ಕುಲದೀಪ್ ಯಾದವ್

ವಿಕಿಪೀಡಿಯ ಇಂದ
Jump to navigation Jump to search
Kuldeep Yadav
ವೈಯುಕ್ತಿಕ ಮಾಹಿತಿ
ಪೂರ್ಣ ಹೆಸರುKuldeep Yadav
ಜನನ (1994-12-14) 14 December 1994 (age 24)
Unnao, Uttar Pradesh, India
ಬ್ಯಾಟಿಂ ಶೈಲಿLeft-handed
ಬೌಲಿಂಗ್ ಶೈಲಿSlow left-arm chinaman
ಪಾತ್ರBowler
ಅಂತರಾಷ್ಟ್ರೀಯ ಮಾಹಿತಿ
ದೇಶದ ಕಡೆ
ಟೆಸ್ಟ್ ಚೊಚ್ಚಲ ಪಂದ್ಯ(cap 288)26 March 2017 v Australia
ಕೊನೆಯ ಟೆಸ್ಟ್9 August 2018 v England
ಓಡಿಐ ಚೊಚ್ಚಲ ಪಂದ್ಯ (cap 217)23 June 2017 v West Indies
ಕೊನೆಯ ಓಡಿಐ17 July 2018 v England
ಓಡಿಐ ಶರ್ಟ್ ನಂ.23
T20I debut9 July 2017 v West Indies
ಕೊನೆಯ T20I6 July 2018 v England
T20I ಶರ್ಟ್ ನಂ.23
ದೇಶೀಯ ಟೀಮ್ ಮಾಹಿತಿ
ವರ್ಷಗಳುTeam
2012Mumbai Indians
2014-2018Kolkata Knight Riders (squad no. 23 (formerly 18))
2014-presentUttar Pradesh
ವೃತ್ತಿ ಅಂಕಿಅಂಶಗಳು
ಸ್ಪರ್ಧೆ Test FC ODI T20I
ಪಂದ್ಯಗಳು 2 24 21 12
ಗಳಿಸಿದ ರನ್‌ಗಳು 33 756 23 16
ಬ್ಯಾಟಿಂಗ್ ಸರಾಸರಿ 16.50 28.00 11.50 16.00
100ಗಳು/50ಗಳು -/- 1/5 -/- -/-
ಅತ್ಯುತ್ತಮ ಸ್ಕೋರ್ 26 117 19 16
ಬಾಲ್‌ಗಳು ಬೌಲ್ ಮಾಡಿದ್ದು 348 4613 1036 174
ವಿಕೆಟ್ಗಳು 9 90 45 24
ಬೌಲಿಂಗ್ ಸರಾಸರಿ 20.77 31.87 17.91 13.20
5 ವಿಕೆಟ್‌ಗಳು ಇನ್ನಿಂಗ್ಸ್‌ಗಳಲ್ಲಿ 0 3 1 1
ಪಂದ್ಯ ಒಂದರಲ್ಲಿ 10 ವಿಕೆಟ್‌ಗಳು 0 0 0 0
ಅತ್ಯುತ್ತಮ ಬೌಲಿಂಗ್ 4/40 6/79 6/25 5/24
ಕ್ಯಾಚ್‌ಗಳು/ಸ್ಟಂಪ್‌ಗಳು 1/- 11/- 2/- 1/-
ಮೂಲ: ESPNCricinfo, 9 August 2018

ಕುಲದೀಪ್ ಯಾದವ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಎಡಗೈ ಚೈನಮ್ಯಾನ್ ಬೌಲರ್. ರಣಜಿ ಟ್ರೋಫೀಯಲ್ಲಿ ಉತ್ತರ ಪ್ರದೇಶದ ತಂಡಕ್ಕೆ ಆಡುತ್ತಾರೆ.[೧]

ಆರಂಭಿಕ ಜೀವನ[ಬದಲಾಯಿಸಿ]

