ದೀಪಕ್ ಚಹಾರ್
ವಯಕ್ತಿಕ ಮಾಹಿತಿ | |
---|---|
ಪೂರ್ಣ ಹೆಸರು | ದೀಪಕ್ ಲೋಕೇಂದರ್‌ಸಿಂಗ್ ಚಹಾರ್ |
ಹುಟ್ಟು | ಆಗ್ರಾ, ಉತ್ತರ ಪ್ರದೇಶ, ಭಾರತ | ೭ ಆಗಸ್ಟ್ ೧೯೯೨
ದೀಪಕ್ ಲೋಕೇಂದರ್‌ಸಿಂಗ್ ಚಹಾರ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಮದ್ಯಮ ವೇಗದ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀಯಲ್ಲಿ ರಾಜಸ್ಥಾನ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಪರ ಆಡುತ್ತಾರೆ.[೧]
ಆರಂಭಿಕ ಜೀವನ
[ಬದಲಾಯಿಸಿ]ದೀಪಕ್ ಚಹಾರ್ ಆಗಸ್ಟ್ ೦೭, ೧೯೯೨ ರಂದು ದೆಹಲಿಯ ಆಗ್ರಾದಲ್ಲಿ ಜನಿಸಿದರು. ೨೦೦೮ರಲ್ಲಿ ರಾಜಸ್ಥಾನ ಕ್ರಿಕೆಟ್ ಅಕಾಡೆಮಿಯ ಡೈರೆಕ್ಟರ್ ಗ್ರೆಗ್ ಚಾಪೆಲ್ ಇವರನ್ನು ನಿರಾಕರಿಸದ್ದರಿಂದ ಇವರು ಎರಡು ವರ್ಷ ತರಬೇತಿ ಹಾಗು ತಾಲೀಮು ನಡೆಸಿ ೨೦೧೦ರಲ್ಲಿ ತಮ್ಮ ರಣಜಿ ಟ್ರೋಫೀ ಪದಾರ್ಪನೆ ಪಂದ್ಯದಲ್ಲಿ ಕೇವಲ ೧೦ ರನ್ ನೀಡಿ ಎಂಟು ವಿಕೇಟ್ ಪಡೆದು ಹೈದೆರಾಬಾದ ಕೇವಲ ೨೧ ರನಗಳಿಗೆ ಪತನವಾಗಲು ಕಾರಣರಾದರು. ಇದು ಭಾರತೀಯ ದೇಶೀ ಕ್ರಿಕೆಟ್‌ನ ಇತಹಾಸದಲ್ಲಿ ಅತೀ ಕಡಿಮೆ ಮೊತ್ತವಾಗಿದೆ.[೨][೩][೪]
ವೃತ್ತಿ ಜೀವನ
[ಬದಲಾಯಿಸಿ]ಐಪಿಎಲ್ ಕ್ರಿಕೆಟ್
[ಬದಲಾಯಿಸಿ]ಮೇ ೧೭, ೨೦೧೬ರಂದು ವಿಶಾಖಪಟ್ನಂನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ನಡೆದ ೪೯ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ರೈಸಿಂಗ್ ಪೂಣೆ ಸೂಪರ್ ಜೈಯಂಟ್ಸ್ ತಂಡದ ಪರವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.[೫]
ಅಂತರರಾಷ್ಟ್ರೀಯ ಕ್ರಿಕೆಟ್
[ಬದಲಾಯಿಸಿ]ಜುಲೈ ೦೮, ೨೦೧೮ರಲ್ಲಿ ಇಂಗ್ಲೆಂಡ್‌ನ ಬ್ರಿಸ್ಟಾಲ್‍ನಲ್ಲಿ ಅಥೀತೆಯರ ವಿರುದ್ದ ನಡೆದ ಮೂರನೇ ಟಿ-೨೦ ಪಂದ್ಯದ ಮೂಲಕ ದೀಪಕ್ ಚಹಾರ್ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೬]
ಪಂದ್ಯಗಳು
[ಬದಲಾಯಿಸಿ]ವಿಕೇಟ್‍ಗಳು
[ಬದಲಾಯಿಸಿ]- ಟಿ-೨೦ ಪಂದ್ಯಗಳಲ್ಲಿ : ೦೧
- ಐಪಿಎಲ್ ಪಂದ್ಯಗಳಲ್ಲಿ : ೧೧
ಉಲ್ಲೇಖಗಳು
[ಬದಲಾಯಿಸಿ]- ↑ http://www.espncricinfo.com/india/content/player/447261.html
- ↑ http://m.kannada.eenaduindia.com/News/National/2018/07/02154521/Chappell-told-Chahar-that-he-would-never-become-a.vpf
- ↑ https://www.cricbuzz.com/cricket-news/67902/ranji-trophy-2014-15-interview-greg-chappell-rejection-made-me-the-player-i-am-today-deepak-chahar
- ↑ https://www.firstpost.com/tag/deepak-chahar
- ↑ https://www.cricbuzz.com/live-cricket-scorecard/16437/rising-pune-supergiant-vs-delhi-daredevils-49th-match-indian-premier-league-2016
- ↑ https://www.cricbuzz.com/live-cricket-scorecard/18879/england-vs-india-3rd-t20i-india-tour-of-england-2018
- ↑ https://www.news18.com/cricketnext/profile/deepak-chahar/59547.html
- ↑ https://www.cricbuzz.com/profiles/7836/deepak-chahar