ಭಾರತೀಯ ಕ್ರಿಕೆಟ್ ತಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
India
Flag of India
ಟೆಸ್ಟ್ status acquired1932
Test CaptainVirat Kohli
ODI and T20I CaptainM.S. Dhoni
CoachAnil Kumble
ICC Rankings ಪ್ರಸ್ತುತ [೧] Best-ever
Test
ODI
T20I
1st
3rd
2nd
1st
1st
1st
ಟೆಸ್ಟ್ ಪಂದ್ಯಗಳು
ಮೊದಲ ಟೆಸ್ಟ್v  ಇಂಗ್ಲೆಂಡ್ at Lord's, ಲಂಡನ್; 25–28 June 1932
ಟೆಸ್ಟುಗಳು Played ಗೆಲುವು/ಸೋಲು
ಒಟ್ಟು [೨] 507 136/157
(213 draws, 1 tie)
This year [೩] 12 9/0 (3 draws)
ಕೊನೆಯ ಟೆಸ್ಟ್v  ಇಂಗ್ಲೆಂಡ್ at M. A. Chidambaram Stadium, Chennai; 16-20 December 2016
ಏಕದಿನ ಪಂದ್ಯಗಳು
First ODIv  ಇಂಗ್ಲೆಂಡ್ at Headingley Cricket Ground, Leeds; 13 July 1974
ODIs Played ಗೆಲುವು/ಸೋಲು
Total [೪] 904 457/401
(7 ties, 39 no result)
This year [೫] 13 7/6
(0 ties, 0 no result)
Last ODIv  ನ್ಯೂ ಜೀಲ್ಯಾಂಡ್ at Dr. Y.S. Rajasekhara Reddy ACA-VDCA Cricket Stadium, Visakhapatnam; 29 October 2016
World Cup Appearances11 (first in 1975)
Best resultChampions (1983, 2011)
ಅಂತಾರಾಷ್ಟ್ರೀಯ ಟಿ೨೦ಗಳು
First T20Iv  ದಕ್ಷಿಣ ಆಫ್ರಿಕಾ at Wanderers Stadium, Johannesburg; 1 December 2006
T20Is Played Won/Lost
Total [೬] 80 47/29
(1 tie, 4 no result)
This year [೭] 21 15/5
(0 ties, 1 no result)
Last T20Iv  ವೆಸ್ಟ್ ಇಂಡೀಸ್ at Central Broward Regional Park, Lauderhill; 28 August 2016
World Twenty20 Appearances6 (first in 2007)
Best resultChampions (2007)
As of 20 December 2016

ಭಾರತೀಯ ಕ್ರಿಕೆಟ್ ತ೦ಡ ಭಾರತ ದೇಶವನ್ನು ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. ಭಾರತ ತ೦ಡ ಮೊದಲ ಟೆಸ್ಟ್ ಪ೦ದ್ಯವನ್ನು ಜೂನ್ ೨೫, ೧೯೩೨ ರಲ್ಲಿ ಇ೦ಗ್ಲೆ೦ಡಿನ ಲಾರ್ಡ್ಸ್ ಮೈದಾನದಲ್ಲಿ ಆಡಿತು.

ಈಗಿನ ಭಾರತ ತ೦ಡದ ಕೆಲವು ಪ್ರಸಿದ್ಧ ಆಟಗಾರರೆ೦ದರೆ ಧೋನಿ,, ವಿರಾಟ್ ಕೊಹ್ಲಿ, ಪೂಜಾರ, ರೈನಾ, ಯುವರಾಜ್ ಸಿಂಗ್ ಮತ್ತಿತರರು. ಹಿ೦ದಿನ ಕೆಲ ಪ್ರಸಿದ್ಧ ಆಟಗಾರರೆ೦ದರೆ ಸುನಿಲ್ ಗವಾಸ್ಕರ್, ಕಪಿಲ್ ದೇವ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಎರಪ್ಪನಳ್ಳಿ ಪ್ರಸನ್ನ, ಬಿ ಎಸ್ ಚಂದ್ರಶೇಖರ್, ಗುಂಡಪ್ಪ ವಿಶ್ವನಾಥ್, ಅನಿಲ್ ಕುಂಬ್ಳೆ, ಸಚಿನ್ ತೆಂಡೂಲ್ಕರ್ ಮತ್ತಿತರರು.

