ವಿಷಯಕ್ಕೆ ಹೋಗು

ಗುರು ಗೋಬಿಂದ್‌‌ ಸಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುರು ಗೋಬಿಂದ್ ಸಿಂಗ್ ਗੁਰੂ ਗੋਬਿੰਦ ਸਿੰਘ
An artist's impression, by Sobha Singh
ಜನನ
ಗೋಬಿಂದ್ ರಾಯ್[೧]

೨೨ ಡಿಸೆಂಬರ್ ೧೬೬೬
ಮರಣ7 October 1708(1708-10-07) (aged 42)
Known for10th Sikh Guru
TitleGuru Sahib of Sikhs
PredecessorGuru Tegh Bahadur
SuccessorGuru Granth Sahib and Guru Panth
ಸಂಗಾತಿ(s)Mata Jito a.k.a. Mata Sundari, Mata Sahib Dewan
ಮಕ್ಕಳುAjit Singh
Jujhar Singh
Zorawar Singh
Fateh Singh
ಪೋಷಕ(ರು)ಗುರು ತೇಗ್ ಬಹಾದೂರ್, ಮಾತಾ ಗುಜ್ರಿ

ಗುರು ಗೋಬಿಂದ್‌‌ ಸಿಂಗ್‌‌ ರವರು (ಪಂಜಾಬಿ:ਗੁਰੂ ਗੋਬਿੰਦ ਸਿੰਘ, ಟೆಂಪ್ಲೇಟು:IPA2) (೨೨ ಡಿಸೆಂಬರ್ ೧೬೬೬ – ೭ ಅಕ್ಟೋಬರ್ ೧೭೦೮) ಸಿಖ್‌‌ ಧರ್ಮದ ಹತ್ತನೇ ಗುರುವಾಗಿದ್ದರು. ಅವರು, ಭಾರತಬಿಹಾರ ರಾಜ್ಯದಲ್ಲಿನ ಪಾಟ್ನಾ ನಗರದಲ್ಲಿ ಜನಿಸಿದರು, ಹಾಗೂ ತಮ್ಮ ತಂದೆ ಗುರು ತೇಜ್‌‌ ಬಹದ್ದೂರ್‌‌‌ರ ಉತ್ತರಾಧಿಕಾರಿಯಾಗಿ ೧೧ ನವೆಂಬರ್‌ ೧೬೭೫ರಂದು ತನ್ನ ಒಂಬತ್ತು ವರ್ಷಗಳ ವಯಸ್ಸಿನಲ್ಲೇ ಗುರುವಾದರು. ಅವರು ವೀರಯೋಧ, ಕವಿ ಹಾಗೂ ತತ್ವ ಜ್ಞಾನಿ ಮಾತ್ರವಲ್ಲದೇ ಸಿಖ್‌‌ ಮತ/ಧರ್ಮದ ನಾಯಕರಾಗಿದ್ದರು. ಗುರು ಗೋಬಿಂದ್‌‌ ಸಿಂಗ್‌ರು‌ ಮಾನವತ್ವಕ್ಕೆ ಒಂದು ಪರಿಪೂರ್ಣ ಉದಾಹರಣೆಯಾಗಿದ್ದರು; ಉನ್ನತ ಶಿಕ್ಷಣ ಪಡೆದಿದ್ದ, ಕುದುರೆ ಸವಾರಿಯಲ್ಲಿ ನಿಷ್ಣಾತರಾಗಿದ್ದ, ಶಸ್ತ್ರಾಸ್ತ್ರಸಜ್ಜಿತ ಹೋರಾಟದಲ್ಲಿ ನಿಷ್ಣಾತ, ಶೌರ್ಯಪೂರಿತ, ಹಾಗೂ ಧಾರಾಳ ಸ್ವಭಾವದ ವ್ಯಕ್ತಿಯಾಗಿದ್ದರು.[೨]

ಇತಿವೃತ್ತ[ಬದಲಾಯಿಸಿ]

ಗುರು ಗೋಬಿಂದ್‌‌ ಸಿಂಗ್‌‌'ರ ಜೀವನ ಹಾಗೂ ಬೋಧನೆಗಳು ಸಿಖ್‌‌ ಸಿದ್ಧಾಂತ ಹಾಗೂ ಅದನ್ನು ಪಾಲಿಸುವವರ ದೈನಂದಿನ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಅವರು ಖಾಲ್ಸಾವನ್ನು ಸ್ಥಾಪಿಸಿದ್ದನ್ನು ಸಿಖ್‌‌ ಧರ್ಮದ ಇತಿಹಾಸದ ಬಹು ಪ್ರಮುಖ ಘಟನೆಗಳಲ್ಲೊಂದನ್ನಾಗಿ ಪರಿಗಣಿಸಲಾಗುತ್ತದೆ. ಅವರು ಇಪ್ಪತ್ತು ರಕ್ಷಣಾತ್ಮಕ ಮೊಘಲರು ಹಾಗೂ ಶಿವಾಲಿಕ್‌‌ ಪರ್ವತಶ್ರೇಣಿರಾಜರಂತಹಾ ಅವರ ಮಿತ್ರರಾಜ್ಯಗಳ ವಿರುದ್ಧ ಕಾಳಗ ಮಾಡಿದರು. ಗುರು ಗೋಬಿಂದ್‌‌ ಸಿಂಗ್‌‌ರವರು ಕೊನೆಯ ಮಾನವ ಸಿಖ್‌‌ ಗುರುವಾಗಿದ್ದರಲ್ಲದೇ; ಸಿಖ್‌‌ ಧರ್ಮದ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌‌ಅನ್ನು ೭ ಅಕ್ಟೋಬರ್‌‌ ೧೭೦೮ರಂದು, ತಮ್ಮ ನಂತರದ ಶಾಶ್ವತ ಸಿಖ್‌‌ ಗುರುವನ್ನಾಗಿ ಘೋಷಿಸಿದರು.

ಜೀವನ ಚರಿತ್ರೆ[ಬದಲಾಯಿಸಿ]

ಆರಂಭದ ದಿನಗಳು[ಬದಲಾಯಿಸಿ]

ಚಿತ್ರ:Guru Gobind Singh as a child.JPG
ಮಗು ಗೋಬಿಂದ್‌‌ ರಾಯ್‌‌ನನ್ನು ನೋಡಲು ಪೀರ್‌ ಭಿಖಾನ್‌‌ ಷಾಹ್‌ರು ಭೇಟಿ ನೀಡಿದ್ದನ್ನು ತೋರಿಸುವ ಚಿತ್ರ

ಗುರು ಗೋಬಿಂದ್‌‌ ಸಿಂಗ್‌‌ರು ಪಾಟ್ನಾದಲ್ಲಿ ಗುರು ತೇಜ್‌‌ ಬಹದ್ದೂರ್‌‌‌ ಹಾಗೂ ಅವರ ಪತ್ನಿ ಮಾತಾ ಗುಜ್ರಿಯವರ ಪುತ್ರನಾಗಿ ಗೋಬಿಂದ್‌‌ ರಾಯ್‌‌[೩] ಎಂಬ ಹೆಸರಿನಿಂದ ಜನಿಸಿದರು. ಅವರು ಗುರು ತೇಜ್‌‌ ಬಹದ್ದೂರ್‌‌‌ರವರು ತಮ್ಮ ಬೋಧನೆಗಳ ಪ್ರಸಾರಕ್ಕಾಗಿ ಅಸ್ಸಾಂನಲ್ಲಿ ಪ್ರವಾಸ ಮಾಡುತ್ತಿರುವಾಗ ಜನಿಸಿದರು.

ದಂತಕಥೆ/ಆಖ್ಯಾನ[ಬದಲಾಯಿಸಿ]

 • ದಂತಕಥೆ/ಆಖ್ಯಾನವೊಂದರ ಪ್ರಕಾರ, ಗೋಬಿಂದ್‌‌ ರಾಯ್‌‌ರ ಜನನದ ಬಗ್ಗೆ ಥಕ್ಸಾ ಗ್ರಾಮದ (ಈಗ ಹರಿಯಾಣಕರ್ನಾಲ್‌‌ ಜಿಲ್ಲೆಯಲ್ಲಿದೆ) ಫಕೀರರಾಗಿದ್ದ ಪೀರ್‌‌ ಭಿಕಾನ್‌ ಷಾಹ್‌‌ರವರು ಭವಿಷ್ಯ ನುಡಿದಿದ್ದರು. ಒಂದು ದಿನ, ಭಿಕಾನ್‌ ಷಾಹ್‌‌ರು ಪ್ರಾರ್ಥನೆಯ ಸಮಯದಲ್ಲಿ ಕ್ವಿಬ್ಲಾ-ಕಾಬಾದ ದಿಕ್ಕಿನ ಕಡೆ ಮಾತ್ರ ಬಾಗಿ ನಮಿಸಬೇಕಾದ ಮಹಮ್ಮದೀಯ ಮಾನಕ ಕಟ್ಟುನಿಟ್ಟಿಗೆ ವಿರುದ್ಧವಾಗಿ ಪೂರ್ವ ದಿಕ್ಕಿನ ಕಡೆ ಬಾಗಿ ನಮಿಸಿದ್ದರು.
 • ಅವರ ಈ ವಿಚಿತ್ರ ನಡೆಯ ಬಗ್ಗೆ ಗ್ರಾಮಸ್ಥರು ಅವರನ್ನು ಪ್ರಶ್ನಿಸಿದಾಗ, ಅವರು ದೇವರಿಂದ ಆಯ್ಕೆಯಾಗಿರುವ ಉದ್ಧಾರಕನ ಅವತಾರ ವಿಶೇಷ ಮಗುವೊಂದು ಪಾಟ್ನಾದಲ್ಲಿ ಜನಿಸಿದ್ದು, ಅದು ಪೂರ್ವದಿಕ್ಕಿನೆಡೆ ಮಲಗಿರುತ್ತದೆ ಎಂದು ಹೇಳುತ್ತಾರೆ. ಅವರು ಆನಂತರ ಪಾಟ್ನಾಗೆ ತಮ್ಮ ಅನುಯಾಯಿಗಳೊಂದಿಗೆ ಮಗುವನ್ನು ನೋಡಲು ಪ್ರಯಾಣಿಸುತ್ತಾರೆ. ಅವರು ಶಿಶುವಿನ ಮುಂದೆ ಎರಡು ಬಟ್ಟಲು ತುಂಬ ಸಿಹಿಯನ್ನಿಟ್ಟರು;
 • ಒಂದು ಬಟ್ಟಲನ್ನು ಓರ್ವ ಹಿಂದೂ'ವಿನ ಅಂಗಡಿಯಿಂದ, ಹಾಗೂ ಎರಡನೆಯದನ್ನು ಓರ್ವ ಮುಸ್ಲಿಮ'ನ ಅಂಗಡಿಯಿಂದ ಕೊಂಡಿರಲಾಗುತ್ತದೆ, ಅದರ ಮೂಲಕ ಭಾರತರ ಎರಡು ಪ್ರಮುಖ ಸಮಕಾಲೀನ ಧರ್ಮಗಳನ್ನು ಸೂಚಿಸಿರಲಾಗುತ್ತದೆ. ಮಗುವು ತನ್ನ ಕೈಗಳನ್ನು ಎರಡೂ ಬಟ್ಟಲುಗಳ ಮೇಲೆ ಇಟ್ಟು, ತಾನು ಹಿಂದೂಗಳು ಹಾಗೂ ಮುಸ್ಲಿಮರನ್ನು ಸಮಾನರಾಗಿ ಕಾಣುವುನೆಂದು ಸೂಚಿಸುತ್ತದೆ.
 • ಮತ್ತೊಂದು ದಂತಕಥೆ/ಆಖ್ಯಾಯಿಕೆಯ ಪ್ರಕಾರ, ಲಖ್ನೌರ್‌‌ನ (ಈಗಿನ ಅಂಬಾಲಾ ಜಿಲ್ಲೆಯಲ್ಲಿನ) ಅರಫ್‌ ದಿನ್‌‌ ಎಂಬ ಫಕೀರರು ಕೂಡಾ ಆ ಬಾಲಕನಿಗೆ ಬಾಗಿ ನಮಿಸಿದರಲ್ಲದೇ ಆತನನ್ನು ದೈವಿಕ ಪುರುಷನೆಂದು ಸಾರಿದ್ದರು. ಗೋಬಿಂದ್‌‌ ರಾಯ್‌‌ ತನ್ನ ಜೀವನದ ಮೊದಲ ಐದು ವರ್ಷಗಳನ್ನು ಪಾಟ್ನಾದಲ್ಲಿ ಕಳೆದರು. ಮಗುವಾಗಿದ್ದಾಗ, ಅವನು ಇತರೆ ಮಕ್ಕಳೊಂದಿಗೆ ನಾಯಕನಾಗಿ ನಕಲಿ ಯುದ್ಧದಾಟಗಳನ್ನು ಆಡುತ್ತಿದ್ದನು.
 • ಗುರುಗಳನ್ನು ಕರೆಯಲು ಈಗಲೂ ಬಳಕೆಯಲ್ಲಿರುವ ಹೆಸರಾದ ಗುರೂಜಿ ಬಾಲ ಪ್ರೀತಮ್‌‌ ("ಬಾಲ ದೇವರು") ಎಂದು ಆತನನ್ನು ಕರೆಯುತ್ತಿದ್ದ ಓರ್ವ ವಿದ್ವತ್ಪೂರ್ಣ ಬ್ರಾಹ್ಮಣನಾದ ಪಂಡಿತ್‌‌ ಶಿವ ದತ್ತರೂ ಸೇರಿದಂತೆ ಆತನಿಗೆ ಅನೇಕ ಅಭಿಮಾನಿ/ಪ್ರಶಂಸಕರಿದ್ದರು. ಒಮ್ಮೆ ಮಕ್ಕಳಿಲ್ಲದ ದಂಪತಿಗಳಾದ ಪಾಟ್ನಾದ ರಾಜ ಫತೇಹ್‌ ಚಂದ್‌ ಹಾಗೂ ಆತನ ರಾಣಿ, ಶಿವ ದತ್ತರನ್ನು ಭೇಟಿ ಮಾಡಿ ತಮಗೆ ಮಗುವಾಗುವಂತೆ ಆಶೀರ್ವದಿಸಬೇಕೆಂದು ಕೇಳಿಕೊಂಡರು.
 • ಶಿವ ದತ್ತ ಅವರು ಬಾಲ ಪ್ರೀತಮ್‌ ರ ಆಶೀರ್ವಾದವನ್ನು ಪಡೆದರೆ ಅವರ ಇಷ್ಟಾರ್ಥಗಳು ಪೂರೈಸುತ್ತವೆಂದು ಸಲಹೆ ನೀಡಿದರು. ಆಗ ದಂಪತಿಗಳು ಬಾಲಕ ಗೋಬಿಂದ್‌‌ ರಾಯ್‌‌ರಿಗೆ ತಮ್ಮ ಅರಮನೆಗೆ ಭೇಟಿ ನೀಡಲು ಕೇಳಿಕೊಂಡರು, ಅಲ್ಲಿ ರಾಣಿಯು ಗುರೂಜಿಗಳನ್ನು ತನಗೆ ಪುತ್ರನನ್ನು ಕರುಣಿಸುವಂತೆ ಕೋರಿದಳು. ಗುರೂಜಿ ನಸುನಗೆ ಬೀರಿ ಅವರಿಗೆ ಮಗನೇಕೆ ಬೇಕು, ರಾಣಿಯು ಆತನನ್ನೇ ತನ್ನ ಮಗನೆಂದು ಕರೆಯಬಹುದೆಂದು ಹೇಳಿದರು.
 • ಅಂದಿನಿಂದ, ರಾಣಿಯು ಆತನನ್ನೇ ತನ್ನ ಮಗನೆಂದು ಕರೆಯಲುತೊಡಗಿದಳು. ರಾಜದಂಪತಿಗಳು ಪುನೀತರಾದರು - ಗುರೂಜಿ ಬಹುತೇಕ ಪ್ರತಿದಿನ ಅವರನ್ನು ಭೇಟಿ ಮಾಡುತ್ತಿದ್ದರಲ್ಲದೇ ಅನೇಕ ವೇಳೆ ತನ್ನ ಸ್ನೇಹಿತರೊಡನೆ ಅವರ ಅರಮನೆಯಲ್ಲೇ ಆಟವಾಡಲು ತೊಡಗಿದರು. ರಾಣಿಯು ಪೂರಿಯ ಊಟ (ಒಂದು ವಿಧದ ಭಾರತೀಯ ತಿನಿಸು/ಬ್ರೆಡ್‌/ರೊಟ್ಟಿ) ಹಾಗೂ ಉದ್ದಿನಕಾಳುಗಳನ್ನು ಪ್ರತಿದಿನ ಗುರೂಜಿಗಳು ಹಾಗೂ ಅವರ ಯುದ್ಧದಾಟ ಆಡುವ ಮಿತ್ರರಿಗೆ ಸಿದ್ಧಪಡಿಸಿಡುತ್ತಿದ್ದಳು.
 • ಇಂದಿಗೂ ಪೂರಿ ಹಾಗೂ ಉದ್ದಿನಕಾಳುಗಳ ಊಟವನ್ನು ಗುರುದ್ವಾರ (ಸಿಖ್‌‌ ಪವಿತ್ರ ಸ್ಥಾನ/ದೇವಳ)ವಾಗಿ ಪರಿವರ್ತಿತವಾಗಿರುವ ಅವರ ಅರಮನೆಯ ಲಂಗರ್‌ನಲ್ಲಿ (ಮುಕ್ತ ಅಡಿಗೆಮನೆ) ಸಿದ್ಧಪಡಿಸಲಾಗುತ್ತದೆ.ಬಾಲಕನ ಇತರೆ ಅಭಿಮಾನಿಗಳಲ್ಲಿ ಮಗುವಿಗೆ ಗ್ರಾಮವೊಂದನ್ನು ಹಾಗೂ ಉದ್ಯಾನಗಳನ್ನು ದಾನ ಮಾಡಿದ ಕರೀಮ್‌ ಬಕ್ಷ್‌‌ ಹಾಗೂ ರಹೀಂ ಬಕ್ಷ್‌‌‌‌ ಎಂಬ ಇಬ್ಬರು ನವಾಬರು ಸೇರಿದ್ದಾರೆ.

ಆನಂದಪುರ್‌‌/ರದಲ್ಲಿನ ವಾಸ[ಬದಲಾಯಿಸಿ]

 • ಗುರು ತೇಜ್‌‌ ಬಹದ್ದೂರ್‌‌‌ ಬಿಲಾಸ್‌‌ಪುರ್‌‌/ರದ (ಕಹ್ಲೂರ್‌‌/ರ) ಅರಸನಿಂದ ಕೊಂಡುಕೊಂಡ ಭೂಪ್ರದೇಶದಲ್ಲಿ ಆನಂದಪುರ್‌‌/ರ ಸಾಹಿಬ್‌ ನಗರವನ್ನು 1665ನೇ ಇಸವಿಯಲ್ಲಿ ಸ್ಥಾಪಿಸಿದ್ದರು. ಭಾರತದ ಪೂರ್ವಭಾಗಗಳ ತಮ್ಮ ಪ್ರವಾಸ ಕೊನೆಗೊಂಡ ನಂತರ, ಅವರು ತಮ್ಮ ಕುಟುಂಬವನ್ನು ಆನಂದಪುರ್‌‌/ರಕ್ಕೆ ಕರೆಸಿಕೊಂಡರು. ಗೋಬಿಂದ್‌‌ ರಾಯ್‌‌ ಶಿವಾಲಿಕ್‌‌ ಪರ್ವತಶ್ರೇಣಿಯ ತಪ್ಪಲಿನ/ಅಡಿಗುಡ್ಡದಲ್ಲಿರುವ (ಆಗ ಚಾಕ್‌ ನಾನಕಿ ಎಂಬ ಹೆಸರಿನ) ಆನಂದಪುರ್‌‌/ರವನ್ನು ಮಾರ್ಚ್‌ 1672ರಲ್ಲಿ ತಲುಪಿದರು.
 • ಗೋಬಿಂದ್‌‌ ರಾಯ್‌‌'ರ ಮೊದಲಿನ ಶಿಕ್ಷಣವು ಪಂಜಾಬೀ, ಬ್ರ/ವ್ರಜ್‌, ಸಂಸ್ಕೃತ, ಪರ್ಷಿಯನ್‌ ಹಾಗೂ ಅರೇಬಿಕ್‌ ಭಾಷೆಗಳ ಅಧ್ಯಯನ ಹಾಗೂ ಯೋಧನಾಗುವ ತರಬೇತಿಯನ್ನೊಳಗೊಂಡಿತ್ತು. ಅವರು ಹಿಂದಿ ಹಾಗೂ ಸಂಸ್ಕೃತ ಭಾಷೆಗಳನ್ನು ಪಾಟ್ನಾದಲ್ಲಿ ರುವಾಗಲೇ ಅಧ್ಯಯನ ಮಾಡಲು ಆರಂಭಿಸಿದ್ದರು. ಆನಂದಪುರ್‌‌/ರದಲ್ಲಿ, ಅವರು ಸಾಹಿಬ್‌ ಚಂದ್‌‌ರ ಮಾರ್ಗದರ್ಶನದಲ್ಲಿ ಪಂಜಾಬೀ, ಹಾಗೂ ಖಾಜಿ ಪೀರ್‌ ಮೊಹಮ್ಮದ್‌‌ರವರ ಮಾರ್ಗದರ್ಶನದಲ್ಲಿ ಪರ್ಷಿಯನ್‌ ಭಾಷೆಗಳನ್ನು ಅಧ್ಯಯನ ಮಾಡಲಾರಂಭಿಸಿದರು.
 • ಓರ್ವ ರಜಪೂತ ವೀರಯೋಧನನ್ನು ಯುದ್ಧಕೌಶಲಗಳನ್ನು ಹಾಗೂ ಕುದುರೆ ಸವಾರಿಗಳಲ್ಲಿ ತರಬೇತಿ ನೀಡಲು ನೇಮಿಸಲಾಯಿತು. 1675ರಲ್ಲಿ, ಮಹಮ್ಮದೀಯ ಮೊಘಲ್‌ ಅರಸರ ಉಪದ್ರವದ ವಿರುದ್ಧ ಹೋರಾಡಲು ಗುರು ತೇಜ್‌‌ ಬಹದ್ದೂರ್‌‌‌'ರ ನೆರವನ್ನು ಕೋರಿಕೊಳ್ಳಲು ಮಟ್ಟನ್‌ (ಮಾರ್ತಾಂಡ್ಯ) ನಗರದ ಪಂಡಿತ್‌‌/ತ ಕಿರ್‌ಪಾ/ಕೃಪಾ ರಾಮ್‌ ನೇತೃತ್ವದಲ್ಲಿ ಕೆಲ ಕಾಶ್ಮೀರಿ ಪಂಡಿತರು ಆನಂದಪುರ್‌‌/ರಕ್ಕೆ ಭೇಟಿ ನೀಡಿದರು.
 • ಗುರು ತೇಜ್‌‌ ಬಹದ್ದೂರ್‌‌‌ ಚಕ್ರವರ್ತಿ ಔರಂಗಜೇಬ್‌‌‌'ನ ಮುಸ್ಲಿಮರಲ್ಲದವರ ಬಗೆಗಿನ ರಾಜನೀತಿಯ ಬಗ್ಗೆ ಚರ್ಚಿಸಲು ಮೊಘಲರ ರಾಜಧಾನಿ ದೆಹಲಿಗೆ ಪ್ರಯಾಣ ಬೆಳೆಸಿದರು. ಚಕ್ರವರ್ತಿಯು ಮೊದಲಿಗೇ ಗುರು'ಗಳ ಪ್ರಭಾವವು ಅಪ್ರಿಯವಾದುದೆಂದು ತೋರಿಸಿಕೊಂಡುದುದಲ್ಲ ದೇ ಹಾಗೂ ಬಹಿರಂಗವಾಗಿಯೇ ಅವರ ಉಪಸ್ಥಿತಿಯ ಬಗ್ಗೆ ಪ್ರತಿಕೂಲವಾಗಿ ನಡೆದುಕೊಂಡನು. ಇಸ್ಲಾಮಿಗೆ ಮತಾಂತರಗೊಳ್ಳಲು ನಿರಾಕರಿಸಿದ್ದರಿಂದ 11 ನವೆಂಬರ್‌ 1675ರಂದು ಚಾಂದನಿ ಚೌಕ್‌ ಎಂಬಲ್ಲಿ ಗುರು ತೇಜ್‌‌ ಬಹದ್ದೂರ್‌‌‌ರ ಶಿರಚ್ಛೇದ ಮಾಡಲಾಯಿತು.
 • ಅವರ ತಲೆಯನ್ನು ಸಾರ್ವಜನಿಕ ಸಂಧಿಸ್ಥಳದಲ್ಲಿ ಇಟ್ಟು ಔರಂಗಜೇಬ್‌‌'ನ ಕಾರ್ಯನೀತಿಗಳಿಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುವುದಕ್ಕೆ ಭಯಪಡುವಂತೆ ಮಾಡಲಾಯಿತು. ಗುರು ತೇಜ್‌‌ ಬಹದ್ದೂರ್‌‌‌ರ ಶಿರಚ್ಛೇದವು ಅವರ ಅನೇಕ ಶಿಷ್ಯರನ್ನು ಭಯಭೀತರನ್ನಾಗಿ ಮಾಡಿತಲ್ಲದೇ, ಇದರಿಂದಾಗಿ ಅವರಲ್ಲಿ ಕೆಲವರು ಉಪದ್ರವದಿಂದ ತಪ್ಪಿಸಿಕೊಳ್ಳಲು ಅವರ ಅನುಯಾಯಿಗಳೆಂದು ಹೇಳಿಕೊಳ್ಳಲು ಕೂಡಾ ಹಿಂಜರಿಯುತ್ತಿದ್ದರು.
 • ಭಾಯ್‌ ಜೈತಾ (ನಂತರ ಭಾಯ್‌ ಜೀವನ್‌ ಸಿಂಗ್‌‌‌) ಎಂಬ ಅವರ ಅನುಯಾಯಿಯೊಬ್ಬ ಪ್ರದರ್ಶನಕ್ಕಿಡುವ ಮುನ್ನ ಅವರ ಪ್ರತ್ಯೇಕಿಸಿದ ತಲೆಯನ್ನು ತೆಗೆದುಕೊಂಡು ಆನಂದಪುರ್‌‌/ರಕ್ಕೆ ತಂದು, ದೆಹಲಿಯಲ್ಲಿನ ಗುರು'ಗಳ ಅನುಯಾಯಿಗಳಲ್ಲುಂಟಾಗಿರುವ ಭಯಬೀತಿಯ ಬಗ್ಗೆ ವಿವರಿಸಿದನು. ದೆಹಲಿಯಲ್ಲಿ ನಡೆದುದೆಲ್ಲವನ್ನು ಕೇಳಿ ತಿಳಿದುಕೊಂಡ ನಂತರ, ಗುರು ಗೋಬಿಂ/ವಿಂದರು ತಮ್ಮ ಅನುಯಾಯಿಗಳಲ್ಲಿ ಕೆಚ್ಚೆದೆ ಯುದ್ಧೋತ್ಸಾಹವನ್ನು ಮನಸ್ಸಿಗೆ ನಾಟುವಂತೆ ತುಂಬಲು ನಿರ್ಧರಿಸಿದರು.
 • ಗುರು ತೇಜ್‌‌ ಬಹದ್ದೂರ್‌‌‌, ಚಕ್ರವರ್ತಿಯ ಕಡೆ/ಕೈಯಿಂದ ತನಗೆ ಸಾವು ಬರುವ ವಾಸ್ತವ ಸಾಧ್ಯತೆಯ ಸಿದ್ಧತೆಯಾಗಿ, ದೆಹಲಿಗೆ ಹೊರಡುವ ಮುನ್ನ ತನ್ನ ಪುತ್ರನಿಗೆ ಮುಂದಿನ ಗುರುವನ್ನಾಗಿ ದೀಕ್ಷೆ ನೀಡಿದ್ದರು. ಗೋಬಿಂದ್‌‌ ರಾಯ್‌‌ರನ್ನು ಔಪಚಾರಿಕವಾಗಿ ವೈಸಾಖಿಯ ತಟದ ಮೇಲೆ, 11 ನವೆಂಬರ್‌ 1675ರಂದು ಗುರುಗಳಾಗಿ ಪ್ರತಿಷ್ಠಾಪನೆ ಮಾಡಲಾಯಿತು.[೪]

