ಹೈದರಾಬಾದ್, ತೆಲಂಗಾಣ
' | |
Charminar | |
ರಾಜ್ಯ - ಜಿಲ್ಲೆ |
[[ತೆಲಂಗಾಣ]] - |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
621.48 km² - 536 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (2001) - ಸಾಂದ್ರತೆ - Agglomeration (2009) |
3637483 (6th) - 5852.9/ಚದರ ಕಿ.ಮಿ. - 6290397 (6th) |
Commissioner | S.P.Singh |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 500 xxx - +91-40 - AP09, AP10, AP11, AP12, AP13, AP28, AP29 |
ಅಂತರ್ಜಾಲ ತಾಣ: www.ghmc.gov.in |
ಹೈದರಾಬಾದ್ (ತೆಲುಗು:హైదరాబాద్,ಉರ್ದು: حیدرآباد) ತೆಲಂಗಾಣದ ರಾಜಧಾನಿ ಹಾಗೂ ಭಾರತದ ಅತಿ ಹೆಚ್ಚು ಜನಸಂಖ್ಯೆ ಇರುವ ಒಂದು ನಗರ. ಹೈದರಾಬಾದ್ 4 ಮಿಲಿಯನ್‌ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.[೧] ಇದನ್ನು "ಮುತ್ತುಗಳ ನಗರ" ಹಾಗೂ "ನಿಜಾಮ್‌ರ ನಗರ" ಎಂದು ಹೇಳಲಾಗುತ್ತದೆ.
ಈ ನಗರವು ತನ್ನ ಅಭಿವೃದ್ಧಿಪರತೆ ಮತ್ತು ತನ್ನ ವಿಶಾಲವಾದ ವಿಸ್ತೀರ್ಣ,ಜನಸಂಖ್ಯೆಗಳ ಕಾರಣದಿಂದ A-1 ಸಿಟಿ ಎಂದು ಗುರುತಿಸಲ್ಪಟ್ಟಿದೆ.[೨]
ಹೈದರಾಬಾದ್ ನಗರವು ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಒಂದು ಪ್ರಮುಖ ತಾಣವಾಗಿ ಬೆಳವಣಿಗೆಗೊಂಡಿದೆ. ಈ ನಗರವು ಪ್ರಪಂಚದ ಅತಿ ದೊಡ್ಡ ಫಿಲ್ಮ್ ಸ್ಟುಡಿಯೋ ಆಗಿರುವ ರಾಮೋಜಿ ಫಿಲ್ಮ್ ಸಿಟಿಗೆ ಮನೆಯಾಗಿದೆ, ಅಲ್ಲದೆ ಟಾಲಿವುಡ್ ಎಂದು ಜನಪ್ರಿಯವಾದ ತೆಲಗು ಫಿಲ್ಮ್ ಇಂಡಸ್ಟ್ರಿಯು ಭಾರತದಲ್ಲಿನ ಎರಡನೇ ಅತಿ ದೊಡ್ಡ ಸಿನೆಮಾ ಉದ್ಯಮವಾಗಿದೆ. ಇದು ಹಲವಾರು ಕ್ರೀಡಾಂಗಣಗಳನ್ನು ಹೊಂದಿರುವ ಕಾರಣ ಪ್ರಮುಖ ಕ್ರೀಡಾತಾಣವಾಗಿದೆ. ಇಲ್ಲಿ ಹಲವಾರು ಅಂತರಾಷ್ಟ್ರೀಯ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ. ಅಲ್ಲದೆ ಈ ನಗರವು ಇಂಡಿಯನ್ ಪ್ರೀಮಿಯರ್ ಲೀಗ್ನ ಡೆಕ್ಕನ್ ಚಾರ್ಜರ್ಸ್ ತಂಡಕ್ಕೆ ತವರಾಗಿದೆ.
ಹೈದರಾಬಾದಿನ ನಿವಾಸಿಗಳನ್ನು ಹೈದರಾಬಾದಿಗಳು ಎಂದು ಕರೆಯಲಾಗುತ್ತದೆ. ಈ ನಗರವು ಆಧುನಿಕತೆಯನ್ನು ಮತ್ತು ಪಾರಂಪಾರಿಕತೆ ಎರಡನ್ನೂ ಸಂಯೋಜನೆಗೊಂಡಿರುವುದಕ್ಕಾಗಿ ಹೆಸರುವಾಸಿಯಾಗಿದೆ.[೩]
ವ್ಯುತ್ಪತ್ತಿ
[ಬದಲಾಯಿಸಿ]'ಹೈದರಾಬಾದ್' ಹೆಸರಿನ ಮೂಲ ಮತ್ತು ಶಬ್ದವ್ಯುತ್ಪತ್ತಿ ಶಾಸ್ತ್ರವನ್ನು ವಿವರಿಸುವ ಸಿದ್ಧಾಂತಗಳಲ್ಲಿ ಒಮ್ಮತವಿಲ್ಲ. ಒಂದು ಪ್ರಸಿದ್ಧ ಸಿದ್ಧಾಂತದ ಪ್ರಕಾರ ಮಹಮ್ಮದ್ ಕೌಲಿ ಶಾನು ಈ ನಗರಕ್ಕೆ ಬಂದ ನಂತರ ಭಾಗ್ಯನಗರಂ ನ ಭಾಗ್ಯವತಿ ಅಥವಾ ಭಾಗ್ಮತಿ ಯೆಂಬ ಬಂಜಾರ ಕನ್ಯೆಯನ್ನು ಕಂಡು ಆಕೆಯನ್ನು ಪ್ರೀತಿಸಿ ಮದುವೆ ಆದನೆಂದು ತಿಳಿದುಬರುತ್ತದೆ. ಆಕೆ ಇಸ್ಲಾಂ ಧರ್ಮಕ್ಕೆ ಮತಾಂತರವಾದ ನಂತರ ತನ್ನ ಹೆಸರನ್ನು ಹೈದರ್ ಮಹಲ್ ಎಂದು ಬದಲಾಯಿಸಿಕೊಂಡಳು, ಇದರ ಅರ್ಥ ಎರಡು ಉರ್ದು ಶಬ್ದಗಳಾದ ಹೈದರ್-ಎ’ಬಾದ್ ಅಂದರೆ ಹೈದರ್ ಧೀರ್ಘಾಯುಷಿಯಾಗೆಂದು ಆಗಿದ್ದು ಇದರಿಂದಲೇ ಆ ನಗರಕ್ಕೆ ಹೈದರಾಬಾದ್ ಎಂಬ ಹೆಸರು ಬಂದಿತೆಂದು ಪ್ರತೀತಿ. ಆದರೆ, ಸುಮಾರು ಕಾಲದ ವರೆಗೆ ಈ ನಗರದ ಹೆಸರು ಒಬ್ಬ ಇಸ್ಲಾಂ ಧರ್ಮಗುರು ಮಹಮ್ಮದ್‌ನ ಅಳಿಯ ಅಲಿ ಇಬ್ನ್ ತಾಲಿಬ್ (ಹೈದರ್ ಎಂಬುದು ಈತನ ಇನ್ನೊಂದು ಹೆಸರಾಗಿತ್ತು)ನ ಹೆಸರಿಂದ ಬಂದುದಾಗಿ ನಂಬಲಾಗಿತ್ತು.[೪][೫]
ಇತಿಹಾಸ
[ಬದಲಾಯಿಸಿ]ಹೈದರಾಬಾದ ನಗರವು ಸುಮಾರು 500 ವರ್ಷಗಳ ಹಿಂದೆ ಆವಿಷ್ಕಾರಕ್ಕೆ ಸಿಕ್ಕಿದ್ದರೂ, ಪುರಾತತ್ವ ಇಲಾಖೆಯ ತಜ್ಞರು ನಗರದ ಸುತ್ತಮುತ್ತಲೂ ಐರನ್ ಏಜ್‌ನ ಕೆಲವು ಕುರುಹುಗಳನ್ನು ಕಂಡಿದ್ದು ಇವು ಕ್ರಿಸ್ತ ಪೂರ್ವ 500ನೇ ಇಸವಿಗೆ ಸೇರಿದವಾಗಿವೆ.[೬] ಸುಮಾರು 1000+ ವರ್ಷಗಳ ಹಿಂದೆ ಈ ಪ್ರಾಂತ್ಯವು ಕಾಕತೀಯರಿಂದ ಆಳಲ್ಪಟ್ಟಿತ್ತು. ಗೊಲ್ಕೊಂಡಾ ರಾಜ ಪರಂಪರೆಯ ಕುತ್ಬ್ ಶಾಹಿ ಕುಟುಂಬದ ಮುಹಮ್ಮದ್ ಕುಲಿ ಕುತ್ಬ್ ಶಾಹನು ಮೊದಲು ಬಹುಮನಿ ಸುಲ್ತಾನನ ಅಡಿಯಲ್ಲಿದ್ದು 1512 ರಲ್ಲಿ ಸ್ವತಂತ್ರನಾದನು. ಈತನು ತಮ್ಮ ಹಳೆಯ ರಾಜ್ಯ ಪ್ರಾಂತ್ಯವಾದ ಗೋಲ್ಕೊಂಡಾದಲ್ಲಿ [೭] ನೀರಿನ ಕೊರತೆಯನ್ನು ಕಂಡು ಅದನ್ನು ಪೂರೈಸಲು 1591ರಲ್ಲಿ ಮುಸಿ ನದಿಯ ತೀರದಲ್ಲಿ ಹೈದರಾಬಾದ್ ನಗರವನ್ನು ಹುಟ್ಟುಹಾಕಿದನು.[೮] ಆತನು 1591 ರಲ್ಲಿ ಚಾರ್ಮಿನಾರ್ ಕಟ್ಟಲು, ಹುಸೇನನ (ಧರ್ಮ ಗುರು ಮೊಹಮ್ಮದನ ಮೊಮ್ಮಗ) ನೆನಪಿಗಾಗಿ ಕಟ್ಟಿರುವ ಗೋರಿಯ ಪ್ರತಿರೂಪವನ್ನು ಮೊದಲು ಕಟ್ಟಿ ನಂತರ ಚಾರ್ಮಿನಾರ್ ಆಗಿ ಬದಲಾಯಿಸಲಾಯಿತು, ನಿರ್ಮಾಣಕ್ಕೆ ಆದೇಶವಿತ್ತನು. ಇದು ಈ ನಗರವನ್ನು ಬಿಂಬಿಸುವ ಪ್ರಮುಖ ಕಟ್ಟಡವಾಯಿತು. ಇದನ್ನು ಕಟ್ಟುವ ಉದ್ದೇಶವು ತನ್ನ ನವನಗರದ ಮೇಲೆ ಬಂದ ಪ್ಲೇಗ್ ರೋಗವು ಯಾವುದೇ ದೊಡ್ಡ ಪೆಟ್ಟು ಮಾಡದಂತೆ ತಡೆಯೊಡ್ಡಿದ ಭಗವಂತನ ಅನುಗ್ರಹಕ್ಕೆ ಕೃತಜ್ಞತಾಪೂರ್ವಕವಾಗಿ ಕಟ್ಟಲಾಯಿತು.[೯]
1687[೧೦] ರಲ್ಲಿ ಮುಘಲ್ ದೊರೆ ಔರಂಗಜೇಬನು ಹೈದರಾಬಾದಿನ ಮೇಲೆ ದಾಳಿ ಮಾಡಿ ಅದನ್ನು ವಶ ಪಡಿಸಿಕೊಂಡನು. ಮತ್ತು ಅವನ ಆಡಳಿತದ ಚಿಕ್ಕ ಸಮಯದಲ್ಲಿಯೇ ಅವನು ನೇಮಿಸಿದ ಗವರ್ನರ್‌ಗಳು ಈ ನಗರವನ್ನು ವಶಪಡಿಸಿಕೊಂಡರು. 1724 ರಲ್ಲಿ ಮೊಘಲ್ ದೊರೆಯಿಂದ ನಿಜಾಮ್-ಉಲ್-ಮುಲ್ಕ್(ದೇಶದ ಗವರ್ನರ್) ಯೆಂದು ನಾಮಾಂಕಿತನಾದ ಅಸಾಫ್ ಜಾನು ತನ್ನ ವಿರೋಧಿ ರಾಜನೊಬ್ಬನನ್ನು ಸೋಲಿಸಿ ಹೈದರಾಬಾದಿನ ಮೇಲೆ ಅಧಿಕಾರವನ್ನು ಸ್ಥಾಪಿಸಿದನು.[೧೦][೧೧] ಈ ರೀತಿಯಾಗಿ ಹೈದರಾಬಾದಿನಲ್ಲಿ ಆರಂಭವಾದ ಅಸಾಫ್ ಜಾಹೀ ಸಾಮ್ರಾಜ್ಯವು ಭಾರತವು ಬ್ರಿಟೀಷರಿಂದ ಸ್ವತಂತ್ರವಾಗುವವರೆಗೆ ಮುಂದುವರೆಯಿತು. ಅಸಾಫ್ ಜಾನ ಮುಂದಿನ ಪೀಳಿಗೆಯವರು ಹೈದರಾಬಾದಿನ ನಿಜಾಮರಾಗಿ ಆಳಿದರು. ಏಳು ನಿಜಾಮರ ಆಳ್ವಿಕೆಯ ಕಾಲದಲ್ಲಿ ಹೈದರಾಬಾದ್ ಹಲವಾರು ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಕಂಡಿತು. ಈ ರೀತಿಯಾಗಿ ಹೈದರಾಬಾದ್ ಅಧಿಕೃತವಾಗಿ ಸಾಮ್ರಾಜ್ಯದ ರಾಜ್ಯಧಾನಿಯಾಯಿತು, ಅಲ್ಲದೆ ಇದರಿಂದಾಗಿ ಗೋಲ್ಕಂಡವನ್ನು ಹೆಚ್ಚಾಗಿ ಕಡೆಗಣಿಸಿದಂತಾಯಿತು. ಹಲವಾರು ನಿಗದಿತ ಯೋಜನೆಗಳಾದ ನಿಜಾಮ್ ಸಾಗರ,ತುಂಗಭದ್ರ,ಒಸಮನ್ ಸಾಗರ,ಹಿಮ್ಯಾತ್ ಸಾಗರಗಳು ನಿರ್ಮಾಣವಾದವು. ಈ ಸಮಯದಲ್ಲಿ ನಾಗರ್ಜುನ ಸಾಗರದ ಸರ್ವೇ ಕೆಲಸವು ಆರಂಭವಾಗಿದ್ದರೂ ಕೂಡ, ಇದರ ಕೆಲಸವನ್ನು 1969 ರಲ್ಲಿ ಭಾರತ ಸರ್ಕಾರವು ಸಂಪೂರ್ಣಗೊಳಿಸಿತು. ಇಲ್ಲಿಯ ಪ್ರೇಕ್ಷಣೀಯ ಸ್ಥಳವಾದ ’ಜಿವೆಲ್ಸ್ ಆಫ್ ನಿಜಾಮ್ಸ್’ ಇದು ನಿಜಾಮರ ಸಂಪತ್ತು ಮತ್ತು ಅವರ ದರ್ಪವನ್ನು ಎತ್ತಿ ತೋರುತ್ತದೆ. ಭಾರತದ ರಾಜಾಪತ್ಯದಲ್ಲಿನ ರಾಜ್ಯಗಳಲ್ಲಿಯೆ ಇದು ಅತ್ಯಂತ ದೊಡ್ಡದಾದ ಹಾಗೂ ಶ್ರೀಮಂತ ರಾಜ್ಯವಾಗಿತ್ತು.
ಇದರ ಪ್ರಾದೇಶಿಕ ವಿಸ್ತಾರವು 90,543 ಮೀಟರ್ ಇದ್ದು 1901 ರಲ್ಲಿ ಇದರ ಜನಸಂಖ್ಯೆಯು 50,073,759 ಇತ್ತು. ಇದು ಸರಿಸುಮಾರು 90,029,000 ಗಳಷ್ಟು ರಾಜ್ಯಾದಾಯವನ್ನು ಅನುಭವಿಸುತ್ತಿತ್ತು.[೧೨]
1947 ರ ಮುಂಚೆ ಹೈದರಾಬಾದ್ ಬ್ರಿಟೀಷ್ ಸಾಮ್ರಾಜ್ಯದ ಸುಪರ್ದಿಯಲ್ಲಿತ್ತು ಆದರೆ ಇದು ಬ್ರಿಟೀಷ್ ಇಂಡಿಯಾದ ಭಾಗವಾಗಿರಲಿಲ್ಲ. 1947 ರಲ್ಲಿ ಭಾರತವು ಸ್ವತಂತ್ರಗೊಂಡು ಸಂಯುಕ್ತ ಭಾರತ ಮತ್ತು ಪಾಕೀಸ್ತಾನಗಳೆಂದು ಇಬ್ಬಾಗವಾದಾಗ ಬ್ರಿಟೀಷರು ರಾಜ್ಯಾಡಳಿತವಿದ್ದ ಪ್ರಾಂತ್ಯಗಳ ಮೇಲೆ ತಮಗಿದ್ದ ಸುಪರ್ದಿಯನ್ನು ತೊರೆದು ಅವರಿಗೆ ಅವರದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಟ್ಟರು. ನಿಜಾಮನು ಮುಸ್ಲಿಂ ಸಂಪ್ರದಾಯದ ಪ್ರಕಾರ ಪಾಕಿಸ್ತಾನಕ್ಕೂ ಹೋಗಲು, ಅಥವಾ ಸ್ವತಂತ್ರನಾಗಿ ಉಳಿಯಲು ಇಚ್ಚಿಸಿದನು. ಆದರೆ, ಸಮಗ್ರತೆಯ ದೃಷ್ಠಿಯಿಂದ ಸಂಯುಕ್ತ ಭಾರತಕ್ಕೆ ಈ ನಿರ್ಧಾರಗಳು ಅಸಹನೀಯವಾಗಿದ್ದವು. ಇಂತಹ ನಿಜಾಮನ ಪ್ರಯತ್ನ ಆಧುನಿಕ ಭಾರತದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡದೆನ್ನಬಹುದಾದ ಶಸ್ತ್ರಸಜ್ಜಿತ ರೈತರ ದಂಗೆಗೆ ಕಾರಣವಾಯಿತು. ನಿಜಾಮರನ್ನು ಹಿಮ್ಮೆಟ್ಟಲು ಸಂಯುಕ್ತ ಭಾರತವು ಒಂದು ಆರ್ಥಿಕ ಒಪ್ಪಂದವನ್ನು ಮಾಡಿಕೊಂದಿದ್ದು, ಇದು ಹೈದರಾಬಾದನ್ನು ಈ ಒಪ್ಪಂದಕ್ಕೆ ಸಹಿ ಹಾಕುವಂತೆ ಮಾಡಿತು. ನಿಜಾಮನ ಹಠಸ್ವಭಾವದಿಂದಾಗಿ ಹೈದರಾಬಾದ್ ಭಾರತದ ಕೆಲವು ರಾಜ್ಯಾಡಳಿತ ಪ್ರಾಂತ್ಯಗಳನ್ನು ಸಂಯುಕ್ತ ಭಾರತದ ಸುಪರ್ದಿಗೆ ತರಲು ಸೇನಾ ಸಹಾಯವನ್ನು ಪಡೆಯಬೇಕಾಯಿತು. 1948ರ ಸೆಪ್ಟೆಂಬರ್ 17ರಂದು ಆಪರೇಷನ್ ಪೊಲೋ ಹೆಸರಿನ ಕಾರ್ಯಾಚರಣೆ ನಡೆಯಿತು. ಇದರಿಂದಾಗಿ ನಿಜಾಮರು, ಭಾರತ ಸಂಯುಕ್ತ ಒಕ್ಕೂಟ[೧೩] ದಲ್ಲಿ ಸೇರಲು ವಿಲೀನದ ಪತ್ರಕ್ಕೆ ಸಹಿ ಹಾಕಿದರು.
