ಉದಾಸಿಗಳು
ಗೋಚರ
ಉದಾಸಿಗಳು: ಸಿಕ್ಖರಲ್ಲಿ ಮುಖ್ಯವಾದ ಒಂದು ಗುಂಪಿಗೆ ಸೇರಿದವರು. ಇವರನ್ನು ನಾನಕ್ ಪುತ್ರರು ಎಂದು ಕರೆಯವುದೂ ರೂಢಿಯಲ್ಲಿದೆ. ನಾನಕನ ಹಿರಿಯ ಮಗ ಶ್ರೀಚಂದನ ಸಂತತಿಯವರೆಂದು ಹೇಳಿಕೊಳ್ಳುತ್ತಾರೆ. ಇವರ ಮತಾಚಾರಗಳು ವಿಶೇಷವಾಗಿ ಹಿಂದೂ ಮತಾನುಸಾರವಾಗಿವೆ. ಇವರು ಮುಸ್ಲಿಮರ ಆಚಾರವನ್ನು ಅನುಸರಿಸಿದ ಸಿಕ್ಖರನ್ನು ಪ್ರತಿಭಟಿಸಿ ಬಹುಶಃ ಐದನೆಯ ಗುರುವಾದ ಅರ್ಜುನಸಿಂಗನ ಕಾಲದಲ್ಲಿ ಪ್ರತ್ಯೇಕ ಗುಂಪಿನವರಾದರು. ಇವರಲ್ಲಿ ನಾಲ್ಕು ಒಳಪಂಗಡಗಳಿವೆ. ಉದಾಸಿಗಳಲ್ಲಿ ಎಲ್ಲ ಬಗೆಯ ಹಿಂದೂಗಳೂ ಸೇರಿರುತ್ತಾರೆ. ಇವರು ಯಾವ ಹಿಂದೂವಿನ ಮನೆಯಲ್ಲಾದರೂ ಊಟಮಾಡುತ್ತಾರೆ. ಇವರಲ್ಲಿ ಊರು ಊರು ತಿರುಗುವ ಸಂನ್ಯಾಸಿಗಳ ಸಂಖ್ಯೆ ಹೆಚ್ಚು. (ಜೆ.ಎಚ್.) ಉದಾಹರಣೆ: ನೋಡಿ-ಅನುಗಮನ.