್ತದೆ. ಬಹಳಷ್ಟು ಹಿರಿಯ ಎಂಜಿನೀಯರುಗಳು ಹೆಚ್ಚು ಸಂಕೀರ್ಣ ವಿಶ್ಲೇಷಣಾ ಅಥವಾ ವಿನ್ಯಾಸ ಕೆಲಸ,ಅಥವಾ ಸಂಕೀರ್ಣ ವಿನ್ಯಾಸ ಆಡಳಿತ ನಿರ್ವಹಣೆಯ ಯೋಜನೆಗಳು ಅಥವಾ ಇನ್ನುಳಿದ ಎಂಜಿನೀಯರುಗಳ ಮೇಲ್ವಿಚಾರಣೆ,ಅಥವಾ ಬೆರಳಚ್ಚು ಮುದ್ರೆ ಪರೀಕ್ಷಣಾ ಎಂಜನೀಯರಿಂಗ್ ನಂತಹ ವಿಶೇಷ ಪರಿಣತಿ ವಿಭಾಗಗಳಲ್ಲಿ ಕಾರ್ಯೋನ್ಮುಖರಾಗುವರು.
ಉಪನಿಯಮ ಅಥವಾ ನಿಭಂದನೆಗಳು
[ಬದಲಾಯಿಸಿ]ಲೋಕೋಪಯೋಗಿ ಶಿಲ್ಪ ವಿಜ್ಞಾನವು ಈ ದೊಡ್ಡ ಜಗತ್ತಿನ, ಒಟ್ಟು ಮನುಷ್ಯ ನಿರ್ಮಿತ ಯೋಜನೆಗಳಿಗೆ ಮುಖಾಮುಖಿಯಾಗುತ್ತದೆ. ಸರ್ವೇ ಸಾಮಾನ್ಯವಾಗಿ ಸಿವಿಲ್ ಎಂಜಿನೀಯರುಗಳು ಅಥವಾ ಲೋಕೋಪಯೋಗಿ ಶಿಲ್ಪ ವಿಜ್ಞಾನಿಗಳು ಸರ್ವೆಯರಗಳೊಂದಿಗೆ ನಿಕಟವರ್ತಿಗಳಾಗಿ ಕೆಲಸ ಮಾಡುತ್ತಾರೆ.ಅವರು ತಮ್ಮದೇ ನಿಗದಿತ ಪರಿಧಿಯಲ್ಲಿ ನಿಶ್ಚಿತ ಕಾರ್ಯಸ್ವರೂಪವನ್ನು ಹೊಂದಿರುತ್ತಾರೆ.ವಿನ್ಯಾಸ,ಶ್ರೇಣಿಕರಣ,ಒಳಚರಂಡಿ,ಪಾದಚಾರಿ ಮಾರ್ಗ,ನೀರು ಪೂರೈಕೆ,ಕೊಳಚೆ-ಒಳಚರಂಡಿ ಸೇವೆ,ವಿದ್ಯುತ್ತ ಮತ್ತು ಸಂವಹನಗಳ ಪೂರೈಕೆ,ಮತ್ತು ಭೂವಿಭಜನೆಯಂತಹ ಕಾರ್ಯಗಳಲ್ಲಿ ಅವರು ಸಕ್ರಿಯರಾಗುತ್ತಾರೆ. ಸಾಮಾನ್ಯ ಎಂಜಿನೀಯರುಗಳು ತಮ್ಮ ಬಹುತೇಕ ಸಮಯವನ್ನು ಯೋಜನಾ ಪ್ರದೇಶಗಳ ಭೇಟಿ,ಸಮೂದಾಯದ ಒಟ್ಟಾಭಿಪ್ರಾಯದ ಸಂಗ್ರಹ ಮತ್ತು ನಿರ್ಮಾಣದ ಯೋಜನೆಗಳನ್ನು ಸಿದ್ಧಪಡಿಸುವುದರಲ್ಲಿ ಕಳೆಯುತ್ತಾರೆ. ಸಾಮಾನ್ಯ ಲೋಕೋಪಯೋಗಿ ಶಿಲ್ಪ ವಿಜ್ಞಾನವನ್ನುನಿವೇಶನಾ ಎಂಜಿನೀಯರಿಂಗ್ ಎಂದೂ ಉಲ್ಲೇಖಿಸುತ್ತಾರೆ.ಇದರ ಶಾಖೆಯೆಂದರೆ ಭೂಬಳಕೆಯ ಒಂದು ವಿಧಾನವನ್ನು ಇನ್ನೊಂದಕ್ಕೆ ಪರಿವರ್ತಿಸುವುದು ಕೂಡಾ ಪ್ರಮುಖ ಕಾರ್ಯವಾಗಿದೆ. ಲೋಕೋಪಯೋಗಿ ಶಿಲ್ಪ ವಿಜ್ಞಾನಿಗಳು ಭೌಗೋಳಿಕ ತಂತ್ರಜ್ಞಾನದ ತತ್ವಗಳನ್ನು ಅನುಸರಿಸುತ್ತಾರೆ.ರಾಚನಿಕ ಎಂಜಿನೀಯರಿಂಗ,ಪರಿಸರ ಎಂಜನೀಯರಿಂಗ್,ಸಾರಿಗೆ ಎಂಜನೀಯರಿಂಗ್ ಮತ್ತು ವಸತಿ,ವಾಣಿಜ್ಯ,ಕೈಗಾರಿಕಾ ಮತ್ತು ಲೋಕೋಪಯೋಗಿ ಯೋಜನೆಗಳ ಎಲ್ಲಾ ವಿಧದ ಮತ್ತು ತೆರನಾದ ಕಟ್ಟಡ ನಿರ್ಮಾಣ ಎಂಜಿನೀಯರಿಂಗ್ ಇದರಲ್ಲಿದೆ.
ಕರಾವಳಿ ಎಂಜಿನೀಯರಿಂಗ್
[ಬದಲಾಯಿಸಿ]ಕರಾವಳಿ ಎಂಜಿನೀಯರಿಂಗ್ ವಿಭಾಗವು ಕರಾವಳಿ ಪ್ರದೇಶಗಳ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತದೆ. ಇನ್ನು ಕೆಲವು ಕ್ಷೇತ್ರಗಳಲ್ಲಿ ಸಮುದ್ರ ರಕ್ಷಣೆ ಮತ್ತು ಕರಾವಳಿ ಕಾವಲು ಯೋಜನೆಗಳಿಗೆ ಇದನ್ನು ಬಳಸಬಹುದಾಗಿದೆ.ಅಂದರೆ ಪ್ರವಾಹ ನಿಯಂತ್ರಣ ಮತ್ತು ಭೂಕೊರೆತ ತಡೆಗಟ್ಟಲು ಈ ವಿಜ್ಞಾನದ ತತ್ವಗಳು ಬಳಕೆಯಾಗುತ್ತವೆ. ಕರಾವಳಿ ರಕ್ಷಣೆ ಎನ್ನುವುದು ಸಾಂಪ್ರದಾಯಿಕ ಮತ್ತು ಹಳೆಯ ಪದವಾಗಿದ್ದು ಈಗ ಅದನ್ನು ಕರಾವಳಿ ಆಡಳಿತ ವ್ಯಾಪ್ತಿ ಎನ್ನುವುದು ಜನಪ್ರಿಯ ಪದವೆನಿಸಿದೆ.ಭೂಸವಕಳಿ ಹಾಗು ಕರಾವಳಿ ಭೂಭಾಗದ ಉಸ್ತುವಾರಿ ಇಂದಿನ ಅಗತ್ಯವೆನಿಸಿದೆ.
