ಕೀರನ್ ಪೊಲಾರ್ಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೀರನ್ ಅಡ್ರಿಯನ್ ಪೋಲಾರ್ಡ್‌ರವರು ಮೇ ೧೨, ೧೯೮೭ ರಲ್ಲಿ ಜನಿಸಿದರು. ಇವರು ವೆಸ್ಟ್ ಇಂಡಿಸ್ ತಂಡಕ್ಕೆ ಆಡುತ್ತಿದ್ದಾರೆ. ಇವರು ಹುಟ್ಟಿದ್ದು ಟ್ರಿನಿಡಾಡ್‌ನಲ್ಲಿ. ಇವರಿಗೆ ಇಬ್ಬರು ತಂಗಿಯರು/ಕಿರಿಯ ಸಹೋದರಿಯರು ಇದ್ದಾರೆ. ಇವರು ಹುಟ್ಟಿ ಬೆಳೆದದ್ದು ಒಂದು ಬಡ ಕುಟುಂಬದಲ್ಲಿ. ಇವರ ತಂದೆಯ ಸಹಾಯವಿಲ್ಲದೆ ಕೇವಲ ತಾಯಿಯ ಅದ್ಭುತ ಪರಿಶ್ರಮದಿಂದ ಬೆಳೆದು ನಿಂತರು[೧]. ಪೋಲಾರ್ಡ್ ಹೇಳುತ್ತಾರೆ ಜೀವನ ತುಂಬಾ ಕಷ್ಟವಿತ್ತು ಮತ್ತೆ ಹಣ ಸ್ವಲ್ಪವಿತ್ತು

ಕೀರನ್ ಅಡ್ರಿಯನ್ ಪೋಲಾರ್ಡ್‌ರಾರ ಗಾತ್ರ ಆರು ಅಡಿ ಆರು ಇಂಚು. ಇವರಿಗೆ ಪ್ರೀತಿಯಿಂದ ’ಪೊಲಿ’ ಎಂದು ಕರೆಯುತ್ತಾರೆ. ಇವರು ೨೦೦೫ ರಲ್ಲಿ ಟಿಸಿಎಲ್ ಗ್ರೂಪ್ ವೆಸ್ಟ್ ಇಂಡಿಯನ್‌ನಿನ ಯು-೧೯ ರಲ್ಲಿ ಆಟವಾಡಿದರು. ಹೀಗೆ ಅವರ ಪರಿಶ್ರಮದಿಂದ ಅವರು ವೆಸ್ಟ್ ಇಂಡಿಯನ್ ಯು-೧೯ ಕ್ರಿಕೆಟ್ ತಂಡದ ಸದಸ್ಯರಾಗಿ, ಪಾಕಿಸ್ತಾನಿನ ಮೇಲೆ ಮೊದಲ ಆಟವಾಡಿದರು. ಪೋಲಾರ್ಡ್ ಹೆಚ್ಚಿನ ರನ್ನುಗಳನ್ನು ಗಳಿಸಿದರು (೫೩ ರನ್ ೪೯ ಎಸೆತ)[೨]. ಎರಡನೆಯ ಪಂದ್ಯದಲ್ಲಿ ಅವರು ಅರ್ಧ ಶತಕವನ್ನು ಗಳಿಸಿದರು. ಹೀಗೆ ಅವರು ವೆಸ್ಟ್ ಇಂಡಿಸ್ ೨೦೦೬ ಯು-೧೯ ಕ್ರಿಕೆಟ್ ವಿಶ್ವಕಪ್ ಆಯ್ಕೆಗೊಂಡರು. ಆದರೆ ಅವರು ನಾಲ್ಕು ಆಟಗಳಲ್ಲಿ ೧೯ ರನ್ ಗಳಿಸಿದರು. ಆದರೆ ಅವರು ನಾಲ್ಕು ಆಟಗಳಲ್ಲಿ ೧೯ ರನ್ಸ್ ಗಳಿಸಿದರು. ಹಾಗೂ ಎರಡು ವಿಕೆಟ್. ಇವರು ಬ್ಯಾಟಿಂಗ್ ಮಾಡುವ ಶೈಲಿ ಬಲಗೈಯಿಂದ ಹಾಗೂ ಬೋರಿಂಗ್ ಬಲಗೈ ಸಾಧಾರಣ ವೇಗ. ೨೦೦೬ ನ ಇಂಗ್ಲೀಷ್ ಪಂದ್ಯದಲ್ಲಿ ಹ್ಯಾಕ್ಸಿ ಸಿಸಿ ಕ್ಲಬ್‌ನಲ್ಲಿ ಐದು ಆಟಗಳು ಆಡಿದರು. ಹಾಗೆಯೇ ಅವರು ಟ್ರಿನಿಡಾಡ್ ಮತ್ತು ಟೊಬಾಗೋ ಪುನಃ ಟಿ-೨೦ ಪಂದ್ಯಕ್ಕೆ ಆಯ್ಕೆಯಾದರು. ಇವರು ಸ್ವಾನ್‌ಫರ್ಡ್ ತಂಡದಲ್ಲಿ ಆಯ್ಕೆಯಾದರು. ಕೇಮನ್ ತಂಡದ ಮೇಲೆ ಮೊದಲ ಆಟವಾಡಿದರು. ಇವರು ೬ ವಿಕೆಟ್ ಹಾಗೂ ಸೆಮಿ ಫೈನಲ್‌ನಲ್ಲಿ ೮೩ ರನ್ ಗಳಿಸಿ ತಮ್ಮ ತಂಡಕ್ಕೆ ಫೈನಲ್‌ಗೆ ಕಳುಹಿಸಿದರು. ಆ ಆಟದಲ್ಲಿ ೭ ಸಿಕ್ಸ್ ಹೊಡೆದಿದ್ದರು. ಆಮೇಲೆ ಅವರು ಫಸ್ಟ್ ಕ್ಲಾಸ್ ಕ್ರಿಕೆಟ್ ಆಡಿದರು. ಅವರು ಮೊದಲ ಶತಕ ಗಳಿಸಿದ್ದು ಬಾರ್‌ಬಡೋಸ್ ಮೇಲೆ, ಲಿಸ್ಟ್ ಎ ನಲ್ಲಿ ೪೬ ರನ್ ಗಳಿಸಿ ವಿಶ್ವಕಪ್‌ನಲ್ಲಿ ತಮ್ಮ ಸ್ಥಾನ ಪಡೆದರು.

ಆಗ ಪೊಲಾರ್ಡ್ ಹೇಳಿದ್ದು ನನ್ನ ಕನಸು ನನಸಾಯಿತು. ಆ ಪಂದ್ಯದಲ್ಲಿ ೪ ದಿನ ಹಾಗೂ ೫೦ ಓವರ್ ಆಟಗಳಲ್ಲಿ ಶತಕಗಳು ಮತ್ತು ಅರ್ಧ ಶತಕಗಳು ಹೊಡೆದರು. ಗುಯನಾ ಮೇಲೆ ತಮ್ಮ ಎರಡನೇ ಫಸ್ಟ್ ಕ್ಲಾಸ್ ಶತಕ ಬಂತು. ಆಮೈಕ ಮೇಲೆ ತಮ್ಮ ಬೌಲಿಂಗ್ ಪ್ರದರ್ಶನ ಮಾಡಿ ೪ ವಿಕೆಟ್ ಗಳಿಸಿದರು. ೧೫ ಆಟಗಳಲ್ಲಿ ೫ ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಸಿಕ್ಕಿತು.

