ಮೊಹಮ್ಮದ್ ಸಿರಾಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಮೊಹಮ್ಮದ್ ಸಿರಾಜ್
Mohammed.siraj.jpg
ವೈಯುಕ್ತಿಕ ಮಾಹಿತಿ
ಪೂರ್ಣ ಹೆಸರುಮೊಹಮ್ಮದ್ ಸಿರಾಜ್
ಜನನ (1994-03-13) 13 March 1994 (age 28)
ಹೈದರಾಬಾದ್, ಭಾರತ
ಬ್ಯಾಟಿಂಗ್ ಶೈಲಿಬಲಗೈ
ಬೌಲಿಂಗ್ ಶೈಲಿಬಲಗೈ ಮಧ್ಯಮ
ಪಾತ್ರಬೌಲರ್
ಅಂತರಾಷ್ಟ್ರೀಯ ಮಾಹಿತಿ
ದೇಶದ ಕಡೆ
ಕೇವಲ ಓಡಿಐ (cap ೨೨೫)೧೫ ಜನವರಿ ೨೦೧೯ v ಆಸ್ಟ್ರೇಲಿಯಾ
T20I debut (cap ೭೧)೪ ನವೆಂಬರ್ ೨೦೧೭ v ನ್ಯೂಜಿಲೆಂಡ್
ಕೊನೆಯ T20I೧೪ ಮಾರ್ಚ್ ೨೦೧೮ v ಬಾಂಗ್ಲಾದೇಶ
ದೇಶೀಯ ಟೀಮ್ ಮಾಹಿತಿ
ವರ್ಷಗಳುTeam
೨೦೧೫-ಇಂದಿನವರೆಗೆಹೈದರಾಬಾದ್
೨೦೧೭ಸಂ ರೈಸರ್ಸ್ ಹೈದರಾಬಾದ್
೨೦೧೮-ಇಂದಿನವರೆಗೆರಾಯಲ್ ಚಾಲೆಂಜರ್ಸ್ ಬೆಂಗಳೂರು
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಓಡಿಐ ಟಿ೨೦ ಐ ಎಫ್ ಸಿ ಎಲ್ ಎ
ಪಂದ್ಯಗಳು ೨೫ ೩೨
ಗಳಿಸಿದ ರನ್‌ಗಳು - ೧೭೧ ೧೧೦
ಬ್ಯಾಟಿಂಗ್ ಸರಾಸರಿ - ೬.೧೦ ೯.೧೬
100ಗಳು/50ಗಳು -/- 0/0 0/0 0/0
ಅತ್ಯುತ್ತಮ ಸ್ಕೋರ್ - ೨೬ ೩೬*
ಬಾಲ್‌ಗಳು ಬೌಲ್ ಮಾಡಿದ್ದು ೬0 ೭೨ ೪,೬೪೬ ೧,೪೦೭
ವಿಕೆಟ್ಗಳು 0 ೧೧೨ ೫೬
ಬೌಲಿಂಗ್ ಸರಾಸರಿ - ೪೯.೩೩ ೨೦.೭೩ ೨೪.೨೮
5 ವಿಕೆಟ್‌ಗಳು ಇನ್ನಿಂಗ್ಸ್‌ಗಳಲ್ಲಿ 0 0
ಪಂದ್ಯ ಒಂದರಲ್ಲಿ 10 ವಿಕೆಟ್‌ಗಳು 0 0 0
ಅತ್ಯುತ್ತಮ ಬೌಲಿಂಗ್ 0-೭6 ೧/೪೫ ೮/೫೯ ೫/೩೭
ಕ್ಯಾಚ್‌ಗಳು/ಸ್ಟಂಪ್‌ಗಳು 0/- ೧/– ೪/– ೨/–
ಮೂಲ: Cricinfo, ೮ ಜನವರಿ ೨೦೨೦

ಮೊಹಮ್ಮದ್ ಸಿರಾಜ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಇವರು ಬಲಗೈ ವೇಗದ ಬೌಲರ್. ರಣಜಿ ಟ್ರೋಫೀ‌‌ಯಲ್ಲಿ ಹೈದೆರಾಬಾದ್‍ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಾರೆ.