ಕಟ್ಟಡ ನಿರ್ಮಾಣ ಎಂಜಿನೀಯರಿಂಗ್
[ಬದಲಾಯಿಸಿ]ಕಟ್ಟಡ ನಿರ್ಮಾಣ ಎಂಜಿನೀಯರಿಂಗ್ ಸಾರಿಗೆ,ನಿವೇಶನ ಅಭಿವೃದ್ಧಿ,ಜಲಚಾಲಿತ ಸಂಪನ್ಮೂಲ,ರಾಚನಿಕ ಮತ್ತು ಭೌಗೋಳಿಕ ತಂತ್ರಜ್ಞಾನ ಎಂಜಿನೀಯರ್ ಗಳು ಹಲವಾರು ಯೋಜೆನಗಳ ನೀಲಿ ನಕ್ಷೆ ತಯಾರಿಸಿ ಕಾರ್ಯರೂಪಕ್ಕೆ ತರುತ್ತಾರೆ. ಕಟ್ಟಡ ನಿರ್ಮಾಣದ ಸಂಸ್ಥೆಗಳು ಲೋಕೋಪಯೋಗಿ ಶಿಲ್ಪ ವಿಜ್ಞಾನದ ಇನ್ನಿತರ ವಿಭಾಗಗಳಿಗಿಂತ ಹೆಚ್ಚು ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತವೆ.ಹಲವಾರು ಕಟ್ಟಡ ನಿರ್ಮಾಣದ ಎಂಜಿನೀಯರುಗಳು ವ್ಯಾಪಾರಿ ಉದ್ದೇಶಿತ ಒಪ್ಪಂದಗಳನ್ನು ತೆಗೆದುಕೊಂಡು ಹೆಚ್ಚು ವಹಿವಾಟಿಗೆ ಕಾರಣರಾಗುತ್ತಾರೆ.ಅಗತ್ಯ ರೇಖಾ ನಕ್ಷೆಗಳ ತಯಾರಿಕೆ,ಪರಿಷ್ಕರಣೆಯ ಒಪ್ಪಂದಗಳು ಇದರಲ್ಲಿವೆ.ಸಾಗಾಟದ ಪ್ರಮಾಣಗಳ ಅಳತೆಗೋಲು ಮತ್ತು ಅಗತ್ಯ ವಸ್ತುಗಳ ಬೆಲೆಗಳನ್ನು ಮೇಲಿಂದ ಮೇಲೆ ನಿಗಾವಹಿಸುವುದು.
ಭೂಕಂಪ ಎಂಜಿಿನಿಯರಿಂಗ್
[ಬದಲಾಯಿಸಿ]ಭೂಕಂಪದ ಎಂಜಿನೀಯರಿಂಗ್ ಆಯಾ ಸ್ಥಳಗಳಲ್ಲಿನ ನಿವೇಶನಗಲ್ಲಿ ನಿರ್ಮಿಸಿದ ಕಟ್ಟಡಗಳನ್ನು ಭೂಕಂಪಕ್ಕೆ ತುತ್ತಾಗದ ರೀತಿಯಲ್ಲಿ ನಿರ್ಮಿಸುವುದೇ ಆಗಿದೆ.ಕಟ್ಟಡಗಳು ಎಂತಹದೇ ನೈಸರ್ಗಿಕ ವಿಕೋಪಗಳಿಗೆ ಮಣಿಯದೇ ತಲೆ ಎತ್ತಿ ನಿಲ್ಲುವಂತೆ ಮಾಡುವುದೇ ಈ ವಿಭಾಗದ
ಮಹದುದ್ದೇಶವಾಗಿದೆ.
ರಾಚನಿಕ ಅಥವಾ ವಿನ್ಯಾಸ ಎಂಜಿನೀಯರಿಂಗ್ ನ ವಿಶಾಲ ತಳಹದಿಯ ಉಪನಿಭಂದನೆಗೊಳಪಟ್ಟ ಎಂಜನೀಯರಿಂಗ್ ಎಂದರೆ ಭೂಕಂಪ ಎಂಜಿನೀಯರಿಂಗ. [ಸೂಕ್ತ ಉಲ್ಲೇಖನ ಬೇಕು]ಭೂಕಂಪ ಎಂಜಿನೀಯರಿಂಗ್ ನ ಪ್ರಮುಖ [ಸೂಕ್ತ ಉಲ್ಲೇಖನ ಬೇಕು][[|thumb|right|696 × 700 px|Snapshot from shake-table video [42] of testing base-isolated (right) and regular (left) building model
]]ಉದ್ದೇಶಗಳೆಂದರೆ:
- ಕಂಪನ ಭೂಮಿಯ ಮೇಲಿನ ಕಟ್ಟಡ ವಿನ್ಯಾಸದ ಕ್ರಿಯೆ-ಪ್ರತಿಕ್ರಿಯೆಗಳ ಬಗ್ಗೆ ತಿಳಿದುಕೊಳ್ಳುವುದು
- ಭೂಕಂಪದ ಭವಿಷತ್ ನಲ್ಲಿನ ಸಾಧ್ಯತೆಯ ದುಷ್ಪರಿಣಾಮಗಳನ್ನು ಅಂದಾಜಿಸುವುದು.
- ಕಟ್ಟಡ ಸಂಹಿತೆಗಳಿಗನುಗುಣವಾಗಿಕಟ್ಟಡದ ರೂಪ, ವಿನ್ಯಾಸಗೊಳಿಸುವುದು,ನಿರ್ಮಿಸುವುದು ಮತ್ತು ಅವುಗಳು ಭೂಕಂಪದಂತಹ ಅನಾಹುತಗಳಿಗೆ ಒಡ್ಡಿಕೊಳ್ಳದಂತೆ ಅದನ್ನು ದಕ್ಷತೆಯಿಂದ ನಿರ್ವಹಿಸಿ ಎಲ್ಲಾ ನಿಯಮಗಾಳನ್ನು ಪಾಲಿಸ್ಬೇಕಾಗುತ್ತದೆ.
ಭೂಕಂಪನದ ಎಂಜಿನೀಯರಿಂಗ್ ನ ರಚನೆ ಎಂದರೆ ಅದು ಭಾರೀ ಬಲಿಷ್ಟ ಅಥವಾ "ದುಬಾರಿ"ಯಾಗಿರಬೇಕಾಗಿಲ್ಲ. ಉದಾಹರಣೆಗಾಗಿ ಚಿಚೆನ್ ಇಟ್ಜಾಜನಲ್ಲಿರುವ ಈ1 El ಕಾಸ್ಟಿಲ್ಲೊ ಪಿರಾಮಿಡ್ ಮೇಲೆ [original research?]ಕಾಣಿಸಿದಂತೆ.[ಸೂಕ್ತ ಉಲ್ಲೇಖನ ಬೇಕು]ಭೂಕಂಪ ಎಂಜಿನೀಯರಿಂಗ್ ನಲ್ಲಿ ಅತ್ಯಂತ ಪ್ರಬಲ ಮತ್ತು ಸರಳ ಆರ್ಥಿಕ ವಿಧಾನವೆಂದರೆ ತಳಪಾಯದ ಪ್ರತ್ಯೇಕತೆ ಅಂದರೆ ಇದು ಕಂಪನ ನಿಯಂತ್ರಣದ ತಂತ್ರಗಾರಿಕೆಯನ್ನು [ಸೂಕ್ತ ಉಲ್ಲೇಖನ ಬೇಕು]ಒಳಗೊಂಡಿರುತ್ತದೆ.
ಎನ್‌ವಿರಾನ್ಮೆಂಟಲ್ ಇಂಜಿನಿಯರಿಂಗ್ (ಪರಿಸರ ಅಧ್ಯಯನ ಕುರಿತಾದ ಎಂಜಿನೀಯರಿಂಗ್)
[ಬದಲಾಯಿಸಿ]ಪರಿಸರ ಎಂಜಿನೀಯರಿಂಗ್ ರಾಸಾಯನಿಕ,ಜೈವಿಕ,ಮತ್ತು ವೇಗೋಷ್ಣ ತ್ಯಾಜ್ಯಗಳನ್ನು ಸಂಸ್ಕರಿಸುವ ವಿಷಯಕ್ಕೆ ಸಂಬಂಧಿಸಿದೆ.ನೀರು ಮತ್ತು ಗಾಳಿ ಶುದ್ದೀಕರಣ ಮತ್ತು ತ್ಯಾಜ್ಯ ವಿಲೆವಾರಿ ಅಥವಾ ಆಕಸ್ಮಿಕವಾಗಿ ಸಂಭವಿಸಿದ ಅಶುದ್ದ ವಲಯ ಗುರುತಿಸಿ ಪರಿಹಾರ ಮಾರ್ಗ ಹುಡುಕುವುದು ಪರಿಸರ ಎಂಜಿನೀಯರಿಂಗ್ ನಲ್ಲಿ ತ್ಯಾಜ್ಯ ಸಾಗಣೆ,ನೀರು ಶುದ್ಧೀಕರಣ,ತ್ಯಾಜ್ಯ ನೀರಿನ ಸಂಸ್ಕರಣ,ವಾಯು ಮಾಲಿನ್ಯ,ಘನ ತ್ಯಾಜ್ಯ ಸಂಸ್ಕರಣ ಮತ್ತು ಅನಾರೋಗ್ಯಕರ ತ್ಯಾಜ್ಯಗಳ ನಿರ್ವಹಣೆ ಇವುಗಳು ಸೇರಿವೆ. ಪರಿಸರಕ್ಕೆ ಸಂಬಂಧಿಸಿದ ಎಂಜಿನೀಯರುಗಳನ್ನು ಮಾಲಿನ್ಯ ತಡೆ,ಹಸಿರು ಎಂಜಿನೀಯರಿಂಗ್ ಮತ್ತು ಕೈಗಾರಿಕಾ ಪರಿಸರ ಸ್ನೇಹಿಯಾಗಿಯೂ ಬಳಸಿಕೊಳ್ಳಬಹುದಾಗಿದೆ. ಪರಿಸರ ಎಂಜಿನೀಯರಿಂಗ್ ಪರಿಸರದ ಮೇಲಾಗುವ ಹಾನಿಯ ಅಂದಾಜುಗಳ ಗುರ್ತಿಸಿ ಅವುಗಳಿಗೆ ಉದ್ದೇಶಿತ ಪರಿಹಾರ ಹಾಗು ಸಾಮಾಜಿಕವಾಗಿ ಪರಿಸರ ಸರಕ್ಷಣಾ ಕಾರ್ಯದಲ್ಲಿ ಸಮಾಜ ಹಾಗು ಸರ್ಕಾರದಲ್ಲಿ ಕಾನೂನು ಮಾಡುವವರಿಗೆ ಈ ಎಂಜಿನೀಯರಿಂಗ್ ವಿಭಾಗ ಸಹಕಾರಿಯಂತೆ ಕೆಲಸ ನಿರ್ವಹಿಸುತ್ತದೆ.