1955 ರಲ್ಲಿ ಹೈದರಾಬಾದ್‌ನಲ್ಲಿರುವ ಸೌಲಭ್ಯಗಳನ್ನು ನೋಡಿದ ಡಾ.ಅಂಬೇಡ್ಕರ್ ಅವರು ಭಾರತದ ಎರಡನೇ ರಾಜಧಾನಿಯನ್ನಾಗಿ ಮಾಡಬೇಕು ಎಂದು ಪ್ರತಿಪಾದಿಸಿದ್ದರು. ಹೈದರಾಬಾದ್‌ನಲ್ಲಿ ದೆಹಲಿಯಲ್ಲಿರುವಂತಹ ಸೌಲಭ್ಯಗಳು ಇದ್ದು, ದೆಹಲಿಗಿಂತಲೂ ಅತ್ಯುತ್ತಮ ನಗರವಾಗಿದ್ದು, ದೆಹಲಿಗೆ ಇರುವ ಎಲ್ಲ ವೈಭವ ಇದಕ್ಕಿದೆ ಎಂದು ಅವರು ಹೇಳಿದ್ದರು. ದೆಹಲಿಗೆ ಹೋಲಿಸಿದಲ್ಲಿ ಅತ್ಯುತ್ತಮವಾಗಿರುವ ಕಟ್ಟಡಗಳು ಕಡಿಮೆ ಬೆಲೆಗೆ ಸಿಗುತ್ತವೆ. ಇಲ್ಲಿ ಬೇಕಾಗಿರುವ ಒಂದೇ ಸಂಗತಿ ಎಂದರೆ ಸಂಸತ್ತು ಅದನ್ನು ಭಾರತ ಸರ್ಕಾರ ಸುಲಭವಾಗಿ ನಿರ್ಮಿಸಬಹುದು.[೧೪]
ನವಂಬರ್ 1, 1956ರಲ್ಲಿ ಭಾರತದಲ್ಲಿ ಭಾಷಾವಾರು ಆಧಾರದ ಮೇಲೆ ರಾಜ್ಯಗಳನ್ನು ಗುರುತಿಸಲಾಯಿತು. ಹೈದರಾಬಾದ್ ರಾಜ್ಯದ ಪ್ರದೇಶಗಳನ್ನು ನೂತನವಾಗಿ ರಚಿಸಲಾದ ಆಂಧ್ರಪ್ರದೇಶ , ಮುಂಬಯಿ ರಾಜ್ಯ ನಂತರ ಮಹಾರಾಷ್ಟ್ರ ಮತ್ತು ಕರ್ನಾಟಕಗಳ ನಡುವೆ ವಿಭಜಿಸಲಾಯಿತು. ತೆಲುಗು ಮಾತನಾಡುವ ಹೈದರಾಬಾದ್ ರಾಜ್ಯದ ಪ್ರದೇಶಗಳನ್ನು ತೆಲುಗು ಮಾತನಾಡುವ ರಾಜ್ಯವಾದ ಆಂಧ್ರದಲ್ಲಿ ಸೇರ್ಪಡೆಗೊಳಿಸಿ ಆಂಧ್ರಪ್ರದೇಶ ರಾಜ್ಯ ರಚಿಸಲಾಯಿತು. ಹೀಗೆ ಹೈದರಾಬಾದ್‌ನೂತನ ರಾಜ್ಯ ಆಂಧ್ರಪ್ರದೇಶದ ರಾಜಧಾನಿಯಾಯಿತು.[೧೫]
90ರಿಂದೀಚಿಗಿನ ಉದಾರಿಕರಣದ ಪರಿಣಾಮವಾಗಿ ನಗರವು ಪ್ರಮುಖ ಐಟಿ ಕೇಂದ್ರವಾಗಿದ್ದು, ಇದು ಜನರ ಜೀವನ ಶೈಲಿ ಮತ್ತು ಸಂಸ್ಕೃತಿಯಲ್ಲಿ ಬದಲಾವಣೆ ತಂದಿತು. ಐಟಿ ಕ್ಷೇತ್ರದಲ್ಲಿನ ಬೆಳವಣಿಗೆ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣದ ಪರಿಣಾಮವಾಗಿ 2000ರಲ್ಲಿ ರಿಯಲ್ ಎಸ್ಟೇಟ್ ನಂತಹ ಇತರ ಕ್ಷೇತ್ರಗಳ ಬೆಳವಣಿಗೆಗೆ ಕಾರಣವಾಯಿತು 2008-09ರ ಜಾಗತಿಕ ಆರ್ಥಿಕ ಕುಸಿತವು ನಿರ್ಮಾಣ ಕ್ಷೇತ್ರದ ಮೇಲೆ ಗುರುತರವಾದ ಪರಿಣಾಮವನ್ನು ಬೀರಿತು.[೧೨]
೨೦೦೨ರಲ್ಲಿ ಸಾಯಿಬಾಬ ಮಂದಿರದ ಬಳಿ ಬಾಂಬ್ ಸ್ಫೋಟಗೊಂಡು ಒರ್ವ ಮಹಿಳೆ ಸಾವಿಗೀಡಾಗಿದ್ದು ೨೦ ಜನರಿಗೆ ಗಾಯಗಳಾಗಿತ್ತು. ೨೦೦೭ರ ಮೇ ಮತ್ತು ಆಗಸ್ಟ್ ತಿಂಗಳಿನಲ್ಲಿ ಬಾಂಬುಗಳ ಪತ್ತೆಯಾಗಿ ಮತೀಯ ಗಲಭೆಗೆ ಕಾರಣವಾಯಿತು. ೨೧ನೇ ಫೆಬ್ರವರಿ ೨೦೧೩ರಲ್ಲಿ ದಿಲ್‌ಸುಖ್ ನಗರ ಪ್ರದೇಶದಲ್ಲಿ ಎರಡು ಬಾಂಬುಗಳು ಸ್ಫೋಟಗೊಂಡಿವೆ.
ಭೂಗೋಳ
[ಬದಲಾಯಿಸಿ]ದಖ್ಖನ್ ಪ್ರಸ್ಥಭೂಮಿಯಲ್ಲಿರುವ ಹೈದರಾಬಾದ್ ಸರಾಸರಿ 489 ಮೀಟರ್ (1,607 ಅಡಿ) ಸಮುದ್ರ ಮಟ್ಟದಿಂದ ಎತ್ತರದಲ್ಲಿದೆ.[೧೬] ಬಹುತೇಕ ಹೆಚ್ಚಿನ ಪ್ರದೇಶವು ಶಿಲಾವೃತವಾಗಿದ್ದು ಮತ್ತು ಕೆಲ ಪ್ರದೇಶವು ಬೆಟ್ಟದಿಂದ ಕೂಡಿದೆ. ಸುತ್ತಲಿನ ಗದ್ದೆಗಳಲ್ಲಿ ಸಾಮಾನ್ಯವಾಗಿ ಭತ್ತದ ಬೆಳೆ ಬೆಳೆಯಲಾಗುತ್ತದೆ.[೧೭]
ಹೈದರಾಬಾದ್ ಮೂಲ ನಗರವನ್ನು ಮುಸಿ ನದಿ ತೀರದ ಮೇಲೆ ಸ್ಥಾಪಿಸಲಾಗಿತ್ತು.[೧೮] ಈಗ ಹಳೇ ನಗರ ಎಂದು ಕರೆಸಿಕೊಳ್ಳುತ್ತಿರುವ ಐತಿಹಾಸಿಕ ನಗರದ ನದಿಯ ದಕ್ಷಿಣ ತಟದಲ್ಲಿ ಚಾರ್ ಮಿನಾರ್ ಮತ್ತು ಮೆಕ್ಕಾ ಮಸೀದಿ ಇವೆ. ದಕ್ಷಿಣದಲ್ಲಿ ಹುಸೇನ್ ಸಾಗರ ಸರೋವರ ಸೇರಿದಂತೆ ಸರ್ಕಾರದ ಹಲವಾರು ಕಟ್ಟಡಗಳನ್ನು ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ನಿರ್ಮಿಸಿದ ಪರಿಣಾಮವಾಗಿ ನಗರದ ಹೃದಯದ ಭಾಗವು ನದಿಯ ಉತ್ತರದ ಭಾಗಕ್ಕೆ ವರ್ಗಾವಣೆಗೊಂಡಿತು. ವೇಗವಾಗಿ ಬೆಳೆಯುತ್ತಿರುವ ನಗರದ ಜೊತೆಗೆ ಸಿಕಂದರಾಬಾದ್, 12 ಮುನ್ಸಿಪಲ್ ಸರ್ಕಲ್ ಗಳು ಮತ್ತು ಕ್ಯಾಂಟೋನ್ಮೆಂಟ್ ಪ್ರದೇಶವನ್ನು ಸೇರ್ಪಡೆಗೊಳಿಸಿದ್ದರಿಂದ ಬೃಹತ್ತಾದ ಮತ್ತು ಸಂಯುಕ್ತ ಜನವಸತಿಯ ಪ್ರದೇಶವಾಗಿ ಮಾರ್ಪಟ್ಟಿತು. ಇಂದಿಗೂ ಹಲವಾರು ಗ್ರಾಮಗಳು ಸನಿಹದ ಭವಿಷ್ಯದ ದಿನಗಳಲ್ಲಿ ಅವಳಿ ನಗರಗಳಲ್ಲಿ ಸಮ್ಮಿಳಿತವಾಗುವುದನ್ನು ಎದುರು ನೋಡುತ್ತಿವೆ.[೧೯]
ಹವಾಗುಣ
[ಬದಲಾಯಿಸಿ]Hyderabad | ||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
Climate chart (explanation) | ||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||
|
ಹೈದರಾಬಾದ್ ನಗರವು ಫೆಬ್ರವರಿ ಅಂತ್ಯದಿಂದ ಜೂನ್ ಪ್ರಾರಂಭದವರೆಗೆ ಬೇಸಿಗೆ ಇರುವ ಉಷ್ಣವಲಯದ ಹವಾಗುಣವನ್ನು ಹೊಂದಿದೆ. ಮಾನ್ಸೂನ್ ಜೂನ್ ಅಂತ್ಯದಿಂದ ಅಕ್ಟೋಬರ್ ಪ್ರಾರಂಭದವರೆಗೆ ಇದ್ದು, ಅಕ್ಟೋಬರ್ ನಿಂದ ಫೆಬ್ರವರಿ ಪ್ರಾರಂಭದವರೆಗೆ ಲಘುವಾದ ಚಳಿಗಾಲವಿರುತ್ತದೆ.[೨೦] ನಗರವು ಎತ್ತರದ ಪ್ರದೇಶದಲ್ಲಿರುವುದರಿಂದ ಬೆಳಗಿನ ಮತ್ತು ಸಾಯಂಕಾಲ ಸಾಮಾನ್ಯವಾಗಿ ತಂಪಾದ ವಾತಾವರಣವಿರುತ್ತದೆ. ಹೈದರಾಬಾದ್ ನಗರದಲ್ಲಿ ಪ್ರತಿವರ್ಷ ಅಂದಾಜು 32 ಇಂಚು (810 ಮಿ.ಮೀ) ಮಳೆಯಾಗುತ್ತದೆ. ಬಹುತೇಕ ಮಾನ್ಸೂನ್ ತಿಂಗಳಿನಲ್ಲಿ ಹೆಚ್ಚು ಮಳೆಯಾಗುತ್ತದೆ. ಜೂನ್ 2 1966ರಲ್ಲಿ 45.5 ಡಿಗ್ರಿ ಸೆಲ್ಸಿಯಸ್ (113.9 °F) ತಾಪಮಾನ ದಾಖಲಾಗಿತ್ತು. ಅದೇ ಅತಿ ಕಡಿಮೆ ತಾಪಮಾನ ಜನವರಿ 8 1946ರಲ್ಲಿ 6.1 ಡಿಗ್ರಿ ಸೆಲ್ಸಿಯಸ್ (43 °F) ದಾಖಲಾಗಿತ್ತು.[೨೧]
ಜನಸಾಂದ್ರತೆ
[ಬದಲಾಯಿಸಿ]Hyderabad Population | |||
---|---|---|---|
Census | Pop. | %± | |
1971 | ೧೭,೯೬,೦೦೦ | ||
1981 | ೨೫,೪೬,೦೦೦ | 41.8% | |
1991 | ೩೦,೫೯,೨೬೨ | 20.2% | |
2001 | ೩೬,೩೭,೪೮೩ | 18.9% | |
Est. 2009 | ೪೦,೨೫,೩೩೫ | [೧] | 10.7% |
World Gazetteer[೨೨] |
2001ರಲ್ಲಿ ನಗರದ ಜನಸಂಖ್ಯೆಯು 3.6 ದಶಲಕ್ಷವಿದ್ದುದು 2009ರ ಹೊತ್ತಿಗೆ 4 ದಶಲಕ್ಷ [೧] ತಲುಪುವ ಮೂಲಕ ಅತಿಹೆಚ್ಚು ಜನವಸತಿ ಇರುವ ಭಾರತದ ನಗರಗಳಲ್ಲಿ ಒಂದು ಆಗುವಂತೆ ಮಾಡಿದೆ. ಮೆಟ್ರೊಪಾಲಿಟಿನ್ ಪ್ರದೇಶದ ಜನಸಂಖ್ಯೆಯು 6.3 ಮಿಲಿಯನ್ ಇದೆ ಎಂದು ಅಂದಾಜಿಸಲಾಗಿದೆ.[೨೩] . ಹೈದರಾಬಾದ್‌ನಗರದ ಜನಸಂಖ್ಯೆಯ ಶೇ. 40 ರಷ್ಟು ಮುಸ್ಲಿಂರಿರುವ ಕಾರಣ ಆಂಧ್ರಪ್ರದೇಶದಲ್ಲಿ ಅತಿಹೆಚ್ಚು ಮುಸ್ಲಿಂ ಸಮುದಾಯವಿರುವ ಪ್ರದೇಶವನ್ನಾಗಿ ಮಾಡಿದೆ.[೨೪] ನಗರದಲ್ಲಿ ಮುಸ್ಲಿಂರ ಸಾಕಷ್ಟು ಸಂಖ್ಯೆಯಲ್ಲಿ ಇದ್ದು,ಮತ್ತು ಹಳೆ ನಗರ ಮತ್ತು ಸುತ್ತಲಿನಲ್ಲಿ ಅವರು ಮೊದಲಿನಿಂದಲೂ ವಾಸಿಸುತ್ತಿದ್ದಾರೆ. ನಗರದ ಜನಂಖ್ಯೆಯ ಪ್ರಮಾಣದಲ್ಲಿ ಸಣ್ಣ ಪ್ರಮಾಣದಲ್ಲಿ ಕ್ರಿಶ್ಚಿಯನ್ನರು ಇದ್ದಾರೆ. ನಗರದಲ್ಲಿ ಚರ್ಚ್ ಗಳು ಕೂಡ ಇದ್ದು, ಸಿಕಂದರಾಬಾದ್ ಪ್ರದೇಶದಲ್ಲಿ ಅಬಿಡ್ಸ್ ಜನಪ್ರಿಯ ಚರ್ಚ್ ಆಗಿದೆ.[೨೫]
ನಗರದಲ್ಲಿ ತೆಲುಗು ಮತ್ತು ಉರ್ದು ಮಾತನಾಡುವ ಪ್ರಮುಖ ಭಾಷೆಗಳು ಆಗಿವೆ. ಸುಶಿಕ್ಷಿತ ಜನರ ನಡುವೆ ಇಂಗ್ಲಿಷ್ ಪ್ರಬಲವಾಗಿದೆ.[೧೩]
ಇಲ್ಲಿ ಮಾತನಾಡುವ ಉರ್ದು ವಿಶಿಷ್ಟವಾಗಿದ್ದು, ಫಾರ್ಸಿ ಮತ್ತು ತುರ್ಕಿಶ್ ಪ್ರಭಾವವನ್ನು ಹೊಂದಿರುವ ಕಾರಣ ಇಲ್ಲಿನ ಉರ್ದುವಿಗೆ ಹೈದರಾಬಾದ್ ಉರ್ದು ಅಥವಾ ದಖ್ಖನಿ ಎಂದು ಕೆಲ ಬಾರಿ ಕರೆಯಲಾಗುತ್ತದೆ. ಆಡಳಿತ ಭಾಷೆಯಾಗಿರುವ ತೆಲುಗು ರಾಜ್ಯದ ಇತರಡೆಗೆ ಹೋಲಿಸಿದಲ್ಲಿ ಕೊಂಚ ಭಿನ್ನವಾಗಿದ್ದು, ಆದರೆ ಭಾಷೆಯ ಮೂಲಸತ್ವ ಒಂದೇ ತೆರನಾಗಿದೆ.[೧೯] ಇಂಗ್ಲಿಷ್ ಮತ್ತು ಹಿಂದಿಯಲ್ಲೂ ಕೆಲ ಶಿಕ್ಷಣವನ್ನು ನೀಡಲಾಗುತ್ತದೆ.
ಆಡಳಿತ
[ಬದಲಾಯಿಸಿ]ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ (GHMC) ಎಂದು ಕರೆಯಲ್ಪಡುವ ನಗರ ನಿಗಮದಿಂದ ನಗರದ ಆಡಳಿತ ನಡೆಸಲಾಗುತ್ತದೆ. ಇದರ ನಾಮಮಾತ್ರ ಮುಖ್ಯಸ್ಥನಾಗಿ ಮೇಯರ್ ಇದ್ದು, ಆತನಿಗೆ ಕೆಲವು ಕಾರ್ಯಾಂಗದ ಅಧಿಕಾರಗಳು ಇರುತ್ತವೆ.[೨೬] ಈ ಹಿಂದೆ ಮೇಯರ್ ಅವರನ್ನು ಕಾರ್ಪೋರೇಷನ್ ಶಾಸಕಾಂಗ ಸಭೆಯಿಂದ ಆಯ್ಕೆ ಮಾಡಲಾಗುತ್ತಿತ್ತು. ಕಳೆದ ಚುನಾವಣೆಗೆ ಮುನ್ನ ರಾಜ್ಯ ಸರ್ಕಾರವು ಹೈದರಾಬಾದ್ ಮುನ್ಸಿಪಲ್ ಕಾನೂನು, 1955ನ್ನು ಮಾರ್ಪಾಡುಗೊಳಿಸಿ, ಮೇಯರ್ ಚುನಾವಣೆಯನ್ನು ಕಾರ್ಪೋರೇಷನ್ ಚುನಾವಣೆಯ ಜೊತೆಗೆ ಏಕಕಾಲದಲ್ಲಿ ನಡೆಯುವಂತೆ ಮಾಡಿತು. ನಿಜವಾದ ಕಾರ್ಯಾಂಗದ ಅಧಿಕಾರವು ಆಂಧ್ರಪ್ರದೇಶ ರಾಜ್ಯ ಸರ್ಕಾರದಿಂದ ನೇಮಕ ಮಾಡಲ್ಪಟ್ಟ ಐಎಎಸ್ ಅಧಿಕಾರಿ ಮುನ್ಸಿಪಲ್ ಕಮಿಷನರ್ ಅವರಲ್ಲಿ ಇರುತ್ತವೆ. ಮೇಯರ್ ಮತ್ತು ಕಾರ್ಪೋರೇಷನ್ ಶಾಸಕಾಂಗವನ್ನು ಹಿಂದೆ ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಹಲವಾರು ವರ್ಷಗಳವರೆಗೆ ಕಾರ್ಪೋರೇಷನ್ ಗೆ ಚುನಾವಣೆಗಳು ನಡೆದಿಲ್ಲ. ಇತ್ತೀಚೆಗಷ್ಟೆ ಕಾರ್ಪೊರೇಷನ್ ತನ್ನ ಅವಧಿಯನ್ನು ಪೂರ್ಣಗೊಳಿಸಿದ್ದು, GHMC ಮತ್ತು ಮೇಯರ್ ಹುದ್ದೆಯ ಚುನಾವಣೆ ಬಾಕಿ ಇದೆ.
