ಐಸಿಸಿ ವಿಶ್ವ ಟ್ವೆಂಟಿ೨೦

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಐಸಿಸಿ ಟಿ20 ವಿಶ್ವಕಪ್
ನಿರ್ವಾಹಣೆಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ
ಫಾರ್ಮ್ಯಾಟ್ಟ್ವೆಂಟಿ20
ಮೊದಲ ಪಂದ್ಯಾವಳಿ2007, ದಕ್ಷಿಣ ಆಫ್ರಿಕಾ
ಕೊನೆಯ ಪಂದ್ಯಾವಳಿ2022, ಆಸ್ಟ್ರೇಲಿಯಾ
ಮುಂದಿನ ಪಂದ್ಯಾವಳಿ2024, ಯು.ಎಸ್.ಏ ವೆಸ್ಟ್ ಇಂಡೀಸ್
ಟೂರ್ನಮೆಂಟ್ ರೂಪರೌಂಡ್ ರಾಬಿನ್ and ನಾಕೌಟ್
ತಂಡಗಳ ಸಂಖ್ಯೆ16 (20, 2024 ರಿಂದ)
ಪ್ರಸ್ತುತ ಚಾಂಪಿಯನ್ ಇಂಗ್ಲೆಂಡ್
ಅತ್ಯಂತ ಯಶಸ್ವಿ ಇಂಗ್ಲೆಂಡ್
 ವೆಸ್ಟ್ ಇಂಡೀಸ್ (2 titles)

ಐಸಿಸಿ ವಿಶ್ವ ಟ್ವೆಂಟಿ20 ಅಥವಾ ಐಸಿಸಿ ವರ್ಲ್ದ್ T20 ಯನ್ನು T20 ವಿಶ್ವ ಕಪ್ ಎಂದು ಕೂಡ ಕರೆಯಲಾಗುತ್ತದೆ. ಇದು ಟ್ವೆಂಟಿ20 ಕ್ರಿಕೆಟ್ ನ ಅಂತರರಾಷ್ಟ್ರೀಯ ಚ್ಯಾಂಪಿಯನ್ಸ್ಶಿಪ್ ಆಗಿದೆ. ಈ ಪಂದ್ಯಾವಳಿಯನ್ನು ಕ್ರೀಡಾ ಆಡಳಿತ ವರ್ಗವಾದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್)(ಐಸಿಸಿ) ಏರ್ಪಡಿಸುತ್ತದೆ. ಈ ಪಂದ್ಯಾವಳಿಯು 12 ತಂಡಗಳನ್ನು ಒಳಗೊಂಡಿರುತ್ತದೆ. ಅಲ್ಲದೇ ಇದರಲ್ಲಿ ಟೆಸ್ಟ್-ಪಂದ್ಯವನ್ನು ಆಡಿದ ಎಲ್ಲಾ ರಾಷ್ಟ್ರಗಳು ಮತ್ತು ಅರ್ಹತಾ ಪಟ್ಟಿಯಲ್ಲಿರುವವರು ಸ್ಪರ್ಧಿಸುತ್ತಾರೆ. ಈ ಪಂದ್ಯಾವಳಿಯನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ.

ಆರಂಭಿಕ ಪಂದ್ಯಾವಳಿಯಾದ 2007 ರ ಐಸಿಸಿ ವಿಶ್ವ ಟ್ವೆಂಟಿ20, ದಕ್ಷಿಣ ಆಫ್ರಿಕಾದಲ್ಲಿ 2007 ರ ಸೆಪ್ಟೆಂಬರ್ 11 ರಿಂದ 24 ರ ವರೆಗೆ ನಡೆಯಿತು. ಭಾರತ ಈ ಪಂದ್ಯಾವಳಿಯಲ್ಲಿ ವಿಜಯಶಾಲಿಯಾಗಿತ್ತು. ಜೊಹಾನ್ಸ್ ಬರ್ಗ್ ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನವನ್ನು 5 ರನ್ ಗಳಿಂದ ಸೋಲಿಸಿ ಮೊದಲ ವಿಶ್ವ T20ಯ ಚ್ಯಾಂಪಿಯನ್ಸ್ ಆಯಿತು. ಎರಡನೆಯ ಪಂದ್ಯಾವಳಿ 2009 ರ ಐಸಿಸಿ ವಿಶ್ವ ಟ್ವೆಂಟಿ20, ಇಂಗ್ಲೆಂಡ್ ನಲ್ಲಿ 2009 ರ ಜೂನ್ 5 ರಿಂದ 21 ರ ವರೆಗೆ ನಡೆಯಿತು. ಈ ಪಂದ್ಯಾವಳಿಯನ್ನು ಹಿಂದಿನ ವರ್ಷದ ಎರಡನೆಯ ಸ್ಥಾನದಲ್ಲಿದ್ದ ಪಾಕಿಸ್ತಾನ ಗೆದ್ದುಕೊಂಡಿತು. ಇದು ಲಂಡನ್ ನ ಲಾರ್ಡ್ಸ್ ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಶ್ರೀಲಂಕಾವನ್ನು 8 ವಿಕೆಟ್ ಗಳಿಂದ ಸೋಲಿಸುವ ಮೂಲಕ ಗೆಲುವು ಪಡೆಯಿತು.[೧] ಮೂರನೆಯ ಟ್ವೆಂಟಿ20ವಿಶ್ವ ಪಂದ್ಯಾವಳಿಯನ್ನು ವೆಸ್ಟ್ ಇಂಡೀಸ್ ಆಯೋಜಿಸಿತ್ತು;ಇದು 2010 ರ ಏಪ್ರಿಲ್ 30 ರಿಂದ ಮೇ 16 ರ ವರೆಗೆ ನಡೆಯಿತು. ಬಾರ್ಬಡೋಸ್ ನ ಕೆನ್ಸಿಂಗ್ಟನ್ ಓವಲ್ ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾವನ್ನು 7 ವಿಕೆಟ್ ಗಳಿಂದ ಸೋಲಿಸಿ ಈ ಪಂದ್ಯಾವಳಿ ಗೆದ್ದುಕೊಂಡಿತು. ಈ ಮೂಲಕ ಇಂಗ್ಲೆಂಡ್ ಐಸಿಸಿ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಜಯಗಳಿಸಿತ್ತು.

