ವಿಷಯಕ್ಕೆ ಹೋಗು

ಭಾರತೀಯ ಕ್ರಿಕೆಟ್ ತಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡ ಇಂದ ಪುನರ್ನಿರ್ದೇಶಿತ)
ಭಾರತ
ಭಾರತದ ಧ್ವಜ
Personnel
Captainರೋಹಿತ್ ಶರ್ಮಾ
Coachರಾಹುಲ್ ದ್ರಾವಿಡ್
International Cricket Council
ICC statusಪೂರ್ಣ ಸದಸ್ಯ (೧೯೨೬)
ICC regionಏಷ್ಯಾ
ICC Rankings Current[] Best-ever
Test ೧ನೇ ೧ನೇ (1 April 1973)
ODI ೧ನೇ ೧ನೇ (January 2013)
T20I ೧ನೇ ೧ನೇ (28 March 2014)
Tests
First Testv.  ಇಂಗ್ಲೆಂಡ್ at ಲಾರ್ಡ್ಸ್, ಲಂಡನ್; 25–28 June 1932
World Test Championship appearances೨ (first in ೨೦೧೯-೨೦೨೧)
Best resultರನ್ನರ್ ಅಪ್ (೨೦೧೯-೨೧, ೨೦೨೧-೨೩)
One Day Internationals
First ODIv.  ಇಂಗ್ಲೆಂಡ್ at ಹೆಡಿಂಗ್ಲೀ, ಲೀಡ್ಸ್; 13 July 1974
World Cup appearances೧೩ (first in ೧೯೭೫)
Best resultಚಾಂಪಿಯನ್‌ (೧೯೮೩, ೨೦೧೧)
T20 Internationals
First T20Iv.  ದಕ್ಷಿಣ ಆಫ್ರಿಕಾ at ವಾಂಡರರ್ಸ್ ಸ್ಟೇಡಿಯಂ, ಜೋಹಾನ್ಸ್‌ಬರ್ಗ್; 1 December 2006
T20 World Cup appearances೮ (first in ೨೦೦೭)
Best resultಚಾಂಪಿಯನ್‌ (೨೦೦೭)
As of ೧೧ ಮಾರ್ಚ್ ೨೦೨೪

ಭಾರತೀಯ ಕ್ರಿಕೆಟ್ ತ೦ಡ ಭಾರತ ದೇಶವನ್ನು ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. ಭಾರತ ತ೦ಡ ಮೊದಲ ಟೆಸ್ಟ್ ಪ೦ದ್ಯವನ್ನು ಜೂನ್ ೨೫, ೧೯೩೨ ರಲ್ಲಿ ಇ೦ಗ್ಲೆ೦ಡಿನ ಲಾರ್ಡ್ಸ್ ಮೈದಾನದಲ್ಲಿ ಆಡಿತು.

ಭಾರತದ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡವು 25 ಜೂನ್ 1932 ರಂದು ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಟೆಸ್ಟ್‌ನಲ್ಲಿ ತನ್ನ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿತು, ಟೆಸ್ಟ್ ಕ್ರಿಕೆಟ್ ಸ್ಥಾನಮಾನವನ್ನು ಪಡೆದ ಆರನೇ ತಂಡವಾಯಿತು. ಭಾರತ ತನ್ನ ಮೊದಲ ಟೆಸ್ಟ್ ಗೆಲುವಿಗೆ ಸುಮಾರು ಇಪ್ಪತ್ತು ವರ್ಷಗಳ ಕಾಲ 1952 ರವರೆಗೆ ಕಾಯಬೇಕಾಯಿತು. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೊದಲ ಐವತ್ತು ವರ್ಷಗಳಲ್ಲಿ, 196 ಟೆಸ್ಟ್‌ಗಳಲ್ಲಿ ಕೇವಲ 35 ಗೆಲುವುಗಳೊಂದಿಗೆ ಯಶಸ್ಸು ಸೀಮಿತವಾಗಿತ್ತು.[]

ಭಾರತೀಯ ಕ್ರಿಕೆಟ್ ತಂಡವು ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಐ.ಸಿ.ಸಿ. ಸ್ಥಾನ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ.

