ಕೆ.ಎಲ್.ರಾಹುಲ್
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ಕಣ್ಣೂರು ಲೋಕೇಶ್ ರಾಹುಲ್ | |||||||||||||||||||||||||||||||||||||||||||||||||||||||||||||||||
ಹುಟ್ಟು | ಬೆಂಗಳೂರು, ಕರ್ನಾಟಕ | ೧೮ ಏಪ್ರಿಲ್ ೧೯೯೨|||||||||||||||||||||||||||||||||||||||||||||||||||||||||||||||||
ಅಡ್ಡಹೆಸರು | ಕೆ.ಎಲ್ ಕರ್ನಾಟಕ ಲಯನ್ | |||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | ಬಲಗೈ ಆಟಗಾರ | |||||||||||||||||||||||||||||||||||||||||||||||||||||||||||||||||
ಪಾತ್ರ | ಬಾಟ್ಸ್ ಮನ್ ಮತ್ತು ಸಾಂದರ್ಭಿಕ ವಿಕೆಟ್ ಕೀಪರ್ | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ | ||||||||||||||||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ [[ಭಾರತ ಟೆಸ್ಟ್ ಕ್ರಿಕೆಟಿಗರ ಪಟ್ಟಿ|284]]) | ಡಿಸೆಂಬರ್ ೨೬, ೨೦೧೪ v [[ಆಸ್ಟ್ರೇಲಿಯಾ ಕ್ರಿಕೆಟ್ ತಂಡ|ಆಸ್ಟ್ರೇಲಿಯಾ]] | |||||||||||||||||||||||||||||||||||||||||||||||||||||||||||||||||
ಕೊನೆಯ ಟೆಸ್ಟ್ | ಆಗಸ್ಟ್ ೨೦, ೨೦೧೫ v [[ಶ್ರೀಲಂಕಾ ಕ್ರಿಕೆಟ್ ತಂಡ|ಶ್ರೀಲಂಕಾ]] | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ [[ಭಾರತ ಅಂ. ಏಕದಿನ ಕ್ರಿಕೆಟಿಗರ ಪಟ್ಟಿ|213]]) | ಜೂನ್ ೧೧, ೨೦೧೬ v ಜಿಂಬಾಂಬ್ವೆ | |||||||||||||||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | ಜೂನ್ ೧೩, ೨೦೧೬ v ಜಿಂಬಾಂಬ್ವೆ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಅಂಗಿ ನಂ. | ೧೧ | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
೨೦೧೦-ಇಂದಿನವರೆಗೆ | ಕರ್ನಾಟಕ | |||||||||||||||||||||||||||||||||||||||||||||||||||||||||||||||||
೨೦೧೩ | ರಾಯಲ್ ಚಾಲೆಂಜರ್ಸ್ ಬೆಂಗಳೂರು | |||||||||||||||||||||||||||||||||||||||||||||||||||||||||||||||||
೨೦೧೪-೨೦೧೫ | ಸನ್ ರೈಸರ್ಸ್ ಹೈದರಾಬಾದ್ (squad no. ೧೧) | |||||||||||||||||||||||||||||||||||||||||||||||||||||||||||||||||
೨೦೧೬-೨೦೧೭ | ರಾಯಲ್ ಚಾಲೆಂಜರ್ಸ್ ಬೆಂಗಳೂರು | |||||||||||||||||||||||||||||||||||||||||||||||||||||||||||||||||
೨೦೧೮-೨೦೨೧ | ಪಂಜಾಬ್ ಕಿಂಗ್ಸ್ | |||||||||||||||||||||||||||||||||||||||||||||||||||||||||||||||||
೨೦೨೨- | ಲಕ್ನೋ ಸೂಪರ್ ಜೈಂಟ್ಸ್ | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: Cricinfo, ೨೦ ಆಗಸ್ಟ್ ೨೦೧೫ |
ಕಣ್ಣೂರು ಲೋಕೇಶ್ ರಾಹುಲ್ (ಜನನ ೧೮ ಏಪ್ರಿಲ್ ೧೯೯೨) ಒಬ್ಬ ಭಾರತೀಯ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ. ಅವರು ಎಲ್ಲಾ ಸ್ವರೂಪಗಳಲ್ಲಿ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರಸ್ತುತ ಉಪನಾಯಕರಾಗಿದ್ದಾರೆ. ಅವರು ದೇಶೀಯ ಕ್ರಿಕೆಟ್ ನಲ್ಲಿ ಕರ್ನಾಟಕದ ಪರವಾಗಿ ಆಡುತ್ತಾರೆ.