ವ್ರುತಿ[ಬದಲಾಯಿಸಿ]

 • ೨೦೦೬-೦೭ ವಿಶ್ವಕಪ್‌ನಲ್ಲಿ ಟೆನಿಡಾಡ್ ಗೆಲುವು ಸ್ಥಾಪಿಸಿತು. ಇವರು ಹೆಚ್ಚು ರನ್ ಗಳಿಸಿದರು. ೭ ಆಟಗಳಲ್ಲಿ ೨೬೧ ರನ್. ಸರಾಸರಿ ೪೦. ೨೦೦೮-೦೯ ರಲ್ಲಿ ಪೊಲಾರ್ಡ್‌ರವರು ೯ ವಿಕೆಟ್ ತೆಗೆದುಕೊಂಡರು. ಕ್ರಿಕೆಟ್ ಬೋರ್ಡ್ ಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ೭೬ ರನ್‌ಗಳಿಸಿ ಟ್ರೆನಿಡಾಡ್ ಟೊಬಾಗೋ ಗೆಲುವು ಸಾಧಿಸಿದರು.
 • ೨೦೦೯ ಚಾಂಪಿಯನ್ಸ್ ಲೀಗ್‌ನಲ್ಲಿ, ಪೊಲಾರ್ಡ್ ೫೪ ರನ್ ೧೮ ಎಸೆತದಲ್ಲಿ ಮಾಡಿದರು. ನ್ಯೂ ಸೌತ್‌ವೆಲ್ಸ್ ಮೇಲೆ ಹೈದರಾಬಾದ್‌, ತೆಲಂಗಾಣ ನಲ್ಲಿ ನ್ಯೂ ಸೌತ್ ವೆಲ್ಸ್‌ರವರು ಆ ಆಟದ ಮೇಲೆ ಅವರನ್ನು ತೆಗೆದುಕೊಳ್ಳಲು ಯತ್ನಿಸಿದರು.
 • ಕೆ.ಎಫ್.ಸಿ ಟಿ-೨೦ ಬಿಗ್ ಬ್ಯಾಶ್‌ನಲ್ಲಿ ಪೊಲಾರ್ಡ್ ಸೌತ್ ಆಸ್ಟ್ರೇಲಿಯನ್ ರೆಡ್ ಬ್ಯಾಕ್ಸ್‌ನಲ್ಲಿ ಆಟವಾಡಿದರು. ಸೋವರ್‌ಸೆಟ್ ಕ್ರಿಕೆಟ್ ಕ್ಲಬ್‌ನ ಸದಸ್ಯರು ಪೊಲಾರ್ಡ್.
 • ೨೦೦೭ ಐ.ಸಿ.ಸಿ ವಿಶ್ವ ಟಿ-೨೦ ಪಂದ್ಯದ ಆಟಗಾರರಾಗಿದ್ದರು. ಆದರೆ ಅವರ ಪ್ರದರ್ಶನ ಹೆಚ್ಚಾಗಿ ಕಾಣಿಸಲಿಲ್ಲ. ಇವರು ಶ್ರೀಲಂಕ ಮೇಲೆ ತಮ್ಮ ಮೊದಲ ಅಂತರಾಷ್ಟ್ರೀಯ ಪಂದ್ಯ ಆಡಿದರು. ಆದರೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ೨೦೦೭ ರಲ್ಲಿ ಆಸ್ಟ್ರೇಲಿಯ ಮೇಲೆ ಇವರು ಮೊದಲ ಏಕದಿನ ಪಂದ್ಯ ಆಡಿದರು. ೨ ಆಟದಲ್ಲಿ ೧೧ ರನ್ ಗಳಿಸಿ ಮಿಕ್ಕ ೩ ಆಟಗಳಿಂದ ತೆಗೆದು ಹಾಕಿದರು.
