ವಿಷಯಕ್ಕೆ ಹೋಗು

ಮುಂಬೈ ಇಂಡಿಯನ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಂಬಯಿ ಇಂಡಿಯನ್ಸ್
ಕೋಚ್: ಭಾರತ ಮಹೇಲಾ ಜಯವರ್ಧನೆ
ನಾಯಕ: ಭಾರತ ರೋಹಿತ್ ಶರ್ಮಾ
ಬಣ್ಣಗಳು: ನೀಲಿ ಮತ್ತು ಚಿನ್ನದ ಹಳದಿ
ಸ್ಥಾಪನೆ: ೨೦೦೮
ತವರಿನ ಕ್ರೀಡಾಂಗಣ: ವಾಂಖೆಡೆ ಕ್ರೀಡಾಂಗಣ
ಸ್ಥಳಾವಕಾಶ: ೩೩,೪೪೨
ಮಾಲೀಕ: ರಿಲಯನ್ಸ್
ಅಧಿಕೃತ ತಾಣ: ಮುಂಬಯಿ ಇಂಡಿಯನ್ಸ್

ಮುಂಬಯಿ ಇಂಡಿಯನ್ಸ್ ತಂಡ ಭಾರತೀಯ ಪ್ರಿಮಿಯರ್ ಲೀಗ್‍ನ ಒಂದು ತಂಡ. ಇದು ಮುಂಬಯಿ ನಗರವನ್ನು ಪ್ರತಿನಿಧಿಸುತ್ತದೆ. ಪ್ರಸ್ತುತ ರೋಹಿತ್ ಶರ್ಮಾಈ ತಂಡದ ನಾಯಕನಾಗಿದ್ದಾರೆ. ಸಚಿನ್ ತೆಂಡುಲ್ಕರ್ ಈ ತಂಡದ ಸ್ಟಾರ್ ಆಟಗಾರಾಗಿದ್ದರು.


ಈ ತಂಡದ ಆರಂಭ 2008 ರ ಪ್ರಥಮ ಐ.ಪಿ.ಎಲ್ ನಂದು ಪ್ರಾರಂಭವಾಯಿತು. ಭಾರತದ ಸುಪ್ರಸಿದ್ಧ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ನಾ ಮುಕೇಶ್ ಅಂಬಾನಿ ಈ ತಂಡದ ಮಾಲಕರು. ಮುಂಬೈನ ವಾಂಖೆಡೆ ಸ್ಟೇಡಿಯಂ ಈ ತಂಡದ ತವರು ಮೈದಾನವಾಗಿದೆ(ಹೋಂಗ್ರೌಂಡ್).

2017 ರಲ್ಲಿ ಮುಂಬೈ ಇಂಡಿಯನ್ಸ್ ಪ್ಯಾಚ್ಯಾಯಸಿ ಬ್ರಾಂಡ್ ಮೌಲ್ಯ $100 ಆಗಿತ್ತು, ನಂತರ 2019 ರಲ್ಲಿ ಇದರ ಬ್ರಾಂಡ್ ಮೌಲ್ಯ ₹809 crore (roughly $115 million), ಆಗಿತ್ತು.

ಮುಂಬೈ ಇಂಡಿಯನ್ಸ್ ಐ.ಪಿ.ಎಲ್ ನ ಬಹಳ ಯಶಸ್ವಿ ತಂಡಗಳಲ್ಲಿ ಒಂದಾಗಿದೆ . ಮುಂಬೈ ಇಂಡಿಯನ್ಸ್ 2011 ರ ಚಾಂಪಿಯನ್ ಲಿಗ್ಸ್  T20 ಪಂದ್ಯಾವಳಿಯಲ್ಲಿ  ಫೈನಲ್ ನಲ್ಲಿ  ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನು  31 ರನ್ ಗಳಿಂದ ಸೋಲಿಸುವುದು ಮುಖಾಂತರ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ನಂತರ 2013 ರಲ್ಲಿ  ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 23 ರನ್ ಗಳಿಂದ ಸೋಲಿಸುವುದು ಮುಖಾಂತರ ತನ್ನ ಪ್ರಥಮ  ಐ.ಪಿ.ಎಲ್ ಪ್ರಶಸ್ತಿ ಯನ್ನು ಮುಡಿಗೇರಿಸಿಕೊಂಡಿತ್ತು. ಇದರ ನಂತರ ಚಾಂಪಿಯನ್ ಲಿಗ್ಸ್  T20 ಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಫೈನಲ್ ನಲ್ಲಿ 33 ರನ್ನುಗಳಿಂದ ಸೋಲಿಸಿ ಎರಡನೆ ಬಾರಿಗೆ ಚಾಂಪಿಯನ್ ಲಿಗ್ಸ್ T20 ಪ್ರಶಸ್ತಿ ಯನ್ನು ಗೆಮುಡಿಗೇರಿಸಿಕೊಂಡಿತ್ತು. ಮತ್ತೆ ತನ್ನ ಎರಡನೆ ಐ.ಪಿ.ಎಲ್ ಪ್ರಶಸ್ತಿಯನ್ನು 2015  ರಲ್ಲಿ ಫೈನಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು 41 ರನ್ ಗಳ ಅಂತರದಿಂದ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಮತ್ತೆ ಮೂರನೆ ಐ.ಪಿ.ಎಲ್ ಪ್ರಶಸ್ತಿಯನ್ನು  2017 ರಲ್ಲಿ  ರೈಸಿಂಗ್ ಪುಣೆ ಸೊಪರಜೈಂಟ ವಿರುದ್ಧ 1 ರನ್ ಗಳ ರೋಚಕ ವಿಜಯದೊಂದಿಗೆ ಮೂರನೆ ಬಾರಿಗೆ ಐ.ಪಿ.ಎಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಮತ್ತೆ ಕೋನೆಯದಾಗಿ 2019 ರಲ್ಲಿ ತನ್ನ ಬಿದ್ದು ವೈರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1 ರನ್ ಗಳ ರೋಚಕ ಜಯದೊಂದಿಗೆ ನಾಲ್ಕನೇ ಬಾರಿಗೆ ಐ.ಪಿ.ಎಲ್ ಚಾಂಪಿಯನ್ ಆಯಿತು ಇದರೊಂದಿಗೆ ಗರಿಷ್ಠ ಬಾರಿ ಐ.ಪಿ.ಎಲ್ ಚಾಂಪಿಯನ್ ಆದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ಯಾಂಚ್ಯಾಸಿ ಇತಿಹಾಸ

Board of Control for Cricket in India ಬಿಸಿಸಿಐ 2007 ಸೆಪ್ಟೆಂಬರ್ ತಿಂಗಳಲ್ಲಿ  2008 ರಲ್ಲಿ  ಇಂಡಿಯನ್ ಪ್ರೀಮಿಯರ್ ಲೀಗ್ ಐ.ಪಿ.ಎಲ್ ಪಂದ್ಯಾವಳಿ ನಡೆಸುವುದಾಗಿ ಪ್ರಕಟನೆ ನೀಡಿತ್ತು. ಜನವರಿ 2008[9] ರಲ್ಲಿ ಎಲ್ಲಾ  ಎಂಟು ನಗರ ಆಧಾರಿತ ತಂಡಗಳ ಪ್ಯಾಂಚ್ಯಾಸಿಗಳ ಮಾಲಕರನ್ನು ಪರಿಚಯಿಸಿತ್ತು. ಅದರಲ್ಲಿ ಮುಂಬೈ ಅನ್ನು ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ  $111.9 ಮಿಲಿಯನ್ ಕೊಟ್ಟು ಖರೀದಿಸಿದ್ದು . ಇದು 10 ವರ್ಷಗಳ ಅವಧಿಗೆ ಖರೀದಿಸಲ್ಪಟಿತ್ತು.  ಅದು ಆ ಸೀಸನ ನಾ ತಂಡವೊಂದರ ಅತ್ಯಧಿಕ ಬೆಲೆಯ ಖರೀದಿಯಾಗಿತ್ತು. ರಿಲಯನ್ಸ್ ಇಂಡಸ್ಟ್ರೀಸ್]  ಇದು ಮುಕೇಶ್ ಅಂಬಾನಿ ಯು ಒಡೆತನದ ಸಂಸ್ಥೆಯಾಗಿದೆ.ಪ್ಯಾಂಚ್ಯಾಸಿ ಈ ತಂಡಕ್ಕೆ ಮುಂಬೈ ಇಂಡಿಯನ್ಸ್ ಎಂದು ಹೆಸರಿಟ್ಟಿತ್ತು.

ತಂಡದ ಇತಿಹಾಸ

2008-2009

ಐ.ಪಿ.ಎಲ್ ನಾಲ್ಕು ಐಕಾನ್ ಪ್ಲೇಯರ ನ ಅವಕಾಶ ನನ್ನು ಕಲ್ಪಿಸಿತ್ತು. ಸಚಿನ್ ಮುಂಬೈ ತಂಡದ ಐಕಾನ್ ಪ್ಲೇಯರ ಆಗಿದ್ದರು. ಐ.ಪಿ.ಎಲ್ ನಾ ಮೊದಲು ಹರಾಜು ಪ್ರಕ್ರಿಯೆ ಫೆಬ್ರವರಿ 2008 ರಲ್ಲಿ ನಡೆಯಿತ್ತು. ಇದರಲ್ಲಿ ಮುಂಬೈ ಇಂಡಿಯನ್ಸ್ ಅಂತಾರಾಷ್ಟ್ರೀಯ ಆಟಗಾರರಾದ ಸನತ್ ಜಯಸೂರ್ಯ, ಶಾನ್ ಪೊಲಾಕ್, ಹರಭಜನ್ ಸಿಂಗ್, ,ರೋಹಿತ್ ಶರ್ಮಾ ಮಲಿಂಗಾ, ಮುಂತಾದ ಆಟಗಾರರನ್ನು ಖರೀದೀಸಿತ್ತು.ಮುಂಬೈ ಇಂಡಿಯನ್ಸ್ ಸಚಿನ್ ತೆಂಡೂಲ್ಕರ್ ಅವರನ್ನು ತನ್ನ ನಾಯಕ ರಾಗಿ ನೇಮಿಸಲಾಯಿತು. ಭಾರತ ತಂಡದ ಮಾಜಿ ಆಟಗಾರ ಲಾಲಚಂದ ರಜಪೊತ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಯಿತ್ತು.ನಂತರ ಸಚಿನ್ ತೆಂಡೂಲ್ಕರ್ ಗಾಯದ ಕಾರಣದಿಂದಾಗಿ ಸ್ವಲ್ಪ ಸಮಯ ಹೊರಗುಳಿಯಬೇಕಾಯಿತ್ತು. ಆಗ ಹರ್ಭಜನ್ ಸಿಂಗ್ ಅವರನ್ನು ನಾಯಕ ರನ್ನಾಗಿ ನೇಮಕ ಮಾಡಲಾಯಿತು. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ದ ಪಂದ್ಯದಲ್ಲಿ ಹರಭಜನ್ ಸಿಂಗ್ ಶ್ರಿ ಶಾಂತ ಅವರಿಗೆ ಕಪಾಳಮೋಕ್ಷ ಮಾಡಿದ್ದರಿಂದ ಅವರು ಸಹ ಕೆಲ ಪಂದ್ಯಗಳನ್ನು ಆಗಿದ್ದಂತೆ ನಿಷೇಧಾಜ್ಞೆ ವಿಧಿಸಲಾಯಿತ್ತು, ಹರಭಜನ್ ಸಿಂಗ್ ನಂತರ ಸಚಿನ್ ತೆಂಡೂಲ್ಕರ್ ತಂಡಕ್ಕೆ ಮರಳುವ ವರೆಗೆ ಶಾನ್ ಪೊಲಾಕ್ ಮುಂಬೈ ತಂಡದ ನಾಯಕರಾಗಿದ್ದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ ತಂಡ 7 ಪಂದ್ಯಗಳಲಿ ಗೆಲುವು , 7 ಪಂದ್ಯಗಳಲಿ ಸೋಲ ನನ್ನು ಕಂಡು ಕೇವಲ ಒಂದು ಅಂಕದ ಅಂತರದಿಂದ ಸೆಮಿಫೈನಲ್ ತಲುಪುವ ಅವಕಾಶದಿಂದ ವಂಚಿತವಾಗಿತ್ತು. ಅಂತಿಮವಾಗಿ 5 ನೇ ಸ್ಥಾನವನ್ನು ಪಡೆದು ತೃಪ್ತಿ ಪಟ್ಟಿಕೊಂಡಿತ್ತು.