ನಗರದ ಮೂಲ ಸೌಲಭ್ಯ ಮತ್ತು ನಾಗರಿಕ ಅವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿ GHMC ಮೇಲೆ ಇದೆ. ಹೈದರಾಬಾದ್‌ನಗರವನ್ನು 150 ಮುನ್ಸಿಪಲ್ ವಾರ್ಡ್ ಗಳಾಗಿ ವಿಂಗಿಡಸಲಾಗಿದ್ದು. ಪ್ರತಿಯೊಂದು ಕಾರ್ಪೋರೇಟ್ ನಿಂದ ಮೇಲ್ವಿಚಾರಣೆಗೊಳಪಟ್ಟಿರುತ್ತದೆ. ಆಡಳಿತದಲ್ಲಿರುವ ಕಾರ್ಪೋರೇಟರ್ ಗಳನ್ನು ಜನಪ್ರಿಯ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತಿದ್ದು, ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತವೆ. ಹೈದರಾಬಾದ್ ಮತ್ತು ಸಿಕಂದರಾಬಾದ್ ಅವಳಿ ನಗರಗಳು ಹೈದರಾಬಾದ್, ರಂಗಾರೆಡ್ಡಿ ಮತ್ತು ಮೆಡಕ್ ಜಿಲ್ಲೆಗಳಲ್ಲಿವೆ. ಪ್ರತಿಯೊಂದು ಜಿಲ್ಲೆಯ ಆಡಳಿತವು ಡಿಸ್ಟ್ರಿಕ್ಟ್ ಕಲೆಕ್ಟರ್ ಅವರಿಂದ ಮುನ್ನೆಡಸಲ್ಪಡುತ್ತದೆ. ಅವರು ಕೇಂದ್ರ ಸರ್ಕಾರದ ಆದಾಯ ಸಂಗ್ರಹ ಮತ್ತು ಆಸ್ತಿಯ ದಾಖಲೆಗಳನ್ನು ನಿರ್ವಹಿಸುವ ಜವಾಬ್ದಾರಿಯಲ್ಲಿರುತ್ತಾನೆ. ನಗರದಲ್ಲಿ ನಡೆಯುವ ಚುನಾವಣೆಗಳ ಮೇಲ್ವಿಚಾರಣೆಯನ್ನು ಕೂಡ ಜಿಲ್ಲಾಧಿಕಾರಿ ವಹಿಸಿಕೊಂಡಿರುತ್ತಾರೆ.[೨೭]
6,250 ಕಿ. ಮೀ ಚದರ ಅಡಿಯ ಮೇಲ್ಪಟ್ಟ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ಚಟುವಟಿಕೆ ಕೈಗೊಳ್ಳುವುದಕ್ಕೆ ಮುಖ್ಯಮಂತ್ರಿ ನೇತೃತ್ವದ ಮತ್ತು ಐಎಎಸ್ ಮಟ್ಟದ ಅಧಿಕಾರಿಯನ್ನು ಒಳಗೊಂಡಿರುವ ಯೋಜನಾ ಸಂಸ್ಥೆ ಹೈದರಾಬಾದ್ ಮೆಟ್ರೊಪಾಲಿಟಿನ್ ಡೆವಲಪ್ಮೆಂಟ್ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ.[೨೮] ಹೈದರಾಬಾದ್ ಮೆಟ್ರೊಪಾಲಿಟಿನ್ ಪ್ರದೇಶವು[೨೯] ಈ ಕೆಳಗಿನ ಜಿಲ್ಲೆಗಳ ಕಲೆಕ್ಟರ್ ಗಳ ವ್ಯಾಪ್ತಿಯಲ್ಲಿ ಬರುತ್ತದೆ. ಹೈದರಾಬಾದ್ ಜಿಲ್ಲೆ -ಪೂರ್ಣ, (16ಮಂಡಲಗಳು), ಮೆಡಕ್ ಜಿಲ್ಲೆ - ಭಾಗಶಃ (10 ಮಂಡಲಗಳು) , ರಂಗಾರೆಡ್ಡಿ ಜಿಲ್ಲೆ -ಭಾಗಶಃ (22 ಮಂಡಲಗಳು) ಮಹಬೂಬ್ ನಗರ - ಭಾಗಶಃ (64 ಮಂಡಲಗಳು) ನಲ್ಗೊಂಡಾ ಜಿಲ್ಲೆ -ಭಾಗಶಃ (4 ಮಂಡಲಗಳು)
ಹೈದರಾಬಾದ್ ಮತದಾರರು 24 ಸದಸ್ಯರನ್ನು ಶಾಸನ ಸಭೆಗೆ ಕಳುಹಿಸುತ್ತಾರೆ. ಈ ಕ್ಷೇತ್ರಗಳು ಐದು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುತ್ತವೆ. ಹೊಸ ಶಾಸನ ಸಭೆಯ ವಿಭಾಗಗಳು ಮತ್ತು ಅವುಗಳ ಲೋಕಸಭಾ ಕ್ಷೇತ್ರಗಳು (PC) ಹೀಗಿವೆ, ಮಲ್ಕಾಜಗಿರಿ, ಕುಕಟಪಲ್ಲಿ, ಉಪ್ಪಲ್, ಲಾಲ್ ಬಹಾದ್ದೂರ್ ನಗರ, (ಎಲ್ ಬಿ ನಗರ) ಸಿಕಂದರಾಬಾದ್ ಕ್ಯಾಂಟೋನ್ಮೆಂಟ್, ಮಲ್ಕಾಜಗರಿ ಪಿಸಿಯಲ್ಲಿನ ಕುತ್ಬುಲ್ಲಪುರ್; ಮುಶೀರಾಬಾದ್, ಅಂಬರಪೇಟ್, ಖೈರತಾಬಾದ್, ಜುಬಿಲಿ ಹಿಲ್ಸ್, ಸನತ್ ನಗರ, ನಂಪಲ್ಲಿ, ಸಿಕಂದರಾಬಾದ್ ಪಿಸಿಯಲ್ಲಿನ ಸಿಕಂದರಾಬಾದ್; ಮಾಲಕ್ ಪೇಟ್, ಕಾರವಾನ್, ಗೋಷಾಮಹಲ್, ಯಕುತಪುರಾ, ಚಾರ್ ಮಿನಾರ್, ಚಂದ್ರಾಯನಗುಟ್ಟಾ, ಹೈದರಾಬಾದ್ ಪಿಸಿಯಲ್ಲಿನ ಬಹಾದ್ದೂರ ಪುರಾ ಚೆವೆಲ್ಲಾ ಪಿಸಿ ವ್ಯಾಪ್ತಿಯಲ್ಲಿನ ಮಹೇಶ್ವರಂ, ರಾಜೇಂದ್ರ ನಗರ, ಸೆರಿಲಿಂಗಪಲ್ಲಿ; ಮೇಡಕ್ ಪಿಸಿಯಲ್ಲಿನ ಪಟಣಚೇರು.
ಗೃಹ ಮಂತ್ರಾಲಯದ ವ್ಯಾಪ್ತಿಯಲ್ಲಿ ಬರುವ ರಾಜ್ಯ ಪೊಲೀಸರಿಂದ ನಗರವನ್ನು ಹೈದರಾಬಾದ್ ಪೊಲೀಸ್ ಮತ್ತು ಸೈಬರಾಬಾದ್ ಪೊಲೀಸ್ ಎಂದು ವಿಂಗಡಿಸಲಾಗಿದ್ದು, ಐಪಿಎಸ್ ಅಧಿಕಾರಿಗಳು ಆಗಿರುವ ಕಮಿಷನರ್ ಗಳ ನೇತೃತ್ವದಲ್ಲಿ ಅವುಗಳು ಇರುತ್ತವೆ. ಬಷೀರ್ ಬಾಗ್ ನಲ್ಲಿ ಸರ್ಕಾರದ ಪ್ರಮುಖ ಇಲಾಖೆಗಳಾದ ಕಮಿಷನರ್ ಆಫೀಸ್, ಪೊಲೀಸ್ ಕಂಟ್ರೋಲ್ ರೂಂ, ಆದಾಯ ತೆರಿಗೆ ಕಮಿಷನರ್ ಆಫೀಸ್, ಕೇಂದ್ರ ಸುಂಕ ಮತ್ತು ಅಬಕಾರಿ ಕಚೇರಿ, ಸೆಂಟ್ರಲ್ ರಿಸರ್ವೆಷನ್ ಆಫೀಸ್ ಇತ್ಯಾದಿಗಳು ಇವೆ. ನಗರವನ್ನು ಐದು ಪೊಲೀಸ್ ವಲಯಗಳನ್ನಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದು ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ ನೇತೃತ್ವದಲ್ಲಿರುತ್ತವೆ. ಹೈದರಾಬಾದ್ ಮತ್ತು ಸೈಬರಾಬಾದ್ ಕಮಿಷನರೇಟ್ಸ್ ಅಡಿಯಲ್ಲಿ ಕಾರ್ಯಾನಿರ್ವಹಿಸುತ್ತಿರುವ ಟ್ರಾಫಿಕ್ ಪೊಲೀಸ್ ಅರೆ ಸ್ವಾಯತ್ತ ಪಡೆದ ಅಂಗವಾಗಿದೆ.[೩೦]
ಹೈದರಾಬಾದ್‌ನಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಇದ್ದು, ಮತ್ತು ಸಣ್ಣ ಪ್ರಮಾಣದ ಸಿವಿಲ್ ಪ್ರಕರಣಗಳಿಗಾಗಿ ಸ್ಮಾಲ್ ಕಾಸಸ್ ಕೋರ್ಟ್ ಮತ್ತು ಕ್ರಿಮಿನಲ್ ಪ್ರಕರಣಗಳಿಗಾಗಿ ಸೆಷನ್ಸ್ ಕೋರ್ಟ್, ಎರಡು ಕೋರ್ಟ್ ಗಳನ್ನು ಹೊಂದಿದೆ. ನಿಜಾಮ್‌ನಿಂದ ನಿರ್ಮಿಸಲ್ಪಟ್ಟ ಪರಂಪರೆಯಿಂದ ಪ್ರಾಪ್ತವಾದ ಕಟ್ಟಡಗಳಲ್ಲಿ ಹೈಕೋರ್ಟ್ ಮತ್ತು ಶಾಸನಸಭೆ ಇದೆ.
ಆರ್ಥಿಕತೆ
[ಬದಲಾಯಿಸಿ]ಹೈದರಾಬಾದ್‌ನಲ್ಲಿರುವ ಉದ್ಯಮಗಳು ಮತ್ತು ಕಂಪನಿಗಳನ್ನೂ ನೋಡಿ.
ಹೈದರಾಬಾದ್ ತೆಲಂಗಾಣ ರಾಜ್ಯದ ವಾಣಿಜ್ಯ, ಆರ್ಥಿಕ ಮತ್ತು ರಾಜಕೀಯದ ರಾಜಧಾನಿಯಾಗಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ನಗರವು ಅತಿ ಹೆಚ್ಚು ಕೊಡುಗೆಯನ್ನು ರಾಜ್ಯ ತೆರಿಗೆ ಮತ್ತು ಅಬಕಾರಿ ಆದಾಯದ ಮೂಲಕ ನೀಡುತ್ತಿದೆ. ಅಂದಾಜು ಶೇ. 29.55 ರಷ್ಟು ಕಾರ್ಯನಿರ್ವಹಣಾ ಸಾಮರ್ಥ್ಯವಿದೆ.[ಸೂಕ್ತ ಉಲ್ಲೇಖನ ಬೇಕು] 1990ರ ಪ್ರಾರಂಭದಿಂದ ನಗರದ ಅರ್ಥವ್ಯವಸ್ಥೆಯ ಚಿತ್ರಣ ಬದಲಾಗಿದೆ. ಪ್ರಾಥಮಿಕವಾಗಿ ಸೇವಾ ನಗರವಾಗಿದ್ದ ಇದು ವ್ಯಾಪಾರ, ಸಾರಿಗೆ, ವಾಣಿಜ್ಯ, ಸಂಗ್ರಹ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ವೈವಿದ್ಯತೆ ಸಾಧಿಸಿದೆ. ಒಟ್ಟು ಕಾರ್ಯನಿರ್ವಹಿಸುವವರ ಪೈಕಿ ಶೇ. 90 ರಷ್ಟು ನಗರಕೇಂದ್ರಿಕೃತ ಕಾರ್ಯಸಾಮರ್ಥ್ಯವನ್ನು ಹೊಂದಿರುವ ಸೇವಾ ಉದ್ಯಮ ಪ್ರಮುಖವಾದ ಕೊಡುಗೆ ನೀಡುತ್ತಿದೆ.[೩೧]
ಮೊದಲು ಮುತ್ತಿನ ನಗರ ಸರೋವರಕ್ಕೆ ಹೆಸರುವಾಸಿಯಾಗಿದ್ದ ಹೈದರಾಬಾದ್‌ನಂತರ ಐಟಿ ಕಂಪನಿಗಳಿಂದಾಗಿ ಹೆಸರು ಪಡೆದಿದೆ. ಲಾಡ್ ಬಜಾರ್ ಎಂದು ಹೆಸರು ಪಡೆದಿರುವ ಬಳೆಗಳ ಮಾರುಕಟ್ಟೆಯು ಚಾರ್ ಮಿನಾರ್ ಬಳಿ ಇದೆ. ಸಿಲ್ವರ್ ವೇರ್, ಸೀರೆಗಳು, ನಿರ್ಮಲ್ ಮತ್ತು ಕಲಮಕರಿ ಕಲಾಕೃತಿಗಳು ಮತ್ತು ಕಲಾತ್ಮಕ ವಸ್ತುಗಳು ವಿಶಿಷ್ಟವಾದ ಬಿದ್ರಿ ಕರಕುಶಲ ವಸ್ತುಗಳು, ಲಕೀರ್, ಬಳೆ, ಹರಳುಗಳನ್ನು ಜೋಡಿಸಲ್ಪಟ್ಟ ರೇಷ್ಮೆ ವಸ್ತ್ರಗಳು, ಹತ್ತಿ ವಸ್ತ್ರಗಳು ಮತ್ತು ಕೈಮಗ್ಗ ಆಧಾರಿತ ಬಟ್ಟೆಗಳನ್ನು ಇಲ್ಲಿ ಉತ್ಪಾದಿಸಿ ಶತಮಾನಗಳಿಂದ ಇಲ್ಲಿ ಮಾರಾಟ ಮಾಡಲಾಗುತ್ತದೆ.
ಹೈದರಾಬಾದ್ ಫಾರ್ಮ್ಯಾಸುಟಿಕಲ್ಸ್ ಕಂಪನಿಗಳ ಪ್ರಮುಖ ಕೇಂದ್ರವಾಗಿದ್ದು. ಡಾ. ರೆಡ್ಡಿ ಲ್ಯಾಬೋರಟರಿಸ್, ಮ್ಯಾಟ್ರಿಕ್ಸ್ ಲ್ಯಾಬರೋಟರಿಸ್, ಹೆಟೆರ್ಜೊ ಡ್ರಗ್ಸ್ ಲಿಮಿಟೆಡ್, ಡಿವಿಸ್ ಲ್ಯಾಬ್ಸ್, ಅರಬಿಂದೊ ಫಾರ್ಮಾ ಲಿಮಿಟೆಡ್, ಲೀ ಫಾರ್ಮಾ ಮತ್ತು ವಿಮ್ಟಾ ಲ್ಯಾಬ್ಸ್ ಗಳು ನಗರದಲ್ಲಿ ಇವೆ. ಜಿನೋಮ್ ವ್ಯಾಲಿ, ಫ್ಯಾಬ್ ಸಿಟಿ ಮತ್ತು ನ್ಯಾನೋ ಟೆಕ್ನಾಲಜಿ ಉದ್ಯಾನವನ ಗಳು ಜೈವಿಕ ತಂತ್ರಜ್ಞಾನಕ್ಕೆ ವಿಶಾಲವಾದ ಮೂಲ ಸೌಲಭ್ಯ ಕಲ್ಪಿಸಲಿವೆ ಎಂದು ನಿರೀಕ್ಷಿಸಲಾಗಿದೆ.[೩೨]
1990ರಲ್ಲಿ ಐಟಿ ಕ್ಷೇತ್ರ ಆಧಾರಿತ ಆರ್ಥಿಕಾಭಿವೃದ್ಧಿಯ ಪರಿಣಾಮವಾಗಿ ಇತರ ಭಾರತೀಯ ನಗರಗಳಂತೆ ಹೈದರಾಬಾದ್‌ನಗರ ಕೂಡ ಅತಿ ಹೆಚ್ಚಿನ ಬೆಳವಣಿಗೆಯನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ದಾಖಲಿಸಿತು.[೩೩] ಮತ್ತು ಚಿಲ್ಲರೆ ಮಾರಾಟ ಕ್ಷೇತ್ರವು ಕಳೆದ ಹಲವಾರು ವರ್ಷಗಳಿಂದ ಸಾಕಷ್ಟು ವಾಣಿಜ್ಯ ಕೇಂದ್ರಿಕೃತ ಚಟುವಟಿಕೆಗಳಲ್ಲಿ ವ್ಯಸ್ತವಾಗಿದೆ.[೩೪] ಸಾಕಷ್ಟು ಸಂಖ್ಯೆಯಲ್ಲಿ ನಗರದಲ್ಲಿ ಮೇಗಾ ಮಾಲ್ ಗಳು ತಲೆ ಎತ್ತಿವೆ ಅಥವಾ ನಿರ್ಮಾಣವಾಗುತ್ತಿವೆ.[೩೫] ಹೈದರಾಬಾದ್ ಸುತ್ತಲಿನ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಬೇಡಿಕೆಯು ಮೀತಿ ಮೀರಿದ ಪ್ರಮಾಣದಲ್ಲಿ ಹೆಚ್ಚಾದ ಪರಿಣಾಮವಾಗಿ ಕಳೆದ ಹಲವು ವರ್ಷಗಳ ಅವಧಿಯಲ್ಲಿ ಬೆಲೆಗಳ ಏರಿಕೆ ಸಿಕ್ಕಾಪಟ್ಟೆಯಾಗಿದೆ.[೩೬]
ಹೈದರಾಬಾದ್‌ನಲ್ಲಿ ಚಿಲ್ಲರೆ ಮಾರುಕಟ್ಟೆಯು ಮೇಲ್ಮುಖವಾಗಿದೆ. ಹಲವಾರು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಬ್ರ್ಯಾಂಡುಗಳು ಚಿಲ್ಲರೆ ಮಾರಾಟ ಮಳಿಗೆಗಳನ್ನು ಪ್ರಾರಂಭಿಸಿವೆ. ನಗರದ ತುಂಬ ಹರಡಿರುವ ಮಲ್ಟಿಪಲ್ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ಗಳನ್ನು ಈ ನಗರ ಹೊಂದಿದೆ. ಹಳೆಯ ಚಾರ್ ಮಿನಾರ್ ಪ್ರದೇಶದಿಂದ ಹೊಸತಾಗಿರುವ ಕೋಥಗುಡಾವರಗೆ ಹಲವಾರು ಪ್ರಮುಖ ವ್ಯವಹಾರಿಕ/ವಾಣಿಜ್ಯ ಜಿಲ್ಲೆಗಳಿವೆ. ನಗರದಲ್ಲಿನ ಮೂಲಭೂತ ಸೌಲಭ್ಯವನ್ನು ಮುಂದುವರಿಸುವುದಕ್ಕೆ ಸರ್ಕಾರವು ಎತ್ತರದ ಬ್ಯುಸಿನೆಸ್ ಡಿಸ್ಟ್ರಿಕ್ಟ್ಸ್ ಅನ್ನು ರಾಜೇಂದ್ರ ನಗರದ ಬಳಿ ಇರುವ ಮಂಚಿರೆವುಲಾದಲ್ಲಿ 450 ಮೀಟರ್ APIIC ಟಾವರ್ ಕೇಂದ್ರವನ್ನಾಗಿ ನಿರ್ಮಿಸುತ್ತಿದೆ. ಅದಲ್ಲದೆ, ಗಾಚಿಬೌಳಿ ಬಳಿಯ ಲಾಂಕೊ ಹಿಲ್ಸ್ ನಲ್ಲಿ ಭಾರತದಲ್ಲಿ ಅತಿ ಎತ್ತರವಾದ ಕಟ್ಟಡವನ್ನು ವಾಣಿಜ್ಯ ಮತ್ತು ವಸತಿ ಉದ್ದೇಶಕ್ಕಾಗಿ ನಿರ್ಮಿಸುತ್ತಿದೆ.
ಹೈದರಾಬಾದ್ ಅತಿ ಹೆಚ್ಚು ಉದ್ಯೋಗ ನೀಡುವವರಲ್ಲಿ ಆಂಧ್ರಪ್ರದೇಶ ಸರ್ಕಾರ ಮತ್ತು ಕೇಂದ್ರ ಸರ್ಕಾರವಾಗಿದ್ದು ಕ್ರಮವಾಗಿ 113,098[೩೭] ಮತ್ತು 85,155[೩೮] ಉದ್ಯೋಗಿಗಳಿದ್ದಾರೆ.
ಮಾಹಿತಿ ತಂತ್ರಜ್ಞಾನ ಉದ್ದಿಮೆ
[ಬದಲಾಯಿಸಿ]ಹೈದರಾಬಾದ್ ಐಟಿ ಮತ್ತು ಐಟಿ-ಪ್ರೇರಿತ ಉದ್ಯೋಗಗಳಿಗೆ, ಔಷಧ ವಸ್ತುಗಳ ಮಾರಾಟಗಳಿಗೆ, ಕಾಲ್ ಸೆಂಟರ್‌ಗಳಿಗೆ ಮತ್ತು ಮನೋರಂಜನಾ ಉದ್ದಿಮೆಗಳಿಗೆ ಮುಂಚೂಣಿಯಲ್ಲಿರುವ ಪ್ರದೇಶವಾಗಿ ತನ್ನನ್ನು ಗುರುತಿಸಿಕೊಂಡಿದೆ. 1990ರಿಂದಲೇ ಹಲವಾರು ಕಂಪ್ಯೂಟರ್ ತಂತ್ರಾಂಶ ದ ಕಂಪೆನಿಗಳು, ತಂತ್ರಾಶ ಸಮಾಲೋಚನೆಯ ವ್ಯವಹಾರ ಸಂಸ್ಥೆಗಳು, ವ್ಯವಹಾರ ಹೊರಗುತ್ತಿಗೆ (ಬಿಪಿಓ) ಸಂಸ್ಥೆಗಳು, ಐಟಿ ಮತ್ತು ಇತರ ತಾಂತ್ರಿಕ ಸೇವಾ ಸಂಸ್ಥೆಗಳು ತಮ್ಮ ಕಚೇರಿಗಳನ್ನು ಮತ್ತು ಸೌಲಭ್ಯಗಳನ್ನು ಊರ್ಜಿತಗೊಳಿಸಿವೆ.
