ರಾಯಲ್ ಚಾಲೆಂಜರ್ಸ್ ಬೆಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
250px
ಕೋಚ್: ಸೈಮನ್ ಕ್ಯಾಟಿಚ್
ನಾಯಕ: ಫಾಫ್ ಡು ಪ್ಲೆಸ್ಸಿಸ್
ಬಣ್ಣಗಳು: ಕೆಂಪು ಮತ್ತು ಚಿನ್ನದ ಹಳದಿ[೧]
ಸ್ಥಾಪನೆ: 2008
ತವರಿನ ಕ್ರೀಡಾಂಗಣ: ಚಿನ್ನಸ್ವಾಮಿ ಕ್ರೀಡಾಂಗಣ
ಸ್ಥಳಾವಕಾಶ: 40,000
ಮಾಲೀಕ: ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಮೂಲಕ ಡಿಯಾಜಿಯೊ ಒಡೆತನದಲ್ಲಿದೆ
ಅಧಿಕೃತ ತಾಣ: ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಅಥವಾ ಆರ್‌ಸಿಬಿ) ಬೆಂಗಳೂರಿನಲ್ಲಿ ನೆಲೆಯಿರುವ ಭಾರತೀಯ ಪ್ರೀಮಿಯರ್ ಲೀಗ್‍ನ ತಂಡ. ಯುನೈಟೆಡ್ ಸ್ಪಿರಿಟ್ಸ್ ಆರ್ ಸಿ ಬಿ ತ೦ಡದ ಮಾಲಿಕರು .[೨] ಫಾಫ್ ಡು ಪ್ಲೆಸ್ಸಿಸ್ ನಾಯಕ ಹಾಗು ಸೈಮನ್ ಕ್ಯಾಟಿಚ್ ಮುಖ್ಯ ತರಬೇತುದಾರರಾಗಿದ್ದಾರೆ. ವಿರಾಟ್ ಕೊಹ್ಲಿ ಗ್ಲೆನ್ ಮ್ಯಾಕ್ಸ್ವೆಲ್ ದಿನೇಶ ಕಾರ್ತಿಕ , ತಂಡದ ಪ್ರಮುಖ ಆಟಗಾರರಾಗಿದ್ದಾರೆ.

ಆಡಳಿತ[ಬದಲಾಯಿಸಿ]

 • ಮಾಲೀಕರು - ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ( ಡಿಯಾಜಿಯೊ ಮೂಲಕ)
 • ಅಧ್ಯಕ್ಷ - ಆನಂದ್ ಕೃಪಾಲು
 • ಕಾರ್ಯಾಚರಣೆಗಳ ನಿರ್ದೇಶಕರು - ಮೈಕ್ ಹೆಸನ್
 • ಮುಖ್ಯ ತರಬೇತುದಾರ- ಸೈಮನ್ ಕ್ಯಾಟಿಚ್
 • ಬ್ಯಾಟಿಂಗ್ ಸಲಹೆಗಾರ - ಸಂಜಯ್ ಬಂಗಾರ್
 • ಬ್ಯಾಟಿಂಗ್ ಮತ್ತು ಸ್ಪಿನ್ ಬೌಲಿಂಗ್ ತರಬೇತುದಾರ - ಶ್ರಿಧರನ್ ಶ್ರೀರಾಮ್
 • ಬೌಲಿಂಗ್ ತರಬೇತುದಾರ - ಅಡಾಂ ಗ್ರಿಫ಼್ಹಿತ್
 • ಫ಼ೀಲ್ಡಿಂಗ್ ತರಬೇತುದಾರ - ಮಲೊಲನ್ ರಂಗರಾಜನ್
 • ಭೌತಚಿಕಿತ್ಸಕ - ಎವನ್ ಸ್ಪೀಛ್ಲಿ

ಪ್ರಸ್ತಕ ತಂಡ[ಬದಲಾಯಿಸಿ]

ಬ್ಯಾಟ್ಸ್‌ಮನ್[ಬದಲಾಯಿಸಿ]

ವಿಕೆಟ್ ಕೀಪರ್‌ಗಳು[ಬದಲಾಯಿಸಿ]