ಇತಿಹಾಸ

[ಬದಲಾಯಿಸಿ]

ಬೆಳವಣಿಗೆ

[ಬದಲಾಯಿಸಿ]

ಭಾರತೀಯ ತ೦ಡದ ಆರ೦ಭಿಕ ವರ್ಷಗಳ ಕೆಲ ಪ್ರಸಿದ್ಧ ಆಟಗಾರರೆ೦ದರೆ ಸಿ ಕೆ ನಾಯುಡು, ಲಾಲಾ ಅಮರ್ನಾಥ್, ಮೊಹಮ್ಮದ್ ನಿಸಾರ್ ಮೊದಲಾದವರು. ಸ್ವಾತ೦ತ್ರ್ಯಾನ೦ತರ ಭಾರತ ಆಡಿದ ಮೊದಲ ಪ೦ದ್ಯ ೧೯೪೮ ರಲ್ಲಿ ಆಸ್ಟ್ರೇಲಿಯಾದ ವಿರುದ್ಧ ಬ್ರಿಸ್ಬೇನ್ ನಲ್ಲಿ. ಭಾರತದ ನಾಯಕತ್ವವನ್ನು ಲಾಲಾ ಅಮರ್ನಾಥ್ ವಹಿಸಿದ್ದರೆ ಆಸ್ಟ್ರೇಲಿಯಾದ ನಾಯಕತ್ವವನ್ನು ಡಾನ್ ಬ್ರಾಡ್ಮನ್ ವಹಿಸಿದ್ದರು. ಭಾರತದ ಮೊದಲ ಟೆಸ್ಟ್ ವಿಜಯ ಬ೦ದದ್ದು ಇ೦ಗ್ಲೆ೦ಡಿನ ವಿರುದ್ಧ ಮದರಾಸಿನಲ್ಲಿ ೧೯೫೨ ರಲ್ಲಿ.[] ಮೊದಲ ಸರಣಿ ಗೆಲುವು ಬ೦ದಿದ್ದು ಅದೇ ವರ್ಷ ಪಾಕಿಸ್ತಾನದ ವಿರುದ್ಧ.

೫೦ ಮತ್ತು ೬೦ ರ ದಶಕದ ಕೆಲವು ಪ್ರಸಿದ್ಧ ಆಟಗಾರರಲ್ಲಿ ವಿನೂ ಮ೦ಕಡ್, ಹೇಮು ಅಧಿಕಾರಿ, ಮನ್ಸೂರ್ ಅಲಿ ಖಾನ್ ಪಟೌಡಿ, ಚ೦ದೂ ಬೋರ್ಡೆ ಮೊದಲಾದವರನ್ನು ಹೆಸರಿಸಬಹುದು. ಭಾರತದ ಹೊರಗೆ ಮೊದಲ ಟೆಸ್ಟ್ ವಿಜಯ ಬ೦ದದ್ದು ನ್ಯೂಜೀಲೆ೦ಡ್ ನ ವಿರುದ್ಧ ೧೯೬೮ ರಲ್ಲಿ.[]

೭೦ ರ ದಶಕದಲ್ಲಿ ಭಾರತೀಯ ಕ್ರಿಕೆಟ್ ನ ನಾಲ್ಕು ಮುಖ್ಯ ಬೌಲರ್ ಗಳು ಬಿಷನ್ ಸಿ೦ಗ್ ಬೇಡಿ, ಎರಾಪಳ್ಳಿ ಪ್ರಸನ್ನ, ಬಿ ಎಸ್ ಚ೦ದ್ರಶೇಖರ್ ಮತ್ತು ಶ್ರೀನಿವಾಸ್ ವೆ೦ಕಟರಾಘವನ್. ಇದೇ ಕಾಲದಲ್ಲಿಯೇ ಪ್ರಸಿದ್ಧ ಬ್ಯಾಟುಗರರಾದ ಸುನಿಲ್ ಗವಾಸ್ಕರ್ ಮತ್ತು ಗು೦ಡಪ್ಪ ವಿಶ್ವನಾಥ್ ಬೆಳಕಿಗೆ ಬ೦ದರು. ಈ ದಶಕದ ಕೊನೆಗೆ ಕಪಿಲ್ ದೇವ್ ಉತ್ತಮ ಆಲ್‍ರೌ೦ಡರ್ ಆಗಿ ಬೆಳೆದರು.[]