ಹೈಟೆಕ್ ನಗರ ಎಂದು ಕರೆಯಲ್ಪಡುವ ತಾಂತ್ರಿಕ ಉದ್ಯಮದ ಮೂಲಭೂತ ವ್ಯವಸ್ಥೆಗಳಿಗೆ ಸಂಬಂಧಿತ ನಗರದ ಬೆಳವಣಿಗೆಯು ಹಲವಾರು IT ಮತ್ತು ITES ಕಂಪೆನಿಗಳು ನಗರದಲ್ಲಿ ಕಾರ್ಯಪ್ರವೃತ್ತರಾಗಲು ಪ್ರೇರಣೆ ನೀಡಿದೆ. ಈ ಕ್ಷೇತ್ರದಲ್ಲಿನ ಮೇಲ್ಪಂಕ್ತಿಯ ಸಾಧನೆಯು ನಾಗರಿಕರು ನಗರವನ್ನು ಸೈಬರಾಬಾದ್ ಎಂದು ಕರೆಯುವಂತೆ ಮಾಡಿತು.[೩೯] ನಗರದೊಳಗಡೆ ಕಂಪೆನಿಗಳ ಒಂದು ದೊಡ್ಡ ಸಮೂಹದಿಂದ ಹಲವಾರು ಕ್ಯಾಂಪಸ್‌ಗಳನ್ನು ನಿರ್ಮಿಸಲು ಬೆಂಬಲ ನೀಡಿದ ಡಿಜಿಟಲ್ ಉದ್ಯಮದ ಮೂಲಭೂತ ವ್ಯವಸ್ಥೆಗಳಲ್ಲಿ ವ್ಯಾಪಕವಾದ ಹೂಡಿಕೆಯಾಗುತ್ತಿತ್ತು. ನಗರದಲ್ಲಿ ತಮ್ಮ ಉನ್ನತಿಯ ಕೇಂದ್ರಗಳನ್ನು ಸ್ಥಾಪಿಸಿದ ಹಲವಾರು ಬಹುರಾಷ್ಟ್ರೀಯ ಕಾರ್ಪೋರೇಷನ್‌ಗಳನ್ನು ಈ ಪಟ್ಟಿ ಒಳಗೊಂಡಿದೆ. ಇಂಥ ಕ್ಯಾಂಪಸ್‌ಗಳು ಸ್ಥಾಪಿಸಲ್ಪಟ್ಟ ಪ್ರಮುಖ ಪ್ರದೇಶಗಳೆಂದರೆ ಮಾಧಪುರ್, ಕೊಂಡಾಪುರ್, ಗಚಿಬೌಲಿ ಮತ್ತು ಉಪ್ಪಳ್.
ಹಲವು ಫಾರ್ಚ್ಯೂನ್ 500 ಕಾರ್ಪೋರೇಷನ್‌ಗಳು ಹೆಚ್ಚಾಗಿ ಐಟಿ ಅಥವಾ ಬಿಪಿಓ ಸೇವಾ ಸಂಸ್ಥೆಗಳಿಗೆ ಸಂಬಂಧಿಸಿದ್ದಾಗಿವೆ. ಮೈಕ್ರೋಸಾಫ್ಟ್ (ಯುಎಸ್‌ನಿಂದ ಹೊರಗಿನ ತನ್ನ ಅತೀದೊಡ್ಡ R&D ಕ್ಯಾಂಪಸ್‍ನೊಂದಿಗೆ), ಆಯ್‌ಕ್ಸೆಂಚರ್, ಎಡಿಪಿ, ಎಜಿಲೆಂಟ್, ಆಲ್ಕಾಟೆಲ್ ಲ್ಯೂಸೆಂಟ್, ಅಮೆಜಾನ್, ಎಎಮ್‌ಡಿ, AT&T, ಬ್ಯಾಂಕ್ ಆಫ್ ಅಮೇರಿಕಾ, ಕಂಪ್ಯೂಟರ್ ಅಸೋಸಿಯೇಟ್‍ಗಳು, ಸಿಎಸ್‌ಸಿ, ಕನ್‌ವರ್ಜಿಸ್, ಡೆಲ್, ಡಿಲಾಯಿಟ್ಟಿ, ಡ್ಯುಪಾಂಟ್, ಫಿಡೆಲಿಟಿ ಇನ್‌ವೆಸ್ಟ್‌ಮೆಂಟ್ಸ್, ಫ್ರಾಂಕ್ಲಿನ್ ಟೆಂಪ್ಲೆಟಾನ್, ಜಿಇ, ಗೂಗಲ್, ಹೀವ್‌ಲೆಟ್-ಪ್ಯಾಕ್ಕಾರ್ಡ್, ಹನಿವೆಲ್, ಹ್ಯುಂದೈ, ಐಬಿಎಮ್, ಮೊಟೊರೊಲಾ, ಎನ್‌ವಿಡಿಯಾ, ಒರಾಕ್‌ಲ್ ಕಾರ್ಪೋರೇಷನ್, ಕ್ವಾಲ್ಕೊಮ್, ರಾಕ್‌ವೆಲ್ ಕಾಲಿನ್ಸ್, SAP AG, UBS AG, ವೆರಿಜಾನ್, ವರ್ಚುಸಾ, ವೆಲ್ಸ್ ಫಾರ್ಗೋ - ಇವೆಲ್ಲ ಹೈದರಾಬಾದ್‌ನಲ್ಲಿ ಪ್ರಧಾನವಾಗಿ ಇವೆ.
ಪ್ರಮುಖ ಭಾರತೀಯ ಐಟಿ ಕಂಪೆನಿಗಳಾದ ಮಹೀಂದ್ರ ಸತ್ಯಮ್, ಹೆಚ್‌ಸಿಎಲ್, ಇನ್ಫೋಸಿಸ್, ವಿಪ್ರೋ, ಪಾಟ್ನಿ ಕಂಪ್ಯೂಟರ್ ಸಿಸ್ಟಮ್ಸ್, ಕಾಗ್ನಿಜೆಂಟ್ ಟೆಕ್ನಾಲಜೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಪೋಲರಿಸ್ ಕೂಡಾ ನಗರದಲ್ಲಿ ತಮ್ಮ ಕೇಂದ್ರಗಳನ್ನು ಹೊಂದಿವೆ.
ಸಾರಿಗೆ
[ಬದಲಾಯಿಸಿ]ರಸ್ತೆ ಸಾರಿಗೆ
[ಬದಲಾಯಿಸಿ]ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಕಾರ್ಪೋರೇಷನ್[೪೧] ಸರತಿಯಲ್ಲಿ 19,000 ಬಸ್ಸುಗಳನ್ನು ಓಡಿಸುತ್ತಿದೆ. ಇದು ಪ್ರಪಂಚದಲ್ಲೇ ಅತೀದೊಡ್ಡದಾದ ವ್ಯವಸ್ಥೆ.[೪೦] ಏಕಕಾಲದಲ್ಲಿ 89 ಬಸ್ಸುಗಳಿಗೆ ಪ್ರಯಾಣಿಕರನ್ನು ತುಂಬಲು ಸಾಧ್ಯವಿರುವ 72 ಪ್ಲಾಟ್‌ಫಾರಂಗಳನ್ನು ಹೊಂದಿರುವ ಹೈದರಾಬಾದ್ ಏಷ್ಯಾದಲ್ಲೇ ಮೂರನೇ ಅತಿದೊಡ್ಡ ಬಸ್ ನಿಲ್ದಾಣ ವ್ಯವಸ್ಥೆಯನ್ನು ಹೊಂದಿದೆ. ವ್ಯವಹಾರಿಕವಾಗಿ ಅದು ಮಹಾತ್ಮಾ ಗಾಂಧಿ ಬಸ್ ನಿಲ್ದಾಣ ಎಂದು ಕರೆಯಲ್ಪಟ್ಟಿತು, ಸ್ಥಳೀಯವಾಗಿ ಇಂಬ್ಲಿಬನ್ ಬಸ್ ನಿಲ್ದಾಣ ಎಂದು ಗುರುತಿಸಲ್ಪಡುತ್ತದೆ. ಸಿಕಂದರಾಬಾದ್‌ನಲ್ಲಿನ ಜುಬಿಲೀ ಬಸ್ ನಿಲ್ದಾಣದಿಂದ ರಾಜ್ಯದ ವಿವಿಧ ಭಾಗಗಳಿಗೆ ಮತ್ತು ದಕ್ಷಿಣಭಾರತದ ಕೆಲವು ಸ್ಥಳಗಳಿಗೆ ಬಸ್ಸುಗಳು ಹೋಗುತ್ತವೆ.
ಸಾಮಾನ್ಯವಾಗಿ ಆಟೋ ಎಂದು ಕರೆಯಲ್ಪಡುವ ಹಳದಿ ಬಣ್ಣದ ಆಟೋ ರಿಕ್ಷಾಗಳು ಅತಿ ಹೆಚ್ಚು ಬಳಕೆಯಲ್ಲಿರುವ ಸಾರಿಗೆ ಸೇವೆಗಳಾಗಿವೆ ಮತ್ತು ಅವುಗಳ ಕನಿಷ್ಟ ಬಾಡಿಗೆಯನ್ನು ಮೊದಲ 1.2 ಕಿ.ಮೀ ಗಳಿಗೆ ರೂ.12 ಮತ್ತು ಮುಂದೆ ಪ್ರತಿ ಕಿ.ಮೀ ಗೆ ರೂ.7 ರಂತೆ ನಿಗದಿ ಮಾಡಿದ್ದಾರೆ. ಖಾಸಗಿ ಒಡೆತನದ ರೇಡಿಯೊ ಟ್ಯಾಕ್ಸಿಗಳು ಮತ್ತು ಕ್ಯಾಬ್‌ಗಳು ನಗರದಲ್ಲಿ ಸುಲಭ ಪ್ರಯಾಣವನ್ನು ಒದಗಿಸಿವೆ.[೪೨]
ರಾಷ್ಟ್ರೀಯ ಹೆದ್ದಾರಿಗಳಾದ ಎನೆಹೆಚ್-7, ಎನ್‌ಹೆಚ್-9 ಮತ್ತು ಎನ್‌ಹೆಚ್-202 ಗಳ ಮೂಲಕ ಹೈದರಾಬಾದ್ ದೇಶದ ಇತರ ಭಾಗಗಳಿಗೆ ಸಂಪರ್ಕ ಹೊಂದಿದೆ. ರಾಜ್ಯದ ಉಳಿದ ಪ್ರದೇಶಗಳಿಗೂ ಕೂಡ ಹೈದರಾಬಾದ್ ಒಳ್ಳೆ ಸಂಪರ್ಕವನ್ನು ಹೊಂದಿದೆ. ಇತರ ನಗರಗಳಂತೆಯೇ ಹೈದರಾಬಾದ್ ಕೂಡ ವಾಹನ ದಟ್ಟಣೆಯಿಂದ ಬಳಲುತ್ತಿದೆ. ಒಳ ರಿಂಗ್ ರೋಡ್‌ನ ಪೂರ್ಣಗೊಳ್ಳುವಿಕೆ ಮತ್ತು ಹೈದರಾಬಾದ್ ನಗರದ ಸುತ್ತ ಹೊರ ರಿಂಗ್ ರೋಡ್‌ನ ಕಟ್ಟುವಿಕೆ ಕೂಡ ನಿರ್ಮಾಣ ಹಂತದಲ್ಲಿದೆ ಮತ್ತು ಇವು ನಗರದಲ್ಲಿನ ಪ್ರಯಾಣವನ್ನು ಸುಲಭಗೊಳಿಸುವಂತೆ ಮಾಡಲಾಗಿದೆ. ನಗರದಲ್ಲಿನ ವಾಹನ ದಟ್ಟಣೆಯನ್ನು ಕಡಿಮೆಮಾಡಲು ಹಲವು ಫ್ಲೈಓವರ್‌ಗಳನ್ನು ಮತ್ತು ಕೆಳರಸ್ತೆಗಳನ್ನೂ ನಿರ್ಮಿಸಲಾಗಿದೆ.[೪೨]
ರೈಲು ಸಾರಿಗೆ
[ಬದಲಾಯಿಸಿ]ಹೈದರಾಬಾದ್, ನಿತ್ಯಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಮತ್ತು ರಸ್ತೆ ಸಾರಿಗೆಯ ಮಧ್ಯೆ ಸಂಪರ್ಕ ಕಲ್ಪಿಸುವ, ಬಹುಮಾದರಿ ಸಾರಿಗೆ ವ್ಯವಸ್ಥೆ (MMTS) ಎಂದು ಕರೆಯಲ್ಪಡುವ ಲಘು ರೈಲು ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ. MMTS ನಗರದ ಪ್ರಮುಖ ಭಾಗಗಳಿಗೆ ಸಂಪರ್ಕ ಒದಗಿಸುತ್ತದೆ, ಮತ್ತು ರಸ್ತೆಯಲ್ಲಿನ ವಾಹನ ದಟ್ಟಣೆಯಿಂದ ತಪ್ಪಿಸಿಕೊಳ್ಳಬಯಸುವವರಿಗೆ ಇದೊಂದು ಸೂಕ್ತ ಪರ್ಯಾಯವಾಗಿದೆ.[೪೩] ಹೈದರಾಬಾದ್ ಮೆಟ್ರೊ ನಗರದಲ್ಲಿ ತ್ವರಿತ ಪ್ರಯಾಣಕ್ಕೆ ಮಂಡಿಸಿದ ಯೋಜನೆಯಾಗಿದೆ.
ಸಿಕಂದರಾಬಾದ್ ರೈಲು ನಿಲ್ದಾಣವು ಭಾರತೀಯ ರೈಲ್ವೆಯ ದಕ್ಷಿಣ ಕೇಂದ್ರೀಯ ರೈಲ್ವೆ ವಲಯದ ಪ್ರಧಾನ ಕಾರ್ಯಸ್ಥಾನವಾಗಿದೆ ಮತ್ತು ಇದು ಹೈದರಾಬಾದ್‌ನಲ್ಲಿನ ಅತಿ ದೊಡ್ಡ ರೈಲು ನಿಲ್ದಾಣವಾಗಿದೆ. ಈ ನಿಲ್ದಾಣವು ಸಿಕಂದರಾಬಾದ್‌ನಲ್ಲಿದೆ ಮತ್ತು ಭಾರತೀಯ ರೈಲ್ವೆಯಲ್ಲಿನ ರೈಲುಮಾರ್ಗಗಳು ಕೂಡುವ ಪ್ರಮುಖ ಸ್ಥಳಗಳಲ್ಲೊಂದಾಗಿದೆ. ನಗರದಲ್ಲಿನ ಇತರ ಪ್ರಮುಖ ರೈಲು ನಿಲ್ದಾಣಗಳೆಂದರೆ ಹೈದರಾಬಾದ್ ರೈಲು ನಿಲ್ದಾಣ (ನಾಂಪಳ್ಳಿ) ಮತ್ತು ಕಚಿಗುಡ ರೈಲು ನಿಲ್ದಾಣ. ಈ ನಿಲ್ದಾಣಗಳು ನಗರದ ಒಳಗೆ ಮತ್ತು ದೇಶದ ಉಳಿದ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತವೆ. ನಗರದ ಪಶ್ಚಿಮ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲು, ಹೈಟೆಕ್ ಸಿಟಿ ರೈಲು ನಿಲ್ದಾಣದ ಹತ್ತಿರ ಒಂದು ಆಧುನಿಕ ರೈಲ್ವೆ ಟರ್ಮಿನಲ್‌ನ್ನು ಕಟ್ಟಲು ಯೋಜಿಸಲಾಗುತ್ತಿದೆ.[೪೪] ರೈಲು ದಟ್ಟಣೆಯಿಂದ ನಗರದಲ್ಲಿ ಹೆಚ್ಚಿದ ಅಂತರ್-ನಗರ ರೈಲ್ವೆ ಸಾರಿಗೆಯನ್ನು ನಿರ್ವಹಿಸಲು ನಾಲ್ಕನೇ ರೈಲ್ವೆ ಟರ್ಮಿನಲ್‍ನ್ನು[೪೫] ಕಟ್ಟುವ ಪ್ರಸ್ತಾಪಗಳಿವೆ.
ವಾಯುಯಾನ/ಸಾರಿಗೆ
[ಬದಲಾಯಿಸಿ]ರೂಢಿಯಲ್ಲಿಲ್ಲದಷ್ಟು ಪ್ರಯಾಣಿಕರ ಏರಿಕೆಯಾಗುತ್ತಿರುವುದು ವಾಯುಯಾನದ ದಟ್ಟಣೆಯನ್ನು ಹೆಚ್ಚುಮಾಡುತ್ತಿದೆ.[೪೬][೪೭] ಬೇಗಮ್‌ಪೇಟ್ ನಲ್ಲಿನ ವಿಮಾನ ನಿಲ್ದಾಣವು ಈ ಪರಿಸ್ಥಿಯೊಂದಿಗೆ ಹೊಂದಿಕೊಳ್ಳಲಾಗದೆ 2008-03-2೨ರಂದು ಮುಚ್ಚಿಹೋಯಿತು.[೪೮] ಮಾರ್ಚ್ 2008ರಲ್ಲಿ ನಗರದ ನೈರುತ್ಯಭಾಗದಲ್ಲಿರುವ ಶಂಶಾಬಾದ್‌ನಲ್ಲಿ ಹೊಸ ರಾಜಿವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣವು ಸೋನಿಯ ಗಾಂಧಿ ಅವರಿಂದ ಉದ್ಘಾಟನೆಗೊಂಡಿತು.[೪೯] ಈ ವಿಮಾನನಿಲ್ದಾಣವು ದೆಹಲಿಯ ಬಳಿಕ ಭಾರತದ ಎರಡನೇ ಅತೀದೊಡ್ಡ ರನ್‌ವೇಯನ್ನು[೫೦] ಹೊಂದಿದೆ ಮತ್ತು ಅತ್ಯಂತ ಹೆಚ್ಚಿನ ಜನ ಮತ್ತು ಸರಕು ಸಾಗಾಣಿಕೆಗೆ ಇದು ಅವಕಾಶ ಮಾಡಿಕೊಡುತ್ತದೆ. ದೇಶದೊಳಗಿನ ಮತ್ತು ಅಂತರಾಷ್ಟ್ರೀಯ ಎರಡೂ ಸೇರಿ ಅನೇಕ ಕಡೆಗಳಿಗೆ ಇಲ್ಲಿಂದ ವಿಮಾನಯಾನ ಸೌಲಭ್ಯವಿದೆ.[೫೧]
ವಿಮಾನನಿಲ್ದಾಣಕ್ಕೆ ಅತಿ ವೇಗವಾಗಿ ಪ್ರಯಾಣಿಸಲು ಮೆಹದಿಪಟ್ಟಣಮ್‌ನಿಂದ ರಾಜೇಂದ್ರನಗರ್‌ವರೆಗೆ ಕೆಳರಸ್ತೆ ಮತ್ತು ಟ್ರಂಪೆಟ್ ಇಂಟರ್‌ಚೇಂಜ್‌ನೊಂದಿಗೆ ಪಿ ವಿ ನರಸಿಂಹ ರಾವ್ ಎಕ್ಸ್‌ಪ್ರೆಸ್‌ವೇಯು ಉನ್ನತಮಟ್ಟದಲ್ಲಿ ನಿರ್ಮಾಣಗೊಂಡಿತು. ಇದು ಭಾರತದಲ್ಲೇ ಅತೀದೊಡ್ಡ ಫ್ಲೈಓವರ್ ಆಗಿದೆ.[೫೨] ನಗರದಿಂದ ಹೊಸ ವಿಮನನಿಲ್ದಾಣಕ್ಕೆ ಹೋಗಲು ಮೂರು ಅಗಲವಾದ ರಸ್ತೆಗಳಿವೆ. ಆಧುನಿಕ ಟ್ಯಾಕ್ಸಿಗಳು ಮತ್ತು ಬಸ್ಸುಗಳು ಪ್ರಯಾಣಿಕರಿಗೆ ಪಟ್ಟಣ ಮತ್ತು ವಿಮಾನನಿಲ್ದಾಣದ ಮಧ್ಯೆ ಸಂಚರಿಸಲು ಅವಕಾಶ ನೀಡಿವೆ. ನೆಹರೂ ಹೊರ ರಿಂಗ್ ರೋಡ್, ಗಚಿಬೌಲಿ ಮತ್ತು ಶಂಶಾಬಾದ್ ನಡುವೆ ಎಕ್ಸ್‌ಪ್ರೆಸ್‌ವೇ ಯಾಗಿ ಕಾರ್ಯನಿರ್ವಹಿಸುತ್ತದೆ.