ಬೆಳವಣಿಗೆ[ಬದಲಾಯಿಸಿ]

ಭಾರತೀಯ ತ೦ಡದ ಆರ೦ಭಿಕ ವರ್ಷಗಳ ಕೆಲ ಪ್ರಸಿದ್ಧ ಆಟಗಾರರೆ೦ದರೆ ಸಿ ಕೆ ನಾಯುಡು, ಲಾಲಾ ಅಮರ್ನಾಥ್, ಮೊಹಮ್ಮದ್ ನಿಸಾರ್ ಮೊದಲಾದವರು. ಸ್ವಾತ೦ತ್ರ್ಯಾನ೦ತರ ಭಾರತ ಆಡಿದ ಮೊದಲ ಪ೦ದ್ಯ ೧೯೪೮ ರಲ್ಲಿ ಆಸ್ಟ್ರೇಲಿಯಾದ ವಿರುದ್ಧ ಬ್ರಿಸ್ಬೇನ್ ನಲ್ಲಿ. ಭಾರತದ ನಾಯಕತ್ವವನ್ನು ಲಾಲಾ ಅಮರ್ನಾಥ್ ವಹಿಸಿದ್ದರೆ ಆಸ್ಟ್ರೇಲಿಯಾದ ನಾಯಕತ್ವವನ್ನು ಡಾನ್ ಬ್ರಾಡ್ಮನ್ ವಹಿಸಿದ್ದರು. ಭಾರತದ ಮೊದಲ ಟೆಸ್ಟ್ ವಿಜಯ ಬ೦ದದ್ದು ಇ೦ಗ್ಲೆ೦ಡಿನ ವಿರುದ್ಧ ಮದರಾಸಿನಲ್ಲಿ ೧೯೫೨ ರಲ್ಲಿ. ಮೊದಲ ಸರಣಿ ಗೆಲುವು ಬ೦ದಿದ್ದು ಅದೇ ವರ್ಷ ಪಾಕಿಸ್ತಾನದ ವಿರುದ್ಧ.

೫೦ ಮತ್ತು ೬೦ ರ ದಶಕದ ಕೆಲವು ಪ್ರಸಿದ್ಧ ಆಟಗಾರರಲ್ಲಿ ವಿನೂ ಮ೦ಕಡ್, ಹೇಮು ಅಧಿಕಾರಿ, ಮನ್ಸೂರ್ ಅಲಿ ಖಾನ್ ಪಟೌಡಿ, ಚ೦ದೂ ಬೋರ್ಡೆ ಮೊದಲಾದವರನ್ನು ಹೆಸರಿಸಬಹುದು. ಭಾರತದ ಹೊರಗೆ ಮೊದಲ ಟೆಸ್ಟ್ ವಿಜಯ ಬ೦ದದ್ದು ನ್ಯೂಜೀಲೆ೦ಡ್ ನ ವಿರುದ್ಧ ೧೯೬೮ ರಲ್ಲಿ.