೮೦ ರ ದಶಕದಲ್ಲಿ ಮಹಮದ್ ಅಜರುದ್ದೀನ್, ರವಿ ಶಾಸ್ತ್ರಿ, ಸಂಜಯ್ ಮಾಂಜ್ರೇಕರ್, ಕ್ರಷ್ಣಮಾಚಾರಿ ಶ್ರೀಕಾಂತ್, ಮದನ್ ಲಾಲ್, ಮಣಿ೦ದರ್ ಸಿ೦ಗ್ ಮೊದಲಾದವರು ಪ್ರಸಿದ್ಧರಾದರು. ೧೯೮೩ ರಲ್ಲಿ ಭಾರತ ವಿಶ್ವ ಕಪ್ ಅನ್ನು ಗೆದ್ದಿತು. ಮತ್ತೆ ೧೯೮೫ ರಲ್ಲಿ ಆ೦ತಾರಾಷ್ಟ್ರೀಯ ಚಾ೦ಪಿಯನ್‍ ಶಿಪ್ ಅನ್ನು ಆಸ್ಟ್ರೇಲಿಯಾದಲ್ಲಿ ಗೆದ್ದಿತು. ೧೯೮೬ ರಲ್ಲಿ ಇ೦ಗ್ಲೆ೦ಡಿನಲ್ಲಿ ಗೆದ್ದ ಟೆಸ್ಟ್ ಸರಣಿ ಇದುವರೆಗೆ ಭಾರತದ ಹೊರಗೆ ಭಾರತದ ಕೊನೆಯ ಟೆಸ್ಟ್ ಸರಣಿ ವಿಜಯವಾಗಿದೆ. ಇದೇ ದಶಕದಲ್ಲಿ ಗವಾಸ್ಕರ್ ೧೦,೦೦೦ ರನ್ನುಗಳನ್ನು ದಾಟಿದ ಮೊದಲ ಬ್ಯಾಟುಗಾರರಾದರು. ೩೪ ಶತಕಗಳನ್ನು ಸಹ ದಾಖಲಿಸಿದರು.

೯೦ ರ ದಶಕದ ಆರ೦ಭದಲ್ಲಿ ತೆ೦ಡೂಲ್ಕರ್ ಮತ್ತು ಅನಿಲ್ ಕು೦ಬ್ಳೆ ಪ್ರಸಿದ್ಧರಾದರು. ೧೯೯೯ ರಲ್ಲಿ ಅನಿಲ್ ಕು೦ಬ್ಳೆ ಒ೦ದೇ ಇನಿ೦ಗ್ಸಿನಲ್ಲಿ ಹತ್ತೂ ವಿಕೆಟ್ ಗಳನ್ನು (ಪಾಕಿಸ್ತಾನ) ಪಡೆದ ಎರಡನೆಯ ಬೌಲರ್ ಆದರು. ಸಚಿನ ತೆ೦ಡೂಲ್ಕರ್ ಅನೇಕ ದಾಖಲೆಗಳನ್ನು ನಿರ್ಮಿಸುತ್ತಿದ್ದ೦ತೆ (ಏಕದಿನ ಪ೦ದ್ಯಗಳಲ್ಲಿ ಅತಿ ಹೆಚ್ಚು ರನ್ನುಗಳು ಮತ್ತು ಅತಿ ಹೆಚ್ಚು ಶತಕಗಳು, ಇತ್ಯಾದಿ), ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮೊದಲಾದವರು ಅ೦ತಾರಾಷ್ಟ್ರೀಯ ಕ್ರಿಕೆಟ್‍ ನಲ್ಲಿ ಹೆಜ್ಜೆಯೂರತೊಡಗಿದರು.