ಸಂಸ್ಕೃತಿ
[ಬದಲಾಯಿಸಿ]ಐತಿಹಾಸಿಕವಾಗಿ, ಹೈದರಾಬಾದ್ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಸಂಗಮದ ವಿಭಿನ್ನ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಪ್ರದಾಯಗಳನ್ನು ಹೊಂದಿರುವ ನಗರವಾಗಿದೆ. ಹೈದರಾಬಾದ್ ಜನರು ನಗರದ ನಿವಾಸಿಗಳಾಗಿದ್ದು, ಅವರು ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯಗಳ ಮಿಶ್ರಣವಾದ ವಿಭಿನ್ನ ಸಂಸ್ಕೃತಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ವಿಶಿಷ್ಟವಾಗಿ ಹೈದರಾಬಾದ್ ಜನರು ತೆಲುಗು ಮಾತನಾಡುತ್ತಾರೆ ಅಥವಾ ಮುಸ್ಲಿಂರು ಉರ್ದು ಅಥವಾ ಮರಾಠಿ ಅಥವಾ ಮಾರ್ವಾರ ಅಥವಾ ಅನೇಕ ಜನಾಂಗೀಯ ಗುಂಪುಗಳಲ್ಲೊಂದು ಹೈದರಾಬಾದ್ ತನ್ನ ಮನೆ ಎಂದು ರೂಪಿಸಲು ನಿರ್ಧರಿಸಿದೆ.[೫೩]
ಹೈದರಾಬಾದ್‌ನಲ್ಲಿ ಎಲ್ಲಾ ಸಂಸ್ಕೃತಿಗಳ ಮತ್ತು ಧರ್ಮಗಳ ಮಹಿಳೆಯರು ಭಾರತದ ಸಂಪ್ರದಾಯಿಕ ಉಡುಗೆ ಸೀರೆಯನ್ನು ಧರಿಸುತ್ತಾರೆ, ಸೀರೆ ಅಥವಾ ಅದರಲ್ಲೂ ಯುವ ಜನತೆ ಹೆಚ್ಚಾಗಿ ಸಲ್ವಾರ್ ಕಮೀಜ್ ಧರಿಸುತ್ತಾರೆ. ಮಹಿಳೆಯರಿಗೆ ಸಂಪ್ರದಾಯಿಕ ಹೈದರಾಬಾದ್ ಉಡುಪುಗಳೆಂದರೆ ಖಾರಾ ದುಪ್ಪಟ ಮತ್ತು ಸಲ್ವಾರ್ ಕಮೀಜ್ ಹಾಗೂ ಪುರುಷರಿಗೆ ಶೇರ್ವಾನಿ.[೫೪] ಇದು ಹೈದರಾಬಾದ್‌ನಲ್ಲಿ ಹೆಚ್ಚು ಕಾಣಬಹುದಾದ ಸಾಂಸ್ಕೃತಿಕ ವಿಶೇಷಣಗಳಲ್ಲಿ ಒಂದು.[೫೫]
ಪ್ರತಿ ವರ್ಷ ಅನಂತ ಚತುರ್ದಶಿಯಲ್ಲಿ (ಸ್ಥಳೀಯವಾಗಿ ಗಣೇಶ ನಿಮಜ್ಜನಂ ಎನ್ನಲಾಗುತ್ತದೆ) 10 ದಿನದ ಗಣೇಶ ಚತುರ್ಥಿ ಆಚರಣೆಯ ನಂತರ ಗಣೇಶ ವಿಗ್ರಹಗಳನ್ನು ವಿಸರ್ಜಿಸುವುದು ಹೈದರಾಬಾದ್‌ನ ಒಂದು ಸಾರ್ವಜನಿಕ ಉತ್ಸವ. ಬೊನಾಲು ದೇಶ್ಯ ಹಬ್ಬವಾಗಿದೆ, ಅದನ್ನು ಹೆಚ್ಚು ಭಾವ ಪೂರ್ಣವಾಗಿ ಆಚರಿಸಲಾಗುತ್ತದೆ. ಮುಸಲ್ಮಾನರ ರಂಜಾನ್ ನ ಕೊನೆಯ ೩ ದಿನಗಳ ಆಚರಣೆಯನ್ನು ಪ್ರತಿಯೊಬ್ಬರಿಗೂ ಗ್ರೀಟಿಂಗ್ಸ್ ಮತ್ತು ಸಂತೋಷವನ್ನು ಹಂಚಿಕೊಳ್ಳುವ ಮೂಲಕ ಈದ್ ಉಲ್-ಫಿಟರ್ ಅನ್ನು ಆಚರಿಸುತ್ತಾರೆ. ಈದ್‌ನಲ್ಲಿ ಶೀರ್ ಕ್ಯೊರ್ಮಾ ಎಂಬ ಸಂಪ್ರದಾಯಿಕ ಸಿಹಿತಿಂಡಿಯನ್ನು ಮಾಡುತ್ತಾರೆ. ಚಾರ್ಮಿನಾರ್‌ನಲ್ಲಿ ಶಿಯಾ ಮುಸ್ಲಿಂರು ಪ್ರತಿ ಮೊಹರಂನ (ಇಸ್ಲಾಮಿಕ್ ಪಂಚಾಂಗದ ಮೊದಲ ತಿಂಗಳು)10ನೇ ದಿನ ವಾರ್ಷಿಕ ಮೆರವಣಿಗೆ ಮಾಡಲು ಸ್ಥಳವನ್ನು ತೆಗೆದುಕೊಳ್ಳುತ್ತಾರೆ, ಅಲ್ಲಿ ಭಾಗವಹಿಸುವವರು ತಮ್ಮ ಎದೆಗಳಿಗೆ ಹೊಡೆದುಕೊಳ್ಳುತ್ತಾರೆ ಮತ್ತು ಹರಿತವಾದ ಆಯುಧಗಳಿಂದ (ಚಾಕುಗಳು, ಕತ್ತಿಗಳು ಮತ್ತು ಚಾಕುಗಳನ್ನು ಸರಪಣಿಗಳಲ್ಲಿ ಕಟ್ಟಲಾಗಿರುತ್ತದೆ) ತಮ್ಮ ತಲೆ,ಎದೆ ಮತ್ತು ಬೆನ್ನಿಗೆ ಹೊಡೆದುಕೊಂಡು ರಕ್ತಸ್ರಾವವಾದುವ ಮೂಲಕ ತಮ್ಮ ಸ್ವಂತ ರಕ್ತವನ್ನು ಚೆಲ್ಲುತ್ತಾರೆ.[೫೬]
ಆಹಾರ ಪದ್ಧತಿ
[ಬದಲಾಯಿಸಿ]ಹೈದರಾಬಾದ್ ಆಹಾರ ಪದ್ಧತಿ ಯು ಸಾಂಪ್ರದಾಯಿಕ ದಕ್ಷಿಣ ಭಾರತೀಯ, ಮುಘಲ್ ಮತ್ತು ಪರ್ಷಿಯನ್ ಆಹಾರ ಪದ್ಧತಿಯ ಮಿಶ್ರಣವಾಗಿದೆ. ಹೈದರಾಬಾದ್ ಬಿರಿಯಾನಿಯ ಈ ಪ್ರದೇಶದ ಪ್ರಮುಖ ಆಹಾರ ಪದ್ಧತಿಯ ಹೆಗ್ಗುರುತು.[೫೭] ಇತರ ಸ್ಥಳೀಯ ಸಿದ್ದತೆಗಳಲ್ಲಿ ಖುಬಾನಿ ಕಾ ಮೀಠಾ, ಡಬಲ್ ಕಾ ಮೀಠಾ, ಫಿರ್ನಿ, ಪಾಯಾ ಎಂದೂ ಕರೆಯಲ್ಪಡು ನಹಾರಿ ಕುಲ್ಚೆ, ಹಲೀಮ್ ( ಪವಿತ್ರ ರಮಜಾನ್ ತಿಂಗಳಲ್ಲಿ ತಿನ್ನಲ್ಪಡುವ ಮಾಂಸದಡುಗೆ) ಕಡ್ಡು ಕಿ ಖೀರ್ (ಸಿಹಿ ಗುಂಬಳಕಾಯಿಯಿಂದ ಮಾಡುವ ಸಿಹಿಯಾದ ಗಂಜಿ) ಶೀರ್ ಕುರ್ಮಾ (ಹಾಲಿನಲ್ಲಿ ಸೇವಿಗೆ ಹಾಕಿ ಕುದಿಸಿ ತಯಾರಿಸುವ ಸಿಹಿ ಖಾದ್ಯ) ಮಿರ್ಚಿ ಕಾ ಸಲಾನ್, ಬಾಗರೆ ಬೈಗಾನ್, ಖಟ್ಟಿ ಡಾಲ್, ಖಿಚಡಿ ಮತ್ತು ಖಟ್ಟಾ, ತೀಲ್ ಕಿ ಚಟ್ನಿ, ಬೈಗನ್ ಕಿ ಚಟ್ನಿ, ತೀಲ್ ಕಾ ಖಟ್ಟಾ, ಆಮ್ ಕಾ ಅಚಾರ್, ಗೋಷ್ಟ್ ಕಾ ಅಚಾರ್, ಪಿಯೋಸಿ (ಮೊಟ್ಟೆಯಲ್ಲಿನ ಬಿಳಿ ಪದಾರ್ಥ ಮತ್ತು ಹಾಲಿನಿಂದ ತಯಾರಿಸಲ್ಪಟ್ಟದ್ದು) ಶಾಹಿ ಟುಕ್ಡೆ , ಖೀಮಾ ಆಲೂ ಇತ್ಯಾದಿ.[೫೮][೫೯]
ಭಾರತೀಯ ಸಿಹಿ ಖಾದ್ಯಗಳು ತುಪ್ಪ ಆಧಾರಿತವಾಗಿದ್ದರಿಂದ ಹೆಸರು ಪಡೆದಿವೆ. ಸಾಂಪ್ರದಾಯಿಕವಾಗಿ ತಯಾರಿಸಲ್ಪಡುವ ಸಿಹಿ ಅಂಗಡಿಗಳು ಪ್ರಸಿದ್ಧಿ ಪಡೆದಿವೆ. ಪುಲ್ಲಾ ರೆಡ್ಡಿ ಮತ್ತು ರಾಮಿರೆಡ್ಡಿ ಸ್ವೀಟ್ಸ್‌ಗಳು ಪರಿಶುದ್ಧ ತುಪ್ಪದ ಸಿಹಿಗೆ ಹೆಸರಾಗಿದ್ದು, ಹೈದರಾಬಾದ್‌ನಲ್ಲಿ ಹಲವೆಡೆ ಅಂಗಡಿಗಳನ್ನು ಹೊಂದಿವೆ ಬೀದಿಯ ಮೂಲೆಗಳಲ್ಲಿ ಹೆಚ್ಚಾಗಿ ಕಂಡು ಬರುವ ಇರಾನಿ ಕೆಫೆಗಳು ಇರಾನಿ ಚಾಯ್ , ಇರಾನಿ ಸಮೋಸಾ ಮತ್ತು ಓಸ್ಮಾನಿಯಾ ಬಿಸ್ಕತ್ ನೀಡುತ್ತವೆ.
ಇಟಾಲಿಯನ್, ಮೆಕ್ಸಿಕನ್, ಚೈನೀಸ್ ಮತ್ತು ಕಾಂಟಿನೆಂಟಲ್ ಆಹಾರಗಳು ಕೂಡ ಆಂಧ್ರ ಮತ್ತು ಇತರ ದಕ್ಷಿಣ ಬಾರತೀಯ ಆಹಾರಗಳಂತೆ ಜನಪ್ರಿಯತೆ ಪಡೆದಿವೆ.[೬೦] ಹೈದರಾಬಾದ್‌ನಲ್ಲಿ ಪಬ್ ಗಳು ಜನಪ್ರಿಯತೆ ಗಳಿಸುತ್ತಿವೆ.
ಶಿಕ್ಷಣ ಮತ್ತು ಸಂಶೋಧನೆ
[ಬದಲಾಯಿಸಿ]ಗಮನಿಸಕ್ಕಂತಹ ಹಲವಾರು ಶಿಕ್ಷಣ ಸಂಸ್ಥೆಗಳು ಹೈದರಾಬಾದ್‌ನಲ್ಲಿವೆ.ಮೂರು ಕೇಂದ್ರಿಯ ವಿಶ್ವವಿದ್ಯಾಲಯಗಳು ಮತ್ತು ಎರಡು ಸ್ವಾಯತ್ತ ವಿಶ್ವವಿದ್ಯಾಲಯಗಳು ಮತ್ತು ಆರು ರಾಜ್ಯ ವಿಶ್ವವಿದ್ಯಾಲಯಗಳು ನಗರದಲ್ಲಿ ಇವೆ. ಅವುಗಳಲ್ಲಿ 1917ರಲ್ಲಿ ಸ್ಥಾಪನೆಯಾದ ಉಸ್ಮಾನಿಯಾ ವಿಶ್ವವಿದ್ಯಾಲಯವು ಭಾರತದಲ್ಲಿ ಅತ್ಯಂತ ಹಳೆಯದಾದ 7ನೇ ವಿಶ್ವವಿದ್ಯಾಲಯವಾಗಿದ್ದು, ದಕ್ಷಿಣ ಭಾರತದಲ್ಲಿ ಮೂರನೇಯದಾಗಿದೆ.[೬೨] ಹೈದರಾಬಾದ್ ಕೇಂದ್ರಿಯ ವಿಶ್ವವಿದ್ಯಾಲಯ, ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡಿಸ್ ಆಂಡ್ ರೀಸರ್ಚ್, ನ್ಯಾಷನಲ್ ಇನ್ಸಿಟ್ಯಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜ್ಯುಕೇಷನ್ ಆಂಡ್ ರೀಸರ್ಚ್ (NIPER) ಪೊಟ್ಟಿ ಶ್ರೀರಾಮಲು ತೆಲುಗು ವಿಶ್ವವಿದ್ಯಾಲಯ, ಮೌಲಾನಾ ಆಝಾದ್ ನ್ಯಾಷನಲ್ ಉರ್ದು ವಿಶ್ವವಿದ್ಯಾಲಯ ಮತ್ತು ಇಂಗ್ಲಿಷ್ ಆಂಡ್ ಫಾರಿನ್ ಲಾಂಗ್ವೇಜಸ್ ವಿಶ್ವವಿದ್ಯಾಲಯ, ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತವಿಶ್ವವಿದ್ಯಾಲಯ, ಡಾ. ಬಿ.ಆರ್. ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯ ನಗರದಲ್ಲಿರುವ ಇತರ ಪ್ರಸಿದ್ಧ ವಿಶ್ವವಿದ್ಯಾಲಯಗಳಾಗಿವೆ.[೬೩] ಆಚಾರ್ಯ ಎನ್.ಜಿ. ರಂಗಾ ಕೃಷಿ ವಿಶ್ವವಿದ್ಯಾಲಯವು ಕೃಷಿ ಕ್ಷೇತ್ರದಲ್ಲಿ ಅತ್ಯಂತ ಪರಿಚಿತ ಶೈಕ್ಷಣಿಕ ಸಂಸ್ಥೆಯಾಗಿದ್ದು, ನಗರದ ಹೊರಭಾಗದಲ್ಲಿ ಅದು ಇದೆ.
ಜಗತ್ತಿನ ಇತರ ಭಾಗಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುವ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಹೈದರಾಬಾದ್‌ನ ಗಾಚಿಬೌಳಿಯಲ್ಲಿದೆ.
೫೦೦,೦೦೦ ಪುಸ್ತಕಗಳು, ವೃತ್ತ ಪತ್ರಿಕೆಗಳು ಹಾಗು ವಿಶಿಷ್ಟವಾದ ತಾಳೆಗರಿಯ ಸಂಗ್ರಹ ಇರುವ ರಾಜ್ಯ ಕೇಂದ್ರ ಗ್ರಂಥಾಲಯ ಮೂಸಿ ನದಿಯ ದಡದಲ್ಲಿದೆ.
ಹೈದರಾಬಾದ್ ಮತ್ತು ಸುತ್ತಲಿನ ಸ್ಥಳಗಳಲ್ಲಿ ಹಲವಾರು ಎಂಜಿನಿಯರಿಂಗ್ ಮಹಾವಿದ್ಯಾಲಯಗಳಿವೆ. ನಗರದಲ್ಲಿರುವ ಪ್ರಮುಖ ಎಂಜಿನಿಯರಿಂಗ್ ಕಾಲೇಜುಗಳ ಪೈಕಿ ಇಂಡಿಯನ್ ಇನ್ಸಿಟ್ಯಿಟ್ಯೂಟ್ ಆಫ್ ಟೆಕ್ನಾಲಾಜಿ ಹೈದರಾಬಾದ್, GITAM ವಿಶ್ವವಿದ್ಯಾಲಯ ಹೈದರಾಬಾದ್ ಕ್ಯಾಂಪಸ್, BITS ಪಿಲಾನಿ ಕ್ಯಾಂಪಸ್, ವಾಸವಿ ಕಾಲೇಜ್ ಆಫ್ ಇಂಜಿನಿಯರಿಂಗ್, ಇಂಟರ್ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಇನ್ಫರ್ಮೇಶನ್ ಟೆಕ್ನಾಲಜಿ, OUCE, OUCT, CBIT,VNR ವಿಜ್ಞಾನ ಜ್ಯೋತಿ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, MVSR ಇಂಜಿನಿಯರಿಂಗ್ ಕಾಲೇಜ್, ಮುಫಾಖಮ್ ಜಾ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಡೆಕ್ಕನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಮತ್ತು ಜವಾಹರಲಾಲ್ ನೆಹರೂ ತಾಂತ್ರಿಕ ವಿಶ್ವವಿದ್ಯಾಲಯ ಮುಂತಾದವುಗಳು ಈ ನಗರದಲ್ಲಿವೆ. ಪ್ರಮುಖ ವೈದ್ಯಕೀಯ ಸಂಸ್ಥೆಗಳಲ್ಲಿ ಗಾಂಧಿ ವೈದ್ಯಕೀಯ ಮಹಾವಿದ್ಯಾಲಯ, ಉಸ್ಮಾನಿಯಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಇತರ ಖಾಸಗಿ ಮಹಾವಿದ್ಯಾಲಯಗಳಾದ ಡೆಕ್ಕನ್ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಶಾದನ್ ವೈದ್ಯಕೀಯ ಮಹಾವಿದ್ಯಾಲಯ ಫ್ಲೈ-ಟೆಕ್ ಎವಿಯೇಷನ್ ಅಕಾಡೆಮಿ ಮತ್ತು ರಾಜೀವ್ ಗಾಂಧಿ ಎವಿಯೇಷನ್ ಅಕಾಡೆಮಿಯು ವಾಯುಯಾನ ಕ್ಷೇತ್ರದಲ್ಲಿ ಪ್ರಮುಖ ಮತ್ತು ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಆಗಿವೆ.