 • ಸ್ಪಾನ್‌ಫರ್ಡ್ ತಂಡದಲ್ಲಿ ಸೆಲೆಕ್ಟ್ ಆಗಿ ಉತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ನೀಡಿ ಪೊಲಾರ್ಡ್ ಮಿಡಲ್‌ಸೆಕ್ಸೆ ತಂಡವನ್ನು ಸೋಲಿಸಿದರು. ಅವರು ೩ ವಿಕೆಟ್ ಪಡೆದರು. ಬ್ಯಾಟಿಂಗ್ ಕ್ರಿಸ್ ಗೇಲ್ ಮುಕ್ತಾಯಗೊಳಿಸಿದರು.

ಐ.ಪಿ.ಎಲ್[ಬದಲಾಯಿಸಿ]

 • ೨೦೦೯ ಚ್ಯಾಂಪಿಯನ್ಸ್ ಲೀಗ್, ಬಿಗ್‌ಬ್ಯಾಶ್‌ನಲ್ಲಿ ಅವರ ಪ್ರದರ್ಶನ ನೋಡಿ ಐ.ಪಿ.ಎಲ್ ನಲ್ಲಿ ಇವರು ಉತ್ತಮ ಬೆಲೆಯ ಆಟಗಾರರಾದರು. ಚೆನ್ನೈ, ಕೋಲ್ಕತ್ತಾ, ಮುಂಬಯಿ, ಬೆಂಗಳೂರು ೭೫೦,೦೦೦ ಡಾಲರ್ ಬಿಡ್ ಮಾಡಿ ಮುಂಬಯಿ ತಂಡ ಇವರನ್ನು ಪಡೆದರು.
 • ೧೭ ಮಾರ್ಚ್ ೨೦೧೦ ರಲ್ಲಿ ಡೆಲ್ಲಿಯ ಮೇಲೆ ಮೊದಲ ಆಟವಾಡಿದರು. ಆದರೆ ಅವರ ಪ್ರದರ್ಶನ ಸರಿಯಾಗಿ ಇರಲಿಲ್ಲ. ಪಂದ್ಯದ ಬೇರೆ ಆಟಗಳಲ್ಲಿ ಪೊಲಾರ್ಡ್ ತಮ್ಮ ಜನಗಳಿಗೆ ಅದ್ಭುತ ಆಟ ತೋರಿಸಿದರು. ೧೩ ಬಾಲ್‌ನಲ್ಲಿ ೪೫ ರನ್ ೫ ಸಿಕ್ಸ್ ಗಳಿಸಿದರು. ಸೆಮಿಫೈನಲ್ಸ್ ನಲ್ಲಿ ಅವರು ಬೆಂಗಳೂರಿನ ಮೇಲೆ ೧೩ ಬಾಲ್ ೩೩ ಹೊಡೆದು ಗೆಲುವು ಸಾಧಿಸಿ ಫೈನಲ್‌ಗೆ ಹೋಗಿ ಚೆನ್ನೈ ಮೇಲೆ ಸೋತರು. ೨೦೧೦ ಮುಂಬಯಿ ಮೊದಲನೇ ಬಾರಿ ಫೈನಲ್‌ಗೆ ಕಾಲಿರಿಸಿದ್ದರು.
 • ೨೦೧೧ ಮತ್ತು ೨೦೧೨ ರಲ್ಲಿ ಪೊಲಾರ್ಡ್ ಕಾಣಿಸಿಕೊಂಡಿದ್ದು ಫೀಲ್ಡಿಂಗ್‌ನಲ್ಲಿ ಮಾತ್ರ. ಏಕೆಂದರೆ ಅವರ ಬ್ಯಾಟಿಂಗ್ ಹಾಗೂ ಬೌಲಿಂಗ್‌ನ ಫಾರಂ ಚೆನ್ನಾಗಿರಲಿಲ್ಲ. ೨೦೧೨ ರಲ್ಲಿ ರಾಜಸ್ಥಾನದ ಮೇಲೆ ೩೩ ಬಾಲ್ ೬೪ ರನ್ ಹೊಡೆದು ೬೪ ಮತ್ತು ೬ ಸಿಕ್ಸ್ ಗಳಿಸಿ ೪-೪೪ ಬೌಲಿಂಗ್ ಪ್ರದರ್ಶನ ಮಾಡಿ ’ಮ್ಯಾನ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಪಡೆದರು.