ಸಂಸ್ಕೃತ ಮಹಾಕಾವ್ಯಗಳನ್ನು ಸಮಕಾಲೀನ ಭಾಷೆಗಳಿಗೆ ಭಾಷಾಂತರಿಸುವ ಕಾರ್ಯ[ಬದಲಾಯಿಸಿ]

 • ಗುರು ಗೋಬಿಂ/ವಿಂದರು ಸಾಹಸದ/ವೀರರ ಸಂಸ್ಕೃತ ಮಹಾಕಾವ್ಯಗಳನ್ನು ಸಮಕಾಲೀನ ಭಾಷೆಗಳಿಗೆ ಭಾಷಾಂತರಿಸುವ ಕಾರ್ಯದಲ್ಲಿ 52 ಕವಿಗಳನ್ನು ತೊಡಗಿಸಿದರು. ತನ್ನ ಅನೇಕ ಕೃತಿಗಳಲ್ಲಿನ ಯುದ್ಧೋಚಿತ ವಿಷಯಗಳನ್ನು ಆಯ್ಕೆ ಮಾಡಿ ತಮ್ಮ ಅನುಯಾಯಿಗಳಲ್ಲಿ ಯುದ್ಧೋತ್ಸಾಹ ವನ್ನು ಮೂಡಿಸಲು ಪ್ರಯತ್ನಿಸಿದರು. ಅವರು ಪ್ರೀತಿ, ಸಮಾನತೆ ಹಾಗೂ ಏಕದೇವ ಆರಾಧನೆಗಳನ್ನು ಬೋಧಿಸುವ ಹಾಗೂ ವಿಗ್ರಹಾರಾಧನೆಗಳನ್ನು ಹಾಗೂ ಮೂಢನಂಬಿಕೆಗಳನ್ನು ವಿರೋಧಿಸುವ ಅನೇಕ ಕೃತಿಗಳನ್ನು ಕೂಡಾ ರಚಿಸಿದ್ದಾರೆ.
 • ಗುರು'ಗಳ ಹೆಚ್ಚುತ್ತಿರುವ ಪ್ರಭಾವ ಹಾಗೂ ಬಲ, ಆನಂದಪುರ್‌‌/ರ ಇರುವ ಪ್ರಾಂತ್ಯದ ಅರಸ ಬಿಲಾಸ್‌‌ಪುರ್‌‌/ರ (ಕಹ್ಲೂರ್‌‌/ರ)ದ ರಾಜಾ ಭೀಮ್‌ ಚಂದ್‌‌ರಿಗೆ ಚಿಂತೆಯನ್ನು ತಂದಿತು. ಅದೇ ಸಮಯದಲ್ಲಿ, ಗುರು ತನ್ನ ಸೈನಿಕರಲ್ಲಿ ಉತ್ಸಾಹ ತುಂಬಲು ರಣ್‌ಜಿತ್‌‌ ನಗಾರ ಎಂಬ ಹೆಸರಿನ ರಣ ಭೇರಿಯೊಂದನ್ನು (ನಗಾರ ) ನಿರ್ಮಿಸಲು ಆದೇಶಿಸಿದ್ದರು. ಅಂತಹಾ ಒಂದು ರಣಭೇರಿಯ ಬಳಕೆಯು ತಮ್ಮ ಪ್ರದೇಶದಲ್ಲಿ ಕೇವಲ ಸೇನಾ ನಾಯಕರಿಗೆ ಮಾತ್ರ ಸೀಮಿತವಾದುದರಿಂದ, ರಾಜನು ರಣ್‌ಜಿತ್‌ ನಗಾರ ದ ಬಳಕೆಯನ್ನು ಶತೃತ್ವದ ಕಾರ್ಯವೆಂದು ಪರಿಗಣಿಸಿದನು. ಆತನ ಪ್ರಧಾನ ಮಂತ್ರಿಯ ಸಲಹೆಯ ಮೇರೆಗೆ, ಗುರುಗಳೊಂದಿಗೆ ಆನಂದಪುರ್‌‌/ರದಲ್ಲಿ ಭೇಟಿಯನ್ನು ನಿಗದಿಪಡಿಸಿದನು.
 • ಆತನನ್ನು ಗುರು'ಗಳ ಆಸ್ಥಾನದ/ಸಭೆಯಲ್ಲಿ ಆದರದಿಂದ ಬರಮಾಡಿಕೊಳ್ಳಲಾದರೂ, ಭಕ್ತ/ಅನುಯಾಯಿಗಳಿಂದ ಗುರುಗಳಿಗೆ ನೀಡಲ್ಪಟ್ಟ ಬೆಲೆಬಾಳುವ ಉಡುಗೊರೆಗಳೆಡೆಗೆ ಆತನ ಗಮನ ಹರಿಯಿತು. ನಂತರ, ಭೀಮ್‌ ಚಂದ್‌‌ ಗುರುಗಳಿಗೆ ಪ್ರಸಾದಿ ಎಂಬ ಹೆಸರಿನ ಆನೆ ಯನ್ನು ಎರವಲಾಗಿ (ಭಕ್ತರೊಬ್ಬರಿಂದ ಉಡುಗೊರೆಯಾಗಿ ಬಂದದ್ದು) ತನ್ನ ಬಳಿಗೆ ಕಳಿಸಿಕೊಡುವಂತೆ ಸಂದೇಶವೊಂದನ್ನು ಕಳಿಸಿದನು. ಭೀಮ್‌ ಚಂದ್‌‌ ಶಾಶ್ವತವಾಗಿ ಆನೆಯನ್ನು ಪಡೆದುಕೊಳ್ಳಲು ಆಶಿಸುತ್ತಿರುವುದಾಗಿ ಅನುಮಾನಿಸಿದ ಗುರುಗಳು ಆತನ ಬೇಡಿಕೆಯನ್ನು ಮನ್ನಿಸಲಿಲ್ಲ.
 • ತನಗೆ ಆನೆಯನ್ನು ಕಾಣಿಕೆಯನ್ನಾಗಿ ನೀಡಿದ ಭಕ್ತ ಅದನ್ನು ಬೇರೆ ಯಾರಿಗೂ ಕೊಡಬಾರದೆಂದು ಇಚ್ಛಿಸಿದ್ದಾರೆಂದು ಹೇಳಿ ಕಳಿಸಿದರು. ಆನೆಯನ್ನು ಕಳಿಸಿಕೊಡಲು ಗುರು'ಗಳ ನಿರಾಕರಣೆ, ಅವರ ಬೆಳೆಯುತ್ತಿರುವ ಪ್ರಭಾವ, ಹಾಗೂ ಸೈನಿಕ ಕಾರ್ಯಾಚರಣೆಗಳಲ್ಲಿ ಅವರಿಗಿರುವ ಆಸಕ್ತಿಗಳಿಂದ ರಾಜನು ಕ್ಷೋಭೆಗೊಳಗಾದನು. ಸಣ್ಣ ಸಣ್ಣ ವಿಚಾರಗಳಲ್ಲಿ ಅವರಿಬ್ಬರ ನಡುವೆ ಘರ್ಷಣೆಯಾಗುವಂತಹಾ ವಾತಾವರಣ ಉಂಟಾಯಿತು.[೫]

ಪವೊಂಟಾನಲ್ಲಿನ ವಾಸ[ಬದಲಾಯಿಸಿ]

ಗುರು ಗೋಬಿಂದ್‌‌ ಸಿಂಗ್‌‌ (ಪಕ್ಷಿಯೊಂದಿಗೆ ಇರುವ) ಗುರು ನಾನಕ್‌ ದೇವ್‌‌ರನ್ನು ಭೇಟಿ ಮಾಡುತ್ತಿದ್ದಾರೆ. ಕಾಲ್ಪನಿಕ ಭೇಟಿಯೊಂದರ 18ನೇ ಶತಮಾನದ ಚಿತ್ರಕಲೆ.
 • ಏಪ್ರಿಲ್‌ 1685ರಲ್ಲಿ, ಗುರು ಗೋಬಿಂದ್‌‌ ರಾಯ್‌‌ ತಮ್ಮ ನಿವಾಸವನ್ನು ಸಿರ್‌ಮುರ್‌‌ ರಾಜ್ಯದ ಪವೊಂಟಾಗೆ ಸಿರ್‌ಮುರ್‌‌ನ ರಾಜಾ ಮತ್‌ ಪ್ರಕಾಶ್‌ರ ಆಹ್ವಾನದ ಮೇರೆಗೆ ಸ್ಥಳಾಂತರಿಸಿದರು. ಸ್ಥಳಾಂತರದ ಕಾರಣಗಳು ಅಷ್ಟು ಸ್ಪಷ್ಟವಾಗಿಲ್ಲ.[೬] ಬಿಚಿತ್ರ ನಾಟಕ್‌‌ನ ಲೇಖಕ ಪವೊಂಟಾಗೆ ನಿವಾಸವನ್ನು ಸ್ಥಳಾಂತರಿಸಲು ಯಾವುದೇ ಕಾರಣಗಳನ್ನು ನೀಡಿಲ್ಲ.[೭]
 • ಸಿರ್‌ಮುರ್‌‌ ರಾಜ್ಯದ ದೇಶವಿಷಯಕ ಕೋಶದ/ಗೆಝೆಟಿಯರ್‌ನ ಪ್ರಕಾರ, ಭೀಮ್‌ ಚಂದ್‌ನೊಂದಿಗಿನ ಭಿನ್ನಾಭಿಪ್ರಾಯಗಳ ಕಾರಣ ಗುರುಗಳು ಆನಂದಪುರ್‌‌/ರವನ್ನು ಬಿಡಲೇಬೇಕಾದ ಅನಿವಾರ್ಯತೆ ಉಂಟಾದುದರಿಂದ ಟೋಕಾಗೆ ತೆರಳಬೇಕಾಯಿತು. ಟೋಕಾದಿಂದ, ಅವರನ್ನು ನಹಾನ್‌ಗೆ (ಸಿರ್‌ಮುರ್‌‌ನ ರಾಜಧಾನಿ) ಮತ್‌ ಪ್ರಕಾಶ್‌ ಕರೆತಂದರು. ನಹಾನ್‌ನಿಂದ, ಅವರು ಪವೊಂಟಾಗೆ ಮುಂದುವರೆದರು.[೮]
 • ಗರ್ಹ್‌/ಘರ್‌‌ವಾಲ್‌‌ನ ರಾಜಾ ಫತೇಹ್‌ ಷಾಹ್‌‌ನ ವಿರುದ್ಧ ತನ್ನ ಸಾಮರ್ಥ್ಯವನ್ನು ಇಮ್ಮಡಿಗೊಳಿಸಿಕೊಳ್ಳಲು ಗುರುಗಳನ್ನು ತನ್ನ ರಾಜ್ಯಕ್ಕೆ ಮತ್‌ ಪ್ರಕಾಶ್‌ ಆಹ್ವಾನಿಸಿದ್ದನು.[೫] ರಾಜಾ ಮತ್‌ ಪ್ರಕಾಶ್‌ನ ಕೋರಿಕೆ ಮೇರೆಗೆ, ಗುರುಗಳು ತಮ್ಮ ಅನುಯಾಯಿಗಳ ನೆರವಿನಿಂದ ಪವೊಂಟಾದಲ್ಲಿ ಅಲ್ಪಕಾಲದಲ್ಲೇ ಕೋಟೆಯೊಂದನ್ನು ಕಟ್ಟಿಸಿದರು. ಅವರು ತಮ್ಮ ಸೈನಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದನ್ನು ಮುಂದುವರೆಸಿದರು.
 • ರಾಜಾ ಫತೇಹ್‌ ಷಾಹ್‌‌ ಕೂಡಾ ಒಮ್ಮೆ ಗುರುಗಳ ಆಸ್ಥಾನಕ್ಕೆ ಭೇಟಿ ಕೊಟ್ಟರಲ್ಲದೇ, ಅಲ್ಲಿ ಅವರನ್ನು ಆದರ ಪೂರ್ವಕವಾಗಿ ಸ್ವಾಗತಿಸಲಾಯಿತು. ಗುರುಗಳು ಇಬ್ಬರು ರಾಜರ ನಡುವೆ ಶಾಂತಿಯ ಒಪ್ಪಂದವನ್ನು ಸ್ಥಾಪಿಸಿದರು. ಗುರು ಪವೊಂಟಾದಲ್ಲೇ ಸುಮಾರು ಮೂರು ವರ್ಷಗಳ ಕಾಲ ಉಳಿದಿದ್ದರಲ್ಲದೇ, ಅನೇಕ ಗ್ರಂಥಗಳನ್ನು ರಚಿಸಿದರು. ಭೀಮ್‌ ಚಂದ್‌ ಹಾಗೂ ಗುರುಗಳ ನಡುವಿನ ಶತೃತ್ವವು ಪವೊಂಟಾದಲ್ಲಿ ಅವರು ಇರುವಾಗ ಹೆಚ್ಚುತ್ತಲೇ ಹೋಗಿ, ಅಂತಿಮವಾಗಿ ಪವೊಂಟಾದ ಸಮೀಪದ ಭಂಗಾನಿಯಲ್ಲಿ ನಡೆದ ಭಂಗಾನಿ ಕದನಕ್ಕೆ ಕಾರಣವಾಯಿತು.
 • ಭೀಮ್‌ ಚಂದ್‌ನನ್ನು ಗರ್ಹ್‌/ಘರ್‌‌‌‌ವಾಲ್‌‌ಫತೇಹ್‌ ಷಾಹ್‌‌, ಕಟೋಚ್‌‌ನ ಕಿರ್ಪಾಲ್‌‌, ಗೂಲರ್‌(ಅಥವಾ ಗುಲೇರಿಯಾ)ನ ಗೋಪಾಲ್‌‌, ಹದೂರ್‌‌ನ ಹರಿ ಚಂದ್ ಹಾಗೂ ಜಸ್ವಾಲ್‌ನ ರಾಜನೂ ಸೇರಿದಂತೆ ಪರ್ವತಪ್ರದೇಶಗಳ ಇತರೆ ರಾಜರುಗಳು ಬೆಂಬಲಿಸಿದರು. ಗುರುಗಳು ನೇಮಿಸಿಕೊಂಡ ಕೆಲ ಪಠಾಣರು ಕೂಡಾ ನಿಷ್ಠೆ ಬದಲಿಸಿ ಭೀಮ್‌ ಚಂದ್‌ನಿಗೆ ಸಹಾಯ ಮಾಡತೊಡಗಿದರು.
 • ಗುರು'ಗಳ ಸೈನ್ಯದಲ್ಲಿ ಅವರ ಅನುಯಾಯಿಗಳು, ಕೆಲ ಉದಾಸಿಗಳು, ಕೆಲ ಪಠಾಣರು, ಹಾಗೂ ಸುಮಾರು 700 ಮಂದಿ ಸಧೌರಾಪೀರ್‌‌ ಬುಧು ಷಾಹ್‌‌ರ ಅನುಯಾಯಿಗಳಿದ್ದರು. ಬಿಚಿತ್ರ ನಾಟಕ್‌ ನ ಪ್ರಕಾರ‌, ಭಂಗಾನಿಯ ಕದನದಲ್ಲಿ ಗುರುಗಳು ವಿಜಯ ಪಡೆದರು.

ಆನಂದಪುರ್‌‌/ರಕ್ಕೆ ಮರಳುವಿಕೆ[ಬದಲಾಯಿಸಿ]

 • ಭಂಗಾನಿಯ ಕದನದ ಕೆಲ ಕಾಲಾನಂತರ, ಗುರುಗಳು ಆನಂದಪುರ್‌‌/ರಕ್ಕೆ ಮರಳಲು ನಿಶ್ಚಯಿಸಿದರು. ಆನಂದಪುರ್‌‌/ರಕ್ಕೆ ಮರಳುವ ಮಾರ್ಗದಲ್ಲಿ, ಅವರು ಸಧೌರಾ ಹಾಗೂ ಲಹಾರ್‌‌ಪುರ್‌‌ಗಳಲ್ಲಿ ಕೆಲ ದಿನಗಳ ಕಾಲ ಮೊಕ್ಕಾಮು ಹೂಡಿದರು. ಸಿರ್‌ಮುರ್‌‌ ರಾಜ್ಯವನ್ನು ಬಿಟ್ಟು ಹೊರಟ ನಂತರ, ಅವರು ರಾಮ್‌ಘರ್‌‌/ಗರ್ಹ್‌‌ ರಾಜ್ಯವನ್ನು ಪ್ರವೇಶಿಸಿ ಟ/ತಬ್ರಾ ಎಂಬಲ್ಲಿ ಒಂದು ವಾರಕ್ಕೂ ಹೆಚ್ಚಿನ ಕಾಲ ಉಳಿದರು. ಅವರು ನಂತರ ಅಲ್ಲಿನ ಸ್ಥಳೀಯ ರಾಣಿಯ ಆಹ್ವಾನದ ಮೇರೆಗೆ ರಾಯ್‌‌ಪುರ್‌‌ಗೆ ಭೇಟಿ ನೀಡಿದರು.
 • ರಾಯ್‌‌ಪುರ್‌‌ವನ್ನು ಬಿಟ್ಟ ನಂತರ, ಅವರು ತಮ್ಮ ಪ್ರಯಾಣವನ್ನು ಮುಂದುವರೆಸಿ ಟೋಡಾ, ನಾಡಾ, ಢಕೋಲಿ, ಕೊಟ್ಲಾ, ಘನೌಲಾ, ಬುಂಗಾ, ಹಾಗೂ ಕಿರಾತ್‌ಪುರ್‌ಗಳ ಮೂಲಕ ಆನಂದಪುರ್‌‌/ರದೆಡೆಗೆ ತಮ್ಮ ಪ್ರಯಾಣವನ್ನು ಮುಂದುವರೆಸಿದರು. ಅವರು ಆನಂದಪುರ್‌‌/ರವನ್ನು ತಲುಪಿದ ನಂತರ ರಾಜಾ ಭೀಮ್‌ ಚಂದ್‌ನೊಡನೆ ಸಂಧಿಯನ್ನು ಸಾಧಿಸಿದರು.
 • 1680ರ ದಶಕದಲ್ಲಿ, ತನ್ನ ದಖ್ಖನ್‌ ಪ್ರಸ್ಥಭೂಮಿಯಲ್ಲಿನ ಅಭಿಯಾನಗಳ ವೆಚ್ಚವನ್ನು ಸರಿದೂಗಿಸಲು, ಮೊಘಲರ ಚಕ್ರವರ್ತಿ ಔರಂಗಜೇಬ್‌ ಮೂರು ಸತತ ವರ್ಷಗಳಿಂದ ಕಪ್ಪ ಕಾಣಿಕೆಗಳನ್ನು ಪಾವತಿಸದೇ ಉಳಿಸಿಕೊಂಡಿದ್ದ ಪರ್ವತ ರಾಜ್ಯಗಳ ಅರಸರಿಂದ ವಾರ್ಷಿಕ ಕಪ್ಪ ಕಾಣಿಕೆಗಳನ್ನು ಮರುಪಡೆದುಕೊಳ್ಳಲು ಆದೇಶಿಸುತ್ತಾನೆ.[೯]
 • ಕಾಂಗ್ರಾ ಹಾಗೂ ಸಮೀಪದ ಸಂಸ್ಥಾನಗಳಿಂದ ಕಪ್ಪಕಾಣಿಕೆಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಅಲಿಫ್‌ ಖಾನ್‌‌ (ಅಥವಾ ಅಲಫ್‌ ಖಾನ್‌)ನಿಗೆ ವಹಿಸಲಾಗಿತ್ತು.[೪] ಪರ್ವತ ಪ್ರದೇಶಗಳ ರಾಜರುಗಳಲ್ಲಿ ಇಬ್ಬರು, ಕಾಂಗ್ರಾದ ರಾಜಾ ಕಿರ್ಪಾಲ್‌ ಚಂದ್‌‌‌‌ ಹಾಗೂ ಬಿಜರ್‌ವಾಲ್‌‌ನ ರಾಜಾ ದಯಾಳ್‌‌ ಅಲಿಫ್‌ ಖಾನ್‌‌'ನ ಬೇಡಿಕೆಗಳನ್ನು ಪೂರೈಸಲೊಪ್ಪಿದರು.
 • ಆದಾಗ್ಯೂ, ಬಿಲಾಸ್‌‌ಪುರ್‌‌/ರ (ಕಹ್ಲೂರ್‌‌/ರ)ನ ರಾಜಾ ಭೀಮ್‌ ಚಂದ್‌ ಕಪ್ಪಕಾಣಿಕೆಯನ್ನು ಸಲ್ಲಿಸಲು ನಿರಾಕರಿಸಿದ್ದಲ್ಲದೇ ಮೊಘಲರ ವಿರುದ್ಧದ ಸ್ಥಳೀಯ ರಾಜರುಗಳ ಮೈತ್ರಿಕೂಟವನ್ನು ರಚಿಸಿಕೊಂಡರು. ಗುರು ಗೋಬಿಂದ್‌‌ ಸಿಂಗ್‌‌ ಕೂಡಾ ಆತನನ್ನು ಬೆಂಬಲಿಸಲು ಒಪ್ಪಿದರು. ನದೌನ್‌ನ ಕದನದಲ್ಲಿ, ಅಲಿಫ್‌ ಖಾನ್‌‌ ಹಾಗೂ ಆತನ ಸಹಾಯಕರ ಸೈನ್ಯಗಳನ್ನು ಭೀಮ್‌ ಚಂದ್‌, ಗುರು ಗೋಬಿಂ/ವಿಂದ ಸಿಂಗ್‌ ಹಾಗೂ ಇತರೆ ಪರ್ವತ ರಾಜರುಗಳ ಮಿತ್ರಕೂಟದ ಸೈನ್ಯವು ಸೋಲಿಸಿತು. ವಿವಿಧ ಲೇಖಕರು ಕದನದ ದಿನಾಂಕವನ್ನು ಬೇರೆ ಬೇರೆಯಾಗಿ ನೀಡುತ್ತಾರೆ ೧೬೮೭,[೧೦][೧೧] 1689,[೧೨][೧೩] 1690,[೧೪] 20 ಮಾರ್ಚ್‌ 1691,[೯] ಹಾಗೂ 4 ಏಪ್ರಿಲ್‌ 1691.[೧೫]