ಹೈದರಾಬಾದ್‌ನಲ್ಲಿ ಹಲವಾರು ಸಂಶೋಧನಾ ಸಂಸ್ಥೆಗಳು ಇದ್ದು, (ಹೈದರಾಬಾದ್‌ನಲ್ಲಿರುವ ಸಂಶೋಧನಾ ಸಂಸ್ಥೆಗಳ ಪಟ್ಟಿ ಪರಿಶೀಲಿಸಿ) ಅವುಗಳಲ್ಲಿ ಇಂಡಿಯನ್ ಇನ್ಸಿಟ್ಯಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಾಜಿ (IICT), ಸೆಂಟರ್ ಫಾರ್ ಸೆಲ್ಯುಲರ್ ಆಂಡ್ ಮೊಲ್ಯಾಕುಲರ್ ಬಯೋಲಾಜಿ (CCMB), ನ್ಯಾಷನಲ್ ಜಿಯೋಫಿಸಿಕಲ್ ರೀಸರ್ಚ್ ಇನ್ಸಿಟ್ಯಿಟ್ಯೂಟ್ (NGRI), NGRI Archived 2011-07-07 ವೇಬ್ಯಾಕ್ ಮೆಷಿನ್ ನಲ್ಲಿ., IRISET ಫಾರ್ ರೈಲ್ವೆ ಸಿಗ್ನಲ್ ಎಂಜಿನಿಯರಿಂಗ್ ಆಂಡ್ ಐಸಿಐಆರ್ಐಎಸ್ಎಟಿ , ಡಿಫೆನ್ಸ್ ರೀಸರ್ಚ್ ಆಂಡ್ ಡವಲಪ್ಮೆಂಟ್ ಆರ್ಗನೈಜೆಷನ್ (DRDO) ಜೊತೆಗೆ DRDL ಕೂಡ ಹೈದರಾಬಾದ್‌ನಲ್ಲಿ ಸಂಪರ್ಕ ಮತ್ತು ರಾಡಾರ್ ವ್ಯವಸ್ಥೆಯನ್ನು ಇಂಟಿಗ್ರೆಟೆಡ್ ಮಿಸ್ಸೈಲ್ ಡವಲಪ್ಮೆಂಟ್ ಪ್ರೊಗ್ರಾಮ್ ಗಾಗಿ (IGMDP) ಸಂಶೋಧನಾ ಸಂಸ್ಥೆಯನ್ನು ಹೊಂದಿದೆ. ಭಾರತೀಯ ಅಣುಶಕ್ತಿ ಇಲಾಖೆಯಡಿಯಲ್ಲಿನ ಮೂರು ಸಂಸ್ಥೆಗಳು ಇಲ್ಲಿರುವ ಮೂಲಕ ಅಣುಶಕ್ತಿ ವಿಭಾಗವು ಸಾಕಷ್ಟು ಪ್ರಮಾಣದಲ್ಲಿ ತನ್ನ ಅಸ್ತಿತ್ವವನ್ನು ನಗರದಲ್ಲಿ ತೋರ್ಪಡಿಸಿದೆ. ಅವುಗಳಲ್ಲಿ ಅಟೋಮೆಟಿಕ್ ಮಿನರ್ಸ್ ಡೈರೋಕ್ಟರೇಟ್ ಫಾರ್ ಎಕ್ಸಫ್ಲೊರೇಷನ್ ಆಂಡ್ ರೀಸರ್ಚ್ (AMD) ನ್ಯೂಕ್ಲಿಯರ್ ಫ್ಯೂಯೆಲ್ ಕಾಂಪ್ಲೆಕ್ಸ್ (NFC) ಮತ್ತು ಇಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಇಲ್ಲಿವೆ.[೪೨]
ಹೈದರಾಬಾದ್ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳ ಆತಿಥ್ಯ ವಹಿಸಿಕೊಳ್ಳಬಹುದು. ಪ್ರತಿಷ್ಠಿತ ಅಂತಾರಾಷ್ಟ್ರೀಯ ಗಣಿತ ತಜ್ಞರ ಸಮಾವೇಶವನ್ನು (ICM) ಅನ್ನು ಆಗಸ್ಟ್ 2010ರಲ್ಲಿ ಆತಿಥ್ಯವಹಿಸುವುದಕ್ಕೆ ಹೈದರಾಬಾದ್ ನಗರವನ್ನು ಆಯ್ಕೆ ಮಾಡಲಾಗಿದೆ.[೬೪] ಈ ವಿಚಾರ ಸಂಕಿರಣದಲ್ಲಿ ಜಗತ್ತಿನ ವಿವಿಧ ಭಾಗದಿಂದ 4000ಕ್ಕಿಂತ ಹೆಚ್ಚು ಗಣಿತ ತಜ್ಞರು ಪಾಲ್ಗೊಳ್ಳುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
ಮಾಧ್ಯಮ
[ಬದಲಾಯಿಸಿ]ಅತಿ ಹೆಚ್ಚು ತೆಲುಗು ಚಲನಚಿತ್ರಗಳನ್ನು ಹೈದರಾಬಾದ್‌ನಲ್ಲಿ ನಿರ್ಮಿಸುವ ಮೂಲಕ ಭಾರತದಲ್ಲಿಯೇ ಅತಿ ದೊಡ್ಡ ಚಲನಚಿತ್ರೋದ್ಯಮದ ತಾಣವಾಗಿದೆ. ಟಾಲಿವುಡ್ ಎಂದು ಕರೆಯಲ್ಪಡುವ ಇದು ವರ್ಷಕ್ಕೆ ಅಂದಾಜು ಮುನ್ನೂರು ಚಲನಚಿತ್ರಗಳನ್ನು ನಿರ್ಮಿಸಲಾಗುತ್ತಿದೆ. ಶರಧಿ ಸ್ಟುಡಿಯೋಸ್, ಅನ್ನಪೂರ್ಣ ಸ್ಟುಡಿಯೋಸ್, ರಾಮಾನಾಯಿಡು ಸ್ಟುಡಿಯೋಸ್, ರಾಮಕೃಷ್ಣ ಸ್ಟುಡಿಯೋಸ್, ಪದ್ಮಾಲಯ ಸ್ಟುಡಿಯೋಸ್, ರಾಮೋಜಿ ಫಿಲ್ಮಸಿಟಿ (ಭಾರತದಲ್ಲಿಯೇ ಅತಿದೊಡ್ಡ ಫಿಲ್ಮ್ ಸ್ಟುಡಿಯೋ) ಮುಂತಾದವುಗಳು ನಗರದಲ್ಲಿ ಗಮನಿಸಬೇಕಾದ ಸ್ಟುಡಿಯೋಗಳಾಗಿವೆ. ಹೈದರಾಬಾದ್ ಫಿಲ್ಮ್ ಕ್ಲಬ್ ಮತ್ತು ಆಂಧ್ರ ಪ್ರದೇಶ ಫಿಲ್ಮ್ ಡೈರೆಕ್ಟರ್ ಅಸೋಸಿಯೇಷನ್ ವತಿಯಿಂದ 2007ರಲ್ಲಿ ಮೊದಲ ಬಾರಿಗೆ ಹೈದರಾಬಾದ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಯೋಜಿಸಲಾಯಿತು.ಏಷಿಯಾದಲ್ಲಿಯೇ ಅತಿದೊಡ್ಡ ಐಮ್ಯಾಕ್ಸ್ 3ಡಿ ಫಿಲ್ಮ್ ಥಿಯೇಟರ್ ಇಲ್ಲಿದ್ದು, ಜಗತ್ತಿನಲ್ಲಿಯೇ ಶಕ್ತಿಶಾಲಿಯಾದ 24 ಆಫ್ಟಿಕಲ್ ಫೋಕಸ್ ಅನ್ನು 4ಡಿ ಸಿಮ್ಯೂಲೇಟರ್ ನೊಂದಿಗೆ ಭಾರತದ ಹೈದರಾಬಾದ್‌ನಲ್ಲಿರುವ ಪ್ರಸಾದ್ಸ್ ಐಮ್ಯಾಕ್ಸ್ ಹೊಂದಿದೆ. ಐನಾಕ್ಸ್, ಪಿವಿಆರ್ ಸಿನಿಮಾ, ಸಿನೆ ಪ್ಲಾನೆಟ್, ಸಿನೆಮ್ಯಾಕ್ಸ್, ಬಿಗ್ ಸಿನೆಮಾ ಮತ್ತು ಟಾಕಿ ಟೌನ್ ಮುಂತಾದವುಗಳು ಹೈದರಾಬಾದ್‌ನಲ್ಲಿರುವ ಇತರ ಮಲ್ಟಿಫ್ಲೆಕ್ಸ್ ಗಳು ಆಗಿವೆ. ಸನೀಹದ ಭವಿಷ್ಯದಲ್ಲಿ 17ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ಹಳು ಕುಟಪಲ್ಲಿ, ಕಾಚಿಗುಡಾದಂತಹ ಪ್ರದೇಶಗಳಲ್ಲಿ ತಲೆ ಎತ್ತಲಿವೆ.[೬೬]
ನಗರದ ಸೈಫಾಬಾದ್ ನಲ್ಲಿರುವ ರವೀಂದ್ರ ಭಾರತಿಯು ರಂಗಕಲೆ ಮತ್ತು ಪ್ರದರ್ಶನ ಕಲೆಗಳಿಗೆ ಪ್ರಮುಖವಾದ ಕೇಂದ್ರವಾಗಿದೆ. ಜಗತ್ತಿನ ಹಲವಾರು ಕಲಾವಿದರು ನಿಯಮಿತವಾಗಿ ಇಲ್ಲಿ ಕಾರ್ಯಕ್ರಮ ನೀಡುತ್ತಿರುತ್ತಾರೆ. ಲಲೀತಕಲಾ ಥೋರನಮ್ ಮತ್ತು ಶಿಲ್ಪಕಲಾ ವೇದಿಕಾ ಕಲೆ ಮತ್ತು ರಂಗಕಲೆಯ ಇತರ ಕೇಂದ್ರಗಳು ಆಗಿವೆ. ಅತ್ಯಾಧುನಿಕವಾದ ಹೈದರಾಬಾದ್ ಕಾನ್ವೆಷನ್ ಕೇಂದ್ರ (HICC) ಅಥವಾ HITEX ಎಂದು ಕರೆಯಲ್ಪಡುವುದು ದಕ್ಷಿಣ ಏಷಿಯಾದಲ್ಲಿಯೇ ಮೊದಲನೆಯದ್ದಾಗಿದ್ದು, ಜಗತ್ತಿನ ಅತ್ಯುತ್ತಮ ಕಾನ್ವೇಷನ್ ಕೇಂದ್ರಗಳಲ್ಲಿ ಒಂದಾಗಿದೆ.[೬೭]
ರೇಡಿಯೋ ಉದ್ಯಮವು ಕೂಡ ಹಲವಾರು ಸಂಖ್ಯೆಯ ಖಾಸಗಿ ಮತ್ತು ಸರ್ಕಾರಿ ಮಾಲೀಕತ್ವದ ಎಫ್ಎಂ ಚಾನೆಲ್ ಗಳ ಪರಿಚಯದಿಂದಾಗಿ ವಿಸ್ತಾರಗೊಂಡಿದೆ. ನಗರದಲ್ಲಿ ಪ್ರಸಾರವಾಗುವ ಎಫ್ಎಂ ರೇಡಿಯೋ ಚಾನೆಲ್ ಗಳಲ್ಲಿ ಎಐಆರ್, ವಿವಿಧ ಭಾರತಿ , ಎಫ್ಎಂ (102.8 MHz), ಏರ್ ರೈನ್ ಬೋ ಎಫ್ಎಂ (101.9 MHz), ರೇಡಿಯೋ ಮಿರ್ಚಿ ಎಫ್ಎಂ (98.3 MHz), ರೇಡಿಯೋ ಸಿಟಿ ಎಫ್ಎಂ (91.1 MHz), ಬಿಗ್ ಎಫ್ಎಂ (92.7 MHz), ರೆಡ್ ಎಫ್ಎಂ(93.5 MHz) ಮತ್ತು ಏರ್ ಜ್ಞಾನ ವಾಣಿ (107.6 MHz). ಸರ್ಕಾರಿ ಮಾಲೀಕತ್ವದ ದೂರದರ್ಶನವು ಎರಡು ಟೆರೆಸ್ಟ್ರರಿಯಲ್ ಟೆಲಿವಿಜನ್ ಚಾನೆಲ್ ಗಳನ್ನು ಮತ್ತು ಒಂದು ಸ್ಯಾಟಲೈಟ್ ಟೆಲಿವಿಜನ್ ಚಾನೆಲ್ ನ್ನು ಹೈದರಾಬಾದ್‌ನಿಂದ ಪ್ರಸಾರ ಮಾಡುತ್ತಿದೆ. ಹೈದರಾಬಾದ್‌ನಿಂದ ಕೆಲ ಪ್ರಮುಖ ಪ್ರಾದೇಶಿಕ ಟೆಲಿವಿಜನ್ ಗಳಾದ ಎಬಿಎನ್- ಟಿವಿ9 ಮಾಟಿವಿ ಐ-ನ್ಯೂಸ್, ಆಂಧ್ರಜ್ಯೋತಿ ನ್ಯೂಸ್ ಈಟಿವಿ, ಜೆಮಿನಿ, ತೇಜಾ, ಜೀ ತೆಲುಗು, ಈಟಿವಿ ಉರ್ದು, ಈಟಿವಿ2 ಮತ್ತು ಸಾಕ್ಷಿ ಟಿವಿ, ಎನ್ ಟಿವಿ, ಟಿವಿ5 ಆರ್ ಟಿವಿ, ಭಕ್ತಿ ಟಿವಿ, ಲೋಕಲ್ ಟಿವಿ ಪ್ರಸಾರ ಮಾಡುತ್ತಿವೆ.[೬೮]
ಹೈದರಾಬಾದ್‌ನಲ್ಲಿ ಮೂರು ಮುದ್ರಣ ಮಾಧ್ಯಮ ಸಮೂಹಗಳಿದ್ದು ಅವು ಇಂಗ್ಲಿಷ್, ಹಿಂದಿ, ಉರ್ದು ಮತ್ತು ತೆಲುಗಿನಲ್ಲಿ ಹಲವಾರು ದಿನಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಪ್ರಕಟಿಸುತ್ತವೆ. ಪ್ರಮುಖ ತೆಲುಗು ದಿನಪತ್ರಿಕೆಗಳು ಎಂದರೆ, ಈನಾಡು , ಸಾಕ್ಷಿ , ಸೂರ್ಯಾ , ವಾರ್ತಾ , ಆಂಧ್ರಜ್ಯೋತಿ , ಆಂಧ್ರಪ್ರಭ , ಆಂಧ್ರಭೂಮಿ ಮತ್ತು ಪ್ರಜಾಶಕ್ತಿ ಪ್ರಮುಖವಾಗಿವೆ. ದಿ ಟೈಮ್ಸ್ ಆಫ್ ಇಂಡಿಯಾ , ದಿ ಹಿಂದು , ದಿ ಡೆಕ್ಕನ್ ಕ್ರಾನಿಕಲ್ , ಬ್ಯುಸಿನೆಸ್ ಸ್ಟ್ರ್ಯಾಂಡರ್ಡ್ , ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ಮತ್ತು ಎಕನಾಮಿಕ್ ಟೈಮ್ಸ್ ಪ್ರಮುಖ ಇಂಗ್ಲಿಷ್ ಪತ್ರಿಕೆಗಳು ಪ್ರಕಟವಾಗುತ್ತಿವೆ. ಇತರ ಭಾರತದ ನಗರಗಳಿಗಿಂತ ಹೈದರಾಬಾದ್‌ನಲ್ಲಿ ಅತಿಹೆಚ್ಟು ಉರ್ದು ದಿನಪತ್ರಿಕೆಗಳನ್ನು ಪ್ರಕಟಗೊಳ್ಳುತ್ತದೆ. ಪ್ರಮುಖ ಉರ್ದು ದಿನಪತ್ರಿಕೆಗಳು ಎಂದರೆ, ದಿ ಸಿಯಾಸತ್ ಡೈಲಿ , ದಿ ಮುನ್ಸಿಫ್ ಡೈಲಿ , ದಿ ಈತೆಮಾದ್ , ರೆಹ್ನುಮಾ-ಎ-ಡೆಕ್ಕನ್ , ರೋಝನಾಮಾ ರಾಷ್ಚ್ರೀಯ ಸಹಾರಾ , ಮತ್ತು ದಿ ಡೈಲಿ ಮಿಲಾಪ್ .
ಆಪ್ಟಿಕಲ್ ಫೈಬರ್ ನ ಬೃಹತ್ ಸಂಪರ್ಕ ಜಾಲದಿಂದ ಸುತ್ತುವರಿಯಲ್ಪಟ್ಚಿದೆ. ನಗರದಲ್ಲಿ ನಾಲ್ಕು ಸ್ಥಿರ ದೂರವಾಣಿ ನಿರ್ವಾಹಕರಿದ್ದು ಬಿಎಸ್ಎನ್ಎಲ್, ಟಾಟಾ ಇಂಡಿಕಾಮ್, ರಿಲಾಯನ್ಸ್, ಮತ್ತು ಏರ್ ಟೆಲ್. ನಗರದಲ್ಲಿ ಹತ್ತು ಮೊಬೈಲ್ ಫೋನ್ ಕಂಪನಿಗಳು ಇದ್ದು, ಅವುಗಳು ಜಿಎಸ್ಎಂ ಇರುವ ವೋಡಾಫೋನ್, ಏರ್ ಟೆಲ್. ಬಿಎಸ್ಎನ್ಎಲ್, ಐಡಿಯಾ, ಟಾಟಾ ಡೋಕೊಮೊ, ರಿಲಾಯನ್ಸ್, ಎರ್ ಸೆಲ್, ಸಿಡಿಎಂಎ, ಸೇವೆಯನ್ನು ಬಿಎಸ್ಎನ್ಎಲ್, ವಿರ್ಜಿನ್ ಮೊಬೈಲ್, ಟಾಟಾ ಇಂಡಿಕಾಮ್, ಮತ್ತು ರಿಲಾಯನ್ಸ್ ಸದ್ಯ ಸೇವೆ ನೀಡುತ್ತಿದ್ದು, ಸ್ಪೈಸ್ ಟೆಲಿಕಾಂ ಶೀಘ್ರದಲ್ಲಿ ಸೇವೆಯನ್ನು ಪ್ರಾರಂಭಿಸಲಿದೆ.