ಅಂತರರಾಷ್ಟ್ರೀಯ ಪಂದ್ಯಾವಳಿಗಳು

[ಬದಲಾಯಿಸಿ]

ತಂಡವು ಐದು ಪ್ರಮುಖ ICC ಪಂದ್ಯಾವಳಿಗಳನ್ನು ಗೆದ್ದಿದೆ, ಎರಡು ಬಾರಿ ಕ್ರಿಕೆಟ್ ವಿಶ್ವಕಪ್ (1983 ಮತ್ತು 2011), ICC T20 ವಿಶ್ವಕಪ್ ಒಮ್ಮೆ (2007) ಮತ್ತು ICC ಚಾಂಪಿಯನ್ಸ್ ಟ್ರೋಫಿಯನ್ನು ಎರಡು ಬಾರಿ (2002 ಮತ್ತು 2013) ಗೆದ್ದಿದೆ. ಅವರು ವಿಶ್ವಕಪ್‌ನಲ್ಲಿ ಎರಡು ಬಾರಿ (2003 ಮತ್ತು 2023), T20 ವಿಶ್ವಕಪ್‌ನಲ್ಲಿ ಒಮ್ಮೆ (2014), ಚಾಂಪಿಯನ್ಸ್ ಟ್ರೋಫಿ ಎರಡು ಬಾರಿ (2000 ಮತ್ತು 2017) ಮತ್ತು ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಳಲ್ಲಿ ಮೊದಲ ಎರಡು ಆವೃತ್ತಿಗಳಲ್ಲಿ ರನ್ನರ್-ಅಪ್ ಆಗಿ ಮುಗಿಸಿದ್ದಾರೆ ( 2021, 2023). ವೆಸ್ಟ್ ಇಂಡೀಸ್ ನಂತರ ವಿಶ್ವಕಪ್ ಗೆದ್ದ ಎರಡನೇ ತಂಡ ಮತ್ತು 2011 ರ ಕ್ರಿಕೆಟ್ ವಿಶ್ವಕಪ್ ಗೆದ್ದ ನಂತರ ತವರು ನೆಲದಲ್ಲಿ ವಿಶ್ವಕಪ್ ಗೆದ್ದ ಮೊದಲ ತಂಡವಾಗಿದೆ.

ಅವರು 1984, 1988, 1990-91, 1995, 2010, 2016, 2018, 2023 ರಲ್ಲಿ ಎಂಟು ಬಾರಿ ಏಷ್ಯಾ ಕಪ್ ಗೆದ್ದಿದ್ದಾರೆ ಮತ್ತು ಮೂರು ಬಾರಿ ರನ್ನರ್ ಅಪ್ (1997, 2004, 2008) ಗಳಿಸಿದ್ದಾರೆ. 2022ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತವೂ ಚಿನ್ನದ ಪದಕ ಗೆದ್ದಿತ್ತು. ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಮೇಸ್ ಅನ್ನು ಐದು ಬಾರಿ ಗೆದ್ದಿರುವುದು ಇತರ ಸಾಧನೆಗಳು.

ಅಂತಾರಾಷ್ಟ್ರೀಯ ಮೈದಾನಗಳು

[ಬದಲಾಯಿಸಿ]
ಭಾರತೀಯ ಕ್ರಿಕೆಟ್ ತಂಡ is located in India
ನರೇಂದ್ರ ಮೋದಿ
ನರೇಂದ್ರ ಮೋದಿ
ಸವಾಯಿ ಮಾನ್ಸಿಂಗ್
ಸವಾಯಿ ಮಾನ್ಸಿಂಗ್
ಬಾರಾಬತಿ
ಬಾರಾಬತಿ
ವೈ.ಎಸ್.ರಾಜಶೇಖರ ರೆಡ್ಡಿ
ವೈ.ಎಸ್.ರಾಜಶೇಖರ ರೆಡ್ಡಿ
ವಾಂಖೆಡೆ
ವಾಂಖೆಡೆ
ಬ್ರಬೋರ್ನ್
ಬ್ರಬೋರ್ನ್
MCA
MCA
ಈಡನ್ ಗಾರ್ಡನ್ಸ್
ಈಡನ್ ಗಾರ್ಡನ್ಸ್
ACA
ACA
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
ತಿರುವನಂತಪುರಂ
ತಿರುವನಂತಪುರಂ
HPCA
HPCA
ರಾಜೀವ್ ಗಾಂಧಿ, ಹೈದರಾಬಾದ್
ರಾಜೀವ್ ಗಾಂಧಿ, ಹೈದರಾಬಾದ್
ಚಿನ್ನಸ್ವಾಮಿ
ಚಿನ್ನಸ್ವಾಮಿ
ಚಿದಂಬರಂ
ಚಿದಂಬರಂ
ಐ ಎಸ್ ಬಿಂದ್ರಾ
ಐ ಎಸ್ ಬಿಂದ್ರಾ
ಹೋಳ್ಕರ್
ಹೋಳ್ಕರ್
ರಾಜೀವ್ ಗಾಂಧಿ, ಡೆಹ್ರಾಡೂನ್
ರಾಜೀವ್ ಗಾಂಧಿ, ಡೆಹ್ರಾಡೂನ್
VCA
VCA
JSCA
JSCA
SCA
SCA
ಏಕಾನಾ
ಏಕಾನಾ
ಭಾರತದ ಕೆಲವು ಪ್ರಸಿದ್ಧ ಕ್ರಿಕೆಟ್ ಮೈದಾನಗಳ ಸ್ಥಳಗಳು

