ದೇವದತ್ ಪಡಿಕ್ಕಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ದೇವದತ್ ಪಡಿಕ್ಕಲ್
ವೈಯುಕ್ತಿಕ ಮಾಹಿತಿ
ಪೂರ್ಣ ಹೆಸರುದೇವದತ್ ಬಾಬುನು ಪಡಿಕ್ಕಲ್
ಜನನ (2000-07-07) 7 July 2000 (age 21)
ಎಟಪ್ಪಾಲ್, ಕೇರಳ, ಭಾರತ
ಬ್ಯಾಟಿಂ ಶೈಲಿಎಡಗೈ
ಬೌಲಿಂಗ್ ಶೈಲಿಬಲಗೈ ಆಫ್ ಬ್ರೇಕ್
ಪಾತ್ರಆರಂಭಿಕ ಬ್ಯಾಟ್ಸ್‌ಮನ್
ದೇಶೀಯ ಟೀಮ್ ಮಾಹಿತಿ
ವರ್ಷಗಳುTeam
೨೦೧೭-ಪ್ರಸ್ತುತಬಳ್ಳಾರಿ ಟಸ್ಕರ್ಸ್
೨೦೧೮-ಪ್ರಸ್ತುತಕರ್ನಾಟಕ
೨೦೧೯-ಪ್ರಸ್ತುತರಾಯಲ್ ಚಾಲೆಂಜರ್ಸ್ ಬೆಂಗಳೂರು
ವೃತ್ತಿ ಅಂಕಿಅಂಶಗಳು
ಸ್ಪರ್ಧೆ FC LA ಟಿ೨೦
ಪಂದ್ಯಗಳು ೧೫ ೧೩ ೧೩
ಗಳಿಸಿದ ರನ್‌ಗಳು ೯೦೭ ೬೫೦ ೬೩೬
ಬ್ಯಾಟಿಂಗ್ ಸರಾಸರಿ ೩೪.೮೮ ೫೯.೦೯ ೬೩.೬೦
100ಗಳು/50ಗಳು 0/೧೦ ೨/೫ ೧/೬
ಅತ್ಯುತ್ತಮ ಸ್ಕೋರ್ ೯೯ ೧೦೩* ೧೨೨*
ಎಸೆದ ಚೆಂಡುಗಳು ೧೨ 0 0
ವಿಕೆಟ್ಗಳು 0 0 0
ಬೌಲಿಂಗ್ ಸರಾಸರಿ 0 0 0
5 ವಿಕೆಟ್‌ಗಳು (ಇನ್ನಿಂಗ್ಸ್) 0 0 0
10 ವಿಕೆಟ್‌ಗಳು (ಪಂದ್ಯ) 0 0 0
ಅತ್ಯುತ್ತಮ ಬೌಲಿಂಗ್ 0 0 0
ಕ್ಯಾಚುಗಳು/ಸ್ಟಂಪಿಂಗ್‌ಗಳು ೧೨/0 ೪/0 ೫/0
ಮೂಲ: Cricinfo, 23 September 2020

ದೇವದತ್ ಪಡಿಕ್ಕಲ್ (ಹುಟ್ಟು: ೭ ಜುಲೈ ೨೦೦೦) ಭಾರತದ ಕ್ರಿಕೆಟ್ ಆಟಗಾರ. ಇವರು ಕರ್ನಾಟಕ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಲ್ಲಿ ಆಡಿದ್ದಾರೆ. [೧] [೨] [೩] ಇವರು ಭಾರತದ ೧೯ ವರ್ಷದೊಳಗಿನವರ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲೂ ಆಡಿದ್ದಾರೆ. [೪]

ಆರಂಭಿಕ ಜೀವನ[ಬದಲಾಯಿಸಿ]

ಪಡಿಕ್ಕಲ್ ೭ ಜುಲೈ ೨೦೦೦ದಂದು ಕೇರಳಎಟಪ್ಪಾಲ್‌ನಲ್ಲಿ ಹುಟ್ಟಿದರು. ೨೦೧೧ರಲ್ಲಿ ಇವರ ಕುಟುಂಬವು ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದಮೇಲೆ ಕರ್ನಾಟಕ ಇನ್ಸ್‌ಟಿಟ್ಯೂಟ್ ಆಫ್ ಕ್ರಿಕೆಟ್‌ನಲ್ಲಿ ತರಬೇತಿ ಪಡೆಯಲು ಆರಂಭಿಸಿದರು. ೨೦೧೪ರಿಂದ ೧೬ ಮತ್ತು ೧೯ ವರ್ಷದೊಳಗಿನವರ ತಂಡದಲ್ಲಿ ಕರ್ನಾಟಕದ ಪರ ಆಡಲು ಆರಂಭಿಸಿದರು. ೨೦೧೭ರ ಕರ್ನಾಟಕ ಪ್ರಿಮಿಯರ್ ಲೀಗ್‌ನಲ್ಲಿ ಬಳ್ಳಾರಿ ಟಸ್ಕರ್ಸ್ ತಂಡ ಇವರನ್ನು ಆಯ್ದುಕೊಂಡಿತು. [೫]