ಇತಿಹಾಸ[ಬದಲಾಯಿಸಿ]

2002 ರಲ್ಲಿ ಬೆನ್ಸನ್&ಹೆಡಿಗೆ ಕಪ್ ಟೂರ್ನಮೆಂಟ್ ಅನ್ನು ಅಂತ್ಯಗೊಳಿಸಲಾಯಿತ್ತು.ಇದರ ಜಾಗದಲ್ಲಿ ಇನ್ನೊಂದು ಪಂದ್ಯಾವಳಿಯನ್ನು ಆಯೋಜಿಸಲು ಇಸಿಬಿ(ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್) ನಿರ್ಧರಿಸಿತ್ತು. ಎಲ್ಲಾ ಕ್ರಿಕೆಟ್ ಆಯೋಜಕ ಸಂಸ್ಥಾನಗಳು ಈ ಹೊಸ ಪಂದ್ಯಾವಳಿ ಯ ಜನಪ್ರಿಯತೆ ಯನ್ನು  ಇಂದಿನ  ಹೊಸ ಪೀಳಿಗೆ ಗೆ ಅನುಗುಣವಾಗಿ ಹೆಚ್ಚಿಸಿ ಪ್ರೇಕ್ಷಕರ ಗಮನ ಸಳೆಯುವುದು ಮತ್ತು  ಪ್ರಾಯೋಜಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು.ಆಟದ ವೇಗದ ಆವೃತ್ತಿಗಳಿಂದ ದೂರವಿರುವ ಸಾವಿರಾರು ಅಭಿಮಾನಿಗಳಿಗೆ ವೇಗದ, ಅತ್ಯಾಕರ್ಷಕ ಕ್ರಿಕೆಟ್ ಅನ್ನು ತಲುಪಿಸಲು ಇದು ಉದ್ದೇಶಿಸಲಾಗಿತ್ತು.ಇಸಿಬಿ ಯ ಮಾರ್ಕೆಟಿಂಗ್ ಮ್ಯಾನೇಜರ್ ಸ್ಟುವರ್ಟ್ ರಾಬಿನ್ಸನ್ 20 ಓವರ್ ಮಾದರಿಯ ರೊಪು ರೇಷೆಯನ್ನು ಇಂಗ್ಲೆಂಡ್ ಎದುರಿಗೆ ಇಡಲಾಯಿತು ಅವರು 11-7 ರೀತಿಯಲ್ಲಿ ಈ ಹೊಸ ಮಾದರಿಯನ್ನು ಒಪ್ಪಿಕೊಳ್ಳಲು ತಮ್ಮ ಮತವನ್ನು ಚಲಾಯಿಸಿದ್ದರು.

ಮೊದಲ ಅಧಿಕೃತ ಟಿ20 ಪಂದ್ಯವನ್ನು 2003 13ಜೂನ್ ರಲ್ಲಿ ಇಂಗ್ಲಿಷ್ ಕೌಂಟಿ ಯಲ್ಲಿ ಟಿ20ಕಪ್ ಹೆಸರಿನಲ್ಲಿ ಪಂದ್ಯಾವಳಿ ಯನ್ನು ಆರಂಭಿಸಲಾಯಿತ್ತು.ಮೊದಲ ಟಿ20ಕಪ್ ] ಇಂಗ್ಲೆಂಡಿನಲ್ಲಿ ಟ್ವೆಂಟಿ -20 ಯ ಮೊದಲ ಸೀಸನ್ ಸಾಪೇಕ್ಷ ಯಶಸ್ಸನ್ನು ಗಳಿಸಿತು, ಸರ್ರೆ ಲಯನ್ಸ್ ವಾರ್ವಿಕ್‌ಶೈರ್  9 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.ಲಾರ್ಡ್ಸ್ ಕ್ರಿಡಾಂಗಣದಲ್ಲಿ ಮೊದಲ ಟಿ20 ಪಂದ್ಯ 15 ಜುಲೈ 2004 ರಲ್ಲಿ ಮಿಡಲಸೆಕ್ಸ್ ಮತ್ತು ಸರೆಯ್ ನಡುವೆ ನಡೆಯಿತು. ಈ ಪಂದ್ಯವನ್ನು ವೀಕ್ಷಿಸಲು 27509 ಜನ ಪ್ರೇಕ್ಷಕರು ಹಾಜರಿದ್ದರು. ಇದು ಯಾವುದೇ ದೇಶದ ದೇಶಿಯ ಪಂದ್ಯಗಳಿಗೆ ಬಂದ ಪ್ರೇಕ್ಷಕರ ಅತ್ಯಂತ ದೊಡ್ಡ ಪ್ರೇಕ್ಷಕ ವರ್ಗವಾಗಿತ್ತು.

ನಂತರ ದಿನಗಳಲ್ಲಿ ಇತರ ಕ್ರಿಕೆಟ್ ಮಂಡಳಿ ಗಳು ಸಹ ಟಿ20 ಪಂದ್ಯಗಳನ್ನು ಒಪ್ಪಿಕೊಂಡು ಪಂದ್ಯಗಳನ್ನು ಆಯೋಜಿಸಿದ್ದರಿಂದ ಈ ಮಾದರಿಯ ಜನಪ್ರಿಯತೆ ಹೆಚ್ಚಿತ್ತು. ಮತ್ತು ಊಹಿಸಲಾರದಷ್ಟು ಪ್ರೇಕ್ಷಕರು ದೇಶಿಯ ಪಂದ್ಯಗಳಿಗೆ ಹಾಜರಾಗಲು ಶುರುಮಾಡಿದ್ದರು. ಅದಕ್ಕೆ ಉದಾಹರಣೆ ಎಂದರೆ ಫೈಸಲ್ ಬ್ಯಾಂಕ್ ಟಿ20ಕಪ್, ಮತ್ತು ಸ್ಟಾನಪೋರ್ಡ 20/20, ಪಂದ್ಯಾವಳಿ, ಮತ್ತು ರೂಪದಲ್ಲಿ ಆರ್ಥಿಕ ಪ್ರೋತ್ಸಾಹ.

ವೆಸ್ಟ್ ಇಂಡೀಸ್ ಪ್ರಾದೇಶಿಕ ತಂಡಗಳು ಈ ಸ್ಟಾನಪೋರ್ಡ ಟಿ20/20 ಯಲ್ಲಿ ಭಾಗವಹಿಸಿದ್ದವು.ಈ   ಈವೆಂಟ್ ಅನ್ನು   ಆರ್ಥಿಕವಾಗಿ ಬೆಂಬಲಿಸಿದು    ಅಪರಾಧಿ ವಂಚಕ ಅಲೆನ್ ಸ್ಟ್ಯಾನ್‌ಫೋರ್ಡ್ ಅವರು ಕನಿಷ್ಠ US$28,000,000 ನಿಧಿಯ ಹಣವನ್ನು ನೀಡಿದರು.ಅವರ ಬೃಹತ್ ಪೊಂಜಿ ಯೋಜನೆಯ ಫಲ. ಪಂದ್ಯಾವಳಿಯು ವಾರ್ಷಿಕ ಕಾರ್ಯಕ್ರಮವಾಗಿರಬೇಕು ಎಂದು ಉದ್ದೇಶಿಸಲಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ಗಯಾನಾ ಟ್ರೆನಿಡಾಡ್ ಟೋಬ್ಯಾಗೋ ತಂಡವನ್ನು 5 ವಿಕೆಟುಗಳಿಂದ ಸೋಲಿಸಿ ಜಯಶಾಲಿಯಾಯಿತ್ತು. US $ 1,000,000 ಬಹುಮಾನದ ಹಣವನ್ನು ಭದ್ರಪಡಿಸುವುದು. [13] [14] ಸ್ಪಿನ್-ಆಫ್ ಪಂದ್ಯಾವಳಿ, ಸ್ಟ್ಯಾನ್‌ಫೋರ್ಡ್ ಸೂಪರ್ ಸರಣಿ, ಅಕ್ಟೋಬರ್ 2008 ರಲ್ಲಿ ಮಿಡ್ಲ್‌ಸೆಕ್ಸ್ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊ ನಡುವೆ ನಡೆಯಿತು,