ಪಂದ್ಯಾವಳಿಯ ಇತಿಹಾಸ

[ಬದಲಾಯಿಸಿ]

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್

[ಬದಲಾಯಿಸಿ]
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್
ವರ್ಷ ಲೀಗ್ ಹಂತ ಫೈನಲ್ ಹೋಸ್ಟ್ ಫೈನಲ್ ಅಂತಿಮ ಸ್ಥಾನ
ಸ್ಥಾನಪಂದ್ಯಕಡಿತಅಂ.ಸ್ಪಅಂ.PCT
ಗೆಸೋಡ್ರಾಟೈ
೨೦೧೯-೨೦೨೧[]೧/೯೧೭೧೨೭೨೦೫೨೦೭೨.೨ಇಂಗ್ಲೆಂಡ್ರೋಸ್ ಬೌಲ್, ಇಂಗ್ಲೆಂಡ್ ನ್ಯೂ ಜೀಲ್ಯಾಂಡ್ ಗೆ ೮ ವಿಕೆಟ್‌ಗಳಿಂದ ಸೋತಿತುರನ್ನರ್ ಅಪ್
೨೦೨೧-೨೦೨೩[]೨/೯೧೮೧೦೨೧೬೧೨೭೫೮.೮ಇಂಗ್ಲೆಂಡ್ ದಿ ಓವಲ್, ಇಂಗ್ಲೆಂಡ್ ಆಸ್ಟ್ರೇಲಿಯಾ ಗೆ 209 ರನ್‌ಗಳಿಂದ ಸೋತಿತುರನ್ನರ್ ಅಪ್

ಕ್ರಿಕೆಟ್ ವಿಶ್ವ ಕಪ್

[ಬದಲಾಯಿಸಿ]
ವರ್ಷ ಸುತ್ತು ಪಂದ್ಯ ಜಯ ಸೋಲು ಟೈ
ಇಂಗ್ಲೆಂಡ್ ೧೯೭೫ಮೊದಲ ಸುತ್ತು
ಇಂಗ್ಲೆಂಡ್ ೧೯೭೯
ಇಂಗ್ಲೆಂಡ್Wales ೧೯೮೩ಚಾಂಪಿಯನ್‌
ಭಾರತಪಾಕಿಸ್ತಾನ ೧೯೮೭ಸೆಮಿ ಫೈನಲ್ಸ್
ಆಸ್ಟ್ರೇಲಿಯಾನ್ಯೂ ಜೀಲ್ಯಾಂಡ್ ೧೯೯೨ಮೊದಲ ಸುತ್ತು
ಭಾರತಪಾಕಿಸ್ತಾನಶ್ರೀಲಂಕಾ ೧೯೯೬ಸೆಮಿ ಫೈನಲ್ಸ್
ಇಂಗ್ಲೆಂಡ್Walesಸ್ಕಾಟ್ಲೆಂಡ್ಐರ್ಲೇಂಡ್ ಗಣರಾಜ್ಯನೆದರ್ಲ್ಯಾಂಡ್ಸ್ ೧೯೯೯ಸೂಪರ್ ೬
ದಕ್ಷಿಣ ಆಫ್ರಿಕಾಜಿಂಬಾಬ್ವೆಕೀನ್ಯಾ ೨೦೦೩ರನ್ನರ್ ಅಪ್೧೧
ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ೨೦೦೭ಗುಂಪು ಹಂತ
ಭಾರತಬಾಂಗ್ಲಾದೇಶಶ್ರೀಲಂಕಾ ೨೦೧೧ಚಾಂಪಿಯನ್‌
ಆಸ್ಟ್ರೇಲಿಯಾನ್ಯೂ ಜೀಲ್ಯಾಂಡ್ ೨೦೧೫ಸೆಮಿ ಫೈನಲ್ಸ್
ಇಂಗ್ಲೆಂಡ್Wales ೨೦೧೯ಸೆಮಿ ಫೈನಲ್ಸ್೧೦
ಭಾರತ ೨೦೨೩ರನ್ನರ್ ಅಪ್೧೧೧೦
ಒಟ್ಟು೨ ಕಪ್ಗಳು೯೬೬೩೩೦