ವೃತ್ತಿ[ಬದಲಾಯಿಸಿ]

೨೦೧೮-೧೯ರ ಸಾಲಿನ ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಪರ ೨೮ ನವೆಂಬರ್ ೨೦೧೮ರಲ್ಲಿ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. [೬] ೨೦೧೮ ಡಿಸೆಂಬರ್‌ನಲ್ಲಿ ನಡೆದ ೨೦೧೯ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಡಿಕ್ಕಲ್ ಅವರನ್ನು ಖರೀದಿಸಿತು. [೭] [೮] ೨೬ ಸೆಪ್ಟೆಂಬರ್ ೨೦೧೯ರಲ್ಲಿ ಕರ್ನಾಟಕದ ಪರ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವ ಮೂಲಕ ಲಿಸ್ಟ್ ಏ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. [೯] ಹನ್ನೊಂದು ಪಂದ್ಯದಲ್ಲಿ ೬೦೯ ರನ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ಅತಿಹೆಚ್ಚು ಗಳಿಸಿದ ಆಟಗಾರ ಎನಿಸಿಕೊಂಡರು. [೧೦]

ಅಕ್ಟೋಬರ್ ೨೦೧೯ರಲ್ಲಿ ಇವರನ್ನು ೨೦೧೯-೨೦ ಸಾಲಿನ ದೇವಧರ್ ಟ್ರೋಫಿಯ ಇಂಡಿಯ-ಏ ಕ್ರಿಕೆಟ್ ತಂಡದಲ್ಲಿ ಹೆಸರಿಸಲಾಯಿತು. [೧೧] ೨೦೧೯-೨೦ ಸಾಲಿನ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕದ ಪರ ಆಡಿ, ೮ ನವೆಂಬರ್ ೨೦೧೯ರಲ್ಲಿ ಟ್ವೆಂಟಿ೨೦ ಪಾದಾರ್ಪಣೆ ಮಾಡಿದರು. [೧೨]

ಉಲ್ಲೇಖಗಳು[ಬದಲಾಯಿಸಿ]

 1. "Devdutt Padikkal". ESPN Cricinfo. Retrieved 28 November 2018.
 2. "IPL 2020 - Devdutt Padikkal, Ruturaj Gaikwad in power-packed band of uncapped Indian batsmen". ESPN Cricinfo. Retrieved 10 September 2020.
 3. Sportstar, Team. "IPL 2020: Devdutt Padikkal brings up second fifty in three games for RCB". Sportstar (in ಇಂಗ್ಲಿಷ್). Retrieved 30 September 2020.
 4. "Devdutt Padikkal carves his own niche in star-studded Karnataka line-up". ESPN Cricinfo. Retrieved 1 December 2019.
 5. "'Test cricket is the ultimate': India 'A'-select Devdutt Padikkal shares his dreams". Manorama Online. Retrieved 1 December 2019.
 6. "Elite, Group A, Ranji Trophy at Mysore, Nov 28 - Dec 1 2018". ESPN Cricinfo. Retrieved 28 November 2018.
 7. "IPL 2019 auction: The list of sold and unsold players". ESPN Cricinfo. Retrieved 18 December 2018.
 8. "IPL 2019 Auction: Who got whom". The Times of India. Retrieved 18 December 2018.
 9. "Elite, Group A, Vijay Hazare Trophy at Bengaluru, Sep 26 2019". ESPN Cricinfo. Retrieved 26 September 2019.
 10. "Vijay Hazare Trophy, 2019/20: Most runs". ESPN Cricinfo. Retrieved 25 October 2019.
 11. "Deodhar Trophy 2019: Hanuma Vihari, Parthiv, Shubman to lead; Yashasvi earns call-up". SportStar. Retrieved 25 October 2019.
 12. "Group A, Syed Mushtaq Ali Trophy at Visakhapatnam, Nov 8 2019". ESPN Cricinfo. Retrieved 8 November 2019.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]