ಕ್ರೀಡೆ
[ಬದಲಾಯಿಸಿ]ನಗರದಲ್ಲಿ ಕ್ರಿಕೆಟ್ ಮತ್ತು ಹಾಕಿ ಜನಪ್ರಿಯವಾಗಿರುವ ಕ್ರೀಡೆಗಳು ಆಗಿವೆ. 2005ರಲ್ಲಿ ಪ್ರಾರಂಭವಾದ ಪ್ರಿಮೀಯರ್ ಹಾಕಿ ಲೀಗ್ ಚಾಂಪಿಯನ್ ಷಿಪ್ ಅನ್ನು ಹೈದ್ರಾಬಾದ್ ಸುಲ್ತಾನ್ ತಂಡ ಗೆದ್ದುಕೊಂಡಿದೆ. ನ್ಯಾಷನಲ್ ಗೇಮ್ಸ್ ಮತ್ತು ಆಫ್ರೊ-ಏಷಿಯನ್ ಗೇಮ್ಸ್ ನ ಆತಿಥ್ಯ ವಹಿಸಿಕೊಳ್ಳುವ ಹೆಮ್ಮೆ ಈ ನಗರಕ್ಕೆ ದಕ್ಕಿದೆ. ಪ್ರತಿವರ್ಷ ಹೈದ್ರಾಬಾದ್ 10 ಸಾವಿರ ಮೀಟರ್ ಮ್ಯಾರಾಥಾನ್ ಅನ್ನು ಆಯೋಜಿಸಲಾಗುತ್ತದೆ.[೨೮]
ನಗರದಲ್ಲಿ ಮೊದಲು ಲಾಲ್ ಬಹಾದ್ದೂರ್ ಶಾಸ್ತ್ರಿ ಸ್ಟೇಡಿಯಂ ಅನ್ನು ನಿರ್ಮಿಸಲಾಯಿತು. ಈ ಮೊದಲು ಫತೇಹ್ ಖಾನ್ ಮೈದಾನ ಎಂದು ಕರೆಯಲ್ಪಡುತ್ತಿದ್ದ ಇದು ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವ ಎಕಮಾತ್ರ ಸ್ಟೇಡಿಯಂ ಆಗಿತ್ತು. ನವಂಬರ್ 19, 1955ರಲ್ಲಿ ಮೊದಲ ಕ್ರಿಕೆಟ್ ಪಂದ್ಯವನ್ನು ಇಲ್ಲಿ ಆಡಲಾಯಿತು. ಸದ್ಯ ಸ್ಟೇಡಿಯಂ ಅನ್ನು ಐಸಿಎಲ್ ಪಂದ್ಯಗಳನ್ನು ನಡೆಸುವುದಕ್ಕೆ ಉಪಯೋಗಿಸಲಾಗುತ್ತಿದೆ. ಉಪ್ಪಲ್ ದಲ್ಲಿರುವ ನೂತನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಂದಾಜು 55,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದ್ದು, ಅತ್ಯಾಧುನಿಕವಾದ ಸೌಲಭ್ಯಗಳ ಮೂಲಕ ಮೇಲ್ದರ್ಜೆಗೆರಿಸಲಾಗುತ್ತಿದೆ. ಇದರಲ್ಲಿ ಅತ್ಯಾಧುನಿಕವಾದ ಜಿಮ್‌ನೊಂದಿಗೆ ಈಜುಕೋಳ ಕೂಡ ಇದೆ.[೬೯]
ಹೈದ್ರಾಬಾದ್ ಮೂಲದ ಅಂತಾರಾಷ್ಟ್ರೀಯ ಮಟ್ಟದ ಪ್ರಸಿದ್ಧ ಕ್ರೀಡಾಪಟುಗಳು ಎಂದರೆ, ಗುಲಾಮ್ ಅಹ್ಮದ್, ಮಹ್ಮದ್ ಅಝರುದ್ದೀನ್, ವಿವಿಎಸ್ ಲಕ್ಷ್ಮಣ್, (ಕ್ರಿಕೆಟ್) ಸಯ್ಯದ ಅಬ್ದುಲ್ ರಹೀಮ್, ಸಾನಿಯಾ ಮಿರ್ಜಾ (ಲಾನ್ ಟೆನ್ನಿಸ್), ಪುಲ್ಲೇಲ ಗೋಪಿಚಂದ್, ಜ್ವಾಲಾ ಗುಟ್ಟಾ, ಸೈನಾ ನೇಹ್ವಾಲ್, ಚೇತನ್ ಆನಂದ್ (ಬ್ಯಾಡ್ಮಿಂಟನ್), ಮುಕೇಶ ಕುಮಾರ್ (ಹಾಕಿ).[೭೦]
ಇಂಡಿಯನ್ ಪ್ರಿಮೀಯರ್ ಲೀಗ್ ನ ಡೆಕ್ಕನ್ ಚಾರ್ಜರ್ಸ್ ತಂಡವನ್ನು 107 ಮಿಲಿಯನ್ ಅಮೆರಿಕನ್ ಡಾಲರ್ ಗಳಿಗೆ ಡೆಕ್ಕನ್ ಕ್ರಾನಿಕಲ್ ಖರೀದಿಸಿತು. 2009ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡವು ಪ್ರಶಸ್ತಿಯನ್ನು ಗೆದ್ದುಕೊಂಡಿತು. ಗಮನಿಸಬಹುದಾದ ಆಟಗಾರರು ಎಂದರೆ, ಆ್ಯಡಮ್ ಗಿಲಕ್ರಿಸ್ಟ್, ಅಂಡ್ರ್ಯೂ ಫ್ಲಿಂಟಾಫ್, ವಿವಿಎಸ್ ಲಕ್ಷ್ಮಣ್, ಹರ್ಷಲ್ ಗಿಬ್ಸ್, ಸ್ಕಾಟ್ ಸ್ಟೈರಿಸ್, ಆರ್.ಪಿ. ಸಿಂಗ್, ಶಾಹಿದ್ ಆಫ್ರೀದಿ, ರೋಹಿತ್ ಶರ್ಮಾ, ಪ್ರಗ್ಯಾನ್ ಒಝಾ, ಚಮಿಂಡಾ ವಾಸ್ ಮತ್ತು ಚಮರಸಿಲ್ವಾ. 2009 ಋತುವಿನಲ್ಲಿ ಫಿಡೇಲ್ ಎಡ್ವರ್ಡ್ಸ್, ಡ್ವೈನ್ ಸ್ಮಿಥ್ ಅವರನ್ನು ಸೇರ್ಪಡೆಗೊಳಿಸಲಾಯಿತು ಮತ್ತು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟ ಕಾರಣ ಶಾಹಿದ್ ಆಫ್ರೀದಿ ಆಡಲಾಗಲಿಲ್ಲ. ಡೆಕ್ಕನ್ ಚಾರ್ಜರ್ಸ್ ಗೆ ಆಫ್ರೀದಿ ಅತ್ಯಂತ ಪ್ರಮುಖ ಆಟಗಾರ. ನಗರದಲ್ಲಿ ಐಸಿಎಲ್ ಕೂಡ ಹೈದ್ರಾಬಾದ್ ಹೀರೋಸ್ ಹೆಸರಿನಲ್ಲಿ ತಂಡವನ್ನು ಹೊಂದಿದೆ.[೨೫]
ಫುಟ್ಬಾಲ್ ಮತ್ತು ಹಾಕಿಗಾಗಿ ನಗರದ ಸ್ವರ್ಣಧಾರಾ ಪ್ರದೇಶ ಸ್ಪೋರ್ಟ್ ಕಾಂಪ್ಲೆಕ್ಸ್, ಹಾಕಿ ಮತ್ತು ಫುಟ್ಬಾಲ್‌ಗಾಗಿ ಗಾಚಿಬೌಲಿಯಲ್ಲಿ ಜಿಎಂಸಿ ಬಾಲಯೋಗಿ ಅಥ್ಲೆಟಿಕ್ ಸ್ಟೇಡಿಯಂ ನಿರ್ಮಿಸಲಾಗಿದ್ದು, ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಸೈಕ್ಲಿಂಗ್‌ಗಾಗಿ ನಯವಾದ ವೇಲೊಡ್ರಮ್ ನಿರ್ಮಿಸಲಾಗಿದೆ. ಸರೂನ್ ನಗರ ಒಳಾಂಗಣ ಕ್ರೀಡಾಂಗಣ ಮತ್ತು ಯುನಿವರ್ಸಿಟಿ ಆಫ್ ಹೈದ್ರಾಬಾದ್‌ನಲ್ಲಿ ಅತ್ಯಾಧುನಿಕವಾದ ಜಿಮ್ನಾಸ್ಟಿಕ್, ಆರ್ಚರಿ, ಸೆಪಕ್ ಟಾಕ್ರವ್, ಶೂಟಿಂಗ್ ಸ್ಥಳವಿದೆ. ಗಾಚಿಬೌಲಿಯಲ್ಲಿರುವ ಅಕ್ವಾಟಿಕ್ ಕಾಂಪ್ಲೆಕ್ಸ್ ಸ್ಟೇಡಿಯಂ 3000 ಪ್ರೇಕ್ಷಕರ ಸಾಮರ್ಥ್ಯ ಹೊಂದಿದ್ದು, ಇಲ್ಲಿ ಈಜು. ಡೈವಿಂಗ್, ವಾಟರ್ ಪೊಲೋ ಮತ್ತು ಸಿಂಕ್ರೊನೈಸ್ಡ್ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಕೋಟ್ಲಾ ವಿಜಯ ಭಾಸ್ಕರ್ ರೆಡ್ಡಿ ಒಳಾಂಗಣ ಕ್ರೀಡಾಂಗಣವು ಬಹು ಉದ್ದೇಶಿತ ಸ್ಟೇಡಿಯಂ ಆಗಿದ್ದು, 2500 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ ಮತ್ತು ಕಟ್ಟಿಗೆಯಿಂದ ತಾಪ ನಿಯಂತ್ರಣವನ್ನು ಹೊಂದಿದೆ. ಸ್ಯಾಫ್ ಟೆನ್ನಿಸ್ ಕಾಂಪ್ಲೆಕ್ಸ್ ನ ಕೇಂದ್ರ ಕೋರ್ಟ್ 5000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದ್ದು, ಮತ್ತು ಸಿಂಥೇಟಿಕ್ ಮೇಲ್ಮೈಯೊಂದಿಗೆ ಏಳು ಅಂಕಣಗಳನ್ನು ಹೊಂದಿದೆ. ಹುಸೇನ್ ಸಾಗರ ಸರೋವರದಲ್ಲಿ ಜಲಕ್ರೀಡೆಗಳಾದ ರೋಯಿಂಗ್, ಯಾಚಿಂಗ್, ಕಾಯಾಕಿಂಗ್ ಮತ್ತು ಕ್ಯಾನೋಯಿಂಗ್ ಕ್ರೀಡೆಯನ್ನು ಆಯೋಜಿಸಲಾಗುತ್ತಿದೆ. ನಗರದಲ್ಲಿ ಐದು ಗೊ-ಕಾರ್ಟಿಂಗ್ ಟ್ರ್ಯಾಕ್ಸ್ ಮತ್ತು ಪೇಂಟ್ ಬಾಲ್ ಫೀಲ್ಡ್ ಗಳು ಇವೆ. ಜಾಗತಿಕ ಮಟ್ಟದ ಸೌಲಭ್ಯಗಳನ್ನು ಹೊಂದಿರುವ ಟೆಬಲ್ ಟೆನ್ನಿಸ್, ಬಾಸ್ಕೆಟ್ ಬಾಲ್, ಈಕ್ವೇಸ್ಟ್ರಿಯನಿಸಮ್, ಬಾಕ್ಸಿಂಗ್, ವೈಟ್ ಲಿಪ್ಟಿಂಗ್ ಸ್ಥಳಗಳು ಇವೆ.
ಆಂಧ್ರಪ್ರದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೋಟರ್ ಸ್ಪೋರ್ಟ್ಸ್ ಕೇಂದ್ರವಾಗಿ ಹೈದ್ರಾಬಾದ್ ಬೆಳೆಯುತ್ತಿದ್ದು. 1977ರಲ್ಲಿ ಪ್ರಾರಂಭವಾದ ಆಂಧ್ರಪ್ರದೇಶ ಮೋಟರ್ ಸ್ಪೋರ್ಟ್ಸ್ ಕ್ಲಬ್ , ಡೆಕ್ಕನ್ 1/4 ಮೈಲ್ ಡ್ರ್ಯಾಗ್, ಟಿಎಸ್ ಡಿ ರಾಲಿಸ್, 4x4 ಆಫ್ ರೋಡ್‌ಗಳನ್ನು ಇತ್ತೀಚಿನ ದಿನಗಳಲ್ಲಿ ಸಂಘಟಿಸುತ್ತಿದ್ದು, ಭಾರತದ ಎಲ್ಲ ಮೂಲೆಗಳಿಂದ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ನಗರವು ಕುದುರೆ ರೇಸ್ ಗೆ ಕೂಡ ಪ್ರಸಿದ್ಧವಾಗಿದೆ. ನಿಜಾಮ್ ರೇಸ್ ಕ್ಲಬ್ ಎಂದು ಮೊದಲು ಕರೆಯಲ್ಪಡುತ್ತಿದ್ದ ಹೈದ್ರಾಬಾದ್ ರೇಸ್ ಕ್ಲಬ್ ಮಲಕಪೇಟ್ ನಲ್ಲಿದೆ. ವಿವಿಧ ರೀತಿಯ ಡರ್ಬಿ ಮತ್ತು ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಹೈದ್ರಾಬಾದ್ ರೇಸ್ ಕ್ಲಬ್ ದೇಶದ ಎಲ್ಲ ಮೂಲೆಗಳಿಂದ ಜಾಕಿಗಳನ್ನು ಆಕರ್ಷಿಸುತ್ತಿದೆ. ಡೆಕ್ಕನ್ ಡರ್ಬಿಯು ಪ್ರತಿವರ್ಷ ನಡೆಯುವ ವಿಶಿಷ್ಟವಾದ ಸ್ಪರ್ಧೆಯಾಗಿದೆ. ಇತ್ತೀಚೆಗಷ್ಟೆ ವಿಂಟರ್ ರೇಸ್ ಗಳನ್ನು ಕೂಡ ಸಂಘಟಿಸಲಾಗಿತ್ತು. ಕೋಟ್ಲಾದ ವಿಜಯ ಭಾಸ್ಕರ್ ರೆಡ್ಡಿ ಮತ್ತು ಗಾಚಿಬೌಳಿ ಸ್ಟೇಡಿಯಂನಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಮತ್ತು ಸ್ಥಳೀಯ ಉದ್ಯಾನಗಳಲ್ಲಿ ಯುವಕರು ಮತ್ತು ಹಿರಿಯರಿಂದ ಆಡಲ್ಪಡುತ್ತದೆ.
ಪ್ರವಾಸಿ ಆಕರ್ಷಣೆಯ ಸ್ಥಳಗಳು
[ಬದಲಾಯಿಸಿ]thumb|ಚೌಮಹಲ್ಲಾ ಅರಮನೆ
- ಬಿರ್ಲಾ ಮಂದಿರ್, ಇದೊಂದು ವೆಂಕಟೇಶ್ವರ ಸ್ವಾಮಿ ದೇವಸ್ಥಾನವಾಗಿದ್ದು, ನಗರದ ಮಧ್ಯಭಾಗದಲ್ಲಿದೆ ಮತ್ತು ಇದನ್ನು ಸಂಪೂರ್ಣವಾಗಿ ಬಿಳಿ ಅಮೃತಶಿಲೆಗಳಲ್ಲಿ ಕಟ್ಟಲಾಗಿದೆ.
- ಮೆಕ್ಕಾ ಮಸೀದಿ - ಇದು ಅತ್ಯಂತ ಹಳೆಯ ಮಸೀದಿಗಳಲ್ಲಿ ಒಂದು. ಇದು ಹೈದರಾಬಾದ್‌ನ ಅತಿದೊಡ್ಡ ಮಸೀದಿ.
- ಚಾರ್ಮಿನಾರ್ - ನಗರದ ದಕ್ಷಿಣ ಭಾಗದಲ್ಲಿರುವ ನಾಲ್ಕು ಆಕರ್ಷಕವಾದ ಮಸೀದಿ ಸ್ತಂಭ ಗೋಪುರಗಳು ನೆಲೆಗೊಂಡಿರುವ ಇದು ಹೈದರಾಬಾದ್‌ನ ಪ್ರಮುಖ ಹೆಗ್ಗುರುತಾಗಿದೆ. ಇದನ್ನು ಹೈದರಾಬಾದ್ ಸಂಸ್ಥಾಪಕ ಮೊಹಮದ್ ಕ್ವಲಿ ಕುತ್‌ಬ್ ಷಾನು ಪ್ಲೇಗ್ ಎಂಬ ಸಾಂಕ್ರಾಮಿಕ ರೋಗ ಪಿಡುಗಿನ ಅಂತ್ಯವನ್ನು ಗುರುತಿಸಲು ಮತ್ತು ಹುಸೇನ್‌ಗೆ ಶ್ಲಾಘನೆ ಮಾಡುವ ಸಲುವಾಗಿ ಕಟ್ಟಿಸಿದನು. ಇದು ಚಾರ್‌ಮೀನಾರ್ ಸ್ಮಾರಕ ಕಟ್ಟಡದ ಎಲ್ಲಾ ನಾಲ್ಕು ದಾರಿಗಳಲ್ಲಿರುವ ರಸ್ತೆಗಳಿಗೆ ನಾಲ್ಕು ಕಮಾನು ಹಾದಿಗಳು ಮಾರ್ಗದರ್ಶನ ಮಾಡುವಂಥ ಚರ್ಕಮನ್‌ನ ಮಧ್ಯದಲ್ಲಿದೆ.
- ಚೌಮಹಲ್ಲಾ ಅರಮನೆ- ಇದು ಆಸಫ್ ಜಹಿ ರಾಜವಂಶದ ಆಸನವಾಗಿತ್ತು, ಅಲ್ಲಿ ನಿಜಾಮ್ ತನ್ನ ಅಧಿಕಾರಿ ಬಂಧುಗಳು ಮತ್ತು ರಾಜತಾಂತ್ರಿಕರಿಗೆ ಮನರಂಜನೆ ನೀಡುತ್ತಿದ್ದ. ನಿಜಾಮ್‌ನು ಸಲಾಬತ್ ಜಂಗ್ ಅನ್ನು 1750ರಲ್ಲಿ ಪ್ರಾರಂಭಿಸಿದ ಮತ್ತು ಅದನ್ನು ಈಸ್ಫಾಹನ್‌ನಲ್ಲಿ ಷಾನ ಅರಮನೆ ಸಾಲುಗಳ ಜೊತೆಗೆ ವಿನ್ಯಾಸಗೊಳಿಸಿದ. ಅದು ದರ್ಬಾರ್ ಹಾಲ್‌ನಂತೆ ಪ್ರತಿಯೊಂದನ್ನು ಬಳಸಿರುವ ಅರಮನೆಗಳ ಸಮೂಹವನ್ನು ಒಳಗೊಂಡಿದೆ. ಇದನ್ನು ಆಕರ್ಷಕವಾಗಿ ಮತ್ತೆ ಹೊಸದಾಗಿ ರೂಪಿಸಲಾಗಿದೆ ಮತ್ತು ಇದು ಸಮ್ಮೇಳನಗಳಿಗೂ ಸಹ ನಿಶ್ಚಿತ ಸ್ಥಳವಾಗಿದೆ.
- ಫಾಲಕ್ನುಮಾ ಅರಮನೆ -ಇದನ್ನು ಪೈಗ್ ನೊಬೆಲ್ ವಿಜೇತನಾದ ನವಾಬ್ ವಿಕ್ವಾರ್ ಆಲ್-ಉಮ್ರಾ ಇಟಾಲಿಯನ್ ವಾಸ್ತುಶಿಲ್ಪ ಕಲೆಯಲ್ಲಿ ನಿರ್ಮಿಸಿದ. ಇದಕ್ಕೆ ಸಂಪೂರ್ಣವಾಗಿ ಇಟಾಲಿಯನ್ ಅಮೃತಶಿಲೆ ಬಳಸಲಾಗಿದೆ.
ಇದು ತುಂಬಾ ಸುಂದರವಾಗಿದೆ ಹಾಗೂ ಇಟಾಲಿಯನ್ ಅಮೃತಶಿಲೆ ಹಾಕಿದ ಮೆಟ್ಟಿಲುಗಳು ಮತ್ತು ಅಲಂಕೃತ ನೀರಿನ ಬುಗ್ಗೆಗಳನ್ನು ಹೊಂದಿರುವ ಲ್ಯಾವಿಶ್ ಮೊಘಲ್ ಪರಿಸರವನ್ನು ಲೂಯಿಸ್ XIV-ಶೈಲಿಯಲ್ಲಿ ಅಲಂಕೃತವಾಗಿಸಿರುವ ವಾಸ್ತುಶಿಲ್ಪ ಕಲೆಯ ತುಣುಕು ಬೆರಗುಗೊಳಿಸುತ್ತದೆ. ಹೆರಿಟೇಜ್ ಹೋಟೆಲ್ ಆಗಿ ಇದನ್ನು ಅಭಿವೃದ್ಧಿ ಪಡಿಸಲು ಈಗ ಇದು ತಾಜ್ ಸಮೂಹದ ಅಧೀನದಲ್ಲಿದೆ.
- ಗೊಲ್ಕೊಂಡಾ ಕೋಟೆ - ಗೊಲ್ಕೊಂಡಾ ಕೋಟೆಯು ಭಾರತದ ಅತ್ಯಂತ ಮಹತ್ವದ ಕೋಟೆ ಸಂಕೀರ್ಣಗಳಲ್ಲಿ ಒಂದು. ಬೆಟ್ಟದ ಒಂದು ಕಡೆಯಲ್ಲಿ ನೆಲೆಗೊಂಡಿದೆ ಮತ್ತು ಇತರ ಕಡೆಗಳಲ್ಲಿ ಕೋಟೆ ಸುರುಳಿಯಾಕಾರದಲ್ಲಿದೆ. ಇದರ ಸ್ಥಳ ಮತ್ತು ಆಂತರಿಕ ವಿನ್ಯಾಸವು ಇದನ್ನು ವಿಶ್ವದ ಬೃಹತ್ ಕೋಟೆಗಳಲ್ಲಿ ಒಂದಾಗಿ ಮಾಡಿದೆ.
- ಹುಸೈನ್ ಸಾಗರ್ - ಹಜ್ರತ್ ಹುಸೈನ್ ಷಾ ವಾಲಿಯಿಂದ ನಿರ್ಮಿಸಲ್ಪಟ್ಟ ಮಾನವ-ನಿರ್ಮಿತ ಜಲಾಶಯವಾಗಿದೆ. ಇದು ನಗರದ ಹೃದಯಭಾಗದಲ್ಲಿದೆ ಮತ್ತು ಇದು ಕೆರೆಯ ಮಧ್ಯದಲ್ಲಿರುವ ರಾಕ್ ಆಫ್ ಗಿಬ್ರಲ್ಟರ್ ಎಂದು ಕರೆಯುವ ದ್ವೀಪ ದಿಬ್ಬದಲ್ಲಿ 19-ಮೀಟರ್ ಉದ್ದದ ಬುದ್ಧ ಪ್ರತಿಮೆಯನ್ನು ಹೊಂದಿದೆ. ಇದರ ದಡದಲ್ಲಿ ಅಣೆಕಟ್ಟು ಇದ್ದು, ಇದು ಸುಂದರ ಉದ್ಯಾನಗಳನ್ನು ಮತ್ತು ಪ್ರಸಿದ್ಧ ವ್ಯಕ್ರಿಗಳ ಪ್ರತಿಮೆಗಳನ್ನು ಒಳಗೊಂಡಿದೆ.
- ಹೈದ್ರಾಬಾದ್ ಮುತ್ತುಗಳು - ಹೈದ್ರಾಬಾದ್ ಯಾವಾಗಲೂ “ಮುತ್ತುಗಳ ನಗರ” ಎಂದು ಕರೆಸಿಕೊಳ್ಳುತ್ತದೆ, ಆದರೂ ಇದು ಸಮುದ್ರದಿಂದ ದೂರದಲ್ಲಿದೆ. ಹೈದ್ರಾಬಾದ್‌ನ ಪತೇರ್‌ಗಟ್ಟಿ ಮುತ್ತಿನ ಮಾರುಕಟ್ಟೆಗೆ ಹೆಚ್ಚು ಜನಪ್ರಿಯವಾಗಿದೆ.
- ನೆಕ್ಲೆಸ್ ರಸ್ತೆ - ಇದು ಸರೋವರದ ಪಕ್ಕದಲ್ಲಿರುವ ಪ್ರಮುಖ ವಿಶಾಲ ರಸ್ತೆ ಸಾಲುಗಳಾಗಿವೆ. ಇದು ಐಮ್ಯಾಕ್ ಚಿತ್ರಮಂದಿರ ಮತ್ತು ಸಂಜೀವಯ್ಯ ಉದ್ಯಾನವನ ಅನ್ನು ಸಂಪರ್ಕಿಸುತ್ತದೆ. ಇದು ಹೈದರಾಬಾದ್ ಜನರಿಗೆ ಸಂಜೆ ವೇಳೆಯಲ್ಲಿ ಪ್ರಮುಖ ಸ್ಥಳವಾಗಿದೆ. ಈ ಪಟ್ಟೆಯು ಸೊಂಪಾದ ಹುಲ್ಲುಹಾಸುಗಳು ಮತ್ತು ಹೂವಿನ ಮಡಿಗಳ ಉದ್ದದ ಸಾಲುಗಳನ್ನು ಹೊಂದಿರುವ ದೃಶ್ಯ ವಾತಾವರಣವನ್ನು ಒದಗಿಸುತ್ತದೆ. ಈ ಸ್ಟ್ರಿಪ್ (ಪಟ್ಟೆ, ಸಾಲು)ನಲ್ಲಿ ಈಟ್-ಸ್ಟ್ರೀಟ್, ವಾಟರ್ ಫ್ರಾಂಟ್‌ಗಳು ಪ್ರಸಿದ್ಧ ರೆಸ್ಟೊರೆಂಟ್‌ಗಳಾಗಿವೆ. ಜೊತೆಗೆ ಇತ್ತೀಚೆಗೆ ಈ ಸ್ಟ್ರೀಪ್ ಜಲವಿಹಾರವಾಗಿದೆ, ಈ ಕಡಿಮೆ ನೀರಿನ ಪ್ರಪಂಚವನ್ನು ನಿಮ್ಮ ಜ್ಞಾನೇಂದ್ರೀಯಗಳಿಗೆ ನೆಮ್ಮದಿಗೊಳಿಸುವಂತೆ ವಿನ್ಯಾಸ ಮಾಡಲಾಗಿದೆ. ಫಿವಿ ಘಾಟ್ ಅನ್ನು ಪಿವಿ ನರಸಿಂಹರಾವ್ ಸ್ಮರಣಾರ್ಥಕವಾಗಿ ನಿರ್ಮಿಸಲಾಗಿದೆ.