ಬಿಚಿತ್ರ ನಾಟಕ್‌‌ ನ ಪ್ರಕಾರ , ಗುರು ಗೋಬಿಂದ್‌‌ ಸಿಂಗ್‌‌ ಬಿಯಾಸ್‌ ನದಿಯ ದಡದಲ್ಲಿರುವ ನದೌನ್‌ನಲ್ಲಿಯೇ ಎಂಟು ದಿನಗಳ ಕಾಲ ಉಳಿದುಕೊಂಡು, ಎಲ್ಲಾ ಮುಖ್ಯಸ್ಥರ ರಾಜ್ಯ/ಸ್ಥಳಗಳಿಗೆ ಭೇಟಿ ನೀಡುತ್ತಾರೆ.[೧೬] ನಂತರ, ಎರಡೂ ಬಣಗಳು ಒಂದು ಒಪ್ಪಂದಕ್ಕೆ ಬಂದ ನಂತರ ಶಾಂತಿ ಸ್ಥಾಪಿತಗೊಳ್ಳುತ್ತದೆ.[೧೭]

 • 1694ರಲ್ಲಿ, ಪಂಜಾಬ್‌‌‌ನ ಮೊಘಲ್‌‌/ಲರ ಮುಖ್ಯಸ್ಥನಾಗಿದ್ದ ದಿಲಾವರ್‌ ಖಾನ್‌‌, ತನ್ನ ಮಗನನ್ನು ಸಾವಿರ ಮಂದಿ ಸೈನಿಕರೊಂದಿಗೆ ಆನಂದಪುರ್‌‌/ರಕ್ಕೆ, ಗುರುಗಳ ಬೆಳೆಯುತ್ತಿರುವ ಶಕ್ತಿಯನ್ನು ನಿಗ್ರಹಿಸಲು ಕಳಿಸುತ್ತಾನೆ. ಖಾನ್‌ಪುತ್ರ/ಖಾನ್‌ಜಾದಾ ಸಟ್ಲಜ್‌‌ ನದಿಯನ್ನು ದಾಟುತ್ತಿದ್ದ ಹಾಗೆ, ಗುರು'ಗಳ ಬೇಹುಗಾರ ಅಲಂ ಚಂದ್‌‌ (aka ಅಲಂ ಸಿಂಗ್‌‌) ಗುರು'ಗಳ ಸೈನ್ಯಕ್ಕೆ ಅಪಾಯದ ಸೂಚನೆ ಕಳಿಸುತ್ತಾನೆ.
 • ರಣ್‌ಜಿತ್‌ ನಗಾರ ವನ್ನು ಬಾರಿಸಲಾಯಿತಲ್ಲದೇ, ಗುರು'ಗಳ ಸೈನ್ಯವು ತ್ವರಿತವಾಗಿ ನದಿಯೆಡೆಗೆ ಸಾಗಿ ಹೋರಾಡಿ ಮೊಘಲ್‌‌/ಲರ ಸೈನ್ಯವನ್ನು ಹಿಮ್ಮೆಟ್ಟಿಸಿತು. ಖಾನ್‌ಪುತ್ರ/ಖಾನ್‌ಜಾದಾನ ಗುರುಗಳ ಬಲವನ್ನು ನಿಗ್ರಹಿಸುವ ಪ್ರಯತ್ನವು ಅಪಜಯವನ್ನು ಕಂಡುದುದು ದಿಲಾವರ್‌ ಖಾನ್‌‌ನನ್ನು ಕೆರಳಿಸಿತಲ್ಲದೇ ಗುರುಗಳು ಹಾಗೂ ಇತರೆ ಪರ್ವತ ಪ್ರದೇಶದ ರಾಜರುಗಳ ಮೇಲೆ ಮತ್ತಷ್ಟು ದೊಡ್ಡ ಆಕ್ರಮಣವನ್ನು ಹೂಡುವಂತೆ ಮಾಡಿತು. ಆತ ತನ್ನ ಗುಲಾಮ ಹುಸೇನನೊಂದಿಗೆ ಅವರನ್ನು ನಿಗ್ರಹಿಸಲು ಎರಡು ಸಾವಿರ ಮಂದಿಯ ಸೇನಾಪಡೆಯನ್ನು ಕಳಿಸುತ್ತಾನೆ. *ಹುಸೇನ್‌‌ನ ದಡ್‌‌/ಧ್‌‌ವಾಲ್‌‌ನ ರಾಜನನ್ನು ಸೋಲಿಸಿ ಡೂನ್‌ಅನ್ನು ವಶಪಡಿಸಿಕೊಂಡನು. ಕಾಂಗ್ರಾದ ರಾಜಾ ಕಿರ್ಪಾಲ್‌‌ (ಕಟೋಚ್‌‌‌) ಹಾಗೂ ಕಹ್ಲೂರ್‌‌/ರನ ರಾಜಾ ಭೀಮ್‌ ಚಂದ್‌ ಆತನ ಪ್ರಭುತ್ವ/ಸಾಮಂತತ್ವವನ್ನು ಒಪ್ಪಿಕೊಂಡರು. ಗೂಲರ್‌‌ನ ರಾಜಾ ಗೋಪಾಲ್‌‌ ಹಾಗೂ ರಾಜಾ ರಾಮ್‌ ಸಿಂಗ್‌‌ ಹುಸೇನ್‌‌ನೊಂದಿಗೆ ಸಂಧಾನ ನಡೆಸಲು ಪ್ರಯತ್ನಿಸಿದರೂ, ಅದು ವಿಫಲವಾಯಿತು. ಹುಸೇನ್‌‌ ಗೂಲರ್‌‌ನ ಮೇಲೆ ಮುತ್ತಿಗೆ ಹಾಕಿ, ರಾಜಾ ಗೋಪಾಲ್‌‌ನ ಮುಂದೆ ಹತ್ತು ಸಾವಿರ ರೂಪಾಯಿಗಳ ಬೇಡಿಕೆಯನ್ನಿಟ್ಟನು.
 • ಗೋಪಾಲ್‌‌ ತನ್ನ ದೂತರನ್ನು ಗುರು ಗೋಬಿಂ/ವಿಂದರು ಸಿಂಗ್‌‌ರೆಡೆಗೆ ಕಳಿಸಿ, ಹುಸೇನ್‌‌ ಹಾಗೂ ರಾಜನ ನಡುವೆ ಸಂಧಾನವನ್ನು ನಡೆಸಲು ಕೋರಿಕೊಂಡನು. ಗುರು ತನ್ನ ರಾಯಭಾರಿ, ಸಾಂಗ್‌ಟಿಯಾನನ್ನು, ಏಳು ಮಂದಿ ರಾವುತರ ಪಡೆಯೊಡನೆ ಕಳಿಸುತ್ತಾರೆ. ಆದಾಗ್ಯೂ ಒಂದು ಒಮ್ಮತಕ್ಕೆ ಬರಲಾಗದೇ ಇದ್ದುದು, (೧೬೯೫ರಿಂದ ೧೬೯೮ರ ನಡುವೆ ನಡೆದ) ಯುದ್ಧಕ್ಕೆ ಕಾರಣವಾಯಿತು.
 • ಕಿರ್ಪಾಲ್‌‌ ಹಾಗೂ ಭೀಮ್‌ ಚಂದ್‌ ಹುಸೇನ್‌‌'ನ ಕಡೆಯಿಂದ ಹೋರಾಡಿದರೆ, ರಾಜಾ ರಾಮ್‌ ಸಿಂಗ್‌‌ ಹಾಗೂ ಗುರುಗಳ ಸೈನಿಕರು ರಾಜಾ ಗೋಪಾಲ್‌‌ನ ಪರವಾಗಿ ಹೋರಾಡಿದರು. ಯುದ್ಧದಲ್ಲಿ ಹುಸೇನ್‌‌, ಕಿರ್ಪಾಲ್‌‌ ಹಾಗೂ ಗುರುಗಳ ಎಲ್ಲಾ ಸೈನಿಕರು ಮರಣಿಸಿದರು. ರಾಜಾ ಭೀಮ್‌ ಚಂದ್‌'ನ ಪಡೆಗಳು ಯುದ್ಧಭೂಮಿಯಿಂದ ಪರಾರಿಯಾದ ಪರಿಣಾಮವಾಗಿ ರಾಜಾ ಗೋಪಾಲ್‌‌ ಕದನದಲ್ಲಿ ವಿಜಯ ಗಳಿಸುತ್ತಾನೆ. ರಾಜಾ ಗೋಪಾಲ್‌‌ ಗುರುಗಳೆಡೆಗೆ ಹೋಗಿ ಅವರಿಗೆ ಧನ್ಯವಾದಗಳನ್ನು ತಿಳಿಸಿ, ಅವರಿಗೆ ಕೊಡುಗೆಗಳನ್ನು ನೀಡುತ್ತಾನೆ.
 • ಈ ಯುದ್ಧವನ್ನು ಬಿಚಿತ್ರ ನಾಟಕ್‌‌ ನ ೧೧ನೇ ಅಧ್ಯಾಯದಲ್ಲಿ ವರ್ಣಿಸಲಾಗಿದೆ.[೧೮]ಹುಸೇನ್‌‌ನ ಸಾವಿನ ನಂತರ, ದಿಲಾವರ್‌ ಖಾನ್‌‌ ತನ್ನ ಕಡೆಯವರಾದ ಜುಝಾರ್‌ ಸಿಂಗ್‌‌ ಹಾಗೂ ಛಂಡೇಲ್‌ ರೈ/ರಾಯ್‌‌ರನ್ನು ಶಿವಾಲಿಕ್‌‌ ಪರ್ವತಶ್ರೇಣಿಗಳೆಡೆಗೆ ಕಳಿಸುತ್ತಾನೆ.
 • ಆದಾಗ್ಯೂ, ಅವರನ್ನು ಜಸ್ವಾಲ್‌‌ನ ಗಜ್‌ ಸಿಂಗ್‌‌ ಪರಾಭವಗೊಳಿಸುತ್ತಾನೆ. ಪರ್ವತ ಪ್ರದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳು ಮೊಘಲ್‌‌/ಲರ ಚಕ್ರವರ್ತಿ ಔರಂಗಜೇಬ್‌‌‌ನ ಕಳವಳಕ್ಕೆ ಕಾರಣವಾಗಿ, ಆತ ಆ ಪ್ರದೇಶದಲ್ಲಿ ಮೊಘಲ್‌‌/ಲರ ಅಧಿಕಾರವನ್ನು ಮತ್ತೆ ಗಳಿಸಿಕೊಳ್ಳಲು ತನ್ನ ಪುತ್ರನ ನೇತೃತ್ವದಲ್ಲಿ ಸೇನೆಯನ್ನು ಕಳಿಸುತ್ತಾನೆ.

ಖಾಲ್ಸಾನ ಸ್ಥಾಪನೆ[ಬದಲಾಯಿಸಿ]

೧೬೯೯ರಲ್ಲಿ, ಗುರುಗಳು ತಮ್ಮ ಅನುಯಾಯಿಗಳಿಗೆ ಹುಕುಮ್‌ನಾಮಗಳ ನ್ನು (ಅಧಿಕಾರದ ಪತ್ರಗಳು) ಕಳಿಸಿ ೩೦ ಮಾರ್ಚ್‌ ೧೬೯೯ರ ವೈಸಾಖಿಯ ದಿನದಂದು (ವಾರ್ಷಿಕ ಸುಗ್ಗಿಯ ಉತ್ಸವದ ದಿನ) ಆನಂದಪುರ್‌‌/ರದಲ್ಲಿ ಸಭೆಗೆ ಹಾಜರಾಗಲು ಕೋರಿದರು.[೧೯]

 • ಗುಡ್ಡವೊಂದರ (ಈಗ ಕೇಸ್‌ಗರ್ಹ್‌/ಘರ್‌‌ ಸಾಹಿಬ್ ಎನಿಸಿಕೊಳ್ಳುತ್ತಿದೆ‌) ಮೇಲೆ ಹಾಕಿದ ಪುಟ್ಟ ಡೇರೆಯೊಂದರ ಪುಟ್ಟ ಪ್ರವೇಶದ್ವಾರದಿಂದ ಸಭೆಯನ್ನುದ್ದೇಶಿಸಿ ಮಾತನಾಡಿದರು. ಅವರು ಮೊದಲು ಪ್ರತಿಯೊಬ್ಬರಿಗೆ ತಾನೇನಾಗಬೇಕು ಎಂದು ಕೇಳಿದರು ಪ್ರತಿಯೊಬ್ಬರೂ - "ನೀವು ನಮಗೆ ಗುರುಗಳಾಗಿದ್ದೀರಿ" ಎಂದರು. ಆಗ ಅವರು ಜನರಿಗೆ ತಾವು ಯಾರು ಎಂದು ಕೇಳಿದಾಗ, ಪ್ರತಿಯೊಬ್ಬರೂ - "ನಾವು ನಿಮ್ಮ ಸಿಖ್ಖರು" ಎಂದು ಪ್ರತಿಕ್ರಿಯಿಸಿದರು.
 • ಜನರಿಗೆ ತಮ್ಮ ನಡುವಿನ ಬಾಂಧವ್ಯವನ್ನು ಹೀಗೆ ನೆನಪಿಸಿದ ನಂತರ, ಅವರು ಹೀಗೆ ಹೇಳಿದರು- ಇಂದು ನಿಮ್ಮ ಗುರು ತನ್ನ ಸಿಖ್ಖರಿಂದ ಏನನ್ನೋ ಬಯಸುತ್ತಿದ್ದಾನೆ. ಪ್ರತಿಯೊಬ್ಬರೂ ಉತ್ತರಿಸಿ, "ಹುಕುಮ್‌ ಕರೋ, ಸಚ್ಛೇ ಪಾಟ್ಷಾ " (ನಮಗೆ ಆಜ್ಞಾಪಿಸು, ನಿಜವಾದ ದೇವರೇ) ಎಂದರು. ತಮ್ಮ ಒರೆಯಿಂದ ಕತ್ತಿಯನ್ನ ಹಿಡಿದೆತ್ತಿ ತನ್ನ ತಲೆಯನ್ನು ಬಲಿಯಾಗಿ ನೀಡಲು ಯಾರು ಮುಂದು ಬರುತ್ತೀರೆಂದು ಪ್ರಶ್ನಿಸಿದರು.
 • ಅವರ ಪ್ರಥಮ ಕರೆಗೆ/ಆಹ್ವಾನಕ್ಕೆ ಯಾರೂ ಉತ್ತರಿಸಲಿಲ್ಲ, ಎರಡನೆಯದಕ್ಕೂ ಕೂಡಾ, ಆದರೆ ಮೂರನೆಯ ಆಹ್ವಾನಕ್ಕೆ, ದಯಾ ರಾಮ್‌ (ಭಾಯಿ ದಯಾ ಸಿಂಗ್‌ ಎಂದು ನಂತರ ಕರೆಸಿಕೊಂಡರು‌) ಮುಂದೆ ಬಂದು ತನ್ನ ತಲೆಯನ್ನು ಗುರುವಿನ ಮುಂದಿಟ್ಟರು. ಗುರು ಗೋಬಿಂದ್‌‌ ರಾಯ್‌‌ ಸ್ವಯಂಸೇವಕನನ್ನು ಡೇರೆಯೊಳಗೆ ಕರೆದೊಯ್ದರು. ಜನಸಮೂಹದ ಮುಂದೆ ಸೋರುತ್ತಿರುವ ರಕ್ತದಿಂದ ಕೂಡಿದ ತಮ್ಮ ಖಡ್ಗದೊಂದಿಗೆ ಗುರು ಮರಳಿದರು.
 • ಅವರು ಮತ್ತೊಂದು ತಲೆ ಬೇಕೆಂದು ಬೇಡಿಕೆಯಿಟ್ಟರು. ಮತ್ತೋರ್ವ ಸ್ವಯಂಸೇವಕ ಮುಂದೆ ಬಂದು ಅವರೊಂದಿಗೆ ಡೇರೆಯನ್ನು ಪ್ರವೇಶಿಸಿದ. ಗುರು ಮತ್ತೊಮ್ಮೆ ಸೋರುತ್ತಿರುವ ರಕ್ತದಿಂದ ಕೂಡಿದ ತಮ್ಮ ಖಡ್ಗದೊಂದಿಗೆ ಮರಳಿದರು. ಇದು ಮತ್ತೂ ಮೂರು ಬಾರಿ ನಡೆಯಿತು. ನಂತರ ಐದೂ ಸ್ವಯಂಸೇವಕರು ಹೊಸ ವಸ್ತ್ರದೊಂದಿಗೆ ಸುರಕ್ಷಿತವಾಗಿ ಡೇರೆಯಿಂದ ಹೊರಕ್ಕೆ ಬಂದರು.
 • ಗೋಬಿಂದ್‌‌ ರಾಯ್ ನಂತರ ಶುದ್ಧ ನೀರನ್ನು ಕಬ್ಬಿಣದ ಬಟ್ಟಲಿಗೆ ಬಗ್ಗಿಸಿದರು ಹಾಗೂ ಅದರೊಳಕ್ಕೆ ಪಟಾಷಾಗಳನ್ನು (ಪಂಜಾಬೀ ಸಿಹಿಕಾರಕಗಳು) ಬೆರೆಸಿ ಆದಿ ಗ್ರಂಥ್‌ನ ಮಂತ್ರೋಚ್ಛಾರಣೆಯೊಂದಿಗೆ ದ್ವಿಮುಖ ಖಡ್ಗದಲ್ಲಿ ಕೂಡಿಸಿದರು. ಅವರು ಈ ಸಿಹಿ ನೀರು ಹಾಗೂ ಕಬ್ಬಿಣದ ಮಿಶ್ರಣ ವನ್ನು ಅಮೃತವೆಂದು ಕರೆದು ("ಅಮೃತ") ಐದೂ ಮಂದಿಗೆ ದೀಕ್ಷೆ ನೀಡಿದರು.
 • ತಮ್ಮ ಗುರುವಿಗೆ, ಮನಸ್ಫೂರ್ತಿಯಾಗಿ ತಮ್ಮ ಜೀವಗಳನ್ನು ಬಲಿಕೊಡಲು ಸಿದ್ಧರಾಗಿ ಮುಂದೆ ಬಂದ ಈ ಐವರಿಗೆ ಪಂಜ್‌ ಪಿಯರೆ ("ಪರಮಪ್ರಿಯ ಐವರು") ಎಂಬ ಬಿರುದನ್ನು ಅವರ ಗುರು ನೀಡಿದರು.[೨೦] ಅವರು ಖಾಲ್ಸಾದ ಮೊತ್ತ ಮೊದಲ (ಜ್ಞಾನ ಸ್ನಾನ ಮಾಡಿಸಿಕೊಂಡ) ಸಿಖ್ಖರಾಗಿದ್ದರು  : ದಯಾ ರಾಮ್‌ (ಭಾಯಿ ದಯಾ ಸಿಂಗ್‌‌), ಧರಮ್‌ ದಾಸ್‌‌ (ಭಾಯಿ ಧರಮ್‌ ಸಿಂಗ್‌‌), ಹಿಮ್ಮತ್‌‌ ರಾಯ್‌/ರೈ (ಭಾಯಿ ಹಿಮ್ಮತ್‌‌ ಸಿಂಗ್‌‌), ಮೊಹ್ಕಮ್‌ ಚಂದ್‌‌ (ಭಾಯಿ ಮೊಹ್ಕಮ್‌ ಸಿಂಗ್‌‌), ಹಾಗೂ ಸಾಹಿಬ್‌ ಚಂದ್‌‌ (ಭಾಯಿ ಸಾಹಿಬ್‌ ಸಿಂಗ್‌‌).
 • ಗುರು ಗೋಬಿಂದ್‌‌ ಸಿಂಗ್‌‌ ನಂತರ ಆ ನಂತರ ಖಾಲ್ಸಾದ ಘೋಷಣೆಯಾಗಿ ಪರಿವರ್ತನೆಗೊಂಡ ಒಂದು ಸಾಲನ್ನು ಉದ್ಗರಿಸಿದರು : 'ವಾಹೆಗುರೂಜಿ ಕಾ ಖಾಲ್ಸಾ, ವಾಹೆ ಗುರೂಜಿಕಿ ಫತೇಹ್‌‌' (ಖಾಲ್ಸಾ ದೇವರಿಗೆ ಅರ್ಪಿತವಾಗುತ್ತಿದೆ; ವಿಜಯವು ದೇವರಿಗೆ ಅರ್ಪಿತವಾಗುತ್ತಿದೆ). ಆತ ಅವರೆಲ್ಲರಿಗೂ "ಸಿಂಗ್‌‌" (ಸಿಂಹ) ಎಂಬ ಹೆಸರನ್ನು ನೀಡಿದರಲ್ಲದೇ, ಅವರನ್ನು ಒಟ್ಟಾರೆಯಾಗಿ ಖಾಲ್ಸಾ, ಜ್ಞಾನಸ್ನಾನ ಮಾಡಿಸಿಕೊಂಡ ಸಿಖ್ಖರ ದೇಹದ (ಶುದ್ಧಾತ್ಮರು) ಎಂದು ಕರೆದರು. ಗುರುಗಳು ಆಗ ಅವರ ಮುಂದೆ ಮಂಡಿಯೂರಿ ಕುಳಿತು ಅವರೊಂದಿಗೆ ಸಮಾನವಾಗಿ ಖಾಲ್ಸಾದಲ್ಲಿ ಪಾಲ್ಗೊಳ್ಳಲು ಹೊಸ ತಂಡದ ಆರನೆಯ ಸದಸ್ಯರಾಗಿ ಈಗ ತನಗೆ ದೀಕ್ಷೆ ನೀಡಲು ಕೇಳಿಕೊಂಡು ಆ ಐವರು ಹಾಗೂ ಸಭೆಯನ್ನು ದಂಗುಪಡಿಸಿದರು. ಅವರ ಹೆಸರು ಆಗ ಗೋಬಿಂ/ವಿಂದ ಸಿಂಗ್‌‌ ಎಂದಾಯಿತು.
 • ಇಂದು ಖಾಲ್ಸಾದ ಸದಸ್ಯರು ಗುರು ಗೋಬಿಂ/ವಿಂದರನ್ನು ತಮ್ಮ ತಂದೆಯನ್ನಾಗಿ, ಹಾಗೂ ಮಾತಾ ಸಾಹಿಬ್‌ ಕೌರ್‌ರನ್ನು‌ (ಗುರುಗಳ ಪತ್ನಿಯಲ್ಲ, ಬದಲಿಗೆ ಅವರ ಮನೆವಾರ್ತೆಯ ಸದಸ್ಯೆ) ತಮ್ಮ ತಾಯಿಯನ್ನಾಗಿ ಪರಿಗಣಿಸುತ್ತಾರೆ.[೨೧] ಆದ್ದರಿಂದ ಪಂಜ್‌ ಪಯರೆ ಗಳು ಮೊದಲ ಜ್ಞಾನಸ್ನಾನಿತ ಸಿಖ್ಖರಾಗಿದ್ದು, ನಂತರ ಖಾಲ್ಸಾ ಸಹೋದರತ್ವದ ಪ್ರಥಮ ಸದಸ್ಯರಾದರು. ಮಹಿಳೆಯರನ್ನು ಕೂಡಾ ಖಾಲ್ಸಾದೊಳಗೆ ಸೇರಿಸಿಕೊಳ್ಳಲಾಯಿತಲ್ಲದೇ, ಅವರಿಗೆ ಕೌರ್‌ ("ರಾಜಕುಮಾರಿ") ಎಂಬ ಬಿರುದನ್ನು ನೀಡಿದರು.[೧೯] ಗುರು ಗೋಬಿಂದ್‌‌ ಸಿಂಗ್‌‌ ಆಗ ಸಭಿಕರನ್ನುದ್ದೇಶಿಸಿ ಮಾತಾಡಿದರು -
From now on, you have become casteless. No ritual, either Hindu or Muslim, will you perform nor will you believe in superstition of any kind, but only in one God who is the master and protector of all, the only creator and destroyer. In your new order, the lowest will rank with the highest and each will be to the other a bhai (brother). No pilgrimages for you any more, nor austerities but the pure life of the household, which you should be ready to sacrifice at the call of Dharma. Women shall be equal of men in every way. No purdah (veil) for them anymore, nor the burning alive of a widow on the pyre of her spouse (sati). He who kills his daughter, the Khalsa shall not deal with him.