2009 ರ ಐ.ಪಿ.ಎಲ್  ಸೀಜನ್ ಅನ್ನು  ಸೌತ್ ಆಫ್ರಿಕಾ ದಲ್ಲಿ ನಡೆಸಲಾಯಿತ್ತು. ಏಕೆಂದರೆ ಆತ ಸಮಯದಲ್ಲಿ ಭಾರತದಲ್ಲಿ ಚುನಾವಣೆ ನಡೆಯುತ್ತಿದ್ದು ರಿಂದ ಹೊಕ್ಕಿತು ಭದ್ರತೆ ನೀಡಲು ಸಾಧ್ಯವಾಗದ್ದರಿಂದ  ಪಂದ್ಯಾವಳಿಯನ್ನು ಸೌತ್ ಆಫ್ರಿಕಾ ಗೆ ವರ್ಗಾವಣೆ ಮಾಡಲಾಯಿತು.

ಈ ಪಂದ್ಯಾವಳಿಯಲ್ಲಿ  ರಾಬಿನ್ ಉತ್ತಪ್ಪ, ಮತ್ತು ಜಹೀರ್ ಖಾನ್ ಅವರನ್ನು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದಿಂದ ಖರೀದಿಸಲಾಯಿತ್ತು. ಮತ್ತು ಆಸಿಸ್ ನೆಹ್ರಾ ಮತ್ತು ಶಿಖರ್ ಧವನ್ ಅವರನ್ನು ಡೆಲ್ಲಿ ಡೆರಡೆವಿಲ್ಸ್ ತಂಡದಿಂದ ಖರೀದಿಸಲಾಯಿತ್ತು. ಗಾಯದ ಕಾರಣದಿಂದ ಮೋದಲ ಸೀಸನ್ ನಿಂದ ಹೊರಗುಳಿದಿದ್ದ ಲಸಿತ ಮಲಿಂಗಾ ತಂಡವನ್ನು ಸೇರಿಕೊಂಡರು. ದಕ್ಷಿಣ ಆಫ್ರಿಕಾ ದ ಆಟಗಾರ ಜೆ.ಪಿ ಡ್ಯುಮಿನಿ ಯ ಖರೀದಿಯಿಂದ ಮುಂಬೈ ಇಂಡಿಯನ್ಸ್ ಬ್ಯಾಂಟಿಗ್ ಬೆಲೆ ಹೆಚ್ಚಿತ್ತು. ಮೊದಲ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದಿದರಿಂದ ಆತ್ಮವಿಶ್ವಾಸ ಹೆಚ್ಚಿತ್ತು ಆದರೆ ನಂತರದ ಪಂದ್ಯಗಳಲ್ಲಿ  ಸಚಿನ್ ಮತ್ತು ಡ್ಯುಮಿನಿ ಬ್ಯಾಟಿಂಗ್ ಮೇಲೆ ಇಡಿ ತಂಡ ಅವಲಂಬಿತವಾಯಿತ್ತು ಉಳಿದ ಆಟಗಾರರಿಂದ ನೀರಿಕ್ಷಿತ ಸೇವೆ ಲಭ್ಯವಾಗಲ್ಲಿಲ.ಮತ್ತು ನಂತರದ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಲಾಗದೆ ಒಟ್ಟು 14 ಪಂದ್ಯಗಳಲ್ಲಿ  5 ಪಂದ್ಯಗಳನ್ನು ಮಾತ್ರ ಗೆದ್ದು ನಿರಾಸೆ ಅನುಭವಿಸಿತ್ತು. ಕೊನೆಯದಾಗಿ ಏಳನೆ ಸ್ಥಾನಕ್ಕೆ  ಕುಸಿಯಿತ್ತು.


2010 - 2012 ಬಲಿಷ್ಠ ತಂಡವಾಗಿ ಮುಂಬೈ ಇಂಡಿಯನ್ಸ್


2010 ರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್  ಕೆರೆಬಿಯನ್ ಆಲಗ್ರೌಂಡರ್ ಕೀರನ್ ಪೋಲಾರ್ಡ್ ಅವರನ್ನು  $750,000 ಕೊಟ್ಟು ಖರೀದಿಸಿತ್ತು. 2010 ರೈ ಹರಾಜು ಪ್ರಕ್ರಿಯೆ ಪೊರ್ಣಗೊಂಡಾಗ ಮುಂಬೈ ಇಂಡಿಯನ್ಸ್  ಹತ್ತು ಮಂದಿ ಅನಕ್ಯಾಪಡ್  ಭಾರತೀಯ ಆಟಗಾರರನ್ನು ಖರೀದಿಸಿದ್ದು ಅದರಲ್ಲಿ ಏಳು ಮಂದಿ ಐ.ಸಿ.ಎಲ್ ನ ಮಾಜಿ ಆಟಗಾರ ರರು. ಭಾರತ ತಂಡದ ಮಾಜಿ ಆಟಗಾರ ರಾಬಿನ್ ಸಿಂಗ್ ಅವರನ್ನು ಮುಖ್ಯ ಕೋಚ್ ಆಗಿ, ಮತ್ತು ಶಾನ್ ಪೊಲಾಕ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಯಿತು. 2011 ರ ಐಸಿಸಿ ವಿಶ್ವಕಪ್ ನ ಹಲವು ಪಂದ್ಯಗಳು  ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ರಿಂದ ಮುಂಬೈ ಬೋರಬೈನ್ ಸ್ಟೇಡಿಯಂ ಅನ್ನು ತನ್ನ ತವರು ಮೈದಾನ ವನ್ನಾಗಿ ಮಾಡಿಕೊಂಡಿತ್ತು. ಈ ಪಂದ್ಯಾವಳಿಯಲ್ಲಿ ಮುಂಬೈ ಒಟ್ಟು ಹತ್ತು ಪಂದ್ಯಗಳಲ್ಲಿ ಗೆಲುವು ಸಾಧಿಸಿ 20 ಪಾಯಿಂಟ್ ಗಳನ್ನು ಪಡೆದು ಅಗ್ರ ಕ್ರಮಾಂಕ ದೊಂದಿಗೆ ಸೆಮಿಫೈನಲ್ ಗೆ ಪ್ರವೇಶ ಪಡೆಯಿತ್ತು. ಇದು ಸಚಿನ್ ತೆಂಡುಲ್ಕರ್, ಹರಭಜನ್ ಸಿಂಗ್, ಅಂಬಾಟಿ ರಾಯುಡು, ಮಲಿಂಗಾ, ಸೌರಭ ತಿವಾರಿ, ಇದರ ಪರಿಶ್ರಮದಿಂದ ಸಾಧ್ಯವಾಯಿತ್ತು. ಸೆಮಿಫೈನಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 35 ರನ್ನುಗಳಿಂದ ಸೋಲಿಸುವುದು ಮುಖಾಂತರ ಫೈನಲ್ ಪ್ರವೇಶಿಸಿತ್ತು.ಪೈನಲ್ ನಲ್ಲಿ  ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 25 ರನ್ ಗಳ ಅಂತರದಿಂದ ಸೋತ್ತು ರನ್ ಅಪ್ಪ ಸ್ಥಾನ ಪಡೆದುಕೊಂಡಿತ್ತು. ಈ ಪಂದ್ಯದಲ್ಲಿ ಹರಭಜನ್ ಸಿಂಗ್ ಮತ್ತು ಅಭಿಷೇಕ್ ನಾಯರ್ ಅವರನ್ನು 3 ಮತ್ತು 4 ನೇ ಸ್ಥಾನದಲ್ಲಿ ಆಡಲು ಕಳುಹಿಸಿ ಡುಮಿನಿ, ಮತ್ತು ಕೀರನ್ ಪೋಲಾರ್ಡ್ ಅವರನ್ನು ಕ್ರಮವಾಗಿ 7 ಮತ್ತು 8 ನೇ ಸ್ಥಾನದಲ್ಲಿ ಬ್ಯಾಟಿಂಗ್ ಕಳುಹಿಸಿದಕ್ಕೆ ಮುಂಬೈ ಇಂಡಿಯನ್ಸ್ ತುಂಬಾ ಟೀಕೆಗೆ ಗುರಿಯಾಯಿತ್ತು. ಸಚಿನ್ ತೆಂಡೂಲ್ಕರ್ 618 ರನ್ ಗಳಿಸಿ ಪಂದ್ಯಾವಳಿಯ ಅತ್ಯಧಿಕ ರನ್ ಇವರದ್ದೆ ಆಗಿದ್ದರಿಂದ ಆರೆಂಜ್ ಕ್ಯಾಂಪ್ ಪ್ರಶಸ್ತಿ ಗೆ ಭಾಜನರಾದರು. ಇವರ ಸರಾಸರಿ 47.53  ಸ್ಟ್ರೈಕರೇಟ್ 132.6 ಆಗಿತ್ತು. ಆದ್ದರಿಂದ ಮುಂಬೈ ಇಂಡಿಯನ್ಸ್ ತಂಡ 2010 ರ ಚಾಂಪಿಯನ್ಸ್ ಲೀಗ್ ಟಿ20  ಗೆ ಪ್ರವೇಶ ಪಡೆದರು. 2010 ರೈ ಚಾಂಪಿಯನ್ಸ್ ಲೀಗ್ ಟಿ20 ಯಲ್ಲಿ ಮುಂಬೈ ಇಂಡಿಯನ್ಸ್ ಒಟ್ಟು ನಾಲ್ಕು ಪಂದ್ಯಗಳಲ್ಲಿ ಎರಡು ಸೋಲು ಎರಡು ಪಂದ್ಯಗಳಲ್ಲಿ ಗೆಲವು ಸಾಧಿಸಿ ಪಂದ್ಯಾವಳಿಯಿಂದ ಹೊರಬಿದಿತ್ತು‌.