ಪರಿಸರೀಯ ಎಂಜಿನೀಯರಿಂಗ್ ಸಮಾನರೂಪವಾಗಿ ನೈರ್ಮಲ್ಯ ಎಂಜಿನೀಯರಿಂಗ್ ಜೊತೆ ಅರ್ಥೈಸಲಾಗುತ್ತದೆಯಾದರೂ ಇದು ಸಾಂಪ್ರದಾಯಿಕವಾಗಿ ಬಹಳಷ್ಟು ಅನಾರೋಗ್ಯ ಮೂಲದ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರೀಯ ಪರಿಹಾರಗಳನ್ನು ಒಳಗೊಂಡಿಲ್ಲ.ಹೀಗಾಗಿ ಪರಿಸರೀಯ ಎಂಜಿನೀಯರಿಂಗ್ ವ್ಯಾಖ್ಯಾನಕ್ಕೆ ಸಮರೂಪವಾಗಿಲ್ಲ ಎನ್ನಬಹುದು. ಇನ್ನು ಕೆಲವು ಚಾಲ್ತಿಯಲ್ಲಿರುವ ಹೆಸರುಗಳೆಂದರೆ ಸಾರ್ವಜನಿಕ ಆರೋಗ್ಯ ಎಂಜಿನೀಯರಿಂಗ್ ಮತ್ತು ಪರಿಸರೀಯ ಆರೋಗ್ಯ ಎಂಜನೀಯರಿಂಗ.
ಭೂತಂತ್ರಗಾರಿಕೆ ಎಂಜಿನೀಯರಿಂಗ್
[ಬದಲಾಯಿಸಿ]ಲೋಕೋಪಯೋಗಿ ಶಿಲ್ಪ ವಿಜ್ಞಾನದ ಬಂಡೆಗಳು ಮತ್ತು ಮಣ್ಙೆಗೆ ಸಂಬಂಧಿಸಿದಂತೆ ಭೂತಂತ್ರಗಾರಿಕೆ ಎಂಜಿನೀಯರಿಂಗ್ ಕಾರ್ಯ ನಿರ್ವಹಿಸುತ್ತದೆ.ಲೋಕೋಪಯೋಗಿ ಶಿಲ್ಪ ವಿಜ್ಞಾನದ ಪದ್ದತಿಗಳು ಇದಕ್ಕೆ ನೆರವಾಗುತ್ತವೆ. ಭೂಗರ್ಭ ಶಾಸ್ತ್ರದ ವಿಭಾಗದಿಂದ ಬೇಕಾದ ಮಾಹಿತಿಯನ್ನು ಪಡೆದು ಭೌತಿಕ ಅಥವಾ ವಸ್ತುಗಳಿಗೆ ಸಂಬಂದಿಸಿದ ವಿಜ್ಞಾನ ಮತ್ತು ಪರೀಕ್ಷೆಗಳು,ಯಾಂತ್ರಿಕ ಪದ್ದತಿಗಳು ಮತ್ತು ಜಲಶಕ್ತಿಮೂಲ ಇವುಗಳನ್ನು ಈ ಶಾಸ್ತ್ರದಲ್ಲಿ ಬಳಸಲಾಗುತ್ತದೆ.ಭೂಗರ್ಭಶಾಸ್ತ್ರ ಎಂಜಿನೀಯರುಗಳು ತಳಪಾಯಗಳು ಮತ್ತು ಆಧಾರ ಗೋಡೆಗಳನ್ನು ಸುರಕ್ಷಿತ ಮತ್ತು ಆರ್ಥಿಕವಾಗಿಕೈಗೆಟುಕ ನೆಲೆಯಲ್ಲಿ ಇಂತಹ ರಚನೆಗಳನ್ನು ನಿರ್ಮಿಸುತ್ತಾರೆ. ಪರಿಸರೀಯ ವಿಭಾಗವು ಅಂತರ್ಜಲ ಮತ್ತು ತ್ಯಾಜ್ಯ ವಿಲೇವಾರಿ ನಿರ್ವಹಣೆ ಸಂಬಂಧಿಸಿದಂತೆ ಹೊಸ ಭೂಪರಿಸರೀಯ ಎಂಜಿನೀಯರಿಂಗ್ ಹುಟ್ಟಿಗೆ ಕಾರಣವಾಗಿದೆ.ಇದರಲ್ಲಿ ಜೀವಶಾಸ್ತ್ರ ಮತ್ತು ರಾಸಾಯನಿಕ ಶಾಸ್ತ್ರಗಳು [೧೮][೧೯] ಮುಖ್ಯವಾಗಿವೆ.
ಭೂತಂತ್ರಜ್ಞಾನ ಎಂಜಿನೀಯರಿಂಗ್ ನ ಅಪರೂಪದ ಅಡೆತಡೆಗಳೆಂದರೆ ಮಣ್ಣಿನಲ್ಲಿನ ಅಂಶಗಳು ಮತ್ತು ವಿವಿಧತೆಗಳಲ್ಲಿನ ಏರುಪೇರು ಎಂದು ಹೇಳಲಾಗುತ್ತದೆ. ಗಡಿಭಾಗದ ಪರಿಸ್ಥಿತಿಗಳ ಬಗ್ಗೆ ಲೋಕೋಪಯೋಗಿ ಶಿಲ್ಪ ವಿಜ್ಞಾನದಲ್ಲಿ ಉತ್ತಮ ರೀತಿಯಾಗಿ ವ್ಯಾಖ್ಯಾನಿಸಲಾಗಿದೆ.ಆದರೆ ಮಣ್ಣಿನ ಪರಿಸ್ಠಿತಿಗಳ ಬಗ್ಗೆ ಯೋಚಿಸದರೆ ಇದರ ಪರಿಣಾಮವೇ ಬೇರೆಯಾಗಿದೆ. ಮಣ್ಣಿನ ಭೌತಿಕ ಗುಣಲಕ್ಷಣಗಳು ಮತ್ತು ವ್ಯತ್ಯಾಸಗಳ ಭವಿಷ್ಯ ನುಡಿಯುವುದು ಕಷ್ಟ,ಯಾಕೆಂದರೆ ಮಣ್ಣಿನ ಗುಣಗಳಲ್ಲಿನ ವ್ಯತ್ಯಾಸ ಮತ್ತು ಸೀಮಿತ ಸಂಶೋಧನೆಯಿಂದಾಗಿ ತೊಂದರೆಯಾಗುತ್ತಿದೆ. ವಿರೋಧಾಭಾಸವೆನ್ನುವಂತೆ ಲೋಕೋಪಯೋಗಿ ಶಿಲ್ಪ ವಿಜ್ಞಾನದಲ್ಲಿ ಬಳಸಲಾಗುವ ವಸ್ತುಗಳಾದ ಉಕ್ಕು ಮತ್ತು ಕಾಂಕ್ರೀಟ್ ಗಳ ಭೌತಿಕ ಅಂಶಗಳ ಬಗ್ಗೆ ನಿಖರವಾಗಿ ವ್ಯಾಖ್ಯಾನಿಸಲು ಸಾಧ್ಯವಿದೆ. ಮಣ್ಣಿನ ಪದ್ದತಿಗಳು ಮಣ್ಣಿನ ಗುಣಲಕ್ಷಣಗಳ ಬಗ್ಗೆ ವ್ಯಾಖ್ಯಾನಿಸಿದರೂ ಒತ್ತಡ ಮತ್ತು ಅವಲಂಬಿತ ವಸ್ತುಗಳ ಗುಣಲಕ್ಷಣಗಳಲ್ಲಿನ ಗಾತ್ರದ ಬದಲಾವಣೆ,ಒತ್ತಡ-ಪ್ರಯಾಸದ ಸಂಬಂಧ ಮತ್ತು ಶಕ್ತಿ-ಬಳಗಳು ಮಾತ್ರ ನಿಖರ ವ್ಯಾಖ್ಯಾನದ ಅಳತೆಗೆ [೧೮] ದೊರೆಯಲಾರವು.