Five K's you will observe as a pledge of your dedication to my ideal.

 • Kesh: Hair unshorn representation of saintliness.
 • Kangha: a comb to keep hair clean and untangled.
 • Kara: a iron/steel bracelet to denote one universal God and to keep you handcuffed from doing wrong .
 • Kacchha: a piece of practical wear to denote modesty.
 • Kirpan: a steel dagger for your defence and to defend the helpless.

Smoking being an unclean and injurious habit, you will forswear. You will love the weapons of war, be excellent horsemen, marksmen and wielders of the sword, the discus and the spear. Physical prowess will be as sacred to you as spiritual sensitivity. And, between the Hindus and Muslims, you will act as a bridge, and serve the poor without distinction of caste, colour, country or creed. My Khalsa shall always defend the poor, and Deg (community kitchen) will be as much an essential part of your order as Teg (the sword). And, from now onwards Sikh males will call themselves 'Singh' and women 'Kaur' and greet each other with 'Waheguruji ka Khalsa, Waheguruji ki fateh (The Khalsa belongs to God; victory belongs to God).[೨೨]

 • ಗುರುಗಳ ಇವೆಲ್ಲಾ ನಡೆಗಳ ಫಲಿತಾಂಶವಾಗಿ ೧೮ನೇ ಹಾಗೂ ೧೯ನೇ ಶತಮಾನಗಳಲ್ಲಿ ಸಿಖ್‌‌ ಧರ್ಮದ ನಾಯಕರಲ್ಲಿ ಕೆಲವರು ಕ್ಷತ್ರಿಯ ವರ್ಣದಿಂದ ಬಂದಿದ್ದರೂ ಅದರ ನಿಜವಾದ ಹೆಚ್ಚಿದ ಸಾಮರ್ಥ್ಯಕ್ಕೆ ಕಾರಣ ಭಾರತೀಯ ಸಮಾಜದ ಮೂರು, ನಾಲ್ಕನೇ ಹಾಗೂ ಐದನೇ ವರ್ಗದ ವ್ಯಕ್ತಿಗಳಾಗಿದ್ದುದು. ಪ್ರಥಮ ಅಮೃತ ಮಹೋತ್ಸವ/ಸಮಾರಂಭದ ಒಂದು ಆಸಕ್ತಿದಾಯಕ ಪ್ರಾತಿನಿಧಿಕೆಯಲ್ಲಿ ಅಂಗಾತವಾಗಿ ನೆಲದ ಮೇಲೆ ಬಿದ್ದಿರುವ ಎರಡು ಸತ್ತ ಗಿಡುಗಗಳನ್ನು ಕೊಂದ ಎರಡು ಪಾರಿವಾಳಗಳು ಅಮೃತದ ಬಟ್ಟಲುಗಳ ಮೇಲೆ ಕುಳಿತಿರುವ ಚಿತ್ರವೊಂದರಲ್ಲಿ ನೋಡ ಬಹುದು. ಸಾಂಕೇತಿಕವಾಗಿ, ಪಾರಿವಾಳಗಳು ಅಂದರೆ ಸಿಖ್ಖರು, ತಮ್ಮನ್ನು ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿರುವ ಗಿಡುಗಗಳ ಮೇಲೆ ಅಂದರೆ ಶಕ್ತಿಶಾಲಿ ಸಮರಾಸಕ್ತರ ಮೇಲೆ ನಿಯಂತ್ರಣ ಸಾಧಿಸಿರುವುದನ್ನು ಇದು ಪ್ರತಿನಿಧಿಸುತ್ತದೆ.[೨೩]

ಗುರು ಗೋಬಿಂದ್‌‌ ಸಿಂಗ್‌ರ ಅನೇಕ ಕವಿತೆಗಳ ಪೈಕಿ ಒಂದರಲ್ಲಿ ಖಾಲ್ಸಾದ ಬಗ್ಗೆ ‌ಅವರಿಗಿರುವ ಗೌರವವು ತುಂಬಾ ಚೆನ್ನಾಗಿ ವ್ಯಕ್ತವಾಗುತ್ತದೆ:

All the battles I have won against tyranny

I have fought with the devoted backing of the people;

Through them only have I been able to bestow gifts,

Through their help I have escaped from harm;

The love and generosity of these Sikhs

Have enriched my heart and home.

Through their grace I have attained all learning;

Through their help in battle I have slain all my enemies.

I was born to serve them, through them I reached eminence.

What would I have been without their kind and ready help?

There are millions of insignificant people like me.

True service is the service of these people.

I am not inclined to serve others of higher caste:

Charity will bear fruit in this and the next world,

If given to such worthy people as these;

All other sacrifices are and charities are profitless.

From toe to toe, whatever I call my own,

All I possess and carry, I dedicate to these people.

[೨೪]

ಶಿವಾಲಿಕ್‌‌ ಪರ್ವತಶ್ರೇಣಿಯ ರಾಜರುಗಳೊಂದಿಗಿನ ಘರ್ಷಣೆ[ಬದಲಾಯಿಸಿ]

ಸೇನಾ ಪಂಕ್ತಿಯಾದ ಖಾಲ್ಸಾದ ರಚನೆಯು ಶಿವಾಲಿಕ್‌‌ ಪರ್ವತಶ್ರೇಣಿರಾಜರುಗಳಿಗೆ ಎಚ್ಚರಿಕೆಯನ್ನು ರವಾನಿಸಿತು. ಅವರೆಲ್ಲರೂ ಆ ಪ್ರದೇಶದಿಂದ ಗುರುಗಳನ್ನು ಹೊರಹಾಕಲು ಒಟ್ಟಾಗಿ ಸೇರಿದರು, ಆದರೆ ಅವರ ೧೭೦೦-೦೪ರವರೆಗಿನ ದಂಡಯಾತ್ರೆಗಳು ನಿಷ್ಫಲಗೊಂಡವು. ಬಾಲಿಯಾ ಚಂದ್‌‌ ಹಾಗೂ ಅಲಿಮ್‌‌ ಚಂದ್‌‌, ಎಂಬ ಇಬ್ಬರು ಪರ್ವತ ಪ್ರಧೇಶಗಳ ಮುಖ್ಯಸ್ಥರು, ಅವರು ಬೇಟೆಯಾಡುವ ಕಾರ್ಯಚರಣೆಯಲ್ಲಿ ತೊಡಗಿರುವಾಗ ಗುರುಗಳ ಮೇಲೆ ಹಠಾತ್‌‌ ಆಕ್ರಮಣ ಮಾಡಿದರು.[೨೫] ಆಗ ಉದ್ಭವಿಸಿದ ಕಾಳಗದಲ್ಲಿ, ಅಲಿಮ್‌‌ ಚಂದ್‌‌ ತಪ್ಪಿಸಿಕೊಳ್ಳಲು ಯಶಸ್ವಿಯಾದರೂ, ಬಾಲಿಯಾ ಚಂದ್‌‌ನನ್ನು ಗುರುಗಳ ಸಹಾಯಕ ಉದೆ ಸಿಂಗ್‌‌ ಕೊಂದರು.

ಗುರುಗಳ ಹೆಚ್ಚುತ್ತಲಿರುವ ಬಲವನ್ನು ನಿಯಂತ್ರಿಸಲು ಮಾಡಿದ ಅನೇಕ ಯತ್ನಗಳು ವಿಫಲಗೊಂಡ ನಂತರ, ಪರ್ವತ ಪ್ರದೇಶಗಳ ಮುಖ್ಯಸ್ಥರು ಮೊಘಲ್‌ ಅರಸರ ಬಳಿ ಗುರುಗಳನ್ನು ಹತ್ತಿಕ್ಕಲು ತಮಗೆ ಸಹಾಯ ಮಾಡುವಂತೆ ಅಹವಾಲು ಸಲ್ಲಿಸಿದರು. ಅದಕ್ಕೆ ಪ್ರತಿಕ್ರಿಯೆಯಾಗಿ, ದೆಹಲಿಯ ಮೊಘಲ್‌‌/ಲರ ರಾಜಪ್ರತಿನಿಧಿಯು ತನ್ನ ಸೇನಾಮುಖ್ಯಸ್ಥರುಗಳಾದ ಡಿನ್‌ ಬೆಗ್‌‌ ಹಾಗೂ ಪೈಂದಾ ಖಾನ್‌‌ ಇಬ್ಬರನ್ನೂ, ಪ್ರತಿಯೊಬ್ಬರಿಗೆ ಐದು ಸಾವಿರ ಸೈನಿಕರ ದಳದೊಂದಿಗೆ ಕಳಿಸಿಕೊಟ್ಟನು.[೨೬] ಮೊಘಲ್‌‌/ಲರ ಸೇನೆಯ ಜೊತೆಗೆ ಪರ್ವತಪ್ರದೇಶಗಳ ಮುಖ್ಯಸ್ಥರ ಸೇನೆಯೂ ಜೊತೆಗೂಡಿತು. ಆದಾಗ್ಯೂ, ಅವರು ಗುರುಗಳ ಸೇನೆಯನ್ನು ಸೋಲಿಸಲು ಸಾಧ್ಯವಾಗದೇ, ಪೈಂದಾ ಖಾನ್‌‌ ಆನಂದಪುರ್‌‌/ರದ ಪ್ರಥಮ ಸಂಗ್ರಾಮದಲ್ಲಿ(೧೭೦೧) ಮರಣಿಸಿದನು.

 • ಗುರುಗಳ ಹೆಚ್ಚಿದ ಪ್ರಭಾವಗಳಿಂದ ವಿಹ್ವಲರಾದ, ಅನೇಕ ಪರ್ವತ ಪ್ರದೇಶಗಳ ರಾಜರು ಬಿಲಾಸ್‌‌ಪುರ್‌‌/ರದಲ್ಲಿ ಪರಿಸ್ಥಿತಿಯ/ಸಂದರ್ಭದ ಬಗ್ಗೆ ಚರ್ಚಿಸಲು ಒಟ್ಟಾಗಿ ಸೇರಿದರು. ಭೀಮ್‌ ಚಂದ್‌ನ ಪುತ್ರ, ಕಹ್ಲೂರ್‌‌/ರ ಸಂಸ್ಥಾನದ ರಾಜಾ ಅಜ್ಮೇರ್‌ ಚಂದ್‌‌ ಗುರುಗಳ ಏರುಮುಖವಾಗುತ್ತಿರುವ ಬಲವನ್ನು ನಿಗ್ರಹಿಸಲು ಮೈತ್ರಿಕೂಟವೊಂದನ್ನು ರಚಿಸಿಕೊಳ್ಳಬಹುದೆಂದು ಸಲಹೆ ನೀಡಿದ. ಅದೇ ಪ್ರಕಾರವಾಗಿ, ರಾಜರುಗಳೆಲ್ಲಾ ಸೇರಿ ಮೈತ್ರಿಕೂಟವೊಂದನ್ನು ರಚಿಸಿಕೊಂಡು ಆನಂದಪುರ್‌‌/ರದೆಡೆಗೆ ಸೇನೆಗಳನ್ನು ನಡೆಸಿದರು.
 • ಅವರು ಗುರುಗಳಿಗೆ ಆನಂದಪುರ್‌‌/ರಕ್ಕೆ (ಅಜ್ಮೇರ್‌ ಚಂದ್‌‌ನ ಸಂಸ್ಥಾನದಲ್ಲಿ ಇರುವ) ನೀಡಬೇಕಾದ ಬಾಕಿ ಕಂದಾಯ/ಗೇಣಿ/ಬಾಡಿಗೆಯನ್ನು ಪಾವತಿಸಿ, ಅಲ್ಲಿಂದ ಹೊರನಡೆಯಬೇಕೆಂದು ಸೂಚಿಸಿರುವ ಸಂದೇಶವೊಂದನ್ನು ಕಳುಹಿಸಿದರು. ಗುರುಗಳು ಆ ಪ್ರದೇಶವನ್ನು ತನ್ನ ತಂದೆಯು ಕೊಂಡುಕೊಂಡಿದ್ದುದರಿಂದ ಅದು ತಮ್ಮ ಸ್ವಂತ ಆಸ್ತಿಯೆಂದು ಪ್ರತಿಪಾದಿಸಿದರು/ಪಟ್ಟು ಹಿಡಿದರು. ಇದಾದ ನಂತರ 1701ರಿಂದ 1704ರವರೆಗೆ ಕದನ ನಡೆಯಿತು.
 • ಪರ್ವತ ಪ್ರದೇಶಗಳ ರಾಜರುಗಳ ಜೊತೆ ಜಗತುಲ್ಲಾನ ನೇತೃತ್ವದಲ್ಲಿ ಬಹು ಸಂಖ್ಯೆಯ ಗುಜ್ಜಾರರು ಕೂಡಾ ಸೇರಿಕೊಂಡರು. ಮಹ್ಜಾ ಪ್ರದೇಶದಿಂದ ದು/ಡುನಿ ಚಂದ್‌‌ ಐದುನೂರು ಮಂದಿ ಸೈನಿಕರನ್ನು ಗುರುಗಳಿಗೆ ಸಹಾಯ ಮಾಡಲು ಕಳಿಸಿದನು. ಇತರೆ ಪ್ರದೇಶ ಗಳಿಂದಲೂ ಸಹಾ ಹೆಚ್ಚುವರಿ ಸೇನಾ ಸಮೂಹವು ಗುರುಗಳಿಗೆ ಸಹಾಯ ಮಾಡಲು ಆಗಮಿಸಿದವು. ಎರಡನೇ ಆನಂದಪುರ್‌‌/ರ ಕದನ ಎಂದು ಹೆಸರಾದ ಈ ಹೋರಾಟದ ಪರಿಣಾಮವಾಗಿ, ಪರ್ವತ ಪ್ರದೇಶಗಳ ರಾಜರು ಹಿಮ್ಮೆಟ್ಟಬೇಕಾಯಿತು.[೨೭]

ನಂತರ, ಪರ್ವತ ಪ್ರದೇಶಗಳ ರಾಜರು ತಾತ್ಕಾಲಿಕವಾಗಿ ಆನಂದಪುರ್‌‌/ರವನ್ನು ತೊರೆಯುವಂತೆ ಗುರುಗಳೊಂದಿಗೆ ಸಂಧಾನವನ್ನೇರ್ಪಡಿಸಿಕೊಂಡರು. ಆ ಪ್ರಕಾರವಾಗಿ, ಗುರುಗಳು ನಿರ್ಮೋಹ್‌ ಗ್ರಾಮಕ್ಕೆ ತೆರಳಿದರು.[೨೮]

 • ನಿರ್ಮೋಹ್‌ ಗ್ರಾಮವು ಕೋಟೆಯಿಲ್ಲದ ಕಾರಣ ರಕ್ಷಣೆಯನ್ನು ಹೊಂದಿರದೇ ಇರುವುದನ್ನು ಗಮನಿಸಿದ ರಾಜಾ ಅಜ್ಮೇರ್‌ ಚಂದ್‌‌ ಹಾಗೂ ಕಾಂಗ್ರಾದ ರಾಜರು ಗುರುಗಳ ಶಿಬಿರದ ಮೇಲೆ ಆಕ್ರಮಣ ಮಾಡಿದರು. ಆದಾಗ್ಯೂ, ಅವರು ಗುರುಗಳನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿಯೇ, ರಾಜಾ ಅಜ್ಮೇರ್‌ ಚಂದ್‌‌ ಸಿರ್ಹಿಂದ್‌‌ ಹಾಗೂ ದೆಹಲಿಗಳಲ್ಲಿನ ಮೊಘಲ್‌‌/ಲರ ರಾಜಪ್ರತಿನಿಧಿಗಳಿಗೆ ಗುರುಗಳ ವಿರುದ್ಧ ಅವರ ಸಹಾಯ ಕೋರಿ ತನ್ನ ದೂತರನ್ನು ಕಳಿಸಿರುತ್ತಾನೆ.
 • ಸಿರ್ಹಿಂದ್‌‌ ರಾಜಪ್ರತಿನಿಧಿ ವಾ/ವಜಿರ್‌ ಖಾನ್‌ನ ಸೇನೆ ಪರ್ವತ ಪ್ರದೇಶಗಳ ರಾಜರುಗಳಿಗೆ ಸಹಾಯ ಮಾಡಲು ಬಂದಿರುತ್ತದೆ. ವಾ/ವಜಿರ್‌ ಖಾನ್‌ನ ಸೇನೆಯು ಮಾಡಿದ ಆಕ್ರಮಣದಿಂದ ಗುರುಗಳು ಹಿಮ್ಮೆಟ್ಟಿ ಗುರುಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದ ರಾಜನ ಸ್ಥಳವಾದ ಬಸೋಲಿಗೆ ಹಿಮ್ಮೆಟ್ಟಬೇಕಾಯಿತು. ಬಸೋಲಿಯಲ್ಲಿ ಕೆಲದಿನಗಳು ಉಳಿದುಕೊಂಡ ನಂತರ, ಗುರು ಆನಂದಪುರ್‌‌/ರಕ್ಕೆ ಮರಳಿ ತಮ್ಮ ಸೇನೆಯೊಂದಿಗೆ ನಡೆದರು ಹಾಗೂ ಪರ್ವತ ಪ್ರದೇಶಗಳ ರಾಜರು ಅವರೊಂದಿಗೆ ಶಾಂತಿಯಿಂದಿರಲು ನಿರ್ಧರಿಸಿದರು.
 • ಆದಾಗ್ಯೂ, ಎರಡು ವರ್ಷಗಳ ಶಾಂತಿಯ ನಂತರ, ರಾಜರುಗಳ ಹಾಗೂ ಗುರುಗಳ ನಡುವಿನ ಶತೃತ್ವವು ಗುರುಗಳ ಬಲ ಏರುಮುಖವಾಗುತ್ತಿದ್ದುದರಿಂದ ಹಾಗೂ ಸಿಖ್ಖರು ಹಾಗೂ ರಾಜರುಗಳ ಸೈನ್ಯದ ನಡುವಿನ ಘರ್ಷಣೆಗಳಿಂದಾಗಿ ಮರುಕಳಿಸಿತು. ಹಿಂದೂರ್‌‌, ಛಂಬ ಹಾಗೂ ಫತೇಹ್‌ಪುರ್‌‌‌ಗಳ ರಾಜರುಗಳು ರಾಜಾ ಅಜ್ಮೇರ್‌ ಚಂದ್‌‌ನೊಂದಿಗೆ ಮೈತ್ರಿಯನ್ನು ಮಾಡಿಕೊಂಡು ಆನಂದಪುರ್‌‌/ರಕ್ಕೆ ೧೭೦೩-೦೪ರಲ್ಲಿ ಮುತ್ತಿಗೆ ಹಾಕಿದರು. ಅವರು ಮೂರನೇ ಆನಂದಪುರ್‌‌/ರದ ಕದನದಲ್ಲಿ ಗುರುಗಳನ್ನು ಹೊರಹಾಕಲಾರದೇ ಹಿಮ್ಮೆಟ್ಟಬೇಕಾಯಿತು.
 • ಪರ್ವತ ಪ್ರದೇಶಗಳ ರಾಜರುಗಳು ಪದೇ ಪದೇ ಮಾಡಿದ ಕೋರಿಕೆಗಳ ಮೇರೆಗೆ, ಮೊಘಲ್‌‌/ಲರ ಚಕ್ರವರ್ತಿಯು ಸಯ್ಯದ್‌ ಖಾನ್‌'ನ ಅಧಿಪತ್ಯದಡಿಯಲ್ಲಿ ಬೃಹತ್‌ ಸೈನ್ಯವನ್ನು ಗುರುಗಳ ಬಲವನ್ನು ನಿಗ್ರಹಿಸಲು ಕಳಿಸಿದನು. ಸಯ್ಯದ್‌ ಖಾನ್‌, ಪೀರ್‌‌ ಬುಧು ಷಾಹ್‌ರ ಭಾವನೆಂಟ/ಭಾವಮೈದುನನಾಗಿದ್ದರಿಂದ‌‌, ಪೀರ್‌ ಅವರ ಬಗ್ಗೆ ಬಹಳ ಹೊಗಳಿದ್ದರಿಂದ ಸೇನೆಯನ್ನು ತೊರೆದು ಗುರುಗಳ ಕಡೆಗೆ ಸೇರಿದ.
 • ನಂತರ ರಮ್‌ಜಾನ್‌‌ ಖಾನ್‌ ಚಕ್ರವರ್ತಿಯ ಸೈನ್ಯದ ಅಧಿಪತ್ಯವನ್ನು ಪಡೆದುಕೊಂಡು, ಪರ್ವತ ಪ್ರದೇಶಗಳ ರಾಜರುಗಳೊಂದಿಗೆ ಮೈತ್ರಿ ಮಾಡಿಕೊಂಡು ಆನಂದಪುರ್‌‌/ರದ ಮೇಲೆ ಮಾರ್ಚ್‌ ೧೭೦೪ರಲ್ಲಿ ದಂಡೆತ್ತಿ ಹೋದನು. ಅದು ವರ್ಷದ ಕಟಾವಿನ ಅವಧಿಯಾಗಿದ್ದು, ಗುರುಗಳ ಅನುಯಾಯಿಗಳಲ್ಲಿ ಬಹುಪಾಲು ಜನ ತಮ್ಮ ಮನೆಗಳಿಗೆ ಮರಳಿದ್ದರು.
 • ಗುರುಗಳ ಬಳಿ ತಮ್ಮ ಇಬ್ಬರು ಮುಸ್ಲಿಮ್‌ ಅಭಿಮಾನಿಗಳಾದ, ಮೈಯಮ್‌‌‌ ಖಾನ್‌ ಹಾಗೂ ಸಯ್ಯದ್‌ ಬೆಗ್‌‌‌ರವರುಗಳ ಬೆಂಬಲದ ಹೊರತಾಗಿಯೂ ಸೈನಿಕರ ಸಂಖ್ಯೆ ಕಡಿಮೆಯಿದ್ದುದರಿಂದ ಅವರು ಆನಂದಪುರ್‌‌/ರವನ್ನು ತೊರೆಯಲು ನಿರ್ಧರಿಸಿದರು.[೨೯] ಮೊಘಲ್‌‌/ಲರ ಸೈನ್ಯವು ನಗರವನ್ನು ಕೊಳ್ಳೆ ಹೊಡೆದು ಸಿರ್ಹಿಂದ್‌‌ನೆಡೆಗೆ ಸಾಗಿತು. ಅವರು ಮರಳಿ ಹೋಗುತ್ತಿರುವಾಗ, ಗುರುಗಳ ಸೇನೆಯ ಹಠಾತ್‌‌ ಆಕ್ರಮಣಕ್ಕೆ ಸಿಕ್ಕು, ಆನಂದಪುರ್‌‌/ರದಿಂದ ಕೊಳ್ಳೆಹೊಡೆದ ವಸ್ತುಗಳನ್ನೆಲ್ಲಾ ಮರಳಿಸಬೇಕಾಯಿತು. ಆ ನಂತರ ಗುರುಗಳು ಆನಂದಪುರ್‌‌/ರಕ್ಕೆ ಮರಳಿದರು.