2011


2011 ರಲ್ಲಿ ಐ.ಪಿ.ಎಲ್ ಗೆ ಎರಡು ಹೊಸ ತಂಡಗಳು ಸೇರ್ಪಡೆಯಾದವು.ಐ.ಪಿ.ಎಲ್ ನಾ ಸಮಿತಿ ಹೊಸ ನಿಯಮ ರೊಪಿಸಿತ್ತು ಅದ್ದೆಂದರೆ ಒಂದು ತಂಡ  ನಾಲ್ಕು ಆಟಗಾರರನ್ನು ಹರಾಜಿಗೆ ಮುನ್ನ ಖಾಯ್ದಿರಿಸಿಕೊಳ್ಳಬಹುದು. ಮುಂಬೈ ಇಂಡಿಯನ್ಸ್ ತಂಡ ಸಚಿನ್ ತೆಂಡೂಲ್ಕರ್, ಹರಭಜನ್ ಸಿಂಗ್,[೧], ಪೋರ್ಲಾಡ್ ಅವರನ್ನು $4.5  ಮಿಲಿಯನ್ ನೀಡಿ ಉಳಿಸಿಕೊಂಡಿತ್ತು. ಈ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್  ರೋಹಿತ್ ಶರ್ಮಾ ಅವರನ್ನು 2 ಮಿಲಿಯನ್ ಕೊಟ್ಟು ಖರೀದಿಸಿತ್ತು. ಆಸ್ಟ್ರೇಲಿಯಾ ದ ಆಲಗ್ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಮತ್ತು ವೇಗದ ಬೌಲರ್ ಮುನಾಫ್ ಪಟೇಲ್  ಅವರನ್ನು ಖರೀದಿಸಿತ್ತು. ಈ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಒಟ್ಟು 14 ಪಂದ್ಯಗಳಲ್ಲಿ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಎಲಿಮಿನೇಟರ್ ಹಂತವನ್ನು ತಲುಪಿತ್ತು. ಎಲಿಮಿನೇಟರ್ 2 ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 147 ರನ್ ಗಳಿಗೆ ನಿಯಂತ್ರಿಸಿತ್ತು  ಮುಂಬೈ ಇಂಡಿಯನ್ಸ್ 6 ವಿಕೆಟ್ ಕಳೆದುಕೊಂಡು  ಇನ್ನೊ ನಾಲ್ಕು ಎಸೆತ ಬಾಕಿ ಇರುವಂತೆ ಯಶಸ್ವಿಯಾಗಿ ವಿಜಯಿಯಾಗಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ದ ಪಂದ್ಯಕ್ಕೆ ಅರ್ಹತೆ ಪಡೆಯಿತ್ತು. ಈ ಪಂದ್ಯದಲ್ಲಿ ಮುನಾಫ್ ಪಟೇಲ್ 27/3 ಗಮರ್ನಾಹ ಬೌಲಿಂಗ್ ಸಾಧನೆ ಮುಖಾಂತರ ಪಂದ್ಯಶ್ರೇಷ್ಠ ಪ್ರಶಸ್ತಿ ಗೆ ಭಾಜನರಾದರು.ನಂತರ  ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ  186 ರನ್ ಗಳ ಸವಾಲಿಗೆ ಉತ್ತರವಾಗಿ ಕೇವಲ 142 ರನ್ ಗಳಿಸಲಷ್ಟೆ ಸಾಧ್ಯವಾಗಿ ಸೋತು  ಮೂರನೆ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿತ್ತು. ಈ ಸೀಸನ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಅಗ್ರ ಸ್ಥಾನವನ್ನು ಲಸಿತ್ ಮಾಲಿಂಗ, 28 ಮುನಾಫ್ ಪಟೇಲ್ 22  ವಿಕೆಟ್ ಪಡೆದರು.


2011 ರ ಚಾಂಪಿಯನ್ಸ್ ಲೀಗ್ ಟಿ20 ಗೆ  ಮುಂಬೈ ಇಂಡಿಯನ್ಸ್ ಅರ್ಹತೆ ಪಡೆಯಿತ್ತು. ಈ ಬಾರಿಯ ಚಾಂಪಿಯನ್ಸ್ ಲೀಗ್  ಟಿ 20  ಭಾರತದಲ್ಲಿ ನಡೆದಿತ್ತು. ಇಲ್ಲಿ ಮುಂಬೈ ಇಂಡಿಯನ್ಸ್ ತಂಡ ತನ್ನ ಆರು ಭಾರತದ ಆಟಗಾರರು ಗಾಯದ ಸಮಸ್ಯೆಯಿಂದಾಗಿ ಪಂದ್ಯಾವಳಿಯಿಂದ ಹೊರಬಿದ್ದಿದರಿಂದ ಮತ್ತು  ಇಬ್ಬರು ಆಟಗಾರರು ವೈದ್ಯಕೀಯ ಪರೀಕ್ಷೆ ಯಲ್ಲಿ ವಿಫಲರಾಗಿದ್ದರಿಂದ ಮುಂಬೈ ಇಂಡಿಯನ್ಸ್ ಸಂಕಷ್ಟಕ್ಕೆ ಒಳಗಾಯಿತ್ತು. 14 ಆಟಗಾರರ ತಂಡದ ಪಟ್ಟಿಯಲ್ಲಿ ಕೇವಲ ಆರು ಭಾರತದ ಆಟಗಾರರಿದ್ದರು. ಆದರೆ ನಿಯಮದ ಪ್ರಕಾರ  ಆಡುವ 11 ಮಂದಿಯಲ್ಲಿ ಏಳು ಭಾರತೀಯ ಆಟಗಾರರು ಮತ್ತು ನಾಲ್ಕು  ಆಟಗಾರರು ಹೊರದೇಶದ(ಓವರ್ಸೀಸ್) ಆಟಗಾರರು ಹೊಂದಿರಬೇಕು. ಆದರೆ ಮುಂಬೈ ತಂಡದಲ್ಲಿ ಕೇವಲ ಆರು ಭಾರತದ ಆಟಗಾರರು ಉಳಿದುಕೊಂಡಿದ್ದರಿಂದ ಐದನೆ ಹೊರದೇಶದ( ಓವರ್ಸೀಸ್) ಆಟಗಾರನಿಗೆ ಆಡಲು ಅನುಮತಿ ನೀಡಲಾಯಿತ್ತು. ಸಚಿನ್ ತೆಂಡೂಲ್ಕರ್  ಅನುಪಸ್ಥಿತಿಯಲ್ಲಿ ಹರಭಜನ್ ಸಿಂಗ್ ನಾಯಕ ನಾ ಸ್ಥಾನ ವನ್ನು ತುಂಬಿದ್ದರು.   A ಗುಂಪಿನಲ್ಲಿ ಮುಂಬೈ ಇಂಡಿಯನ್ಸ್, ನ್ಯೊವ ಸೌತ್ ವೆಲ್ಸ್ ಬ್ಲೂ, ಟ್ರೇನಿಡಾಡ್& ಟೊಬ್ಯೂಗೊ, ಕೇಪ್  ಕೋಬ್ರಾಸ್, ಚೆನ್ನೈ ಸೂಪರ್ ಕಿಂಗ್ಸ್ , ತಂಡಗಳು ಇದ್ದವು. ಈ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ಎರಡು ಪಂದ್ಯಗಳಲ್ಲಿ ಗೆಲುವು ಒಂದು ಪಂದ್ಯದಲ್ಲಿ ಸೋಲು ಮತ್ತು ಇನ್ನೊಂದು ಫಲಿತಾಂಶ ರಹಿತ ಪಂದ್ಯದಿಂದ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನ ಪಡೆಯುವುದು ಮುಖಾಂತರ ಸೆಮಿಫೈನಲ್ ಗೆ ಲಗ್ಗೆ ಇಟ್ಟಿತ್ತು. ಸೊರ್ಯಕುಮಾರ್ ಯಾದವ್  ಗಾಯದಿಂದ ಗುಣಮುಖ ರಾಗಿ ತಂಡವನ್ನು ಸೇರಿಕೊಂಡರು. ಸೆಮಿಫೈನಲ್ ಪಂದ್ಯ ಚೆನ್ನೈ ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸಾಮರಸೆಟ್ ಕಂಟ್ರಿ ಕ್ರಿಕೆಟ್ ಕ್ಲಬ್ ವಿರುದ್ಧ ನಡೆಯೀತ್ತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್  160 ರನ್ ಗಳ  ಸವಾಲಿನ ಮೊತ್ತವನ್ನು ಸಾಮರಸೆಟ ತಂಡದ ಮುಂದಿಟ್ಟಿತ್ತು  ಇದನ್ನು ಬೆನ್ನು ಹತ್ತಿದ ಸಾಮರಸೆಟ ಕಂಟ್ರಿ ಕ್ರಿಕೆಟ್ ಕ್ಲಬ್ ತಂಡ ಮಲಿಂಗಾ ದಾಳಿಗೆ ತತ್ತರಿಸಿ 150 ರನ್ ಗಳಿಸಿ ಸೋಲೂಪ್ಪಿಕೊಂಡಿತ್ತು. ಈ ಮೂಲಕ ಮುಂಬೈ ಇಂಡಿಯನ್ಸ್ 10 ರನ್ ಗಳ ಅಂತರದಿಂದ ವಿಜಯಿಯಾಗಿ ಫೈನಲ್ ಗೆ ಲಗ್ಗೆ ಇಟ್ಟಿತ್ತು. ಈ ಪಂದ್ಯದಲ್ಲಿ ಮಲಿಂಗಾ ನಾಲ್ಕು ವಿಕೆಟ್ ಪಡೆದರು. ಫೈನಲ್ ಪಂದ್ಯ ಕೊಡಾ ಚೆನ್ನೈ ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಡೆಯಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರಗಳಲ್ಲಿ 139 ರನ್ ಗಳಿಸಲಷ್ಟೆ ಸಾಧ್ಯವಾಯಿತ್ತು. ಇದಕ್ಕೆ ಉತ್ತರವಾಗಿ ಆರ್.ಸಿ.ಬಿ  ಆರಂಭ ದಿಂದಲೆ ಆಘಾತ ಅನುಭವಿಸಿತು. ಹರಭಜನ್ ಸಿಂಗ್ ಆರ್.ಸಿ.ಬಿ ಯ ಪ್ರಮುಖ ಬ್ಯಾಟ್ಸಮನ್ ಗಳಾದ ಕ್ರಿಸ್ ಗೇಲ್ , ಮತ್ತು ವಿರಾಟ್ ಕೊಹ್ಲಿ ವಿಕೆಟ್ ಪಡೆದರು. ಆದ್ದರಿಂದಾಗಿ ಆರ್.ಸಿ.ಬಿ ಬ್ಯಾಟಿಂಗ್ ಬಲ ಕುಸಿಯಿತ್ತು . ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 108 ರನ್ ಗಳಿಸಿ ತನ್ನ ಹೋರಾಟ ಅಂತ್ಯಗೊಳಿಸಿತ್ತು. ಮುಂಬೈ ಇಂಡಿಯನ್ಸ್ ಮೊದಲ ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು.ಹರಭಜನ್ ಸಿಂಗ್ ಪಂದ್ಯ ಶ್ರೇಷ್ಟ ಪ್ರಶಸ್ತಿ ಗೆ ಭಾಜನರಾದರೆ ಮಲಿಂಗಾ ಸರಣಿ ಶ್ರೇಷ್ಟ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಆಸ್ಟ್ರೇಲಿಯಾ ದ ಬ್ಯಾಟ್ಸಮನ್ ಆಂಡ್ರೋ ಸೈಮಂಡ್ಸ್  ಎಲ್ಲಾ ರೀತಿಯ ಕ್ರಿಕೆಟ್ ನಿಂದ 2012 ರಷ್ಟೊತ್ತಿಗೆ ವಿದಾಯ ಘೋಷಿಸಿ ನಿವೃತ್ತ ರಾದ್ದರು.