ವೈಯಕ್ತಿಕ ಜೀವನ
[ಬದಲಾಯಿಸಿ]ಕೆ.ಎಲ್.ರಾಹುಲ್ ೧೮ ಏಪ್ರಿಲ್ ೧೯೯೨ರಲ್ಲಿ ಬೆಂಗಳೂರು ನಗರದಲ್ಲಿ ಜನಿಸಿದರು.ಇವರ ಪೂರ್ಣ ಹೆಸರು ಕಣ್ಣೂರು ಲೋಕೇಶ್ ರಾಹುಲ್ ಆಗಿದೆ. ಇವರ ತಂದೆ ಲೋಕೇಶ್ ಮಾಗಡಿ ತಾಲ್ಲೂಕಿನ ಕಾನೂರಿನವರಾಗಿದ್ದು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕದಲ್ಲಿ ಪ್ರೊಫೆಸರ್ ಮತ್ತು ಮಾಜಿ ನಿರ್ದೇಶಕರಾಗಿದ್ದಾರೆ[೧][೨] . ಅವರ ತಾಯಿ ರಾಜೇಶ್ವರಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ [೩].
ಕೆ.ಎಲ್. ರಾಹುಲ್ ತಂದೆ ಲೋಕೇಶ್, ಸುನಿಲ್ ಗವಾಸ್ಕರ್ ಅವರ ಅಭಿಮಾನಿಯಾಗಿದ್ದರು, ತಮ್ಮ ಮಗನಿಗೆ ಗವಾಸ್ಕರ್ ಅವರ ಮಗನ ಹೆಸರಿಡಲು ಬಯಸಿದ್ದರು, ಆದರೆ ರೋಹನ್ ಗವಾಸ್ಕರ್ ಹೆಸರನ್ನು ರಾಹುಲ್ ಎಂದು ತಪ್ಪಾಗಿ ಭಾವಿಸಿದ್ದರು [೪] . ರಾಹುಲ್ ತಮ್ಮ ದೀರ್ಘಕಾಲದ ಸಂಗಾತಿ, ಭಾರತೀಯ ನಟಿ ಅಥಿಯಾ ಶೆಟ್ಟಿ ಅವರನ್ನು ಜನವರಿ ೨೩, ೨೦೨೩ ರಂದು ವಿವಾಹವಾದರು [೫] .
ವಿದ್ಯಾಭ್ಯಾಸ
[ಬದಲಾಯಿಸಿ]ರಾಹುಲ್ ತಮ್ಮ ಪ್ರೌಢ ಶಿಕ್ಷಣವನ್ನು ಎನ್ ಐಟಿಕೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತ್ತು ಪದವಿಪೂರ್ವ ಶಿಕ್ಷಣವನ್ನು ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು [೬]. ಅವರು ತಮ್ಮ ೧೦ ನೇ ವಯಸ್ಸಿನಲ್ಲಿ ಕ್ರಿಕೆಟ್ ತರಬೇತಿಯನ್ನು ಪ್ರಾರಂಭಿಸಿದರು, ಮತ್ತು ಎರಡು ವರ್ಷಗಳ ನಂತರ, ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ ಮತ್ತು ಮಂಗಳೂರಿನ ತಮ್ಮ ಕ್ಲಬ್, ಇವೆರಡೂ ಕ್ಲಬ್‌ಗಳಲ್ಲಿ ಪಂದ್ಯಗಳನ್ನು ಆಡಲು ಪ್ರಾರಂಭಿಸಿದರು [೭].
೧೮ ನೇ ವಯಸ್ಸಿನಲ್ಲಿ, ಅವರು ಜೈನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಮತ್ತು ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸಲು ಬೆಂಗಳೂರಿಗೆ ಬಂದರು [೮][೯][೧೦] .