ಜಲಸಂಪನ್ಮೂಲದ ಎಂಜಿನೀಯರಿಂಗ್( water resource engineering)
[ಬದಲಾಯಿಸಿ]ಜಲಸಂಪನ್ಮೂಲದ ಎಂಜಿನೀಯರಿಂಗ್ ನೀರಿನ ಸಂಗ್ರಹ ಮತ್ತು ಆಡಳಿತಕ್ಕೆ ಸಂಬಂಧಿಸಿದೆ.(ಇದನ್ನು ನೈಸರ್ಗಿಕ ಸಂಪನ್ಮೂಲದಂತೆ) ನೀತಿಸೂತ್ರಗಳಿಗೆ ಸಂಬಂಧಿಸಿದಂತೆ ಇದು ಜಲವಿಜ್ಞಾನ,ಪರಿಸರೀಯ ವಿಜ್ಞಾನ,ಹವಾಮಾನ ಶಾಸ್ತ್ರ,ಭೂಗರ್ಭಶಾಸ್ತ್ರ ಉಳಿತಾಯ ಮತ್ತು {0)ಸಂಪನ್ಮೂಲಗಳ ನಿರ್ವಹಣೆ{/0}ಯನ್ನು ಒಳಗೊಂಡಿದೆ. ಲೋಕೋಪಯೋಗಿ ಶಿಲ್ಪ ವಿಜ್ಞಾನ ಶಾಸ್ತ್ರವು ಅಂತರ್ಜಲ,ಜಲಪಾತಗಳು ಮತ್ತು ಭೂಮಿ ಮೇಲಿನ(ಸರೋವರಗಳು,ನದಿಗಳು ಮತ್ತು ಹೊಳೆಗಳು) ಜಲರಾಶಿಯ ಗುಣಮಟ್ಟ ಮತ್ತು ಪ್ರಮಾಣದ ಅಧ್ಯಯನಕ್ಕೆ ಸಂಬಂಧಿಸದಂತೆ ಮೂಲಸಂಪನ್ಮೂಲ ಕಾರ್ಯನಿರ್ವಹಿಸುತ್ತದೆ. ಜಲಸಂಪನ್ಮೂಲ ಎಂಜಿನೀಯರುಗಳು ಸಣ್ಣ ಮತ್ತು ದೊಡ್ಡ ಪ್ರಮಾಣದ ಭೂಪ್ರದೇಶಗಳ ವಿಶ್ಲೇಷಣೆ ಮತ್ತು ಮಾದರಿಗಳನ್ನು ತೆಗೆದುಕೊಂಡು ನೀರಿನ ಪ್ರಮಾಣ ಮತ್ತು ಅದರ ಹರಿಯುವಿನ ಬಗ್ಗೆ ಅಧ್ಯಯನ ನಡೆಸಿ ಇದರ ಅಂಶಗಳು,ಯಾವ ಮೂಲದಿಂದ ಹರಿಯುತ್ತದೆ,ಅದರ ಸೌಲಭ್ಯದ ಮಟ್ಟ ಮುಂತಾದವುಗಳನ್ನು ಅಭ್ಯಸಿಸುತ್ತಾರೆ. ಆದಾಗ್ಯೂ ನಿಜವಾದ ವಿನ್ಯಾಸದ ಬಗ್ಗೆ ಅದರ ಸೌಲಭ್ಯದ ಬಗ್ಗೆ ಉಳಿದ ಎಂಜಿನೀಯರುಗಳ ನಿಲವಿಗೆ ಬಿಡುತ್ತಾರೆ ದ್ರವಶಾಸ್ತ್ರ ಅಥವಾ ಜಲಶಾಸ್ತ್ರದ ಎಂಜಿನೀಯರಿಂಗ್ ದ್ರವಗಳ ಹರಿವು ಮತ್ತು ಅವುಗಳ ಸಂಚಾರ,ಸಾಗಾಟ ಅಂದರೆ ಬಹುಮುಖ್ಯವಾಗಿ ನೀರಿನ ಬಗ್ಗೆ ಅಧ್ಯಯನ ನಡೆಸುತ್ತದೆ. ಲೋಕೋಪಯೋಗಿ ಶಿಲ್ಪ ವಿಜ್ಞಾನದ ವ್ಯಾಪ್ತಿಯು ನಿಕಟವಾಗಿ ಕೊಳವೆ ಮಾರ್ಗಗಳ ವಿನ್ಯಾಸ,ನೀರು ಹಂಚಿಕೆ ಪದ್ದತಿಗಳು,ಒಳಚರಂಡಿ, ಸೌಕರ್ಯಗಳು(ಸೇತುವೆಗಳು,ಅಣೆಕಟ್ಟುಗಳು,ನಾಲೆಗಳು,ಸುರಂಗ ಕಾಲುವೆಗಳು,ತಡೆಗೋಡೆಗಳು,ದೊಡ್ಡ ಮೋರಿಗಳ ನೀರು ಮತ್ತು ದೊಡ್ಡ ಕಾಲುವೆಗಳು) ಮುಂತಾದವುಗಳನ್ನು ಒಳಗೊಂಡಿದೆ. ಜಲಶಾಸ್ತ್ರ ಎಂಜಿನೀಯರುಗಳು ದ್ರವದ ಒತ್ತಡ,ದ್ರವ ಸಂಖ್ಯಾಶಾಸ್ತ್ರ,ದ್ರವದ ಕ್ರಿಯಾಶೀಲತೆ ಮತ್ತು ಜಲಶಾಸ್ತ್ರಗಳನ್ನು ಬಳಸಿ ಮೇಲಿನವಗಳ ವಿನ್ಯಾಸ ಮಾಡುತ್ತಾರೆ.
ಭೌತ ವಸ್ತುಗಳ ಎಂಜಿನೀಯರಿಂಗ
[ಬದಲಾಯಿಸಿ]ಲೋಕೋಪಯೋಗಿ ಶಿಲ್ಪ ವಿಜ್ಞಾನದ ಇನ್ನೊಂದು ಭಾಗವೆಂದರೆ ಭೌತಿಕ ವಸ್ತುಗಳ ವಿಜ್ಞಾನ ಭೌತಿಕ ವಸ್ತುಗಳ ಎಂಜಿನೀಯರಿಂಗ ಪಿಂಗಾಣಿ,ಜೇಡಿಮಣ್ಣು,ಅಂದರೆ ಕಾಂಕ್ರೀಟ, ಡಾಮರು ಮಿಶ್ರಿತ ಕಾಂಕ್ರೀಟ್ ಬಲವರ್ಧನೆಗೆ ಲೋಹಗಳ ಬಳಕೆ ಉದಾಹರಣೆಗೆ ಅಲ್ಯುಮಿನಿಯಮ್ ಮತ್ತು ಉಕ್ಕು ಮತ್ತು ಪಾಲಿಮರ್ಸ್ ಅಂದರೆ ಪಾಲಿಮೆಥಿಲ್ಮೆಥಕ್ರೇಟ್(PMMA)ಮತ್ತು ಕಾರ್ಬೊ ಹೈಡ್ರೇಟ್ಸ ಮುಂತಾದವುಗಳಲ್ಲಿ ಈ ವಿಭಾಗವು ವ್ಯವಹರಿಸುತ್ತದೆ.
ಭೌತಿಕ ವಸ್ತು ಎಂಜಿನೀಯರಿಂಗ್ ಸಂರಕ್ಷಣೆ ಮತ್ತು ಪೇಂಟ್ಸ್ ಮತ್ತು ಫಿನಿಶ್ ಗಳ ದೂರ ಮಡುವುದಕ್ಕೆ ಕುರಿತಂತೆ ವಿಷಯಗಳನ್ನು ಒಳಗೊಂಡಿದೆ. ಒಂದು ಅಥವಾ ಹೆಚ್ಚು ಭೌತಿಕ ವಸ್ತು ಅಥವಾ ಲೋಹಗಳ ಮಿಶ್ರಣ ಕೂಡಾ ಉತ್ತಮ ಬಲ ಮತ್ತು ಉತ್ಪನ್ನಗಳಿಗೆ ದಾರಿ ಮಾಡಿಕೊಡುತ್ತದೆ.
