ಭಾರತೀಯ ಕ್ರಿಕೆಟ್ ಮಂಡಳಿ
ಭಾರತೀಯ ಕ್ರಿಕೆಟ್ ಮಂಡಳಿ ಭಾರತದಲ್ಲಿ ಕ್ರಿಕೆಟ್ ಆಟವನ್ನು ನಿಯಂತ್ರಿಸುವ ರಾಶ್ತ್ರೀಯ ಮಟ್ಟದ ಸಂಸ್ಥ್ಹೆ. ಇದರ ಮುಖ್ಯ ಕಛೇರಿ ಮುಂಬಯಿನಲ್ಲಿದೆ. ಇದು ಭಾರತ ಸರ್ಕಾರದ ಸಂಸ್ಥೆ ಅಲ್ಲ. ಇದು ತಮಿಳುನಾಡು ಸೊಸೈಟಿ ರಿಜಿಸ್ತ್ರೇಷನ್ ಕಾಯಿದೆಯಡಿ ನೊಂದಾಯಿಸಲ್ಪಟ್ಟಿರುವ ಒಂದು ಸೊಸೈಟಿ. '''ಅಂತರ ರಾಷ್ತ್ರೀಯ ಕ್ರಿಕೆಟ್ ಮಂಡಳಿ'''ಯ ಸದಸ್ಯ ಸಂಸ್ಥೆಯಾಗಿರುವ ಕಾರಣ ಭಾರತದಲ್ಲಿ ನಡೆಯುವ ಎಲ್ಲಾ ಕ್ರಿಕೆಟ್ ಪಂದ್ಯಗಳ ಮೇಲ್ವಿಚಾರಣೆಯನ್ನು ನಡೆಸುವ ಅಧಿಕಾರ ಹೊಂದಿದೆ. ಅಂತರ ರಾಷ್ತ್ರೀಯ ಪಂದ್ಯಗಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವ ತಂಡವನ್ನು ಆಯ್ಕೆ ಮಾಡುವ ಅಧಿಕಾರವನ್ನು ಸಹ ಈ ಸಂಸ್ಥೆ ಹೊಂದಿದೆ. ಭಾರತ ಸರ್ಕಾರದ ನೇತ್ರತ್ವದಲ್ಲಿರುವ ಅನೇಕ ಕ್ರೀಡಾಂಗಣಗಳನ್ನು, ಕ್ರಿಕೆಟ್ ಪಂದ್ಯಗಳಿಗಾಗಿ ಉಪಯೋಗಿಸುತ್ತದೆ. ಇದಕ್ಕಾಗಿ ಅತ್ಯಂತ ಕಡಿಮೆ ಶುಲ್ಕವನ್ನು ಸರ್ಕಾರಕ್ಕೆ ಪಾವತಿ ಮಾಡಲಾಗುತ್ತದೆ. ಈ ಸಂಸ್ಥೆ ಅನೇಕ ಖಾಸಗಿ ಕ್ರಿಕೆಟ್ ಕ್ಲಬ್ ಗಳ ಒಕ್ಕೂಟ. ಈ ಸಂಸ್ಥೆಯನ್ನು ೧೯೩೦ರಲ್ಲಿ ಪ್ರಾರಂಭಿಸಲಾಯಿತು. ಇದು ಖಾಸಗಿ ಸಂಸ್ಥೆಯಾಗಿರುವ ಕಾರಣ ತನ್ನ ಹಣಕಾಸಿನ ವ್ಯವಹಾರದ ವಿವರಗಳನ್ನು ಗೌಪ್ಯವಾಗಿ ಇಡುವ ಅಧಿಕಾರ ಹೊಂದಿದೆ. ಇದು ಇತ್ತೀಚಿನ ದಿನಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಐ ಪಿ ಎಲ್ ಪ್ರಾರಂಭಿಸಿ ಕೋಟ್ಯಾಂತರ ರೂಪಾಯಿಗಳ ಲಾಭ ಗಳಿಸಿದ ನಂತರ ಇದು ಹೆಚ್ಚಾಗಿದೆ.