ರಾಹುಲ್ ದ್ರಾವಿಡ್, ೨೦೦೮ರಲ್ಲಿ ಆರ್ಸಿಬಿ ಯ ಮೊದಲ ನಾಯಕ
ರಾಹುಲ್ ದ್ರಾವಿಡ್, ೨೦೦೮ರಲ್ಲಿ ಆರ್ಸಿಬಿ ಯ ಮೊದಲ ನಾಯಕ

ಆಲ್ ರೌಂಡರ್‌ಗಳು[ಬದಲಾಯಿಸಿ]

ಬೌಲರ್ಗಳು[ಬದಲಾಯಿಸಿ]

ತರಬೇತುದಾರರು[ಬದಲಾಯಿಸಿ]

 • ಮುಖ್ಯ ತರಬೇತುದಾರ: ಆಸ್ಟ್ರೇಲಿಯಾಸೈಮನ್ ಕ್ಯಾಟಿಚ್
 • ಬ್ಯಾಟಿಂಗ್ ತರಬೇತುದಾರ: ಸಂಜಯ್ ಬಂಗಾರ್
 • ಬೌಲಿಂಗ್ ತರಬೇತುದಾರ: ಅಡಾಂ ಗ್ರಿಫ಼ಿಥ್

೨೦೦೮ನೇ ಐಪಿಎಲ್ ಆವೃತ್ತಿ[ಬದಲಾಯಿಸಿ]

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ೨೦೦೮ನೇ ಐಪಿಎಲ್ ಆವೃತ್ತಿಯಲ್ಲಿ ೧೪ ಪಂದ್ಯಗಳಲ್ಲಿ ಕೇವಲ ೪ ಪಂದ್ಯಗಳನ್ನು ಗೆದ್ದು ೭ನೇ ಸ್ಥಾನವನ್ನು ಪಡೆದುಕೊಂಡಿತು. ರಾಹುಲ್ ದ್ರಾವಿಡ್ ತಂಡದ ನಾಯಕರಾಗಿದ್ದರು.

೨೦೦೯ನೇ ಐಪಿಎಲ್ ಆವೃತ್ತಿ[ಬದಲಾಯಿಸಿ]

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ೨೦೦೯ನೇ ಐಪಿಎಲ್ ಆವೃತ್ತಿಯಲ್ಲಿ ನಾಯಕನನ್ನು ಬದಲಾಯಿಸಿತು. ಕೆವಿನ್ ಪೀಟರ್ಸನ್ ತಂಡದ ನಾಯಕತ್ವವನ್ನು ವಹಿಸಿಕೊಂಡರು. ಆದರೆ ಪೀಟರ್ಸನ್ ಕೇವಲ ೬ ಪಂದ್ಯಗಳನ್ನು ಆಡಿ ಇಂಗ್ಲೆಂಡ್‍ಗೆ ಮರಳಿದರು. ಆಗ ಅನಿಲ್ ಕುಂಬ್ಳೆ ತಂಡದ ನಾಯಕರಾದರು. ತಂಡವು ಉತ್ತಮ ಪ್ರದರ್ಶನ ತೋರಿ ಸೆಮಿಫೈನಲ್ ಪ್ರವೇಶಿಸಿತು. ಸೆಮಿಫೈನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಡೆಕ್ಕನ್ ಚಾರ್ಜರ್ಸ್ ವಿರುದ್ಧ ಫೈನಲ್‍ನಲ್ಲಿ ೬ ರನ್‍ಗಳಿಂದ ಸೋಲನುಭವಿಸಬೇಕಾಯಿತು.೩

೨೦೧೦ನೇ ಐಪಿಎಲ್ ಆವೃತ್ತಿ[ಬದಲಾಯಿಸಿ]

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ೨೦೧೦ನೇ ಐಪಿಎಲ್ ಆವೃತ್ತಿಯ ಲೀಗ್ ಹಂತದಲ್ಲಿ ೪ನೇ ಸ್ಥಾನವನ್ನು ಪಡೆದು ಸೆಮಿಫೈನಲ್ ಪ್ರವೇಶಿಸಿತು. ಸೆಮಿಫೈನಲ್‍ನಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ ೩೫ ರನ್‍ಗಳಿಂದ ಸೋತಿತು. ಚಾಂಪಿಯನ್ಸ್ ಲೀಗ್ ಪ್ರವೇಶಕ್ಕಾಗಿ ನಡೆದ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡವನ್ನು ೯ ವಿಕೆಟ್‍ಗಳಿಂದ ಸೋಲಿಸಿ ಚಾಂಪಿಯನ್ಸ್ ಲೀಗ್ ಪ್ರವೇಶಿಸಿತು.