2012 2012 ರ ಐ.ಪಿ.ಎಲ್ ನಲ್ಲಿ ಮುಂಬೈ ಇಂಡಿಯನ್ಸ್ ದಿನೇಶ್ ಕಾರ್ತಿಕ್, ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ನಿಂದ ಪ್ರಗ್ಯಾನ್ ಓಜಾ ಅವರನ್ನು  ಡೆಕ್ಕನ್ ಚಾರ್ಜರ್ಸ್ ಅವರಿಂದ ಖರೀದಿಸಿತ್ತು. ಮತ್ತು  ಐ.ಪಿ.ಎಲ್ ಹರಾಜಿನಲ್ಲಿ ಆರ್.ಪಿ ಸಿಂಗ್, ಥಿಸೇರಾ ಪರೆರಾ, ಮಿಚೆಲ್ ಜಾನ್ಸನ್ ಅವರನ್ನು ಖರಿದಿಸಿತ್ತು. ಸಚಿನ್ ತೆಂಡೂಲ್ಕರ್ ಗಾಯದ ಸಮಸ್ಯೆಯಿಂದಾಗಿ ಕೆಲ ಪಂದ್ಯಗಳಲ್ಲಿ ಹರಭಜನ್ ಸಿಂಗ್ ನಾಯಕ ರಾದರು. ಈ ಪಂದ್ಯಾವಳಿಯ ಅರ್ಧದಷ್ಟು ಸಮಯದಲ್ಲಿ ಮುಂಬೈ ಇಂಡಿಯನ್ಸ್   ನಾಲ್ಕು ಪಂದ್ಯಗಳಲ್ಲಿ ಗೆಲುವು ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿತ್ತು . ಇದರಲ್ಲಿ ತವರಿನ ಅಂಗಳದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಸೋಲು ಕಂಡಿತು. ಸಚಿನ್ ತೆಂಡೂಲ್ಕರ್ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ಆರಂಭಿಕ ಆಟಗಾರ ರಲ್ಲಿ ಹೊಂದಾಣಿಕೆ ಆಗುತ್ತಿರಲಿಲ್ಲ.ಸಚಿನ್ ಗಾಯದಿಂದಾಗಿ ನಾಲ್ಕು ಪಂದ್ಯಗಳಿಂದ ಹೊರಗುಳಿಯಬೇಕಾಯಿತ್ತು.ನಂತರ ವೇಗಿ ಮಿಚೆಲ್ ಜಾನ್ಸನ್ ಕೊಡಾ ಗಾಯದ ಸಮಸ್ಯೆಯಿಂದಾಗಿ ಪಂದ್ಯಾವಳಿಯಿಂದ ಹೊರಬಿದ್ದಿದರಿಂದ ಅವರು ಬದಲಿಗೆ ಡ್ವೇನ್ ಸ್ಮಿತ್ ಅವರನ್ನು ಬದಲಿ ಆಟಗಾರ ರನ್ನಾಗಿ ಸೇರಿಸಿಕೊಳ್ಳಲಾಯಿತ್ತು. ನಂತರ ಮುಂಬೈ ಇಂಡಿಯನ್ಸ್ ಉಳಿದ ಎಂಟು ಪಂದ್ಯಗಳಲ್ಲಿ ಆರು ಪಂದ್ಯಗಳಲ್ಲಿ ಗೆದ್ದು ಒಟ್ಟು 16 ಪಂದ್ಯಗಳಲ್ಲಿ   20 ಅಂಕ ಪಡೆದು ಕೊಂಡು ಮೂರನೆ ಸ್ಥಾನ ದೊಂದಿಗೆ ಎಲಿಮಿನೇಟ್ ರ್ ಹಂತವನ್ನು ತಲುಪಿತ್ತು. ಎಲಿಮಿನೇಟ್ ರ್ ನಲ್ಲಿ ನಾಲ್ಕನೆ ಸ್ಥಾನದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೆಂಗಳೂರು ನಲ್ಲಿ ಪಂದ್ಯ ನಡೆಯಿತ್ತು. ಟಾಸ್ ಗೆದ್ದು ಮುಂಬೈ ಇಂಡಿಯನ್ಸ್  ಕ್ಷೇತ್ರರಕ್ಷಣೆ ಯನ್ನು ಆರಿಸಿಕೊಂಡಿತ್ತು. ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಲ್ಲಿ ಆಘಾತ ಅನುಭವಿಸಿದ್ದರೊ ಅಂತಿಮವಾಗಿ 20 ಓವರ್ ಗಳಲ್ಲಿ 187/5 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಇದಕ್ಕುತರವಾಗಿ ಮುಂಬೈ ಇಂಡಿಯನ್ಸ್ ತಂಡ ಆರಂಭದ ಹಂತದಲ್ಲಿ ಚೆನ್ನಾಗಿ ಯೆ ಆಡಿತ್ತು ನಂತರ ಒತ್ತಡಕ್ಕೆ ಸಿಲುಕಿ ವಿಕೆಟ್ ಗಳನ್ನು  ಕಳೆದುಕೊಳ್ಳುತ್ತಾ ಸಾಗಿ 149/9 ರನ್ ಗಳಿಸಿ ಸೋಲು ಕಂಡಿತು.  ಈ ಮೂಲಕ 2012 ರಲ್ಲಿ ದಕ್ಷಿಣ ಆಫ್ರಿಕಾ ದಲ್ಲಿ ನಡೆಯುವ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಾವಳಿ ಗೆ ಮೂರು ಐ.ಪಿ.ಎಲ್ ತಂಡಗಳಲ್ಲಿ ಮುಂಬೈ ಇಂಡಿಯನ್ಸ್ ಅರ್ಹತೆ ಪಡೆಯಿತ್ತು. ಈ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ B ಗುಂಪಿನಲ್ಲಿ ಸೇರ್ಪಡೆ ಆಗಿತ್ತು. ಮೂರು ಪಂದ್ಯಗಳಲ್ಲಿ ಸೋಲು ಒಂದು ಫಲಿತಾಂಶ ರಹಿತ ಪಂದ್ಯದಿಂದ ಮುಂಬೈ ಇಂಡಿಯನ್ಸ್ ಪಂದ್ಯಾವಳಿಯಿಂದ ಹೊರಬಿದಿತ್ತು‌.

2013 ಡಬಲ್ ಧಮಾಕಾ ಐ.ಪಿ.ಎಲ್, ಚಾಂಪಿಯನ್ಸ್ ಲಿಗ್  ಪಟ್ಟ ಮುಂಬೈ ಗೆ

2013 ರಲ್ಲಿ ಅನಿಲ್ ಕುಂಬ್ಳೆ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿ ನೇಮಕ ಆದ್ದರು. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡರು.ಇವರಿಗೆ ಅನಿಲ್ ಕುಂಬ್ಳೆ,ಜಾಂಟಿ ರೋಡ್ಸ್, ಸಚಿನ್ ತೆಂಡೂಲ್ಕರ್, ಅವರು ಸಲಹೆಗಳು ಸಿಗುತಿದ್ದರಿಂದ ಮುಂಬೈ ಇಂಡಿಯನ್ಸ್ ಹಲವು ಗೆಲುವನ್ನು ಈ ವೇಳೆಯಲ್ಲಿ ತನ್ನದಾಗಿಸಿಕೊಂಡಿತ್ತು.

2013 ದಿಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ಒಂದು ರನ್ ಗಳ ಅಂತರದಿಂದ ರೋಚಕ ಸೋಲುಂಡಿತ್ತು ಇದಕ್ಕೆ ಕಾರಣ ಆ ಪಂದ್ಯದಲ್ಲಿ ಬೆಂಗಳೂರು ನೀರು ಕ್ರಿಸ್ ಗೇಲ್ ಮತ್ತು ವಿನಯ್ ಕುಮಾರ್ ಅವರ ಆಟ.

ಎರಡನೆ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಬ್ಯಾಟ್ಸ್ ಮನ್ ಗಳು ಬೇಗನೆ ನಿರ್ಗಮಿಸಿದ್ದರೊ ಸಹ ದಿನೇಶ್ ಕಾರ್ತಿಕ್, ಕೀರೂನ್ ಪೊಲಾರ್ಡ್, ಅವರು ಆಟದಿಂದ ಒಂದು ಡಿಪೆಂಡೆಬಲ್ ಮೊತ್ತವನ್ನು ಕಲೆ ಹಾಕಿತ್ತು .ನಂತರ ಚೆನ್ನೈ ತಂಡದ ಆರಂಭಿಕ ಮುರುಳಿ ವಿಜಯ್ ಅವರು ಬೇಗನೆ ಔಟ್ ಆದ್ದರೊ ಸಹ ಚೆನ್ನೈ ಸೂಪರ್ ಕಿಂಗ್ಸ್ ಹೋರಾಟ ಮುಂದುವರಿಸಿ ಕೊನೆಯಲ್ಲಿ ಅಂತಿಮ ಓವರ್ ನಲ್ಲಿ ಗೆಲಲು 16 ಬೇಕಾಗಿದ್ದವು. ಎಮ್.ಎಸ್ ದೋನಿ ಬ್ಯಾಟಿಂಗ್ ನಲ್ಲಿ ಇದ್ದರು ಆದರೆ ಮುನಾಫ್ ಪಟೇಲ್ ಮೊದಲ ಎಸೆತದಲ್ಲಿ ಯಾಕೆ ದೋನಿ ಅವರನ್ನು ಔಟ್ ಮಾಡುದ್ರೆ ಮುಖಾಂತರ ಮುಂಬೈ ಇಂಡಿಯನ್ಸ್ ಗೆ 9 ರನ್ ಗಳ ಗೆಲುವನ್ನು ತಂದುಕೊಟ್ಟರು.

ಮುಂದಿನ ಪಂದ್ಯ ಡೆಲ್ಲಿ ಡೆರ್ ಡೇವಿಲ್ಸ್ ವಿರುದ್ಧ ನಡೆಯುತಿತ್ತು ಈ ಪಂದ್ಯದಲ್ಲಿ ಆರಂಭಿಕ ರಾದ ರಿಕಿ ಪಾಂಟಿಂಗ್, ಸಚಿನ್ ತೆಂಡೂಲ್ಕರ್, ಬೇಗನೆ ನಿರ್ಮಿಸಿದ್ದರೂ ಸಹ ದಿನೇಶ್ ಕಾರ್ತಿಕ್, ಮತ್ತು ರೋಹಿತ್ ಶರ್ಮಾ ತಂಡವನ್ನು ಆಧರಿಸಿ ತಂಡದ ಮೊತ್ತವನ್ನು 209/5 ಗೆ ಹೆಚ್ಚಿಸಿದ್ದರು. ಒಂದು ಸಮಯದಲ್ಲಿ ಡೇವಿಡ್ ವಾರ್ನರ್ ಮುಂಬೈ ಇಂಡಿಯನ್ಸ್ ಗೆಲುವನ್ನು ಕಸಿದುಕೊಂಡಿದೆ ಆಕ್ರಮಣಕಾರಿಯಾಗಿ ಆಟವಾಡುತ್ತಿದ್ದರು, ಆದರೆ ಮುಂಬೈ ಇಂಡಿಯನ್ಸ್ ವೇಗಿಗಳು ಡೇವಿಡ್ ವಾರ್ನರ್ ವಿಕೆಟ್ ಪಡೆಯುದರ ಮುಖಾಂತರ  44 ರನ್ ಗಳ ಅಂತರದಿಂದ ವಿಜಯಿಯಾಗಿ ದ್ದರು.