ಕಟ್ಟಡ ರಚನೆಯ ರಾಚನಿಕ ಎಂಜಿನೀಯರಿಂಗ್
[ಬದಲಾಯಿಸಿ]ರಾಚನಿಕ ಎಂಜಿನೀಯರಿಂಗ್, ಕಟ್ಟಡಗಳ ರಚನಾ ವಿನ್ಯಾಸ ಮತ್ತು ರಚನಾ ವಿಶ್ಲೇಷಣೆ ಕುರಿತಾದರೆ ರಚನಾ ವಿಶ್ಲೇಷಣೆಯು ಸೇತುವೆಗಳು,ಗೋಪುರಗಳು,ಮೇಲ್ಸೇತುವೆಗಳು,ಸುರಂಗಗಳು ಮತ್ತು ಕರಾವಳಿ ತೀರಗಳಲ್ಲಿನ ತೈಲ ಮತ್ತು ಅನಿಲ ನಿಕ್ಷೇಪಗಳ ರಚನೆ ಮತ್ತು ಇತರೆರಚನಾ ವಿನ್ಯಾಸಗಳು ಈ ವಿಭಾಗದಲ್ಲಿ ಸೇರಿರುತ್ತವೆ. ಕಟ್ಟಡ ರಚನೆ ಮೇಲೆ ಪ್ರಭಾವ ಬೀರುವ ಭಾರ ಮತ್ತು ಭಾರದ ಒತ್ತಡ ಗುರುತಿಸುವಿಕೆ ಬಗ್ಗೆ ಹಾಗು ಗಾತ್ರದ ಪರಿಮಾಣದಂತೆ ಭಾರವನ್ನು ಕಟ್ಟಡಗಳ ಬಲದ ಅದನ್ನು ತಡೆಯುವ ಸಾಮರ್ಥ್ಯದ ಅಂಶಗಳನ್ನು ಒಳಗೊಂಡಿರುತ್ತದೆ. ಈ ಭಾರವು ಕಟ್ಟಡದ ಸ್ವಯಂ ತೂಕ,ಇನ್ನುಳಿದ ಅಂದರೆ ನಿಶ್ಚಿತ ಭಾರ,ಸಜೀವ ಅಂದರೆ ಚಲಿಸುವ ಭಾರ,ಚಕ್ರ ಅಥವಾ ಚಲನೆಯ ಭಾರ,ವಾಯುಭಾರ,ಭೂಕಂಪ ಭಾರ,ಉಷ್ಣತೆಯ ಬದಲಾವಣೆಯಿಂದ ಉಂಟಾಗುವ ಭಾರ ಇತ್ಯಾದಿ.ರಚನಾ ಅಥವಾ ರಾಚನಿಕ ಎಂಜಿನೀಯರ್ ಇದರ ಸುರಕ್ಷತೆ ಮತ್ತು ಉತ್ತಮ ಬಳಕೆಗೆ ಅನುವಾಗುವಂತೆ ಕಟ್ಟಡಗಳನ್ನು ವಿನ್ಯಾಸಗೊಳಿಸಬೇಕಾಗುತ್ತದೆ.ಇಂತಹ ಯಶಸ್ವಿ ವಿನ್ಯಾಸಗಳು (ಮುಂಬರುವ ಸೇವಾ ದೃಷ್ಟಿಯಿಂದ ) ಸಹ ನಿರ್ಮಾಣ ಮಾಡಬೇಕಾಗುತ್ತದೆ ಕೆಲವು ಕಟ್ಟಡಗಳ ಭಾರ ಹೊರುವ ಸಾಮರ್ಥ್ಯದಿಂದಾಗಿ ರಾಚನಿಕ ಎಂಜಿನೀಯರಿಂಗ್ ಕೆಲವು ಉಪ-ನಿಯಮಗಳೊಂದಿಗೆ ಸಜ್ಜಾಗಿದೆ.ಇದು ವಾಯು ಎಂಜಿನೀಯರಿಂಗ್ ಮತ್ತು ಭೂಕಂಪ ಎಂಜನೀಯರಿಂಗ್ ಹುಟ್ಟಿಗೆ ಕಾರಣವಾಯಿತು.
ಭಾರದ ಕಟ್ಟಡಗಳ ನಿರ್ಮಾಣ ಮತ್ತು ವಿನ್ಯಾಸಗಳು ಬಲ,ಗಟ್ಟಿತನ ಮತ್ತು ಸ್ಥಿರತೆಯನ್ನು ಹೊಂದ್ರಬೇಕಾಗುತ್ತದೆ.ಭಾರಕ್ಕನುಗುಣವಾಗಿ ಉದಾಹರಣೆಗೆ ಪೀಠೋಪಕರಣ ಅಥವಾ ಸ್ವಯಂ ತೂಕ,ಅಥವಾ ಅದರೊಳಗಿನ ಭಾರ,ಅಂದರೆ ಗಾಳಿ,ಭೂಕಂಪ ತಡೆಯ ವಸ್ತು,ಭಾರದ ವಾಹನಗಳ ತೂಕದ ಪ್ರಮಾಣ,ತಾತ್ಕಾಲಿಕ ಭಾರ ಗಾತ್ರ ಅಥವಾ ತೂಕಗಳ ಬಗ್ಗೆ ನಿಖರವಾದ ಯೋಜನೆಗಳನ್ನು ಈ ಎಂಜಿನೀಯರಿಂಗ್ ರೂಪಿಸುತ್ತದೆ. ಇನ್ನುಳಿದವುಗಳೆಂದರೆ ಖರ್ಚು-ವೆಚ್ಚ,ರಚನಾವಿಧಾನ,ಪದ್ದತಿ ಸುರಕ್ಷತೆ,ಸೌಂದರ್ಯದ ಪರಿಕಲ್ಪನೆ ಮತ್ತು ಬಾಳಿಕೆಗಳು ಒಳಗೊಂಡಿರುತ್ತದೆ.