ಕ್ರಿಕೆಟ್ ಶೈಲಿ
[ಬದಲಾಯಿಸಿ]- ೨೦೦೪ರಲ್ಲಿ ನಡೆದ ೧೩ ವರ್ಷ ವಯೋಮಿತಿಯ ಮೂರು ಕ್ರಿಕೆಟ್ ಪಂದ್ಯಾಟದ ೪ ಇನ್ನಿಂಗ್ಸ್ ನಲ್ಲಿ ರಾಹುಲ್ ೬೫೦ ರನ್ ಪಡೆದು ಬೆಸ್ಟ್ ಬ್ಯಾಟ್ಸ್ ಮನ್ ಪ್ರಶಸ್ತಿ ಪಡೆದರು.
- ಬಳಿಕ ವಿವಿಧ ಕ್ರಿಕೆಟ್ ನಲ್ಲಿ ಭಾಗವಹಿಸಿ, ಯಶಸ್ವಿಯಾಗಿದ್ದರು.
- ಬ್ಯಾಟಿಂಗ್ ಶೈಲಿ:ಬಲಗೈ
- ಫೀಲ್ಡಿಂಗ್ ಸ್ಥಾನ:ವಿಕೆಟ್ ಕೀಪರ್
- ಪ್ರಥಮ ದರ್ಜೆ ಕ್ರಿಕೆಟ್: ೨೭ ಪಂದ್ಯ, ೫೧.೨೧ ಸರಾಸರಿಯಲ್ಲಿ ೨೧೦೦ ರನ್. ಶತಕ-೬ , ಅರ್ಧ ಶತಕ-೮ , ಸರ್ವಾಧಿಕ-೧೮೫ , ಬೌಂಡರಿ-೨೬೩ , ಸಿಕ್ಸರ್-೧೪, ಕ್ಯಾಚ್-೨೭ , ಸ್ಟಂಪಿಂಗ್-೦.
- ಆಡಿದ ತಂಡಗಳು:ಕರ್ನಾಟಕ, ಬೆಂಗಳೂರು ಬ್ರಿಗೇಡಿಯರ್, ಭಾರತ ೧೯ ವಯಸ್ಸಿನ ಕೆಳಗಿನವರು , ೨೩ ವಯಸ್ಸಿನ ಕೆಳಗಿನವರು, ಆರ್ಸಿಬಿ, ದಕ್ಷಿಣವಲಯ, ಸನ್ ರೈಸರ್ಸ್ ಹೈದರಾಬಾದ್.
- ಟಿ-೨೦ ಪದಾರ್ಪಣೆ:ಗೋವಾ ವರ್ಸಸ್ ಕರ್ನಾಟಕ, ಶಿವಮೊಗ್ಗ.
- ಪ್ರಥಮ ದರ್ಜೆ ಕ್ರಿಕೆಟ್ ಪದಾರ್ಪಣೆ:ಪಂಜಾಬ್ ವರ್ಸಸ್ ಕರ್ನಾಟಕ, ಮೊಹಾಲಿ(೧೦ ನವೆಂಬರ್ ೨೦೧೦)
ದೇಶಿಯ ಮಟ್ಟದ ಕ್ರಿಕೆಟ್
[ಬದಲಾಯಿಸಿ]ರಾಹುಲ್ ಕರ್ನಾಟಕ ಕ್ರಿಕೆಟ್ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ೨೦೧೦-೧೧ ಸೀಸನ್‌ನಲ್ಲಿ ಪಾದಾರ್ಪಣೆ ಮಾಡಿದರು. ಅದೇ ಸೀಸನ್‌ನಲ್ಲಿ, ಅವರು ೨೦೧೦ ಐಸಿಸಿ ಅಂಡರ್ - ೧೯ ಕ್ರಿಕೆಟ್ ವಿಶ್ವಕಪ್‌ನಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿದರು, ಸ್ಪರ್ಧೆಯಲ್ಲಿ ೧೪೩ ರನ್ ಗಳಿಸಿದರು [೧೧].
ಅವರು ೨೦೧೩ ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಪಾದಾರ್ಪಣೆ ಮಾಡಿದರು [೧೨]. ೨೦೧೩–೧೪ರ ದೇಶೀಯ ಋತುವಿನಲ್ಲಿ ಅವರು 1,033 ಪ್ರಥಮ ದರ್ಜೆ ರನ್ ಗಳಿಸಿದರು, ಇದು ಆ ಋತುವಿನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.