ಕುಲದೀಪ್ ಯಾದವ್‍ರವರು ಡಿಸೆಂಬರ್ ೧೪, ೧೯೯೪ರಲ್ಲಿ ಉತ್ತರ ಪ್ರದೇಶದ ಕಾನ್ಪುರ್‍ನಲ್ಲಿ ಜನಿಸಿದರು. ಆರಂಭದಲ್ಲಿ ಕುಲದೀಪ್ ವೇಗದ ಬೌಲರ ಆಗಿದ್ದರು, ಆದರೆ ತಮ್ಮ ಕೋಚ್ ರವರ ಸಲಹೆಯ ಮೇರೆಗೆ ಇವರು ಚೈನಮ್ಯಾನ್ ಬೌಲರಾಗಿ ತಮ್ಮ ಶೈಲಿಯನ್ನು ಬದಲಾಯಿಸಿಕೊಂಡರು. ಇವರು ೨೦೧೪ರಲ್ಲಿ ನಡೆದ ೧೯ರ ವಯ್ಯೋಮಿತಿಯ ವಿಶ್ವಕಪ್‍ನಲ್ಲಿ ಸ್ಕಾಟ್ ಲ್ಯಾಂಡ್ ವಿರುದ್ಧದ ಪಂಡ್ಯದಲ್ಲ್ಲಿ ಹ್ಯಾಟ್ರಿಕ್ ವಿಕೆಟ ಪಡೆದರು. ಈ ಮೂಲಕ ೧೯ರ ವಯ್ಯೋಮಿತಿ ವಿಶ್ವಕಪ್‍ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಹಿರಿಮೆಗೆ ಪಾತ್ರರಾದರು. ಇದೆ ಸರಣಿಯೆಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಕೂಡ ಆಗಿದ್ದರು.[೨]

ವೃತ್ತಿ ಜೀವನ[ಬದಲಾಯಿಸಿ]

ಐಪಿಎಲ್ ಕ್ರಿಕೆಟ್[ಬದಲಾಯಿಸಿ]

೨೦೧೨ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದರು, ಆದರೆ ೧೧ರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಹೀಗೆ ೨೦೧೪ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿದ್ದರೂ ೧೧ರ ಬಳಗದಲ್ಲಿ ಸ್ಥಾನ ಪಡೆಯಲಿಲ್ಲ. ೨೦೧೬ರ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಪರ ಐಪಿಎಲ್‍ನಲ್ಲಿ ಪಾದಾರ್ಪಣೆ ಮಾಡಿದರು. ತಾವು ಆಡಿದ ೦೩ ಪಂದ್ಯಗಳಿಂದ ೦೬ ವಿಕೆಟ್ ಪಡೆದರು. ಅದೇ ವರ್ಷ (೨೦೧೬) ಅವರನ್ನು ದುಲೀಪ್ ಟ್ರೋಫಿಗೂ ಆಯ್ಕೆ ಮಾಡಲಾಯಿತು. ದುಲೀಪ್ ಟ್ರೋಫಿಯಲ್ಲಿ ಮೂರು ಪಂದ್ಯಗಳನ್ನಾಡಿ ೧೭ ವಿಕೆಟ್‍ಗಳನ್ನ ಪಡೆದರು.[೩]

ಅಂತರರಾಷ್ತ್ರೀಯ ಕ್ರಿಕೆಟ್[ಬದಲಾಯಿಸಿ]

ಮಾರ್ಚ್ ೨೫, ೨೦೧೭ರಂದು ಧರ್ಮಶಾಲದಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ೪ನೇ ಟೆಸ್ಟ್ ಪಂದ್ಯದ ಮೂಲಕ ಅಂತರರಾಷ್ತ್ರೀಯ ಕ್ರಿಕೆಟ್‍ಗೆ ಪಾದಾರ್ಪನೆ ಮಾಡಿದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ೦೪ ವಿಕೆಟ್‍ಗಳನ್ನ ಪಡೆದರು. ಜೂನ್ ೨೩, ೨೦೧೭ರಲ್ಲಿ ವೆಷ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದ ಮೂಲಕ ಇವರು ಏಕದಿನ ಕ್ರಿಕೆಟ್‍ಗೆ ಪಾದಾರ್ಪನೆ ಮಾಡಿದರು. ಈ ಸರಣಿಯಲ್ಲಿ ಇವರು ಜಂಟಿ ಅತೀಹೆಚ್ಚು ವಿಕೆಟ್ ಪಡೆದ ಬೌಲರಾಗಿದ್ದರು. ನಂತರ ಶ್ರೀಲಂಕಾ ವಿರುದ್ಧದ ಸರಣಿಗೆ ಕೂಡ ಆಯ್ಕೆ ಆದರು. ಜುಲೈ ೦೯, ೨೦೧೭ರಲ್ಲಿ ವೆಷ್ಟ್ ಇಂಡೀಸ್ ವಿರುದ್ಧ ನಡೆದ ಏಕೈಕ ಟಿ-೨೦ ಪಂದ್ಯದ ಮೂಲಕ ಟಿ-೨೦ ಜಗತ್ತಿಗೂ ಪಾದಾರ್ಪನೆ ಮಾಡಿದರು.[೪][೫][೬]