ಸರ್ವೇಕ್ಷಣೆ
[ಬದಲಾಯಿಸಿ]ಭೂಮಿ ಮೇಲ್ಭಾಗದಲ್ಲಿನ ಯೋಜಿತ ಪ್ರದೇಶವನ್ನು ಸರ್ವೇಕ್ಷರು ಅಳತಗೋಲಿನಿಂದ ಪಡೆದು ವಿವಿಧ ಆಕೃತಿಗಳನ್ನು ರಚಿಸುವುದೇ ಒಂದು ಪ್ರಕ್ರಿಯೆ ಎನ್ನಲಾಗಿದೆ. ಸರ್ವೇಕ್ಷಣೆಗಾಗಿ ಸಮತಲಗಳು ಮತ್ತು ಥಿಯೊಡೊಲೈಟ್ಸ(ಉದ್ದಗಲ ಮತ್ತು ಕೋನಗಳನ್ನು ಸ್ಟೆತೆಸ್ಕೋಪ್ ನಂತಹಗಳಿಂದ ಬಳಸಿ) ಅಳತೆ ಮಾಡಬಹುದಾಗಿದೆ.ಕೋನಗಳ ಅಂಚುಗಳ ಬದಲಾವಣೆ,ಸಮತಲಗಳು,ಲಂಬಾಕೃತಿಗಳು ಮತ್ತು ಇಳಿಜಾರಾದ ದೂರಗಳು ಇವುಗಳನ್ನು ನಿರ್ಧಿಷ್ಟವಾಗಿ ಮಾಪಕಗಳಿಂದ ತಿಳಿಯಬಹುದಾಗಿದೆ. ಇತ್ತೀಚಿನ ಕಂಪೂಟರೈಜೇಶನಿಂದಾಗಿ ಎಲೆಕ್ಟ್ರಾನಿಕ್ ಮಿಜರಮೆಂಟ್(EDM)ಒಟ್ಟು ಕೇಂದ್ರಗಳು,GPS ಸರ್ವೇಕ್ಷಣೆ ಮತ್ತು ಲೇಸರ್ ಸ್ಕ್ಯಾನಿಂಗ್ ಗಳು ಇಂದು ಮಾಪಕಕ್ಕೆ ಬೆಂಬಲಾಗಿವೆ.(ಅಷ್ಟೇ ಅಲ್ಲದೇ ದೊಡ್ಡ ಮಟ್ಟದಲ್ಲಿಯೇ ಇದು ಸಹಕಾರಿಯಾಗಿದೆ.)ಸಾಂಪ್ರದಾಯಿಕ ಆಪ್ಟಿಕಲ್ ಉಪಕರಣಗಳು ಈಗ ಕಡಿಮೆ ಚಾಲ್ತಿಯಲ್ಲಿವೆ. ಇಂತಹ ಮಾಹಿತಿಯನ್ನು ನಕ್ಷೆ ರೂಪದಲ್ಲಿ ಸಂಗ್ರಹಿಸಿ ಭೂಮಟ್ಟವನ್ನು ಪ್ರತಿನಿಧಿಸುವ ಪ್ರಕ್ರಿಯೆ ತುಂಬಾ ಕಷ್ಟದಾಯಕವೆಂದು ಹೇಳಲಾಗುತ್ತದೆ. ಇಂತಹ ಮಾಹಿತಿಯು ಲೋಕೋಪಯೋಗಿ ಶಿಲ್ಪ ವಿಜ್ಞಾನಿಗಳು,ಕಾಂಟ್ರಾಕ್ಟುದಾರರು ಅಲ್ಲದೇ ಆಸ್ತಿ ವಹಿವಾಟುದಾರರು ಕಟ್ಟಡಗಳ ವಿನ್ಯಾಸ,ಕಟ್ಟಡ ನಡೆಯುತ್ತಿರುವ ಸ್ಥಳ ಮತ್ತು ವ್ಯಾಪಾರಿ ದೃಷ್ಟಿಗಳನ್ನು ಒಳಗೊಂಡಿರುತ್ತದೆ. ಕಟ್ಟಡಗಳನ್ನು ನಿಖರ ಗಾತ್ರ,ನಿಗದಿತ ಅಳತೆ,ನಿಖರ ಹೊಂದಾಣಿಕೆ,ಅದರ ಭಂಗಿ ಅಂದರೆ ಅಕ್ಕ-ಪಕ್ಕದ ಗಡಿ ಮತ್ತು ನಿವೇಶನದ ಜಾಗೆಗಳಿಗೆ ಅನುಗುಣವಾಗಿ ನಿಖರಗೊಳಿಸಬೇಕಾಗುತ್ತದೆ. ಸರ್ವೇಕ್ಷಣೆಯು ಒಂದು ವಿಶಿಷ್ಟ ವೃತ್ತಿಯಾಗಿದ್ದು ಪ್ರತ್ಯೇಕ ಪದವಿ,ಶಿಕ್ಷಣ ಮತ್ತು ಲೈಸೆನ್ಸಿಂಗ್ ವ್ಯವಸ್ಥೆಗಳನ್ನು ಒಳಗೊಂಡಿದೆ.ಸಿವಿಲ್ ಎಂಜಿನೀಯರುಗಳು ಸರ್ವೇಕ್ಷಣೆಯ ಪ್ರಾಥಮಿಕ ತಿಳಿವಳಿಕೆಗಳಲ್ಲಿ ತರಬೇತಿ ಹೊಂದಿರುತ್ತಾರೆ.ನಕ್ಷೆ,ಕಟ್ಟಡದೊಳಗಿನ ಸದ್ದು,ಪ್ರತಿಧ್ವನಿ ಮತ್ತು ಭೌಗೋಳಿಕ ಪದ್ದತಿಗಳ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿದವರಾಗಿರುತ್ತಾರೆ. ಸರ್ವೇಕ್ಷಣೆದಾರರು ರೈಲ್ವೆಗಳು,ಟ್ರಾಮ್ ದಾರಿಗಳು,ಹೆದ್ದಾರಿಗಳು,ರಸ್ತೆಗಳು,ಕೊಳವೆ ಮಾರ್ಗಗಳು ಮತ್ತು ಓಣಿ,ಬಡಾವಣಾ ದಾರಿಗಳ ನಿರ್ಮಾಣಗಳಿಗೆ ಯೋಜನೆಯನ್ನು ಸಿದ್ದಪಡಿಸುತ್ತಾರೆ. ಇನ್ನು ಬಂದರುಗಳ ನಿರ್ಮಾಣದ ಮೊದಲ ಕಾರ್ಯಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಒಂದೆಡೆ ಸೇರಿಸಲು ಸಹಾಯಕರಾಗಿರುತ್ತಾರೆ.
ಭೂ ಸರ್ವೇಕ್ಷಣೆ
ಯುನೈಟೈಡ್ ಸ್ಟೇಟ್ಸ,ಕೆನಡಾ,ಯುನೈಟೈಡ್ ಕಿಂಗಡಮ್ ಮತ್ತು ಬಹುತೇಕ ಕಾಮನ್ವೆಲ್ತ್ ದೇಶಗಳಲ್ಲಿ ಭೂಸರ್ವೇಕ್ಷಣೆಯು ಒಂದು ವಿಶಿಷ್ಟ ವೃತ್ತಿಯಾಗಿದೆ. ಭೂಸರ್ವೇಕ್ಷಣೆ (ಭೂಮಾಪಕರು)ಮಾಡುವವರು (ಭೂಮಾಪಕರು)ಎಂಜಿನೀಯರೆಂದು ಪರಿಗಣಿಸಲಾಗುವದಿಲ್ಲ.ಅವರು ತಮ್ಮ ವೃತ್ತಿಗೆ ಸಂಬಂಧಿಸಿದ ಸಂಘಟನೆ ಮತ್ತು ಲೈಸೆನ್ಸಿಂಗ್ ವಿಧಾನಗಳನ್ನು ಹೊಂದಿದ್ದಾರೆ. ಲೈಸೆನ್ಸ್ ಪಡೆದ ಸರ್ವೇಕ್ಷಕರ ಸೇವೆಯು ಗಡಿ ಸರ್ವೇಕ್ಷಣೆಗೆ ಅಗತ್ಯವಾಗಿದೆ.(ಗಡಿಗಳ ನಿಗದಿ,ಅದರ ಕಾನೊನು ರೀತಿಯ ಸ್ವಾಮ್ಯ,ವರ್ಣನೆ,ವಿವರಗಳು) ಮತ್ತು ಉಪವಿಭಾಗದ ಯೋಜನೆಗಳು(ಒಂದು ನಿವೇಶನ ಜಾಗೆಯ ನಕ್ಷೆಯು ಭೂಸರ್ವೇಕ್ಷಣೆಯ ವಿವರವಾದ ಮಾಹಿತಿಗೆ ಸಂಬಂಧಿಸಿದೆ.ಹೊಸ ಗಡಿ ರಚನೆ,ರೇಖಾ ಚಿತ್ರಗಳ ಮೂಲಕ ನಕ್ಷೆ ಸಿದ್ದಪಡಿಸುವುದು ಹೊಸ ರಸ್ತೆಗಳ ರೇಖಾ ಚಿತ್ರಗಳು)
ಕಟ್ಟಡ ರಚನಾ ಸರ್ವೇಕ್ಷಣೆ
ಕಟ್ಟಡ ರಚನಾ ಸರ್ವೇಕ್ಷಣೆಯು ಸಾಮಾನ್ಯವಾಗಿ ಪರಿಣಿತ ತಂತ್ರಜ್ಞರಿಂದ ಕೈಗೊಳ್ಳಲಾಗುತ್ತದೆ. ಭೂಸರ್ವೇಕ್ಷಣಾದಾರರಂತೆ ಇದರ ಯೋಜನಾ ನಕ್ಷೆಯು ಯಾವುದೇ ಕಾನೂನಿನ ಲಕ್ಷಣಗಳನ್ನು ಹೊಂದಿರುವದಿಲ್ಲ ಎಂದೇ ಹೇಳಬೇಕಾಗುತ್ತದೆ. ಕಟ್ಟಡ ರಚನಾ ಅಥವಾ ವಿನ್ಯಾಸದ ಸರ್ವೇಕ್ಷಣೆಗಾರರ ಕಾರ್ಯಚಟುವಟಿಕೆಗಳು:
- ಮುಂಬರುವ ದಿನಗಳಲ್ಲಿ ಪ್ರಸಕ್ತ ನಿವೇಶನದ ಯೋಜನಾ ವರದಿ,ಅಂದರೆ ಸ್ಥಳ ಸ್ವರೂಪ,ಅಸ್ತಿತ್ವದಲ್ಲಿರುವ ಕಟ್ಟಡಗಳು ಮತ್ತು ಮೂಲಭೂತ ಸೌಕರ್ಯ ಮತ್ತು ನೆಲಮಾಳಿಗೆಗಳಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ವಿವರ ಕಲೆಹಾಕುವುದು.