ಆನಂದಪುರ್‌‌/ರದಿಂದ ತೆರವುಗೊಳಿಸುವಿಕೆ[ಬದಲಾಯಿಸಿ]

 • ಪರ್ವತ ಪ್ರದೇಶಗಳ ಮುಖ್ಯಸ್ಥರು ಆಗ ಮೊಘಲ್‌‌/ಲರ ಚಕ್ರವರ್ತಿ ಔರಂಗಜೇಬ್‌‌‌ನನ್ನು, ಆತನ ಪಂಜಾಬ್‌‌‌ನ ಪ್ರಾಂತಾಧಿಪತಿ ವಾ/ವಜಿರ್‌ ಖಾನ್‌ನ ಮೂಲಕ ಗುರುಗಳನ್ನು ನಿಗ್ರಹಿಸಲು ಸಹಾಯ ಮಾಡುವಂತೆ ಕೋರಿದರು. ಅವರ ಅನೌಪಚಾರಿಕ ಪತ್ರ/ದಸ್ತೈವಜಿನಲ್ಲಿ ಅವರು ಖಾಲ್ಸಾದ
which is contrary to all our cherished beliefs and customs. He (Gobind Singh) wants us to join hands with him to fight our Emperor against whom he harbours profound grudge. This we refused to do, much to his annoyance and discomfiture. He is now gathering men and arms from all over the country to challenge the Mughal Empire. We cannot restrain him, but as loyal subjects of your Majesty, we seek your assistence to drive him out of Anandpur and not allow grass to grow beneath your feet. Otherwise, he would become a formidable challenge to the whole empire, as his intentions are to march upon Delhi itself.[೩೦][೩೧]

ಹೊಸ ಪಡೆಯನ್ನು ರಚಿಸಿರುವ ವಿಷಯವನ್ನೂ ಪ್ರಸ್ತಾಪಿಸಲಾಗಿತ್ತು

 • ರಾಜಾ ಅಜ್ಮೇರ್‌ ಚಂದ್‌‌ರ ಕೋರಿಕೆ ಮೇರೆಗೆ, ಮೊಘಲ್‌‌/ಲರ ಚಕ್ರವರ್ತಿ ಸಿರ್ಹಿಂದ್‌‌, ಲಾಹೋರ್‌‌ ಹಾಗೂ ಕಾಶ್ಮೀರ್‌/ರ‌ಗಳ ರಾಜಪ್ರತಿನಿಧಿಗಳಿಗೆ ಗುರುಗಳ ವಿರುದ್ಧ ಯುದ್ಧಕ್ಕೆ ತೊಡಗಲು ಆದೇಶಿಸಿದನು. ಮೊಘಲ್‌‌/ಲರ ಸೇನೆಯು ಪರ್ವತ ಪ್ರದೇಶಗಳ ರಾಜರು, ಆ ಪ್ರದೇಶಗಳ ರಂಘಾರ್‌ಗಳು ಹಾಗೂ ಗುರ್ಜಾರರುಗಳ ಸೇನೆಯೊಂದಿಗೆ ಸೇರಿಕೊಂಡಿತು. ಗುರುಗಳು ಕೂಡಾ ಯುದ್ಧಕ್ಕೆ ತಯಾರಿ ನಡೆಸಿದರು.
 • ಮಜ್ಹಾ, ಮಾಲ್ವಾ, ಡೊವಾಬಾ ಹಾಗೂ ಇತರೆ ಪ್ರದೇಶಗಳಿಂದ ಅವರ ಅನುಯಾಯಿಗಳು ಆನಂದಪುರ್‌‌/ರದಲ್ಲಿ ಸೇರಿದರು. ಚಕ್ರವರ್ತಿಯ ಪಡೆಗಳು ಆನಂದಪುರ್‌‌/ರದ ಮೇಲೆ ಆಕ್ರಮಣ ಮಾಡಿ 1705ರಲ್ಲಿ ನಗರದ ಸುತ್ತಾ ಮುತ್ತಿಗೆ ಹಾಕಿದರು. ಮುತ್ತಿಗೆಯನ್ನು ಹಾಕಿ ಕೆಲದಿನಗಳು ಕಳೆದ ನಂತರ, ರಾಜಾ ಅಜ್ಮೇರ್‌ ಚಂದ್‌‌ ತನ್ನ ದೂತನೋರ್ವನನ್ನು ಗುರುಗಳೆಡೆಗೆ ಕಳಿಸಿ, ಗುರುಗಳು ಆನಂದಪುರ್‌‌/ರವನ್ನು ತೆರವುಗೊಳಿಸಿದರೆ ಮುತ್ತಿಗೆಯನ್ನು ಹಿಂತೆಗೆದುಕೊಳ್ಳುವುದಾಗಿ ಸಂದೇಶ ಮುಟ್ಟಿಸಿದನು.
 • ಗುರುಗಳು ಈ ಪ್ರಸ್ತಾಪಕ್ಕೆ ನಿರಾಕರಿಸಿದರೂ, ಆಹಾರ ಹಾಗೂ ಇತರ ಅಗತ್ಯ ವಸ್ತುಗಳ ಕೊರತೆಯಿಂದಾಗಿ ಬಳಲುತ್ತಿದ್ದ ಅವರ ಅನುಯಾಯಿಗಳಲ್ಲಿ ಅನೇಕರು ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸುವಂತೆ ಕೋರಿದರು. ಸಮಯ ಕಳೆದಂತೆ ಹೆಚ್ಚು ಹೆಚ್ಚು ಅನುಯಾಯಿಗಳು ಗುರುಗಳನ್ನು ಅಜ್ಮೇರ್‌ ಚಂದ್‌‌'ನ ಪ್ರಸ್ತಾಪವನ್ನು ಒಪ್ಪುವಂತೆ ಒತ್ತಡ ಹೇರಿದುದರಿಂದ, ಅವರು ಅಜ್ಮೇರ್‌ ಚಂದ್‌‌ನಿಗೆ ಮೈತ್ರಿ ಸೇನೆಯು ಅವರ ಖಜಾನೆ ಹಾಗೂ ಇತರೆ ಆಸ್ತಿ/ವಸ್ತುಗಳನ್ನು ನಗರದಿಂದ ಹೊರಗೆ ತೆಗೆದುಕೊಂಡು ಹೋಗುವುದಕ್ಕೆ ಮೊದಲು ಅವಕಾಶ ನೀಡಿದರೆ ಆನಂದಪುರ್‌‌/ರವನ್ನು ತಾವು ತೆರವುಗೊಳಿಸುವುದಾಗಿ ಸೂಚಿಸಿದ ಸಂದೇಶವನ್ನು ಕಳಿಸಿದರು.
 • ಮೈತ್ರಿ ಸೇನೆಯು/ಗಳು ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿತು. ಗುರುಗಳು, ಅವರ ಪ್ರಾಮಾಣಿಕತೆಯನ್ನು ಪರೀಕ್ಷಿಸಲು, ರಾಸು/ಎತ್ತುಗಳನ್ನು ತುಂಬಿದ ಛಾವಣಿಬಂಡಿಯನ್ನು ಕೋಟೆಯ ಹೊರಗೆ ಕಳಿಸಿಕೊಟ್ಟರು. ಆದಾಗ್ಯೂ, ಮೈತ್ರಿ ಸೇನೆಯು/ಗಳು ವಸ್ತುಗಳನ್ನು/ಐಶ್ವರ್ಯ ವನ್ನು ಸೂರೆಗೊಳ್ಳಲು ಛಾವಣಿಬಂಡಿಯನ್ನು ಆಕ್ರಮಿಸಿದರು. ಅವರಿಗೆ ನಿರಾಶೆಯಾಗುವ ಮಟ್ಟಿಗೆ ಛಾವಣಿಬಂಡಿಯಲ್ಲಿ ಕೆಲ ಕಳಪೆ ವಸ್ತುಗಳ ಹೊರತಾಗಿ ಯಾವುದೇ ಐಶ್ವರ್ಯವನ್ನು ಹೊಂದಿರಲಿಲ್ಲ.
 • ಗುರುಗಳು ಆಗ ಆನಂದಪುರ್‌‌/ರವನ್ನು ತೆರವುಗೊಳಿಸದಿರಲು ನಿರ್ಧರಿಸಿದರಲ್ಲದೇ ಮೈತ್ರಿ ಸೇನೆಯು/ಗಳ ಮುಂದಿನ ಯಾವುದೇ ಪ್ರಸ್ತಾಪಗಳನ್ನು ಒಪ್ಪಲು ನಿರಾಕರಿಸಿದರು.ಅಂತಿಮವಾಗಿ, ಗುರುಗಳಿಗೆ ಮೊಘಲ್‌‌/ಲರ ಚಕ್ರವರ್ತಿ ಔರಂಗಜೇಬ್‌‌‌ ಆನಂದಪುರ್‌‌/ರವನ್ನು ತೆರವು ಗೊಳಿಸುವುದಾದರೆ ಗುರುಗಳು ಹಾಗೂ ಅವರ ಅನುಯಾಯಿಗಳಿಗೆ ಸುರಕ್ಷಿತವಾಗಿ ಹೊರಹೋಗಲು ಅನುವು ಮಾಡಿಕೊಡುವುದಾಗಿ ತಿಳಿಸಿದ ಖುರಾನ್‌ನ ಹೆಸರಿನಲ್ಲಿ ಪ್ರಮಾಣ ಮಾಡಿ ಸಹಿ ಮಾಡಿದ ಪತ್ರವೊಂದನ್ನು ಕಳುಹಿಸಿದನು.
 • ತಮ್ಮ ಅನುಯಾಯಿಗಳು ಹಾಗೂ ಕುಟುಂಬದಿಂದ ವಿಪರೀತ ಒತ್ತಡಕ್ಕೊಳಗಾದ ಗುರುಗಳು, ಪ್ರಸ್ತಾಪವನ್ನು ಒಪ್ಪಿಕೊಂಡು ೨೦-೨೧ ಡಿಸೆಂಬರ್‌ ೧೭೦೫ರ ಸಮಯದಲ್ಲಿ ಆನಂದಪುರ್‌‌/ರವನ್ನು ತೆರವುಗೊಳಿಸಿದರು. ಅವರು ಆನಂದಪುರ್‌‌/ರವನ್ನು ತೊರೆದ ಪ್ರಥಮ ರಾತ್ರಿ, ಗುರುಗಳ ಪಡೆಯ ಮೇಲೆ ಚಕ್ರವರ್ತಿಯ ಸೈನ್ಯವು ದಾಳಿಯಿಟ್ಟಿತು. ಸಾಕಷ್ಟು ಚಕಮಕಿಯ ನಂತರ ಗುರುಗಳು ಹಾಗೂ ಅವರ ಅನುಯಾಯಿಗಳು ಸಿರ್ಸಾ ನದಿಯ ದಡಕ್ಕೆ ತಲುಪಿದರು.
 • ಆದರೆ ಈ ಗುಂಪು ಪ್ರವಾಹಕ್ಕೀಡಾದ ಸಿರ್ಸಾ (ಹಾಗೂ ಸರ್ಸಾ) ನದಿಯನ್ನು ದಾಟುವಾಗ ಒಟ್ಟಾಗಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಗುರುಗಳ ತಾಯಿ, ಹಾಗೂ ಅವರ ಇಬ್ಬರು ಎಳೆಯ ಪುತ್ರರಾದ, ಫತೇಹ್‌ ಸಿಂಗ್‌‌ ಹಾಗೂ ಝೊರಾವರ್‌‌ ಸಿಂಗ್‌‌, ಪ್ರಮುಖ ಗುಂಪಿ ನಿಂದ ತಪ್ಪಿಸಿಕೊಂಡರು. ಗುರುಗಳ ವೃದ್ಧ ಸೇವಕ ಗಂಗು, ಅವರನ್ನು ತನ್ನ ಗ್ರಾಮವಾದ ಖೇರಿಯೆಡೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋದನು.
 • ಅವರ ಪತ್ನಿ ಮಾತಾ ಜಿತೋರವರು, ಮಾತಾ ಸಾಹಿಬ್‌ ಕೌರ್‌‌ರನ್ನೂ ಒಳಗೊಂಡ ಮತ್ತೊಂದು ಗುಂಪಿನಲ್ಲಿದ್ದರು ; ಜವಾಹರ್‌ ಸಿಂಗ್‌‌ ಈ ಗುಂಪನ್ನು ದೆಹಲಿಗೆ ಕ್ಷೇಮವಾಗಿ ತಲುಪಿಸುತ್ತಾನೆ. ನದಿಯಲ್ಲಿನ ಪ್ರವಾಹವು ಗುರುಗಳ ಅನೇಕ ಅನುಯಾಯಿಗಳು ಮುಳುಗುವಂತೆ ಮಾಡಿತಲ್ಲದೇ ವಸ್ತುಗಳ ಹಾಗೂ ಸಾಹಿತ್ಯದ ತೀವ್ರವಾದ ನಷ್ಟವನ್ನು ಉಂಟುಮಾಡಿತು.
 • ಗುರುಗಳು, ತಮ್ಮ ಇಬ್ಬರು ಪುತ್ರರು ಹಾಗೂ ಕೆಲ ಇತರೆ ಸಿಖ್ಖರುಗಳೊಂದಿಗೆ, ನದಿಯನ್ನು ದಾಟಲು ಸಾಧ್ಯವಾಯಿತಲ್ಲದೇ ನದಿಯ ಮತ್ತೊಂದು ಬದಿಯ ಘನೌಲಾ ಗ್ರಾಮವನ್ನು ತಲುಪಿದರು. ಅವರು ನೂರು ಅನುಯಾಯಿಗಳು/ಳ ತಂಡವೊಂದನ್ನು ಬಛಿತಾರ್‌‌ ಸಿಂಗ್‌‌ರ ನೇತೃತ್ವದಲ್ಲಿ ರೂಪರ್‌‌‌ನೆಡೆಗೆ ಸೇನೆಯನ್ನು ಕಳಿಸಲು ಆದೇಶಿಸಿದರು. ಗುರುಗಳು, ಉಳಿದ ಅನುಯಾಯಿಗಳೊಂದಿಗೆ, ಅವರ ನಂಬಿಕಾರ್ಹ ಪಠಾಣ್‌‌/ಣ ನಿಹಾಂಗ್‌‌ ಖಾನ್‌‌ರಲ್ಲಿ ಉಳಿದುಕೊಳ್ಳಲು ರೂಪರ್‌‌‌ನ ಬಳಿಯ ಕೋಟ್ಲಾ ನಿಹಂಗ್‌‌ನೆಡೆಗೆ ಸಾಗಿದರು.
 • ಅಲ್ಲಿಂದ ಮಚ್ಛಿವಾರಾ ಹಾಗೂ ರಾಯ್‌ಕೋಟ್‌‌ಗಳೆಡೆಗೆ ಸಾಗಿದ ಅವರು ಬುರ್‌‌ ಮಜ್ರಾದಲ್ಲಿ ಉಳಿದುಕೊಂಡರು. ಆಗ ಅವರಿಗೆ ಸಿರ್ಹಿಂದ್‌‌ನಿಂದ ಬಂದಿರುವ ದೊಡ್ಡ ಸೇನೆಯು ಅವರನ್ನು ಅಟ್ಟಿಸಿಕೊಂಡು ಬರುತ್ತಿದೆಯೆಂದು ತಿಳಿಯಿತು. ಅವರು ಛಮ್‌ಕೌರ್‌‌ನ ಕೋಟೆಯಲ್ಲಿ ಶತ್ರು ಪಡೆಗಳನ್ನು ಎದುರಿಸಲು ನಿರ್ಧರಿಸಿದರು.
ಚಿತ್ರ:Sahibzada Ajit Singh.JPG
ಸಾಹಿಬ್‌ಜಾದಾ ಜುಝಾರ್‌ ಸಿಂಗ್‌‌ ನೋಡುತ್ತಿರುವಾಗ ಸಾಹಿಬ್‌ಜಾದಾ ಅಜಿತ್‌‌ ಸಿಂಗ್‌‌ ಛಮ್‌ಕೌರ್‌‌ನಲ್ಲಿ ಕದನಭೂಮಿಗೆ ಹೊರಡುವ ಮುಂಚಿನ ಸನ್ನಿವೇಶದ ಚಿತ್ರ
 • ಚಕ್ರವರ್ತಿಯ ಸೇನೆಯು/ಸೇನಾಪಡೆಯು ಛಮ್‌ಕೌರ್‌‌ ಕೋಟೆಯನ್ನು ಡಿಸೆಂಬರ್‌ 1705ರಲ್ಲಿ, ಮುತ್ತಿಗೆ ಹಾಕಿದುದರ ಪರಿಣಾಮವಾಗಿ ಛಮ್‌ಕೌರ್‌‌ನ ಕದನ ನಡೆಯಿತು. ಗುರು ಗೋಬಿಂದ್‌‌ ಸಿಂಗ್‌‌ರ ಇಬ್ಬರು ಹಿರಿಯ ಪುತ್ರರಾದ, ಅಜಿತ್‌‌ ಸಿಂಗ್‌‌ ಹಾಗೂ ಜುಝ್ಹಾರ್‌‌ ಸಿಂಗ್‌‌ರವರುಗಳು ಕದನಕ್ಕೆ ಧುಮುಕಿದರು. ಗುರುಗಳು ಉಳಿದ ಭಕ್ತರು/ಅನುಯಾಯಿಗಳಿಗೆ ಅಂತಿಮ ದಾಳಿಗೆ ತಯಾರಾಗಲು ಹಾಗೂ ಹೋರಾಟದಲ್ಲಿ ಮಡಿಯಲು ತಯಾರಿರಲು ಆದೇಶಿಸಿದರು.
 • ಆದರೆ, ಅವರ ಭಕ್ತರು/ಅನುಯಾಯಿಗಳು ಖಾಲ್ಸಾದ ಉಳಿಕೆಗಾಗಿ ಅವರು ಉಳಿದಿರುವ ಅವಶ್ಯಕತೆ ಇದೆಯೆಂದು ಒತ್ತಾಯ ಮಾಡಿ, ಛಮ್‌ಕೌರ್‌‌ನಿಂದ ಅವರು ತಪ್ಪಿಸಿಕೊಳ್ಳುವಂತೆ ಯೋಜನೆ ಹೂಡಿದರು. ಸಂತ್‌ ಸಿಂಗ್‌‌ ಹಾಗೂ ಸಂಗತ್‌‌ ಸಿಂಗ್‌‌ ಕೋಟೆಯಲ್ಲಿ ಉಳಿದುಕೊಳ್ಳುವುದು, ಹಾಗೂ ದಯಾ ಸಿಂಗ್‌‌, ಧರಮ್‌‌ ಸಿಂಗ್‌‌, ಹಾಗೂ ಮಾನ್‌‌‌ಸಿಂಗ್‌‌ ಗುರುಗಳನ್ನು ಛಮ್‌ಕೌರ್‌‌ನ ಹೊರಗೆ ಕರೆದುಕೊಂಡು ಹೋಗುವುದಾಗಿ ನಿರ್ಧಾರವಾಯಿತು.
 • ಗುರುಗಳು ತಮ್ಮ ಕಲ್ಘಿ (ಶಿರಸ್ತ್ರಾಣವನ್ನು ಅಲಂಕರಿಸಲು ಬಳಸುವ ಗರಿ) ಹಾಗೂ ತಮ್ಮ ಯುದ್ಧಕವಚವನ್ನು ಅವರನ್ನೇ ಹೋಲುವ ಸಿಖ್ಖನಾದ ಭಾಯಿ ಸಂತ್‌ ಸಿಂಗ್‌ಗೆ ಕೊಟ್ಟರು. ಸಂತ್‌ ಸಿಂಗ್‌‌ ಗುರುಗಳು ಉಳಿದುಕೊಳ್ಳುತ್ತಿದ್ದ ಮೇಲಿನ ಕೋಣೆಯಲ್ಲಿ ಇರುವಂತೆ ಏರ್ಪಾಡಾಗಿತ್ತು. ಗುರುಗಳು ರಾತ್ರಿಯಲ್ಲಿ ಕೆಲ ಅನುಯಾಯಿಗಳೊಂದಿಗೆ ಛಮ್‌ಕೌರ್‌‌ನಿಂದ ಹೊರನಡೆಯುತ್ತಾರೆ. ಮರುದಿನ, ಗುರುಗಳು ಇನ್ನೂ ಕೋಟೆಯೊಳಗೇ ಇದ್ದಾರೆಂದು ಭಾವಿಸಿದ ಮೊಘಲ್‌‌/ಲರ ಸೈನ್ಯ, ಕೋಟೆಯನ್ನು ಆಕ್ರಮಿಸಿ ಕೋಟೆಯೊಳಗಿದ್ದ ಎಲ್ಲಾ ಸಿಖ್ಖರನ್ನು ಕೊಲ್ಲುತ್ತದೆ.
 • ಗುರುಗಳು ತಮ್ಮ ಸಹಚರರಿಂದ ಬೇರ್ಪಟ್ಟು ಜಂಡ್‌ಸರ್‌‌ ಮತ್ತು ಬೆಹ್ಲಾಲ್‌ಪುರ್‌‌ಗಳನ್ನು ಹಾದು ಮಚ್ಛಿವಾರಾವನ್ನು ತಲುಪುತ್ತಾರೆ. ಅಲ್ಲಿ ಅವರ ಮೂವರು ಸಹಚರರು, ದಯಾ ಸಿಂಗ್‌‌, ಧರಮ್‌‌ ಸಿಂಗ್‌‌ ಮತ್ತು ಮಾನ್‌‌‌ ಸಿಂಗ್‌‌ ಅವರನ್ನು ಸೇರಿಕೊಳ್ಳುತ್ತಾರೆ. ಗುಲಾಬಾ, ಮಚ್ಛಿವಾರಾದ ಓರ್ವ ವೃದ್ಧ ಮಸಾಂಡ್‌ , ಅವರಿಗೆ ಆಶ್ರಯವನ್ನು ನೀಡಿದರೂ, ತನ್ನ ಸುರಕ್ಷತೆಯ ಬಗ್ಗೆ ಆತಂಕಿತನಾಗುತ್ತಾನೆ. ಇಬ್ಬರು ಪಠಾಣ ಕುದುರೆ ವ್ಯಾಪಾರಿಗಳಾದ, ನಬಿ ಖಾನ್‌ ಹಾಗೂ ಘನಿ ಖಾನ್‌‌, ಅವರಿಗೆ ಸಹಾಯ ನೀಡಲು ನಿರ್ಧರಿಸುತ್ತಾರೆ.
 • ಗುರುಗಳಿಗೆ ಮುಂಚೆಯೇ ಪರಿಚಿತರಾಗಿದ್ದ ಖಾನ್‌ಗಳು, ಅವರನ್ನು ಉಚ್ಛ್‌‌ ಗ್ರಾಮದ ಪೀರ್‌‌ (ಸೂಫಿ ಸಂತ)ರ ವೇಷವನ್ನು ತೊಡಿಸಿ ಅವರನ್ನು ಪಲ್ಲಕ್ಕಿಯಲ್ಲಿ ಸುರಕ್ಷಿತ ತಾಣದೆಡೆಗೆ ಕರೆದೊಯ್ಯುತ್ತಾರೆ. ಅಲಮ್‌ ಗಿರ್‌‌ನಲ್ಲಿ ನಂದ್‌ ಲಾಲ್‌‌ ಎಂಬ ಓರ್ವ ಜಮೀನ್ದಾರ ಗುರುಗಳಿಗೆ ಸಹಾಯ ಮಾಡಲು ನಿರ್ಧರಿಸುತ್ತಾರೆ. ಅಲಮ್‌ ಗಿರ್‌‌ನಿಂದ, ಗುರುಗಳು ರಾಯ್‌ಕೋಟ್‌‌ಗೆ ತೆರಳುತ್ತಾರೆ. ಸಿಲಾವೊನಿ ಎಂಬಲ್ಲಿ, ರಾಯ್‌ಕೋಟ್‌‌ ರಾಜ್ಯದ ಮುಸ್ಲಿಮ ಮುಖ್ಯಸ್ಥ ರಾಯ್‌‌ ಕಾಲ್ಹಾ III ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾನೆ.
 • ಗುರುಗಳು ಅಲ್ಲಿ ಕೆಲ ಕಾಲ ಉಳಿದುಕೊಳ್ಳುತ್ತಾರೆ. ಇದೇ ವೇಳೆಯಲ್ಲಿ, ಗುರುಗಳ ತಾಯಿ ಮಾತಾ ಗುಜ್ರಿ ಹಾಗೂ ಅವರ ಇಬ್ಬರು ಕಿರಿಯ ಪುತ್ರರನ್ನು ಸಿರ್ಹಿಂದ್‌‌ನ ಪ್ರಾಂತಾಧಿಪತಿ ವಾ/ವಜಿರ್‌ ಖಾನ್‌ ಸೆರೆಹಿಡಿಯುತ್ತಾನೆ. ಇಸ್ಲಾಮ್‌ಗೆ ಮತಾಂತರಗೊಳ್ಳಲು ನಿರಾಕರಿಸಿದ ಕಾರಣ ಬಾಲಕರಿಬ್ಬರನ್ನು ಕೊಲ್ಲಲಾಗುತ್ತದಲ್ಲದೇ, ಮೊಮ್ಮಕ್ಕಳ ಮರಣದ ಸುದ್ದಿ ಕೇಳಿ ಮಾತಾ ಗುಜ್ರಿ ಸ್ವಲ್ಪ ಕಾಲದಲ್ಲೇ ಮರಣಿಸುತ್ತಾರೆ. ರಾಯ್‌‌ ಕಾಲ್ಹಾ'ನ ಸೇವಕ ನೂರಾ ಮಾಹಿ ಈ ಸುದ್ದಿಯನ್ನು ಗುರುಗಳಿಗೆ ಸಿರ್ಹಿಂದ್‌‌ನಿಂದ ಈ ಸುದ್ದಿಯನ್ನು ತರುತ್ತಾನೆ.
 • ರಾಯ್‌‌ ಕಾಲ್ಹಾ'ನ ತಮ್ಮ ಪರವಾಗಿ ಪಟ್ಟ ಪ್ರಯಾಸಕ್ಕೆ ಗೌರವಸೂಚಕವಾಗಿ, ಗುರುಗಳು ಅವರಿಗೆ ಗಂಗಾ ಸಾಗರ್ ಎಂಬ ಹೆಸರಿನ ಖಡ್ಗವನ್ನು ಹಾಗೂ ರೆಹೆಲ್‌ (ಪವಿತ್ರ ಗ್ರಂಥಗಳನ್ನು ಪಠಿಸಲು ಇಟ್ಟುಕೊಳ್ಳುವ ಸಣ್ಣ ಮರದ ಪೀಠ/ಮೇಜು) ಅನ್ನು ಉಡುಗೊರೆಯಾಗಿ ನೀಡುತ್ತಾರೆ.[೩೨]