ಮುಂದಿನ ಪಂದ್ಯದಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ಸಚಿನ್ ತೆಂಡೂಲ್ಕರ್ ಮತ್ತು ರಿಕಿ ಪಾಂಟಿಂಗ್ 54 ರನ್ ಗಳ ಆರಂಭಿಕ ಜೊತೆಯಾಟ ನಡೆಸಿದ್ದರು ರೋಹಿತ್ ಶರ್ಮಾ ಅದನ್ನು ಅನುಸರಿಸಿದ್ದರು ಅಂತಿಮವಾಗಿ ಮುಂಬೈ ಇಂಡಿಯನ್ಸ್ 183/3 ಮೊತ್ತ ಕಲೆ ಹಾಕಿ ಕೊನೆಯಲ್ಲಿ 41 ರನ್ ಗಳ ಅಂತರದಿಂದ ಜಯ ಸಾಧಿಸಿತ್ತು.

ರಿಕಿ ಪಾಂಟಿಂಗ್  ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿ ದ್ದರು. ರೋಹಿತ್ ಶರ್ಮಾ ಒಳ್ಳೆಯ ಬ್ಯಾಟಿಂಗ್ ಲಯದಲ್ಲಿದರು. ಮತ್ತು ಅವರು ನಾಯಕತ್ವ ದಲ್ಲಿ ಮುಂಬೈ ಇಂಡಿಯನ್ಸ್ ಹಲವು ಗೆಲುವು ಪಡೆಯಿತ್ತು. ಹಾಗಾಗಿ ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕ ರನ್ನಾಗಿ ಆಯ್ಕೆ ಮಾಡಲಾಯಿತ್ತು. ಮತ್ತು ಅವರು ನಾಯಕತ್ವ ದಿಲ್ಲಿ ಮೊದಲ ಐಪಿಎಲ್ ಪ್ರಶಸ್ತಿ ಯನ್ನು ಸಹ ಮುಂಬೈ ಇಂಡಿಯನ್ಸ್ ತನ್ನ ಮುಡಿಗೇರಿಸಿಕೊಂಡಿತ್ತು.

ಈ ಗೆಲುವಿನ ನಾಗಾಲೋಟ ನನ್ನು ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಾವಳಿ ಎಲ್ಲಿಯೋ ಸಹ ಮುಂದುವರಿಸಿತ್ತು. ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಾವಳಿ ಆರಂಭ ಸ್ವಲ್ಪ ನಿಧಾನವಾಗಿತ್ತು. ಆದ್ದರಿಂದ ಲೀಗ್ ನಾ ಕೊನೆಯ ಪಂದ್ಯ ಪರ್ತ ಸ್ಕೋರ್ಚಸ್ ವಿರುದ್ಧ ಬಾರಿ ಅಂತರದಿಂದ ಗೆಲುವು ಸಾಧಿಸಬೇಕಾಗಿತ್ತು ಅದು ಸಹ ನಾಥನ್ ಕೌಂಟರ್ ನೈಲ್, ಡ್ವೇನ್ ಸ್ಮಿತ್ ಮತ್ತು ರೋಹಿತ್ ಶರ್ಮಾ ಅವರು ಸಹಾಯದಿಂದ ಸಾಧ್ಯವಾಯಿತ್ತು.ಪೈನಲ್ ಪಂದ್ಯದಲ್ಲಿ ಗ್ಲೇನ್ ಮಾಕ್ಸವೇಲ್  ಅವರ  14 ಎಸೆತಗಳಲ್ಲಿ 37 ರನ್ ಗಳಿಕೆಯಿಂದ ಮುಂಬೈ ಇಂಡಿಯನ್ಸ್ 202/6 ರನ್ ಗಳಿಸಿ

33 ರನ್ ಗಳ ಅಂತರದಿಂದ ಗೆಲುವು ಪಡೆದು ಚಾಂಪಿಯನ್ ಆಯಿತ್ತು.

2014

2014 ರಲ್ಲಿ ಮುಂಬೈ ಇಂಡಿಯನ್ಸ್ ಅದೃಷ್ಟ ಸರಿ ಇರಲಿಲ್ಲ. ಯು.ಎ.ಇ ನಲ್ಲಿ ನಡೆದ ಐದು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್  ಸೋಲು ಅನುಭವಿಸಿತ್ತು. ಅವುಗಳೆಂದರೆ  ಕೋಲ್ಕತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್,ಡೆಲ್ಲಿ ಡೇರ್ ಡೇವಿಲ್ಸ್, ಸನ್ ರೈಸರ್ಸ ಹೈದರಾಬಾದ್,   

ನಂತರ ಭಾರತದಲ್ಲಿ ನಡೆದ ಪಂದ್ಯದಲ್ಲಿ  ಆ ವೇಳೆಯಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ  ಕಿಂಗ್ಸ್ ಇಲೆವೆನ್ ಪಂಜಾಬ್ ಅನ್ನು ಸೋಲಿಸುವುದು ಮುಖಾಂತರ ಗೆಲುವಿನ ಖಾತೆ ತೆರೆಯಿತ್ತು. ಇದಾದ ನಂತರ ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ಧ ಗೆದ್ದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿತ್ತು. ಮತ್ತೆ ಸನ್ ರೈಸರ್ಸ ಹೈದರಾಬಾದ್ ವಿರುದ್ಧ ಗೆದ್ದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋಲು ಕಂಡಿತು. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋಲಿನ ನಂತರ  ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಡೇರ್ ಡೇವಿಲ್ಸ್ ವಿರುದ್ಧ  ಗೆಲುವು ಸಾಧಿಸಿತ್ತು.ಇನ್ನೊ ಒಂದು ಪಂದ್ಯ ಬಾಕಿ ಇದು ಮುಂಬೈ ಇಂಡಿಯನ್ಸ್ ಆರು ಪಂದ್ಯಗಳಲ್ಲಿ ಗೆಲುವು ಮುಖಾಂತರ 12 ಅಂಕ ಗಳಿಸಿ ಐದನೆ ಸ್ಥಾನದಲ್ಲಿತ್ತು. ಅದೇ ರೀತಿ ರಾಜಸ್ಥಾನ ರಾಯಲ್ಸ್ ಏಳು ಪಂದ್ಯಗಳಲ್ಲಿ ಗೆದ್ದು 14 ಅಂಕ ಗಳಿಸಿತ್ತು. ಆದರೆ ಈ ಐ.ಪಿಎಲ್ ನಾ ಅಸಲಿ ರೋಚಕತೆ ಇವೆರಡು ತಂಡಗಳ ಪಂದ್ಯದ ಮೇಲೆ ಇತ್ತು ಏಕೆಂದರೆ ಒಂದು ವೇಳೆ ರಾಜಸ್ಥಾನ ರಾಯಲ್ಸ್ ಆ ಪಂದ್ಯ ಗೆದ್ದರೆ ಪ್ಲೇ ಆಪ್ ಹಂತವನ್ನು ಆರಾಮವಾಗಿ ತಲುಪಬಹುದಿತ್ತು.ಆದರೆ ಮುಂಬೈ ಇಂಡಿಯನ್ಸ್ ತಂಡ  ಪ್ಲೇ ಆಫ್ ಹಂತ ತಲುಪಬೇಕಾದರೆ  ಮುಂಬೈ ಇಂಡಿಯನ್ಸ್ ರಾಜಸ್ಥಾನ ರಾಯಲ್ಸ್ ತಂಡವನ್ನು ಬಾರಿ ಅಂತರದಿಂದ ಸೋಲಿಸಬೇಕಾಗಿತ್ತು. ಬಹುಶಃ ಅದೃಷ್ಟ ಮುಂಬೈ ಇಂಡಿಯನ್ಸ್ ಕಡೆಗೆ ಇದ್ದಿರಬೇಕು ಅಂತಾ ಕಾಣುತ್ತೆ ಆ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ ಇಪ್ಪತ್ತು ಓವರ್ ನಲ್ಲಿ 190 ರನ್ ಗಳ ಬೃಹತ್ ಮೊತ್ತ ಕಲೆ ಹಾಕ್ಕಿತ್ತು ಇದನ್ನು ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್ ಗೆ ಪ್ರವೇಶಿಸಬೇಕಾದರೆ 14.3 ಓವರ್ ನಲ್ಲಿ ಯೆ ಕಲೆ ಹಾಕಬೇಕಿತ್ತು ಆದರೆ ಇದು ಅಸಾಧ್ಯವಾಗಿತ್ತು. ಆದರೊ ಹೆದರಿದ ಮುಂಬೈ ಇಂಡಿಯನ್ಸ್ 14.3 ಓವರ್ ಗಳಲ್ಲಿ ಆ ಮೊತ್ತಕ್ಕೆ ಸಮನಾಗಿ ರನ್ ಕಲೆಹಾಕಿ ಟೈ ಮಾಡಿಕೊಂಡಿತು. ಇದ್ದರಿಂದಾಗಿ ಪ್ಲೇ ಆಫ್ ಪ್ರವೇಶಿಸಿ ಸೋಲು ಇನ್ನೊಂದು ದಾರಿ ಅದರ ಮುಂದಿನ ಎಸೆತದಲ್ಲಿ (14.4) ಒಂದು ಬೌಂಡರಿ ಬಾರಿಸಬೇಕಿತ್ತು. ಆದಿತ್ಯಾ ತಾರೆ ಜೇಮ್ಸ್ ಪೌಲ್ಕನರ್ ಎಸೆದ ಆ ಪೂಲಟೂಸ್ ಎಸೆತವನ್ನು ಸಿಕ್ಸರ್ ಗೆ ಅಟ್ಟುದರ ಮುಖಾಂತರ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಹಂತವನ್ನು ಪ್ರವೇಶಿ‌ಸಿಸಿತ್ತು.  ರಾಜಸ್ಥಾನ ರಾಯಲ್ಸ್  ಬಾರಿ ಅಂತರದಿಂದ ಸೋತು ಐದನೆಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಮುಂದೆ ಮುಂಬೈ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಸೋಲುದರ ಮುಖಾಂತರ ಮುಂಬೈ ಇಂಡಿಯನ್ಸ್ ನ 2014 ರೈ ಹೋರಾಟ ಅಂತ್ಯ ಕಂಡಿತ್ತು.

ಚಾಂಪಿಯನ್ಸ್ ಲೀಗ್ ಟಿ20 ಗೆ ಪ್ರವೇಶ ಪಡೆದು ಮೊದಲು ಲಾಹೋರ್ ಲಯನ್ಸ್ ವಿರುದ್ಧ ಸೋಲನುಭವಿಸಬೇಕಾಯಿತ್ತು. ಎರಡನೆ ಪಂದ್ಯದಲ್ಲಿ ಸೌತರ್ನ ಎಕ್ಸಪ್ರೇಸ್ ನೀಡಿದ 161/6 ಗುರಿಯನ್ನು 15 ಓವರ್ ಗಳಲ್ಲಿ ಯೆ ಕಲೆಹಾಕಿ ವಿಜಯಿಯಾಯಿತ್ತು. ಇನ್ನು ಮೂರನೆ ಪಂದ್ಯದಲ್ಲಿ ನೋರ್ತನ ನೈಟ್ಸ್ ತಂಡಕ್ಕೆ ಕೇವಲ 132 ರನ್ ಗಳ ಗುರಿ ಯನಷ್ಟೆ ನೀಡಲು ಸಾಧ್ಯವಾಯಿತ್ತು ಅದನ್ನು ಪೋರ್ನ್ ನೈಟ್ಸ್  ಆರು ವಿಕೆಟ್ ಕಳೆದುಕೊಂಡು ಇನ್ನೊ ಹದಿನಾರು ಎಸೆತ ಬಾಕಿ ಇರುವಂತೆ ಜಯಶಾಲಿಯಾಯಿತ್ತು. ಇದರೊಂದಿಗೆ ಮುಂಬೈ ಇಂಡಿಯನ್ಸ್ ನಾ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಾವಳಿ ಯು ಪ್ರಯಾಣ ಅಂತ್ಯ ಗೊಂಡಿತ್ತು.