- ಕಟ್ಟಡ ರಚನಾ ಭೂಸರ್ವೇಕ್ಷಣೆ (ಇಲ್ಲದೇ ಹೋದರೆ "ಲೇ-ಔಟ್"ಇಲ್ಲವೆ "ಸೆಟ್ಟಿಂಗ-ಔಟ್"):ಕಟ್ಟಡ ರಚನೆಗಳ ಕುರಿತ ಗುರುತುಗಳು,ಪಾಯಿಂಟ್ ಗಳು ಅದರ ಕೋನಗಳು ನಿವೇಶನದ ಒಟ್ಟು ವ್ಯಾಪ್ತಿಯನ್ನು ಪರಿಗಣಿಸುವಂತೆ ಇಲ್ಲಿ ಉಲ್ಲೇಖನೀಯ ಮಾಹಿತಿಯನ್ನು ಕಲೆಹಾಕಲಾಗುತ್ತದೆ;
- ಕಟ್ಟಡ ರಚನೆ ಅಥವಾ ನಿರ್ಮಾಣಕ್ಕಾಗಿರುವ ಸ್ಥಳ ಪರಿಶೀಲನೆ;
- ಕಟ್ಟಲ್ಪಟ್ಟ ಕಟ್ಟಡ ಸರ್ವೇಕ್ಷಣೆ ಕಾರ್ಯ:ಕಟ್ಟಡ ನಿರ್ಮಾಣದ ನಂತರ ಅದನ್ನು ನಕ್ಷೆಗನುಗುಣವಾಗಿ ಎಂಬುದಾಗಿ ಪರೀಕ್ಷಿಸುಲಾಗುತ್ತದೆ,ಕಾರ್ಯ ಸ್ವರೂಪಗಳು ಕಾರ್ಯ ನೀತಿಗಳು ಸೂತ್ರಗಳನ್ನು ಅನುಸರಿಸಬೇಕಾಗುತ್ತದೆ.
ಸಾರಿಗೆ ಎಂಜಿನೀಯರಿಂಗ್
[ಬದಲಾಯಿಸಿ]ಸಾರಿಗೆ ಎಂಜಿನೀಯರಿಂಗ್ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜನ ಮತ್ತು ಸಾಮಗ್ರಿಗಳನ್ನು ದಕ್ಷತೆಯಿಂದ,ಸುರಕ್ಷತೆಯಿಂದ ಸಾಗಾಟ,ಸಂಬಂಧಿಸಿದ ಸ್ಪಂದನಾಶೀಲ ಸಮೂಹಕ್ಕೆ ತನ್ನ ಸೇವೆ ಒದಗಿಸುತ್ತದೆ. ಇದು ನಿರ್ಧಿಷ್ಟಗೊಳಿಸುವಿಕೆ,ನಮೂದಿಸುವಿಕೆ,ವಿನ್ಯಾಸ,ಕಟ್ಟಡ ನಿರ್ಮಾಣ,ಮತ್ತು ಸಾರಿಗೆ ಮೂಲಭೂತಗಳ ಉಸ್ತುವಾರಿ ಅಂದರೆ ಬೀದಿಗ ಳು,ಕಾಲುವೆ ನಾಲೆಗಳು,ಹೆದ್ದಾರಿಗಳು,ರೈಲ್ವೆ ವ್ಯವಸ್ಥೆಗಳು,ವಿಮಾನ ನಿಲ್ದಾಣಗಳು,ಬಂದರುಗಳು ಮತ್ತು ಸಮೂಹ ಸಾರಿಗೆ-ಸಾಗಾಟವನ್ನು ಒಳಗೊಂಡಿದೆ. ಇನ್ನುಳಿದ ವಿಷಯಗಳೆಂದರೆ ಸಾರಿಗೆ ವಿನ್ಯಾಸ,ಸಾರಿಗೆ ಯೋಜನೆ,ಸಂಚಾರ ಎಂಜಿನೀಯರಿಂಗ್,ಕೆಲವು ನಗರ ಎಂಜನೀಯರಿಂಗ,ಸರದಿ ಪ್ರಮೇಯ,ಪಾದಚಾರಿ ಎಂಜಿನೀಯರಿಂಗ್,ಚಾಣಾಕ್ಷ ಸಾಗಾಟ ಪದ್ದತಿ(ITS)ಮತ್ತು ಮೂಲಭೂತ ಸೌಕರ್ಯಗಳ ನಿರ್ವಹಣೆಗಳಾಗಿ ಈ ವಿಭಾಗದಲ್ಲಿ ಹೆಸರಿಸಲ್ಪಟ್ಟಿವೆ.
ಮುನ್ಸಿಪಲ್ ಅಥವಾ ನಗರ ಎಂಜಿನೀಯರಿಂಗ್ (ಸ್ಥಳೀಯ ಪೌರಾಡಳಿತಕ್ಕೆ ಸಂಬಂಧಿಸಿದ್ದು)
[ಬದಲಾಯಿಸಿ]ಮುನ್ಸಿಪಲ್ ಎಂಜಿನೀಯರಿಂಗ್ ಮುನ್ಸಿಪಲ್(ಸ್ಥಳೀಯ) ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದೆ. ಇದರ ಕೆಲಸ ಕಾರ್ಯಗಳು ವಿಶಿಷ್ಟಪೂರ್ಣ ಮತ್ತುನಿಗದಿತವಾಗಿರುತ್ತವೆ.ನಮೂದಿಸುವುದು,ವಿನ್ಯಾಸಗೊಳಿಸುವುದು,ಕಟ್ಟಡ ನಿರ್ಮಾಣ ಮತ್ತು ಬೀದಿಗಳು ಪಕ್ಕದ ರಸ್ತೆಗಳು, ನೀರು ಪೂರೈಕ ಜಾಲಗಳು,ಒಳಚರಂಡಿ,ಬೀದಿದೀಪಗಳ ವ್ಯವಸ್ಥೆ,ಮುನ್ಸಿಪಲನಿಂದ ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆ ಮತ್ತು ಸಾಗಾಟ,ವಿವಿಧ ಸಾರ್ವಜನಿಕ ಉಪಯೋಗಿ ವಸ್ತುಗಳ ಬೃಹತ್ ಸಂಗ್ರಹಾರಗಳು(ಮರಳು,ಉಪ್ಪು ಇತ್ಯಾದಿ)ಸಾರ್ವಜನಿಕ ಉದ್ಯಾನವನಗಳು ಮತ್ತು ಬೈಸಿಕಲ್ ಸಂಚಾರ ಮಾರ್ಗ ಇತ್ಯಾದಿಗಳ ಮೇಲ್ವಿಚಾರಣೆ ಒಳಗೊಂಡಿದೆ. ನೆಲದಾಳದ ಉಪಭೋಗದ ಜಾಲಗಳಿಗೆ ಅಂದರೆ ಇದು ನಾಗರಿಕ ಸೇವಾ ವಲಯ(ದೊಡ್ಡ ನಾಲೆ ಅಥವಾ ಮೋರಿಗಳು ಮತ್ತು ಚೇಂಬರ್ಸ) ಇದರಲ್ಲಿ ವಿದ್ಯುತ್ ಹಾಗು ಸಂಹನಾ ಸೇವೆಗಳೂ ಸೇರುತ್ತವೆ. ಇದೂ ಅಲ್ಲದೇ ಇದು ಕಸ-ತ್ಯಾಜ್ಯಸಂಗ್ರಹಣೆ ಮತ್ತು ಮಿತಗೊಳಿಸುವ ಮತ್ತು ಬಸ್ ಸೇವಾ ಜಾಲ ಒದಗಿಸುವುದು ಕೂಡಾ ಇದರ ವ್ಯಾಪ್ತಿಗೆ ಬರುತ್ತದೆ. ಲೋಕೋಪಯೋಗಿ ಶಿಲ್ಪ ವಿಜ್ಞಾನ ವಿಭಾಗದ ನಿಯಮಗಳು. ಇದರ ಇನ್ನುಳಿದ ಶಾಖೆಗಳು ಕೆಲವು ನಿಯಮಗಳನ್ನು ಆಕ್ರಮಿಸುವ ಸಾಧ್ಯತೆ ಇದೆ.ಮುನ್ಸಿಪಲ್ ಎಂಜಿನೀಯರಿಂಗ್ ಹೆಚ್ಚಾಗಿ ಮೂಲಭೂತ ಸೌಕರ್ಯಜಾಲಗಳು ಮತ್ತು ಸೇವಾ ವಲಯಗಳ ಮೇಲೆ ಗಮನ ಹರಿಸುತ್ತದೆ.ಒಂದರ ನಂತರ ಒಂದರಂತೆ ನಿರ್ಮಾಣ ಕಾರ್ಯಗಳು ಮತ್ತು ಅದೇ ಪೌರಾಡಳಿತ ವ್ಯವಸ್ಥೆಯೇ ಇದನ್ನು ನಿಭಾಯಿಸುತ್ತದೆ.