ದಿ/ಡಿನಾದಲ್ಲಿನ ವಾಸ[ಬದಲಾಯಿಸಿ]

 • ಮೊಘಲರ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಲು ರಾಯ್‌ ಕೋಟ್‌‌ ಸೂಕ್ತ ಸ್ಥಳವಲ್ಲವೆಂಬುದನ್ನು ಮನಗಂಡ ನಂತರ, ಗುರು ಗೋಬಿಂದ್‌‌ ಸಿಂಗರು‌ ರಾಯ್‌ಕೋಟ್‌‌ಅನ್ನು ತೊರೆದು, (ಹಿಂದೆ ಭಂಗಾನಿಯ ಕದನದಲ್ಲಿ ಭಾಗವಹಿಸಿದ್ದ) ಮಹಂತ್‌‌ ಕಿರ್ಪಾಲ್‌‌ ದಾಸ್‌‌ರೊಂದಿಗೆ ಎರಡು ದಿನಗಳನ್ನು ಹೇಹರ್‌‌ನಲ್ಲಿ ಕಳೆದರು. ಅವರು ನಂತರ ಲಮ್ಮಾ ಜತ್ಪುರಾಗೆ ತೆರಳುತ್ತಾರೆ, ಅಲ್ಲಿ ಅವರ ಸಹಚರ ರಾಯ್‌ ಕಲ್ಲಾ ಅವರಿಂದ ಬೀಳ್ಕೊಡುತ್ತಾನೆ. ಗುರುಗಳು ಮೂವರು ಸಿಖ್ಖರೊಡನೆ ದಕ್ಷಿಣದೆಡೆಗೆ ತೆರಳುತ್ತಾರೆ.
 • ದಾರಿಯಲ್ಲಿ ಮನುಕೆ, ಮೆಹ್ದಿಯಾನಾ, ಛಕ್ಕರ್‌‌, ತಖ್ತುಪುರ ಮತ್ತು ಮ/ಮಾಧೆ ಗ್ರಾಮಗಳ ಮೂಲಕ ಸಂಚರಿಸಿ ಕೊನೆಗೆ ಮಾಲ್ವಾ (ಪಂಜಾಬ್‌‌‌)ದಲ್ಲಿರುವ ದಿ/ಡಿನಾ (ಈಗ ಮೋಗಾ ಜಿಲ್ಲೆಯಲ್ಲಿದೆ) ತಲುಪುತ್ತಾರೆ. ಜನರು ಛಮ್‌ಕೌರ್‌‌ನಲ್ಲಿ ಗುರುಗಳನ್ನು ಕೊಲ್ಲಲಾಗಿದೆ ಎಂದು ತಿಳಿದುಕೊಂಡಿರುತ್ತಾರಾದರೂ, ಅವರು ದಿ/ಡಿನಾವನ್ನು ತಲುಪಿದಾಗ ನಿಜ ವಿಚಾರ ಅವರಿಗೆ ತಿಳಿಯುತ್ತಾ ಹೋಗುತ್ತದೆ. ಷಮೀರಾ, ಲಖ್ಮೀರಾ ಹಾಗೂ ತಖ್ತ್‌ ಮಲ್‌ ಎಂಬ ಗುರು ಹರ್‌‌ ಗೋಬಿಂ/ವಿಂದ[೩೩] ಭಕ್ತರಾದ ರಾಯ್‌ ಜೋಧ್‌ರ ಮೂವರು ಮೊಮ್ಮಕ್ಕಳು ಅವರನ್ನು ದಿ/ಡಿನಾದಲ್ಲಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾರೆ.
 • ದಿ/ಡಿನಾದಲ್ಲಿರುವಾಗ, ಸನ್ನಿವೇಶದ ಬಗ್ಗೆ ಚರ್ಚಿಸಲು ದಖ್ಖನ್‌ ಪ್ರಸ್ಥಭೂಮಿಗೆ ಬರುವಂತೆ ಕೋರುವ ರಾಜಿಭಾವದ ಪತ್ರವನ್ನು ಗುರುಗಳು ಔರಂಗಜೇಬ್‌‌‌ನಿಂದ ಪಡೆಯುತ್ತಾರೆ. ಗುರುಗಳು ತಮ್ಮ ತಂದೆಯವರ ಶಿರಚ್ಛೇದ ಮಾಡಿಸಿದ, ಖುರಾನ್‌ನ ಮೇಲೆ ಪ್ರಮಾಣ ಮಾಡಿಯೂ ಸೇನೆಯಿಂದ ಆನಂದಪುರ್‌‌/ರದಲ್ಲಿ ತಮ್ಮ ಮೇಲೆ ಆಕ್ರಮಣ ಮಾಡಿಸಿದ ಔರಂಗಜೇಬ್‌‌‌ನ ಬಗ್ಗೆ ಎಚ್ಚರದಿಂದಿರಲು ನಿರ್ಧರಿಸುತ್ತಾರೆ.
 • ಗುರುಗಳು ಚಕ್ರವರ್ತಿಯ ಪ್ರಸ್ತಾಪವನ್ನು ತಿರಸ್ಕರಿಸಿ, ಪರ್ಷಿಯನ್‌ ಭಾಷೆಯಲ್ಲಿ, 'ಝಫರ್‌ನಾಮಾ (ವಿಜಯದ ಓಲೆ) ಎಂಬ ಶೀರ್ಷಿಕೆಯ ದೀರ್ಘ ಪತ್ರವನ್ನು ಬರೆಯುತ್ತಾರೆ. ಪತ್ರದಲ್ಲಿ, ಗುರುಗಳು ಔರಂಗಜೇಬ್‌‌‌ನಿಗೆ ಆತನ ದುರಾಚಾರಗಳ ಬಗ್ಗೆ ನೆನಪಿಸುತ್ತಾರಲ್ಲದೇ, ಮೊಘಲರ ವಿಶ್ವಾಸಘಾತುಕ ಕಾರ್ಯಗಳನ್ನು ಹಳಿಯು/ದೂಷಿಸುತ್ತಾರೆ. ಅವರು ದಯಾ ಸಿಂಗ್‌‌, ಧರಮ್‌‌ ಸಿಂಗ್‌‌, ಹಾಗೂ ಕೆಲವು ಭಟರನ್ನೊಳಗೊಂಡ ಸಿಖ್ಖರ ಗುಂಪನ್ನು ಅಹ್ಮದ್‌ನಗರದಲ್ಲಿ ಮೊಕ್ಕಾಂ ಹೂಡಿದ್ದ ಔರಂಗಜೇಬ್‌‌‌ನಿಗೆ ಪತ್ರವನ್ನು ತಲುಪಿಸಲು ಕಳಿಸುತ್ತಾರೆ.
 • ಗುರು ಗೋಬಿಂದ್‌‌ ಸಿಂಗರು ತ/ಟಲ್ವಾಂಡಿ ಸಾಬೊದೆಡೆಗೆ ತೆರಳುತ್ತಾರೆ ಹಾಗೂ ಅವರು ರೋಹಿ ಎಂಬಲ್ಲಿರುವಾಗ ಮಾಯಿ ಭಾಗೊ ಎಂದೂ ಹೆಸರಾಗಿರುವ ಮಾತಾ ಭಾಗ್‌ ಕೌರ್‌ರೊಂದೊಡಗೂಡಿದ ಪಂಜಾಬ್‌‌‌ ಪ್ರದೇಶದ ಮಜ್ಹಾ ವಲಯದ ನಲವತ್ತು ಮಂದಿ ಸಿಖ್ಖರ ಗುಂಪೊಂದು ಅವರನ್ನು ಭೇಟಿ ಮಾಡುತ್ತದೆ. ಅವರು ಗುರುಗಳ ನಾಲ್ವರು ಮಕ್ಕಳು ಹಾಗೂ ಅವರ ತಾಯಿಯ ಮರಣದ ಬಗ್ಗೆ ವಿಷಾದ ಸೂಚಿಸಲು ಹಾಗೂ ಗುರುಗಳು ಹಾಗೂ ಮೊಘಲ್‌‌/ಲರ ಆಡಳಿತದ ನಡುವೆ ಸಂಧಾನವನ್ನು ಏರ್ಪಡಿಸುವ ಪ್ರಸ್ತಾಪವನ್ನು ಅವರು ಮುಂದಿಡುತ್ತಾರೆ. *ಗುರುಗಳು ಅವರಿಗೆ ಗುರು ಅರ್ಜನ್‌ರ ಹುತಾತ್ಮತೆಯ ಸಮಯದಿಂದ ಆನಂದಪುರ್‌‌/ರದ ಮುತ್ತಿಗೆಯನ್ನು ಹಾಕುವವರೆಗಿನ ಮೊಘಲರ ದುಷ್ಕೃತ್ಯಗಳನ್ನು ವಿವರವಾಗಿ ಹೇಳಿದರು. ಗುರುಗಳು ಅವರು ನಡೆದುಕೊಂಡ ರೀತಿಗಾಗಿ ಆಕ್ಷೇಪಿಸಿದರಲ್ಲದೇ, ಹಾಗೆ ಮಾತಾಡಿದುದಕ್ಕೆ ಛೀಮಾರಿ ಹಾಕಿದರು. ಜಾಥಾ (ಗುಂಪು)ದ ನಾಯಕರಲ್ಲೊಬ್ಬನಾದ, ಭಾಗ್‌ ಸಿಂಗ್‌ ಜಭಲಿಯಾ, ಗುರುಗಳಲ್ಲಿ ಮತ್ತಷ್ಟು ಶ್ರದ್ಧೆಯಿಡುವ ಯಾವುದೇ ಉದ್ದೇಶವೂ ತಮಗಿಲ್ಲವೆಂದು ಹೇಳುತ್ತಾನೆ.
 • ಗುರುಗಳು ಅವರಿಗೆ ತಾನು ಅವರನ್ನು ಕರೆದಿರಲಿಲ್ಲ ಎಂದು ಹೇಳಿದರಲ್ಲದೇ ಅವರೊಂದು ಹಕ್ಕುನಿರಾಕರಣೆ ಪತ್ರವನ್ನು ಬರೆದುಕೊಡಬೇಕೆಂದು ಹೇಳಿದಾಗ, ಹಾಗೆ ಮಾಡಿ ಅದಕ್ಕೆ ಭಾಗ್‌ ಸಿಂಗ್‌ ಜಭಲಿಯಾ ಹಾಗೂ ಇತರೆ ನಾಲ್ವರು ಸಹಿ ಹಾಕಿದರು. ಉಳಿದ ಮೂವತ್ತೈದು ಮಂದಿ ಹಕ್ಕುನಿರಾಕರಣೆ ಪತ್ರಕ್ಕೆ ಸಹಿ ಹಾಕಲಿಲ್ಲ.[೩೪]
 • ಆ ಸಮಯದಲ್ಲಿ ಗುರುಗಳಿಗೆ ವಾ/ವಜಿರ್‌ ಖಾನ್‌ ನೇತೃತ್ವದಲ್ಲಿ ಮೊಘಲ್‌‌/ಲರ ಸೇನೆಯು ತಾವಿರುವ ಕಡೆಗೆ ಬರುತ್ತಿದೆ ಎಂಬ ವರ್ತಮಾನ ಬರುತ್ತದೆ. ಅವರು ಮತ್ತು ಅವರ ಜೊತೆಗಾರರು ಆ ಪ್ರದೇಶದಲ್ಲಿನ ಪ್ರಾಸಂಗಿಕವಾಗಿ ಏಕೈಕ ನೀರಿನ ಸ್ರೋತವಾಗಿದ್ದ ಪುಟ್ಟ ಗುಡ್ಡದ ಬದಿಯಲ್ಲಿ ಅವಿತಿಟ್ಟುಕೊಳ್ಳುತ್ತಾರೆ. ಈ ಹಂತದಲ್ಲಿ ಮಾತಾ ಭಾಗ್‌ ಕೌರ್‌ ಅಂತಹಾ ಕಠಿಣ ಘಟ್ಟದಲ್ಲಿ ತೊರೆದು ಗುರು ಗೋಬಿಂದ್‌‌ ಸಿಂಗ್‌ರನ್ನು ಹೋಗುತ್ತಿರುವುದಕ್ಕಾಗಿ ನಲವತ್ತು ಸಿಖ್ಖರನ್ನು ಟೀಕಿಸುತ್ತಾರೆ.
 • ಆಕೆಯ ಸವಾಲು ಬರುತ್ತಿರುವ ವಾ/ವಜಿರ್‌ ಖಾನ್‌ ನೇತೃತ್ವದ ಮೊಘಲ್‌‌/ಲರ ಸೈನ್ಯವನ್ನು ನಲವತ್ತು ಜನರ ತಂಡ ಎದುರಿಸುವಂತೆ ಮಾಡುತ್ತದೆ. 30 ಪೊಹ್‌ 1972 (29 ಡಿಸೆಂಬರ್‌ 1705)ರಂದು ನಡೆದ ಹೋರಾಟದಲ್ಲಿ, ಮಜ್ಹಾದ ಮಾತಾ ಭಾಗ್‌ ಕೌರ್‌ ಹಾಗೂ ನಲವತ್ತು ಸಿಖ್ಖರು ಮಾತ್ರವಲ್ಲದೇ, ಗುರು ಗೋಬಿಂದ್‌‌ ಸಿಂಗರು ಹಾಗೂ ಅವರ ಸಂಗಡಿಗರು ಕೂಡಾ ಭಾಗವಹಿಸಿದರು. ಬಾಣಗಳು ಹಾಗೂ ಗುಂಡುಗಳ ಹೋರಾಟದ ನಂತರ, ಕದನವು ಖಡ್ಗಗಳು ಹಾಗೂ ಈಟಿಗಳ ಸಮೀಪ ಹೋರಾಟಕ್ಕೆ ಬಂದಿತು.
 • ಸೂರ್ಯಾಸ್ತದ ಹೊತ್ತಿಗೆ ಎಲ್ಲಾ ನಲವತ್ತು ಮಂದಿಯೂ ಸತ್ತಿದ್ದರು ಅಥವಾ ಗಂಭೀರವಾಗಿ ಗಾಯಗೊಂಡಿದ್ದರು ಹಾಗೂ ಮೊಘಲ್‌‌/ಲರ ಸೇನೆಯು ಹಿಮ್ಮೆಟ್ಟಿತ್ತು. ನಲವತ್ತು ಮಂದಿಯಲ್ಲಿ ಕೇವಲ ಮೂವರು ಸಿಖ್ಖರು ಮಾತ್ರವೇ (ರಾಯ್‌ ಸಿಂಗ್‌‌, ಸುಂದರ್‌‌ ಸಿಂಗ್‌‌ ಹಾಗೂ ಮಹನ್‌‌ ಸಿಂಗ್‌‌) ಜೀವನ್ಮರಣದ ಅಂಚಿನಲ್ಲಿದ್ದರೆ, ಭಾಗ್‌ ಕೌರ್‌ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದರು.
 • ಅವರ ಕೋರಿಕೆಯ ಮೇರೆಗೆ ಗುರು ಗೋಬಿಂದ್‌‌ ಸಿಂಗರು ಹಕ್ಕುನಿರಾಕರಣೆ ಪತ್ರವನ್ನು ಹರಿದುಹಾಕಿದರಲ್ಲದೇ ಅವರನ್ನು ಮುಕ್ತರಾದವರೆಂ ದು(ಮುಕ್ತಿ ಪಡೆದವರೆಂದು) ಆಶೀರ್ವದಿಸಿದರು. ಅವರು ಸ್ಥಳದ ಹೆಸರನ್ನು ಕೂಡಾ ಬದಲಾವಣೆ ಮಾಡಿ ಅವರ ಗೌರವಾರ್ಥವಾಗಿ ಇಷರ್‌ ಸರ್‌ ಅಥವಾ ಖಿದ್ರಾನಾ ಇಂದ ಮುಕತ್ಸರ್‌/‌ಮುಕ್ತ್‌ಸರ್‌ಗೆ ಮರುನಾಮಕರಣ ಮಾಡಿದರು.