ಟಿ20 ವಿಶ್ವಕಪ್

[ಬದಲಾಯಿಸಿ]
ಟಿ20 ವಿಶ್ವಕಪ್ ದಾಖಲೆ
ವರ್ಷ ಸುತ್ತು ಸ್ಥಾನ ಪಂದ್ಯ ಜಯ ಸೋಲು ಟೈ NR
ದಕ್ಷಿಣ ಆಫ್ರಿಕಾ ೨೦೦೭ಚಾಂಪಿಯನ್‌೧/೧೨
ಇಂಗ್ಲೆಂಡ್ ೨೦೦೯ಸೂಪರ್ 8೭/೧೨
ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ೨೦೧೦೮/೧೨
ಶ್ರೀಲಂಕಾ ೨೦೧೨೫/೧೨
ಬಾಂಗ್ಲಾದೇಶ ೨೦೧೪ರನ್ನರ್ ಅಪ್೨/೧೬
India ೨೦೧೬ಸೆಮಿ ಫೈನಲ್ಸ್೪/೧೬
ಒಮಾನ್ಯುನೈಟೆಡ್ ಅರಬ್ ಎಮಿರೇಟ್ಸ್ ೨೦೨೧ಸೂಪರ್ ೧೨೬/೧೬
ಆಸ್ಟ್ರೇಲಿಯಾ ೨೦೨೨ಸೆಮಿ ಫೈನಲ್ಸ್೩/೧೬
ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ಅಮೇರಿಕ ಸಂಯುಕ್ತ ಸಂಸ್ಥಾನ ೨೦೨೪ ಅರ್ಹತೆ ಪಡೆದಿದ್ದಾರೆ
ಒಟ್ಟು೧ ಕಪ್ಗಳು೮/೮೪೫೨೮೧೫

ಪ್ರಸ್ತುತ ತಂಡ

[ಬದಲಾಯಿಸಿ]

ಪಟ್ಟಿಯು ಕಳೆದ 12 ತಿಂಗಳುಗಳಿಂದ ಸಕ್ರಿಯವಾಗಿರುವ ಆಟಗಾರರನ್ನು ಒಳಗೊಂಡಿದೆ.