2015

2015 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಫೈನಲ್ ನಲ್ಲಿ 41 ರನ್ ಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಇರಾನ್ ಪಿಂಚ್ ಮತ್ತು ಕೋರೆ ಎಂಡರಸನ್ ಗಾಯದ ಸಮಸ್ಯೆಯಿಂದ ಪಂದ್ಯಾವಳಿಯಿಂದ ಹೊರನೆಡಬೇಕಾಯಿತ್ತು. ಇದ್ದರಿಂದ ವೆಸ್ಟ್ಇಂಡೀಸ್ ಬ್ಯಾಟ್ಸ್ ಮನ್ ಲೆಂಡನ್ ಸಿಮೆನ್ಸ್ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಳ್ಳುವಂತಾಯಿತ್ತು . ಮುಂದೆ ಸಿಮೆನ್ಸ್ ಆರು ಅರ್ಧಶತಕ ಬಾರಿಸಿ 540 ರನ್ ಗಳಿಸಿ ಅಂಜಿಕ್ಯಾ ರಹಾನೆ ಯೊಡನೆ ಜಂಟಿಯಾಗಿ ಅತ್ಯಧಿಕ ರನ್ ಗಳಿಸಿದೆ ಪಟ್ಟಿಯಲಿ ಪ್ರಥಮ ಸ್ಥಾನ ಪಡೆದಿದ್ದರು.ಮತ್ತು ಮಿಚೆಲ್ ಮೆಕಲಿಂಗನ್ ಅವರು ಈ ಪಂದ್ಯಾವಳಿಯಲ್ಲಿ ಮಲಿಂಗಾ ಗೆ ಸಾಥ್ ನೀಡಿದರು. ಮುಂಬೈ ಇಂಡಿಯನ್ಸ್ ಕೊನೆಯ ಹತ್ತು ಪಂದ್ಯಗಳಲ್ಲಿ 9 ಅನ್ನು ಗೆದ್ದು ಮತ್ತು ಪ್ರಶಸ್ತಿ ಯನ್ನು ಜಯಿಸಿತ್ತು. ಇದಕ್ಕೆ ಕಾರಣ ರಾದ ಬ್ಯಾಟ್ಸ್ ಮನ್ ಗಳೆಂದರೆ ಸಿಮೆನ್ಸ್, ರೋಹಿತ್ ಶರ್ಮಾ,ಕೀರೋನ್ ಪೋಲಾರ್ಡ, ಅಂಬಾನಿ ರಾಯುಡು, ಮತ್ತು ಉತ್ತಮ ಬೌಲಿಂಗ್ ವಿಭಾಗದಲ್ಲಿ ಮಲಿಂಗಾ,ಮಿಚಲಿಂಗನ್, ಹರಭಜನ್ ಸಿಂಗ್

2016

ವಿವೋ ಐಪಿಎಲ್ 2016 ರೈ ಹರಾಜಿನಲ್ಲಿ  ಟೀಮ್ ಸೌದಿ, ಜೋಸ್ ಬಟ್ಲರ್ , ನಾತು ಸಿಂಗ್, ಜಿತೇಶ ಶರ್ಮಾ, ಕೆ.ಪಿ ಕಾಮತ್, ಕುನಾಲ್ ಪಾಂಡ್ಯ, ದೀಪಿಕಾ ಪುನಿಯಾ, ಅವರನ್ನು ಖರೀದಿಸಿತ್ತು ಈ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್  ಐದನೆ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.

2017

2017 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಆಡಿದ ಒಟ್ಟು 14 ಪಂದ್ಯಗಳಲ್ಲಿ 10 ಪಂದ್ಯಗಳಲ್ಲಿ ಜಯ ಸಾಧಿಸಿದ್ದರು. ಮತ್ತು  2017 ರೈ ಐಪಿಎಲ್ ಪ್ರಶಸ್ತಿಯನ್ನು ಸಹ ಗೆದ್ದರು.

ಫೈನಲ್ ನಲ್ಲಿ ಪುಣೆ ಸೊಪರ್ ಜೈಂಟ್ಸ್ ತಂಡದ ವಿರುದ್ಧ 1 ರನ್ ಗಳ ರೋಚಕ ಗೆಲುವಿನೊಂದಿಗೆ ಮೂರನೆ ಬಾರಿ ಐ.ಪಿ.ಎಲ್ ಪ್ರಶಸ್ತಿ ಯನ್ನು ತನ್ನದಾಗಿಸಿಕೊಂಡು ಐ.ಪಿ.ಎಲ್  ನಾ ಬಹಳ ಯಶಸ್ವಿ ತಂಡವಾಗಿ ರೊಪುಗೊಂಡಿತ್ತು

2018

2018 ರೈ ಐಪಿಎಲ್ ಮುಂಬೈ ಇಂಡಿಯನ್ಸ್ ಪಾಲಿಗೆ ಆಶಾದಾಯಕ ವಾಗಿರಲ್ಲಿಲ. ಆಡಿದ 14 ಪಂದ್ಯಗಳಲ್ಲಿ ಎಂಟು ಪಂದ್ಯಗಳಲ್ಲಿ ಸೋತು ಆರು ಪಂದ್ಯಗಳಲ್ಲಿ ಜಯ ಸಾಧಿಸಿ ಐದನೆ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿತ್ತು.

2019

2019 ರ ಐಪಿಎಲ್ ನ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್  ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯುತಿತ್ತು ಈ ಪಂದ್ಯ ಒಂದು ಸಾಧಾರಣ ಮೊತ್ತದ ಪಂದ್ಯವಾಗಿತ್ತು ಮತ್ತು ರೋಚಕತೆಯಿಂದ ಕೊಡಿತ್ತು. ಅಂತಿಮವಾಗಿ ಮುಂಬೈ ಇಂಡಿಯನ್ಸ್ 1 ರನ್ ಗಳ ಅಂತರದಿಂದ ಜಯ ಸಾಧಿಸಿ ನಾಲ್ಕನೆ ಬಾರಿಗೆ  ಪ್ರಶಸ್ತಿ ಯನ್ನು ತನ್ನದಾಗಿಸಿಕೊಂಡಿತ್ತು. ಈ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ 2 ರನ್ ಬೇಕಾಗಿತ್ತು . ಲಸಿತ್ ಮಾಲಿಂಗ ಕೊನೆಯ  ಎಸೆತದಲ್ಲಿ ವಿಕೆಟ್ ಪಡೆಯುವ ಮೂಲಕ 1 ರನ್ ಗಳ ರೋಚಕ ಗೆಲುವು ಲಭಿಸಿತ್ತು ಮತ್ತು ನಾಲ್ಕನೇ ಬಾರಿಗೆ ಐ.ಪಿ.ಎಲ್ ಪ್ರಶಸ್ತಿ ಯನ್ನು ತನ್ನದಾಗಿಸಿಕೊಂಡು ನಾಲ್ಕು ಬಾರಿ ಪ್ರಶಸ್ತಿ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತ್ತು.

ಹಾರ್ದಿಕ ಪಾಂಡ್ಯ, ಮತ್ತು ಪೊಲಾರ್ಡ್ ಎರಡೂ ಮೂರು ಬಾರಿ  ಬ್ಯಾರಿಯರ್ ಸೊಂಪಾದ ಸ್ಟ್ರೈಕರ್ ಆಫ್ ದಿನ ಮ್ಯಾಚ್ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡಿದ್ದರು. ಹಾರ್ದಿಕ ಪಾಂಡ್ಯ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 34 ಎಸೆತಗಳಲ್ಲಿ 91 ರನ್ ಬಾರಿಸಿದರು ಮತ್ತು ಇದೆ ಪಂದ್ಯದಲ್ಲಿ ಹಾರ್ದಿಕ ಪಾಂಡ್ಯ 17 ಎಸೆತಗಳಲ್ಲಿ 50 ರನ್ ಪೊರೈಸಿದರು. ಅಲ್ಜಾರಿ ಜೋಸೆಫ್ ಐಪಿಎಲ್ ಇತಿಹಾಸ ದ ಸರ್ವಶ್ರೇಷ್ಠ ಬೌಲಿಂಗ್ 6/12 ವಿಕೆಟ್ ಅನ್ನು ಸನ್ ರೈಸರ್ಸ ಹೈದರಾಬಾದ್ ವಿರುದ್ಧ ಪಡೆದು ಗಮನ ಸೆಳೆದರು.ಇದು ಅವರು ಪಾದಾರ್ಪಣೆ ಯ ಐಪಿಎಲ್ ಪಂದ್ಯ ವಾಗಿತ್ತು ಎನ್ನುವುದು ಮತ್ತೊಂದು ವಿಶೇಷ.

2020

ಇನ್ನು ಪ್ರಸ್ತುತ 2020 ರ ಐಪಿಎಲ್ ಕೋವಿಡ್ 19 ಸಂಕ್ರಮಣ ದ ಕಾರಣದಿಂದ  ಬಹಳ  ವಿಳಂಬ ವಾಗಿ ಕೊನೆಗೊ ಸಕಲ ಸಿದ್ಧತೆ ಯೊಂದಿಗೆ ಈಗ ಯು.ಎ‌.ಇ ಯಲ್ಲಿ ನಡೆಯುತ್ತಿದೆ. ಇಲ್ಲಿ ಪ್ರಮುಖ ಮೂರು ಕ್ರಿಡಾಂಗಣಗಳಲ್ಲಿ ಪಂದ್ಯಗಳು ನಡೆಯುತ್ತಿವೆ ಅವುಗಳೆಂದರೆ ಶಾರ್ಜಾ,ದುಬೈ, ಅಬುಧಾಬಿ,


2020 ರೈ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಕ್ರಿಸ್ ಲೇನ್, ನಾಥನ್ ಕೌಂಟರ್ ನೈಲ್, ಸೌರಭ ತಿವಾರಿ, ಅನೊಕೊಲ ರಾಯ್, ಮೌಸೀನ್ ಖಾನ್, ದ್ಗಿವಿಜಯ ದೇಶಮುಖ್, ಬಲವಂತ ರೈ ಸಿಂಗ್ ಅವರನ್ನು ಖರೀದಿಸಿದೆ.

ಈ ಆವೃತ್ತಿಯಲ್ಲಿ  ಟ್ರೆಂಡ್ ಬೌಲ್ಟ್, ಮತ್ತು ಜೇಮ್ಸ್ ಪಾಟಿನಸನ್, ಬೂಮ್ರಾ, ರಾಹುಲ್ ತಾಹೀರ್, ಕುನಾಲ್ ಪಾಂಡ್ಯ, ಉತ್ತಮ ನಿರ್ವಹಣೆ ತೋರುತ್ತಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ  ಕ್ಲಿಂಟನ್ ಡಿ ಕಾಕ್ , ರೋಹಿತ್ ಶರ್ಮಾ, ಸೊರ್ಯಕುಮಾರ್ ಯಾದವ್, ನೆರವಾದರೆ ಹಾರ್ದಿಕ ಪಾಂಡ್ಯ, ಕೀರೋನ್ ಪೋಲಾರ್ಡ, ಎಂದಿನಂತೆ ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ್ದಾರೆ.