ತ/ಟಲ್ವಾಂಡಿ ಸಾಬೊಯಲ್ಲಿನ ವಾಸ[ಬದಲಾಯಿಸಿ]

ದೀಪಾಲಂಕೃತ ಆದಿ ಗ್ರಂಥ್‌ ನ ಸಂಪುಟ ಗುರು ಗೋಬಿಂದ್‌‌ ಸಿಂಗ್‌ರ ನಿಸಾನ್‌ ಸಹಿತ
 • ಮುಕ/ಖತ್ಸರ್‌‌‌ನಿಂದ, ಪ್ರಯಾಣ ಬೆಳೆಸಿದ ಗುರುಗಳು ರು/ಋಪಾನಾ, ಭಾಂದೇರ್‌‌, ಗುರುಸರ್‌‌, ಥೆಹ್ರಿ ಬಂಬೀಹಾ, ರೋಹಿಲಾ, ಜಂಗಿಯಾನಾ ಹಾಗೂ ಭಾಯಿ ಕಾ ಕೋಟ್‌‌ಗಳಿಗೆ ತೆರಳಿದರು. ಛಾತಿ/ಟಿಯಾನಾದಲ್ಲಿ, ‌ಮುಕ್ತ್‌ಸರ್‌ನಲ್ಲಿ ಅವರ ಪರವಾಗಿ ಹೋರಾಡಿದ ಬ್ರಾರ್‌‌ಗಳು, ಗುರುಗಳು ತಮಗೆ ಬಾಕಿ ಸಂಭಾವನೆಯನ್ನು ಕೊಡಲಿಲ್ಲ ಎಂಬುದಕ್ಕಾಗಿ ಅವರ ದಂಡನ್ನು ಮುಂದೆ ಹೋಗುವುದಂತೆ ತಡೆಯುವುದಾಗಿ ಬೆದರಿಕೆ ಹಾಕಿದರು.
 • ನೆರೆಯೂರಿನ ಓರ್ವ ಸಿಖ್‌‌ ಅಗತ್ಯ ಹಣವನ್ನು ತಂದುಕೊಟ್ಟು ಗುರುಗಳು ಎಲ್ಲಾ ಬಾಕಿಗಳನ್ನು ಪಾವತಿಸಲಿಕ್ಕೆ ಸಾಧ್ಯವಾಗುವಂತೆ ಮಾಡಿದನು. ಆದಾಗ್ಯೂ, ಬ್ರಾರ್‌‌ಗಳ ನಾಯಕ, ಚೌಧ್ರಿ/ಧರಿ ಡಾ/ದಾನಾ ತನ್ನ ಜನರ ಪರವಾಗಿ ಗುರುಗಳ ಬಳಿ ಕ್ಷಮಾಪಣೆ ಯಾಚಿಸಿದನಲ್ಲದೇ ತನಗೆ ಯಾವುದೇ ಹಣ ಬೇಡವೆಂದು ಪಾವತಿ ನಿರಾಕರಿಸಿದ. ಆತನ ಕೋರಿಕೆ ಮೇರೆಗೆ, ಗುರುಗಳು ಆತನ ಸ್ಥಳವಾದ ಮೆಹ್ಮಾ ಸ್ವಾಯಿಗೆ ಭೇಟಿ ನೀಡಿದರು. ಗುರುಗಳು ಲ/ಲಾಖಿ ಅರಣ್ಯ (ಲ/ಲಾಖಿಸರ್‌‌)ನ ಮೂಲಕ ತಮ್ಮ ಪ್ರಯಾಣವನ್ನು ಮುಂದುವರೆಸಿದರು.
 • ಲ/ಲಾಖಿಯಿಂದ ಹೊರಟು ಸಮೀಪದ ಸ್ಥಳಗಳಿಗೆ ಭೇಟಿ ನೀಡಿ ದೊಡ್ಡ ಸಂಖ್ಯೆಯ ಜನರನ್ನು ಖಾಲ್ಸಾಗೆ ಸೇರಲು ಉತ್ತೇಜಿಸಿದರು. ಚೌ/ಛೌಧರಿ ಡ/ದಲ್ಲಾ ಎಂಬ ಜಮೀನ್ದಾರ ಗುರುಗಳನ್ನು ತನ್ನ ಜಮೀನಿ/ಎಸ್ಟೇಟ್‌ಗೆ ಆಹ್ವಾನಿಸುತ್ತಾನೆ ಹಾಗೂ ಅವರನ್ನು ತ/ಟಲ್ವಾಂಡಿ ಸಾಬೊ (aka ತ/ಟಲ್ವಾಂಡಿ ಸಾಬೊ ಕಿ)ಗೆ ಕರೆದೊಯ್ಯುತ್ತಾನೆ.
 • ದಾರಿಯಲ್ಲಿ ಅವರು ಛಾತಿ/ಟಿಯಾನಾ, ಕೋಟ್‌‌ ಸಾಹಿಬ್‌ ಚಂದ್‌‌, ಕೋಟ್‌‌ ಭಾಯಿ, ಗಿದ್ದರ್‌ಬಾಹಾ, ರೋಹಿಲಾ, ಜಂಗಿರಾನಾ, ಬಂಬೀಹಾ, ಬಜಾಕ್‌, ಕಲ್ಝಿರಾನಿ, ಜಸ್ಸಿ ಬಾಗ್‌ವಾಲಿ, ಪಕ್ಕಾ ಕಾಲನ್‌ ಹಾಗೂ ಚಕ್‌ ಹೀರಾ ಸಿಂಗ್‌‌ಗಳ ಮೂಲಕ ಹಾದುಹೋದರು. ಗುರು ಗೋಬಿಂದ್‌‌ ಸಿಂಗರು ತ/ಟಲ್ವಾಂಡಿ ಸಾಬೊಗೆ 20 ಜನವರಿ 1706ರಂದು ತಲುಪಿದರಲ್ಲದೇ ಕೆಲ ತಿಂಗಳುಗಳ ಕಾಲ ಅಲ್ಲಿಯೇ ಉಳಿದರು.
 • ಈ ಸ್ಥಳವನ್ನು ಈಗ ದಂದಮಾ ಸಾಹಿಬ್‌ (ಉಳಿಯುವ ಸ್ಥಳ/ತಂಗುದಾಣ) ಎಂದು ಕರೆಯುತ್ತಾರೆ. ಗುರುಗಳು ಸಮೀಪದ ಹಳ್ಳಿಗಳಿಗೆ ಪ್ರವಾಸ ಕೈಗೊಂಡು ಅನೇಕ ಸಂಖ್ಯೆಯ ಜನರನ್ನು ಖಾಲ್ಸಾಗೆ ಸೇರಲು ಉತ್ತೇಜಿಸಿದರು. ವಾ/ವಜಿರ್‌ ಖಾನ್‌ಗೆ ಗುರುಗಳು ಸಾಬೊ ಕಿ ತ/ಟಲ್ವಾಂಡಿ ಯಲ್ಲಿರುವುದು ತಿಳಿದುಬಂದಾಗ, ಆತ ಚೌ/ಛೌಧರಿ ಡ/ದಲ್ಲಾಗೆ ಗುರು ಗೋಬಿಂದ್‌‌ ಸಿಂಗರನ್ನು ತನ್ನ ವಶಕ್ಕೊಪ್ಪಿಸುವಂತೆ ಪತ್ರವನ್ನು ಕಳಿಸಿದನು.
 • ಆದಾಗ್ಯೂ, ವಾ/ವಜಿರ್‌ ಖಾನ್‌'ನ ಬೆದರಿಕೆಗಳಿಗೆ ಪಕ್ಕಾಗದೇ ಹಾಗೂ ಬಹುಮಾನದ ಆಮಿಷಕ್ಕೊಳಗಾಗದೇ ಆತನಿಗೆ ಗುರುಗಳನ್ನೊಪ್ಪಿಸಲು ಚೌ/ಛೌಧರಿ ನಿರಾಕರಿಸಿದನು. ವಾ/ವಜಿರ್‌ ಖಾನ್‌ ದಖ್ಖನ್‌ ಪ್ರಸ್ಥಭೂಮಿಯಲ್ಲಿದ್ದ ಚಕ್ರವರ್ತಿಗಳಿಗೆ ಈ ಬಗ್ಗೆ ದೂರು ನೀಡಿದನು. ಚಕ್ರವರ್ತಿಯು ವಾ/ವಜಿರ್‌ ಖಾನ್‌ಗೆ ಡ/ದಲ್ಲಾ ಬರೆದಿದ್ದ ಪತ್ರ ಹಾಗೂ ಗುರುಗಳ ಝಫರ್‌ನಾಮಾ ಗಳನ್ನು ಸರಿ ಸುಮಾರು ಒಂದೇ ಸಮಯದಲ್ಲಿ ಪಡೆದನು.
 • ಆತ ಗುರುಗಳ ಮೇಲೆ ಹೇರಿದ್ದ ಎಲ್ಲಾ ರೀತಿಯ ನಿರ್ಬಂಧಗಳನ್ನು ತೆರವುಗೊಳಿಸಲು ಹಾಗೂ ಅವರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಲು ವಾ/ವಜಿರ್‌ ಖಾನ್‌ನಿಗೆ ಆದೇಶಿಸಿದನು. ಗುರುಗಳ ಸಾಹಿತ್ಯ ಕೃತಿಗಳು ಆನಂದಪುರ್‌‌/ರವನ್ನು ತೆರವುಗೊಳಿಸುವ ಸಮಯದಲ್ಲಿ ನದಿಯನ್ನು ದಾಟುತ್ತಿ ರುವಾಗ ನಾಶವಾಗಿದ್ದವು. ಅವರು ಗುರು ಗ್ರಂಥ ಸಾಹಿಬ್‌‌ ಅನ್ನು ಭಾಯಿ ಮಣಿ ಸಿಂಗ್‌‌ನಿಗೆ ಹೇಳಿ ಬರೆಸಿದರು. ಅಸಂಖ್ಯ ಕವಿಗಳು ಮತ್ತು ಪಂಡಿತರು ತ/ಟಲ್ವಾಂಡಿ ಸಾಬೊದಲ್ಲಿ ಗುರುಗಳ ಸುತ್ತ ನೆರೆಯುತ್ತಿದ್ದರು.
 • ಆ ಸ್ಥಳವನ್ನು ಗುರುಗಳ ಕಾಶಿ (ವಾರಣಾಸಿ) ಎಂದು ಕರೆಯಲಾಯಿತು. ಆನಂದಪುರ್‌‌/ರದಿಂದ ಹೊರಡುವಾಗ ಅವರಿಂದ ಪ್ರತ್ಯೇಕಗೊಂಡಿದ್ದ ಗುರುಗಳ ಪತ್ನಿ ಕೂಡಾ ದಂದಮಾ ಸಾಹಿಬ್‌ನಲ್ಲಿ ಅವರನ್ನು ಮತ್ತೆ ಸೇರಿದರು. ಗುರುಗಳು ಈ ಸ್ಥಳದಲ್ಲಿ ತನ್ನ ಸೇನೆಯನ್ನು ಕೂಡಾ ಮರುಸಂಯೋಜಿಸಿದರಲ್ಲದೇ, ಅನೇಕ ಡೋಗ್ರಾಗಳು, ರಾಥೋಡರು ಹಾಗೂ ಬ್ರಾರ್‌‌ಗಳನ್ನು ತಮ್ಮ ಸೇವೆಗೆ ಸೇರಿಸಿಕೊಂಡರು.

ಔರಂಗಜೇಬ್‌‌‌ನ ಸಾವಿನ ನಂತರ[ಬದಲಾಯಿಸಿ]

 • ಗುರುಗಳ ಝಫರ್‌ನಾಮಾ ಕ್ಕೆ ಉತ್ತರವಾಗಿ, ಔರಂಗಜೇಬ್‌‌‌ ಗುರುಗಳೊಂದಿಗೆ ಖಾಸಗಿಯಾಗಿ ಭೇಟಿಯಾಗುವ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದನು. ಗುರುಗಳು ಅಕ್ಟೋಬರ್‌‌ ೧೭೦೬ರಲ್ಲಿ ಔರಂಗಜೇಬ್‌‌‌ನನ್ನು ಭೇಟಿ ಮಾಡಲು ದಖ್ಖನ್‌ ಪ್ರಸ್ಥಭೂಮಿಯ ಕಡೆಗೆ ಹೊರಟರು. ಅವರು ಚಕ್ರವರ್ತಿಯು ಬಿಡಾರ ಹೂಡಿದ್ದ ಅಹ್ಮದ್‌ನಗರಕ್ಕೆ ಹೋಗುವ ದಾರಿಯಲ್ಲಿ ಈಗಿನ ರಾಜಸ್ತಾನದ ಮೂಲಕ ಹಾದುಹೋದರು.
 • ಬಘೌರ್‌‌ನಲ್ಲಿ (ಅಥವಾ ಬಘಾರ್‌), ಅವರಿಗೆ ಮಾರ್ಚ್‌ ೧೭೦೭ರಲ್ಲಿ ಔರಂಗಜೇಬ್‌‌‌ ಸಾವನ್ನಪ್ಪಿದ ವರ್ತಮಾನ ಸಿಕ್ಕಿದುದರಿಂದ ಷಹಜಹಾನಾಬಾದ್‌‌ನ ಮೂಲಕ ಪಂಜಾಬ್‌‌‌ಗೆ ಮರಳಲು ನಿರ್ಧರಿಸಿದರು. ಚಕ್ರವರ್ತಿಯ ಸಾವಿನ ನಂತರ, ಆತನ ಪುತ್ರರ ನಡುವೆ ಉತ್ತರಾಧಿಕಾರಿತ್ವದ ಬಗ್ಗೆ ಕದನ ಆರಂಭವಾಯಿತು. ಆತನ ಮೂರನೇ ಪುತ್ರ, ಮೊಹಮ್ಮದ್‌‌ ಆಜಮ್‌‌ (ಅಥವಾ ಅಜೀಮ್‌‌), ತನ್ನನ್ನು ಚಕ್ರವರ್ತಿಯೆಂದು ಘೋಷಿಸಿಕೊಂಡ.
 • ಎರಡನೇ ಪುತ್ರ ಮುವಾಝಮ್‌ (ನಂತರದ ಚಕ್ರವರ್ತಿ ಬಹದ್ದೂರ್‌‌/ಬಹಾದೂರ್‌ ಷಾ/ಹ್‌) ಗದ್ದುಗೆಯನ್ನು ವಶಪಡಿಸಿಕೊಳ್ಳಲು ಪೇಷಾವರ್‌ನಿಂದ ಹೊರಟನು. ಗುರುಗಳ ಅನುಯಾಯಿ ಭಾಯಿ ನಂದ್‌ ಲಾಲ್‌‌ (ಹಿಂದೆ ಮುವಾಝಮ್‌ನ ಆಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದ) ಮುವಾಝಮ್‌ ಬರೆದ ಪತ್ರವೊಂದನ್ನು ಅವರಿಗೆ ತಂದುಕೊಡುತ್ತಾನೆ. ಮುವಾಝಮ್‌ ಸಿಂಹಾಸನವನ್ನು ಪಡೆದುಕೊಳ್ಳಲು ಗುರುಗಳ ಸಹಾಯವನ್ನು ಕೋರಿರುತ್ತಾನಲ್ಲದೇ, ಮುಸ್ಲಿಮರಲ್ಲದವರ ಬಗ್ಗೆ ಧಾರ್ಮಿಕ ಸಹಿಷ್ಣುತೆಯ ಕಾರ್ಯನೀತಿಯನ್ನು ಅನುಸರಿಸುವುದಾಗಿ ವಾಗ್ದಾನ ನೀಡಿರುತ್ತಾನೆ. *ಗುರುಗಳು ಭಾಯಿ ಧರಮ್‌ ಸಿಂಗ್‌‌ನ ಅಧಿಪತ್ಯದಲ್ಲಿ ತಮ್ಮ ಅನುಯಾಯಿಗಳ ಪಡೆಯೊಂದನ್ನು ಮುವಾಝಮ್‌ನಿಗೆ ಸಹಾಯ ಮಾಡಲು ಕಳಿಸುತ್ತಾರೆ. ಮುವಾಝಮ್‌ನ ಸೇನೆಯು ಆಜಮ್‌ ಷಾಹ್‌‌ನ ಸೇನೆಯನ್ನು ೧೨ ಜೂನ್‌ ೧೭೦೭ರಂದು ನಡೆದ ಜಜೌನ ಕದನದಲ್ಲಿ ಸೋಲಿಸುತ್ತದೆ.

ಬಹದ್ದೂರ್‌‌/ಬಹಾದೂರ್‌ ಷಾ/ಹ್‌ ಆಗಿ ಮುವಾಝಮ್‌ ಸಿಂಹಾಸನವನ್ನೇರುತ್ತಾನೆ. ಆತ ಗುರು ಗೋಬಿಂದ್‌‌ ಸಿಂಗರನ್ನು ಆಗ್ರಾದಲ್ಲಿ ೨೩ ಜುಲೈ ೧೭೦೭ರಂದು ನಡೆದ ಭೇಟಿ/ಸಭೆಯೊಂದಕ್ಕೆ ಆಹ್ವಾನಿಸುತ್ತಾನೆ.

 • ಗುರುಗಳನ್ನು ಆದರಪೂರ್ವಕವಾಗಿ ಬರಮಾಡಿಕೊಳ್ಳಲಾಗುತ್ತದಲ್ಲದೇ ಹಿಂದ್‌ ಕಾ ಪೀರ್‌‌ (ಭಾರತದ ಸಂತ) ಎಂಬ ಬಿರುದನ್ನು ನೀಡಲಾಗುತ್ತದೆ. ಗುರುಗಳು ಚಕ್ರವರ್ತಿಯೊಂದಿಗೆ ಆಗ್ರಾದಲ್ಲಿಯೇ ನವೆಂಬರ್‌ ೧೭೦೭ರವರೆಗೆ ಉಳಿದುಕೊಳ್ಳುತ್ತಾರೆ. ಅವರು ಧೋಲ್‌ಪುರ್‌‌ ವನ್ನು ತಮ್ಮ ಮತಪ್ರಚಾರದ ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡಿಕೊಂಡರಲ್ಲದೇ, ದಖ್ಖನ್‌ ಪ್ರಸ್ಥಭೂಮಿಗೆ ಹೊರಡುವ ಮುನ್ನ ಅನೇಕ ದಿನಗಳ ಕಾಲ ಸಮೀಪದ ಪ್ರದೇಶಗಳಿಗೆಲ್ಲಾ ಪ್ರವಾಸ ಕೈಗೊಂಡರು.
 • ನವೆಂಬರ್‌ ೧೭೦೭ರಲ್ಲಿ, ಚಕ್ರವರ್ತಿಯು ರಜಪುತಾಣ/ನಕ್ಕೆ ಅಲ್ಲಿನ ದಂಗೆಕೋರ ಕಛ್‌ವಾಹಾರನ್ನು ಮಣಿಸಲು ತೆರಳಬೇಕಾಯಿತು. ಆತ ಗುರುಗಳನ್ನು ತಮ್ಮೊಂದಿಗೆ ಬರುವಂತೆ ಕೇಳಿಕೊಂಡನು. ರಜಪುತಾಣ/ನದಿಂದ, ಚಕ್ರವರ್ತಿಯು ದಖ್ಖನ್‌ ಪ್ರಸ್ಥಭೂಮಿಗೆ ತನ್ನ ಸಹೋದರ ಕಾಮ್‌ ಬಕ್ಷ್‌‌ನ ದಂಗೆಯನ್ನು ನಿಯಂತ್ರಿಸಲು ಸೈನ್ಯವನ್ನು ಕರೆದೊಯ್ದನು. ಆಗ ಗುರುಗಳೂ ಆತನೊಂದಿಗೆ ಹೋದರು.
 • ಗುರು ಗೋಬಿಂದ್‌‌ ಸಿಂಗರು ಬಹದ್ದೂರ್‌‌/ಬಹಾದೂರ್‌ ಷಾ/ಹ್‌ರು ಸಿರ್ಹಿಂದ್‌‌ನ ವಾ/ವಜಿರ್‌ ಖಾನ್‌ ಬಗೆಗೆ ಹೊಂದಿರುವ ಮಿತ್ರಭಾವದ ಬಗ್ಗೆ ಅಸಮಾಧಾನ ಹೊಂದಿದ್ದರು. ಅವರು ಚಕ್ರವರ್ತಿಯಿಂದ ಹಿಂಗೋಲಿಯ ಬಳಿ ಪ್ರತ್ಯೇಕಗೊಂಡು ನಾಂದೇಡ್‌‌ಅನ್ನು ಜುಲೈ ೧೭೦೮ರಲ್ಲಿ ತಲುಪಿದರು. ನಾಂದೇಡ್‌‌ನಲ್ಲಿ, ಗುರುಗಳು ಗೋದಾವರಿ ನದಿಯ ತೀರದಲ್ಲಿ ಮೊಕ್ಕಾಮು ಹೂಡಿದರು. ಚಕ್ರವರ್ತಿಯ ಸೇನೆಯ ಮಾಜಿ ಸೇನಾಪತಿಯಾಗಿದ್ದ ಸಯ್ಯದ್‌ ಖಾನ್‌ ತನ್ನ ಉದ್ಯೋಗಕ್ಕೆ ರಾಜಿನಾಮೆ ನೀಡಿ ಕಾಂಗ್ರಾದಿಂದ, ಗುರುಗಳನ್ನು ನೋಡಲು ನಾಂದೇಡ್‌‌ಗೆ ಬಂದನು.
 • ಪ್ರವಾಸವೊಂದರ ಸಂದರ್ಭದಲ್ಲಿ, ಗುರುಗಳು ಮಾಧೋ ದಾಸ್‌‌ ಎಂಬ ಬೈರಾಗಿ ಯೋರ್ವನನ್ನು (ವಿರಕ್ತ) ಭೇಟಿ ಮಾಡಿದ ನಂತರ, ಆತನನ್ನು ಖಾಲ್ಸಾಗೆ ಗುರ್‌ಭಕ್ಷ್‌‌ ಸಿಂಗ್‌‌ ಎಂಬ ಹೆಸರಿನಿಂದ ಸೇರಿಸಿಕೊಂಡರು. "ಬಂದಾ ಸಿಂಗ್‌‌" ಅಥವಾ "ಬಂದಾ ಬಹದ್ದೂರ್‌/ಬಹಾದೂರ್‌‌" ಎಂಬ ಹೆಸರುಗಳಿಂದ ಜನಪ್ರಿಯರಾಗಿದ್ದ ಗುರ್‌ಭಕ್ಷ್‌‌ ಸಿಂಗ್‌‌, ಬಹುಬೇಗನೇ ಅವರ ನಂಬಿಕೆಯ ಸೇನಾಪತಿಯಾದರು.
 • ನಾಂದೇಡ್‌‌ನಲ್ಲಿರುವಾಗ, ಸಯ್ಯದ್‌ ಖಾನ್‌ನ ಸಹೋದರಿ ಸಧೌರಾದ ಪೀರ್‌‌ ಬುಧು ಷಾಹ್‌ರ ಪತ್ನಿ ನಸೀರನ್‌ ಗುರುಗಳಿಗೆ ಪತ್ರವೊಂದನ್ನು ಕಳಿಸಿದರು. ಆ ಪತ್ರದಲ್ಲಿ ಚಕ್ರವರ್ತಿಯ ಸೇನಾಪಡೆಯು ಸಧೌರಾವನ್ನು ಕೊಳ್ಳೆ ಹೊಡೆದು ಗುರು ಗೋಬಿಂದ್‌‌ ಸಿಂಗರಲ್ಲಿ ಶ್ರದ್ಧೆ/ನಿಷ್ಠೆ ಹೊಂದಿದುದಕ್ಕಾಗಿ ಕಾಫಿರ್‌‌ ("ನಾಸ್ತಿಕ") ಎಂದು ಪರಿಗಣಿಸಿ ಪೀರ್‌‌ ಬುಧು ಷಾಹ್‌‌ರನ್ನು ಬಂಡುಕೋರರೆಂದು ಹೆಸರಿಸಿ ಗಲ್ಲಿಗೇರಿಸಿದರೆಂದು ವರ್ತಮಾನವನ್ನು ಕಳಿಸಲಾಗಿತ್ತು.
 • ಗುರುಗಳು ಚಕ್ರವರ್ತಿಯು ವಾ/ವಜಿರ್‌ ಖಾನ್‌ನ ಧರ್ಮಪ್ರಚಾರಕ್ಕೆ ಬಲಿಯಾಗಿ, ತಮ್ಮ ಎಲ್ಲಾ ಬೆಂಬಲಿಗರನ್ನು ಕೊಲ್ಲುವ ಯೋಜನೆಯನ್ನು ಹಾಕಿಕೊಂಡಿದ್ದಾನೆಂದು ಭಾವಿಸಿದರು. ಅವರು ಚಕ್ರವರ್ತಿಗೆ ಪೀರ್‌‌ ಬುಧು ಷಾಹ್‌‌ರ ಮರಣದ ಸುದ್ದಿಗೆ ವಿವರಣೆ ಕೇಳಿ ಪತ್ರವೊಂದನ್ನು ಕಳಿಸಿದರು. ಚಕ್ರವರ್ತಿಯಿಂದ ಯಾವುದೇ ಪ್ರತ್ಯುತ್ತರ ಬರಲಿಲ್ಲ. ಬದಲಿಗೆ, ಗುರುಗಳು ಚಕ್ರವರ್ತಿಯು ತಮ್ಮ ಮೇಲೆ ಯುದ್ಧ ಹೂಡಲು ತಯಾರಿ ನಡೆಸುತ್ತಿದ್ದಾನೆಂದು ವದಂತಿಯನ್ನು ಕೇಳಲ್ಪಟ್ಟರು. ಗುರುಗಳು ಬಂದಾ ಸಿಂಗ್‌‌ನನ್ನು ಖಾಲ್ಸಾದ ದಳಪತಿಯಾಗಿ ನೇಮಕ ಮಾಡಿ, ಪಂಜಾಬ್‌‌‌ನೆಡೆಗೆ ಸೇನೆಯನ್ನು ನಡೆಸಲು ಸೂಚಿಸಿದರು.