ಹೆಸರು ವಯಸ್ಸು ಬ್ಯಾಟಿಂಗ್ ಶೈಲಿ ಬೌಲಿಂಗ್ ಶೈಲಿ ಟಿಪ್ಪಣಿ
ಬ್ಯಾಟರ್ಸ್
ರುತುರಾಜ್ ಗಾಯಕ್ವಾಡ್29Right-handedN/a
ಶುಭಮನ್ ಗಿಲ್26Right-handedRight-arm off spin
ಶ್ರೇಯಸ್ ಅಯ್ಯರ್31Right-handedRight-arm leg spin
ಯಶಸ್ವಿ ಜೈಸ್ವಾಲ್24Left-handedRight-arm leg spin
ಸರ್ಫರಾಜ್ ಖಾನ್28Right-handedRight-arm leg break
ವಿರಾಟ್ ಕೊಹ್ಲಿ37Right-handedRight-arm medium
ರಜತ್ ಪಾಟಿದಾರ್32Right-handedN/a
ದೇವದತ್ ಪಡಿಕ್ಕಲ್25Left-handedN/a
ರೋಹಿತ್ ಶರ್ಮಾ38Right-handedRight-arm off breakನಾಯಕ
ರಿಂಕು ಸಿಂಗ್28Left-handedRight-arm off break
ಸೂರ್ಯಕುಮಾರ್ ಯಾದವ್35Right-handedRight-arm off spin
ವಿಕೆಟ್ ಕೀಪರ್‌
ಶ್ರೀಕರ್ ಭಾರತ್32Right-handedN/a
ಇಶಾನ್ ಕಿಶನ್27Left-handedN/a
ಕೆ.ಎಲ್.ರಾಹುಲ್33Right-handedN/a
ಸಂಜು ಸ್ಯಾಮ್ಸನ್31Right-handedN/a
ರಿಷಭ್ ಪಂತ್28Left-handedN/a
ಆಲ್ ರೌಂಡರ್
ರವಿಚಂದ್ರನ್ ಅಶ್ವಿನ್39Right-handedRight-arm off spin
ಶಿವಂ ದುಬೆ32Left-handedRight-arm medium
ರವೀಂದ್ರ ಜಡೇಜಾ37Left-handedSlow left-arm orthodox
ಹಾರ್ದಿಕ್ ಪಾಂಡ್ಯ32Right-handedRight-arm medium-fastODI, T20I ಉಪನಾಯಕ
ಅಕ್ಷರ್ ಪಟೇಲ್32Left-handedSlow left-arm orthodox
ವಾಷಿಂಗ್ಟನ್ ಸುಂದರ್26Left-handedRight-arm off spin
ಪೇಸ್ ಬೌಲರ್‌
ಜಸ್ಪ್ರೀತ್ ಬುಮ್ರಾ32Right-handedRight-arm fastಟೆಸ್ಟ್ ಉಪನಾಯಕ
ದೀಪಕ್ ಚಹಾರ್33Right-handedRight-arm medium
ಅವೇಶ್ ಖಾನ್29Right-handedRight arm fast-medium
ಮುಖೇಶ್ ಕುಮಾರ್32Right-handedRight arm medium
ಪ್ರಸಿದ್ಧ್ ಕೃಷ್ಣ32Right-handedRight arm medium
ಉಮ್ರಾನ್ ಮಲಿಕ್26Right-handedRight-arm fast
ಮೊಹಮ್ಮದ್ ಶಮಿ35Right-handedRight-arm fast
ಅರ್ಷದೀಪ್ ಸಿಂಗ್27Left-handedLeft-arm medium-fast
ಮೊಹಮ್ಮದ್ ಸಿರಾಜ್32Right-handedRight-arm fast
ಶಾರ್ದೂಲ್ ಠಾಕೂರ್34Right-handedRight-arm medium
ಸ್ಪಿನ್ ಬೌಲರ್‌
ರವಿ ಬಿಷ್ಣೋಯ್35Right-handedRight-arm leg spin
ಯುಜ್ವೇಂದ್ರ ಚಹಾಲ್32Left-handedRight-arm off-break
ಕುಲದೀಪ್ ಯಾದವ್31Left-handedLeft-arm wrist spin

ಉಲ್ಲೇಖಗಳು

[ಬದಲಾಯಿಸಿ]
  1. "ICC Rankings". International Cricket Council.
  2. "Top 10 Teams With Most Wins In Test Cricket". 30 August 2019. Archived from the original on 10 March 2023. Retrieved 10 February 2023.
  3. "England in India, 1951–52". ESPNcricinfo. Archived from the original on 9 May 2006. Retrieved 8 March 2022.
  4. "India in New Zealand Test Series, India in New Zealand Test Series 1967/68 score, Match schedules, fixtures, points table, results, news". ESPNcricinfo. Archived from the original on 18 January 2022. Retrieved 16 January 2022.
  5. "30th January 1994: When Kapil Dev became the leading wicket-taker in the world". 30 January 2019. Archived from the original on 14 January 2023. Retrieved 14 January 2023.
  6. "ICC World Test Championship 2019–2021 Table". ESPNcricinfo. Archived from the original on 12 August 2021. Retrieved 29 August 2021.
  7. "ICC World Test Championship (2021-2023) Points Table". Archived from the original on 1 August 2019. Retrieved 6 December 2021.