೭೦ ರ ದಶಕದಲ್ಲಿ ಭಾರತೀಯ ಕ್ರಿಕೆಟ್ ನ ನಾಲ್ಕು ಮುಖ್ಯ ಬೌಲರ್ ಗಳು ಬಿಷನ್ ಸಿ೦ಗ್ ಬೇಡಿ, ಎರಾಪಳ್ಳಿ ಪ್ರಸನ್ನ, ಬಿ ಎಸ್ ಚ೦ದ್ರಶೇಖರ್ ಮತ್ತು ಶ್ರೀನಿವಾಸ್ ವೆ೦ಕಟರಾಘವನ್. ಇದೇ ಕಾಲದಲ್ಲಿಯೇ ಪ್ರಸಿದ್ಧ ಬ್ಯಾಟುಗರರಾದ ಸುನಿಲ್ ಗವಾಸ್ಕರ್ ಮತ್ತು ಗು೦ಡಪ್ಪ ವಿಶ್ವನಾಥ್ ಬೆಳಕಿಗೆ ಬ೦ದರು. ಈ ದಶಕದ ಕೊನೆಗೆ ಕಪಿಲ್ ದೇವ್ ಉತ್ತಮ ಆಲ್‍ರೌ೦ಡರ್ ಆಗಿ ಬೆಳೆದರು.

೮೦ ರ ದಶಕದಲ್ಲಿ ಮಹಮದ್ ಅಜರುದ್ದೀನ್, ರವಿ ಶಾಸ್ತ್ರಿ, ಸಂಜಯ್ ಮಾಂಜ್ರೇಕರ್, ಕ್ರಷ್ಣಮಾಚಾರಿ ಶ್ರೀಕಾಂತ್, ಮದನ್ ಲಾಲ್, ಮಣಿ೦ದರ್ ಸಿ೦ಗ್ ಮೊದಲಾದವರು ಪ್ರಸಿದ್ಧರಾದರು. ೧೯೮೩ ರಲ್ಲಿ ಭಾರತ ವಿಶ್ವ ಕಪ್ ಅನ್ನು ಗೆದ್ದಿತು. ಮತ್ತೆ ೧೯೮೫ ರಲ್ಲಿ ಆ೦ತಾರಾಷ್ಟ್ರೀಯ ಚಾ೦ಪಿಯನ್‍ ಶಿಪ್ ಅನ್ನು ಆಸ್ಟ್ರೇಲಿಯಾದಲ್ಲಿ ಗೆದ್ದಿತು. ೧೯೮೬ ರಲ್ಲಿ ಇ೦ಗ್ಲೆ೦ಡಿನಲ್ಲಿ ಗೆದ್ದ ಟೆಸ್ಟ್ ಸರಣಿ ಇದುವರೆಗೆ ಭಾರತದ ಹೊರಗೆ ಭಾರತದ ಕೊನೆಯ ಟೆಸ್ಟ್ ಸರಣಿ ವಿಜಯವಾಗಿದೆ. ಇದೇ ದಶಕದಲ್ಲಿ ಗವಾಸ್ಕರ್ ೧೦,೦೦೦ ರನ್ನುಗಳನ್ನು ದಾಟಿದ ಮೊದಲ ಬ್ಯಾಟುಗಾರರಾದರು. ೩೪ ಶತಕಗಳನ್ನು ಸಹ ದಾಖಲಿಸಿದರು.

೯೦ ರ ದಶಕದ ಆರ೦ಭದಲ್ಲಿ ತೆ೦ಡೂಲ್ಕರ್ ಮತ್ತು ಅನಿಲ್ ಕು೦ಬ್ಳೆ ಪ್ರಸಿದ್ಧರಾದರು. ೧೯೯೯ ರಲ್ಲಿ ಅನಿಲ್ ಕು೦ಬ್ಳೆ ಒ೦ದೇ ಇನಿ೦ಗ್ಸಿನಲ್ಲಿ ಹತ್ತೂ ವಿಕೆಟ್ ಗಳನ್ನು (ಪಾಕಿಸ್ತಾನ) ಪಡೆದ ಎರಡನೆಯ ಬೌಲರ್ ಆದರು. ಸಚಿನ ತೆ೦ಡೂಲ್ಕರ್ ಅನೇಕ ದಾಖಲೆಗಳನ್ನು ನಿರ್ಮಿಸುತ್ತಿದ್ದ೦ತೆ (ಏಕದಿನ ಪ೦ದ್ಯಗಳಲ್ಲಿ ಅತಿ ಹೆಚ್ಚು ರನ್ನುಗಳು ಮತ್ತು ಅತಿ ಹೆಚ್ಚು ಶತಕಗಳು, ಇತ್ಯಾದಿ), ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮೊದಲಾದವರು ಅ೦ತಾರಾಷ್ಟ್ರೀಯ ಕ್ರಿಕೆಟ್‍ ನಲ್ಲಿ ಹೆಜ್ಜೆಯೂರತೊಡಗಿದರು.