17 ಫೆಬ್ರುವರಿ 2005 ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಮೊದಲ ಪೂರ್ಣ ಪ್ರಮಾಣದ ಟಿ20 ಪಂದ್ಯವನ್ನು  ಆಕ್ಲೆಂಡ್ ನಾ ಈಡೆನ್ ಪಾರ್ಕ್ ಕ್ರಿಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿಜಯಶಾಲಿಯಾಯಿತ್ತು.ಆಟವನ್ನು ಹಗುರವಾದ ರೀತಿಯಲ್ಲಿ ಆಡಲಾಯಿತು - ಎರಡೂ ಕಡೆಯವರು ಧರಿಸಿದ ಕಿಟ್ 1980 ರ ದಶಕದಲ್ಲಿ ಧರಿಸಿದ ಕಿಟ್‌ಗೆ ಹೋಲುವಂತಿದ್ದರು,ನ್ಯೂಜಿಲೆಂಡ್ ತಂಡವು ಬೀಜ್ ಬ್ರಿಗೇಡ್‌   ಅಭಿಮಾನಿಗಳ ಗುಂಪನ್ನು ಅವರನ್ನು ನೇರ ನಕಲುಮಾಡಿದ್ದರು. ಕೆಲವು ಆಟಗಾರರು 1980 ಸನ್ನಿವೇಶಕ್ಕೆ ತಕ್ಕತಹ ಮೀಸೆ ಮತ್ತು ದಾಡಿ ಮತ್ತು ಕೇಶವಿನ್ಯಾಸ ವನ್ನು ಮಾಡಿಕೊಂಡಿದ್ದರು.ಬೀಜ್ ಬ್ರಿಗೇಡ್‌ನ ಕೋರಿಕೆಯ ಮೇರೆಗೆ ಅತ್ಯುತ್ತಮ ರೆಟ್ರೊ ನೋಟ ಈ ಸ್ಪರ್ಧೆಯಲ್ಲಿ ನೋಡಬಹುದಾಗಿತ್ತು.    ಆಸ್ಟ್ರೇಲಿಯಾ ಸಮಗ್ರವಾಗಿ ಈ ಪಂದ್ಯವನ್ನು ಗೆದ್ದುಕೊಂಡಿತ್ತು.NZ ಇನ್ನಿಂಗ್ಸ್‌ನ ಅಂತ್ಯದ ವೇಳೆಗೆ ಫಲಿತಾಂಶವು ಸ್ಪಷ್ಟವಾಗುತ್ತಿದ್ದಂತೆ, ಆಟಗಾರರು ಮತ್ತು ಅಂಪೈರ್‌ಗಳು ವಿಷಯಗಳನ್ನು ಕಡಿಮೆ ಗಂಭೀರವಾಗಿ ಪರಿಗಣಿಸಿದರು - ಗ್ಲೆನ್ ಮೆಕ್‌ಗ್ರಾತ್ 1981 ರೈ ಏಕದಿನ ಪಂದ್ಯ ದ ಟ್ರೆವರ್ ಚಾಪೆಲ್ ಅಂಡರ್ ಆರ್ಮ್ ಘಟನೆಯನ್ನು ತಮಾಷೆಯಿಂದ  ಹೇಳಿದ್ದರು ಈ ಎರಡು ತಂಡಗಳ ನಡುವೆ.ಮತ್ತು ಬಿಲ್ಲಿ ಬೌಡೆನ್ ಅವರು ಅಣಕು ಕೆಂಪು ಕಾರ್ಡ್ ಅನ್ನು ತೋರಿಸಿದರು (ರೆಡ್ ಕಾರ್ಡ್‌ಗಳನ್ನು ಸಾಮಾನ್ಯವಾಗಿ ಕ್ರಿಕೆಟ್‌ನಲ್ಲಿ ಬಳಬಳಸಲಾಗುವುದಿಲ್ಲ.ಉದ್ಘಾಟನಾ ಪಂದ್ಯಾವಳಿಗಳು[ಬದಲಾಯಿಸಿ]

. 2010 ರ ಐಸಿಸಿ ಟಿ20 ಕಪ್ ವೆಸ್ಟ ಇಂಡೀಸ್ ನಲ್ಲಿ ಮೇ ತಿಂಗಳಿನಲ್ಲಿ ನಡೆದಿತ್ತು  ಈ ಪಂದ್ಯಾವಳಿ ಯಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾ ವನ್ನು 7 ವಿಕೆಟ್ ಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. 2012 ರ ಐಸಿಸಿ ಟಿ20 ಕಪ್ ಅನ್ನು ವೆಸ್ಟ್ ಇಂಡೀಸ್ ಶ್ರೀಲಂಕಾ ವನ್ನು ಸೋಲಿಸುವುದರ ಮುಖಾಂತರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಐಸಿಸಿ ಟಿ20 ಕಪ್ ನ ಇತಿಹಾಸ ದಲ್ಲಿ ಮೊದಲ ಬಾರಿ ಪಂದ್ಯಾವಳಿಯ ಆತಿಥ್ಯ ವಹಿಸಿದ ತಂಡ ಫೈನಲ್ ನಲ್ಲಿ ಪ್ರಶಸ್ತಗಾಗಿ ಸೆಣಸಾಡಿದು. ಈ ಪಂದ್ಯಾವಳಿ ಯಲ್ಲಿ ಒಟ್ಟು 12 ತಂಡಗಳು ಭಾಗವಹಿಸೀದ್ದವು. ಅದರಲ್ಲಿ ಐರ್ಲೆಂಡ್ ಹಾಗೊ ಅಫ್ಘಾನಿಸ್ತಾನ  2012 ರ ಐಸಿಸಿ ಟಿ20 ಕಪ್ ಕ್ವಾಲಿಪಾಯರ್(ಅರ್ಹತಾ ಪಂದ್ಯಗಳು) ನಲ್ಲಿ ಸೆಣಸಾಣಿ ಅರ್ಹತೆ ಪಡೆದುಕೊಂಡಿದ್ದವು.ಅದರಲ್ಲಿ  ಅಫ್ಘಾನಿಸ್ತಾನ  2012 ರ ಐಸಿಸಿ ಟಿ20 ಕಪ್ ಗೆ ಅರ್ಹತೆ ಪಡೆದ ಮೊದಲ ಏಷ್ಯಾದ ತಂಡವಾಗಿತ್ತು.