ಇದುವರೆಗೆ ಆಡಿದ 9 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಆರು ಗೆಲುವು 3 ಸೋಲಿನೊಂದಿಗೆ ತನ್ನ ಪಯಣ ಮುಂದುವರಿಸಿದೆ ಇನ್ನು 5 ಪಂದ್ಯಗಳು ಬಾಕಿ ಇದು ಅವುಗಳಲ್ಲಿ ಉತ್ತಮ ನಿರ್ವಹಣೆ ತೋರಿ ಮತ್ತೊಮ್ಮೆ ಐಪಿಎಲ್ ಪ್ರಶಸ್ತಿ ಗೆಲ್ಲುವತ್ತ ಮುಂಬೈ ಇಂಡಿಯನ್ಸ್ ಚಿತ್ತ ನೆಟ್ಟಿದೆ.


ತವರಿನ ಅಂಗಳ

ಮುಂಬೈ ಇಂಡಿಯನ್ಸ್ ತನ್ನ ತವರಿನ ಪಂದ್ಯಗಳನ್ನು ಮೊದಲೆರಡು ಐಪಿಎಲ್ ಪಂದ್ಯಾವಳಿಯಲ್ಲಿ ಡಿ.ವಾಯ್ ಪಾಟೀಲ ಸ್ಟೇಡಿಯಂ ನವಿಮುಂಬೈ ಅಂಗಳದಲ್ಲಿ  ಆಡಿತ್ತು. ಮೂರನೆ ಸೀಜನ್ ನಲ್ಲಿ ತನ್ನ ಏಳು ತವರಿನ ಅಂಗಳದ ಪಂದ್ಯವನ್ನು ಬ್ರಾಬೌರನ್ ಸ್ಟೇಡಿಯಂ ನಲ್ಲಿ ಆಡಿತ್ತು. ಏಕೆಂದರೆ ವಾಂಖೆಡೆ ಕ್ರೀಡಾಂಗಣವನ್ನು 2011 ರ ವಿಶ್ವಕಪ್ ಗಾಡಿ ನವಿಕರಿಸಲಾಗುತಿತ್ತು. ಮುಂಬೈ ಇಂಡಿಯನ್ಸ್ ಬ್ರಾಬೌರನ್ ಕ್ರಿಡಾಗಂಣದಲ್ಲಿ ಆಡಿದ ಏಳು ಪಂದ್ಯಗಳಲ್ಲಿ ಆರು ಪಂದ್ಯಗಳಲ್ಲಿ ಜಯಶಾಲಿಯಾಗಿದೆ.

ಈಗ ಮುಂಬೈ ಇಂಡಿಯನ್ಸ್ ತನ್ನ ತವರು ಅಂಗಳದ ಪಂದ್ಯಗಳನ್ನು ವಾಂಖೆಡೆ ಸ್ಟೇಡಿಯಂನಲ್ಲಿ ಆಡುತ್ತದೆ.ಈ ಹೆಸರು ಬಿಸಿಸಿಐ ನ ಮಾಜಿ ಅಧ್ಯಕ್ಷ  ಎಸ್.ಕೆ ವಾಂಖೆಡೆ ಯಿಂದ ಬಂತು. ಈ ಕ್ರಿಡಾಂಗಣ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನ ಒಡೆತನದಲ್ಲಿದೆ. ಈ ಕ್ರಿಡಾಂಗಣ 45000 ಪ್ರೇಕ್ಷಕರು ವೀಕ್ಷಿಸಬಹುದಾದ ಸಾಮರ್ಥ ಹೊಂದಿದೆ.

ತಂಡದ ಗುರುತು

ಮುಂಬೈ ಇಂಡಿಯನ್ಸ್ ತಂಡ ಟಿವಿ ಯಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಹೊಂದಿದೆ ತಂಡವಾಗಿದೆ  ಮೊದಲ ಮತ್ತು ಎರಡನೇ ಸೀಸನ್ ಎರಡು ಸೇರಿ 239 ಮಿಲಿಯನ್ ವಿಕ್ಷಕರನ್ನು ಹೊಂದಿತ್ತು.

ತಂಡದ ಚಿಹ್ನೆ ಮತ್ತು ಘೋಷಣೆ ಹಾಗೊ ವೈವಿಧ್ಯ

ಮುಂಬೈ ತಂಡದ ಘೋಷಣೆ  ದುನಿಯಾ ಹಿಲಾ ದೆಂಗೆ ಅಂದರೆ ಜಗತ್ತು ಅನ್ನು ಅಲುಗಾಡಿ‌ಸುವೆವು

ಈ ಘೋಷಣೆ ಯೊಂದಿಗೆ ಬಾಲಿವುಡ್ ನಟ ಹೃತಿಕ್ ರೋಷನ್ ಮುಂಬೈ ಇಂಡಿಯನ್ಸ್ ತಂಡದ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು.ಮುಂಬೈ ಇಂಡಿಯನ್ಸ್ ತಂಡದ ಚಿಹ್ನೆ ಸುರ್ದಶನ್ ಚಕ್ರ (ರೇಜರ್) ಆದ್ದರಿಂದಾಗಿ ತಂಡದ ಹೆಸರು ಮುಂಬೈ ರೇಂಜರ್ಸ್ ಎಂದಾಗುವದಾಗಿತ್ತು ಆದರೆ ಸಚಿನ್ ತೆಂಡೂಲ್ಕರ್ ಇಂಡಿಯನ್ಸ್ ಸೇರಿಸಿಕೊಳ್ಳಲು ಸಲಹೆ ನೀಡಿದ್ದರು.

ಜೆರ್ಸಿ ಯು ಬಣ್ಣ

ತಂಡದ ಜೆರ್ಸಿ ಯ ಪ್ರಾಥಮಿಕ ಬಣ್ಣ ನೀಲಿ ಮತ್ತು ಬಂಗಾರ ಬಣ್ಣದ ಪಟ್ಟಿಗಳು. 2008 ಮತ್ತು 2009 ರಲ್ಲಿ ತಂಡದ ಜೆರ್ಸಿ ಬಹುತೇಕ ಒಂದೆ ರೀತಿ ಇತ್ತು ಆದರೆ ಜೊತೆಗೆ  ಪ್ರಮುಖ ಸ್ಪೊನಸರ್ ಐಡಿಯಾ ದ ಚಿಹ್ನೆ ಮತ್ತು ಅದಕ್ಕೆ ತಕ್ಕ ಬಣ್ಣ ಹಾಗೊ ಇತರ ಸ್ಪೊನಸರ್ ಗಳ ಚಿಹ್ನೆ. 2010 ರಲ್ಲಿ  ಹೊಸ ಬಂಗಾರ ಬಣ್ಣದ ಪಟ್ಟಿಗಳ ಜೆರ್ಸಿ ಯನ್ನು ಪರಿಚಯಿಸಿತ್ತು.ಇದರ ಸ್ಪೊನಸರ್ ಹಿರೋ ಮೋಟೋ ಕಾರ್ಪ್ ಆಗಿತ್ತು. 2011 ರ ಜೆರ್ಸಿ ಕೊಡಾ ಮೂರು ಬಂಗಾರದ ಬಣ್ಣದ ಪಟ್ಟಿಗಳನ್ನು ಹೊಂದಿತ್ತು ಮತ್ತು ಹಿಂದಿನ ಕಡೆ ಮತ್ತು ಬದಿಯಲ್ಲಿ ಪಟ್ಟಿಗಳಿದ್ದವು ಇದನ್ನು ಹೊಸ ಆಟಗಾರರಿಗಾಗಿ ವಿನ್ಯಾಸ ಗೊಳಿಸಲಾಗಿತ್ತು. ಆಟಗಾರರು ಕಿಟ್ ಗಳನ್ನು ಅಡಿಡಾಸ್ ಕಂಪೆನಿ 2008 ರಿಂದ 2014 ರವರಿಗೆ ಪೊರೈಸಿದ್ದರು. 2015 ರೈ ನಂತರ ಕಿಟ್ ಗಳನ್ನು  ರಿಲಯನ್ಸ್ ಟ್ರೆಂಡ್ಸ್ ನ ಅಂಗಸಂಸ್ಥೆ ಪೆರಪೊರಮ್ಯಾಕ್ಸ್ ಒದಗಿಸಿತ್ತು .

ಆಟಗಾರರು

2008 ರೈ ಹರಾಜು ಪ್ರಕ್ರಿಯೆಯಲ್ಲಿ ಮುಂಬೈ ಇಂಡಿಯನ್ಸ್ ಯಶಸ್ವಿಯಾಗಿ ಏಳು ಆಟಗಾರರನ್ನು ಬಿಡ್ ನಲ್ಲಿ ಖರೀದಿಸಿದ್ದು ಅದರಲ್ಲಿ ಎರಡು ಆಟಗಾರರು ಭಾರತದ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರು. ಹರಭಜನ್ ಸಿಂಗ್ ಮತ್ತು ರಾಬಿನ್ ಉತ್ತಪ್ಪ, . ಸನತ್ ಜಯಸೂರ್ಯ, ಲಸಿತ್ ಮಾಲಿಂಗ,ಲ್ಯೂಕ್ ರೊಂಚಿ, ದಿಲಾನಾ ಫೆರ್ನಾಂಡೊ, ಶಾನ್ ಪೋಲಾಕ್, ಮತ್ತು ಇತರ ಆಟಗಾರರನ್ನು ಖರೀದಿಸಿದ್ದು.

ಇದರ ಹೊರತಾಗಿಯೂ  ಅಂಜಿಕ್ಯಾ ರಹಾನೆ, ಅಭಿಷೇಕ್ ನಾಯರ್, ಯೋಗೆಶ್ ಟಕವಾಲೆ(ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮಹಾರಾಷ್ಟ್ರ) ಪಿನಾಲ ಷಾ (ವಿಕೆಟ್ ಕೀಪರ್ ಬ್ಯಾಟ್ಸ್ ಮನ್) ಸೌರಭ ತಿವಾರಿ ಮತ್ತು ಮನಿಷ ಪಾಂಡೆ, ಅಂಡರ್ 19 ವಿಶ್ವಕಪ್ ವಿಜೇತ ತಂಡದ ಸದಸ್ಯರು. ಮತ್ತು ಡೊಮಿನಿಕ್ ಥೊರರ್ನಲಿ ಯನ್ನು ,  $30,000  ಕೊಟ್ಟು ಖರೀದಿಸಿತ್ತು  ಮತ್ತು ಡ್ವೇನ್ ಬ್ರಾವೋ ನಿರ್ಗಮನ ದಿಂದಾಗಿ ಅವರ ಬದಲಿ ಆಟಗಾರ ರನ್ನಾಗಿ ದಕ್ಷಿಣ ಆಫ್ರಿಕಾ ದ ಆಂಡ್ರೆ ನೆಲ್ ಅವರನ್ನು ಸೇರಿಸಿಕೊಳ್ಳಲಾಯಿತ್ತು.

2009 ರೈ ಹರಾಜಿನಲ್ಲಿ ದಕ್ಷಿಣ ಆಫ್ರಿಕಾ ದ ಬ್ಯಾಟ್ಸಮನ್ ಜೆ.ಪಿ ಡುಮಿನಿ ಯನ್ನು. $950,000 ಕೊಟ್ಟು ಖರೀದಿಸಿತ್ತು. ಇವರ ಖರೀದಿ 2009 ರ ಮೂರನೆ ಅತಿದೊಡ್ಡ ಖರೀದಿಯಾಯಿತ್ತು.(ಕೆವಿನ್ ಪೀಟರ್ಸನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಂಡ್ರ್ಯೂ ಫ್ಲಿಂಟಾಫ್ ಚೆನ್ನೈ ಸೂಪರ್ ಕಿಂಗ್ಸ್,) ಮತ್ತೆ ಹೆಚ್ಚುವರಿಯಾಗಿ ಕೈಲ್ ಮಿಲ್ಸ್, $150,000 ಕೊಟ್ಟು ಮಹಮ್ಮದ್ ಆಶ್ರಪುಲ್ $75,000 ಕೂಟ್ಟು ಖರೀದಿಸಲಾಯಿತ್ತು. ಇದರ ಹೊರತಾಗಿಯೂ ಶ್ರೀ ಓಕ್ಷನ್ ನಲ್ಲಿ ಗ್ರಹಾಂ ನೆಪಿಯರ್, ಮತ್ತು ರೈತಾಪಿ ಮೆಕಲಾರೆನ್ ಅವರನ್ನು ಖರೀದಿಸಿತ್ತು.