ಇದನ್ನೂ ಗಮನಿಸಿ
[ಬದಲಾಯಿಸಿ]- ಸಿವಿಲ್ ಇಂಜಿನಿಯರಿಂಗ್
- ಬೃಹತ್ ಎಂಜಿನೀಯರಿಂಗ್
- ಲೋಕೋಪಯೋಗಿ ಶಿಲ್ಪ ವಿಜ್ಞಾನದ ಲೇಖನಗಳ ಪರಿವಿಡಿ
- ಲೋಕೋಪಯೋಗಿ ಶಿಲ್ಪ ಶಾಸ್ತ್ರಜ್ಞರು
- ಲೋಕೋಪಯೋಗಿ ಶಿಲ್ಪ ವಿಜ್ಞಾನದ ಹೆಜ್ಜೆ ಗುರುತಗಳ ಇತಿಹಾಸ
- ಆಧಾರರಚನೆ
- Associations
- ಅಮೇರಿಕನ್ ಸೊಸೈಟಿ ಆಪ್ ಸಿವಿಲ್ ಎಂಜಿಯನಿಯರ್ಸ್
- ಕೆನಡಾದ ಲೋಕೋಪಯೋಗಿ ಶಿಲ್ಪ ವಿಜ್ಞಾನ ಸೊಸೈಟಿ
- ಚಿ ಎಪ್ಸಿಲಾನ್ ಲೋಕೋಪಯೋಗಿ ಶಿಲ್ಪ ವಿಜ್ಞಾನದ ಒಂದು ಗೌರವ ಸಂಘ
- ಭೂಕಂಪ ಮಾಪನದ ಎಂಜಿನೀಯರಿಂಗ ಸಂಸ್ಥೆ
- ಆಸ್ಟ್ರೇಲಿಯಾ ಎಂಜಿನೀಯರುಗಳು
- ಲೋಕೋಪಯೋಗಿ ಶಿಲ್ಪ ವಿಜ್ಞಾನ ಶಾಸ್ತ್ರಜ್ಞರ ಸಂಸ್ಥೆ
- ಐರ್ಲೆಂಡಿನ ಎಂಜಿನೀಯರುಗಳು
- ಸಾರಿಗೆ ಎಂಜಿನೀಯರುಗಳ ಸಂಸ್ಥೆ
- ಅಂತಾರಾಷ್ಟ್ರೀಯ ಎಂಜಿನೀಯರರ ಸಲಹಾ ಒಕ್ಕೂಟ
- ಸಾರಿಗೆ ಸಂಶೋಧನಾ ಮಂಡಳಿ
- ಲೋಕೋಪಯೋಗಿ ಶಿಲ್ಪ ವಿಜ್ಞಾನ ಶಾಸ್ತ್ರಜ್ಞರ ಸರ್ವೇಕ್ಷಣಾಕಾರರ ಸಂಸ್ಥೆ
ಆಕರಗಳು
[ಬದಲಾಯಿಸಿ]- ↑ ಅಮೇರಿಕನ್ ಹೆರಿಟೇಜ್ ಡಿಕ್ಷನರಿ ಆಫ್ ಇಂಗ್ಲೀಷ್ ಭಾಷಾ ನಾಲ್ಕನೆಯ ಸಂಪುಟ
- ↑ ೨.೦ ೨.೧ "History and Heritage of Civil Engineering". ASCE. Archived from the original on 2016-04-07. Retrieved 2007-08-08.
- ↑ "Institution of Civil Engineers What is Civil Engineering" (PDF). ICE. Archived from the original (PDF) on 2006-09-23. Retrieved 2007-09-22.
- ↑ ೪.೦ ೪.೧ ೪.೨ "What is Civil Engineering?". The Canadian Society for Civil Engineering. Archived from the original on 2007-08-12. Retrieved 2007-08-08.
- ↑ ೫.೦ ೫.೧ ೫.೨ "Civil engineering". Encyclopædia Britannica. Retrieved 2007-08-09.
- ↑ ೬.೦ ೬.೧ Oakes, William C.; Leone, Les L.; Gunn, Craig J. (2001), Engineering Your Future, Great Lakes Press, ISBN 1-881018-57-1
- ↑ The Architecture of the Italian Renaissance Jacob Burckhardt ISBN 0805210822
- ↑ "Institution of Civil Engineers' website". Retrieved 2007-12-26.
- ↑ ""Norwich University Legacy Website"". Archived from the original on 2014-07-06. Retrieved 2010-02-04.
- ↑ Griggs, Francis E Jr. "Amos Eaton was Right!". Journal of Professional Issues in Engineering Education and Practice , Vol. 123, No. 1, January 1997, pp. 30–34. See also RPI Timeline Archived 2014-07-02 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Victor E. Saouma. "Lecture notes in Structural Engineering" (PDF). University of Colorado. Archived from the original (PDF) on 2016-04-07. Retrieved 2007-11-02.
- ↑ Algebra with arithemtic and mensuration by Henry Thomas Colebrook, https://books.google.com/books?id=A3cAAAAAMAAJ&printsec=frontcover&dq=brahmagupta
- ↑ Various undergraduate degree requirements at MIT Archived 2013-05-22 ವೇಬ್ಯಾಕ್ ಮೆಷಿನ್ ನಲ್ಲಿ., Cal Poly Archived 2013-10-29 ವೇಬ್ಯಾಕ್ ಮೆಷಿನ್ ನಲ್ಲಿ., Queen's and Portsmouth Archived 2010-12-09 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ,"CITE Postgrad". Archived from the original on 2011-09-09. Retrieved 2010-02-04.
- ↑ ೧೫.೦ ೧೫.೧ "Why Should You Get Licensed?". National Society of Professional Engineers. Archived from the original on 2005-06-04. Retrieved 2007-08-11.
- ↑ "Engineers Act". Quebec Statutes and Regulations (CanLII). Retrieved 2007-08-11.
- ↑ "Ethics Codes and Guidelines". Online Ethics Center. Archived from the original on 2016-02-02. Retrieved 2007-08-11.
- ↑ ೧೮.೦ ೧೮.೧ Mitchell, James Kenneth (1993), Fundamentals of Soil Behavior (2nd ed.), John Wiley and Sons, pp 1–2
- ↑ Shroff, Arvind V.; Shah, Dhananjay L. (2003), Soil Mechanics and Geotechnical Engineering, Taylor & Francis, 2003, pp 1–2
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಅಮೇರಿಕನ್ ಸೊಸೈಟಿ ಆಪ್ ಸಿವಿಲ್ ಎಂಜಿಿನಿಯರ್ಸ್ Archived 2009-04-09 ವೇಬ್ಯಾಕ್ ಮೆಷಿನ್ ನಲ್ಲಿ.
- Institution of Civil Engineers Archived 2010-12-09 ವೇಬ್ಯಾಕ್ ಮೆಷಿನ್ ನಲ್ಲಿ.
- Planete TP - The World of Public Works Archived 2016-06-03 ವೇಬ್ಯಾಕ್ ಮೆಷಿನ್ ನಲ್ಲಿ.
- CENews - For the Business of ಲೋಕೋಪಯೋಗಿ ಶಿಲ್ಪ ವಿಜ್ಞಾನ
- The Institution of Civil Engineering Surveyors Archived 2009-11-05 ವೇಬ್ಯಾಕ್ ಮೆಷಿನ್ ನಲ್ಲಿ.
- ಲೋಕೋಪಯೋಗಿ ಶಿಲ್ಪ ವಿಜ್ಞಾನ Contractors Association (UK)
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using ISBN magic links
- Articles with unsourced statements from May 2008
- Articles with invalid date parameter in template
- Articles with hatnote templates targeting a nonexistent page
- Articles with unsourced statements from June 2008
- Articles with unsourced statements from August 2007
- Articles with unsourced statements from September 2009
- All articles that may contain original research
- Articles that may contain original research from September 2009
- ಸಿವಿಲ್ ಇಂಜಿನಿಯರಿಂಗ್
- Engineering disciplines
- ವಾಸ್ತುಶಿಲ್ಪ