16 ತಂಡಗಳಿಗೆ ವಿಸ್ತರಣೆ[ಬದಲಾಯಿಸಿ]

2012 ಆವೃತ್ತಿಯನ್ನು 16 ತಂಡದ ಸ್ವರೂಪಕ್ಕೆ ವಿಸ್ತರಿಸಬೇಕಿತ್ತು ಆದರೆ ಇದನ್ನು 12ಕ್ಕೆ ಹಿಂತಿರುಗಿಸಲಾಯಿತು.[22] 2014 ರ ಐಸಿಸಿ ಟಿ20 ಕಪ್ ಇದು ಬಾಗ್ಲಾದೇಶ ನಲ್ಲಿ ನಡೆಯಿತು. ಈ ಪಂದ್ಯಾವಳಿ ಮೂಲಕ 16 ತಿಂಡಿಗಳನ್ನು ಪರಿಚಯಿಸಲಾಯಿತ್ತು. ಇಲ್ಲಿ  10 ಖಾಯಂ ಸದಸ್ಯ ರಾಷ್ಟ್ರಗಳು ಹಾಗೊ 6 ಅಅಸಹವರ್ತಿ ಸದಸ್ಯರು ಇವರು 2013 ಐಸಿಸಿ ಟಿ20 ಅರ್ಹತಾ ಸುತ್ತಿನಲ್ಲಿ  ಸೇಣಸಾಡಿ ಅರ್ಹತೆ ಪಡೆದ ತಂಡಗಳು.ಆದ್ದರೊ ಸಹ ಅಗ್ರ ಹಾಗೊ ಖಾಯಂ ಎಂಟು ತಂಡಗಳ ಪಟ್ಟಿಯನ್ನು  ಅಕ್ಟೋಬರ್ 2 2012 ರ ಐಸಿಸಿ ಟಿ20 ತಂಡಗಳ  ಅಂಕಗಳ ಆಧಾರದ ಸ್ಥಾನದ ಪ್ರಕಾರ ಆರಿಸಿ ಆ ತಂಡಗಳಿಗೆ ಸೊಪರ್10  ಹಂತ ಕ್ಕೆ ಅವಕಾಶ ದೊರೆಯಿತು. ಇನ್ನು ಉಳಿದ ಎಂಟು ತಂಡಗಳು ಗ್ರೊಪ್ ಹಂತದಲ್ಲಿ ಸೆಣಸಾಡಬೇಕಿತ್ತು ಅದರಲ್ಲಿ ಅರ್ಹತೆ ಗಳಿಸಿದ ಎರಡು ತಂಡಗಳು ಸೊಪರ್ 10 ಹಂತ ಕ್ಕೆ ಸೇರಿಕೊಂಡವು. ಈ ಪಂದ್ಯಾವಳಿ ಯಲ್ಲಿ ಮೂರು ಹೊಸ ತಂಡಗಳು ಐಸಿಸಿ ಟಿ20 ಕಪ್ ಗೆ ಪಾದಾರ್ಪಣೆ ಮಾಡಿದ್ದವು ಅವೆಂದರೆ ನೈಪಾಳ,ಹಾಗಕಾಂಗ್, ಯು.ಎ.ಇ.

20 ತಂಡಗಳಿಗೆ ವಿಸ್ತರಣೆ

2024, 2026, 2028, ಮತ್ತು 2030 ರಲ್ಲಿ ನಾಲ್ಕು T20 ವಿಶ್ವಕಪ್ ಪಂದ್ಯಾವಳಿಗಳನ್ನು 20 ತಂಡಗಳನ್ನು ಸೇರಿಸಲು ವಿಸ್ತರಿಸಲಾಗುವುದು ಎಂದು ICC ಯ ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.[25]


ಕೋವಿಡ್ 19[ಬದಲಾಯಿಸಿ]

ಜುಲೈ 2020 ರಂದು ಐಸಿಸಿ  2020 ಮತ್ತು 2021 ರಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ಕಪ್ ಪಂದ್ಯಾವಳಿಯನ್ನು ಕೋವಿಡ್ 19 ಸಂಕ್ರಮಣದ ಕಾರಣ ಮೂಂದೊಡಲಾಗಿದೆ ಎಂದು ಘೋಷಿಸಿತ್ತು. 2020 ರ ಐಸಿಸಿ ಟಿ20 ಕಪ್ (ಅಸಲಿಯತ್ತಿನಲ್ಲಿ ಆಸ್ಟ್ರೇಲಿಯಾ ಆತಿಥ್ಯ ವಹಿಸಬೇಕಿತ್ತು) ಪಂದ್ಯಾವಳಿ ಯನ್ನು  ನವೆಂಬರ್ 2021 ಕ್ಕೆ ಮುಂದೂಡಲಾಯಿತ್ತು. ಮತ್ತು 2021 ಐಸಿಸಿ ಟಿ20 ಕಪ್ ಅನ್ನು (ಅಸಲಿಯತಿನಲ್ಲಿ ಭಾರತ ಆತಿಥ್ಯ ವಹಿಸಬೇಕಿತ್ತು) ಅಕ್ಟೋಬರ್ 2022 ಕ್ಕೆ ಮೂಂದೊಡಲಾಯಿತ್ತು. ನಂತರ ಆಸ್ಟ್ರೇಲಿಯಾ ಮತ್ತು ಭಾರತ ಆತಿಥ್ಯ ದ ಅರ್ಹತೆ ಪುನಃ ದೊರೆಯಿತ್ತು. ಅದು ಹಿಂದಿನ ಕ್ರಮಾಂಕದಲ್ಲಿ ಭಾರತ 2021 ರೈ ಐಸಿಸಿ ಟಿ20 ಕಪ್ ಹಾಗೊ 2022 ರ ಐಸಿಸಿ ಟಿ20 ಕಪ್ ಅನ್ನು ಆಸ್ಟ್ರೇಲಿಯಾ ಆತಿಥ್ಯ ವಹಿಸುವುದೆಂದು ಐಸಿಸಿ ಘೋಷಿಸಲಾಯಿತ್ತು. ಐಸಿಸಿ ಅಧಿಕೃತ ವಾಗಿ ಐಸಿಸಿ ಟಿ20 ಕಪ್ 2021 ರ ವೇಳಾಪಟ್ಟಿ  ಅಕ್ಟೋಬರ್ 17 ರಿಂದ ನವೆಂಬರ್ 14 ವರೆಗೆ ನಡೆಯಲಿದೆ ಎಂದು ಇದು ಒಮಾನ್ ಮತ್ತು ಯು.ಎ.ಇ (ದುಬೈ) ನಲ್ಲಿ ನಡೆಯಲ್ಲಿದೆ ಎಂದು ಘೋಷಿಸಿತ್ತು.