ದಕ್ಷಿಣ ವಲಯ ಕ್ರಿಕೆಟ್ ತಂಡದ ಪರ ಫೈನಲ್ ೨೦೧೪–೧೫ ದುಲೀಪ್ ಟ್ರೋಫಿ ಯಲ್ಲಿ ಕೇಂದ್ರ ವಲಯ ವಿರುದ್ಧ, ರಾಹುಲ್ ಮೊದಲ ಇನ್ನಿಂಗ್ಸ್ ನಲ್ಲಿ ೨೩೩ ಎಸೆತಗಳಲ್ಲಿ ೧೮೫ ರನ್ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ೧೫೨ ಎಸೆತಗಳಲ್ಲಿ ೧೩೦ ರನ್ ಗಳಿಸಿದರು. ಅವರು ಪಂದ್ಯಶ್ರೇಷ್ಠ ಎಂದು ಹೆಸರಿಸಲ್ಪಟ್ಟರು. ಭಾರತೀಯ ಟೆಸ್ಟ್ ತಂಡಕ್ಕೆ ಆಯ್ಕೆಯಾದರು ಮತ್ತು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡರು.
ಟೆಸ್ಟ್ ಸರಣಿಯ ನಂತರ ತವರಿಗೆ ಮರಳಿದ ರಾಹುಲ್, ಉತ್ತರ ಪ್ರದೇಶ ಕ್ರಿಕೆಟ್ ತಂಡದ ವಿರುದ್ಧ 337 ರನ್ ಗಳಿಸುವ ಮೂಲಕ ಕರ್ನಾಟಕದ ಮೊದಲ ತ್ರಿಶತಕ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು [೧೩]. 2014-15ರ ರಣಜಿ ಟ್ರೋಫಿ ಫೈನಲ್ನಲ್ಲಿ ತಮಿಳುನಾಡು ಕ್ರಿಕೆಟ್ ತಂಡದ ವಿರುದ್ಧ 188 ರನ್ ಬಾರಿಸಿದ್ದರು. ಅವರು ಆಡಿದ ಒಂಬತ್ತು ಪಂದ್ಯಗಳಲ್ಲಿ 93.11 ಸರಾಸರಿಯೊಂದಿಗೆ ಋತುವನ್ನು ಮುಗಿಸಿದರು.
ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್
[ಬದಲಾಯಿಸಿ]೨೦೨೨ – ಪ್ರಸ್ತುತ
[ಬದಲಾಯಿಸಿ]ಜನವರಿ ೨೦೨೨ ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ, ರಾಹುಲ್ ಭಾರತವನ್ನು ಮುನ್ನಡೆಸಿದರು. ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಮತ್ತು ಭಾರತದ ೩೪ ನೇ ಟೆಸ್ಟ್ ನಾಯಕರಾದರು. ಅವರು ತಮ್ಮ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಅರ್ಧಶತಕವನ್ನು ಗಳಿಸಿದರು. ಅವರ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ರಾಹುಲ್ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಸಾಧ್ಯವಾಗಲಿಲ್ಲ, ಮತ್ತು ಭಾರತವು ಎರಡನೇ ಟೆಸ್ಟ್ನಲ್ಲಿ ಏಳು ವಿಕೆಟ್ಗಳಿಂದ ಸೋತಿತು. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ, ಅವರು ಏಕದಿನ ನಾಯಕತ್ವಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಭಾರತದ 26 ನೇ ಏಕದಿನ ನಾಯಕರಾದರು. ಆದಾಗ್ಯೂ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯನ್ನು 3-0 ಅಂತರದಿಂದ ಸೋತಿತು.
ಟೀಮ್ ಇಂಡಿಯಾಕ್ಕೆ ಆಯ್ಕೆ
[ಬದಲಾಯಿಸಿ]ಭಾರತ ಕ್ರಿಕೆಟ್ ತಂಡದಲ್ಲಿ ಮಂಗಳೂರು ಮೂಲದ ಸುರತ್ಕಲ್ ಹುಡುಗ ಕೆ.ಎಲ್.ರಾಹುಲ್ ಸ್ಥಾನ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯ ಪ್ರವಾಸದಲ್ಲಿ ಅವರು ಭಾರತ ತಂಡವನ್ನು ಪ್ರತಿನಿದಿಸಿದ್ದಾರೆ.