ಅಂತಿಮ ದಿನಗಳು[ಬದಲಾಯಿಸಿ]

ತಖ್ತ್‌ ಶ್ರೀ ಹಜುರ್‌‌ ಸಾಹಿಬ್‌, ನಾಂದೇಡ್‌‌, 1708ರಲ್ಲಿ ಗುರು ಗೋಬಿಂದ್‌‌ ಸಿಂಗ್‌‌ರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿನ ಕಟ್ಟಡ, ಒಳಗಿನ ಕೋಣೆಯನ್ನು ಈಗಲೂ ಅಂಗಿತಾ ಸಾಹಿಬ್‌ ಎಂದು ಕರೆಯುತ್ತಾರೆ.
 • ಸಿರ್ಹಿಂದ್‌‌ನ ನವಾಬನಾಗಿದ್ದ ವಾ/ವಜಿರ್‌ ಖಾನ್‌, ಗುರು ಗೋಬಿಂದ್‌‌ ಸಿಂಗ್‌‌ ಹಾಗೂ ಬಹದ್ದೂರ್‌‌/ಬಹಾದೂರ್‌ ಷಾ/ಹ್‌ Iರ ನಡುವಿನ ಯಾವುದೇ ರಾಜಿಸಂಧಾನದ ಬಗ್ಗೆ ಆತಂಕಿತ/ಅಸಮಾಧಾನಗೊಂಡಿದ್ದನು. ಆತ ಜಮ್‌ಷೆಡ್‌ ಖಾನ್‌‌‌‌ ಹಾಗೂ ವಾಸಿಲ್‌ ಬೇಗ್‌‌[೩೫] ಎಂಬ ಇಬ್ಬರು ಪಠಾಣರನ್ನು, ಗುರುಗಳ ಹತ್ಯೆ ಮಾಡಲು ನೇಮಿಸಿದನು.
 • ಅವರಿಬ್ಬರು ರಹಸ್ಯವಾಗಿ ಗುರುಗಳನ್ನು ಹಿಂಬಾಲಿಸಿದಾಗ ನಾಂದೇಡ್‌ದಲ್ಲಿ ಅವರ ಮೇಲೆ ಆಕ್ರಮಣ ಮಾಡಲು ಅವರಿಗೆ ಅವಕಾಶ ಸಿಕ್ಕಿತು‌.[೩೬]
 • ಸಮಕಾಲೀನ ಲೇಖಕ ಸೇನಾಪತಿ ವಿರಚಿತ ಶ್ರೀ ಗುರ್‌‌‌ ಸೋ/ಶೋಭಾ ಕೃತಿ ಯ ಪ್ರಕಾರ, ರೆಹ್ರಾಸ್‌ ಪ್ರಾರ್ಥನೆಯ ಬಳಿಕ ತಮ್ಮ ಕೊಠಡಿಯೊಳಗೆ ವಿಶ್ರಾಂತಿ ಪಡೆಯುತ್ತಿದ್ದಾಗ ಜಮ್‌ಷೆಡ್‌ ಖಾನ್‌‌‌ ಹೃದಯದ/ಎದೆಯ ಕೆಳಭಾಗದ ಎಡಗಡೆಯಲ್ಲಿ ಗುರುಗಳಿಗೆ ಇರಿದನು. ಗುರು ಗೋಬಿಂದ್‌‌ ಸಿಂಗರು ಆಕ್ರಮಣಕಾರನನ್ನು ತಮ್ಮ ಬಾಗುಕತ್ತಿಯಿಂದ ಕೊಂದರೆ, ತಪ್ಪಿಸಿಕೊಂಡು ಹೋಗುತ್ತಿದ್ದ ಆಕ್ರಮಣಕಾರನ ಸಹಚರನನ್ನು ಗಲಾಟೆಯನ್ನು ಕೇಳಿ ಓಡಿಬಂದ ಸಿಖ್ಖರು ಕೊಂದರು.
 • ಬಹದ್ದೂರ್‌‌/ಬಹಾದೂರ್‌ ಷಾ/ಹ್‌ ಕಳಿಸಿದ ಐರೋಪ್ಯ ಶಸ್ತ್ರಚಿಕಿತ್ಸಾತಜ್ಞ ಗುರುಗಳಿಗಾದ ಗಾಯವನ್ನು ಹೊಲಿದರು. ಆದಾಗ್ಯೂ, ಕೆಲ ದಿನಗಳ ನಂತರ ಗುರುಗಳು ಬಿರುಸಾದ ಬಿಲ್ಲನ್ನು ಹೆದೆಯೇರಿಸಲು ಎಳೆದಾಗ ಗಾಯವು ಮತ್ತೆ ತೆರೆದು ಅಪಾರ ರಕ್ತಸ್ರಾವವಾಯಿತು. ತಮಗೆ ಸಾವು ಸಮೀಪಿಸುತ್ತಿರುವುದೆಂದು ತಿಳಿದ ಗುರುಗಳು ಗ್ರಂಥ ಸಾಹಿಬ್‌‌ ಅನ್ನು ಸಿಖ್ಖರ,[೩೭]

ಮುಂದಿನ ಗುರುಗಳಾಗಿ ಘೋಷಿಸಿದರು. ನಂತರ ಅವರು ತಮ್ಮ ಸ್ವರಚಿತ ಸ್ತುತಿಗೀತೆಯನ್ನು ಹಾಡಿದರು:

"ಆಗ್ಯಾ ಭಾಯಿ ಅಕಲ್‌ ಕಿ ತಭೀ ಚಲಾಯೊ ಪಂತ್‌ ಸಭ್‌ ಸಿಖನ್‌‌ ಕೊ ಹುಕಮ್‌‌‌ ಹೈ ಗುರು ಮನೆಯೊ ಗ್ರಂಥ್‌‌‌, ಗುರು ಗ್ರಂಥ್‌‌ ಜಿ ಮನ್ಯೋ ಪರ್ಗತ್‌‌ ಗುರನ್‌ ಕಿ ದೇಹ್‌ ಜೋ ಪ್ರಭು ಕೋ ಮಿಲ್ಬೋ ಚಾಹೆ ಖೋಜ್‌ ಷಬದ್‌ ಮೇ ಲೆ ರಾಜ್‌ ಕರೇಗಾ ಖಾಲ್ಸಾ ಕಿ ರಹೇಯ್‌ ನಾ ಕೋಯೆ ಖ್ವಾರ್‌‌ ಹೋ ಸಭ್‌ ಮಿಲೇಂಗೆ ಬಛೆ ಶರಣ್‌ ಜೋ ಹೊಯೆ."

ಮೇಲಿನ ಸ್ತುತಿಗೀತೆಯ ಭಾಷಾಂತರ:

"ಅಮರ್ತ್ಯ ಸ್ವರೂಪದ ಆದೇಶದ ಮೇರೆಗೆ, ಪಂಥವನ್ನು ರಚಿಸಲಾಗಿದೆ. ಎಲ್ಲಾ ಸಿಖ್ಖರು ಪರಮ ಗ್ರಂಥವನ್ನು ತಮ್ಮ ಗುರುಗಳಾಗಿ ಸ್ವೀಕರಿಸಲು ಆದೇಶವನ್ನು ನೀಡಲಾಗಿದೆ. ಗುರು ಗ್ರಂಥವನ್ನು ಗುರುಗಳ ಮೂರ್ತರೂಪವೆಂದು ಪರಿಭಾವಿಸತಕ್ಕದ್ದು. ದೇವರನ್ನು ಕಾಣಬಯಸುವವರು/ಭೇಟಿಮಾಡಬಯಸುವವರು, ಅದರ ಸ್ತುತಿಗೀತೆಗಳಲ್ಲಿ ಆತನನ್ನು ಕಾಣಬಹುದು. ಶುದ್ಧವಾದುದು ವಿಜಯವನ್ನು ಹೊಂದುತ್ತದೆ ಹಾಗೂ ಅಶುದ್ಧವಾದುದು ಸೋಲುತ್ತದೆ, ವಿಭಜಿತವಾದವರು ಜೊತೆಗೂಡುತ್ತಾ ಹಾಗೂ ಎಲ್ಲಾ ಭಕ್ತರನ್ನು ರಕ್ಷಿಸಲಾಗುತ್ತದೆ."
 • ಗುರುಗಳು ತಮ್ಮ ಕುದುರೆ ದಿಲ್‌ಬಾಘ್‌‌ನೊಡನೆ (aka ನೀಲಾ ಘೋರಾ) 7 ಅಕ್ಟೋಬರ್‌‌ ೧೭೦೮ರಂದು ನಾಂದೇಡ್‌‌ನಲ್ಲಿ ಮುಕ್ತರಾದರೆಂದು ಭಾವಿಸಲಾಯಿತು ('ಮರಣಿಸಿದರು' ಅಲ್ಲ - ಸಿಖ್ಖರ ಪಾಲಿಗೆ ಅದು ಅವಮರ್ಯಾದೆ).[೩೮] ನಾಮಧಾರಿ ಸಿಖ್ಖರ ಒಂದು ಪಂಗಡವು ಗುರುಗಳು ನಾಂದೇಡ್‌‌ನಲ್ಲಿ ಮರಣಿಸಲಿಲ್ಲ: ಬದಲಿಗೆ ಅವರು ಚಿತೆಯಿಂದ ರಹಸ್ಯವಾಗಿ ಹೊರಹೋದರು ಎಂದು ಭಾವಿಸುತ್ತದೆ (ಉಳಿದವರು ನೋಡದ ಹಾಗೆ ಅವರು ನಿಷಿದ್ಧಗೊಳಿಸಿದ್ದರು).
 • ನಂತರ, ಅವರು ನಾಭಾಗೆ ತೆರಳಿ ನೆಲೆಗೊಂಡ ಅವರು 103 ವರ್ಷಗಳ ಕಾಲ "ಬಾಬಾ ಅಜಯ್‌ಪಾಲ್‌‌ ಸಿಂಗ್‌‌"ರ ಮಾರುವೇಷದಲ್ಲಿ ಉಳಿದುಕೊಂಡು ಬಾಲಕ್‌ ಸಿಂಗ್‌‌ರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಘೋಷಿಸಿದರು. ಕೊನೆಗೆ ತಿಳಿಸಿದ ವಿಷಯದ ಬಗ್ಗೆ ಇತರ ಸಿಖ್ಖರಲ್ಲಿ ಭಿನ್ನಾಭಿಪ್ರಾಯವಿದ್ದು ಅವರೆಲ್ಲರೂ ಗುರುಗಳು ಕೇವಲ ಗುರು ಗ್ರಂಥ ಸಾಹಿಬ್‌‌ ಜಿಯನ್ನೇ ಅಂತಿಮ ಉತ್ತರಾಧಿಕಾರಿಯನ್ನಾಗಿ ಘೋಷಿಸಿದ್ದರು ಎಂಬುದಾಗಿ ನಂಬಿದ್ದಾರೆ.[೩೯]

ತಿಳಿದು ಬಂದಿರುವ ಸಾಹಿತ್ಯ ಕೃತಿಗಳು[ಬದಲಾಯಿಸಿ]

Guru Gobind Singh, Reh Ras (part of daily Sikh Prayer)

— " ਪਾਂਇ ਗਹੇ ਜਬ ਤੇ ਤੁਮਰੇ ਤਬ ਤੇ ਕੋਊ ਆਂਖ ਤਰੇ ਨਹੀ ਆਨਿਯੋ ॥ ਰਾਮ ਰਹੀਮ ਪੁਰਾਨ ਕੁਰਾਨ ਅਨੇਕ ਕਹੈਂ ਮਤ ਏਕ ਨਾ ਮਾਨਿਯੋ ॥ ਸਿੰਮਿ੍ਤਿ ਸਾਸਤ੍ ਬੇਦ ਸਭੈ ਬਹੁ ਭੇਦ ਕਹੈਂ ਹਮ ਏਕ ਨ ਜਾਨਯੋ ॥ ਸੀ੍ ਅਸਿਪਾਨ ਕਿ੍ਪਾ ਤੁਮਰੀ ਕਰਿ ਮੈ ਨਾ ਕਹਿਯੋ ਸਭ ਤੋਹਿ ਬਖਾਨਿਯੋ ॥"
"Since I fell at the feet of God, no one has appeared great in my eyes. Ram and Raheem, the Puranas and Qu'ran, have many votaries, but neither do I regard. Smritis, Shashtras, and Vedas, differ in many things; not one do I heed. O Supreme God! under thy favour has all been done; nought is of myself."
ದಾಸಮ್‌ ಗ್ರಂಥದ ಮುಖಪುಟ

ಅನೇಕ ಕೃತಿಗಳನ್ನು ಗುರು ಗೋಬಿಂದ್‌‌ ಸಿಂಗರು ರಚಿಸಿದ್ದಾರೆಂದು ಹೇಳಲಾಗುತ್ತದೆ. ಅವರ ಸಾಹಿತ್ಯ ಕೃತಿಗಳಲ್ಲಿ ಅನೇಕವು ಆನಂದಪುರ್‌‌/ರ ಸಾಹಿಬ್‌ನ ತೆರವುಗೊಳಿಸುವಿಕೆಯಲ್ಲಿ ನಾಶವಾಗಿದ್ದವು. ಗುರು ಗೋಬಿಂದ್‌‌ ಸಿಂಗರು ರಚಿಸಿದ್ದೆಂದು ಹೇಳಲಾಗುವ ಗ್ರಂಥಗಳ ಸಂಗ್ರಹವನ್ನು ದಾಸ್ವೆನ್‌ ಪಾದ್‌‌ಷಾಹ್‌‌ ಡಾ ಗ್ರಂಥ್‌‌ ಅರ್ಥಾತ್‌‌ ಹತ್ತನೇ ಚಕ್ರವರ್ತಿಯ ಗ್ರಂಥ ಎಂದು ಕರೆಯಲಾಗುತ್ತದೆ.[೪೦] ಅದನ್ನು ದಾಸಮ್‌ ಗ್ರಂಥ್‌ ಎಂಬ ಹೆಸರಿನಿಂದ ಇದು ಜನಜನಿತವಾಗಿದೆ. ಇದೊಂದು ಸ್ತುತಿಗೀತೆಗಳು, ಆಧ್ಯಾತ್ಮಿಕ ಗ್ರಂಥಗಳು, ಗುರುಗಳ ಆತ್ಮಚರಿತ್ರೆ ಹಾಗೂ ಅನೇಕ ಅಲೌಕಿಕ ಕಥೆಗಳ ಸಂಗ್ರಹವಾಗಿದೆ.[೪೦] ಎಲ್ಲಾ ಕೃತಿಗಳ ಆಧಾರ ಭೂತ ಸಂದೇಶವೆಂದರೆ 'ಸೃಷ್ಟಿಕರ್ತನನ್ನು ಆರಾಧಿಸು ಸೃಷ್ಟಿಯನ್ನಲ್ಲ' ಎಂಬುದು. ಕೆಳಕಂಡ ಕೃತಿಗಳನ್ನು ಇದು ಒಳಗೊಂಡಿದೆ:

ಆಕರಗಳು[ಬದಲಾಯಿಸಿ]

 1. Owen Cole, William (1995). The Sikhs: Their Religious Beliefs and Practice. Sussex Academic Press. p. 36. {{cite book}}: Unknown parameter |coauthors= ignored (|author= suggested) (help)
 2. Cole, W. Owen (1978). The Sikhs: Their Religious Beliefs and Practices. London: Routledge & Kegan Paul. p. 35. ISBN 0-7100-8842-6. {{cite book}}: Unknown parameter |coauthors= ignored (|author= suggested) (help); Unknown parameter |nopp= ignored (help)
 3. Owen Cole, William (1995). The Sikhs: Their Religious Beliefs and Practice. Sussex Academic Press. p. 36. {{cite book}}: Unknown parameter |coauthors= ignored (|author= suggested) (help)
 4. ೪.೦ ೪.೧ Singh, Prithi Pal (2007). The History of Sikh Gurus. Lotus Books. pp. 128–147. ISBN 978-8183820752.
 5. ೫.೦ ೫.೧ Rawat, Ajay Singh (2002). Garhwal Himalaya : a study in historical perspective. Indus Publishing. pp. 50–54. ISBN 8173871361. OCLC 52088426.
 6. ಉಲ್ಲೇಖ ದೋಷ: Invalid <ref> tag; no text was provided for refs named AjaySR _Garhwal
 7. ಬಿಚಿತ್ರ ನಾಟಕ್‌‌ . ಅಧ್ಯಾಯ 8, ಚೌಪಾಯಿ 1 Archived 2008-12-09 ವೇಬ್ಯಾಕ್ ಮೆಷಿನ್ ನಲ್ಲಿ.. "ಆಗ ನಾನು ನನ್ನ ವಾಸಸ್ಥಳವನ್ನು ತೊರೆದು ಪವೊಂಟಾ ಎಂದ ಹೆಸರಿನ ಸ್ಥಳಕ್ಕೆ ಹೋದೆನು."
 8. Gazetteer of the Sirmur State. ನವ ದೆಹಲಿ: Indus Publishing. 1996. p. 16. ISBN 978-8173870569. OCLC 41357468.
 9. ೯.೦ ೯.೧ Avinash Dani (7 November 1999). "Little-known gurdwara of Nadaun". Sunday Reading. The Tribune. Retrieved 2007-12-06.
 10. Malik, Arjan Dass (1975). An Indian guerilla war : the Sikh peoples war, 1699-1768. New York: Wiley. p. 22. ISBN 978-0470565766. OCLC 1339733.
 11. Johar, Srinder Singh (1976). The Sikh gurus and their shrines. Vivek Pub. Co. p. 87. OCLC 164789879. A fierce battle was fought at Nadaun in 1687.
 12. Mansukhani, Gobind Singh (1965). The Quintessence of Sikhism. Amritsar: Shiromani Gurdwara Prabandhak Committee. p. 46. OCLC 2654849.
 13. Seetal, Sohan Singh (1968). Prophet of Man, Guru Gobind Singh. Ludhiana: Seetal Pustak Bhandar. p. 179. OCLC 115772. This battle of Nadaun was fought in November, 1689.
 14. Singh, Gopal (1979). A History of the Sikh People, 1469-1978. ನವ ದೆಹಲಿ: World Sikh University Press. p. 275. OCLC 6330455. This is known as the battle of Nadaun and was fought probably late in 1690
 15. "Temples in the District: Gurudwara sahib Nadaun". NIC Hamirpur. Archived from the original on 2007-12-20. Retrieved 2007-12-06.
 16. ಬಿಚಿತ್ರ ನಾಟಕ್ . ಅಧ್ಯಾಯ 9, ಚೌಪಾಯಿ 22 Archived 2008-12-09 ವೇಬ್ಯಾಕ್ ಮೆಷಿನ್ ನಲ್ಲಿ.
 17. ಬಿಚಿತ್ರ ನಾಟಕ್ . ಅಧ್ಯಾಯ 9, ಚೌಪಾಯಿ 23 Archived 2008-12-09 ವೇಬ್ಯಾಕ್ ಮೆಷಿನ್ ನಲ್ಲಿ.
 18. ಬಿಚಿತ್ರ ನಾಟಕ್ . ಅಧ್ಯಾಯ 11. Archived 2016-01-24 ವೇಬ್ಯಾಕ್ ಮೆಷಿನ್ ನಲ್ಲಿ.
 19. ೧೯.೦ ೧೯.೧ Mahmood, Cynthia Keppley (1996). Fighting for faith and nation dialogues with Sikh militants. Philadelphia: University of Pennsylvania Press. pp. 43–45. ISBN 978-0812215922. OCLC 44966032.
 20. ಉಲ್ಲೇಖ ದೋಷ: Invalid <ref> tag; no text was provided for refs named Cynthia _Mahmood_Faith _Baisakhi
 21. ಉಲ್ಲೇಖ ದೋಷ: Invalid <ref> tag; no text was provided for refs named Cynthia_Mahmood _Faith _Baisakhi
 22. Singh, Gopal (1979, 1988). A history of the Sikh people, 1469-1978. Delhi: World Sikh University Press. pp. 289–90. {{cite book}}: Check date values in: |date= (help); Cite has empty unknown parameter: |coauthors= (help)
 23. Cole, W. Owen (1978). The Sikhs: Their Religious Beliefs and Practices. London: Routledge & Kegan Paul. p. 36. ISBN 0-7100-8842-6. {{cite book}}: Unknown parameter |coauthors= ignored (|author= suggested) (help); Unknown parameter |nopp= ignored (help)
 24. Cole, W. Owen (1978). The Sikhs: Their Religious Beliefs and Practices. London: Routledge & Kegan Paul. pp. 37–38. ISBN 0-7100-8842-6. {{cite book}}: Unknown parameter |coauthors= ignored (|author= suggested) (help); Unknown parameter |nopp= ignored (help)
 25. Williams, Rosetta. Sikh Gurus. Educa Books/Har-Anand Publications. p. 103. ISBN 978-8124107164.
 26. Banerjee, Indubhusan. Evolution of the Khalsa. Calcutta: A. Mukerjee. p. 25. OCLC 5880923.
 27. Macauliffe, Max Arthur (1996) [1909]. The Sikh Religion: Its Gurus, Sacred Writings, and Authors. Low Price Publications. p. 130. ISBN 978-8186142318. OCLC 1888987.
 28. Singh, Dalip (1992). Guru Gobind Singh and Khalsa Discipline. Amritsar: Singh Bros. p. 256. ISBN 978-8172050719. OCLC 28583123.
 29. ಉಲ್ಲೇಖ ದೋಷ: Invalid <ref> tag; no text was provided for refs named Prithi_PS _History
 30. Singh, Gopal (1988). A history of the Sikh people. Delhi. pp. 292–93.{{cite book}}: CS1 maint: location missing publisher (link)
 31. Singh, Patwant (1999). The Sikhs. Delhi: Rupa &Co. pp. 59–60.
 32. ಕಾಲ್ಹಾ ರಾಯ್‌-ಮಹನ್‌ ಕೋಶ್‌ p311., ಎನ್‌ಸೈಕ್ಲೋಪೀಡಿಯಾ ಆಫ್‌‌ ಸಿಖ್ಖಿಸಮ್‌‌ -Prof. ಹರ್‌ಬನ್ಸ್‌‌ ಸಿಂಗ್‌‌ vol 2 p416. ದ ಸಿಖ್‌‌ Ref ಬುಕ್‌ -Dr ಹರ್ಜಿಂದರ್‌‌ S ದಿಲ್‌ಗೀರ್‌‌ p464, 196. ಸೂರಜ್‌ ಪರ್ಕಾಶ್‌‌ — p507. ಗುರು ಕಿಯಾನ್‌‌ ಸಖಿಯಾ ನ್‌‌- ಪಿಯಾರಾ ಸಿಂಗ್‌‌ ಪದಮ್‌‌‌, ಸಾಖಿ 83,84,85
 33. Johar, Surinder Singh (1998). Holy Sikh shrines. ನವ ದೆಹಲಿ: M D Publications. p. 63. ISBN 9788175330733. OCLC 44703461.
 34. ಪಿಯಾರಾ ಸಿಂಗ್‌‌ಪದಮ್ ಹಾಗೂ ಗಿಯಾನಿ ಗರ್ಜಾ ಸಿಂಗ್‌‌(Eds), ಸೌರೂಪ್‌‌ ಸಿಂಗ್‌‌, 'ಗುರು ಕಿಯಾನ್‌‌ ಸಖಿಯಾನ್'(1790), ಪಟಿಯಾಲಾ, 1986
 35. ಗುರು ಕಿಯಾನ್‌‌ ಸಖಿಯಾನ್‌‌ ನಲ್ಲಿ ನಮೂದಿಸಲ್ಪಟ್ಟ ಹೆಸರುಗಳು.
 36. Singh, Prithi Pal. The history of Sikh Gurus. Lotus Press. p. 158. ISBN 8183820751. {{cite book}}: Cite has empty unknown parameter: |coauthors= (help)
 37. Soundar, Chitra. Gateway to Indian Culture. Asiapac Books (p) Ltd. p. 59. ISBN 9812293272. {{cite book}}: Cite has empty unknown parameter: |coauthors= (help)
 38. "ತಖ್ತ್‌‌ ಸಚ್‌ಖಂಡ್‌‌ ಶ್ರೀ ಹಜುರ್‌‌ ಅಬ್‌ಚಲ್‌ನಗರ್‌‌ ಸಾಹಿಬ್‌, ನಾಂದೇಡ್‌‌ನ ಅಧಿಕೃತ ಜಾಲತಾಣ". Archived from the original on 2013-05-08. Retrieved 2010-06-22.
 39. ಗುರು ಗೋಬಿಂದ್‌‌ ಸಿಂಗ್‌‌ಜಿಯವರ ಮರಣ
 40. ೪೦.೦ ೪೦.೧ Hoiberg, Dale (2000). Students' Britannica India. India: Popular Prakashan. pp. 23–24. ISBN 0852297602. {{cite book}}: Unknown parameter |coauthors= ignored (|author= suggested) (help)

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

 • Singh, Gobind (1996). The Zafarnama of guru Gobind Singh. Mumbai: Bharatiya Vidya Bhavan. OCLC 42966940. {{cite book}}: Unknown parameter |coauthors= ignored (|author= suggested) (help)
 • Deora, Man Singh (1989). Guru Gobind Singh : a literary survey. ನವ ದೆಹಲಿ: Anmol Publications. ISBN 978-8170411604. OCLC 21280295.

ಬಾಹ್ಯ ಕೊಂಡಿಗಳು[ಬದಲಾಯಿಸಿ]