ಸ್ವರೂಪ[ಬದಲಾಯಿಸಿ]

ನಿಯಮ ಮತ್ತು[ಬದಲಾಯಿಸಿ]

ನಿಬಂಧನೆಗಳು[ಬದಲಾಯಿಸಿ]

ತಂಡದ ಮತ್ತು ಸೂಪರ್ ಏಯ್ಟ್ ಹಂತದ ಸಂದರ್ಭದಲ್ಲಿ ತಂಡಗಳಿಗೆ ಕೆಳಕಂಡಂತೆ ಪಾಯಿಂಟ್ ನೀಡಲಾಗಿದೆ:

ಫಲಿತಾಂಶ ಪಾಯಿಂಟ್ ಗಳು(ಅಂಕಗಳು)
ಜಯ 2 ಪಾಯಿಂಟ್ ಗಳು
ಯಾವುದೇ ಫಲಿತಾಂಶವಿಲ್ಲ 1 ಪಾಯಿಂಟ್
ಸೋಲು 0 ಪಾಯಿಂಟ್ ಗಳು

ಒಂದು ವೇಳೆ ಟೈ(ಸಮನಾದರೆ) ಆದಲ್ಲಿ( ಉದಾಹರಣೆಗೆ ಎರಡು ತಂಡಗಳು ಅವರ ಅನುಕ್ರಮ ಇನ್ನಿಂಗ್ಸ್ ಗಳ ಕೊನೆಯಲ್ಲಿ ಸಮ ಪ್ರಮಾಣದ ರನ್ ಗಳನ್ನು ಗಳಿಸಿದ ಸಂದರ್ಭದಲ್ಲಿ),ಆಗ ಸೂಪರ್ ಓವರ್ ವಿಜೇತರನ್ನು ನಿರ್ಧರಿಸುತ್ತದೆ. ಒಂದು ವೇಳೆ ಸೂಪರ್ ಓವರ್ ನಲ್ಲೂ ಮತ್ತೆ ಟೈ ಆದ ಸಂದರ್ಭದಲ್ಲಿ ಅವರ ಇನ್ನಿಂಗ್ಸ್ ಗಳಲ್ಲಿ ಬಹುಪಾಲು 6s ಗಳನ್ನು ಗಳಿಸಿದ ತಂಡ ಜಯಗಳಿಸುತ್ತದೆ. ಇದು ಪಂದ್ಯಾವಳಿಯ ಎಲ್ಲಾ ಹಂತಗಳಿಗೂ ಅನ್ವಯವಾಗುತ್ತದೆ. ಈ ಅವಕಾಶವನ್ನು 2009 ರಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಈ 2007ರ ಐಸಿಸಿ ವಿಶ್ವ ಟ್ವೆಂಟಿ20 ಪಂದ್ಯಾವಳಿಯ ಸಮಯದಲ್ಲಿ ಟೈ ಆಗಿದ್ದಾಗ, ಬೌಲ್-ಔಟ್ ನ ರೂಪದಲ್ಲಿ ವಿಜೇತರನ್ನು ನಿರ್ಧರಿಸಲು ಅವಕಾಶ ನೀಡಲಾಗಿತ್ತು.[೨]

ಪ್ರತಿ ತಂಡದೊಳಗೆ (ತಂಡದ ಹಂತ ಮತ್ತು ಸೂಪರ್ ಏಯ್ಟ್ ಹಂತ ಎರಡಕ್ಕೂ), ಕೆಳಕಂಡ ಮಾನದಂಡಗಳ ಆಧಾರದ ಮೇಲೆ ಒಂದು ತಂಡಕ್ಕೆ ಮತ್ತೊಂದರ ವಿರುದ್ಧ ಕ್ರಮಾಂಕವನ್ನು ನೀಡಲಾಗುತ್ತದೆ:[೩]

 1. ಅಧಿಕ ಸಂಖ್ಯೆಯ ಪಾಯಿಂಟ್ ಗಳು
 2. ಸಮನಾದರೆ, ಅಧಿಕ ಸಂಖ್ಯೆಯ ಗೆಲುವು
 3. ಮತ್ತೂ ಸಮನಾಗಿದ್ದರೆ, ಅಧಿಕ ನಿವ್ವಳ ರನ್ ದರ(ರೇಟ್)
 4. ಒಂದು ವೇಳೆ ಮತ್ತೂ ಸಮನಾಗಿದ್ದರೆ, ಕಡಿಮೆ ಬೌಲಿಂಗ್ ದರ
 5. ಆಗಲೂ ಸಮನಾಗಿದ್ದರೆ, ಮುಖಾಮುಖಿ ಸ್ಪರ್ಧೆಯಿಂದ ಫಲಿತಾಂಶ.

ಅರ್ಹತೆ[ಬದಲಾಯಿಸಿ]

ಟೆಸ್ಟ್-ಪಂದ್ಯಗಳನ್ನು ಆಡುವ ಎಲ್ಲಾ ರಾಷ್ಟ್ರಗಳು, ಈ ಪಂದ್ಯಾವಳಿಗೆ ಅಗತ್ಯವಿರುವ ಅರ್ಹತೆಯನ್ನು ಪಡೆದುಕೊಳ್ಳುತ್ತವೆ. ಇದರೊಂದಿಗೆ ಇನ್ನುಳಿದವರನ್ನು ಅರ್ಹತಾ ಪಂದ್ಯಾವಳಿಯ ಮೂಲಕ ಐಸಿಸಿ ಮಂಡಳಿಯ ಸದಸ್ಯ ರಾಷ್ಟ್ರಗಳಿಂದ ಆಯ್ಕೆ ಮಾಡಲಾಗುತ್ತದೆ.