೨೦೧೧ನೇ ಐಪಿಎಲ್ ಆವೃತ್ತಿ[ಬದಲಾಯಿಸಿ]

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ೨೦೧೧ನೇ ಐಪಿಎಲ್ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆಯದಿದ್ದರೂ ನಂತರ ಉತ್ತಮ ಪ್ರದರ್ಶನ ತೋರಿ ಲೀಗ್ ಹಂತದಲ್ಲಿ ಮೊದಲ ಸ್ಥಾನ ಪಡೆದುಕೊಂಡಿತು. ಕ್ರಿಸ್ ಗೇಲ್ ತಂಡಕ್ಕೆ ಪ್ರವೇಶಿಸಿದ ನಂತರ ತಂಡದ ಅದೃಷ್ಟ ಬದಲಾಯಿತು. ಸೆಮಿಫೈನಲ್‍ನಲ್ಲಿ ಮೊದಲ ಕ್ವಾಲಿಫೈರ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ ಸೋತರೂ ನಂತರ ಮುಂಬಯಿ ಇಂಡಿಯನ್ಸ್ ವಿರುದ್ಧ ೪೩ ರನ್‍ಗಳಿಂದ ಗೆದ್ದು ಫೈನಲ್ ಪ್ರವೇಶಿಸಿತು. ಫೈನಲ್‍ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ ೫೮ ರನ್‍ಗಳಿಂದ ಸೋತು ೨ನೇ ಬಾರಿಗೆ ೨ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

೨೦೧೨ನೇ ಐಪಿಎಲ್ ಆವೃತ್ತಿ[ಬದಲಾಯಿಸಿ]

ಲೀಗ್ ಹಂತ

೨೦೧೩ನೇ ಐಪಿಎಲ್ ಆವೃತ್ತಿ[ಬದಲಾಯಿಸಿ]

ಲೀಗ್ ಹಂತ

೨೦೧೪ನೇ ಐಪಿಎಲ್ ಆವೃತ್ತಿ[ಬದಲಾಯಿಸಿ]

ಲೀಗ್ ಹಂತ

೨೦೧೫ನೇ ಐಪಿಎಲ್ ಆವೃತ್ತಿ[ಬದಲಾಯಿಸಿ]

ಪ್ಲೇ ಆಫ್

೨೦೧೬ನೇ ಐಪಿಎಲ್ ಆವೃತ್ತಿ[ಬದಲಾಯಿಸಿ]

ರನ್ನರ್ ಅಪ್

೨೦೧೭ನೇ ಐಪಿಎಲ್ ಆವೃತ್ತಿ[ಬದಲಾಯಿಸಿ]

ಲೀಗ್ ಹಂತ

೨೦೧೮ನೇ ಐಪಿಎಲ್ ಆವೃತ್ತಿ[ಬದಲಾಯಿಸಿ]

ಲೀಗ್ ಹಂತ [೧]

ಐಪಿಎಲ್‌ನ ಫಲಿತಾಂಶ[ಬದಲಾಯಿಸಿ]

ಪಂದ್ಯಗಳು ಗೆಲುವು ಸೋಲು ಫಲಿತಾಂಶ ರಹಿತ % ಗೆಲುವು ಸ್ಥಾನ
೨೦೦೮ ೧೪ ೧೦ ೨೮.೫೭%
೨೦೦೯ ೧೬ ೫೬.೨೫%
೨೦೧೦ ೧೬ ೫೦.೦೦%
2011 ೧೬ ೧೦ ೬೪.೨೮%
Total ೬೨ ೩೧ ೩೦ ೫೦.೦೦%

ಉಲ್ಲೇಖಗಳು[ಬದಲಾಯಿಸಿ]

 1. "Royal Challengers have it all worked out". http://cricket.indiatimes.com. 2008-04-09. Retrieved 2008-04-09. {{cite web}}: External link in |work= (help)
 2. G. Krishnan (2008-02-20). "Bangalore team named 'Royal Challengers'". HindustanTimes. Archived from the original on 2008-05-04. Retrieved 2008-02-20.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]