ಆರಂಭಿಕ ಜೀವನ[ಬದಲಾಯಿಸಿ]

ಮೊಹಮ್ಮದ್ ಸಿರಾಜ್‍ ಮಾರ್ಚ್ ೧೩, ೧೯೯೪ ರಂದು ಹೈದರಾಬಾದ್‌, ತೆಲಂಗಾಣ ನಗರದಲ್ಲಿ ಜನಿಸಿದರು. ೨೦೧೬-೧೭ರ ರಣಜಿ ಟ್ರೋಫೀ ಸಾಲಿನಲ್ಲಿ ಸರಾಸರಿ ೧೮.೨೯ರೊಂದಿಗೆ ಹೈದೆರಾಬಾದ್‍ ತಂಡದ ಅತೀ ಹೆಚ್ಚು ವಿಕೆಟ್ (೪೧) ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ೨೦೧೭-೧೮ ವಿಜಯಿ ಹಜಾರೆ ಟ್ರೋಫೀಯಲ್ಲಿ ಅತೀ ಹೆಚ್ಚು ವಿಕೆಟ್ (೨೩ ವಿಕೆಟ್) ಪಡೆದ ಬೌಲರ್ ಆಗಿ ಹೊರಹೊಮ್ಮಿದರು.[೧][೨][೩]

ವೃತ್ತಿ ಜೀವನ[ಬದಲಾಯಿಸಿ]

ಐಪಿಎಲ್ ಕ್ರಿಕೆಟ್[ಬದಲಾಯಿಸಿ]

ಬೆಂಗಳೂರಿನಲ್ಲಿ ಐಪಿಎಲ್ 10ನೇ ಆವೃತ್ತಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸಿರಾಜ್ ಅವರ ಮೂಲ ಬೆಲೆ 20 ಲಕ್ಷ ರೂ ನಿಂದ ೨.೬ ಕೋಟಿ ರೂಪಾಯಿಗ‍ಳಿಗೆ ಸನ್ ರೈಸರ್ಸ್ ಹೈಡೆರಾಬಾದ್ ತಂಡಕ್ಕೆ ಸೇರಿಕೊಂಡರು.[೪] ಏಪ್ರಿಲ್ ೧೯, ೨೦೧೩ರಂದು ಹೈದೆರಾಬಾದ್‌‌ನಲ್ಲಿ ನಡೆದ ೨೧ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈಡೆರಾಬಾದ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.ಈ ಪಂದ್ಯದಲ್ಲಿ ಆರಂಭಿಕ ಇಬ್ಬರೂ ಬ್ಯಾಟ್ಸಮನ್‌ಗಳ ವಿಕೆಟ್ ಪಡೆದರು.[೫][೬][೭]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ನವಂಬರ್ ೦೪, ೨೦೧೭ರಲ್ಲಿ ಗುಜರಾತ್‌ನ ರಾಜ್‌‍ಕೊಟ್‍ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಎರಡನೇ ಟಿ-೨೦ ಪಂದ್ಯದ ಮೂಲಕ ಸಿರಾಜ್ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ತಮ್ಮ ಮೊದಲ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ನ ಕ್ಯಾಪ್ಟನ್‌ ವಿಲಿಯಂಸನ್‍ರ ವಿಕೆಟ್ ಪಡೆದರು.[೮]

ಪಂದ್ಯಗಳು[ಬದಲಾಯಿಸಿ]

  • ಟಿ-೨೦ ಕ್ರಿಕೆಟ್ : ಪಂದ್ಯಗಳು[೯][೧೦]
  • ಐಪಿಎಲ್ ಕ್ರಿಕೆಟ್ : ೧೭ ಪಂದ್ಯಗಳು

ವಿಕೆಟ್ ಗಳು[ಬದಲಾಯಿಸಿ]

  1. ಟಿ-೨೦ ಪಂದ್ಯಗಳಲ್ಲಿ  : ೦೩
  2. ಐಪಿಎಲ್ ಪಂದ್ಯಗಳಲ್ಲಿ  : ೨೧

ಉಲ್ಲೇಖಗಳು[ಬದಲಾಯಿಸಿ]