ಖುಬಾನಿ ಕಾ ಮೀಠಾ
ಗೋಚರ
ಖುಬಾನಿ ಕಾ ಮೀಠಾ ಒಣಗಿಸಿದ ಜರ್ದಾಳುಗಳಿಂದ ತಯಾರಿಸಲಾದ ಒಂದು ಭಾರತೀಯ ಸಿಹಿ ತಿಂಡಿಯಾಗಿದೆ. ಇದು ಹೈದರಾಬಾದ್‍ನಲ್ಲಿ ಹುಟ್ಟಿಕೊಂಡಿತು.[೧] ಇದು ಹೈದರಾಬಾದಿ ಮದುವೆಗಳಲ್ಲಿ ಸಾಮಾನ್ಯ ವೈಶಿಷ್ಟ್ಯವಾಗಿದೆ.
ಖುಬಾನಿ ಕಾ ಮೀಠಾ ಹೈದರಾಬಾದಿ ಪಾಕಪದ್ಧತಿಯಲ್ಲಿ ಬಹಳ ಜನಪ್ರಿಯ ಡಿಜ಼ರ್ಟ್ ಆಗಿದೆ.
ಈ ಖಾದ್ಯದ ತಯಾರಿಕೆಯು ಗಟ್ಟಿಯಾದ ಸೂಪ್ ಅಥವಾ ಊರಿಟ್ಟ ಹಣ್ಣಿನ ಸಾಂದ್ರತೆ ಬರುವವರೆಗೆ ಪಾಕದಲ್ಲಿ ಜರ್ದಾಳುಗಳನ್ನು ಕುದಿಸುವುದನ್ನು ಒಳಗೊಳ್ಳುತ್ತದೆ.[೨] ಈ ಡಿಜ಼ರ್ಟ್‌ನ ಮೇಲೆ ಬೆಳ್ಕರಿಸಿದ ಬಾದಾಮಿಗಳು ಅಥವಾ ಜರ್ದಾಳುವಿನ ಮಧ್ಯದ ಭಾಗವನ್ನು ಉದುರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಮಲಾಯಿಯಿಂದ (ಹೆಚ್ಚು ಗಟ್ಟಿ ಕೆನೆ, ಸಾಧ್ಯವಾದಷ್ಟು ಎಮ್ಮೆ ಹಾಲಿನದ್ದು) ಮೇಲೆ ಅಲಂಕರಿಸಲಾಗುತ್ತದೆ, ಆದರೆ ಕಸ್ಟರ್ಡ್ ಅಥವಾ ಐಸ್ ಕ್ರೀಂನಿಂದಲೂ ಅಲಂಕರಿಸಬಹುದು.