೨೦೦೯ ಇಂಡಿಯನ್ ಪ್ರೀಮಿಯರ್ ಲೀಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂಡಿಯನ್ ಪ್ರೀಮಿಯರ್ ಲೀಗ್ ನ ಒಂದನೇ ಆವೃತ್ತಿಯ ಪ್ರಚಂಡ ಯಶಸ್ಸಿನ ನಂತರ ೨ನೇ ಆವೃತ್ತಿಯನ್ನು ಆಯೋಜಿಸಲಾಯಿತು. ಆದರೆ ಭಾರತ ಲೋಕಸಭೆಯ ಚುನಾವಣೆಯ ದಿನಾಂಕಗಳು, ಐ ಪಿ ಎಲ್ ದಿನಾಂಕಗಳು ಜೊತೆಗೆ ಬಂದವು. ಇದರಿಂದ ಅನೇಕ ಪ್ರಾಯೋಗಿಕ ತೊಂದರೆಗಳು ಶುರುವಾದವು. ಪೋಲಿಸರು ಪಂದ್ಯಗಳಿಗೆ ರಕ್ಷಣೆ ನೀಡಲು ಸಿದ್ದರಿರಲಿಲ್ಲ. ಇದು ಆಟಗಾರರ ರಕ್ಷಣೆಗೆ ತೊಂದರೆ ಆಗುತ್ತದೆ ಎಂಬ ಮಾತುಗಳು ಕೇಳಿ ಬಂದವು. ಇದರಿಂದ ತಪ್ಪಿಸಿಕೊಳ್ಳಲು, ಬಿಸಿಸಿಐ ಇಡೀ ಪಂದ್ಯಾವಳಿಯನ್ನೇ ಭಾರತದ ಹೊರಗೆ ನಡೆಸಲು ತೀರ್ಮಾನಿಸಿತು. ಅದರಂತೆ ಐಪಿಎಲ್ ನ ೨ನೇ ಆವೃತ್ತಿಯನ್ನು, ೧೮ನೇ ಏಪ್ರಿಲ್ ನಿಂದ ೨೪ನೇ ಮೇ ವರೆಗೆ ದಕ್ಷಿಣ ಆಫ್ರಿಕದಲ್ಲಿ ಆಯೋಜಿಸಲಾಯಿತು.

ಈ ಪಂದ್ಯಾವಳಿಯನ್ನು ಒಂದನೇ ಪಂದ್ಯಾವಳಿಯ ರೀತಿಯಲ್ಲೇ, ಮೊದಲು ರೌಂಡ್ ರಾಬಿನ್ ನಂತರ ಸೆಮಿ ಫೈನಲ್ ಹಾಗು ಫೈನಲ್ ಪಂದ್ಯಗಳನ್ನು ಆಡಿಸಲಾಯಿತು. ಹಿಂದಿನ ಆವೃತ್ತಿಯಲ್ಲಿ ಕೊನೆಯ ಸ್ಥ್ಹಾನದಲ್ಲಿದ್ದ ಹೈದರಾಬಾದ್ ಡೆಕ್ಕನ್ ಚಾರ್ಜರ್ಸ್ ತಂಡ ಈ ಬಾರಿ ಅತ್ಯಂತ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಫೈನಲ್ ನಲ್ಲಿ ಹಿಂದಿನ ಆವೃತ್ತಿಯಲ್ಲಿ ೭ನೇ ಸ್ಥ್ಹಾನದಲ್ಲಿದ್ದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನು ಮಣಿಸಿತು.