ಮಂಗಳೂರಿನಿಂದ ಮೆಲ್ಬೋರ್ನ್ ತನಕ
[ಬದಲಾಯಿಸಿ]- ರಾಹುಲ್ ಟೆಸ್ಟ್ ಪದಾರ್ಪಣೆ. ಆದರೆ ಆರಂಭಿಕನಲ್ಲ, 6ನೇ ಕ್ರಮಾಂಕ. ಕರ್ನಾಟಕದ ಪ್ರತಿಭಾನ್ವಿತ ಬ್ಯಾಟ್ಸ್ ಮನ್, ಮಂಗಳೂರಿನ ಕೆ.ಎಲ್.ರಾಹುಲ್ ಮೆಲ್ಬರ್ನ್ ಅಂಗಳದಲ್ಲಿ ಬಾಕ್ಸಿಂಗ್ ಡೇ ಪಂದ್ಯದಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದರು. ನಾಯಕ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ಯಾಪ್ ನೀಡಿ ರಾಹುಲ್ ಅವರನ್ನು ಆಡುವ ಬಳಗಕ್ಕೆ ಬರಮಾಡಿಕೊಂಡರು.
- ಮೂಲತ ಓಪನರ್ ಆದರೂ ಅವರಿಗಿಲ್ಲಿ ಲಭಿಸಿದ್ದು 6ನೇ ಕ್ರಮಾಂಕ. ರೋಹಿತ್ ಶರ್ಮಾ ಸ್ಥಾನದಲ್ಲಿ ರಾಹುಲ್ ಆಡಲಿದ್ದಾರೆ. ಆರಂಭಿಕರಾಗಿ ಮುರಳಿ ವಿಜಯ್-ಶಿಖರ್ ಧವನ್ ಜೋಡಿಯೇ ಮುಂದುವರಿಯಲಿದೆ.
- ೨೦೧೩-೧೪ನೇ ಸಾಲಿನಲ್ಲಿ ಕರ್ನಾಟಕವನ್ನು ರಣಜಿ ಪಟ್ಟಕ್ಕೇರಿಸುವಲ್ಲಿ ರಾಹುಲ್ ವಹಿಸಿದ ಪಾತ್ರ ಅಮೋಘ. ೫೦ಕ್ಕೂ ಮಿಕ್ಕಿದ ಸರಾಸರಿಯಲ್ಲಿ ೧೧೫೮ರನ್ ಪೇರಿಸಿದ್ದು ರಾಹುಲ್ ಸಾಧನೆ. ದುಲಿಫ್ ಟೋಫಿ ಫೈನಲ್ ನ ಎರಡೂ ಇನ್ನಿಂಗ್ಸ್ ಗಳಲ್ಲಿ ಸೆಂಚುರಿ ಬಾರಿಸಿ ಮೆರೆಯುವ ಮೂಲಕ ಅರ್ಹವಾಗಿಯೇ ಟೀಮ್ ಇಂಡಿಯಾಕ್ಕೆ ಲಗ್ಗೆ ಇರಿಸಿದರು.
- ಕೆ.ಎಲ್.ರಾಹುಲ್ ಟೆಸ್ಟ್ ಆಡಲಿಳಿದ ಭಾರತದ ೨೮೪ನೇ ಕ್ರಿಕೆಟಿಗ. ಈ ವರ್ಷ ಟೆಸ್ಟ್ ಕ್ಯಾಪ್ ಧರಿಸಿದ ಕರ್ನಾಟಕದ ಎರಡನೇ ಆಟಗಾರ. ಕಳೆದ ಇಂಗ್ಲೆಂಡ್ ಪ್ರವಾಸದ ವೇಳೆ ಸ್ಟುವರ್ಟ್ ಬಿನ್ನಿ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಹಾಗೆಯೇ ರಾಹುಲ್ ಪ್ರಸಕ್ತ ಸರಣಿಯಲ್ಲಿ ಟೆಸ್ಟ್ ಆಡಿದ ಭಾರತದ ದ್ವಿತೀಯ ಕ್ರಿಕೆಟಿಗನೂ ಹೌದು. ಅಡಿಲೇಡ್ ನಲ್ಲಿ ಕರ್ಣ್ ಶರ್ಮ ಟೆಸ್ಟ್ ಪದಾರ್ಪಣೆ ಮಾಡಿದ್ದರು.