ಸಾಧನೆಗಳು[ಬದಲಾಯಿಸಿ]

 • ೧೯ರ ವಯ್ಯೋಮಿತಿಯ ವಿಶ್ವಕಪ್‍ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಭಾರತೀಯ ಕ್ರಿಕೆಟಿಗ. (೨೦೧೪ರ ಸ್ಕಾಟ್ ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ)[೭]
 • ಏಕದಿನ ಕ್ರಿಕೆಟ್‍ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ೩ನೇ ಭಾರತೀಯ ಕ್ರಿಕೆಟಿಗ. (೨೦೧೭ರ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ)[೮]


ಪಂದ್ಯಗಳು[ಬದಲಾಯಿಸಿ]

 • ಏಕದಿನ ಕ್ರಿಕೆಟ್ : ೧೦ ಪಂದ್ಯಗಳು[೯][೧೦][೧೧][೧೨]
 • ಟೆಸ್ಟ್ ಕ್ರಿಕೆಟ್ : ೦೨ ಪಂದ್ಯಗಳು
 • ಟಿ-೨೦ ಕ್ರಿಕೆಟ್ : ೦೨ ಪಂದ್ಯಗಳು
 • ಐಪಿಎಲ್ ಕ್ರಿಕೆಟ್ : ೧೫ ಪಂದ್ಯಗಳು

ವಿಕೆಟ್‍ಗಳು[ಬದಲಾಯಿಸಿ]

 1. ಏಕದಿನ ಪಂದ್ಯಗಳಲ್ಲಿ : ೧೮ ವಿಕೆಟ್‍ಗಳು
 2. ಟೆಸ್ಟ್ ಪಂದ್ಯಗಳಲ್ಲಿ : ೦೯ ವಿಕೆಟ್‍ಗಳು
 3. ಟಿ-೨೦ ಪಂದ್ಯಗಳಲ್ಲಿ : ೦೩ ವಿಕೆಟ್‍ಗಳು
 4. ಐಪಿಎಲ್ ಪಂದ್ಯಗಳಲ್ಲಿ : ೧೮ ವಿಕೆಟ್‍ಗಳು

ಉಲ್ಲೇಖಗಳು[ಬದಲಾಯಿಸಿ]

 1. https://en.wikipedia.org/wiki/Kuldeep_Yadav
 2. http://www.timesnownews.com/sports/article/kuldeep-yadavs-maiden-hat-trick-in-india-colours-watch-video/94262
 3. http://www.cricbuzz.com/profiles/8292/kuldeep-yadav#profile
 4. http://www.cricbuzz.com/live-cricket-scorecard/17402/india-vs-australia-4th-test-australia-test-tour-of-india-2017
 5. http://www.cricbuzz.com/live-cricket-scorecard/18361/windies-vs-india-1st-odi-india-tour-of-west-indies-2017
 6. http://www.cricbuzz.com/live-cricket-scorecard/18366/windies-vs-india-only-t20i-india-tour-of-west-indies-2017
 7. https://circleofcricket.co/2017/Sep/23/Watch-Kuldeep-Yadavs-first-Hat-trick-playing-for-India-U-19/
 8. http://indiatoday.intoday.in/story/kuldeep-yadav-hat-trick-india-vs-australia/1/1053190.html
 9. http://www.espncricinfo.com/india/content/player/559235.html
 10. http://www.news18.com/cricketnext/profile/kuldeep-yadav/63187.html
 11. https://sports.ndtv.com/cricket/players/63624-kuldeep-yadav-playerprofile
 12. http://www.iplt20.com/teams/kolkata-knight-riders/squad/261/Kuldeep-Yadav/