- ಕುತಬ್ ಷಾಹಿ ಗೋರಿಗಳು - ಕುತಬ್ ಷಾಹಿ ರಾಜವಂಶದ ಆಡಳಿತಗಾರರಿಗೆ ಮೀಸಲಿಟ್ಟ ವಿವಿಧ ಗೋರಿಗಳ ತಾಣವಾಗಿದೆ, ಇದು ಗೊಲ್ಕೊಂಡ ಕೋಟೆ ಸಮೀಪದ ಶೈಕ್‍ಪೆಟ್‌ನಲ್ಲಿದೆ. ಇವು ದೊಡ್ಡ ಮಸೀದಿ ಸ್ತಂಭ ಗೋಪುರಗಳು, ಬೃಹತ್ ಮಹಲುಗಳು, ಸೂಕ್ಷ್ಮ ಅಮೃತಶಿಲೆ ವಿನ್ಯಾಸಗಳು ಮತ್ತು ಬಹುವಿಧ ಒಳಾಂಗಣ ಮಾರ್ಗಗಳಿಗೆ ಹೆಸರುವಾಸಿಯಾದ ಡೆಕ್ಕನ್ ವಾಸ್ತುಶಿಲ್ಪದ ಉದಾಹರಣೆಗಳಾಗಿವೆ.
- ರಾಮೋಜಿ ಫಿಲ್ಮ್ ಸಿಟಿ (RFC) -ಇದು ಸುಮಾರು 3,000 ಎಕರೆಗಳಲ್ಲಿ (8 km²) ಪ್ರಪಂಚದ ಅತಿದೊಡ್ಡ ಸಂಘಟಿತ ಫಿಲ್ಮ್ ಸ್ಟುಡಿಯೋ ಮತ್ತು ಥೀಮ್ ಉದ್ಯಾನವನ ಆಗಿದೆ. ಇದು ಏಷ್ಯಾದ ಅತ್ಯಂತ ಜನಪ್ರಿಯ ಪ್ರವಾಸೋದ್ಯಮ ಮತ್ತು ಮನರಂಜನಾ ಕೇಂದ್ರಗಳಲ್ಲಿ ಸಹ ಒಂದಾಗಿದೆ. ಇದು ವಿಶ್ವದ ಅತಿದೊಡ್ಡ ಫಿಲ್ಮ್ ಸ್ಟುಡಿಯೋ ಎಂಬ ಕಾರಣಕ್ಕೆ ಇತ್ತೀಚೆಗೆ, ಇದನ್ನು ವಿಶ್ವದ ಗಿನ್ನಿಸ್ ಪುಸ್ತಕ ದಾಖಲೆಗೆ ಸೇರಿಸಲಾಗಿದೆ. ಇದನ್ನು 1996 ರಲ್ಲಿ ಉದ್ಘಾಟಿಸಲಾಯಿತು, ವಿಜಯವಾಡ ಮುಖ್ಯರಸ್ತೆಯ ಹೈದ್ರಾಬಾದ್‌ನಿಂದ ಇಲ್ಲಿಗೆ ಕೇವಲ 20 ನಿಮಿಷದ ಪ್ರಯಾಣ.
- ಸಲಾರ್ ಜಂಗ್ ವಸ್ತು ಸಂಗ್ರಹಾಲಯ - ಈ ವಸ್ತುಸಂಗ್ರಹಾಲಯ ವಿಶ್ವದ ಅತಿ ದೊಡ್ಡ ಪುರಾತನ ಅವಶೇಷಗಳ ಏಕ-ವ್ಯಕ್ತಿ ಸಂಗ್ರಹವಾಗಿದೆ. ಸಂಗ್ರಹಗಳು ದ ವೆಯಿಲ್ಡ್ ರೆಬೆಕಾ ವನ್ನು ಮತ್ತು ಕಳೆದ ಶತಮಾನಗಳ ಸಾಧನಗಳ ದೊಡ್ಡ ಸಂಗ್ರಹವನ್ನು ಹೊಂದಿವೆ. ಈ ಸಂಪೂರ್ಣ ವಸ್ತುಸಂಗ್ರಹಾಲಯವನ್ನು ಸುತ್ತಲು ಒಂದು ದಿನ ಸಾಕಾಗುವುದಿಲ್ಲ.
- ಲುಂಬಿನಿ ಉದ್ಯಾನವನ - ಲುಂಬಿನಿ ಉದ್ಯಾನವನವು 7.5 ಎಕರೆಗಳ (0.030 km2; 0.0117 sq mi) ಸಣ್ಣದಾದ ಸಾರ್ವಜನಿಕ ನಗರ ಉದ್ಯಾನವಾಗಿದೆ. ಇದು ನೆಕ್ಲೆಸ್ ರಸ್ತೆಯಲ್ಲಿರುವ ಹುಸೈನ್ ಸಾಗರ್ ಜಲಾಶಯದ ಸಮೀಪದಲ್ಲಿದೆ. ಇದು ಬೃಹತ್ ಪ್ರವಾಸಿ ಆಕರ್ಷಣೀಯ ಸ್ಥಳವಾಗಿದೆ. 2000 ರಿಂದ ಬುದ್ಧ ಪೂರ್ಣಿಮಾ ಯೋಜನಾ ಪ್ರಾಧಿಕಾರ ಇದನ್ನು ನಡೆಸಿಕೊಂಡು ಬರುತ್ತಿದೆ.[೭೧] ಆಗಸ್ಟ್ 25, 2007ರಂದು 44 ಜನರನ್ನು ಕೊಂದಂತಹ ಒಂದು ಭೀಕರ ಭಯೋತ್ಪಾದಕ ಚಟುವಟಿಕೆ ನಡೆದ ಸ್ಥಳ ಇದಾಗಿದೆ [೭೨][೭೩]
ಜಂಟಿ/ಸಹೋದರಿ ನಗರಗಳು
[ಬದಲಾಯಿಸಿ]ಈ ವಿಭಾಗದಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (August 2009) |
- ದುಬೈ, ಯುಎಇ
- ಕಾಜನ್, ರಷಿಯಾ
- ಮೆಡೆಲಿನ್, ಕೊಲಂಬಿಯಾ
- ಮುನಿಕ್, ಜರ್ಮನಿ
- ರಿವರ್ಸೈಡ್, ಕ್ಯಾಲಿಫೊರ್ನಿಯಾ, ಯುನೈಟೆಡ್ ಸ್ಟೇಟ್ಸ್[೭೪]
- ಸುವಾನ್, ಸೌತ್ ಕೊರಿಯಾ
- ತೈಪಿ, ತೈವಾನ್
- ಸಿಕಂದ್ರಾಬಾದ್, ಆಂಧ್ರಪ್ರದೇಶ್, ಭಾರತ
ಇದನ್ನೂ ಗಮನಿಸಿ
[ಬದಲಾಯಿಸಿ]- ಹೈದರಾಬಾದ್ ಜನರ ಪಟ್ಟಿ
- ಹೈದರಾಬಾದ್‌ನ ಪ್ರವಾಸಿ ಆಕರ್ಷಣೀಯ ಸ್ಥಳಗಳ ಪಟ್ಟಿ
- ಹೈದರಾಬಾದ್ ರಾಜ್ಯ
- ಭಾರತದಲ್ಲಿ ಮಿಲಿಯನ್ಗಿಂತಲೂ ಅಧಿಕ ನಗರಗಳ ಪಟ್ಟಿ
ಆಕರಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ಹೈದರಾಬಾದ್‌ನಗರ ಜನಸಂಖ್ಯೆ Archived 2006-11-17 ವೇಬ್ಯಾಕ್ ಮೆಷಿನ್ ನಲ್ಲಿ. ವರ್ಲ್ಡ್ ಗೆಜೆಟೀರ್. 2009 ಜೂನ್ 29ರಂದು ಮರು ಸಂಪಾದಿಸಲಾಯಿತು.
- ↑ ಪ್ರಸಿದ್ಧ ಹೈದರಾಬಾದ್‌ನಗರ ಪಾಲಿಕೆ ಸಂಸ್ಥೆಯ ಏಳಿಗೆಯು ಗೃಹ ಬಾಡಿಗೆ ಅನುಮತಿ/ ಪರಿಹಾರ (ನಗರ) ಅನುಮತಿಯ ಉದ್ದೇಶಕ್ಕಾಗಿ ಎ-1 ವರ್ಗದ ನಗರದಂತಿದೆ" Archived 2008-04-08 ವೇಬ್ಯಾಕ್ ಮೆಷಿನ್ ನಲ್ಲಿ. ಹಣಕಾಸು ಇಲಾಖೆ. ಹಣಕಾಸು ಸಚಿವ ಸಂಪುಟ. 10 ಅಕ್ಟೋಬರ್. 2007
- ↑ "www.hudahyd.org/". Archived from the original on 2010-02-05. Retrieved 2010-01-29.
- ↑ International Telugu Institute (ತೆಲುಗು:Antarjātīya Telugu Saṃstha). "Telugu Vāṇi": 12.
{{cite journal}}
: Cite journal requires|journal=
(help) - ↑ "74.125.153.132/search?q=cache:AAuVO7d3cVMJ:www.hyderabadi.net/new/index.php%3Fview%3Darticle%26catid%3D1:latest-news%26id%3D1:history-of-hyderabad%26format%3Dpdf+Theories+explaining+the+origins+and+etymology+behind+Hyderabad's+name+differ.&cd=1&hl=en&ct=clnk&gl=in".[ಶಾಶ್ವತವಾಗಿ ಮಡಿದ ಕೊಂಡಿ]
- ↑ "Hyderabad's history could date back to 500 BC". Economic Times. Archived from the original on 2009-01-04. Retrieved 2008-09-10.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Olson, JS and R Shadle (1996). Historical Dictionary of the British Empire. Greenwood. p. 544. ISBN 0-31329-366-X.
- ↑ Aleem, S (1984). Developments in Administration Under H.E.H. the Nizam VII. Osmania University Press. p. 243.
- ↑ Bansal, SP (2007). Encyclopedia of India. Smriti. p. 61. ISBN 8-18796-771-4.
- ↑ ೧೦.೦ ೧೦.೧ Richards, J. F. (1975). "The Hyderabad Karnatik, 1687–1707". Modern Asian Studies. 9 (2): 241–260. doi:10.1017/S0026749X00004996.
- ↑ "Cities of India : Hyderabad".
- ↑ ೧೨.೦ ೧೨.೧ "www.indiaelections.co.in/lok-sabha-constituencies/andhra-pradesh/hyderabad/comment-page-1/".[ಶಾಶ್ವತವಾಗಿ ಮಡಿದ ಕೊಂಡಿ]
- ↑ ೧೩.೦ ೧೩.೧ "answers.yahoo.com/question/index?qid=20090603030920AA851z8". Archived from the original on 2021-04-29. Retrieved 2021-07-20.
- ↑ ಅಂಬೇಡ್ಕರ್ ಹೈದರಾಬಾದ್ ಭಾರತದ ಎರಡನೇ ರಾಜಧಾನಿ ಎಂದಿದ್ದರು
- ↑ "hyderabadonline.in/Profile/History/". Archived from the original on 2010-09-21. Retrieved 2010-01-29.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "fallingrain.com: Hyderabad".
- ↑ "www.iloveindia.com/travel/hyderabad/index.html".
- ↑ "www.thisismyindia.com/about_hyderabad/hyderabad-history.html".
- ↑ ೧೯.೦ ೧೯.೧ http://www.docstoc.com/docs/6180220/ಹೈದರಾಬಾದ್ __Andhra_Pradesh
- ↑ "answers.yahoo.com/question/index?qid=20090429080433AAjrK6S". Archived from the original on 2021-04-28. Retrieved 2021-07-20.
- ↑ Weatherbase. "Historical Weather for Hyderabad, India". Archived from the original on 2011-12-04. Retrieved 2008-10-03.
- ↑ Census of India Census of India does not have information from previous censuses on their site. Data from past censuses was obtained from World Gazetteer
- ↑ ಹೈದರಾಬಾದ್ ಮೆಟ್ರೋ ರೈಲು ಗಣತಿ Archived 2008-01-18 ವೇಬ್ಯಾಕ್ ಮೆಷಿನ್ ನಲ್ಲಿ. ವರ್ಲ್ಡ್ ಗೆಜೆಟೀರ್. 2009 ಜೂನ್ 29ರಂದು ಮರು ಸಂಪಾದಿಸಲಾಯಿತು.
- ↑ Khan, Masood Ali (August, 2004), "Muslim population in AP", The Milli Gazette
{{citation}}
: Check date values in:|date=
(help) - ↑ ೨೫.೦ ೨೫.೧ "www.docstoc.com/docs/6180223/Hyderabad__India".
- ↑ "GHMC comes into existence". The Hindu. Retrieved 2008-04-17.[ಶಾಶ್ವತವಾಗಿ ಮಡಿದ ಕೊಂಡಿ]
- ↑ "www.india.tm/php/show_distMore_wiki.php?state_name=Andhra%20Pradesh&district_id=56728&district_name=Hyderabad". Archived from the original on 2011-10-07. Retrieved 2010-01-29.
- ↑ ೨೮.೦ ೨೮.೧ "kkrchowdary.blogspot.com/2009/02/about-hyderabad.html".
- ↑ "hmdahyd.org/inside/pn_ejhuda.doc". Archived from the original on 2009-03-25. Retrieved 2010-01-29.
- ↑ "bhagyanagartimes.com/govt.php". Archived from the original on 2011-07-07. Retrieved 2010-01-29.
- ↑ "sandbproperties.com/".
- ↑ "The Genome Valley, Hyderabad". Archived from the original on 2016-03-08. Retrieved 2006-03-06.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "ಆರ್ಕೈವ್ ನಕಲು". Archived from the original on 2010-01-23. Retrieved 2010-01-29.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "ಆರ್ಕೈವ್ ನಕಲು". Archived from the original on 2009-05-15. Retrieved 2010-01-29.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "ಆರ್ಕೈವ್ ನಕಲು". Archived from the original on 2010-08-05. Retrieved 2010-01-29.
- ↑ "rickshawchallenge.com/route/tech-raid/hyderabad".
- ↑ "ಆರ್ಕೈವ್ ನಕಲು". Archived from the original on 2010-12-26. Retrieved 2021-08-09.
- ↑ "ಆರ್ಕೈವ್ ನಕಲು" (PDF). Archived from the original (PDF) on 2010-07-08. Retrieved 2010-01-29.
- ↑ "Report on IT exports of India". Archived from the original on 2009-11-30. Retrieved 2007-12-05.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ ೪೦.೦ ೪೦.೧ [81]
- ↑ APSRTC official web site "APSRTC". Retrieved 2006-08-29.
{{cite web}}
: Check|url=
value (help) - ↑ ೪೨.೦ ೪೨.೧ ೪೨.೨ "indiaforu.com/About%20Hyderabad.html". Archived from the original on 2010-10-06. Retrieved 2010-01-29.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "www.tvsventures.com/html/why-hyd.htm".
- ↑ "mountrose.in/hyd_transport.php". Archived from the original on 2011-07-21. Retrieved 2010-01-29.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "www.hindu.com/2006/06/21/stories/2006062121130300.htm". Archived from the original on 2011-05-06. Retrieved 2010-01-29.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "ಆರ್ಕೈವ್ ನಕಲು". Archived from the original on 2008-10-31. Retrieved 2010-08-08.
- ↑ "ಆರ್ಕೈವ್ ನಕಲು". Archived from the original on 2009-09-09. Retrieved 2010-01-29.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "ಆರ್ಕೈವ್ ನಕಲು". Archived from the original on 2010-10-29. Retrieved 2010-01-29.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ .http://www.indianexpress.com/news/hyderabad-airport-opening-spicejet-pips-luf/287558/
- ↑ "ಆರ್ಕೈವ್ ನಕಲು". Archived from the original on 2012-06-06. Retrieved 2010-01-29.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "ಆರ್ಕೈವ್ ನಕಲು". Archived from the original on 2010-08-18. Retrieved 2010-01-29.
- ↑ http://www.expressbuzz.com/edition/story.aspx?title=Expressway%20off-limits%20to%20the%20aam%20aadmi?&artid=RTgEA9tzokE=&type=[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಆರ್ಕೈವ್ ನಕಲು" (PDF). Archived from the original (PDF) on 2009-06-19. Retrieved 2010-01-29.
- ↑ "ಆರ್ಕೈವ್ ನಕಲು". Archived from the original on 2010-03-31. Retrieved 2010-01-29.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "ಆರ್ಕೈವ್ ನಕಲು". Archived from the original on 2010-01-14. Retrieved 2010-01-29.
- ↑ "www.merinews.com/catFull.jsp?articleID=144502". Archived from the original on 2009-07-20. Retrieved 2010-01-29.
- ↑ "ಆರ್ಕೈವ್ ನಕಲು". Archived from the original on 2007-03-29. Retrieved 2010-01-29.
- ↑ "ಆರ್ಕೈವ್ ನಕಲು". Archived from the original on 2010-08-11. Retrieved 2010-01-29.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "jannah.org/madina/index.php?topic=2944.0". Archived from the original on 2011-07-24. Retrieved 2010-01-29.
- ↑ "hyderabadmetrorail.com/Culture.html".[ಶಾಶ್ವತವಾಗಿ ಮಡಿದ ಕೊಂಡಿ]
- ↑ [116]
- ↑ ""Vice Chancellor's Speech about Osmania University"". Retrieved 2007-11-15.
- ↑ "www.orissalinks.com/archives/1583".
- ↑ "www.icm2010.org.in". Archived from the original on 2010-02-08. Retrieved 2010-01-29.
- ↑ [125]
- ↑ "www.bharat.co.in/about-hyd.html".
- ↑ "ahssan.wordpress.com/2009/02/04/amazing-hyderabad-the-wonders-within/". Archived from the original on 2011-07-18. Retrieved 2010-01-29.
- ↑ "letusknow.co.in/districts/hyd.html".[ಶಾಶ್ವತವಾಗಿ ಮಡಿದ ಕೊಂಡಿ]
- ↑ "sawaal.ibibo.com/hyderabad/about-stadiums-hyd-540175.html". Archived from the original on 2012-05-21. Retrieved 2010-01-29.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Olympian footballers remember 'Rahim Saab' on his birth centenary". Thaindian.com. 17 August 2009. Archived from the original on 18 ಅಕ್ಟೋಬರ್ 2009. Retrieved 29 ಜನವರಿ 2010.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "BBPA". Retrieved 2009-06-19.
- ↑ Syed Amin Jafri (25 August 2007). "Hyderabad: 42 killed, 50 injured in twin blasts". Rediff News. Retrieved 2009-06-19.
- ↑ Staff Reporter (Friday, 14 Jan 2005). "Trial run of laser show begins today". The Hindu - Online Edition of India's National Newspaper. Archived from the original on 2007-12-14. Retrieved 2009-06-19.
{{cite web}}
: Check date values in:|date=
(help); More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Riverside's Sister Cities". City of Riverside, California. 2009. Archived from the original on 16 ಮೇ 2012. Retrieved 5 August 2009.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: missing periodical
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- CS1 errors: redundant parameter
- CS1 errors: dates
- CS1 errors: URL
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಅಕ್ಟೋಬರ್ 2022
- Articles with invalid date parameter in template
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with unsourced statements from December 2009
- Articles needing additional references from August 2009
- All articles needing additional references
- Commons link is locally defined
- Commons category with local link different than on Wikidata
- ಹೈದರಾಬಾದ್, ಭಾರತ
- ಭಾರತದ ರಾಜಧಾನಿ ನಗರಗಳು
- ಆಂಧ್ರ ಪ್ರದೇಶದ ನಗರಗಳು ಮತ್ತು ಪಟ್ಟಣಗಳು
- ಭಾರತದ ಮಹಾನಗರಗಳು
- 1590ರಲ್ಲಿ ಸ್ಥಾಪಿಸಲಾದ ಜನಸಂದನಿಗಳು
- ಕ್ಯಾಲಿಫೊರ್ನಿಯಾದ ರಿವರ್ಸೈಡ್ನ ಸಹೋದರಿ ನಗರಗಳು
- ರಾಜಧಾನಿಗಳು
- ಭಾರತದ ರಾಜಧಾನಿ ಪಟ್ಟಣಗಳು
- ಆಂಧ್ರ ಪ್ರದೇಶ