2010 ರೈ ಹರಾಜು ಪ್ರಕ್ರಿಯೆಯಲ್ಲಿ ಮುಂಬೈ ಇಂಡಿಯನ್ಸ್ ವೆಸ್ಟ್ಇಂಡೀಸ್ ತಂಡದ ಅಲಗ್ರೌಂಡರ್ ಕಿರೋನ್ ಪೋಲಾರ್ಡ್, ಅವರನ್ನು ಖರೀದಿಸಿತ್ತು. ಪೋಲಾರ್ಡ್ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಾವಳಿ ಮತ್ತು ಬಿಗಬಾಸ್ ಪಂದ್ಯಾವಳಿ ಯಲ್ಲಿ ತೋರಿದ ಗಮರ್ನಾಹ ನಿರ್ವಹಣೆಯಿಂದ ಮುಂಬೈ ಇಂಡಿಯನ್ಸ್  ಇತರ ತಂಡಗಳಿಗಿಂತ ಮುಂದಾಗಿ ಬಿಡ್ ಮಾಡಿ ಪೊಲಾರ್ಡ್ ಅವರನ್ನು ಖರೀದಿಸಿತ್ತು.

2011 ರೈ ಹರಾಜಿನಲ್ಲಿ ಐಪಿಎಲ್ ಸಮಿತಿ ಎರಡು ಹೊಸ ತಂಡಗಳನ್ನು ಸೇರ್ಪಡೆ ಮಾಡಿತ್ತು. ಮತ್ತು ಮತ್ತೊಂದು ನಿಯಮವನ್ನು ಜಾರಿ ಮಾಡಿತ್ತು. ಅದ್ದೆಂದರೆ ಒಂದು ತಂಡ ಹರಾಜಿಗಿಂತ ಮೋದಲು ತನ್ನ ನಾಲ್ಕು ಆಟಗಾರರನ್ನು ಅವರ ಮೊತ್ತವನ್ನು ನೀಡುವುದರ ಮುಖಾಂತರ ತನ್ನ ತಂಡದಲ್ಲಿ ಉಳಿಸಿಕೊಳ್ಳಬಹುದು. ಇದರ ಪ್ರಕಾರ ಮುಂಬೈ ಇಂಡಿಯನ್ಸ್  ನಾಯಕ ಸಚಿನ್ ತೆಂಡೂಲ್ಕರ್, ಉಪನಾಯಕ ಹರಭಜನ್ ಸಿಂಗ್,  ಕಿರೋನ್ ಪೊಲಾರ್ಡ್, ಲಸಿತ್ ಮಾಲಿಂಗ, ಅವರನ್ನು ಉಳಿಸಿಕೊಂಡಿತ್ತು.ಇದಕ್ಕೆ ತಗುಲಿದ ವೆಚ್ಚ $4.5 ಮಿಲಿಯನ್ . ಹರಾಜು ಪ್ರಕ್ರಿಯೆಯಲ್ಲಿ ರೋಹಿತ್ ಶರ್ಮಾ, ಅವರನ್ನು ಖರೀದಿಸಿತ್ತು ಇದು ತುಂಬಾ ದುಬಾರಿ ಬೆಲೆ ತೆತ್ತು. ಮತ್ತು ಮುನಾಫ್ ಪಟೇಲ್, ಆಂಡ್ರ್ಯೂ ಸೈಮಂಡ್ಸ್, ಎಡೆನ್ ಬ್ಲಿಜಾರ್ಡ ಮತ್ತು ಜೆಮ್ಸ್ ಫ್ರಾಂಕ್ಲಿನ್, ನ್ಯೊಜಿಲೆಂಡನ ಅಲಗ್ರೌಂಡರ್.

2012 ರ ಹರಾಜು ಪ್ರಕ್ರಿಯೆಯಲ್ಲಿ  ದಕ್ಷಿಣ ಆಫ್ರಿಕಾ ದ ಆಟಗಾರರಾದ ರಿಚರ್ಡ್ ಲೇವಿ, $50,000 ಮತ್ತು ರಾಬಿನ್ ಪೀಟರ್ಸನ್, $100000 ಕೊಟ್ಟು ಖರೀದಿಸಿತ್ತು.ಆಸ್ಟ್ರೆಲಿಯಾದ ವೇಗದ ಬೌಲರ್ ಮಿಚೆಲ್ ಜಾನ್ಸನ್ ಅವರನ್ನು $300000 ಕೊಟ್ಟು ಭಾರತದ ವೇಗದ ಬೌಲರ್ ಆರ್.ಪಿ ಸಿಂಗ್  $600000 ಶ್ರೀಲಂಕಾ ದ ಆಲಗ್ರೌಂಡರ್ ತೀಸೆರಾ ಪರೇರಾ ಅವರನ್ನು 650000 ಕೊಟ್ಟು ಖರೀದಿಸಿತ್ತು.

ದಕ್ಷಿಣ ಆಫ್ರಿಕಾ ದ ಬ್ಯಾಟ್ಸಮನ್ ರಿಚರ್ಡ್ ಲೇವಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಅತಿ ವೇಗದ ಶತಕ ದಾಖಲಿಸಿದರು ಆ ಪಂದ್ಯದಲ್ಲಿ ಅವರು ಸಿಕ್ಸರ್ ಸಿಡಿಸಿ ದ್ದರು ಆದ್ದರಿಂದ ಪ್ರೇರಿತರಾದ ಮುಂಬೈ ಇಂಡಿಯನ್ಸ್ ತಂಡ ಹರಾಜಿನಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಜಿದ್ದಾಜಿದ್ದಿ ನಡೆಸಿ ಕೊನೆಗೆ ಲೇವಿ ಅವರನ್ನು ಖರೀದಿಸಿತ್ತು.

2013 ರ ಹರಾಜಿನಲ್ಲಿ  ಮುಂಬೈ ಇಂಡಿಯನ್ಸ್ ಆಸ್ಟ್ರೇಲಿಯಾ ದ ಮಾಜಿ ಆಟಗಾರ ರಿಕಿ ಪಾಂಟಿಂಗ್ ಅವರನ್ನು $400000 ಕೊಟ್ಟು ಖರೀದಿಸಿತ್ತು. ಮತ್ತು ಅವರನ್ನು ಮುಂಬೈ ಇಂಡಿಯನ್ಸ್ ನಾಯಕ ರನ್ನಾಗಿ ನೇಮಿಸಲಾಯಿತು.ಇದ್ದಲ್ಲದೆ ಆಸ್ಟ್ರೇಲಿಯಾ ದ ಆಲಗ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್, ಮತ್ತು ನಾಥನ್ ಕೌಂಟರ್ ನೈಲ್, ಫಿಲಿಪ್ ಹ್ಯೊಜ್, ಮತ್ತು ನ್ಯೊಜಿಲೆಂಡ್ ನಾ ಜೇಕಬ್ ಒರಮ್ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿಸಿತ್ತು.

ಆಟಗಾರರ ವರ್ಗಾವಣೆ

ಮುಂಬೈ ಇಂಡಿಯನ್ಸ್  ಆಟಗಾರರನ್ನು ವರ್ಗಾವಣೆ ಮಾಡಿತ್ತು ಹೆಗೆಂದರೆ ತನ್ನ ಆಟಗಾರರನ್ನು ಇನ್ನೊಂದು ತಂಡಕ್ಕೆ ಕೊಟ್ಟು ಆ ತಂಡದಿಂದ ತನ್ನೆಗೆ ಬೇಕಾದ ಆಟಗಾರರನ್ನು ತಂದುಕೊಳ್ಳುವುದು. ಇದ್ದೇ ರೀತಿ ಮುಂಬೈ ಇಂಡಿಯನ್ಸ್  ಆಶಿಶ್ ನೆಹ್ರಾ ಅವರನ್ನು ಡೆಲ್ಲಿ ಡೆರ್ ಡೆವಿಲ್ಸ್ ಗೆ ಕೊಟ್ಟು ಅವರಿಂದ ಶಿಖರ್ ಧವನ್ ಅವರನ್ನು ಕರೆಸಿಕೊಂಡಿತ್ತು. ರಾಬಿನ್ ಉತ್ತಪ್ಪ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆ ನೀಡಿ ಜಹೀರ್ ಖಾನ್ ಅವರನ್ನು ಪಡೆದುಕೊಂಡಿತ್ತು. ಹೀಗೆ ರಣಜಿ ಆಟಗಾರರನ್ನು ಕೊಡಾ ಅಂದ್ಲು ಬದಲು ಮಾಡಿಕೊಂಡಿತ್ತು. ನಂತರ  ರಾಜಗೋಪಾಲ್ ಸತೀಶ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ನೀಡಿ ಅಲ್ಲಿಂದ ದಿನೇಶ್ ಕಾರ್ತಿಕ್ ಅವರನ್ನು ಆಹ್ವಾನ ಮಾಡಿಕೊಂಡಿತ್ತು. ಅದೇ ರೀತಿ ಪ್ರಗ್ಯಾನ್ ಓಜಾ ಡೆಕ್ಕನ್ ಚಾರ್ಜರ್ಸ್ ನಿಂದು ಮುಂಬೈ ಇಂಡಿಯನ್ಸ್ ಗೆ ಬಂದರು.ಅಲಿ ಮೊರ್ತೂಜಾ ಪುಣೆ ವಾರಿಯರ್ಸ್ ಕಡೆ ಹೋಗಿದ್ದರು.

ನವೆಂಬರ್ 4 2014 ದಿಲ್ಲಿ ಮುಂಬೈ ಇಂಡಿಯನ್ಸ್ 2015 ರೈ ಐಪಿಎಲ್ ಗಾಗಿ ಉಪಯುಕ್ತ ಚಾಂದ್, ಆರೋನ್ ಪಿಂಚ್, ವಿನಯ್ ಕುಮಾರ್ ಅವರನ್ನು ಖರೀದಿಸಿತ್ತು. ಪಾರ್ಥಿವ್ ಪಟೇಲ್ ಕೊಡಾ 8 ನೇ ಆವೃತ್ತಿಯ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡರು ಮತ್ತು  ಮಿಚೆಲ್ ಮೆಕಲಿಂಗನ್ ಕೊಡಾ.

ಐಪಿಎಲ್ಲ್‍ನ ಫಲಿತಾಂಶ

[ಬದಲಾಯಿಸಿ]
ಪಂದ್ಯಗಳು ಗೆಲುವು ಸೋಲು ಫಲಿತಾಂಶ ರಹಿತ % ಗೆಲುವು
೨೦೦೮ ೧೪ ೫೦.೦೦%
೨೦೦೯ ೧೪ ೩೫.೭೧%
೨೦೧೦ ೧೬ ೧೧ ೫೮.೫೭%
೨೦೧೧ ೧೬ ೧೦ ೬೨.೫೦%
ಒಟ್ಟು ೬೦ ೩೩ ೨೬ ೫೮.೭೩%