ಆಗಿನ 2007 ರ ವಿಶ್ವ ಟ್ವೆಂಟಿ20ಗೆ ಅರ್ಹತೆಯನ್ನು ಐಸಿಸಿ ವಿಶ್ವಕ್ರಿಕೆಟ್ ಸರಣಿಯ ಮೊದಲ ಸುತ್ತಿನಲ್ಲಿ ಪಡೆದ ಫಲಿತಾಂಶ ಆಧರಿಸಿ ನೀಡಲಾಗುತ್ತದೆ- ಟೆಸ್ಟ್ ಪಂದ್ಯಗಳನ್ನು ಆಡದ ರಾಷ್ಟ್ರಗಳಿಗಾಗಿ 50-ಓವರ್ ಗಳ ಸ್ವರೂಪದ ಸರಣಿ ಆಯೋಜಿಸಲಾಗುತ್ತದೆ. ವಿಭಾಗ ಒಂದರ ಪಂದ್ಯಾವಳಿಯ ಇಬ್ಬರು ಕಡೆಯ ಸ್ಪರ್ಧಿಗಳು - ಕೀನ್ಯಾ ಮತ್ತು ಸ್ಕಾಟ್ಲೆಂಡ್ - ಟೆಸ್ಟ್ ಪಂದ್ಯಗಳನ್ನು ಆಡುವ ರಾಷ್ಟ್ರಗಳೊಂದಿಗೆ ಆರಂಭದ ವಿಶ್ವ ಟ್ವೆಂಟಿ20 ಪಂದ್ಯಾವಳಿಗೆ ಆಯ್ಕೆಯಾದವು. ಅನಂತರದ ಪಂದ್ಯಾವಳಿಗಳಿಗೆ ಅರ್ಹತೆಯನ್ನು 2009ರ ಪಂದ್ಯಾವಳಿಯಿಂದ ಆರಂಭಿಸಲಾಯಿತು. ಅರ್ಹರನ್ನು ಟ್ವೆಂಟಿ20 ಸ್ವರೂಪವನ್ನು ಬಳಸಿ ವಿಶೇಷ ಪಂದ್ಯಾವಳಿಯ ಮೂಲಕ ಆಯ್ಕೆ ಮಾಡಲಾಯಿತು.

ವಿಶ್ವ ಟ್ವೆಂಟಿ20 ಕ್ವಾಲಿಫೈಯರ್ ಪಂದ್ಯಾವಳಿಯನ್ನು,ಕಳೆದ 2009 ರ ವಿಶ್ವ ಟ್ವೆಂಟಿ20 ಗಾಗಿ, 2008ರಲ್ಲಿ ಆಯೋಜಿಸಲಾಯಿತು. ಪ್ರಸ್ತುತ ಇದು ಮುಂಬರುವ ವಿಶ್ವ ಟ್ವೆಂಟಿ20ಯ ಎಲ್ಲಾ ಪಂದ್ಯಾವಳಿಗಳಿಗೆ ಪ್ರಮುಖ ಅರ್ಹತಾ ಪಂದ್ಯಾವಳಿಯಾಗಿದೆ. ಈ 2008 ರ ಕ್ವಾಲಿಫೈಯರ್ಸ್ ಅನ್ನು, ಉತ್ತರ ಐರ್ಲೆಂಡ್‌‌ ನಲ್ಲಿರುವ ಬೆಲ್ ಫಾಸ್ಟ್ ನ ಸ್ಟೋರ್ ಮಾಂಟ್ ನಲ್ಲಿ 2008 ರ ಆಗಸ್ಟ್ 2 ರಿಂದ ಆಗಸ್ಟ್ 5 ರವರೆಗೆ ಆಡಲಾಯಿತು. ಸ್ಪರ್ಧಿಸಿದ ಆರು ತಂಡಗಳು: ಬರ್ಮುಡಾ, ಕೆನಡಾ, ಐರ್ಲೆಂಡ್‌‌, ಕೀನ್ಯಾ, ನೆದರ್ಲೆಂಡ್ ಮತ್ತು ಸ್ಕಾಟ್ಲೆಂಡ್‌, ಇವುಗಳೊಂದಿಗೆ 2009 ರ ವಿಶ್ವ ಟ್ವೆಂಟಿ20ಯಲ್ಲಿ ಮೂರನೆ ಸ್ಥಾನ ಗಳಿಸಿದ ಇಂಗ್ಲೆಂಡ್. ಐರ್ಲೆಂಡ್‌‌ ಮತ್ತು ನೆದರ್ಲೆಂಡ್ ಗಳು ಈ ಸ್ಪರ್ಧೆಯಲ್ಲಿ ಜಯಗಳಿಸಿದ್ದವು. ಮಳೆಯಿಂದಾಗಿ ಒಂದು ಚೆಂಡನ್ನು ಬೋಲ್ ಮಾಡದೇ ಪಂದ್ಯ ನಿಲ್ಲಿಸಿದ ನಂತರ ಈ ಎರಡೂ ರಾಷ್ಟ್ರಗಳು ಟ್ರೋಫಿಯನ್ನು ಹಂಚಿಕೊಂಡವು. ಎರಡು ತಂಡಗಳು ಇಂಗ್ಲೆಂಡ್ ನಲ್ಲಿ ನಡೆದ 2009 ಫೈನಲ್ಸ್ ಪಂದ್ಯಾವಳಿಗೆ ಆಯ್ಕೆಯಾದವು. ಸ್ಪರ್ಧೆಯಿಂದ ಜಿಂಬಾಬ್ವೆ ಹೊರಗುಳಿದ ಕಾರಣ ಮೂರನೆಯ ಸ್ಥಾನದ ಸ್ಕಾಟ್ಲೆಂಡ್‌ ನಿಂದ ಇಬ್ಬರು ಅಂತಿಮ ಸ್ಪರ್ಧಿಗಳು ಸೇರಿಕೊಂಡರು.

ಈ 2010 ರ ಕ್ವಾಲಿಫೈಯರ್ ಪಂದ್ಯಾವಳಿಯು ಅಲ್ಲಿಯ ವರೆಗೆ ನಡೆದ ಪಂದ್ಯಾವಳಿಗಳಲ್ಲೇ ಅತ್ಯಂತ ದೊಡ್ಡದಾಗಿದ್ದು, ಎಂಟು ಪ್ರತಿಸ್ಪರ್ಧಿ ತಂಡಗಳನ್ನು ಒಳಗೊಂಡಿತ್ತು. ಇದನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ 2010 ರ ಫೆಬ್ರವರಿ 9 ರಿಂದ 13ರ ವರೆಗೆ ಆಡಲಾಯಿತು. ಇದನ್ನು ಕ್ಯಾರಿಬೀನ್ ನಲ್ಲಿ ನಡೆದ 2010 ರ ಪಂದ್ಯಾವಳಿಗೆ ಕಡೆ ಕ್ವಾಲಿಫೈಯ್ ಆಗುತ್ತಿದ್ದ ಅಗ್ರ ಎರಡು ತಂಡಗಳೊಂದಿಗೆ ಆಡಲಾಯಿತು. ಎಂಟು ಪ್ರತಿಸ್ಪರ್ಧಿ ತಂಡಗಳು: ಆಫ್ಘಾನಿಸ್ತಾನ, ಕೆನಡಾ, ಐರ್ಲೆಂಡ್‌‌, ಕೀನ್ಯಾ, ನೆದರ್ಲೆಂಡ್, ಸ್ಕಾಟ್ಲೆಂಡ್‌, UAE ಮತ್ತು USA.[೪] ಆಗಿದ್ದವು. ಈ ಸ್ಪರ್ಧೆಯಲ್ಲಿ, ಎರಡನೆಯ ಸ್ಥಾನ ಗಳಿಸಿದ ಐರ್ಲೆಂಡ್‌‌ ನೊಂದಿಗೆ ಆಯ್ಕೆಯಾಗಿದ್ದ ಆಫ್ಘಾನಿಸ್ತಾನ ಗೆದ್ದುಕೊಂಡಿತು.