 • ೨೦೧೩ ರಲ್ಲಿ ಪೊಲಾರ್ಡ್ ಐ.ಪಿ.ಎಲ್ ನಲ್ಲಿ ಒಳ್ಳೆಯ ಪಂದ್ಯದ ಶುರುವಾತ್ ನೀಡಿದರು. ೫೭ ರನ್ ೩೮ ಬಾಲ್ ಹಾಗೂ ದೋನಿಯ ಅದ್ಭುತ ಕ್ಯಾಚ್ ಹಿಡಿದು ’ಮ್ಯಾನ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಸಿಕ್ಕಿತು.
 • ೧೬ ಬಾಲ್‌ನಲ್ಲಿ ೩೪ ರನ್ ಬೆಂಗಳೂರಿನ ಮೇಲೆ ಹೊಡೆದು ಗೆಲುವು ಸಾಧಿಸಿದರು. ಅವರ ಅದ್ಭುತ ಪ್ರದರ್ಶನ ಹೈದರಾಬಾದ್‌ನ ಮೇಲೆ ಎಂದು ಹೇಳಬಹುದು. ೪ ಓವರ್‌ಗಳಲ್ಲಿ ೬೪ ರನ್ ರೋಹಿತ್ ಶರ್ಮ ಜೊತೆ ಗಳಿಸಿದರು. ಅಂತಿಮ ೭ ಬಾಲ್‌ಗಳಲ್ಲಿ ೬ ಸಿಕ್ಸ್ ಹೊಡೆದರು. ಫೈನಲ್‌ನಲ್ಲಿ ಜೆನೈನ್ ಮೇಲೆ ೫೨-೪ ಬೌಲಿಂಗ್ ಹಾಗೂ ೬೦(೩೨) ಬ್ಯಾಟಿಂಗ್ ರನ್ ಹೊಡೆದು ಐ.ಪಿ.ಎಲ್‌ನ ಮೊದಲ ಬಾರಿ ಗೆಲ್ಲಿಸಿದರು.
 • ೨೦೧೪ ರಲ್ಲಿ ಮೊದಲನೆಯ ೫ ಆಟಗಳು ಮುಂಬಯಿ ತಂಡವನ್ನು ಸೋಲಿಸಿದರು. ೬ನೇ ಆಟದಲ್ಲಿ ಪೊಲಾರ್ಡ್ ೭೮(೪೨) ಗಳಿಸಿದರು ಸಹ ಆ ಆಟ ಮುಂಬಯಿ ಸೋತರು. ಪಂಜಾಬ್ ಮೇಲೆ ೨೮(೧೨) ಗಳಿಸಿ ಮುಂಬಯಿ ತಮ್ಮ ಪಂದ್ಯದ ಮೊದಲನೆಯ ಗೆಲುವು ಗಳಿಸಿದರು.
 • ೨೦೧೫, ಈ ಪಂದ್ಯವೇ ಪೊಲಾರ್ಡ್‌ನ ಜೀವನದ ಉತ್ತಮ ಪಂದ್ಯವೆಂದು ಹೇಳಬಹುದು. ಒಂದು ಆಟ ಗೆದ್ದಿದ್ದರೂ ೬ ಆಟಗಳಲ್ಲಿ ಎಲ್ಲರೂ ದುಃಖಿತರಾದರು. ಪೊಲಾರ್ಡ್ ೭೦(೪೮) ರಾಜಸ್ಥಾನ ಮೇಲೆ ಹೊಡೆದರು ಸಹ ಆಟ ಸೋತಿದ್ದರು. ಮತ್ತೊಂದು ಆಟದಲ್ಲಿ ೬೪(೩೪) ೫ ಸಿಕ್ಸ್ ಚೆನ್ನೈ ಮೇಲೆ ಹೊಡೆದು ಸಹ ಆಟ ಸೋತಿದ್ದರು.