- ಭಾರತೀಯ ಕ್ರಿಕೆಟಿಗೆ ಕರ್ನಾಟಕ ಮತ್ತೊಬ್ಬ 'ರಾಹುಲ್' ನನ್ನು ಕೊಡುಗೆಯಾಗಿ ನೀಡಿದೆ. ಮಂಗಳೂರಿನ ಹುಡುಗ ಅಂತರಾಷ್ಟ್ರೀಯ ಕ್ರಿಕೆಟಿನಲ್ಲಿ ಎಷ್ಟು ಎತ್ತರಕ್ಕೆ ಬೆಳೆದಾನೆಂಬುದು ಕನ್ನಡಿಗರೆಲ್ಲರ ಕೂತೂಹಲ,ನಿರೀಕ್ಷೆ.[೧೪]
- ಕೆ.ಎಲ್ ರಾಹುಲ್ ಶತಕದ ಖೇಲ್.
- ಚೊಚ್ಚಲ ಶತಕ(೧೧೦ ರನ್).
- ರಾಹುಲ್-ಕೊಹ್ಲಿ ೧೪೧ ರನ್ ಜೊತೆಯಾಟ.
ಉಲ್ಲೇಖ
[ಬದಲಾಯಿಸಿ]- ↑ "CV of Dr. K. N. Lokesh" (PDF). Archived from the original (PDF) on 12 ಮೇ 2015.
- ↑ "Former Directors | NITK Surathkal". www.nitk.ac.in. Retrieved 26 ಅಕ್ಟೋಬರ್ 2020.
- ↑ "KL Rahul Feels 2019 Suspension Changed His Thought Process, Helps Him to Become Better 'Team Player' pandemic". India.com. 14 ಜೂನ್ 2020. Retrieved 26 ಮಾರ್ಚ್ 2021.
- ↑ Jaishankar, Vedam (1 ಆಗಸ್ಟ್ 2016). "India vs West Indies: KL Rahul's story would probably do a movie scriptwriter proud". Firstpost. Retrieved 14 ಫೆಬ್ರವರಿ 2020.
- ↑ "KL Rahul, Athiya Shetty get married". The Times of India. 23 ಜನವರಿ 2023. Retrieved 4 ಜೂನ್ 2023.
- ↑ Achal, Ashwin (24 ಮೇ 2019). "K.L. Rahul: A classy talent with an aggressive streak". The Hindu. Retrieved 27 ಮಾರ್ಚ್ 2021.
- ↑ Achal, Ashwin (23 ಮೇ 2019). "World Cup: Mangalore, Bangalore, England - the Rahul journey!". Sportstar. Retrieved 14 ಫೆಬ್ರವರಿ 2020.
- ↑ "Boxing Day Test: Who is KL Rahul?". www.oneindia.com. 26 ಡಿಸೆಂಬರ್ 2014. Retrieved 10 ಮೇ 2016.
- ↑ "Rahul's dad, a Gavaskar fan, happy son is selected for Aus tour as opener". Rediff. Retrieved 10 ಮೇ 2016.
- ↑ "Steady climber Lokesh Rahul reaches the top with trip Down Under". The Indian Express. 11 ನವೆಂಬರ್ 2014. Retrieved 11 ನವೆಂಬರ್ 2014.
- ↑ "Records / ICC Under-19 World Cup, 2009/10 - India Under-19s (Young Cricketers) / Batting and Bowling Averages". ESPNcricinfo. Retrieved 25 ಏಪ್ರಿಲ್ 2022.
- ↑ "Lokesh Rahul Profile". Cricbuzz.
- ↑ "Full scorecard Karnataka vs Uttar Pradesh Group A 2014/15". ESPN CricInfo. 2015.
- ↑ "ಸಿಡ್ನಿಯಲ್ಲಿ ಸಿಡಿದ ಕೆಎಲ್ ರಾಹುಲ್ ಉದಯವಾಣಿ ಕನ್ನಡ ಪತ್ರಿಕೆಯ ವರದಿ".