ಆತಿಥೇಯರು[ಬದಲಾಯಿಸಿ]

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನಿರ್ವಾಹಕ ಸಮಿತಿ, ಟ್ವೆಂಟಿ20 ವಿಶ್ವ ಚ್ಯಾಂಪಿಯನ್ಸ್ಶಿಪ್ ಅನ್ನು ನಡೆಸುವುದರ ಬಗ್ಗೆ ಆಸಕ್ತಿ ತೋರಿದ ರಾಷ್ಟ್ರಗಳಿಂದ ಹರಾಜು ಪ್ರತಿಕ್ರಿಯೆ ಪರಿಶೀಲಿಸಿ ನಂತರ ಪಂದ್ಯಾವಳಿಯ ಆತಿಥೇಯರನ್ನು ಆರಿಸಿತು. ದಕ್ಷಿಣ ಆಫ್ರಿಕಾದ 2007 ರ ಸರದಿಯ ನಂತರ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್, ಪಂದ್ಯಾವಳಿಯನ್ನು ಅನುಕ್ರಮವಾಗಿ 2009 ಮತ್ತು 2010 ರಲ್ಲಿ ಆಯೋಜಿಸಿದ್ದವು. ಮುಂದಿನ ಪಂದ್ಯಾವಳಿಯನ್ನು 2012ರಲ್ಲಿ ಶ್ರೀಲಂಕಾ ಆಯೋಜಿಸಲಿದೆ. ಐಸಿಸಿ, ಮೊದಲ ಎರಡು ಪಂದ್ಯಾವಳಿಯನ್ನು ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಆಯೋಜಿಸಬೇಕೆಂದು ನಿರ್ಧರಿಸಿದೆ. ಏಕೆಂದರೆ ಇವುಗಳು ಈ ಸ್ವರೂಪವನ್ನು ಅನ್ವಯಿಸಿಕೊಂಡ ಆರಂಭಿಕ ರಾಷ್ಟ್ರಗಳಾಗಿವೆ.[೫] ಮುಂಬರುವ 2014 ರ ಐಸಿಸಿ ವಿಶ್ವ ಟ್ವೆಂಟಿ20 ಚ್ಯಾಂಪಿಯನ್ಸ್ಶಿಪ್ ಅನ್ನು ಬಾಂಗ್ಲಾದೇಶ ಆಯೋಜಿಸಲಿದೆ.[೬]

ಸಾರಾಂಶ[ಬದಲಾಯಿಸಿ]

ವರ್ಷ ಆತಿಥೇಯ ರಾಷ್ಟ್ರ(ಗಳು) ಅಂತಿಮ ಸ್ಥಳ ಅಂತಿಮ
ವಿಜೇತ ಫಲಿತಾಂಶ ಉಪಾಂತ-ವಿಜಯಿ
2007
ವಿವರಗಳು

ದಕ್ಷಿಣ ಆಫ್ರಿಕಾ
ಜೊಹಾನ್ಸ್ ಬರ್ಗ್ ನ ವಂಡರ್ಸ್ ಮೈದಾನ,  ಭಾರತ
157/5 (20 ಓವರ್ ಗಳು)
5 ರನ್ ಗಳಿಂದ ಭಾರತ ಜಯಗಳಿಸಿತು
ಅಂಕದ ಕಾರ್ಡು
 ಪಾಕಿಸ್ತಾನ
152/10 (19.3 ಓವರ್ ಗಳು)
2009
ವಿವರಗಳು

ಇಂಗ್ಲೆಂಡ್
ಲಂಡನ್ ನ ಲಾರ್ಡ್ಸ್,  ಪಾಕಿಸ್ತಾನ
139/2 (18.4 ಓವರ್ ಗಳು)
8 ವಿಕೆಟ್ ಗಳಿಂದ ಪಾಕಿಸ್ತಾನ ಜಯಗಳಿಸಿತು ಅಂಕದ ಕಾರ್ಡು  ಶ್ರೀಲಂಕಾ
138/6 (20 ಓವರ್ ಗಳು)
2010
ವಿವರಗಳು

ವೆಸ್ಟ್‌ ಇಂಡೀಸ್‌
ಬಾರ್ಬೆಡೊಸ್‌ ನ ಕೆನ್ಸಿಂಗ್ಟನ್‌ ಒವಲ್‌,  ಇಂಗ್ಲೆಂಡ್
148/3 (17 ಓವರ್ ಗಳು)
7 ವಿಕೆಟ್ ಗಳಿಂದ ಇಂಗ್ಲೆಂಡ್ ಜಯಗಳಿಸಿತು ಅಂಕದ ಕಾರ್ಡು  ಆಸ್ಟ್ರೇಲಿಯಾ
147/6 (20 ಓವರ್ ಗಳು)
2012
ವಿವರಗಳು
ಚಿತ್ರ:Flag of SRI.svg
ಶ್ರೀಲಂಕಾ
ಕೊಲಂಬೋದ ಆರ್. ಪ್ರೇಮದಾಸ ಮೈದಾನ, TBD TBD TBD
2014
ವಿವರಗಳು
ಚಿತ್ರ:Flag of BAN.svg
ಬಾಂಗ್ಲಾದೇಶ
ಢಾಕಾದ ಶೆರ್-ಇ-ಬಾಂಗ್ಲಾ ಕ್ರಿಕೆಟ್ ಮೈದಾನ, TBD TBD TBD

ತಂಡಗಳ ಪ್ರದರ್ಶನ[ಬದಲಾಯಿಸಿ]

ಕೆಳಗೆ ಕೊಟ್ಟಿರುವ ಈ ಟೇಬಲ್ ಐಸಿಸಿ ವಿಶ್ವ ಟ್ವೆಂಟಿ20 ಯಲ್ಲಿ ತಂಡಗಳು ನೀಡಿರುವ ಪ್ರದರ್ಶನಗಳ ಸ್ಥೂಲ ಸಮೀಕ್ಷೆಯನ್ನು ನೀಡುತ್ತದೆ. ಇದು ಎಲ್ಲಾ ಮೂರು ಪಂದ್ಯಾವಳಿಗಳ ಮಾಹಿತಿಯನ್ನು ಒಳಗೊಂಡಿದೆ:

ತಂಡ ಪಾಲ್ಗೊಳ್ಳುವಿಕೆ/ಕಾಣಿಸುವಿಕೆ/ ಮೊದಲ ಇತ್ತೀಚಿನ ಅತ್ಯುತ್ತಮ ಫಲಿತಾಂಶ ಆಡಿದ ಪಂದ್ಯಗಳ ಸಂಖ್ಯೆ ಗೆಲುವು ಸೋಲು ಟೈ ಆದಂತಹ NR ಜಯ%
 ಪಾಕಿಸ್ತಾನ 3 2007 2010 ಚ್ಯಾಂಪಿಯನ್ಸ್ಸ್ 2009 20 12 7 1 0 60.00
 ಭಾರತ 3 2007 2010 ಚ್ಯಾಂಪಿಯನ್ಸ್ 2007 17 8 7 1 1 47.06
 ಇಂಗ್ಲೆಂಡ್ 3 2007 2010 ಚ್ಯಾಂಪಿಯನ್ಸ್ 2010 17 8 8 0 1 47.06
 ಶ್ರೀಲಂಕಾ 3 2007 2010 ಉಪಾಂತ-ವಿಜಯಿ(6) 18 12 6 0 0 66.67
 ಆಸ್ಟ್ರೇಲಿಯಾ 3 2007 2010 ಉಪಾಂತ-ವಿಜಯಿ(6) 15 9 6 0 0 60.00
 ದಕ್ಷಿಣ ಆಫ್ರಿಕಾ 3 2007 2010 ಸೆಮಿ-ಫೈನಲ್[71] 16 11 5 0 0 68.75
 ನ್ಯೂ ಜೀಲ್ಯಾಂಡ್ 3 2007 2010 ಸೆಮಿ-ಫೈನಲ್[71] 16 8 8 0 0 50.00
 ವೆಸ್ಟ್ ಇಂಡೀಸ್ 3 2007 2010 ಸೆಮಿ-ಫೈನಲ್[71] 13 6 7 0 0 46.15
 ಬಾಂಗ್ಲಾದೇಶ 3 2007 2010 ಸೂಪರ್ ಎಯ್ಟ್ 2007 9 1 8 0 0 11.11
 ಐರ್ಲೆಂಡ್‌ 2 2009 2010 ಸೂಪರ್ ಏಯ್ಟ್ 2009 7 1 5 0 1 [14] ^ [28]
 ಜಿಂಬಾಬ್ವೆ 2 2007 2010 ಸುತ್ತು 1 2007, 2010 4 1 3 0 0 25.00
 ಸ್ಕಾಟ್ಲೆಂಡ್ 2 2007 2009 ಸುತ್ತು 1 2007, 2009 4 0 3 0 1 0.76
 ನೆದರ್ಲ್ಯಾಂಡ್ಸ್ 1 2009 2009 ಸುತ್ತು 1 2009 2 1 1 0 0 50.00
 ಕೀನ್ಯಾ 1 2007 2007 ಸುತ್ತು 1 2007 2 0 2 0 0 0.76
 ಅಫ್ಘಾನಿಸ್ತಾನ 1 2010 2010 ಸುತ್ತು 1 2010 2 0 2 0 0 0.76
ಪಂದ್ಯಾವಳಿಯಲ್ಲಿ ತಂಡಗಳ ಪ್ರದರ್ಶನ

ತಂಡಗಳು ೨೦೦೭

2007

ಇವನ್ನೂ


ಇವನ್ನೂವನ್ನೂ ಗಮನಿಸಿ

ಇವನ್ನೂವನ್ನೂ ಗಮನಿಸಿ


ಇವನ್ನೂ


ಇವನ್ನೂ ಗಮನಿಸಿ[ಬದಲಾಯಿಸಿ]

Page ಮಾಡ್ಯೂಲ್:Portal/styles.css has no content.

 • ಟ್ವೆಂಟಿ20 ಅಂತರರಾಷ್ಟ್ರೀಯ ಆಟಗಳ ಪಟ್ಟಿ

ಉಲ್ಲೇಖಗಳು[ಬದಲಾಯಿಸಿ]

 1. Miller, Andrew (4 June 2009). "Bringing the monster back home". CricInfo. ESPN. Retrieved 5 June 2009.
 2. ಪ್ಲ್ಯೇಯಿಂಗ್ ಕಂಡಿಷನ್ಸ್ Archived 2008-07-20 ವೇಬ್ಯಾಕ್ ಮೆಷಿನ್ ನಲ್ಲಿ., ಐಸಿಸಿ ವಿಶ್ವ ಟ್ವೆಂಟಿ20, 2007 ರ ಸೆಪ್ಟೆಂಬರ್ 12 ರಂದು ಮರುಸಂಪಾದಿಸಲಾಯಿತು.
 3. ಫೈನಲ್ ವರ್ಲ್ದ್ ಟ್ವೆಂಟಿ20 ಪ್ಲೇಯಿಂಗ್ ಕಂಡಿಷನ್ಸ್ Archived 2008-09-11 ವೇಬ್ಯಾಕ್ ಮೆಷಿನ್ ನಲ್ಲಿ., ಐಸಿಸಿ ವಿಶ್ವ ಟ್ವೆಂಟಿ20, 2007 ರ ಸೆಪ್ಟೆಂಬರ್ 12 ರಂದು ಮರು ಸಂಪಾದಿಸಲಾಯಿತು.
 4. UAE ಟು ಹಾಸ್ಟ್ ಎಕ್ಸ್ ಪ್ಯಾಂಡೆಡ್ ವರ್ಲ್ದ್ ಟ್ವೆಂಟಿ20 ಕ್ವಾಲಿಫೈಯರ್ಸ್ ಕ್ರಿಸಿನ್ಫೊ, 2009 ರ ಜೂನ್ 27 ರಂದು ಪ್ರವೇಶಿಸಲಾಯಿತು.
 5. "ICC events". Cricinfo. Retrieved 2006. {{cite web}}: Check date values in: |accessdate= (help)
 6. ಬಾಂಗ್ಲಾದೇಶ್ ಟು ಹೊಸ್ಟ್ ಟ್ವೆಂಟಿ20 2014 ಕ್ರಿಸಿನ್ಫೊ, 2010 ರ ಜುಲೈ 1 ರಂದು ಮರು ಸಂಪಾದಿಸಲಾಯಿತು.

ಬಾಹ್ಯ ಕೊಂಡಿಗಳು[ಬದಲಾಯಿಸಿ]