ಡೆಲ್ಲಿ ಮೇಲೆ ರಾಯುಡು ಜೊತೆ ೨೪(೧೪) ಮತ್ತು ಗೆಲುವು ಸಿದ್ದಿಸಿದರು. ಇನ್ನೊಂದು ಆಟದಲ್ಲಿ ಪೊಲಾರ್ಡ್ ೪೬(೨೪) ಹೊಡೆದು ಬೆಂಗಳೂರನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಕೊಲ್ಕತ್ತಾ ಮೇಲೆ ಪೊಲಾರ್ಡ್‌ನಿಂದ ೧೭೧ ತಲುಪಿ ಗೆದ್ದಿದ್ದರು. ಬೌಲಿಂಗ್ ನಲ್ಲಿ ಅಂತಿಮ ಓವರ್‌ನಲ್ಲಿ ಪೊಲಾರ್ಡ್ ಅದ್ಭುತ ಪ್ರದರ್ಶನ ನೀಡಿ ೩ ಡಾಟ್ ಬಾಲ್ ಮಾಡಿಅರು. ೪೧(೧೭) ಮಾಡಿ ಪೊಲಾರ್ಡ್ ಚೆನ್ನೈ ಮೇಲೆ ಗೆಲುವು ಸ್ಥಾಪಿಸಿದರು. ಕ್ವಾಲಿಫೈಯರ್‌ನಲ್ಲಿ ೧೭೧ ರ ಚೆನ್ನೈ ಹೊಡೆಯಲು ಸಾಧ್ಯವಾಗಲಿಲ್ಲ. ಫೈನಲ್‌ನಲ್ಲಿ ಚೆನ್ನೈ ಮೇಲೆ ಪೊಲಾರ್ಡ್ ೩೬(೧೮), ೨೦೨ ಟಾರ್ಗೆಟ್ ಕೊಟ್ಟು ಗೆದ್ದಿದ್ದರು. ಪೊಲಾರ್ಡ್ ೪೧೯ ರನ್ ಹೊಡೆದು ಎಸ್.ಆರ್ ೧೬೩ ೨೮ ಸಿಕ್ಸರ್ ಹೊಡೆದು ಪಂದ್ಯ ಗೆದ್ದರು.

ವಿವಾದ[ಬದಲಾಯಿಸಿ]

೨೦೧೬ ನಲ್ಲಿ ಪೊಲಾರ್ಡ್‌ರವರು ಒಳ್ಳೆಯ ಪ್ರದರ್ಶನ ನೀಡಿದರು. ಅತಿ ಕಡಿಮೆ ಎಸೆತದಲ್ಲಿ ಅರ್ಧ ಶತಕ ಹೊಡೆದರು ೫೦(೧೭) ೨೫ ಸಿಕ್ಸ್ ಹೊಡೆದರು. ಪಂದ್ಯದ ಅಂತಿಮದಲ್ಲಿ ೨೦೧೫ ನಲ್ಲಿ ಪೊಲಾರ್ಡ್‌ರವರು ವಿಚ್ಚಲ್ ಸ್ಟ್ರಾಕ್ ಜೊತೆ ಕ್ರಿಕೆಟ್ ಮೈದಾನದಲ್ಲಿ ಬ್ಯಾಟ್ ಎಸೆತ ಮಾಡಿ ಜಗಳವಾಡಿದ್ದರಿಂದ ಅವರಿಗೆ ದಂಡ ವಿಧಿಸಲಾಯಿತು.[೩]

ಉಲ್ಲೇಖಗಳು[ಬದಲಾಯಿಸಿ]