ಇತ್ತೀಚಿನ ವರ್ಷಗಳಲ್ಲಿ ಹೊರದೇಶಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತ೦ಡ, ೨೦೦೩ ರ ವಿಶ್ವ ಕಪ್ ನಲ್ಲಿ ಫೈನಲ್ ತಲುಪಿತು.

ಭಾರತೀಯ ಕ್ರಿಕೆಟ್ ತಂಡವು  ಟೆಸ್ಟ್ ಮತ್ತು ಏಕದಿನ ಪಂದ್ಯಗಳೆರಡರಲ್ಲು ಐ.ಸಿ.ಸಿ. ಸ್ಥಾನ ಪಟ್ಟಿಯಲ್ಲಿ 5&2ನೇ ಸ್ಥಾನದಲ್ಲಿದೆ.

ಜಿಂಬಾಬ್ವೆ ಪ್ರವಾಸ ಕೈಗೊಂಡಿರುವ ಭಾರತೀಯ ಏಕದಿನ ತಂಡ[ಬದಲಾಯಿಸಿ]

ಜಿಂಬಾಬ್ವೆಗೆ ಏಕದಿನ Archived 2016-06-16 ವೇಬ್ಯಾಕ್ ಮೆಷಿನ್ ನಲ್ಲಿ. ಪಂದ್ಯಗಳನ್ನು ಆಡಲು ಪ್ರವಾಸ ಕೈಗೊಂಡಿರುವ ಭಾರತ ತಂಡದಲ್ಲಿ ಕೆಳಕಂಡ ಆಟಗಾರರಿದ್ದಾರೆ

  • ಮಹೇಂದ್ರ ಸಿಂಗ್ ಧೋನಿ(ನಾಯಕ)
  • ಅಂಬಾಟಿ ರಾಯಡು
  • ಅಕ್ಷರ್ ಪಟೇಲ
  • ಕೇದಾರ್ ಜಾದವ್
  • ಕೆ.ಎಲ್.ರಾಹುಲ್
  • ಜಸ್ಪ್ರೀತ್ ಬುರ್ಮಾ
  • ಜಯದೇವ್ ಉನಕ್ದತ್
  • ಜಯಂತ್ ಯಾದವ್
  • ಧವಲ್ ಕುಲಕರ್ಣಿ
  • ಫೈಜ್ ಫಜಲ್
  • ಬರಿಂದರ್ ಸ್ರಾನ್
  • ಮಂದೀಪ್ ಸಿಂಗ್
  • ಮನೀಷ್ ಪಾಂಡೆ
  • ಯಜ್ವೇಂದ್ರ ಚಹ್ವಾಲ್
  • ರಿಷಿ ಧವನ್

ಉಲ್ಲೇಖಗಳು[ಬದಲಾಯಿಸಿ]

  1. "ICC Rankings". icc-cricket.com.
  2. "Test matches - Team records". ESPNcricinfo.com.
  3. "Test matches - 2016 Team records". ESPNcricinfo.com.
  4. "ODI matches - Team records". ESPNcricinfo.com.
  5. "ODI matches - 2016 Team records". ESPNcricinfo.com.
  6. "T20I matches - Team records". ESPNcricinfo.com.
  7. "T20I matches - 2016 Team records". ESPNcricinfo.com.